Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 9ರಂದು ಭಾರತೀಯ ಅಥ್ಲೀಟ್​ಗಳಿಗೆ ಯಾವ ಸ್ಪರ್ಧೆಗಳಿವೆ? ಇಲ್ಲಿದೆ ಅದರ ವಿವರ - Vistara News

ಕ್ರೀಡೆ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 9ರಂದು ಭಾರತೀಯ ಅಥ್ಲೀಟ್​ಗಳಿಗೆ ಯಾವ ಸ್ಪರ್ಧೆಗಳಿವೆ? ಇಲ್ಲಿದೆ ಅದರ ವಿವರ

Paris Olympics 2024 : 1972ರಲ್ಲಿ ಪುರುಷರ ಹಾಕಿ ತಂಡ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿತ್ತು. ಅದೇ ರೀತಿ ಭಾರತ ಹಾಕಿ ತಂಡ ಮತ್ತೊಮ್ಮೆ ಸತತ ಎರಡು ಬಾರಿ ಪದಕವನ್ನು ಗೆದ್ದುಕೊಂಡಿದೆ. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಇದೀಗ ಮತ್ತೆ ಕಂಚಿನ ಪದಕಕ್ಕೆ ಭಾಜನವಾಗಿದೆ.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics 2024) ಗುರುವಾರ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಹಾಕಿ ತಂಡ ಸ್ಪೇನ್ ವಿರುದ್ಧದ ಕಂಚಿನ ಪದಕದ ಪಂದ್ಯದಲ್ಲಿ ಗೆದ್ದಿದೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಎಲ್ಲವೂ ಕಂಚಿನ ಪದಕಗಳಾಗಿವೆ. ಭಾರತದ ಪಾಲಿಗೆ ಇದು ಖುಷಿಯ ವಿಚಾರವೇ ಸರಿ. ಪುರುಷರ 57 ಕೆ.ಜಿ ವಿಭಾಗದ ಪದಕದ ಸುತ್ತಿಗೆ ಪ್ರವೇಶ ಪಡೆಯುವ ಗುರಿಯೊಂದಿಗೆ ಪ್ರದರ್ಶನ ನೀಡಿದ್ದಾರೆ. ಗುರುವಾರ ನಡೆದ ಆರಂಭಿಕ ಎರಡು ಪಂದ್ಯಗಳಲ್ಲಿ ಅಮನ್ ಅತ್ಯುತ್ತಮ ಪ್ರದರ್ಶನ ನೀಡಿದರು, ತಾಂತ್ರಿಕ ಶ್ರೇಷ್ಠತೆಯೊಂದಿಗೆ ಎರಡನ್ನೂ ಗೆದ್ದಿದ್ದಾರೆ.

1972ರಲ್ಲಿ ಪುರುಷರ ಹಾಕಿ ತಂಡ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿತ್ತು. ಅದೇ ರೀತಿ ಭಾರತ ಹಾಕಿ ತಂಡ ಮತ್ತೊಮ್ಮೆ ಸತತ ಎರಡು ಬಾರಿ ಪದಕವನ್ನು ಗೆದ್ದುಕೊಂಡಿದೆ. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಇದೀಗ ಮತ್ತೆ ಕಂಚಿನ ಪದಕಕ್ಕೆ ಭಾಜನವಾಗಿದೆ.

ಭಾರತ ನಿಯೋಗದ ಕೆಲವು ಸ್ಪರ್ಧಿಗಳು ಆಗಸ್ಟ್​​ 9ರಂದು ಕೆಲವೊಂದು ಸ್ಪರ್ಧೆಗಳಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಆ ಸ್ಪರ್ಧೆಗಳ ವಿವರ ಈ ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: Paris Olympics 2024 : ಕ್ರೀಡಾಗ್ರಾಮಲ್ಲಿ ಮಾದಕ ವಸ್ತು ಕೊಕೇನ್ ಸೇವನೆ, ಆಸ್ಟ್ರೇಲಿಯಾದ ಹಾಕಿ ಆಟಗಾರನ ಬಂಧನ

ಮಧ್ಯಾಹ್ನ 12:30: ಗಾಲ್ಫ್ – ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 2 ರಲ್ಲಿ ದೀಕ್ಷಾ ದಾಗರ್ ಮತ್ತು ಅದಿತಿ ಅಶೋಕ್.

ಮಧ್ಯಾಹ್ನ 2:10: ಅಥ್ಲೆಟಿಕ್ಸ್ – ಮಹಿಳೆಯರ 4×400 ಮೀಟರ್ ರಿಲೇ ಹೀಟ್ಸ್.
ಭಾರತದ ಜ್ಯೋತಿಕಾ ಶ್ರೀ ದಂಡಿ, ಕಿರಣ್ ಪಹಲ್, ಎಂ.ಪೂವಮ್ಮ ರಾಜು ಮತ್ತು ವಿಠ್ಠಲ ರಾಮರಾಜ್ ಕಣಕ್ಕಿಳಿಯಲಿದ್ದಾರೆ.

ಮಧ್ಯಾಹ್ನ 2:35: ಅಥ್ಲೆಟಿಕ್ಸ್ – ಪುರುಷರ 4×400 ಮೀಟರ್ ರಿಲೇ ಹೀಟ್ಸ್.
ಅಮೋಜ್ ಜಾಕೋಬ್, ರಾಜೇಶ್ ರಮೇಶ್, ಸಂತೋಷ್ ಕುಮಾರ್ ತಮಿಳರಸನ್ ಮತ್ತು ಮುಹಮ್ಮದ್ ಅಜ್ಮಲ್ ವರಿಯತೋಡಿ ಸೆಮಿಫೈನಲ್ ಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ.

ಮಧ್ಯಾಹ್ನ 2:30: ಮಹಿಳೆಯರ 57 ಕೆ.ಜಿ ಫ್ರೀಸ್ಟೈಲ್​ನಲ್ಲಿ ಕುಸ್ತಿಯಲ್ಲಿ ಅನ್ಶು ಮಲಿಕ್ . ಅನ್ಶು ಅವರ ಅದೃಷ್ಟ ಮಾಜಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಹೆಲೆನ್ ಮರೌಲಿಸ್ ಅವರ ವಿರುದ್ಧ ಗೆಲ್ಲುವ ಮೂಲಕ ನಿರ್ಧಾರವಾಗಲಿದೆ.

ರಾತ್ರಿ 11:10: ಪುರುಷರ 57 ಕೆ.ಜಿ ಫ್ರೀಸ್ಟೈಲ್ ಕಂಚಿನ ಅಥವಾ ಚಿನ್ನದ ಪದಕ ಪಂದ್ಯದಲ್ಲಿ (ಪದಕ ಸ್ಪರ್ಧೆಗಳು) ಅಮನ್ ಸೆಹ್ರಾವತ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

PR Sreejesh : ಕಂಚು ಗೆದ್ದ ತಕ್ಷಣ ಗೋಲ್​ ಕೀಪಿಂಗ್​ ಗ್ಲವ್ಸ್​ಗೆ ದೀರ್ಘದಂಡ ನಮಸ್ಕಾರ ಹಾಕಿದ ಶ್ರೀಜೇಶ್​​​

PR Sreejesh : ಪಿ.ಆರ್.ಶ್ರೀಜೇಶ್ ಭಾರತೀಯ ಪುರುಷರ ಹಾಕಿ ತಂಡದ ಪ್ರಮುಖ ಆಟಗಾರ. ಅವರು ತಂಡದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಎರಡು ದಶಕಗಳ ವೃತ್ತಿಜೀವನದಲ್ಲಿ, ಶ್ರೀಜೇಶ್ ಭಾರತದ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಗೋಲ್ ಪೋಸ್ಟ್​ನಲ್ಲಿ ಅವರ ಅಸಾಧಾರಣ ಕೌಶಲ್ಯಗಳಿಗಾಗಿ ಅವರಿಗೆ “ಸೂಪರ್​ಮ್ಯಾನ್” ಎಂಬ ಅಡ್ಡಹೆಸರನ್ನು ಗಳಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ಮೊದಲೇ ಇದು ನನ್ನ ಕೊನೇ ಟೂರ್ನಿ ಎಂದು ಹೇಳಿದ್ದರು.

VISTARANEWS.COM


on

PR Sreejesh
Koo

ಬೆಂಗಳೂರು: ಪ್ಯಾರಿಸ್​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ (Paris Olympics 2024) ಕಂಚಿನ ಪದಕ ಗೆಲ್ಲುವುದರೊಂದಿಗೆ ವೃತ್ತಿಜೀವನ ಕೊನೆಗೊಳಿಸಿದ ಭಾರತ ಹಾಕಿ ತಂಡದ ಗೋಲ್​ಕೀಪರ್​ ಶ್ರೀಜೇಶ್ (PR Sreejesh)​ ನಂತರ ಭಾವುಕರಾದರು. ತಕ್ಷಣ ಅವರು ಗೋಲ್​ಕೀಪಿಂಗ್​ ಗ್ಲವ್ಸ್​ಗಳನ್ನು ಕಳಚಿಟ್ಟು ದೀರ್ಘದಂಡ ನಮಸ್ಕಅರ ಹಾಕಿದರು. ಸ್ಪೇನ್ ವಿರುದ್ಧ ಭಾರತ 2-1 ಗೋಲುಗಳ ರೋಚಕ ಜಯ ಸಾಧಿಸಿದ ಬಳಿಕ ಎಲ್ಲರೂ ಖುಷಿಯಲ್ಲಿದ್ದ ವೇಳೆ ಶ್ರೀಜೇಶ್ ಕಣ್ಣೀರಿಟ್ಟು ನಮಸ್ಕಾರ ಹಾಕಿದರು. ಈ ವೇಳೆ ತಮ್ಮ ಗೋಲ್​ ಕೀಪಂಗ್​ ಸಲಕರಣೆಗಳಿಗೆ ಗರಿಷ್ಠ ಗೌರವ ಸಲ್ಲಿಸಿದರು.

1972ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಸತತ ಒಲಿಂಪಿಕ್ಸ್​ಗಳಲ್ಲಿ ಪದಕಗಳನ್ನು ಗೆದ್ದಿದೆ. ಹರ್ಮನ್ ಪ್ರೀತ್ ಸಿಂಗ್ ಗಳಿಸಿದ ಗೋಲಿನ ನೆರವಿನಿಂದ ಭಾರತ ಒಲಿಂಪಿಕ್ಸ್ ನಲ್ಲಿ ದಾಖಲೆಯ 13ನೇ ಹಾಕಿ ಪದಕ ಜಯಿಸಿತು.

ಪಿ.ಆರ್.ಶ್ರೀಜೇಶ್ ಭಾರತೀಯ ಪುರುಷರ ಹಾಕಿ ತಂಡದ ಪ್ರಮುಖ ಆಟಗಾರ. ಅವರು ತಂಡದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಎರಡು ದಶಕಗಳ ವೃತ್ತಿಜೀವನದಲ್ಲಿ, ಶ್ರೀಜೇಶ್ ಭಾರತದ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಗೋಲ್ ಪೋಸ್ಟ್​ನಲ್ಲಿ ಅವರ ಅಸಾಧಾರಣ ಕೌಶಲ್ಯಗಳಿಗಾಗಿ ಅವರಿಗೆ “ಸೂಪರ್​ಮ್ಯಾನ್” ಎಂಬ ಅಡ್ಡಹೆಸರನ್ನು ಗಳಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ಮೊದಲೇ ಇದು ನನ್ನ ಕೊನೇ ಟೂರ್ನಿ ಎಂದು ಹೇಳಿದ್ದರು.

ಕೇರಳದ ಕೊಚ್ಚಿಯ ಆಟಗಾರ

ಕೇರಳದ ಕೊಚ್ಚಿಯ ಉಪನಗರವಾದ ಕಿಝಕ್ಕಂಬಲಂನಲ್ಲಿ ಜನಿಸಿದ ಶ್ರೀಜೇಶ್ ಕೃಷಿ ಕುಟುಂಬದಿಂದ ಬಂದವರು. ಹಾಕಿ ಕಿಟ್ ಖರೀದಿಸಲು ತಮ್ಮ ಹಸುವನ್ನು ಮಾರಿದ ಅವರ ತಂದೆಯ ತ್ಯಾಗವು ಕ್ರೀಡೆಯಲ್ಲಿ ಅವರ ಆರಂಭಿಕ ಹಂತದ ಪ್ರಯಾಣವಾಗಿತ್ತು. ಸಾಂಪ್ರದಾಯಿಕ ಉಡುಗೆ ಮತ್ತು ಮಲಯಾಳಂ ಉಚ್ಚಾರಣೆಗಾಗಿ ಅಪಹಾಸ್ಯವನ್ನು ಎದುರಿಸುತ್ತಿದ್ದರೂ, ಶ್ರೀಜೇಶ್ ತನ್ನ ತಂದೆಯ ಅಚಲ ಬೆಂಬಲದಿಂದ ತಿರುವನಂತಪುರಂನ ಜಿವಿ ರಾಜಾ ಸ್ಪೋರ್ಟ್ಸ್ ಸ್ಕೂಲ್​ಗೆ ಸೇರಿದ್ದರು ಅಲ್ಲಿ ಅವರ ತರಬೇತುದಾರರು ಗೋಲ್ ಕೀಪಿಂಗ್ ಆಯ್ಕೆ ಮಾಡಲು ಸಲಹೆ ನೀಡಿದರು. ಈ ನಿರ್ಧಾರವು ಅವರ ವೃತ್ತಿಜೀವನವನ್ನು ರೂಪಿಸುವಲ್ಲಿ ನಿರ್ಣಾಯಕವಾಯಿತು.

ಶ್ರೀಜೇಶ್ ಆರಂಭದಲ್ಲಿ ಭಾರತೀಯ ಶಿಬಿರದ ಹಿಂದಿ ಮಾತನಾಡುವ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಣಗಾಡಿದರು. ಗೋಲ್ ಕೀಪರ್ ಆಗಿದ್ದ ಅವರಿಗೆ ಭಾಷೆಯ ಅಡೆತಡೆಯ ಹೊರತಾಗಿಯೂ ಬೆಳೆಯಲು ಸಹಾಯವಾಯಿತು. ಆರಂಭಿಕ ವರ್ಷಗಳಲ್ಲಿ ಓಡಬೇಕಾಗುತ್ತದೆ ಎಂಬ ಕಾರಣಕ್ಕೆ ಗೋಲ್ ಕೀಪಿಂಗ್ ಅನ್ನು ಆಯ್ಕೆ ಮಾಡಿದ್ದರು. ಇದು ಅವರ ಯಶಸ್ಸಿನ ಅಡಿಪಾಯವಾಯಿತು.

ಇದನ್ನೂ ಓದಿ: Aman Sehrawat : ಸೆಮಿ ಫೈನಲ್​ನಲ್ಲಿ ಸೋತ ಅಮನ್​; ನಾಳೆ ಕಂಚಿನ ಪದಕಕ್ಕಾಗಿ ಹೋರಾಟ

ತಮ್ಮ ವೃತ್ತಿಜೀವನದುದ್ದಕ್ಕೂ, ಶ್ರೀಜೇಶ್ ಭಾರತದ ಹಾಕಿ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿನ್ನ ಸೇರಿದಂತೆ ಮೂರು ಏಷ್ಯನ್ ಕ್ರೀಡಾಕೂಟದ ಪದಕಗಳನ್ನು ಗೆದ್ದಿದ್ದಾರೆ. ಇದು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸಿತು. ಒಲಿಂಪಿಕ್ಸ್​ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧದ ಕ್ವಾರ್ಟರ್ ಫೈನಲ್​ನಲ್ಲಿ ಅವರ ಅಸಾಧಾರಣ ಪ್ರದರ್ಶನ ಭಾರತದ ಗೆಲುವಿಗೆ ಕಾರಣವಾಯಿತು. ಎದುರಾಳಿ ತಂಡದ 15 ಶಾಟ್​ಗಳಲ್ಲಿ 13 ಅನ್ನು ತಡೆದಿದ್ದರು. 2021 ಮತ್ತು 2022 ರಲ್ಲಿ ಎಫ್ಐಎಚ್​​ನ ಅತ್ಯುತ್ತಮ ಗೋಲ್​​ಕೀಪರ್​ ಪ್ರಶಸ್ತಿ ಪಡೆದಿದ್ದರು.

ಶ್ರೀಜೇಶ್ ಅವರ ನಾಯಕತ್ವ ಮತ್ತು ಮಾರ್ಗದರ್ಶನ ಭಾರತ ತಂಡಕ್ಕೆ ಅಮೂಲ್ಯವಾಗಿದೆ. ಅವರು ತಮ್ಮ ತಂಡದ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಅವರು ತಂಡದ ಆಟಗಾರರಿಗೆ ಸೂಚನೆಗಳನ್ನು ನೀಡುತ್ತಾರೆ. ಇದು ಅವರ ಆಟದ ಶೈಲಿಯ ಹೆಗ್ಗುರುತಾಗಿದೆ. ಆಡದಿದ್ದರೂ ಸಹ ತಂಡದ ಆಟಗಾರನಾಗಿ ಬದಿಯಿಂದ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಿದ್ದರು.

ಶ್ರೀಜೇಶ್ ಅವರಿಗೆ 2017 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಮತ್ತು 2021 ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ. ಅವರು ವರ್ಷದ ವಿಶ್ವ ಕ್ರೀಡಾಕೂಟದ ಅಥ್ಲೀಟ್ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ.

Continue Reading

ಪ್ರಮುಖ ಸುದ್ದಿ

Aman Sehrawat : ಸೆಮಿ ಫೈನಲ್​ನಲ್ಲಿ ಸೋತ ಅಮನ್​; ನಾಳೆ ಕಂಚಿನ ಪದಕಕ್ಕಾಗಿ ಹೋರಾಟ

Aman Sehrawat : ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಅವರು ಪ್ಯಾನ್ ಅಮೆರಿಕನ್ ಗೇಮ್ಸ್ ಕಂಚಿನ ಪದಕ ವಿಜೇತ ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ಅವರನ್ನು ಎದುರಿಸಲಿದ್ದಾರೆ. 57 ಕೆಜಿ ವಿಭಾಗದ ಆ ಕುಸ್ತಿಪಟು ರಿಪೆಚೇಜ್ ಮೂಲಕ ಕ್ವಾರ್ಟರ್​ ಫೈನಲ್​ಗೇರಿದ್ದಾರೆ.

VISTARANEWS.COM


on

Aman Sehrawat
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024) ಸ್ಪರ್ಧೆಯಲ್ಲಿ ಉಳಿದಿದ್ದ ಭಾರತದ ಏಕೈಕ ಪುರುಷ ಕುಸ್ತಿಪಟು ಅಮನ್ ಸೆಹ್ರಾವತ್ (Aman Sehrawat) ಗುರುವಾರ ನಡೆದ ಪುರುಷರ 57 ಕೆ.ಜಿ ವಿಭಾಗದ ಸೆಮಿಫೈನಲ್​​ನಲ್ಲಿ ಜಪಾನ್ನ ರೇ ಹಿಗುಚಿ ವಿರುದ್ಧ ಸೋತರು. ಹೀಗಾಗಿ ಶುಕ್ರವಾರ ನಡೆಯಲಿರುವ ಕಂಚಿನ ಪದಕದ ಪಂದ್ಯದಲ್ಲಿ ಹೋರಾಡಲಿದ್ದಾರೆ. ಮೂರು ನಿಮಿಷಗಳ ಮೊದಲ ಅವಧಿಯನ್ನು ಮೀರದ ಸೆಮಿಫೈನಲ್ ಪಂದ್ಯದಲ್ಲಿ ಅಮನ್ ತಾಂತ್ರಿಕ ಹಿನ್ನಡೆಯೊಂದಿಗೆ ಸೋತರು.

ಗುರುವಾರ ಸತತ ಎರಡು ತಾಂತ್ರಿಕ ಶ್ರೇಷ್ಠತೆ ಗೆಲುವುಗಳನ್ನು ಗಳಿಸಿದ ನಂತರ ಅಮನ್ ಸೆಹ್ರಾವತ್​​ ಆತ್ಮವಿಶ್ವಾಸದಲ್ಲಿದ್ದರು. ಆದಾಗ್ಯೂ, ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಮತ್ತು 2022 ರ ವಿಶ್ವ ಚಾಂಪಿಯನ್ ರೀ ಹಿಗುಚಿ 21 ವರ್ಷದ ಭಾರತೀಯನಿಗೆ ಸ್ವಲ್ಪವೂ ಅವಕಾಶ ಕೊಡಲಿಲ್ಲ.

ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಅವರು ಪ್ಯಾನ್ ಅಮೆರಿಕನ್ ಗೇಮ್ಸ್ ಕಂಚಿನ ಪದಕ ವಿಜೇತ ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ಅವರನ್ನು ಎದುರಿಸಲಿದ್ದಾರೆ. 57 ಕೆಜಿ ವಿಭಾಗದ ಆ ಕುಸ್ತಿಪಟು ರಿಪೆಚೇಜ್ ಮೂಲಕ ಕ್ವಾರ್ಟರ್​ ಫೈನಲ್​ಗೇರಿದ್ದಾರೆ.

ಉತ್ತರ ಮ್ಯಾಸಿಡೋನಿಯಾದ ವ್ಲಾದಿಮಿರ್ ಎಗೊರೊವ್ ವಿರುದ್ಧ 10-0 ಅಂತರದಲ್ಲಿ ಜಯ ಸಾಧಿಸುವ ಮೂಲಕ 21ರ ಹರೆಯದ ಅಮನ್ ಒಲಿಂಪಿಕ್ಸ್ಗೆ ಪದಾರ್ಪಣೆ ಮಾಡಿದ್ದರು. ಕ್ವಾರ್ಟರ್ ಫೈನಲ್​ನಲ್ಲಿ ಅಮನ್ ಅಲ್ಬೇನಿಯಾದ ಅಬರಕೊವ್ ಜೆಲಿಮ್ಖಾನ್ ಅವರನ್ನು 12-0 ಅಂತರದಿಂದ ಸೋಲಿಸಿದ್ದರು.

ಇದನ್ನೂ ಓದಿ: Paris Olympics 2024 : ಕಂಚು ಗೆದ್ದ ಹಾಕಿ ತಂಡದ ಪಂಜಾಬ್​​ನ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ ಪ್ರಕಟ

2004 ರಲ್ಲಿ ಜನಿಸಿದ ಸೆಹ್ರಾವತ್ ದೆಹಲಿಯ ಪ್ರತಿಷ್ಠಿತ ಛತ್ರಾಸಲ್ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು ಈಗಾಗಲೇ ಅಂಡರ್ 23 ವಿಶ್ವ ಚಾಂಪಿಯನ್ಶಿಪ್ ಮತ್ತು ಹಿರಿಯ ಏಷ್ಯನ್ ಚಾಂಪಿಯನ್ಶಿಪ್ ಸೇರಿದಂತೆ ಪ್ರಭಾವಶಾಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಅನ್ಶು ಮಲಿಕ್ (57 ಕೆ.ಜಿ) ಗುರುವಾರ ಆರಂಭಿಕ ಸುತ್ತಿನಲ್ಲಿ ಸೋತರೆ, ಅತಿಂಮ್ ಪಂಗಲ್ (53 ಕೆಜಿ) ಆರಂಭಿಕ ಸುತ್ತಿನಲ್ಲಿ ಸೋತರು. ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ನಿಶಾ ದಹಿಯಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೃದಯ ವಿದ್ರಾವಕ ಗಾಯದಿಂದಾಗಿ ಸೋತಿದ್ದಾರೆ. ಮಹಿಳಾ 50 ಕೆ.ಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ.

Continue Reading

ಪ್ರಮುಖ ಸುದ್ದಿ

Paris Olympics 2024 : ಕಂಚು ಗೆದ್ದ ಹಾಕಿ ತಂಡದ ಪಂಜಾಬ್​​ನ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ ಪ್ರಕಟ

Paris Olympics 2024 : “ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತೀಯ ಹಾಕಿ ತಂಡವು ಸ್ಪೇನ್ ಅನ್ನು 2-1 ಅಂತರದಿಂದ ಸೋಲಿಸಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಪ್ಯಾರಿಸ್​​ನಲ್ಲಿ ಭಾರತಕ್ಕೆ 4ನೇ ಒಲಿಂಪಿಕ್ ಪದಕ ಗೆದ್ದ ಹಾಕಿ ತಂಡದ ಆಟಗಾರರಿಗೆ ಅಭಿನಂದನೆಗಳು. ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಉಪನಾಯಕ ಹಾರ್ದಿಕ್ ಸಿಂಗ್ ಸೇರಿದಂತೆ 10 ಪಂಜಾಬಿ ಆಟಗಾರರು ಇದ್ದರು ಎಂಬುದು ನಮಗೆ ಇನ್ನಷ್ಟು ಹೆಮ್ಮೆಯ ವಿಷಯ. ತಂಡದ ಪ್ರತಿಯೊಬ್ಬ ಆಟಗಾರರೂ ಉತ್ಸಾಹದಿಂದ ಆಡಿದರು” ಎಂದು ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡದ ಭಾಗವಾಗಿದ್ದ ತಮ್ಮ ರಾಜ್ಯದ ಎಲ್ಲಾ ಆಟಗಾರರಿಗೆ ಪಂಜಾಬ್ ಮುಖ್ಯಮಂತ್ರಿ (Punjab CM) ಭಗವಂತ್ ಮಾನ್ 1 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಈ ಬಹುಮಾನವು ತಮ್ಮ ಕ್ರೀಡಾ ನೀತಿಯ ಒಂದು ಭಾಗವಾಗಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ. ಆಗಸ್ಟ್ 8 ರಂದು ಸ್ಪೇನ್ ತಂಡವನ್ನು 2-1 ರಿಂದ ಸೋಲಿಸಿದ ನಂತರ ಒಲಿಂಪಿಕ್ ಕಂಚಿನ ಪದಕ ಗೆದ್ದ ಆಟಗಾರರ ಖಾತೆಗೆ ಹಣ ಹೋಗಲಿದೆ. ಅಂದ ಹಾಗೆ ಹಾಕಿ ತಂಡದಲ್ಲಿ ನಾಯಕ ಹರ್ಮನ್​ಪ್ರೀತ್​ ಸಿಂಗ್ ಸೇರಿದಂತೆ 10 ಮಂದಿ ಪಂಜಾಬ್ ಆಟಗಾರರು ಇದ್ದಾರೆ.

ಭಗವಂತ್ ಮಾನ್ ಆರಂಭದಲ್ಲಿ ಭಾರತೀಯ ಹಾಕಿ ತಂಡವನ್ನು ಅಭಿನಂದಿಸಿದರು. ಬಳಿಕ ಕಂಚಿನ ವಿಜೇತರಿಗೆ ಬಹುಮಾನದ ಮೊತ್ತವನ್ನು ಘೋಷಿಸಿದ್ದಾರೆ.

“ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತೀಯ ಹಾಕಿ ತಂಡವು ಸ್ಪೇನ್ ಅನ್ನು 2-1 ಅಂತರದಿಂದ ಸೋಲಿಸಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಪ್ಯಾರಿಸ್​​ನಲ್ಲಿ ಭಾರತಕ್ಕೆ 4ನೇ ಒಲಿಂಪಿಕ್ ಪದಕ ಗೆದ್ದ ಹಾಕಿ ತಂಡದ ಆಟಗಾರರಿಗೆ ಅಭಿನಂದನೆಗಳು. ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಉಪನಾಯಕ ಹಾರ್ದಿಕ್ ಸಿಂಗ್ ಸೇರಿದಂತೆ 10 ಪಂಜಾಬಿ ಆಟಗಾರರು ಇದ್ದರು ಎಂಬುದು ನಮಗೆ ಇನ್ನಷ್ಟು ಹೆಮ್ಮೆಯ ವಿಷಯ. ತಂಡದ ಪ್ರತಿಯೊಬ್ಬ ಆಟಗಾರರೂ ಉತ್ಸಾಹದಿಂದ ಆಡಿದರು” ಎಂದು ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.

“ನಮ್ಮ ಕ್ರೀಡಾ ನೀತಿಯ ಪ್ರಕಾರ ನಾವು ಪಂಜಾಬ್​​ ಪ್ರತಿ ಕಂಚಿನ ಪದಕ ವಿಜೇತರಿಗೆ 1 ಕೋಟಿ ರೂ.ಗಳನ್ನು ನೀಡುತ್ತೇವೆ” ಎಂದು ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.

ಕಂಚಿನ ಪದಕ ಗೆದ್ದ ಹಾಕಿ ತಂಡದ ಆಟಗಾರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಬೆಂಗಳೂರು: ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಸತತ ಎರಡನೇ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ಯಾರಿಸ್​​ನಲ್ಲಿ (Paris Olympics 2024) ನಡೆದ ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಗೆದ್ದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಭಾರತೀಯ ಹಾಕಿ ತಂಡಕ್ಕೆ ಕರೆ ಮಾಡಿದರು. ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಭಾರತ ತಂಡ ಜರ್ಮನಿ ವಿರುದ್ಧದ ಸೆಮಿಫೈನಲ್​​ನಲ್ಲಿ 2-3 ಗೋಲುಗಳಿಂದ ಸೋಲನುಭವಿಸಿ ಫೈನಲ್ ತಲುಪಲು ವಿಫಲವಾಗಿತ್ತು.

ಇದನ್ನೂ ಓದಿ: Chess Player : ಪ್ರತಿಸ್ಪರ್ಧಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ರಷ್ಯಾದ ಚೆಸ್ ಆಟಗಾರ್ತಿ; ಇಲ್ಲಿದೆ ವಿಡಿಯೊ

ಪಿಎಂ ಮೋದಿ ಇಡೀ ತಂಡವನ್ನು ಅವರೆಲ್ಲರ ಐತಿಹಾಸಿಕ ಸಾಧನೆಗಾಗಿ ಅಭಿನಂದಿಸಿದರು. ಇದು ಕೌಶಲ್ಯ, ಪರಿಶ್ರಮ ಮತ್ತು ತಂಡದ ಮನೋಭಾವದ ಯಶಸ್ಸು ಎಂದು ಬಣ್ಣಿಸಿದರು. ಈ ಸಾಧನೆಯು ಯುವಜನರಲ್ಲಿ ಹಾಕಿಯನ್ನು ಇನ್ನಷ್ಟು ಜನಪ್ರಿಯಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು.

52 ವರ್ಷಗಳ ನಂತರ ಭಾರತವು ಕ್ರೀಡಾಕೂಟದಲ್ಲಿ ಸತತ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 1972ರ ಒಲಿಂಪಿಕ್ಸ್​ನಲ್ಲಿ ಭಾರತ ಕೊನೆಯ ಬಾರಿ ಸತತ ಪದಕಗಳನ್ನು ಗೆದ್ದಿತ್ತು. 96 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಭಾರತವು ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ 14 ಪದಕಗಳನ್ನು ಗೆದ್ದಿದೆ.

Continue Reading

ಕರ್ನಾಟಕ

Bengaluru News: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೊಹಮ್ಮದ್‌ ಹಸನೈನ್‌ಗೆ ಚಿನ್ನದ ಪದಕ

Bengaluru News: ಶಿವಮೊಗ್ಗದಲ್ಲಿ ಎ ಝಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಬಾಲ್ಡ್‌ವಿನ್‌ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿ ಮೊಹಮ್ಮದ್‌ ಹಸನೈನ್‌ಗೆ ಚಿನ್ನದ ಪದಕ ಲಭಿಸಿದೆ.

VISTARANEWS.COM


on

Bengaluru News
Koo

ಬೆಂಗಳೂರು: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೊಹಮ್ಮದ್‌ ಹಸನೈನ್‌ಗೆ ಚಿನ್ನದ ಪದಕ ಲಭಿಸಿದೆ. ಶಿವಮೊಗ್ಗದಲ್ಲಿ ಎ ಝಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾರತ, ನೇಪಾಳ, ಭೂತಾನ್, ದುಬೈ, ಶ್ರೀಲಂಕಾ ಮತ್ತು ಬಾಂಗ್ಲಾ ಸೇರಿದಂತೆ 6 ದೇಶದ ಸ್ಪರ್ಧಿಗಳು (Bengaluru News) ಭಾಗವಹಿಸಿದ್ದರು.

ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್‌ (ಎಕೆಎಸ್‌ಕೆಎ) ನ ಕರ್ನಾಟಕ ರಾಜ್ಯ ಕ್ರೀಡಾ ಆಯೋಗದ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ತೀರ್ಪುಗಾರ ರೆನ್ಶಿ ಜೈನ್ ನೇತೃತ್ವದ ಸುಡೋಕನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಪ್ರತಿನಿಧಿಸಿತ್ತು. ಈ ಚಾಂಪಿಯನ್‌ಶಿಪ್‌ನಲ್ಲಿ ಹಸನೈನ್ ಅದ್ವಿತೀಯ ಪ್ರದರ್ಶನ ನೀಡಿದರು.

ಇದನ್ನೂ ಓದಿ: Bengaluru Power Cut: ಆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಹಸನೈನ್‌ ಬೆಂಗಳೂರಿನ ಬಾಲ್ಡ್‌ವಿನ್‌ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ಏಳು ವರ್ಷದ ಕಟಾ ವಿಭಾಗದಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಈತನ ಕರಾಟೆಯಲ್ಲಿನ ಸಾಧನೆ ಮತ್ತು ಅತ್ಯುತ್ತಮ ರ‍್ಯಾಂಕಿಂಗ್‌ಗಾಗಿ ರೂ. 25,000 ಚೆಕ್‌ ನೀಡಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಎರಡು ಬಾರಿ ರಾಜ್ಯ ಚಾಂಪಿಯನ್ ಹಾಗೂ ದಕ್ಷಿಣ ಭಾರತ ಚಾಂಪಿಯನ್ ಪಡೆದಿರುವ ಕರ್ನಾಟಕದ ಅತಿ ಕಿರಿಯ ಎಂಬ ದಾಖಲೆ ಹೊಂದಿರುವ ಹಸನೈನ್‌ಗೆ ಈ ಪುರಸ್ಕಾರ ಲಭಿಸಿದೆ.

ರೆನ್ಶಿ ಝೈನ್ ಅವರ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ತಂಡವು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡರು. ಕಟಾ ವಿಭಾಗದಲ್ಲಿ 13 ಚಿನ್ನ, 5 ಬೆಳ್ಳಿ ಮತ್ತು 7 ಕಂಚಿನ ಪದಕಗಳು ಮತ್ತು ಕುಮಿಟೆ ವಿಭಾಗದಲ್ಲಿ 1 ಚಿನ್ನ, 2 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಬಾಚಿಕೊಂಡಿದ್ದಾರೆ.

ಇದನ್ನೂ ಓದಿ: Thangalaan Movie: ಬಹುನಿರೀಕ್ಷಿತ ʼತಂಗಲಾನ್‍ʼ ಚಿತ್ರಕ್ಕೆ ʼಕಾಂತಾರʼ ಸ್ಫೂರ್ತಿ ಎಂದ ಚಿಯಾನ್‌ ವಿಕ್ರಮ್‌!

ಎಕೆಎಸ್‌ಕೆಎ ಅಧ್ಯಕ್ಷ ಅರುಣ್ ಮಾಚಯ್ಯ, ಪ್ರಧಾನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ, ಪಂದ್ಯಾವಳಿಯ ಆಯೋಜಕ ಡಾ. ಶಿಹಾನ್ ಎ ಝಡ್ ಮುಹೀಬ್ ಮತ್ತು ಅಧ್ಯಕ್ಷ ಮತ್ತು ಗ್ರ್ಯಾಂಡ್ ಮಾಸ್ಟರ್ ಡಾ. ಹಂಶಿ ಪ್ರವೀಣ್ ರಂಕಾ ಅವರ ಬೆಂಬಲದೊಂದಿಗೆ ಪಂದ್ಯಾವಳಿಗಳು ಜರುಗಿದವು. ಬಾಲ್ಡ್‌ವಿನ್ ಬಾಯ್ಸ್ ಹೈಸ್ಕೂಲ್ ಪ್ರಿನ್ಸಿಪಾಲ್ ಡಾ. ಲೀನಾ ಡೇನಿಯಲ್ ಅವರು ಯುವ ಕ್ರೀಡಾಪಟುಗಳಿಗೆ ಶುಭಾಶಯ ತಿಳಿಸಿದ್ದಾರೆ.

Continue Reading
Advertisement
PR Sreejesh
ಪ್ರಮುಖ ಸುದ್ದಿ24 mins ago

PR Sreejesh : ಕಂಚು ಗೆದ್ದ ತಕ್ಷಣ ಗೋಲ್​ ಕೀಪಿಂಗ್​ ಗ್ಲವ್ಸ್​ಗೆ ದೀರ್ಘದಂಡ ನಮಸ್ಕಾರ ಹಾಕಿದ ಶ್ರೀಜೇಶ್​​​

Bengaluru
ಬೆಂಗಳೂರು1 hour ago

Bengaluru: ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಕಲ್ಲು ಎತ್ತಿಹಾಕಿದ ದುಷ್ಟ; ದುರುಳನಿಗೆ ಬಿತ್ತು ಧರ್ಮದೇಟು!

Aman Sehrawat
ಪ್ರಮುಖ ಸುದ್ದಿ1 hour ago

Aman Sehrawat : ಸೆಮಿ ಫೈನಲ್​ನಲ್ಲಿ ಸೋತ ಅಮನ್​; ನಾಳೆ ಕಂಚಿನ ಪದಕಕ್ಕಾಗಿ ಹೋರಾಟ

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಕಂಚು ಗೆದ್ದ ಹಾಕಿ ತಂಡದ ಪಂಜಾಬ್​​ನ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ ಪ್ರಕಟ

Best Selling Cars
ಆಟೋಮೊಬೈಲ್2 hours ago

Best Selling Cars: ಜುಲೈನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳು ಯಾವವು?

Muhammad Yunus
ದೇಶ2 hours ago

Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

Bengaluru News
ಕರ್ನಾಟಕ2 hours ago

Bengaluru News: ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೊಹಮ್ಮದ್‌ ಹಸನೈನ್‌ಗೆ ಚಿನ್ನದ ಪದಕ

chess player
ಕ್ರೀಡೆ2 hours ago

Chess Player : ಪ್ರತಿಸ್ಪರ್ಧಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ರಷ್ಯಾದ ಚೆಸ್ ಆಟಗಾರ್ತಿ; ಇಲ್ಲಿದೆ ವಿಡಿಯೊ

Toyota
ಕರ್ನಾಟಕ2 hours ago

Toyota: ಗ್ರಾಮೀಣ ಯುವ ಜನತೆಗೆ ಟೊಯೊಟಾದಿಂದ ಉತ್ತಮ ತರಬೇತಿ, ಶಿಕ್ಷಣ; ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ಲಾಘನೆ

Channapatna News
ಕರ್ನಾಟಕ2 hours ago

Channapatna News: ಚನ್ನಪಟ್ಟಣ ಕ್ಷೇತ್ರದ ಬಡವರ ನಿವೇಶನಕ್ಕಾಗಿ 120 ಎಕರೆ ಜಮೀನು ಗುರುತು: ಡಿ.ಕೆ. ಶಿವಕುಮಾರ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ8 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ9 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌