IPL 2022 | ಆರ್‌ಸಿಬಿ‌ x ಆರ್‌ಆರ್ ಪಂದ್ಯದಲ್ಲಿ ಗೆದ್ದವರು ಫೈನಲ್‌ಗೆ, ಸೋತವರು ಮನೆಗೆ - Vistara News

ಐಪಿಎಲ್ 2024

IPL 2022 | ಆರ್‌ಸಿಬಿ‌ x ಆರ್‌ಆರ್ ಪಂದ್ಯದಲ್ಲಿ ಗೆದ್ದವರು ಫೈನಲ್‌ಗೆ, ಸೋತವರು ಮನೆಗೆ

ಐಪಿಎಲ್‌ ಮೊದಲ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ರಾಜಸ್ಥಾನ್‌ ರಾಯಲ್ಸ್‌, ಈ ಪಂದ್ಯದಲ್ಲಿ ಗೆದ್ದರೆ 14 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೆ ಏರಲಿದೆ. ಹಾಗೆಯೇ ಆರ್‌ಸಿಬಿ ಕೂಡ ಪಂದ್ಯ ಗೆದ್ದಲ್ಲಿ ನಾಲ್ಕನೇ ಬಾರಿ ಫೈನಲ್‌ಗೇರಲಿದೆ.

VISTARANEWS.COM


on

IPL RCB VS RR
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಐಪಿಎಲ್‌ 15ನೇ ಆವೃತ್ತಿ ಅಂತಿಮ ಹಂತಕ್ಕೆ ತಲುಪಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ (ಮೇ 27) ಸಂಜೆ 7.30ಕ್ಕೆ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ನಡುವೆ ಕ್ವಾಲಿಫೈಯರ್‌-2 ಪಂದ್ಯ ನಡೆಯಲಿದ್ದು, ಗೆದ್ದವರು ಫೈನಲ್‌ಗೆ ತಲುಪಲಿದ್ದಾರೆ.

ಕ್ವಾಲಿಫೈಯರ್‌-1ರಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಸೋತ ರಾಜಸ್ಥಾನ್‌ ರಾಯಲ್ಸ್‌, ಎಲಿಮಿನೇಟರ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್‌ ವಿರುದ್ಧ ಗೆದ್ದ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ನಡುವೆ ಈ ಮ್ಯಾಚ್‌ ಸೆಮಿಫೈನಲ್‌ನಂತಿದ್ದು, ಎರಡೂ ತಂಡಗಳು ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿವೆ.

ಐಪಿಎಲ್‌ ಮೊದಲ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ರಾಜಸ್ಥಾನ್‌ ರಾಯಲ್ಸ್‌, ಈ ಪಂದ್ಯದಲ್ಲಿ ಗೆದ್ದರೆ 14 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೆ ಏರಲಿದೆ. ಹಾಗೆಯೇ ಆರ್‌ಸಿಬಿ ಕೂಡ ಪಂದ್ಯ ಗೆದ್ದಲ್ಲಿ ನಾಲ್ಕನೇ ಬಾರಿ ಫೈನಲ್‌ಗೇರಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದ್ದು, ಗೆಲುವು ಪಡೆದವರು 29ರಂದು ಫೈನಲ್‌ನಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಸೆಣಸಲಿದ್ದಾರೆ.

ಇದುವರೆಗೆ ನಡೆದಿರುವ ಪಂದ್ಯಗಳಲ್ಲಿ ಯಾವ ತಂಡ ಪ್ರಾಬಲ್ಯ ಸಾಧಿಸಿದೆ. ಎರಡೂ ತಂಡಗಳ ಬಲ ಹಾಗೂ ದೌರ್ಬಲ್ಯಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.

  • ಐಪಿಎಲ್‌ ಟಿ20 ಲೀಗ್‌ನಲ್ಲಿ ರಾಜಸ್ಥಾನ್‌, ಬೆಂಗಳೂರು ತಂಡಗಳ ನಡುವೆ ಈವರೆಗೆ 26 ಪಂದ್ಯ ನಡೆದಿದ್ದು, 13ರಲ್ಲಿ ಆರ್‌ಸಿಬಿ ಜಯಗಳಿಸಿದ್ದರೆ, 11ರಲ್ಲಿ ಆರ್‌ಆರ್‌ ಗೆಲುವು ಪಡೆದಿದೆ. 2 ಪಂದ್ಯಗಳಲ್ಲಿ ಫಲಿತಾಂಶ ನಿರ್ಧಾರವಾಗಿಲ್ಲ. ಈ ಬಾರಿ ಆರ್‌ಸಿಬಿ ಹಾಗೂ ಆರ್‌ಆರ್‌ ಲೀಗ್‌ ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆದ್ದಿವೆ.
  • ರಾಜಸ್ಥಾನ್‌ ಪ್ರಧಾನ ಬಲ ಜೋಸ್‌ ಬಟ್ಲರ್‌. ಈ ಆವೃತ್ತಿಯಲ್ಲಿ ಆರ್‌ಆರ್‌ ಪ್ಲೇಆಫ್‌ಗೇರಲು ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಬಟ್ಲರ್‌ 15 ಪಂದ್ಯಗಳಲ್ಲಿ 718 ರನ್‌ ಕಲೆ ಹಾಕಿ ಸೀಸನ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರಾಗಿದ್ದಾರೆ. ಇದರಲ್ಲಿ 3 ಶತಕ, 4 ಅರ್ಧ ಶತಕ ಸೇರಿವೆ.
  • ರಾಜಸ್ಥಾನ್‌ ಬೌಲಿಂಗ್‌ ಪಡೆಯಲ್ಲಿ ಯಜುವೇಂದ್ರ ಚಾಹಲ್‌, ಪ್ರಸಿದ್ಧ ಕೃಷ್ಣ ಪ್ರಮುಖರು. ಈ ಸೀಸನ್‌ನಲ್ಲಿ ಚಾಹಲ್ ಆಡಿದ 15 ಪಂದ್ಯಗಳಲ್ಲಿ 26 ವಿಕೆಟ್‌ ಪಡೆದು ಅತ್ಯಧಿಕ ವಿಕೆಟ್‌ ಗಳಿಸಿದ ಬೌಲರ್‌ ಆಗಿದ್ದಾರೆ. ಪ್ರಸಿದ್ಧ ಕೃಷ್ಣ 15 ಪಂದ್ಯದಲ್ಲಿ 15 ವಿಕೆಟ್‌ ಪಡೆದಿದ್ದಾರೆ.
  • ಈ ಆವೃತ್ತಿಯ ಲೀಗ್‌ ಹಂತದಲ್ಲಿ 14 ಪಂದ್ಯ ಆಡಿದ ರಾಜಸ್ಥಾನ್‌ 6ರಲ್ಲಿ ಗೆದ್ದು 5 ರಲ್ಲಿ ಸೋತಿದೆ. ಕ್ಲಾಲಿಫೈಯರ್‌-1ರಲ್ಲಿ ಗುಜರಾತ್‌ ವಿರುದ್ಧ ಸೋತಿದೆ.
  • ಈ ಬಾರಿ ಬೆಂಗಳೂರಿಗೆ ಸ್ವಲ್ಪ ಅದೃಷ್ಟ ಒಲಿದಿದೆ. ದೆಹಲಿ ತಂಡದ ವಿರುದ್ಧ ಮುಂಬೈ ಗೆಲುವು ಪಡೆದಿದ್ದರಿಂದ ಆರ್‌ಸಿಬಿ ಪ್ಲೇಆಫ್‌ ಸೇರಲು ಸಾಧ್ಯವಾಯಿತು. ಲೀಗ್‌ ಹಂತದಲ್ಲಿ 14 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಪಡೆದು 6ರಲ್ಲಿ ಸೋತಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದು, ಕ್ವಾಲಿಫೈಯರ್‌-2ಗೆ ಅರ್ಹತೆ ಸಾಧಿಸಿದೆ.
  • ಬೆಂಗಳೂರು ಬ್ಯಾಟಿಂಗ್‌ನಲ್ಲಿ ನಾಯಕ ಡುಪ್ಲೆಸಿಸ್‌, ವಿರಾಟ್‌ ಕೊಹ್ಲಿ, ದಿನೇಶ್‌ ಕಾರ್ತಿಕ್‌ ಜತೆಗೆ ಎಲಿಮಿನೇಟರ್‌ ಮ್ಯಾಚ್‌ನ ಶತಕವೀರ ರಜತ್‌ ಪಾಟಿದಾರ್‌ ಪ್ರಮುಖ ಪಾತ್ರ ವಹಿಸಲಿದ್ದಾರೆ.
  • ಬೆಂಗಳೂರು ಬೌಲಿಂಗ್‌ನಲ್ಲಿ ವನಿಂದು ಹಸರಂಗ, ಹರ್ಷಲ್‌ ಪಟೇಲ್‌ ಪ್ರಮುಖರು. ಈ ಸೀಸನ್‌ನಲ್ಲಿ ಹಸರಂಗ ಈವರೆಗೆ ಆಡಿದ 15 ಪಂದ್ಯದಲ್ಲಿ 7.62 ಎಕಾನಮಿಯೊಂದಿಗೆ 25 ವಿಕೆಟ್‌ ಕಬಳಿಸಿ ಅತ್ಯಧಿಕ ವಿಕೆಟ್‌ ಪಡೆದ ಎರಡನೇ ಬೌಲರ್‌ ಆಗಿದ್ದಾರೆ. ಹರ್ಷಲ್‌ ಪಟೇಲ್‌ 14 ಪಂದ್ಯದಲ್ಲಿ 7.56 ಎಕಾನಮಿಯೊಂದಿಗೆ 19 ವಿಕೆಟ್‌ ಪಡೆದಿದ್ದಾರೆ.
  • ರಾಜಸ್ಥಾನ್‌ ಆಟಗಾರ ಜೋಸ್‌ ಬಟ್ಲರ್‌ ಅವರನ್ನು ಆದಷ್ಟು ಬೇಗ ಪೆವಿಲಿಯನ್‌ಗೆ ಸೇರಿಸಿದರೆ ಬೆಂಗಳೂರಿಗೆ ವಿಜಯಾವಕಾಶ ಹೆಚ್ಚಾಗಿದೆ.
  • ಒಟ್ಟಾರೆಯಾಗಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಸಾಧಿಸಲು ನಡೆಯುವ ಕ್ವಾಲಿಫೈಯರ್‌-2 ಪಂದ್ಯ ರಸವತ್ತರವಾಗಿ ಸಾಗುವ ಅವಕಾಶವಿದೆ. ಎಲಿಮೀನೇಟರ್‌ ಪಂದ್ಯದ ಮಾದರಿಯಲ್ಲಿ ಆರ್‌ಸಿಬಿ ವಿಜೃಂಭಿಸಿದರೆ ಗೆಲ್ಲುವುದು ಕಷ್ಟವೇನಲ್ಲ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಐಪಿಎಲ್ 2024

IPL 2024: ರಾಜಸ್ಥಾನ ವಿರುದ್ಧ ಗೆದ್ದು ಬೀಗಿದ ಚೆನ್ನೈ; ಪ್ಲೇಆಫ್‌ ಆಸೆ ಜೀವಂತ, ಆರ್‌ಸಿಬಿಗೆ ಹೆಚ್ಚಿದ ಒತ್ತಡ

IPL 2024: ರಾಜಸ್ಥಾನ ರಾಯಲ್ಸ್ ಸಿಎಸ್‌ಕೆ ಗೆಲುವಿನೊಂದಿಗೆ ಆರ್‌ಸಿಬಿ (RCB) ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದು, ಭಾನುವಾರವೇ (ಮೇ 12) ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆಲ್ಲುವ ಜತೆಗೆ ಕೊನೆಯ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ಗೆಲ್ಲಲೇಬೇಕಿದೆ. ಇದರೊಂದಿಗೆ ಬೇರೆ ತಂಡಗಳ ಸೋಲು-ಗೆಲುವು, ರನ್‌ರೇಟ್‌ ಲೆಕ್ಕಾಚಾರವೂ ನಿರ್ಣಾಯಕವಾಗಲಿದೆ.

VISTARANEWS.COM


on

IPL 2024
Koo

ಚೆನ್ನೈ: ಪ್ರಸಕ್ತ ಐಪಿಎಲ್‌ ಟೂರ್ನಿಯ (IPL 2024) ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ಅಂತರಿಂದ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸಿಎಸ್‌ಕೆ ಗೆಲುವಿನೊಂದಿಗೆ ಆರ್‌ಸಿಬಿ (RCB) ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದು, ಭಾನುವಾರವೇ (ಮೇ 12) ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆಲ್ಲುವ ಜತೆಗೆ ಕೊನೆಯ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ಗೆಲ್ಲಲೇಬೇಕಿದೆ. ಇದರೊಂದಿಗೆ ಬೇರೆ ತಂಡಗಳ ಸೋಲು-ಗೆಲುವು, ರನ್‌ರೇಟ್‌ ಲೆಕ್ಕಾಚಾರವೂ ನಿರ್ಣಾಯಕವಾಗಲಿದೆ.

ರಾಜಸ್ಥಾನ ಸಾಧಾರಣ ಮೊತ್ತ

ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟವಾಡಿರುವ ರಾಜಸ್ಥಾನ ರಾಯಲ್ಸ್‌ ತಂಡವು ಸಿಎಸ್‌ಕೆ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಸಾಧಾರಣ ಮೊತ್ತ ಪೇರಿಸಿತು. ನಿಗದಿತ 20 ಓವರ್‌ಗಳಲ್ಲಿ ಆರ್‌ಆರ್‌ 5 ವಿಕೆಟ್‌ ಕಳೆದುಕೊಂಡು ಕೇವಲ 141 ರನ್‌ ಗಳಿಸಲಷ್ಟೇ ಶಕ್ತವಾಯಿತು. ರಿಯಾನ್‌ ಪರಾಗ್‌ 47 ಹಾಗೂ ಧ್ರುವ್‌ ಜುರೆಲ್‌ 28 ಹೊರತುಪಡಿಸಿ ಯಾವೊಬ್ಬ ಆಟಗಾರನೂ ಸ್ಫೋಟಕ ಬ್ಯಾಟಿಂಗ್‌ ನಡೆಸದ ಕಾರಣ ಸಾಧಾರಣ ಮೊತ್ತ ದಾಖಲಾಯಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್‌ಕೆ 16 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಸಿಎಸ್‌ಕೆ ಪರ ಉತ್ತಮವಾಗಿ ಆಡಲು ರಚಿನ್‌ ರವೀಂದ್ರ ಮತ್ತೆ ವಿಫಲರಾದರು. ರಚಿನ್‌ ರವೀಂದ್ರ 27 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ಡೆರಿಲ್ ಮಿಚೆಲ್‌ 22, ಮೋಯಿನ್‌ ಅಲಿ 10, ಶಿವಂ ದುಬೆ 18 ರನ್‌ ಗಳಿಸಿದರು. ನಾಯಕನ ಆಟವಾಡಿದ ಋತುರಾಜ್‌ ಗಾಯಕ್ವಾಡ್‌ 42 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಆಡಿದ 13 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಗಳಿಸಿದ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಜತೆಗೆ ಪ್ಲೇಆಫ್‌ ಕನಸಿಗೆ ಹತ್ತಿರವಾಯಿತು. ಮೇ 18ರಂದು ಸಿಎಸ್‌ಕೆ ಆರ್‌ಸಿಬಿ ವಿರುದ್ಧ ಆಡಲಿದ್ದು, ಗೆಲುವು ಸಾಧಿಸಿದರೆ ಪ್ಲೇಆಫ್‌ಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಆರ್‌ಸಿಬಿ ವಿರುದ್ಧ ಸೋಲನುಭವಿಸಿದರೆ ರನ್‌ರೇಟ್‌ ಲೆಕ್ಕಾಚಾರ ಆಧಾರವಾಗಲಿದೆ.

ಸಂಕ್ಷಿಪ್ತ ಸ್ಕೋರ್‌

ರಾಜಸ್ಥಾನ ರಾಯಲ್ಸ್‌ 20 ಓವರ್‌ಗಳಲ್ಲಿ 141/5
(ರಿಯಾನ್‌ ಪರಾಗ್‌ 47, ಧ್ರುವ್‌ ಜುರೆಲ್‌ 28, ಸಮರ್‌ಜೀತ್‌ ಸಿಂಗ್‌ 26ಕ್ಕೆ 3)

ಸಿಎಸ್‌ಕೆ 18.2 ಓವರ್‌ಗಳಲ್ಲಿ 145/5
(ಋತುರಾಜ್‌ ಗಾಯಕ್ವಾಡ್‌ 42, ರಚಿನ್‌ ರವೀಂದ್ರ 27, ಆರ್.ಅಶ್ವಿನ್‌ 35/2)

ಇದನ್ನೂ ಓದಿ: IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

Continue Reading

ಕ್ರಿಕೆಟ್

IPL 2024: ಬೆಂಗಳೂರಲ್ಲಿಂದು ಆರ್‌ಸಿಬಿ, ಡೆಲ್ಲಿ ನಿರ್ಣಾಯಕ ಪಂದ್ಯ; ಮಳೆ ಅಡ್ಡಿ ಆಗತ್ತಾ ? ಇಲ್ಲಿದೆ ರಿಪೋರ್ಟ್

IPL 2024: ಆಡಿದ 12 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಆರ್‌ಸಿಬಿಯು ಪ್ಲೇಆಫ್‌ ತಲುಪಲು ಭಾನುವಾರ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ. ಗೆಲುವು ಸಾಧಿಸದಿದ್ದರೆ, ಟೂರ್ನಿಯಿಂದಲೇ ಆರ್‌ಸಿಬಿ ಹೊರಬೀಳಲಿದೆ. ಹಾಗಾಗಿ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯವು ಆರ್‌ಸಿಬಿಗೆ ನಿರ್ಣಾಯಕ ಎನಿಸಿದೆ.

VISTARANEWS.COM


on

IPL 2024
Koo

ಬೆಂಗಳೂರು: ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯು (IPL 2024) ದಿನೇದಿನೆ ಹೆಚ್ಚು ರೋಚಕವಾಗುತ್ತಿದೆ. ಪ್ಲೇ ಆಫ್‌, ರನ್‌ರೇಟ್‌, ಎದುರಾಳಿ ತಂಡದ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಅದರಲ್ಲೂ, ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಪ್ಲೇಆಫ್‌ಗೇರಲು ಭಾನುವಾರ ಅಗ್ನಿಪರೀಕ್ಷೆ ಎದುರಿಸುತ್ತಿದೆ. ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಮಧ್ಯೆ ನಿರ್ಣಾಯಕ ಪಂದ್ಯ ನಡೆಯಲಿದ್ದು, ಪ್ಲೇಆಫ್‌ಗೇರಲು ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಇನ್ನು, ಆರ್‌ಸಿಬಿ, ಡೆಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ವೆದರ್‌ ರಿಪೋರ್ಟ್‌ ಹೇಳುವುದೇನು?

ಅಕ್ಯುವೆದರ್‌ (Accuweather) ವರದಿ ಪ್ರಕಾರ, ಬೆಂಗಳೂರಿನಲ್ಲಿ ಭಾನುವಾರ ಸಂಜೆ ಮೋಡಿ ಕವಿದ ವಾತಾವರಣ ಇರಲಿದೆ ಎಂದು ತಿಳಿದುಬಂದಿದೆ. ಮಳೆ ಬರುವ ಸಾಧ್ಯತೆ ಕಡಿಮೆ ಇದೆ ಎಂದು ವರದಿ ತಿಳಿಸಿದೆ. ಮಳೆ ಬರುವ ಸಾಧ್ಯತೆ ಶೇ.50-60ರಷ್ಟು ಕಡಿಮೆ ಇದೆ. ಇನ್ನು, ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಗಂಟೆಗೆ 13 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ. ರಾಜ್ಯ ರಾಜಧಾನಿಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಸಂಜೆ ಮಳೆ ಬಂದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಹೇಗಿದೆ ಪಿಚ್?‌

ಚಿಕ್ಕದಾದ ಬೌಂಡರಿ ಲೈನ್, ಫ್ಲ್ಯಾಟ್‌ ಪಿಚ್‌ ಇರುವ ಕಾರಣ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟರ್‌ಗಳ ಸ್ವರ್ಗ ಎಂದೇ ಹೇಳಲಾಗುತ್ತದೆ. ಹಾಗಾಗಿ, ಆರ್‌ಸಿಬಿ ಹಾಗೂ ಡೆಲ್ಲಿ ಪಂದ್ಯದಲ್ಲೂ ರನ್‌ ಮಳೆ ಸುರಿಯುವ ಸಾಧ್ಯತೆ ಇದೆ. ಪಿಚ್‌ ಸ್ಪಿನ್ನರ್‌ಗಳಿಗಿಂತ ಪೇಸರ್‌ಗಳಿಗೆ ಹೆಚ್ಚು ಅನುಕೂಲವಾಗಿದೆ. ಇನ್ನು ಕಳೆದ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಆರ್‌ಸಿಬಿಯು ಗುಜರಾತ್‌ ಟೈಟನ್ಸ್‌ ವಿರುದ್ಧ ಭರ್ಜರಿ ಜಯ ಗಳಿಸಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಅತ್ತ, ಆರ್‌ಸಿಬಿಯನ್ನು ತವರಿನಲ್ಲೇ ಮಣಿಸುವ ಮೂಲಕ ಪ್ಲೇಆಫ್‌ ಹಾದಿ ಸುಗಮ ಮಾಡಿಕೊಳ್ಳುವ ಯೋಜನೆಯನ್ನು ಡೆಲ್ಲಿ ಕ್ಯಾಪಿಟಲ್ಸ್‌ ಹಾಕಿಕೊಂಡಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ

ಆಡಿದ 12 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಆರ್‌ಸಿಬಿಯು ಪ್ಲೇಆಫ್‌ ತಲುಪಲು ಭಾನುವಾರ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ. ಗೆಲುವು ಸಾಧಿಸದಿದ್ದರೆ, ಟೂರ್ನಿಯಿಂದಲೇ ಆರ್‌ಸಿಬಿ ಹೊರಬೀಳಲಿದೆ. ಡೆಲ್ಲಿ ವಿರುದ್ಧ ಗೆದ್ದು, ಉಳಿದ ತಂಡಗಳ ಸೋಲು-ಗೆಲುವು, ರನ್‌ರೇಟ್‌ ಲೆಕ್ಕಾಚಾರದಲ್ಲಿರುವ ಆರ್‌ಸಿಬಿಯು ಕಳೆದ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಕಂಡಿರುವ ಗೆಲುವು, ತವರಿನ ಅಭಿಮಾನಿಗಳ ಬಲದೊಂದಿಗೆ ಕಣಕ್ಕಿಳಿಯುತ್ತಿದೆ. ಭಾನುವಾರ ಮಧ್ಯಾಹ್ನ ರಾಜಸ್ಥಾನ ರಾಯಲ್ಸ್‌ ಹಾಗೂ ಸಿಎಸ್‌ಕೆ ಪಂದ್ಯ ನಡೆಯಲಿದ್ದು, ಸಿಎಸ್‌ಕೆ ಸೋಲಿಗಾಗಿ ಆರ್‌ಸಿಬಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

Continue Reading

ಪ್ರಮುಖ ಸುದ್ದಿ

Sanjiv Goenka: ರಾಹುಲ್‌ಗೆ ಬೈದ ಗೋಯೆಂಕಾ; ಈ ಹಿಂದೆ ಧೋನಿಯನ್ನೇ ಕ್ಯಾಪ್ಟನ್ಸಿಯಿಂದ ತೆಗೆದಿದ್ದರು!

Sanjiv Goenka: ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಸಂಜೀವ್‌ ಗೋಯೆಂಕಾ ಮಾಲೀಕತ್ವದ ಎಲ್‌ಎಸ್‌ಜಿಯು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಎಲ್‌ಎಸ್‌ಜಿ ಹೀನಾಯವಾಗಿ ಸೋತ ಬಳಿಕ ನಾಯಕ ರಾಹುಲ್‌ ಅವರಿಗೆ ಬೈದಿದ್ದಾರೆ. ಈ ಕುರಿತು ಗೋಯೆಂಕಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ತುಸು ಮುಂಗೋಪಿಯಾಗಿರುವ ಸಂಜೀವ್‌ ಗೋಯೆಂಕಾ ಅವರು 2017ರಲ್ಲೂ ಧೋನಿ ಅವರನ್ನೇ ನಾಯಕತ್ವದಿಂದ ವಜಾಗೊಳಿಸಿದ್ದರು.

VISTARANEWS.COM


on

Sanjiv Goenka
Koo

ನವದೆಹಲಿ: ಸನ್‌ ರೈಸರ್ಸ್‌ ಹೈದರಾಬಾದ್‌ (Sun Risers Hyderabad) ತಂಡದ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಮಹತ್ವದ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡ ಬಳಿಕ ಎಲ್‌ಎಸ್‌ಜಿ ಮಾಲೀಕ ಸಂಜೀವ್‌ ಗೋಯೆಂಕಾ (Sanjiv Goenka) ಅವರು ನಾಯಕ ಕೆ.ಎಲ್.ರಾಹುಲ್‌ (KL Rahul) ಜತೆ ಬಹಿರಂಗವಾಗಿಯೇ ವಾಗ್ವಾದ ನಡೆಸಿದ, ಟೀಕಿಸಿದ ವಿಡಿಯೊ ವೈರಲ್‌ ಆಗಿದೆ. ಅಷ್ಟೇ ಅಲ್ಲ, ಕೆ.ಎಲ್‌.ರಾಹುಲ್‌ ಅವರನ್ನು ಎಲ್‌ಎಸ್‌ಜಿ ನಾಯಕತ್ವದಿಂದ ವಜಾಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಸಂಜೀವ್‌ ಗೋಯೆಂಕಾ, 7 ವರ್ಷದ ಹಿಂದೆ ಮಹೇಂದ್ರ ಸಿಂಗ್‌ ಧೋನಿ (Mahendra Singh Dhoni) ಅವರನ್ನೇ ನಾಯಕತ್ವದಿಂದ ವಜಾಗೊಳಿಸಿದ್ದರು. ಧೋನಿ ನಾಯಕತ್ವವನ್ನೇ ಪ್ರಶ್ನಿಸಿ ಅವರು ಇಂತಹ ತೀರ್ಮಾನ ತೆಗೆದುಕೊಂಡಿದ್ದರು.

ಹೌದು, 2017ರಲ್ಲಿ ಸಂಜೀವ್‌ ಗೋಯೆಂಕಾ ಅವರು ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ (RPS) ತಂಡದ ಮಾಲೀಕರಾಗಿದ್ದರು. ಅವರು ಇದೇ ಆವೃತ್ತಿಯ ಐಪಿಎಲ್‌ನಲ್ಲಿ ಧೋನಿ ಅವರನ್ನು ನಾಯಕತ್ವದಿಂದ ವಜಾಗೊಳಿಸಿ ಸ್ಟೀವ್‌ ಸ್ಮಿತ್‌ ಅವರನ್ನು ಆರ್‌ಪಿಎಸ್‌ ನಾಯಕನನ್ನಾಗಿ ಘೋಷಿಸಿದರು. 2016ನೇ ಆವೃತ್ತಿಯ ಕೊನೆಗೆ ಧೋನಿ ನಾಯಕತ್ವದಲ್ಲಿ ಆರ್‌ಪಿಎಸ್‌ 7ನೇ ಸ್ಥಾನ ಪಡೆದ ಕಾರಣದಿಂದಾಗಿ ಗೋಯೆಂಕಾ ಅವರು ಧೋನಿ ಅವರನ್ನು ಮುಂದಿನ ಆವೃತ್ತಿಯಲ್ಲಿ ನಾಯಕತ್ವದಿಂದ ವಜಾಗೊಳಿಸಿದ್ದರು.

ಸಂಜೀವ್‌ ಗೋಯೆಂಕಾ ಅವರು 2017ರಲ್ಲಿ ಸ್ಟೀವ್‌ ಸ್ಮಿತ್‌ ಅವರಿಗೆ ನಾಯಕತ್ವ ನೀಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಮಹೇಂದ್ರ ಸಿಂಗ್‌ ಧೋನಿ ಅಭಿಮಾನಿಗಳು ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, 2017ರಲ್ಲಿ ಸ್ಟೀವ್‌ ಸ್ಮಿತ್‌ ನಾಯಕತ್ವದಲ್ಲಿ ಆರ್‌ಪಿಎಸ್‌ ತಂಡವು ಫೈನಲ್‌ ತಲುಪಿತ್ತು. ಆದರೆ, ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಪಿಎಸ್‌ ಕೇವಲ ಒಂದು ರನ್‌ನಿಂದ ಸೋತು ರನ್ನರ್‌ ಸ್ಥಾನಕ್ಕೆ ತೃಪ್ತಿಕೊಳ್ಳಬೇಕಾಯಿತು. ಸಿಎಸ್‌ಕೆ ಬ್ಯಾನ್‌ ಆದ ಕಾರಣ 2016, 2017ರಲ್ಲಿ ಆರ್‌ಪಿಎಸ್‌ ಪರವಾಗಿ ಆಡಿದ್ದ ಧೋನಿ, 2018ರಲ್ಲಿ ಸಿಎಸ್‌ಕೆಗೆ ಮರಳಿದರು. ಮಹತ್ವದ ವಿಚಾರ ಎಂದರೆ, ಧೋನಿ ನಾಯಕತ್ವದಲ್ಲಿ 2018ರಿಂದ 2023ರ ಅವಧಿಯಲ್ಲಿ ಸಿಎಸ್‌ಕೆ ಮೂರು ಬಾರಿ ಚಾಂಪಿಯನ್‌ ಆಯಿತು.

ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಸಂಜೀವ್‌ ಗೋಯೆಂಕಾ ಮಾಲೀಕತ್ವದ ಎಲ್‌ಎಸ್‌ಜಿಯು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಎಲ್‌ಎಸ್‌ಜಿ ಹೀನಾಯವಾಗಿ ಸೋತ ಬಳಿಕ ನಾಯಕ ರಾಹುಲ್‌ ಅವರಿಗೆ ಬೈದಿದ್ದಾರೆ. ಈ ಕುರಿತು ಗೋಯೆಂಕಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟಾದರೂ, ಮೊಂಡುತನ ಬಿಡದ ಗೋಯೆಂಕಾ, ಪ್ರಸಕ್ತ ಸೀಸನ್‌ನ ಕೊನೆಯ ಎರಡು ಪಂದ್ಯಗಳಿಗೆ ರಾಹುಲ್‌ ಬದಲಿಗೆ ನಿಕೋಲಸ್‌ ಪೂರನ್‌ ಅವರಿಗೆ ನಾಯಕತ್ವ ವಹಿಸಲಿದ್ದಾರೆ ಎನ್ನಲಾಗುತ್ತಿದೆ. 2025ರಲ್ಲೂ ಬೇರೆ ನಾಯಕನನ್ನು ನೇಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral Video: ಪಂದ್ಯ ಸೋತ ಸಿಟ್ಟಿನಲ್ಲಿ ರಾಹುಲ್​ಗೆ ಮೈದಾನದಲ್ಲೇ ಬೈದ ಲಕ್ನೋ ತಂಡದ ಮಾಲಿಕ

Continue Reading

ಐಪಿಎಲ್ 2024

IPL 2024: ಆರ್‌ಸಿಬಿಯ ಪ್ಲೇ ಆಫ್ ಕನಸು ಜೀವಂತ; ಸೋಲಿನೊಂದಿಗೆ ರೇಸ್‌ನಿಂದ ಹೊರಬಿದ್ದ ಪಂಜಾಬ್‌: ಹೀಗಿದೆ ಹೊಸ ಅಂಕಪಟ್ಟಿ

IPL 2024: ಗುರುವಾರ ರಾತ್ರಿ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 60 ರನ್ನುಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಕೊಂಡಿದೆ. ಇತ್ತ ಎಂಟು ಅಂಕಗಳನ್ನು ಕಲೆ ಹಾಕಿರುವ ಪಂಜಾಬ್‌ ಈ ಸೋಲಿನೊಂದಿಗೆ ಪ್ಲೇ ಆಫ್‌ ರೇಸ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದೆ.

VISTARANEWS.COM


on

IPL 2024
Koo

ಧರ್ಮಶಾಲಾ: ಗುರುವಾರ ರಾತ್ರಿ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ನಡೆದ ಐಪಿಎಲ್​ ಪಂದ್ಯದಲ್ಲಿ (IPL 2024) ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bengaluru) ತಂಡ 60 ರನ್ನುಗಳಿಂದ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಸೋಲಿಸಿ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಕೊಂಡಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಮುಂದುವರಿದಿದೆ. ಇತ್ತ ಎಂಟು ಅಂಕಗಳನ್ನು ಕಲೆ ಹಾಕಿರುವ ಪಂಜಾಬ್‌ ಈ ಸೋಲಿನೊಂದಿಗೆ ಪ್ಲೇ ಆಫ್‌ ರೇಸ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದೆ.

ಸದ್ಯ ಕೋಲ್ಕತ್ತಾ ನೂಟ್‌ ರೈಡರ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಲಾ 16 ಅಂಕಗಳನ್ನು ಕಲೆ ಹಾಕಿ ಮೊದಲೆರಡು ಸ್ಥಾನಗಳಲ್ಲಿವೆ. ಇವೆರಡು ಪ್ಲೇ ಆಫ್​ ಪ್ರವೇಶಿಸುವುದು ಬಹುತೇಕ ಖಚಿತ. ಇತ್ತ 14 ಅಂಕ ಕಲೆ ಹಾಕಿರುವ ಹೈದರಾಬಾದ್​ಗೆ ಇನ್ನೊಂದು ಪಂದ್ಯ ಗೆದ್ದರೆ ಸಾಕು. ಪ್ಲೇ ಆಫ್‌ ಪ್ರವೇಶಿಸುವ ನಾಲ್ಕನೇ ತಂಡಕ್ಕಾಗಿ ತೀವ್ರ ಪೈಪೋಟಿ ಕಂಡು ಬರುವ ನಿರೀಕ್ಷೆ ಇದೆ. ಸದ್ಯ ಐದನೇ ಗೆಲುವು ಸಾಧಿಸಿರುವ ಆರ್‌ಸಿಬಿ, ಡೆಲ್ಲಿ, ಚೆನ್ನೈ ಮತ್ತು ಲಕ್ನೋ ನಡುವೆ ತೀವ್ರ ಸ್ಪರ್ಧೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​118316 (+1.453)
ರಾಜಸ್ಥಾನ್​ ರಾಯಲ್ಸ್​​​118316 (+0.476)
ಹೈದರಾಬಾದ್​127514 (+0.406)
ಚೆನ್ನೈ116512 (+0.700)
ಡೆಲ್ಲಿ126612 (-0.316)
ಲಕ್ನೋ126612 (-0.769)
ಆರ್​ಸಿಬಿ125710 (+0.217)
ಮುಂಬೈ12488 (-0.212)
ಪಂಜಾಬ್‌12488 (-0.423)
ಗುಜರಾತ್​11478 (-1.320)

ಆರ್‌ಸಿಬಿಗೆ ಭರ್ಜರಿ ಜಯ

ಆರಂಭದಲ್ಲಿ ಸತತ ಸೋಲಿಗೆ ತುತ್ತಾಗಿದ್ದ ಆರ್‌ಸಿಬಿ ಭರ್ಜರಿ ಕಂಬ್ಯಾಕ್‌ ಮಾಡಿದೆ. ಸತತ ಗೆಲುವಿನ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಗುರುವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ವಿರಾಟ್‌ ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಶತಕದ ಅಂಚಿನಲ್ಲಿ ಎಡವಿದ ಅವರು 47 ಬಾಲ್‌ಗೆ 92 ರನ್‌ ಕಲೆ ಹಾಕಿದರು. ಇದು 6 ಭರ್ಜರಿ ಸಿಕ್ಸರ್‌ ಮತ್ತು 7 ಫೋರ್‌ ಅನ್ನು ಒಳಗೊಂಡಿತ್ತು. ಇವರಿಗೆ ಉತ್ತಮ ಸಾಥ್‌ ನೀಡಿದ ರಜತ್‌ ಪಾಟಿದಾರ್‌ ಕೇವಲ 23 ಎಸೆತಗಳಲ್ಲಿ 55 ರನ್‌ ಚಚ್ಚಿದರು (6 ಸಿಕ್ಸ್‌, 3 ಫೋರ್‌).

ಇನ್ನು ಬೌಲಿಂಗ್‌ನಲ್ಲಿಯೂ ಉತ್ತಮ ದಾಳಿ ಸಂಘಟಿಸಿದ ಬೆಂಗಳೂರು ತಂಡ ಪಂಜಾಬ್‌ ತಂಡವನ್ನು 17 ಓವರ್‌ಗೆ 181 ರನ್‌ಗೆ ಆಲೌಟ್‌ ಮಾಡಿತು. ಆರ್​ಸಿಬಿ ಪರ ಮೊಹಮ್ಮಸ್ ಸಿರಾಜ್​ 3 ವಿಕೆಟ್​, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್​ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.

ಇದನ್ನೂ ಓದಿ: IPL 2024 : ಲಕ್ನೊ ತಂಡದ ನಾಯಕನ ಸ್ಥಾನದಿಂದ ರಾಹುಲ್ ಔಟ್​?

Continue Reading
Advertisement
IPL 2024
ಪ್ರಮುಖ ಸುದ್ದಿ1 min ago

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

Prajwal Revanna Case
ಕರ್ನಾಟಕ19 mins ago

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Hoarding
ಸಂಪಾದಕೀಯ41 mins ago

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

Sushil Kumar Modi
ಪ್ರಮುಖ ಸುದ್ದಿ41 mins ago

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

Tejasvi Surya
ದೇಶ51 mins ago

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

IPL 2024
ಪ್ರಮುಖ ಸುದ್ದಿ58 mins ago

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

Vidyarthi Vidyarthiniyare Movie
ಕರ್ನಾಟಕ1 hour ago

Vidyarthi Vidyarthiniyare Movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಔಟ್; ಧುಮ್ಮಿಕ್ಕಿದ ಹರೆಯದ ತೊರೆ!

Road Accident Head on collision between bikes One person died on the spot
ಉತ್ತರ ಕನ್ನಡ1 hour ago

Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Lok Sabha Election
ದೇಶ2 hours ago

Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Award Ceremony
ಬೆಂಗಳೂರು2 hours ago

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail Revanna will not leave the country condition imposed by the court
ಕ್ರೈಂ5 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ6 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ6 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ6 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ7 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ13 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ18 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ19 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌