IND vs AUS: ಕೊಹ್ಲಿ ಬ್ಯಾಟಿಂಗ್​ ಕ್ರಮಾಂಕದ ಮೇಲೆ ಕಣ್ಣಿಟ್ಟ ಶ್ರೇಯಸ್​ ಅಯ್ಯರ್​ - Vistara News

ಕ್ರಿಕೆಟ್

IND vs AUS: ಕೊಹ್ಲಿ ಬ್ಯಾಟಿಂಗ್​ ಕ್ರಮಾಂಕದ ಮೇಲೆ ಕಣ್ಣಿಟ್ಟ ಶ್ರೇಯಸ್​ ಅಯ್ಯರ್​

ಶ್ರೇಯಸ್​ ಅಯ್ಯರ್(Shreyas Iyer)​ ಅವರು ವಿಶ್ವಕಪ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

VISTARANEWS.COM


on

Shreyas Iyer during India’s Asia Cup match against Nepal at Pallekele recently
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದೋರ್​: ಪದೇಪದೆ ಬೆನ್ನುನೋವಿಗೆ ತುತ್ತಾಗಿ ತಂಡದದಿಂದ ಹೊರಗುಳಿಯುತ್ತಿದ್ದ ಶ್ರೇಯಸ್​ ಅಯ್ಯರ್(Shreyas Iyer)​ ಆಸ್ಟ್ರೇಲಿಯಾ(IND vs AUS) ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿ ಸಂಭ್ರಮಿಸಿದರು. ಈ ಮೂಲಕ ವಿಶ್ವಕಪ್​ಗೆ ಒಂದು ವಾರ ಬಾಕಿ ಇರುವಾಗ ಗ್ರೇಟೆಸ್ಟ್​ ಕಮ್​ಬ್ಯಾಕ್​ ಮಾಡಿದರು.

ಪಂದ್ಯದ ಬಳಿಕ ಮಾತನಾಡಿದ ಅಯ್ಯರ್​, ಬಹಳ ದಿನಗಳ ಬಳಿಕ ತೋರಿದ ಈ ಪ್ರದರ್ಶನದಿಂದ ವಿಶ್ವಕಪ್​ಗೂ ಮುನ್ನ ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿದೆ ಎಂದು ಹೇಳಿದರು. ಇದೇ ವೇಳೆ ವಿಶ್ವಕಪ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದರು. “ನನ್ನ ಯೋಜನೆ ಕೊಹ್ಲಿ ಅವರು ಆಡುವ ಮೂರನೇ ಕ್ರಮಾಂಕ. ಆದರೆ ನನಗೆ ತಿಳಿದಿದೆ. ಈ ಸ್ಥಾನ ನನಗೆ ಸಿಗುವುದಿಲ್ಲ ಎಂದು, ಏಕೆಂದರೆ ವಿರಾಟ್ ಈ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಾರೆ. ಹೀಗಾಗಿ ಈ ಸ್ಥಾನವನ್ನು ಪಡೆಯಲು ಯಾವುದೇ ಅವಕಾಶವಿಲ್ಲ. ಆದ್ದರಿಂದ ನಾನು ಯಾವುದೇ ಕ್ರಮಾಂಕ ನೀಡಿದರೂ ಬ್ಯಾಟ್​ ಬೀಸಬಲ್ಲ” ಎಂದು ಹೇಳಿದರು.

ಆಸೀಸ್​ ವಿರುದ್ಧದ ಪಂದ್ಯದಲ್ಲಿ ಅಯ್ಯರ್​ 90 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 105 ರನ್​ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರಬಹಿಸಿದರು. ಅವರ ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಿಲ್ ಜತೆ​ ಸೇರಿಕೊಂಡು ದ್ವಿತೀಯ ವಿಕೆಟ್​ಗೆ ಭರ್ತಿ 200 ರನ್​ಗಳ ಜತೆಯಾಟನ್ನೂ ನಡೆಸಿದ್ದರು. 

ಗ್ರೇಟ್​ ಕಮ್​ಬ್ಯಾಕ್​

​ಆಸೀಸ್​ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಅಯ್ಯರ್​ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿ 6 ತಿಂಗಳ ಕಾಲ ಕ್ರಿಕೆಟ್​ ನಿಂದ ದೂರ ಉಳಿದಿದ್ದರು. ಇದಾದ ಬಳಿಕ ಅವರು ಐಪಿಎಲ್​ನಿಂದಲೂ ದೂರ ಉಳಿದಿದ್ದರು. ಶಸ್ತ್ರಚಿಕಿತ್ಸಗೆ ಒಳಗಾಗಿದ್ದ ಬಳಿಕ ಬೆಂಗಳೂರಿನ ರಾಷ್ಟ್ರೀಯ ಅಕಾಡೆಮಿಯಲ್ಲಿ ಪುನಶ್ಚೇತನದಲ್ಲಿ ಗುಣಮುಖರಾಗಿದ್ದರು. ಹೀಗಾಗಿ ಅವರನ್ನು ಏಷ್ಯಾ ಕಪ್​ ಜತೆಗೆ ವಿಶ್ವಕಪ್​ ತಂಡದಲ್ಲಿಯೂ ಅವಕಾಶ ನೀಡಲಾಗಿತ್ತು. ವಿಶ್ವಕಪ್​ಗೆ ಒಂದು ವಾರ ಇರುವಾಗ ಬಲಿಷ್ಠ ಆಸೀಸ್​ ವಿರುದ್ಧ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಬ್ಯಾಟಿಂಗ್​ ಫಾರ್ಮ್​ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹೆಚ್ಚು ನೆರವಾಗಲಿದೆ. ಅಯ್ಯರ್​ ಮಾತ್ರವಲ್ಲದೆ ವಿಶ್ವಕಪ್​ನಲ್ಲಿ ಸ್ಥಾನ ಪಡೆದ ಎಲ್ಲ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರುವ ಮೂಲಕ ವಿಶ್ವಕಪ್​ ಗೆಲ್ಲುವ ಬರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ IND vs AUS: ಆಸೀಸ್​ ವಿರುದ್ಧದ ಅಂತಿಮ ಪಂದ್ಯಕ್ಕೆ ಶುಭಮನ್​ ಗಿಲ್,ಶಾರ್ದೂಲ್ ಅಲಭ್ಯ

ನಂಬಿಕೆಯ ಆಟಗಾರ

ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್​ ಅಯ್ಯರ್​ ಭರವಸೆಯ ಪ್ರತಿಭಾನ್ವಿತ ಆಟಗಾರ. ಇದುವರೆಗೆ ಟೀಮ್ ಇಂಡಿಯಾ ಪರ 10 ಟೆಸ್ಟ್, 45 ಏಕದಿನ ಮತ್ತು 49 ಟಿ20 ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 50 ಓವರ್‌ಗಳ ಸ್ವರೂಪದಲ್ಲಿ, ಅವರು 46.13 ಸರಾಸರಿಯಲ್ಲಿ 1753 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Andre Russell : ಬ್ರಾವೊ ರೀತಿಯಲ್ಲೇ ಬಾಲಿವುಡ್​ಗೆ ಎಂಟ್ರಿ ಪಡೆದ ಆ್ಯಂಡ್ರೆ ರಸೆಲ್​

Andre Russell: ಡಿಜೆ ಬ್ರಾವೋ ಅವರ ಹೆಜ್ಜೆಗಳನ್ನು ಅನುಸರಿಸಿರುವ ಆ್ಯಂಡ್ರೆ ರಸೆಲ್ ಈಗ ಸಂಗೀತ ಜಗತ್ತಿಗೆ ಕಾಲಿಡುತ್ತಿದ್ದಾರೆ. ಇದು ಬಾಲಿವುಡ್​ನಲ್ಲಿ ಅವರು ಗಾಯನ ವೃತ್ತಿಜೀವನ ಆರಂಭಿಸಿದ್ದಾರೆ. ಪಲಾಶ್ ಮುಚಲ್ ಸಂಯೋಜಿಸಿದ ಹಾಡಿಗೆ ರಸೆಲ್ ಧ್ವನಿ ನೀಡಲಿದ್ದಾರೆ ಎಂದು ಖಚಿತಪಡಿಸಲಾಗಿದೆ. ಹೆಚ್ಚುವರಿಯಾಗಿ ಅವರು ಮ್ಯೂಸಿಕ್ ವೀಡಿಯೊದಲ್ಲಿ ನಟಿ ಅವಿಕಾ ಗೋರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Andre Russell
Koo

ಬೆಂಗಳೂರು: ವೆಸ್ಟ್ ಇಂಡೀಸ್ ಆಟಗಾರರು ನಿಸ್ಸಂದೇಹವಾಗಿ ಐಪಿಎಲ್​ನಲ್ಲಿ ಯಾವುದೇ ತಂಡದ ದೊಡ್ಡ ಆಸ್ತಿ. ತಮ್ಮ 100% ಬದ್ಧತೆ ಮತ್ತು ಪವರ್-ಹಿಟ್ಟಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಅವರು ಮೈದಾನದಲ್ಲಿ ಮರೆಯಲಾಗ ಛಾಪು ಮೂಡಿಸುತ್ತಾರೆ. ಇದಲ್ಲದೆ ಅವರು ಆಗಾಗ್ಗೆ ಡ್ರೆಸ್ಸಿಂಗ್ ಕೋಣೆಯಲ್ಲಿ ಖುಷಿಯ ಮೂಲವಾಗಿ ಕಾರ್ಯನಿರ್ವಹಿಸುತ್ತಾರೆ. ತಂಡಕ್ಕೆ ಮನರಂಜನೆ ಮತ್ತು ಶಕ್ತಿಯ ಅಂಶಗಳನ್ನು ಸೇರಿಸುತ್ತಾರೆ. ಅಂತೆಯೇ ಕೆಕೆಆರ್​ ತಂಡದ ಆ್ಯಂಡ್ರೆ ರಸೆಲ್​ (Andre Russell) ಬಾಲಿವುಡ್​ಗೆ ಪ್ರವೇಶ ಮಾಡುವ ಸೂಚನೆ ನೀಡಿದ್ದು ಈ ತಂಡದ ಪಾಲಿಗೆ ವಿಶೇಷ ಸುದ್ದಿ ಎನಿಸಿದೆ.

ಕ್ರಿಸ್ ಗೇಲ್, ಡಿಜೆ ಬ್ರಾವೋ, ಕೀರನ್ ಪೊಲಾರ್ಡ್, ಡ್ಯಾರೆನ್ ಸಾಮಿ ಮತ್ತು ಪ್ರಸ್ತುತ ಕೆಕೆಆರ್ ಸೆನ್ಸೇಷನ್ ಆ್ಯಂಡ್ರೆ ರಸೆಲ್ ಸೇರಿದಂತೆ ಹಲವಾರು ವೆಸ್ಟ್ ಇಂಡೀಸ್ ಕ್ರಿಕೆಟಿಗರು ಐಪಿಎಲ್​​ನಲ್ಲಿ ತಮ್ಮ ಉಪಸ್ಥಿತಿ ಮತ್ತು ಪ್ರದರ್ಶನದಿಂದ ಮಿಂಚಿದ್ದಾರೆ.

ಬಾಲಿವುಡ್ ಗೆ ಕಾಲಿಟ್ಟ ರಸೆಲ್

ಡಿಜೆ ಬ್ರಾವೋ ಅವರ ಹೆಜ್ಜೆಗಳನ್ನು ಅನುಸರಿಸಿರುವ ಆ್ಯಂಡ್ರೆ ರಸೆಲ್ ಈಗ ಸಂಗೀತ ಜಗತ್ತಿಗೆ ಕಾಲಿಡುತ್ತಿದ್ದಾರೆ. ಇದು ಬಾಲಿವುಡ್​ನಲ್ಲಿ ಅವರು ಗಾಯನ ವೃತ್ತಿಜೀವನ ಆರಂಭಿಸಿದ್ದಾರೆ. ಪಲಾಶ್ ಮುಚಲ್ ಸಂಯೋಜಿಸಿದ ಹಾಡಿಗೆ ರಸೆಲ್ ಧ್ವನಿ ನೀಡಲಿದ್ದಾರೆ ಎಂದು ಖಚಿತಪಡಿಸಲಾಗಿದೆ. ಹೆಚ್ಚುವರಿಯಾಗಿ ಅವರು ಮ್ಯೂಸಿಕ್ ವೀಡಿಯೊದಲ್ಲಿ ನಟಿ ಅವಿಕಾ ಗೋರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: T20 World Cup : ವಿಶ್ವ ಕಪ್​ ತಂಡದಿಂದ ಅರ್ಶ್​​ದೀಪ್​ ಕೈಬಿಡಲು ಆಗ್ರಹ; ಏನಾಯಿತು ಅವರಿಗೆ?

“ಲಡ್ಕಿ ತೋ ಕಮಾಲ್ ಕಿ” ಎಂಬ ಶೀರ್ಷಿಕೆಯ ಈ ಹಾಡು ಮೇ9 ರಂದು ವೊಯಿಲಾ ಡಿಗ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗಲಿದೆ.

ರಸೆಲ್ ಗಾಗಿ ಹಾಡು ಹಾಡುತ್ತಾರೆಯೇ ಶಾರುಖ್​

ಆ್ಯಂಡ್ರೆ ರಸೆಲ್ ಬೇರೆಡೆ ಅವಕಾಶಗಳನ್ನು ಹುಡುಕುವ ಅಗತ್ಯವಿಲ್ಲ. ಏಕೆಂದರೆ ಅವರಿಗೆ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮಾಲೀಕ ಮತ್ತು ಬಾಲಿವುಡ್ನ ದಿಗ್ಗಜ ಶಾರುಖ್ ಖಾನ್ ಅವರ ಬೆಂಬಲವಿದೆ. ಶಾರುಖ್​ ಕೇವಲ ತಂಡದ ಮಾಲೀಕರಲ್ಲ; ಅವರು ಕೆಕೆಆರ್ ಕುಟುಂಬದಲ್ಲಿ ಮನರಂಜನೆಯ ಮೂಲ. ರಸೆಲ್ ಮತ್ತು ಶಾರುಖ್​ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಪರಸ್ಪರರ ಸಹವಾಸವನ್ನು ಆನಂದಿಸುತ್ತಾರೆ. ಉತ್ತಮ ಸಮಯ ಕಳೆಯುತ್ತಾರೆ. ಆದ್ದರಿಂದ ಇಬ್ಬರು ಸೂಪರ್​ಸ್ಟಾರ್​ ಕೊಲಾಬ್ ಅನ್ನು ನಾವು ಸಕಾರಾತ್ಮಕವಾಗಿ ನಿರೀಕ್ಷಿಸಬಹುದು.

ಇತ್ತೀಚಿನ ಕೆಲವು ದಿನಗಳ ಹಿಂದೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಡಂಕಿ ಚಲನಚಿತ್ರದ ಶಾರುಖ್​ ಅವರ ಅಪ್ರತಿಮ ಹಾಡು “ಲುಟ್ ಪುಟ್ ಗಯಾ” ಹಾಡುತ್ತಿರುವುದು ಕಂಡುಬಂದಿತ್ತು. ಅಲ್ಲಿ ಅವರು ಕೆಕೆಆರ್ ತಂಡದ ಸಹ ಆಟಗಾರ ರಿಂಕು ಸಿಂಗ್ ಅವರೊಂದಿಗೆ ಕಾಣಿಸಿಕೊಂಡರು.

Continue Reading

ಕ್ರೀಡೆ

Sania Mirza: ಹೇಳಲು ತುಂಬಾ ಇದೆ, ಆದರೂ ಮೌನವಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

Sania Mirza: ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್‌ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್‌ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್‌ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್‌ ಎಂಬ ಪುತ್ರನಿದ್ದಾನೆ. ಮಲಿಕ್​ಗೆ ವಿಚ್ಚೇದನ ನೀಡಿದ ಬಳಿಕ ಸಾನಿಯಾ ದುಬೈನಲ್ಲಿ ನೆಲೆಸಿದ್ದಾರೆ.

VISTARANEWS.COM


on

Sania Mirza
Koo

ದುಬೈ: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶೋಯೆಬ್‌ ಮಲಿಕ್‌(Shoaib Malik) ಅವರಿಗೆ ವಿಚ್ಚೇದನ ನೀಡಿದ ಬಳಿಕ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ(Sania Mirza) ಅವರು ಮೊದಲ ಬಾರಿಗೆ ಕನ್ನಡಿ ಮುಂದೆ ನಿಂತಿರುವ ಫೋಟೊ ಹಂಚಿಕೊಂಡು ‘ಪ್ರತಿಬಿಂಬ’ ಎಂದು ಬರೆದುಕೊಂಡು ಪೋಸ್ಟ್​ ಮಾಡಿದ್ದರು. ಈ ಪೋಸ್ಟ್​ ಮಾಡಿದ 3 ತಿಂಗಳ ಬಳಿಕ ಇದೀಗ ಮತ್ತೊಂದು ಪೋಸ್ಟ್​ ಮಾಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿರುವ ಸಾನಿಯಾ, ‘ನಾನು ಇದನ್ನು ಮೊದಲೇ ಹೇಳಲು ಬಯಸಲಿಲ್ಲ. ನಾನು ಹೇಳಿದ್ದು ಬಹಳ ಕಡಿಮೆ. ಹೇಳಲು ಬಹಳಷ್ಟಿದೆ. ಆದರೂ ನಾನು ಮೌನವಾಗಿದ್ದೇನೆ’ ಎಂದು ಬರೆದಿರುವ ಇಮೇಜ್​ ಕಾರ್ಡ್​ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್​ ಕಂಡು ನೆಟ್ಟಿಗರು ಸಾನಿಯಾ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪೋಸ್ಟ್​ ಇದಾಗಿದೆ ಎಂದು ಕಮೆಂಟ್​ ಮಾಡಿದ್ದಾರೆ.

ಸಾನಿಯಾ ತಂದೆ ಇಮ್ರಾನ್​ ಮಿರ್ಜಾ ಕೂಡ ಪಿಟಿಐಗೆ ಪ್ರತಿಕ್ರಿಕೆ ನೀಡುವ ವೇಳೆ, “ನನ್ನ ಮಗಳು ಮಲಿಕ್​ಗೆ​ ಖುಲಾ ನೀಡಿದ್ದಾಳೆ. ಖುಲಾ ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆ ಕೇಳುವ ಸ್ವಾತಂತ್ರ್ಯ. ಇದು ಸಮ್ಮತಿಯ ವಿಚ್ಛೇದನವಾಗಿದ್ದು, ಗಂಡನೊಂದಿಗೆ ತನಗೆ ಬಾಳ್ವೆ ಮಾಡಲು ಇಷ್ಟವಿಲ್ಲ ಎಂದಾದಲ್ಲಿ ಆಕೆ ಖುಲಾ ನೀಡಿ ಬೇರೆ ಆಗಬಹುದಾಗಿದೆ” ಎಂದು ಹೇಳಿದ್ದರು.


ಶೋಯೆಬ್‌ ಮಲಿಕ್‌ ಸನಾ ಜಾವೇದ್ ಅವರನ್ನು ವಿವಾಹವಾಗುವ ಮೂಲಕ ಸಾನಿಯಾ ಮಿರ್ಜಾ(Sania Mirza) ಜತೆಗಿನ 13 ವರ್ಷದ ದಾಂಪತ್ಯವು ಕೊನೆಗೊಂಡಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹದ ಸುದ್ದಿಗಳು ಹರಿದಾಡುತ್ತಿತ್ತು. ಕೆಲವರು ವಿಚ್ಚೇದನ ನೀಡದೆ ಶೋಯೆಬ್‌ ವಿವಾಹವಾಗಿದ್ದಾರೆ ಎಂದರೆ, ಇನ್ನು ಕೆಲವರು ಕಳೆದ ವರ್ಷವೇ ಈ ಜೋಡಿ ವಿಚ್ಚೇದನ ಪಡೆದಿತ್ತು ಎಂದು ಚರ್ಚಿಸುತ್ತಿದ್ದರು. ಈ ಎಲ್ಲ ವಿದ್ಯಮಾನಗಳನ್ನು ಕಂಡು ಸಾನಿಯಾ ಮಿರ್ಜಾ ಅವರ ಕುಟುಂಬವೇ ಅಧಿಕೃತ ಪ್ರಕಟನೆಯ ಮೂಲಕ ಸ್ಪಷ್ಟನೆ ನೀಡಿತ್ತು.

ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್‌ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್‌ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್‌ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್‌ ಎಂಬ ಪುತ್ರನಿದ್ದಾನೆ. ಮಲಿಕ್​ಗೆ ವಿಚ್ಚೇದನ ನೀಡಿದ ಬಳಿಕ ಸಾನಿಯಾ ದುಬೈನಲ್ಲಿ ನೆಲೆಸಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್​ಲ್ಲಿ ಆಡುವ ಮೂಲಕ ಸಾನಿಯಾ ಟೆನಿಸ್​ಗೆ ವಿದಾಯ ಹೇಳಿದ್ದರು. ರೋಹನ್ ಬೋಪಣ್ಣ ಜತೆ ಮಿಶ್ರ ಡಬಲ್ಸ್​ ಆಡಿದ್ದ ಅವರು ಈ ಟೂರ್ನಿಯಲ್ಲಿ ರನ್ನರ್​ ಅಪ್ ಆಗಿದ್ದರು.

ಇದನ್ನೂ ಓದಿ Sania Mirza: ಪಾಕಿಸ್ತಾನಿ ಸಿಂಗರ್​ ಜತೆ ಕಾಣಿಸಿಕೊಂಡ ಸಾನಿಯಾ ಮಿರ್ಜಾ; ಫೋಟೊ ವೈರಲ್

2004ರ ವರ್ಷದಲ್ಲಿ ಸಾನಿಯಾ ಮಿರ್ಜಾ ವೃತ್ತಿಪರವಾದ ಟೆನಿಸ್ ಆಡಲು ಆರಂಭ ಮಾಡಿದಾಗ, ಶಾರ್ಟ್ಸ್ ಮತ್ತು ಟೀ ಶರ್ಟ್ ಹಾಕಿ ಕೋರ್ಟಿಗೆ ಇಳಿದಾಗ ಆಕೆಯ ಮೇಲೆ ಕಾಮಾಲೆ ಕಣ್ಣಿನ ಸಂಪ್ರದಾಯವಾದಿಗಳು ಫತ್ವಾ ಹೊರಡಿಸಿ ಮುಗಿಬಿದಿತ್ತು. ಅವರು ಪರ್ದಾ ಹಾಕಲು ನಿರಾಕರಣೆ ಮಾಡಿದಾಗ, ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರನ್ನು ಮದುವೆಯಾದಾಗ ಹಲವರು ಅವರನ್ನು ʻಪಾಕಿಸ್ಥಾನದ ಸೊಸೆ’ ಎಂದು ಮೂಗು ಮುರಿದದ್ದೂ ಇದೆ! 

Continue Reading

ಪ್ರಮುಖ ಸುದ್ದಿ

T20 World Cup : ವಿಶ್ವ ಕಪ್​ ತಂಡದಿಂದ ಅರ್ಶ್​​ದೀಪ್​ ಕೈಬಿಡಲು ಆಗ್ರಹ; ಏನಾಯಿತು ಅವರಿಗೆ?

T20 World Cup: ನಾಯಕ ರುತುರಾಜ್ ಗಾಯಕ್ವಾಡ್ ಅವರ ಅರ್ಧಶತಕದ ನೆರವಿನಿಂದ ಸಿಎಸ್​ಕೆ ಮೊದಲ ಇನಿಂಗ್ಸ್​ನ 20 ಓವರ್​ಗಳಲ್ಲಿ 162 ರನ್ ಗಳಿಸಿತು. ಆದಾಗ್ಯೂ ಬ್ಯಾಟರ್​ಗಳ ದುಃಸ್ವಪ್ನ ಹೊಂದಿದ್ದ ಪಿಚ್​ನಲ್ಲಿ ಪಿಬಿಕೆಎಸ್​​ನ ಮುಂಚೂಣಿ ಬೌಲರ್ ಅರ್ಶ್​ದೀಪ್​ ಸಿಂಗ್​ 4 ಓವರ್​ಗಳ ಸ್ಪೆಲ್​ನಲ್ಲಿ 52 ರನ್​ಗಳನ್ನು ಬಿಟ್ಟುಕೊಟ್ಟರು. ಅವರ 13.00 ಎಕಾನಮಿ ಪಿಬಿಎಸ್​ಕೆ ಬೌಲರ್​ಗಳಲ್ಲಿ ಅತ್ಯಧಿಕವಾಗಿತ್ತು.

VISTARANEWS.COM


on

T20 World Cup
Koo

ಬೆಂಗಳೂರು: ಮುಂಬರುವ ಟಿ 20 ವಿಶ್ವಕಪ್ (T20 World Cup) ಆಡಲಿರುವ ಭಾರತ ತಂಡಕ್ಕೆ ಆಯ್ಕೆಯಾದ ಒಂದು ದಿನದ ನಂತರ ಐಪಿಎಲ್​ನ ಪಂಜಾಬ್​ ಕಿಂಗ್ಸ್ ತಂಡ ಬೌಲರ್​ ಅರ್ಶ್​ದೀಪ್​ ಸಿಂಗ್​ ಚೆನ್ನೈ ವಿರುದ್ಧ ದುಬಾರಿ ಬೌಲಿಂಗ್​ ದಾಳಿ ನಡೆಸಿದ್ದಾರೆ. ತಮ್ಮ 4 ಓವರ್​ಗಳ ಸ್ಪೆಲ್​ನಲ್ಲಿ 52 ರನ್ ನೀಡಿದ್ದಾರೆ. ಚೆನ್ನೈ ಬ್ಯಾಟರ್​ಗಳು ಸ್ಪರ್ಧಾತ್ಮಕ ಮೊತ್ತ ಗಳಿಸಲು ಹೆಣಗಾಡಿದ ಹೊರತಾಗಿಯೂ ಅವರು ಹೆಚ್ಚು ರನ್​ ನೀಡಿದ್ದಾರೆ. ಇದು ಅವರ ಬೌಲಿಂಗ್​ ದಾಳಿಯ ಬಗ್ಗೆ ಟೀಕೆಗಳು ಎದುರಾಗಿವೆ. ಅವರನ್ನು ವಿಶ್ವ ಕಪ್ ತಂಡದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಚೆನ್ನೈನಲ್ಲಿ ಇಂದು ಸಿಎಸ್​ಕೆ ವಿರುದ್ಧ ಪಂಜಾಬ್ ಕಿಂಗ್ಸ್​ ಮೊದಲು ಬೌಲಿಂಗ್ ಮಾಡಿತ್ತು. ಚೆಪಾಕ್​​ನ ನಿಧಾನಗತಿಯ ಟ್ರ್ಯಾಕ್​ನಲ್ಲಿ ಆತಿಥೇಯರು ಬ್ಯಾಟಿಂಗ್​ನಲ್ಇ ಹೆಣಗಾಡಿದರು. ಹೀಗಾಗಿ ಪಂಜಾಬ್​ ತಂಡದ ನಿರ್ಧಾರ ಉತ್ತಮ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಅರ್ಶ್​ದೀಪ್​ ಬೌಲಿಂಗ್​ ಉತ್ತಮವಾಗಿರಲಿಲ್ಲ.

ನಾಯಕ ರುತುರಾಜ್ ಗಾಯಕ್ವಾಡ್ ಅವರ ಅರ್ಧಶತಕದ ನೆರವಿನಿಂದ ಸಿಎಸ್​ಕೆ ಮೊದಲ ಇನಿಂಗ್ಸ್​ನ 20 ಓವರ್​ಗಳಲ್ಲಿ 162 ರನ್ ಗಳಿಸಿತು. ಆದಾಗ್ಯೂ ಬ್ಯಾಟರ್​ಗಳ ದುಃಸ್ವಪ್ನ ಹೊಂದಿದ್ದ ಪಿಚ್​ನಲ್ಲಿ ಪಿಬಿಕೆಎಸ್​​ನ ಮುಂಚೂಣಿ ಬೌಲರ್ ಅರ್ಶ್​ದೀಪ್​ ಸಿಂಗ್​ 4 ಓವರ್​ಗಳ ಸ್ಪೆಲ್​ನಲ್ಲಿ 52 ರನ್​ಗಳನ್ನು ಬಿಟ್ಟುಕೊಟ್ಟರು. ಅವರ 13.00 ಎಕಾನಮಿ ಪಿಬಿಎಸ್​ಕೆ ಬೌಲರ್​ಗಳಲ್ಲಿ ಅತ್ಯಧಿಕವಾಗಿತ್ತು.

ಇದನ್ನೂ ಓದಿ: Deepak Chahar : ಸಹೋದರನನ್ನು ಗೇಲಿ ಮಾಡಿದವರಿಗೆ ತಿರುಗೇಟು ಕೊಟ್ಟ ದೀಪಕ್ ಚಾಹರ್​ ಸಹೋದರಿ!

ಕುತೂಹಲಕಾರಿ ಸಂಗತಿಯೆಂದರೆ ಮುಂಬರುವ ಮೆಗಾ ಟಿ 20 ವಿಶ್ವಕಪ್ ಈವೆಂಟ್​​ನಿಂದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರೊಂದಿಗೆ ಅಂತಿಮ 15 ಸದಸ್ಯರ ತಂಡದಲ್ಲಿ ಅರ್ಶ್​​ದೀಪ್​ ಸಿಂಗ್​ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಈಗ ಅವರ ಬೌಲಿಂಗ್​ ದಾಳಿ ಎಷ್ಟು ಪರಿಣಾಮಕಾರಿ ಎಂಬುದೇ ಅನುಮಾನ ಶುರುವಾಗಿದೆ.

ಕಿಡಿಕಾರಿದ ಅಭಿಮಾನಿಗಳು

ಅರ್ಶ್​ದೀಪ್​ ಅವರ ಕಳಪೆ ಪ್ರದರ್ಶನ ಮತ್ತು ಬೌಲರ್ ಸ್ನೇಹಿ ಪಿಚ್​​ನಲ್ಲಿ ಅರ್ಶ್​​ದೀಪ್​ ಅವರ ಪ್ರಯತ್ನಗಳ ಕೊರತೆಯು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಈ ಬಗ್ಗೆ ಚಿಂತೆಗೀಡು ಮಾಡಿತು. ಅನೇಕರು ಅವರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಕೆಲವರು ಸಿಎಸ್ಕೆ ದಂತಕಥೆ ಎಂಎಸ್ ಧೋನಿಗೆ ಹೆಚ್ಚುವರಿ ರನ್​ಗಳನ್ನು ನೀಡಿದಕ್ಕಾಗಿ ಟ್ರೋಲ್ ಮಾಡಿದ್ದಾರೆ.

ಅರ್ಶ್​ದೀಪ್​ ಸಿಂಗ್ 2022 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ ರಾಷ್ಟ್ರೀಯ ತಂಡದಲ್ಲಿದ್ದಾರೆ. ಆದಾಗ್ಯೂ, ಮೊಹಮ್ಮದ್ ಶಮಿ ಹಿಮ್ಮಡಿ ಗಾಯದಿಂದ ಬಳಲುತ್ತಿರುವುದರಿಂದ, ಭಾರತವು ವೇಗದ ಬೌಲಿಂಗ್ ಆಯ್ಕೆಗಳ ಕೊರತೆಯನ್ನು ಎದುರಿಸಿದೆ. ಹೀಗಾಗಿ ಎಡಗೈ ವೇಗಿಗೆ ಅವಕಾಶ ಸಿಕ್ಕಿದೆ. ಐಪಿಎಲ್ 2024 ಋತುವಿನಲ್ಲಿ ಎಡಗೈ ವೇಗದ ಬೌಲರ್ನ ಪ್ರಶ್ನಾರ್ಹ ಫಾರ್ಮ್ ಖಂಡಿತವಾಗಿಯೂ ಟಿ 20 ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳನ್ನು ಚಿಂತೆಗೀಡು ಮಾಡುತ್ತದೆ.

ಪ್ರಿಯ ಬಿಸಿಸಿಐ, ದಯವಿಟ್ಟು ಅರ್ಷ್ದೀಪ್ ಸಿಂಗ್ ಧೋನಿಗೆ ಈ ಕೊನೆಯ ಓವರ್ ಅನ್ನು ಪರಿಶೀಲಿಸಬಹುದೇ? ಅವರು ಉದ್ದೇಶಪೂರ್ವಕವಾಗಿ ಧೋನಿಯ ಆಫ್ ಸ್ಟಂಪ್​​ಗೆ ಹೊರಗೆ ಇಡೀ ಓವರ್ ಎಸೆದಿದ್ದಾರೆ. ಇದು ಧೋನಿಗೆ ಸಿಕ್ಸರ್ ಎಸೆಯಲು ನೆರವು ನೀಡಿತು ಎಂದು ಸನ್ನಿ ಎಂಬ ಅಭಿಮಾನಿ ಹೇಳಿದ್ದಾರೆ.

Continue Reading

ಕ್ರೀಡೆ

T20 World Cup: ರೋಹಿತ್​, ಅಗರ್ಕರ್​ ಜಂಟಿ ಸುದ್ದಿಗೋಷ್ಠಿಗೆ ಕ್ಷಣಗಣನೆ

T20 World Cup: ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಹಾರ್ದಿಕ್​ ಪಾಂಡ್ಯಗೆ ಅವಕಾಶ ನೀಡಿದ್ದು ಮಾತ್ರವಲ್ಲದೆ ಉಪನಾಯಕನ ಸ್ಥಾನ ನೀಡಿದ್ದರ ಬಗ್ಗೆ ಈಗಾಗಲೇ ಅನೇಕ ಮಾಜಿ ಆಟಗಾರರಿಂದ ಟೀಕೆಗಳು ವ್ಯಕ್ತವಾಗಿದೆ. ಗುಜರಾತಿ ಲಾಬಿ ಎಂದು ಕೆಲವರು ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

T20 World Cup
Koo

ಮುಂಬೈ: ಅಮೆರಿಕ ಮತ್ತು ವೆಸ್ಟ್​ ಇಂಡಿಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ(T20 World Cup) ಭಾರತ ತಂಡ (Team India) ಆಯ್ಕೆ ಮಾಡಿದ ಬೆನ್ನಲ್ಲೇ ಇಂದು(ಗುರುವಾರ) ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್(Ajit Agarkar) ಮತ್ತು ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಮುಂಬೈಯ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಮಂಗಳವಾರ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಮತ್ತು ಅಜಿತ್​ ಅಗರ್ಕರ್​ ಅಹಮದಾಬಾದ್​ನಲ್ಲಿ ಔಪಚಾರಿಕ ಸಭೆ ನಡೆಸಿ ಟ್ವೀಟರ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ತಂಡವನ್ನು ಪ್ರಟಿಸಿದ್ದರು. ಇದೀಗ ನಾಯಕ ರೋಹಿತ್​ ಮತ್ತು ಅಗರ್ಕರ್​ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಆಟಗಾರರ ಆಯ್ಕೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕೆಲ ಆಟಗಾರರಿಗೆ ಅವಕಾಶ ನೀಡದ ಬಗ್ಗೆಯೂ ಈ ಸುದ್ದಿಗೋಷ್ಠಿಯಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ಅದರಲ್ಲಿಯೂ ಅನುಭವಿ ಆಟಗಾರ ಕೆಎಲ್ ರಾಹುಲ್​ಗೆ ಮತ್ತು ರಿಂಕು ಸಿಂಗ್​ಗೆ ಅವಕಾಶ ನೀಡದ್ದರ ಕುರಿತು ಹಲವು ಪ್ರಶ್ನೆಗಳು ಎದುರಾಗಬಹುದು.

ಇದನ್ನೂ ಓದಿ T20 World Cup: ಟಿ20 ವಿಶ್ವಕಪ್​ ತಂಡ ಸೇರಲು ರಾಹುಲ್​ಗೆ ಇನ್ನೂ ಇದೆ ಅವಕಾಶ

ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಹಾರ್ದಿಕ್​ ಪಾಂಡ್ಯಗೆ ಅವಕಾಶ ನೀಡಿದ್ದು ಮಾತ್ರವಲ್ಲದೆ ಉಪನಾಯಕನ ಸ್ಥಾನ ನೀಡಿದ್ದರ ಬಗ್ಗೆ ಈಗಾಗಲೇ ಅನೇಕ ಮಾಜಿ ಆಟಗಾರರಿಂದ ಟೀಕೆಗಳು ವ್ಯಕ್ತವಾಗಿದೆ. ಗುಜರಾತಿ ಲಾಬಿ ಎಂದು ಕೆಲವರು ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪಾಂಡ್ಯ ಆಯ್ಕೆಯ ಬಗ್ಗೆಯೂ ರೋಹಿತ್​ಗೆ ಪ್ರಶ್ನೆಗಳ ಸುರಿಮಳೆ ಬರುವ ಸಾಧ್ಯತೆಯೂ ಕಂಡುಬಂದಿದೆ. ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದೆ.

ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ದ್ವಿತೀಯ ಪಂದ್ಯವನ್ನು ಜೂನ್‌ 9 ರಂದು ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕ್​ ವಿರುದ್ಧ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

Continue Reading
Advertisement
Murder case in Bengaluru
ಬೆಂಗಳೂರು3 mins ago

Murder Case : ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

Prajwal Revanna Case Locked up as Prajwal arrives at Bengaluru airport
ಹಾಸನ4 mins ago

Prajwal Revanna Case: ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಜ್ವಲ್‌ ಬರುತ್ತಿದ್ದಂತೆ ಲಾಕ್‌! ಏನಿದು SIT ಸೂಚನೆ?

Andre Russell
ಕ್ರಿಕೆಟ್16 mins ago

Andre Russell : ಬ್ರಾವೊ ರೀತಿಯಲ್ಲೇ ಬಾಲಿವುಡ್​ಗೆ ಎಂಟ್ರಿ ಪಡೆದ ಆ್ಯಂಡ್ರೆ ರಸೆಲ್​

Jolly LLB 3
ಸಿನಿಮಾ17 mins ago

Jolly LLB 3: ಬರ್ತಿದೆ ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 3; ಈ ಬಾರಿ ಇದೆ ಸರ್‌ಪ್ರೈಸ್!

Davanagere lok sabha constituency bjp candidate gayatri siddeshwar election campaign in harapanahalli
ರಾಜಕೀಯ19 mins ago

Lok Sabha Election: ಹರಪನಹಳ್ಳಿಯಲ್ಲಿ ರೋಡ್‌ ಶೋ ನಡೆಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್

MLC Chalavadi Narayanaswamy latest Statement in Hubballi
ಹುಬ್ಬಳ್ಳಿ20 mins ago

Lok Sabha Election: ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿಲ್ಲ: ಛಲವಾದಿ ನಾರಾಯಣಸ್ವಾಮಿ

Mega Shetty
ಫ್ಯಾಷನ್29 mins ago

Mega Shetty: ದಾವಣಿ-ಲಂಗದಲ್ಲಿ ನಟಿ ಮೇಘಾ ಶೆಟ್ಟಿಯಂತೆ ನೀವೂ ಕಾಣಬೇಕೆ? ಈ ಟಿಪ್ಸ್ ಪಾಲಿಸಿ!

six seats of Karnataka Legislative Council Elections to be held on June 3
ಕರ್ನಾಟಕ30 mins ago

Karnataka legislative council: ವಿಧಾನ ಪರಿಷತ್‌ನ 6 ಕ್ಷೇತ್ರಗಳಿಗೆ ಜೂ.3 ಎಲೆಕ್ಷನ್;‌ ಜೂ. 6ಕ್ಕೆ ಫಲಿತಾಂಶ

Deepika Padukone
ಬಾಲಿವುಡ್33 mins ago

Deepika Padukone: ಸಖತ್‌ ಗ್ಲೋ ಆದ ಪ್ರೆಗ್ನೆಂಟ್‌ ದೀಪಿಕಾ: ಜ್ಯೂನಿಯರ್‌ ಆರ್ಟಿಸ್ಟ್‌ ಕೊಟ್ಟ ಸ್ಪೆಷಲ್‌ ಗಿಫ್ಟ್‌ ಏನು?

Sania Mirza
ಕ್ರೀಡೆ40 mins ago

Sania Mirza: ಹೇಳಲು ತುಂಬಾ ಇದೆ, ಆದರೂ ಮೌನವಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌