Ravindra Jadeja: ವಿಶ್ವಕಪ್​ ಟ್ರೋಫಿಯೊಂದಿಗೆ ತಾಯಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಜಡೇಜಾ - Vistara News

ಕ್ರೀಡೆ

Ravindra Jadeja: ವಿಶ್ವಕಪ್​ ಟ್ರೋಫಿಯೊಂದಿಗೆ ತಾಯಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಜಡೇಜಾ

Ravindra Jadeja: ಜಡೇಜಾ 17 ವರ್ಷ ಇರುವಾಗ ಅವರ ತಾಯಿ 2005 ರಲ್ಲಿ ನಿಧನರಾಗಿದ್ದರು. ತಾಯಿಯ ನಿಧನದ ವೇಳೆ ಜಡೇಜಾ ಭಾರತ U19 ತಂಡದ ಭಾಗವಾಗಿದ್ದರು

VISTARANEWS.COM


on

Ravindra Jadeja
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಭಾರತ ತಂಡದ ಸ್ಟಾರ್​ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರು ತಮ್ಮ ತಾಯಿಗೆ ವಿಶೇಷವಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಗೆದ್ದ ಟಿ20 ವಿಶ್ವಕಪ್ 2024ರ ಟ್ರೋಫಿಯೊಂದಿಗೆ ತಾಯಿಯ ಜತೆ ನಿಂತಿರುವ ಪೆನ್ಸಿಲ್​ ಆರ್ಟ್​ ರೇಖಾಚಿತ್ರವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ.

ಜಡೇಜಾ 17 ವರ್ಷ ಇರುವಾಗ ಅವರ ತಾಯಿ 2005 ರಲ್ಲಿ ನಿಧನರಾಗಿದ್ದರು. ತಾಯಿಯ ನಿಧನದ ವೇಳೆ ಜಡೇಜಾ ಭಾರತ U19 ತಂಡದ ಭಾಗವಾಗಿದ್ದರು. ಜಡೇಜಾ ತಮ್ಮ ಇನ್​ಸ್ಟಾಗ್ರಾ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಮೂಲಕ ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ. “ನಾನು ಮೈದಾನದಲ್ಲಿ ಏನು ಮಾಡುತ್ತಿದ್ದರೂ ಅದು ನಿನಗಾಗಿ ಮಾತ್ರ” ಎಂದು ಬರೆದಿದ್ದಾರೆ.

ಜೂನ್​ 29ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ಜಯ ಸಾಧಿಸಿ ಎರಡನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಪ್ರಶಸ್ತಿ ಮುಡಿಗೇರಿಸಿಕೊಂಡ ಮರುದಿನ ಜಡೇಜಾ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಣೆ ಮಾಡಿದ್ದರು.

ಇದನ್ನೂ ಓದಿ Ravindra Jadeja : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಲ್​ರೌಂಡರ್​ ರವೀಂದ್ರ ಜಡೇಜಾ ವಿದಾಯ

“ಧನ್ಯವಾದ ತುಂಬಿದ ಹೃದಯದಿಂದ ನಾನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ, ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿ ಅದನ್ನು ಮುಂದುವರಿಸುತ್ತೇನೆ. ಟಿ 20 ವಿಶ್ವಕಪ್ ಗೆಲ್ಲುವ ನನ್ನ ಕನಸು ನನಸಾಯಿತು. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲವಾದ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಹೇಳುವ ಮೂಲಕ ನಿವೃತ್ತಿ ಪ್ರಕಟಿಸಿದ್ದರು.

ಸ್ಪಿನ್-ಬೌಲಿಂಗ್ ಆಲ್ರೌಂಡರ್ ಎಂಎಸ್ ಧೋನಿ ನಾಯಕತ್ವದಲ್ಲಿ ತಂಡಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಅವರು ಹೆಚ್ಚು ಪ್ರಭಾವಶಾಲಿ ಪ್ರದರ್ಶನ ನೀಡಿರಲಿಲ್ಲ. 2009ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅವರು 74 ಪಂದ್ಯಗಳನ್ನು ಆಡಿದ್ದು, 515 ರನ್ ಹಾಗೂ 54 ವಿಕೆಟ್ ಪಡೆದಿದ್ದಾರೆ.

ಜಡೇಜಾ ಅವರ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅವರ ಫೀಲ್ಡಿಂಗ್. ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಅವರಂತಹ ಆಟಗಾರರನ್ನು ನಾವು ಹೊಂದಿದ್ದ ಸಮಯದಲ್ಲಿ ಸೌರಾಷ್ಟ್ರದ ಆಟಗಾರ ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕ ಸಂದರ್ಭಗಳಲ್ಲಿ ಉತ್ತಮ ಫೀಲ್ಡಿಂಗ್ ಮಾಡಿದ್ದಾರೆ. ಅವರು ಎದುರಾಳಿ ತಂಡಕ್ಕೆ 20 ರನ್​ಗಳನ್ನು ಫೀಲ್ಡಿಂಗ್​ನಲ್ಲಿ ಬಿಟ್ಟುಕೊಡುತ್ತಿರಲಿಲ್ಲ. ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ನಿಯೋಜಿತ ಆಲ್​ರೌಂಡರ್​ಗಳಾಗಿ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಜಡೇಜಾ ಈಗ ಏಕದಿನ ಮತ್ತು ಟೆಸ್ಟ್ ಸ್ವರೂಪಗಳತ್ತ ಗಮನ ಹರಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs SL: ಲಂಕಾ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ

IND vs SL: ಅಯ್ಯರ್​ ಸಾರಥ್ಯದಲ್ಲಿ ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್​ ಪ್ರಶಸ್ತಿ ಗೆದ್ದು ಬೀಗಿತ್ತು. ಈ ಯಶಸ್ಸು ಕೂಡ ಅವರನ್ನು ಮತ್ತೆ ತಂಡ ಸೇರುವಂತೆ ಮಾಡಲಿದೆ.

VISTARANEWS.COM


on

IND vs SL
Koo

ಮುಂಬಯಿ: ರಣಜಿ ಆಡಲು ನಿರಾಕರಿಸಿ ಅಶಿಸ್ತು ತೋರಿದ ಕಾರಣದಿಂದ ಬಿಸಿಸಿಐ(BCCI) ವಾರ್ಷಿಕ ಗುತ್ತಿಗೆಯಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್(Shreyas Iyer) ಅವರು ಶ್ರೀಲಂಕಾ(IND vs SL) ವಿರುದ್ದದ ಏಕದಿನ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ. ಲಂಕಾ ಸರಣಿಗೆ ಇಂದು ಭಾರತ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಶ್ರೇಯಸ್ ಅಯ್ಯರ್ ಇದೇ ವರ್ಷ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಬೆನ್ನು ನೋವಿನ ಗಾಯದಿಂದಾಗಿ ಕೊನೆಯ ಮೂರು ಟೆಸ್ಟ್​​ ಪಂದ್ಯಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ಫಿಟ್​ನೆಸ್​ ಕಂಡು ಕೊಳ್ಳುವ ಸಲುವಾಗಿ ಬಿಸಿಸಿಐ ಅಯ್ಯರ್​ಗೆ ದೇಶೀಯ ಕ್ರಿಕೆಟ್​ ಟೂರ್ನಿಯಾದ ರಣಜಿ ಆಡುವಂತೆ ಸಲಹೆ ನೀಡಿತ್ತು. ಆದರೆ, ಅಯ್ಯರ್​ ಇದನ್ನು ಕಡೆಗಣಿಸಿದ್ದರು. ಇದೇ ಕಾರಣಕ್ಕೆ ಬಿಸಿಸಿಐ ಅವರನ್ನು ವಾರ್ಷಿಕ ಗುತ್ತಿಗೆಯಿಂದ ಕೈಬಿಟ್ಟಿತ್ತು. ಅಲ್ಲದೆ ಯಾವುದೇ ಸರಣಿಗೂ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಗಂಭೀರ್​ ಅವರ ಮನವಿಯಂತೆ ಅಯ್ಯರ್​ ಮತ್ತೆ ತಂಡ ಸೇರಲಿದ್ದಾರೆ ಎನ್ನಾಗಿದೆ. ಗಂಭೀರ್ ಅವರು ಮೆಂಟರ್ ಆಗಿದ್ದ ಕೆಕೆಆರ್ ತಂಡದಲ್ಲಿ ಶ್ರೇಯಸ್ ಅವರು ನಾಯಕರಾಗಿದ್ದರು ಎನ್ನುವುದು ಗಮನಾರ್ಹ. ಅಯ್ಯರ್​ ಸಾರಥ್ಯದಲ್ಲಿ ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್​ ಪ್ರಶಸ್ತಿ ಗೆದ್ದು ಬೀಗಿತ್ತು. ಈ ಯಶಸ್ಸು ಕೂಡ ಅವರನ್ನು ಮತ್ತೆ ತಂಡ ಸೇರುವಂತೆ ಮಾಡಲಿದೆ.

ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಕೈಬಿಟ್ಟಾಗದ ಪ್ರತಿಕ್ರಿಯೆ ನೀಡಿದ್ದ ಅಯ್ಯರ್​, ಏಕ ದಿನ ವಿಶ್ವಕಪ್​ನಲ್ಲಿ ಅದ್ಭುತವಾಗಿ ಆಡಿದ್ದೆ. ಅದರ ನಂತರ ವಿರಾಮ ತೆಗೆದುಕೊಳ್ಳಲು ಬಯಸಿದ್ದೆ. ನನ್ನ ಫಿಟ್ನೆಸ್​ಗಾಗಿ ಕೆಲಸ ಮಾಡಲು ಮತ್ತು ಕೆಲವು ವಿಚಾರಗಳ ಬಗ್ಗೆ ಚೈತನ್ಯ ಪಡೆಯಲು ಬಯಸಿದ್ದೆ. ಸಂವಹನದ ಕೊರತೆಯಿಂದಾಗಿ, ಕೆಲವು ನಿರ್ಧಾರಗಳು ನನ್ನ ಪರವಾಗಿ ಆಗಲಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ IND vs SL: ಶ್ರೀಲಂಕಾ ಪ್ರವಾಸಕ್ಕೆ ಇಂದು ಭಾರತ ತಂಡ ಪ್ರಕಟ ಸಾಧ್ಯತೆ: ಯಾರಿಗೆಲ್ಲ ಸಿಗಲಿದೆ ಅವಕಾಶ?

“ಕ್ರಿಕೆಟ್​ ಬ್ಯಾಟ್ ನನಗೆ ಸೇರಿದ್ದು. ಉತ್ತಮ ಪ್ರದರ್ಶನ ನೀಡುವುದು ಮತ್ತು ಟ್ರೋಫಿಗಳನ್ನು ಗೆಲ್ಲುವುದು ನನ್ನ ಮೇಲಿನ ಜವಾಬ್ದಾರಿ ಎಂದು ನಾನು ಅರಿತುಕೊಂಡೆ. ಐಪಿಎಲ್ ಗೆದ್ದ ನಂತರ ಹಿಂದೆ ನಡೆದಿರುವ ಘಟನೆಗಳಿಗೆ ಸೂಕ್ತ ಉತ್ತರ ಎಂದು ನಾನು ನಿರ್ಧರಿಸಿದೆ. ಅದೃಷ್ಟವಶಾತ್ ಎಲ್ಲವೂ ಪೂರಕವಾಗಿ ನಡೆಯಿತು. ನಡೆದಿರುವ ಎಲ್ಲ ಘಟನೆಗಳಿಗೆ ನಾನು ಅಭಾರಿಯಾಗಿದ್ದೇನೆ” ಎಂದು ಶ್ರೇಯಸ್​ ಹೇಳಿದ್ದರು.

ಏಕದಿನಕ್ಕೆ ರಾಹುಲ್​ ನಾಯಕ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್‌ ಶರ್ಮ ಅಲಭ್ಯರಾಗಲಿರುವ ಕಾರಣ, ಕೆ.ಎಲ್​ ರಾಹುಲ್ ಅವರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ. 027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ರಾಹುಲ್​ಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.

Continue Reading

ಕ್ರೀಡೆ

Suryakumar Yadav: ಹಾರ್ದಿಕ್​ ಕೈಬಿಟ್ಟು ಸೂರ್ಯಕುಮಾರ್​ಗೆ ಟಿ20 ನಾಯಕತ್ವ ನೀಡಲು ಬಿಸಿಸಿಐ ಮುಂದಾಗಿದ್ದೇಕೆ?

Suryakumar Yadav: ಸೂರ್ಯಕುಮಾರ್‌ ಯಾದವ್‌ ಹೆಗಲಿಗೆ ನಾಯಕತ್ವ ನೀಡಲು ಬಿಸಿಸಿಐ ಅಧಿಕಾರಿಗಳು ಒಮ್ಮತದ ಒಪ್ಪಿಗೆ ನೀಡಿದ್ದು, ನೂತನ ಕೋಚ್​ ಗೌತಮ್​ ಗಂಭೀರ್​ ಕೂಡ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್‌ರನ್ನು ನಾಯಕನನ್ನಾಗಿ ನೇಮಿಸಲು ಗಂಭೀರ್‌ಗೂ ಮನಸಿಲ್ಲ ಎಂದು ಹೇಳಲಾಗುತ್ತಿದೆ.

VISTARANEWS.COM


on

Suryakumar Yadav
Koo

ಮುಂಬಯಿ: ರೋಹಿತ್‌ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ಟಿ20(T20I captain) ತಂಡಕ್ಕೆ ನೂತನ ನಾಯಕ ಆಯ್ಕೆಯಾಗಬೇಕಿದೆ. ಕಳೆದ ಒಂದು ವರ್ಷಗಳಿಂದ ರೋಹಿತ್​ ಬಳಿಕ ಹಾರ್ದಿಕ್‌ ಪಾಂಡ್ಯರನ್ನೇ(Hardik Pandya) ಭವಿಷ್ಯದ ನಾಯಕ ಎಂದು ಬಿಂಬಿಸಲಾಗಿತ್ತು. ಆದರೆ, ಇದೀಗ ಬಿಸಿಸಿಐ(BCCI) ಪಾಂಡ್ಯಗೆ ನಾಯಕತ್ವ ನೀಡಲು ಹಿಂದೇಟು ಹಾಕಿದ್ದು, ಸೂರ್ಯಕುಮಾರ್​ ಯಾದವ್​ಗೆ(Suryakumar Yadav) ನಾಯಕತ್ವ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.

ಹೌದು, ಪಾಂಡ್ಯ ಅವರಿಗೆ ನಾಯಕತ್ವ ನೀಡದಿರಲು ಪ್ರಮುಖ ಕಾರಣ ಅವರ ಫಿಟ್ನೆಸ್‌ ಸಮಸ್ಯೆ. ಪಾಂಡ್ಯ ತಮ್ಮ 8 ವರ್ಷಗಳ ಕ್ರಿಕೆಟ್​ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಪದೇಪದೆ ಗಾಯಕ್ಕೆ ತುತ್ತಾಗುವ ಕಾರಣ ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸೂರ್ಯಕುಮಾರ್‌ ಯಾದವ್‌ ಹೆಗಲಿಗೆ ನಾಯಕತ್ವ ನೀಡಲು ಬಿಸಿಸಿಐ ಅಧಿಕಾರಿಗಳು ಒಮ್ಮತದ ಒಪ್ಪಿಗೆ ನೀಡಿದ್ದು, ನೂತನ ಕೋಚ್​ ಗೌತಮ್​ ಗಂಭೀರ್​ ಕೂಡ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್‌ರನ್ನು ನಾಯಕನನ್ನಾಗಿ ನೇಮಿಸಲು ಗಂಭೀರ್‌ಗೂ ಮನಸಿಲ್ಲ ಎಂದು ಹೇಳಲಾಗುತ್ತಿದೆ.

ಸೂರ್ಯಕುಮಾರ್‌ ಯಾದವ್​ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಸರಣಿ ಗೆದ್ದಿದ್ದರು. ಸೂರ್ಯಕುಮಾರ್ ಯಾದವ್ ಕಾರ್ಯವೈಖರಿ ಬಗ್ಗೆಯೂ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಸಮಾಧಾನವಿದ್ದು, ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಮುಂದಿನ ಟಿ20 ತಂಡದ ನಾಯಕ ಯಾರೆಂಬುದು ಖಚಿತಗೊಳ್ಳಲಿದೆ.

ಇದನ್ನೂ ಓದಿ KL Rahul: ಮುಂದಿನ ವರ್ಷ ಆರ್​ಸಿಬಿ ಪರ ಆಡಲಿದ್ದಾರೆ ಕೆ.ಎಲ್​ ರಾಹುಲ್​; ಪೋಸ್ಟರ್ ವೈರಲ್

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್‌ ಶರ್ಮ ಅಲಭ್ಯರಾಗಲಿರುವ ಕಾರಣ, ಕೆ.ಎಲ್​ ರಾಹುಲ್ ಅವರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ. 027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ರಾಹುಲ್​ಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಗಂಭೀರ್ ಅವರು ಮೆಂಟರ್ ಆಗಿದ್ದ ಲಕ್ನೋ ತಂಡದಲ್ಲಿ ರಾಹುಲ್​ ಅವರು ನಾಯಕರಾಗಿದ್ದರು ಎನ್ನುವುದು ಗಮನಾರ್ಹ.

Continue Reading

ಕ್ರೀಡೆ

KL Rahul: ಮುಂದಿನ ವರ್ಷ ಆರ್​ಸಿಬಿ ಪರ ಆಡಲಿದ್ದಾರೆ ಕೆ.ಎಲ್​ ರಾಹುಲ್​; ಪೋಸ್ಟರ್ ವೈರಲ್

KL Rahul: ರಾಹುಲ್​ ಆರ್​ಸಿಬಿ ಸೇರಲಿದ್ದಾರೆ ಎಂಬ ಸುದ್ದಿ ಕೇಳಿದ್ದೇ ತಡ ಕನ್ನಡಿಗರು ಮತ್ತು ಆರ್​ಸಿಬಿ ಅಭಿಮಾನಿಗಳು ಆರ್​ಸಿಬಿ ಜೆರ್ಸಿಯಲ್ಲಿ ರಾಹುಲ್​ ಅವರ ಫೋಟೊ ಎಡಿಟ್​ ಮಾಡಿ ತವರಿಗೆ ಸ್ವಾಗತ ಎನ್ನುವ ಪೋಸ್ಟರ್​ ಶೇರ್​ ಮಾಡಲಾರಂಭಿಸಿದ್ದಾರೆ. ಈ ಪೋಸ್ಟರ್​ಗಳು ವೈರಲ್​ ಆಗುತ್ತಿವೆ.

VISTARANEWS.COM


on

KL Rahul
Koo

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡ(Rahul To Join RCB) ಸೇರುವುದು ಬಹುತೇಕ ಖಚಿತ ಎನ್ನುವ ಮಾಹಿತಿ ಹೊರಬಿದ್ದಿದೆ. ಹೌದು, ರಾಹುಲ್​ ಲಕ್ನೋ ತಂಡ ತೊರೆಯಲಿರುವ ಸುಳಿವನ್ನು ಲಕ್ನೋ ತಂಡದ ಸಹ ಆಟಗಾರ ಅಮೀತ್​ ಮಿಶ್ರಾ ಬಿಟ್ಟುಕೊಟ್ಟಿದ್ದಾರೆ.

ರಾಹುಲ್​ ಕೂಡ ಆರ್​ಸಿಬಿ ಪರ ಆಡುವ ಬಯಕೆಯನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದರು. ಇದೇ ವರ್ಷ ನಡೆದಿದ್ದ ಐಪಿಎಲ್​ ವೇಳೆ ಆರ್.ಅಶ್ವಿನ್ ಜತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ತನ್ನನ್ನು ಆರ್​ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ ಎಂದು ಹೇಳಿದ್ದರು. ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ಬೇಸರಗೊಂಡ ರಾಹುಲ್​ ಮುಂದಿನ ಆವೃತ್ತಿಯಲ್ಲಿ ಈ ತಂಡದ ಪರ ಆಡುವುದು ಅನುಮಾನ.

ರಾಹುಲ್​ ಆರ್​ಸಿಬಿ ಸೇರಲಿದ್ದಾರೆ ಎಂಬ ಸುದ್ದಿ ಕೇಳಿದ್ದೇ ತಡ ಕನ್ನಡಿಗರು ಮತ್ತು ಆರ್​ಸಿಬಿ ಅಭಿಮಾನಿಗಳು ಆರ್​ಸಿಬಿ ಜೆರ್ಸಿಯಲ್ಲಿ ರಾಹುಲ್​ ಅವರ ಫೋಟೊ ಎಡಿಟ್​ ಮಾಡಿ ತವರಿಗೆ ಸ್ವಾಗತ ಎನ್ನುವ ಪೋಸ್ಟರ್​ ಶೇರ್​ ಮಾಡಲಾರಂಭಿಸಿದ್ದಾರೆ. ಈ ಪೋಸ್ಟರ್​ಗಳು ವೈರಲ್​ ಆಗುತ್ತಿವೆ.

ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ 10 ವಿಕೆಟ್​ಗಳ ಹೀನಾಯ ಸೋಲು ಕಂಡ ಬೇಸರದಲ್ಲಿ ಸಿಟ್ಟಿಗೆದ್ದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮೈದಾನದಲ್ಲೇ ನಾಯಕ ಕೆ.ಎಲ್​ ರಾಹುಲ್(KL Rahul)​ ಜತೆ ಜಗಳವಾಡಿದ್ದರು. ಈ ಘಟನೆ ಬಳಿಕ ಅನೇಕ ಮಾಜಿ ಆಟಗಾರರು ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ರಾಹುಲ್​ ಕೂಡ ಬೇಸರಗೊಂಡಿದ್ದರು. ಇದೇ ಕಾರಣಕ್ಕೆ ರಾಹುಲ್​ ತಂಡ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ RCB: ಆರ್​ಸಿಬಿ ಕಪ್​ ಗೆಲ್ಲದಿರಲು ನೈಜ ಕಾರಣ ತಿಳಿಸಿದ ತಂಡದ ಮಾಜಿ ಆಟಗಾರ

ಮುಂದಿನ ವರ್ಷ ಮೆಗಾ ಹರಾಜು ಕೂಡ ನಡೆಯಲಿದೆ. (IPL 2025)​ 18ನೇ ಆವೃತ್ತಿಯಲ್ಲಿ ಬೆಂಗಳೂರು ತಂಡದಲ್ಲಿ ಕೂಡ ದೊಡ್ಡ ಬದಲಾವಣೆಯೊಂದು ಸಂಭವಿಸುವ ಮುನ್ಸೂಚನೆಯೊಂದು ಲಭಿಸಿದೆ. ಈ ಹಿಂದೆ ತಂಡದ ನಾಯಕನಾಗಿದ್ದ ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್​ ಅವರನ್ನು ಕೈ ಬಿಟ್ಟು ಮಾಜಿ ನಾಯಕ ವಿರಾಟ್​ ಕೊಹ್ಲಿ(Virat Kohli)ಗೆ ಮತ್ತೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ ಮೂರು ಸೀಸನ್​ನಲ್ಲಿ ಡುಪ್ಲೆಸಿಸ್ ಆರ್​ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್​ನಿಂದಲೇ ಹೊರಬಿದ್ದಿತ್ತು. ಇದೀಗ ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿ ಮತ್ತೆ ನಾಯಕನಾದರೂ ಅಚ್ಚರಿಯಿಲ್ಲ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಕೂಡ ಕೊಹ್ಲಿ ಇದಕ್ಕೆ ಒಪ್ಪಲಿದ್ದಾರಾ ಎನ್ನುವುದು ಕುತೂಹಲ. ಈ ಐಪಿಎಲ್​ನಲ್ಲಿ ಕೊಹ್ಲಿ ಪ್ರಚಂಡ ಬ್ಯಾಟಿಂಗ್​ ಮೂಲಕ 700ಕ್ಕೂ ಅಧಿಕ ರನ್​ ಕಲೆ ಹಾಕಿ ಟೂರ್ನಿಯ ಅತ್ಯಧಿಕ ಸ್ಕೋರ್​ ಎನಿಸಿಕೊಂಡಿದ್ದರು.

Continue Reading

ಕ್ರೀಡೆ

Kylian Mbappe: ಬಾಲ್ಯದ ಕನಸಿನ ರಿಯಲ್‌ ಮ್ಯಾಡ್ರಿಡ್‌ ತಂಡ ಸೇರಿದ ಕೀಲಿಯನ್‌ ಎಂಬಾಪೆ

Kylian Mbappe: ಕಳೆದ ವರ್ಷ ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್(Saudi Arabian giants Al-Hilal) ತನ್ನ ಕ್ಲಬ್​ ಪರ ಆಡಲು ಎಂಬಾಪೆಗೆ ದಾಖಲೆಯ 2,716 ಕೋ.ರೂ. ಮೊತ್ತ ನೀಡಲು ಮುಂದಾಗಿತ್ತು. ಆದರೆ, ಎಂಬಾಪೆ ಈ ಆಫರ್​ ತಿರಸ್ಕರಿಸಿದ್ದರು. 

VISTARANEWS.COM


on

Kylian Mbappe
Koo

ಮ್ಯಾಡ್ರಿಡ್‌: ಫ್ರಾನ್ಸ್‌ ತಂಡದ ಸ್ಟಾರ್ ಫುಟ್ಬಾಲ್​ ಆಟಗಾರ ಕೀಲಿಯನ್‌ ಎಂಬಾಪೆ(Kylian Mbappe) ತಮ್ಮ ಕನಸಿನ ರಿಯಲ್‌ ಮ್ಯಾಡ್ರಿಡ್‌(Real Madrid) ತಂಡವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮುಂದಿನ 5 ವರ್ಷಗಳ ಕಾಲ ಅವರು ಈ ಕ್ಲಬ್​ ಪರ ಆಡಲಿದ್ದಾರೆ. ಎಂಬಾಪೆಯನ್ನು ತಂಡಕ್ಕೆ ಸ್ವಾಗತಿಸಲು ದಾಖಲೆ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ಕ್ಲಬ್‌ ಅಧ್ಯಕ್ಷ ಫ್ಲೊರೆಂಟಿನೊ ಪೆರೆಝ್‌ 9ನೇ ನಂಬರ್ ಜೆರ್ಸಿ ನೀಡಿ ತಂಡಕ್ಕೆ ಸ್ವಾಗತಿಸಿದರು. ಎಂಬಾಪೆ ಜತೆ ತಂದೆ-ತಾಯಿ ಕೂಡ ಭಾಗಿಯಾಗಿದ್ದರು. ತಂಡ ಸೇರಿದ ಬಳಿಕ ಮಾತನಾಡಿದ ಎಂಬಾಪೆ ‘ನನ್ನ ಬಾಲ್ಯಕಾಲದ ಕನಸು ಇಂದು ನನಸಾಗಿದೆ. ನನ್ನ ಕುಟುಂಬಕ್ಕೆ ಸಂತಸವಾಗಿದೆ. ನನ್ನ ತಾಯಿ ಭಾವನೆಗಳನ್ನು ತಡೆಯಲಾಗದೇ ಅತ್ತಿದ್ದಾರೆ’ ಎಂದರು.

ಕಳೆದ ವರ್ಷ ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್(Saudi Arabian giants Al-Hilal) ತನ್ನ ಕ್ಲಬ್​ ಪರ ಆಡಲು ಎಂಬಾಪೆಗೆ ದಾಖಲೆಯ 2,716 ಕೋ.ರೂ. ಮೊತ್ತ ನೀಡಲು ಮುಂದಾಗಿತ್ತು. ಆದರೆ, ಎಂಬಾಪೆ ಈ ಆಫರ್​ ತಿರಸ್ಕರಿಸಿದ್ದರು. 

ಎಂಬಾಪೆ ಮೈದಾನದಲ್ಲಿ ಇದ್ದರೆ ದಾಖಲೆಗಳು ನಿರ್ಮಾಣವಾಗುತ್ತವೆ. ಪಂದ್ಯಕ್ಕೊಂದು ಹೊಸ ತಿರುವು ಸಿಗುತ್ತದೆ. ಆತನ ಪಾದಗಳಲ್ಲಿ ಅಡಗಿರುವ ಮಾಂತ್ರಿಕ ಶಕ್ತಿ, ಮುಂದೊಂದು ದಿನ ಆತನನ್ನು ಫುಟ್ಬಾಲ್‌ ದಿಗ್ಗಜರ ಸಾಲಿಗೆ ಸೇರಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.

ಇದನ್ನೂ ಓದಿ Austria vs France: ಗಂಭೀರ ಗಾಯಗೊಂಡ ಎಂಬಾಪೆ; ಮುಂದಿನ ಪಂದ್ಯಕ್ಕೆ ಅನುಮಾನ

ಯುಇಎಫ್‌ಎ ಚಾಂಪಿಯನ್‌ ಲೀಗ್‌ನಲ್ಲಿ ಗೋಲು ದಾಖಲಿಸಿದ ಅತ್ಯಂತ ಕಿರಿಯ ಫ್ರೆಂಚ್ ಆಟಗಾರ, ಡಿವಿಶನ್ 1ನಲ್ಲಿ 10 ಗೋಲು ದಾಖಲಿಸಿದ ಅತೀ ಕಿರಿಯ ಆಟಗಾರ, 2016–17ರ ಋತುವಿನಲ್ಲಿ 26 ಗೋಲು ಬಾರಿಸಿ ದಾಖಲೆ, ಚಾಂಪಿಯನ್‌ ಲೀಗ್‌ನಲ್ಲಿ 10 ಗೋಲು ಬಾರಿಸಿದ ಅತೀ ಕಿರಿಯ ಆಟಗಾರ, ಲೀಗ್‌ ಪ್ರಶಸ್ತಿ ಗೆದ್ದ ಅತೀ ಕಿರಿಯ ಆಟಗಾರ, ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಅತೀ ಕಿರಿಯ ಫ್ರೆಂಚ್ ಆಟಗಾರ..‌ ಹೀಗೆ ದಾಖಲೆಗಳನ್ನು ಹೊಂದಿರುವ ಎಂಬಾಪೆ ಇದೀಗ ಪ್ರತಿಷ್ಠಿತ ರಿಯಲ್‌ ಮ್ಯಾಡ್ರಿಡ್‌ ಕ್ಲಬ್​ ಪರ ಕೂಡ ಹಲವು ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.

4ನೇ ಬಾರಿಗೆ ಯುರೋ ಕಪ್ ಗೆದ್ದ ಸ್ಪೇನ್​


ಬರ್ಲಿನ್: ಕಳೆದ ಭಾನುವಾರ ನಡೆದಿದ್ದ ಪ್ರತಿಷ್ಠಿತ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ(Euro 2024 final) ಸ್ಪೇನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ತಡರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್(England vs Spain) ತಂಡವನ್ನು 2-1 ಗೋಲುಗಳಿಂದ ಮಣಿಸಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

1936ರ ನಿರ್ಮಿಸಲ್ಪಟ್ಟ ಒಲಿಂಪಿಯಾ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡಗಳ ಪ್ರಶಸ್ತಿ ಕಾದಾಟದಲ್ಲಿ ಸ್ಪೇನ್​ ಕೈ ಮೇಲಾಗಿದೆ. 1966ರ ಬಳಿಕ ಪ್ರಮುಖ ಟ್ರೋಫಿ ಜಯಿಸಲು ವಿಫಲವಾಗಿರುವ ಇಂಗ್ಲೆಂಡ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಕಳೆದ ಬಾರಿಯೂ ಫೈನಲ್​ನಲ್ಲಿ ಮುಗ್ಗರಿಸಿ ರನ್ನರ್​ ಅಪ್​ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.

Continue Reading
Advertisement
Niveditha Gowda new reels with brother
ಸ್ಯಾಂಡಲ್ ವುಡ್1 min ago

Niveditha Gowda: ನಾನೇನು ಬಾತ್‌ರೂಮ್‌ ಸಿಂಗರ್‌ ಅಲ್ಲ! ಚಂದನ್‌ ಶೆಟ್ಟಿಗೆ ಟಾಂಗ್‌ ಕೊಟ್ರಾ ನಿವೇದಿತಾ ಗೌಡ?

Gold Rate Today
ಚಿನ್ನದ ದರ2 mins ago

Gold Rate Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ; ಇಂದಿನ ದರ ಇಷ್ಟಿದೆ

IND vs SL
ಕ್ರೀಡೆ16 mins ago

IND vs SL: ಲಂಕಾ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ

gt world mall 2
ಪ್ರಮುಖ ಸುದ್ದಿ24 mins ago

GT World Mall: ಅನ್ನದಾತನಿಗೆ ಅವಮಾನ ಮಾಡಿದ ಜಿಟಿ ಮಾಲ್‌ ಮುಂದೆ ಪಂಚೆ ಉಟ್ಟು ಪ್ರತಿಭಟನೆ, ಕ್ಷಮೆ ಕೇಳಿದ ಮಾಲೀಕ

Made In India
ದೇಶ29 mins ago

Made In India: ಜಾಗತಿಕವಾಗಿ ಪ್ರಭಾವ ಬೀರಿದ ʼಮೇಡ್‌ ಇನ್‌ ಇಂಡಿಯಾʼ ಉತ್ಪನ್ನಗಳು; ಪ್ರಧಾನಿ ಮೋದಿ ಮೆಚ್ಚುಗೆ

Mahanati Show Darshan wished Priyanka the contestant
ಕಿರುತೆರೆ56 mins ago

Mahanati Show: ಈ` ಮಹಾನಟಿ’ ಸ್ಪರ್ಧಿಗೆ ಶುಭ ಹಾರೈಸಿದ್ರಂತೆ ದರ್ಶನ್‌; ಅವರ ತಂದೆ ಕೂಡ ದಚ್ಚುಗೆ ಕ್ಲೋಸ್‌ ಫ್ರೆಂಡ್‌!

Suryakumar Yadav
ಕ್ರೀಡೆ1 hour ago

Suryakumar Yadav: ಹಾರ್ದಿಕ್​ ಕೈಬಿಟ್ಟು ಸೂರ್ಯಕುಮಾರ್​ಗೆ ಟಿ20 ನಾಯಕತ್ವ ನೀಡಲು ಬಿಸಿಸಿಐ ಮುಂದಾಗಿದ್ದೇಕೆ?

Viral Video
Latest1 hour ago

Viral Video: ಚಾಕೋಲೇಟ್ ತಿನ್ನುವ ಆಸೆಯಾಗಿ ಅಂಗಡಿಗೆ ಹೋಗಿದ್ದ ಬಾಲಕ ಶವವಾಗಿ ಮನೆಗೆ ಬಂದ; ಆಗಿದ್ದೇನು? ವಿಡಿಯೊ ನೋಡಿ

Anant Radhika Wedding
ವಾಣಿಜ್ಯ1 hour ago

Anant Radhika Wedding: ಮನಮುಟ್ಟುವಂತೆ ಕನ್ಯಾದಾನದ ಮಹತ್ವ ತಿಳಿಸಿದ ನೀತಾ ಅಂಬಾನಿ; ಭಾವುಕರಾದ ಅತಿಥಿಗಳು; ವಿಡಿಯೊ ನೋಡಿ

Chandan Shetty vidyarthi vidyarthiniyare kannada movie dubai premere
ಸ್ಯಾಂಡಲ್ ವುಡ್2 hours ago

Chandan Shetty: ಚಂದನ್‌ ಶೆಟ್ಟಿ ಅಭಿನಯದ ಸಿನಿಮಾ ದುಬೈನಲ್ಲಿ ಪ್ರೀಮಿಯರ್‌ ಶೋ; ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ24 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌