ಭಾರತ ಜತೆ ಸ್ನೇಹಕ್ಕೆ ಯತ್ನ; ಗಾಂಧಿ-ಜಿನ್ನಾ ಕ್ರಿಕೆಟ್ ಟ್ರೋಫಿ ನಡೆಸಲು ಪಾಕ್​ ಚಿಂತನೆ​ - Vistara News

ಕ್ರಿಕೆಟ್

ಭಾರತ ಜತೆ ಸ್ನೇಹಕ್ಕೆ ಯತ್ನ; ಗಾಂಧಿ-ಜಿನ್ನಾ ಕ್ರಿಕೆಟ್ ಟ್ರೋಫಿ ನಡೆಸಲು ಪಾಕ್​ ಚಿಂತನೆ​

ಮಹಮ್ಮದ್ ಅಲಿ ಜಿನ್ನಾ ಮತ್ತು ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ಕ್ರಿಕೆಟ್​ ಟ್ರೋಫಿ(Jinnah-Gandhi Trophy) ನಡೆಸಲು ಪಾಕ್​ ಕ್ರಿಕೆಟ್​ ಮಂಡಳಿ ಚಿಂತನೆ ನಡೆಸಿದೆ,

VISTARANEWS.COM


on

Zaka Ashraf
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರಾಚಿ: ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್(Zaka Ashraf) ಅವರು ಮಹಮ್ಮದ್ ಅಲಿ ಜಿನ್ನಾ ಮತ್ತು ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ಕ್ರಿಕೆಟ್​ ಟ್ರೋಫಿ(Jinnah-Gandhi Trophy) ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಈ ಟ್ರೋಫಿ ಆಸೀಸ್​ ಮತ್ತು ಇಂಗ್ಲೆಂಡ್​ ನಡುವೆ ನಡೆಯುವ ಆಶ್ಯಸ್ ಸರಣಿಯಷ್ಟು ಮಹತ್ವದ ಪಡೆಯಲಿದೆ ಎಂದು ಅಶ್ರಫ್ ಹೇಳಿದ್ದಾರೆ.​

ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ ಕೊನೆಯ ಬಾರಿ ಏಕದಿನ ಮತ್ತು ಟಿ20 ಸರಣಿ ಆಡಿದ್ದು 2012-13ರಲ್ಲಿ, ಇದಾಗ ಬಳಿಕ ಉಭಯ ತಂಡಗಳು ತಮ್ಮ ತಮ್ಮ ದೇಶದಲ್ಲಿ ದ್ವಿಪಕ್ಷೀಯ ಸರಣಿ ಆಡಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಈ ಬಾರಿಯ ಏಷ್ಯಾ ಕಪ್​(Asia Cup) ಟೂರ್ನಿಯ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ(Roger Binny) ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅಲ್ಲದೆ ತವರಿಗೆ ಮರಳಿದ ಬಳಿಕ ಪಾಕಿಸ್ತಾನದ ಆತಿಥ್ಯವನ್ನು ಶ್ಲಾಘಿಸಿದರು. ಈ ವೇಳೆ ಉಭಯ ದೇಶಗಳ ನಡುವೆ ಮತ್ತೆ ದ್ವಿಪಕ್ಷೀಯ ಸರಣಿ ಆರಂಭವಾಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿತ್ತು.

ಬಿಸಿಸಿಐಗೂ ಪ್ರಸ್ತಾವ

71ರ ಹರೆಯದ ಝಾಕಾ ಅಶ್ರಫ್ ಅವರು ವಿಶ್ವಕಪ್​ ವಿಚಾರದಲ್ಲಿ ಮಾಧ್ಯಮದ ಜತೆ ಮಾತನಾಡುವ ವೇಳೆ ಜಿನ್ನಾ-ಗಾಂಧಿ ದ್ವಿಪಕ್ಷೀಯ ಸರಣಿಯ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಈ ಪ್ರಸ್ತಾವವನ್ನು ಬಿಸಿಸಿಐಗೂ ತಿಳಿಸಲಾಗಿದೆ ಎಂದರು. ಆದರೆ ಬಿಸಿಸಿಐ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಕಳೆದ ತಿಂಗಳು ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್ ಹೇಳಿದ ಹೇಳಿಕೆಯೊಂದನ್ನು ಗಮನಿಸುವಾಗ ಈಗ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ.

ಮೊದಲು ಭಯೋತ್ಪಾದನೆಗೆ ಬ್ರೇಕ್​ ಹಾಕಿ

ಗಡಿಯಾಚೆಗಿನ ಭಯೋತ್ಪಾದನೆ(Terrorism) ಮತ್ತು ಭಾರತ ಅಕ್ರಮ ಗಡಿ ಒಳನುಸುಳುವಿಕೆಯನ್ನು ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ(IND vs PAK) ಕ್ರಿಕೆಟ್ ಇರುವುದಿಲ್ಲ ಎಂದು (Anurag Thakur) ಹೇಳಿದ್ದರು.

“ಕ್ರೀಡೆಗೆ ಸಂಬಂಧಿಸಿದಂತೆ, ಒಳನುಸುಳುವಿಕೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಗಳನ್ನು ನಡೆಸುವುದಿಲ್ಲ ಎಂದು ಬಿಸಿಸಿಐ ಬಹಳ ಹಿಂದೆಯೇ ನಿರ್ಧರಿಸಿತ್ತು. ಇದು ಈ ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಭಾವನೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದರು.

ಇದನ್ನೂ ಓದಿ ind vs pak : ಒಂದೇ ದಿನ, ಪಾಕಿಸ್ತಾನವನ್ನು ಮೂರು ಕ್ರೀಡೆಗಳಲ್ಲಿ ಬಗ್ಗುಬಡಿದ ಭಾರತ

2008ರಲ್ಲಿ ಪಾಕ್​ಗೆ ತೆರಳಿದ್ದ ಭಾರತ

2008ರ ಮುಂಬೈ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ​ ನಡುವೆ ದ್ವಿಪಕ್ಷೀಯ ಕ್ರಿಕೆಟ್​ ಪಂದ್ಯಾಟಗಳು ನಡೆದಿಲ್ಲ. ಭಾರತ ತಂಡ 2008ರಲ್ಲಿ ಕೊನೆಯ ಬಾರಿ ಏಷ್ಯಾ ಕಪ್‌ ಟೂರ್ನಿ ಆಡಲು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು ಹಾಗೂ 2006ರಲ್ಲಿ ಪಾಕಿಸ್ತಾನಲ್ಲಿ ಉಭಯ ತಂಡಗಳು ಕೊನೆಯ ಬಾರಿ ದ್ವಿಪಕ್ಷೀಯ ಸರಣಿಯಲ್ಲಿ ಕಾದಾಟ ನಡೆಸಿದ್ದವು. 2016ರ ಟಿ20 ವಿಶ್ವ ಕಪ್‌ ಟೂರ್ನಿ ಆಡಲು ಪಾಕಿಸ್ತಾನ ಕೊನೆಯ ಬಾರಿ ಭಾರತಕ್ಕೆ ಆಗಮಿಸಿತ್ತು. ಇದೀಗ 7 ವರ್ಷಗಳ ಬಳಿಕ ಏಕದಿನ ವಿಶ್ವಕಪ್​ ಟೂರ್ನಿ ಆಡುವ ಸಲುವಾಗಿ ಪಾಕ್​ ತಂಡ ಭಾರತಕ್ಕೆ ಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Mumbai Cricket Association : ಮುಂಬೈನಲ್ಲಿ ನಿರ್ಮಾಣವಾಗಲಿದೆ 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್​ ಸ್ಟೇಡಿಯಮ್​

Mumbai Cricket Association : ಟಿ20 ವಿಜಯೋತ್ಸವ ಬಳಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರರು ಸ್ವಾಗತಿಸಿದ್ದರು.

VISTARANEWS.COM


on

Mumbai Cricket Association
Koo

ಬೆಂಗಳೂರು: ಟಿ 20 ವಿಶ್ವಕಪ್ 2024 ವಿಜೇತ ಭಾರತೀಯ ತಂಡದ ಸದಸ್ಯರು ಇತ್ತೀಚೆಗೆ ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಮ್​ನಲ್ಲಿ (wankhede stadium) ಸಂಭ್ರಮಾಚರಣೆ ಮಾಡಿದ್ದರು. ಆದರೆ, ಈ ಐತಿಹಾಸಿಕ ಸ್ಟೇಡಿಯಮ್​ ಇನ್ನು ಮುಂದೆ ಇತಿಹಾಸದ ಪುಸ್ತಕ ಸೇರುವ ಎಲ್ಲ ಸಾಧ್ಯತೆಗಳಿವೆ. ಯಾಕೆಂದರೆ ಮಹಾರಾಷ್ಟ್ರ ಕ್ರಿಕೆಟ್​ ಸಂಸ್ಥೆಯು (Mumbai Cricket Association) ಒಂದು ಲಕ್ಷ ಮಂದಿ ಪ್ರೇಕ್ಷಕರ ದೊಡ್ಡ ಸ್ಟೇಡಿಯಮ್ ಒಂದನ್ನು ನಿರ್ಮಿಸಲು ಮುಂದಾಗಿದೆ. ಹೀಗಾದರೆ ವಾಂಖೆಡೆ ಮೂಲೆಗುಂಪಾಗುವುದು ಖಚಿತ.

ಟಿ20 ವಿಜಯೋತ್ಸವ ಬಳಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರರು ಸ್ವಾಗತಿಸಿದ್ದರು.

ಮಹಾರಾಷ್ಟ್ರ ಮೂಲದ ಎಲ್ಲಾ ಕ್ರಿಕೆಟಿಗರನ್ನು ರಾಜ್ಯ ಸರ್ಕಾರವು ಸನ್ಮಾನಿಸಿತ್ತು. ಆಗ ಫಡ್ನವೀಸ್ ಸಿಎಂ ಏಕನಾಥ್​ ಶಿಂಧೆ ಬಳಿ ರಾಜ್ಯದಲ್ಲಿ ಮತ್ತೊಂದು ವಿಶ್ವ ದರ್ಜೆಯ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವ ಆಲೋಚನೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದರು. ಇದು ಒಂದು ಲಕ್ಷಕ್ಕೂ ಹೆಚ್ಚು ಆಸನ ಸಾಮರ್ಥ್ಯವನ್ನು ಹೊಂದಿರಲಿದೆ. ಇದು ದೇಶದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ಒಂದಾಗಲಿದೆ.

ಥಾಣೆ ಜಿಲ್ಲೆಯ ಅಮಾನೆ ಗ್ರಾಮದಲ್ಲಿ 50 ಎಕರೆ ಭೂಮಿಗಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್​ಡಿಸಿಗೆ) ನೀಡುವ ಮುಕ್ತ ಟೆಂಡರ್​ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಈಗಾಗಲೇ ಅರ್ಜಿ ಸಲ್ಲಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ. ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ನಂತರ ಔಪಚಾರಿಕ ಯೋಜನೆ ಸಿದ್ಧಗೊಳ್ಳಲಿದೆ.

ವಾಂಖೆಡೆಯಿಂದ 68 ಕಿ.ಮೀ ದೂರದ ಸ್ಟೇಡಿಯಮ್​

ಥಾಣೆಯಿಂದ 26 ಕಿ.ಮೀ ಮತ್ತು ವಾಂಖೆಡೆ ಕ್ರೀಡಾಂಗಣದಿಂದ 68 ಕಿ.ಮೀ ದೂರದಲ್ಲಿರುವ ಅಮಾನೆಯಲ್ಲಿ ಸುಮಾರು 50 ಎಕರೆ ತೆರೆದ ಭೂಮಿಯಲ್ಲಿ ಹರಡಿರುವ 1 ಲಕ್ಷ ಸಾಮರ್ಥ್ಯದ ಬೃಹತ್ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಎಂಸಿಎ ನೋಡುತ್ತಿದೆ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್ಡಿಸಿ) ಕರೆದ ಮುಕ್ತ ಟೆಂಡರ್ ಅನ್ನು ಎಂಸಿಎ ಭರ್ತಿ ಮಾಡಿದೆ. ಸಂಘವು ಮಹಾರಾಷ್ಟ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ” ಎಂದು ವರದಿ ತಿಳಿಸಿದೆ.

ಅಮೋಲ್ ಕಾಳೆ ಕನಸಿನ ಯೋಜನೆ

ದಿವಂಗತ ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಅವರು ಫಡ್ನವೀಸ್ ಅವರ ಆಪ್ತ ಸ್ನೇಹಿತರಾಗಿದ್ದರು. ಹೊಸ ಕ್ರಿಕೆಟ್ ಅಖಾಡವನ್ನು ನಿರ್ಮಿಸುವುದು ಅವರ ಕನಸಿನ ಯೋಜನೆಯಾಗಿತ್ತು ಎಂದು ವರದಿಯಾಗಿದೆ. ವಿಶೇಷವೆಂದರೆ, ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಲ್ಲಿ ಭಾಗವಹಿಸಿದ ಸ್ವಲ್ಪ ಸಮಯದ ನಂತರ ಹೃದಾಯಘಾತದಿಂದ ನಿಧನ ಹೊಂದಿದ್ದರು.

ಇದನ್ನೂ ಓದಿ: Sourav Ganguly : ಸೌರವ್​ ಗಂಗೂಲಿಗೆ 52ನೇ ಜನ್ಮದಿನ; ದಾದಾನ ಅಭೂತಪೂರ್ವ ವೃತ್ತಿ ಜೀವನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ

ಈ ಕ್ರೀಡಾಂಗಣವು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಅವರ ಕನಸಿನ ಯೋಜನೆಯಾಗಿತ್ತು. ಇದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಬಹುದಾದ ಎರಡು ಮೈದಾನಗಳು ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ” ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ, ಮುಂಬೈನ ವಾಂಖೆಡೆ ಕ್ರೀಡಾಂಗಣ ಮತ್ತು ನವೀ ಮುಂಬೈನ ಡಾ.ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಎಂಸಿಎ ಅಡಿಯಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿದ ಎರಡು ಸ್ಥಳಗಳಾಗಿವೆ. ಬಿಕೆಸಿ ಮೈದಾನ ಮತ್ತು ಡೆಕ್ಕನ್ ಜಿಮ್ಖಾನಾ ಮೈದಾನಗಳು ಸಹ ಅಂತರರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸಿವೆ. ಆದರೆ ಆಧುನಿಕ ಕ್ರಿಕೆಟ್​ಗೆ ಪೂರಕವಾಗಿ ಸೌಲಭ್ಯಗಳು ಇಲ್ಲ.

Continue Reading

ಪ್ರಮುಖ ಸುದ್ದಿ

Sourav Ganguly : ಸೌರವ್​ ಗಂಗೂಲಿಗೆ 52ನೇ ಜನ್ಮದಿನ; ದಾದಾನ ಅಭೂತಪೂರ್ವ ವೃತ್ತಿ ಜೀವನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ

Sourav Ganguly: ಆಟದ ಸಮಯದಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದ ಅವರು ಬಳಿಕ ಕೊಲ್ಕೊತಾ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐ ಅಧ್ಯಕ್ಷರಾಗಿಯೂ ಅದ್ಭುತ ಕೆಲಸಗಳನ್ನು ಮಾಡಿದ್ದರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ನಿರ್ದೇಶಕರಾಗಿದ್ದಾರೆ. ಹೀಗೆ ಸುಮಾರು ಎರಡು ದಶಕಗಳ ವೃತ್ತಿಜೀವನದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.

VISTARANEWS.COM


on

Sourav Ganguly
Koo

ನವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡ ಅತ್ಯಂತ ಯಶಸ್ವಿ ನಾಯಕ ಸೌರವ್ ಗಂಗೂಲಿ (Sourav Ganguly) 52ನೇ ವರ್ಷದ ಜನುಮ ದಿನದ ಸಂಭ್ರಮದಲ್ಲಿದ್ದಾರೆ. ಅವರು ತಮ್ಮ ಸಹ ಆಟಗಾರ ರಾಹುಲ್ ದ್ರಾವಿಡ್ ಅವರಿಂದ ‘ಆಫ್ ಸೈಡ್ ದೇವರು’ ಎಂದು ಕರೆಸಿಕೊಂಡವರು. ಇಂಥ ಪ್ರಚಂಡ ಕ್ರಿಕೆಟಿಗ ಅನೇಕ ಅದ್ಭುತ ಕೊಡುಗೆಗಳನ್ನು ಕ್ರಿಕೆಟ್ ಕ್ಷೇತ್ರಕ್ಕೆ ನೀಡಿದ್ದಾರೆ ಆಟದ ಸಮಯದಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದ ಅವರು ಬಳಿಕ ಕೊಲ್ಕೊತಾ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐ ಅಧ್ಯಕ್ಷರಾಗಿಯೂ ಅದ್ಭುತ ಕೆಲಸಗಳನ್ನು ಮಾಡಿದ್ದರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ನಿರ್ದೇಶಕರಾಗಿದ್ದಾರೆ. ಹೀಗೆ ಸುಮಾರು ಎರಡು ದಶಕಗಳ ವೃತ್ತಿಜೀವನದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.

ಗಂಗೂಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದರು. ಪ್ರತಿಭಾನ್ವಿತ ಆಟಗಾರರ ಗುಂಪಿನಿಂದ ವಿಜೇತ ತಂಡವನ್ನು ಮುನ್ನಡೆಸಿದ್ದರು ಅವರು ಇತಿಹಾಸದ ಅತ್ಯುತ್ತಮ ಏಕದಿನ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ದಾರೆ. ಅವರು 1996 ರಲ್ಲಿ ಲಾರ್ಡ್ಸ್​​ನಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಶತಕವನ್ನು ಗಳಿಸಿದ್ದರು. ಆ ವರ್ಷದ ಕೊನೆಯಲ್ಲಿ ಅವರನ್ನು ಏಕದಿನ ಕ್ರಮಾಂಕದ ಅಗ್ರಸ್ಥಾನಕ್ಕೆ ಏರಿದ್ದರು. ಸೌರವ್​ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಒಟ್ಟಾಗಿ ಕ್ರಿಕೆಟ್​ ಇತಿಹಾಸದ ಅತ್ಯಂತ ಪ್ರಬಲ ಆರಂಭಿಕ ಬ್ಯಾಟರ್​ಗಳೆನಿಸಿಕೊಂಡಿದ್ದರು.

ಗಂಗೂಲಿ ಮೈದಾನದಲ್ಲಿ ಇದ್ದ ತಮ್ಮ ಸಮಯದುದ್ದಕ್ಕೂ ತಮ್ಮ ವಿಶಿಷ್ಟ ನಾಯಕತ್ವದ ಮೂಲಕ ಹೆಸರುವಾಸಿಯಾಗಿದ್ದರು. 1996 ರ ಬೇಸಿಗೆಯಲ್ಲಿ, ಅವರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ‘ದಾದಾ’ ಎಂಬ ಅಡ್ಡಹೆಸರನ್ನು ಗಳಿಸಿಕೊಂಡ ಅವರು ಲಾರ್ಡ್ಸ್​​ನಲ್ಲಿ ತಮ್ಮ ಮೊದಲ ಟೆಸ್ಟ್​​ನಲ್ಲಿ ಶತಕ ಗಳಿಸಿದ ನಂತರ ಸುದ್ದಿಯಾದರು. ನಂತರ ‘ಪ್ರಿನ್ಸ್ ಆಫ್ ಕೋಲ್ಕತ್ತಾ’ ಎಂಬ ಹೆಸರಿನಿಂದ ಕರೆಸಲ್ಪಟ್ಟರು. ಬಳಿಕ ಅವರು ಎರಡನೇ ಟೆಸ್ಟ್​​ ಪಂದ್ಯದಲ್ಲೂ ಶತಕ ಬಾರಿಸಿದ್ದರು. ಇತಿಹಾಸದಲ್ಲಿ ತಮ್ಮ ಮೊದಲ ಎರಡು ಟೆ್ಸ್ಟ್​ ಇನ್ನಿಂಗ್ಸ್​ಗಳಲ್ಲಿ ಶತಕ ಗಳಿಸಿದ ಮೂರನೇ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

2000ನೇ ಇಸವಿಯಲ್ಲಿ ಟೀಮ್ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡಿತ್ತು. ನಂತರ ಗಂಗೂಲಿ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಅಲ್ಲಿ ಅವರು ಹೊಸ ಪ್ರತಿಭೆಗಳನ್ನು ಬೆಳೆಸಲು ಪ್ರಾರಂಭಿಸಿದರು.

ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ 2000ರಲ್ಲಿ ನಡೆದ ಐಸಿಸಿ ನಾಕೌಟ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿತ್ತು. 2001ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿತ್ತು. ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾ ತಂಡವು ಸರಣಿಯಲ್ಲಿ ಭಾರತಕ್ಕೆ ಸವಾಲು ಹಾಕಿತು. ಆದರೆ ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು.

ಅಂಗಿ ಬಿಚ್ಚಿ ಕುಣಿದಿದ್ದರು

2002 ರಲ್ಲಿ ನಾಟ್​ವೆಸ್ಟ್​​ ಟ್ರೋಫಿ ಫೈನಲ್​​ನಲ್ಲಿ ಭಾರತವು ಇಂಗ್ಲೆಂಡ್ ವಿರುದ್ದ ಗೆದ್ದಿತ್ತು. ಭಾರತವನ್ನು ಸೋಲಿನ ದವಡೆಯಿಂದ ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್​ ಕೈಫ್​ ಕಾಫಾಡಿದ್ದರು. ಈ ವೇಲೆ ಲಾರ್ಡ್ಸ್ ಬಾಲ್ಕನಿಯಲ್ಲಿ ತನ್ನ ಅಂಗಿ ಬಿಚ್ಚಿದ ಕುಣಿದಿದ್ದರು ಗಂಗೂಲಿ. ಅದು ಕ್ರಿಕೆಟ್ ಇತಿಹಾಸದ ಸ್ಮರಣೀಯ ವಿಷಯವಾಗಿ ದಾಖಲಾಗಿದೆ.

ಗಂಗೂಲಿ 2003 ರಲ್ಲಿ ಭಾರತವನ್ನು ವಿಶ್ವಕಪ್ ಫೈನಲ್​ ತನಕ ಮುನ್ನಡೆಸಿದ್ದರು. ಅಲ್ಲಿ ಅವರ ನೇತೃತ್ವದ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. 2004 ರಲ್ಲಿ, ಅವರು ಪಾಕಿಸ್ತಾನದಲ್ಲಿ ಏಕದಿನ ಮತ್ತು ಟೆಸ್ಟ್ ಸರಣಿಯ ಮುಂದಾಳತ್ವ ವಹಿಸಿದ್ದರು. ಪಾಕಿಸ್ತಾನದ ನೆಲದಲ್ಲಿ ಭಾರತದ ಮೊದಲ ಟೆಸ್ಟ್ ಸರಣಿ ಗೆಲುವು ತಂದುಕೊಟ್ಟಿದ್ದರು.

2005-06ರಲ್ಲಿ ಆಗಿನ ಕೋಚ್ ಗ್ರೆಗ್ ಚಾಪೆಲ್ ಅವರೊಂದಿಗೆ ಗಲಾಟೆ ಸುದ್ದಿಯಾಗಿತ್ತು. ಮತ್ತೊಂದೆಡೆ, ಗಂಗೂಲಿ ತಂಡಕ್ಕೆ ಮರಳಿದ್ದರು ಮತ್ತು ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ 50ಪ್ಲಸ್ ಸ್ಕೋರ್ ದಾಖಲಿಸಿದ್ದರು.

ಗಂಗೂಲಿ 2008ರಲ್ಲಿ ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. 2012ರಲ್ಲಿ ದೇಶೀಯ ಕ್ರಿಕೆಟ್​​ನಿಂದ ನಿವೃತ್ತರಾಗುವವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಿದ್ದರು. ದಾದಾ ಭಾರತ ಪರ 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ, ಎಡಗೈ ಬ್ಯಾಟ್ಸ್ಮನ್ ಎಲ್ಲಾ ಸ್ವರೂಪಗಳಲ್ಲಿ ಸೇರಿ 18,575 ರನ್ ಗಳಿಸಿದ್ದಾರೆ.

ಗಂಗೂಲಿ ಎಲ್ಲಾ ಸ್ವರೂಪಗಳಲ್ಲಿ 195 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು/ ಅವುಗಳಲ್ಲಿ 97 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಮಾಜಿ ನಾಯಕ ನಂತರ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ (ಸಿಎಬಿ) ಅಧ್ಯಕ್ಷರಾದರು ಮತ್ತು ಬಿಸಿಸಿಐನ ಮಾಜಿ ಅಧ್ಯಕ್ಷರಾಗಿದ್ದಾರೆ.

ಆಡಳಿತಾತ್ಮಕ ಬುದ್ಧಿವಂತಿಕೆ

ಭಾರತದಲ್ಲಿ ಹಗಲು-ರಾತ್ರಿ ಟೆಸ್ಟ್​ ಕ್ರಿಕೆಟ್​ ಕ ಲ್ಪನೆ ಹೊರಹೊಮ್ಮಲು ಗಂಗೂಲಿ ಪ್ರಮುಖ ಕಾರಣಗಳಲ್ಲಿ ಒಬ್ಬರು. ಅವರು ಈ ಅವಧಿಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದರು. 2019 ರಲ್ಲಿ ಈಡನ್ ಗಾರ್ಡನ್ಸ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತನ್ನ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಿತ್ತು.

Continue Reading

ಪ್ರಮುಖ ಸುದ್ದಿ

Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

Team India : ಬಿಸಿಸಿಐ ಹೊರತುಪಡಿಸಿ, ರಾಜ್ಯ ಸರ್ಕಾರಗಳು ಸಹ ಆಯಾ ಆಟಗಾರರಿಗೆ ಬಹುಮಾನದ ಮೊತ್ತ ಘೋಷಿಸಿವೆ. ಮಹಾರಾಷ್ಟ್ರ ಸರ್ಕಾರವು ರೋಹಿತ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ 11 ಕೋಟಿ ರೂ.ಗಳನ್ನು ನೀಡಿತ್ತು.

VISTARANEWS.COM


on

Team India
Koo

ಬೆಂಗಳೂರು: ಅಮೆರಿಕದ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆದ 2024 ರ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡ (Team India ) ಟ್ರೋಫಿ ಗೆದ್ದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 125 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಜೂನ್ 4 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಬಹುಮಾನದ ಮೊತ್ತವನ್ನು ಹಸ್ತಾಂತರಿಸಲಾಗಿತ್ತು. ಅದರಲ್ಲಿ ಯಾರಿಗೆ ಎಷ್ಟು ಎಂಬ ಕುತೂಹಲ ಮೂಡಿತ್ತು. ಆ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ವರದಿಗಳ ಪ್ರಕಾರ, ತಂಡದ ಎಲ್ಲಾ 15 ಸದಸ್ಯರು ತಲಾ 5 ಕೋಟಿ ರೂ ಪಡೆದಿದ್ದಾರೆ. ಮುಖ್ಯ ಕೋಚ್ ದ್ರಾವಿಡ್ ಕೂಡ ಇದೇ ಮೊತ್ತವನ್ನು ಪಡೆದಿದ್ದಾರೆ. ಉಳಿದ ಕೋಚಿಂಗ್ ಗ್ರೂಪ್ ತಲಾ 2.5 ರೂಪಾಯಿ ಪಡೆದುಕೊಂಡಿದ್ದಾರೆ. ವಿಡಿಯೋ ನಿರ್ಮಾಣ ತಂಡ ಸೇರಿದಂತೆ ಬ್ಯಾಕ್ರೂಮ್ ಸಿಬ್ಬಂದಿಗೆ ತಲಾ 2 ಕೋಟಿ ರೂ., ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ತಲಾ 1 ಕೋಟಿ ರೂಪಾಯಿ, ಮೀಸಲು ಆಟಗಾರರಾದ ರಿಂಕು ಸಿಂಗ್, ಖಲೀಲ್ ಅಹ್ಮದ್, ಶುಭ್ಮನ್ ಗಿಲ್ ಮತ್ತು ಅವೇಶ್ ಖಾನ್ ಅವರಿಗೆ ತಲಾ 1 ಕೋಟಿ ರೂಪಾಯಿ ದೊರಕಿದೆ.

ಬಿಸಿಸಿಐ ಹೊರತುಪಡಿಸಿ, ರಾಜ್ಯ ಸರ್ಕಾರಗಳು ಸಹ ಆಯಾ ಆಟಗಾರರಿಗೆ ಬಹುಮಾನದ ಮೊತ್ತ ಘೋಷಿಸಿವೆ. ಮಹಾರಾಷ್ಟ್ರ ಸರ್ಕಾರವು ರೋಹಿತ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ 11 ಕೋಟಿ ರೂ.ಗಳನ್ನು ನೀಡಿತ್ತು.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೀಮ್ ಇಂಡಿಯಾಕ್ಕೆ 2.45 ಮಿಲಿಯನ್ ಡಾಲರ್ ಅಂದರೆ ಸುಮಾರು 20.37 ಕೋಟಿ ರೂಪಾಯಿ ಬಹುಮಾನ ಕೊಟ್ಟಿತ್ತು. ಬಿಸಿಸಿಐನ ಆರ್ಥಿಕ ಸ್ಥಿರತೆಯು ಎಲ್ಲಾ ಆಟಗಾರರಿಗೆ ಟ್ರೋಫಿ ಜತೆ ಸಿಕ್ಕ ಬಹುಮಾನ ಮೊತ್ತಕ್ಕಿಂತ ಸುಮಾರು ಆರು ಪಟ್ಟು ಹೆಚ್ಚು ನಗದು ಸಿಗಲು ಸಹಾಯ ಮಾಡಿತು. ಇದು ಇವರೆಗಿನ ಗರಿಷ್ಠ ಗಳಿಕೆಯಾಗಿದೆ. 1983 ರಲ್ಲಿ ಏಕದಿನ ವಿಶ್ವಕಪ್ ಗೆಲುವಿನ ನಂತರ, ಆಡಳಿತ ಮಂಡಳಿಯು ಪ್ರತಿ ಆಟಗಾರನಿಗೆ 25,000 ರೂ.ಗಳ ಬಹುಮಾನವನ್ನು ಘೋಷಿಸಿತು. ಇದು ಆಧುನಿಕ ಕಾಲದಲ್ಲಿ ಆಟಗಾರರು ಪಡೆದ ಮೊತ್ತಕ್ಕೆ ಹೋಲಿಸಿದರೆ ಕನಿಷ್ಠ ಪ್ರಮಾಣದ ಮೊತ್ತವಾಗಿದೆ.

ಇದನ್ನೂ ಓದಿ: Gautam Gambhir : ಗಂಭೀರ್ ಕೆಕೆಆರ್ ತೊರೆಯುವುದು ನಿಶ್ಚಿತ​; ಈಡನ್​ ಗಾರ್ಡನ್ಸ್​​ನಲ್ಲಿ ವಿದಾಯದ ಶೂಟಿಂಗ್

ಐಪಿಎಲ್​ನ ಶಕ್ತಿ ಮತ್ತು ಹಣಕಾಸಿನ ವಿಷಯದಲ್ಲಿ ಭಾರತೀಯ ಕ್ರಿಕೆಟ್ ದೊಡ್ಡ ಗಳಿಕೆಯಲ್ಲಿದೆ. ಆದಾಗ್ಯೂ ಆಟಗಾರರು ಐಪಿಎಲ್ ಕಡೆಗೆ ಹೆಚ್ಚಿನ ಗಮನ ಸೆಳೆಯುತ್ತಿದ್ದಾರೆ ಎಂಬ ಆರೋಪವಿದೆ. ಇದನ್ನು ನಿವಾರಿಸಲೂ ಬಿಸಿಸಿಐ 125 ಕೋಟಿ ರೂಪಾಯಿ ಘೋಷಿಸಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆದ್ಯತೆ ನೀಡಿದವರಿಗೂ ದೊಡ್ಡ ಮೊತ್ತ ಸಿಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಬಿಸಿಸಿಐ ಎಲ್ಲಾ ಆಟಗಾರರಿಗೆ ಕಳುಹಿಸಿದೆ.

“ಐಪಿಎಲ್ ಯುಗದಲ್ಲಿ, ಆಟಗಾರರಿಗೆ ಅವರ ಫ್ರಾಂಚೈಸಿಗಳು ಸಾಕಷ್ಟು ಸಂಭಾವನೆ ನೀಡುತ್ತವೆ. ಟಿ 20 ವಿಶ್ವಕಪ್ ಗೆದ್ದ ತಂಡಕ್ಕೆ 125 ಕೋಟಿ ರೂ.ಗಳು ಆಟಗಾರರಿಗೆ ಸರಳ ಸಂದೇಶವಾಗಿದೆ. ಭಾರತಕ್ಕಾಗಿ ಟ್ರೋಫಿಗಳನ್ನು ಗೆಲ್ಲಿರಿ ಮತ್ತು ನೀವು ಶ್ರೀಮಂತರಾಗುತ್ತೀರಿ” ಎಂಬುದು ಬಿಸಿಸಿಐ ಸಂದೇಶ ಎಂಬುದಾಗಿ ಅಧಿಕಾರಿ ಹೇಳಿದ್ದಾರೆ.

ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಮತ್ತು ಚಾಂಪಿಯನ್ಸ್ ಟ್ರೋಫಿಗೆ ರೋಹಿತ್ ನಾಯಕನಾಗಿ ಮುಂದುವರಿಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Virat Kohli : ಇನ್​ಸ್ಟಾಗ್ರಾಮ್ ಪೋಸ್ಟ್​ ಮೂಲಕ ಬಿಟಿಎಸ್​ ಬ್ಯಾಂಡ್​ನ ದಾಖಲೆ ಮುರಿದ ವಿರಾಟ್​ ಕೊಹ್ಲಿ

Virat Kohli: “ಇದಕ್ಕಿಂತ ಉತ್ತಮ ದಿನವನ್ನು ಊಹಿಸಲು ಸಾಧ್ಯವಿಲ್ಲ. ದೇವರು ದೊಡ್ಡವನು ಮತ್ತು ನಾನು ಋಣಿಯಾಗಿ ತಲೆ ಬಾಗುತ್ತೇನೆ. ನಾವು ಅಂತಿಮವಾಗಿ ಮಾಡಿ ತೋರಿಸಿದ್ದೇವೆ. ಜೈ ಹಿಂದ್ ಎಂದು ಕೊಹ್ಲಿ ಬರೆದುಕೊಂಡಿದ್ದರು. ಭಾರತವು ಟಿ 20 ವಿಶ್ವಕಪ್ 2024 ಗೆದ್ದ ಮರುದಿನ ಜೂನ್ 30 ರಂದು ಪೋಸ್ಟ್ ಮಾಡಿದ ಕೊಹ್ಲಿಯ ಭಾವನಾತ್ಮಕ ಸಂದೇಶವು ವಿಶ್ವದಾದ್ಯಂತದ ಅಭಿಮಾನಿಗಳ ಮನ ಸೆಳೆದಿದೆ.

VISTARANEWS.COM


on

Virat kohli
Koo

ನವದೆಹಲಿ: ಭಾರತದ ತಂಡದ ಟಿ20 ವಿಶ್ವಕಪ್ 2024 ರ ವಿಜಯವನ್ನು ಆಚರಿಸುವುದರ ಬಗ್ಗೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli ) ಹಾಕಿರುವ ಇನ್​​ಸ್ಟಾಗ್ರಾಮ್​ (instagram) ಪೋಸ್ಟ್​​ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಅವರ ಆ ಪೋಸ್ಟ್​​ ಇನ್ಸ್ಟಾಗ್ರಾಮ್ ಪೋಸ್ಟ್ ದಾಖಲೆಗಳನ್ನು ಮುರಿದಿದೆ, ಏಷ್ಯಾದಲ್ಲಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎಂಬ ದಾಖಲೆ ಸೃಷ್ಟಿಸಿದೆ. ಜನಪ್ರಿಯ ಮ್ಯೂಸಿಕ್ ಬ್ಯಾಂಟ್​​ ಬಿಟಿಎಸ್​​ನ ಸದಸ್ಯ ವಿ (ಕಿಮ್ ಟೇಹ್ಯುಂಗ್) ಅವರ ಹಿಂದಿನ ದಾಖಲೆಯನ್ನೂ ಮೀರಿಸಿದೆ.

2.1 ಕೋಟಿಗೂ ಹೆಚ್ಚು ಲೈಕ್​ಗಳನ್ನು ಗಳಿಸಿದ ಕೊಹ್ಲಿಯ ಪೋಸ್ಟ್ ಈ ಹಿಂದಿನ ಎಲ್ಲ ದಾಖಲೆಗಳನ್ನು ಉಡಾಯಿಸಿದೆ. ಟೀಮ್ ಇಂಡಿಯಾ ತನ್ನ ವಿಜಯೋತ್ಸವವನ್ನು ಆಚರಿಸುವ ಕೊಲಾಜ್ ಮತ್ತು ಹೃತ್ಪೂರ್ವಕ ಶೀರ್ಷಿಕೆಯನ್ನು ಈ ಪೋಸ್ಟ್​ಗೆ ನೀಡಲಾಗಿದೆ. “ಇದಕ್ಕಿಂತ ಉತ್ತಮ ದಿನವನ್ನು ಊಹಿಸಲು ಸಾಧ್ಯವಿಲ್ಲ. ದೇವರು ದೊಡ್ಡವನು ಮತ್ತು ನಾನು ಋಣಿಯಾಗಿ ತಲೆ ಬಾಗುತ್ತೇನೆ. ನಾವು ಅಂತಿಮವಾಗಿ ಮಾಡಿ ತೋರಿಸಿದ್ದೇವೆ. ಜೈ ಹಿಂದ್ ಎಂದು ಕೊಹ್ಲಿ ಬರೆದುಕೊಂಡಿದ್ದರು. ಭಾರತವು ಟಿ 20 ವಿಶ್ವಕಪ್ 2024 ಗೆದ್ದ ಮರುದಿನ ಜೂನ್ 30 ರಂದು ಪೋಸ್ಟ್ ಮಾಡಿದ ಕೊಹ್ಲಿಯ ಭಾವನಾತ್ಮಕ ಸಂದೇಶವು ವಿಶ್ವದಾದ್ಯಂತದ ಅಭಿಮಾನಿಗಳ ಮನ ಸೆಳೆದಿದೆ.

ಈ ಗಮನಾರ್ಹ ಸಾಧನೆಯು ವಿರಾಟ್ ಕೊಹ್ಲಿಯನ್ನು ಎಲ್ಲಾ ವಿಭಾಗಗಳಲ್ಲಿ ಬಿಟಿಎಸ್​​ನ 2 ಕೋಟಿ ಲೈಕ್​ಗಳ ದಾಖಲೆಯನ್ನು ಮೀರಿಸಿದ ಏಷ್ಯಾದ ಮೊದಲ ವ್ಯಕ್ತಿ ಎಂಬ ದಾಖಲೆಗೆ ಅರ್ಹರನ್ನಾಗಿದೆ. ಕೊಹ್ಲಿ ಅವರ ಪೋಸ್ಟ್ ಬಾಲಿವುಡ್ ದಂಪತಿಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹ ಘೋಷಣೆಯ ಹಿಂದಿನ ದಾಖಲೆಯನ್ನು ಮುರಿದಿದೆ.

ಏಷ್ಯಾದ ದಾಖಲೆ ಮುರಿದ ಕೊಹ್ಲಿ

ಕೊಹ್ಲಿಯ ಪೋಸ್ಟ್ ಏಷ್ಯಾದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ ಮಾತ್ರವಲ್ಲ, 2 ಕೋಟಿ ಲೈಕ್​ಗಳ ಮೈಲಿಗಲ್ಲನ್ನು ತಲುಪಿದ ಏಷ್ಯಾದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯು ಕೊಹ್ಲಿಯನ್ನು ವಿಶ್ವಾದ್ಯಂತ ಕ್ರೀಡಾಪಟುಗಳು ಹೆಚ್ಚು ಲೈಕ್ ಮಾಡಿದ ಮೊದಲ ಐದು ಪೋಸ್ಟ್​ಗಳಲ್ಲಿ ಒಂದಾಗಿದೆ. ಇದು ಅವರ ಅಪಾರ ಜಾಗತಿಕ ಅಭಿಮಾನಿ ಬಳಗವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: Smriti Mandhana : ಬಾಯ್​ಫ್ರೆಂಡ್​ ಜತೆಗಿನ ಐದು ವರ್ಷಗಳ ಬಾಂಧವ್ಯವನ್ನು ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮಿಸಿದ ಸ್ಮೃತಿ ಮಂದಾನಾ

ಈ ಐತಿಹಾಸಿಕ ಗೆಲುವಿನ ನಂತರ, ವಿರಾಟ್ ಕೊಹ್ಲಿ ಟಿ 20 ಅಂತರರಾಷ್ಟ್ರೀಯ ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ವಿರಾಟ್ ಕೊಹ್ಲಿ ಪ್ರಸ್ತುತ ಪತ್ನಿ ಅನುಷ್ಕಾ ಶರ್ಮಾ ಮತ್ತು ಅವರ ಮಕ್ಕಳೊಂದಿಗೆ ಲಂಡನ್​​ನಲ್ಲಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಬಳಿಕ ಲಂಡನ್​ನಲ್ಲಿ ವಾಸ ಮಾಡುತ್ತಾರೆ ಎಂಬುದಾಗಿಯೂ ಸುದ್ದಿಯಾಗಿದೆ. ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಯುಕೆ ಮೂಲದ ಸಂಸ್ಥೆಯೊಂದರ ನಿರ್ದೇಶಕರಾಗಿದ್ದಾರೆ. ಎರಡನೇ ಮಗು ಅಕಾಯ್​ಗೆ ಅನುಷ್ಕಾ ಲಂಡನ್​ನಲ್ಲಿಯೇ ಜನ್ಮ ನೀಡಿದ್ದರು. ಅಲ್ಲಿಂದ ಬಳಿಕ ಅವರು ಅಲ್ಲಿಯೇ ವಾಸವಾಗಿದ್ದಾರೆ. ಮೊದಲ ಮಗು ವಾಮಿಕಾ ಕೂಡ ತಾಯಿಯೊಂದಿಗೆ ಇದ್ದಾಳೆ.

ವಿರಾಟ್​ ಕೊಹ್ಲಿ ವಿಶ್ವ ಕಪ್​ ತಂಡ ಸೇರುವ ಮೊದಲು ಕೂಡ ಲಂಡನ್​ನಿಂದಲೇ ಪ್ರಯಾಣ ಆರಂಭಿಸಿದ್ದರು. ಅವರು ಐಪಿಎಲ್​ನ ಮುಗಿಸಿದ ತಕ್ಷಣ ಭಾರತವನ್ನು ಬಿಟ್ಟು ಲಂಡನ್ ಸೇರಿಕೊಂಡಿದ್ದರು. ಅವರು ಮೊದಲ ಹಂತದಲ್ಲಿ ಭಾರತ ತಂಡದ ಜತೆ ಅಮೆರಿಕಕ್ಕೆ ಪ್ರಯಾಣ ಮಾಡಿರಲಿಲ್ಲ. ತಂಡವಾಗಿ ತಂಡ ಸೇರಿಕೊಂಡಿದ್ದರು.

Continue Reading
Advertisement
Mumbai Cricket Association
ಪ್ರಮುಖ ಸುದ್ದಿ3 mins ago

Mumbai Cricket Association : ಮುಂಬೈನಲ್ಲಿ ನಿರ್ಮಾಣವಾಗಲಿದೆ 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್​ ಸ್ಟೇಡಿಯಮ್​

Paris Olympics 2024
ದೇಶ16 mins ago

Paris Olympics 2024: ಸರ್ಕಾರಿ, ಖಾಸಗಿ ವಲಯದ ಪಾಲುದಾರಿಕೆಯಿಂದ ಕ್ರೀಡೆಗಳ ಭವಿಷ್ಯ ನಿರ್ಧಾರ: ಪಾರ್ಥ್ ಜಿಂದಾಲ್

gold rate today
ಕರ್ನಾಟಕ20 mins ago

Gold Rate Today: ಬಂಗಾರ ಖರೀದಿಸುವ ಪ್ಲ್ಯಾನ್‌ ಇದೆಯೇ? ಚಿನ್ನದ ದರ ಹೀಗಿದೆ ನೋಡಿ

Self Harming
ಕ್ರೈಂ23 mins ago

Self Harming: ನವೋದಯ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು

Karnataka weather Forecast
ಮಳೆ34 mins ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜುಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Deepika Padukone
Latest36 mins ago

Deepika Padukone: 1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

CM Siddaramaiah
ಕರ್ನಾಟಕ38 mins ago

CM Siddaramaiah: ಡಿಸಿಗಳು ಮಹಾರಾಜರಲ್ಲ; ಬೀದಿಗಿಳಿದು ಡೆಂಗ್ಯು ನಿಯಂತ್ರಿಸದಿದ್ದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

Sourav Ganguly
ಪ್ರಮುಖ ಸುದ್ದಿ57 mins ago

Sourav Ganguly : ಸೌರವ್​ ಗಂಗೂಲಿಗೆ 52ನೇ ಜನ್ಮದಿನ; ದಾದಾನ ಅಭೂತಪೂರ್ವ ವೃತ್ತಿ ಜೀವನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ

Riteish Deshmukh Genelia Deshmukh Pledge To Donate Their Organ
ಬಾಲಿವುಡ್58 mins ago

Riteish Deshmukh: ಅಂಗಾಗ ದಾನ ಮಾಡುವ ಘೋಷಣೆ ಮಾಡಿದ  ರಿತೇಶ್- ಜೆನಿಲಿಯಾ ದಂಪತಿ!

Mumbai hit and run
ದೇಶ1 hour ago

Mumbai Hit And Run: ಮುಂಬೈ ಹಿಟ್‌ ಆ್ಯಂಡ್‌ ರನ್‌ ಕೇಸ್‌; ಘಟನೆಗೂ ಮುನ್ನ ಬಾರ್‌ಗೆ ಹೋಗಿದ್ದ ಆರೋಪಿ, 18 ಸಾವಿರ ಬಿಲ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ34 mins ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜುಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

karnataka weather Forecast
ಮಳೆ17 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ20 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ20 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

ಟ್ರೆಂಡಿಂಗ್‌