Paris Olympics 2024 : ಲೈಂಗಿಕ ಕಿರುಕುಳದ ಆರೋಪದ ಮೇಲೆ ಈಜಿಪ್ಟ್​​ ಮೊಹಮ್ಮದ್ ಎಲ್ಸಯೀದ್ ಅರೆಸ್ಟ್​​ - Vistara News

ಕ್ರೀಡೆ

Paris Olympics 2024 : ಲೈಂಗಿಕ ಕಿರುಕುಳದ ಆರೋಪದ ಮೇಲೆ ಈಜಿಪ್ಟ್​​ ಮೊಹಮ್ಮದ್ ಎಲ್ಸಯೀದ್ ಅರೆಸ್ಟ್​​

Paris Olympics 2024: ಎಲ್ಸಯೀದ್ ಗ್ರೀಕೋ-ರೋಮನ್ ಕುಸ್ತಿ ಜಗತ್ತಿನಲ್ಲಿ ಉದಯೋನ್ಮುಖ ತಾರೆಯಾಗಿದ್ದಾರೆ. ಮಾರ್ಚ್ 16, 1998 ರಂದು ಜನಿಸಿದ ಅವರು ಜಪಾನ್​ ಟೋಕಿಯೊದಲ್ಲಿ ನಡೆದ 2020 ಬೇಸಿಗೆ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಆಫ್ರಿಕನ್ ಕುಸ್ತಿ ಚಾಂಪಿಯನ್​ಶಿಪ್ ಮತ್ತು ಆಫ್ರಿಕನ್ ಕ್ರೀಡಾಕೂಟ ಮತ್ತು ಮಿಲಿಟರಿ ವಿಶ್ವ ಕ್ರೀಡಾಕೂಟದಲ್ಲಿ ಅನೇಕ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ್ದ (Paris Olympics 2024) ಈಜಿಪ್ಟ್ ದೇಶದ ಕುಸ್ತಿಪಟು ಮೊಹಮ್ಮದ್ ಎಲ್ಸಯೀದ್ ಅವರನ್ನು ಫ್ರೆಂಚ್ ರಾಜಧಾನಿಯಲ್ಲಿ ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧಿಸಲಾಗಿದೆ. ಕೆಫೆಯೊಂದರ ಹೊರಗೆ ಅವರು ಯುವತಿಗೆ ಕಿರುಕುಳ ನೀಡಿದ್ದಾರೆ ಎಂಬ ಶಂಕೆ ಮೇಲೆ ಫ್ರೆಂಚ್ ಪೊಲೀಸರು ಶುಕ್ರವಾರ ಮುಂಜಾನೆ ಬಂಧಿಸಿದ್ದಾರೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ. ಕೆಫೆಯಲ್ಲಿ ನಿಂತಿದ್ದ ಮಹಿಳೆಯ ಪೃಷ್ಠದ ಮೇಲೆ ಹೊಡೆದ ಆರೋಪದ ಮೇಲೆ ಕುಸ್ತಿಪಟುವನ್ನು ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್ಗಳು ತಿಳಿಸಿದ್ದಾರೆ.

ಎಲ್ಸಯೀದ್ ಶಿಸ್ತು ವಿಚಾರಣೆಯನ್ನು ಎದುರಿಸಲಿದ್ದಾರೆ ಎಂದು ಈಜಿಪ್ಟ್ ಒಲಿಂಪಿಕ್ ಸಮಿತಿ ಘೋಷಿಸಿದೆ, ಆರೋಪಗಳು ನಿಜವೆಂದು ಸಾಬೀತಾದರೆ ಅವರು ಸ್ಪರ್ಧೆಯಿಂದ ಆಜೀವ ನಿಷೇಧಕದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಮಿತಿ ತಿಳಿಸಿದೆ. ತನ್ನ ತೂಕದ ವಿಭಾಗದಲ್ಲಿ ಕೊನೆಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಸಯೀದ್​ಗೆ ಅನುಮತಿ ನೀಡಲಾಗಿತ್ತು, ಆದರೆ ಅವರು ಮಿಷನ್ ಪ್ರಧಾನ ಕಚೇರಿಗೆ ಮರಳಲು ವಿಫಲರಾಗಿದ್ದಾರೆ. ಅಲ್ಲದೆ ಫೋನ್​ ಸ್ವಿಚ್ ಆಫ್ ಮಾಡಿದ್ದಾರೆ.

ಎಲ್ಸಯೀದ್ ಗ್ರೀಕೋ-ರೋಮನ್ ಕುಸ್ತಿ ಜಗತ್ತಿನಲ್ಲಿ ಉದಯೋನ್ಮುಖ ತಾರೆಯಾಗಿದ್ದಾರೆ. ಮಾರ್ಚ್ 16, 1998 ರಂದು ಜನಿಸಿದ ಅವರು ಜಪಾನ್​ ಟೋಕಿಯೊದಲ್ಲಿ ನಡೆದ 2020 ಬೇಸಿಗೆ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಆಫ್ರಿಕನ್ ಕುಸ್ತಿ ಚಾಂಪಿಯನ್​ಶಿಪ್ ಮತ್ತು ಆಫ್ರಿಕನ್ ಕ್ರೀಡಾಕೂಟ ಮತ್ತು ಮಿಲಿಟರಿ ವಿಶ್ವ ಕ್ರೀಡಾಕೂಟದಲ್ಲಿ ಅನೇಕ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಎಲ್ಸಯೀದ್ ತನ್ನ ತೂಕ ವರ್ಗದಲ್ಲಿ ಪ್ರಬಲರಾಗಿದ್ದಾರೆ. ಅವರು 2019 ರ ಆಫ್ರಿಕನ್ ಕ್ರೀಡಾಕೂಟ ಮತ್ತು 2019 ರ ಮಿಲಿಟರಿ ವಿಶ್ವ ಕ್ರೀಡಾಕೂಟದಲ್ಲಿ 67 ಕೆಜಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಅಸೋಸಿಯೇಷನ್ ಅವರನ್ನು ಅತ್ಯುತ್ತಮ ಅಂಡರ್-23 ಕುಸ್ತಿಪಟು ಎಂದು ಹೇಳಿದೆ.

ಎಲ್ಸಯೀದ್ ಅವರ ಯಶಸ್ಸು ಕುಸ್ತಿ ಹಾಸಿನ ಅವರ ಸಾಧನೆಗಳಿಗೆ ಸೀಮಿತವಾಗಿಲ್ಲ. ತಮ್ಮ ಕ್ರೀಡಾ ಸ್ಫೂರ್ತಿಯಿಂದಲೂ ಗುರುತಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕುಸ್ತಿಯ ಪ್ರಾಮುಖ್ಯತೆಯನ್ನು ಹೊಗಳಿದ್ದರು.

ಇದನ್ನೂ ಓದಿ: Neeraj Chopra : ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿಯುವ ಅವಕಾಶ ಶ್ರೀಜೇಶ್​ಗೆ ಬಿಟ್ಟುಕೊಟ್ಟ ನೀರಜ್​ ಚೋಪ್ರಾ

ಅವರ ಪ್ರಭಾವಶಾಲಿ ವೃತ್ತಿಜೀವನದ ಹೊರತಾಗಿಯೂ, ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪ್ಯಾರಿಸ್ನಲ್ಲಿ ಎಲ್ಸಯೀದ್ ಅವರ ಇತ್ತೀಚಿನ ಬಂಧನವು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಈ ಘಟನೆಯು ಅವರ ಖ್ಯಾತಿಯನ್ನು ಕಳಂಕಗೊಳಿಸಿದೆ ಮತ್ತು ಕ್ರೀಡೆಯಲ್ಲಿ ಅವರ ಭವಿಷ್ಯದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ಈ ಘಟನೆಯು ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Arshad Nadeem : ಒಲಿಂಪಿಕ್ಸ್ ದಾಖಲೆಯೊಂದಿಗೆ ಬಂಗಾರ ಗೆದ್ದ ಅರ್ಷದ್ ನದೀಮ್​ಗೆ ಪಾಕ್​ ಪ್ರಧಾನಿ ಕೊಟ್ಟ ಬಹುಮಾನ ಕೇವಲ 3 ಲಕ್ಷ ರೂಪಾಯಿ!

Arshad Nadeem : ಗೆಲುವಿನೊಂದಿಗೆ ಪಾಕಿಸ್ತಾನ ಒಲಿಂಪಿಕ್ಸ್​ನಲ್ಲಿ ತನ್ನ ಮೊದಲ ವೈಯಕ್ತಿಕ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಈ ಹಿಂದೆ ಪಾಕಿಸ್ತಾನ 1960, 1968 ಮತ್ತು 1984ರಲ್ಲಿ ಹಾಕಿಯಲ್ಲಿ ಕೇವಲ ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿತ್ತು. ನದೀಮ್ ಅವರ ಗೆಲುವು ಆಟಗಾರ ಮತ್ತು ಪಾಕಿಸ್ತಾನ ಎರಡಕ್ಕೂ ಮಹತ್ವದ ಮೈಲಿಗಲ್ಲಾಗಿದೆ.

VISTARANEWS.COM


on

Arshad Nadeem
Koo

ನವದೆಹಲಿ: ಒಲಿಂಪಿಕ್ ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಪಾಕಿಸ್ತಾನ ಜಾವೆಲಿನ್ ಎಸೆತಗಾರ ಅರ್ಷದ್​ ನದೀಮ್​ಗೆ (Arshad Nadeem) ಅಲ್ಲಿನ ಪ್ರಧಾನಿ ಘೋಷಿಸಿರುವ ಬಹುಮಾನ ಮೊತ್ತ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಪ್ರಧಾನಿ ಶೆಹಬಾಜ್ ಷರೀಫ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಪುರುಷರ ಫೈನಲ್ನಲ್ಲಿ ನದೀಮ್ 92.97 ಮೀಟರ್ ಜಾವೆಲಿನ್ ಎಸೆತದಲ್ಲಿ ದಾಖಲೆ ನಿರ್ಮಿಸುವ ಮೂಲಕ 32 ವರ್ಷಗಳ ನಂತರ ಪಾಕಿಸ್ತಾನದ ಮೊದಲ ಒಲಿಂಪಿಕ್ ಚಿನ್ನದ ಪದಕವನ್ನು ನದೀಮ್ ತಂದುಕೊಟ್ಟಿದ್ದರು. ಆದರೂ ಅವರಿಗೆ ಕೊಟ್ಟಿರುವುದು ಕೇವಲ 3 ಲಕ್ಷ ಭಾರತೀಯ ರೂಪಾಯಿ.

ಗೆಲುವಿನೊಂದಿಗೆ ಪಾಕಿಸ್ತಾನ ಒಲಿಂಪಿಕ್ಸ್​ನಲ್ಲಿ ತನ್ನ ಮೊದಲ ವೈಯಕ್ತಿಕ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಈ ಹಿಂದೆ ಪಾಕಿಸ್ತಾನ 1960, 1968 ಮತ್ತು 1984ರಲ್ಲಿ ಹಾಕಿಯಲ್ಲಿ ಕೇವಲ ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿತ್ತು. ನದೀಮ್ ಅವರ ಗೆಲುವು ಆಟಗಾರ ಮತ್ತು ಪಾಕಿಸ್ತಾನ ಎರಡಕ್ಕೂ ಮಹತ್ವದ ಮೈಲಿಗಲ್ಲಾಗಿದೆ.

ಪಾಕ್ ಪ್ರಧಾನಿಯಿಂದ ಅವಮಾನ; ಡ್ಯಾನಿಶ್ ಕನೇರಿಯಾ

ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ವಿಜಯದ ಹೊರತಾಗಿಯೂ, ನದೀಮ್​​ಗೆ ಪ್ರಧಾನಿಯವರು 10 ಲಕ್ಷ ಪಾಕಿಸ್ತಾನ ರೂಪಾಇ (ಸುಮಾರು 3 ಲಕ್ಷ ಭಾರತ ರೂಪಾಯಿ) ನೀಡಿದರು. ಅಷ್ಟು ಕಡಿಮೆ ಮೊತ್ತ ಕೊಟ್ಟ ಹೊರತಾಗಿಯೂ ಚೆಕ್​ ನೀಡುವ ಚಿತ್ರವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಶರೀಫ್ ತಮ್ಮ ಅಭಿನಂದನಾ ಪೋಸ್ಟ್​ನಲ್ಲಿ “ಶಹಬ್ಬಾಸ್​ ಅರ್ಷದ್​ ಇತಿಹಾಸ ಸೃಷ್ಟಿ ಮಾಡಿದ್ದೀರಿ. ಪಾಕಿಸ್ತಾನದ ಮೊದಲ ಒಲಿಂಪಿಕ್ ಜಾವೆಲಿನ್ ಚಾಂಪಿಯನ್​ ನೀವು. ದೇಶಕ್ಕೆ ಹೆಮ್ಮೆ ತಂದಿದ್ದಿರಿ ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನ ಪ್ರಧಾನಿ ನದೀಮ್​​ ನೀಡಿದ ಗೌರವದ ಬಗ್ಗೆ ಪ್ರತಿಕ್ರಿಯಿಸಿದ ಕನೇರಿಯಾ, ಈ ಮೊತ್ತವನ್ನು ಒಲಿಂಪಿಕ್ ಚಿನ್ನದ ಪದಕ ವಿಜೇತ ಮತ್ತು ಅವರ ಗಮನಾರ್ಹ ಸಾಧನೆಗೆ ಅಗೌರವ ಎಂದು ಕರೆದಿದ್ದಾರೆ. ಇತರ ದೇಶಗಳು ತಮ್ಮ ಒಲಿಂಪಿಕ್ ಹೀರೋಗಳಿಗೆ ನೀಡುವ ಬಹುಮಾನದ ಮೊತ್ತಕ್ಕೆ ಹೋಲಿಸಿದರೆ ಬಹುಮಾನದ ಮೊತ್ತ ಏನೂ ಅಲ್ಲ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಹೇಳಿದ್ದಾರೆ.

ನದೀಮ್​​ಗೆ ಉತ್ತಮ ಮಾನ್ಯತೆ ನೀಡುವಂತೆ ಕನೇರಿಯಾ ಆಗ್ರಹ

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ನದೀಮ್ ಕೂಡ ಸುಮಾರು 42 ಲಕ್ಷ ರೂ.ಗಳನ್ನು ಬಹುಮಾನವಾಗಿ ಪಡೆಯುತ್ತಾರೆ. ಅಂಥದ್ದರಲ್ಲಿ ಕೇವಲ 10 ಲಕ್ಷ ರೂಪಾಯಿ ಘೋಷಿಸಿದ್ದೀರಿ. ಅದರಲ್ಲಿ 243,069 ರೂಪಾಯಿ ಪ್ಯಾರಿಸ್​ಗೆ ಹೋಗುವ ವಿಮಾನದ ಟಿಕೆಟ್​ಗೆ ಇದೆ ಎಂದು ಕನೇರಿಯಾ ಹೇಳಿದ್ದಾರೆ.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆಗಾಗಿ ನದೀಮ್ ಅವರಿಗೆ ಹೆಚ್ಚು ಬಹುಮಾನವನ್ನು ನೀಡುವಂತೆ ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ಕನೇರಿಯಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಮಾನ್ಯ ಪ್ರಧಾನ ಮಂತ್ರಿಯವರೇ, ಕನಿಷ್ಠ ಆಕರ್ಷಕ ಅಭಿನಂದನೆಗಳನ್ನು ಸಲ್ಲಿಸಿ. ನೀವು ನೀಡಿದ ಸಣ್ಣ ಮೊತ್ತದ ಚಿತ್ರವನ್ನು ತೆಗೆಯಿರಿ. ಈ ಮೊತ್ತವು ತುಂಬಾ ಸಣ್ಣದು. ಅವರಿಗೆ ವಿಮಾನ ಟಿಕೆಟ್ ಗಳನ್ನು ಸಹ ಖರೀದಿಸಲು ಸಾಧ್ಯವಿಲ್ಲ. ಅರ್ಷದ್ ಅವರ ಶ್ರಮವನ್ನು ಪರಿಗಣಿಸಿದರೆ ಇದು ಅವರಿಗೆ ಮತ್ತು ರಾಷ್ಟ್ರಕ್ಕೆ ಮಾಡಿದ ಅವಮಾನ” ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕಂಚಿನ ಪದಕ ಗೆದ್ದಿರುವ ಸ್ಪರ್ಧಿಗಳಿಗೆ ಆಯಾ ರಾಜ್ಯಗಳೇ ಕೋಟಿ ಕೋಟಿ ರೂಪಾಯಿ ಬಹುಮಾನ ನೀಡುತ್ತಿದೆ. ಅಂಥದ್ದರಲ್ಲಿ ಪಾಕಿಸ್ತಾನದ ಪ್ರಧಾನಿ ಕೇವಲ 10 ಲಕ್ಷ ರೂಪಾಯಿ ಕೊಟ್ಟು ಟೀಕೆಗೆ ಒಳಗಾಗಿದ್ದಾರೆ.

Continue Reading

ಪ್ರಮುಖ ಸುದ್ದಿ

Aman sehrawat : ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್​​; ಭಾರತದ ಒಲಿಂಪಿಕ್ಸ್ ಪದಕಗಳ ಸಂಖ್ಯೆ 6ಕ್ಕೆ ಏರಿಕೆ

Aman sehrawat : ಅಮನ್ ಅವರ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 5ಕ್ಕೆ ಏರಿದೆ. ಅದರಲ್ಲಿ ನಾಲ್ಕು ಕಂಚಿನ ಪದಕವಾದರೆ ಒಂದು ಬೆಳ್ಳಿಯ ಪದಕವಾಗಿದೆ. ಬೆಳ್ಳಿಯನ್ನು ನೀರಜ್​ ಗೆದ್ದಿದ್ದರೆ, ಶೂಟರ್​​ ಮನು ಭಾಕರ್ ಎರಡು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೊಂದು ಮಿಶ್ರ ತಂಡದಲ್ಲಿ ಸರಬ್​ಜೋತ್ ಸಿಂಗ್​ ಜತೆಗೆ. ಪುರುಷರ ಶೂಟಿಂಗ್​ನಲ್ಲಿ ಸ್ವಪ್ನಿಲ್ ಕುಸಾಳೆ ಮತ್ತೊಂದು ಪದಕ ಗೆದ್ದಿದ್ದರು. ಮತ್ತೊಂದು ಕಂಚಿನ ಪದಕ ಹಾಕಿ ತಂಡದ ಮೂಲಕ ದೊರಕಿದೆ.

VISTARANEWS.COM


on

Aman Sehrawat
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ ನ ಪುರುಷರ ಕುಸ್ತಿ 57 ಕೆ. ಜಿ ವಿಭಾಗದಲ್ಲಿ ಭಾರತದ ಅಮನ್​ ಸೆಹ್ರಾವತ್​ ಕಂಚಿನ ಪದಕ ಗೆದ್ದಿದ್ದಾರೆ. ಅವರು ಪೊರ್ಟೊ ರಿಕೊ ದೇಶದ ಡೇರಿಯನ್​ ಕ್ರೂಜ್ ವಿರುದ್ಧ 13-5 ಅಂಕಗಳ ಅಂತರದ ಜಯ ಸಾಧಿಸುವ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದರು. 21 ವರ್ಷದ ಅಮನ್​ ಚೊಚ್ಚಲ ಒಲಿಂಪಿಕ್ಸ್​ನಲ್ಲಿಯೇ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದರು. ಇದರೊಂದಿಗೆ ಭಾರತಕ್ಕೆ ಕುಸ್ತಿಯಲ್ಲಿ ಒಂದು ಕಂಚಿನ ಪದಕ ಒಲಿಯಿತು. ಕುಸ್ತಿ ಹಾಗೂ ಬಾಕ್ಸಿಂಗ್ ಭಾರತದ ಪಾಲಿಗೆ ಪದಕ ತರುವ ವಿಭಾಗವಾಗಿದ್ದರೂ ಈ ಬಾರಿ ಹೆಚ್ಚು ನಿರಾಸೆ ಉಂಟಾಗಿತ್ತು. ಇದೀಗ ಕಂಚಿನ ಪದಕ ಗೆಲ್ಲುವ ಮೂಲಕ ಆ ಕೊರತೆಯನ್ನು ನೀಗಿಸಿದ್ದಾರೆ.

ಅಮನ್ ಅವರ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿದೆ. ಅದರಲ್ಲಿ 5 ಕಂಚಿನ ಪದಕವಾದರೆ ಒಂದು ಬೆಳ್ಳಿಯ ಪದಕವಾಗಿದೆ. ಬೆಳ್ಳಿಯನ್ನು ನೀರಜ್​ ಗೆದ್ದಿದ್ದರೆ, ಶೂಟರ್​​ ಮನು ಭಾಕರ್ ಎರಡು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೊಂದು ಮಿಶ್ರ ತಂಡದಲ್ಲಿ ಸರಬ್​ಜೋತ್ ಸಿಂಗ್​ ಜತೆಗೆ. ಪುರುಷರ ಶೂಟಿಂಗ್​ನಲ್ಲಿ ಸ್ವಪ್ನಿಲ್ ಕುಸಾಳೆ ಮತ್ತೊಂದು ಪದಕ ಗೆದ್ದಿದ್ದರು. ಮತ್ತೊಂದು ಕಂಚಿನ ಪದಕ ಹಾಕಿ ತಂಡದ ಮೂಲಕ ದೊರಕಿದೆ. ಇದೀಗ ಅಮನ್​ ಒಂದು ಪದಕ ಗೆದ್ದಿದ್ದಾರೆ.

ಕಂಚಿನ ಪದಕ ಹಣಾಹಣಿಯಲ್ಲಿ ಅಮನ್ ಆರಂಭದಲ್ಲಿಯೇ ಕೆಚ್ಚೆದೆ ತೋರಿದರು. ಎದುರಾಳಿ ಮೇಳೆ ಸಂಪೂರ್ಣ ಮೆಲುಗೈ ಸಾಧಿಸಿದರು. ಅವರ ಬಿಗಿ ಹಿಡಿತಕ್ಕೆ ಎದುರಾಳಿಯ ಲಯ ತಪ್ಪಿತು. ಹೀಗಾಗಿ ಅಮನ್​ ನಿರಂತರವಾಗಿ ಅಂಕಗಳನ್ನು ಗೆದ್ದರು. ಕೊನೇ ಹಂತದಲ್ಲಿ ಸುಸ್ತಾದ ಎದುರಾಳಿ ಸೋಲೊಪ್ಪಿಕೊಂಡರು.

ಪ್ರೀ ಕ್ವಾರ್ಟರ್​ ಮತ್ತು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವು ಸಾಧಿಸಿದ್ದ ಅಮನ್​ ಬಳಿಕ ನಡೆದ ಸೆಮಿ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ರೀ ಹಿಗುಚಿ ವಿರುದ್ಧ ಸೋಲು ಕಂಡಿದ್ದರು. ಹಿಗುಚಿ ರಿಯೊ ಒಲಿಂಪಿಕ್ಸ್‌ನಲ್ಲಿ (2016) ಬೆಳ್ಳಿ ಗೆದ್ದ ಸಾಧಕನಾಗಿದ್ದರು.

ಗುರುವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಮನ್​ ಅಲ್ಬೆನಿಯಾದ ಝೆಲಿಮ್ಖಾನ್ ಅಬಕರೋವ್ ವಿರುದ್ಧ 12-0 ಅಂತರದ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಾರ್ತ್ ಮ್ಯಾಸೆಡೋನಿಯಾದ ವ್ಲಾಡಿಮಿರ್ ಎಗೊರೊವ್ ವಿರುದ್ಧ 10-0 ಅಂತರದ ಮಣಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಅಮನ್​ ಅವರಿಗೆ ಇದು ಚೊಚ್ಚಲ ಒಲಿಂಪಿಕ್ಸ್​ ಟೂರ್ನಿಯಾಗಿದೆ. ಮೊದಲ ಪ್ರಯತ್ನದಲ್ಲೇ ಅವರು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ನಡೆದಿದ್ದ ಏಷ್ಯನ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಅಮನ್​ ಅವರದ್ದಾಗಿದೆ.

ಇದನ್ನೂ ಓದಿ: Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಕಳೆದ ಟೋಕಿಯೊ ಬೆಳ್ಳಿ ಪದಕ ಗೆದ್ದಿದ್ದ ರವಿ ದಹಿಯಾ ಅವರನ್ನು ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಮಣಿಸುವ ಮೂಲಕ ಅಮನ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇದೀಗ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕಂಚಿನ ಪದಕ ನಿರೀಕ್ಷೆಯಲ್ಲಿದ್ದಾರೆ.

Continue Reading

ಕ್ರೀಡೆ

Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

Vinesh Phogat : ಮಹಿಳೆಯರ 50 ಕೆಜಿ ವಿಭಾಗದ ಫೈನಲ್​ ವೇಳೆ ನಿಗಿದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದ ಕಾರಣ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. 29 ವರ್ಷದ ಕುಸ್ತಿಪಟು ಎದೆಗುಂದಿ ಮರುದಿನ ಅವರು ನಿವೃತ್ತಿ ಘೋಷಿಸಿದ್ದಾರೆ. ವಿನೇಶ್ ಅವರು ಪದಕವೂ ಅಲ್ಲ ಸ್ಪರ್ಧೆಯಲ್ಲಿ ಅವರಿಗೆ ಕೊನೇ ಸ್ಥಾನ ಸಿಗಲಿದೆ.

VISTARANEWS.COM


on

Vinesh Phogat
Koo

ಬೆಂಗಳೂರು : ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರ ಒಲಿಂಪಿಕ್ ಅನರ್ಹತೆ ಮತ್ತು ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಜಂಟಿ ಬೆಳ್ಳಿ ಪದಕಕ್ಕಾಗಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್)ಗೆ ಸಲ್ಲಿಸಿದ ಮನವಿಯ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್​​ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕಗಳನ್ನು ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಬಾಕ್​ ಹೇಳಿದ್ದಾರೆ. ಆದಾಗ್ಯೂ, ಚಿನ್ನದ ಪದಕದ ಪಂದ್ಯಕ್ಕೆ ಮುಂಚಿತವಾಗಿ ಅನರ್ಹಗೊಂಡ ಭಾರತೀಯ ಕುಸ್ತಿಪಟುವಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ ಎಂಬುದಾಗಿ ನುಡಿದಿದ್ದಾರೆ.

ಮಹಿಳೆಯರ 50 ಕೆಜಿ ವಿಭಾಗದ ಫೈನಲ್​ ವೇಳೆ ನಿಗಿದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದ ಕಾರಣ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. 29 ವರ್ಷದ ಕುಸ್ತಿಪಟು ಎದೆಗುಂದಿ ಮರುದಿನ ಅವರು ನಿವೃತ್ತಿ ಘೋಷಿಸಿದ್ದಾರೆ. ವಿನೇಶ್ ಅವರು ಪದಕವೂ ಅಲ್ಲ ಸ್ಪರ್ಧೆಯಲ್ಲಿ ಅವರಿಗೆ ಕೊನೇ ಸ್ಥಾನ ಸಿಗಲಿದೆ.

ಪ್ಯಾರಿಸ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಥಾಮಸ್, ಸಿಎಎಸ್ ನಿರ್ಧಾರಕ್ಕೆ ಐಒಸಿ ಬದ್ಧವಾಗಿರುತ್ತದೆ ಎಂದು ಹೇಳಿದರು. ಎರಡು ಬೆಳ್ಳಿ ಪದಕಗಳನ್ನು ನೀಡುವುದು ತಪ್ಪು ಎಂದರು.

ಅಂತಾರಾಷ್ಟ್ರೀಯ ಒಕ್ಕೂಟದ ನಿಯಮಗಳನ್ನು ಎಲ್ಲರೂ ಅನುಸರಿಸಬೇಕು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಫೆಡರೇಶನ್, ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಕುಸ್ತಿಪಟು ನಿರ್ದಿಷ್ಟ ತಿಳುವಳಿಕೆಯನ್ನು ಹೊಂದಿರಬೇಕು. ಮಾನವೀಯತೆ ಸರಿಯಾಗಿರಬಹುದು. ಆದರೆ, ಒಕ್ಕೂಟ ಅಥವಾ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾದಾಗ ಎಲ್ಲರವನ್ನೂ ಗೌರವಿಸಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Paris Olympics 2024 : ಲೈಂಗಿಕ ಕಿರುಕುಳದ ಆರೋಪದ ಮೇಲೆ ಈಜಿಪ್ಟ್​​ ಮೊಹಮ್ಮದ್ ಎಲ್ಸಯೀದ್ ಅರೆಸ್ಟ್​​

ನಾವು 100 ಗ್ರಾಂ ಹೆಚ್ಚಳವಾಗಲಿ, 102 ಗ್ರಾಂ ಹೆಚ್ಚಳವಾದರೂ ಒಂದೇ. ಪ್ರತಿ ಸೆಕೆಂಡ್​ಗೆ ಸಾವಿರದಷ್ಟು ಫಲಿತಾಂಶಗಳ ವ್ಯತ್ಯಾಸ ಬರುವಾಗ ಯಾವುದು ಸರಿಯಾಗಿರುತ್ತದೆ. ನಿಯಮಗಳೇ ಸರಿ ಎಂದು ಬಾಕ್ ಹೇಳಿದ್ದಾರೆ.

ವಿನೇಶ್ ಅರ್ಜಿ ವಿಚಾರಣೆ ನಡೆಸಿದ ಸಿಎಎಸ್

ತನ್ನ ಅನರ್ಹತೆಯನ್ನು ರದ್ದುಗೊಳಿಸಿ ಜಂಟಿ ಬೆಳ್ಳಿ ಪದಕವನ್ನು ನೀಡುವಂತೆ ವಿನೇಶ್ ಸಲ್ಲಿಸಿದ್ದ ಮನವಿಯನ್ನು ಸಿಎಎಸ್ ಶುಕ್ರವಾರ ಸ್ವೀಕರಿಸಿದೆ. ಆಗಸ್ಟ್ 7 ರ ಗುರುವಾರ ನಡೆದ ಮಹಿಳೆಯರ 50 ಕೆಜಿ ಫೈನಲ್​​ನಲ್ಲಿ ಸ್ಪರ್ಧಿಸುವ ಪ್ರಯತ್ನದಲ್ಲಿ ವಿನೇಶ್ ಫೋಗಟ್ ಆರಂಭದಲ್ಲಿ ತನ್ನ ಅನರ್ಹತೆಯನ್ನು ರದ್ದುಗೊಳಿಸಲು ಮತ್ತು ಮತ್ತೊಂದು ತೂಕವನ್ನು ನಡೆಸಲು ಮನವಿ ಮಾಡಿದ್ದರು. ಆದಾಗ್ಯೂ, ಫೈನಲ್​ಗೆ ಬಹಳ ಸೀಮಿತ ಸಮಯ ಉಳಿದಿದ್ದರಿಂದ ಸಿಎಎಸ್ ಮೇಲ್ಮನವಿಯ ಉಪಯೋಗವಾಗಲಿಲ್ಲ. ಇದೀಗ ವಿನೇಶ್ ತನಗೆ ಜಂಟಿ ಬೆಳ್ಳಿ ಪದಕ ನೀಡುವಂತೆ ವಿನಂತಿಸಿದ್ದಾರೆ/

Continue Reading

ಕ್ರೀಡೆ

Neeraj Chopra : ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿಯುವ ಅವಕಾಶ ಶ್ರೀಜೇಶ್​ಗೆ ಬಿಟ್ಟುಕೊಟ್ಟ ನೀರಜ್​ ಚೋಪ್ರಾ

Neeraj Chopra : ಭಾರತದ ಧ್ವಜಧಾರಿಯಾಗಲು ನೀರಜ್ ಚೋಪ್ರಾ ಹೇಗೆ ಅನುಮತಿ ನೀಡಿದರು ಎಂಬುದನ್ನು ಆಗಸ್ಟ್ 9 ಶುಕ್ರವಾರದಂದು ಪಿಟಿ ಉಷಾ ಹೇಳಿದ್ದಾರೆ. ಶೂಟರ್ ಮನು ಭಾಕರ್ ಅವರೊಂದಿಗೆ ಶ್ರೀಜೇಶ್ ಭಾರತೀಯ ತಂಡದ ಜಂಟಿ ಧ್ವಜಧಾರಿಯಾಗಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ವರದಿಗಳ ಪ್ರಕಾರ, ಭಾರತದ ಗೋಲ್ ಕೀಪರ್ ಮತ್ತು ನೀರಜ್ ಇಬ್ಬರೂ ಮನು ಅವರೊಂದಿಗೆ ಧ್ವಜಧಾರಿಯಾಗುವ ಅವಕಾಶವಿತ್ತು. ಆದರೆ, ನೀರಜ್ ಅವರು ಶ್ರೀಜೇಶ್​ಗೆ ಕೊಡುವಂತೆ ಸಲಹೆ ಕೊಟ್ಟಿದ್ದಾರೆ.

VISTARANEWS.COM


on

Neeraj Chopra
Koo

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಬೆಳ್ಳಿ ಪದಕ ಗೆದ್ದಿರುವ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ (Neeraj Chopra) ಭಾರತದ ಅಥ್ಲೀಟ್​ಗಳ ಹೃದಯವನ್ನು ಮತ್ತೊಂದು ಬಾರಿ ಗೆದ್ದಿದ್ದಾರೆ. ಹೇಗೆಂದರೆ ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿದು ಸಾಗಲು ತಮಗಿದ್ದ ಅವಕಾಶವನ್ನು ಅವರು ಹಾಕಿ ತಂಡದ ಗೋಲ್​ ಕೀಪರ್​ಗೆ ನೀಡಿ ದೊಡ್ಡವರು ಎನಿಸಿಕೊಂಡಿದ್ದಾರೆ. ಈ ವಿಷಯವನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಬಹಿರಂಗಪಡಿಸಿದ್ದಾರೆ.

ಭಾರತದ ಧ್ವಜಧಾರಿಯಾಗಲು ನೀರಜ್ ಚೋಪ್ರಾ ಹೇಗೆ ಅನುಮತಿ ನೀಡಿದರು ಎಂಬುದನ್ನು ಆಗಸ್ಟ್ 9 ಶುಕ್ರವಾರದಂದು ಪಿಟಿ ಉಷಾ ಹೇಳಿದ್ದಾರೆ. ಶೂಟರ್ ಮನು ಭಾಕರ್ ಅವರೊಂದಿಗೆ ಶ್ರೀಜೇಶ್ ಭಾರತೀಯ ತಂಡದ ಜಂಟಿ ಧ್ವಜಧಾರಿಯಾಗಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ವರದಿಗಳ ಪ್ರಕಾರ, ಭಾರತದ ಗೋಲ್ ಕೀಪರ್ ಮತ್ತು ನೀರಜ್ ಇಬ್ಬರೂ ಮನು ಅವರೊಂದಿಗೆ ಧ್ವಜಧಾರಿಯಾಗುವ ಅವಕಾಶವಿತ್ತು. ಆದರೆ, ನೀರಜ್ ಅವರು ಶ್ರೀಜೇಶ್​ಗೆ ಕೊಡುವಂತೆ ಸಲಹೆ ಕೊಟ್ಟಿದ್ದಾರೆ.

ಉಷಾ ಈಗ ಶ್ರೀಜೇಶ್ ಅವರ ನಿಸ್ವಾರ್ಥ ಕಾರ್ಯವನ್ನು ಬಹಿರಂಗಪಡಿಸಿದ್ದಾರೆ. ಅವರನ್ನು ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯನ್ನಾಗಿ ಮಾಡುವಂತೆ ಕೋರಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಶ್ರೀಜೇಶ್ ಭಾರತದ ಧ್ವಜಧಾರಿಯಾಗಲು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನಾನು ನೀರಜ್ ಚೋಪ್ರಾ ಅವರೊಂದಿಗೆ ಮಾತನಾಡಿದ್ದೇನೆ. ಸಮಾರೋಪ ಸಮಾರಂಭದಲ್ಲಿ ಶ್ರೀಜೇಶ್ ಧ್ವಜಧಾರಿಯಾಗಬೇಕೆಂದು ಅವರು ಒಪ್ಪಿಕೊಂಡಿದ್ದಾರೆ. ಅವರಿಗೆ ಅಭಿನಂದನೆ ಎಂದು ಪಿಟಿ ಉಷಾ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 10ರಂದು ಭಾರತಕ್ಕೆ ಯಾವ್ಯಾವ ಸ್ಪರ್ಧೆಗಳಿವೆ? ಇಲ್ಲಿದೆ ವಿವರ

ಮೇಡಂ, ನೀವು ನನ್ನನ್ನು ಕೇಳಿದ್ದರೂ ನಾನು ಶ್ರೀಜೇಶ್ ಅವರ ಹೆಸರನ್ನೇ ಸೂಚಿಸುತ್ತಿದ್ದೆ ಎಂದು ನೀರಜ್ ಅವರು ನನಗೆ ಹೇಳಿದರು. ಇದು ಶ್ರೀಜೇಶ್ ಬಗ್ಗೆ ನೀರಜ್ ಹೊಂದಿರುವ ಅಪಾರ ಗೌರವ ಮತ್ತು ಭಾರತೀಯ ಕ್ರೀಡೆಗೆ ಅವರು ನೀಡಿದ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಉಷಾ ಅವರು ಹೇಳಿದ್ದಾರೆ.

ಶ್ರೀಜೇಶ್ 2 ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಕ್ರೀಡೆಗೆ ಪ್ರಶಂಸನೀಯ ಸೇವೆ ಸಲ್ಲಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಲು ಶ್ರೀಜೇಶ್ “ಭಾವನಾತ್ಮಕ ಮತ್ತು ಜನಪ್ರಿಯ ಆಯ್ಕೆ” ಎಂದು ಉಷಾ ಅಭಿಪ್ರಾಯಪಟ್ಟಿದ್ದಾರೆ.

“ಶ್ರೀಜೇಶ್ ಅವರು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಭಾರತೀಯ ಹಾಕಿಗೆ ಮತ್ತು ಸಾಮಾನ್ಯವಾಗಿ ಭಾರತೀಯ ಕ್ರೀಡೆಗೆ ಪ್ರಶಂಸನೀಯ ಸೇವೆ ಸಲ್ಲಿಸಿದ್ದಾರೆ” ಎಂದು ಅವರು ಹೇಳಿದರು.

ಶ್ರೀಜೇಶ್ ಮತ್ತು ನೀರಜ್ ಅವರ ಅದ್ಭುತ ಒಲಿಂಪಿಕ್ ಅಭಿಯಾನಗಳು

ಶ್ರೀಜೇಶ್ ಮತ್ತು ನೀರಜ್ ಇಬ್ಬರೂ ಈ ವರ್ಷ ಪ್ಯಾರಿಸ್​​ನಲ್ಲಿ ಅದ್ಭುತ ಒಲಿಂಪಿಕ್ ಅಭಿಯಾನ ಕಂಡಿದ್ದಾರೆ. ಒಲಿಂಪಿಕ್ಸ್ನಲ್ಲಿ ಸತತ ಎರಡನೇ ಕಂಚಿನ ಪದಕ ಗಳಿಸಿರುವ ಭಾರತೀಯ ಗೋಲ್ ಕೀಪರ್ ಅವರ ತಂಡದ ಪ್ರಮುಖ ತಾರೆಗಳಲ್ಲಿ ಒಬ್ಬರಾಗಿದ್ದಾರೆ. 1972ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಸತತ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಜಾವೆಲಿನ್ ಸ್ಪರ್ಧೆಯಲ್ಲಿ ನೀರಜ್ 89.45 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಗಳಿಸಿದ್ದಾರೆ. ಇದು ಅವರ ವೃತ್ತಿಜೀವನದ ಎರಡನೇ ಅತ್ಯುತ್ತಮ ಎಸೆತ. ಆದರೆ, ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆದು ಹೊಸ ಒಲಿಂಪಿಕ್ ದಾಖಲೆ ನಿರ್ಮಿಸಿ ಚಿನ್ನ ಗೆದ್ದರು.

Continue Reading
Advertisement
PMAY
ದೇಶ39 mins ago

PMAY: ನಗರ ಪ್ರದೇಶಗಳ ಬಡವರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್;‌ 1 ಕೋಟಿ ಮನೆ ನಿರ್ಮಾಣಕ್ಕೆ ಕೇಂದ್ರ ಅಸ್ತು

Arshad Nadeem
ಪ್ರಮುಖ ಸುದ್ದಿ51 mins ago

Arshad Nadeem : ಒಲಿಂಪಿಕ್ಸ್ ದಾಖಲೆಯೊಂದಿಗೆ ಬಂಗಾರ ಗೆದ್ದ ಅರ್ಷದ್ ನದೀಮ್​ಗೆ ಪಾಕ್​ ಪ್ರಧಾನಿ ಕೊಟ್ಟ ಬಹುಮಾನ ಕೇವಲ 3 ಲಕ್ಷ ರೂಪಾಯಿ!

Plane Crash
ಪ್ರಮುಖ ಸುದ್ದಿ1 hour ago

Plane Crash: ವಿಮಾನ ಪತನ; 62 ಪ್ರಯಾಣಿಕರು ಸೇರಿ ಎಲ್ಲ 70 ಮಂದಿಯ ದುರ್ಮರಣ, Videoಗಳು ಇವೆ

Aman Sehrawat
ಪ್ರಮುಖ ಸುದ್ದಿ1 hour ago

Aman sehrawat : ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್​​; ಭಾರತದ ಒಲಿಂಪಿಕ್ಸ್ ಪದಕಗಳ ಸಂಖ್ಯೆ 6ಕ್ಕೆ ಏರಿಕೆ

Creamy Layer
ದೇಶ2 hours ago

Creamy Layer: ಎಸ್‌ಸಿ, ಎಸ್‌ಟಿಗೆ ಕೆನೆಪದರ ಮೀಸಲಾತಿ ಇಲ್ಲ; ಸುಪ್ರೀಂ ಆದೇಶದ ಬೆನ್ನಲ್ಲೇ ಕೇಂದ್ರ ಸ್ಪಷ್ಟನೆ

Bengaluru News
ಕರ್ನಾಟಕ2 hours ago

Bengaluru News: ಕಾರ್ಪೊರೇಟ್ ಕಂಪನಿಗಳು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಿಎಸ್‌ಆರ್ ಹಣ ವಿನಿಯೋಗಿಸಲಿ: ದಿನೇಶ್ ಗುಂಡೂರಾವ್

Tarsem Singh
ದೇಶ3 hours ago

Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Vinesh Phogat
ಕ್ರೀಡೆ3 hours ago

Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

ಕರ್ನಾಟಕ3 hours ago

NEET UG 2024: ಯುಜಿ ನೀಟ್: ಆ.12, 13ಕ್ಕೆ ದಾಖಲಾತಿ ಪರಿಶೀಲನೆ

Paris Olympics 2024
ಕ್ರೀಡೆ3 hours ago

Paris Olympics 2024 : ಲೈಂಗಿಕ ಕಿರುಕುಳದ ಆರೋಪದ ಮೇಲೆ ಈಜಿಪ್ಟ್​​ ಮೊಹಮ್ಮದ್ ಎಲ್ಸಯೀದ್ ಅರೆಸ್ಟ್​​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 day ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 day ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 day ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ7 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌