RCB 2024: ಆರ್​ಸಿಬಿಗೆ ರವಿಶಾಸ್ತ್ರಿ ನೂತನ ಕೋಚ್; ವರದಿ - Vistara News

ಕ್ರಿಕೆಟ್

RCB 2024: ಆರ್​ಸಿಬಿಗೆ ರವಿಶಾಸ್ತ್ರಿ ನೂತನ ಕೋಚ್; ವರದಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB 2024) ತಂಡಕ್ಕೆ ರವಿಶಾಸ್ತ್ರಿ(Ravi Shastri) ಅವರು ಮುಖ್ಯ ಕೋಚ್​ ಆಗಿ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Shastri with the IPL trophy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮುಂಬರುವ ಐಪಿಎಲ್​ ಆವೃತ್ತಿಯಲ್ಲಿ(IPL 2024) ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB 2024) ತಂಡಕ್ಕೆ ಟೀಮ್​ ಇಂಡಿಯಾದ ಮಾಜಿ ಕೋಚ್​ ಆಗಿದ್ದ ರವಿಶಾಸ್ತ್ರಿ(Ravi Shastri) ಅವರು ಮುಖ್ಯ ಕೋಚ್​ ಆಗಿ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.

2 ದಿನಗಳ ಹಿಂದೆ ಆರ್​ಸಿಬಿ(Royal Challengers Bangalore) ಮುಂದಿನ ಆವೃತ್ತಿಗೆ ಮೇಜರ್​ ಸರ್ಜರಿ ನಡೆಸಲು ತೀರ್ಮಾನಿಸಿದ್ದು, ಕೋಚ್​ ಆಗಿರುವ ಸಂಜಯ್ ಬಂಗಾರ್(Sanjay Bangar) ಮತ್ತು​ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್(Mike Hesson) ಅವರಿಗೆ ಗೇಟ್​ ಪಾಸ್​ ನೀಡಲಿದೆ ಎಂದು ವರದಿಯಾಗಿತ್ತು.

2022 ರಿಂದ ಆರ್​ಸಿಬಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜಯ್ ಬಂಗಾರ್ ಅವರ ಒಪ್ಪಂದ ಮುಗಿದಿದೆ. ಅವರ ಕಾರ್ಯಾವಧಿಯಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಅವರೊಂದಿಗಿನ ಒಪ್ಪಂದವನ್ನು ಫ್ರಾಂಚೈಸಿ ನವೀಕರಿಸಿಲ್ಲ ಎಂದು ತಿಳಿದುಬಂದಿದೆ. ಇದರ ಜತೆಗೆ ಕಳೆದ ನಾಲ್ಕು ವರ್ಷಗಳಿಂದ ತಂಡದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೈಕ್ ಹೆಸ್ಸನ್ ಅವರ ಕಾರ್ಯಾವಧಿ ಈ ವರ್ಷಕ್ಕೆ ಕೊನೆಗೊಳ್ಳಲಿದೆ. ಅವರ ಒಪ್ಪಂದವನ್ನು ನವೀಕರಿಸುವುದು ಅನುಮಾನ ಎನ್ನಲಾಗಿತ್ತು.

ಇದನ್ನೂ ಓದಿ IPL 2023: ಕನ್ನಡಿಗ ರಾಹುಲ್​ vs ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಫ್ರಾಂಚೈಸಿಯ ಮೂಲಗಳ ಪ್ರಕಾರ​ ಭಾರತ ತಂಡದ ಮಾಜಿ ನಾಯಕ ಮತ್ತು ಕೋಚ್​ ಆಗಿದ್ದ ರವಿಶಾಸ್ತ್ರಿ ಅವರು ಆರ್​ಸಿಬಿ ಕೋಚ್​ ಆಗುವುದು ಖಚಿತ ಎಂದು ತಿಳಿದುಬಂದಿದೆ. ಆದರೆ ಫ್ರಾಂಚೈಸಿ ಮತ್ತು ರವಿಶಾಸ್ತ್ರಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ವಿರಾಟ್​ ಕೊಹ್ಲಿ ಮತ್ತು ರವಿಶಾಸ್ತ್ರಿ ಅವರ ಒಡನಾಟ ಹಿಂದಿನಿಂದಲೂ ಉತ್ತಮವಾಗಿತ್ತು. ಕೋಚ್​ ಹುದ್ದೆಯಿಂದ ಶಾಸ್ತ್ರಿ ಕೆಳಗಿಳಿಯುತ್ತಿದ್ದಂತೆ ಕೊಹ್ಲಿ ಕೂಡ ತಮ್ಮ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದರು. ಇದೀಗ ಐಪಿಎಲ್​ನಲ್ಲಿ ಈ ಜೋಡಿ ಮತ್ತೆ ಒಂದಾಗಲಿದ್ದಾರೆ ಎನ್ನಲಾಗಿದೆ. ಶಾಸ್ತ್ರಿ ಕೋಚಿಂಗ್​ ಅವಧಿಯಲ್ಲೇ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡು ಟೆಸ್ಟ್​ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.

ಐಪಿಎಲ್​ನ ನತದೃಷ್ಟ ತಂಡಗಳಲ್ಲಿ ಒಂದಾಗಿರುವ ಆರ್​ಸಿಬಿ ಪ್ರತಿ ಬಾರಿಯೂ ಈ ಸಲ ಕಪ್​ ನಮ್ದೇ ಎಂದು ಹೇಳುತ್ತಲೇ ಬಾರುತ್ತಿದೆ. ಆದರೆ ಇದುವರೆಗೂ ಕಪ್​ ಕನಸು ಮಾತ್ರ ನನಸಾಗಿಯೇ ಇಲ್ಲ. ಸ್ವತಃ ಕನ್ನಡಿಗರು ಕೂಡ ಈ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಹೆಸರಿಗೆ ಮಾತ್ರ ಬೆಂಗಳೂರು ತಂಡ, ಒಬ್ಬ ಕನ್ನಡಿಗನಿಗೂ ಅವಕಾಶ ನೀಡುವುದಿಲ್ಲ. ಆಟಗಾರರ ಆಯ್ಕೆ ವಿಚಾರದಲ್ಲಿಯೂ ಕೋಚ್​ ಮತ್ತು ಸಿಬ್ಬಂದಿಗಳು ಎಡವುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಇದೇ ಕಾರಣಕ್ಕೆ ಈ ಬಾರಿ ಫ್ರಾಂಚೈಸಿ ತಂಡದಲ್ಲಿ ಹಲವು ಬದಲಾವಣೆ ಮಾಡಲು ಮುಂದಾಗಿದೆ.

ಆರ್​ಸಿಬಿ ಕೊನೆಯ ಬಾರಿಗೆ 2016ರಲ್ಲಿ ಫೈನಲ್​ ಪ್ರವೇಶ ಪಡೆದಿತ್ತು. ಇದಾಗ ಬಳಿಕ ತಂಡ ಒಮ್ಮೆಯೂ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿಲ್ಲ. 2020, 2021 ಹಾಗೂ 2022 ರಲ್ಲಿ ಪ್ಲೇಆಫ್ ಪ್ರವೇಶ ಪಡೆದಿತ್ತು. ಈ ಬಾರಿ ಮೊದಲ ಸುತ್ತಿನಲ್ಲೇ ಅದರಲ್ಲೂ ತವರಿನಲ್ಲೇ ಸೋತು ಹೊರಬಿದ್ದಿತ್ತು. ಇದಕ್ಕೂ ಮುನ್ನ 2009 ಮತ್ತು 2011ರಲ್ಲಿ ಫೈನಲ್​ ಪ್ರವೇಶಿಸಿತ್ತು. ಆದರೆ ಅಲ್ಲಿಯೂ ಸೋಲು ಕಂಡಿತ್ತು. ಒಟ್ಟಾರೆ ಆರ್​ಸಿಬಿ ಮೂರು ಬಾರಿ ಫೈನಲ್​ ಪ್ರವೇಶಿಸಿ ರನ್ನರ್​ಅಪ್​ ಸ್ಥಾನ ಪಡೆದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

T20 World Cup: ಟಿ20 ವಿಶ್ವಕಪ್​ ತಂಡ ಸೇರಲು ರಾಹುಲ್​ಗೆ ಇನ್ನೂ ಇದೆ ಅವಕಾಶ

T20 World Cup: ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

VISTARANEWS.COM


on

T20 World Cup
Koo

ದುಬೈ: ಟಿ20 ವಿಶ್ವಕಪ್​ಗೆ(T20 World Cup) ಈಗಾಗಲೇ ಭಾರತ 15 ಸದಸ್ಯರ ಮತ್ತು ಮೀಸಲು ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್(KL Rahul)​ ಅವರನ್ನು ಈ ತಂಡದಿಂದ ಕೈಬಿಡಲಾಗಿದೆ. ಆದರೆ, ರಾಹುಲ್​ಗೆ ಇನ್ನೂ ಕೂಡ ತಂಡ ಸೇರುವ ಅವಕಾಶವೊಂದಿದೆ. ಇದು ಹೇಗೆ ಎನ್ನುವ ಮಾಹಿತಿ ಇಂತಿದೆ.

ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ. ಅವಕಾಶ ಸಿಕ್ಕ ಆಟಗಾರರ ಪೈಕಿ ಯಾರಾದರು ಗಾಯಗೊಂಡು ಅಲಭ್ಯರಾದರೆ ಆಗ ರಾಹುಲ್​ಗೆ ಅವಕಾಶ ಸಿಗಬಹುದು. ಇನ್ನೊಂದು ಸಾಧ್ಯತೆ ಎಂದರೆ ತಂಡ ಬದಲಾವಣೆಯ ಅಂತಿಮ ದಿನವಾದ 25ರಂದು ಅಚ್ಚರಿ ಎಂಬಂತೆ ರಾಹುಲ್​ ಆಯ್ಕೆಯಾಗುವ ಸಾಧ್ಯತೆಯೂ ಇದೆ.

ಕೆಲ ತಂಡಗಳು ಗೇಮ್ ಸ್ಟ್ರಟಜಿ ಮಾಡಿಕೊಂಡು ಕೆಲ ಸ್ಟಾರ್​ ಆಟಗಾರರನ್ನು ಮೊದಲ ಪಟ್ಟಿಯಿಂದ ಕೈಬಿಟ್ಟು ಆ ಬಳಿಕ ಅಚ್ಚರಿ ಎಂಬಂತೆ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ಇದರ ಹಿಂದಿರುವ ಕಾರಣವೆಂದರೆ ಎದುರಾಳಿ ತಂಡಗಳ ಪೂರ್ವ ಯೋಜನೆಯನ್ನು ಬುಡಮೇಲು ಮಾಡುವುದು. ಕಳೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಅನುಭವಿ ಆಟಗಾರ ಮಾರ್ನಸ್​ ಲನುಶೇನ್​ ಅವರನ್ನು ಆಯ್ಕೆ ಮಾಡಿರಲಿಲ್ಲ. ಇನ್ನೇನು ತಂಡ ಬದಲಾವಣೆಗೆ ಅಂತಿಮ ದಿನ ಬಾಕಿ ಇರುವಾಗ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಹೀಗಾಗಿ ಭಾರತ ಕೂಡ ರಾಹುಲ್​ ಅವರನ್ನು ಈ ರೀತಿ ಆಯ್ಕೆ ಮಾಡುವ ಸಾಧ್ಯತೆಯೂ ಕಂಡು ಬಂದಿದೆ.

ಇದನ್ನೂ ಓದಿ T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

Continue Reading

ಕ್ರೀಡೆ

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

MS Dhoni: ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್​ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಆದರೆ, ಪಂಬಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.

VISTARANEWS.COM


on

MS Dhoni
Koo

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮಾಜಿ ನಾಯಕ​ ಮಹೇಂದ್ರ ಸಿಂಗ್ ಧೋನಿ(MS Dhoni) ಬುಧವಾರ ನಡೆದ ಪಂಜಾಬ್​ ಲಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ತೋರಿದ ವರ್ತನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದು ಮಾಡುತ್ತಿದೆ. ಹಲವು ನೆಟ್ಟಿಗರು ಧೋನಿ ಇಷ್ಟೊಂದು ಸ್ವಾರ್ಥಿಯಾಗಬಾರದೆಂದು ಟೀಕಿಸಿದ್ದಾರೆ.

ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್​ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಧೋನಿಯ ಈ ನಡೆಯ ಬಗ್ಗೆ ಅನೇಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಆದರೆ, ಪಂಬಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.

ಚೆನ್ನೈ ಬ್ಯಾಟಿಂಗ್​ ಇನಿಂಗ್ಸ್​ನ ಅಂತಿಮ ಓವರ್​ನಲ್ಲಿ ಅರ್ಷದೀಪ್​ ಎಸೆದ ಈ ಓವರ್​ನ ಮೂರನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಚೆಂಡು ಬೌಂಡರಿ ಲೈನ್​ ಬಳಿ ಹೋದರೂ ಕೂಡ ಧೋನಿ ರನ್​ ಓಡದೆ ಸ್ವಾರ್ಥ ತೋರಿದರು. ನಾನ್​ಸ್ಟ್ರೈಕ್​ನಲ್ಲಿದ್ದ ಡೇರಿಯಲ್​ ಮಿಚೆಲ್​ ಅವರು ರನ್​ಗಾಗಿ ಓಡಿ ಕ್ರೀಸ್​ ಬಳಿ ಬಂದರು. ಈ ವೇಳೆ ಧೋನಿ ಅವೇಶದಲ್ಲಿಯೇ ಮಿಚೆಲ್​ಗೆ ಹಿಂದೆ ಹೋಗುವಂತೆ ತಿಳಿಸಿದರು. ಸ್ಟ್ರೈಕ್​ ತನಕ ಓಡಿದ್ದ ಮಿಚೆಲ್​ ಮತ್ತೆ ನಾನ್​ಸ್ಟ್ರೈಕರ್​ ಬಳಿಗೆ ಓಡಿ ಬಂದರು. ಮುಂದಿನ ಎಸೆತವನ್ನು ಧೋನಿ ಬೀಟ್​ ಮಾಡಿದರು. 5ನೇ ಎಸೆತದಲ್ಲಿ ಸಿಕ್ಸರ್​ ಬಾರಿಸಿ ಅಂತಿಮ ಎಸೆತದಲ್ಲಿ ರನೌಟ್​ ಆದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಬ್ಯಾಟಿಂಗ್​ಗಾಗಿ ಆಸೆ ತೋರಿದ ಧೋನಿಯ ಈ ಸ್ವಾರ್ಥವನ್ನು ಅನೇಕ ನೆಟ್ಟಿಗರು ಟೀಕಿಸಿದ್ದಾರೆ. ಇದು ಮತ್ತೊಬ್ಬ ಆಟಗಾರನಿಗೆ ಮಾಡುವ ಅವಮಾನ ಎಂದು ಕಮೆಂಟ್​ ಮಾಡಿದ್ದಾರೆ. ಈ ಘಟನೆಯ ವಿಡಿಯೊ ಎಲ್ಲಡೆ ವೈರಲ್(viral video)​ ಆಗಿದೆ. ಧೋನಿ ಸ್ಟ್ರೈಕ್​ ಉಳಿಸಿಕಿಕೊಂಡರೂ ಕೂಡ ಅವರಿಂದ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. 11  ಎಸೆತಗಳಿಂದ 14 ರನ್ ಮಾತ್ರ ಗಳಿಸಿದರು.

ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವು ಸಾಧಿಸಿತು.

Continue Reading

ಕ್ರೀಡೆ

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

PBKS vs CSK: ಚೆನ್ನೈಗೆ ತವರಿನಲ್ಲೇ ಅತ್ಯಧಿಕ ಸೋಲುಣಿಸಿದ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರವಾಗಿದೆ. ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಮುಂಬೈ ಇದುವರೆಗೆ 5 ಪಂದ್ಯಗಳನ್ನು ಜಯಿಸಿದೆ. ಪಂಜಾಬ್​ 4 ಬಾರಿ ಸೋಲುಣಿಸಿ ಕೆಕೆಆರ್​(3 ಬಾರಿ) ತಂಡದ ದಾಖಲೆಯನ್ನು ಹಿಂದಿಕ್ಕಿದೆ.

VISTARANEWS.COM


on

PBKS vs CSK
Koo

ಚೆನ್ನೈ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​(PBKS vs CSK) ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಪಂಜಾಬ್​ ಕಿಂಗ್ಸ್​ ದಾಖಲೆಯೊಂದನ್ನು ನಿರ್ಮಿಸಿದೆ. ಚೆನ್ನೈಗೆ ತವರಿನಲ್ಲಿಯೇ ಅತ್ಯಧಿಕ ಸೋಲುಣಿಸಿದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ವೇಳೆ ಕೆಕೆಆರ್​(3 ಬಾರಿ) ತಂಡದ ದಾಖಲೆಯನ್ನು ಹಿಂದಿಕ್ಕಿದೆ.

ಚೆನ್ನೈಗೆ ತವರಿನಲ್ಲೇ ಅತ್ಯಧಿಕ ಸೋಲುಣಿಸಿದ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರವಾಗಿದೆ. ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಮುಂಬೈ ಇದುವರೆಗೆ 5 ಪಂದ್ಯಗಳನ್ನು ಜಯಿಸಿದೆ. ಪಂಜಾಬ್​ 4 ಬಾರಿ ಸೋಲುಣಿಸಿದೆ. ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು. ಇದು ಈ ಆವೃತ್ತಿಯಲ್ಲಿ ಚೆನ್ನೈಗೆ ತವರಿನಲ್ಲಿ ಎದುರಾದ 2ನೇ ಸೋಲಾಗಿದೆ. ಇದಕ್ಕೂ ಮುನ್ನ ಲಕ್ನೋ ವಿರುದ್ಧ ಸೋಲು ಕಂಡಿತ್ತು.

ಚೇಸಿಂಗ್​ ವೇಳೆ ಕಳೆದ ಪಂದ್ಯದ ಶತಕ ವೀರ ಜಾನಿ ಬೇರ್​ಸ್ಟೋ 46 ರನ್​ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್​ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್​ ಬಾರಿಸುತ್ತಲೇ ಮುನ್ನುಗಿದರು. ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್​ ಹಿಟ್ಟರ್​ ರೀಲಿ ರೂಸೊ ಉತ್ತಮ ಸಾಥ್​ ನೀಡಿದರು. ಬೇರ್​ಸ್ಟೋ ವಿಕೆಟ್​ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್​) ರನ್​ ಬಾರಿಸಿದರು. ಅಂತಿಮವಾಗಿ ಶಶಾಂಕ್​ ಸಿಂಗ್​(25) ಮತ್ತು ಹಂಗಾಮಿ ನಾಯಕ ಸ್ಯಾಮ್​ ಕರನ್​(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್​ಗಳ ಗಡಿ ದಾಡಿದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಉತ್ತಮ ಆರಂಭವೇನೊ ಪಡೆಯಿತು. ನಾಯಕ ಋತುರಾಜ್​ ಗಾಯಕ್ವಾಡ್​ ಮತ್ತು ಅನುಭವಿ ಹಾಗೂ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಸೇರಿಕೊಂಡು ಮೊದಲ ವಿಕೆಟ್​ಗೆ 64 ರನ್​ ಒಟ್ಟುಗೂಡಿಸಿದರು. ರಹಾನೆ 29 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ರಹಾನೆ ವಿಕೆಟ್​ ಪತನದ ಬಳಿಕ ದಿಢೀರ್​ ಕುಸಿತ ಕಂಡಿತು. ಸತತವಾಗಿ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಕೂಡ ಮತ್ತೊಂದು ತುದಿಯಲ್ಲಿ ಕ್ರೀಸ್​ ಕಚ್ಚಿ ನಿಂತ ಗಾಯಕ್ವಾಡ್​ ತಮ್ಮ ಶಕ್ತಿ ಮೀರಿದ ಬ್ಯಾಟಿಂಗ್​ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮುಂದುವರಿಸಿದರು. ಒಂದು ಹಂತದಲ್ಲಿ ಸಮೀರ್ ರಿಜ್ವಿ ಅವರಿಂದ ಸಣ್ಣ ಮಟ್ಟದ ಜತೆಯಾಟದ ಬೆಂಬಲ ಸಿಕ್ಕರೂ ಕೂಡ ಇದು ಹೆಚ್ಚು ಹೊತ್ತು ಸಾಗಲಿಲ್ಲ. 21 ರನ್​ ಗಳಿಸಿದ್ದ ವೇಳೆ ರಿಜ್ವಿ ಕೂಡ ಔಟಾದರು. ಗಾಯಕ್ವಾಡ್​ 48 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್​ ಬಾರಿಸಿ 62 ರನ್​ ಗಳಿಸಿದರು.

Continue Reading

ಕ್ರೀಡೆ

IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

IPL 2024 Points Table: ಇಂದು ನಡೆಯುವ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ರಾಯಲ್ಸ್​ ಮುಖಾಮುಖಿಯಾಗಲಿವೆ. ರಾಜಸ್ಥಾನ್ ಗೆದ್ದರೆ ಮೊದಲ ತಂಡವಾಗಿ ಪ್ಲೇ ಆಫ್​ಗೆ ಪ್ರವೇಶಿಸಲಿದೆ. ಸನ್​ರೈಸರ್ಸ್​ ಗೆದ್ದರೆ ಚೆನ್ನೈ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ.

VISTARANEWS.COM


on

IPL 2024 Points Table
Koo

ಚೆನ್ನೈ: ಬುಧವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಪಂಜಾಬ್​ ಕಿಂಗ್ಸ್​ ವಿರುದ್ಧ 7 ವಿಕೆಟ್​ ಅಂತರದ ಹೀನಾಯ ಸೋಲು ಕಂಡಿತು. ಗೆಲುವು ಸಾಧಿಸಿದ ಪಂಜಾಬ್​ ಅಂಕಪಟ್ಟಿಯಲ್ಲಿ(IPL 2024 Points Table) ಗುಜರಾತ್​ ಟೈಟಾನ್ಸ್​ ತಂಡವನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೇರಿತು. ಜತೆಗೆ ಪ್ಲೇ ಆಫ್​ ಆಸೆಯನ್ನು ಇನ್ನೂ ಜೀವಂತವಿರಿಸಿತು. ಚೆನ್ನೈ ಸೋಲು ಕಂಡರೂ ಕೂಡ ಈ ಹಿಂದಿನಂತೆ 4ನೇ ಸ್ಥಾನದಲ್ಲೇ ಮುಂದುವರಿಯಿತು.

ಇಂದು ನಡೆಯುವ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ರಾಯಲ್ಸ್​ ಮುಖಾಮುಖಿಯಾಗಲಿವೆ. ರಾಜಸ್ಥಾನ್ ಗೆದ್ದರೆ ಮೊದಲ ತಂಡವಾಗಿ ಪ್ಲೇ ಆಫ್​ಗೆ ಪ್ರವೇಶಿಸಲಿದೆ. ಸನ್​ರೈಸರ್ಸ್​ ಗೆದ್ದರೆ ಚೆನ್ನೈ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​96312 (+1.096)
ಲಕ್ನೋ​​106412 (+0.094)
ಚೆನ್ನೈ​105510 (+0.627)
ಹೈದರಾಬಾದ್​95410 (+0.075)
ಡೆಲ್ಲಿ115610 (-0.442)
ಪಂಜಾಬ್​10488 (-0.062)
ಗುಜರಾತ್​10468 (-1.113)
ಮುಂಬೈ10376 (-0.272)
ಆರ್​ಸಿಬಿ10376 (-0.415)

ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು.

ಇದನ್ನೂ ಓದಿ IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

​ಚೇಸಿಂಗ್​ ವೇಳೆ ಕಳೆದ ಪಂದ್ಯದ ಶತಕ ವೀರ ಜಾನಿ ಬೇರ್​ಸ್ಟೋ 46 ರನ್​ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್​ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್​ ಬಾರಿಸುತ್ತಲೇ ಮುನ್ನುಗಿದರು. ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್​ ಹಿಟ್ಟರ್​ ರೀಲಿ ರೂಸೊ ಉತ್ತಮ ಸಾಥ್​ ನೀಡಿದರು. ಬೇರ್​ಸ್ಟೋ ವಿಕೆಟ್​ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್​) ರನ್​ ಬಾರಿಸಿದರು. ಅಂತಿಮವಾಗಿ ಶಶಾಂಕ್​ ಸಿಂಗ್​(25) ಮತ್ತು ಹಂಗಾಮಿ ನಾಯಕ ಸ್ಯಾಮ್​ ಕರನ್​(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್​ಗಳ ಗಡಿ ದಾಡಿದರು.

Continue Reading
Advertisement
Yakshagana Artist No more
ದಕ್ಷಿಣ ಕನ್ನಡ15 mins ago

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

prajwal revanna case look out notice
ಪ್ರಮುಖ ಸುದ್ದಿ23 mins ago

Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

Star Suvarna Kannada Janaki Samsara
ಕಿರುತೆರೆ34 mins ago

Star Suvarna Kannada: ಪ್ರೀತಿಯ ಸ್ವಾದವನ್ನು ಹೊತ್ತು ಬರುತ್ತಿದೆ ಈ ಹೊಸ ಕಥೆ! ʻಜಾನಕಿ ಸಂಸಾರʼ ಯಾವಾಗ?

T20 World Cup
ಕ್ರಿಕೆಟ್41 mins ago

T20 World Cup: ಟಿ20 ವಿಶ್ವಕಪ್​ ತಂಡ ಸೇರಲು ರಾಹುಲ್​ಗೆ ಇನ್ನೂ ಇದೆ ಅವಕಾಶ

Health Tips
ಆರೋಗ್ಯ46 mins ago

Health Tips: ಕಿಡ್ನಿಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡನ್ನು ಹೀಗೆ ಬಳಸಿ…

Gangster Goldy Brar
ವಿದೇಶ53 mins ago

Gangster Goldy Brar:”ಶೂಟೌಟ್‌ನಲ್ಲಿ ಸತ್ತಿದ್ದು ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಅಲ್ಲ”…ವದಂತಿಗೆ ತೆರೆ

prajawal revanna case driver karthik phone
ಕ್ರೈಂ56 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ವಿಡಿಯೋ ಡ್ರೈವರ್‌ ಮೊಬೈಲ್‌ಗೆ ಲೀಕ್‌ ಆಗಿದ್ದು ಹೀಗೆ!

Ilaiyaraaja Issues Legal Notice to Rajinikanth Coolie
ಕಾಲಿವುಡ್56 mins ago

Ilaiyaraaja Issues Legal Notice: ರಜನಿಕಾಂತ್‌ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ!

Road Accident in anekal
ಬೆಂಗಳೂರು ಗ್ರಾಮಾಂತರ1 hour ago

Road Accident : ಚಲಿಸುತ್ತಿರುವಾಗಲೇ ಬಸ್‌ನಿಂದ ಕಳಚಿಕೊಂಡ ಚಕ್ರಗಳು; ಗಲಿಬಿಲಿಗೊಂಡ ಪ್ರಯಾಣಿಕರು

Puttakkana Makkalu Serial puttakka daughter Sahana left home
ಕಿರುತೆರೆ2 hours ago

Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌