ಕ್ರೀಡೆ
IPL 2024 : ಮುಂಬಯಿ ತಂಡದಿಂದ ರೋಹಿತ್ ಶರ್ಮಾ ಸದಾ ದೂರ ದೂರ
IPL 2024 : ರೋಹಿತ್ ಶರ್ಮಾ ತಂಡದ ಜತೆ ಪ್ರಯಾಣ ಮಾಡದೇ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ ಎಂಬುದಾಗಿ ವರದಿಗಳು ಹೇಳಿವೆ.
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024 ) ನ ಮುಂಬರುವ ಋತುವಿನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಹೊಸ ಪ್ರಯಾಣವನ್ನು ಪ್ರಾರಂಭಿಸಲಿದೆ. ಒಂದು ದಶಕದ ಕಾಲ ರೋಹಿತ್ ಶರ್ಮಾ (Rohit Sharma) ತಂಡವನ್ನು ಮುನ್ನಡೆಸಿದ ನಂತರ ಐದು ಬಾರಿಯ ಚಾಂಪಿಯನ್ಸ್ ಮುಂಬರುವ ಋತುವಿಗೆ ಹೊಸ ನಾಯಕನ ನೇತೃತ್ವದಲ್ಲಿ ಆಡಲಿದೆ. ಐಪಿಎಲ್ 2024 ರಲ್ಲಿ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ತಂಡವನ್ನು ಮುನ್ನಡೆಸಲಿದ್ದಾರೆ.
ರೋಹಿತ್ ಶರ್ಮಾ 2013 ರಿಂದ 2023 ರವರೆಗೆ ತಂಡವನ್ನು ಮುನ್ನಡೆಸಿದರು ಮತ್ತು ನಾಯಕನಾಗಿ ಅದ್ಭುತ ಕೆಲಸ ಮಾಡಿದ್ದರು. ಅವರ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಅವರು ಮುಂಬೈ ಇಂಡಿಯನ್ಸ್ ತಂಡವನ್ನು ದಾಖಲೆಯ ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದರು. ಕೊನೇ ಟ್ರೋಫಿ 2020 ರಲ್ಲಿ ಬಂದಿತ್ತು.
ಐಪಿಎ ಲ್ನ ಇತ್ತೀಚಿನ ಋತುಗಳಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ, ಅವರ ಬದಲಾವಣೆ ಕಠಿಣವಾಗಿತ್ತು ಎಂದು ಅನೇಕರು ಹೇಳುತ್ತಾರರೆ. ಅವರನ್ನು ನಾಯಕತ್ವದಿಂದ ಹೊರಕ್ಕಿಟ್ಟ ಬಳಿಕ ಮುಂಬಯಿ ಡ್ರೆಸ್ಸಿಂಗ್ ರೂಮ್ನಲ್ಲಿ ಅಶಾಂತಿಯ ವದಂತಿಗಳು ಹರಿದಾಡುತ್ತಿವೆ. ಅಂತೆಯೇ ಟೀಮ್ ಬಾಂಡಿಂಗ್ ಇವೆಂಟ್ನಲ್ಲಿಯೂ ಹಲವರು ಭಾಗಿಯಾಗದೇ ಇರುವುದು ಬೆಳಕಿಗೆ ಬಂದಿದೆ.
ಮುಂಬೈ ಇಂಡಿಯನ್ಸ್ ತಂಡವು ಮಂಗಳವಾರ (ಮಾರ್ಚ್ 19) ಅಲಿಬಾಗ್ಗೆ ಭೇಟಿ ನೀಡಿತ್ತು. ಮುಂಬೈಗೆ ಮರಳುವ ಮೊದಲು ಮುಂದಿನ ಎರಡು ದಿನಗಳವರೆಗೆ ಅಲ್ಲಿಯೇ ಉಳಿಯಲಿದೆ. ಮಾರ್ಚ್ 24ರಂದು ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿರುವ ಮೊದಲ ಪಂದ್ಯಕ್ಕಾಗಿ ಮುಂಬೈನಿಂದ ಅಹ್ಮದಾಬಾದ್ ಗೆ ತೆರಳಲಿದೆ.
ದೂರ ಇರುವ ರೋಹಿತ್
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕ್ರಿಕೆಟಿಗರಾಗಿ ಎಲ್ಲಿಯೂ ಕಾಣಿಸಲಿಲ್ಲ ಮತ್ತು ತರಬೇತುದಾರರು ಅಲಿಬಾಗ್ಗೆ ದೋಣಿಯಲ್ಲಿ ತೆರಳಿದರು. ಆಟಗಾರರು ಮತ್ತು ಇತರ ಸದಸ್ಯರು ದೋಣಿಯಿಂದ ಇಳಿಯುವಾಗಲೂ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ಕಾಣಿಸಲಿಲ್ಲ.
ಇದನ್ನೂ ಓದಿ: IPL 2024 : ಚಂದ್ರಯಾನ 3 ಮಿಷನ್ಗೆ ಗೌರವ ಸಲ್ಲಿಸಿದ ಬಿಸಿಸಿಐ
ಜಸ್ಪ್ರೀತ್ ಬುಮ್ರಾ ಕೂಡ ಗೈರು ಹಾಜರಾಗಿದ್ದರು ಮತ್ತು ಇಂಗ್ಲೆಂಡ್ ವಿರುದ್ಧದ ಕಠಿಣ ಟೆಸ್ಟ್ ಸರಣಿಯ ನಂತರ ಅವರು ಇನ್ನೂ ತಂಡದೊಂದಿಗೆ ಸಂಪರ್ಕ ಸಾಧಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಮತ್ತೊಂದೆಡೆ, ರೋಹಿತ್ ಶರ್ಮಾ ಈ ವಾರದ ಆರಂಭದಲ್ಲಿ ತಂಡದೊಂದಿಗೆ ಸಂಪರ್ಕ ಹೊಂದಿದ್ದರು.
ರೋಹಿತ್ ಶರ್ಮಾ ಜೊತೆ ಆಡುವ ಬಗ್ಗೆ ಹಾರ್ದಿಕ್ ಪಾಂಡ್ಯ
ಈ ವಾರದ ಆರಂಭದಲ್ಲಿ, ಹಾರ್ದಿಕ್ ಪಾಂಡ್ಯ ಅವರನ್ನು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವಾಗ ರೋಹಿತ್ ಶರ್ಮಾ ಅವರೊಂದಿಗಿನ ಸಂಬಂಧದ ಬಗ್ಗೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮುಂಬೈ ಇಂಡಿಯನ್ಸ್ ನಾಯಕ, ತಮ್ಮ ಮತ್ತು ತಮ್ಮ ಹಿಂದಿನ ನಾಯಕನ ನಡುವೆ ಎಲ್ಲವೂ ಸರಿಯಾಗಿದೆ ಎಂದು ತೋರಿಸಿದರು.
“ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ. ಏಕೆಂದರೆ ನನಗೆ ಅವರ ಸಹಾಯ ಅಗತ್ಯವಿದ್ದರೆ ಸಹಾಯ ಮಾಡಲು ಅವರು ಇರುತ್ತಾರೆ” ಎಂದು ಪಾಂಡ್ಯ ಹೇಳಿಕೊಂಡಿದ್ದಾರೆ.
ಅವರು ಭಾರತೀಯ ತಂಡದ ನಾಯಕರಾಗಿದ್ದಾರೆ. ಇದು ನನಗೆ ಸಹಾಯ ಮಾಡುತ್ತದೆ. ಏಕೆಂದರೆ ಈ ತಂಡವು ಏನನ್ನು ಸಾಧಿಸಿದೆಯೋ ಅದನ್ನು ಅವರ ಅಡಿಯಲ್ಲಿ ಸಾಧಿಸಿದೆ. ಇಂದಿನಿಂದ, ಅವನು ಸಾಧಿಸಿದ್ದನ್ನು ಮುಂದುವರಿಸುವ ಯೋಜನೆ ಇದೆ. ನಾನು ಅವರ ಅಡಿಯಲ್ಲಿ 10 ವರ್ಷಗಳ ಕಾಲ ಆಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ಕೊಡಗು
Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ
Kodagu News : ಈ ಬಾರಿ ಮುದ್ದಂಡ ಕುಟುಂಬಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜವಬ್ದಾರಿ ಹೆಗಲೇರಿದ್ದು ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ಗುರಿ ಹೊಂದಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ವರ್ಷದ ಪಂದ್ಯಾವಳಿ ಅಯೋಜಿಸಲಾಗಿದೆ.
ಕೊಡಗು: 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೆಬ್ ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಮಡಿಕೇರಿ ಹೊರ ವಲಯದ ಖಾಸಗಿ ರೆಸಾರ್ಟ್ ನಲ್ಲಿ (Kodagu News ) ನಡೆಯಿತು. ಪ್ರತಿ ವರ್ಷ ಕೂಡ ಒಂದೊಂದು ಕುಟುಂಬಗಳು ಪಂದ್ಯಾಟ ಆಯೋಜಿಸುವ ಜವಬ್ದಾರಿ ಹೊತ್ತುಕೊಳ್ಳುತ್ತೆ. ಈ ಬಾರಿ ಮುದ್ದಂಡ ಕುಟುಂಬಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜವಬ್ದಾರಿ ಹೆಗಲೇರಿದ್ದು ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ಗುರಿ ಹೊಂದಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ವರ್ಷದ ಪಂದ್ಯಾವಳಿ ಅಯೋಜಿಸಲಾಗಿದೆ.
ಮೊದಲಿಗೆ ದೀಪ ಬೆಳಗುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ 2025 ನೇ ಮುದಂಡ ಕ್ರಿಕೇಟ್ ಪಂದ್ಯಾವಳಿಯ ವೆಬ್ ಸೈಟ್ ಲಾಂಚ್ ಮಾಡಿದ್ದು ಎಲ್ಲಾ ರೀತಿಯ ಮಾಹಿತಿಯನ್ನ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಹಾಕಿ ಪಂದ್ಯಾವಳಿಯ ಗೌರವ ಅಧ್ಯಕ್ಷರಾದ ಎಂಬಿ ದೇವಯ್ಯ ಮಾತನಾಡಿ ಮುದ್ದಂಡ ಕುಟುಂಬದ ಹಿರಿಯರು ಹಾಕಿ ಅಕಾಡೆಮಿ ಸಹಕಾರದಲ್ಲಿ ಈ ಬಾರಿ ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದೇವೆ. ಈಗಾಗಲೇ ಸಮಿತಿಯನ್ನು ರಚನೆ ಮಾಡಿದ್ದೇವೆ. ಕೆಲಸಗಳನ್ನು ಆರಂಭಿಸಿದ್ದು, ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು. 25ನೇ ವರ್ಷದ ಕಾರ್ಯಕ್ರಮ ಆಯೋಜನೆಗೆ ನಮಗೆ ಸಿಕ್ಕಿರೋದು ಬಹಳ ಸಂತೋಷವಿದ್ದು ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುವ ಗುರಿ ಹೊಂದಿದೆ.
ಕಾರ್ಯಕ್ರಮದಲ್ಲಿ ಕೊಡಗು ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಸ್ಥಳೀಯ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ,ಉಳ್ಳಿಯಡ ಪೂವಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ,ಮುದ್ದಂಡ ಸ್ಪೋರ್ಟ್ಸ್ ಅ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ರಶಿತ್ ಸುಬ್ಬಯ್ಯ,
ಅತಿಥಿಗಳಾಗಿ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಡೀನ್ ಬೋಪಣ್ಣ, ಉಪಾಧ್ಯಕ್ಷ ಅಶೋಕ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ,ಆದ್ಯ ಪೊನ್ನಣ್ಣ ,ರಂಜಿತ್ ಪೊನ್ನಪ್ಪ, ಚಂಗಪ್ಪ, ದಿವ್ಯ ಪ್ರಮುಖರು ಇದ್ದರು
ಬೆಂಗಳೂರು
KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ; ಫೈನಲ್ ಮ್ಯಾಚ್ ಗೆದ್ದ ಕೊಲ್ಕತ್ತಾ ರೀಜನ್ ಶಾಲೆ ಮಕ್ಕಳು
ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂ ಎಫ್‌ನಲ್ಲಿ 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ 2024-25ರ (KVS Sports Meet) ಮುಕ್ತಾಯಗೊಂಡಿದೆ. ಬಾಲಕರ ರೋಚಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ರೀಜನ್ ಶಾಲೆ ಮಕ್ಕಳು ಮೊದಲ ಸ್ಥಾನ ಗಳಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನ ಯಲಹಂಕ ಕೇಂದ್ರೀಯ ವಿದ್ಯಾಲಯದಲ್ಲಿ ಸೆ. 30 ರಿಂದ ಅ. 6 ರವರೆಗೆ 53ನೇ ರಾಷ್ಟ್ರೀಯ ಕ್ರೀಡಾಕೂಟ ನಡೆಸಲಾಯಿತು. ಕ್ರೀಡೆಯಲ್ಲಿ ಹಲವಾರು ಆಟಗಳಿವೆ. ಅದರಲ್ಲಿ ಕ್ರಿಕೆಟ್ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ದೇಶದ ನಾನಾ ರಾಜ್ಯಗಳಿಂದ ಅಂದರೆ ಒಟ್ಟು 18 ರಾಜ್ಯಗಳಿಂದ ಮಕ್ಕಳು ಕ್ರಿಕೆಟ್ ಆಡಲು ಕೆ .ವಿ .ಆರ್ ಡಬ್ಲ್ಯೂ ಎಫ್‌ಗೆ ಬಂದಿದ್ದರು. ಒಟ್ಟು 269 ಶಾಲೆಯ ಮಕ್ಕಳು ನಾಲ್ಕು ವಿವಿಧ ಆಟದ ಮೈದಾನದಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ಪ್ರದರ್ಶಿಸಿದರು. ಅ.6 ರಂದು ಫೈನಲ್ ಮ್ಯಾಚ್ ನಡೆಸಲಾಯಿತು.
ಪ್ರಥಮ ಸ್ಥಾನವನ್ನು ಕೊಲ್ಕತ್ತಾ ರೀಜನ್ ಶಾಲೆ ಮಕ್ಕಳು ಮತ್ತು ದ್ವಿತೀಯ ಸ್ಥಾನವನ್ನು ಜಬಲ್ ಪುರ್ ರೀಜನ್ ಶಾಲೆ ಮಕ್ಕಳು ಗಳಿಸಿಕೊಂಡರು. ನಂತರ ಶಾಲೆ ಆವರಣದಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ ಪಿ. ದೇವಕುಮಾರ್(ಜಂಟಿ ಆಯುಕ್ತ ಕೆ ವಿ ಎಸ್ ಪ್ರಧಾನ ಕಛೇರಿ) ಹಾಗೂ ವಿಶೇಷ ಅತಿಥಿಗಳಾಗಿ ಧರ್ಮೇಂದ್ರ ಪಟ್ಲೆ. (ಉಪ ಆಯುಕ್ತ ಕೆ ವಿ ಎಸ್ ಬೆಂಗಳೂರು), ಆರ್ ಪ್ರಮೋದ್.(ಸಹಾಯಕ ಆಯುಕ್ತ ಕೆ ವಿ ಎಸ್ ಬೆಂಗಳೂರು), ಹೇಮಾ ಕೆ( ಸಹಾಯಕ ಆಯುಕ್ತ ) ಆಗಮಿಸಿದ್ದರು.
ಅತಿಥಿಗಳಿಗೆ ಶಾಲೆಯ ವರ್ಣ ರಂಜಿತಾ NCC ಬ್ಯಾಂಡ್ ತಂಡದ ಮಕ್ಕಳು ಸ್ವಾಗತ ಕೋರಿದರು. ಗಾಯನ ತಂಡದಿಂದ ಸ್ವಾಗತ ಗಾಯನವನ್ನು ಹಾಡಿದರು ನಂತರ ಸ್ವಾಗತ ಭಾಷಣವನ್ನು ಧರ್ಮೇಂದ್ರ ಪಟ್ಲೆ ಮಾಡಿದರು. ನೃತ್ಯ ತಂಡದಿಂದ ಮಕ್ಕಳು ಸ್ವಾಗತ ನೃತ್ಯವನ್ನು ಮಾಡಿದರು.
ಬೆಂಗಳೂರು
KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ; ಮೈದಾನದಲ್ಲಿ ಬಾಲಕರ ರೋಚಕ ಕ್ರಿಕೆಟ್
KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ಮೈದಾನದಲ್ಲಿ ಬಾಲಕರ ಕ್ರಿಕೆಟ್ ರೋಚಕವಾಗಿತ್ತು.
ಬೆಂಗಳೂರು: 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ 2024-25ಕ್ಕೆ (KVS Sports Meet) ಸೋಮವಾರ ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂ ಎಫ್‌ನಲ್ಲಿ ಚಾಲನೆ ನೀಡಲಾಯಿತು. 14 ವರ್ಷದೊಳಗಿನ ಬಾಲಕರ ವಿಭಾಗದ ಕ್ರಿಕೆಟ್ ರೋಚಕವಾಗಿತ್ತು. ಮುಖ್ಯ ಅತಿಥಿಯಾಗಿ ಕೆವಿಎಸ್ ಉಪ ಆಯುಕ್ತರು ಡಾ.ಧರ್ಮೇಂದ್ರ ಪಟ್ಲೆ, ಸಹಾಯಕ ಆಯುಕ್ತ ಆರ್ ಪ್ರಮೋದ್ ಸೇರಿ ಇತರರು ಭಾಗಿಯಾಗಿದ್ದರು.
ಇದೇ ವೇಳೆ ಕೆ.ವಿ.ಎಸ್ ಧ್ವಜಾರೋಹಣವನ್ನು ಮುಖ್ಯ ಅತಿಥಿಗಳು ನೆರವೇರಿಸಿದರು. ಪಾತ್ರ ಮತ್ತು ನಾಯಕತ್ವ ಎರಡನ್ನೂ ಅಭಿವೃದ್ಧಿಪಡಿಸುವಲ್ಲಿ ಕ್ರೀಡೆಯ ಮಹತ್ವವನ್ನು ಎತ್ತಿ ತೋರಿಸಿದರು. ಆಟಗಾರರನ್ನು ಹುಮ್ಮಸ್ಸಿನಿಂದ ಸ್ಪರ್ಧಿಸಲು ಪ್ರೋತ್ಸಾಹಿಸಿದರು. ಮುಂಬರುವ ದಿನಗಳಲ್ಲಿ ರೋಚಕ ಕ್ರಿಕೆಟ್ ಪಂದ್ಯಗಳನ್ನು ನೋಡುವ ನಿರೀಕ್ಷೆಯಿದೆ, ಏಕೆಂದರೆ ಭಾಗವಹಿಸುವವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮೈದಾನಕ್ಕೆ ತರುತ್ತಾರೆ ಎಂದು ಅಭಿಪ್ರಾಯಪಟ್ಟರು.
ವೈರಲ್ ನ್ಯೂಸ್
Deepfake Video: ಶುಬ್ ಮನ್ ಗಿಲ್ ಅನ್ನು ದೂಷಿಸಿದ ವಿರಾಟ್; ಡೀಪ್ ಫೇಕ್ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿಯ ಡೀಪ್ ಫೇಕ್ ವಿಡಿಯೋದಲ್ಲಿ (Deepfake Video) ಶುಬ್‌ಮನ್ ಗಿಲ್ ಅವರನ್ನು ದೂಷಿಸುತ್ತಿದ್ದಾರೆ. ಶುಬ್ ಮನ್ ಗಿಲ್‌ಗೆ ಏನು ಕೊರತೆಯಿದೆ ಮತ್ತು ಅವರು ಇನ್ನು ಎಷ್ಟು ದೂರ ಹೋಗಬೇಕಾಗಿದೆ ಎಂಬುದರ ಕುರಿತು ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್ ಮ್ಯಾನ್ (Indian cricket team batsman) ಶುಬ್ ಮನ್ ಗಿಲ್ (Shubman Gill) ಅವರನ್ನು ವಿರಾಟ್ ಕೊಹ್ಲಿ (Virat Kohli) ದೂಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social food) ಭಾರಿ ವೈರಲ್ ಆಗಿದೆ. ಆದರೆ ಇದು ಡೀಪ್ ಫೇಕ್ ವಿಡಿಯೋ (Deepfake Video) ಎನ್ನಲಾಗಿದ್ದರೂ ಇದು ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದೆ.
ವಿರಾಟ್ ಕೊಹ್ಲಿಯು ಈ ಡೀಪ್ ಫೇಕ್ ವಿಡಿಯೋದಲ್ಲಿ ಶುಬ್‌ಮನ್ ಗಿಲ್ ಅವರನ್ನು ದೂಷಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿಯು ಮಾತನಾಡುತ್ತಾ, ಶುಬ್ ಮನ್ ಗಿಲ್‌ಗೆ ಏನು ಕೊರತೆಯಿದೆ ಮತ್ತು ಅವರು ಇನ್ನು ಎಷ್ಟು ದೂರ ಹೋಗಬೇಕಾಗಿದೆ ಎಂಬುದರ ಕುರಿತು ಹೇಳಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋ ಕೃತಕ ಬುದ್ಧಿಮತ್ತೆಯ ತಪ್ಪು ಬಳಕೆ ಮತ್ತು ಅದು ಹೇಗೆ ಅಪಾಯಕಾರಿ ಎಂಬುದರ ಕುರಿತು ಕಳವಳ ವ್ಯಕ್ತಪಡಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಗಮನ ಸೆಳೆದಿರುವ ಎಡಿಟ್ ಮಾಡಿದ ವಿಡಿಯೋದಲ್ಲಿ ಕೊಹ್ಲಿಯು, ನಾನು ಗಿಲ್ ಅವರನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಅವರು ನಿಸ್ಸಂದೇಹವಾಗಿ ಪ್ರತಿಭಾವಂತರು. ಆದರೆ ಭರವಸೆಯನ್ನು ತೋರಿಸುವುದು ಮತ್ತು ದಂತಕಥೆಯಾಗುವುದರ ನಡುವೆ ದೊಡ್ಡ ಅಂತರವಿದೆ ಎಂದು ಹೇಳಿದ್ದಾರೆ.
AI is Dangerous pic.twitter.com/njUvwiwc4t
— Cricketopia (@CricketopiaCom) August 27, 2024
ಇದಲ್ಲದೆ, ಎಡಿಟ್ ಮಾಡಿರುವ ವಿಡಿಯೋದಲ್ಲಿ ನಾಯಕ ಗಿಲ್ ಅವರ ತಂತ್ರದ ಬಗ್ಗೆ ಕೊಹ್ಲಿ ಮಾತನಾಡುವುದನ್ನು ಕಾಣಬಹುದು. ಗಿಲ್ ಅವರ ತಂತ್ರವು ಘನವಾಗಿದೆ. ಆದರೆ ನಾವೇ ಮುಂದೆ ಹೋಗಬಾರದು. ಜನರು ಮುಂದಿನ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾರೆ. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ.. ಒಬ್ಬನೇ ವಿರಾಟ್ ಕೊಹ್ಲಿ.
ಈ ವಿಡಿಯೋವನ್ನು ಆಗಸ್ಟ್ 27 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಅನಂತರ ಇದು ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸುಮಾರು 4,000 ಹೆಚ್ಚು ಲೈಕ್‌ಗಳನ್ನು ಹೊಂದಿದೆ. ಅನೇಕ ಜನರು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: Duleep Trophy: ದುಲೀಪ್ ಟ್ರೋಫಿಯಿಂದ ಹೊರಬಿದ್ದ ಮೊಹಮ್ಮದ್ ಸಿರಾಜ್
ಒಬ್ಬ ಬಳಕೆದಾರ, ಜನರು ಎಷ್ಟೇ ಸೊಕ್ಕಿನವರಾಗಿರಬಹುದು ಆದರೆ ಅವರು ಇದನ್ನು ಎಂದಿಗೂ ಹೇಳುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು , ನೀವು ಎಐ ಎಂದು ಹೇಳದಿದ್ದರೆ, ನಾನು ಶೇ. 95ರಷ್ಟು ನಂಬುತ್ತಿದ್ದೆ ಎಂದಿದ್ದಾರೆ.
ನಾನು ಅರೆ ನಿದ್ದೆಯಲ್ಲಿದ್ದೇನೆ ಮತ್ತು ವಿರಾಟ್ ಈ ರೀತಿ ಮಾತನಾಡುವುದಿಲ್ಲ ಮತ್ತು ಇದು ಅವರ ಧ್ವನಿಯೂ ಅಲ್ಲ ಎಂದು ನನಗೆ ಇನ್ನೂ ತಿಳಿದಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.