Rishabh Pant: ಕೀಪಿಂಗ್​,ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ ರಿಷಭ್​ ಪಂತ್​​; ವಿಶ್ವಕಪ್​ಗೆ ಕಮ್​ಬ್ಯಾಕ್​ ಸಾಧ್ಯತೆ - Vistara News

ಕ್ರಿಕೆಟ್

Rishabh Pant: ಕೀಪಿಂಗ್​,ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ ರಿಷಭ್​ ಪಂತ್​​; ವಿಶ್ವಕಪ್​ಗೆ ಕಮ್​ಬ್ಯಾಕ್​ ಸಾಧ್ಯತೆ

VISTARANEWS.COM


on

rishabh pant batting with nca
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಿಷಭ್​ ಪಂತ್​ (Rishabh Pant)ಶೀಘ್ರ ಚೇತರಿಕೆ ಕಾಣುವ ಮೂಲಕ ಎಲ್ಲರಿಗೆ ಅಚ್ಚರಿ ಮೂಡಿಸಿದ್ದಾರೆ. ಅವರ ಗಾಯವನ್ನು ಕಂಡ ಅನೇಕರು ಪಂತ್​ ಕ್ರಿಕೆಟ್​ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್​ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಯಾಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್​ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಸ್ತ್ರಚಿಕಿತ್ಸೆ ನಡೆದ ಒಂದೆರಡು ದಿನಗಳಿಂದಲೇ ಕಠಿಣ ವ್ಯಾಯಾಮ ನಡೆಸಲು ಆರಂಭಿಸಿದ್ದರು. ಇದೀಗ ಅವರು ಕೀಪಿಂಗ್​ ಮತ್ತು ಬೌಲಿಂಗ್​ ಅಭ್ಯಾಸವನ್ನು ನಡೆಸಿ ಶೀಘ್ರದಲ್ಲೇ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡುವ ಸೂಚನೆ ನೀಡಿದ್ದಾರೆ. ಅವರ ಈ ಕ್ಷಿಪ್ರ ಪ್ರಗತಿಯ ಚೇತರಿಕೆ ಕಂಡು ಅನೇಕರು ಅಚ್ಚರಿಗೊಳಗಾಗಿದ್ದಾರೆ.

ಸಾಧಿಸುವ ದೃಢ ಛಲವೊಂದಿದ್ದರೆ ಯಾವುದೇ ಕಷ್ಟವನ್ನು ಎದುರಿಸಿ ಮತ್ತೆ ಎದ್ದು ನಿಲ್ಲಬಹುದು ಎಂಬುದಕ್ಕೆ ಪಂತ್​ ಅವರ ಈ ಚೇತರಿಕೆಯ ಪರಿಶ್ರಮವೇ ಉತ್ತಮ ನಿದರ್ಶನ. ಕಳೆದ ಡಿಸೆಂಬರ್​ 30ರಂದು ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಶಸ್ತ್ರಚಿಕಿತ್ಸೆ ಬಳಿಕ ಪಂತ್​ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರು. ಊರುಗೋಲಿನ ಸಹಾಯದಿಂದ ನಡೆದಾಡುತ್ತಿದ್ದ ಅವರು ಹಂತ ಹಂತವಾಗಿ ಚೇತರಿಕೆ ಕಂಡು ವೇಟ್​ಲಿಫ್ಟಿಂಗ್​ ಮಾಡುವ ತನಕ ಬಂದು ಮುಟ್ಟಿದ್ದರು. ಇದೀಗ ಪ್ಯಾಡ್​ ಮತ್ತು ಗ್ಲೌಸ್​ ತೊಟ್ಟು ಕೀಪಿಂಗ್​ ಮತ್ತು ಬ್ಯಾಟಿಂಗ್​ ಅಭ್ಯಾಸ ನಡೆಸಲು ಆರಂಭಿಸಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ಪಂತ್​ ಅವರ ಚೇತರಿಕೆ ಕಂಡು ಇಂದು ಅಥವಾ ನಾಳೆಯೇ ಪಂತ್​​ ಕ್ರಿಕೆಟ್​ಗೆ ಮರಳುವಂತೆ ಭಾಸವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ Rishabh Pant: ರಿಷಭ್​ ಪಂತ್​ ಕಮ್ ​ಬ್ಯಾಕ್​ಗೆ ವೇದಿಕೆ ಸಜ್ಜು; ಬಿಸಿಸಿಐ ಉನ್ನತ ಅಧಿಕಾರಿಯಿಂದ ಮಾಹಿತಿ

“ಹೊರಗಿನಿಂದ ಗಾಯ ಒಣಗಿದಂತೆ ಕಂಡರು ಒಳಗಿರುವ ನೋವು ಮಾಸಲು ಹಲವು ದಿನಗಳು ಬೇಕು. ಒಟ್ಟಾರೆ ಪಂತ್​ ಈ ವರ್ಷದ ಕೊನೆಯಲ್ಲಿ ತಂಡ ಸೇರುವುದಂತು ಪಕ್ಕಾ ಎನ್ನುವಂತಿದೆ. ಹಾಗಂತ, ಯಾವುದನ್ನೂ ಅವಸರದಲ್ಲಿ ಮಾಡಲು ಸಾಧ್ಯವಿಲ್ಲ” ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್- ಆಯ್ಕೆ ಮಂಡಳಿ ನಿರ್ಧಾರ ಸರಿ ಇದೆಯೇ?

ರಾಜಮಾರ್ಗ ಅಂಕಣ: ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ವಿಶ್ವಕಪ್‌ ಟಿ20 ಪಂದ್ಯಾಟಗಳಿಗೆ ಆರಿಸಿದ ಭಾರತ ಕ್ರಿಕೆಟ್ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.‌ ಆದರೆ ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

VISTARANEWS.COM


on

rajamarga column t20 world cup team
Koo

ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಮಿಸ್ ಆದದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಲ್ ದ ಬೆಸ್ಟ್ ಟೀಮ್ ಇಂಡಿಯಾ!

ಐಪಿಎಲ್ (IPL) ಕಾರಣಕ್ಕೆ ಭಾರತದಲ್ಲಿ ನೂರಾರು ಕ್ರಿಕೆಟ್ (Cricket) ಪ್ರತಿಭೆಗಳು ಪ್ರಕಾಶನಕ್ಕೆ ಬಂದಿವೆ. ಹತ್ತು ಕ್ರಿಕೆಟ್ ಟೀಮ್ ರಚಿಸಲು ಸಾಧ್ಯ ಇರುವಷ್ಟು ಆಟಗಾರರು ಈಗ ಭಾರತದಲ್ಲಿ ಇದ್ದಾರೆ! ಅದರಿಂದಾಗಿ ಈ ಬಾರಿ ಕ್ರಿಕೆಟ್ ಆಯ್ಕೆ ಮಂಡಳಿಯು ಸಾಕಷ್ಟು ಅಳೆದು ತೂಗಿ ಒಂದು ಬಲಿಷ್ಠವಾದ ಟಿ 20 (T20) ತಂಡವನ್ನು ವಿಶ್ವಕಪ್‌ಗೆ (World Cup) ಆಯ್ಕೆ ಮಾಡಿದೆ. ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

ಆದರೆ ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ಆರಿಸಿದ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.

ರೋಹಿತ್ ಶರ್ಮ – ಉತ್ತಮ ಕ್ಯಾಪ್ಟನ್

ರೋಹಿತ್ ಶರ್ಮ (Rohit Sharama) ಸದ್ಯಕ್ಕೆ ಭಾರತದ ಯಶಸ್ವೀ ಕ್ಯಾಪ್ಟನ್. ಐದು ಬಾರಿ ಐಪಿಲ್ ಟ್ರೋಫಿ ಎತ್ತಿದ ಸಾಧನೆ ಆತನದ್ದು. ಹಾಗೆಯೇ ಮೊನ್ನೆ ನಡೆದ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ಅದ್ಭುತವಾಗಿ ಆಡಿ ಫೈನಲ್ ತನಕ ಬಂದ ಸಾಧನೆಯು ಸಣ್ಣದಲ್ಲ. ಆರಂಭಿಕ ಆಟಗಾರನಾಗಿ ಸಲೀಸಾಗಿ ಬೌಂಡರಿ, ಸಿಕ್ಸರ್ ಎತ್ತುವ ಛಾತಿ ಆತನಿಗೆ ಇದೆ. ಆದ್ದರಿಂದ ರೋಹಿತ್ ಶರ್ಮಾ ಆಯ್ಕೆಯು ನಿರ್ವಿವಾದ.

ಉಪನಾಯಕನಾಗಿ ಸಂಜು ಸ್ಯಾಮ್ಸನ್ ಅಥವಾ ರಿಷಭ್ ಪಂತ್ ಅವರಿಗೆ ಹೊಣೆ ನೀಡುವ ನಿರೀಕ್ಷೆ ಇತ್ತು. ಆದರೆ ಆಯ್ಕೆ ಮಂಡಳಿ ರಿಸ್ಕ್ ತೆಗೆದುಕೊಳ್ಳಲು ಹೋಗದೆ ಪಾಂಡ್ಯ ಅವರನ್ನೇ ಮುಂದುವರೆಸಿದೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆತನ ನಾಯಕತ್ವದ ಹೆಚ್ಚಿನ ನಿರ್ಧಾರಗಳು ಟೀಕೆಗೆ ಗುರಿಯಾಗಿವೆ. ಆದರೆ ಪಾಂಡ್ಯ ಒಬ್ಬ ಆಲರೌಂಡರ್ ಮತ್ತು ಹೋರಾಟಗಾರ ಎಂಬ ಕಾರಣಕ್ಕೆ ಆತನಿಗೆ ತಂಡದಲ್ಲಿ ಸ್ಥಾನ ದೊರೆತಿದೆ ಎನ್ನುತ್ತದೆ ಆಯ್ಕೆ ಮಂಡಳಿ. ಆತನ ಬದಲಿಗೆ ತಿಲಕ್ ವರ್ಮ, ಸಾಯಿ ಸುದರ್ಶನ್ ಅಥವಾ ರುಥುರಾಜ್ ಗಾಯಕವಾಡ್ ಆಯ್ಕೆ ಆಗಿದ್ದರೆ ಚೆನ್ನಾಗಿತ್ತು ಎಂದು ಕ್ರಿಕೆಟ್ ಪ್ರೇಮಿಗಳು ಗಟ್ಟಿಯಾಗಿ ಹೇಳುತ್ತಿದ್ದಾರೆ. ಒಬ್ಬ ಬೌಲಿಂಗ್ ಆಲ್ರೌಂಡರ್ ಎಂಬ ದೃಷ್ಟಿಯಿಂದ ಹಾರ್ದಿಕ್ ಆಯ್ಕೆ ಆಗಿರಬಹುದು.

rajamarga column t20 world cup team

ಯಶಸ್ವೀ ಜೈಸ್ವಾಲ್ ಆಯ್ಕೆಯಲ್ಲಿ ಯಾರಿಗೂ ಅಚ್ಚರಿ ಆಗಲು ಸಾಧ್ಯವೇ ಇಲ್ಲ. ಕ್ರಿಕೆಟಿನ ಮೂರೂ ಫಾರ್ಮಾಟಗಳಲ್ಲಿ ಆತನ ನಿರ್ವಹಣೆಯು ತುಂಬಾ ಚೆನ್ನಾಗಿದೆ. ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆತ ವಿಫಲನಾದರೂ ಈಗ ನಿಧಾನಕ್ಕೆ ಫಾರ್ಮ್ ಕಂಡು ಕೊಂಡಿದ್ದಾರೆ. ಆತನ ಆಕ್ರಮಣಶೀಲತೆ ಮತ್ತು ಹೊಡೆತಗಳ ಆಯ್ಕೆ ಚೆನ್ನಾಗಿರುವ ಕಾರಣ ಆತನ ಮೇಲೆ ಆಯ್ಕೆ ಮಂಡಳಿ ಭರವಸೆ ಇಟ್ಟ ಹಾಗಿದೆ.

ಕೊಹ್ಲಿ ಆಯ್ಕೆಯು ನಿರೀಕ್ಷಿತ

ವಿಶ್ವ ಕ್ರಿಕೆಟಿನ ಅತ್ಯದ್ಭುತ ಆಟಗಾರ ವಿರಾಟ್ ಕೊಹ್ಲಿ ಆಯ್ಕೆ ನಿರೀಕ್ಷಿತ. ಅದರೆ ಈ ಬಾರಿಯ ಐಪಿಲ್ ಪಂದ್ಯಗಳಲ್ಲಿ ಆತನ ಆಕ್ರಮಣಶೀಲತೆಯು ಕಡಿಮೆ ಆಗಿದೆ(?) ಎಂಬಂತೆ ಕಾಣುತ್ತಿರುವ ಕಾರಣ ಆತನನ್ನು ನಂಬರ್ 3 ಸ್ಥಾನಕ್ಕೆ ಆಡಿಸಬಹುದು ಅಥವಾ ನಂಬರ್ 3 ಸ್ಥಾನಕ್ಕೆ ಸಂಜು ಸಾಮ್ಸನ್ ಆಯ್ಕೆ ಪಡೆಯಬಹುದು. ಆದರೂ 90% ಭಾರತದ ಕ್ರಿಕೆಟ್ ಪ್ರೇಮಿಗಳು ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಬೇಕು ಎಂದು ಆಸೆ ಪಡುತ್ತಾರೆ.

ಸೂರ್ಯಕುಮಾರ್ ಯಾದವ್ ಟಿ 20 ಫಾರ್ಮಾಟಿಗೆ ಹೇಳಿ ಮಾಡಿಸಿದ ಆಟಗಾರ. ಒಮ್ಮೆ ಕುದುರಿಕೊಂಡರೆ ಸರಾಸರಿಯನ್ನು ಸಲೀಸಾಗಿ 200 ದಾಟಿಸುವ ಶಕ್ತಿ ಇದೆ. ಆದರೆ ದೀರ್ಘ ಅವಧಿಗೆ ಗಾಯಾಳು ಆಗಿ ಹೊರಗೆ ಕೂತ ಕಾರಣ ಆತನ ತಲೆಯ ಮೇಲೆ ತೂಗುಕತ್ತಿ ಇದ್ದೇ ಇತ್ತು. ಆದರೆ ಆಯ್ಕೆ ಮಂಡಳಿ ಆತನ ಹಿಂದಿನ ಸಾಧನೆಯ ಮೇಲೆ ಭರವಸೆ ಇಟ್ಟ ಹಾಗಿದೆ. ನಂಬರ್ 3 ಸ್ಥಾನಕ್ಕೆ ಆಯ್ಕೆಗಳು ಹೆಚ್ಚಿದ್ದ ಕಾರಣ ಸಹಜವಾಗಿ ಕೆ ಎಲ್ ರಾಹುಲ್ ಹೊರಗೆ ಕೂರಬೇಕಾಯಿತು ಅಷ್ಟೇ.

rajamarga column t20 world cup team

ಸಂಜು ಸ್ಯಾಮ್ಸನ್ ದಶಕಗಳಿಂದ ಐಪಿಲ್ ಆಡುತ್ತಾ ಇದ್ದಾರೆ. ಈ ಐಪಿಎಲ್ ಟೂರ್ನಿಯಲ್ಲಿ ಆತನ ಸರಾಸರಿ ಮತ್ತು ಕನ್ಸಿಸ್ಟೇನ್ಸಿಗಳು ತುಂಬಾ ಚೆನ್ನಾಗಿ ಇದ್ದ ಕಾರಣ ಅವರ ಆಯ್ಕೆ ಸಲೀಸಾಯ್ತು. ರಾಹುಲ್ ಬ್ಯಾಟಿಂಗ್ ಮತ್ತು ಕೀಪಿಂಗ್ ಚೆನ್ನಾಗಿದ್ದರೂ ಡ್ರಾಪ್ ಆದರು. ಈ ನೋವು ಕನ್ನಡಿಗರನ್ನು ಕಾಡದೇ ಇರದು. ಸಂಜು ಸ್ಯಾಮ್ಸನ್ ಅವರಿಗೊಂದು ಅವಕಾಶ ಕೊಡಲೇಬೇಕು ಎಂದು ದೀರ್ಘಕಾಲದಿಂದ ಭಾರತ ಆಸೆ ಪಡುತ್ತಿತ್ತು.

ಬಲಿಷ್ಠ ಮಿಡಲ್ ಆರ್ಡರ್

ಭಾರತಕ್ಕೆ ಅಗತ್ಯವಾಗಿ ಬೇಕಾಗಿದ್ದ ಬಲಿಷ್ಠ ಮಿಡಲ್ ಆರ್ಡರ್ ಈ ಬಾರಿ ನಿಸ್ಸಂಶಯವಾಗಿಯೂ ದೊರೆತಿದೆ. ರಿಶಭ್ ಪಂತ್ ಮತ್ತು ಶಿವಂ ದುಬೆ ಅಲ್ಲಿ ಮಿಂಚು ಹರಿಸುವುದು ಖಂಡಿತ. ಇನ್ನಷ್ಟು ಬಲಿಷ್ಠ ಮಾಡಲು ರವೀಂದ್ರ ಜಡೇಜಾ ಇದ್ದೇ ಇರುತ್ತಾರೆ.

ಇಡೀ ಐಪಿಲ್ ಪಂದ್ಯಾಟದಲ್ಲಿ ಮಿಂಚಿದ ತಿಲಕ್ ವರ್ಮ, ರಥುರಾಜ್ ಗಾಯಕವಾಡ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರಿಯಾನ್ ಪರಾಗ್ ಯಾಕೆ ಮಿಸ್ ಆದರು?ಎಂಬ ಪ್ರಶ್ನೆಯು ನಿಮ್ಮ ಮನಸಿಗೆ ಕೂಡ ಬಂದಿರಬಹುದು. ಅವರು ಮುಂದಿನ ವಿಶ್ವಕಪ್ ತನಕ ಕಾಯಲೇಬೇಕು ಅನ್ನುವುದು ವಾಸ್ತವ.

rajamarga column t20 world cup team

ಬೌಲಿಂಗ್ ವಿಭಾಗ ಅಚ್ಚರಿ ಇಲ್ಲ

ಜಸ್ಪ್ರೀತ್ ಬುಮ್ರಾ, ಆರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದ ಅಸ್ತ್ರಗಳು. ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್ ಅವರು ಮೀಸಲು ಆಟಗಾರರಾಗಿ ಇರುವ ಕಾರಣ ಇಲ್ಲಿ ಅಚ್ಚರಿಯ ಮುಖಗಳು ಇಲ್ಲ. ಹಾರ್ದಿಕ ಪಾಂಡ್ಯ ಕೂಡ ಮಿದು ವೇಗದ ಬೌಲಿಂಗ್ ಮಾಡಬಲ್ಲರು. ದಾಖಲೆ ವೇಗದಲ್ಲಿ ಎಸೆಯಬಲ್ಲ ಮಯಾಂಕ್ ಯಾದವ್ ಫಿಟ್ನೆಸ್ ಕಾರಣಕ್ಕೆ ಡ್ರಾಪ್ ಆದ ಕಾರಣ ಸಿರಾಜ್ ಆಯ್ಕೆ ಸುಲಭ ಆಯ್ತು. ಸ್ಪಿನ್ ವಿಭಾಗದಲ್ಲಿ ಐಪಿಎಲನ ಗರಿಷ್ಠ ವಿಕೆಟ್ ಕಿತ್ತಿರುವ ಯಜುವೇಂದ್ರ ಚಹಲ್, ಯಾವ ಮೈದಾನದಲ್ಲಿಯೂ ಬಾಲ್ ಸ್ಪಿನ್ ಮಾಡುವ ಶಕ್ತಿ ಇರುವ ಕುಲದೀಪ್ ಯಾದವ್, ಆಕ್ಷರ್ ಪಟೇಲ್ ಇರುತ್ತಾರೆ. ರವಿ ಬಿಷ್ಣೊಯಿ ಇರಬೇಕಿತ್ತು ಎಂಬುದು ಹಲವರ ಅಭಿಪ್ರಾಯ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ಭಾರತವು ಮೂರು ವೇಗ ಪ್ಲಸ್ ಎರಡು ಸ್ಪಿನ್ ಸಂಯೋಜನೆಯ ಜೊತೆಗೆ ಆಡಲು ಇಳಿಯಬಹುದು. ಇನ್ನು ಫಿನಿಶರ್ ಸ್ಥಾನಕ್ಕೆ ಶಿವಂ ದುಬೆ, ರಿಶಬ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಘ್ (ಮೀಸಲು) ಇರುವ ಕಾರಣ ದಿನೇಶ್ ಕಾರ್ತಿಕ್ ಡ್ರಾಪ್ ಆದರು ಅನ್ನಿಸುತ್ತದೆ. ಆತನ ಪ್ರಾಯ ಕೂಡ ಇಲ್ಲಿ ನಿರ್ಣಾಯಕ ಆಗಿರಬಹುದು.

2024ರ ವಿಶ್ವಕಪ್‌ಗೆ ಇದು ಡ್ರೀಮ್ ಟೀಮ್

ಧೋನಿ ನಾಯಕತ್ವದಲ್ಲಿ ಚೊಚ್ಚಲ T20 ವಿಶ್ವಕಪ್ ಗೆದ್ದು ಸಾಧನೆ ಮಾಡಿದ್ದ ಭಾರತ ಈ ಬಾರಿ ಇನ್ನೂ ಬಲಿಷ್ಠ ತಂಡದ ಜೊತೆಗೆ ಆಡಲು ಇಳಿಯುತ್ತಿದೆ. ಈ ತಂಡದಲ್ಲಿ ಆಕ್ರಮಣ, ಅನುಭವ, ಪರಿಣತಿ, ವೇಗ, ತಂತ್ರಗಾರಿಕೆ… ಎಲ್ಲವೂ ಇದೆ. ಉತ್ತಮ ಆಲ್ರೌಂಡರ್ ಆಟಗಾರರೂ ಇದ್ದಾರೆ. ಒತ್ತಡ ತಡೆಕೊಳ್ಳುವ ಶಕ್ತಿ ಇದ್ದವರು ಮಾತ್ರ ವಿಶ್ವಕಪ್ ಗೆಲ್ಲುತ್ತಾರೆ.

ಆದರೆ ಐಪಿಎಲ್ 2024ರಲ್ಲಿ ಸಖತ್ ಮಿಂಚುತ್ತಿರುವ ವಿದೇಶಿ ಆಟಗಾರರಾದ ಫಿಲ್ ಸಾಲ್ಟ್, ವಿಲ್ ಜಾಕ್ಸ್, ಮಾರ್ಕಸ್ ಸ್ಟಾಯಿನಿಸ್, ಟಿಮ್ ಡೇವಿಡ್, ಮೊಹಮ್ಮದ್ ನಬಿ, ಹೆನ್ರಿ ಕ್ಲಾಸೆನ್, ಜೋಸ್ ಬಟ್ಲರ್ ……ಮೊದಲಾದವರು ಬ್ಯಾಟ್ ಬೀಸುವ ವೇಗವನ್ನು ನೋಡುವಾಗ ಭಾರತೀಯರ ಎದೆಬಡಿತವು ಸ್ವಲ್ಪ ಹೆಚ್ಚಾಗಬಹುದು. ಏನಿದ್ದರೂ ಭಾರತಕ್ಕೆ ‘ಆಲ್ ದ ಬೆಸ್ಟ್’ ಹೇಳೋದಕ್ಕೆ ನಾವು ಖಂಡಿತ ಕಂಜೂಸ್ ಮಾಡುವುದಿಲ್ಲ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

Continue Reading

Latest

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

IPL 2024: ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಮುಂಬೈ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

VISTARANEWS.COM


on

IPL 2024
Koo

ಲಖನೌ: ಮಾರ್ಕ್​ ಸ್ಟೊಯ್ನಿಸ್ (62) ಬಾರಿಸಿದ ಅರ್ಧ ಶತಕದ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ (IPL 2024) 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಲಕ್ನೊ ತಂಡಕ್ಕೆ 10 ಪಂದ್ಯಗಳಲ್ಲಿ 6ನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೇರ್ಗಡೆ ಪಡೆದುಕೊಂಡಿದೆ. ಇದೇ ವೇಳೆ ಮುಂಬೈ ತಂಡ ಹ್ಯಾಟ್ರಿಕ್​ ಸೋಲಿಗೆ ಒಳಗಾಗಿದ್ದು 9ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಮುಂಬೈ ತಂಡ 10ರಲ್ಲಿ ಏಳು ಪಂದ್ಯಗಳನ್ನು ಸೋತು ಕೇವಲ 6 ಅಂಕಗಳನ್ನು ಹೊಂದಿದೆ.

ಇಲ್ಲಿನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆ. ಎಲ್​ ರಾಹುಲ್ ಬಳಗ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಮುಂಬೈ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

ಮೊದಲು ಬ್ಯಾಟ್​ ಮಾಡಿದ ಮುಂಬೈ ತಂಡ ಆರಂಭದಿಂದಲೇ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಇಶಾನ್ ಕಿಶನ್​ 32 ರನ್ ಬಾರಿಸಿದೂ ಅವರ ಪಾಲುದಾರ ರೋಹಿತ್ ಶರ್ಮಾ 4 ರನ್​ಗಳಿಗೆ ಔಟಾದರು. ಸೂರ್ಯಕುಮಾರ್ ಯಾದವ್​ ಕೂಡ 10 ರನ್​ಗೆ ಸೀಮಿತಗೊಂಡರು. ತಿಲಕ್​ ವರ್ಮಾ 7 ರನ್ ಬಾರಿಸಿ ರನ್​ಔಟ್​ಗೆ ಬಲಿಯಾದರು. ಆಲ್​ರೌಂಡರ್​ ಎಂದೇ ಖ್ಯಾತಿ ಪಡೆದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ನೇಹಲ್ ವದೇರಾ (46) ರನ್ ಬಾರಿಸಿದರೆ ಟಿಮ್​ ಡೇವಿಡ್​ ಅಮೂಲ್ಯ 35 ರನ್ ಕೊಡುಗೆ ಕೊಟ್ಟರು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಬಾರಿಸಿತು ಮುಂಬಯಿ.

ಇದನ್ನೂ ಓದಿ: T20 World Cup : ಈ ದಿನದಂದು ವಿಶ್ವ ಕಪ್​ಗಾಗಿ ಯುಎಸ್​ಎಗೆ ಹೊರಡಲಿದೆ ಟೀಮ್ ಇಂಡಿಯಾ

ಲಕ್ನೊ ಗೂ ಆಘಾತ

ಗುರಿ ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡವೂ ಆರಂಭಿಕ ಆಘಾತ ಎದುರಿಸಿತು. ಪದಾರ್ಪಣೆ ಬ್ಯಾಟರ್ ಅರ್ಶಿನ್ ಕುಲಕರ್ಣಿ ಶೂನ್ಯಕ್ಕೆ ಔಟಾದರು. ಆದರೆ ರಾಹುಲ್​ 28 ರನ್ ಬಾರಿಸಿ ತಂಡಕ್ಕೆ ಚೈತನ್ಯ ತಂದರು. ಬಳಿಕ ಆಡಲು ಇಳಿದ ಸ್ಟೊಯ್ನಿಸ್​ ಅಗತ್ಯ ಅರ್ಧ ಶತಕ ಗಳಿಸಿದರು. ದೀಪಕ್​ ಹೂಡ 18 ರನ್ ಬಾರಿಸಿದರೆ ನಿಕೋಲಸ್ ಪೂರನ್​ 14 ರನ್ ಕೊಡುಗೆ ಕೊಟ್ಟರು. ಟರ್ನರ್​ ಹಾಗೂ ಅಯುಷ್ ಬದೋನಿ ಅನುಕ್ರಮವಾಗಿ 5 ಹಾಗೂ 6 ರನ್ ಬಾರಿಸಿದರು.

Continue Reading

ಪ್ರಮುಖ ಸುದ್ದಿ

T20 World Cup : ಈ ದಿನದಂದು ವಿಶ್ವ ಕಪ್​ಗಾಗಿ ಯುಎಸ್​ಎಗೆ ಹೊರಡಲಿದೆ ಟೀಮ್ ಇಂಡಿಯಾ

T20 World Cup: ವಿಶ್ವ ಕಪ್​ಗಾಗಿ 15 ಸದಸ್ಯರ ತಂಡವನ್ನು ಮಂಗಳವಾರ (ಏಪ್ರಿಲ್ 30) ಘೋಷಿಸಲಾಗಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ ಅವರ ಆರಂಭಿಕ ಜತೆಗಾರರಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿ

VISTARANEWS.COM


on

T20 World Cup
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ನ ಲೀಗ್ ಹಂತ ಮುಗಿದ ಒಂದು ದಿನದ ನಂತರ, ಐಸಿಸಿ ಟಿ 20 ವಿಶ್ವಕಪ್ 2024 (T20 World Cup) ಗಾಗಿ ಟೀಮ್ ಇಂಡಿಯಾ ಅಮೆರಿಕಕ್ಕೆ ತೆರಳಲಿದೆ. ಮೇ 21ರಂದು ಟೀಮ್ ಇಂಡಿಯಾ ಆಟಗಾರರು ಅಮೆರಿಕ್ಕೆಕ ಹೋಗುವ ವಿಮಾನ ಏರಲಿದ್ದಾರೆ ಎಂಬುದಾಗಿ ವರದಿಯಾಗಿದೆ.

ವಿಶ್ವ ಕಪ್​ಗಾಗಿ 15 ಸದಸ್ಯರ ತಂಡವನ್ನು ಮಂಗಳವಾರ (ಏಪ್ರಿಲ್ 30) ಘೋಷಿಸಲಾಗಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ ಅವರ ಆರಂಭಿಕ ಜತೆಗಾರರಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ., ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಶಿವಂ ದುಬೆ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಕೆಟ್ ಕೀಪರ್ ಹುದ್ದೆಗೆ ಆಯ್ಕೆದಾರರು ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿದರೆ, ಪಾಂಡ್ಯ ಅವರೊಂದಿಗೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಆಲ್​​ರೌಂಡರ್​ಗಳಾಗಿರುತ್ತಾರೆ. ಯಜುವೇಂದ್ರ ಚಾಹಲ್ ಮತ್ತು ಕುಲ್ದೀಪ್ ಯಾದವ್ ತಂಡದಲ್ಲಿ ಮುಂಚೂಣಿ ಸ್ಪಿನ್ನರ್​ಗಳಾಗಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಶ್​ದೀಪ್​ ಸಿಂಗ್ ವೇಗದ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.

ಮೇ 21ರಂದು ಅಮೆರಿಕಕ್ಕೆ ಭಾರತೀಯ ಆಟಗಾರರು

ಕ್ರಿಕ್​ಬಜ್​​ ವರದಿಯ ಪ್ರಕಾರ, ಮೊದಲ ಬ್ಯಾಚ್ ಭಾರತೀಯ ಆಟಗಾರರು ಮೇ 21 ರಂದು ಯುಎಸ್​​ಗೆ ತೆರಳಲಿದೆ. ಐಪಿಎಲ್ 2024 ರ ಲೀಗ್ ಹಂತವು ಮೇ 19 ರಂದು ಕೊನೆಗೊಳ್ಳಲಿದೆ. ಪ್ಲೇಆಫ್​ಗೆ ಅರ್ಹತೆ ಪಡೆಯುವ ತಂಡಗಳ ಭಾಗವಾಗದ ಎಲ್ಲಾ ಆಟಗಾರರು ಮೇ 21 ರಂದು ಯುಎಸ್​ಗೆ ಪ್ರಯಾಣಿಸಲಿದ್ದಾರೆ. ಆಟಗಾರರ ಜೊತೆಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿ ಕೂಡ ಅಮೆರಿಕಕ್ಕೆ ತೆರಳಲಿದ್ದಾರೆ.

ಮೇ 26ರಂದು ಐಪಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಎರಡನೇ ಬ್ಯಾಚ್ ಆಟಗಾರರು ಅಮೆರಿಕಕ್ಕೆ ತೆರಳಲಿದ್ದಾರೆ. ಭಾರತ ತಂಡವು ನ್ಯೂಯಾರ್ಕ್​​ಗೆ ಹಾರಲಿದ್ದು, ಅಲ್ಲಿ ಅವರು ತಮ್ಮ ನಾಲ್ಕು ಲೀಗ್ ಪಂದ್ಯಗಳಲ್ಲಿ ಮೂರನ್ನು ಆಡಲಿದೆ. ಟೂರ್ನಿಯು ಜೂನ್ 1ರಂದು ಆರಂಭವಾಗಲಿದ್ದು, ಭಾರತ ತಂಡ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ: IPL 2024 : ಅತಿ ವೇಗದ ಬೌಲರ್​ ಮಾಯಾಂಕ್​ ಯಾದವ್​ಗೆ ಮತ್ತೆ ಗಾಯ?

‘ಎ’ ಗುಂಪಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ, ಐರ್ಲೆಂಡ್, ಸಹ ಆತಿಥೇಯ ಅಮೆರಿಕ ಮತ್ತು ಕೆನಡಾ ತಂಡಗಳಿವೆ. ಜೂನ್ 5ರಂದು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿರುವ ಭಾರತ, ಜೂನ್ 9ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಭಾರತ ತನ್ನ ಮೂರನೇ ಲೀಗ್ ಪಂದ್ಯವನ್ನು ಜೂನ್ 12 ರಂದು ನ್ಯೂಯಾರ್ಕ್ನಲ್ಲಿ ಯುಎಸ್ಎ ವಿರುದ್ಧ ಆಡಲಿದ್ದು, ಜೂನ್ 15 ರಂದು ಲಾಡರ್​ಹಿಲ್​ನಲ್ಲಿ ಕೆನಡಾವನ್ನು ಎದುರಿಸಲಿದೆ.

2007ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದ ನಂತರ ಟೀಮ್ ಇಂಡಿಯಾ ಟಿ 20 ವಿಶ್ವಕಪ್ ಗೆದ್ದಿಲ್ಲ ಮತ್ತು ಈ ವರ್ಷ ಎಲ್ಲಾ ಹಾದಿಯಲ್ಲಿ ಸಾಗಲು ಹತಾಶವಾಗಿದೆ. ಕಳೆದ ಆವೃತ್ತಿಯಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲನುಭವಿಸಿ ಸೆಮಿಫೈನಲ್ ಹಂತದಲ್ಲೇ ಸೋತಿತ್ತು.

Continue Reading

ಪ್ರಮುಖ ಸುದ್ದಿ

IPL 2024 : ಅತಿ ವೇಗದ ಬೌಲರ್​ ಮಾಯಾಂಕ್​ ಯಾದವ್​ಗೆ ಮತ್ತೆ ಗಾಯ?

IPL 2024 : ಮಯಾಂಕ್ ಓವರ್ ಮಧ್ಯದಲ್ಲಿ ಮೈದಾನದಿಂದ ಹೊರಗುಳಿಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಏಪ್ರಿಲ್​​ನಲ್ಲಿ ಗುಜರಾತ್​ ಜೈಂಟ್ಸ್​​ ವಿರುದ್ಧದ ಪಂದ್ಯದ ವೇಳೆ ವೇಗದ ಬೌಲರ್ ತನ್ನ ಮೊದಲ ಓವರ್ ನಂತರ ಮೈದಾನದಿಂದ ಹೊರಕ್ಕೆ ಹೋಗಿದ್ದರು. ಅಲ್ಲಿಂದ ನಂತರ , ಅವರು 5 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

VISTARANEWS.COM


on

IPL 2024
Koo

ಬೆಂಗಳೂರು: ಲಕ್ನೊ ಸೂಪರ್ ಜೈಂಟ್ಸ್​ ತಂಡದ ವೇಗದ ಬೌಲರ್​ ಮಯಾಂಕ್ ಯಾದವ್​​ (Mayank Yadav) ಮತ್ತೆ ಗಾಯಗೊಂಡರೇ? ಏಪ್ರಿಲ್ 30 ರ ಮಂಗಳವಾರ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಪಂದ್ಯದ ವೇಳೆ ಮತ್ತೆ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಗಾಯದ ಸಮಸ್ಯೆ ಅನುಭವಿಸಿದ್ದ ಅವರು ಈ ಪಂದ್ಯಕ್ಕೆ ಮರಳಿದ್ದರು. ಅವರು 10 ಡಾಟ್ ಬಾಲ್ ಗಳನ್ನು ಎಸೆದಿದ್ದರೂ ತಮ್ಮ ಮೊದಲ 3 ಓವರ್ ಗಳಲ್ಲಿ 31 ರನ್ ಗಳನ್ನು ಸೋರಿಕೆ ಮಾಡಿದ್ದರು.

18ನೇ ಓವರ್​ನ ಮೊದಲ ಎಸೆತದಲ್ಲಿ ಮಯಾಂಕ್ ಅನುಭವಿ ಮೊಹಮ್ಮದ್ ನಬಿ ಅವರನ್ನು ಔಟ್ ಮಾಡಿದರು. ಆದಾಗ್ಯೂ, ಅವರು ಒಂದು ರೀತಿಯ ಅನನುಕೂಲತೆ ಅನುಭವಿಸಿದರು. ಅಲ್ಲದೆ, ಸ್ಟೇಡಿಯಮ್ ಬಿಟ್ಟು ಹೊರಗೆ ನಡೆದಿದ್ದಾರೆ. ಅವರು ಮೆಟ್ಟಿಲುಗಳ ಮೇಲೆ ಓಡುತ್ತಿರುವ ವಿಡಿಯೊ ಕಂಡು ಬಂದಿದೆ. ಆದರೆ, ಅದು ಯಾಕೆ ಎಂದು ಗೊತ್ತಾಗಿಲ್ಲ. ಆದರೆ, ಗಾಯಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಎನ್ನಲಾಗಿದೆ.

ಮಯಾಂಕ್ ಓವರ್ ಮಧ್ಯದಲ್ಲಿ ಮೈದಾನದಿಂದ ಹೊರಗುಳಿಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಏಪ್ರಿಲ್​​ನಲ್ಲಿ ಗುಜರಾತ್​ ಜೈಂಟ್ಸ್​​ ವಿರುದ್ಧದ ಪಂದ್ಯದ ವೇಳೆ ವೇಗದ ಬೌಲರ್ ತನ್ನ ಮೊದಲ ಓವರ್ ನಂತರ ಮೈದಾನದಿಂದ ಹೊರಕ್ಕೆ ಹೋಗಿದ್ದರು. ಅಲ್ಲಿಂದ ನಂತರ , ಅವರು 5 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಎಲ್ಎಸ್ಜಿ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಎಲ್ಲಾ ಫಿಟ್ನೆಸ್ಪ ರೀಕ್ಷೆಗಳಲ್ಲಿ ತೇರ್ಗಡೆಯಾದ ನಂತರ ಮಯಾಂಕ್ ಆಡುತ್ತಿದ್ದಾರೆ ಎಂದು ಹೇಳಿದ್ದರು. ತಂಡದ ಸಹಾಯಕ ಕೋಚ್ ಎಸ್ ಶ್ರೀರಾಮ್ ಕೂಡ ವೇಗದ ಬೌಲರ್ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದರು. ಅವರು ನೆಟ್ಸ್​ನಲ್ಲಿ ಪೂರ್ಣ ತೀವ್ರತೆಯಿಂದ ಬೌಲಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: IPL 2024 : ಗುಜರಾತ್​ ಟೀಮ್​ನಲ್ಲಿ ಬುಮ್ರಾ 2.0; ಕನ್ನಡಿಗನ ಬೌಲಿಂಗ್​ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​

ಮುಂಬೈ ಇಂಡಿಯನ್ಸ್ ವಿರುದ್ಧ ಮಯಾಂಕ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು,.ಆದರೆ ಪಂಜಾಬ್​ ಮತ್ತು ಆರ್​ಸಿಬಿ ವಿರುದ್ಧದ ಎಲ್ಎಸ್​ಜಿ ಪರ ಹಿಂದಿನ ಮುಖಾಮುಖಿಗಳಲ್ಲಿ ಅವರು ಬೌಲಿಂಗ್ ಮಾಡಿದಷ್ಟು ವೇಗದಲ್ಲಿ ಬೌಲಿಂಗ್ ಮಾಡಲಿಲ್ಲ.

ಮಯಾಂಕ್ ಯಾದವ್: ಸೂಪರ್ ಜೈಂಟ್ಸ್​ಗೆ ನಿರ್ಣಾಯಕ

ಐಪಿಎಲ್ 2024 ರಲ್ಲಿ ಗಂಟೆಗೆ 156.7 ಕಿ.ಮೀ ವೇಗದಲ್ಲಿ ವೇಗದ ಚೆಂಡನ್ನು ಎಸೆಯುವ ಮೂಲಕ ಯುವ ಆಟಗಾರ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು. ಅವರು ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಸಾಧನೆಗಳನ್ನು ಮಾಡಿದ್ದರು . ಅವರ ಆರಾಧ್ಯ ದೈವ ಡೇಲ್ ಸ್ಟೇನ್ ಸೇರಿದಂತೆ ಕ್ರಿಕೆಟ್ ಕ್ಷೇತ್ರದಿಂದ ಗೌರವ ಪಡೆದುಕೊಂಡಿದ್ದರು.

ಪ್ಲೇಆಫ್ಗೆ ಅರ್ಹತೆ ಪಡೆಯಲು ಎಲ್ಎಸ್​ಜಿ ಇನ್ನೂ ಸ್ವಲ್ಪ ದೂರದಲ್ಲಿದೆ. ಮೊಹ್ಸಿನ್ ಖಾನ್ ಮತ್ತು ಯಶ್ ಠಾಕೂರ್ ಅವರಂತಹ ಭಾರತೀಯ ವೇಗಿಗಳನ್ನು ಹೊಂದಿದ್ದರೂ, ಮಯಾಂಕ್ ಫಿಟ್ ಆಗಿ ಉಳಿಯುವುದು ಆ ತಂಡಕ್ಕೆ ಸಾಕಷ್ಟು ಪ್ರಾಮುಖ್ಯವಾಗಿದೆ.

Continue Reading
Advertisement
Ambedkar Statue in kalaburagi news
ಕಲಬುರಗಿ5 mins ago

Ambedkar Statue: ಅಂಬೇಡ್ಕರ್‌ ಪ್ರತಿಮೆ ಅಪಮಾನ ಕೇಸ್‌; ಜಾಮೀನು ಪಡೆದ ಆರೋಪಿ ಮನೆಗೆ ಕಲ್ಲು ತೂರಾಟ

gold rate today 18
ಚಿನ್ನದ ದರ24 mins ago

Gold Rate Today: ಬಂಗಾರ‌ ಇಂದೇ ತಗೊಳ್ಳಿ! ಚಿನ್ನದ ಬೆಲೆ ಭಾರೀ ಇಳಿಕೆ; ಇಂದು ಇಷ್ಟಿದೆ ನೋಡಿ

Delhi Congress
ರಾಜಕೀಯ27 mins ago

Delhi Congress: ದಿಲ್ಲಿ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು; ಪಕ್ಷಕ್ಕೆ ಗುಡ್‌ಬೈ ಹೇಳಿದ ಮಾಜಿ ಶಾಸಕರು

Duniya Vijay Visited Kolluru Shri Mookambika Devi Temple
ಸಿನಿಮಾ29 mins ago

Duniya Vijay: ಕೊಲ್ಲೂರಿನಲ್ಲಿ ʼಸ್ಯಾಂಡಲ್‌ವುಡ್‌ ಸಲಗʼವನ್ನು ಮುತ್ತಿಕೊಂಡ ಅಭಿಮಾನಿಗಳು!

Vettaiyan Movie Anirudh Ravichander to make a special appearance in Rajinikanth
ಕಾಲಿವುಡ್39 mins ago

Vettaiyan Movie: ರಜನಿಕಾಂತ್ ಸಿನಿಮಾದಲ್ಲಿ ಅನಿರುದ್ಧ್ ರವಿಚಂದರ್; ಲೀಕ್‌ ಆಯ್ತು ಫೋಟೊ!

Divorce Case
ಕ್ರೈಂ1 hour ago

Divorce Case: ಪತಿ, ಕುಟುಂಬದ ವಿರುದ್ಧದ ಸುಳ್ಳು ಕೇಸು ಕ್ರೌರ್ಯಕ್ಕೆ ಸಮಾನ; ಬಾಂಬೆ ಹೈಕೋರ್ಟ್

Hassan Pen Drive Case Prajwal Revanna
ಕ್ರೈಂ1 hour ago

Hassan Pen Drive Case: ಮೇ 3ರಂದು ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ, ಬಂದ ತಕ್ಷಣ ಎಸ್‌ಐಟಿ ವಶಕ್ಕೆ?

Mokshita Pai realistic morning routine With special Child brother
ಕಿರುತೆರೆ1 hour ago

Mokshitha Pai: ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ಆರೈಕೆ ಮಾಡುತ್ತಿರುವ ʻಪಾರುʼ

Suspicious Death in Mandya
ಮಂಡ್ಯ1 hour ago

Suspicious Death : ಗೃಹಿಣಿಯ ಕುತ್ತಿಗೆಯಲ್ಲಿತ್ತು ರಕ್ತ ಹೆಪ್ಪುಗಟ್ಟಿರುವ ಕಲೆ; ಈ ಸಾವು ಕೊಲೆಯೋ, ಆತ್ಮಹತ್ಯೆಯೋ

Viral News
ವೈರಲ್ ನ್ಯೂಸ್1 hour ago

‍Viral News: ಚಂದದ ಪ್ರೊಫೈಲ್‌ ಫೋಟೋಗೆ ಫಿದಾ ಆಗಿದ್ದವನಿಗೆ ಕಾದಿತ್ತು ಶಾಕ್‌; ಮುಂದೆ ನಡೆದಿದ್ದೇ ಬೇರೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌