ರಾಜಮಾರ್ಗ ಅಂಕಣ: ರಾಹುಲ್ ದ್ರಾವಿಡ್ ಎಂಬ ಮಹಾಗುರುವಿಗೆ ಸಲಾಂ; ಭಾರತರತ್ನ ನೀಡಲು ಇದು ಸಕಾಲ - Vistara News

ಕ್ರೀಡೆ

ರಾಜಮಾರ್ಗ ಅಂಕಣ: ರಾಹುಲ್ ದ್ರಾವಿಡ್ ಎಂಬ ಮಹಾಗುರುವಿಗೆ ಸಲಾಂ; ಭಾರತರತ್ನ ನೀಡಲು ಇದು ಸಕಾಲ

ರಾಜಮಾರ್ಗ ಅಂಕಣ: ಏಕದಿನದ ವಿಶ್ವಕಪನಲ್ಲಿ ಈ ಬಾರಿ ಭಾರತ ಫೈನಲ್ ತನಕ ಹೋದದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೂಟದಲ್ಲಿ ಕೂಡ ಫೈನಲ್ ತನಕ ಸಾಗಿ ಬಂದದ್ದು ದ್ರಾವಿಡ್ ಅವರ ಕೋಚಿಂಗ್ ಬಲದಿಂದ ಎನ್ನುವುದು ನೂರಕ್ಕೆ ನೂರು ನಿಜ.

VISTARANEWS.COM


on

ರಾಜಮಾರ್ಗ ಅಂಕಣ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Rajendra-Bhat-Raja-Marga-Main-logo

ಭಾರತೀಯ ಕ್ರಿಕೆಟ್ ಇತಿಹಾಸವನ್ನು ಎಲ್ಲಿಂದ ಬರೆಯಲು ಆರಂಭ ಮಾಡಿದರೂ ರಾಹುಲ್ ದ್ರಾವಿಡ್(Rahul Dravid) ಹೆಸರು ಉಲ್ಲೇಖ ಮಾಡದೆ ಅದು ಮುಗಿದುಹೋಗುವುದೇ ಇಲ್ಲ! ಒಬ್ಬ ಜಂಟಲ್ ಮ್ಯಾನ್ ಕ್ರಿಕೆಟರ್ ಆಗಿ, ಕ್ಯಾಪ್ಟನ್ ಆಗಿ, ಕೋಚ್ ಆಗಿ ಭಾರತೀಯ ಕ್ರಿಕೆಟನ್ನು ಶ್ರೀಮಂತಗೊಳಿಸಿದ ಅವರಿಗೆ ಭಾರತರತ್ನ ಪ್ರಶಸ್ತಿ(bharatha ratna award) ನೀಡಲು ಇದು ಸಕಾಲ ಎಂದು ನನಗೆ ಅನ್ನಿಸುತ್ತದೆ.

ಸ್ಮರಣೀಯ ಇನಿಂಗ್ಸ್​ಗಳು

ದ್ರಾವಿಡ್ ಎಂದಿಗೂ ದಾಖಲೆಗಾಗಿ ಅಡಿದ್ದಿಲ್ಲ. ಅದು ಅವರ ಸ್ವಭಾವ ಕೂಡ ಅಲ್ಲ. ಪರಿಸ್ಥಿತಿಗೆ ಹೊಂದಿಕೊಂಡು ಬ್ಯಾಟ್ ಬೀಸುವ ಆತ ಟೀಮ್ ಇಂಡಿಯಾ ಬಿಕ್ಕಟ್ಟಿನಲ್ಲಿ ಇದ್ದಾಗ ತಡೆಗೋಡೆ ಆಗಿ ನಿಂತಿರುವ ನೂರಾರು ಉದಾಹರಣೆಗಳು ದೊರೆಯುತ್ತವೆ.


1). 2003ರಲ್ಲಿ ಅಡಿಲೇಡ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸಗಳಲ್ಲಿ ತಾಳ್ಮೆಯ ಪರ್ವತವಾಗಿ ನಿಂತು ಆಡಿದ ದ್ರಾವಿಡ್ ಒಟ್ಟು 305 ರನ್ ಪೇರಿಸಿದ್ದರು. ಅದಕ್ಕಿಂತ ಹೆಚ್ಚಾಗಿ ಅವರು ಕ್ರೀಸ್ ಆಕ್ರಮಿಸಿಕೊಂಡು ನಿಂತದ್ದು 835 ನಿಮಿಷ! 20 ವರ್ಷಗಳ ನಂತರ ಅಡಿಲೇಡ್ ಮೈದಾನದಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯವನ್ನು ದ್ರಾವಿಡ್ ಕಾರಣಕ್ಕೆ ಗೆದ್ದಿತ್ತು. ಆಗ ಭಾರತದ ಕ್ಯಾಪ್ಟನ್ ಆಗಿದ್ದ ಸೌರವ್ ಗಂಗೂಲಿ ಹೇಳಿದ ಮಾತು – ಅವನು ದೇವರಂತೆ ಆಡಿದ ಎಂದು!

2). 2001ರ ಕೊಲ್ಕತ್ತಾ ಟೆಸ್ಟ್ ಪಂದ್ಯ ನೆನಪು ಮಾಡಿಕೊಳ್ಳಿ. ಫಾಲೋ ಆನ್ ಪಡೆದ ನಂತರ ಯಾವುದೇ ತಂಡವು ಪಂದ್ಯವನ್ನು ಗೆದ್ದ ಕೇವಲ ಮೂರನೇ ಉದಾಹರಣೆ ಅದು! ಒಂದು ಕಡೆಯಿಂದ ವಿವಿಎಸ್ ಲಕ್ಷ್ಮಣ್, ಇನ್ನೊಂದೆಡೆಯಲ್ಲಿ ಇದೇ ದ್ರಾವಿಡ್ ಐದನೇ ವಿಕೆಟಿಗೆ 376ರನ್ ಜೊತೆಯಾಟ ನೀಡಿದ್ದು, ಆಸೀಸ್ ಆಕ್ರಮಣಕಾರಿ ಬೌಲಿಂಗ್ ಎದುರಿಸಿ ಬಂಡೆಯಂತೆ ನಿಂತದ್ದು, ಕೊನೆಗೆ ಆ ಟೆಸ್ಟ್ ಪಂದ್ಯ ಭಾರತ ಗೆದ್ದದ್ದು ಭಾರತೀಯರಿಗೆ ಮರೆತು ಹೋಗಲು ಸಾಧ್ಯವೇ ಇಲ್ಲ!


3). 2004ರ ಪಾಕ್ ಪ್ರವಾಸ ನೆನಪು ಮಾಡಿಕೊಳ್ಳಿ. ರಾವಲ್ಪಿಂಡಿ ಟೆಸ್ಟ್ ಪಂದ್ಯದಲ್ಲಿ ದ್ರಾವಿಡ್ ಒಟ್ಟು 12 ಗಂಟೆ, 20 ನಿಮಿಷ ಲಂಗರು ಹಾಕಿ ಬೆವರು ಬಸಿದರು. 270 ರನ್ನುಗಳ ಆ ವಿರೋಚಿತ ಇನ್ನಿಂಗ್ಸ್ ಭಾರತಕ್ಕೆ ಪಾಕ್ ವಿರುದ್ಧ ಟೆಸ್ಟ್ ಸರಣಿಯನ್ನು ಗೆಲ್ಲಿಸಿಕೊಟ್ಟಿತು! ಶೋಯೆಬ್ ಅಕ್ತರ್ ಬೌನ್ಸರಗಳನ್ನು ಅವರು ಅಷ್ಟೇ ತಾಳ್ಮೆಯಿಂದ ಉತ್ತರಿಸಿದ್ದು ನಮಗೆ ಮರೆತು ಹೋಗುವುದಿಲ್ಲ.


4). 2011ರ ಇಂಗ್ಲೆಂಡ್ ಪ್ರವಾಸದ ಹೀರೋ ಅಂದರೆ ಅದು ದ್ರಾವಿಡ್! ಮೂರು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕ ಸೇರಿ 446ರನ್ ಪೇರಿಸಿದ್ದು ಅದು ಮಿರಾಕಲ್! ಓವಲ್ ಟೆಸ್ಟ್ ಪಂದ್ಯದಲ್ಲಿ ಅವರು ಇನ್ನಿಂಗ್ಸ್ ಆರಂಭ ಮಾಡಿ ಕೊನೆಯವರೆಗೂ ನಿಂತು ಔಟ್ ಆಗದೆ ಹಿಂದೆ ಬಂದ ಇನ್ನಿಂಗ್ಸ್ ನೆನಪು ಮಾಡಿ.

ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಬದುಕಿನಲ್ಲಿ ಇಂತಹ ನೂರಾರು ಇನ್ನಿಂಗ್ಸ್ ದೊರೆಯುತ್ತವೆ. ಆಗೆಲ್ಲ ನನಗೆ ಅವರು ಮಂಜುಗಡ್ಡೆಯ ಪರ್ವತವಾಗಿ ಕಂಡುಬರುತ್ತಾರೆ.

ಇದನ್ನೂ ಓದಿ ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

ಹಾಗೆಂದು ದ್ರಾವಿಡ್ ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತ ಎಂದು ನಾವು ಬ್ರಾಂಡ್ ಮಾಡುವ ಅಗತ್ಯ ಇಲ್ಲ. ವಿಶ್ವದಾಖಲೆಯ ಎರಡು ಮಹೋನ್ನತ ODI ಪಂದ್ಯಗಳಲ್ಲಿ ಜೊತೆಯಾಟ ನಿಭಾಯಿಸಿ ಭಾರತವನ್ನು ಗೆಲ್ಲಿಸಿದ್ದು ಇದೇ ದ್ರಾವಿಡ್ ಅಲ್ಲವೇ!


ದ್ರಾವಿಡ್ ಒಬ್ಬ ಮಹಾಗುರು ಆಗಿ…

2018ರಲ್ಲಿ ಭಾರತದ ಅಂಡರ್ 19 ಟೀಮನ್ನು ವಿಶ್ವಕಪ್ ಗೆಲ್ಲುವಂತೆ ಮಾಡಿದ್ದು ಇದೇ ದ್ರಾವಿಡ್. ಯಾವುದೇ ಕ್ರಿಕೆಟ್ ಆಟಗಾರನ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ತಿದ್ದಿ ತೀಡಿ ಬೆಳಕಿಗೆ ತರುವ ಕೆಲಸದಲ್ಲಿ ಅವರಿಗೆ ಅವರೇ ಸಾಟಿ. ಸಂಜು ಸ್ಯಾಮ್ಸನ್ ಎಂಬ ಹೋರಾಟಗಾರ ರೂಪುಗೊಂಡಿದ್ದು ದ್ರಾವಿಡ್ ಗರಡಿಯಲ್ಲಿ. ಅಂಡರ್ 19 ವಿಶ್ವಕಪ್ ಗೆದ್ದಾಗ ಅವರಿಗೆ ಬಿಸಿಸಿಐ 50 ಲಕ್ಷ ನಗದು ಬಹುಮಾನ ಪ್ರಕಟಿಸಿತ್ತು. ಆಗ ತನ್ನ ಸಹಾಯಕ ಸಿಬ್ಬಂದಿಗೆ ಕೊಟ್ಟಷ್ಟೇ ತನಗೆ ಸಾಕು, 20 ಲಕ್ಷ ಮಾತ್ರ ಕೊಡಿ ಎಂದು ದ್ರಾವಿಡ್ ಉದಾರತೆ ಮೆರೆದಿದ್ದರು!

ಈ ಬಾರಿ ಕೂಡ ಭಾರತ 2024ರ ವಿಶ್ವಕಪ್ ಗೆಲ್ಲುವಲ್ಲಿ ಅವರ ಕೋಚಿಂಗ್ ಪಾತ್ರವೇ ಮುಖ್ಯ ಎಂದು ಎಲ್ಲರಿಗೂ ಗೊತ್ತಿದೆ. ಹೆಚ್ಚು ಎಕ್ಸಪರಿಮೆಂಟ್ ಮಾಡಲು ಹೋಗದೆ ಇರುವ ಆಟಗಾರರ ಮೇಲೆಯೇ ವಿಶ್ವಾಸ ಇಟ್ಟು ಧೈರ್ಯ ತುಂಬುವ ಕೆಲಸ ದ್ರಾವಿಡ್ ಮಾಡಿದ್ದರು. ಬಿಸಿಸಿಐ ಅವರಿಗೆ 5 ಕೋಟಿ ನಗದು ಬಹುಮಾನ ಕೊಟ್ಟದ್ದನ್ನು ನಿರಾಕರಿಸಿ ತನ್ನ ಸಹಾಯಕರಿಗೆ ಕೊಟ್ಟ ಎರಡೂವರೆ ಕೋಟಿ ಸಾಕು ಎಂದು ಮತ್ತೆ ದುಡ್ಡು ಹಿಂದಿರುಗಿಸಿದ್ದಾರೆ!


ಒಂದೆರಡು ವರ್ಷಗಳ ಹಿಂದೆ ಬೆಂಗಳೂರು ವಿವಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದಾಗ ಅದನ್ನು ನಯವಾಗಿ ನಿರಾಕರಿಸಿದವರು ಇದೇ ದ್ರಾವಿಡ್! ಅದಕ್ಕೆ ಅವರು ಕೊಟ್ಟ ಕಾರಣವೂ ಅದ್ಭುತವಾಗಿ ಇತ್ತು. ‘ ಈ ಡಾಕ್ಟರೇಟ್ ಪದವಿ ಪಡೆಯಲು ನನ್ನ ಹೆಂಡತಿ ಏಳು ವರ್ಷಗಳ ಕಾಲ ಓದಿ ಸಂಶೋಧನೆ ಮಾಡಿದ್ದಾರೆ. ನಾನು ಯಾವ ಸಂಶೋಧನೆಯೂ ಮಾಡಿಲ್ಲ. ಮತ್ತೆ ಯಾಕೆ ನನಗೆ ಗೌರವ ಡಾಕ್ಟರೇಟ್?’

ಏಕದಿನದ ವಿಶ್ವಕಪನಲ್ಲಿ ಈ ಬಾರಿ ಭಾರತ ಫೈನಲ್ ತನಕ ಹೋದದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೂಟದಲ್ಲಿ ಕೂಡ ಫೈನಲ್ ತನಕ ಸಾಗಿ ಬಂದದ್ದು ದ್ರಾವಿಡ್ ಅವರ ಕೋಚಿಂಗ್ ಬಲದಿಂದ ಎನ್ನುವುದು ನೂರಕ್ಕೆ ನೂರು ನಿಜ.


ಇದೀಗ ಭಾರತೀಯ ಕ್ರಿಕೆಟ್ ತಂಡದ ಕೋಚಿಂಗ್ ಹುದ್ದೆಯಿಂದ ಅವರು ಕೆಳಗೆ ಇಳಿದಿದ್ದಾರೆ. ಭಾರತವನ್ನು ಕಿಕೆಟ್ ಜಗತ್ತಿನಲ್ಲಿ ಹೊಳೆಯುವಂತೆ ಮಾಡಿದ್ದಾರೆ. 20 ವರ್ಷ ಭಾರತಕ್ಕಾಗಿ ಆಡಿದ್ದಾರೆ. ಅಂತಹ ಮಹಾಗುರು ಭಾರತರತ್ನ ಪ್ರಶಸ್ತಿಗೆ ಅತ್ಯಂತ ಅರ್ಹರಿದ್ದಾರೆ. ಕನಿಷ್ಠ ಪಕ್ಷ ಕರ್ನಾಟಕ ಸರಕಾರ ಅವರನ್ನು ದೊಡ್ಡದಾಗಿ ಸನ್ಮಾನಿಸುವ ಅಗತ್ಯ ಕೂಡ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ನೇರಳೆ ಬಣ್ಣದ ಟ್ರ್ಯಾಕ್; ಏನಿದರ ವಿಶೇಷತೆ?

Paris Olympics 2024:1976ರಿಂದಲೂ ಇಟಲಿಯ ಮೊಂಡೊ ಸಂಸ್ಥೆಯು ಒಲಿಂಪಿಕ್ಸ್‌ಗೆ ಟ್ರ್ಯಾಕ್‌ ಅಳವಡಿಕೆ ಕಾರ್ಯ ಮಾಡುತ್ತಿದ್ದು, ನೇರಳೆ ಬಣ್ಣದ ಟ್ರ್ಯಾಕ್‌ ಅನ್ನು ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿದೆ. ಈ ಟ್ರ್ಯಾಕ್​ನಲ್ಲಿ ವಿಶ್ವ ಹಾಗೂ ಒಲಿಂಪಿಕ್ಸ್‌ ದಾಖಲೆಗಳು ನಿರ್ಮಾಣಗೊಳ್ಳಲಿವೆ ಎಂದು ಮೊಂಡೊ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.

VISTARANEWS.COM


on

Paris Olympics 2024
Koo

ಪ್ಯಾರಿಸ್​: ಈ ಬಾರಿಯ ಒಲಿಂಪಿಕ್ಸ್(Paris Olympics 2024)​ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತ್ರವಲ್ಲದೆ ಅಥ್ಲೆಟಿಕ್ಸ್​ ಸ್ಪರ್ಧೆಗಳ ವಿಷಯದಲ್ಲೂ ವಿಶೇಷವಾಗಿದೆ. ಹೌದು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸಂಪ್ರದಾಯಿಕ ಇಟ್ಟಿಗೆ-ಕೆಂಪು ಬಣ್ಣದ ಟ್ರ್ಯಾಕ್‌ ಬದಲಾಗಿ ನೇರಳೆ ಬಣ್ಣದ ಸಿಂಥೆಟಿಕ್‌ ಟ್ರ್ಯಾಕ್‌ ಬಳಕೆಯಾಗಲಿದೆ. ಅಥ್ಲೀಟ್​ಗಳು ಲ್ಯಾವೆಂಡರ್​ ಬಣ್ಣದ ಟ್ರ್ಯಾಕ್​ನಲ್ಲಿ(purple track) ಮೊದಲ ಬಾರಿಗೆ ಓಡಲಿದ್ದಾರೆ. ಭಾರತದ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಅವರ ಎಸೆತದ ಶೈಲಿಗೂ ಈ ಟ್ರ್ಯಾಕ್​ ನೆರವಾಗಲಿದೆ ಎಂದು ಹೇಳಲಾಗಿದೆ.

1976ರಿಂದಲೂ ಇಟಲಿಯ ಮೊಂಡೊ ಸಂಸ್ಥೆಯು ಒಲಿಂಪಿಕ್ಸ್‌ಗೆ ಟ್ರ್ಯಾಕ್‌ ಅಳವಡಿಕೆ ಕಾರ್ಯ ಮಾಡುತ್ತಿದ್ದು, ನೇರಳೆ ಬಣ್ಣದ ಟ್ರ್ಯಾಕ್‌ ಅನ್ನು ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿದೆ. ಈ ಟ್ರ್ಯಾಕ್​ನಲ್ಲಿ ವಿಶ್ವ ಹಾಗೂ ಒಲಿಂಪಿಕ್ಸ್‌ ದಾಖಲೆಗಳು ನಿರ್ಮಾಣಗೊಳ್ಳಲಿವೆ ಎಂದು ಮೊಂಡೊ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.

2016ರಲ್ಲಿ ನೀಲಿ ಟ್ರ್ಯಾಕ್​ ಬಳಕೆ


ಸಾಮಾನ್ಯವಾಗಿ ಒಲಿಂಪಿಕ್ಸ್​ ಅಥ್ಲೆಟಿಕ್ಸ್​ ಸ್ಪರ್ಧೆಗಳು ಹೆಚ್ಚಾಗಿ ಇಟ್ಟಿಗೆ ಬಣ್ಣದ ಟ್ರ್ಯಾಕ್​ನಲ್ಲಿ ನಡೆಯುತ್ತಿತ್ತು. ಆದರೆ, ಇಂಥದ್ದೇ ರ್ನಿದಿಷ್ಟ ಬಣ್ಣದ ಟ್ರ್ಯಾಕ್​ನಲ್ಲಿ ಅಥ್ಲೆಟಿಕ್ಸ್​ ಸ್ಪರ್ಧೆ ನಡೆಸಬೇಕೆಂಬ ನಿಯಮವಿಲ್ಲ. 2016ರ ರಿಯೋ ಒಲಿಂಪಿಕ್ಸ್​ ವೇಳೆ ಮೊದಲ ಬಾರಿಗೆ ಇಟ್ಟಿಗೆ ಬಣ್ಣದ ಸಿಂಥೆಟಿಕ್​ ಟ್ರ್ಯಾಕ್​ ಬದಲು ನೀಲಿ ಟ್ರ್ಯಾಕ್​ ಮೇಲೆ ಅಥ್ಲೆಟಿಕ್ಸ್​ ಸ್ಪರ್ಧೆ ನಡೆದಿತ್ತು. ಈ ಬಾರಿ ನೇರಳೆ ಬಣ್ಣದ ಟ್ರ್ಯಾಕ್​ನಲ್ಲಿ ಅಥ್ಲೆಟಿಕ್ಸ್​ ಸ್ಪರ್ಧೆ ನಡೆಯಲಿದೆ. ಈ ವಿನೂತನ ತಂತ್ರಜ್ಞಾನದ ಹೊಸ ಟ್ರ್ಯಾಕ್​ಗಳು ಅಥ್ಲೀಟ್​ಗಳಿಗೆ ಅತ್ಯಂತ ವೇಗವಾಗಿ ಓಡಲು ನೆರವಾಗಲಿದೆ ಎಂದು ಮೊಂಡೋ ಕಂಪನಿ ತಿಳಿಸಿದೆ. ನೇರಳೆ ಬಣ್ಣದ ಅಥ್ಲೆಟಿಕ್ಸ್​ ಟ್ರ್ಯಾಕ್​ನಲ್ಲಿ ಲೇನ್​ಗಳ ಸಂಖ್ಯೆಯನ್ನು 8ರಿಂದ 9ಕ್ಕೆ ಏರಿಸಲಾಗಿದೆ. ಕ್ರೀಡಾಂಗಣದಲ್ಲಿ ಒಟ್ಟಾರೆ 17,000 ಚದರ ಮೀಟರ್​ ವಿಸ್ತೀರ್ಣದಲ್ಲಿ ಈ ನೇರಳೆ ಬಣ್ಣ ವ್ಯಾಪಿಸಿದೆ.

ಇದನ್ನೂ ಓದಿ Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಪರ್ಧಾ ಪಟ್ಟಿಯಲ್ಲಿರುವ ಕ್ರೀಡೆಗಳು ಯಾವುವು? ಇವುಗಳಲ್ಲಿ ಅತ್ಯಂತ ಪ್ರಾಚೀನ ಕ್ರೀಡೆಗಳು ಯಾವುದೆಲ್ಲ?

ನೇರಳ ಬಣ್ಣ ಬಳಕೆಗೆ ಕಾರಣವೇನು?

ಪ್ಯಾರಿಸ್​ ಒಲಿಂಪಿಕ್ಸ್​ನ ಅಥ್ಲೆಟಿಕ್ಸ್​ ಟ್ರ್ಯಾಕ್​ಗೆ ನೇರಳೆ ಬಣ್ಣ ಬಳಸಲು ಕೂಡ ಒಂದು ಪ್ರಮುಖ ಕಾರಣವಿದೆ. ಅದೇನೆಂದರೆ, ಈ ಸಲದ ಒಲಿಂಪಿಕ್ಸ್​ ಗೇಮ್ಸ್​ ನೀಲಿ, ಹಸಿರು ಮತ್ತು ನೇರಳ ಬಣ್ಣದ ಥೀಮ್​ ಒಳಗೊಂಡಿದೆ. ಕ್ರೀಡಾಕೂಟದ ಎಲ್ಲ ತಾಣಗಳಲ್ಲಿ ಇದೇ ಬಣ್ಣಗಳು ಎದ್ದು ಕಾಣಲಿವೆ. ಇದೇ ನಿಟ್ಟಿನಲ್ಲಿ ಅಥ್ಲೆಟಿಕ್ಸ್​ ಟ್ರ್ಯಾಕ್​ಗೂ ದೃಶ್ಯ ಆಕರ್ಷಣೆಯ ನೇರಳ ಬಣ್ಣವನ್ನು ನೀಡಲಾಗಿದೆ. ಜತೆಗೆ ಮನೋವೈಜ್ಞಾನಿಕ ಕಾರಣವೂ ಇದೆ. ನೇರಳೆ ಬಣ್ಣವನ್ನು ಧೈರ್ಯಶಾಲಿ, ಶಕ್ತಿಯುತ ಮತ್ತು ಸೃಜನಾತ್ಮಕತೆಯ ಪ್ರತಿಕ ಎನ್ನಲಾಗಿದೆ.

ಇದನ್ನೂ ಓದಿ Paris Olympics: ಪ್ಯಾರಿಸ್‌ ಒಲಿಂಪಿಕ್ಸ್​ ಭದ್ರತಾ ಕಾರ್ಯದಲ್ಲಿ ಭಾರತದ ಶ್ವಾನದಳ; ಬೆಂಗಳೂರಿನಲ್ಲಿ ತರಬೇತಿ

100 ವರ್ಷಗಳ ಬಳಿಕ ಪ್ಯಾರಿಸ್​ ಆತಿಥ್ಯ


ಪ್ಯಾರಿಸ್‌ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್‌ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್‌ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್​ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Continue Reading

ಕ್ರೀಡೆ

Hardik Pandya: ಬಾಲಿವುಡ್​ ನಟಿಯೊಂದಿಗೆ ಚಾಟಿಂಗ್​, ಡೇಟಿಂಗ್​ ಆರಂಭಿಸಿದ ಹಾರ್ದಿಕ್​ ಪಾಂಡ್ಯ

Hardik Pandya: ವರದಿಗಳ ಪ್ರಕಾರ ಹಾರ್ದಿಕ್​ ಪಾಂಡ್ಯ ಬಾಲಿವುಡ್ ನಟಿ ಅನನ್ಯ ಪಾಂಡೆ(Ananya Panday) ಜತೆ ಚಾಟಿಂಗ್​, ಡೇಟಿಂಗ್​ ಆರಂಭಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಾಂಡ್ಯ ಇನ್‌ಸ್ಟಾಗ್ರಾಂನಲ್ಲಿ ಅನನ್ಯ ಪಾಂಡೆ ಅವರನ್ನು ದೀಢಿರ್​ ಆಗಿ ಫಾಲೋ ಮಾಡಲಾರಂಭಿಸಿದ್ದು.

VISTARANEWS.COM


on

Hardik Pandya
Koo

ಮುಂಬಯಿ: ಹಾರ್ದಿಕ್​ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾಂಕೋವಿಕ್(Natasa Stankovic) ಅವರಿಗೆ ವಿಚ್ಛೇದನ(Hardik-Natasa Divorce) ನೀಡಿ ಒಂದು ವಾರ ಕಳೆಯುವ ಮುನ್ನವೇ ಇದೀಗ ಹಾರ್ದಿಕ್​ ಮತ್ತೊಂದು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಬಾಲಿವುಡ್​ನ ಖ್ಯಾತ ನಟಿಯನ್ನು ಪಾಂಡ್ಯ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಕಳೆದ ಗುರುವಾರ ಹಾರ್ದಿಕ್​ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಜಂಟಿ ಹೇಳಿಕೆ ಪ್ರಕಟಿಸುವ ಮೂಲಕ ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದರು.

ಹೌದು, ವರದಿಗಳ ಪ್ರಕಾರ ಹಾರ್ದಿಕ್​ ಪಾಂಡ್ಯ ಬಾಲಿವುಡ್ ನಟಿ ಅನನ್ಯ ಪಾಂಡೆ(Ananya Panday) ಜತೆ ಚಾಟಿಂಗ್​, ಡೇಟಿಂಗ್​ ಆರಂಭಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಾಂಡ್ಯ ಇನ್‌ಸ್ಟಾಗ್ರಾಂನಲ್ಲಿ ಅನನ್ಯ ಪಾಂಡೆ ಅವರನ್ನು ದೀಢಿರ್​ ಆಗಿ ಫಾಲೋ ಮಾಡಲಾರಂಭಿಸಿದ್ದು. ಅತ್ತ ಅನನ್ಯ ಪಾಂಡೆ ಕೂಡಾ ಹಾರ್ದಿಕ್ ಪಾಂಡ್ಯ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲಾರಂಭಿಸಿದ್ದಾರೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹೊಸ ಸಂಚಲನ ಹುಟ್ಟುಹಾಕಿದ್ದು ಪಾಂಡ್ಯ ಸದ್ಯದಲ್ಲೇ ಅನನ್ಯ ಪಾಂಡೆ ಜತೆ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಸಂದರ್ಭದಲ್ಲೂ ಹಾರ್ದಿಕ್ ಪಾಂಡ್ಯ ಹಾಗೂ ಅನನ್ಯ ಪಾಂಡೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಇಬ್ಬರೂ ಜತೆಯಾಗಿ ಬಿಂದಾಸ್ ಡ್ಯಾನ್ಸ್​ ಕೂಡ ಮಾಡಿದ್ದರು. ಈ ಘಟನೆ ನಡೆದ 2 ದಿನಗಳ ಬಳಿಕ ಇದೀಗ ಇಬ್ಬರು ಪರಸ್ಪರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಲೊ ಮಾಡಿಕೊಂಡಿದ್ದಾರೆ. ಸದ್ಯ ಚಾಟಿಂಗ್​ನಲ್ಲಿರುವ ಈ ಜೋಡಿ ಮುಂದೆ ಡೇಟಿಂಗ್​ ಮಾಡಲಿದ್ದಾರೆ ಎಂದು ಕೆಲ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ Suryakumar Yadav : ಮುಂದಿನ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ನಾಯಕತ್ವವೂ ನಷ್ಟ

ಅನನ್ಯ ಪಾಂಡೆ ನಟ ಆಧಿತ್ಯ ರಾಯ್ ಕಪೂರ್ ಜತೆ ಕೆಲವು ಸಮಯದಿಂದ ಡೇಟಿಂಗ್ ನಡೆಸುತ್ತಿದ್ದರು. ಆದರೆ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಎಲ್ಲೂ ತುಟಿಬಿಚ್ಚಿರಲಿಲ್ಲ. ಆದರೆ, ಕೆಲ ದಿನಗಳ ಹಿಂದಷ್ಟೇ ಅನನ್ಯ ಪಾಂಡೆ ಮತ್ತು ಆಧಿತ್ಯ ರಾಯ್​ ಜತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದೀಗ ಪಾಂಡ್ಯ ಜತೆ ಡೇಟಿಂಗ್​ ನಡೆಸುತ್ತಿರುವುದಾಗಿ ವರದಿಯಾಗಿದೆ.

ಹಾರ್ದಿಕ್​ ಮತ್ತು ನತಾಶಾ ನಡುವಿನ ಬ್ರೇಕಪ್​ಗೆ ಸಂವಹನ ಕೊರತೆಯೇ ಮುಖ್ಯ ಕಾರಣ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ. ಇಬ್ಬರ ನಡುವಿನ ಮನಸ್ತಾಪ ಮತ್ತು ಜಗಳಕ್ಕೆ ಪರಿಹಾರ ಕಂಡುಕೊಳ್ಳುವ ತಾಳ್ಮೆ ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಮನಸ್ತಾಪ ದೊಡ್ಡದಾಗಿ ಡಿವೋರ್ಸ್​ಗೆ ಕಾರಣವಾಯಿತು. ಇದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಬಗ್ಗೆ ಯಾವುದೇ ತಪ್ಪು ಸುದ್ದಿ ಹಬ್ಬಿಸಬಾರದು ಎಂದು ಆಪ್ತ ಮೂಲಗಳು ತಿಳಿಸಿವೆ.

ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು.

Continue Reading

ಕ್ರೀಡೆ

Women’s Asia Cup: ಏಷ್ಯಾಕಪ್​ನಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್

Women’s Asia Cup: ಶ್ರೇಯಾಂಕಾ ಪಾಟೀಲ್ ಟೂರ್ನಿಯಿಂದ ಹೊರ ಬಿದ್ದ ವಿಚಾರವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಪಾಕಿಸ್ತಾನ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಶ್ರೇಯಾಂಕಾ 3.4 ಓವರ್​ಗಳಲ್ಲಿ 14 ರನ್ ನೀಡಿ 2 ವಿಕೆಟ್ ಉರುಳಿಸಿದ್ದರು.

VISTARANEWS.COM


on

Women's Asia Cup
Koo

ಬೆಂಗಳೂರು: ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್(Women’s Asia Cup)​ ಕ್ರಿಕೆಟ್​ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದೆ. ಆಲ್ ರೌಂಡರ್, ಕನ್ನಡತಿ, ಶ್ರೇಯಾಂಕಾ ಪಾಟೀಲ್(Shreyanka Patil)​ ಅವರು ಕೈ ಬೆರಳಿನ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ(Shreyanka Patil ruled out) ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ತನುಜಾ ಕನ್ವರ್ ಆಯ್ಕೆಯಾಗಿದ್ದಾರೆ.

ಶ್ರೇಯಾಂಕಾ ಪಾಟೀಲ್ ಟೂರ್ನಿಯಿಂದ ಹೊರ ಬಿದ್ದ ವಿಚಾರವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಪಾಕಿಸ್ತಾನ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಶ್ರೇಯಾಂಕಾ 3.4 ಓವರ್​ಗಳಲ್ಲಿ 14 ರನ್ ನೀಡಿ 2 ವಿಕೆಟ್ ಉರುಳಿಸಿದ್ದರು. ಇದೇ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಶ್ರೇಯಾಂಕಾ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಎಡಗೈಯನ ಬೆರಳು ಮುರಿತವಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನಲಾಗಿದೆ.

ಉದಯೋನ್ಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಶ್ರೇಯಾಂಕಾ ಭಾರತ ಪರ 12 ಟಿ20 ಪಂದ್ಯಗಳನ್ನಾಡಿದ್ದು 16 ವಿಕೆಟ್​ ಕಿತ್ತಿದ್ದಾರೆ. ಏಕದಿನದಲ್ಲಿ 5 ವಿಕೆಟ್​ ಕಲೆಹಾಕಿದ್ದಾರೆ. 21 ವರ್ಷದ ಶ್ರೇಯಾಂಕಾ ಪಾಟೀಲ್ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ಇಲ್ಲಿ ತೋರಿದ ಪ್ರದರ್ಶನದಿಂದ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡುವಂತೆ ಮಾಡಿತ್ತು. ಹಂತ ಹಂತವಾಗಿ ಬೆಳೆದ ಇವರು 2023ರಲ್ಲಿ 21 ವಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅವಕಾಶ ಪಡೆದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಡಿಸೆಂಬರ್ 6ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಡುವ ಮೂಲಕ ಭಾರತ ಹಿರಿಯರ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಇದನ್ನೂ ಓದಿ WPL 2024: ಶ್ರೇಯಾಂಕಾ ಪಾಟೀಲ್ ಅದ್ಭುತ ಫೀಲ್ಡಿಂಗ್​ ಕಂಡು ದಂಗಾದ ಆರ್​ಸಿಬಿ ಅಭಿಮಾನಿಗಳು

ಇಂದು ನಡೆಯುವ ಪಂದ್ಯದಲ್ಲಿ ಭಾರತ ತಂಡ ಯುಎಇ(United Arab Emirates Women) ತಂಡದ ಸವಾಲು ಎದುರಿಸಲಿದೆ. ಈ ಪಂದ್ಯ ಗೆದ್ದರೆ ಭಾರತ ಸೆಮಿಫೈನಲ್​ ಟಿಕೆಟ್​ ಖಾತ್ರಿಗೊಳ್ಳಲಿದೆ. ಭಾರತ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ರೇಣುಕಾ ಸಿಂಗ್‌, ಪೂಜಾ ವಸ್ತ್ರಾಕರ್‌, ದೀಪ್ತಿ ಶರ್ಮ, ರಾಧಾ ಯಾದವ್‌ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಬ್ಯಾಟಿಂಗ್ ವಿಭಾಗ​ ಕೂಡ ಉತ್ತಮ ರೀತಿಯಲ್ಲಿದೆ. ಶಫಾಲಿ ಶರ್ಮ ಮತ್ತು ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್​ಪ್ರೀತ್​ ಕೌರ್​, ಜೆಮಿಮಾ ರೋಡ್ರಿಗಸ್​, ರಿಚಾ ಘೋಷ್​ ತಂಡವನ್ನು ಆಧರಿಸಬಲ್ಲರು.

ಯುಎಇ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ತಾನಾಡಿದ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಆರು ವಿಕೆಟ್‌ಗಳಿಂದ ಸೋಲನ್ನು ಕಂಡಿತ್ತು. ಇದೀಗ ಭಾರತ ವಿರುದ್ಧ ಸೋತರೆ ಕೂಟದಿಂದ ಹೊರಬೀಳುವ ಸಾಧ್ಯತೆಯಿದೆ. ಹೀಗಾಗಿ ಯುಎಇಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

ಭಾರತ ಪರಿಷ್ಕೃತ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ತನುಜಾ ಕನ್ವರ್ , ಸಜನಾ ಸಜೀವನ್.

Continue Reading

ಕ್ರೀಡೆ

Womens Asia Cup T20: ಇಂದು ಭಾರತ-ಯುಎಇ ಸೆಣಸಾಟ; ಗೆದ್ದರೆ ಹರ್ಮನ್ ಪಡೆ ಸೆಮಿಫೈನಲ್​ಗೆ

Womens Asia Cup T20: ಯುಎಇ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ತಾನಾಡಿದ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಆರು ವಿಕೆಟ್‌ಗಳಿಂದ ಸೋಲನ್ನು ಕಂಡಿತ್ತು. ಇದೀಗ ಭಾರತ ವಿರುದ್ಧ ಸೋತರೆ ಕೂಟದಿಂದ ಹೊರಬೀಳುವ ಸಾಧ್ಯತೆಯಿದೆ. ಹೀಗಾಗಿ ಯುಎಇಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

VISTARANEWS.COM


on

Koo

ಡಂಬುಲಾ: (ಶ್ರೀಲಂಕಾ): ಮಹಿಳಾ ಏಷ್ಯಾಕಪ್​ನಲ್ಲಿ(Womens Asia Cup T20) ಆಡಿದ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ 7 ವಿಕೆಟ್​ಗಳಿಂದ ಗೆದ್ದು ಶುಭಾರಂಭ ಮಾಡಿರುವ ಹಾಲಿ ಚಾಂಪಿಯನ್​ ಭಾರತ(India Women) ತಂಡ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು ನಡೆಯುವ ಪಂದ್ಯದಲ್ಲಿ ಯುಎಇ(United Arab Emirates Women) ತಂಡದ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲೂ ಗೆಲುವು ಸಾಧಿಸಿ ಸೆಮಿಫೈನಲಿಗೇರುವ ವಿಶ್ವಾಸದಲ್ಲಿದೆ ಹರ್ಮನ್​ಪ್ರೀತ್​ ಪಡೆ.

ಭಾರತ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ರೇಣುಕಾ ಸಿಂಗ್‌, ಪೂಜಾ ವಸ್ತ್ರಾಕರ್‌, ದೀಪ್ತಿ ಶರ್ಮ, ರಾಧಾ ಯಾದವ್‌ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಬ್ಯಾಟಿಂಗ್ ವಿಭಾಗ​ ಕೂಡ ಉತ್ತಮ ರೀತಿಯಲ್ಲಿದೆ. ಶಫಾಲಿ ಶರ್ಮ ಮತ್ತು ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್​ಪ್ರೀತ್​ ಕೌರ್​, ಜೆಮಿಮಾ ರೋಡ್ರಿಗಸ್​, ರಿಚಾ ಘೋಷ್​ ತಂಡವನ್ನು ಆಧರಿಸಬಲ್ಲರು.

ಇದನ್ನೂ ಓದಿ IND vs SL: ನಾಳೆ ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣ

ಯುಎಇ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ತಾನಾಡಿದ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಆರು ವಿಕೆಟ್‌ಗಳಿಂದ ಸೋಲನ್ನು ಕಂಡಿತ್ತು. ಇದೀಗ ಭಾರತ ವಿರುದ್ಧ ಸೋತರೆ ಕೂಟದಿಂದ ಹೊರಬೀಳುವ ಸಾಧ್ಯತೆಯಿದೆ. ಹೀಗಾಗಿ ಯುಎಇಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

ಉಭಯ ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.

ಯುಎಇ: ಇಶಾ ರೋಹಿತ್ ಓಜಾ (ನಾಯಕಿ), ತೀರ್ಥ ಸತೀಶ್ (ವೀಕಿ), ರಿನಿತಾ ರಜಿತ್, ಸಮೈರಾ ಧರ್ಣಿಧರ್ಕಾ, ಕವಿಶಾ ಎಗೋಡಗೆ, ಖುಷಿ ಶರ್ಮಾ, ಹೀನಾ ಹೊಚ್ಚಂದನಿ, ವೈಷ್ಣವೆ ಮಹೇಶ್, ರಿತಿಕಾ ರಜಿತ್, ಲಾವಣ್ಯ ಕೇನಿ, ಇಂಧುಜಾ ನಂದಕುಮಾರ್, ಮೆಹಕ್ ಠಾಕೂರ್, ಎಮಿಲಿ ರಜಿತ್ ಥಾಮಸ್, ರಿಷಿತಾ ಥಾಮಸ್ ಕೊಟ್ಟೆ.

Continue Reading
Advertisement
theft case
ಚಿತ್ರದುರ್ಗ14 mins ago

Theft Case : ಅಡ್ಡಗಟ್ಟಿದ ಪೊಲೀಸ್‌ ಜೀಪ್‌ ಮೇಲೆ ಕಲ್ಲು ತೂರಿ ಆಂಧ್ರದ ಡೆಡ್ಲಿ ಕಳ್ಳರ ಗ್ಯಾಂಗ್‌ ಎಸ್ಕೇಪ್‌!

Niveditha Shivarajkumar Fire fly rachana inder Heroine
ಸ್ಯಾಂಡಲ್ ವುಡ್20 mins ago

Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?

Kanwar Yatra
ದೇಶ25 mins ago

Kanwar Yatra: ಮುಸ್ಲಿಮರ ವಿರುದ್ಧ ಬಿಜೆಪಿಯ ದ್ವೇಷದ ರಾಜಕೀಯ ಎಂದ ಓವೈಸಿ; ಜಿನ್ನಾರಂತೆ ವರ್ತನೆ ಎಂದು ಬಿಜೆಪಿ ಟಾಂಗ್‌

Gold Rate Today
ಚಿನ್ನದ ದರ30 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ತಿಳಿದುಕೊಳ್ಳಿ

Om shiva, Kannada movie team song out
ಸಿನಿಮಾ38 mins ago

Kannada New Movie: ಭಾರ್ಗವ್ ಕೃಷ್ಣ ಅಭಿನಯದ `ಓಂ ಶಿವಂ’ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ

Paris Olympics 2024
ಕ್ರೀಡೆ1 hour ago

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ನೇರಳೆ ಬಣ್ಣದ ಟ್ರ್ಯಾಕ್; ಏನಿದರ ವಿಶೇಷತೆ?

Karnataka HC
ಕರ್ನಾಟಕ1 hour ago

Karnataka HC: ನ್ಯಾಯಮೂರ್ತಿಗಳು ಕೂಡ ಮನುಷ್ಯರೇ; ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಣೆ ಅಪರಾಧವಲ್ಲ ಆದೇಶ ಹಿಂಪಡೆದ ಹೈಕೋರ್ಟ್

Dr Bro shreenaval kishori Craze social media stars
ವೈರಲ್ ನ್ಯೂಸ್1 hour ago

Dr Bro: ಸೋಷಿಯಲ್​ ಮೀಡಿಯಾ ಸ್ಟಾರ್‌ಗಳ ಮೇಲೆ ಹೆಚ್ಚಾಯ್ತು ಕ್ರೇಜ್‌! ನಿಮಗ್ಯಾರಿಷ್ಟ?

Kanwar Yatra
ದೇಶ1 hour ago

Kanwar Yatra: “ಹೆಸರು ಬಹಿರಂಗ ಪಡಿಸುವಲ್ಲಿ ರಾಮನಿಗಿಲ್ಲದ ಸಮಸ್ಯೆ ರೆಹಮಾನ್‌ಗೆ ಏಕೆ?”-ಬಾಬಾ ರಾಮ್‌ ದೇವ್‌ ಪ್ರಶ್ನೆ

karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ಮುಂದುವರಿದ ಸಾವು-ನೋವು; ಮನೆ ಗೋಡೆ ಕುಸಿದು ವ್ಯಕ್ತಿ ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ1 day ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ2 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ2 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ3 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ5 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ6 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ6 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌