Shane Warne: ಶೇನ್‌ ವಾರ್ನ್ ಹಠಾತ್​ ಸಾವಿನ ರಹಸ್ಯ ಬಯಲು ಮಾಡಿದ ಭಾರತ ಮೂಲದ ವೈದ್ಯ - Vistara News

ಕ್ರಿಕೆಟ್

Shane Warne: ಶೇನ್‌ ವಾರ್ನ್ ಹಠಾತ್​ ಸಾವಿನ ರಹಸ್ಯ ಬಯಲು ಮಾಡಿದ ಭಾರತ ಮೂಲದ ವೈದ್ಯ

ಆಸ್ಟ್ರೇಲಿಯಾದ ಲೆಜೆಂಡ್ರಿ ಲೆಗ್‌ಸ್ಪಿನ್ನರ್‌ ಶೇನ್‌ ವಾರ್ನ್(Shane Warne) ಅವರ ಹಠಾತ್​ ಸಾವಿಗೆ ಕೋವಿಡ್​ ಲಸಿಕೆಯೂ ಕಾರಣ ಎಂದು ಭಾರತ ಮೂಲದ ಯುಕೆಯಲ್ಲಿ ನೆಲೆಸಿರುವ ವೈದ್ಯರೊಬ್ಬರು ತಿಳಿಸಿದ್ದಾರೆ.

VISTARANEWS.COM


on

shane warne death
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಡ್ನಿ: ಸರಿಸುಮಾರು ಒಂದೂವರೆ ದಶಕದ ಕಾಲ ವಿಶ್ವದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾಗಿ ಗೋಚರಿಸಿದ್ದ ಆಸ್ಟ್ರೇಲಿಯಾದ ಲೆಜೆಂಡ್ರಿ ಲೆಗ್‌ಸ್ಪಿನ್ನರ್‌ ಶೇನ್‌ ವಾರ್ನ್(Shane Warne) ಕಳೆದ ವರ್ಷ ದಿಢೀರನೇ ಬದುಕಿನ ಪಯಣ ಮುಗಿಸಿದ್ದರು. ಥಾಯ್ಲೆಂಡ್‌ನ‌ ವಿಲ್ಲಾ ಒಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಅವರ ಸಾವಿಗೆ ಇದುವರೆಗೂ ನಿರ್ದಿಷ್ಟ ಕಾರಣ ತಿಳಿದು ಬಂದಿರಲಿಲ್ಲ. ಕೆಲವರು ಹೃದಯಾಘಾತ ಎಂದರೆ ಇನ್ನು ಕೆಲವರು ಅತಿಯಾದ ಡಯಟ್​ ಎಂದಿದ್ದರು. ಇದೀಗ ಈ ಪಟ್ಟಿಗೆ ಹೊಸದೊಂದು ಕಾರಣ ಸೇರಿಕೊಂಡಿದೆ. ಕೋವಿಡ್​ ಲಸಿಕೆಯಿಂದ ಅವರು ನಿಧನ ಹೊಂದಿದ್ದಾರೆ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ. ಈ ವಿಚಾರವನ್ನು ಭಾರತೀಯ ಮೂಲದ ಯುಕೆಯಲ್ಲಿ ನೆಲೆಸಿರುವ ಹೃದ್ರೋಗ ತಜ್ಞ ಮತ್ತು ಆಸ್ಟ್ರೇಲಿಯಾದ ವೈದ್ಯರೊಬ್ಬರು ಬಹಿರಂಗಪಡಿಸಿದ್ದಾರೆ.

52 ವರ್ಷದ ವಾರ್ನ್ ಸಾವಿನ ಬಗ್ಗೆ ಮಾಹಿತಿ ನೀಡಿರುವ ಡಾ ಅಸೀಮ್ ಮಲ್ಹೋತ್ರಾ ಮತ್ತು ಡಾ ಕ್ರಿಸ್ ನೀಲ್ ಅವರು ಸುಮಾರು 9 ತಿಂಗಳ ಹಿಂದೆ ತೆಗೆದುಕೊಂಡಿದ್ದ ಕೋವಿಡ್ ಎಂಆರ್‌ಎನ್‌ಎ ಲಸಿಕೆಯಿಂದ ಅವರು ಸಾವು ಸಂಭವಿಸಿರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ Narendra Modi: ಆಸ್ಟ್ರೇಲಿಯಾದಲ್ಲಿ ಶೇನ್‌ ವಾರ್ನ್‌ರನ್ನು ನೆನೆದ ಮೋದಿ; ದಿಗ್ಗಜನ ಕುರಿತು ಪ್ರಧಾನಿ ಹೇಳಿದ್ದೇನು?

ಕಳೆದ ವರ್ಷ ಥಾಯ್ಲೆಂಡ್‌ಗೆ ಆಗಮಿಸಿದ್ದ ಶೇನ್‌ ವಾರ್ನ್ ಇಲ್ಲಿನ 2ನೇ ಅತೀ ದೊಡ್ಡ ದ್ವೀಪವಾದ ಕೋಹ್‌ ಸುಮುಯಿಯ ವಿಲ್ಲಾ ಒಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ವಾರ್ನ್​ ಕೊನೆಯುಸಿರೆಳೆದಿದ್ದರು. ವಾರ್ನ್ ಅವರ ಈ ಅಕಾಲಿಕ ಅಗಲಿಕೆಯಿಂದ ಕ್ರಿಕೆಟ್‌ ಜಗತ್ತು ಆಘಾತಕ್ಕೊಳಗಾಗಿತ್ತು. ಜತೆಗೆ ಅವರ ಈ ದಿಢೀರ್‌ ಸಾವನ್ನು ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಶೇನ್‌ ವಾರ್ನ್ ಅವರ ಸಾವಿನ ಸುದ್ದಿ ಭಾರತೀಯರಿಗೆ ಮೊದಲು ತಿಳಿದದ್ದೇ ವೀರೇಂದ್ರ ಸೆಹವಾಗ್‌ ಅವರ ಟ್ವೀಟ್‌ ಮೂಲಕ. ಅಲ್ಲಿಯ ತನಕ ಆಸ್ಟ್ರೇಲಿಯದಿಂದಲೂ ಸುದ್ದಿ ಲಭಿಸಿರಲಿಲ್ಲ.

1992ರಲ್ಲಿ ಭಾರತದ ವಿರುದ್ಧ ಸಿಡ್ನಿಯಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ್ದ ಶೇನ್‌ ಕೀತ್‌ ವಾರ್ನ್, 2007ರಲ್ಲಿ ಸಿಡ್ನಿಯಲ್ಲೇ ಇಂಗ್ಲೆಂಡ್‌ ವಿರುದ್ಧ ಅಂತಿಮ ಟೆಸ್ಟ್‌ ಆಡಿದ್ದರು. ಈ 15 ವರ್ಷಗಳ 145 ಟೆಸ್ಟ್‌ ಬಾಳ್ವೆಯಲ್ಲಿ ಅವರು ವಿಶ್ವದ ಎಲ್ಲ ಖ್ಯಾತನಾಮ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಸ್ಪಿನ್‌ ಮೋಡಿಗೆ ಸಿಲುಕಿಸಿ ಮೆರೆದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

T20 World Cup : ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಅಮೆರಿಕ ತಂಡ

T20 World Cup: ಪಾಕಿಸ್ತಾನವನ್ನು 7 ವಿಕೆಟ್ ನಷ್ಟಕ್ಕೆ 159 ರನ್​​ಗಳಿಗೆ ಸೀಮಿತಗೊಳಿಸಿದ ನಂತರ, ಮೊನಾಂಕ್ ಪಟೇಲ್ ನೇತೃತ್ವದ ತಂಡವು ತನ್ನ ಇನ್ನಿಂಗ್ಸ್ ಅನ್ನು 159 ರನ್​ಗಳಿಗೆ ಮುಕ್ತಾಯaಗೊಳಿಸಿತು. ಇದರ ನಂತರ ಸೂಪರ್ ಓವರ್ ನಡೆಯಿತು ಮತ್ತು ಯುಎಸ್ಎ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸುವಲ್ಲಿ ಯಶಸ್ವಿಯಾಯಿತು>

VISTARANEWS.COM


on

T20 World Cup
Koo

ನವದೆಹಲಿ: ಐಸಿಸಿ ಟಿ 20 ವಿಶ್ವಕಪ್ (T20 World Cup) 2024 ರ 11 ನೇ ಪಂದ್ಯದಲ್ಲಿ ಯುಎಸ್ಎ ಗುರುವಾರ (ಜೂನ್ 7) ಪಾಕಿಸ್ತಾನ ತಂಡವನ್ನು ಸೂಪರ್​ ಓವರ್​ನಲ್ಲಿ ಸೋಲಿಸಿತು. ಈ ಮೂಲಕ ವಿಶೇಷ ದಾಖಲೆಯೊಂದನ್ನು ಬರೆಯಿತು. ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧದ ಸರಣಿ ಗೆಲುವು ಮತ್ತು ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಕೆನಡಾ ವಿರುದ್ಧದ ಪ್ರಭಾವಶಾಲಿ ವಿಜಯದ ನಂತರ ನಂತರ ಅಮೆರಿಕ ತಂಡ ಮತ್ತೊಂದು ಬಾರಿ ಉತ್ತಮ ಪ್ರದರ್ಶನ ನೀಡಬಹುದು ಎಂದು ಎಂದು ಕ್ರಿಕೆಟ್ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಪಾಕಿಸ್ತಾನ ತಂಡವನ್ನು ಸೋಲಿಸಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ಪಾಕ್ ತಂಡವನ್ನು ಕ್ಯಾರೇ ಅನ್ನದೇ ಸುಲಭವಾಗಿ ಜಯ ಗಳಿಸಿತು. ಈ ಮೂಲಕ ಸತತವಾಗಿ ಎರಡು ವಿಜಯವನ್ನು ಪಡೆದು ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿತು.

ಪಾಕಿಸ್ತಾನವನ್ನು 7 ವಿಕೆಟ್ ನಷ್ಟಕ್ಕೆ 159 ರನ್​​ಗಳಿಗೆ ಸೀಮಿತಗೊಳಿಸಿದ ನಂತರ, ಮೊನಾಂಕ್ ಪಟೇಲ್ ನೇತೃತ್ವದ ತಂಡವು ತನ್ನ ಇನ್ನಿಂಗ್ಸ್ ಅನ್ನು 159 ರನ್​ಗಳಿಗೆ ಮುಕ್ತಾಯaಗೊಳಿಸಿತು. ಇದರ ನಂತರ ಸೂಪರ್ ಓವರ್ ನಡೆಯಿತು ಮತ್ತು ಯುಎಸ್ಎ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸುವಲ್ಲಿ ಯಶಸ್ವಿಯಾಯಿತು>

ಯುಎಸ್ಎ ಹೆಚ್ಚಿನ ಯಶಸ್ಸಿನ ಮೇಲೆ ಕಣ್ಣಿಟ್ಟಿದೆ

ಪಾಕಿಸ್ತಾನದ ವಿರುದ್ಧದ ಅದ್ಭುತ ಪ್ರದರ್ಶನಕ್ಕಾಗಿ ಯುಎಸ್ಎ ವಿಶ್ವದಾದ್ಯಂತ ಪ್ರಶಂಸೆ ಪಡೆಯುತ್ತಿದ್ದರೂ, ಅವರು ವಿಶ್ರಾಂತಿ ಪಡೆಯಲು ಸಿದ್ಧರಿಲ್ಲ ಆ ತಂಡದ ವೇಗದ ಬೌಲರ್ ಅಲಿ ಖಾನ್, ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯತ್ತ ತಂಡವು ಸಂಪೂರ್ಣವಾಗಿ ಗಮನ ಹರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದೆ.

ಇದನ್ನೂ ಓದಿ: T20 World Cup : ಪಾಕಿಸ್ತಾನ ತಂಡಕ್ಕೆ ಕರಾಳ ದಿನ; ಮಾಜಿ ಆಟಗಾರರಿಂದ ಟೀಕೆ

ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ಯುಎಸ್ಎ ಈಗ ಭಾರತ ಮತ್ತು ಐರ್ಲೆಂಡ್ ವಿರುದ್ಧದ ಉಳಿದ ಗುಂಪು ಪಂದ್ಯಗಳಲ್ಲಿ ಗೆಲುವಿನ ಮೇಲೆ ಕಣ್ಣಿಟ್ಟಿದೆ ಎಂದು ಪಾಕಿಸ್ತಾನ ಮೂಲದ ವೇಗಿ ಹೇಳಿದ್ದಾರೆ.

“ಶ್ರೇಷ್ಠ ತಂಡ ಪಾಕಿಸ್ತಾನ ವಿರುದ್ಧ ನಮಗೆ ಉತ್ತಮ ಗೆಲುವು ಸಿಕ್ಕಿದೆ. ನಾವು ಈ ಹಂತಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೇವೆ. ನಾವು ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ಸೂಪರ್ 8 ಗೆ ಅರ್ಹತೆ ಪಡೆಯುವುದು ನಮ್ಮ ಕೆಲಸವಾಗಿರುವುದರಿಂದ ಆ ಕೆಲಸ ಇನ್ನೂ ಮುಗಿದಿದೆ ಎಂದು ನಾನು ಭಾವಿಸುವುದಿಲ್ಲ. ಆದ್ದರಿಂದ ತಂಡವು ನಿಜವಾಗಿಯೂ ಆತ್ಮವಿಶ್ವಾಸದಲ್ಲಿದೆ. ನಾವು ಈ ವೇಗವನ್ನು ಉಳಿಸಿಕೊಳ್ಳಲಿದ್ದೇವೆ ಮತ್ತು ಭಾರತ ಮತ್ತು ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಭರವಸೆ ಹೊಂದಿದ್ದೇವೆ”ಎಂದು ಅಲಿ ಖಾನ್ ಕ್ರಿಕ್​ಬಜ್​ಗೆ ತಿಳಿಸಿದರು.

ಆಡಿರುವ ಎರಡು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಅಮೆರಿಕ ‘ಎ’ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಉಳಿದ ಎರಡು ಪಂದ್ಯಗಳಲ್ಲಿ ಇನ್ನೂ ಒಂದು ಗೆಲುವು ಯುಎಸ್ಎ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಬಲವಾದ ಸ್ಥಾನದಲ್ಲಿರಿಸುತ್ತದೆ. ಜೂನ್ 12 ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಅವರು ಟೀಮ್ ಇಂಡಿಯಾವನ್ನು ಎದುರಿಸಲಿದ್ದಾರೆ.

Continue Reading

ಪ್ರಮುಖ ಸುದ್ದಿ

T20 World Cup : ಪಾಕಿಸ್ತಾನ ತಂಡಕ್ಕೆ ಕರಾಳ ದಿನ; ಮಾಜಿ ಆಟಗಾರರಿಂದ ಟೀಕೆ

T20 World Cup: ಡಲ್ಲಾಸ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅಮೆರಿಕ ತಂಡ ಪಾಕಿಸ್ತಾನವನ್ನು ಮಣಿಸಿದೆ. ತವರು ತಂಡವು ಪಂದ್ಯದುದ್ದಕ್ಕೂ ಎಲ್ಲಾ ಮೂರು ವಿಭಾಗಗಳಲ್ಲಿ ಪಾಕಿಸ್ತಾನ ತಂಡವನ್ನು ಮೀರಿಸಿತು. ಸೂಪರ್ ಓವರ್​ನಲ್ಲಿ 19 ರನ್​ಗಲ ಸವಾಲು ಮೀರಲು ಪಾಕ್​ ತಂಡಕ್ಕೆ ಸಾಧ್ಯವಾಗಲಿಲ್ಲ.

VISTARANEWS.COM


on

T20 World Cup
Koo

ನವದೆಹಲಿ: 2024 ರ ಟಿ 20 ವಿಶ್ವಕಪ್​ನ (T20 World Cup) ತನ್ನ ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ವಿರುದ್ಧ ಸೋತ ನಂತರ ಪಾಕಿಸ್ತಾನ ತಂಡಕ್ಕೆ ಮುಖಭಂಗವಾಗಿದೆ. ಮಾಜಿ ವಿಕೆಟ್ ಕೀಪರ್ ಬ್ಯಾಟರ್​ ಕಮ್ರಾನ್ ಅಕ್ಮಲ್ ಬಾಬರ್ ಅಜಮ್ ನೇತೃತ್ವದ ತಂಡವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸೂಪರ್ ಓವರ್​ನಲ್ಲಿ ಸೋಲು ಕಂಡಿರುವುದು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ “ಅತಿದೊಡ್ಡ” ಅವಮಾನ ಎಂದು ಕಮ್ರಾನ್ ಅಕ್ಮಲ್ ಬಣ್ಣಿಸಿದ್ದಾರೆ.

ಡಲ್ಲಾಸ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅಮೆರಿಕ ತಂಡ ಪಾಕಿಸ್ತಾನವನ್ನು ಮಣಿಸಿದೆ. ತವರು ತಂಡವು ಪಂದ್ಯದುದ್ದಕ್ಕೂ ಎಲ್ಲಾ ಮೂರು ವಿಭಾಗಗಳಲ್ಲಿ ಪಾಕಿಸ್ತಾನ ತಂಡವನ್ನು ಮೀರಿಸಿತು. ಸೂಪರ್ ಓವರ್​ನಲ್ಲಿ 19 ರನ್​ಗಲ ಸವಾಲು ಮೀರಲು ಪಾಕ್​ ತಂಡಕ್ಕೆ ಸಾಧ್ಯವಾಗಲಿಲ್ಲ.

ತಮ್ಮ ಯೂಟ್ಯೂಬ್ ಚಾನೆಲ್​ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕಮ್ರಾನ್ ಅಕ್ಮಲ್ ಯುಎಸ್ಎ ಅವರ ಅಸಾಧಾರಣ ಪ್ರದರ್ಶನವನ್ನು ಶ್ಲಾಘಿಸಿದರು. ಅವರು ಉನ್ನತ ಶ್ರೇಯಾಂಕದ ತಂಡದಂತೆ ಆಡಿದರು ಎಂದು ಹೇಳಿದರು. ಪಾಕಿಸ್ತಾನಕ್ಕಿಂತ ಉತ್ತಮ ಕ್ರಿಕೆಟ್ ಆಡಿದ್ದರಿಂದ ಯುಎಸ್ಎ ಗೆಲ್ಲಲು ಅರ್ಹವಾಗಿದೆ ಎಂದು ಮಾಜಿ ಕ್ರಿಕೆಟಿಗ ಹೇಳಿದರು.

ಸೂಪರ್ ಓವರ್​ನಲ್ಲಿ ಪಂದ್ಯವನ್ನು ಕಳೆದುಕೊಂಡಿರುವುದು ಪಾಕಿಸ್ತಾನ ಕ್ರಿಕೆಟ್​ಗೆ ದೊಡ್ಡ ಅವಮಾನವಾಗಿದೆ. ಇದಕ್ಕಿಂತ ದೊಡ್ಡ ಅವಮಾನ ಇರಲು ಸಾಧ್ಯವಿಲ್ಲ. ಯುಎಸ್ಎ ಅಸಾಧಾರಣವಾಗಿ ಉತ್ತಮವಾಗಿ ಆಡಿತು. ಅವರು ಕೆಳ ಶ್ರೇಯಾಂಕದ ತಂಡವೆಂದು ಭಾವಿಸಲಿಲ್ಲ. ಅವರು ಪಾಕಿಸ್ತಾನಕ್ಕಿಂತ ಮೇಲಿದ್ದಾರೆ ಎಂದು ಅನಿಸಿತು. ಅದು ಅವರು ತೋರಿಸಿದ ಪ್ರಬುದ್ಧತೆಯ ಮಟ್ಟ ಉತ್ತಮವಾಗಿತ್ತು , “ಎಂದು ಅಕ್ಮಲ್ ಹೇಳಿದ್ದಾರೆ.

ಅವರು ನಮಗಿಂತ ಉತ್ತಮ ಕ್ರಿಕೆಟ್ ಆಡಿದ್ದರಿಂದ ಅವರು ಗೆಲ್ಲಲು ಅರ್ಹರಾಗಿದ್ದರು. ನಮ್ಮ ಕ್ರಿಕೆಟ್ ನ ಮುಖ ಬಯಲಾಗಿದೆ. ನಾವು ನಮ್ಮ ಕ್ರಿಕೆಟ್ ಅನ್ನು ಹೇಗೆ ಮುಂದೆ ಕೊಂಡೊಯ್ಯುತ್ತಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ, ಎಂದು ಅವರು ಹೇಳಿದರು.

ಎಡಗೈ ವೇಗಿ ಸೌರಭ್ ನೇತ್ರವಾಲ್ಕರ್ ಎರಡನೇ ಓವರ್​ನಲ್ಲಿ ಮೊಹಮ್ಮದ್ ರಿಜ್ವಾನ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ತಂಡಕ್ಕೆ ಆರಂಭಿಕ ಪ್ರಗತಿಯನ್ನು ನೀಡಿದರು. ಪಾಕಿಸ್ತಾನ ತಂಡವು ಉಸ್ಮಾನ್ ಖಾನ್ ಮತ್ತು ಫಖರ್ ಜಮಾನ್ ಅವರ ವಿಕೆಟ್ ಗಳನ್ನು ಐದು ಓವರ್ ಗಳಲ್ಲಿ ಕಳೆದುಕೊಂಡಿತು. ಪವರ್ ಪ್ಲೇನಲ್ಲಿ 3 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ: Babar Azam : ಭಾರತ ಪಾಕ್​ ಪಂದ್ಯಕ್ಕೆ ಮೊದಲೇ ವಿರಾಟ್ ಕೊಹ್ಲಿಯ ದಾಖಲೆ ಮುರಿದ ಬಾಬರ್​ ಅಜಂ

ಬಾಬರ್ ಅಜಮ್ (43 ಎಸೆತಗಳಲ್ಲಿ 44 ರನ್) ಮತ್ತು ಶದಾಬ್ ಖಾನ್ (25 ಎಸೆತಗಳಲ್ಲಿ 40 ರನ್) ನಾಲ್ಕನೇ ವಿಕೆಟ್​ಗೆ 48 ಎಸೆತಗಳಲ್ಲಿ 72 ರನ್ಗಳ ಜೊತೆಯಾಟದ ಮೂಲಕ ತಂಡವನ್ನು ರಕ್ಷಿಸಿದರು. ಪಂದ್ಯದ ಕೊನೆಯ ಹಂತಗಳಲ್ಲಿ ಬಾಬರ್ ವೇಗವನ್ನು ಹೆಚ್ಚಿಸಲು ವಿಫಲರಾದರು. ಇಫ್ತಿಖರ್ ಅಹ್ಮದ್ (14 ಎಸೆತಗಳಲ್ಲಿ 18 ರನ್) ಮತ್ತು ಶಾಹೀನ್ ಅಫ್ರಿದಿ (16 ಎಸೆತಗಳಲ್ಲಿ 23 ರನ್) ಪಾಕಿಸ್ತಾನ ತಂಡಕ್ಕೆ 159 ರನ್ಗಳ ಉತ್ತಮ ಮೊತ್ತವನ್ನು ತಲುಪಲು ಸಹಾಯ ಮಾಡಿದರು.

ಈ ದಿನವನ್ನು ಎಂದಿಗೂ ಮರೆಯಲಾಗುವುದಿಲ್ಲ: ಕಮ್ರಾನ್ ಅಕ್ಮಲ್

ಪಾಕಿಸ್ತಾನ ಬಳಗ ಇಂಗ್ಲೆಂಡ್ ನಂತಹ ದೊಡ್ಡ ತಂಡಗಳ ವಿರುದ್ಧ ಸೋತರೆ ಒಳ್ಳೆಯದು ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ. ಈ ಸೋಲನ್ನು ಪಾಕಿಸ್ತಾನ ಕ್ರಿಕೆಟ್​ನಲ್ಲಿ ಎಂದಿಗೂ ಮರೆಯಲಾಗುವುದಿಲ್ಲ ಎಂದು 42 ವರ್ಷದ ಆಟಗಾರ ಒತ್ತಿ ಹೇಳಿದರು. ಇದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಚಿಕೆಗೇಡಿನ ಪ್ರದರ್ಶನ. ಇಂಗ್ಲೆಂಡ್ ನಂತಹ ದೊಡ್ಡ ತಂಡಗಳ ವಿರುದ್ಧ ಸೋತರೆ ಪರವಾಗಿಲ್ಲ. ಎದುರಾಳಿ ತಂಡಕ್ಕೆ ಉತ್ತಮ ಹೋರಾಟ ನೀಡಿದ ನಂತರ ಅವರು ಸೋತರೂ ಪರವಾಗಿಲ್ಲ. ಆದರೆ ಹೆಚ್ಚು ಪಂದ್ಯಗಳನ್ನು ಆಡದ ತಂಡದ ವಿರುದ್ಧ ಸೋತಿರುವುದು ಸರಿಯಲ್ಲ ” ಎಂದು ಅಕ್ಮಲ್ ಹೇಳಿದ್ದಾರೆ.

ಮೊದಲು ಪಂದ್ಯವನ್ನು ಟೈ ಆಗುವಂತೆ ನೋಡಿ ಸೂಪರ್​ ಓವರ್​ನಲ್ಲಿ ಸೋಲುವುದು. ಈ ದಿನವನ್ನು ಎಂದಿಗೂ ಮರೆಯಲಾಗುವುದಿಲ್ಲ” ಎಂದು ಅವರು ಹೇಳಿದರು.

ಅಂತಿಮ ಓವರ್​ನಲ್ಲಿ ಯುಎಸ್ಎಗೆ ಗೆಲ್ಲಲು 15 ರನ್​ಗಳ ಅಗತ್ಯವಿದ್ದಾಗ ಪಾಕಿಸ್ತಾನಕ್ಕೆ ಆಟದಲ್ಲಿ ಅನುಕೂಲವಿತ್ತು. ಕೊನೆಯ ಎಸೆತದಲ್ಲಿ ಹ್ಯಾರಿಸ್ ರವೂಫ್ 5 ರನ್​ಗಳ ಅವಶ್ಯಕತೆಯಿತ್ತು. ಆದಾಗ್ಯೂ, ನಿತೀಶ್ ಕುಮಾರ್ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿದರು, ಸೂಪರ್ ಓವರ್​ನಲ್ಲಿ ಪಾಕಿಸ್ತಾನವು ಐದು ರನ್​ಗಳಿಂದ ಸೋತಿತು.

Continue Reading

ಪ್ರಮುಖ ಸುದ್ದಿ

Babar Azam : ಭಾರತ ಪಾಕ್​ ಪಂದ್ಯಕ್ಕೆ ಮೊದಲೇ ವಿರಾಟ್ ಕೊಹ್ಲಿಯ ದಾಖಲೆ ಮುರಿದ ಬಾಬರ್​ ಅಜಂ

Babar Azam: ಡಲ್ಲಾಸ್​ನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಅಮೆರಿಕ ವಿರುದ್ಧದ ಪಾಕಿಸ್ತಾನದ ಆರಂಭಿಕ ಪಂದ್ಯದಲ್ಲಿ ಬಾಬರ್ ಈ ಮೈಲಿಗಲ್ಲನ್ನು ತಲುಪಿದರು. ಅವರು 43 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 44 ರನ್ ಗಳಿಸಿದರು

VISTARANEWS.COM


on

Babar Azam
Koo

ನವದೆಹಲಿ: 2024 ರ ಟಿ 20 ವಿಶ್ವಕಪ್​ನಲ್ಲಿ ಯುಎಸ್ಎ ವಿರುದ್ಧ ಆಶ್ಚರ್ಯಕರ ಸೋಲು ಅನುಭವಿಸಿದ ಹೊರತಾಗಿಯೂ ಪಾಕಿಸ್ತಾನದ ನಾಯಕ ಬಾಬರ್ ಅಜಮ್ (Babar Azam) ಭಾರತದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಟಿ 20 ಐ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡಲ್ಲಾಸ್​ನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಅಮೆರಿಕ ವಿರುದ್ಧದ ಪಾಕಿಸ್ತಾನದ ಆರಂಭಿಕ ಪಂದ್ಯದಲ್ಲಿ ಬಾಬರ್ ಈ ಮೈಲಿಗಲ್ಲನ್ನು ತಲುಪಿದರು. ಅವರು 43 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 44 ರನ್ ಗಳಿಸಿದರು. ಅವರ ರನ್ ನೆರವಿನಿಂದ 20 ಓವರ್​​ಗಳಲ್ಲಿ 7 ವಿಕೆಟ್​ಗೆ 159 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಪಾಕಿಸ್ತಾನ ಶಕ್ತಗೊಂಡಿತು.

ಬ್ಯಾಟರ್​ಗಳ ಪಟ್ಟಿಯಲ್ಲಿ ಬಾಬರ್ ಅಜಮ್ ಅಗ್ರಸ್ಥಾನ

ಬಾಬರ್ ಈಗ 120 ಪಂದ್ಯಗಳಲ್ಲಿ 4,067 ರನ್​​ಗಳೊಂದಿಗೆ ಟಿ 20 ಐ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 118 ಪಂದ್ಯಗಳಲ್ಲಿ 4,038 ರನ್​ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಜೂನ್ 9 ರಂದು ನ್ಯೂಯಾರ್ಕ್​​ನಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸುವಾಗ ಇಬ್ಬರೂ ಆಟಗಾರರಿಗೆ ಮತ್ತೆ ಅಗ್ರಸ್ಥಾನಕ್ಕಾಗಿ ಸ್ಪರ್ಧಿಸುವ ಅವಕಾಶವಿದೆ.

ಇದನ್ನೂ ಓದಿ: T20 World Cup: ಪಾಕಿಸ್ತಾನಕ್ಕೆ ಮುಖಭಂಗ ಮಾಡಿದ ಅಮೆರಿಕ ಕ್ರಿಕೆಟ್‌ ತಂಡದ ಸೌರಭ್ ನೇತ್ರವಾಲ್ಕರ್ ಹಿನ್ನೆಲೆ ಏನು?

ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯವು ನಸ್ಸೌ ಕೌಂಟಿ ಇಂಟರ್​​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ, ಇದು ಸವಾಲಿನ ಪಿಚ್ ಮತ್ತು ಔಟ್​ಫೀಲ್ಡ್​ಗೆ ಹೆಸರುವಾಸಿಯಾಗಿದೆ. ಕ್ರೀಡಾಂಗಣದ ಮೇಲ್ಮೈ ಅನಿರೀಕ್ಷಿತ ಬೌನ್ಸ್ ಗೆ ಕಾರಣವಾಗುತ್ತದೆ. ನಿಧಾನಗತಿಯ ಔಟ್ ಫೀಲ್ಡ್ ಬ್ಯಾಟರ್​​ಗಳ ಕಷ್ಟ ಹೆಚ್ಚಿಸುತ್ತದೆ. ಈ ಸ್ಥಳವು ಡ್ರಾಪ್-ಇನ್ ಪಿಚ್ ಬಳಸಲಾಗಿಎ. ಇದು ಇಲ್ಲಿಯವರೆಗೆ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಅಸ್ಥಿರವಾಗಿ ಕಂಡಿದೆ.

ಭಾರತವು ತನ್ನ ಆರಂಭಿಕ ಪಂದ್ಯವನ್ನು ಈ ಸ್ಥಳದಲ್ಲಿ ಆಡಿತು, ಅಲ್ಲಿ ಪಿಚ್​​ನಿಂದಾಗಿ ಹಲವಾರು ಬ್ಯಾಟರ್​ಗಳು ಗಾಯಗೊಂಡಿದ್ದರು. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜೋಶ್ ಲಿಟಲ್ ಎಸೆತದಿಂದ ಗಾಯಗೊಂಡಿದ್ದ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದರು.

ಅಮೆರಿಕದ ವಿರುದ್ಧದ ಪಂದ್ಯದಲ್ಲಿ ಬಾಲ್​ ವಿರೂಪಗೊಳಿಸಿದ ಪಾಕ್​ ಬೌಲರ್​; ಆರೋಪ

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಮತ್ತೆ ತಮ್ಮ ಕೃತ್ರಿಮ ಬುದ್ಧಿಯನ್ನು ತೋರಿಸಿದ್ದಾರೆ. ಟಿ 20 ವಿಶ್ವಕಪ್ 2024 ರ (T20 World Cup) ಯುಎಸ್ಎ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ 11 ನೇ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ‘ಬಾಲ್ ವಿರೂಪ ‘ ಮಾಡಿದ್ದಾರೆ ಎಂದು ಯುಎಸ್ಎ ಕ್ರಿಕೆಟಿಗ ರಸ್ಟಿ ಥೆರಾನ್ ಆರೋಪಿಸಿದ್ದಾರೆ. ವಿಶೇಷವೆಂದರೆ, ಯುಎಸ್ಎ ಇನ್ನಿಂಗ್ಸ್​ನ 12 ಓವರ್​ನಲ್ಲಿ 94 ರನ್ ಬಾರಿಸಿದ್ದಾಗ ಪಾಕಿಸ್ತಾನ ತಂಡ ಚೆಂಡು ಬದಲಾವಣೆಗೆ ಮನವಿ ಮಾಡಿತ್ತು.

ಬದಲಾವಣೆಯ ಒಂದು ಓವರ್ ನಂತರ, ಆಂಡ್ರೀಸ್ ಗೌಸ್ (26 ಎಸೆತಗಳಲ್ಲಿ 35 ರನ್) ಮತ್ತು ಮೊನಾಂಕ್ ಪಟೇಲ್ (38 ಎಸೆತಗಳಲ್ಲಿ 50 ರನ್) ನಡುವಿನ ಜತೆಯಾಟ ಮುರಿದು ಹೋಯಿತು. ಔಟ್ ಆದ ತಕ್ಷಣ, ಥೆರಾನ್ ಈ ವಿಷಯವನ್ನು ಪರಿಶೀಲಿಸುವಂತೆ ಐಸಿಸಿಯನ್ನು ಕೇಳಿಕೊಂಡಿತು. ರವೂಫ್ ಚೆಂಡಿನ ಮೇಲೆ ತನ್ನ ಹೆಬ್ಬೆರಳಿನ ಉಗುರಿನ ಮೂಲಕ ಗೆರೆ ಎಳೆಯುತ್ತಿರುವುದು ಕಂಡಿದೆ ಎಂದು 38 ವರ್ಷದ ಆಟಗಾರ ಆರೋಪಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

T20 World Cup : ಅಮೆರಿಕದ ವಿರುದ್ಧದ ಪಂದ್ಯದಲ್ಲಿ ಬಾಲ್​ ವಿರೂಪಗೊಳಿಸಿದ ಪಾಕ್​ ಬೌಲರ್​; ಆರೋಪ

T20 World Cup : ಬದಲಾದ ಈ ಚೆಂಡಿನಿಂದ ಪಾಕಿಸ್ತಾನ ಮೋಸದಾಟ ಆಟಿದೆ. ಐಸಿಸಿ ಈ ಬಗ್ಗೆ ಏನು ಮಾಡುತ್ತಿದೆ. 2 ಓವರ್ ಗಳ ಹಿಂದೆ ಬದಲಾಯಿಸಲಾದ ಚೆಂಡನ್ನು ರಿವರ್ಸ್ ಸ್ವಿಂಗ್​ ಮಾಡಲು ಹೇಗೆ ಸಾಧ್ಯ ? ಹ್ಯಾರಿಸ್ ರವೂಫ್ ತನ್ನ ಹೆಬ್ಬೆರಳಿನ ಉಗುರುಗಳನ್ನು ಚೆಂಡಿನ ಎಳೆಯುವುದನ್ನು ನೀವು ಅಕ್ಷರಶಃ ನೋಡಬಹುದು ಎಂದು ಥೆರಾನ್ ತನ್ನ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

VISTARANEWS.COM


on

Haris Rauf
Koo

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಮತ್ತೆ ತಮ್ಮ ಕೃತ್ರಿಮ ಬುದ್ಧಿಯನ್ನು ತೋರಿಸಿದ್ದಾರೆ. ಟಿ 20 ವಿಶ್ವಕಪ್ 2024 ರ (T20 World Cup) ಯುಎಸ್ಎ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ 11 ನೇ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ‘ಬಾಲ್ ವಿರೂಪ ‘ ಮಾಡಿದ್ದಾರೆ ಎಂದು ಯುಎಸ್ಎ ಕ್ರಿಕೆಟಿಗ ರಸ್ಟಿ ಥೆರಾನ್ ಆರೋಪಿಸಿದ್ದಾರೆ. ವಿಶೇಷವೆಂದರೆ, ಯುಎಸ್ಎ ಇನ್ನಿಂಗ್ಸ್​ನ 12 ಓವರ್​ನಲ್ಲಿ 94 ರನ್ ಬಾರಿಸಿದ್ದಾಗ ಪಾಕಿಸ್ತಾನ ತಂಡ ಚೆಂಡು ಬದಲಾವಣೆಗೆ ಮನವಿ ಮಾಡಿತ್ತು.

ಬದಲಾವಣೆಯ ಒಂದು ಓವರ್ ನಂತರ, ಆಂಡ್ರೀಸ್ ಗೌಸ್ (26 ಎಸೆತಗಳಲ್ಲಿ 35 ರನ್) ಮತ್ತು ಮೊನಾಂಕ್ ಪಟೇಲ್ (38 ಎಸೆತಗಳಲ್ಲಿ 50 ರನ್) ನಡುವಿನ ಜತೆಯಾಟ ಮುರಿದು ಹೋಯಿತು. ಔಟ್ ಆದ ತಕ್ಷಣ, ಥೆರಾನ್ ಈ ವಿಷಯವನ್ನು ಪರಿಶೀಲಿಸುವಂತೆ ಐಸಿಸಿಯನ್ನು ಕೇಳಿಕೊಂಡಿತು. ರವೂಫ್ ಚೆಂಡಿನ ಮೇಲೆ ತನ್ನ ಹೆಬ್ಬೆರಳಿನ ಉಗುರಿನ ಮೂಲಕ ಗೆರೆ ಎಳೆಯುತ್ತಿರುವುದು ಕಂಡಿದೆ ಎಂದು 38 ವರ್ಷದ ಆಟಗಾರ ಆರೋಪಿಸಿದ್ದಾರೆ.

ಇದನ್ನೂ ಓದಿ: T20 World Cup: ಪಾಕಿಸ್ತಾನಕ್ಕೆ ಮುಖಭಂಗ ಮಾಡಿದ ಅಮೆರಿಕ ಕ್ರಿಕೆಟ್‌ ತಂಡದ ಸೌರಭ್ ನೇತ್ರವಾಲ್ಕರ್ ಹಿನ್ನೆಲೆ ಏನು?

ಬದಲಾದ ಈ ಚೆಂಡಿನಿಂದ ಪಾಕಿಸ್ತಾನ ಮೋಸದಾಟ ಆಟಿದೆ. ಐಸಿಸಿ ಈ ಬಗ್ಗೆ ಏನು ಮಾಡುತ್ತಿದೆ. 2 ಓವರ್ ಗಳ ಹಿಂದೆ ಬದಲಾಯಿಸಲಾದ ಚೆಂಡನ್ನು ರಿವರ್ಸ್ ಸ್ವಿಂಗ್​ ಮಾಡಲು ಹೇಗೆ ಸಾಧ್ಯ ? ಹ್ಯಾರಿಸ್ ರವೂಫ್ ತನ್ನ ಹೆಬ್ಬೆರಳಿನ ಉಗುರುಗಳನ್ನು ಚೆಂಡಿನ ಎಳೆಯುವುದನ್ನು ನೀವು ಅಕ್ಷರಶಃ ನೋಡಬಹುದು ಎಂದು ಥೆರಾನ್ ತನ್ನ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

ಏತನ್ಮಧ್ಯೆ, ಗೌಸ್ ಔಟಾದ ನಂತರ, ಮೊಹಮ್ಮದ್ ಅಮೀರ್ ಮುಂದಿನ ಓವರ್​​ನಲ್ಲಿ ಯುಎಸ್ಎ ನಾಯಕನನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಈ ವೇಳೆ ಅಮೆರಿಕ 14.1 ಓವರ್​ಗಳಲ್ಲಿ 111/3 ಸ್ಕೋರ್​ ಮಾಡಿತ್ತು. ಆದಾಗ್ಯೂ, ಎರಡು ತ್ವರಿತ ಹೊಡೆತಗಳ ಹೊರತಾಗಿಯೂ, ಆರೋನ್ ಜೋನ್ಸ್ (26 ಎಸೆತಗಳಲ್ಲಿ 36* ರನ್) ಮತ್ತು ನಿತೀಶ್ ಕುಮಾರ್ (14 ಎಸೆತಗಳಲ್ಲಿ 14* ರನ್) ಅವರ ನಿರ್ಣಾಯಕ ಇನ್ನಿಂಗ್ಸ್​ಗಳ ಮೂಲಕ ಪಂದ್ಯ ಸಮಬಲಗೊಂಡಿತು.

ಅಂತಿಮವಾಗಿ ಅಮೆರಿಕ ನಿಗದಿತ 20 ಓವರ್​ಗಳಲ್ಲಿ 159 ರನ್ ಬಾರಿಸಿತು. ಪಂದ್ಯದ ವಿಜೇತರನ್ನು ನಿರ್ಧರಿಸಲು, ಸೂಪರ್ ಓವರ್​ ಮೊರೆ ಹೋಗಲಾಯಿತು. ಅಲ್ಲಿ ಜೋನ್ಸ್ ಮತ್ತು ಹರ್ಮೀತ್ ಸಿಂಗ್ ಮೊಹಮ್ಮದ್ ಅಮೀರ್ ವಿರುದ್ಧ ಬ್ಯಾಟಿಂಗ್ ಮಾಡಿದರು. ಎಡಗೈ ವೇಗಿ ಎಸೆದ ಎರಡು ವೈಡ್ ಗಳು ಮತ್ತು ಕೆಲವು ಓವರ್ ಥ್ರೋ ಮೂಲಕ ಯುಎಸ್​ ತಂಡ 18 ರನ್ ಬಾರಿಸಿತು. ಅಮೆರಿಕದ ಬೌಲರ್​ ಸೌರಭ್ ನೇತ್ರವಾಲ್ಕರ್ ಅವರು ಸ್ಕೋರ್ ಅನ್ನು ಯಶಸ್ವಿಯಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು. ಪಾಕಿಸ್ತಾನವು ತನ್ನ ಸೂಪರ್ ಓವರ್​ನಲ್ಲಿ ಕೇವಲ 13 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರ ಪರಿಣಾಮವಾಗಿ, ಯುಎಸ್ಎ 2009 ರ ಪಂದ್ಯಾವಳಿಯ ಚಾಂಪಿಯನ್​ ತಂಡವನ್ನು ಸೋಲಿಸಿತು. ಪಾಕಿಸ್ತಾನ ತಂಡ ಜೂನ್ 9ರಂದು ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ.

Continue Reading
Advertisement
Narendra Modi
ದೇಶ12 mins ago

Narendra Modi: ಭಾನುವಾರ ಸಂಜೆ 7.15ಕ್ಕೆ ಮೋದಿ ಪ್ರಮಾಣವಚನ‌; ಹಲವು ಸಂಸದರಿಗೂ ಮಂತ್ರಿ ಭಾಗ್ಯ!

Niveditha Gowda
ಸಿನಿಮಾ17 mins ago

Niveditha Gowda : ಇನ್​ಸ್ಟಾಗ್ರಾಮ್​ನಲ್ಲಿ ಚಂದನ್ ಶೆಟ್ಟಿ ಅನ್​ಫಾಲೋ ಮಾಡಿದ ನಿವೇದಿತ ಗೌಡ

UG Neet 2024
ಕರ್ನಾಟಕ20 mins ago

NEET UG 2024: ಯುಜಿ ನೀಟ್: ರೋಲ್ ನಂಬರ್ ದಾಖಲಿಸಲು ಸದ್ಯದಲ್ಲೇ ಅವಕಾಶ

Niveditha Gowda
ಪ್ರಮುಖ ಸುದ್ದಿ51 mins ago

Niveditha Gowda : ಡಿವೋರ್ಸ್​ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡ ನಿವೇದಿತಾ ಗೌಡ, ಅವರ ಇನ್​ಸ್ಟಾಗ್ರಾಮ್ ಸಂದೇಶ ಇಲ್ಲಿದೆ

Hamare Baarah
ಸಿನಿಮಾ59 mins ago

Hamare Baarah: ಮುಸ್ಲಿಂ ಮಹಿಳೆಯರ ಕುರಿತ ಹಮಾರೆ ಬಾರಾ ಸಿನಿಮಾ ರಿಲೀಸ್‌ಗೆ ಕೋರ್ಟ್‌ ಗ್ರೀನ್‌ ಸಿಗ್ನಲ್!

Job News
ಕರ್ನಾಟಕ1 hour ago

Job News: ನಿಗಮ-ಮಂಡಳಿ ನೇಮಕಾತಿ; 684 ಹುದ್ದೆವಾರು ಪರಿಷ್ಕೃತ ಅಂಕಪಟ್ಟಿ ಪ್ರಕಟ

T20 World Cup
ಪ್ರಮುಖ ಸುದ್ದಿ1 hour ago

T20 World Cup : ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಅಮೆರಿಕ ತಂಡ

All achievements in life are easy if there is Guru's grace says Sri Satyatmatirtha Swamiji
ಮೈಸೂರು2 hours ago

Mysore News: ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ; ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

Akasa Air
ದೇಶ2 hours ago

Akasa Air: ಗೋರಖ್​ಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಆಕಾಶ ಏರ್ ನೇರ ವಿಮಾನ

Alliance Candidates Win in MLC South West Constituency Celebration at Ripponpet
ಶಿವಮೊಗ್ಗ2 hours ago

Shivamogga News: ನೈರುತ್ಯ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ ಭರ್ಜರಿ ಗೆಲುವು; ರಿಪ್ಪನ್‌ಪೇಟೆಯಲ್ಲಿ ಸಂಭ್ರಮಾಚರಣೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌