Ind vs wi : ಬಿಸಿಸಿಐ ಆಯ್ಕೆಗಾರರಿಗೆ ಇನ್‌ಸ್ಟಾ ಸ್ಟೋರಿ ಮೂಲಕ ಖಡಕ್‌ ಉತ್ತರ ಕೊಟ್ಟ ಸರ್ಫರಾಜ್‌! Vistara News
Connect with us

ಕ್ರಿಕೆಟ್

Ind vs wi : ಬಿಸಿಸಿಐ ಆಯ್ಕೆಗಾರರಿಗೆ ಇನ್‌ಸ್ಟಾ ಸ್ಟೋರಿ ಮೂಲಕ ಖಡಕ್‌ ಉತ್ತರ ಕೊಟ್ಟ ಸರ್ಫರಾಜ್‌!

ತಮ್ಮ ಅಮೋಘ ಇನಿಂಗ್ಸ್‌ಗಳ ವಿಡಿಯೊವನ್ನು ಹಾಕುವ ಮೂಲಕ ವಿಂಡೀಸ್‌ ಪ್ರವಾಸಕ್ಕೆ (Ind vs wi) ತಮ್ಮನ್ನು ಅಯ್ಕೆ ಮಾಡದವರಿ ಸರ್ಪರಾಜ್‌ ಖಾನ್‌ ತಿರುಗೇಟು ನೀಡಿದ್ದಾರೆ.

VISTARANEWS.COM


on

Sarfaraz Khan
Koo

ಮುಂಬಯಿ: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ (Ind vs wi) 16 ಸದಸ್ಯರ ಭಾರತ ತಂಡವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಕೆರಿಬಿಯನ್‌ ನಾಡಿನಲ್ಲಿ ಭಾರತ ತಂಡವು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅದು ಮುಂದಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಋತುವಿಗೆ ಭಾರತ ತಂಡಕ್ಕೆ ಮೊದಲ ಸರಣಿಯಾಗಿದೆ. ಈ ತಂಡಕ್ಕೆ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮತ್ತು ಮುಖೇಶ್ ಕುಮಾರ್ ಸೇರ್ಪಡೆಗೊಂಡಿದ್ದಾರೆ. ಆದರೆ, ಕಳೆದ ಮೂರು ರಣಜಿ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸರ್ಫರಾಜ್‌ಖಾನ್‌ ಕರೆ ಹೋಗಿಲ್ಲ. ಇದರಿಂದ ಅವರು ಸಾಕಷ್ಟು ಬೇಸರಗೊಂಡಿದ್ದು ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಆಯ್ಕೆಗಾರರಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.

ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮತ್ತು ಮುಖೇಶ್ ಕುಮಾರ್ ಅವರಂತಹ ಯುವ ಆಟಗಾರರು ಕರೆಯನ್ನು ಸ್ವೀಕರಿಸಿದರೂ, ಸರ್ಫರಾಜ್ ಖಾನ್ ಅವರ ಬಗೆಗಿನ ನಿರ್ಲಕ್ಷ್ಯ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಪ್ರಶ್ನಾರ್ಥಕ ಸಂಗತಿಯಾಗಿದೆ. ಹಿರಿಯ ಆಟಗಾರರನೇಕರು ಅದನ್ನು ಪ್ರಶ್ನಿಸಿದ್ದಾರೆ. ಇವೆಲ್ಲದರ ನಡುವೆ ಮೂರನೇ ಬಾರಿಗೆ ತಂಡದಲ್ಲಿ ಅವಕಾಶ ಪಡೆಯಲು ವಿಫಲಗೊಂಡ ಸರ್ಫರಾಜ್ ಇನ್‌ಸ್ಟಾಗ್ರಾಮ್‌ ಸ್ಟೋರಿ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಖಡಕ್‌ ಸಂದೇಶವನ್ನು ರವಾನಿಸಿದ್ದಾರೆ.

ಸ್ಥಿರ ಪ್ರದರ್ಶನ

ಸರ್ಫರಾಜ್ ಖಾನ್ ದೇಶೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅವರು 2019-20ರ ಋತುವಿನಲ್ಲಿ 154 ಸರಾಸರಿಯಲ್ಲಿ 928 ರನ್ ಗಳಿಸಿದ್ದರು. ಮುಂದಿನ ಋತುವಿನಲ್ಲಿ ಮುಂಬಯಿ ತಂಡದ ಬ್ಯಾಟರ್‌ 122.75 ಸರಾಸರಿಯಲ್ಲಿ 982 ರನ್ ಗಳಿಸಿದ್ದರು. 2022/23ರಲ್ಲಿ 556 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಮೂರು ಶತಕಗಳನ್ನೂ ಬಾರಿಸಿದ್ದರು. 35 ಇನಿಂಗ್ಸ್‌ಗಳಲ್ಲಿ 79.65 ಸರಾಸರಿಯಲ್ಲಿ 3505 ರನ್ ಗಳಿಸಿದ್ದಾರೆ ಮತ್ತು 13 ಶತಕಗಳನ್ನು ಗಳಿಸಿದ್ದಾರೆ. ಈ ಅತ್ಯುತ್ತಮ ಬ್ಯಾಟಿಂಗ್‌ ಅಂಕಿಅಂಶಗಳ ಹೊರತಾಗಿಯೂ, ಸರ್ಫರಾಜ್ ಭಾರತೀಯ ಟೆಸ್ಟ್ ತಂಡದ ಅಂತಿಮ ಆಯ್ಕೆಯಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

ಸರ್ಫರಾಜ್ ಖಾನ್ ಶುಕ್ರವಾರ ತಮ್ಮ ರಣಜಿ ಟ್ರೋಫಿ ಋತುವಿನ ಮುಖ್ಯಾಂಶಗಳ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಾಗಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಆಯ್ಕೆದಾರರಿಗೆ ತೀಕ್ಷ್ಣ ಸಂದೇಶವನ್ನು ಕಳುಹಿಸಿದ್ದಾರೆ. ಅದರ ಮೇಲೆ ಯಾವುದೇ ಶೀರ್ಷಿಕೆ ಇರಲಿಲ್ಲ. ಯಾವುದೂ ಅಗತ್ಯವೂ ಇಲ್ಲ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಅಭಿಪ್ರಾಯ.

ಸರ್ಫರಾಜ್ ಖಾನ್ ಅವರನ್ನು ಪದೇ ಪದೇ ಅವಕಾಶ ವಂಚಿತರನ್ನಾಗಿ ಮಾಡುವ ನಿರ್ಧಾರಗಳನ್ನು ಭಾರತ ತಂಡದ ಮಾಜಿ ನಾಯಕ ಸುನೀಲ್‌ ಗವಾಸ್ಕರ್‌ ಪ್ರಶ್ನಿಸಿದ್ದಾರೆ. ಯಾವ ಮಾನದಂಡ ಬಳಸಿ ಆಟಗಾರರನ್ನು ತಂಡಕ್ಕೆ ಸೇರಿಸುತ್ತಿದ್ದೀರಿ ಎಂಬುದಾಗಿ ಪ್ರಶ್ನಿಸಿದ್ದಾರೆ.

ಸರ್ಫರಾಜ್ ಖಾನ್ ಕಳೆದ ಮೂರು ಋತುಗಳಲ್ಲಿ 100 ಸರಾಸರಿಯಲ್ಲಿ ಸ್ಕೋರ್ ಮಾಡುತ್ತಿದ್ದಾರೆ. ತಂಡಕ್ಕೆ ಆಯ್ಕೆಯಾಗಲು ಅವರು ಇನ್ನು ಏನು ಮಾಡಬೇಕು? ಅವರು ಆಡುವ ಇಲೆವೆನ್‌ನಲ್ಲಿ ಸ್ಥಾನ ಪಡೆಯದೇ ಹೋಗಬಹುದು. ಆದರೆ, ಆದರೆ ನೀವು ಅವರನ್ನು ತಂಡಕ್ಕೆ ಆಯ್ಕೆ ಮಾಡದೇ ಇರುವುದು ಸರಿಯಲ್ಲ. ಅವರನ್ನು ಆಯ್ಕೆ ಮಾಡಿಲ್ಲ ಎಂದಾದರೆ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಲು ಯಾವ ಮಾನದಂಡ ಬಳಸಲಾಗುತ್ತದೆ ಎಂಬುದನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಗವಾಸ್ಕರ್‌ ಸ್ಪೋರ್ಟ್ಸ್ ಟುಡೇ ಜತೆ ಮಾತನಾಡುತ್ತಾ ಅಭಿಪ್ರಾಯ ಹೇಳಿದ್ದರು.

ರಣಜಿ ಟ್ರೋಫಿಯ ಅತ್ಯುತ್ತಮ ಪ್ರದರ್ಶನಗಳನ್ನು ಗುರುತಿಸಲಾಗುತ್ತಿದೆ ಎಂಬುದನ್ನು ಕ್ರಿಕೆಟ್‌ ಜಗತ್ತಿಗೆ ತಿಳಿಸುವ ಅಗತ್ಯವಿದೆ. ಪರಿಗಣಿಸದೇ ಹೋದರೆ ಆಡಿಸುವುದನ್ನೇ ನಿಲ್ಲಿಸುವುದು ಒಳಿತು. ಐಪಿಎಲ್‌ ಆಡಿಸಿ ಅವರನ್ನೇ ಟೆಸ್ಟ್‌ ಕ್ರಿಕೆಟ್‌ಗೆ ಸೂಕ್ತ ಎಂದು ಪರಿಗಣಿಸುವುದು ಸರಿಯಲ್ಲ. ಸೂಕ್ತ ಮಾದರಿಗೆ ಸೂಕ್ತ ಆಟಗಾರರನ್ನೇ ಆಯ್ಕೆ ಮಾಡಬೇಕು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Asian Games 2023 : ಏಷ್ಯನ್ ಗೇಮ್ಸ್​ನಲ್ಲಿ ನೇಪಾಳ ತಂಡ ಸೃಷ್ಟಿಸಿದ ಮಾಡಿದ ದಾಖಲೆಗಳ ವಿವರ ಇಲ್ಲಿದೆ

ಏಷ್ಯನ್ ಗೇಮ್ಸ್​ನಲ್ಲಿ (Asian Games 2023) ತನ್ನ ಮೊದಲ ಪಂದ್ಯದಲ್ಲಿಯೇ ನೇಪಾಳ ತಂಡ ಹಲವಾರು ದಾಖಲೆಗಳನ್ನು ಸೃಷ್ಟಿಸಿದೆ.

VISTARANEWS.COM


on

Nepal Team
Koo

ನವದೆಹಲಿ: ಏಷ್ಯನ್ ಗೇಮ್ಸ್ 2023 ರ (Asian Games 2023) ಪುರುಷರ ಟಿ 20 ಐ ಕ್ರಿಕೆಟ್ ಪಂದ್ಯಾವಳಿಯ ಮೊದಲ ಮುಖಾಮುಖಿ ನೇಪಾಳ ಮತ್ತು ಮಂಗೋಲಿಯಾ ನಡುವೆ ಬುಧವಾರ ಚೀನಾದ ಹ್ಯಾಂಗ್ಝೌನಲ್ಲಿ ಏರ್ಪಟ್ಟಿತು. ಈ ಪಂದ್ಯ ಸಂಪೂರ್ಣವಾಗಿ ಏಕಮುಖವಾಗಿ ನಡೆಯಿತು. ನೇಪಾಳ ತಂಡ ದುರ್ಬಲವಾಗಿದ್ದರೂ ಮಂಗೋಲಿಯಾ ಕ್ರಿಕೆಟ್ ಶಿಶು. ಹೀಗಾಗಿ ನೇಪಾಳ ತಂಡ ಮಂಗೋಲಿಯಾವನ್ನು ಬಹುತೇಕ ಜರ್ಜರಿತಗೊಳಿಸಿತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಮೂಲಕ ಮಿಂಚಿ ಹಲವಾರು ನೂತನ ದಾಖಲೆಗಳನ್ನು ಸೃಷ್ಟಿಸಿತು. ನೇಪಾಳ ತಂಡಕ್ಕೆ 273 ರನ್​​ಗಳ ದಾಖಲೆಯ ಜಯವೂ ದೊರೆಯಿತು.

ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ನಂತರ ಮಂಗೋಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಚೊಚ್ಚಲ ಏಷ್ಯಾಕಪ್ ಅಭಿಯಾನದಲ್ಲಿ ಹೊಸದಾಗಿ ಕಣಕ್ಕಿಳಿದ ನೇಪಾಳ, ಮೊದಲ ಐದು ಓವರ್ ಗಳಲ್ಲಿ ಆರಂಭಿಕ ಆಟಗಾರರು 42 ರನ್ ಸೇರಿಸುವ ಮೂಲಕ ಉತ್ತಮ ಆರಂಭ ಪಡೆಯಿತು. ಬಳಿಕ ಕುಶಾಲ್ ಮಲ್ಲಾ ಹಾಗೂ ನಾಯಕ ರೋಹಿತ್ ಪೌಡೆಲ್ ಕೇವಲ 65 ಎಸೆತಗಳಲ್ಲಿ 193 ರನ್​ಗಳ ಜೊತೆಯಾಟವಾಡಿದರು.

ಈ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳು ಇಂತಿವೆ

  • ಕುಶಾಲ್​ ಮಲ್ಲಾ ಕೇವಲ 34 ಎಸೆತಗಳಲ್ಲಿ ಟಿ 20 ಐ ಕ್ರಿಕೆಟ್​ನಲ್ಲಿ ವೇಗವಾಗಿ ಶತಕ ಬಾರಿಸಿದರು. ಈ ಹಿಂದೆ ರೋಹಿತ್ ಶರ್ಮಾ ಮತ್ತು ಡೇವಿಡ್ ಮಿಲ್ಲರ್ ತಲಾ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. 19ರ ಹರೆಯದ ಮಲ್ಲಾ 50 ಎಸೆತಗಳಲ್ಲಿ 8 ಬೌಂಡರಿ ಹಾಗೂ 12 ಸಿಕ್ಸರ್ ಬಾರಿಸಿ ಅಜೇಯ 137 ರನ್ ಬಾರಿಸಿದ್ದರು.
  • ಈ ಪಂದ್ಯದಲ್ಲಿ ನೇಪಾಳ ಮುರಿದ ಅನೇಕ ದಾಖಲೆಗಳಲ್ಲಿ ಇದು ಒಂದಾಗಿದೆ. ನಾಯಕ ರೋಹಿತ್​ ಪೌಡೆಲ್ 27 ಎಸೆತಗಳಲ್ಲಿ 61 ರನ್ ಗಳಿಸಿ ಔಟಾದ ನಂತರ ಆಲ್ ರೌಂಡರ್ ದೀಪೇಂದ್ರ ಸಿಂಗ್ ಐರಿ ಬಂದರು. 23ರ ಹರೆಯದ ಆಲ್​​ರೌಂಡರ್​ ಟಿ20 ಕ್ರಿಕೆಟ್​​ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸುವ ಮೂಲಕ ಕ್ರಿಕೆಟ್ ಇತಿಹಾದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ದೀಪೇಂದ್ರ ತಮ್ಮ ಅರ್ಧ ಶತಕವನ್ನು ತಲುಪಲು ಕೇವಲ ಒಂಬತ್ತು ಎಸೆತಗಳನ್ನು ತೆಗೆದುಕೊಂಡರು. 2007ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ ಅವರ 16 ವರ್ಷಗಳ ದಾಖಲೆಯನ್ನು ಮುರಿದರು. ಯುವ ಆಟಗಾರ 10 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗಿ ಉಳಿದರು, ಮಲ್ಲಾ ಅವರೊಂದಿಗೆ 11 ಎಸೆತಗಳಲ್ಲಿ 55 ರನ್​ಗಳ ಜೊತೆಯಾಟವನ್ನು ಆಡಿದರು.
  • ಅಂತಿಮವಾಗಿ ನೇಪಾಳ 20 ಓವರ್​ಗೆ 3 ವಿಕೆಟ್ ನಷ್ಟಕ್ಕೆ 314 ರನ್ ಕಲೆಹಾಕಿತು. ಈ ಮೂಲಕ ಟಿ20 ಕ್ರಿಕೆಟ್​​ನಲ್ಲಿ 300ಕ್ಕೂ ಅಧಿಕ ರನ್ ಬಾರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2019ರಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ 3 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತ್ತು. ರೋಹಿತ್​ ಪೌಡೆ್​ ಬಳಗ ತಮ್ಮ ಇನ್ನಿಂಗ್ಸ್ ನಲ್ಲಿ 26 ಸಿಕ್ಸರ್ ಗಳನ್ನು ಬಾರಿಸಿದರು. ಇದು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಬಾರಿಸಿದ 22 ಸಿಕ್ಸರ್​ಗಳ ದಾಖಲೆಯನ್ನು ಹಿಮ್ಮೆಟ್ಟಿಸಿತು. ಟಿ20 ಐ ಇನ್ನಿಂಗ್ಸ್​​​ನಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್​ಗಳ ದಾಖಲೆ ಎನಿಸಿಕೊಂಡಿತು.
  • ಗುರಿ ಬೆನ್ನಟ್ಟಿದ ಮಂಗೋಲಿಯಾ 13.1 ಓವರ್ ಗಳಲ್ಲಿ ಕೇವಲ 41 ರನ್ ಗಳಿಗೆ ಆಲೌಟ್ ಆಯಿತು. 273 ರನ್ ಗಳ ಭರ್ಜರಿ ಜಯ ಸಾಧಿಸಿತು. ಇದು ಟಿ20ಐ ಕ್ರಿಕೆಟ್​​ನಲ್ಲಿ ರನ್​ಗಳ ವಿಷಯದಲ್ಲಿ ಅತಿ ದೊಡ್ಡ ಅಂತರದ ಗೆಲುವು.

Continue Reading

Live News

ind vs Aus : ಮೂರನೇ ಏಕ ದಿನ ಪಂದ್ಯ; ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದಿಂದ ಬ್ಯಾಟಿಂಗ್ ಆಯ್ಕೆ

ಭಾರತ ತಂಡ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದು ಸರಣಿಯನ್ನು ಕೈವಶ ಮಾಡಿಕೊಂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಭಾರತಕ್ಕೆ ಕ್ಲೀನ್​ ಸ್ವೀಪ್​ ಸಾಧನೆ ಮಾಡುವ ಅವಕಾಶವಿದೆ.

VISTARANEWS.COM


on

ODI AUS
Koo

ರಾಜ್​ಕೋಟ್​: ಇಲ್ಲಿನ ಎಸ್​​ಸಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಭಾರತ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ (ind vs Aus) ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಎರಡೂ ತಂಡಗಳು ತಲಾ ಐದು ಬದಲಾವಣೆಗಳನ್ನು ಮಾಡಿವೆ.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್​ ಪುನರಾಗಮನ ಮಾಡಿದರೆ, ತನ್ವೀರ್ ಸಂಗಾ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ರೋಹಿತ್ ಶರ್ಮಾ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದಂತೆ ಭಾರತದಲ್ಲೂ ಬದಲಾವಣೆಗಳು ಸಾಕಷ್ಟಾಗಿವೆ. ನಾಯಕ ಮತ್ತು ವಿರಾಟ್ ಕೊಹ್ಲಿ ಮರಳಿದ್ದಾರೆ ಆದರೆ ಶುಭ್ಮನ್ ಗಿಲ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಆಡಲಿದೆ. ಭಾರತವು ವಾಷಿಂಗ್ಟನ್​ ಸುಂದರ್ ಅವರಿಗಾಗಿ ರವಿಚಂದ್ರನ್ ಅಶ್ವಿನ್ ಅವರನ್ನು ಕೈಬಿಟ್ಟಿದೆ. ರಾಜ್ಯದ ನಾಲ್ವರು ಸ್ಥಳೀಯ ಆಟಗಾರರಾದ ಧರ್ಮೇಂದ್ರ ಜಡೇಜಾ, ಪ್ರೇರಕ್ ಮಂಕಡ್, ವಿಶ್ವರಾಜ್ ಜಡೇಜಾ ಮತ್ತು ಹರ್ವಿಕ್ ದೇಸಾಯಿ ಪಂದ್ಯದುದ್ದಕ್ಕೂ ಡ್ರಿಂಕ್ಸ್ ಮತ್ತು ಫೀಲ್ಡಿಂಗ್​ಗಾಗಿ ತಂಡದ ಜತೆಗೆ ಇರಲಿದ್ದಾರೆ.

Continue Reading

ಕ್ರಿಕೆಟ್

World Cup 2023 : ಭಾರತ ವಿರುದ್ಧ ಗೆದ್ದವರು ವಿಶ್ವ ಕಪ್​ ಗೆಲ್ತಾರೆ; ಪಾಕ್​ ತಂಡ ಮಾಜಿ ಆಟಗಾರನ ಭವಿಷ್ಯ

ಹಾಲಿ ವಿಶ್ವ ಕಪ್​ನಲ್ಲಿ (World Cup 2023) ಆಡುವ ತಂಡಗಳಲ್ಲಿ ಭಾರತ ತಂಡ ಅತ್ಯಂತ ಬಲಿಷ್ಠವಾಗಿದೆ ಎಂಬುದಾಗಿ ಪಾಕಿಸ್ತಾನದ ಮಾಜಿ ಆರಂಭಿಕ ಬ್ಯಾಟರ್​ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

Team India
Koo

ನವ ದೆಹಲಿ: ಏಕದಿನ ವಿಶ್ವ ಕಪ್​ 2023 ರ (World Cup 2023) ಆವೃತ್ತಿಯು ಎರಡು ವಾರಗಳಿಗಿಂತ ಕಡಿಮೆ ದೂರದಲ್ಲಿದೆ. ಕ್ರಿಕೆಟ್​​ ಅಭಿಮಾನಿಗಳ ಉತ್ಸಾಹದ ಮಟ್ಟವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ತಜ್ಞರು ಅವಿಸ್ಮರಣಿಯ ಈವೆಂಟ್​ನ ಫಲಿತಾಂಶವನ್ನು ಊಹಿಸುವಲ್ಲಿ ನಿರತರಾಗಿದ್ದರೆ, ಕೆಲವರು ತಮ್ಮ ನೆಚ್ಚಿನ ತಂಡಗಳನ್ನು ಹೆಸರಿಸುವಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಕೆಲವು ಕ್ರಿಕೆಟ್​ ಪಂಡಿತರ ಎಲ್ಲ ತಂಡಗಳ ಬಲ ಮತ್ತು ದುರ್ಬಲ ಅಂಶಗಳನ್ನು ವಿಶ್ಲೇಷಿಸುವಲ್ಲಿ ನಿರತರಾಗಿದ್ದಾರೆ.

ಇಂಗ್ಲೆಂಡ್​​ ಮಾಜಿ ನಾಯಕ ಮೈಕಲ್ ವಾನ್ ಇತ್ತೀಚೆಗೆ ಟ್ವೀಟ್​​ನಲ್ಲಿ ಆತಿಥೇಯ ಭಾರತವು ಪಂದ್ಯಾವಳಿಯಲ್ಲಿ ಗೆಲ್ಲುವ ತಂಡ ಎಂದು ಹೇಳಿದ್ದರು. ಅದನ್ನು ಹೊರತುಪಡಿಸಿದರೆ ‘ಮೆನ್ ಇನ್ ಬ್ಲೂ’ ಅನ್ನು ಸೋಲಿಸುವ ತಂಡವು ಪ್ರಶಸ್ತಿಯನ್ನು ಗೆಲ್ಲಬಹುದು ಎಂದು ಹೇಳಿದ್ದರು. ಈಗ, ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ವಾನ್ ಅವರ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಭಾರತವು ತಪ್ಪುಗಳನ್ನು ಮಾಡದಿದ್ದರೆ ಇತರ ತಂಡಗಳಿಗೆ ಅವರನ್ನು ಸೋಲಿಸುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ.

ವಿಶ್ವ ಕ್ರಿಕೆಟ್​​ನಲ್ಲಿ ಎಲ್ಲ ರೀತಿಯಲ್ಲಿ ಸಮತೋಲನ ಹೊಂದಿರುವ ಏಕೈಕ ತಂಡ ಭಾರತ. ಮುಂಬರುವ ವಿಶ್ವಕಪ್​​ನಲ್ಲಿ ಗಮನಿಸಬೇಕಾದ ನಾಲ್ಕು ತಂಡಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದಾಗ್ಯೂ, ಭಾರತವನ್ನು ಸೋಲಿಸುವ ತಂಡವು ವಿಶ್ವಕಪ್ ಗೆಲ್ಲುತ್ತದೆ ಎಂದು ನಾನು ನಂಬುತ್ತೇನೆ. ಭಾರತ ಅತ್ಯುತ್ತಮ ತಂಡ. ಅವರ ಬ್ಯಾಟಿಂಗ್ ಪರಿಪೂರ್ಣವಾಗಿದೆ ಅವರ ಬೌಲಿಂಗ್ ಅಲ್ಲಿನ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಅವರು ಸ್ವಯಂ ತಪ್ಪುಗಳನ್ನು ಮಾಡದ ಹೊರತು, ಯಾವುದೇ ತಂಡವು ಅವರ ಹತ್ತಿರವೂ ಹೋಗುವುದು ಅಸಂಭವ ಎಂದು ಬಟ್ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಹೇಳಿದ್ದಾರೆ.

ಉನ್ನತ ದರ್ಜೆಯ ಕ್ರಿಕೆಟ್​​

ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟ್ ವಾತಾವರಣವು ಗಣನೀಯವಾಗಿ ಸುಧಾರಿಸಿದೆ. ಆಟಗಾರರು ಫಿಟ್ನೆಸ್​​ಗೆ ಹೆಚ್ಚಿನ ಒತ್ತು ನೀಡುತ್ತಾರೆ. ಫೀಲ್ಡಿಂಗ್ ಗುಣಮಟ್ಟವನ್ನು ಹೆಚ್ಚಿಸುತ್ತಾರೆ ಎಂದು ಬಟ್ ಹೇಳಿದ್ದಾರೆ. ಭಾರತದ ಮೂಲಸೌಕರ್ಯ ಮತ್ತಿತರ ವ್ಯವಸ್ಥೆಗಳನ್ನು ಬಟ್​ ಶ್ಲಾಘಿಸಿದರು.

ಇದನ್ನೂ ಓದಿ : Asian Games 2023 : ಶೂಟಿಂಗ್ ಸ್ಕೀಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತ ಪುರುಷರ ತಂಡ

“ಕಳೆದ ಕೆಲವು ವರ್ಷಗಳಲ್ಲಿ ಭಾರತವು ಗಮನಾರ್ಹವಾಗಿ ಸುಧಾರಿಸಿದೆ. ಈ ಆಟಗಾರರ ಫಿಟ್ನೆಸ್ ಮಟ್ಟವು ನಾವು 15 ವರ್ಷಗಳ ಹಿಂದೆ ಹೇಳಿದ್ದಕ್ಕಿಂತ ಉತ್ತಮವಾಗಿದೆ. ಅಂತೆಯೇ, ಫೀಲ್ಡಿಂಗ್ ಗುಣಮಟ್ಟವೂ ಸುಧಾರಿಸಿದೆ. ಮೂಲಸೌಕರ್ಯದಿಂದ ಹಿಡಿದು ವೀಕ್ಷಕವಿವರಣೆಗಾರರು, ತಜ್ಞರು ಸೇರಿದಂತೆ ಭಾರತದಲ್ಲಿ ಕ್ರಿಕೆಟ್​ಗೆ ಸಂಬಂಧಿಸಿದ ಎಲ್ಲವೂ ಉನ್ನತ ದರ್ಜೆಯದ್ದಾಗಿದೆ, “ಎಂದು ಪಾಕಿಸ್ತಾನದ ಮಾಜಿ ನಾಯಕ ಹೇಳಿದರು.

ರೋಹಿತ್ ಶರ್ಮಾ ಮತ್ತು ತಂಡವು ಏಕದಿನ ವಿಶ್ವಕಪ್​​ನ ಎಲ್ಲಾ ಮೂರು ಸ್ವರೂಪಗಳಲ್ಲಿ ನಂ.1 ತಂಡವಾಗಿ ಪ್ರವೇಶಿಸಲಿದೆ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ 10 ತಂಡಗಳ ಟೂರ್ನಿಯಲ್ಲಿ ಅವರ ಅಭಿಯಾನ ಪ್ರಾರಂಭವಾಗುತ್ತದೆ.

Continue Reading

ಕ್ರಿಕೆಟ್

Cricket Record : T20ಯಲ್ಲಿ 314 ರನ್‌, 9 ಬಾಲ್‌ನಲ್ಲಿ ಫಿಫ್ಟಿ, 34 ಬಾಲ್‌ಗಳಲ್ಲಿ ಸೆಂಚುರಿ! ಯಾರ ದಾಖಲೆ ಇದು?

ಮಂಗೋಲಿಯಾ ವಿರುದ್ಧದ ಏಷ್ಯನ್ ಗೇಮ್ಸ್ ನ ತನ್ನ ಆರಂಭಿಕ ಪಂದ್ಯದಲ್ಲಿ ನೇಪಾಳವು ಅದ್ಭುತ ಪವರ್ ಹಿಟ್ಟಿಂಗ್ ಪ್ರದರ್ಶನದೊಂದಿಗೆ ಅನೇಕ ಕ್ರಿಕೆಟ್​ ದಾಖಲೆಗಳನ್ನು (Cricket Record) ಮುರಿದಿದೆ.

VISTARANEWS.COM


on

Nepal Team
Koo

ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ (Asian Games 2023) ಕ್ರಿಕೆಟ್​ ಸ್ಪರ್ಧೆಯ ಗ್ರೂಪ್ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ಪುರುಷರ ತಂಡ ಇತಿಹಾಸ ಸೃಷ್ಟಿಸಿದೆ. ಪುರುಷರ ಟೂರ್ನಮೆಂಟ್ ಆರಂಭವಾಗುತ್ತಿದ್ದಂತೆ ಸರಣಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆಗಳ (Cricket Record) ಮೇಲೆ ದಾಖಲೆಗಳು ಸೃಷ್ಟಿಯಾಗಿವೆ. ನೇಪಾಳ ತಂಡವು ಮಂಗೋಲಿಯಾ ವಿರುದ್ಧ 20 ಓವರ್​ಗಳಲ್ಲಿ 314/3 ರ ನಂಬಲಸಾಧ್ಯವಾದ ಸ್ಕೋರ್ ದಾಖಲಿಸಿತು. ಕೇವಲ 120 ಎಸೆತಗಳಲ್ಲಿ 300 ರನ್​ ದಾಖಲಿಸಿ ಅಚ್ಚರಿ ಮೂಡಿಸಿತು. ಕ್ರಿಕೆಟ್​ ಆಟದ ಕಿರು ಸ್ವರೂಪದಲ್ಲಿ 300 ರನ್​ಗಳ ಗಡಿಯನ್ನು ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ನೇಪಾಳ. ಏಷ್ಯನ್​ ಗೇಮ್ಸ್ ನಲ್ಲಿ ನಡೆಯುವ ಪಂದ್ಯಗಳಿಗೆ ಟ್ವೆಂಟಿ-20 ಸ್ಥಾನಮಾನ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ಹಿಂದೆ ದೃಢಪಡಿಸಿತ್ತು. ಹೀಗಾಗಿ ನೇಪಾಳ ಮಾಡಿದ್ದೆಲ್ಲವೂ ಕ್ರಿಕೆಟ್​ ಇತಿಹಾಸದ ದಾಖಲೆ ಪುಸ್ತಕ ಸೇರಿಕೊಂಡವು.

2007ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ ಅವರ ದೀರ್ಘಕಾಲದ ದಾಖಲೆಯನ್ನು ನೇಪಾಳ ಬ್ಯಾಟರ್​ ದೀಪೇಂದ್ರ ಸಿಂಗ್ ಐರಿ ಮುರಿದರು. ಅವರು 9 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ 10 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು, ಅದರಲ್ಲಿ 48 ರನ್​ಗಳು ಸಿಕ್ಸರ್​ಗಳ ಮೂಲಕೇ ಬಂದಿದ್ದವು.

ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯೂ ಮುರಿಯಿತು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್​​ ಡೇವಿಡ್ ಮಿಲ್ಲರ್ ಅವರನ್ನು ಹಿಂದಿಕ್ಕಿದ ನೇಪಾಳ ಬ್ಯಾಟರ್​​ ಕುಶಾಲ್ ಮಲ್ಲಾ ಕೇವಲ 34 ಎಸೆತಗಳಲ್ಲಿ ಟಿ 20 ಐನಲ್ಲಿ ವೇಗವಾಗಿ ಶತಕ ಗಳಿಸಿದರು. ಇಬ್ಬರೂ ಬ್ಯಾಟರ್​ಗಳಲ್ಲಿ 35 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಟಿದ್ದರು. ಮಲ್ಲಾ 8 ಬೌಂಡರಿ ಮತ್ತು 12 ಸಿಕ್ಸರ್​ಗಳನ್ನು ಬಾರಿಸಿ ಕೇವಲ 50 ಎಸೆತಗಳಲ್ಲಿ 137 ರನ್ ಗಳಿಸಿ ಅಜೇಯರಾಗಿ ಉಳಿದರು.

ಇತಿಹಾಸದಲ್ಲಿ ಅತಿ ಹೆಚ್ಚು ಟಿ 20 ಸ್ಕೋರ್ ಗಳ ಪಟ್ಟಿ ಇಲ್ಲಿದೆ

  1. ನೇಪಾಳ – ಮಂಗೋಲಿಯಾ ವಿರುದ್ಧ 314/4 (2023)
  2. ಅಫ್ಘಾನಿಸ್ತಾನ – ಐರ್ಲೆಂಡ್ ವಿರುದ್ಧ 278/3 (2019)
  3. ಜೆಕ್ ಗಣರಾಜ್ಯ – ಟರ್ಕಿ ವಿರುದ್ಧ 278/4 (2019)
  4. ಆಸ್ಟ್ರೇಲಿಯಾ – ಶ್ರೀಲಂಕಾ ವಿರುದ್ಧ 263/3 (2016)
  5. ಕೀನ್ಯಾ ವಿರುದ್ಧ ಶ್ರೀಲಂಕಾ 260/6 (2007)

ಕುತೂಹಲಕಾರಿ ಸಂಗತಿಯೆಂದರೆ, ಹ್ಯಾಂಗ್ಝೌನ ಝೆಜಿಯಾಂಗ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಕ್ರಿಕೆಟ್ ಫೀಲ್ಡ್​​ನಲ್ಲಿ ನೇಪಾಳವು ತಮ್ಮ ಇನ್ನಿಂಗಗ್ಸ್​ಗೆ ನಿಧಾನಗತಿಯ ಆರಂಭವನ್ನು ನೀಡಿತು, ಇಬ್ಬರೂ ಆರಂಭಿಕರು 100ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್​​ನಲ್ಲಿ ಆಡಿದ್ದರು. ಆದರೆ, ಬಳಿಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು ನೇಪಾಳ ಬ್ಯಾಟರ್​ಗಳು.

ಒಂದೇ ಪಂದ್ಯದಲ್ಲಿ 26 ಸಿಕ್ಸರ್​ಗಳು

ನೇಪಾಳದ ಬ್ಯಾಟರ್​​ಗಳು ಒಂದೇ ಇನ್ನಿಂಗ್ಸ್​​ನಲ್ಲಿ 26 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ತಮ್ಮ ಹಿಟ್ಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಗಮನಾರ್ಹ ಸಾಧನೆಯು ಈಗ ಟಿ 20 ಐ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್​​ನಲ್ಲಿ ಯಾವುದೇ ತಂಡವು ಅತಿ ಹೆಚ್ಚು ಸಿಕ್ಸರ್​ಗಳ ದಾಖಲೆಯಾಗಿದೆ. ಇದು 2019 ರಲ್ಲಿ ಅಫ್ಘಾನಿಸ್ತಾನವು 278/3 ಸ್ಕೋರ್ ಮಾಡಿದಾಗ 22 ಸಿಕ್ಸರ್​ಗಳ ದಾಖಲೆಯನ್ನೂ ಮುರಿದಿದೆ.

ಇದನ್ನೂ ಓದಿ :Asian Games 2023 : ಶೂಟಿಂಗ್​ನಲ್ಲಿ ಭಾರತಕ್ಕೆ ಚಿನ್ನ, 25 ಮೀಟರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಮಹಿಳೆಯರ ಸಾಧನೆ

ಭಾರತ ನೇರ ಕ್ವಾರ್ಟರ್​ಫೈನಲ್ಸ್​ಗೆ

ಏಷ್ಯನ್ ಗೇಮ್ಸ್ ನ ಪುರುಷರ ಕ್ರಿಕೆಟ್​​ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ತಲಾ ಮೂರು ತಂಡಗಳನ್ನು ಹೊಂದಿರುವ ಮೂರು ಗುಂಪುಗಳಿವೆ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್​ಗೆ ಅರ್ಹತೆ ಪಡೆಯುತ್ತವೆ. ಅಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಂತಹ ತಂಡಗಳು ಸೇರಿಕೊಳ್ಳುತ್ತವೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಭಾಗವಾಗಿದ್ದ ಋತುರಾಜ್ ಗಾಯಕ್ವಾಡ್ ಭಾರತವನ್ನು ಮುನ್ನಡೆಸಲಿದ್ದಾರೆ.

Continue Reading
Advertisement
Nepal Team
ಕ್ರಿಕೆಟ್11 mins ago

Asian Games 2023 : ಏಷ್ಯನ್ ಗೇಮ್ಸ್​ನಲ್ಲಿ ನೇಪಾಳ ತಂಡ ಸೃಷ್ಟಿಸಿದ ಮಾಡಿದ ದಾಖಲೆಗಳ ವಿವರ ಇಲ್ಲಿದೆ

Malayalam Film 2018
South Cinema15 mins ago

Oscars 2024: ‘ಆಸ್ಕರ್‌’ಗೆ ಪ್ರವೇಶ ಪಡೆದ ಮಲಯಾಳಂ ಸಿನಿಮಾ; ನೀವೂ ಇದನ್ನು ನೋಡಿರುತ್ತೀರಿ!

Mulayam Singh Yadav Statue
ದೇಶ22 mins ago

Mulayam Singh Yadav: ಮುಲಾಯಂ ಸಿಂಗ್‌ ಮೂರ್ತಿ ತೆರವು; ಯೋಗಿ ನಾಡಲ್ಲಿ ರೂಲ್ಸ್‌ ಎಂದರೆ ರೂಲ್ಸ್!

Parineeti Chopra with Raghav
ಬಾಲಿವುಡ್24 mins ago

Parineeti Chopra: ‘ಓ ಪ್ರಿಯಾ’; ಪತಿಗಾಗಿ ವಿಶೇಷ ಹಾಡು ರೆಕಾರ್ಡ್‌ ಮಾಡಿದ ಪರಿಣಿತಿ ಚೋಪ್ರಾ!

demat account
ಮನಿ ಗೈಡ್24 mins ago

Demat Account: ಡಿಮ್ಯಾಟ್ ಖಾತೆದಾರರಿಗೆ ಗುಡ್‌ ನ್ಯೂಸ್:‌ ನಾಮಿನಿ ಘೋಷಣೆಗೆ ಸಮಯ ವಿಸ್ತರಣೆ

HD Kumaraswamy Press meet vs congress government
ಕರ್ನಾಟಕ30 mins ago

BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್‌: ಎಚ್.ಡಿ. ಕುಮಾರಸ್ವಾಮಿ ಕಿಡಿ

ODI AUS
Live News49 mins ago

ind vs Aus : ಮೂರನೇ ಏಕ ದಿನ ಪಂದ್ಯ; ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದಿಂದ ಬ್ಯಾಟಿಂಗ್ ಆಯ್ಕೆ

Madhya Pradesh Rape News
ಕ್ರೈಂ1 hour ago

ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!

CM siddaramaiah at Chamarajanagar
ಕರ್ನಾಟಕ1 hour ago

CM Siddaramaiah: CWRC ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಎಂದ ಸಿದ್ದರಾಮಯ್ಯ

Google
EXPLAINER1 hour ago

ವಿಸ್ತಾರ Explainer: Google Birthday: ಗೂಗಲ್‌ನ 25 ವರ್ಷದ ಇತಿಹಾಸ ಹೇಗಿತ್ತು? ಒಂದು ನೋಟ ಇಲ್ಲಿದೆ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

bangalore bandh
ಕರ್ನಾಟಕ1 day ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

dina bhavishya
ಪ್ರಮುಖ ಸುದ್ದಿ9 hours ago

Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ2 days ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ3 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

ಟ್ರೆಂಡಿಂಗ್‌