SL vs IND 1st T20I: ನಾಳೆ ಭಾರತ-ಲಂಕಾ ಮೊದಲ ಟಿ20; ಇತ್ತಂಡಗಳ ದಾಖಲೆ, ಪಿಚ್​ ರಿಪೋರ್ಟ್ ವರದಿ ಹೇಗಿದೆ? - Vistara News

ಕ್ರೀಡೆ

SL vs IND 1st T20I: ನಾಳೆ ಭಾರತ-ಲಂಕಾ ಮೊದಲ ಟಿ20; ಇತ್ತಂಡಗಳ ದಾಖಲೆ, ಪಿಚ್​ ರಿಪೋರ್ಟ್ ವರದಿ ಹೇಗಿದೆ?

SL vs IND 1st T20I: ಉಭಯ ತಂಡಗಳು ಮೊದಲ ಬಾರಿಗೆ ಟಿ20 ಆಡಿದ್ದು 2009ರಲ್ಲಿ. ಕೊಲಂಬೊದ ಪ್ರೇಮದಾಸ ಕ್ರಿಕೆಟ್​ ಸ್ಟೆಡಿಯಂನಲ್ಲಿ ನಡೆದ ಪಂದ್ಯ ಇದಾಗಿತ್ತು. ಇಲ್ಲಿ ಧೋನಿ ಪಡೆ 3 ವಿಕೆಟ್​ಗಳ ಗೆಲುವು ಕಂಡಿತ್ತು. ಶ್ರೀಲಂಕಾ ತಂಡ ಭಾರತ ವಿರುದ್ಧ ಮೊದಲ ಟಿ20 ಗೆಲುವು ಸಾಧಿಸಿದ್ದು ಕೂಡ 2009ರಲ್ಲಿ

VISTARANEWS.COM


on

SL vs IND 1st T20I
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಲ್ಲೆಕೆಲೆ: ಭಾರತ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಟಿ20 ಸರಣಿಗೆ ನಾಳೆ(ಶನಿವಾರ) ಅಧಿಕೃತ ಚಾಲನೆ ಸಿಗಲಿದೆ. ಪಲ್ಲೆಕೆಲೆ ಅಂತಾರಾಷ್ಟೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ(Pallekele International Cricket Stadium) ಮೊದಲ ಟಿ20 ಪಂದ್ಯ ನಡೆಯಲಿದೆ(SL vs IND 1st T20I). 2021ರ ಬಳಿಕ ಭಾರತ(Sri Lanka vs India) ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಆಡುತ್ತಿರುವ ದ್ವಿಪಕ್ಷೀಯ ಸರಣಿ ಇದಾಗಿದೆ. ಇತ್ತಂಡಗಳ ಟಿ20 ಮುಖಾಮುಖಿ, ಪಿಚ್​ ರಿಪೋರ್ಟ್​, ಸಂಭಾವ್ಯ ತಂಡಗಳ ಮಾಹಿತಿ ಇಲ್ಲಿದೆ.

ಬಲಾಬಲ


ಭಾರತ ಮತ್ತು ಶ್ರೀಲಂಕಾ ತಂಡಗಳು(SL vs IND Head to Head in T20) ಇದುವರೆಗೂ ಒಟ್ಟು 19 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಗರಿಷ್ಠ 19 ಪಂದ್ಯಗಳನ್ನು ಗೆದ್ದರೆ, ಶ್ರೀಲಂಕಾ 9 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಇತ್ತಂಡಗಳು ಕೊನೆಯ ಬಾರಿಗೆ ಟಿ20 ಪಂದ್ಯವನ್ನಾಡಿದ್ದು 2023ರಲ್ಲಿ. ಈ ಪಂದ್ಯದಲ್ಲಿ ಭಾರತ 91 ರನ್​ ಅಂತರದ ಗೆಲುವು ಸಾಧಿಸಿತ್ತು.

ಮೊದಲ ಮುಖಾಮುಖಿ

ಉಭಯ ತಂಡಗಳು ಮೊದಲ ಬಾರಿಗೆ ಟಿ20 ಆಡಿದ್ದು 2009ರಲ್ಲಿ. ಕೊಲಂಬೊದ ಪ್ರೇಮದಾಸ ಕ್ರಿಕೆಟ್​ ಸ್ಟೆಡಿಯಂನಲ್ಲಿ ನಡೆದ ಪಂದ್ಯ ಇದಾಗಿತ್ತು. ಇಲ್ಲಿ ಧೋನಿ ಪಡೆ 3 ವಿಕೆಟ್​ಗಳ ಗೆಲುವು ಕಂಡಿತ್ತು. ಶ್ರೀಲಂಕಾ ತಂಡ ಭಾರತ ವಿರುದ್ಧ ಮೊದಲ ಟಿ20 ಗೆಲುವು ಸಾಧಿಸಿದ್ದು ಕೂಡ 2009ರಲ್ಲಿ. ನಾಗ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ. ಇಲ್ಲಿ ಲಂಕಾ ತಂಡ 29 ರನ್​​ಗಳ ಜಯ ಗಳಿಸಿತ್ತು. ಪ್ರಸ್ತುತ ಲಂಕಾ ತಂಡವನ್ನು ನೋಡುವಾಗ ಭಾರತ ಆರಾಮದಾಯಕವಾಗಿ ಈ ಸರಣಿ ಗೆಲ್ಲುವಂತಿದೆ.

ಪಿಚ್​ ರಿಪೋರ್ಟ್


ಪಲ್ಲೆಕೆಲೆ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಸಾಮಾನ್ಯವಾಗಿ 170 ರನ್‌ಗಳ ಗುರಿಯನ್ನು ದಾಟಿದರೆ ಮಾತ್ರ ಪಂದ್ಯದಲ್ಲಿ ಪೈಪೋಟಿ ನೀಡಬಹುದು. ಈ ಮೊತ್ತವನ್ನು ಇಲ್ಲಿ ಸ್ಪರ್ಧಾತ್ಮಕ ಮೊತ್ತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮೊದಲು ಬ್ಯಾಟಿಂಗ್​ ನಡೆಸುವ ತಂಡ ಆದಷ್ಟು ಬೃಹತ್​ ಮೊತ್ತ ಬಾರಿಸರೆ ಉತ್ತಮ. ರಾತ್ರಿಯ ವೇಳೆ ಇಬ್ಬನಿಯ ಕಾಟ ಇರುವುದರಿಂದ ಚೇಸಿಂಗ್​ ನಡೆಸಲು ಉತ್ತಮ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಫೀಲ್ಡಿಂಗ್​ ಆಯ್ಕೆಗೆ ಪ್ರಾಮುಖ್ಯತೆ ನೀಡಬಹುದು. ವೇಗಿಗಳಿಗಿಂತ ಇಲ್ಲಿ ಸ್ಪಿನ್ನ್​ ಬೌಲರ್​ಗಳು ಹೆಚ್ಚು ಪರಿಣಾಮ ಬೀರಬಹುದು.

ಇದನ್ನೂ ಓದಿ IND vs SL: ಭಾರತ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ

ಉಭಯ ಸಂಭಾವ್ಯ ತಂಡಗಳು


ಶ್ರೀಲಂಕಾ: ಅವಿಷ್ಕ ಫೆರ್ನಾಂಡೋ, ಚರಿತ್ ಅಸಲಂಕ (ನಾಯಕ), ದಿನೇಶ್ ಚಾಂಡಿಮಾಲ್, ಕುಸಲ್ ಮೆಂಡಿಸ್ (ವಿಕೀ), ಪಾತುಮ್ ನಿಸ್ಸಾಂಕ, ವನಿಂದು ಹಸರಂಗ, ದಸುನ್ ಶಾನಕ, ಮಥೀಶ ಪತಿರಣ, ಮಹೇಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ಬಿನೂರ ಫೆರ್ನಾಂಡೋ.

ಭಾರತ: ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ (ನಾಯಕ), ರಿಷಬ್ ಪಂತ್ (ವಿಕೀ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Womens Asia Cup T20: ಬಾಂಗ್ಲಾ ಮಣಿಸಿ ಫೈನಲ್​ ಪ್ರವೇಶಿಸಿದ ಭಾರತ

Womens Asia Cup T20: ಗುರಿ ಬೆನ್ನಟ್ಟಿದ ಭಾರತ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ(26*) ಮತ್ತು ಉಪನಾಯಕಿ ಸ್ಮೃತಿ ಮಂಧಾನ(55*) ರನ್​ ಬಾರಿಸಿ ಅಜೇಯರಾಗಿ ಉಳಿದರು.

VISTARANEWS.COM


on

Womens Asia Cup T20
Koo

ದಾಂಬುಲಾ: ಮಹಿಳಾ ಏಷ್ಯಾಕಪ್​ ಟಿ20 ಕ್ರಿಕೆಟ್(Womens Asia Cup T20)​ ಟೂರ್ನಿಯಲ್ಲಿ ಹಾಲಿ ಚಾಂಪಿಯನ್​ ಭಾರತ(India Women vs Bangladesh Women) ತಂಡ ಫೈನಲ್​ಗೆ ಲಗ್ಗೆಯಿಟ್ಟಿದೆ. ಇಂದು(ಶುಕ್ರವಾರ) ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿತು. ಫೈನಲ್​ನಲ್ಲಿ ಪಾಕಿಸ್ತಾನ ಅಥವಾ ಲಂಕಾ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದೆ.

ಶುಕ್ರವಾರ ಇಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 80 ರನ್​ ಬಾರಿಸಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ 11 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 83 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಗುರಿ ಬೆನ್ನಟ್ಟಿದ ಭಾರತ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ(26*) ಮತ್ತು ಉಪನಾಯಕಿ ಸ್ಮೃತಿ ಮಂಧಾನ(55*) ರನ್​ ಬಾರಿಸಿ ಅಜೇಯರಾಗಿ ಉಳಿದರು. ಶಫಾಲಿ 25 ರನ್​ ಪೂರ್ತಿಗೊಳಿಸಿದ ವೇಳೆ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್​ ಬಾರಿಸಿದ ಲಂಕಾ ನಾಯಕಿ ಚಾಮರಿ ಅತ್ತಪಟ್ಟು(180 ರನ್​) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಜಿಗಿದರು. ಶಫಾಲಿ ಸದ್ಯ 184* ರನ್​ ಬಾರಿಸಿದ್ದಾರೆ. ಸ್ಮೃತಿ ಮಂಧಾನ ಅವರ ಅಜೇಯ ಅರ್ಧಶತಕದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಯಿತು.

ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾಕ್ಕೆ ಮಧ್ಯಮ ವೇಗಿ ರೇಣುಕಾ ಸಿಂಗ್ ಘಾತಕ ದಾಳಿಯ ಮೂಲಕ ಆಘಾತವಿಕ್ಕಿದರು. ಆರಂಭಿಕ ಮೂರು ಆಟಗಾರರ ವಿಕೆಟ್​ಗಳನ್ನು ಕಿತ್ತು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇವರ ಬೌಲಿಂಗ್​ ದಾಳಿಗೆ ತತ್ತರಿಸಿದ ಬಾಂಗ್ಲಾ 21 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. 4 ಓವರ್​ ಬೌಲಿಂಗ್​ ನಡೆಸಿದ ರೇಣುಕಾ ಸಿಂಗ್ 1 ಮೇಡನ್​ ಸಹಿತ ಕೇವಲ 10 ರನ್​ ನೀಡಿ 3 ವಿಕೆಟ್​ ಉರುಳಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ಗಳ ಮೈಲುಗಲ್ಲು ತಲುಪಿದರು.

ಇದನ್ನೂ ಓದಿ Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

ರೇಣುಕಾ ಸಿಂಗ್ ಓವರ್​ ಮುಕ್ತಾಯದ ಬಳಿಕ ಸ್ಪಿನ್ನ್​ ಬೌಲರ್​ ರಾಧಾ ಯಾದವ್​ ತಮ್ಮ ಸ್ಪಿನ್​​ ಕೈಚಳಕ ತೋರಿದರು. ಇವರು ಕೂಡ 4 ಓವರ್​ ಬೌಲಿಂಗ್​ ಮೂಲಕ 14 ರನ್​ ನೀಡಿ 3 ವಿಕೆಟ್​ ಕಬಳಿಸಿದರು. ಒಂದು ಮೇಡನ್​ ಓವರ್​ ಕೂಡ ನಡೆಸಿದರು. ಬಾಂಗ್ಲಾ ತಂಡಕ್ಕೆ ಆಸರೆಯಾದದ್ದು ನಾಯಕಿ ನಿಗರ್ ಸುಲ್ತಾನಾ ಮಾತ್ರ. 4ನೇ ಕ್ರಮಾಂಕದಲ್ಲಿ ಆಡಲಿಳಿದ ಸುಲ್ತಾನಾ 51 ಎಸೆತ ಎದುರಿಸಿ 32 ರನ್​ ಬಾರಿಸಿದರು. ಇವರ ಈ ಸಣ್ಣ ಮಟ್ಟದ ಬ್ಯಾಟಿಂಗ್​ ಹೋರಾಟದ ನೆರವಿನಿಂದ ಬಾಂಗ್ಲಾ 50 ಗಡಿ ದಾಡಿತು. ಅಂತಿಮ ಹಂತದಲ್ಲಿ ಶೋರ್ನಾ ಅಖ್ತರ್​ 19 ರನ್​ ಬಾರಿಸಿ ಅಜೇಯರಾಗು ಉಳಿದರು. ಪೂಜಾ ವಸ್ತ್ರಾಕರ್​ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್​ ಕಿತ್ತರು.

ರಾತ್ರಿ ನಡೆಯುವ ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಆತಿಥೇಯ ಶ್ರೀಲಂಕಾ ಮುಖಾಮುಖಿಯಾಗಲಿವೆ. ತಂಡದ ಬಲಾಬಲ ನೋಡುವಾಗ ಲಂಕಾ ಹೆಚ್ಚು ಬಲಿಷ್ಠವಾಗಿ ಗೋಚರಿಸಿದೆ.

Continue Reading

ಪ್ರಮುಖ ಸುದ್ದಿ

Paris Olympics 2024 : ಒಲಿಂಪಿಕ್ಸ್​ಗೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​ನ ರೈಲ್ವೆ ವ್ಯವಸ್ಥೆ ಮೇಲೆ ವಿಧ್ವಂಸಕ ದಾಳಿ

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024 ರ (Paris Olympics 2024) ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​​ನ ಹೈಸ್ಪೀಡ್ ಟಿಜಿವಿ ರೈಲು ಜಾಲದ ಮೇಲೆ ದುಷ್ಕರ್ಮಿಗಳ ದಾಳಿ ನಡೆದಿದೆ. ಶುಕ್ರವಾರ ರೈಲಿನ ತಾಂತ್ರಿಕ ನಿರ್ವಹಣಾ ಕೇಂದ್ರಗಳಿಗೆ ಬೆಂಕಿ ಹಚ್ಚವಲಾಗಿದೆ. ದುರುದ್ದೇಶದ ಕೃತ್ಯಗಳಿಂದಾಗಿ ರೈಲು ಸಂಪರ್ಕ ಜಾಲಕ್ಕೆ ಹಾನಿಯಾಗಿದೆ. ಇದು ದೇಶದ ಜನನಿಬಿಡ ರೈಲು ಮಾರ್ಗಗಳಿಗೆ ಅಡ್ಡಿಯಾಗಿದ್ದು, ಪ್ರಯಾಣಿಕರು ಅರ್ಧ ದಾರಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಕ್ರೀಡಾಕೂಟಕ್ಕೆ ಮುಂಚಿತವಾಗಿ ಪ್ರಯಾಣಕ್ಕೆ ಅಡ್ಡಿಪಡಿಸಲು ಈ ದಾಳಿ ನಡೆಸಲಾಗಿದ್ದು ಇದು ಸಂಘಟಿತ ವಿಧ್ವಂಸಕ ಕೃತ್ಯ ಎಂದು ಹೇಳಲಾಗಿದೆ.

ಪ್ಯಾರಿಸ್ ಅನ್ನು ಪಶ್ಚಿಮ, ಉತ್ತರ ಮತ್ತು ಪೂರ್ವ ಪ್ರದೇಶಗಳೊಂದಿಗೆ ಸಂಪರ್ಕಿಸುವ ಮಾರ್ಗಗಳಲ್ಲಿನ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಎಸ್ಎನ್​ಸಿಎಫ್ ತಿಳಿಸಿದೆ. ಇಂಗ್ಲಿಷ್ ಕಾಲುವೆಯ ಕೆಳಗಿರುವ ಲಂಡನ್ ಮತ್ತು ನೆರೆಯ ಬೆಲ್ಜಿಯಂಗೆ ಪ್ರಯಾಣದ ಮೇಲೂ ಇದು ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ.

ಅಲ್ಲಿ ರೈಲು ವಿಭಾಗ ಹಲವಾರು ರೈಲುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಯಿತು ಮತ್ತು ರದ್ದುಗೊಳಿಸಬೇಕಾಯಿತು ಎಂದು ಹೇಳಲಾಗಿದೆ. ದುರಸ್ತಿಯ ಮೇಲ್ವಿಚಾರಣೆಗಾಗಿ ಸುರಕ್ಷತಾ ತಂಡ ಸ್ಥಳದಲ್ಲಿದೆ ಎಂದು ಹೇಳಿದ್ದಾರೆ. ವಾರಾಂತ್ಯದಲ್ಲಿ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

“ಅಟ್ಲಾಂಟಿಕ್, ಉತ್ತರ ಮತ್ತು ಪೂರ್ವ ಹೈಸ್ಪೀಡ್ ಮಾರ್ಗಗಳಲ್ಲಿ ಹಲವೆಡೆ ಬೆಂಕಿ ಹಚ್ಚಲಾಗಿದೆ. ನಮ್ಮ ರೈಲ್ವೆ ವ್ಯವಸ್ಥೆಗಳನ್ನು ಹಾನಿಗೊಳಿಸಲು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ನಡೆದ ದಾಳಿಗಳನ್ನು ಸರ್ಕಾರಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ, ಈ ಘಟನೆಗಳಿಂದ ಕ್ರೀಡಾಕೂಟಗಳ ತಾಣಕ್ಕೆ ಯಾವುದೇ ಸಂಪರ್ಕ ಕಡಿತಗೊಂಡಿಲ್ಲ.

ಸಾರಿಗೆ ಸಚಿವ ಪ್ಯಾಟ್ರಿಸ್ ವೆರ್ಗ್ರೀಟ್ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ “ಕ್ರಿಮಿನಲ್ ಘಟನೆಗಳನ್ನು ಖಂಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ರೈಲ್ವೆ ಸಂಚಾರವನ್ನು ಪುನಃಸ್ಥಾಪಿಸಲು ಎಸ್ ಎನ್ ಸಿಎಫ್ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.ದುರಸ್ತಿ ಕಾರ್ಯಗಳು ನಡೆಯುತ್ತಿದೆ. ರೈಲುಗಳನ್ನು ತಮ್ಮ ನಿರ್ಗಮನ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಆದಾಗ್ಯೂ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಪ್ರಯಾಣಿಕರಿಗೆ ಕೋಲಾಗಿದೆ.

ಇಷ್ಟು ದೊಡ್ಡ ಪ್ರಮಾಣದ ದಾಳಿಯು “ಟಿಜಿವಿ ನೆಟ್ವರ್ಕ್ ಅನ್ನು ನಿಷ್ಕ್ರಿಯಗೊಳಿಸುವ” ಗುರಿ ಹೊಂದಿತ್ತು ರೈಲ್ವೆ ಕಂಪನಿ ಹೇಳಿದೆ. ಸುಮಾರು 800,000 ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.

ವಿಧ್ವಂಸಕ ಕೃತ್ಯದಿಂದ ಲಂಡನ್ ಮತ್ತು ಪ್ಯಾರಿಸ್ ನಡುವಿನ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ.

Continue Reading

ಕ್ರೀಡೆ

Rohit Sharma: ವಿಮಾನ ನಿಲ್ದಾಣದಿಂದ ಲ್ಯಾಂಬೋರ್ಗಿನಿ ಕಾರು ಚಲಾಯಿಸಿಕೊಂಡು ಹೋದ ರೋಹಿತ್​; ವಿಡಿಯೊ ವೈರಲ್​

Rohit Sharma: ಸದ್ಯ ಭಾರತಕ್ಕೆ ಬಂದಿರುವ ರೋಹಿತ್​ ಮುಂದಿನ ವಾರ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನಾಡಲು ಲಂಕಾಗೆ ಪ್ರಯಾಣಿಸಲಿದ್ದಾರೆ.

VISTARANEWS.COM


on

Rohit Sharma
Koo

ಮುಂಬಯಿ: ಟಿ20 ವಿಶ್ವಕಪ್​ ಗೆಲುವಿನ ಬಳಿಕ ಕುಟುಂಬ ಸಮೇತರಾಗಿ ವಿದೇಶ ಪ್ರವಾಶ ಕೈಗೊಂಡಿದ್ದ ರೋಹಿತ್​ ಶರ್ಮ(Rohit Sharma), ಇದೀಗ ತವರಿಗೆ ಮರಳಿದ್ದಾರೆ. ಮುಂಬೈಗೆ ಆಗಮಿಸಿದ ರೋಹಿತ್ ವಿಮಾನ ನಿಲ್ದಾಣದಿಂದ​ ತಮ್ಮ ನೆಚ್ಚಿನ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರಿನಲ್ಲಿ ಮಗಳು ಮತ್ತು ಪತ್ನಿಯನ್ನು ಕೂರಿಸಿಕೊಂಡು ಮನೆಗೆ ತೆರಳಿದ್ದಾರೆ. ಸ್ವತಃ ರೋಹಿತ್​ ಅವರೇ ಕಾರು ಚಲಾಯಿಸಿಕೊಂಡು ಹೋದ ವಿಡಿಯೊ ವೈರಲ್​(viral video) ಆಗಿದೆ. ಸದ್ಯ ಭಾರತಕ್ಕೆ ಬಂದಿರುವ ರೋಹಿತ್​ ಮುಂದಿನ ವಾರ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನಾಡಲು ಲಂಕಾಗೆ ಪ್ರಯಾಣಿಸಲಿದ್ದಾರೆ.


ಅತಿ ವೇಗದ ಕಾರು ಚಾಲನೆ ಮಾಡಿದ್ದ ರೋಹಿತ್​ ಶರ್ಮಗೆ ಈ ಹಿಂದೆ 3 ಬಾರಿ ಪೊಲೀಸರು ದಂಡ ವಿಧಿಸಿದ್ದರು. ​ಲಂಬೋರ್ಗಿನಿ ಕಾರಿನಲ್ಲಿ ಅವರು ಗಂಟೆಗೆ 200 ಕಿ.ಮೀ ಕಾರು ಚಲಾಯಿಸಿದ್ದರು. ಇದೇ ಕಾರಣಕ್ಕೆ ಅತಿ ವೇಗದ ಚಾಲನೆಯ ಟ್ರಾಫಿಕ್​ ನಿಯಮದ ಅಡಿಯಲ್ಲಿ ಅವರಿಗೆ ಮೂರು ಟ್ರಾಫಿಕ್ ದಂಡದ ಚಲನ್‌ಗಳನ್ನು ನೀಡಲಾಗಿತ್ತು.

ರೋಹಿತ್ ನಾಯಕತ್ವದಲ್ಲಿ, ಜೂನ್​ 29ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.

ಇದನ್ನೂ ಓದಿ Rohit Sharma: ‘ಎಲಾ ಉನ್ನಾರು?’; ತೆಲುಗಿನಲ್ಲಿ ಮಾತನಾಡಿದ ರೋಹಿತ್ ಶರ್ಮ; ವಿಡಿಯೊ ವೈರಲ್​

ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಆರ್​ಸಿಬಿ ಸೇರಲಿದ್ದಾರಾ ರೋಹಿತ್​?


ಮುಂದಿನ ಬಾರಿ ನಡೆಯುವ ಐಪಿಎಲ್​ ಟೂರ್ನಿಯಲ್ಲಿ ರೋಹಿತ್​ ಶರ್ಮ ಆರ್​ಸಿಬಿ ಪರ ಆಡುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಕಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ರೋಹಿತ್ ಶರ್ಮಗೆ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್‌ ಪ್ರಾಂಚೈಸಿಯಿಂದ ನಾಯಕತ್ವದ ಆಫರ್‌ಗಳು ಬಂದಿದೆ ಎನ್ನಲಾಗಿದೆ. ಆದರೆ, ರೋಹಿತ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Continue Reading

ಕ್ರೀಡೆ

Maharaja Trophy Squads: ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ

Maharaja Trophy Squads: ಟೀಮ್​ ಇಂಡಿಯಾ ಮಾಜಿ ಕೋಚ್​ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್(Samit Dravid)​ ಅವರನ್ನು ಮೂಲಬೆಲೆ 50 ಸಾವಿರ ನೀಡಿ ಮೈಸೂರು ವಾರಿಯರ್ಸ್​ ತಂಡ ಖರೀದಿಸಿತು.

VISTARANEWS.COM


on

Maharaja Trophy Squads
Koo

ಬೆಂಗಳೂರು: ಮುಂದಿನ ತಿಂಗಳು ಆಗಸ್ಟ್​ 15ರಿಂದ ಆರಂಭಗೊಳ್ಳಲಿರುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy) ಟಿ20 ಟೂರ್ನಿಗೆ ನಿನ್ನೆ(ಗುರುವಾರ) ಆಟಗಾರರ ಹರಾಜು ಪ್ರಕ್ರಿಯೆ ನಡೆದಿತ್ತು. 8.6 ಲಕ್ಷ ರೂ.ಗೆ ಬೆಂಗಳೂರು ಬ್ಲಾಸ್ಟರ್​ ತಂಡ ಸೇರಿದ 24 ವರ್ಷದ ಎಲ್​.ಆರ್​ ಚೇತನ್​ ಈ ಬಾರಿ ದುಬಾರಿ ಮೊತ್ತ ಪಡೆದ ಆಟಗಾರ ಎನಿಸಿಕೊಂಡರು. ಟೀಮ್​ ಇಂಡಿಯಾ ಮಾಜಿ ಕೋಚ್​ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್(Samit Dravid)​ ಅವರನ್ನು ಮೂಲಬೆಲೆ 50 ಸಾವಿರ ನೀಡಿ ಮೈಸೂರು ವಾರಿಯರ್ಸ್​ ತಂಡ ಖರೀದಿಸಿತು. ಇದೀಗ ಎಲ್ಲ ತಂಡದ ಆಟಗಾರರ(Maharaja Trophy squads) ಪಟ್ಟಿ ಇಲ್ಲಿದೆ.

ಹುಬ್ಬಳ್ಳಿ ಟೈಗರ್ಸ್


ಮನೀಶ್ ಪಾಂಡೆ, ಶ್ರೀಜಿತ್ ಕೆ.ಎಲ್, ವಿಧ್ವತ್ ಕಾವೇರಪ್ಪ, ಮನ್ವಂತ್ ಕುಮಾರ್ ಎಲ್, ಕೆಸಿ ಕಾರಿಯಪ್ಪ , ಮೊಹಮ್ಮದ್ ತಾಹಾ, ತಿಪ್ಪಾ ರೆಡ್ಡಿ, ಕಾರ್ತಿಕೇಯ ಕೆಪಿ, ಕುಮಾರ್ ಎಲ್ಆರ್, ಆದರ್ಶ್ ಪ್ರಜ್ವಲ್, ಕೃತಿಕ್ ಕೃಷ್ಣ, ಅನೀಶ್ವರ್ ಗೌತಮ್, ಮಾಧವ್ ಪ್ರಕಾಶ್ ಬಜಾಜ್, ಶ್ರೀಶ ಎಸ್ ಅಕಾಹರ್, ದಮನ್ ದೇಪಹಾರ್, ಸಿಂಗ್, ಮಿತ್ರಕಾಂತ್ ಯಾದವ್, ನಿಶ್ಚಿತ್ ಪೈ, ರಿಷಿ ಬೋಪಣ್ಣ.

ಮೈಸೂರು ವಾರಿಯರ್ಸ್


ಕರುಣ್ ನಾಯರ್, ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ಕಾರ್ತಿಕ್ ಎಸ್ ಯು, ಸುಚಿತ್ ಜೆ, ಗೌತಮ್ ಕೆ, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ, ಹರ್ಷಿಲ್ ಧರ್ಮಾನಿ, ಗೌತಮ್ ಮಿಶ್ರಾ, ಧನುಷ್ ಗೌಡ, ಸಮಿತ್ ದ್ರಾವಿಡ್, ದೀಪಕ್ ದೇವಾಡಿಗ, ಸುಮಿತ್ ಕುಮಾರ್, ಸ್ಮಯನ್ ಶ್ರೀವಾಸ್ತವ, ಜಾಸ್ಪರ್ ಇಜೆ , ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸರ್ಫರಾಜ್ ಅಶ್ರಫ್.

ಶಿವಮೊಗ್ಗ ಲಯನ್ಸ್


ಅಭಿನವ್ ಮನೋಹರ್, ನಿಹಾಲ್ ಉಳ್ಳಾಲ್, ಕೌಶಿಕ್ ವಿ, ಶಿವರಾಜ್ ಎಸ್, ಪ್ರದೀಪ್ ಟಿ, ಹಾರ್ದಿಕ್ ರಾಜ್, ಧ್ರುವ ಪ್ರಭಾಕರ್, ಆನಂದ್ ದೊಡ್ಡಮನಿ, ರಾಜವೀರ್ ವಾಧ್ವಾ, ಅವಿನಾಶ್ ಡಿ, ಧೀರಜ್ ಮೋಹನ್, ಭರತ್ ಧುರಿ, ಆದಿತ್ಯ ವಿಶ್ವ ಕರ್ಮ, ಆದಿತ್ಯ ಮಣಿ, ರೋಹಿತ್ ಕೆ. ನವೀನ್, ಶರತ್ ಎಚ್.ಎಸ್, ಮೋಹಿತ್ ಬಿ.ಎ.

ಇದನ್ನೂ ಓದಿ Maharaja Trophy: ಮೈಸೂರು ವಾರಿಯರ್ಸ್ ತಂಡ ಸೇರಿದ ದ್ರಾವಿಡ್ ಪುತ್ರ ಸಮಿತ್

ಗುಲ್ಬರ್ಗ ಮಿಸ್ಟಿಕ್ಸ್


ದೇವದತ್ತ್ ಪಡಿಕ್ಕಲ್, ವೈಶಾಕ್ ವಿಜಯ್​ ಕುಮಾರ್, ಸ್ಮರಣ್ ಆರ್, ಅನೀಶ್ ಕೆವಿ, ಪ್ರವೀಣ್ ದುಬೆ, ಲುವ್ನಿತ್ ಸಿಸೋಡಿಯಾ, ಶರತ್ ಬಿಆರ್, ಆದಿತ್ಯ ನಾಯರ್, ಮೋನಿಶ್ ರೆಡ್ಡಿ, ಶರಣ್ ಗೌಡ್, ಯಶೋವರ್ಧನ್ ಪರಂತಪ್, ನಾಥನ್ ದ್ಮೆಲ್ಲೋ ಜೋಕಿಮ್, ಫೈಜಾನ್ ರಿಯಾಜ್, ರೈಟ್‌ಕಾಲ್, ರೈಟ್‌ಕಾಲ್ ಅಭಿಷೇಕ್ ಪ್ರಭಾಕರ್, ಪೃಥ್ವಿ ಶೇಖಾವತ್, ಶಿಮೊನ್ ಲೂಯಿಜ್.

ಬೆಂಗಳೂರು ಬ್ಲಾಸ್ಟರ್ಸ್


ಶುಭಾಂಗ್ ಹೆಗ್ಡೆ, ಮಯಾಂಕ್ ಅಗರ್ವಾಲ್, ಮೊಹ್ಸಿನ್ ಖಾನ್, ಸೂರಜ್ ಅಹುಜಾ, ಅನಿರುಧಾ ಜೋಶಿ, ನವೀನ್ ಎಂಜಿ, ಪ್ರತೀಕ್ ಜೈನ್, ಚೇತನ್ ಎಲ್ಆರ್, ಮೇಲು ಕ್ರಾಂತಿ ಕುಮಾರ್, ಸಂತೋಖ್ ಸಿಂಗ್, ಆದಿತ್ಯ ಗೋಯಲ್, ರಕ್ಷಿತ್ ಎಸ್, ವರುಣ್ ರಾವ್ ಟಿಎನ್, ನಿರಂಜನ್ ನಾಯ್ಕ್, ಲವಿಶ್ ಕಶಾಲ್ ವರುಣ್ ಕುಮಾರ್ ಎಚ್.ಸಿ, ಶಿಖರ್ ಶೆಟ್ಟಿ, ಭೀಮ್ ರಾವ್ ನವಲೆ.

ಮಂಗಳೂರು ಡ್ರಾಗನ್ಸ್

ರೋಹನ್ ಪಾಟೀಲ್, ಪಾರಸ್ ಗುರ್ಬಕ್ಸ್ ಆರ್ಯ, ಸಿದ್ಧಾರ್ಥ್ ಕೆವಿ, ನಿಕಿನ್ ಜೋಸ್, ಶ್ರೇಯಸ್ ಗೋಪಾಲ್, ಧೀರಜ್ ಜೆ ಗೌಡ, ದರ್ಶನ್ ಎಂಬಿ, ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ತುಷಾರ್ ಸಿಂಗ್, ಲಂಕೇಶ್ ಕೆಎಸ್, ಸಮರ್ಥ್ ನಾಗರಾಜ್, ಸಂಕಲ್ಪ್ ಎಸ್ಎಸ್, ಅಭಿಲಾಷ್ ರಾವ್, ನಿಶ್ಚಿತ್ ಶೆಟ್ಟಿ, ನಿಶ್ಚಿತ್ ಶೆಟ್ಟಿ ಗೌಡ, ಪ್ರಣವ್ ಭಾಟಿಯಾ, ಸಂಜಯ್ ಅಶ್ವಿನ್, ಸಾಗರ್ ಸೋಲಂಕಿ.

Continue Reading
Advertisement
Kannada New Movie Parapancha Gama Gama Powder song out
ಸ್ಯಾಂಡಲ್ ವುಡ್11 mins ago

Kannada New Movie: “ಪೌಡರ್” ತಂಡದಿಂದ ಹೊರ ಬಿತ್ತು ಹೊಸ ಹಾಡು; “ಪರಪಂಚವೇ ಘಮ ಘಮ”!

No cases of Nipah virus have been detected in the state says Minister Dinesh Gundurao
ಕರ್ನಾಟಕ14 mins ago

Dengue Fever: ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ: ದಿನೇಶ್ ಗುಂಡೂರಾವ್

Kampli Gangavathi link bridge inundation fear
ಬಳ್ಳಾರಿ17 mins ago

Ballari News: ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ ಭೀತಿ; ಸಂಚಾರಕ್ಕೆ ನಿರ್ಬಂಧ

KAS Recruitment 2024
ನೌಕರರ ಕಾರ್ನರ್20 mins ago

KAS Recruitment 2024: ಕೆಎಎಸ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ; ಸಚಿವ ಸಂಪುಟ ಅನುಮೋದನೆ

Karnataka Rain
ಮಳೆ24 mins ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Samantha Ruth Prabhu Citadel Honey Bunny Varun Dhawan
ಸಿನಿಮಾ28 mins ago

Samantha Ruth Prabhu: ಆ.1ಕ್ಕೆ ‘ಸಿಟಾಡೆಲ್’ ಬಿಗ್‌ ಅಪ್‌ಡೇಟ್‌ : ಸಮಂತಾ ಫ್ಯಾನ್ಸ್‌ಗೆ ಸಿಗಲಿದೆ ಗುಡ್‌ ನ್ಯೂಸ್‌!

Kanwar Yatra
ದೇಶ31 mins ago

Kanwar Yatra: ಕನ್ವರ್‌ ಯಾತ್ರೆ ವೇಳೆ ನಾಮ ಫಲಕ ಕಡ್ಡಾಯ; ಸುಪ್ರೀಂಕೋರ್ಟ್‌ನಿಂದ ಮತ್ತೊಂದು ಮಹತ್ವದ ಆದೇಶ

Womens Asia Cup T20
ಕ್ರೀಡೆ34 mins ago

Womens Asia Cup T20: ಬಾಂಗ್ಲಾ ಮಣಿಸಿ ಫೈನಲ್​ ಪ್ರವೇಶಿಸಿದ ಭಾರತ

Paris Olympics 2024
ಪ್ರಮುಖ ಸುದ್ದಿ35 mins ago

Paris Olympics 2024 : ಒಲಿಂಪಿಕ್ಸ್​ಗೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​ನ ರೈಲ್ವೆ ವ್ಯವಸ್ಥೆ ಮೇಲೆ ವಿಧ್ವಂಸಕ ದಾಳಿ

Kamala Harris
ವಿದೇಶ40 mins ago

Kamala Harris: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಮಲಾ ಹ್ಯಾರಿಸ್‌ ಪರ ನಿಂತ ಬರಾಕ್‌ ಒಬಾಮಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ24 mins ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 hour ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ24 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

ಟ್ರೆಂಡಿಂಗ್‌