Shubman Gill: ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಗೆ ಶುಭಮನ್​ ಗಿಲ್​ ಉಪನಾಯಕ! - Vistara News

ಕ್ರೀಡೆ

Shubman Gill: ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಗೆ ಶುಭಮನ್​ ಗಿಲ್​ ಉಪನಾಯಕ!

Shubman Gill: 2027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಶುಭಮನ್​ ಗಿಲ್​ಗೆ ಏಕದಿನ ತಂಡದಲ್ಲಿ ಉಪನಾಯಕನ ಸ್ಥಾನ ನೀಡಲಾಗಿದೆ.

VISTARANEWS.COM


on

Shubman Gill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಭಾರತ ತಂಡದ ಭವಿಷ್ಯದ ನಾಯಕನೆಂದೇ ಪರಿಗಣಿಸಲ್ಪಟ್ಟಿರುವ ಯುವ ಆಟಗಾರ ಶುಭಮನ್​ ಗಿಲ್(Shubman Gill)​ ಅವರನ್ನು ಈಗಾಗಲೇ ಏಕದಿನ ಮತ್ತು ಟಿ20 ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ. ಇದೀಗ ಟೆಸ್ಟ್​ನಲ್ಲಿಯೂ ಅವರಿಗೆ ಉಪನಾಯಕ ಸ್ಥಾನ ನೀಡಲಾಗುತ್ತದೆ ಎಂದು ವರದಿಯಾಗಿದೆ. ಮುಂದಿನ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಗಿಲ್​ಗೆ ಉಪನಾಯಕ ಪಟ್ಟ ನೀಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

2027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಶುಭಮನ್​ ಗಿಲ್​ಗೆ ಏಕದಿನ ತಂಡದಲ್ಲಿ ಉಪನಾಯಕನ ಸ್ಥಾನ ನೀಡಲಾಗಿದೆ. ಲಂಕಾ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದೇ ಆದರೆ ಗಿಲ್​ ಮುಂದಿನ ದಿನದಲ್ಲಿ ತಂಡದ ನಾಯಕನಾಗುವುದು ಖಚಿತ ಎನ್ನಲಡ್ಡಿಯಿಲ್ಲ. ಕಳೆದ ತಿಂಗಳು ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಗಿಲ್​ ನಾಯಕತ್ವ ವಹಿಸಿ ಸರಣಿ ಗೆದ್ದಿದ್ದರು.

ಶುಭಮನ್​ ಗಿಲ್​ ಅವರು ಕಳೆದ 11 ಟೆಸ್ಟ್ ಇನಿಂಗ್ಸ್​ನಲ್ಲಿ ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದಾರೆ. 13, 8, 6, 10, 29*, 2, 26, 36, 10, 23, 0. ಗಿಲ್​ ಗಳಿಕೆ. ಅವರ ಬ್ಯಾಟಿಂಗ್​ ವೈಫಲ್ಯಕ್ಕೆ ಬ್ಯಾಟಿಂಗ್​ ಕ್ರಮಾಂಕದ ಬದಲಾವಣೆಯೂ ಮುಖ್ಯ ಕಾರಣ. ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ವೇಳೆ ಗಿಲ್​ ಆರಂಭಿಕನಾಗಿ ಆಡುತ್ತಿದ್ದರು. ಈ ವೇಳೆ ಉತ್ತಮ ಸಾಧನೆ ಕೂಡ ಮಾಡಿದ್ದರು. ಆದರೆ, ಆ ಬಳಿಕ ಇವರನ್ನು ದ್ವಿತೀಯ ಕ್ರಮಾಂಕದಲ್ಲಿ ಆಡಿಸಲಾಯಿತು. ಯಶಸ್ವಿ ಜೈಸ್ವಾಲ್​ ಆರಂಭಿಕನಾಗಿ ಆಡಲಾರಂಭಿಸಿದರು. ಬಾಂಗ್ಲಾದೇಶದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್​ ಪಂದ್ಯ ಸೆಪ್ಟೆಂಬರ್​ನಲ್ಲಿ ಆರಂಭಗೊಳ್ಳಲಿದೆ.

ಇದನ್ನೂ ಓದಿ IND vs SL: ಭಾರತ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ

ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ  ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು.

ಬಾಂಗ್ಲಾ ಸರಣಿಯ ವೇಳಾಪಟ್ಟಿ


ಸೆಪ್ಟೆಂಬರ್​-19 ಮೊದಲ ಟೆಸ್ಟ್​ ಪಂದ್ಯ. ತಾಣ: ಚೆನ್ನೈ

ಸೆಪ್ಟೆಂಬರ್​​-27 ದ್ವಿತೀಯ ಟೆಸ್ಟ್​. ತಾಣ; ಕಾನ್ಪುರ

ಅಕ್ಟೋಬರ್​-6 ಮೊದಲ ಟಿ20. ತಾಣ: ಧರ್ಮಶಾಲಾ

ಅಕ್ಟೋಬರ್​-9 ದ್ವಿತೀಯ ಟಿ20. ತಾಣ: ದೆಹಲಿ

ಅಕ್ಟೋಬರ್​-12 ಮೂರನೇ ಟಿ20. ತಾಣ: ಹೈದರಾಬಾದ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Venkatesh Iyer : ಟೀಮ್ ಇಂಡಿಯಾದಿಂದ ನಿರ್ಲಕ್ಷ್ಯ, ಹೊಸ ತಂಡ ಸೇರಿದ ವೆಂಕಟೇಶ್ ಅಯ್ಯರ್​

Venkatesh Iyer : ವೆಂಕಟೇಶ್ ಅಯ್ಯರ್ ದೇಶೀಯ ಸರ್ಕೀಟ್​​ ಮತ್ತು ಐಪಿಎಲ್​​ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಲಂಕಾಶೈರ್​ ಪರ ಉತ್ತಮ ಪ್ರದರ್ಶನ ಮುಂದುವರಿಸುವ ಮತ್ತು ದುಲೀಪ್ ಟ್ರೋಫಿಯಲ್ಲಿ ಪ್ರಭಾವ ಬೀರುವ ಭರವಸೆ ಅವರು ಹೊಂದಿದ್ದಾರೆ. 2022 ರ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಟಿ 20 ಐ ಸರಣಿಯಲ್ಲಿ ಅವರು ಕೊನೆಯ ಬಾರಿಗೆ ತಂಡಕ್ಕಾಗಿ ಕಾಣಿಸಿಕೊಂಡಿದ್ದರು.

VISTARANEWS.COM


on

Venkatesh Iyer
Koo

ಬೆಂಗಳೂರು: ಭಾರತ ತಂಡಕ್ಕೆ ಆಯ್ಕೆ ಮಾಡುವ ವಿಚಾರದಲ್ಲಿ ಸತತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ (KKR) ಆಲ್​ರೌಂಡರ್​ ವೆಂಕಟೇಶ್ ಅಯ್ಯರ್ (Venkatesh Iyer) ಏಕದಿನ ಕಪ್ ಮತ್ತು ಕೌಂಟಿ ಚಾಂಪಿಯನ್​ಶಿಪ್​ಗಾಗಿ ಲಂಕಾಶೈರ್​ ತಂಡದೊಂದಿಗೆ ಐದು ವಾರಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ನಂತರ ಅವರಿಗೆ ಈ ಅವಕಾಶ ಸಿಕ್ಕಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ (IPL 2024) ಕೋಲ್ಕತಾ ನೈಟ್ ರೈಡರ್ಸ್ (KKR) ಗೆಲ್ಲುವಲ್ಲಿ ವೆಂಕಟೇಶ್ ಅಯ್ಯರ್ ಪ್ರಮುಖ ಪಾತ್ರ ವಹಿಸಿದ್ದರು. ಆಲ್​ರೌಂಡರ್​ ಫ್ರಾಂಚೈಸಿಗಾಗಿ 370 ರನ್ ಗಳಿಸಿದ್ದರು. 4 ಅರ್ಧಶತಕಗಳನ್ನು ಬಾರಿಸಿದರು. ಅವರು ಪಂದ್ಯಾವಳಿಯ ಇತಿಹಾಸದಲ್ಲಿ ತಮ್ಮ ತಂಡಕ್ಕೆ ಮೂರನೇ ಪ್ರಶಸ್ತಿ ಎತ್ತಿಹಿಡಿಯಲು ಸಹಾಯ ಮಾಡಿದರು. ಅವರ ಸ್ಥಿರ ಪ್ರದರ್ಶನದ ಹೊರತಾಗಿಯೂ ವೆಂಕಟೇಶ್ ಅಯ್ಯರ್ ಅವರಿಗೆ ಭಾರತೀಯ ತಂಡದಲ್ಲಿ ಅವಕಾಶ ಸಿಗಲಿಲ್ಲ. ಆಲ್​ರೌಂಡರ್​ ಈಗ ಯುಕೆಯಲ್ಲಿ ಆಡಲು ನಿರ್ಧರಿಸಿದ್ದಾರೆ. ಅವರು ಲಂಕಾಶೈರ್​ನೊಂದಿಗೆ ಐದು ವಾರಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸೆಪ್ಟೆಂಬರ್​ನಲ್ಲಿ ನಡೆಯಲಿರುವ ದುಲೀಪ್ ಟ್ರೋಫಿಗಾಗಿ ಭಾರತಕ್ಕೆ ಮರಳಲಿದ್ದಾರೆ.

ವೆಂಕಟೇಶ್ ಅಯ್ಯರ್ ದೇಶೀಯ ಸರ್ಕೀಟ್​​ ಮತ್ತು ಐಪಿಎಲ್​​ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಲಂಕಾಶೈರ್​ ಪರ ಉತ್ತಮ ಪ್ರದರ್ಶನ ಮುಂದುವರಿಸುವ ಮತ್ತು ದುಲೀಪ್ ಟ್ರೋಫಿಯಲ್ಲಿ ಪ್ರಭಾವ ಬೀರುವ ಭರವಸೆ ಅವರು ಹೊಂದಿದ್ದಾರೆ. 2022 ರ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಟಿ 20 ಐ ಸರಣಿಯಲ್ಲಿ ಅವರು ಕೊನೆಯ ಬಾರಿಗೆ ತಂಡಕ್ಕಾಗಿ ಕಾಣಿಸಿಕೊಂಡಿದ್ದರು.

ವೆಂಕಟೇಶ್ ಅಯ್ಯರ್ ಐತಿಹಾಸಿಕ ಕ್ಲಬ್​​ ಪರ ಆಡುವ ಉತ್ಸಾಹದ ಬಗ್ಗೆ ಮಾತನಾಡಿದ್ದಾರೆ, ತಮ್ಮ ಕೌಶಲಗಳನ್ನು ಪರೀಕ್ಷಿಸಲು ಮತ್ತು ತನ್ನ ತಂಡವನ್ನು ಗೆಲ್ಲಲು ಸಹಾಯ ಮಾಡಲು ಇದು ಉತ್ತಮ ಅವಕಾಶ ಎಂದು ಅವರು ಒಪ್ಪಿಕೊಂಡರು. ಅಧಿಕೃತ ಹೇಳಿಕೆಯಲ್ಲಿ ಅವರು ಈ ರೀತಿ ತಿಳಿಸಿದ್ದಾರೆ.

ಇಂಗ್ಲೆಂಡ್​ಗೆ ತೆರಳಲು ಮತ್ತು ನನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುವ ಅವಕಾಶವನ್ನು ಪಡೆಯಲು ಉತ್ಸುಕನಾಗಿದ್ದೇನೆ. ಲಂಕಾಶೈರ್​ ಅತ್ಯಂತ ಐತಿಹಾಸಿಕ ಕೌಂಟಿಯಾಗಿದ್ದು, ಭಾರತೀಯ ಆಟಗಾರರನ್ನು ತಮ್ಮ ಕ್ಲಬ್​ಗೆ ಸ್ವಾಗತಿಸುವ ದೀರ್ಘ ಇತಿಹಾಸ ಹೊಂದಿದೆ. ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್​ ಸ್ಟೇಡಿಯಮ್​ನಲ್ಲಿ ಕೆಂಪು ಗುಲಾಬಿ ಬಣ್ಣ ಜೆರ್ಸಿ ಧರಿಸಿದ ಲೆಜೆಂಡ್​ಗಳಾದ ಫಾರೂಕ್ ಎಂಜಿನಿಯರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮತ್ತು ಇತ್ತೀಚೆಗೆ ವಾಷಿಂಗ್ಟನ್ ಸುಂದರ್ ಅವರನ್ನು ಅನುಕರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: India Tour of Sri Lanka 2024 : ಶ್ರೀಲಂಕಾ ತಂಡಕ್ಕೆ 3ನೇ ಹೊಡೆತ; ಭಾರತ ವಿರುದ್ಧದ ಟಿ20 ಸರಣಿಗೆ ಬಿನುರಾ ಫರ್ನಾಂಡೊ ಅಲಭ್ಯ

ಇಂಗ್ಲೆಂಡ್​ನ ಪರಿಸ್ಥಿತಿಗಳಲ್ಲಿ ಏಕದಿನ ಮತ್ತು ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ನನ್ನ ಕೌಶಲಗಳನ್ನು ಪರೀಕ್ಷಿಸಲು ಉತ್ತಮ ವೇದಿಕೆಯಾಗಿದೆ. ನಾನು ಅಭಿಮಾನಿಗಳನ್ನು ರಂಜಿಸಬಲ್ಲೆ ಮತ್ತು ಈ ಬೇಸಿಗೆಯಲ್ಲಿ ಎರಡೂ ಸ್ವರೂಪಗಳಲ್ಲಿ ತಮ್ಮ ಗುರಿ ಸಾಧಿಸಲು ನನ್ನ ಲಂಕಾಶೈರ್​ ತಂಡದ ಆಟಗಾರರಿಗೆ ಸಹಾಯ ಮಾಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

Continue Reading

ಪ್ರಮುಖ ಸುದ್ದಿ

India Tour of Sri Lanka 2024 : ಶ್ರೀಲಂಕಾ ತಂಡಕ್ಕೆ 3ನೇ ಹೊಡೆತ; ಭಾರತ ವಿರುದ್ಧದ ಟಿ20 ಸರಣಿಗೆ ಬಿನುರಾ ಫರ್ನಾಂಡೊ ಅಲಭ್ಯ

india tour of sri lanka 2024 : ಜ್ವರದಿಂದಾಗಿ ಹೊರಗುಳಿಯುವುದು ವೇಗಿಗೂ ದೊಡ್ಡ ಹೊಡೆತವಾಗಲಿದೆ. ಗಾಯದ ಸಮಸ್ಯೆಯಿಂದಾಗಿ ಬಿನುರಾ ಫರ್ನಾಂಡೊ ಶ್ರೀಲಂಕಾ ತಂಡದಲ್ಲಿ ಇನ್ನೂ ನಿಯಮಿತ ಆಟಗಾರನಾಗಿಲ್ಲ ಉಳಿದಿಲ್ಲ. ಮುಂಬರುವ ಪಂದ್ಯಕ್ಕೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಟಿ20ಐನಲ್ಲಿ 17 ಪಂದ್ಯಗಳನ್ನಾಡಿ 16 ವಿಕೆಟ್ ಕಬಳಿಸಿದ್ದಾರೆ.

VISTARANEWS.COM


on

india tour of sri lanka 2024
Koo

ಬೆಂಗಳೂರು: ಶ್ರೀಲಂಕಾ ಮತ್ತು ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ನಡುವಿನ ಮೂರು ಪಂದ್ಯಗಳ ಟಿ 20 ಐ ಸರಣಿ (India Tour of Sri Lanka 2024) ಶನಿವಾರ (ಜುಲೈ 27) ಪ್ರಾರಂಭವಾಗಲಿದೆ. ಎಲ್ಲಾ ಮೂರು ಪಂದ್ಯಗಳು ಪಲ್ಲೆಕೆಲೆಯಲ್ಲಿ ನಡೆಯಲಿವೆ. ವೇಗದ ಬೌಲರ್ ಬಿನುರಾ ಫರ್ನಾಂಡೊ ಮುಂಬರುವ ಮೊದಲ ಪಂದ್ಯಕ್ಕೆ ಆಡುವುದು ಅನುಮಾನವಾಗಿರುವುದರಿಂದ ಸರಣಿ ಪ್ರಾರಂಭವಾಗುವ ಮೊದಲೇ ಶ್ರೀಲಂಕಾ ತನ್ನ ಆಟಗಾರರಲ್ಲಿ ಒಬ್ಬರನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಶ್ರೀಲಂಕಾದ ಮಾಧ್ಯಮಗಳ ವರದಿಗಳ ಪ್ರಕಾರ, ಎಡಗೈ ವೇಗಿ ಬಿನುರಾ ಜ್ವರದಿಂದಾಗಿ ಪಲ್ಲೆಕೆಲೆಯಲ್ಲಿ ನಡೆಯಲಿರುವ ಸರಣಿಯ ಆರಂಭಿಕ ಪಂದ್ಯಕ್ಕೆ ಆಡುವುದು ಅನುಮಾನ.

ಮೊದಲ ಟಿ 20 ಪಂದ್ಯಕ್ಕೆ ಬಿನುರಾ ಫರ್ನಾಂಡೊ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳಲು ವಿಫಲವಾದರೆ, ನುವಾನ್ ತುಷಾರಾ ಮತ್ತು ದುಷ್ಮಂತ ಚಮೀರಾ ಈಗಾಗಲೇ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಆತಿಥೇಯರಿಗೆ ಇದು ಮೂರನೇ ದೊಡ್ಡ ಹೊಡೆತವಾಗಲಿದೆ. ಈ ತಿಂಗಳ ಆರಂಭದಲ್ಲಿ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ 29 ವರ್ಷದ ಆಟಗಾರ ಅದ್ಭುತ ಫಾರ್ಮ್​ನಲ್ಲಿದ್ದರು. ಅವರು ಪಂದ್ಯಾವಳಿಯ ಅತ್ಯುತ್ತಮ ವೇಗದ ಬೌಲರ್ ಗಳಲ್ಲಿ ಒಬ್ಬರಾಗಿದ್ದರು. ಅವರು 13 ವಿಕೆಟ್​​ಗಳನ್ನು ಪಡೆದರು ಮತ್ತು ಮುಖ್ಯವಾಗಿ ಪವರ್​​ಪ್ಲೇ ಮತ್ತು ಡೆತ್ ಓವರ್​ಗಳಲ್ಲಿ ಬೌಲಿಂಗ್ ಮಾಡುವಾಗ 6.81 ರ ಅದ್ಭುತ ಎಕಾನಮಿ ರೇಟ್ ಅನ್ನು ಕಾಪಾಡಿಕೊಂಡಿದ್ದರು.

ಜ್ವರದಿಂದಾಗಿ ಹೊರಗುಳಿಯುವುದು ವೇಗಿಗೂ ದೊಡ್ಡ ಹೊಡೆತವಾಗಲಿದೆ. ಗಾಯದ ಸಮಸ್ಯೆಯಿಂದಾಗಿ ಬಿನುರಾ ಫರ್ನಾಂಡೊ ಶ್ರೀಲಂಕಾ ತಂಡದಲ್ಲಿ ಇನ್ನೂ ನಿಯಮಿತ ಆಟಗಾರನಾಗಿಲ್ಲ ಉಳಿದಿಲ್ಲ. ಮುಂಬರುವ ಪಂದ್ಯಕ್ಕೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಟಿ20ಐನಲ್ಲಿ 17 ಪಂದ್ಯಗಳನ್ನಾಡಿ 16 ವಿಕೆಟ್ ಕಬಳಿಸಿದ್ದಾರೆ.

ಶ್ರೀಲಂಕಾಕ್ಕೆ ಹೊಸ ನಾಯಕ

ಭಾರತ ವಿರುದ್ಧದ ಮುಂಬರುವ ಸರಣಿಯು ಶ್ರೀಲಂಕಾಕ್ಕೆ ಹೊಸ ಆರಂಭ ಸೂಚಿಸುತ್ತದೆ. ಏಕೆಂದರೆ ಅವರು ಟಿ 20 ಪಂದ್ಯಗಳಲ್ಲಿ ಹೊಸ ನಾಯಕನನ್ನು ಹೊಂದಲಿದ್ದಾರೆ. ಕಳೆದ ತಿಂಗಳು ನಡೆದ ಟಿ 20 ವಿಶ್ವಕಪ್​​ನಲ್ಲಿ ಶ್ರೀಲಂಕಾದ ವಿನಾಶಕಾರಿ ಪ್ರದರ್ಶನದ ನಂತರ ಈ ತಿಂಗಳ ಆರಂಭದಲ್ಲಿ ವನಿಂದು ಹಸರಂಗ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು. ಪಂದ್ಯಾವಳಿಯಲ್ಲಿ ಗುಂಪು ಹಂತಕ್ಕಿಂತ ಮುಂಚಿತವಾಗಿ ಮುನ್ನಡೆಯಲು ವಿಫಲರಾದರು.

ಶ್ರೀಲಂಕಾ ಟಿ20 ತಂಡದ ನೂತನ ನಾಯಕನಾಗಿ ಹಸರಂಗ ಬದಲಿಗೆ ಚರಿತ್ ಅಸಲಂಕಾ ಆಯ್ಕೆಯಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ, ಅಸಲಂಕಾ ಜಾಫ್ನಾ ಕಿಂಗ್ಸ್ ತಂಡವನ್ನು ಎಲ್ಪಿಎಲ್ ಪ್ರಶಸ್ತಿಗೆ ಮುನ್ನಡೆಸಿದರು ಮತ್ತು ಭಾರತದ ವಿರುದ್ಧ ಶ್ರೀಲಂಕಾವನ್ನು ಪ್ರಸಿದ್ಧ ಗೆಲುವಿನತ್ತ ಮುನ್ನಡೆಸುವ ಭರವಸೆಯಲ್ಲಿದ್ದಾರೆ.

ಇದನ್ನೂ ಓದಿ: PARIS OLYMPICS 2024 : ಪ್ಯಾರಿಸ್ ಒಲಿಂಪಿಕ್ಸ್​​ ಗ್ರಾಮದಲ್ಲೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡ ಅಥ್ಲೀಟ್​ಗಳು

ಭಾರತವು ಸರಣಿಗೆ ಹೊಸ ನಾಯಕನನ್ನು ಹೊಂದಿದೆ. ಟಿ 20 ವಿಶ್ವಕಪ್ ಗೆಲುವಿನ ನಂತರ ರೋಹಿತ್ ಶರ್ಮಾ ಕಳೆದ ತಿಂಗಳು ಟಿ 20 ಯಿಂದ ನಿವೃತ್ತರಾದ ನಂತರ ಸೂರ್ಯಕುಮಾರ್ ಯಾದವ್ ಅವರನ್ನು ಭಾರತದ ಹೊಸ ನಾಯಕರನ್ನಾಗಿ ನೇಮಿಸಲಾಗಿದೆ.

Continue Reading

ಪ್ರಮುಖ ಸುದ್ದಿ

PARIS OLYMPICS 2024 : ಪ್ಯಾರಿಸ್ ಒಲಿಂಪಿಕ್ಸ್​​ ಗ್ರಾಮದಲ್ಲೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡ ಅಥ್ಲೀಟ್​ಗಳು

PARIS OLYMPICS 2024 : ಈ ಸುದ್ದಿ ಮತ್ತು ಪೋಸ್ಟ್ ಅನ್ನು ಒಲಿಂಪಿಕ್ಸ್​​ ಅಧಿಕೃತ ಎಕ್ಸ್ ಹ್ಯಾಂಡಲ್ ಹಂಚಿಕೊಂಡಿದೆ “ಪ್ಯಾರಿಸ್​ 2024 ಒಲಿಂಪಿಕ್ ಗ್ರಾಮದಲ್ಲಿ ನಡೆದ ಮೊದಲ ಮದುವೆ ಪ್ರಸ್ತಾಪ. ಪಾಬ್ಲೊ ಸಿಮೊನೆಟ್ ಮತ್ತು ಪಿಲಾರ್ ಕ್ಯಾಂಪೊಯ್ ಅರ್ಜೆಂಟೀನಾದ ತಮ್ಮ ಹ್ಯಾಂಡ್​​ಬಾಲ್​ ಮತ್ತು ಹಾಕಿ ತಂಡದ ಸದಸ್ಯರಿಂದ ಅಭಿನಂದನೆಗಳನ್ನು ಪಡೆದುಕೊಂಡರು.

VISTARANEWS.COM


on

PARIS OLYMPICS 2024
Koo

ಪ್ಯಾರಿಸ್ : ಪ್ರೇಮಿಗಳ ನಗರ ಪ್ಯಾರಿಸ್​​ನಲ್ಲಿ 2024ರ (PARIS OLYMPICS 2024) ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನೆಯಾಗುವ ಮೊದಲೇ ಅಥ್ಲೀಟ್​ಗಳಿಬ್ಬರು ಮದುವೆ ಪ್ರಸ್ತಾಪವನ್ನು ಹಂಚಿಕೊಂಡಿದ್ದಾರೆ. ಅರ್ಜೆಂಟೀನಾ ಪುರುಷರ ಹ್ಯಾಂಡ್​​ಬಾಳ್​ ತಂಡದ ಸ್ಟಾರ್ ಆಟಗಾರ ಪಾಬ್ಲೊ ಸಿಮೊನೆಟ್ ಮತ್ತು ಅರ್ಜೆಂಟೀನಾ ಮಹಿಳಾ ಹಾಕಿ ತಂಡದ ಆಟಗಾರ್ತಿ ಮಾರಿಯಾ ಕ್ಯಾಂಪೊಯ್ ಪ್ರಪೋಸ್ ಮಾಡಿದರು. ಗ್ರೂಪ್ ಫೋಟೋ ಸೆಷನ್ ಸಮಯದಲ್ಲಿ, ಸಿಮೊನೆಟ್ ಬಗ್ಗಿ ನಿಂತು ಮಾರಿಯಾ ಕ್ಯಾಂಪೊಯ್ ಗೆ ಉಂಗುರ ತೊಡಿಸಿ ಪ್ರಪೋಸ್​ ಮಾಡಿದ್ದಾರೆ. ಆಕೆಯ ಕಣ್ಣುಗಳು ಖುಷಿಯಿಂದ ಅರಳುತ್ತಿದ್ದಂತೆ ತಂಡದ ಸದಸ್ಯರು ಹರ್ಷೋದ್ಘಾರ ಮಾಡಿದರು. ಉಳಿದವರು ಈ ಕ್ಷಣವನ್ನು ಸಂಭ್ರಮದಿಂದ ಆಚರಿಸಿದರು.

ಈ ಸುದ್ದಿ ಮತ್ತು ಪೋಸ್ಟ್ ಅನ್ನು ಒಲಿಂಪಿಕ್ಸ್​​ ಅಧಿಕೃತ ಎಕ್ಸ್ ಹ್ಯಾಂಡಲ್ ಹಂಚಿಕೊಂಡಿದೆ “ಪ್ಯಾರಿಸ್​ 2024 ಒಲಿಂಪಿಕ್ ಗ್ರಾಮದಲ್ಲಿ ನಡೆದ ಮೊದಲ ಮದುವೆ ಪ್ರಸ್ತಾಪ. ಪಾಬ್ಲೊ ಸಿಮೊನೆಟ್ ಮತ್ತು ಪಿಲಾರ್ ಕ್ಯಾಂಪೊಯ್ ಅರ್ಜೆಂಟೀನಾದ ತಮ್ಮ ಹ್ಯಾಂಡ್​​ಬಾಲ್​ ಮತ್ತು ಹಾಕಿ ತಂಡದ ಸದಸ್ಯರಿಂದ ಅಭಿನಂದನೆಗಳನ್ನು ಪಡೆದುಕೊಂಡರು.

ಅಧಿಕೃತ ವೆಬ್​ಸೈಟ್​ ವರದಿಯ ಪ್ರಕಾರ, ಪಾಬ್ಲೊ ಸಿಮೊನೆಟ್ ಅವರ ಮದುವೆ ಪ್ರಸಾಪದ ಸಮಯವು ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ. ಸ್ಯಾಂಟಿಯಾಗೊ 2023 ಪ್ಯಾನ್ ಅಮೆರಿಕನ್ ಕ್ರೀಡಾಕೂಟದಲ್ಲಿ ಪ್ಯಾರಿಸ್ 2024 ರಲ್ಲಿ ತಮ್ಮ ತಂಡಗಳು ತಮ್ಮ ಸ್ಥಾನಗಳನ್ನು ಭದ್ರಪಡಿಸಿದ ಕೆಲವೇ ನಿಮಿಷಗಳಲ್ಲಿ, ಸಿಮೊನೆಟ್ ತನ್ನ ಪ್ರಣಯದ ಕತೆಯನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ಗೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​ನ ರೈಲ್ವೆ ವ್ಯವಸ್ಥೆ ಮೇಲೆ ವಿಧ್ವಂಸಕ ದಾಳಿ

2015ರಿಂದ, ಸಿಮೊನೆಟ್ ಮತ್ತು ಕ್ಯಾಂಪೊಯ್ ತಮ್ಮ ಅಥ್ಲೆಟಿಕ್ ವೃತ್ತಿಜೀವನದ ನಡುವೆಯೂ ಪ್ರೇಮಕಥೆ ಮುಂದುವರಿಸಿದ್ದಾರೆ. ರಿಯೋ 2016ರಲ್ಲಿ ಒಟ್ಟಿಗೆ ಒಲಿಂಪಿಕ್ ಪಯಣ ಆರಂಭಿಸಿದ್ದರು. ಈಗ, ಎಂಟು ವರ್ಷಗಳ ನಂತರ, ಪ್ಯಾರಿಸ್ ಎಂದರೆ ಪ್ರೀತಿಯ ನಗರದಲ್ಲಿ ಅವರ ಪ್ರೇಮ ಬಹಿರಂಗವಾಗಿದೆ.

Continue Reading

ಕ್ರೀಡೆ

Womens Asia Cup T20: ಬಾಂಗ್ಲಾ ಮಣಿಸಿ ಫೈನಲ್​ ಪ್ರವೇಶಿಸಿದ ಭಾರತ

Womens Asia Cup T20: ಗುರಿ ಬೆನ್ನಟ್ಟಿದ ಭಾರತ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ(26*) ಮತ್ತು ಉಪನಾಯಕಿ ಸ್ಮೃತಿ ಮಂಧಾನ(55*) ರನ್​ ಬಾರಿಸಿ ಅಜೇಯರಾಗಿ ಉಳಿದರು.

VISTARANEWS.COM


on

Womens Asia Cup T20
Koo

ದಾಂಬುಲಾ: ಮಹಿಳಾ ಏಷ್ಯಾಕಪ್​ ಟಿ20 ಕ್ರಿಕೆಟ್(Womens Asia Cup T20)​ ಟೂರ್ನಿಯಲ್ಲಿ ಹಾಲಿ ಚಾಂಪಿಯನ್​ ಭಾರತ(India Women vs Bangladesh Women) ತಂಡ ಫೈನಲ್​ಗೆ ಲಗ್ಗೆಯಿಟ್ಟಿದೆ. ಇಂದು(ಶುಕ್ರವಾರ) ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿತು. ಫೈನಲ್​ನಲ್ಲಿ ಪಾಕಿಸ್ತಾನ ಅಥವಾ ಲಂಕಾ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದೆ.

ಶುಕ್ರವಾರ ಇಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 80 ರನ್​ ಬಾರಿಸಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ 11 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 83 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಗುರಿ ಬೆನ್ನಟ್ಟಿದ ಭಾರತ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ(26*) ಮತ್ತು ಉಪನಾಯಕಿ ಸ್ಮೃತಿ ಮಂಧಾನ(55*) ರನ್​ ಬಾರಿಸಿ ಅಜೇಯರಾಗಿ ಉಳಿದರು. ಶಫಾಲಿ 25 ರನ್​ ಪೂರ್ತಿಗೊಳಿಸಿದ ವೇಳೆ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್​ ಬಾರಿಸಿದ ಲಂಕಾ ನಾಯಕಿ ಚಾಮರಿ ಅತ್ತಪಟ್ಟು(180 ರನ್​) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಜಿಗಿದರು. ಶಫಾಲಿ ಸದ್ಯ 184* ರನ್​ ಬಾರಿಸಿದ್ದಾರೆ. ಸ್ಮೃತಿ ಮಂಧಾನ ಅವರ ಅಜೇಯ ಅರ್ಧಶತಕದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಯಿತು.

ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾಕ್ಕೆ ಮಧ್ಯಮ ವೇಗಿ ರೇಣುಕಾ ಸಿಂಗ್ ಘಾತಕ ದಾಳಿಯ ಮೂಲಕ ಆಘಾತವಿಕ್ಕಿದರು. ಆರಂಭಿಕ ಮೂರು ಆಟಗಾರರ ವಿಕೆಟ್​ಗಳನ್ನು ಕಿತ್ತು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇವರ ಬೌಲಿಂಗ್​ ದಾಳಿಗೆ ತತ್ತರಿಸಿದ ಬಾಂಗ್ಲಾ 21 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. 4 ಓವರ್​ ಬೌಲಿಂಗ್​ ನಡೆಸಿದ ರೇಣುಕಾ ಸಿಂಗ್ 1 ಮೇಡನ್​ ಸಹಿತ ಕೇವಲ 10 ರನ್​ ನೀಡಿ 3 ವಿಕೆಟ್​ ಉರುಳಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ಗಳ ಮೈಲುಗಲ್ಲು ತಲುಪಿದರು.

ಇದನ್ನೂ ಓದಿ Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

ರೇಣುಕಾ ಸಿಂಗ್ ಓವರ್​ ಮುಕ್ತಾಯದ ಬಳಿಕ ಸ್ಪಿನ್ನ್​ ಬೌಲರ್​ ರಾಧಾ ಯಾದವ್​ ತಮ್ಮ ಸ್ಪಿನ್​​ ಕೈಚಳಕ ತೋರಿದರು. ಇವರು ಕೂಡ 4 ಓವರ್​ ಬೌಲಿಂಗ್​ ಮೂಲಕ 14 ರನ್​ ನೀಡಿ 3 ವಿಕೆಟ್​ ಕಬಳಿಸಿದರು. ಒಂದು ಮೇಡನ್​ ಓವರ್​ ಕೂಡ ನಡೆಸಿದರು. ಬಾಂಗ್ಲಾ ತಂಡಕ್ಕೆ ಆಸರೆಯಾದದ್ದು ನಾಯಕಿ ನಿಗರ್ ಸುಲ್ತಾನಾ ಮಾತ್ರ. 4ನೇ ಕ್ರಮಾಂಕದಲ್ಲಿ ಆಡಲಿಳಿದ ಸುಲ್ತಾನಾ 51 ಎಸೆತ ಎದುರಿಸಿ 32 ರನ್​ ಬಾರಿಸಿದರು. ಇವರ ಈ ಸಣ್ಣ ಮಟ್ಟದ ಬ್ಯಾಟಿಂಗ್​ ಹೋರಾಟದ ನೆರವಿನಿಂದ ಬಾಂಗ್ಲಾ 50 ಗಡಿ ದಾಡಿತು. ಅಂತಿಮ ಹಂತದಲ್ಲಿ ಶೋರ್ನಾ ಅಖ್ತರ್​ 19 ರನ್​ ಬಾರಿಸಿ ಅಜೇಯರಾಗು ಉಳಿದರು. ಪೂಜಾ ವಸ್ತ್ರಾಕರ್​ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್​ ಕಿತ್ತರು.

ರಾತ್ರಿ ನಡೆಯುವ ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಆತಿಥೇಯ ಶ್ರೀಲಂಕಾ ಮುಖಾಮುಖಿಯಾಗಲಿವೆ. ತಂಡದ ಬಲಾಬಲ ನೋಡುವಾಗ ಲಂಕಾ ಹೆಚ್ಚು ಬಲಿಷ್ಠವಾಗಿ ಗೋಚರಿಸಿದೆ.

Continue Reading
Advertisement
B.S.Yediyurappa
ಕರ್ನಾಟಕ2 mins ago

B.S.Yediyurappa: ಯಡಿಯೂರಪ್ಪಗೆ ಮತ್ತೆ ಬಿಗ್‌ ರಿಲೀಫ್‌; ಪೋಕ್ಸೊ ಕೇಸ್‌ನಲ್ಲಿ ಬಂಧಿಸದಂತೆ ಹೈಕೋರ್ಟ್‌ ಸೂಚನೆ

On the occasion of Friendship Day Wonderla announced a buy one ticket get another ticket free offer
ಬೆಂಗಳೂರು7 mins ago

Wonderla Offer: ವಂಡರ್‌ಲಾದಿಂದ ವಿಶೇಷ ಆಫರ್‌; 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಫ್ರೀ!

Kargil Vijay Diwas Silver Jubilee Programme at ITI Central School Bengaluru
ಬೆಂಗಳೂರು9 mins ago

Kargil Vijay Diwas: ಬೆಂಗಳೂರಿನ ಐಟಿಐ ಸೆಂಟ್ರಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿನಾಚರಣೆ

FDCI & ICW 2024
ಫ್ಯಾಷನ್10 mins ago

FDCI & ICW 2024: ಇಂಡಿಯಾ ಕೌಚರ್‌ ವೀಕ್‌ನ 2ನೇ ದಿನ ಹೆಜ್ಜೆ ಹಾಕಿದ ಜಾಕ್ವೆಲೀನ್‌ ಫರ್ನಾಂಡಿಸ್‌

karnataka Weather Forecast
ಮಳೆ14 mins ago

Karnataka Weather : ಧಾರಾಕಾರ ಮಳೆ ಹಿನ್ನೆಲೆ ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ

Kargil Vijay Diwas 2024
ದೇಶ15 mins ago

Kargil Vijay Diwas 2024: ಹುತಾತ್ಮರಾಗುವ ಮುನ್ನ ಕಾರ್ಗಿಲ್‌ ಹೀರೊ ಕ್ಯಾ. ವಿಕ್ರಮ್‌ ಬಾತ್ರಾ ಆಡಿದ್ದ ಈ ಮಾತುಗಳು ಸ್ಫೂರ್ತಿದಾಯಕ!

Venkatesh Iyer
ಪ್ರಮುಖ ಸುದ್ದಿ17 mins ago

Venkatesh Iyer : ಟೀಮ್ ಇಂಡಿಯಾದಿಂದ ನಿರ್ಲಕ್ಷ್ಯ, ಹೊಸ ತಂಡ ಸೇರಿದ ವೆಂಕಟೇಶ್ ಅಯ್ಯರ್​

Narendra Modi
ದೇಶ29 mins ago

Narendra Modi: ಮೋದಿ ಎಚ್ಚರಿಕೆಗೆ ಪಾಕಿಸ್ತಾನ ಥಂಡಾ; ಗಡಿಯಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ!

Viral Video
Latest51 mins ago

Viral Video: ವಿಚ್ಛೇದನ ಸಿಕ್ಕಿದ ಖುಷಿಗೆ ʼಡಿವೋರ್ಸ್‌ ಪಾರ್ಟಿʼ ಮಾಡಿ ಕುಣಿದು ಕುಪ್ಪಳಿಸಿದ ಯುವತಿ! ವಿಡಿಯೊ ನೋಡಿ

india tour of sri lanka 2024
ಪ್ರಮುಖ ಸುದ್ದಿ1 hour ago

India Tour of Sri Lanka 2024 : ಶ್ರೀಲಂಕಾ ತಂಡಕ್ಕೆ 3ನೇ ಹೊಡೆತ; ಭಾರತ ವಿರುದ್ಧದ ಟಿ20 ಸರಣಿಗೆ ಬಿನುರಾ ಫರ್ನಾಂಡೊ ಅಲಭ್ಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ1 hour ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ4 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ1 day ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌