Paris Olympics 2024: ಪರ್‌ಫೆಕ್ಟ್‌ ಕ್ಲಿಕ್‌ ಎಂದರೆ ಇದು; ಭಾರಿ ಸದ್ದು ಮಾಡುತ್ತಿದೆ ಒಲಿಂಪಿಕ್ಸ್‌ನ ಈ ವೈರಲ್‌ ಫೋಟೊ - Vistara News

ಕ್ರೀಡೆ

Paris Olympics 2024: ಪರ್‌ಫೆಕ್ಟ್‌ ಕ್ಲಿಕ್‌ ಎಂದರೆ ಇದು; ಭಾರಿ ಸದ್ದು ಮಾಡುತ್ತಿದೆ ಒಲಿಂಪಿಕ್ಸ್‌ನ ಈ ವೈರಲ್‌ ಫೋಟೊ

Paris Olympics 2024: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಈಗಾಗಲೇ ವಿಶ್ವದ ಕ್ರೀಡಾಸಕ್ತರ ಗಮನ ಸೆಳೆದಿದೆ. ಈ ಮಧ್ಯೆ ಸ್ಪರ್ಧೆಯ ನಡುವೆ ಎಎಫ್‌ಪಿ ಛಾಯಾಗ್ರಾಹಕ ಜೆರೋಮ್ ಬ್ರೌಲೆಟ್ ಕ್ಲಿಕ್ಕಿಸಿದ ಅಪರೂಪದ ಫೋಟೊವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಬ್ರೆಜಿಲ್‌ನ ಸರ್ಫಿಂಗ್‌ ಸ್ಪರ್ಧಿ ಗೇಬ್ರಿಯಲ್ ಮೆಡಿನಾ ನೀರಿನ ಮೇಲೆ ಜಿಗಿದು ಗಾಳಿಯಲ್ಲಿ ತೇಲುತ್ತಿರುವ ಕ್ಷಣದಲ್ಲಿ ಸೆರೆ ಹಿಡಿದ ಫೋಟೊ ಇದಾಗಿದೆ.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್‌: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಈಗಾಗಲೇ ವಿಶ್ವದ ಕ್ರೀಡಾಸಕ್ತರ ಗಮನ ಸೆಳೆದಿದೆ (Paris Olympics 2024). ಈ ಬಾರಿ ಭಾರತದ ಸಾಧನೆಯೂ ಉತ್ತಮವಾಗಿದ್ದು, ಎರಡು ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಈ ಮಧ್ಯೆ ಸ್ಪರ್ಧೆಯ ನಡುವೆ ಎಎಫ್‌ಪಿ ಛಾಯಾಗ್ರಾಹಕ (AFP photographer) ಜೆರೋಮ್ ಬ್ರೌಲೆಟ್ (Jerome Brouillet) ಕ್ಲಿಕ್ಕಿಸಿದ ಅಪರೂಪದ ಫೋಟೊವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಬ್ರೆಜಿಲ್‌ನ ಸರ್ಫಿಂಗ್‌ ಸ್ಪರ್ಧಿ ಗೇಬ್ರಿಯಲ್ ಮೆಡಿನಾ (Gabriel Medina) ಅವರು ಟಹೀಟಿಯಲ್ಲಿ ದಾಖಲೆಯ ಒಲಿಂಪಿಕ್ಸ್‌ ಸ್ಕೋರ್ ಗಳಿಸಿದ ನಂತರ ನೀರಿನಿಂದ ಹೊರ ಬರುತ್ತಿರುವ ಫೋಟೊ ಇದಾಗಿದ್ದು, ಗಮನ ಸೆಳೆಯುತ್ತಿದೆ (Viral News).

ಗೇಬ್ರಿಯಲ್ ಮೆಡಿನಾ ನೀರಿನ ಮೇಲೆ ಜಿಗಿದು ಗಾಳಿಯಲ್ಲಿ ತೇಲುತ್ತಿರುವ ಕ್ಷಣದಲ್ಲಿ ಸೆರೆ ಹಿಡಿದ ಫೋಟೊ ಇದಾಗಿದ್ದು, ಛಾಯಾಗ್ರಾಹಕ ಜೆರೋಮ್ ಬ್ರೌಲೆಟ್ ಅವರ ಕೌಶಲ್ಯಕ್ಕೆ, ಫರ್‌ಫೆಕ್ಟ್‌ ಟೈಮಿಂಗ್ಸ್‌ಗೆ ನೆಟ್ಟಿಗರು ಮನ ಸೋತಿದ್ದಾರೆ. ʼʼಆ ಕ್ಷಣಕ್ಕೆ ಇದು ಇಷ್ಟು ಪರಿಪೂರ್ಣವಾಗಿ ಬರುತ್ತದೆ ಎಂದುಕೊಂಡಿರಲಿಲ್ಲ. ಅಪೂರ್ವ ಕ್ಷಣವನ್ನು ಸೆರೆಹಿಡಿದಿದ್ದೇನೆ ಎನ್ನುವುದು ಗೊತ್ತಿತ್ತು. ಆದರೆ ಇಷ್ಟು ಪರಿಪೂರ್ಣವಾಗಿರುತ್ತದೆ ಎಂದುಕೊಂಡಿರಲಿಲ್ಲʼʼ ಎಂದು ಜೆರೋಮ್ ಬ್ರೌಲೆಟ್ ಪ್ರತಿಕ್ರಿಯಿಸಿದ್ದಾರೆ.

ʼʼಪರಿಸ್ಥಿತಿ ಅನುಕೂಲವಾಗಿದ್ದರಿಂದ ಇಂತಹ ಪರ್‌ಫೆಕ್ಟ್‌ ಫೋಟೊ ಕ್ಲಿಕ್ಕಿಸಲು ಸಾಧ್ಯವಾಯಿತು. ಅಂದು ನಿಜಕ್ಕೂ ಅಲೆಗಳು ನಾವು ಅಂದುಕೊಂಡದ್ದಕ್ಕಿಂತಲೂ ಎತ್ತರವಾಗಿದ್ದವು. ಆದರೂ ಫೋಟೊ ತೆಗೆಯುವುದಕ್ಕೆ ಹೆಚ್ಚು ಕಷ್ಟ ಎನಿಸಲಿಲ್ಲʼʼ ಎಂದು ನುಡಿದಿದ್ದಾರೆ.

ʼʼಗೇಬ್ರಿಯಲ್ ಮೆಡಿನಾ ಅವರು ಗಾಳಿಯಲ್ಲಿ ತೇಲುತ್ತಿರುವಾಗ ನಾಲ್ಕು ಬಾರಿ ಕ್ಯಾಮೆರಾ ಕ್ಲಿಕ್‌ ಮಾಡಿದ್ದೆ. ಈ ನಾಲ್ಕು ಶಾಟ್‌ಗಳಲ್ಲಿ ಪೈಕಿ ಇದೂ ಒಂದುʼʼ ಎಂದು ಅವರು ತಿಳಿಸಿದ್ದಾರೆ. ಸದ್ಯ ಈ ಫೋಟೊಕ್ಕೆ ಪ್ರಪಂಚದ ವಿವಿಧ ಮೂಲೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆನ್‌ಲೈನ್‌ನಲ್ಲಿ ಲಕ್ಷಾಂತರ ಬಾರಿ ಶೇರ್‌ ಆಗಿದೆ. ಕೋಟ್ಯಾಂತರ ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ. ಸ್ವತಃ ಗೇಬ್ರಿಯಲ್ ಮೆಡಿನಾ ಅವರು ತಮ್ಮ ಇನ್‌ಸ್ಟಗ್ರಾಮ್‌ ಖಾತೆಯಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದು 24 ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿದೆ.

ಯಾರು ಏನಂದ್ರು?

“ಇದು ಸಾರ್ವಕಾಲಿಕ ಶ್ರೇಷ್ಠ ಕ್ರೀಡಾ ಫೋಟೊಗಳಲ್ಲಿ ಒಂದು” ಎಂದು ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ News.com.au ತನ್ನ ಫೇಸ್‌ಬುಕ್‌ ಪುಟದಲ್ಲಿ ಪೋಸ್ಟ್ ಮಾಡಿದೆ. ಟೈಮ್ ನಿಯತಕಾಲಿಕವು ಇದನ್ನು “2024ರ ಒಲಿಂಪಿಕ್ಸ್‌ನ ಅದ್ಭುತ ಫೋಟೊ” ಎಂದು ಬಣ್ಣಿಸಿದೆ.

“ಅದ್ಭುತ ಎಂದರೇನು ಎಂದು ಯಾರಾದರು ಕೇಳಿದಾಗ ಈ ಫೋಟೊವನ್ನು ಅವರಿಗೆ ತೋರಿಸಿ” ಎಂದು ಒಬ್ಬರು ಹೇಳಿದ್ದಾರೆ. ” ಜೆರೋಮ್ ಬ್ರೌಲೆಟ್ ಅವರ ಜೀವನದ ಅತ್ಯುತ್ತಮ ಫೋಟೊ ಇದಾಗಿರಲಿದೆ” ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. ʼʼನನ್ನ ಕಣ್ಣನ್ನು ನನಗೇ ಸಂಬಲು ಸಾಧ್ಯವಾಗುತ್ತಿಲ್ಲʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಆ ಕ್ಯಾಮೆರಾಮ್ಯಾನ್‌ಗೆ ವೇತನ ಹೆಚ್ಚಳದ ಅಗತ್ಯವಿದೆ. ನಂಬಲಾಗದ ಚಿತ್ರ” ಎಂದು ಮಗದೊಬ್ಬರು ತಿಳಿಸಿದ್ದಾರೆ. “ಗೇಬ್ರಿಯಲ್ ಮೆಡಿನಾ ಗಾಳಿಯಲ್ಲಿ ಹೊರಬಂದಂತೆ ಕಾಣುತ್ತಿದೆ” ಎಂದು ಹಲವರು ಹೇಳಿದ್ದಾರೆ.

ಇದನ್ನೂ ಓದಿ: Manu Bhaker: ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympic: ಪ್ರೀ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್; ಜೊನಾಥನ್​ ಕ್ರಿಸ್ಟಿಗೆ ಆಘಾತಕಾರಿ ಸೋಲು

Paris Olympic: ಲಕ್ಷ್ಯ ಸೇನ್ ಅವರು ನಾಕೌಟ್​ ಹಂತಕ್ಕೇರುವ ಮೂಲಕ 2016ರ ರಿಯೊ ಗೇಮ್ಸ್‌ನ ಕಿಡಂಬಿ ಶ್ರೀಕಾಂತ್ ಬಳಿಕ ಒಲಿಂಪಿಕ್ಸ್‌ನಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಸಿಂಗಲ್ಸ್ ಶಟ್ಲರ್​ ಎನಿಸಿಕೊಂಡರು.

VISTARANEWS.COM


on

Paris Olympic
Koo

ಪ್ಯಾರಿಸ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympic) ಲಕ್ಷ್ಯ ಸೇನ್(Lakshya Sen) ಅವರ ಗೆಲುವಿನ ಓಟ ಮುಂದುವರಿದಿದೆ. ಬುಧವಾರ ನಡೆದ ‘ಎಲ್’​ ಗುಂಪಿನ ಪುರುಷರ ಸಿಂಗಲ್ಸ್​ ವಿಭಾಗದ ಅಂತಿಮ ಪಂದ್ಯದಲ್ಲಿ ವಿಶ್ವ ನಂ.3 ಇಂಡೋನೇಷ್ಯಾದ ಜೊನಾಥನ್​ ಕ್ರಿಸ್ಟಿ(Jonatan Christie) ವಿರುದ್ಧ ​21-18, 21-12 ನೇರ ಗೇಮ್​ಗಳಿಂದ ಗೆದ್ದು ಪ್ರೀ ಕ್ವಾರ್ಟರ್​ ಫೈನಲ್​ ಹಂತಕ್ಕೆ ಪ್ರವೇಶಿಸಿದ್ದಾರೆ. ಇದೇ ವೇಳೆ ಲಕ್ಷ್ಯ ಸೇನ್​ 8 ವರ್ಷಗಳ ನಂತರ ಒಲಿಂಪಿಕ್ಸ್ ನಾಕೌಟ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

22 ವರ್ಷದ ಲಕ್ಷ್ಯ ಸೇನ್ ಮೊದಲ ಗೇಮ್​ನಲ್ಲಿ 2-8 ಅಂಕಗಳ ಹಿನ್ನಡೆ ಸಾಧಿಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ತೀವ್ರ ಹೋರಾಟ ನಡೆಸಿ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 21-18 ಅಂಕಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡರು. ದ್ವಿತೀಯ ಗೇಮ್​ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಸೇನ್​ ಎದುರಾಳಿಗೆ ಚೇರಿಸಿಕೊಳ್ಳಲು ಕೂಡ ಸಮಯ ನೀಡಲಿಲ್ಲ. ಸತತವಾಗಿ ಅಂಕ ಗಳಿಸುತ್ತಲೇ ಸಾಗಿ ಮೇಲುಗೈ ಸಾಧಿಸಿ ನೇರ ಗೇಮ್​ಗಳ ಅಂತರದಿಂದ ಪಂದ್ಯವನ್ನು ಗೆದ್ದು ಬೀಗಿದರು. ಹಾಲಿ ಆಲ್-ಇಂಗ್ಲೆಂಡ್ ಚಾಂಪಿಯನ್ ಕ್ರಿಸ್ಟಿ ಆಘಾತಕಾರಿ ಸೋಲುಂಡರು.

ಇದನ್ನೂ ಓದಿ Paris Olympics: ಫೈನಲ್​ ಪ್ರವೇಶಿಸಿದ ಸ್ವಪ್ನಿಲ್‌ ಕುಸಾಲೆ; 16ರ ಸುತ್ತಿಗೇರಿದ ಸಿಂಧು

8 ವರ್ಷದ ಬಳಿಕ ನಾಕೌಟ್ ಪ್ರವೇಶ


ಲಕ್ಷ್ಯ ಸೇನ್ ಅವರು ನಾಕೌಟ್​ ಹಂತಕ್ಕೇರುವ ಮೂಲಕ 2016ರ ರಿಯೊ ಗೇಮ್ಸ್‌ನ ಕಿಡಂಬಿ ಶ್ರೀಕಾಂತ್ ಬಳಿಕ ಒಲಿಂಪಿಕ್ಸ್‌ನಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಸಿಂಗಲ್ಸ್ ಶಟ್ಲರ್​ ಎನಿಸಿಕೊಂಡರು. ಟೋಕಿಯೊದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಏಕೈಕ ಸ್ಪರ್ಧಿಯಾಗಿದ್ದ ಸಾಯಿ ಪ್ರಣೀತ್ ಗುಂಪು ಹಂತದಲ್ಲೇ ಸೋಲು ಕಂಡು ನಿರ್ಗಮಿಸಿದ್ದರು.

ಕ್ರಿಸ್ಟಿ ವಿರುದ್ಧ ಸೇನ್​ ಇದುವರೆಗೆ ಆಡಿದ್ದ 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿದ್ದರು. ಒಂದು ಪಂದ್ಯ ಮಾತ್ರ ಗೆದ್ದಿದ್ದರು. ಈ ವರ್ಷದ ಆರಂಭದಲ್ಲಿ ನಡೆದಿದ್ದ ಆಲ್ ಇಂಗ್ಲೆಂಡ್ ಓಪನ್‌ನ ಸೆಮಿಫೈನಲ್ ಸೇರಿದಂತೆ ಇಂಡೋನೇಷ್ಯಾದ ಎರಡು ಕೂಟಗಳಲ್ಲಿಯೂ ಲಕ್ಷ್ಯ ಕ್ರಿಸ್ಟಿ ವಿರುದ್ಧ ಸೋಲು ಕಂಡಿದ್ದರು. ಈ ಎಲ್ಲ ಸೋಲಿನ ಸೇಡನ್ನು ಇದೀಗ ಪ್ರತಿಷ್ಠಿತ ಒಲಿಂಪಿಕ್ಸ್​ ಟೂರ್ನಿಯಲ್ಲಿ ಸೇನ್​ ತೀರಿಸಿಕೊಂಡಿದ್ದಾರೆ. ಜತೆಗೆ ಭಾರತಕ್ಕೆ ಪದಕ ಭರವಸೆಯನ್ನು ಮೂಡಿಸಿದ್ದಾರೆ.

ಸಿಂಧುಗೆ ಭರ್ಜರಿ ಗೆಲುವು


ಇದಕ್ಕೂ ಮುನ್ನ ನಡೆದಿದ್ದ ಮಹಿಳಾ ಬ್ಯಾಡ್ಮಿಂಟನ್​ ಸಿಂಗಲ್ಸ್​ ವಿಭಾಗದ ‘ಎಂ’ ಗುಂಪಿನ ಪಂದ್ಯದಲ್ಲಿ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ ಸಿಂಧು(PV Sindhu) ಕೂಡ ಗೆಲುವು ಸಾಧಿಸಿ 16ನೇ ಸುತ್ತಿಗೆ ಪ್ರವೇಶ ಪಡೆದಿದ್ದರು.

73ನೇ ಶ್ರೇಯಾಂಕದ ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ 21-5, 21-10 ಸುಲಭ ಜಯ ಸಾಧಿಸಿ 16ರ(ಪ್ರೀ ಕ್ವಾರ್ಟರ್​) ಸುತ್ತಿಗೇರಿದ್ದಾರೆ. ಸಿಂಧು ಅವರ ಬಲಿಷ್ಠ ಹೊಡೆತಗಳ ಮುಂದೆ ಕ್ರಿಸ್ಟಿನ್ ಕುಬಾ ಸಂಪೂರ್ಣ ಮಂಕಾದರು. ಮೊದಲ ಗೇಮ್​ನಲ್ಲಿ ಕೇವಲ 5 ಅಂಕಕ್ಕೆ ಸೀಮಿತರಾದರು. ಈ ಪಂದ್ಯ ಕೇವಲ 34 ನಿಮಿಷಗಳಲ್ಲಿ ಅಂತ್ಯ ಕಂಡಿತ್ತು.

Continue Reading

ಕ್ರೀಡೆ

Paris Olympics: ಫೈನಲ್​ ಪ್ರವೇಶಿಸಿದ ಸ್ವಪ್ನಿಲ್‌ ಕುಸಾಲೆ; 16ರ ಸುತ್ತಿಗೇರಿದ ಸಿಂಧು

Paris Olympics: ಬುಧವಾರ ನಡೆದ ಪುರುಷರ 50 ಮೀ. ರೈಫ‌ಲ್‌ 3 ಪೊಸಿಶನ್‌ ಅರ್ಹತಾ ಸುತ್ತಿನಲ್ಲಿ ಭಾರತದ ಸ್ವಪ್ನಿಲ್‌ ಕುಸಾಲೆ 590 ಅಂಕಗಳೊಂದಿಗೆ 7 ನೇ ಸ್ಥಾನ ಪಡೆಯುವ ಮೂಲಕ ಫೈನಲ್​ ಪ್ರವೇಶಿಸಿದ್ದಾರೆ.

VISTARANEWS.COM


on

Paris Olympics
Koo

ಪ್ಯಾರಿಸ್​: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್(Paris Olympics)​ ಕ್ರೀಡಾ ಕೂಟದಲ್ಲಿ ಈಗಾಗಲೇ ಶೂಟಿಂಗ್​ನಲ್ಲಿ 2 ಪದಕ ಗೆದ್ದಿರುವ ಭಾರತಕ್ಕೆ ಇದೇ ವಿಭಾಗದಲ್ಲಿ ಮತ್ತೊಂದು ಪದಕ ಒಲಿಯುವ ನಿರೀಕ್ಷೆಯಿದೆ. ಬುಧವಾರ ನಡೆದ ಪುರುಷರ 50 ಮೀ. ರೈಫ‌ಲ್‌ 3 ಪೊಸಿಶನ್‌ ಅರ್ಹತಾ ಸುತ್ತಿನಲ್ಲಿ ಭಾರತದ ಸ್ವಪ್ನಿಲ್‌ ಕುಸಾಲೆ(Swapnil Kusale) 590 ಅಂಕಗಳೊಂದಿಗೆ 7 ನೇ ಸ್ಥಾನ ಪಡೆಯುವ ಮೂಲಕ ಫೈನಲ್​ ಪ್ರವೇಶಿಸಿದ್ದಾರೆ. ಇನ್ನೊಂದೆಡೆ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ, ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ ಸಿಂಧು(PV Sindhu) ಕೂಡ ಗೆಲುವು ಸಾಧಿಸಿ 16ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಇಂದು(ಬುಧವಾರ) ನಡೆದ ಪುರುಷರ 50 ಮೀ. ರೈಫಲ್ 3 ಪೊಸಿಶನ್‌ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಸ್ವಪ್ನಿಲ್‌ ಕುಸಾಲೆ ಫೈನಲ್​ ಸುತ್ತಿಗೆ ಪ್ರವೇಶ ಪಡೆದರೆ, ಮತೋರ್ವ ಭಾರತೀಯ ಶೂಟರ್​ ಐಶ್ವರಿ ಪ್ರತಾಪ್ ಅವರು 589 ಸ್ಕೋರ್‌ನೊಂದಿಗೆ 11 ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದರು. ಅಗ್ರ 8 ಸ್ಥಾನ ಗಳಿಸಿದ ಶೂಟರ್​ಗಳಿಗೆ ನೇರವಾಗಿ ಫೈನಲ್​ ಪ್ರವೇಶ ಲಭಿಸುತ್ತದೆ. ಆದರೆ ಈ ಸ್ಥಾನ ಪಡೆಯುವಲ್ಲಿ ವಿಫಲರಾದ ಕಾರಣ ಅವರ ಒಲಿಂಪಿಕ್ಸ್​ ಸ್ಪರ್ಧೆ ಕೊನೆಗೊಂಡಿತು.

ಸ್ವಪ್ನಿಲ್‌ ಕುಸಾಲೆ ಫೈನಲ್​ ಪ್ರವೇಶಿಸುವ ಮೂಲಕ ಮನು ಭಾಕರ್, ಅರ್ಜುನ್ ಬಾಬುತಾ, ಸರಬ್ಜೋತ್ ಸಿಂಗ್ ಮತ್ತು ರಮಿತಾ ಜಿಂದಾಲ್ ಬಳಿಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದ 5ನೇ ಶೂಟರ್ ಎನಿಸಿಕೊಂಡರು. ಆಗಸ್ಟ್​ 1 ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಸ್ವಪ್ನಿಲ್‌ ಪದಕಕ್ಕೆ ಗುರಿ ಇಡಲಿ ಎನ್ನುವುದು ಭಾರತೀಯರ ಆಶಯ ಹಾಗೂ ಹಾರೈಕೆ.

ಇದನ್ನೂ ಓದಿ Paris Olympics 2024: ಪರ್‌ಫೆಕ್ಟ್‌ ಕ್ಲಿಕ್‌ ಎಂದರೆ ಇದು; ಭಾರಿ ಸದ್ದು ಮಾಡುತ್ತಿದೆ ಒಲಿಂಪಿಕ್ಸ್‌ನ ಈ ವೈರಲ್‌ ಫೋಟೊ

ಸಿಂಧುಗೆ ಭರ್ಜರಿ ಗೆಲುವು


ಇದೇ ದಿನ ನಡೆದ ಮಹಿಳಾ ಬ್ಯಾಡ್ಮಿಂಟನ್​ ಸಿಂಗಲ್ಸ್​ ವಿಭಾಗದ ‘ಎಂ’ ಗುಂಪಿನ ಪಂದ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ 10ನೇ ಶ್ರೇಯಾಂಕದ ಸಿಂಧು, 73ನೇ ಶ್ರೇಯಾಂಕದ ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ 21-5, 21-10 ಸುಲಭ ಜಯ ಸಾಧಿಸಿ 16ರ(ಪ್ರೀ ಕ್ವಾರ್ಟರ್​) ಸುತ್ತಿಗೇರಿದ್ದಾರೆ. ಸಿಂಧು ಅವರ ಬಲಿಷ್ಠ ಹೊಡೆತಗಳ ಮುಂದೆ ಕ್ರಿಸ್ಟಿನ್ ಕುಬಾ ಸಂಪೂರ್ಣ ಮಂಕಾದರು. ಮೊದಲ ಗೇಮ್​ನಲ್ಲಿ ಕೇವಲ 5 ಅಂಕಕ್ಕೆ ಸೀಮಿತರಾದರು. ಈ ಪಂದ್ಯ ಕೇವಲ 34 ನಿಮಿಷಗಳಲ್ಲಿ ಅಂತ್ಯ ಕಂಡಿತು.

Continue Reading

ಪ್ರಮುಖ ಸುದ್ದಿ

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​; ಇಂದು ಭಾರತೀಯ ಸ್ಪರ್ಧಿಗಳ ವೇಳಾಪಟ್ಟಿ ಹೀಗಿದೆ

Paris Olympics 2024 : ಬುಧವಾರ ಯಾವುದೇ ಪದಕ ಸ್ಪರ್ಧೆ ಇಲ್ಲ. ಆದರೆ ಭಾರತೀಯ ಕ್ರೀಡಾಪಟುಗಳು ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದಾರೆ. ಎರಡು ಬಾರಿಯ ಪದಕ ವಿಜೇತೆ ಪಿ.ವಿ.ಸಿಂಧು ಅವರು ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ ಗ್ರೂಪ್ ಹಂತದ ಪಂದ್ಯವನ್ನು ಗೆದ್ದರೆ 16 ನೇ ಸುತ್ತಿಗೆ ಪ್ರವೇಶ ಪಡೆಯಲಿದ್ದಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ 2024ರ ಒಲಿಂಪಿಕ್ಸ್​ನ (Paris Olympics 2024) ನಾಲ್ಕನೇ ದಿನವಾದ ಮಂಗಳವಾರ ಭಾರತಕ್ಕೆ ಒಂದು ಪದಕ ಲಭಿಸಿದೆ. 10 ಮೀಟರ್​ ಏರ್​ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್​ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಭಾರತದ ಪಾಲಿಗೆ ಇದು ವಿಶೇಷ ಸಾಧನೆಯೂ ಹೌದು. ಯಾಕೆಂದರೆ ಮನು ಭಾಕರ್​​ 125 ವರ್ಷಗಳ ಬಳಿಕ ಭಾರತ ಪರ ಒಂದೇ ಒಲಿಂಪಿಕ್ಸ್​ನಲ್ಲಿ ಎರಡು ಪದಕ ಗೆದ್ದ ದಾಖಲೆಯನ್ನು ಮಾಡಿದ್ದಾರೆ. ಇದೇ ವೇಳೆ ಚೊಚ್ಚಲ ಪ್ರವೇಶದಲ್ಲಿ ಸರಬ್ಜಿತ್ ಪದಕವೊಂದಕ್ಕೆ ಕೊರಳೊಡ್ಡಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ಸಾಗಲಿರುವ ಭಾರತ ಅಥ್ಲಿಟ್​ಗಳ ನಿಯೋಗ ಐದನೇ ದಿನವಾದ ಬುಧವಾರ (ಜುಲೈ 31) ಹಲವಾರು ಸ್ಪರ್ಧೆಗಳಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಪ್ರಮುಖವಾಗಿ ಶೂಟಿಂಗ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ತಂಡಗಳು ಪದಕ ಸನಿಹ ಹೋಗುವ ಪ್ರಯತ್ನ ಮಾಡಲಿವೆ.

ಬುಧವಾರ ಯಾವುದೇ ಪದಕ ಸ್ಪರ್ಧೆ ಇಲ್ಲ. ಆದರೆ ಭಾರತೀಯ ಕ್ರೀಡಾಪಟುಗಳು ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದಾರೆ. ಎರಡು ಬಾರಿಯ ಪದಕ ವಿಜೇತೆ ಪಿ.ವಿ.ಸಿಂಧು ಅವರು ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ ಗ್ರೂಪ್ ಹಂತದ ಪಂದ್ಯವನ್ನು ಗೆದ್ದರೆ 16 ನೇ ಸುತ್ತಿಗೆ ಪ್ರವೇಶ ಪಡೆಯಲಿದ್ದಾರೆ.

ಬ್ಯಾಡ್ಮಿಂಟನ್​ನಲ್ಲಿ ದೊಡ್ಡ ಪಂದ್ಯವೊಂದು ನಡೆಯಲಿದ್ದು ಲಕ್ಷ್ಯ ಸೇನ್ ಮತ್ತು ಜೊನಾಟನ್ ಕ್ರಿಸ್ಟಿ ನಾಕೌಟ್ ಸುತ್ತಿನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಲಿದೆ. ಪ್ರಣಯ್ ಕೂಡ ತಮ್ಮ ಗೆಲುವಿನ ಓಟ ಮುಂದುವರಿಸಲು ಮತ್ತು ಮುಂದಿನ ಸುತ್ತಿಗೆ ಮುನ್ನಡೆಯಲು ಬಯಸುತ್ತಿದ್ದಾರೆ. 50 ಮೀಟರ್ ರೈಫಲ್ 3 ಸ್ಥಾನಗಳ ಪುರುಷರ ಶೂಟರ್​ಗಳಾದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಸ್ವಪ್ನಿಲ್ ಕುಸಾಲೆ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಮಹಿಳಾ ಟ್ರ್ಯಾಪ್ ಶೂಟರ್​ಗಳಾದ ರಾಜೇಶ್ವರಿ ಕುಮಾರಿ ಮತ್ತು ಶ್ರೇಯಸಿ ಸಿಂಗ್ ವೈಯಕ್ತಿಕ ಅಂತಿಮ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದಾರೆ.

ಆರ್ಚರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ತರುಣ್ ದೀಪ್ ರಾಯ್ ಸ್ಪರ್ಧಿಸಿದರೆ, ಮಹಿಳಾ ವಿಭಾಗದಲ್ಲಿ ದೀಪಿಕಾ ಕುಮಾರಿ ಸ್ಪರ್ಧಿಸಲಿದ್ದಾರೆ.

ಜುಲೈ 31, ಬುಧವಾರದ ಭಾರತದ ವೇಳಾಪಟ್ಟಿ ಇಲ್ಲಿದೆ

ಮಧ್ಯಾಹ್ನ 12:30: ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್​ ಅರ್ಹತಾ ಸುತ್ತಿನಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಸ್ವಪ್ನಿಲ್ ಕುಸಾಲೆ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: IND vs SL : ಭಾರತ ವಿರುದ್ಧದ ಏಕ ದಿನ ಸರಣಿಗೆ ಶ್ರೀಲಂಕಾ ತಂಡ ಪ್ರಕಟ; ಹೊಸ ನಾಯಕನ ಘೋಷಣೆ

ಮಧ್ಯಾಹ್ನ 12.30: ಮಹಿಳೆಯರ ಟ್ರ್ಯಾಪ್ ಅರ್ಹತಾ ಸುತ್ತಿನ ಎರಡನೇ ದಿನ ಶ್ರೇಯಸಿ ಸಿಂಗ್ ಮತ್ತು ರಾಜೇಶ್ವರಿ ಕುಮಾರಿ ಕಣಕ್ಕಿಳಿಯಲಿದ್ದಾರೆ.

ಮಧ್ಯಾಹ್ನ 12:50: ಬ್ಯಾಡ್ಮಿಂಟನ್, ಮಹಿಳಾ ಸಿಂಗಲ್ಸ್ ಗ್ರೂಪ್ ಹಂತದ ಹೋರಾಟದಲ್ಲಿ ಪಿ.ವಿ.ಸಿಂಧು ಮತ್ತು ಕ್ರಿಸ್ಟಿನ್ ಕುಬಾ. ಈ ಪಂದ್ಯದಲ್ಲಿ ಗೆದ್ದರೆ ಸಿಂಧು ನಾಕೌಟ್ ಸುತ್ತಿಗೆ ಪ್ರವೇಶಿಸಲಿದ್ದಾರೆ.

ಮಧ್ಯಾಹ್ನ 1:30: ಈಕ್ವೆಸ್ಟ್ರಿಯನ್ ಇಂಡಿವಿಜುವಲ್​ ಡ್ರೆಸೇಜ್​: ಅನುಷ್ ಅಗರ್ವಾಲ್ಲಾ ಮತ್ತು ಕ್ಯಾರಾಮೆಲ್ಲೊ 2 ದಿನದಂದು ಕಣಕ್ಕಿಳಿಯಲಿದ್ದಾರೆ.

ಮಧ್ಯಾಹ್ನ 1:40: ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ ಗ್ರೂಪ್ ಹಂತದಲ್ಲಿ ಲಕ್ಷ್ಯ ಸೇನ್ ಮತ್ತು ಜೊನಾಥನ್ ಕ್ರಿಸ್ಟಿ. ಈ ಗುಂಪಿನಿಂದ ರೌಂಡ್-ಆಫ್-16 ಸ್ಥಾನ ಯಾರು ಪಡೆಯುತ್ತಾರೆ ಎಂಬುದು ಇಲ್ಲಿ ನಿರ್ಧಾರವಾಗಲಿದೆ. ಕ್ರಿಸ್ಟಿ ವಿರುದ್ಧ ಲಕ್ಷ್ಯತಮ್ಮ ವೃತ್ತಿಜೀವನದಲ್ಲಿ 1-4 ರಿಂದ ಹಿನ್ನಡೆ ಹೊಂದಿದ್ದಾರೆ.

ಮಧ್ಯಾಹ್ನ 2:30: ಟೇಬಲ್ ಟೆನಿಸ್: ಮಹಿಳಾ ಸಿಂಗಲ್ಸ್ ರೌಂಡ್ ಆಫ್ 32ರಲ್ಲಿ ಶ್ರೀಜಾ ಅಕುಲಾ ಮತ್ತು ಜೆಂಗ್ ಜಿಯಾನ್ ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್​ನಲ್ಲಿ 16ನೇ ಸುತ್ತಿಗೆ ಪ್ರವೇಶಿಸಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಣಿಕಾ ಬಾತ್ರಾ ಪಾತ್ರರಾಗಿದ್ದು ಶ್ರೀಜಾ ಅದೇ ದಾರಿಯನ್ನು ಅನುಸರಿಸಲಿದ್ದಾರೆ.

ಮಧ್ಯಾಹ್ನ 3:34: ಮಹಿಳೆಯರ 75 ಕೆಜಿ ವಿಭಾಗದ ವಿಭಾಗದ 16ನೇ ಸುತ್ತಿನ ಸ್ಪರ್ಧೆಯಲ್ಲಿ ಲೊವ್ಲಿನಾ ಬೊರ್ಗೊಹೈನ್ ಮತ್ತು ನಾರ್ವೆಯ ಸುನ್ನಿವಾ ಹಾಫ್ಸಡ್​ ಜೋಡಿ ಸ್ಪರ್ಧಿಸಲಿದೆ. ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆಯಾಗಿದ್ದಾರೆ.

ಮಧ್ಯಾಹ್ನ 3:56: ಆರ್ಚರಿ – ಮಹಿಳೆಯರ ವೈಯಕ್ತಿಕ 64ನೇ ಸುತ್ತಿನಲ್ಲಿ ದೀಪಿಕಾ ಕುಮಾರಿ ಮತ್ತು ರೀನಾ ಪರ್ನತ್.

ಸಂಜೆ 7: ಶೂಟಿಂಗ್- ಮಹಿಳಾ ಟ್ರ್ಯಾಪ್ ಫೈನಲ್; ಶ್ರೇಯಸಿ ಅಥವಾ ರಾಜೇಶ್ವರಿ ಅರ್ಹತೆ ಪಡೆದರೆ ಪದಕದ ಸನಿಹ ಹೋಗಲಿದ್ದಾರೆ.

ರಾತ್ರಿ 9:15: ಆರ್ಚರಿ- ಪುರುಷರ ವೈಯಕ್ತಿಕ ರೌಂಡ್-64 ರಲ್ಲಿ ತರುಣ್​ದೀಪ್​ ರಾಯ್ ಮತ್ತು ಟಾಮ್ ಹಾಲ್ ಸ್ಪರ್ಧಿಸಲಿದ್ದಾರೆ.

ರಾತ್ರಿ 11: ಬ್ಯಾಡ್ಮಿಂಟನ್- ಪುರುಷರ ಸಿಂಗಲ್ಸ್ ಗ್ರೂಪ್ ಹಂತದಲ್ಲಿ ಎಚ್.ಎಸ್.ಪ್ರಣಯ್ ವಿರುದ್ಧ ಡುಕ್ ಫಾಟ್ ಲೆ.

12:18 ರಾತ್ರಿ : ಪುರುಷರ 71 ಕೆಜಿ ವಿಭಾಗದ 16 ಕೆಜಿ ವಿಭಾಗದಲ್ಲಿ ನಿಶಾಂತ್ ದೇವ್ ಮತ್ತು ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ.

ಇದನ್ನೂ ಓದಿ: Neeraj Chopra : ನಮಸ್ಕಾರ ಪ್ಯಾರಿಸ್​​; ಒಲಿಂಪಿಕ್ಸ್​ ಕ್ರೀಡಾಗ್ರಾಮ ತಲುಪಿದ ಚಿನ್ನದ ಹುಡುಗ ನೀರಜ್ ಚೋಪ್ರಾ

Continue Reading

ಪ್ರಮುಖ ಸುದ್ದಿ

IND vs SL : ಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ಜಯ, ಸರಣಿ ಕ್ಲೀನ್ ಸ್ವೀಪ್ ಮಾಡಿದ ಸೂರ್ಯಕುಮಾರ್ ಪಡೆ

IND vs SL :ಭಾರತ ತಂಡ ವೈಫಲ್ಯ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳು ಮುಗಿಯುವ ವೇಳೆ 8 ವಿಕೆಟ್ ಕಳೆದುಕೊಂಡು 137 ರನ್ ಬಾರಿಸಿತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್​ ಮೊರೆ ಹೋಗಲಾಯಿತು. ಮೊದಲು ಬ್ಯಾಟ್ ಮಾಡಿದ ಲಂಕಾ 1 ರನ್ ಬಾರಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ತಮ್ಮ ಅವಕಾಶವನ್ನು ಕೊನೆಗೊಳಿಸಿತು. ಭಾರತ ಪರ ಸೂರ್ಯಕುಮಾರ್ ಮೊದಲ ಎಸೆತಕ್ಕೆ ಫೋರ್ ಬಾರಿಸಿ ಜಯ ತಂದುಕೊಟ್ಟರು.

VISTARANEWS.COM


on

IND vs SL
Koo

ಪಲ್ಲೆಕೆಲೆ: ಮೂರು ಪಂದ್ಯಗಳ ಟಿ20 ಸರಣಿಯ (IND vs SL) ಕೊನೇ ಪಂದ್ಯದಲ್ಲೂ ಭಾರತ ತಂಡ ಶ್ರೀಲಂಕಾ ವಿರುದ್ಧ ಗೆದ್ದಿದೆ. ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಸೂಪರ್​ ಓವರ್​ ಮೂಲಕ ಭಾರತ ಜಯ ಕಂಡಿದೆ. ನಿಗದಿತ ಓವರ್​ಗಳ ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಮೊರೆ ಹೋಗಲಾಯಿತು. ಭಾರತ ಅತ್ಯಂತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಅಲ್ಲದೆ, ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಸರಣಿಯ ಮೂಲಕ ನಾಯಕ ಸೂರ್ಯಕುಮಾರ್ ಯಾದವ್​ ಮೊದಲ ಸರಣಿಯಲ್ಲೇ ಯಶಸ್ಸು ಕಂಡರೆ, ಕೋಚ್​ ಗೌತಮ್ ಗಂಭೀರ್​ಗೂ ಶುಭಾರಂಭದ ಸಿಹಿ ದೊರೆಯಿತು.

ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ವೈಫಲ್ಯ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳು ಮುಗಿಯುವ ವೇಳೆ 8 ವಿಕೆಟ್ ಕಳೆದುಕೊಂಡು 137 ರನ್ ಬಾರಿಸಿತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್​ ಮೊರೆ ಹೋಗಲಾಯಿತು. ಮೊದಲು ಬ್ಯಾಟ್ ಮಾಡಿದ ಲಂಕಾ 1 ರನ್ ಬಾರಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ತಮ್ಮ ಅವಕಾಶವನ್ನು ಕೊನೆಗೊಳಿಸಿತು. ಭಾರತ ಪರ ಸೂರ್ಯಕುಮಾರ್ ಮೊದಲ ಎಸೆತಕ್ಕೆ ಫೋರ್ ಬಾರಿಸಿ ಜಯ ತಂದುಕೊಟ್ಟರು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡಕ್ಕೆ ಉತ್ತಮ ಆರಂಭ ದೊರಕಿತು. ಮೊದಲ ವಿಕೆಟ್​ಗೆ 58 ರನ್ ಬಾರಿಸಿತು. ಪಾಥುಮ್ ನಿಸ್ಸಾಂಕ 26 ರನ್ ಬಾರಿಸಿದರೆ ಕುಸಾಲ್ ಮೆಂಡಿಸ್​ 43 ರನ್ ಬಾರಿಸಿದರು. ಇವರಿಬ್ಬರ ಆಟದಿಂದಾಗಿ ಲಂಕಾಗೆ ಉತ್ತಮ ಲಾಭ ದೊರಕಿತು. ಬಳಿಕ ಕುಸಾಲ್ ಪೆರೆರಾ 34 ಎಸೆತಕ್ಕೆ 44 ರನ್ ಬಾರಿಸಿ ಗುರಿಯ ಸಮೀಪಕ್ಕೆ ರನ್ ತಂದಿಟ್ಟರು. ವಾನಿಂದು ಹಸರಂಗ 3 ರನ್ ಗೆ ಔಟಾದರೆ ಚರಿತ್ ಅಸಲಂಕಾ ಶೂನ್ಯಕ್ಕೆ ಔಟಾದರು. ಅಲ್ಲಿಂದ ಲಂಕಾ ತಂಡದ ಪತನ ಶುರುವಾಯಿತು.110 ರನ್​ಗೆ 2 ವಿಕೆಟ್ ನಷ್ಟ ಮಾಡಿಕೊಂಡಿದ್ದ ಲಂಕಾ ಮುಂದಿನ 22 ರನ್ ಮಾಡುವಷ್ಟರಲ್ಲಿ 6 ವಿಕೆಟ್ ನಷ್ಟ ಮಾಡಿಕೊಂಡಿತು. ರಿಂಕ ಸಿಂಗ್​, ಸೂರ್ಯಕುಮಾರ್ ಯಾದವ್​, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಉರುಳಿಸಿ ಮಿಂಚಿದರು. ಸೂಪರ್ ಓವರ್​ನಲ್ಲೂ ಬಿಷ್ಣೋಯಿ 2 ವಿಕೆಟ್ ಪಡೆದು ಭಾರತದ ಗೆಲುವನ್ನು ಸುಲಭವಾಗಿಸಿದರು.

ಭಾರತದ ಬ್ಯಾಟಿಂಗ್ ವೈಫಲ್ಯ

ಭಾರತ ತಂಡ ಬ್ಯಾಟಿಂಗ್​ನಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ.. 11 ರನ್​ಗೆ ಮೊದಲ ವಿಕೆಟ್​ ನಷ್ಟ ಮಾಡಿಕೊಂಡಿತು. ಯಶಸ್ವಿ ಜೈಸ್ವಾಲ್​ 10 ರನ್​ಗೆ ಸೀಮಿತಗೊಂಡರು. ಶುಭ್​ಮನ್ ಗಿಲ್​ 39 ರನ್ ಬಾರಿಸಿ ಚೈತನ್ಯ ತಂದರೂ ಅವರಿಗೆ ಹೆಚ್ಚು ಹೊತ್ತು ಇನಿಂಗ್ಸ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಅವರಿಬ್ಬರು ಔಟಾದ ಬಳಿಕ ಭಾರತ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಸಂಜು ಸ್ಯಾಮ್ಸನ್​ ಮತ್ತೊಂದು ಬಾರಿ ಶೂನ್ಯಕ್ಕೆ ಔಟಾದರು. ಅವರು ಎರಡನೇ ಪಂದ್ಯದಲ್ಲೂ ಡಕ್​ಔಟ್ ಆಗಿದ್ದರು. ಈ ಮೂಲಕ ಅಭಿಮಾನಿಗಳ ಕೋಪಕ್ಕೆ ಕಾರಣರಾದರು.

ಇದನ್ನೂ ಓದಿ: ICC T20 ranking : ಐಸಿಸಿ ರ್ಯಾಂಕಿಂಗ್​ನಲ್ಲಿ ಸ್ಮೃತಿ ಮಂಧಾನಾ, ರೇಣುಕಾಗೆ ಭರ್ಜರಿ ಲಾಭ

ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದುಕೊಂಡ ರಿಂಕು ಸಿಂಗ್ ನಿರಾಸೆ ಮೂಡಿಸಿ ಒಂದು ರನ್​ಗೆ ಔಟಾದರು. ಬಳಿಕ ಬಂದ ನಾಯಕ ಸೂರ್ಯಕುಮಾರ್​ ಯಾದವ್ ಕೂಡ 8 ರನ್​ಗೆ ಸೀಮಿತಗೊಂಡರು. ಈ ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದ ಶಿವಂ ದುಬೆ 13 ರನ್ ಬಾರಿಸಿ ನಿರ್ಗಮಿಸಿದರು. ಬಳಿಕ ರಿಯಾನ್ ಪರಾಗ್​ 26 ರನ್ ಹಾಗೂ ವಾಷಿಂಗ್ಟನ್ ಸುಂದರ್​ 25 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.

Continue Reading
Advertisement
krishna byre gowda
ಪ್ರಮುಖ ಸುದ್ದಿ7 mins ago

Krishna Byre Gowda: ರಾಜ್ಯಪಾಲರ ಅಧಿಕಾರ ದುರುಪಯೋಗಪಡಿಸಿಕೊಂಡರೆ ಕೋರ್ಟ್‌ಗೆ ಹೋಗುತ್ತೇವೆ: ಕೃಷ್ಣಭೈರೇಗೌಡ

Money Guide
ಮನಿ-ಗೈಡ್12 mins ago

Money Guide: PPF v/s NPS Vatsalya ನಿಮ್ಮ ಮಕ್ಕಳಿಗೆ ಯಾವುದು ಉತ್ತಮ ಯೋಜನೆ? ಇಲ್ಲಿದೆ ವಿವರ

Vinay Guruji met by master anand brother
ಸ್ಯಾಂಡಲ್ ವುಡ್14 mins ago

Vinay Guruji: ಬೈಕೊಂಡು ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿದ್ದೆ ಆದರೆ ನನ್ನ ಅಷ್ಟೂ ಜಾತಕ ಬಿಚ್ಚಿಟ್ರು ಎಂದ ಮಾಸ್ಟರ್ ಆನಂದ್ ಸಹೋದರ!

Anurag Thakur
ದೇಶ19 mins ago

Anurag Thakur: ಅನುರಾಗ್‌ ಠಾಕೂರ್‌ ‘ಜಾತಿ’ ಅಸ್ತ್ರಕ್ಕೆ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಪ್ರತ್ಯಸ್ತ್ರ!

Viral Video
Latest20 mins ago

Viral Video: ಮಹಿಳೆಯ ಎದೆ, ಕುತ್ತಿಗೆಗೆ ಭೀಕರವಾಗಿ ತಿವಿದ ಬೀದಿ ಹಸು; ಮೈ ನಡುಗಿಸುವ ವಿಡಿಯೊ

Paris Olympic
ಕ್ರೀಡೆ22 mins ago

Paris Olympic: ಪ್ರೀ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್; ಜೊನಾಥನ್​ ಕ್ರಿಸ್ಟಿಗೆ ಆಘಾತಕಾರಿ ಸೋಲು

Wayanad Landslide
ದೇಶ24 mins ago

Wayanad Landslide: ಭೂಕುಸಿತದ ಬಗ್ಗೆ ಒಂದು ವಾರ ಮೊದಲೇ ನೀಡಲಾಗಿತ್ತಾ ಎಚ್ಚರಿಕೆ? ಕೇಂದ್ರದ ಸೂಚನೆ ನಿರ್ಲಕ್ಷಿಸಿತ್ತಾ ಕೇರಳ ಸರ್ಕಾರ?

DK Shivakumar
ಕರ್ನಾಟಕ29 mins ago

DK Shivakumar: ಪ್ರಧಾನಿ ಮೋದಿ ಭೇಟಿಯಾದ ಡಿಕೆಶಿ; ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಬೇಡಿಕೆ

Viral Video
Latest31 mins ago

Viral Video: ಕೆಸರು ಗದ್ದೆಯಲ್ಲಿ ಹೊರಳಾಡಿದ ದಂಪತಿ; ವೈರಲ್ ಆಯ್ತು ಇವರಿಬ್ಬರ ನಾಗಿನಿ ಡ್ಯಾನ್ಸ್‌!

Actor Chiranjeevi gets flak for ‘rudely’ pushing IndiGo employee
ಟಾಲಿವುಡ್54 mins ago

Actor Chiranjeevi: ಸೆಲ್ಫಿ ತೆಗೆದುಕೊಳ್ಳಲು ಬಂದ ಇಂಡಿಗೋ ವಿಮಾನ ಸಿಬ್ಬಂದಿಯನ್ನು ತಳ್ಳಿದ ನಟ ಚಿರಂಜೀವಿ; ನೆಟ್ಟಿಗರಿಂದ ತರಾಟೆ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ22 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌