Paris Olympics 2024: ಪದಕಕ್ಕಾಗಿ ನೀರಜ್​ ಚೋಪ್ರಾ, ಹಾಕಿ ತಂಡ ಹೋರಾಟ; ಇಂದಿನ ವೇಳಾಪಟ್ಟಿ ಹೀಗಿದೆ - Vistara News

ಕ್ರೀಡೆ

Paris Olympics 2024: ಪದಕಕ್ಕಾಗಿ ನೀರಜ್​ ಚೋಪ್ರಾ, ಹಾಕಿ ತಂಡ ಹೋರಾಟ; ಇಂದಿನ ವೇಳಾಪಟ್ಟಿ ಹೀಗಿದೆ

Paris Olympics 2024: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ, ಭಾರತ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಇಂದು ನಡೆಯುವ ಫೈನಲ್​ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ. ನೀರಜ್‌ ಜತೆಗೆ ಒಲಿಂಪಿಕ್ಸ್‌ನಲ್ಲಿ ಗುರುವಾರ ಭಾರತದ ಯಾವ ಅಥ್ಲೀಟ್‌ಗಳು ಯಾವ ಸ್ಪರ್ಧೆಯಲ್ಲಿ ಪದಕಗಳಿಗೆ ಗುರಿ ಇಡಲಿದ್ದಾರೆ ಎಂಬುದರ ವೇಳಾಪಟ್ಟಿ ಇಲ್ಲಿದೆ.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​: ಕುಸ್ತಿ ವಿಭಾಗದಲ್ಲಿ ಬುಧವಾರ ಐತಿಹಾಸಿಕ ಪದಕ ನಿರೀಕ್ಷೆಯಲ್ಲಿದ್ದ ಭಾರತೀಯರ ನಿರೀಕ್ಷೆಯೊಂದು ಹುಸಿಯಾಗಿದೆ. 50 ಕೆಜಿ ಮಹಿಳಾ ವಿಭಾಗದ ಕುಸ್ತಿ ಫೈನಲ್​ ಪಂದ್ಯದಲ್ಲಿ ಬುಧವಾರ ರಾತ್ರಿ ಕಣಕ್ಕಿಳಿಯಬೇಕಿದ್ದ ವಿನೇಶ್​ ಫೋಗಟ್​ ಅವರ ತೂಕ ವಿಭಾಗದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಅವರನ್ನು ಈ ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು. ಹೀಗಾಗಿ ಭಾರತ ಪದಕಕೊಂದನ್ನು ಕಳೆದುಕೊಂಡಿತು. ಇದೀಗ ಇಂದು (ಆಗಸ್ಟ್‌ 8) ನಡೆಯುವ ಪ್ಯಾರಿಸ್​ ಒಲಿಂಪಿಕ್ಸ್​(Paris Olympics) ಸ್ಪರ್ಧೆಯಲ್ಲಿ ಭಾರತ ಒಟ್ಟು ಮೂರು ಪದಕ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದೆ. ವೇಳಾಪಟ್ಟಿ ಹೀಗಿದೆ.

ಐತಿಹಾಸಿಕ ಪದಕ ನಿರೀಕ್ಷೆಯಲ್ಲಿ ಸಾಬ್ಳೆ


ಒಲಿಂಪಿಕ್ಸ್‌ ಇತಿಹಾಸದಲ್ಲಿ 3,000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ ಫೈನಲ್‌ ತಲುಪಿದ ಮೊದಲ ಭಾರತೀಯನೆಂಬ ದಾಖಲೆ ಬರೆದಿರುವ ಅಥ್ಲೀಟ್‌ ಅವಿನಾಶ್‌ ಮುಕುಂದ್‌ ಸಾಬ್ಲೆ(Avinash Sable) ಗುರುವಾರ ರಾತ್ರಿ 1.13 ಗಂಟೆಗೆ ನಡೆಯುವ ಫೈನಲ್​ ಪಂದ್ಯದಲ್ಲಿ ಐತಿಹಾಸಿಕ ಪದಕ ಗೆಲ್ಲುವ ಇರಾದೆಯೊಂದಿಗೆ ಓಟ ಆರಂಭಿಸಲಿದ್ದಾರೆ. ಸೋಮವಾರ ನಡೆದಿದ್ದ 2ನೇ ವಿಭಾಗದ ಹೀಟ್‌ನಲ್ಲಿ ಸಾಬ್ಲೆ 8:15.43 ನಿಮಿಷಗಳಲ್ಲಿ ಸ್ಪರ್ಧೆ ಮುಗಿಸಿ 5ನೇ ಸ್ಥಾನಿಯಾಗಿದ್ದರು. ಕಳೆದ ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಅವರು 8.09.91 ನಿಮಿಷಗಳ ಸಾಧನೆಗೈದಿದ್ದರು.

ಚಿನ್ನದ ನಿರೀಕ್ಷೆಯಲ್ಲಿ ನೀರಜ್​


ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ, ಭಾರತ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಇಂದು ನಡೆಯುವ ಫೈನಲ್​ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿಯೂ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀ. ದೂರ ಜಾವೆಲಿನ್​ ಎಸೆದು ನೇರವಾಗಿ ಫೈನಲ್​ ಪ್ರವೇಶಿಸಿದ್ದರು. ನೀರಜ್​ ಅವರೇ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಹೀಗಾಗಿ ಫೈನಲ್​ನಲ್ಲಿಯೂ ಅವರ ಮೇಲೆ ನಿರೀಕ್ಷೆ ಇರಿಸಲಾಗಿದೆ. ಜರ್ಮನಿಯ ಜೂಲಿಯನ್ ವೆಬ್ಬರ್, ಪಾಕಿಸ್ತಾನದ ಅರ್ಷದ್ ನದೀಮ್, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.

ಕಂಚಿನ ಪದಕಕ್ಕೆ ಹಾಕಿ ತಂಡ ಹೋರಾಟ


ಮಂಗಳವಾರ ನಡೆದಿದ್ದ ಪುರುಷರ ಹಾಕಿ ಸೆಮಿಫೈನಲ್​ ಪಂದ್ಯದಲ್ಲಿ ಜರ್ಮನಿ ವಿರುದ್ಧ 3-2 ಅಂತರದಿಂದ ಸೋಲುವ ಮೂಲಕ 44 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸುವ ಅವಕಾಶ ಕಳೆದುಕೊಂಡ ಭಾರತ ತಂಡ ಗುರುವಾರ ನಡೆಯುವ ಕಂಚಿನ ಪದಕದ ಹೋರಾಟದಲ್ಲಿ ಸ್ಪೇನ್​ ವಿರುದ್ಧ ಆಡಲಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದಿದ್ದ ಭಾರತ ಈ ಬಾರಿಯೂ ಕಂಚಿನ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ Paris Olympics 2024 : ಕಂಚು ಕಳೆದುಕೊಂಡ ಲಕ್ಷ್ಯ ಸೇನ್​​; 2008ರ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬ್ಯಾಡ್ಮಿಂಟನ್​ನಲ್ಲಿ ಪದಕವಿಲ್ಲ

ವೇಳಾಪಟ್ಟಿ ಹೀಗಿದೆ


3,000 ಮೀ. ಸ್ಟೀಪಲ್‌ಚೇಸ್‌ ಫೈನಲ್​:
ಅವಿನಾಶ್‌ ಸಾಬ್ಲೆ. (ಆರಂಭ; ರಾತ್ರಿ 1.13)

ಗಾಲ್ಫ್​

ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 2; ಅದಿತಿ ಅಶೋಕ್​, ದಿಶಾ ದಾಗರ್. (ಆರಂಭ: ಮಧ್ಯಾಹ್ನ 12.30)

ಹಾಕಿ

ಪುರುಷರ ಕಂಚಿನ ಸ್ಪರ್ಧೆ; ಭಾರತ vs ಸ್ಟೇನ್. (ಆರಂಭ​; ಸಂಜೆ 5.30)

ಜಾವೆಲಿನ್​ ಫೈನಲ್​


ನೀರಜ್​ ಚೋಪ್ರಾ
. ಆರಂಭ(ರಾತ್ರಿ 11.55)

ಇದನ್ನೂ ಓದಿ: Vinesh Phogat: ವಿನೇಶ್ ಪದಕಗಳನ್ನು ಮೀರಿದ ವಿಜೇತೆ: ಆಲಿಯಾ, ವಿಕ್ಕಿ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳ ಬೆಂಬಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics 2024: ವಿನೇಶ್‌ ಫೋಗಟ್‌ ಅನರ್ಹಗೊಂಡ ಬೆನ್ನಲ್ಲೇ ಮತ್ತೊಂದು ಆಘಾತ; ಕುಸ್ತಿಪಟು ಆಂಟಿಮ್ ಪಂಘಲ್ ಗಡೀಪಾರಿಗೆ ಆದೇಶ

Paris Olympics 2024: ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನ ಫೈನಲ್‌ ಪಂದ್ಯದಿಂದ ಅನರ್ಹಗೊಂಡ ಬೆನ್ನಲ್ಲೇ ಭಾರತಕ್ಕೆ ಇನ್ನೊಂದು ಆಘಾತ ಎದುರಾಗಿದೆ. ಮತ್ತೊಬ್ಬ ಪ್ರಮುಖ ಕುಸ್ತಿಪಟು ಆಂಟಿಮ್ ಪಂಘಲ್ ಅವರನ್ನು ಅಶಿಸ್ತಿನ ಕಾರಣದಿಂದಾಗಿ ಪ್ಯಾರಿಸ್‌ನಿಂದ ಗಡೀಪಾರು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

VISTARANEWS.COM


on

Paris Olympics 2024
Koo

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics 2024)ನಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ ಪಂದ್ಯದಿಂದ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಅವರು ಅನರ್ಹಗೊಂಡ ಬೆನ್ನಲ್ಲೇ ಇನ್ನೊಂದು ಆಘಾತ ಎದುರಾಗಿದೆ. ಭಾರತದ ಮತ್ತೊಬ್ಬ ಪ್ರಮುಖ ಕುಸ್ತಿಪಟು ಆಂಟಿಮ್ ಪಂಘಲ್ (Antim Panghal) ಅವರನ್ನು ಅಶಿಸ್ತಿನ ಕಾರಣದಿಂದಾಗಿ ಪ್ಯಾರಿಸ್‌ನಿಂದ ಗಡೀಪಾರು ಮಾಡಲು ನಿರ್ಧರಿಸಲಾಗಿದೆ. ಈ ಮಧ್ಯೆ ಬುಧವಾರ ಪ್ರಿ ಕ್ವಾರ್ಟರ್ ಫೈನಲ್​​ನಲ್ಲಿ ಆಂಟಿಮ್ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದಾರೆ.

ʼʼಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಪ್ರವೇಶಿಸಲು ಆಂಟಿಮ್ ಪಂಘಲ್‌ ಅವರ ಅಧಿಕೃತ ಕಾರ್ಡ್‌ ಅನ್ನು ಸಹೋದರಿ ನಿಶಾ ಬಳಸಿ ಸಿಕ್ಕಿಬಿದ್ದಿದ್ದಾರೆ. ಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಆಟಗಾರರಲ್ಲದವರು ಪ್ರವೇಶಿಸುವಂತಿಲ್ಲ. ಹೀಗಾಗಿ ಆಂಟಿಮ್ ಪಂಘಲ್‌ ಅವರ ಕುಟುಂಬವನ್ನು ಗಡೀಪಾರು ಮಾಡಲಾಗುವುದುʼʼ ಎಂದು ಒಲಿಂಪಿಕ್ಸ್‌ ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಿ ಕ್ವಾರ್ಟರ್ ಫೈನಲ್​​ನಲ್ಲಿ ಸೋತ ನಂತರ ಆಂಟಿಮ್ ಪಂಘಲ್‌ ಗೇಮ್ಸ್ ವಿಲೇಜ್ ತೊರೆದು ತನ್ನ ತರಬೇತುದಾರ ಮತ್ತು ಸಹೋದರಿ ತಂಗಿದ್ದ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಅವರು ತನ್ನ ಅಧಿಕೃತ ಐಡಿ ಕಾರ್ಡ್‌ ಅನ್ನು ಸಹೋದರಿ ನಿಶಾ ಅವರಿಗೆ ನೀಡಿ ಗೇಮ್ಸ್ ವಿಲೇಜ್‌ಗೆ ತೆರಳಿ ಬ್ಯಾಗ್‌ ತರುವಂತೆ ಸೂಚಿಸಿದ್ದರು. ಅದರಂತೆ ಗೇಮ್ಸ್‌ ವಿಲೇಜ್‌ನಿಂದ ಹೊರ ಬರುತ್ತಿದ್ದಾಗ ನಿಶಾ ಭದ್ರತಾ ಸಿಬ್ಬಂದಿ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ಜತೆಗೆ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಆಂಟಿಮ್ ಪಂಘಲ್‌ ಅವರ ಇಡೀ ಪರಿವಾರವನ್ನೇ ಗಡೀಪಾರು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

“ಶಿಸ್ತು ಉಲ್ಲಂಘನೆಯನ್ನು ಫ್ರೆಂಚ್ ಅಧಿಕಾರಿಗಳು ಗಮನಕ್ಕೆ ತಂದ ಹಿನ್ನಲೆಯಲ್ಲಿ ಕುಸ್ತಿಪಟು ಆಂಟಿಮ್ ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ವಾಪಸ್ ಕಳುಹಿಸಲು ನಿರ್ಧರಿಸಲಾಗಿದೆ” ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (Indian Olympic Association) ತಿಳಿಸಿದೆ.

ಸಹಾಯ ಸಿಬ್ಬಂದಿ ವಿರದ್ಧವೂ ಆರೋಪ

ಇದಲ್ಲದೆ ಆಂಟಿಮ್ ಅವರ ಸಹಾಯಕ ಸಿಬ್ಬಂದಿ ವಿಕಾಸ್ ಮತ್ತು ಭಗತ್ ಕುಡಿದು ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದಾರೆ ಮತ್ತು ಬಾಡಿಗೆ ಹಣ ಕೊಡಲು ನಿರಾಕರಿದ್ದಾರೆ ಎಂದು ಚಾಲಕ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಈ ಎಲ್ಲ ಹಿನ್ನಲೆಯಲ್ಲಿ 19 ವರ್ಷದ ಅಂಡರ್ 20 ವಿಶ್ವ ಚಾಂಪಿಯನ್ ಆಂಟಿಮ್ ಅವರನ್ನೂ ಪೊಲೀಸರು ಕರೆಸಿಕೊಂಡು ಹೇಳಿಕೆ ದಾಖಲಿಸಿದ್ದಾರೆ. ಆದರೆ ಆಂಟಿಮ್ ಮತ್ತು ಅವರ ಸಿಬ್ಬಂದಿ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಆಂಟಿಮ್‌ ಇದೇ ಮೊದಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: Vinesh Phogat: ಬೆಳ್ಳಿ ಪದಕಕ್ಕಾಗಿ ಕೋರ್ಟ್‌ ಕದ ತಟ್ಟಿದ ವಿನೇಶ್‌ ಫೋಗಟ್‌; ಇಂದು ತೀರ್ಪು ಪ್ರಕಟ

ನಿವೃತ್ತಿ ಘೋಷಣೆ

ಒಲಿಂಪಿಕ್ಸ್‌ ಫೈನಲ್‌ನಲ್ಲಿ ಕಣಕ್ಕಿಳಿಯಲು ಅನರ್ಹಗೊಂಡ ಬೆನ್ನಲ್ಲೇ ವಿನೇಶ್‌ ಫೋಗಟ್‌ ಅವರು ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ಕುಸ್ತಿ ನನ್ನ ವಿರುದ್ಧ ಪಂದ್ಯವನ್ನು ಗೆದ್ದಿದೆ. ನಾನು ಸೋತೆ.. ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಛಿದ್ರವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರಿಗೂ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ. ಕ್ಷಮಿಸಿ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

Continue Reading

ಬಾಲಿವುಡ್

Vinesh Phogat: ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ, ಇದು ಮಹಿಳೆಯರಿಗೆ ಪಾಠ ಎಂದ ಹೇಮಾ ಮಾಲಿನಿ ಫುಲ್‌ ಟ್ರೋಲ್‌!

Vinesh Phogat: ಮಹಿಳೆಯರ 50 ಕೆಜಿ ವಿಭಾಗದಲ್ಲಿ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಇದೀಗ ಅನರ್ಹತೆಯಿಂದಾಗಿ ಕಂಚು ಕೂಡ ಅವರಿಗೆ ದೊರೆಯುವುದಿಲ್ಲ. ಈ ಅಹಿತಕರ ಘಟನೆಗೆ ಪ್ರತಿಕ್ರಿಯಿಸಿದ ಹಿರಿಯ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಹೇಳಿಕೆಯು ನೆಟ್ಟಿಗರಿಗೆ ಸರಿ ಎನಿಸಿಲ್ಲ.

VISTARANEWS.COM


on

Vinesh Phogat Hema Malini's Comment Loses 100 gm
Koo

ಬೆಂಗಳೂರು: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympics 2024) 50 ಕಿಲೋ ತೂಕದ ವಿಭಾಗದಲ್ಲಿ ಸ್ಪರ್ಧಿಸಲು ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಕುಸ್ತಿಗೆ (Wrestling) ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ (Social media X) ಪೋಸ್ಟ್ ಮೂಲಕ ಅವರು ಕುಸ್ತಿಯಿಂದ ನಿವೃತ್ತಿ (retirement) ಘೋಷಿಸಿದರು. ಒಲಿಂಪಿಕ್ ಕ್ರೀಡಾಕೂಟದ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದ 29 ವರ್ಷದ ವಿನೇಶ್ ಪೋಗಟ್, ಮಹಿಳೆಯರ 50 ಕೆಜಿ ವಿಭಾಗದಲ್ಲಿ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಇದೀಗ ಅನರ್ಹತೆಯಿಂದಾಗಿ ಕಂಚು ಕೂಡ ಅವರಿಗೆ ದೊರೆಯುವುದಿಲ್ಲ. ಈ ಅಹಿತಕರ ಘಟನೆಗೆ ಪ್ರತಿಕ್ರಿಯಿಸಿದ ಹಿರಿಯ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಹೇಳಿಕೆಯು ನೆಟ್ಟಿಗರಿಗೆ ಸರಿ ಎನಿಸಿಲ್ಲ.

ಈ ಬಗ್ಗೆ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಹೀಗೆ ʻʻಇದು ತುಂಬಾ ಆಶ್ಚರ್ಯಕರವಾಗಿದೆ. 100 ಗ್ರಾಂ ಅಧಿಕ ತೂಕದ ಕಾರಣಕ್ಕಾಗಿ ಅನರ್ಹಗೊಳಿಸಿರುವುದು ವಿಚಿತ್ರವಾಗಿದೆ. ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಇದು ನಮಗೆಲ್ಲರಿಗೂ ಪಾಠವಾಗಿದೆ. ಕಲಾವಿದರಿಗೆ, ಮಹಿಳೆಯರಿಗೆ ಇದು ಒಂದು ಪಾಠ. ವಿನೇಶ್​ ಆದಷ್ಟು ಬೇಗ 100 ಗ್ರಾಂ ತೂಕ ಇಳಿಸಿಕೊಳ್ಳಲಿ. ಆದರೆ ಅವರಿಗೆ ಇನ್ನೊಂದು ಅವಕಾಶ ಸಿಗುವುದಿಲ್ಲ’ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

ಇಂಥ ಹೇಳಿಕೆಗಳನ್ನು ನೀಡುವ ಹೇಮಾ ಮಾಲಿನಿ ಅವರು ಸಂಸದೆ ಆಗಲು ಅನರ್ಹರು ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ‘ಇಂಥವರಿಗೆ ಜನರು ಹೇಗೆ ಮತ ಹಾಕುತ್ತಾರೆ ಅಂತ ನನಗೆ ಅರ್ಥವೇ ಆಗುತ್ತಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Vinesh Phogat: ಬೆಳ್ಳಿ ಪದಕಕ್ಕಾಗಿ ಕೋರ್ಟ್‌ ಕದ ತಟ್ಟಿದ ವಿನೇಶ್‌ ಫೋಗಟ್‌; ಇಂದು ತೀರ್ಪು ಪ್ರಕಟ

ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ವಿನೇಶ್​ ಫೋಗಟ್​ ಅವರಿಗೆ ಧೈರ್ಯ ತುಂಬಿದ್ದಾರೆ. ಆಲಿಯಾ ಭಟ್​, ಫರ್ಹಾನ್​ ಅಖ್ತರ್​, ಕರೀನಾ ಕಪೂರ್​, ತಾಪ್ಸಿ ಪನ್ನು, ರಣವೀರ್​ ಸಿಂಗ್​, ರಕುಲ್​ ಪ್ರೀತ್​ ಸಿಂಗ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ‘ವಿನೇಶ್​ ಅವರೇ ನಮ್ಮ ಪಾಲಿನ ಚಾಂಪಿಯನ್​’ ಎಂದು ಹೇಳಿದ್ದಾರೆ. 

ವಿನೇಶ್‌ಗೆ ತಾರೆಯರ ಬೆಂಬಲ

ವಿನೇಶ್‌ ಫೋಗಟ್‌ ಅವರ ಪರವಾಗಿ ಬಾಲಿವುಡ್‌ ಸೆಲೆಬ್ರಿಟಿಗಳು ನಿಂತಿದ್ದಾರೆ. ಫರ್ಹಾನ್ ಅಖ್ತರ್, ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಕುಸ್ತಿಪಟುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ “ವಿನೇಶ್ ಫೋಗಟ್ ನೀವು ಇಡೀ ದೇಶಕ್ಕೆ ಸ್ಫೂರ್ತಿ. ನಿಮ್ಮ ಸ್ಥೈರ್ಯವನ್ನು , ನಿಮ್ಮ ಧೈರ್ಯವನ್ನು ಯಾವುದೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಮತ್ತು ಇತಿಹಾಸವನ್ನು ಸೃಷ್ಟಿಸಲು ನೀವು ಅನುಭವಿಸಿದ ಕಷ್ಟಗಳನ್ನು ಯಾವುದೂ ತೆಗೆದುಹಾಕುವುದಿಲ್ಲ! ನಾವು ನಿಮ್ಮೊಂದಿಗೆ ಇರುತ್ತೇವೆ. ನೀವೇ ಚಿನ್ನ – ನೀವೇ ಕಬ್ಬಿಣ ಮತ್ತು ನೀವೇ ಸ್ಟೀಲ್‌! ಯಾವುದೂ ನಿಮ್ಮಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ! ಯುಗಗಳ ಚಾಂಪಿಯನ್! ನಿಮ್ಮಂತೆ ಯಾರೂ ಇಲ್ಲʼʼ ಎಂದು ಬರೆದುಕೊಂಡಿದ್ದಾರೆ.

ಫರ್ಹಾನ್ ಅಖ್ತರ್ ಅವರು ಪೋಸ್ಟ್‌ನಲ್ಲಿ ವಿನೇಶ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮತ್ತು ಶೀರ್ಷಿಕೆಯಲ್ಲಿ ಬರೆದಿದ್ದಾರೆ, ” ವಿನೇಶ್ ನಿಮ್ಮ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ ಮತ್ತು ನೀವು ಕ್ರೀಡೆಗಾಗಿ ಮಾಡಿದ್ದೀರಿʼʼ ಎಂದು ಬರೆದುಕೊಂಡಿದ್ದಾರೆ. ಜೋಯಾ ಅಖ್ತರ್ “ಚಾಂಪಿಯನ್ ನೀವು ಚಿನ್ನ! ನೀವು ಸಾಧಿಸಿದ್ದು ಪದಕಗಳನ್ನು ಮೀರಿದ್ದು. ತುಂಬಾ ಹೆಮ್ಮೆ. ಸ್ಫೂರ್ತಿʼʼಎಂದು ಬರೆದುಕೊಂಡಿದ್ದಾರೆ. ವಿಕ್ಕಿ ಕೌಶಲ್‌, ಪದಕಗಳನ್ನು ಮೀರಿದ ವಿಜೇತೆ ಎಂದು ಬರೆದುಕೊಂಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನ 50 ಕಿಲೋ ತೂಕದ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್‌ಗೂ ಮುನ್ನ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಬುಧವಾರ ಸಂಜೆ ನಡೆಯಲಿದ್ದ ಫೈನಲ್‌ ಪಂದ್ಯಕ್ಕೂ ಮುನ್ನ ಬೆಳಿಗ್ಗೆ 100 ಗ್ರಾಂ ಹೆಚ್ಚಿನ ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಯಿತು.

Continue Reading

ಕ್ರೀಡೆ

Neeraj Chopra: ಚಿನ್ನದ ಎಸೆತಕ್ಕೆ ನೀರಜ್​ ಚೋಪ್ರಾ ಸಜ್ಜು;​ ಎಷ್ಟು ಗಂಟೆಗೆ ಫೈನಲ್ ಆರಂಭ?

Neeraj Chopra: ನಾನು ಕಠಿಣ ತರಬೇತಿ ಪಡೆದಿದ್ದೇನೆ ಮತ್ತು ಉತ್ತಮ ಭಾವನೆ ಹೊಂದಿದ್ದೇನೆ. ನನ್ನ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನವನ್ನು ನಾನು ಇನ್ನೂ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾನು ಹಿಂದೆಂದೂ ತಯಾರಿಸಿದ ಅತ್ಯುತ್ತಮ ತಯಾರಿಯಾನ್ನು ನಡೆಸಿದ್ದೇನೆ. ಇಂದು ನನ್ನ ಪಾಲಿಗೆ ಉತ್ತಮ ದಿನವಾಗಿರುವ ವಿಶ್ವಾಸವಿದೆ ಎಂದು ನೀರಜ್​ ಫೈನಲ್​ ಪಂದ್ಯಕ್ಕೂ ಮುನ್ನ ಹೇಳಿದ್ದಾರೆ.

VISTARANEWS.COM


on

neeraj chopra
Koo

ಪ್ಯಾರಿಸ್​: ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics)ನಲ್ಲಿ ಭಾರತದ ಕೊನೆಯ ಚಿನ್ನದ ಪದಕ ಭರವಸೆಯಾಗಿ ಉಳಿದಿರುವ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಇಂದು ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಟ್ರ್ಯಾಕ್​ ಆ್ಯಂಡ್​ ಫೀಲ್ಡ್​ನಲ್ಲಿ ಐತಿಹಾಸಿಕ ಪದಕ ಗೆದ್ದ ನೀರಜ್​ ಈ ಬಾರಿಯೂ ಚಿನ್ನಕ್ಕೆ ಗುರಿ ಇರಿಸಲಿ ಎನ್ನುವುದು ದೇಶವಾಸಿಗಳ ಹಾರೈಕೆ. ಫೈನಲ್​ ಪಂದ್ಯ ರಾತ್ರಿ 11:55ಕ್ಕೆ ಅರಂಭವಾಗಲಿದೆ.

ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀ. ದೂರ ಜಾವೆಲಿನ್​ ಎಸೆದು ನೇರವಾಗಿ ಫೈನಲ್​ ಪ್ರವೇಶಿಸಿದ್ದರು. ನೀರಜ್​ ಅವರೇ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಹೀಗಾಗಿ ಫೈನಲ್​ನಲ್ಲಿಯೂ ಅವರ ಮೇಲೆ ನಿರೀಕ್ಷೆ ಇರಿಸಲಾಗಿದೆ. ಜರ್ಮನಿಯ ಜೂಲಿಯನ್ ವೆಬ್ಬರ್, ಪಾಕಿಸ್ತಾನದ ಅರ್ಷದ್ ನದೀಮ್, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.

“ನಾನು ಕಠಿಣ ತರಬೇತಿ ಪಡೆದಿದ್ದೇನೆ ಮತ್ತು ಉತ್ತಮ ಭಾವನೆ ಹೊಂದಿದ್ದೇನೆ. ನನ್ನ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನವನ್ನು ನಾನು ಇನ್ನೂ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾನು ಹಿಂದೆಂದೂ ತಯಾರಿಸಿದ ಅತ್ಯುತ್ತಮ ತಯಾರಿಯಾನ್ನು ನಡೆಸಿದ್ದೇನೆ. ಇಂದು ನನ್ನ ಪಾಲಿಗೆ ಉತ್ತಮ ದಿನವಾಗಿರುವ ವಿಶ್ವಾಸವಿದೆ. ನಾನು ನನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುತ್ತೇನೆ. ಈ ಸ್ಪರ್ಧೆಯನ್ನು ಆನಂದಿಸುತ್ತೇನೆ” ಎಂದು ನೀರಜ್ ಫೈನಲ್​ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು. 26 ವರ್ಷದ ನೀರಜ್ ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ನೀರಜ್ ಅವರ ಮೊದಲ ಕೋಚ್​ ಕಾಶಿನಾಥ್ ನಾಯ್ಕ್ ಅವರು ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿಯೂ(neeraj chopra paris olympics) ನೀರಜ್​ ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಇತ್ತೀಚೆಗೆ ಸಂದರ್ಶನವೊಂದಲ್ಲಿ ಭವಿಷ್ಯ ನುಡಿದಿದ್ದರು.

ಇದನ್ನೂ ಓದಿ Paris Olympics 2024 : ಕಂಚು ಕಳೆದುಕೊಂಡ ಲಕ್ಷ್ಯ ಸೇನ್​​; 2008ರ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬ್ಯಾಡ್ಮಿಂಟನ್​ನಲ್ಲಿ ಪದಕವಿಲ್ಲ

“ನಾನು 2015 ರಿಂದ ನೀರಜ್​ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು.​ ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್​ ಎಸೆಯುವದು ಪ್ರಮುಖ ಗುರಿ ಎಂದು ನೀರಜ್​ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದ್ದರು.

Continue Reading

ಕ್ರೀಡೆ

Vinesh Phogat: ಬೆಳ್ಳಿ ಪದಕಕ್ಕಾಗಿ ಕೋರ್ಟ್‌ ಕದ ತಟ್ಟಿದ ವಿನೇಶ್‌ ಫೋಗಟ್‌; ಇಂದು ತೀರ್ಪು ಪ್ರಕಟ

Vinesh Phogat: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 50 ಕಿಲೋ ತೂಕದ ವಿಭಾಗದ ಫೈನಲ್‌ ಪಂದ್ಯದಲ್ಲಿ ಸ್ಪರ್ಧಿಸಲು ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಬೆಳ್ಳಿ ಪದಕ ಹಸ್ತಾಂತರಿಸುವಂತೆ ಕೋರಿದ್ದಾರೆ. ಈ ವಿಚಾರದಲ್ಲಿ ಕೋರ್ಟ್‌ (CAS) ತನ್ನ ಅಂತಿಮ ತೀರ್ಪನ್ನು ಇಂದು (ಆಗಸ್ಟ್‌ 8) ಬೆಳಿಗ್ಗೆ 11:30ಕ್ಕೆ ಪ್ರಕಟಿಸಲಿದೆ.

VISTARANEWS.COM


on

Vinesh Phogat
Koo

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympics 2024) 50 ಕಿಲೋ ತೂಕದ ವಿಭಾಗದ ಫೈನಲ್‌ ಪಂದ್ಯದಲ್ಲಿ ಸ್ಪರ್ಧಿಸಲು ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (Court of Arbitration for Sport)ಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನ 50 ಕಿಲೋ ತೂಕದ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್‌ಗೂ ಮುನ್ನ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಬುಧವಾರ ಸಂಜೆ ನಡೆಯಲಿದ್ದ ಫೈನಲ್‌ ಪಂದ್ಯಕ್ಕೂ ಮುನ್ನ ಬೆಳಿಗ್ಗೆ 100 ಗ್ರಾಂ ಹೆಚ್ಚಿನ ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿದ್ದು, ಕೋಟ್ಯಂತರ ಭಾರತೀಯರ ಚಿನ್ನದ ಪದಕದ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. ಈ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಇದೀಗ ಬೆಳ್ಳಿ ಪದಕ ಹಸ್ತಾಂತರಿಸುವಂತೆ ಕೋರಿ ವಿನೇಶ್‌ ಫೋಗಟ್‌ ಮನವಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಕೋರ್ಟ್‌ (CAS) ತನ್ನ ಅಂತಿಮ ತೀರ್ಪನ್ನು ಇಂದು (ಆಗಸ್ಟ್‌ 8) ಬೆಳಿಗ್ಗೆ 11:30ಕ್ಕೆ ಪ್ರಕಟಿಸಲಿದೆ. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಫೋಗಟ್ ಪರವಾಗಿ ತೀರ್ಪು ನೀಡಿದರೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (International Olympic Committee) ಬೆಳ್ಳಿ ಪದಕ ನೀಡಬೇಕಾಗುತ್ತದೆ. ಹೀಗಾಗಿ ತೀರ್ಪಿಗಾಗಿ ಭಾರತೀಯರು ನಿರೀಕ್ಷೆಯೆಂದ ಕಾದು ಕುಳಿತ್ತಿದ್ದಾರೆ. ಯಾವುದೇ ಕ್ರೀಡಾ ಕೂಟದ ವೇಳೆ ಉದ್ಭವಿಸಬಹುದಾದ ವಿವಾದಗಳನ್ನು ಪರಿಹರಿಸಲು ಅಂತಾರಾಷ್ಟ್ರೀಯ ಸಂಸ್ಥೆ ಸಿಎಎಸ್‌ಯನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸ್ಥಾಪಿಸಲಾಗಿದೆ.

ಪ್ರಧಾನಿ, ರಾಷ್ಟ್ರಪತಿ ಸಾಂತ್ವನ

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ವಿನೇಶ್‌ ಅವರು ಕ್ಯೂಬಾದ ಯಸ್ನಿಲಿಸ್​ ಗುಜ್ಮನ್​ ಲೋಪೆಜ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಒಲಿಂಪಿಕ್ಸ್‌ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಅದರಂತೆ ಬುಧವಾರ ಫೈನಲ್‌ ಪಂದ್ಯ ನಡೆಯುವ ಮುನ್ನ ತೂಕ ಪರೀಕ್ಷಿಸುವ ವೇಳೆ 50 ಕೆಜಿಗಿಂತ 100 ಗ್ರಾಂ ಹೆಚ್ಚಿರುವುದು ಕಂಡು ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿತ ಅನೇಕರು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದಾರೆ. ಜತೆಗೆ ವಿನೇಶ್‌ ಅವರಿಗೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: Vinesh Phogat: ವಿನೇಶ್‌ ಫೋಗಟ್‌ ಅನರ್ಹ; ದಿಢೀರ್ 2-3 ಕೆ.ಜಿ ತೂಕ ಇಳಿಸಲು ಮುಂದಾದರೆ ದೇಹಕ್ಕೆ ಏನಾಗುತ್ತದೆ?

ನಿವೃತ್ತಿ ಘೋಷಣೆ

ಇದೀಗ 29 ವರ್ಷದ ವಿನೇಶ್‌ ಫೋಗಟ್‌ ಅವರು ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ಕುಸ್ತಿ ನನ್ನ ವಿರುದ್ಧ ಪಂದ್ಯವನ್ನು ಗೆದ್ದಿದೆ. ನಾನು ಸೋತೆ.. ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಛಿದ್ರವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರಿಗೂ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ. ಕ್ಷಮಿಸಿ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

Continue Reading
Advertisement
couple death kolar
ಕ್ರೈಂ41 seconds ago

Couple Death: ಮೊದಲ ರಾತ್ರಿಯೇ ಮಚ್ಚಿನಲ್ಲಿ ಹೊಡೆದಾಟ, ವಧುವಿನ ಜೊತೆಗೆ ವರನೂ ಸಾವು

Paris Olympics 2024
ಕ್ರೀಡೆ4 mins ago

Paris Olympics 2024: ವಿನೇಶ್‌ ಫೋಗಟ್‌ ಅನರ್ಹಗೊಂಡ ಬೆನ್ನಲ್ಲೇ ಮತ್ತೊಂದು ಆಘಾತ; ಕುಸ್ತಿಪಟು ಆಂಟಿಮ್ ಪಂಘಲ್ ಗಡೀಪಾರಿಗೆ ಆದೇಶ

Vinesh Phogat Hema Malini's Comment Loses 100 gm
ಬಾಲಿವುಡ್4 mins ago

Vinesh Phogat: ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ, ಇದು ಮಹಿಳೆಯರಿಗೆ ಪಾಠ ಎಂದ ಹೇಮಾ ಮಾಲಿನಿ ಫುಲ್‌ ಟ್ರೋಲ್‌!

neeraj chopra
ಕ್ರೀಡೆ14 mins ago

Neeraj Chopra: ಚಿನ್ನದ ಎಸೆತಕ್ಕೆ ನೀರಜ್​ ಚೋಪ್ರಾ ಸಜ್ಜು;​ ಎಷ್ಟು ಗಂಟೆಗೆ ಫೈನಲ್ ಆರಂಭ?

Phone Charging Tips
ಗ್ಯಾಜೆಟ್ಸ್20 mins ago

Phone Charging Tips: ಫೋನ್‌ಗಳನ್ನು ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Naga Chaitanya -Sobhita Dhulipala Are Getting ENGAGED Today
South Cinema23 mins ago

Naga Chaitanya -Sobhita Dhulipala:  ಸಮಂತಾ ಮಾಜಿ ಪತಿ  ನಾಗ ಚೈತನ್ಯ ಜತೆ ಇಂದೇ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ?

Bangladesh unrest
ದೇಶ49 mins ago

Bangladesh Unrest: ಭಾರತದ ಗಡಿಯೊಳಗೆ ಪ್ರವೇಶಕ್ಕೆ ಬಾಂಗ್ಲಾದ 600 ಜನ ಯತ್ನ-BSF ಮಾಹಿತಿ

Bluetooth Side Effects
ಆರೋಗ್ಯ50 mins ago

Bluetooth Side Effects: ಬ್ಲೂಟೂತ್‌ ಹೆಡ್‌ಫೋನ್‌ ರೇಡಿಯೊ ಕಿರಣಗಳಿಂದ ಕ್ಯಾನ್ಸರ್‌?

Vinesh Phogat
ಕ್ರೀಡೆ59 mins ago

Vinesh Phogat: ಬೆಳ್ಳಿ ಪದಕಕ್ಕಾಗಿ ಕೋರ್ಟ್‌ ಕದ ತಟ್ಟಿದ ವಿನೇಶ್‌ ಫೋಗಟ್‌; ಇಂದು ತೀರ್ಪು ಪ್ರಕಟ

Teacher jobs good news
ಪ್ರಮುಖ ಸುದ್ದಿ1 hour ago

Good News: ಅನುದಾನಿತ ಶಾಲೆ, ಕಾಲೇಜುಗಳ ಬೋಧಕ ಹುದ್ದೆ ಭರ್ತಿಗೆ ಆದೇಶ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ7 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ7 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ7 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌