IND vs PAK | ಅರ್ಶ್‌ದೀಪ್‌ಗೆ ಖಲಿಸ್ತಾನಿ ಎಂದು ಪಟ್ಟಕಟ್ಟಿದ ಪಾಕಿಸ್ತಾನಿಗಳು, ಭಾರತೀಯರ ವಿರೋಧ - Vistara News

ಕ್ರಿಕೆಟ್

IND vs PAK | ಅರ್ಶ್‌ದೀಪ್‌ಗೆ ಖಲಿಸ್ತಾನಿ ಎಂದು ಪಟ್ಟಕಟ್ಟಿದ ಪಾಕಿಸ್ತಾನಿಗಳು, ಭಾರತೀಯರ ವಿರೋಧ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕ್ಯಾಚ್‌ ಬಿಟ್ಟ ಬೌಲರ್‌ ಅರ್ಶ್‌ದೀಪ್‌ ಸಿಂಗ್‌ ಅವರನ್ನು ಖಲಿಸ್ತಾನಿ ಪ್ರೇರಿತ ವ್ಯಕ್ತಿ ಎಂದು ಬಿಂಬಿಸಿದ ಪಾಕಿಸ್ತಾನದ ಕಿಡಿಗೇಡಿಗಳ ಬಗ್ಗೆ ಬಗ್ಗೆ ಆಕ್ರೋಶ ವ್ಯಕ್ತಗೊಂಡಿದೆ.

VISTARANEWS.COM


on

ind vs pak
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ : ಸೆಪ್ಟೆಂಬರ್‌ ೪ರಂದು ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್‌ ಸೂಪರ್‌-೪ ಪಂದ್ಯದ ನಿರ್ಣಾಯಕ ಹಂತದಲ್ಲಿ ಕ್ಯಾಚ್‌ ಬಿಟ್ಟ ಅರ್ಶ್‌ದೀಪ್‌ ಸಿಂಗ್‌ ಅವರನ್ನು ಖಲಿಸ್ತಾನಿ ಎಂದು ಪಟ್ಟಕಟ್ಟುತ್ತಿರುವವರ ವಿರುದ್ಧ ಭಾರತೀಯ ಕ್ರಿಕೆಟ್‌ ಪ್ರೇಮಿಗಳು ತಿರುಗಿ ಬಿದ್ದಿದ್ದಾರೆ. ಅರ್ಶ್‌ದೀಪ್ ಅವರನ್ನು ಉದ್ದೇಶಪೂರ್ವಕವಾಗಿ ಅವಮಾನ ಮಾಡುವ ಉದ್ದೇಶ ಹೊಂದಿದ್ದ ಪಾಕಿಸ್ತಾನದ ಕಿಡಿಗೇಡಿಗಳು ಈ ಕೃತ್ಯ ನಡೆಸುತ್ತಿದ್ದಾರೆ ಎಂಬುದನ್ನು ನೆಟ್ಟಿಗರೊಬ್ಬರು ಪತ್ತೆ ಹಚ್ಚಿ ಟ್ವೀಟ್‌ ಮಾಡಿದ್ದಾರೆ.

ಇನಿಂಗ್ಸ್‌ನ ೧೭ ಓವರ್‌ನಲ್ಲಿ ಆಸಿಫ್‌ ಅಲಿ ನೀಡಿದ್ದ ಸುಲಭ ಕ್ಯಾಚ್‌ ಅನ್ನು ಅರ್ಶ್‌ದೀಪ್‌ ಸಿಂಗ್‌ ನೆಲಕ್ಕೆ ಚೆಲ್ಲಿದ್ದರು. ಭಾರತ ತಂಡದ ಸೋಲಿಗೆ ಇದು ಪ್ರಮುಖ ಕಾರಣ ಅಲ್ಲವಾದರೂ ಕ್ರಿಕೆಟ್‌ ಪ್ರೇಮಿಗಳಿಗೆ ಸಹಜವಾಗಿ ಅರ್ಶ್‌ದೀಪ್‌ ಮೇಲೆ ಕೋಪ ಬಂದಿದೆ. ಹೀಗಾಗಿ ಅರ್ಶ್‌ದೀಪ್‌ ಅವರ ಮೇಲೆ ಕಿಡಿಕಾರಿದ್ದರು. ಆದರೆ, ಪಾಕಿಸ್ತಾನದ ಕಿಡಿಗೇಡಿಗಳು ಇದೇ ತಕ್ಕ ಸಮಯ ಎಂದು ಅರ್ಶ್‌ದೀಪ್‌ ಅವರನ್ನು ಪಾಕಿಸ್ತಾನ ಬೆಂಬಲಿತ ಖಲಿಸ್ತಾನಿ ಎಂದು ಕರೆಯಲು ಆರಂಭಿಸಿದ್ದಾರೆ.

ಅನ್ಷುಲ್‌ ಸಕ್ಸೇನಾ ಎಂಬುವರೊಬ್ಬರು ಪಾಕಿಸ್ತಾನದ ಖದೀಮರು ಮಾಡಿರುವ ಕುಕೃತ್ಯಗಳನ್ನು ಎತ್ತಿ ತೋರಿಸಿದ್ದಾರೆ. ಅಂತೆಯೇ ಪಾಕಿಸ್ತಾನದವರು ಭಾನುವಾರ ಇಂಟರ್ನೆಟ್‌ ಮೂಲಕ ಖಲಿಸ್ತಾನ ಟ್ರೆಂಡ್‌ ಮಾಡಿರುವುದನ್ನೂ ಗುರುತಿಸಿದ್ದಾರೆ. ಆ ಮೂಲಕ ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿದ್ದನ್ನು ಬಯಲು ಮಾಡಿದ್ದಾರೆ.

ವಿಕಿಪೀಡಿಯಾಗೆ ನೋಟಿಸ್

ಅರ್ಶ್‌ದೀಪ್‌ ಅವರನ್ನು ಖಲಿಸ್ತಾನಿ ದೇಶದವರು ಎಂದು ಬರೆಯಲಾಗಿರುವ ವಿಕಿಪಿಡಿಯಾಗೇ ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ವಿಕಿಪೀಡಿಯಾ ಓಪನ್ ಸೋರ್ಸ್‌ ಮಾಹಿತಿ ಕಣಜವಾಗಿದ್ದು, ಯಾರು ಬೇಕಾದರೂ ಮಾಹಿತಿಯನ್ನು ತಿದ್ದಲು ಸಾಧ್ಯವಿದೆ. ಅಂತೆಯೇ ಪಾಕಿಸ್ತಾನಿ ಮೂಲದ ಕಿಡಿಗೇಡಿಗಳು ಅರ್ಶ್‌ದೀಪ್‌ ಅವರ ಮಾಹಿತಿಯನ್ನು ತಿದ್ದಿ, ಖಲಿಸ್ತಾನ ದೇಶದ ಪರವಾಗಿ ಅಡುವ ಆಟಗಾರ, ಖಲಿಸ್ತಾನ ಪರ ಪದಾರ್ಪಣೆ ಮಾಡಿದ ಆಟಗಾರ, ಖಲಿಸ್ತಾನ ತಂಡದ ಪರ ೧೮ ವಯೋಮಿತಿಯ ತಂಡದಲ್ಲಿ ಆಡಿದ ಅಟಗಾರ ಎಂದೆಲ್ಲ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ನೋಟಿಸ್‌ ನೀಡಿದೆ. ಈ ಕುಕೃತ್ಯವನ್ನೂ ಅನ್ಷುಲ್‌ ಸಕ್ಸೇನಾ ಅವರು ಬಯಲು ಮಾಡಿದ್ದು, ಐಪಿ ವಿಳಾಸ ಸಮೇತ ಕಿಡಿಗೇಡಿಗಳ ಕೃತ್ಯವನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.

ಭಾರತೀಯರ ಬೆಂಬಲ

ಕ್ರಿಕೆಟಿಗ ಅರ್ಶ್‌ದೀಪ್‌ ಸಿಂಗ್‌ಗೆ ಭಾರತೀಯ ಕ್ರಿಕೆಟಿಗರು ಹಾಗೂ ರಾಜಕೀಯ ನಾಯಕರು ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ಪಂಜಾಬ್ ಮೂಲದ ನಾಯಕರು ಕ್ರಿಕೆಟಿಗನನ್ನು ಟೀಕಿಸಿದವರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಭಾರತ ತಂಡದ ಮಾಜಿ ಸ್ಪಿನ್ನರ್‌ ಹಾಗೂ ಆಪ್‌ ನಾಯಕ ಹರ್ಭಜನ್‌ ಸಿಂಗ್‌, ಅರ್ಶ್‌ದೀಪ್‌ ಅವರನ್ನು ದೂರುತ್ತಿರುವವರ ಮೇಲೆ ಕಿಡಿಕಾರಿದ್ದಾರೆ.

“ಯಾರೂ ಉದ್ದೇಶಪೂರ್ವಕವಾಗಿ ಕ್ಯಾಚ್‌ ಬಿಡುವುದಿಲ್ಲ. ನಮ್ಮ ಹುಡುಗನ ಬಗ್ಗೆ ನಮಗೆ ಹೆಮ್ಮೆಯಿದೆ. ಪಾಕಿಸ್ತಾನಿ ಕ್ರಿಕೆಟಿಗರು ಚೆನ್ನಾಗಿ ಆಡಿದರು. ನಮ್ಮ ದೇಶದ ಆಟಗಾರನ ಬಗ್ಗೆಯೇ ಕೆಟ್ಟದಾಗಿ ಕಾಮೆಂಟ್‌ ಮಾಡುವವರದ್ದು ಸಣ್ಣತನ,’ ಎಂದು ಅವರು ಬರೆದುಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Rohit Sharma: ಕ್ರಿಕೆಟ್​ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ರೋಹಿತ್​ ಶರ್ಮ

Rohit Sharma: ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(BCCI secretary Jay Shah) ಈಗಾಗಲೇ ಹೇಳಿಕೆ ನೀಡಿದ್ದಾರೆ.

VISTARANEWS.COM


on

Koo

ಮುಂಬಯಿ: ಟಿ20 ವಿಶ್ವಕಪ್​ ಗೆದ್ದ ಬಳಿಕ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಕೆಲವೇ ದಿನಗಳಲ್ಲಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆದಿತ್ತು. ಅಲ್ಲದೆ ರೋಹಿತ್​ಗೂ ಈ ಕುರಿತು ಮಾಧ್ಯಮದವರು ಪ್ರಶ್ನೆ ಕೇಳಿದ್ದರು. ಸ್ವತಃ ರೋಹಿತ್(rohit sharma retirement)​ ಅವರೇ ತಮ್ಮ ನಿವೃತ್ತಿಯ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮಾತನಾಡಿದ ರೋಹಿತ್​, “ನಾನು ನಿವೃತ್ತಿಯ ಬಗ್ಗೆ ಈಗಲೇ ಏನೂ ಯೋಚನೆ ಮಾಡಿಲ್ಲ. ಜೀವನವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಪ್ರಸ್ತುತ ನಾನು ಚೆನ್ನಾಗಿ ಆಡುತ್ತಿದ್ದು, ಮುಂದಿನ ಕೆಲ ವರ್ಷಗಳ ಕಾಲ ಭಾರತ ಪರ ಟೆಸ್ಟ್​ ಮತ್ತು ಏಕದಿನ ಆಡುವ ಯೋಜನೆಯಲ್ಲಿದ್ದೇನೆ ಎಂದು ಹೇಳುವ ತಮ್ಮ ನಿವೃತ್ತಿ ಕುರಿತ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ಸದ್ಯ ರೋಹಿತ್​ ವಿಶ್ರಾಂತಿಯಲ್ಲಿದ್ದು ಶ್ರೀಲಂಕಾ ವಿರುದ್ಧದ ಸರಣಿಗೂ ಗೈರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ರೋಹಿತ್ ನಾಯಕತ್ವದಲ್ಲಿ, ಜೂನ್​ 29ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.

ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(BCCI secretary Jay Shah) ಈಗಾಗಲೇ ಹೇಳಿಕೆ ನೀಡಿದ್ದಾರೆ. ಜತೆಗೆ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy) ಟೂರ್ನಿಯಲ್ಲಿಯೂ ರೋಹಿತ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ Rohit Sharma: ರೋಹಿತ್ ಶರ್ಮಾ ಮಾಜಿ ಗೆಳತಿ ಮಾಡೆಲ್‌, ನಟಿ ಈಗ ಸನ್ಯಾಸಿನಿ!

ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

Continue Reading

ಕ್ರೀಡೆ

Virat Kohli: ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ಭಾರತೀಯ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದ ವಿರಾಟ್​ ಕೊಹ್ಲಿ

Virat Kohli: ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಸ್ಟಾರ್​ ಶಟ್ಲರ್​, ಪಿ.ವಿ.ಸಿಂಧು(PV Sindhu) ಮತ್ತು ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್(Sharath Kamal) ಜುಲೈ 26ರಿಂದ ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್(Paris Olympics 2024) ಕ್ರೀಡೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ.

VISTARANEWS.COM


on

Virat Kohli
Koo

ಮುಂಬಯಿ: ಇದೇ ತಿಂಗಳ 26ಕ್ಕೆ ಆರಂಭಗೊಳ್ಳಲಿರುವ ಪ್ಯಾರಿಸ್​ ಒಲಿಂಪಿಕ್ಸ್(paris olympics)​ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತೀಯ ಕ್ರೀಡಾಪಟುಗಳಿಗೆ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ(Virat Kohli) ವಿಶೇಷವಾಗಿ ಹಾರೈಸುವ ಮೂಲಕ ಸ್ಫೂರ್ತಿ ತುಂಬಿದ್ದಾರೆ. ಈ ವಿಡಿಯೊವನ್ನು ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ಭಾರತ, ಇಂಡಿಯಾ, ಹಿಂದಿನ ಹೆಸರು ಹಿಂದೂಸ್ಥಾನ. ಒಂದು ಕಾಲದಲ್ಲಿ ಭಾರತವನ್ನು ಪ್ರಪಂಚದಾದ್ಯಂತ ಹಾವಾಡಿಗರು ಮತ್ತು ಆನೆಗಳ ನಾಡು ಎಂದು ಮಾತ್ರ ನೋಡುತ್ತಿದ್ದರು. ಆದರೆ, ಈಗ ಇದು ಬದಲಾಗಿದೆ. ಇಂದು ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಗ್ಲೋಬಲ್ ಟೆಕ್ ಹಬ್ ಎಂದು ಕರೆಯಲ್ಪಡುತ್ತೇವೆ. ಆರ್ಥಿಕವಾಗಿಯೂ ನಮ್ಮ ದೇಶ ಉತ್ತಮವಾಗಿ ಪ್ರಗತಿ ಸಾಧಿಸುತ್ತಿದೆ. ನಾವು ಕ್ರಿಕೆಟ್, ಬಾಲಿವುಡ್, ಸ್ಟಾರ್ಟ್ ಅಪ್ ಯುನಿಕಾರ್ನ್ ಗಳಿಗೆ ಹೆಸರುವಾಸಿಯಾಗಿದ್ದೇವೆ. ಈಗ ನಾವೆಲ್ಲರೂ ಒಲಿಂಪಿಕ್ಸ್​ ಕಡೆ ಗಮನಹರಿಸಿದ್ದೇವೆ. ನಮ್ಮ ದೇಶದ ಕ್ರೀಡಾಪಟುಗಳು ಒಲಿಂಪಿಕ್ಸ್​ನಲ್ಲಿ ಹೆಚ್ಚಿನ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆಲ್ಲುವಂತಾಗಲಿ” ಎಂದು ಹಾರೈಸಿದ್ದಾರೆ.

“ನಮ್ಮ ಸಹೋದರ ಸಹೋದರಿಯರು ಪ್ಯಾರಿಸ್​ನಲ್ಲಿ ಪದಕ ಗೆಲ್ಲುವ ಹಸಿವಿನಲ್ಲಿದ್ದಾರೆ. ಶತಕೋಟಿ ದೇಶವಾಸಿಗಳು ಆಶೀರ್ವಾದ ಅವರ ಮೇಲಿದೆ. ನಿಮ್ಮ ಪ್ರದರ್ಶನವನ್ನು ನೋಡಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ನಿವು ಮಾಡುವ ಸಾಧನೆಯಿಂದ ದೇಶದ ಹೆಸರು ಎಲ್ಲಡೆ ಪಸರಿಸಲಿದೆ” ಎಂದು ಕೊಹ್ಲಿ ಈ ವಿಡಿಯೊದಲ್ಲಿ ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಹೆಮ್ಮೆ ತರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ Paris Olympics 2024 : ಜಿಯೋಸಿನಿಮಾದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​​ ಉಚಿತ ನೇರಪ್ರಸಾರ

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. 30 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​”(India House)​ ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ.

Continue Reading

ಕ್ರೀಡೆ

Viral Video: ಪಾಕ್​ ಮಣಿಸಿ ಲೆಜೆಂಡ್ಸ್ ಟ್ರೋಫಿ ಗೆದ್ದು ವಿಚಿತ್ರವಾಗಿ ಸಂಭ್ರಮಿಸಿದ ಯುವಿ, ಹರ್ಭಜನ್​, ರೈನಾ

Viral Video: ಕೆಲವರು ಪಾಕಿಸ್ತಾನ ತಂಡದಲ್ಲಿರುವ ವೇಗದ ಬೌಲರ್​ಗಳನ್ನು ವ್ಯಂಗ್ಯ ಮಾಡಿದರೇ? ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ, ಪಾಕ್​ ಆಟಗಾರರು ಎರಡು ತಿಂಗಳಿಗೊಮ್ಮೆ ಗಾಯಗೊಂಡು ಆಟದಿಂದ ದೂರ ಸರಿಯುತ್ತಾರೆ.

VISTARANEWS.COM


on

Viral Video
Koo

ಲಂಡನ್​: ಭಾನುವಾರ ನಡೆದಿದ್ದ ಲೆಜೆಂಡ್ಸ್ ವಿಶ್ವ ಚಾಂಪಿಯನ್ ಶಿಪ್(World Championship of Legends 2024) ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿದ್ದ ಬದ್ಧ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಭಾರತ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಗೆಲುವಿನ ಬಳಿಕ ಟೀಮ್​ ಇಂಡಿಯಾ ಆಟಗಾರರಾದ ಯುವರಾಜ್​ ಸಿಂಗ್(Yuvraj Singh)​, ಹರ್ಭಜನ್​ ಸಿಂಗ್(Harbhajan Singh)​ ಮತ್ತು ಸುರೇಶ್​ ರೈನಾ(Suresh Raina) ವಿಚಿತ್ರ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೊ ವೈರಲ್​(Viral Video) ಆಗಿದೆ.

ಎಜ್​ಬಾಸ್ಟನ್​ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಅದ್ಧೂರಿ ಗೆಲುವು ಸಾಧಿಸಿದ ಬಳಿಕ ಡ್ರೆಸ್ಸಿಂಗ್ ರೂಮ್​ಗೆ​ ಮರಳಿದ ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ಗಾಯಾಳಾಗಿ ಕುಂಟುತಾ ಬಂದಂತೆ ಬಾಗಿಲು ತೆರೆದುಕೊಂಡು ನಡೆದು ಬಂದ ವಿಡಿಯೊ ಹಂಚಿಕೊಂಡಿದ್ದಾರೆ.

ಈ ವಿಡಿಯೊ ಕಂಡ ನೆಟ್ಟಿಗರು ಇದು ಪಾಕ್​ ಕ್ರಿಕೆಟ್​ ತಂಡದ ಫಿಟ್​ನೆಸ್​ ಹೇಗಿದೆ ಎನ್ನುವುದನ್ನು ತೋರಿಸಿದಂತಿದೆ ಎಂದು ಹಾಸ್ಯಮಯ ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಪಾಕಿಸ್ತಾನ ತಂಡದಲ್ಲಿರುವ ವೇಗದ ಬೌಲರ್​ಗಳನ್ನು ವ್ಯಂಗ್ಯ ಮಾಡಿದರೇ? ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ, ಪಾಕ್​ ಆಟಗಾರರು ಎರಡು ತಿಂಗಳಿಗೊಮ್ಮೆ ಗಾಯಗೊಂಡು ಆಟದಿಂದ ದೂರ ಸರಿಯುತ್ತಾರೆ. ಫೈನಲ್​ ಪಂದ್ಯದಲ್ಲಿ ಮಿಸ್ಬಾ ಉಲ್ ಹಕ್ ಕೂಡ ಗಾಯಗೊಂಡಿದ್ದರು. ಬಳಿಕ ಇವರನ್ನು ರಾಬಿನ್ನ್ ಉತ್ತಪ್ಪ ಸೇರಿ ಕೆಲ ಆಟಗಾರರ ನೆರವಿನಿಂದ ಮೈದಾನದ ಹೊರಗಡೆ ತರಲಾಗಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಶೋಯೆಬ್ ಮಲಿಕ್ ಸಣ್ಣ ಮಟ್ಟಿನ ಬ್ಯಾಟಿಂಗ್​ ಹೋರಾಟದ ನೆರವಿನಿಂದ 156 ರನ್​ ಬಾರಿಸಿತು. ಮಲಿಕ್ 41 ರನ್ ಗಳಿಸಿದರು. ಉಳಿದಂತೆ ಕಮ್ರಾನ್ ಅಕ್ಮಲ್ 24 ರನ್, ಮಕ್ಸೂದ್ 21 ರನ್ ಮತ್ತು ಕೊನೆಯಲ್ಲಿ ತನ್ವೀರ್ 19 ರನ್ ಗಳಿಸಿದರು. ಭಾರತದ ಪರ ಅನುರೀತ್ ಸಿಂಗ್ ಮೂರು ವಿಕೆಟ್ ಕಿತ್ತರೆ, ಇರ್ಫಾನ್ ಪಠಾಣ್, ಪವನ್ ನೇಗಿ ಮತ್ತು ವಿನಯ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು. ಗುರಿ ಬೆನ್ನತ್ತಿದ ಭಾರತ 19.1 ಓವರ್​ಗಳಲ್ಲಿ 5 ವಿಕೆಟ್​ಗೆ 159 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಇದನ್ನೂ ಓದಿ Legends World Cup 2024 : ಪಾಕಿಸ್ತಾನ ತಂಡವನ್ನು ಸೋಲಿಸಿ ಲೆಜೆಂಡ್ಸ್​ ವಿಶ್ವ ಕಪ್-2024 ಟ್ರೋಫಿ ಗೆದ್ದ ಭಾರತ

ಚೇಸಿಂಗ್​ ವೇಳೆ ಭಾರತಕ್ಕೆ ರಾಯುಡು ಆಸರೆಯಾದರು. 30 ಎಸೆತ ಎದುರಿಸಿದ ಅಂಬಾಟಿ ರಾಯುಡು 50 ರನ್ ಗಳಿಸಿದರು. ಬಳಿಕ ಗುರುಕೀರತ್ ಮಾಣ್ 34 ರನ್, ಯೂಸುಫ್ ಪಠಾಣ್ 30 ರನ್ ಮಾಡಿದರು. ನಾಯಕ ಯುವರಾಜ್ ಅಜೇಯ 15 ರನ್ ಗಳಿಸಿದರು. ಅಂಬಾಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರೆ, ಯೂಸುಫ್ ಪಠಾಣ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Continue Reading

ಕ್ರೀಡೆ

Sanju Samson: ‘ಔಟ್​ ಆಫ್​ ದಿ ಪಾರ್ಕ್​’​ ಸಿಕ್ಸರ್​ ಬಾರಿಸಿದ ಸಂಜು ಸ್ಯಾಮ್ಸನ್​; ವಿಡಿಯೊ ವೈರಲ್

ಸಂಜು ಈ ಬಾರಿಯ ಐಪಿಎಲ್​ನಲ್ಲಿಯೂ ಪ್ರಚಂಡ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದರು. ಇದೇ ಕಾರಣಕ್ಕೆ ಅವರನ್ನು ಟಿ20 ವಿಶ್ವಕಪ್ ಟೂರ್ನಿಗೂ ಆಯ್ಕೆ ಮಾಡಲಾಗಿತ್ತು. ಆದರೆ ಅವರಿಗೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಲಭಿಸಿರಲಿಲ್ಲ.

VISTARANEWS.COM


on

Sanju Samson
Koo

ಹರಾರೆ: ಜಿಂಬಾಬ್ವೆ(IND vs ZIM) ವಿರುದ್ಧ ಭಾನುವಾರ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತ 42 ರನ್​ ಅಂತರದ ಗೆಲುವು ಸಾಧಿಸಿ ಸರಣಿಯನ್ನು 4-1 ಅಂತರದಿಂದ ಕೈವಶ ಮಾಡಿಕೊಂಡಿತ್ತು. ಅಂತಿಮ ಪಂದ್ಯದಲ್ಲಿ ಸಂಜು ಸ್ಯಾಮ್ಸನ್(Sanju Samson)​ ಬಾರಿಸಿದ ಬಿಗ್​ ಹಿಟ್ಟರ್​ ಸಿಕ್ಸರ್​ನ ವಿಡಿಯೊವೊಂದು ಇದೀಗ ವೈರಲ್​ ಆಗಿದೆ.

ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಸಂಜು ಸ್ಯಾಮ್ಸನ್​ ಒಟ್ಟು 45 ಎಸೆತಗಳನ್ನು ಎದುರಿಸಿ 1 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ 58 ರನ್‌ ಬಾರಿಸಿದರು. ಇದರಲ್ಲಿ ಒಂದು ಸಿಕ್ಸರ್​ 110 ಮೀಟರ್(Sanju Samson Smashes 110m Six)​ ದೂರ ಚಿಮ್ಮಿತು. ಈ ಸಿಕ್ಸರ್​ನ ವಿಡಿಯೊವನ್ನು ಸೋನಿ ಸ್ಪೋರ್ಟ್ಸ್​ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಜತೆಗೆ ಚೆಂಡನ್ನು ಕಕ್ಷೆಗೆ ಉಡಾಯಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಸಂಜು ಈ ಬಾರಿಯ ಐಪಿಎಲ್​ನಲ್ಲಿಯೂ ಪ್ರಚಂಡ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದರು. ಇದೇ ಕಾರಣಕ್ಕೆ ಅವರನ್ನು ಟಿ20 ವಿಶ್ವಕಪ್ ಟೂರ್ನಿಗೂ ಆಯ್ಕೆ ಮಾಡಲಾಗಿತ್ತು. ಆದರೆ ಅವರಿಗೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಲಭಿಸಿರಲಿಲ್ಲ.

ಇಲ್ಲಿನ ಹರಾರೆ ಸ್ಪೋರ್ಟ್ಸ್​ ಕ್ಲಬ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತ ಜಿಂಬಾಬ್ವೆ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಜಿಂಬಾಬ್ವೆ 18.3 ಓವರ್​ಗಳಲ್ಲಿ 125 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ 12 ರನ್​ಗಳಿಗೆ ಯಶಸ್ವಿ ಜೈಸ್ವಾಲ್ ಔಟಾಗುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಜತೆಗೆ ಶುಭ್​ಮನ್ ಗಿಲ್​ ಕೂಡ 13 ರನ್​ಗೆ ಸೀಮಿತಗೊಂಡರು. ನಂತರದಲ್ಲಿ ಅಭಿಷೇಕ್ ಶರ್ಮಾ 14 ರನ್​ಗೆ ಔಟಾಗುವ ಮೂಲಕ 40 ರನ್​ಗಳಿಗೆ 3 ವಿಕೆಟ್ ನಷ್ಟ ಮಾಡಿಕೊಂಡಿತು. ಸಂಜು ಸ್ಯಾಮ್ಸನ್ (58) ಹಾಗೂ ರಿಯಾನ್ ಪರಾಗ್​ (22) ತಂಡವನ್ನು ಆರಂಭಿಕ ಆಘಾತದಿಂದ ಕಾಪಾಡಿದರು. ಇವರಿಬ್ಬರೂ ಸೇರಿ ತಂಡದ ಮೊತ್ತವನ್ನು 105 ರನ್​ಗಳಿಗೆ ಕೊಂಡೊಯ್ದರು. 

ಇದನ್ನೂ ಓದಿ IND vs ZIM : ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿಯೂ ವಿಜಯ, 4-1 ಅಂತರದಲ್ಲಿ ಸರಣಿ ಭಾರತದ ಕೈವಶ

ಬೌಲರ್​ಗಳ ಅಬ್ಬರ

ಭಾರತ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ಶೂನ್ಯಕ್ಕೆ ಔಟಾದರು. 15 ರನ್​ಗೆ 2 ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಬಿತ್ತು. ಬಳಿಕ ಡಿಯೋನ್​ ಮೈರ್ಸ್​ 34 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಲ್ಲದೆ ಕೊನೆಯಲ್ಲಿ ಫರಾಜ್ ಅಕ್ರಮ್ 27 ರನ್ ಬಾರಿಸಿದರು. ಮರುಮಣಿ 27 ರನ್ ಬಾರಿಸಿದ್ದು ಹೊರತುಪಡಿಸಿದರೆ ಜಿಂಬಾಬ್ವೆ ತಂಡದಿಂದ ಹೆಚ್ಚು ಪ್ರತಿರೋಧ ಬರಲಿಲ್ಲ. ಇನ್ನೂ 9 ಎಸೆತಗಳು ಇರುವಂತೆಯೇ ಆಲ್​ಔಟ್​ ಆಯಿತು. ಭಾರತ ಪರ ಬೌಲಿಂಗ್​ನಲ್ಲಿ ಮುಕೇಶ್ ಕುಮಾರ್​ 22 ರನ್​ಗಳಿಎ 4 ವಿಕೆಟ್​ ಉರುಳಿಸಿದರೆ ಶಿವಂ ದುಬೆ 2 ವಿಕೆಟ್ ತಮ್ಮದಾಗಿಸಿಕೊಂಡರು.

Continue Reading
Advertisement
ಕ್ರಿಕೆಟ್8 mins ago

Rohit Sharma: ಕ್ರಿಕೆಟ್​ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ರೋಹಿತ್​ ಶರ್ಮ

Paris Olympics 2024
ಕ್ರೀಡೆ12 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್​ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?

Pooja Khedkar
ದೇಶ17 mins ago

Pooja Khedkar: ಎಂಬಿಬಿಎಸ್ ಪ್ರವೇಶಕ್ಕೆ ಒಬಿಸಿ ಕೆನೆಪದರ ರಹಿತ ಪ್ರಮಾಣಪತ್ರ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್

Omar Abdullah
ದೇಶ17 mins ago

‘ಆಜಾದ್‌ ಕಾಶ್ಮೀರ’ ಎನ್ನುತ್ತಿದ್ದ ಒಮರ್‌ ಅಬ್ದುಲ್ಲಾ ಈಗ ಪತ್ನಿಯಿಂದ ಸ್ವಾತಂತ್ರ್ಯ ಕೊಡಿಸಿ ಎಂದು ಕೋರ್ಟ್‌ ಮೊರೆ!

Katrina Pregnancy Rumours Vicky Kaushal Silence
ಬಾಲಿವುಡ್19 mins ago

Katrina Kaif: ಕತ್ರಿನಾ ಕೈಫ್ ಪ್ರೆಗ್ನೆನ್ಸಿ ವದಂತಿಗಳ ಬಗ್ಗೆ ಮೌನ ಮುರಿದ ವಿಕ್ಕಿ ಕೌಶಲ್!

kalaburagi News
ಕಲಬುರಗಿ20 mins ago

Kalaburagi News : ಕಲಬುರಗಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ನದಿಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ

Ban on PTI
ವಿದೇಶ38 mins ago

Ban on PTI: ಇಮ್ರಾನ್‌ ಖಾನ್‌ಗೆ ಬಿಗ್‌ ಶಾಕ್‌! ಪಿಟಿಐ ಪಕ್ಷದ ಮೇಲೆ ನಿಷೇಧ

dcm dk shivakumar
ಪ್ರಮುಖ ಸುದ್ದಿ1 hour ago

DK Shivakumar: `ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಸಿಬಿಐಗೇನು ಕೆಲಸ?’ ಅಕ್ರಮ ಆಸ್ತಿ ಕೇಸ್‌ ಬಗ್ಗೆ ಡಿಕೆ ಶಿವಕುಮಾರ್‌ ಪ್ರಶ್ನೆ

DK Shivakumar cbi supreme court
ಪ್ರಮುಖ ಸುದ್ದಿ2 hours ago

DK Shivakumar: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆಶಿಗೆ ಶಾಕ್‌, ಸಿಬಿಐ ತನಿಖೆ ಕೈಬಿಡಲು ಸುಪ್ರೀಂ ಕೋರ್ಟ್‌ ನಕಾರ

Healthy Heart Tips
ಆರೋಗ್ಯ3 hours ago

Healthy Heart Tips: ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಮಳೆಗಾಲದಲ್ಲಿ ಈ ಏಳು ಆಹಾರಗಳಿಂದ ದೂರವಿರಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ6 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ11 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ23 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ1 day ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ1 day ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

ಟ್ರೆಂಡಿಂಗ್‌