Protesters spend Rs 6 lakh for five days Wrestlers Protest : ಐದು ದಿನಕ್ಕೆ 6 ಲಕ್ಷ ರೂಪಾಯಿ ಖರ್ಚು ಮಾಡಿದ ಪ್ರತಿಭಟನಾಕಾರರು - Vistara News

ಕ್ರೀಡೆ

Wrestlers Protest : ಐದು ದಿನಕ್ಕೆ 6 ಲಕ್ಷ ರೂಪಾಯಿ ಖರ್ಚು ಮಾಡಿದ ಪ್ರತಿಭಟನಾಕಾರರು

ಹಾಸಿಗೆಗಳು, ಬೆಡ್ ಶೀಟ್ ಗಳು, ಫ್ಯಾನ್ ಗಳು, ಸ್ಪೀಕರ್ ಗಳು ಮತ್ತು ಮೈಕ್ರೊಫೋನ್ ಗಳು, ಮಿನಿ ಪವರ್ ಜೆನ್ ಸೆಟ್ ವ್ಯವಸ್ಥೆ ಮಾಡಲು ಪ್ರತಿಭಟನಾಕಾರರಿಗೆ (Wrestlers Protest) ದೊಡ್ಡ ಮೊತ್ತ ಖರ್ಚಾಗಿದೆ.

VISTARANEWS.COM


on

Protesters spend Rs 6 lakh for five days
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್ ಸಿಂಗ್​ ವಿರುದ್ಧ ಡೆಲ್ಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಪ್ರತಿಭಟನೆಗಾಗಿ (Wrestlers Protest) ತಮ್ಮ ಜೇಬಿನಿಂದಲೇ ಈಗಾಗಲೇ ಅರು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ರಾತ್ರಿಯೆಲ್ಲ ರಸ್ತೆ ಬದಿಯಲ್ಲಿ ಮಲಗಲು ಹಾಸಿದೆ, ಡೆಲ್ಲಿಯ ಸುಡುಬಿಸಿಲಿನಿಂದ ತಪ್ಪಿಸಿಕೊಳ್ಳುವುದಕ್ಕೆ ಕೂಲರ್​, ಆಹಾರ, ಮೈಕ್​ ಹಾಗೂ ಸೌಂಡ್​ಬಾಕ್ಸ್ ಸೇರಿದಂತೆ ನಾನಾ ಪರಿಕರಗಳಿಗೆ ದೊಡ್ಡ ಮೊತ್ತ ಖರ್ಚಾಗಿದೆ ಎಂಬುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಐದು ದಿನಗಳಲ್ಲಿ ಕುಸ್ತಿಪಟುಗಳು, ನೀರು ಮತ್ತು ಆಹಾರದ ಹೊರತಾಗಿ ಹಾಸಿಗೆಗಳು, ಬೆಡ್ ಶೀಟ್ ಗಳು, ಫ್ಯಾನ್ ಗಳು, ಸ್ಪೀಕರ್ ಗಳು ಮತ್ತು ಮೈಕ್ರೊಫೋನ್ ಗಳು, ಮಿನಿ ಪವರ್ ಜೆನ್ ಸೆಟ್ ವ್ಯವಸ್ಥೆ ಮಾಡಲು ಐದು ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಆರಂಭದಲ್ಲಿ, ಅವರು ಹಾಸಿಗೆಗಳು, ಬೆಡ್ ಶೀಟ್​​ಗಳು ಮತ್ತು ಸೌಂಡ್ ಸಿಸ್ಟಮ್ ಅನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ಅದಕ್ಕೆ ದಿನಕ್ಕೆ 27,000 ರೂಪಾಯಿಯಾಗುತ್ತಿತ್ತು. ಹೀಗಾಗಿ ದೀರ್ಘಕಾಲ ಧರಣಿ ಕುಳಿತುಕೊಳ್ಳಬೇಕಾದರೆ ಹೆಚ್ಚು ಖರ್ಚಾಗಬಹುದು ಎಂಬ ಅಂದಾಜಿನ ಮೇಲೆ ಒಂದೊಂದೇ ವಸ್ತುಗಳನ್ನು ಖರೀದಿ ಮಾಡಿದ್ದಾರೆ.

ನಾವು ಹಾಸಿಗೆಗಳನ್ನು ಖರೀದಿಸಲು ನಿರ್ಧರಿಸಿದೆವು. ನಾನು ನನ್ನ ಗ್ರಾಮ ಖಾರ್ಖೋಡಾದಿಂದ ₹ 50,000 ಪಾವತಿಸಿ 80 ಹಾಸಿಗೆಗಳನ್ನು ಖರೀದಿಸಿದೆ. ಎಲ್ಲಾ ಹಾಸಿಗೆಗಳಿಗೆ ನಮಗೆ ದಿನಕ್ಕೆ 12000 ಬಾಡಿಗೆ ವಿಧಿಸಲಾಗುತ್ತಿತ್ತು. ಇದು ದೊಡ್ಡ ಮೊತ್ತವಾಗಿತ್ತು ಎಂದು ವಿನೇಶ್ ಫೋಗಟ್ ಅವರ ಪತಿ ಸೋಮ್ವೀರ್ ರಾಥಿ ಪಿಟಿಐ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಆರಂಭದಲ್ಲಿ ನಾವು ಸ್ಪೀಕರ್​ಗಳು ಹಾಗೂ ಮೈಕ್ರೋಫೋನ್​ಗಳನ್ನು ಬಾಡಿಗೆಗೆ ತಂದುಕೊಂಡಿದ್ದೆವು. ಅದರ ಒಂದು ದಿನದ ಬಾಡಿಗೆ 12,000 ರೂಪಾಯಿ ಆಗುತ್ತಿತ್ತು. ಈಗ ನಾವು ಚಾಂದನಿ ಚೌಕ್ ಮಾರುಕಟ್ಟೆಯಿಂದ ನಮ್ಮದೇ ಆದ ಸೌಂಡ್ ಸಿಸ್ಟಮ್ ಅನ್ನು ₹ 60,000 ಕ್ಕೆ ಖರೀದಿಸಿದ್ದೇವೆ.”ಅಂಗಡಿಯವನು ಒಳ್ಳೆಯ ವ್ಯಕ್ತಿ . ಕ್ರೀಡಾಪಟುಗಳು ರಸ್ತೆಯಲ್ಲಿದ್ದಾರೆ ಎಂದು ತಿಳಿದು ಲಾಭವನ್ನೇ ಉಳಿಸಿಕೊಳ್ಳದೇ ಸ್ಪೀಕರ್​ ಕೊಟ್ಡರು, ಎಂದು ಸೋಮ್ವಿರ್​ ರಾಥೀ ಹೇಳಿದ್ದಾರೆ.

ಫ್ಯಾನ್​ಗಳು ಮತ್ತು ಜನರೇಟರ್​ಗಳಂತಹ ಕೆಲವು ವಸ್ತುಗಳು ಇನ್ನೂ ಬಾಡಿಗೆಯಲ್ಲಿವೆ. ಎರಡೂ ದಿನಕ್ಕೆ ಸುಮಾರು 10,000 ರೂಪಾಯಿ ಬಾಡಿಗೆ ಕೊಡಬೇಕಾಗಿದೆ. ದೆಹಲಿ ಬೇಸಗೆಯ ಬಿಸಿಯಲ್ಲಿ ಬೇಯುತ್ತಿರುವ ಕಾರಣ ನಾವು ಕೂಲರ್​​ಗಳನ್ನೂ ಖರೀದಿ ಮಾಡಿದೆವು. ಬರುವಾಗ ನಾವು ಎರಡು ಲಕ್ಷ ರೂಪಾಯಿ ತಂದಿದ್ದೆವು. ಆದರೆ, ಇಲ್ಲಿ 5ರಿಂದ6 ಲಕ್ಷ ರೂಪಾಯಿ ಖರ್ಚಾಗಿವೆ ಎಂದು ಹೇಳಿದರು.

ಕೆಲಸಗಳ ವಿಂಗಡಣೆ

ನಾವು ಕೆಲಸವನ್ನು ನಮ್ಮ ನಡುವೆ ವಿಂಗಡಿಸಿದ್ದೇವೆ. ಕೆಲವು ಕೋಚ್​​ಗಳು ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಯುವ ಕುಸ್ತಿಪಟುಗಳು ಪ್ರತಿಭಟನಾ ಸ್ಥಳಕ್ಕೆ ಆಹಾರವನ್ನು ತಲುಪಿಸುತ್ತಿದ್ದಾರೆ. ಇನ್ನೊಬ್ಬರು ನೀರು ಸರಬರಾಜು ಮಾಡುತ್ತಿದ್ದಾರೆ. ಸ್ವಚ್ಛತೆಯ ಕೆಲಸವನ್ನು ಮತ್ತೊಬ್ಬರು ವಹಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರತಿಭಟನೆ ಮುಗಿಸಿ ಇಲ್ಲಿಂದ ಹೊರಟ ಬಳಿಕ ನಮ್ಮ ವಸ್ತುಗಳನ್ನು ನಾವು ಗುರುದ್ವಾರ ಅಥವಾ ದೇವಾಲಯಕ್ಕೆ ವಿತರಿಸುತ್ತೇವೆ. ಹಾಸಿಗೆಗಳು, ಸ್ಪೀಕರ್​ಗಳು ಅವರಿಗೆ ನೆರವಾಗಬಹುದು ಎಂದು ಸೋಮ್ವೀರ್ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Pro Kabaddi 2024: ಈ ಬಾರಿ ಬೆಂಗಳೂರು ಬುಲ್ಸ್​ ತಂಡ ಹೇಗಿದೆ?

Pro Kabaddi 2024: ಮೊದಲನೇ ದಿನ ಸಚಿನ್‌ ತನ್ವರ್‌ 2.15 ಕೋಟಿ ರೂ.ಗೆ ತಮಿಳು ತಲೈವಾಸ್‌ ಪಾಲಾಗಿ ದುಬಾರಿ ಆಟಗಾರ ಎನಿಸಿಕೊಂಡಿದ್ದರು. 500 ಮಂದಿ ಆಟಗಾರರಲ್ಲಿ 118 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ.

VISTARANEWS.COM


on

Pro Kabaddi 2024
Koo

ಮಂಬಯಿ: ಪ್ರೊ ಕಬಡ್ಡಿ ಲೀಗ್‌ 11ನೇ(PKL 11) ಆವೃತ್ತಿಗಾಗಿ(Pro Kabaddi 2024) ನಡೆದ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ಕೊನೆಗೊಂಡಿದೆ. ದ್ವಿತೀಯ ದಿನದ ಹರಾಜಿನಲ್ಲಿ ರೇಡರ್​ ಅಜಿತ್‌ ವಿ. ಕುಮಾರ್‌ 66 ಲಕ್ಷ ರೂ.ಗೆ ಪುಣೇರಿ ತಂಡದ ಪಾಲಾದರು. ಈ ಮೂಲಕ 2ನೇ ದಿನದ ದುಬಾರಿ ಆಟಗಾರರಾಗಿ ಹೊರಹೊಮ್ಮಿದರು. ಮೊದಲನೇ ದಿನ ಸಚಿನ್‌ ತನ್ವರ್‌ 2.15 ಕೋಟಿ ರೂ.ಗೆ ತಮಿಳು ತಲೈವಾಸ್‌ ಪಾಲಾಗಿ ದುಬಾರಿ ಆಟಗಾರ ಎನಿಸಿಕೊಂಡಿದ್ದರು. 500 ಮಂದಿ ಆಟಗಾರರಲ್ಲಿ 118 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ.

ಅಜಿತ್​ ಕಳೆದ 2 ವರ್ಷಗಳಲ್ಲಿ ಜೈಪುರ ತಂಡದ ಪರ ಗಮನಾರ್ಹ ಪ್ರದರ್ಶನ ತೋರಿದ್ದರು. ಜೈ ಭಗವಾನ್​ 63 ಲಕ್ಷ ರೂ.ಗೆ ಬೆಂಗಳೂರು ಬುಲ್ಸ್​ ತಂಡಕ್ಕೆ ಸೇರ್ಪಡೆಗೊಂಡರು. ಪ್ರದೀಪ್​ ನರ್ವಾಲ್​ ಕೂಡ ಈ ಬಾರಿ ಬುಲ್ಸ್​ ತಂಡ ಸೇರಿದ್ದು ತಂಡದ ಬಲ ಹೆಚ್ಚಿದೆ. ಅವರನ್ನು 70 ಲಕ್ಷ ರೂ.ಗೆ ಖರೀದಿ ಮಾಡಲಾಗಿತ್ತು. ಎಂ. ಚಂದ್ರನಾಯ್ಕ್​ ಈ ಬಾರಿಯ ಪ್ರೊ ಕಬಡ್ಡಿ ಲೀಗ್​ನಲ್ಲಿರುವ ಏಕೈಕ ಕನ್ನಡಿಗ, ಒಟ್ಟು ಈ ಬಾರಿ ಹರಾಜಿನಲ್ಲಿ 31 ಮಂದಿ ಕಾಣಿಸಿಕೊಂಡಿದ್ದರು. ಈ ಪೈಕಿ ಒಬ್ಬ ಆಟಗಾರನಿಗೆ ಮಾತ್ರ ಅವಕಾಶ ಸಿಕ್ಕಿದೆ. ಚಂದ್ರನಾಯ್ಕ್​ ಬುಲ್ಸ್​ ತಂಡದ ಆಟಗಾರನಾಗಿದ್ದಾರೆ.

ಇದನ್ನೂ ಓದಿ Pro Kabaddi League : ತೆಲುಗು ಟೈಟನ್ಸ್ ತಂಡ ಸೇರಿಕೊಂಡ ಪವನ್ ಸೆಹ್ರಾವತ್​​; ಶಾಡ್ಲೋಯಿಗೆ 2.07 ಕೋಟಿ ರೂ.

ಕೋಟಿ ರೂ. ಪಡೆದ ಆಟಗಾರರು


ಸಚಿನ್‌ ತನ್ವರ್‌, 2.15 ಕೋಟಿ ರೂ. (ತಮಿಳುನಾಡು)

ಮೊಹಮ್ಮದ್‌ ಶಾರ್ದೂಯಿ, 2.07 ಕೋಟಿ (ಹರ್ಯಾಣ)

ಗುಮಾನ್‌ ಸಿಂಗ್‌, 1.97 ಕೋಟಿ ರೂ. (ಗುಜರಾತ್‌)

ಪವನ್‌ ಸೆಹ್ರಾವತ್‌, 1.72 ಕೋಟಿ ರೂ. (ತೆಲುಗು)

ಭರತ್‌ ಹೂಡಾ, 1.30 ಕೋಟಿ ರೂ. (ಯುಪಿ)

ಮಣಿಂದರ್‌ ಸಿಂಗ್‌, 1.15 ಕೋಟಿ ರೂ. (ಬೆಂಗಾಲ್‌)

ಅಜಿಂಕ್ಯ ಪವಾರ್‌, 1.11 ಕೋಟಿ ರೂ. (ಬೆಂಗಳೂರು)

ಸುನೀಲ್‌ ಕುಮಾರ್‌, 1.01 ಕೋಟಿ ರೂ. (ಮುಂಬಾ)

ಬೆಂಗಳೂರು ಬುಲ್ಸ್​ ತಂಡ


ಅಜಿಂಕ್ಯ ಪವಾರ್‌, ಪ್ರದೀಪ್‌ ನರ್ವಾಲ್‌, ಲಕ್ಕಿ ಕುಮಾರ್‌, ಮಂಜೀತ್‌, ಚಂದ್ರನಾಯ್ಕ ಎಂ., ಹಾಸುನ್‌ ತೊಂಕ್ರುಯಿಯ, ಪ್ರಮೋದ್‌ ಸಾಯಿಸಿಂಗ್‌, ನಿತಿನ್‌ ರಾವಲ್‌, ಜೈ ಭಗವಾನ್‌, ಜತಿನ್‌. ಉಳಿಸಿಕೊಳ್ಳಲಾಗಿದ್ದ ಆಟಗಾರರು: ಪೊನ್ಪರ್ತಿಬನ್‌ ಸುಬ್ರಮಣಿಯನ್‌, ಸುಶೀಲ್‌, ರೋಹಿತ್‌ ಕುಮಾರ್‌, ಸೌರಭ್‌ ನಂದಲ್‌, ಆದಿತ್ಯ ಪವಾರ್‌, ಅಕ್ಷಿತ್‌, ಅರುಲ್‌ನಂತಬಾಬು, ಪ್ರತೀಕ್‌.

Continue Reading

ಕ್ರೀಡೆ

Robin Uthappa: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಬಿನ್ ಉತ್ತಪ್ಪಗೆ ಬಿಗ್ ರಿಲೀಫ್; ಜಾಮೀನು ರಹಿತ ವಾರೆಂಟ್​ಗೆ ಹೈಕೋರ್ಟ್ ತಡೆ

Robin Uthappa: ಉತ್ತಪ್ಪ ಅವರು 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 2006 ರಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ರಾಬಿನ್‌ ಉತ್ತಪ್ಪ, 46 ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್‌ ಗಳನ್ನು ಗಳಿಸಿದ್ದಾರೆ.

VISTARANEWS.COM


on

Robin Uthappa
Koo

ಮುಂಬಯಿ: ಚೆಕ್ ಬೌನ್ಸ್ ಪ್ರಕರಣದಲ್ಲಿ(Robin Uthappa cheque bounce case) ಟೀಮ್​ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ರಾಬಿನ್​ ಉತ್ತಪ್ಪ(Robin Uthappa) ಅವರಿಗೆ ಮ್ಯಾಜಿಸ್ಟ್ರೇಟ್ ನೀಡಿದ್ದ ಜಾಮೀನು ರಹಿತ ವಾರೆಂಟ್​ಗೆ ಮುಂಬೈ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ಅವರು ನಿರಾಳರಾಗಿದ್ದಾರೆ. ಉತ್ತಪ್ಪ ವಿರುದ್ಧದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.

ನ್ಯಾಯಮೂರ್ತಿ ನೀಲಾ ಘೋಖಲೆ ನೇತೃತ್ವದ ಪೀಠ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಉತ್ತಪ್ಪ ಪರ ವಕೀಲರು ಸೆಪ್ಟೆಂಬರ್ 6ರೊಳಗೆ ವಿಚಾರಣೆಗೆ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧದ ಜಾಮೀನು ರಹಿತ ಬಂಧನ ವಾರೆಂಟ್​​ಗೆ ತಡೆ ನೀಡಲಾಗಿದೆ.

ರಾಬಿನ್ ಉತ್ತಪ್ಪ ಮಧ್ಯವರ್ತಿ ಕಂಪನಿ ಮೂಲಕ ಸೆನಾಟರ್ ಪ್ರವೇಟ್ ಲಿಮಿಟೆಡ್ ಕಂಪನಿ ಜತೆ ಉಡುಪುಗಳ ರಾಯಭಾರಿಯಾಗಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕಂಪನಿ ಜತೆ ಉತ್ತಪ್ಪ ಸಂಬಂಧ ಕಡಿದುಕೊಂಡಿದ್ದರು. ಆದರೆ, ಆ ಬಳಿಕ ನಡೆದ ಪತ್ರ ವ್ಯವಹಾರಗಳು ಉತ್ತಪ್ಪ ಗಮನಕ್ಕೆ ಬಂದಿರಲಿಲ್ಲ. ಸಮನ್ಸ್ ಮತ್ತು ವಾರಂಟ್‌ಗಳು ಸೆಂಟಾರಸ್‌ನ ನೋಂದಾಯಿತ ಕಚೇರಿಗೆ ಹೋಗುತ್ತಿದ್ದವು. ಹೀಗಾಗಿ ಉತ್ತಪ್ಪ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಉತ್ತಪ್ಪ ಅವರು ಏಪ್ರಿಲ್ 28, 2024 ರಂದು ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕರೆ ಮಾಡಿದಾಗ ಮಾತ್ರ ಬಾಕಿ ಇರುವ ಘೋಷಣೆ ಮತ್ತು ತಮ್ಮ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದು ತಿಳಿದುಕೊಂಡಿದ್ದಾರೆ.

ಇದನ್ನೂ ಓದಿ Viral Video: ಉತ್ತಪ್ಪಮ್‌ ಮೇಲೆ ಮೂಡಿದ ಕಲಾಕೃತಿ; ತಿನ್ನಲು ಮನಸ್ಸೇ ಬರದು ಎಂದ ನೆಟ್ಟಿಗರು

ನಂತರ ಉತ್ತಪ್ಪ ಜಾಮೀನು ರಹಿತ ವಾರೆಂಟ್ ರದ್ದುಗೊಳಿಸುವಂತೆ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ ಅವರ ವಿನಂತಿಯನ್ನು ತಿರಸ್ಕರಿಸಲಾಗಿತ್ತು. ಸದ್ಯ ಉತ್ತಪ್ಪ ಜಾಮೀನು ರಹಿತ ಬಂಧನ ವಾರೆಂಟ್​​ನಿಂದ ಮುಕ್ತರಾಗಿದ್ದಾರೆ.

ಉತ್ತಪ್ಪ ಅವರು 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 2006 ರಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ರಾಬಿನ್‌ ಉತ್ತಪ್ಪ, 46 ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್‌ ಗಳನ್ನು ಗಳಿಸಿದ್ದಾರೆ. 86 ಅವರ ಸರ್ವಾಧಿಕ ರನ್.‌ 2007 ರ ಟಿ-20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದ ಉತ್ತಪ್ಪ ಪಾಕಿಸ್ತಾನ ವಿರುದ್ಧದ ಸಮಬಲಗೊಂಡ ಪಂದ್ಯದಲ್ಲಿ ಬಾಲ್‌ ಶೂಟೌಟ್​ನಲ್ಲಿ ಗೆಲ್ಲಲು ಪ್ರಧಾನ ಪಾತ್ರ ವಹಿಸಿದ್ದರು. 13 ಅಂತಾರಾಷ್ಟ್ರೀಯ ಟಿ-20 ಪಂದ್ಯವನ್ನಾಡಿರುವ ಅವರು, 118.01 ಸ್ಟ್ರೈಕ್‌ ರೇಟ್‌ ನೊಂದಿಗೆ 249 ರನ್‌ ಗಳಿಸಿದ್ದಾರೆ.

2015 ರಲ್ಲಿ ಕೊನೆಯ ಬಾರಿ ಜಿಂಬಾಬ್ಬೆ ವಿರುದ್ಧದ ಏಕದಿನ ಹಾಗೂ ಟಿ-20 ಯನ್ನು ಆಡಿದ್ದರು. ಐಪಿಎಲ್‌ ನಲ್ಲಿ ಮಂಬಯಿ, ಆರ್‌ ಸಿಬಿ, ಕೆಕೆಆರ್‌, ರಾಜಸ್ಥಾನ್‌ ರಾಯಲ್ಸ್‌, ಸಿಎಸ್‌ ಕೆ ಪರವಾಗಿ ಆಡಿದ್ದರು. ಐಪಿಎಲ್‌ ನಲ್ಲಿ 205 ಪಂದ್ಯವನ್ನಾಡಿ ಒಟ್ಟು 4952 ರನ್‌ ಗಳಿಸಿದ್ದಾರೆ.

Continue Reading

ಕ್ರೀಡೆ

Indian Paralympic Team: ಪದಕ ಬೇಟೆಗೆ ಹೊರಟ ಭಾರತೀಯ ಪ್ಯಾರಾಲಿಂಪಿಕ್ಸ್‌ ತಂಡಕ್ಕೆ ಬೀಳ್ಕೊಡುಗೆ

Indian Paralympic Team: ಭಾರತದ ಸ್ಪರ್ಧಿಗಳು– ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಕೆನೊಯಿಂಗ್‌, ಸೈಕ್ಲಿಂಗ್‌, ಅಂಧರ ಜುಡೊ, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

VISTARANEWS.COM


on

Indian Paralympic Team
Koo

ನವದೆಹಲಿ: ಪ್ಯಾರಿಸ್​ನಲ್ಲಿ ಇದೇ ತಿಂಗಳ 28ರಿಂದ ಸೆಪ್ಟೆಂಬರ್‌ 8ರವರೆಗೆ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ (Paralympic) ಕೂಟದಲ್ಲಿ ಪದಕ ಬೇಟೆಗೆ ಹೊರಟಿರುವ ಭಾರತ ಪ್ಯಾರಾಲಿಂಪಿಕ್ಸ್‌ ತಂಡಕ್ಕೆ(Indian Paralympic Team) ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು. ಭಾರತ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ) ಮತ್ತು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಈ ಸಮಾರಂಭ ಆಯೋಜಿಸಿತ್ತು.

ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ 19 ಪದಕ ಗೆದ್ದ ಭಾರತ, ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಪ್ಯಾರಿಸ್​ಗೆ ಪ್ರಯಾಣ ಬೆಳೆಸಿದೆ. ಈ ಬಾರಿ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ವಿವಿಧ 12 ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ 24 ಮಂದಿ ಸ್ಪರ್ಧಿಸಿದ್ದರು.

“ನಮ್ಮ ಪ್ಯಾರಾ ಅಥ್ಲೀಟ್‌ಗಳು ಅಡೆತಡೆಗಳನ್ನು ಜಯಿಸಲು ಮತ್ತು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಗಾಗಿ ತಮ್ಮ ತಯಾರಿಯಲ್ಲಿ ಗಮನಾರ್ಹ ದೃಢತೆ ಮತ್ತು ಪರಿಶ್ರಮವನ್ನು ತೋರಿಸಿದ್ದಾರೆ” ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ(Mansukh Mandaviya) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾಗ್ಯಶ್ರೀ ಜಾಧವ್ ಮತ್ತು ಸುಮಿತ್ ಆಂಟಿಲ್ ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಗಾಗಿ ಭಾರತದ ಧ್ವಜಧಾರಿಗಳಾಗಿ ಹೆಸರಿಸಲ್ಪಟ್ಟಿದ್ದಾರೆ.

ಇದನ್ನೂ ಓದಿ Paralympics 2024: ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗ್ಯಶ್ರೀ, ಸುಮಿತ್ ತ್ರಿವರ್ಣ ಧ್ವಜಧಾರಿಗಳು

“ಖೇಲೋ ಇಂಡಿಯಾ ಉಪಕ್ರಮದಿಂದ ಅನೇಕ ಕ್ರೀಡಾಪಟುಗಳು ಪ್ರಯೋಜನ ಪಡೆದಿದ್ದಾರೆ ಮತ್ತು ಅಲ್ಲಿಂದ ಗಮನಾರ್ಹ ಸಂಖ್ಯೆಯ ಜನರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಹೋಗುತ್ತಾರೆ. ಅವರಿಗೆ ಉನ್ನತ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ” ಎಂದು ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಭಾರತದ ಸ್ಪರ್ಧಿಗಳು– ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಕೆನೊಯಿಂಗ್‌, ಸೈಕ್ಲಿಂಗ್‌, ಅಂಧರ ಜುಡೊ, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ದೇಶದ ಅಥ್ಲೀಟ್​ಗಳು ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ವಿಶ್ವಾಸ ನನಗಿದೆ ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಝಜಾರಿಯಾ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ವರ್ಷ ಹಾಂಗ್‌ಝೌನ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ ಭಾರತದ ಪ್ಯಾರಾಲಿಂಪಿಕ್ಸ್‌ ತಂಡ 111 ಪದಕಗಳನ್ನು ಜಯಿಸಿ, ಉತ್ತಮ ಸಾಧನೆ ಮೆರೆದಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ.

Continue Reading

ಕ್ರೀಡೆ

ICC Women’s T20 World Cup: ಮಹಿಳಾ ಟಿ20 ವಿಶ್ವಕಪ್‌ ಆತಿಥ್ಯಕ್ಕೆ ಮುಂದಾದ ಜಿಂಬಾಬ್ವೆ

ICC Women’s T20 World Cup: ಕ್ರಿಕ್ ​ಇನ್ಫೋ ವರದಿಯ ಪ್ರಕಾರ ಜಿಂಬಾಬ್ವೆ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯ ಆತಿಥ್ಯವಹಿಸಿಕೊಳ್ಳಲು ಆಸಕ್ತಿ ಹೊಂದಿದೆ ಎಂದು ತಿಳಿಸಿದೆ.

VISTARANEWS.COM


on

ICC Women's T20 World Cup
Koo

ಮುಂಬಯಿ: ಬಾಂಗ್ಲಾದೇಶದಲ್ಲಿ(bangladesh violence)  ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಅಲ್ಲಿನ ನಾಗರೀಕರು ನಡೆಸುತ್ತಿರುವ ಪ್ರತಿಭಟನೆ, ಗಲಭೆಗಳಿಂದ ಸಂಭವಿಸಿರುವ ಬಿಕ್ಕಟ್ಟಿನಿಂದಾಗಿ ಮುಂಬರುವ ಮಹಿಳಾ ಟಿ20 ವಿಶ್ವಕಪ್‌(ICC Women’s T20 World Cup) ಪಂದ್ಯಾವಳಿಯನ್ನು ಆಯೋಜಿಸಲು ಐಸಿಸಿ ಪರ್ಯಾಯ ಸ್ಥಳವನ್ನು ಹುಡುಕುತ್ತಿದ್ದ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಈ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸುವುದಿಲ್ಲ ಎಂದು ಹೇಳಿದ್ದರು. ಇದೀಗ ಜಿಂಬಾಬ್ವೆ ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಕ್ರಿಕ್ ​ಇನ್ಫೋ ವರದಿಯ ಪ್ರಕಾರ ಜಿಂಬಾಬ್ವೆ ಟೂರ್ನಿಯ ಆತಿಥ್ಯವಹಿಸಿಕೊಳ್ಳಲು ತಮ್ಮ ಆಸಕ್ತಿಯನ್ನು ಐಸಿಸಿಗೆ ವ್ಯಕ್ತಪಡಿಸಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಗುರುವಾರವಷ್ಟೇ ಮಾಧ್ಯಮವೊಂದರ ಜತೆ ಮಾತನಾಡಿದ್ದ ಜಯ್‌ ಶಾ, “ಮಹಿಳಾ ಟಿ20 ವಿಶ್ವಕಪ್‌ ಆಯೋಜನೆಗೆ ಐಸಿಸಿ ನಮ್ಮನ್ನು ಸಂಪರ್ಕಿಸಬಹುದು. ಆದರೆ ನಾನು ಇದನ್ನು ನಿರಾಕರಿಸುತ್ತೇನೆ ಎಂದಿದ್ದರು. 

ಕೆಲ ದಿನಗಳ ಹಿಂದೆ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಸೇನಾ ಮುಖ್ಯಸ್ಥ ಜನರಲ್‌ ವಕಾರ್‌ ಜಮಾನ್‌ ಅವರಿಗೆ ಪತ್ರ ಬರೆದು, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ನಡೆಸಿಕೊಡಲು ಸಹಾಯ ಮಾಡಬೇಕು ಎಂದು ಕೋರಿತ್ತು. ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸುವಂತೆ ಕಾಣುತ್ತಿಲ್ಲ ಹೀಗಾಗಿ ಐಸಿಸಿ ಪರ್ಯಾಯ ಸ್ಥಳದ ಹುಡುಕಾಟ ನಡೆಸುತ್ತಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಈ ಟೂರ್ನಿ ಅಕ್ಟೋಬರ್‌ನಲ್ಲಿ ಆರಂಭಗೊಳ್ಳಬೇಕು.

ಶೇಕ್‌ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ ಬಳಿಕ ನಡೆದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮನೆಗಳು, ವ್ಯವಹಾರಗಳು ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದಲ್ಲಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕನಿಷ್ಠ 45 ಜನರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಹೀಗಾಗಿ ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ ಎನ್ನಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

Continue Reading
Advertisement
Subramanian Swamy
ದೇಶ9 mins ago

Subramanian Swamy: ರಾಹುಲ್‌ ಗಾಂಧಿಯ ಭಾರತೀಯ ಪೌರತ್ವ ರದ್ದುಗೊಳಿಸಿ; ಹೈಕೋರ್ಟ್‌ಗೆ ಮೊರೆ ಹೋದ ಸುಬ್ರಮಣಿಯನ್ ಸ್ವಾಮಿ

Pro Kabaddi 2024
ಕ್ರೀಡೆ14 mins ago

Pro Kabaddi 2024: ಈ ಬಾರಿ ಬೆಂಗಳೂರು ಬುಲ್ಸ್​ ತಂಡ ಹೇಗಿದೆ?

Stree 2 Box Office Day 2 Shraddha Kapoor-Rajkummar Rao Film Creates History
ಬಾಲಿವುಡ್23 mins ago

Stree 2 Box Office: ಗೆದ್ದು ಬೀಗಿದ ‘ಸ್ತ್ರೀ 2’ ಚಿತ್ರ; ಎರಡೇ ದಿನದಲ್ಲಿ 100 ಕೋಟಿ ರೂ. ಭರ್ಜರಿ ಕಲೆಕ್ಷನ್‌!

tipper road accident
ಬೆಂಗಳೂರು27 mins ago

Road Accident: ಟಿಪ್ಪರ್‌ ರೂಪದಲ್ಲಿ ಬಂದ ಯಮ, ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ನಜ್ಜುಗುಜ್ಜು

car death udupi news
ಉಡುಪಿ52 mins ago

Udupi News: ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು

Robin Uthappa
ಕ್ರೀಡೆ58 mins ago

Robin Uthappa: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಬಿನ್ ಉತ್ತಪ್ಪಗೆ ಬಿಗ್ ರಿಲೀಫ್; ಜಾಮೀನು ರಹಿತ ವಾರೆಂಟ್​ಗೆ ಹೈಕೋರ್ಟ್ ತಡೆ

Kolkata Doctor Murder Case
ದೇಶ1 hour ago

Kolkata Doctor Murder Case: ಇಂದು ದೇಶಾದ್ಯಂತ ವೈದ್ಯರ ಮುಷ್ಕರ; ಏನಿರುತ್ತೆ? ಏನಿರಲ್ಲ?

Kannada New Movie Langoti man trailer Out d k shivakumar invite
ಸ್ಯಾಂಡಲ್ ವುಡ್1 hour ago

Kannada New Movie: ಆಗಸ್ಟ್ 19 ರಂದು ʻಲಂಗೋಟಿ ಮ್ಯಾನ್ʼ ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭ; ಡಿ.ಕೆ.ಶಿವಕುಮಾರ್‌ಗೆ ಆಹ್ವಾನ ಕೊಟ್ಟ ಚಿತ್ರತಂಡ!

doctors strike opd close
ಕರ್ನಾಟಕ1 hour ago

Doctors Strike: ಗಮನಿಸಿ, ಇಂದು ಯಾವುದೇ ಆಸ್ಪತ್ರೆಯಲ್ಲಿ ಒಪಿಡಿ ಇಲ್ಲ

Raksha Bandhan 2024
Latest1 hour ago

Raksha Bandhan 2024: ರಕ್ಷಾ ಬಂಧನದ ಹಿನ್ನೆಲೆ ಏನು? ರಾಖಿ ಕಟ್ಟಲು ಯಾವುದು ಶುಭ ಮುಹೂರ್ತ?

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌