Range Rover : 90 ಲಕ್ಷ ರೂಪಾಯಿಯ ರೇಂಜ್ ರೋವರ್ ಕಾರು ಖರೀದಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ - Vistara News

ಆಟೋಮೊಬೈಲ್

Range Rover : 90 ಲಕ್ಷ ರೂಪಾಯಿಯ ರೇಂಜ್ ರೋವರ್ ಕಾರು ಖರೀದಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

ನೀರಜ್​ ಚೋಪ್ರಾ ಕಾರು ಪ್ರೇಮಿಯಾಗಿದ್ದು ಹಲವಾರು ಕಾರುಗಳು ಅವರ ಬಳಿ ಇವೆ. ಅದರ ಸಾಲಿಗೆ ರೇಂಜ್ ರೋವರ್​ ವೆಲಾರ್​ (Range Rover) ಸೇರಿಕೊಂಡಿದೆ.

VISTARANEWS.COM


on

Neeraj Chopra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್​ ಎಸೆಗಾರ ನೀರಜ್ ಚೋಪ್ರಾ (Neeraj Chopra) ಎಲ್ಲೆಲ್ಲೂ ಸಂಚಲನ ಮೂಡಿಸುತ್ತಿದ್ದಾರೆ. ಭಾರತದ ಕ್ರೀಡಾ ಐಕಾನ್ ಆಗಿ ಪರಿವರ್ತನೆಗೊಂಡಿರುವ ಅವರು ಐಷಾರಾಮಿ ಕಾರುಗಳನ್ನು ಪ್ರೇಮಿಯೂ ಎನಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನೀರಜ್ ತಮ್ಮ ಕಾರು ಸಂಗ್ರಹಕ್ಕೆ ಮತ್ತೊಂದು ವಿಶೇಷ ಕಾರನ್ನು ಸೇರಿಸಿದ್ದಾರೆ. ಅದುವೇ ಹೊಚ್ಚ ಹೊಸ ಕಪ್ಪು ರೇಂಜ್ ರೋವರ್ ವೆಲಾರ್ (Range Rover velar) ಎಸ್​​ಯುವಿ. ಒಲಿಂಪಿಕ್ ಚಿನ್ನದ ಪದಕ ವಿಜೇತರು ತಮ್ಮ ಹೊಸ ರೇಂಜ್ ರೋವರ್ ವೆಲಾರ್ ಜತೆಗೆ ಇರುವ ಚಿತ್ರ ಸೋಶಿಯಲ್ ಮೀಡಿಯಾಗಳಲ್ಲಿ ಓಡಾಡಿದೆ.

ನೀರಜ್ ಚೋಪ್ರಾ ತಮ್ಮ ಈಗಾಗಲೇ ಐಷಾರಾಮಿ ಕಾರು ಸಂಗ್ರಹಕ್ಕೆ ಅದ್ಭುತ ಸೇರ್ಪಡೆ ಎಂಬಂತೆ ಆಕರ್ಷಕ ಕಪ್ಪು ರೇಂಜ್ ರೋವರ್ ವೆಲಾರ್ ಎಸ್​​ಯುವಿಯನ್ನು ಮನೆಗೆ ತಂದಿದ್ದಾರೆ. ಭಾರತೀಯ ಕ್ರೀಡಾಪಟುವಿನ ಈ ಖರೀದಿಯು ಹೆಚ್ಚಿನ ಗಮನವನ್ನು ಸೆಳೆದಿದೆ. ಈ ಎಸ್​​ಯುವಿಯ ಚಿತ್ರವನ್ನು ಲ್ಯಾಂಡ್ ರೋವರ್ ಮಾಲ್ವಾ ಆಟೋಮೋಟಿವ್ಸ್ ಹಂಚಿಕೊಂಡಿದೆ. ಲ್ಯಾಂಡ್ ರೋವರ್ – ಮಾಲ್ವಾ ಆಟೋಮೋಟಿವ್ಸ್ ತನ್ನ ಫೇಸ್ಬುಕ್ ಪೋಸ್ಟ್​​ನಲ್ಲಿ “ನಾವು ಶ್ರೀ ನೀರಜ್ ಚೋಪ್ರಾ ಅವರನ್ನು ರೇಂಜ್ ರೋವರ್ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಮತ್ತು ಅವರ ಹೊಸ ರೇಂಜ್ ರೋವರ್ ವೆಲಾರ್​​ಗೆ ಅಭಿನಂದಿಸುತ್ತೇವೆ” ಎಂದು ಬರೆದುಕೊಂಡಿದೆ.

ನೀರಜ್ ಚೋಪ್ರಾ ಅವರ ಐಷಾರಾಮಿ ಕಾರುಗಳ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿದೆ. ಹೊಸ ರೇಂಜ್ ರೋವರ್ ವೆಲಾರ್ ಜೊತೆಗೆ ಅವರ ಬಳಿ ರೇಂಜ್ ರೋವರ್ ಸ್ಪೋರ್ಟ್ ಮತ್ತು ಇತರ ಹಲವಾರು ಹೈ ಎಂಡ್​ ಕಾರುಗಳಿವೆ. ನೀಲಿ ಬಣ್ಣದ ಫೋರ್ಡ್ ಮಸ್ಟಾಂಗ್​ನೊಂದಿಗೆ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ನೀರಜ್ ಅವರ ಮಸ್ಟಾಂಗ್ ಸಕೆಂಡ್​ ಹ್ಯಾಂಡ್​ ಕಾರು ಎಂದು ಹೇಳಲಾಗಿದೆ.

ಹೊಸ ಮಾಡೆಲ್​

ರೇಂಜ್ ರೋವರ್ ವೆಲಾರ್ ಅನ್ನು ಅವರು ಇತ್ತೀಚೆಗೆ ಬಿಡುಗಡೆಗೊಂಡಿದೆ. ಬ್ರಿಟಿಷ್ ಕಂಪನಿಯು ಇದನ್ನು ವಿನ್ಯಾಸಗೊಳಿಸಿದೆ, ಇದು ಶ್ರೀಮಂತಿಕೆ, ಸಾಮರ್ಥ್ಯ ಮತ್ತು ಐಷಾರಾಮಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ರೇಂಜ್ ರೋವರ್ ಇವೊಕ್ ಮತ್ತು ಹೆಚ್ಚು ದುಬಾರಿ ರೇಂಜ್ ರೋವರ್ ಸ್ಪೋರ್ಟ್ ಮತ್ತು ವೋಗ್ ಮಾದರಿಗಳ ನಡುವೆ ಸ್ಥಾನ ಪಡೆದಿದೆ. ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 78.87 ರೂಪಾಯಿಗಳು. ಆದಾಗ್ಯೂ, ನೀರಜ್ ಚೋಪ್ರಾ ಪಾವತಿಸಿದ ನಿಖರವಾದ ಬೆಲೆ ಇನ್ನೂ ತಿಳಿದಿಲ್ಲ.

ಪವರ್​ ಟ್ರೇನ್​ ಹೇಗಿದೆ

ಭಾರತದಲ್ಲಿ ರೇಂಜ್ ರೋವರ್ ವೆಲಾರ್ ಅನ್ನು ವಿಭಿನ್ನ ಚಾಲನಾ ಆದ್ಯತೆಗಳಿಗೆ ಅನುಗುಣವಾಗಿ ಮೂರು ಎಂಜಿನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಕಡಿಮೆ ವೇರಿಯೆಂಟ್​ 179 ಬಿಎಚ್​ಪಿ ಪವರ್ ಬಿಡುಗಡೆ ಮಾಡುವ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಥವಾ 250 ಬಿಎಚ್​ಪಿ ಹೊಂದಿರುವ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿವೆ. ಹೆಚ್ಚಿನ ಪವರ್​​ ಬಯಸುವವರಿಗೆ ಟಾಪ್-ಎಂಡ್ ವೇರಿಯೆಂಟ್​ಗಳು 296 ಬಿಎಚ್​ಪಿ 3.0-ಲೀಟರ್ ವಿ 6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿವೆ. ಝಡ್​ಎಫ್ ನಿಂದ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮತ್ತು ಟೆರೈನ್ ರೆಸ್ಪಾನ್ಸ್ ಸಮೇತ ಆಲ್-ವ್ಹೀಲ್ ಡ್ರೈವ್​ ಆಯ್ಕೆಯಿದೆ.

ಇದನ್ನೂ ಓದಿ : Porsche Car : ಈ ಬಾಲಿವುಡ್ ನಟನ ಬಳಿ ಒಂದಲ್ಲ, ಎರಡಲ್ಲ, ಮೂರು ಪೋರ್ಶೆ ಕಾರುಗಳಿವೆ

ಫೀಚರ್​ಗಳೇನು?

ರೇಂಜ್ ರೋವರ್ ವೆಲಾರ್ ಐಷಾರಾಮಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ವೈಶಿಷ್ಟ್ಯಗಳನ್ನು ಹೊಂದಿದೆ. ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲ್ಯಾಂಪ್​​​ಗಳು, ಯೂಸರ್​ ಫ್ರೆಂಡ್ಲಿ ಟಚ್ ಸ್ಕ್ರೀನ್ ಇಂಟರ್​ಫೇಸ್​ ಹೊಂದಿರುವ ಟಚ್ ಪ್ರೊ ಡ್ಯುಯೊ ಇನ್ಫೋಟೈನ್ ಮೆಂಟ್ ಸಿಸ್ಟಂ, ಹಿಲ್ ಡಿಸೆಂಟ್ ಕಂಟ್ರೋಲ್, ಅಡಾಪ್ಟಿವ್ ಏರ್ ಸಸ್ಪೆಂಷನ್, ಮೆಮೊರಿ ಫಂಕ್ಷನ್ ಹೊಂದಿರುವ ವೆಂಟಿಲೇಟೆಡ್ ಫ್ರಂಟ್ ಸೀಟ್​​ಗಳು ಮತ್ತು ಆಕ್ಟಿವ್ ರಿಯರ್ ಲಾಕಿಂಗ್ ಇ-ಡಿಫರೆನ್ಷಿಯಲ್ ಅನ್ನು ಹೊಂದಿದೆ. ಹೊಸ ಪಿವಿ ಪ್ರೊ ಇನ್ಫೋಟೈನ್ ಮೆಂಟ್ ಸಿಸ್ಟಂ ಗಮನಾರ್ಹ ಸೇರ್ಪಡೆಯಾಗಿದ್ದು, 10 ಇಂಚಿನ ಟಚ್ ಸ್ಕ್ರೀನ್ ಮತ್ತು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋದಂತಹ ಸುಧಾರಿತ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡುತ್ತದೆ.

Kriti Karabanda

ರೇಂಜ್ ರೋವರ್ ವೆಲಾರ್​​ನಿಂದ ಆಕರ್ಷಿತರಾದ ಸೆಲೆಬ್ರಿಟಿ ನೀರಜ್ ಚೋಪ್ರಾ ಮಾತ್ರವಲ್ಲ. ಜನಪ್ರಿಯ ನಟಿ ಕೃತಿ ಕರಬಂದ, ಸ್ಟ್ಯಾಂಡ್-ಅಪ್ ನಟ ಝಾಕಿರ್ ಖಾನ್ ಮತ್ತು ನಟಿ ಅವ್ನೀತ್ ಕೌರ್ ವೆಲಾರ್ ಕಾರುಗಳನ್ನು ಹೊಂದಿದ್ದಾರೆ. ನಟ ಪ್ರಭಾಸ್ ತಮ್ಮ ಜಿಮ್ ತರಬೇತುದಾರ ರೇಂಜ್ ರೋವರ್ ವೆಲಾರ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Top 10 Motar Bike: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಬೈಕ್‌ಗಳಿವು

Top 10 Motar Bike: ಬೈಕ್ ಶೋರೂಂಗೆ ಹೋದರೆ ಯಾವ ಬೈಕ್ ಖರೀದಿಸುವುದು ಯಾವುದನ್ನು ಬಿಡುವುದು ಎಂಬ ಗೊಂದಲ ಯುವಕರಲ್ಲಿ ಉಂಟಾಗುತ್ತದೆ. ಅಂತಹ ನ್ಯೂ ಮಾಡೆಲ್ ಬೈಕ್ ಗಳು ಒಂದರ ಮೇಲೆ ಒಂದು ಸ್ಪರ್ಧೆಯಲ್ಲಿ ನಿಂತಿರುತ್ತವೆ. ಹಾಗಾಗಿ ಬೈಕ್ ಕೊಳ್ಳಲು ಬಯಸುವ ಬೈಕ್ ಪ್ರಿಯರಿಗೆ ಮೇ 2024ರಲ್ಲಿ ಸ್ಪರ್ಧೆಯಲ್ಲಿರುವ ಟಾಪ್ 10 ಮೋಟಾರ್ ಸೈಕಲ್ ಗಳಾದ ಹೀರೊ ಮೊಟೊಕಾರ್ಪ್, ಹೋಂಡಾ ಶೈನ್, ಬಜಾಜ್ ಪಲ್ಸರ್ ಇತ್ಯಾದಿಗಳ ವಿವರ ಇಲ್ಲಿದೆ.

VISTARANEWS.COM


on

Top 10 Motar Bike
Koo

ಮಾರುಕಟ್ಟೆಗೆ ಪ್ರತಿವರ್ಷ ಹೊಸ ಹೊಸ ವಿಧದ ಮೋಟಾರು ಬೈಕ್(Motar Bike)ಗಳು ಬರುತ್ತವೆ. ಬೈಕ್ ಶೋರೂಂಗೆ ಹೋದರೆ ಯಾವ ಬೈಕ್ ಖರೀದಿಸುವುದು, ಯಾವುದನ್ನು ಬಿಡುವುದು ಎಂಬ ಗೊಂದಲ ಯುವಕರಲ್ಲಿ ಉಂಟಾಗುತ್ತದೆ. ಅಂತಹ ನ್ಯೂ ಮಾಡೆಲ್ ಬೈಕ್‌ಗಳು ಒಂದರ ಮೇಲೆ ಒಂದು ಸ್ಪರ್ಧೆಯಲ್ಲಿ ನಿಂತಿರುತ್ತವೆ. ಹಾಗಾಗಿ ಬೈಕ್ ಕೊಳ್ಳಲು ಬಯಸುವ ಬೈಕ್ ಪ್ರಿಯರಿಗೆ 2024ರಲ್ಲಿ ಸ್ಪರ್ಧೆಯಲ್ಲಿರುವ ಟಾಪ್ 10 ಮೋಟಾರ್ ಸೈಕಲ್ ಗಳ ವಿವರ ನೀಡುತ್ತಿದ್ದೇವೆ.

2024ರಲ್ಲಿ ಕಾರುಗಳು ತಮ್ಮ ಮಾರಾಟದಲ್ಲಿ ಕುಸಿತ ಕಂಡರೂ ದ್ವಿಚಕ್ರ ವಾಹನಗಳು ಮಾತ್ರ ಮಾರುಕಟ್ಟೆಯಲ್ಲಿ ಶೇ.1.59ರಷ್ಟು ಬೆಳವಣಿಯನ್ನು ಕಂಡಿವೆ. ಅದರಲ್ಲಿ 10 ಮೋಟಾರ್ ಸೈಕಲ್‌ಗಳ ಮಾರಾಟವು ಒಟ್ಟು 8.45 ಲಕ್ಷ ಯುನಿಟ್‌ಗಳನ್ನು ತಲುಪಿದೆ ಎನ್ನಲಾಗಿದೆ. ಹಾಗಾಗಿ ಈ ಬಾರಿ ಅಗ್ರಸ್ಥಾನದಲ್ಲಿರುವ ಮೋಟಾರ್ ಸೈಕಲ್ ಗಳ ವಿವರ ಇಲ್ಲಿದೆ.

Top 10 Motar Bike

1. ಹೀರೊ

ಹೀರೊ ಮೊಟೊಕಾರ್ಪ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್ ಸೈಕಲ್ ಆಗಿದೆ. ಹೀರೊ ಸ್ಪ್ಲೆಂಡರ್ ಮೇ 2024ರಲ್ಲಿ 3,04,663 ಯುನಿಟ್‌ಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಆದರೆ ಕಳೆದ ವರ್ಷದ ಮಾರಾಟಕ್ಕಿಂತ 37,863 ಯುನಿಟ್‌ಗಳಷ್ಟು ಕಡಿಮೆ ಮಾರಾಟವಾಗಿದೆ. ಹಾಗಾಗಿ ಕಂಪನಿಯು ಮಾರಾಟದಲ್ಲಿ ಶೇಕಡಾ 11.05ರಷ್ಟು ಕುಸಿತವನ್ನು ಕಂಡಿದೆ. ಮೇ 2024ರಲ್ಲಿ 36.03 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ.
ಸ್ಪ್ಲೆಂಡರ್ ಹೊರತುಪಡಿಸಿ ದ್ವಿಚಕ್ರ ವಾಹನಗಳಾದ ಹೆಚ್‌ಎಫ್ ಡಿಲಕ್ಸ್ ಮತ್ತು ಪ್ಯಾಶನ್ ಕ್ರಮವಾಗಿ 4 ಮತ್ತು 10ನೇ ಸ್ಥಾನದಲ್ಲಿದೆ. ಹೀರೊ ಹೆಚ್ ಎಫ್ ಡಿಲಕ್ಸ್ ಮೇ 2024ರಲ್ಲಿ 87,143 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ ಕಳೆದ ವರ್ಷದ ಮಾರಾಟಕ್ಕಿಂತ 21,957 ಯುನಿಟ್ ಗಳಷ್ಟು ಕಡಿಮೆ ಮಾರಾಟವಾಗಿದೆ. ಹಾಗಾಗಿ ಕಂಪೆನಿಯು ಮಾರಾಟದಲ್ಲಿ ಶೇಕಡಾ-20.13ರಷ್ಟು ಕುಸಿತವನ್ನು ಕಂಡಿದೆ. ಹಾಗೇ ಹೀರೋ ಫ್ಯಾಶನ್ ಮೇ 2024ರಲ್ಲಿ 22,327 ಯುನಿಟ್ ಗಳನ್ನು ಮಾರಾಟ ಮಾಡಿತ್ತು. ಆದರೆ ಕಳೆದ ವರ್ಷದ ಮಾರಾಟಕ್ಕಿಂತ 507.04 ಪ್ರತಿಶತದಷ್ಟು ಬೆಳೆವಣಿಗೆಯನ್ನು ಕಂಡಿದೆ. ಹೀರೊ ಹೆಚ್ ಎಫ್ ಡಿಲಕ್ಸ್ ಮತ್ತು ಪ್ಯಾಶನ್ ಮೇ 2024ರಲ್ಲಿ ಕ್ರಮವಾಗಿ 10.31 ಶೇಕಡಾ ಮತ್ತು 2.64 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿವೆ.

Top 10 Motar Bike

1. ಹೋಂಡಾ

ಜಪಾನಿನ ವಾಹನ ತಯಾರಕ ಕಂಪನಿಯಾದ ಹೋಂಡಾ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹೋಂಡಾ ಶೈನ್ ಮೇ 2024ರಲ್ಲಿ 1,49,054 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ 45,355 ಯುನಿಟ್‌ಗಳಷ್ಟು ಹೆಚ್ಚು ಮಾರಾಟ ಮಾಡಿ 43.74 ಪ್ರತಿಶತದಷ್ಟು ಬೆಳೆವಣಿಗೆಯನ್ನು ಹೊಂದಿದೆ ಮತ್ತು 17.63 ಶೇ. ಮಾರುಕಟ್ಟೆ ಪಾಲನ್ನು ಹೊಂದಿದೆ.
ಹಾಗೆಯೇ ಹೋಂಡಾ ಯುನಿಕಾರ್ನ್ ಮೇ 2024ರಲ್ಲಿ 24,740 ಯುನಿಟ್ ಗಳನ್ನು ಮಾರಾಟ ಮಾಡುವುದರೊಂದಿಗೆ 8ನೇ ಸ್ಥಾನದಲ್ಲಿದೆ ಹಾಗೂ ಈ ವರ್ಷ 2.93 ಶೇಕಡಾ ಮಾರುಕಟ್ಟೆ ಪಾಲನ್ನು ಪಡೆದಿದೆ.

Top 10 Motar Bike

3. ಬಜಾಜ್

ಬಜಾಜ್ ಪಲ್ಸರ್ ಮೇ 2024ರಲ್ಲಿ 1,28,480 ಯುನಿಟ್ ಗಳನ್ನು ಮಾರಾಟ ಮಾಡುವ ಮೂಲಕ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ 77 ಯುನಿಟ್ ಗಳಷ್ಟು ಹೆಚ್ಚು ಮಾರಾಟ ಮಾಡಿ 0.06ರಷ್ಟು ಬೆಳವಣಿಗೆಯನ್ನು ಹೊಂದಿದೆ. ಮತ್ತು ಮೇ 2024ರಲ್ಲಿ 15.19 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ.
ಬಜಾಜ್ ಪ್ಲಾಟಿನಾ ಮೇ 2024ರಲ್ಲಿ 30,239 ಯುನಿಟ್ ಗಳನ್ನು ಮಾರಾಟ ಮಾಡಿ 7ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ -11,915ರಷ್ಟು ಕಡಿಮೆ ಮಾರಾಟ ಮಾಡಿ -28.27 ಪ್ರತಿಶತದಷ್ಟು ಕುಸಿತ ಕಂಡಿದೆ. ಇದು ಮೇ 2024ರಲ್ಲಿ 3.58 ಶೇಕಡಾ ಮಾಡುಕಟ್ಟೆಯ ಪಾಲನ್ನು ಹೊಂದಿದೆ.

Top 10 Motar Bike

4. ಟಿವಿಎಸ್

ಮೇ 2024ರಲ್ಲಿ ಟಿವಿಎಸ್ ಅಪಾಚೆ ಮತ್ತು ಟಿವಿಎಸ್ ರೈಡರ್ ಎರಡನ್ನೂ ಒಳಗೊಂಡಂತೆ ಶೇಕಡಾ 8.89 ಮಾರುಕಟ್ಟೆ ಪಾಲನ್ನು ಹೊಂದಿದೆ. ಅಪಾಚೆ ಕಳೆದ ವರ್ಷದ 41,955 ಯುನಿಟ್ ಗಳಿಗೆ ಹೋಲಿಸಿದರೆ 2024ರಲ್ಲಿ 37,906 ಯುನಿಟ್ ಗಳನ್ನು ಮಾರಾಟ ಮಾಡಿದೆ. ಹಾಗಾಗಿ ಈ ಬೈಕ್ ಮಾರಾಟದಲ್ಲಿ ಶೇಕಡಾ 9.65ರಷ್ಟು ಕುಸಿತ ಕಂಡಿದೆ. ಟಿವಿಎಸ್ ರೈಡರ್ ಕಳೆದ ವರ್ಷದ 34,440 ಯುನಿಟ್ ಗೆ ಹೋಲಿಸಿದರೆ ಮೇ 2024ರಲ್ಲಿ 37,249 ಯುನಿಟ್ ಗಳನ್ನು ಮಾರಾಟ ಮಾಡಿದೆ. ಹಾಗಾಗಿ ಈ ಬೈಕ್ ಶೇಕಡಾ 8.16ರಷ್ಟು ಬೆಳವಣಿಗೆಯನ್ನು ಕಂಡಿದೆ. ಅಪಾಚೆ ಮತ್ತು ರೈಡರ್ ಇವೆರಡು ಬೈಕ್ ಗಳ ಮಾರುಕಟ್ಟೆ ಪಾಲು ಕ್ರಮವಾಗಿ 4.48 ಮತ್ತು 4.41 ಶೇಕಡಾ ಆಗಿದೆ.

ಇದನ್ನೂ ಓದಿ: Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Top 10 Motar Bike

5. ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಆರ್ ಇ ಕ್ಲಾಸಿಕ್ 350 ಮೇ 2024ರಲ್ಲಿ 23,779 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 2,571 ಯುನಿಟ್‌ಗಳಷ್ಟು ಕಡಿಮೆ ಮಾರಾಟ ಮಾಡಿ 9.76 ಶೇಕಡಾ ಕುಸಿತವನ್ನು ಕಂಡಿದೆ. ಹಾಗಾಗಿ ಮೇ 2024ರಲ್ಲಿ 2.81 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ.

Continue Reading

ಪ್ರಮುಖ ಸುದ್ದಿ

Citroen C3 Aircross : ಧೋನಿ ಹೆಸರಿನಲ್ಲಿ ಬಿಡುಗಡೆಯಾಗಿದೆ ಈ ಕಾರು, ಕೇವಲ 100 ಕಾರಷ್ಟೇ ಉತ್ಪಾದನೆ

Citroen C3 Aircross: ಸಿ3 ಏರ್ ಕ್ರಾಸ್ ಧೋನಿ ಆವೃತ್ತಿಯ ಹೊರಭಾಗದಲ್ಲಿ ಧೋನಿಯ ಹೆಸರು ಮತ್ತು ಅವರ ಜೆರ್ಸಿ ಸಂಖ್ಯೆ 7 ನೊಂದಿಗೆ ಹೊಸ ಡೆಕಾಲ್ ನೀಡಲಾಗಿದೆ. ಒಳಭಾಗದಲ್ಲಿ ಲಿಮಿಟೆಡ್ ರನ್​ ಮಾಡೆಲ್ ಆಗಿದ್ದು. ಹೊಸ ಬಣ್ಣ-ಸಂಯೋಜಿತ ಸೀಟ್ ಕವರ್ ಗಳು ಮತ್ತು ಕುಶನ್ ಪಿಲ್ಲೊ, ಸೀಟ್ ಬೆಲ್ಟ್ ಕುಶನ್ ಗಳು, ಹೆಚ್ಚು ಪ್ರಕಾಶಮಾನವಾಗಿರವು ಡೋರ್ ಸಿಲ್ ಪ್ಲೇಟ್ ಗಳು ಮತ್ತು ಮುಂಭಾಗದ ಡ್ಯಾಶ್ ಕ್ಯಾಮ್ ನೀಡಲಾಗಿದೆ.

VISTARANEWS.COM


on

Citroen C3 Aircross
Koo

ಬೆಂಗಳೂರು: ಸಿಟ್ರೋಯನ್​ ತನ್ನ ಮಧ್ಯಮ ಗಾತ್ರದ ಎಸ್​ಯುವಿ ಕಾರಾಗಿರುವ ಸಿ3 ಏರ್ ಕ್ರಾಸ್ (Citroen C3 Aircross) ಧೋನಿ ಎಡಿಷನ್ ಹೊಸ ವಿಶೇಷ ಆವೃತ್ತಿ ಹೊರತಂದಿದೆ. 11.82 ಲಕ್ಷ ರೂ.ಗಳ ಬೆಲೆ ಹೊಂದಿರುವ ಧೋನಿ ಎಡಿಷನ್ ಅನೇಕ ರೂಪಾಂತರಗಳು 5 ಮತ್ತು 7 ಸೀಟರ್​ ಕಾನ್ಫಿಗರೇಶನ್ ಗಳಲ್ಲಿ ಲಭ್ಯವಿದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಈ ವಿಶೇಷ ಆವೃತ್ತಿಯ ಮಾದರಿಯು 100 ಯುನಿಟ್ ಗಳಿಗೆ ಸೀಮಿತವಾಗಿದೆ ಎಂಬುದೇ ವಿಶೇಷ. ಈ ಎಡಿಷನ್​ನಲ್ಲಿ ಸಿ3 ಏರ್ ಕ್ರಾಸ್ ಗಿಂತ ಸಣ್ಣ ಪ್ರಮಾಣದ ಇಂಟೀರಿಯರ್​ ಬದಲಾವಣೆ ಮಾಡಲಾಗಿದೆ.

ಸಿ3 ಏರ್ ಕ್ರಾಸ್ ಧೋನಿ ಆವೃತ್ತಿಯ ಹೊರಭಾಗದಲ್ಲಿ ಧೋನಿಯ ಹೆಸರು ಮತ್ತು ಅವರ ಜೆರ್ಸಿ ಸಂಖ್ಯೆ 7 ನೊಂದಿಗೆ ಹೊಸ ಡೆಕಾಲ್ ನೀಡಲಾಗಿದೆ. ಒಳಭಾಗದಲ್ಲಿ ಲಿಮಿಟೆಡ್ ರನ್​ ಮಾಡೆಲ್ ಆಗಿದ್ದು. ಹೊಸ ಬಣ್ಣ-ಸಂಯೋಜಿತ ಸೀಟ್ ಕವರ್ ಗಳು ಮತ್ತು ಕುಶನ್ ಪಿಲ್ಲೊ, ಸೀಟ್ ಬೆಲ್ಟ್ ಕುಶನ್ ಗಳು, ಹೆಚ್ಚು ಪ್ರಕಾಶಮಾನವಾಗಿರವು ಡೋರ್ ಸಿಲ್ ಪ್ಲೇಟ್ ಗಳು ಮತ್ತು ಮುಂಭಾಗದ ಡ್ಯಾಶ್ ಕ್ಯಾಮ್ ನೀಡಲಾಗಿದೆ.

ಪ್ರತಿ ಧೋನಿ ಎಡಿಷನ್​ ಕಾರಿನ ಗ್ಲೋವ್ ಬಾಕ್ಸ್​ನಲ್ಲಿ ವಿಶೇಷ ‘ಧೋನಿ ಗೂಡಿ’ ಒಳಗೊಂಡಿರುತ್ತದೆ ಎಂದು ಸಿಟ್ರನ್ ಹೇಳುತ್ತಾರೆ. ಅಂದರೆ ಅದೃಷ್ಟಶಾಲಿ ವಿಜೇತರು ಸ್ವತಃ ಧೋನಿಯಿಂದ ಸಹಿ ಮಾಡಿದ ಗ್ಲವ್ಸ್​​ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Bajaj CNG Bike: ವಿಶ್ವದ ಮೊದಲ ಸಿಎನ್‌ಜಿ ಬೈಕ್‌; ಬಜಾಜ್‌ನಿಂದ ಜುಲೈ 5ರಂದು ಬಿಡುಗಡೆ

ಉಳಿದಂತೆ ಧೋನಿ ಆವೃತ್ತಿಯು ಸ್ಟ್ಯಾಂಡರ್ಡ್ ಸಿ 3 ಏರ್ ಕ್ರಾಸ್ ನಂತೆಯೇ ಇದೆ. ಇದು 110 ಬಿಹೆಚ್ ಪಿ, 1.2-ಲೀಟರ್ ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ.

ಸಚಿನ್​ ಹೆಸರಿನ ಫಿಯೆಟ್​ ಕಾರು ಬಂದಿತ್ತು

ಖ್ಯಾತ ಕ್ರಿಕೆಟಿಗರೊಬ್ಬರು ಕಾರು ತಯಾರಕರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2002 ರಲ್ಲಿ ಫಿಯೆಟ್ ತಂಡವು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕೈಜೋಡಿಸಿ ಪಾಲಿಯೋ ಎಸ್ 10 ಅನ್ನು ಹೊರತಂದಿತ್ತು. ಈ ಸೀಮಿತ ರನ್ ಮಾದರಿಯನ್ನು (ಕೇವಲ 500 ಮಾತ್ರ ಉತ್ಪಾದಿಸಲಾಗಿತ್ತು. ಪ್ರತಿಯೊಂದೂ ಅದರ ಸರಣಿ ಸಂಖ್ಯೆಯನ್ನು ಸೂಚಿಸುವ ಅಲ್ಯೂಮಿನಿಯಂ ಫಲಕವನ್ನು ಪಡೆದುಕೊಂಡಿತ್ತು ) ಹೊರಗೆ ಹಲವಾರು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಂದಿತ್ತಯ. ವಿಶೇಷ ಬಣ್ಣ ಮತ್ತು ಸಚಿನ್ ಅವರ ಆಟೋಗ್ರಾಫ್ ನಿಂದ ಹಿಡಿದು ಹಿಂಭಾಗದ ಸ್ಪಾಯ್ಲರ್ ಮತ್ತು ಹೊಸ ಅಲಾಯ್ ಚಕ್ರಗಳವರೆಗೆ ವಿಶೇಷತೆ ಇತ್ತು.

Continue Reading

Latest

Bajaj CNG Bike: ವಿಶ್ವದ ಮೊದಲ ಸಿಎನ್‌ಜಿ ಬೈಕ್‌; ಬಜಾಜ್‌ನಿಂದ ಜುಲೈ 5ರಂದು ಬಿಡುಗಡೆ

Bajaj CNG Bike: ಬೈಕ್ ಪ್ರಿಯರಿಗೊಂದು ಸಿಹಿ ಸುದ್ದಿ. ಇಂಧನ ಬೆಲೆಗಳಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಬಜಾಜ್ ಸಿಎನ್ ಜಿ ಬೈಕ್ ಗಳ ಆವಿಷ್ಕಾರಕ್ಕೆ ಮುಂದಾಗಿದ್ದು, ಇದೀಗ ತನ್ನ ಸಿಎನ್ ಜಿ ಬೈಕ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಮುಂದಿನ ತಿಂಗಳು ಜುಲೈ 5 ರಂದು ಬಜಾಜ್ ತನ್ನ ಸಿಎನ್ ಜಿ ಬೈಕ್ ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈ ಬೈಕ್ ಅನ್ನು ಸದ್ಯಕ್ಕೆ ‘ಬಜಾಜ್ ಬ್ರೂಜರ್’ ಎಂದು ಕರೆಯಲಾಗುತ್ತದೆ. ಆದರೆ ಬಿಡುಗಡೆಯ ವೇಳೆ ಇದರ ಹೆಸರನ್ನು ಬದಲಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

VISTARANEWS.COM


on

Bajaj CNG Bike
Koo

ನವದೆಹಲಿ: ಯುವ ಜನತೆಗೆ ಬೈಕ್ ಕ್ರೇಜ್ ಸಹಜ. ಮಾರುಕಟ್ಟೆಯಲ್ಲಿ ಯಾವುದೇ ಹೊಸ ಬೈಕ್ ಬಂದರೂ ಅವರ ಕಣ್ಣು ಅದರ ಮೇಲಿರುತ್ತದೆ. ಇನ್ನು ಸಾಲ ಮಾಡಿಯಾದರೂ ಸರಿ ಒಂದು ಬೈಕ್‌ ತೆಗೆದುಕೊಳ್ಳಬೇಕು ಎಂಬ ಕ್ರೇಜ್‌ ಹುಡುಗರಿಗಿರುತ್ತದೆ. ಇಂತಹ ಬೈಕ್ ಪ್ರಿಯರಿಗೆ ಇದೀಗ ಬಜಾಜ್ (Bajaj CNG Bike) ಸಿಹಿ ಸುದ್ದಿಯೊಂದನ್ನು ನೀಡಿದೆ.

ಇಂಧನ ಬೆಲೆಗಳಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಬಜಾಜ್ ಸಿಎನ್‌ಜಿ ಬೈಕ್‌ಗಳ ಆವಿಷ್ಕಾರಕ್ಕೆ ಮುಂದಾಗಿದ್ದು, ಇದೀಗ ತನ್ನ ಸಿಎನ್‌ಜಿ ಬೈಕ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಮುಂದಿನ ತಿಂಗಳು ಜುಲೈ 5ರಂದು ಬಜಾಜ್ ತನ್ನ ಸಿಎನ್‌ಜಿ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ.

ಈ ಬೈಕ್ ಅನ್ನು ಸದ್ಯಕ್ಕೆ ‘ಬಜಾಜ್ ಬ್ರೂಜರ್’ ಎಂದು ಕರೆಯಲಾಗುತ್ತದೆ. ಆದರೆ ಬಿಡುಗಡೆಯ ವೇಳೆ ಇದರ ಹೆಸರನ್ನು ಬದಲಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಬಜಾಜ್ ಬ್ರೂಜರ್ ವಿಶ್ವದ ಮೊದಲ ಸಿಎನ್‌ಜಿ ಮೋಟಾರ್ ಸೈಕಲ್ ಆಗಿದ್ದು, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ.

ಈ ಬೈಕ್ ನ ಉದ್ದಕ್ಕೂ ಸಿಎನ್‌ಜಿ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಹಾಗೇ ಇದನ್ನು ನಿರ್ವಹಿಸುವ ವಿಶಿಷ್ಟವಾದ ಚಾಸಿಸ್ ಸೆಟಪ್ ಅನ್ನು ಬೈಕ್ ಹೊಂದಿದೆ ಎಂಬುದನ್ನು ಅದರ ಬ್ಲೂಪ್ರಿಂಟ್ ತೋರಿಸುತ್ತದೆ. ಸಿಎನ್‌ಜಿ ಬೈಕ್‌ನ ಆಯಿಲ್ ಟ್ಯಾಂಕ್ ಚಿಕ್ಕದಾಗಿದ್ದರೂ, ಬೈಕ್‌ಗೆ ಹೆಚ್ಚುವರಿ ಮೈಲೇಜ್ ನೀಡುತ್ತದೆ. ಈ ಬಜಾಜ್ ಬ್ರೂಜರ್ 5 – ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾದ 125 ಸಿಸಿ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ಅಲ್ಲದೇ ಈ ಬೈಕ್ ಅನ್ನು ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎರಡೂ ಕಡೆ ಆರಾಮವಾಗಿ ಓಡಿಸಬಹುದು. ಈ ಬೈಕ್ ಕ್ಲಚ್ ಗಾರ್ಡ್, ಹ್ಯಾಂಡಲ್ ಬಾರ್ ಬ್ರೇಸ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿರುವುದರಿಂದ ಇದರಲ್ಲಿ ಕಳಪೆ ರಸ್ತೆಯಲ್ಲೂ ಕೂಡ ಆರಾಮವಾಗಿ ಸವಾರಿ ಮಾಡಬಹುದು.

ಇದನ್ನೂ ಓದಿ: Passport Forgery Case: ಗಡ್ಡಕ್ಕೆ ಬಣ್ಣಹಚ್ಚಿ ಮುದುಕನ ವೇಷ ಧರಿಸಿ ಪ್ರಯಾಣಿಸುತ್ತಿದ್ದ 24ರ ಯುವಕ ಅರೆಸ್ಟ್!

ಬೈಕ್‌ ದರ ಎಷ್ಟು?:

ಈ ಬೈಕ್ ಬೆಲೆ ಸುಮಾರು 90,000 ರೂ. ಆಗಿರುವ ನಿರೀಕ್ಷೆ ಇದೆ. ಇದನ್ನು ಮುಂದಿನ ತಿಂಗಳು ಜುಲೈ 5ಕ್ಕೆ ಬಿಡುಗಡೆ ಮಾಡಲಿದ್ದಾರೆ. ಬಜಾಜ್ ಬ್ರೂಸರ್ ಬೈಕ್ ಟಿವಿಎಸ್ ರೇಡಿಯನ್, ಹೋಂಡಾ ಸಿಬಿ ಶೈನ್, ಹೀರೋ ಹೆಚ್ ಎಫ್ 100, ಟಿವಿಎಸ್ ಸ್ಪೋರ್ಟ್, ಬಜಾಜ್ ಸಿಟಿ 110 ಮತ್ತು ಬಜಾಜ್ ಪ್ಲಾಟಿನಾಗಳಂತಹ ಇತರ ಮೋಟಾರ್ ಸೈಕಲ್‌ಗಳ ಎದುರು ಸ್ಪರ್ಧೆಗಿಳಿಯಲಿದೆ ಎನ್ನಲಾಗಿದೆ.

Continue Reading

ವಾಣಿಜ್ಯ

Tata Motors: ಬೆಲೆ ಏರಿಕೆಗೆ ಮುಂದಾದ ಟಾಟಾ ಮೋಟಾರ್ಸ್‌; ಜುಲೈಯಿಂದ ಕಮರ್ಷಿಯಲ್‌ ವಾಹನ ದುಬಾರಿ

Tata Motors: ಜುಲೈಯಿಂದ ಜಾರಿಗೆ ಬರುವಂತೆ ಟಾಟಾ ಮೋಟಾರ್ಸ್ ಕಮರ್ಷಿಯಲ್‌ ವಾಹನಗಳ ಬೆಲೆಯನ್ನು ಶೇ. 2ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಕಚ್ಛಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಇದು ಅನಿವಾರ್ಯ ಎಂದೂ ಕಂಪನಿ ಹೇಳಿದೆ. ಎಲ್ಲ ವಾಣಿಜ್ಯ ವಾಹನಗಳಿಗೆ ಈ ಬೆಲೆ ಏರಿಕೆ ಅನ್ವಯವಾಗಲಿದ್ದು, ನಿರ್ದಿಷ್ಟ ಮಾದರಿಯನ್ನು ಅವಲಂಬಿಸಿ ದರ ವ್ಯತ್ಯಾಸವಾಗಲಿದೆ.

VISTARANEWS.COM


on

Tata Motors
Koo

ಮುಂಬೈ: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ (Tata Motors) ತನ್ನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌ ನೀಡಲು ಮುಂದಾಗಿದೆ. ಜುಲೈಯಿಂದ ಜಾರಿಗೆ ಬರುವಂತೆ ಕಮರ್ಷಿಯಲ್‌ ವಾಹನ (Commercial vehicles)ಗಳ ಬೆಲೆಯನ್ನು ಶೇ. 2ರಷ್ಟು ಹೆಚ್ಚಿಸುವುದಾಗಿ ಟಾಟಾ ಮೋಟಾರ್ಸ್ ಬುಧವಾರ ಘೋಷಿಸಿದೆ.

”ಟಾಟಾ ಮೋಟಾರ್ಸ್ ಲಿಮಿಟೆಡ್‌ ಜುಲೈ 1ರಿಂದ ಜಾರಿಗೆ ಬರುವಂತೆ ಕಮರ್ಷಿಯಲ್‌ ವಾಹನಗಳ ಬೆಲೆ ಹೆಚ್ಚಿಸಲಿದೆʼʼ ಎಂದು ಪ್ರಕಟಣೆ ತಿಳಿಸಿದೆ. ಕಚ್ಛಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಇದು ಅನಿವಾರ್ಯ ಎಂದೂ ಕಂಪನಿ ಹೇಳಿದೆ. ಎಲ್ಲ ವಾಣಿಜ್ಯ ವಾಹನಗಳಿಗೆ ಈ ಬೆಲೆ ಏರಿಕೆ ಅನ್ವಯವಾಗಲಿದ್ದು, ನಿರ್ದಿಷ್ಟ ಮಾದರಿಯನ್ನು ಅವಲಂಬಿಸಿ ದರ ವ್ಯತ್ಯಾಸವಾಗಲಿದೆ.

ಟಾಟಾ ಮೋಟಾರ್ಸ್ ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಕಂಪನಿಯಾಗಿದ್ದು, ಇದು ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳನ್ನು ತಯಾರಿಸುತ್ತದೆ. ಕಂಪನಿಯು ದೇಶದ ಪ್ರಯಾಣಿಕ ವಾಹನಗಳ ಮಾರುಕಟ್ಟೆಯ ಅಗ್ರ ಮೂರರಲ್ಲಿ ಸ್ಥಾನ ಪಡೆದುಕೊಂಡಿದೆ. ಮೇ ತಿಂಗಳಲ್ಲಿ ಕಂಪನಿಯು ಸುಮಾರು 29,691 ಕಮರ್ಷಿಯಲ್‌ ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 2ರಷ್ಟು ಹೆಚ್ಚಳ ದಾಖಲಿಸಿದೆ.

ಅದಾಗ್ಯೂ ಟ್ರಕ್ ಮಾರಾಟದ ಕುಸಿತ ಕಂಡು ಬಂದಿದೆ. ಒಟ್ಟಾರೆ ಟ್ರಕ್ ಮಾರಾಟವು 12,402 ಯೂನಿಟ್‌ಗೆ ತಲುಪಿದೆ. ಈ ವಿಭಾಗದಲ್ಲಿ ಹೆವಿ ಕಮರ್ಷಿಯಲ್ ವೆಹಿಕಲ್ಸ್ (Heavy Commercial Vehicles) ಮಾರಾಟದ ಪ್ರಮಾಣ ಸ್ವಲ್ಪ ಕುಸಿದಿದೆ. ಎಚ್‌ಸಿವಿ ಮಾರಾಟವು ಶೇ. 3ರಷ್ಟು ಕುಸಿದಿದ್ದು, 2023ರಲ್ಲಿನ 8,160 ಯೂನಿಟ್‌ನಿಂದ 2024ರ ಮೇ ವೇಳೆಗೆ 7,924 ಯುನಿಟ್‌ಗೆ ಇಳಿದಿದೆ.

ಮತ್ತೊಂದೆಡೆ ಇಂಟರ್‌ಮಿಡಿಯೆಟ್‌ ಲೈಟ್ ಮೀಡಿಯಂ ಕಮರ್ಷಿಯಲ್ ವೆಹಿಕಲ್ (Intermediate Light Medium Commercial Vehicle) ವಿಭಾಗವು ದೃಢವಾದ ಬೆಳವಣಿಗೆಯನ್ನು ತೋರಿದೆ. ಐಎಲ್ಎಂಸಿವಿಯ ಮಾರಾಟವು ಶೇ. 30ರಷ್ಟು ಏರಿಕೆಯಾಗಿದ್ದು, 2023ರ ಮೇಯಲ್ಲಿ 3,450 ಯೂನಿಟ್‌ ಮಾರಾಟವಾಗಿದ್ದರೆ 2024ರ ಮೇಯಲ್ಲಿ 4,478 ವಾಹನ ಬಿಕರಿಯಾಗಿದೆ.‌ ಮುಂದಿನ ದಿನಗಳಲ್ಲಿ ಟಾಟಾ ಮೋಟಾರ್ಸ್‌ನಂತೆ ಇತರ ವಾಹನ ತಯಾರಿಕಾ ಕಂಪನಿಗಳೂ ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವ

ಟಾಟಾ ಮೋಟಾರ್ಸ್ ಭಾರತದ ನಂ. 1 ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವದಂದು 7 ಲಕ್ಷ ಯೂನಿಟ್ ಮಾರಾಟದ ಸಂಭ್ರಮಾಚರಣೆ ನಡೆಸುತ್ತಿದೆ. 2017ರಲ್ಲಿ ಬಿಡುಗಡೆಯಾದ ನೆಕ್ಸಾನ್ 2021 ರಿಂದ 2023 ರವರೆಗೆ ಸತತ ಮೂರು ವರ್ಷಗಳಲ್ಲಿ ಮೂರು ಬಾರಿ ಭಾರತದ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2018ರಲ್ಲಿ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಮೊದಲ ವಾಹನ ಎಂಬ ಖ್ಯಾತಿಯನ್ನು ನೆಕ್ಸಾನ್ ಹೊಂದಿದೆ. ಆ ಮೂಲಕ ಎಲ್ಲಾ ಭಾರತೀಯ ಆಟೋಮೊಬೈಲ್‌ಗಳಿಗೆ ಅನುಸರಿಸಲು ಹೊಸ ಮಾನದಂಡವನ್ನು ಹಾಕಿಕೊಟ್ಟಿದೆ. ಅಂದಿನಿಂದ ಇಂದಿನವರೆಗೂ ಅದರ ಗೆಲುವಿನ ಓಟ ಮುಂದುವರಿದಿದೆ.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ

ಫೆಬ್ರವರಿ 2024ರಲ್ಲಿ, ಹೊಸ ಜನರೇಷನ್‌ನ ನೆಕ್ಸಾನ್ 2022ರ ಹೆಚ್ಚಿನ ಪ್ರೋಟೋಕಾಲ್ ಪ್ರಕಾರ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ನೆಕ್ಸಾನ್.ಇವಿ ಕೂಡ ಅದೇ ದಾರಿಯಲ್ಲಿ ಸಾಗಿದ್ದು, ಇದೇ ತಿಂಗಳಲ್ಲಿ ಭಾರತ್- ಎನ್‌ಸಿಎಪಿಯಿಂದ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ.

Continue Reading
Advertisement
ಕ್ರೀಡೆ5 mins ago

T20 World Cup 2024: ವಿಂಡೀಸ್​ಗೆ ಆಘಾತ; ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಕಿಂಗ್

PGCET 2024
ಶಿಕ್ಷಣ5 mins ago

PGCET 2024 : ಪಿಜಿಸಿಇಟಿ ಅಪ್‌ಡೇಟ್ಸ್‌ ; ಶುಲ್ಕ ಪಾವತಿ, ತಿದ್ದುಪಡಿ, ಪರೀಕ್ಷಾ ಕೇಂದ್ರ ಆಯ್ಕೆಗೆ ಜೂ.24 ಕೊನೆ ದಿನ

The Lion King 30 years influence on fans and actors
ಬಾಲಿವುಡ್6 mins ago

The Lion King: ಆಲ್‌ ಟೈಮ್‌ ಫೇವರೇಟ್‌ ಕಾರ್ಟೂನ್‌ `ದಿ ಲಯನ್ ಕಿಂಗ್’ 30ನೇ ವಾರ್ಷಿಕೋತ್ಸವ

Viral Video
ವೈರಲ್ ನ್ಯೂಸ್10 mins ago

Viral Video: ಕಾರು ತಡೆದ ಟ್ರಾಫಿಕ್‌ ಪೊಲೀಸ್‌ ಕ್ಯಾಬ್‌ ಡ್ರೈವರ್‌ ಮಾಡಿದ್ದೇನು ಗೊತ್ತಾ?

Floods In Assam
ದೇಶ13 mins ago

Floods In Assam: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸಾಂ; 37ಕ್ಕೆ ಏರಿದ ಸಾವಿನ ಸಂಖ್ಯೆ

Actor Darshan
ಕರ್ನಾಟಕ14 mins ago

Actor Darshan: ದರ್ಶನ್ ಸೇರಿ ನಾಲ್ವರು ಸ್ಟೇಷನ್‌ನಿಂದ ಪರಪ್ಪನ ಅಗ್ರಹಾರ ಜೈಲಿಗೆ

Swamji Murder
ಪ್ರಮುಖ ಸುದ್ದಿ30 mins ago

Swamji Murder : ಆಸ್ತಿ, ಅಧಿಕಾರಕ್ಕಾಗಿ ಗಲಾಟೆ; ಸ್ವಾಮೀಜಿಯೊಬ್ಬರನ್ನು ಕೊಲೆ ಮಾಡಿದ ಸ್ವಾಮೀಜಿಗಳ ಗುಂಪು

Child Death
ಬೆಳಗಾವಿ36 mins ago

Child Death : ಮಕ್ಕಳ ಮಾರಾಟ ಜಾಲದಲ್ಲಿ ರಕ್ಷಣೆಯಾಗಿದ್ದ ಮಗು ಮೃತ್ಯು; ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

Shobha Shetty car gift to yashwanth birthday
ಟಾಲಿವುಡ್54 mins ago

Shobha Shetty: ಭಾವಿ ಪತಿಗೆ ಕಾರ್ ಗಿಫ್ಟ್ ನೀಡಿದ ‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ!

IND vs BAN
ಕ್ರೀಡೆ1 hour ago

IND vs BAN: ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಸ್ವತಃ ಬೇಸರ ವ್ಯಕ್ತಪಡಿಸಿದ ಬ್ಯಾಟಿಂಗ್​ ಕೋಚ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ21 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 day ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ6 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌