ಕ್ರೀಡೆ
Wrestlers Protest: ಪೊಲೀಸ್ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿಗೆ ಪೋಸ್ ಕೊಟ್ಟರೇ ಫೋಗಟ್ ಸಹೋದರಿಯರು? ಇಲ್ಲಿದೆ ನಿಜಾಂಶ
Wrestlers Protest: ಬಂಧನದ ಬಳಿಕ ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಅವರ ಸೋದರಿ ಸಂಗೀತಾ ಫೋಗಟ್ ಅವರು ಪೊಲೀಸ್ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿ ತೆಗೆದುಕೊಂಡ ಫೋಟೊ ವೈರಲ್ ಆಗಿದೆ. ಆದರೆ, ಇದು ನಕಲಿ ಎಂಬುದು ಬಳಿಕ ಗೊತ್ತಾಗಿದೆ.
ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರೆಸಿ, ಬ್ರಿಜ್ ಭೂಷಣ್ರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು, ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಂಪರು ಪರೀಕ್ಷೆಗೆ ಒಳಪಡಿಸಬೇಕು, ಒಟ್ನಲ್ಲಿ ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು (Wrestlers Protest) ಇಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಬಂಧನದ ಬಳಿಕ ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಅವರ ಸೋದರಿ ಸಂಗೀತಾ ಫೋಗಟ್ ಅವರು ಪೊಲೀಸ್ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿ ತೆಗೆದುಕೊಂಡ ಫೋಟೊ ವೈರಲ್ ಆಗಿದೆ. ಆದರೆ, ಆ ಫೋಟೊ ತಿರುಚಿದ್ದು ಎಂಬುದು ಬಳಿಕ ಗೊತ್ತಾಗಿದೆ.
ವಿನೇಶ್ ಫೋಗಟ್, ಸಂಗೀತಾ ಫೋಗಟ್ ಸೇರಿ ಹಲವು ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಹಾಗಾಗಿಯೇ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದಲ್ಲದೆ, ಪೊಲೀಸರು ಬಂಧಿಸಿದ ಬಳಿಕ ಅವರು ನಗುತ್ತ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಇದು ಟೂಲ್‌ಕಿಟ್‌ನ ಒಂದು ಭಾಗ ಎಂಬ ಆರೋಪ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಫೋಗಟ್ ಸಹೋದರಿಯರು ಪೊಲೀಸ್ ವಾಹನದಲ್ಲಿ ನಗುತ್ತ ಇರುವ ಫೋಟೊ ಹರಿದಾಡಿತ್ತು.
ಬಜರಂಗ್ ಪುನಿಯಾ ಸ್ಪಷ್ಟನೆ ಏನು?
ವಿನೇಶ್ ಫೋಗಟ್ ಹಾಗೂ ಸಂಗೀತಾ ಫೋಗಟ್ ಅವರ ಫೋಟೊ ವೈರಲ್ ಆಗುತ್ತಲೇ ಮತ್ತೊಬ್ಬ ಕುಸ್ತಿಪಟು ಬಜರಂಗ್ ಪುನಿಯಾ ಸ್ಪಷ್ಟನೆ ನೀಡಿದ್ದಾರೆ. ವಿನೇಶ್ ಫೋಗಟ್ ಹಾಗೂ ಸಂಗೀತಾ ಫೋಗಟ್ ಅವರು ನಗುತ್ತ ಇರುವ ನಕಲಿ ಫೋಟೊವನ್ನು ಐಟಿ ಸೆಲ್‌ನ ಮಂದಿ ವೈರಲ್ ಮಾಡಿದ್ದಾರೆ. ಆದರೆ, ಅದು ನಕಲಿ ಫೋಟೊ. ಅಸಲಿ ಫೋಟೊ ಇಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಅಸಲಿ ಯಾವುದು, ನಕಲಿ ಯಾವುದು?
IT Cell वाले ये झूठी तस्वीर फैला रहे हैं। हम ये साफ़ कर देते हैं की जो भी ये फ़र्ज़ी तस्वीर पोस्ट करेगा उसके ख़िलाफ़ शिकायत दर्ज की जाएगी। #WrestlersProtest pic.twitter.com/a0MngT1kUa
— Bajrang Punia 🇮🇳 (@BajrangPunia) May 28, 2023
ತಿಂಗಳುಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ದೆಹಲಿ ಸುತ್ತಲಿನ ರಾಜ್ಯಗಳ ರೈತರು, ವಿವಿಧ ಕ್ಷೇತ್ರದ ಮುಖಂಡರು ಸಾಥ್ ಕೊಟ್ಟಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆ ದಿನವಾದ ಇಂದು ಪ್ರತಿಭಟನಾಕಾರರೆಲ್ಲ ಸೇರಿ ಮಹಿಳಾ ಸಮ್ಮಾನ್ ಮಹಾಪಂಚಾಯತ್ ಹಮ್ಮಿಕೊಂಡಿದ್ದರು. ಅದರ ಭಾಗವಾಗಿ, ರಾಷ್ಟ್ರಧ್ವಜವನ್ನು ಹಿಡಿದು ಹೊಸ ಸಂಸತ್ ಭವನದತ್ತ ಮೆರವಣಿಗೆ ಹೊರಟಿದ್ದರು. ಜಂತರ್ಮಂತರ್ ಸುತ್ತ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಅವರು ಜಂಪ್ ಮಾಡಿದ್ದಾರೆ. ಆಗ ಪೊಲೀಸರು ಅವರನ್ನೆಲ್ಲ ತಡೆದಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಅವರ ಸೋದರಿ ಸಂಗೀತಾ ಫೋಗಟ್ ಒಬ್ಬರ ಮೇಲೊಬ್ಬರು ಬಿದ್ದರು. ಈ ವೇಳೆ ರಾಷ್ಟ್ರಧ್ವಜವೂ ನೆಲಕ್ಕೆ ಬಿದ್ದ ಫೋಟೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್ ಕವಾಯ್
ಕ್ರಿಕೆಟ್
Asian Games 2023 : ಏಷ್ಯನ್ ಗೇಮ್ಸ್ನಲ್ಲಿ ನೇಪಾಳ ತಂಡ ಸೃಷ್ಟಿಸಿದ ಮಾಡಿದ ದಾಖಲೆಗಳ ವಿವರ ಇಲ್ಲಿದೆ
ಏಷ್ಯನ್ ಗೇಮ್ಸ್ನಲ್ಲಿ (Asian Games 2023) ತನ್ನ ಮೊದಲ ಪಂದ್ಯದಲ್ಲಿಯೇ ನೇಪಾಳ ತಂಡ ಹಲವಾರು ದಾಖಲೆಗಳನ್ನು ಸೃಷ್ಟಿಸಿದೆ.
ನವದೆಹಲಿ: ಏಷ್ಯನ್ ಗೇಮ್ಸ್ 2023 ರ (Asian Games 2023) ಪುರುಷರ ಟಿ 20 ಐ ಕ್ರಿಕೆಟ್ ಪಂದ್ಯಾವಳಿಯ ಮೊದಲ ಮುಖಾಮುಖಿ ನೇಪಾಳ ಮತ್ತು ಮಂಗೋಲಿಯಾ ನಡುವೆ ಬುಧವಾರ ಚೀನಾದ ಹ್ಯಾಂಗ್ಝೌನಲ್ಲಿ ಏರ್ಪಟ್ಟಿತು. ಈ ಪಂದ್ಯ ಸಂಪೂರ್ಣವಾಗಿ ಏಕಮುಖವಾಗಿ ನಡೆಯಿತು. ನೇಪಾಳ ತಂಡ ದುರ್ಬಲವಾಗಿದ್ದರೂ ಮಂಗೋಲಿಯಾ ಕ್ರಿಕೆಟ್ ಶಿಶು. ಹೀಗಾಗಿ ನೇಪಾಳ ತಂಡ ಮಂಗೋಲಿಯಾವನ್ನು ಬಹುತೇಕ ಜರ್ಜರಿತಗೊಳಿಸಿತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಮೂಲಕ ಮಿಂಚಿ ಹಲವಾರು ನೂತನ ದಾಖಲೆಗಳನ್ನು ಸೃಷ್ಟಿಸಿತು. ನೇಪಾಳ ತಂಡಕ್ಕೆ 273 ರನ್ಗಳ ದಾಖಲೆಯ ಜಯವೂ ದೊರೆಯಿತು.
Historic.
— Johns. (@CricCrazyJohns) September 27, 2023
Dipendra Singh smashed fifty from just 9 balls – fastest ever in International cricket…!!!!pic.twitter.com/2Z1GxItIDL
ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ನಂತರ ಮಂಗೋಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಚೊಚ್ಚಲ ಏಷ್ಯಾಕಪ್ ಅಭಿಯಾನದಲ್ಲಿ ಹೊಸದಾಗಿ ಕಣಕ್ಕಿಳಿದ ನೇಪಾಳ, ಮೊದಲ ಐದು ಓವರ್ ಗಳಲ್ಲಿ ಆರಂಭಿಕ ಆಟಗಾರರು 42 ರನ್ ಸೇರಿಸುವ ಮೂಲಕ ಉತ್ತಮ ಆರಂಭ ಪಡೆಯಿತು. ಬಳಿಕ ಕುಶಾಲ್ ಮಲ್ಲಾ ಹಾಗೂ ನಾಯಕ ರೋಹಿತ್ ಪೌಡೆಲ್ ಕೇವಲ 65 ಎಸೆತಗಳಲ್ಲಿ 193 ರನ್ಗಳ ಜೊತೆಯಾಟವಾಡಿದರು.
ಈ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳು ಇಂತಿವೆ
- ಕುಶಾಲ್ ಮಲ್ಲಾ ಕೇವಲ 34 ಎಸೆತಗಳಲ್ಲಿ ಟಿ 20 ಐ ಕ್ರಿಕೆಟ್ನಲ್ಲಿ ವೇಗವಾಗಿ ಶತಕ ಬಾರಿಸಿದರು. ಈ ಹಿಂದೆ ರೋಹಿತ್ ಶರ್ಮಾ ಮತ್ತು ಡೇವಿಡ್ ಮಿಲ್ಲರ್ ತಲಾ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. 19ರ ಹರೆಯದ ಮಲ್ಲಾ 50 ಎಸೆತಗಳಲ್ಲಿ 8 ಬೌಂಡರಿ ಹಾಗೂ 12 ಸಿಕ್ಸರ್ ಬಾರಿಸಿ ಅಜೇಯ 137 ರನ್ ಬಾರಿಸಿದ್ದರು.
- ಈ ಪಂದ್ಯದಲ್ಲಿ ನೇಪಾಳ ಮುರಿದ ಅನೇಕ ದಾಖಲೆಗಳಲ್ಲಿ ಇದು ಒಂದಾಗಿದೆ. ನಾಯಕ ರೋಹಿತ್ ಪೌಡೆಲ್ 27 ಎಸೆತಗಳಲ್ಲಿ 61 ರನ್ ಗಳಿಸಿ ಔಟಾದ ನಂತರ ಆಲ್ ರೌಂಡರ್ ದೀಪೇಂದ್ರ ಸಿಂಗ್ ಐರಿ ಬಂದರು. 23ರ ಹರೆಯದ ಆಲ್ರೌಂಡರ್ ಟಿ20 ಕ್ರಿಕೆಟ್ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸುವ ಮೂಲಕ ಕ್ರಿಕೆಟ್ ಇತಿಹಾದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ದೀಪೇಂದ್ರ ತಮ್ಮ ಅರ್ಧ ಶತಕವನ್ನು ತಲುಪಲು ಕೇವಲ ಒಂಬತ್ತು ಎಸೆತಗಳನ್ನು ತೆಗೆದುಕೊಂಡರು. 2007ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ ಅವರ 16 ವರ್ಷಗಳ ದಾಖಲೆಯನ್ನು ಮುರಿದರು. ಯುವ ಆಟಗಾರ 10 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗಿ ಉಳಿದರು, ಮಲ್ಲಾ ಅವರೊಂದಿಗೆ 11 ಎಸೆತಗಳಲ್ಲಿ 55 ರನ್ಗಳ ಜೊತೆಯಾಟವನ್ನು ಆಡಿದರು.
- ಅಂತಿಮವಾಗಿ ನೇಪಾಳ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 314 ರನ್ ಕಲೆಹಾಕಿತು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 300ಕ್ಕೂ ಅಧಿಕ ರನ್ ಬಾರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2019ರಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ 3 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತ್ತು. ರೋಹಿತ್ ಪೌಡೆ್ ಬಳಗ ತಮ್ಮ ಇನ್ನಿಂಗ್ಸ್ ನಲ್ಲಿ 26 ಸಿಕ್ಸರ್ ಗಳನ್ನು ಬಾರಿಸಿದರು. ಇದು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಬಾರಿಸಿದ 22 ಸಿಕ್ಸರ್ಗಳ ದಾಖಲೆಯನ್ನು ಹಿಮ್ಮೆಟ್ಟಿಸಿತು. ಟಿ20 ಐ ಇನ್ನಿಂಗ್ಸ್ನಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್ಗಳ ದಾಖಲೆ ಎನಿಸಿಕೊಂಡಿತು.
- ಗುರಿ ಬೆನ್ನಟ್ಟಿದ ಮಂಗೋಲಿಯಾ 13.1 ಓವರ್ ಗಳಲ್ಲಿ ಕೇವಲ 41 ರನ್ ಗಳಿಗೆ ಆಲೌಟ್ ಆಯಿತು. 273 ರನ್ ಗಳ ಭರ್ಜರಿ ಜಯ ಸಾಧಿಸಿತು. ಇದು ಟಿ20ಐ ಕ್ರಿಕೆಟ್ನಲ್ಲಿ ರನ್ಗಳ ವಿಷಯದಲ್ಲಿ ಅತಿ ದೊಡ್ಡ ಅಂತರದ ಗೆಲುವು.
Live News
ind vs Aus : ಆಸ್ಟ್ರೇಲಿಯಾ ತಂಡದ ಮೊದಲ ವಿಕೆಟ್ ಪತನ, ಡೇವಿಡ್ ವಾರ್ನರ್ 56 ರನ್ಗೆ ಔಟ್
ಭಾರತ ತಂಡ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದು ಸರಣಿಯನ್ನು ಕೈವಶ ಮಾಡಿಕೊಂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಭಾರತಕ್ಕೆ ಕ್ಲೀನ್ ಸ್ವೀಪ್ ಸಾಧನೆ ಮಾಡುವ ಅವಕಾಶವಿದೆ.
ರಾಜ್ಕೋಟ್: ಇಲ್ಲಿನ ಎಸ್ಸಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಭಾರತ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ (ind vs Aus) ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಎರಡೂ ತಂಡಗಳು ತಲಾ ಐದು ಬದಲಾವಣೆಗಳನ್ನು ಮಾಡಿವೆ.
A look at our Playing XI for the final ODI 👌👌
— BCCI (@BCCI) September 27, 2023
Follow the Match ▶️ https://t.co/H0AW9UXI5Y#INDvAUS | @IDFCFIRSTBank pic.twitter.com/KpYibJpfSo
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಪುನರಾಗಮನ ಮಾಡಿದರೆ, ತನ್ವೀರ್ ಸಂಗಾ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ರೋಹಿತ್ ಶರ್ಮಾ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದಂತೆ ಭಾರತದಲ್ಲೂ ಬದಲಾವಣೆಗಳು ಸಾಕಷ್ಟಾಗಿವೆ. ನಾಯಕ ಮತ್ತು ವಿರಾಟ್ ಕೊಹ್ಲಿ ಮರಳಿದ್ದಾರೆ ಆದರೆ ಶುಭ್ಮನ್ ಗಿಲ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಆಡಲಿದೆ. ಭಾರತವು ವಾಷಿಂಗ್ಟನ್ ಸುಂದರ್ ಅವರಿಗಾಗಿ ರವಿಚಂದ್ರನ್ ಅಶ್ವಿನ್ ಅವರನ್ನು ಕೈಬಿಟ್ಟಿದೆ. ರಾಜ್ಯದ ನಾಲ್ವರು ಸ್ಥಳೀಯ ಆಟಗಾರರಾದ ಧರ್ಮೇಂದ್ರ ಜಡೇಜಾ, ಪ್ರೇರಕ್ ಮಂಕಡ್, ವಿಶ್ವರಾಜ್ ಜಡೇಜಾ ಮತ್ತು ಹರ್ವಿಕ್ ದೇಸಾಯಿ ಪಂದ್ಯದುದ್ದಕ್ಕೂ ಡ್ರಿಂಕ್ಸ್ ಮತ್ತು ಫೀಲ್ಡಿಂಗ್ಗಾಗಿ ತಂಡದ ಜತೆಗೆ ಇರಲಿದ್ದಾರೆ.
ಕ್ರಿಕೆಟ್
World Cup 2023 : ಭಾರತ ವಿರುದ್ಧ ಗೆದ್ದವರು ವಿಶ್ವ ಕಪ್ ಗೆಲ್ತಾರೆ; ಪಾಕ್ ತಂಡ ಮಾಜಿ ಆಟಗಾರನ ಭವಿಷ್ಯ
ಹಾಲಿ ವಿಶ್ವ ಕಪ್ನಲ್ಲಿ (World Cup 2023) ಆಡುವ ತಂಡಗಳಲ್ಲಿ ಭಾರತ ತಂಡ ಅತ್ಯಂತ ಬಲಿಷ್ಠವಾಗಿದೆ ಎಂಬುದಾಗಿ ಪಾಕಿಸ್ತಾನದ ಮಾಜಿ ಆರಂಭಿಕ ಬ್ಯಾಟರ್ ಅಭಿಪ್ರಾಯಪಟ್ಟಿದ್ದಾರೆ.
ನವ ದೆಹಲಿ: ಏಕದಿನ ವಿಶ್ವ ಕಪ್ 2023 ರ (World Cup 2023) ಆವೃತ್ತಿಯು ಎರಡು ವಾರಗಳಿಗಿಂತ ಕಡಿಮೆ ದೂರದಲ್ಲಿದೆ. ಕ್ರಿಕೆಟ್ ಅಭಿಮಾನಿಗಳ ಉತ್ಸಾಹದ ಮಟ್ಟವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ತಜ್ಞರು ಅವಿಸ್ಮರಣಿಯ ಈವೆಂಟ್ನ ಫಲಿತಾಂಶವನ್ನು ಊಹಿಸುವಲ್ಲಿ ನಿರತರಾಗಿದ್ದರೆ, ಕೆಲವರು ತಮ್ಮ ನೆಚ್ಚಿನ ತಂಡಗಳನ್ನು ಹೆಸರಿಸುವಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಕೆಲವು ಕ್ರಿಕೆಟ್ ಪಂಡಿತರ ಎಲ್ಲ ತಂಡಗಳ ಬಲ ಮತ್ತು ದುರ್ಬಲ ಅಂಶಗಳನ್ನು ವಿಶ್ಲೇಷಿಸುವಲ್ಲಿ ನಿರತರಾಗಿದ್ದಾರೆ.
ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಇತ್ತೀಚೆಗೆ ಟ್ವೀಟ್ನಲ್ಲಿ ಆತಿಥೇಯ ಭಾರತವು ಪಂದ್ಯಾವಳಿಯಲ್ಲಿ ಗೆಲ್ಲುವ ತಂಡ ಎಂದು ಹೇಳಿದ್ದರು. ಅದನ್ನು ಹೊರತುಪಡಿಸಿದರೆ ‘ಮೆನ್ ಇನ್ ಬ್ಲೂ’ ಅನ್ನು ಸೋಲಿಸುವ ತಂಡವು ಪ್ರಶಸ್ತಿಯನ್ನು ಗೆಲ್ಲಬಹುದು ಎಂದು ಹೇಳಿದ್ದರು. ಈಗ, ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ವಾನ್ ಅವರ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಭಾರತವು ತಪ್ಪುಗಳನ್ನು ಮಾಡದಿದ್ದರೆ ಇತರ ತಂಡಗಳಿಗೆ ಅವರನ್ನು ಸೋಲಿಸುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ.
ವಿಶ್ವ ಕ್ರಿಕೆಟ್ನಲ್ಲಿ ಎಲ್ಲ ರೀತಿಯಲ್ಲಿ ಸಮತೋಲನ ಹೊಂದಿರುವ ಏಕೈಕ ತಂಡ ಭಾರತ. ಮುಂಬರುವ ವಿಶ್ವಕಪ್ನಲ್ಲಿ ಗಮನಿಸಬೇಕಾದ ನಾಲ್ಕು ತಂಡಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದಾಗ್ಯೂ, ಭಾರತವನ್ನು ಸೋಲಿಸುವ ತಂಡವು ವಿಶ್ವಕಪ್ ಗೆಲ್ಲುತ್ತದೆ ಎಂದು ನಾನು ನಂಬುತ್ತೇನೆ. ಭಾರತ ಅತ್ಯುತ್ತಮ ತಂಡ. ಅವರ ಬ್ಯಾಟಿಂಗ್ ಪರಿಪೂರ್ಣವಾಗಿದೆ ಅವರ ಬೌಲಿಂಗ್ ಅಲ್ಲಿನ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಅವರು ಸ್ವಯಂ ತಪ್ಪುಗಳನ್ನು ಮಾಡದ ಹೊರತು, ಯಾವುದೇ ತಂಡವು ಅವರ ಹತ್ತಿರವೂ ಹೋಗುವುದು ಅಸಂಭವ ಎಂದು ಬಟ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಉನ್ನತ ದರ್ಜೆಯ ಕ್ರಿಕೆಟ್
ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟ್ ವಾತಾವರಣವು ಗಣನೀಯವಾಗಿ ಸುಧಾರಿಸಿದೆ. ಆಟಗಾರರು ಫಿಟ್ನೆಸ್ಗೆ ಹೆಚ್ಚಿನ ಒತ್ತು ನೀಡುತ್ತಾರೆ. ಫೀಲ್ಡಿಂಗ್ ಗುಣಮಟ್ಟವನ್ನು ಹೆಚ್ಚಿಸುತ್ತಾರೆ ಎಂದು ಬಟ್ ಹೇಳಿದ್ದಾರೆ. ಭಾರತದ ಮೂಲಸೌಕರ್ಯ ಮತ್ತಿತರ ವ್ಯವಸ್ಥೆಗಳನ್ನು ಬಟ್ ಶ್ಲಾಘಿಸಿದರು.
ಇದನ್ನೂ ಓದಿ : Asian Games 2023 : ಶೂಟಿಂಗ್ ಸ್ಕೀಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತ ಪುರುಷರ ತಂಡ
“ಕಳೆದ ಕೆಲವು ವರ್ಷಗಳಲ್ಲಿ ಭಾರತವು ಗಮನಾರ್ಹವಾಗಿ ಸುಧಾರಿಸಿದೆ. ಈ ಆಟಗಾರರ ಫಿಟ್ನೆಸ್ ಮಟ್ಟವು ನಾವು 15 ವರ್ಷಗಳ ಹಿಂದೆ ಹೇಳಿದ್ದಕ್ಕಿಂತ ಉತ್ತಮವಾಗಿದೆ. ಅಂತೆಯೇ, ಫೀಲ್ಡಿಂಗ್ ಗುಣಮಟ್ಟವೂ ಸುಧಾರಿಸಿದೆ. ಮೂಲಸೌಕರ್ಯದಿಂದ ಹಿಡಿದು ವೀಕ್ಷಕವಿವರಣೆಗಾರರು, ತಜ್ಞರು ಸೇರಿದಂತೆ ಭಾರತದಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ಎಲ್ಲವೂ ಉನ್ನತ ದರ್ಜೆಯದ್ದಾಗಿದೆ, “ಎಂದು ಪಾಕಿಸ್ತಾನದ ಮಾಜಿ ನಾಯಕ ಹೇಳಿದರು.
ರೋಹಿತ್ ಶರ್ಮಾ ಮತ್ತು ತಂಡವು ಏಕದಿನ ವಿಶ್ವಕಪ್ನ ಎಲ್ಲಾ ಮೂರು ಸ್ವರೂಪಗಳಲ್ಲಿ ನಂ.1 ತಂಡವಾಗಿ ಪ್ರವೇಶಿಸಲಿದೆ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ 10 ತಂಡಗಳ ಟೂರ್ನಿಯಲ್ಲಿ ಅವರ ಅಭಿಯಾನ ಪ್ರಾರಂಭವಾಗುತ್ತದೆ.
ಕ್ರೀಡೆ
Asian Games 2023 : ಶೂಟಿಂಗ್ ಸ್ಕೀಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತ ಪುರುಷರ ತಂಡ
ಈ ಪದಕದೊಂದಿಗೆ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಭಾರತದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಯಿತು.
ಹ್ಯಾಂಗ್ಝ್: ಭಾರತದ ಶೂಟರ್ಗಳು ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಪರಾಕ್ರಮ ಮೆರೆದಿದ್ದಾರೆ. ಮಹಿಳೆಯರು ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದ ಬೆನ್ನಲ್ಲೇ ಪುರುಷರ ತಂಡ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಸ್ಕೀಟ್-50 ತಂಡ ಪುರುಷರ ವಿಭಾಗದಲ್ಲಿ ಭಾರತ 355 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದುಕೊಂಡಿತು. ಈ ತಂಡದಲ್ಲಿ ಅನಂತ್ ಜೀತ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಅಂಗದದದ ವೀರ್ ಸಿಂಗ್ ಬಜ್ವಾ ಇದ್ದರು. ಅನಂತ್ 121 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದು. ಫೈನಲ್ನಲ್ಲಿ ಅವಕಾಶ ಪಡೆಯಲಿದ್ದಾರೆ. ಉಳಿದಿಬ್ಬರು ಫೈನಲ್ ಅವಕಾಶ ನಷ್ಟ ಮಾಡಿಕೊಂಡಿದ್ದಾರೆ.
Remarkable display of skill and teamwork⚡👍
— SAI Media (@Media_SAI) September 27, 2023
The Skeet Men's Team secures the BRONZE MEDAL! 🥉🇮🇳
Their precision shooting has earned 🇮🇳 a place on the podium, and we couldn't be prouder! 🌟🎯#Cheer4India#Hallabol#JeetegaBharat#BharatAtAG22 pic.twitter.com/FfaqFlRubI
ಇದರೊಂದಿಗೆ ಭಾರತಕ್ಕೆ ಏಷ್ಯಾ ಕಪ್ನ ನಾಲ್ಕನೇ ದಿನ ಸ್ಪರ್ಧೆಯಲ್ಲಿ 4 ಪದಕಗಳು ಲಭಿಸಿವೆ. ಇದೇ ವೇಳೆ ಹಾಲಿ ಆವೃತ್ತಿಯಲ್ಲಿ 19ನೇ ಪದಕ ಲಭಿಸಿದಂತಾಗಿದೆ.
ಭಾರತದ ಪದಕಗಳ ಪಟ್ಟಿ
- ಚಿನ್ನ: 5
- ಬೆಳ್ಳಿ: 5
- ಕಂಚು: 9
4ನೇ ದಿನದಾಟದಲ್ಲಿ ಭಾರತದ ಫಲಿತಾಂಶ ಪ್ರಕಟ
ವುಶು: ಪುರುಷರ ದಾವೋಶು ಫೈನಲ್ನಲ್ಲಿ ರೋಹಿತ್ ಜಾಧವ್ 8ನೇ ಸ್ಥಾನ
ಈಜು: ಮಹಿಳೆಯರ 100 ಮೀಟರ್ ಬಟರ್ ಫ್ಲೈ ಹೀಟ್ಸ್ ನಲ್ಲಿ ನೀನಾ ವೆಂಕಟೇಶ್ 1:03:89 ಸಮಯದೊಂದಿಗೆ ಫೈನಲ್ ಗೆ ಅರ್ಹತೆ ಪಡೆಯಲು ವಿಫಲರಾದರು
ಮಹಿಳೆಯರ 100 ಮೀಟರ್ ಬ್ಯಾಕ್ಸ್ಟ್ರೋಕ್ ಹೀಟ್ಸ್ನಲ್ಲಿ ಮಾನಾ ಪಟೇಲ್ 13ನೇ ಸ್ಥಾನ ಪಡೆದರು.
ಶೂಟಿಂಗ್: ಭಾರತದ ಆಶಿ ಚೌಕ್ಸೆ, ಮನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ 50 ಮೀಟರ್ ರೈಫಲ್ 3 ಸ್ಥಾನಗಳ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು.
ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳ ವೈಯಕ್ತಿಕ ಸ್ಪರ್ಧೆಯಲ್ಲಿ ಸಿಫ್ಟ್ ಕೌರ್ ಸಮ್ರಾ ಚಿನ್ನ ಗೆದ್ದು ವಿಶ್ವ ದಾಖಲೆ, ಏಷ್ಯನ್ ಗೇಮ್ಸ್ ದಾಖಲೆಯನ್ನು ಮುರಿದರು
ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳ ವೈಯಕ್ತಿಕ ಸ್ಪರ್ಧೆಯಲ್ಲಿ ಆಶಿ ಚೌಕ್ಸೆ ಕಂಚಿನ ಪದಕ ಗೆದ್ದರು
ಇದನ್ನೂ ಓದಿ : Asian Games 2023 : ವಿಶ್ವ ದಾಖಲೆಯೊಂದಿಗೆ ಶೂಟಿಂಗ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸಿಫ್ಟ್ ಕೌರ್
ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತ (ಮನು ಭಾಕರ್, ಇಶಾ ಸಿಂಗ್, ರಿದಮ್ ಸಾಂಗ್ವಾನ್) ಚಿನ್ನ ಗೆದ್ದರು
ಮಹಿಳೆಯರ 25 ಮೀಟರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಅಗ್ರಸ್ಥಾನ ಪಡೆದರೆ, ಇಶಾ ಐದನೇ ಸ್ಥಾನ ಮತ್ತು ರಿದಮ್ ಏಳನೇ ಸ್ಥಾನ ಪಡೆದರು
ಸ್ಕೀಟ್-50 ತಂಡ ಪುರುಷರ ವಿಭಾಗದಲ್ಲಿ ಭಾರತದ ಅನಂತ್ ಜೀತ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಅಂಗದ್ ವೀರ್ ಸಿಂಗ್ ಬಜ್ವಾ ಕಂಚಿನ ಪದಕ ಗೆದ್ದಿದ್ದಾರೆ.
ಫೆನ್ಸಿಂಗ್: 16ನೇ ಸುತ್ತಿನಲ್ಲಿ ಸಿಂಗಾಪುರ ವಿರುದ್ಧ 30-45 ಅಂತರದಲ್ಲಿ ಸೋತ ಭಾರತ ಪುರುಷರ ತಂಡ
ಸೈಕ್ಲಿಂಗ್: ರೊನಾಲ್ಡೊ ಸಿಂಗ್ 16ನೇ ಸುತ್ತಿನಲ್ಲಿ ಜಪಾನ್ನ ಶಿಂಜಿ ನಕಾನೊ ವಿರುದ್ಧ ಸೋತರು
ಸ್ಕ್ವಾಷ್: ಕುವೈತ್ ವಿರುದ್ಧ ಭಾರತಕ್ಕೆ 3-0 ಅಂತರದ ಗೆಲುವು
ಮಹಿಳಾ ಪೂಲ್ ಬಿ: ನೇಪಾಳವನ್ನು 3-0 ಅಂತರದಿಂದ ಮಣಿಸಿದ ಭಾರತ
-
ದೇಶ15 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ22 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ15 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ16 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್22 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ22 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್19 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್