Sourav Ganguly: ಹಾರ್ದಿಕ್​ ಪಾಂಡ್ಯಗೆ ವಿಶೇಷ ಮನವಿ ಮಾಡಿದ ದಾದಾ - Vistara News

ಕ್ರಿಕೆಟ್

Sourav Ganguly: ಹಾರ್ದಿಕ್​ ಪಾಂಡ್ಯಗೆ ವಿಶೇಷ ಮನವಿ ಮಾಡಿದ ದಾದಾ

ಎಲ್ಲ ಕಂಡೀಷನ್​ನಲ್ಲಿಯೂ ಬ್ಯಾಟ್​ ಬೀಸಬಲ್ಲ ಹಾರ್ದಿಕ್​ ಪಾಂಡ್ಯ(Hardik Pandya) ಅವರು ಟೆಸ್ಟ್ ಕ್ರಿಕೆಟ್​ಗೆ ಮರಳಬೇಕು ಎಂದು ಸೌರವ್​ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

gujarat titans captain
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಭಾರತ ಕ್ರಿಕೆಟ್​ ತಂಡ ಮಾಜಿ ನಾಯಕ ದಾದಾ ಖ್ಯಾತಿಯ ಸೌರವ್​ ಗಂಗೂಲಿ(Sourav Ganguly) ಅವರು ಭವಿಷ್ಯದ ಟೀಮ್​ ಇಂಡಿಯಾದ ನಾಯಕನೆಂದೇ ಪರಿಗಣಿಸಲ್ಪಟ್ಟ ಹಾರ್ದಿಕ್​ ಪಾಂಡ್ಯ(Hardik Pandya) ಅವರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಪಾಂಡ್ಯ ಅವರು ಮತ್ತೆ ಟೆಸ್ಟ್​ ಕ್ರಿಕೆಟ್​ಗೆ ಮರಳುವಂತೆ ಕೇಳಿಕೊಂಡಿದ್ದಾರೆ.

ಭಾರತ ಕ್ರಿಕೆಟ್​ ತಂಡದ ಭವಿಷ್ಯದ ಬಗೆಗಿನ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ಗಂಗೂಲಿ, ಎಲ್ಲ ಕಂಡೀಷನ್​ನಲ್ಲಿಯೂ ಬ್ಯಾಟ್​ ಬೀಸಬಲ್ಲ ಸಾಮರ್ಥ್ಯವುಳ್ಳ ಇರುವ ಹಾರ್ದಿಕ್​ ಪಾಂಡ್ಯ ಕೇವಲ ಸೀಮಿತ ಓವರ್​ನ ಕ್ರಿಕೆಟ್​ಗೆ ಸೀಮಿತವಾಗಬಾರದು ಅವರೂ ಕೂಡ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನನ್ನ ಮನವಿಯಂತೆ ಮುಂದಿನ ದಿನಗಳಲ್ಲಿ ಪಾಂಡ್ಯ ಟೆಸ್ಟ್ ಕ್ರಿಕೆಟ್​ ಆಡುವ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು.

ಇದೇ ವೇಳೆ ಟೆಸ್ಟ್​ ವಿಶ್ವ ಕಪ್​ನಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ನಡೆಸಲು ವಿಫಲವಾಗಿ ಟೀಕೆಗೆ ಗುರಿಯಾದ ವಿರಾಟ್​ ಕೊಹ್ಲಿ ಮತ್ತು ಚೇತೇಶ್ವರ್​ ಪೂಜಾರ ಅವರ ಪರ ಗಂಗೂಲಿ ಬ್ಯಾಟ್​ ಬೀಸಿದ್ದಾರೆ. “ಕೇವಲ ಒಂದು ಪಂದ್ಯದ ಸೋಲಿನಿಂದ ಆಟಗಾರರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಭಾರತದಲ್ಲಿ ಸಾಕಷ್ಟು ಕ್ರಿಕೆಟ್​ ಪ್ರತಿಭೆಗಳಿವೆ. ಒಂದು ವೈಫಲ್ಯವನ್ನು ಮುಂದಿಟ್ಟುಕೊಂಡು ವಿರಾಟ್‌ ಕೊಹ್ಲಿ ಹಾಗೂ ಚೇತೇಶ್ವರ್‌ ಪೂಜಾರ ಅವರನ್ನು ದೂರುವುದು ಸರಿಯಲ್ಲ” ಎಂದಿದ್ದಾರೆ.

ಇದನ್ನೂ ಓದಿ Team India : ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬಹಿರಂಗಪಡಿಸಿದ ಸೌರವ್​ ಗಂಗೂಲಿ!

ಐಪಿಎಲ್​ ಪ್ರದರ್ಶನವನ್ನು ಕಡೆಗಣಿಸಿ

ಮಹತ್ವದ ಪಂದ್ಯಗಳನ್ನು ಆಡುವಾಗ ಐಪಿಎಲ್​ ಪ್ರದರ್ಶನ ಕಂಡು ತಂಡವನ್ನು ರಚಿಸುವುದು ಮೂರ್ಖತನ. ಈ ಪದ್ಧತಿಯನ್ನು ಮೊದಲು ಕೈ ಬಿಡಬೇಕು. ಏಕೆಂದರೆ ದೇಶಿ ಕ್ರಿಕೆಟ್‌ನಲ್ಲಿ ಕೆಲ ಅದ್ಭುತ ಆಟಗಾರರು ಇದ್ದಾರೆ ಹಾಗೂ ಅವರಿಗೆ ನೀವು ಅವಕಾಶ ನೀಡಿದಾಗ ಮಾತ್ರ ಅವರಲ್ಲಿನ ಸಾಮರ್ಥ್ಯವನ್ನು ಪತ್ತೆ ಮಾಡಬಹುದು. ತಂಡಕ್ಕೆ ಬೇಕಿರುವುದು ಇನಿಂಗ್ಸ್​ ಕಟ್ಟಬಲ್ಲ ಆಟಗಾರರಾಗಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಜತೆಯಾಟ ಎನ್ನುವುದು ಬಹಳ ಮುಖ್ಯವಾಗಿದೆ. ಇದುವೇ ತಂಡದ ಫಲಿತಾಂಶದಲ್ಲಿ ಮಹತ್ವದ ಪಾತ್ರವಹಿಸುವುದಾಗಿದೆ. ಹೀಗಾಗಿ ದೇಶಿಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರನ್ನು ಆಯ್ಕೆ ಮಾಡಿ ಅವರನ್ನು ದೀರ್ಘ ಕಾಲದ ಕ್ರಿಕೆಟ್​ಗೆ ಸಿದ್ಧಪಡಿಸಿದರೆ ಉತ್ತಮ ಎಂದು ಗಂಗೂಲಿ ಬಿಸಿಸಿಐಗೆ ಉತ್ತಮ ಸಲಹೆ ನೀಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

IPL 2024: ಗೆಲುವಿನಲ್ಲೂ ನೂತನ ದಾಖಲೆ ಬರೆದ ಆರ್​ಸಿಬಿ

IPL 2024: ಆರ್​ಸಿಬಿ ತಂಡ ಗುಜರಾತ್​ ವಿರುದ್ಧ ಗೆಲುವು ಸಾಧಿಸುವ ಮೂಲಕ ಐಪಿಎಲ್​ನ ಇದುವರೆಗಿನ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳನ್ನು ಎದುರಿಸಿ 200 ರನ್​ ಚೇಸಿಂಗ್​ ಮಾಡಿದ ಮೊದಲ ತಂಡ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು. ಇದಕ್ಕೂ ಮುನ್ನ ಈ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರ ಇತ್ತು. 2023ರಲ್ಲಿ ಆರ್​ಸಿಬಿ ವಿರುದ್ಧವೇ ಮುಂಬೈ ಈ ದಾಖಲೆ ಬರೆದಿತ್ತು.

VISTARANEWS.COM


on

IPL 2024
Koo

ಅಹಮದಾಬಾದ್​: ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್​ಸಿಬಿ ಇದೀಗ ಗೆಲುವಿನ ಹಳಿಗೆ ಮರಳಿದೆ. ಇಂದಿನ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧ ಗೆಲ್ಲುವು ಮೂಲಕ ಸತತ 2ನೇ ಹಾಗೂ ಒಟ್ಟಾರೆ ಮೂರನೇ ಗೆಲುವು ದಾಖಲಿಸಿದೆ. ಗುಜರಾತ್​ ವಿರುದ್ಧ 9 ವಿಕೆಟ್​ ಅಂತರದ ಗೆಲುವು ಸಾಧಿಸುವ ಮೂಲಕ ಆರ್​ಸಿಬಿ(Royal Challengers Bengaluru) ಐಪಿಎಲ್​ನಲ್ಲಿ(IPL 2024) ನೂತನ ದಾಖಲೆಯೊಂದನ್ನು ನಿರ್ಮಿಸಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಟೈಟಾನ್ಸ್​, ಸಾಯಿ ಸುದರ್ಶನ್​(84*) ಮತ್ತು ಶಾರೂಖ್​ ಖಾನ್​(58) ಅವರ ಅರ್ಧಶತಕದ ಉಪಯುಕ್ತ ಬ್ಯಾಟಿಂಗ್​ ನೆರವಿನಿಂದ 20 ಓವರ್​ಗೆ 3 ವಿಕೆಟ್​ ಕಳೆದುಕೊಂಡು ಭರ್ತಿ 200 ರನ್​ ಪೇರಿಸಿತು. ಜವಾಬಿತ್ತ ಆರ್​ಸಿಬಿ ಫುಲ್​ ಬ್ಯಾಟಿಂಗ್​ ಜೋಶ್​ನೊಂದಿಗೆ ಕೇವಲ 16 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ ಇನ್ನೂ 24 ಎಸೆತಗಳು ಬಾಕಿ ಇರುವಂತೆಯೇ 206 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಈ ಗೆಲುವಿನ ಮೂಲಕ ಐಪಿಎಲ್​ನ ಇದುವರೆಗಿನ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳನ್ನು ಎದುರಿಸಿ 200 ರನ್​ ಚೇಸಿಂಗ್​ ಮಾಡಿದ ಮೊದಲ ತಂಡ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು. ಇದಕ್ಕೂ ಮುನ್ನ ಈ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರ ಇತ್ತು. 2023ರಲ್ಲಿ ಆರ್​ಸಿಬಿ ವಿರುದ್ಧವೇ ಮುಂಬೈ ಈ ದಾಖಲೆ ಬರೆದಿತ್ತು.

ಅತಿ ಹೆಚ್ಚು ಬಾಲ್​ ಉಳಿಸಿ 200 ರನ್​ ಚೇಸಿಂಗ್​ ನಡೆಸಿದ ತಂಡಗಳು


ಆರ್​ಸಿಬಿ-24 ಎಸೆತ ಬಾಕಿ ಇರುವಂತೆ ಗೆಲುವು

ಮುಂಬೈ ಇಂಡಿಯನ್ಸ್​- 21 ಎಸೆತ ಬಾಕಿ ಇರುವಂತೆ ಗೆಲುವು

ಡೆಲ್ಲಿ ಕ್ಯಾಪಿಟಲ್ಸ್​-15 ಎಸೆತ ಬಾಕಿ ಇರುವಂತೆ ಗೆಲುವು

ಮುಂಬೈ ಇಂಡಿಯನ್ಸ್​-12 ಎಸೆತ ಬಾಕಿ ಇರುವಂತೆ ಗೆಲುವು

ಇದನ್ನೂ ಓದಿ RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

ಈ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ವಿಲ್​ ಜಾಕ್ಸ್​ 41 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್​ ಮತ್ತು 5 ಬೌಂಡರಿ ಬಾರಿಸಿ ಭರ್ತಿ 100 ರನ್​ ಪೇರಿಸಿದರು. ಈ ಮೂಲಕ ಐಪಿಎಲ್​ನಲ್ಲಿ ಚೊಚ್ಚಲ ಶತಕ ಪೂರ್ತಿಗೊಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ವಿರಾಟ್​ ಕೊಹ್ಲಿ ಕೇವಲ 32 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿ ಒಟ್ಟು 44 ಎಸೆತಗಳಿಂದ ಅಜೇಯ 70 ರನ್​ ಬಾರಿಸಿ ಮಿಂಚಿದರು.

ದಾಖಲೆ ಬರೆದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಈ ಆವೃತ್ತಿಯಲ್ಲಿ 500 ರನ್​ಗಳ ಗಡಿ ದಾಟುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ಬಾರಿ 500 ರನ್ ಗಡಿ ದಾಡಿದ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಅವರ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಕೂಡ 7 ಬಾರಿ ಈ ಸಾಧನೆ ಮಾಡಿದ್ದಾರೆ. ಗುಜರಾತ್​ ವಿರುದ್ಧ ಕೊಹ್ಲಿ ಬಾರಿಸಿದ ಮೂರನೇ ಅರ್ಧಶತಕ ಇದಾಗಿದೆ. ಒಂದು ಶತಕ ಕೂಡ ಒಳಗೊಂಡಿದೆ.

Continue Reading

ಕ್ರೀಡೆ

YAJAMANA PREMIER LEAGUE SEASON-3: ಈ ಬಾರಿ ಟಿ10 ಮಾದರಿಯಲ್ಲಿ ನಡೆಯಲಿದೆ ಯಜಮಾನ ಪ್ರೀಮಿಯರ್ ಲೀಗ್​

YAJAMANA PREMIER LEAGUE SEASON-3: ಈ ಬಾರಿ ISPL ಮಾದರಿಯಲ್ಲಿ ಯಜಮಾನ ಪ್ರೀಮಿಯರ್ ಲೀಗ್ T10 ಟಚ್ ಕೊಡಲಾಗಿದೆ. ಪ್ರತಿ ತಂಡಗಳಿಗೂ ಮೆಂಟರ್ಸ್ ಗಳಿದ್ದು, ಶ್ರೇಯಸ್ ಮಂಜು, ಸಿಂಪಲ್ ಸುನಿ, ರೋಷನ್ ಬಚ್ಚನ್, ಜಯರಾಮ್ ಕಾರ್ತಿಕ್ ಸೇರಿದಂತೆ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಾಥ್ ಕೊಟ್ಟಿದ್ದಾರೆ.

VISTARANEWS.COM


on

YAJAMANA PREMIER LEAGUE SEASON-3 (2)
Koo

ಬೆಂಗಳೂರು: ಮೂರನೇ ಆವೃತ್ತಿಯ ಯಜಮಾನ ಪ್ರೀಮಿಯರ್ ಲೀಗ್(ವೈಪಿಎಲ್-3)ನ(YAJAMANA PREMIER LEAGUE SEASON-3) ದಿನಾಂಕ ಪ್ರಕಟಗೊಂಡಿದೆ. ಮೇ 4 ಮತ್ತು 5 ರಂದು ಎರಡು ದಿನಗಳ ಕಾಲ‌ ಟೂರ್ನಿ ನಡೆಯಲಿದೆ. ಶನಿವಾರ ತಂಡದ ಜರ್ಸಿ ಕೂಡ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಜಯರಾಮ್ ಕಾರ್ತಿಕ್ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು.

ಜೆರ್ಸಿ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ನಟ ಜಯರಾಮ್ ಕಾರ್ತಿಕ್, ಒಂದು ಕ್ರಿಕೆಟ್ ಪಂದ್ಯಾವಳಿ ನಡೆಸುವುದು ಎಷ್ಟು ಕಷ್ಟ ಎನ್ನುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಯಜಮಾನ ಪ್ರೀಮಿಯರ್ ಲೀಗ್​ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಇದು ಸಂತಸದ ವಿಚಾರ. ಈ ಲೀಗ್​ 100 ಆವೃತ್ತಿಯನ್ನು ಕಾಣಲಿ ಎಂದು ಹಾರೈಸುತ್ತೇನೆ. ವಿಷ್ಣು ಸರ್​ ಎಲ್ಲರಿಗೂ ಅಚ್ಚುಮೆಚ್ಚು. ಅವರ ಹೆಸರಿಗೆ ತಕ್ಕಂತೆ ಲೀಗ್​ಗೆ ಯಜಮಾನ ಲೀಗ್​ ಎಂದು ಹೆಸರಿಟ್ಟಿದ್ದು ಚೆನ್ನಾಗಿದೆ. ಇದು ನಮ್ಮ ಹೃದಯಕ್ಕೆ ಹತ್ತಿರವಾಗಿದೆ. ವಿಷ್ಣು ಸರ್ ನಮಗೆ ಸ್ಫೂರ್ತಿ. ಈ ಲೀಗ್​ನಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳಿಗೂ ಆಲ್ ದಿ ಬೆಸ್ಟ್ ಎಂದರು.


ಇದನ್ನೂ ಓದಿ RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

ಯದುನಂದನ್ ಗೌಡ ಮಾತನಾಡಿ, ಯಜಮಾನ ಪ್ರೀಮಿಯರ್ ಲೀಗ್ ನ ಮೂರು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಶುರು ಮಾಡಿದ್ದೇವು.‌ ಪ್ರೀಮಿಯರ್, ಐಪಿಎಲ್ ಅಂತಾ ಕ್ರಿಕೆಟ್ ಪಂದ್ಯಾವಳಿ ಮಾಡುತ್ತಾರೆ. ನಾವು ಯಾಕೆ ವಿಷ್ಣು ಸರ್(Dr.Vishnu Sena Samiti) ಹೆಸರಿನಲ್ಲಿ ಮಾಡಬಾರದು ಎಂದು ಅವರ ಹೆಸರಲ್ಲಿ ಶುರು ಮಾಡಿದೆವು. ಕನ್ನಡ ಇಂಡಸ್ಟ್ರೀಗೆ ಕ್ರಿಕೆಟ್ ಪರಿಚಯಿಸಿದ್ದು,ನಮ್ಮ ಯಜಮಾನರು. ವಿಷ್ಣು ಸರ್ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಅಭಿಮಾನಿಗಳೇ ಸೇರಿಕೊಂಡು ಯಜಮಾನ ಪ್ರೀಮಿಯರ್ ಲೀಗ್ ಪ್ರಾರಂಭಿಸಿದೆವು. ಸ್ಟಾರ್​ ವಾರ್​ ಬಿಟ್ಟು ಕನ್ನಡ ಚಿತ್ರರಂಗದ ಅಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಕೆಲಸವನ್ನು ಯಜಮಾನ ಪ್ರೀಮಿಯರ್ ಲೀಗ್ ಮೂಲಕ ಮಾಡಲಾಗಿದೆ. ನಿಮ್ಮ ಸಹಕಾರ ಇದ್ದರೆ ಈ ಪಂದ್ಯಾವಳಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.

ಟಿ10 ಮಾದರಿಯಲ್ಲಿ ಟೂರ್ನಿ


ಬೆಂಗಳೂರಿನ ಅಶೋಕ್ ರೈಸಿಂಗ್ ಕ್ರಿಕೆಟ್ ಗ್ರೌಂಡ್ ನಲ್ಲಿ ಪಂದ್ಯಾವಳಿ ನಡೆಯಲಿದೆ. ಈ ಬಾರಿ ISPL ಮಾದರಿಯಲ್ಲಿ ಯಜಮಾನ ಪ್ರೀಮಿಯರ್ ಲೀಗ್ T10 ಟಚ್ ಕೊಡಲಾಗಿದೆ. ಪ್ರತಿ ತಂಡಗಳಿಗೂ ಮೆಂಟರ್ಸ್ ಗಳಿದ್ದು, ಶ್ರೇಯಸ್ ಮಂಜು, ಸಿಂಪಲ್ ಸುನಿ, ರೋಷನ್ ಬಚ್ಚನ್, ಜಯರಾಮ್ ಕಾರ್ತಿಕ್ ಸೇರಿದಂತೆ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಾಥ್ ಕೊಟ್ಟಿದ್ದಾರೆ. ವೈಪಿಎಲ್ ಅನ್ನು ವಿಷ್ಣು ಸೇನಾ ಸಮಿತಿಯ ಬೆಂಗಳೂರಿನ ಜಿಲ್ಲಾಧ್ಯಕ್ಷ ಯದುನಂದನ್ ಗೌಡ ನಡೆಸುತ್ತಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿಸಿ ಮಲ್ಲಿಕಾರ್ಜುನ್ ಅವರಿಗೆ ಸಾಥ್ ಕೊಡುತ್ತಿದ್ದಾರೆ.


ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ ಪಂದ್ಯ ಶುರು ಮಾಡಿದ ಕೀರ್ತಿ ಡಾ.ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣುವರ್ಧನ್​ ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದರು. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.

Continue Reading

ಕ್ರಿಕೆಟ್

Virat Kohli: ಟೀಕೆಗಳಿಗೆ ಬಹಿರಂಗವಾಗಿಯೇ ತಿರುಗೇಟು ನೀಡಿದ ಕಿಂಗ್​ ಕೊಹ್ಲಿ​

Virat Kohli: ವಿರಾಟ್​ ಕೊಹ್ಲಿ ಅವರು ಈ ಆವೃತ್ತಿಯಲ್ಲಿ 500 ರನ್​ಗಳ ಗಡಿ ದಾಟುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ಬಾರಿ 500 ರನ್ ಗಡಿ ದಾಡಿದ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಅವರ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಕೂಡ 7 ಬಾರಿ ಈ ಸಾಧನೆ ಮಾಡಿದ್ದಾರೆ.

VISTARANEWS.COM


on

Virat Kohli
Koo

ಅಹಮದಾಬಾದ್​: ಭಾನುವಾರ ನಡೆದ ಐಪಿಎಲ್​ನ ಡಬಲ್​ ಹೆಡರ್​ನ ಹಗಲು ಪಂದ್ಯದಲ್ಲಿ ಬೊಂಬಾಟ್​ ಬ್ಯಾಟಿಂಗ್​ ನಡೆಸಿ ಅಜೇಯ ಅರ್ಧಶತಕ ಬಾರಿಸಿದ ಆರ್​ಸಿಬಿ(Royal Challengers Bengaluru) ಆಟಗಾರ ವಿರಾಟ್​ ಕೊಹ್ಲಿ(Virat Kohli) ಹಲವು ದಾಖಲೆಗಳನ್ನು ಬರೆದಿದ್ದಾರೆ. ಜತೆಗೆ ತಮ್ಮ ಬ್ಯಾಟಿಂಗ್​ ಬಗ್ಗೆ ಟೀಕೆ ಮಾಡಿದ ಎಲ್ಲರಿಗೂ ತೀಕ್ಷವಾದ ಮಾತುಗಳಿಂದ ಬಹಿರಂಗವಾಗಿಯೇ ತಿರುಗೇಟು ನೀಡಿದ್ದಾರೆ.

ವಿರಾಟ್​ ಕೊಹ್ಲಿ ಅವರು ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಕಲೆ ಹಾಕಿದರೂ ಕೂಡ ಅವರ ಬ್ಯಾಟಿಂಗ್​ ನಿಧಾನಗತಿಯಿಂದ ಕೂಡಿತ್ತು. ಇದೇ ಕಾರಣಕ್ಕೆ ಸುನೀಲ್​ ಗಾವಾಸ್ಕರ್​, ಆಕಾಶ್​ ಚೋಫ್ರಾ ಸೇರಿ ಅನೇಕ ಮಾಜಿ ಆಟಗಾರರು ಕೊಹ್ಲಿಯನ್ನು ಟೀಕಿಸಿದ್ದರು. ಕೊಹ್ಲಿಯ ಈ ಆಮೆಗತಿಯ ಬ್ಯಾಟಿಂಗ್​ನಿಂದಾಗಿಯೇ ಆರ್​ಸಿಬಿ ಸೋಲು ಕಾಣುತ್ತಿದೆ ಎಂದು ಹೇಳಿದ್ದರು.

ಕಳೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸ್ಪಿನ್ನ್​ ಬೌಲಿಂಗ್​ ದಾಳಿ ಎದುರಿಸಲು ಸಂಪೂರ್ಣವಾಗಿ ಪರದಾಟ ನಡೆಸಿದ್ದರು. ಹೀಗಾಗಿ ಸ್ಪಿನ್​ ಬೌಲಿಂಗ್​ಗೆ ಕೊಹ್ಲಿಗೆ ಆಡಲು ಬರುವುದಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು. ಇಂದಿನ ಪಂದ್ಯದಲ್ಲಿ ಬೊಂಬಾಟ್​ ಬ್ಯಾಟಿಂಗ್​ ನಡೆಸಿದ ಕೊಹ್ಲಿ ಕೇವಲ 32 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿ ಒಟ್ಟು 44 ಎಸೆತಗಳಿಂದ ಅಜೇಯ 70 ರನ್​ ಬಾರಿಸಿ ಮಿಂಚಿದರು. ಪಂದ್ಯದ ಮುಕ್ತಾಯದ ಬಳಿಕ ಮಾತನಾಡುವ ವೇಳೆ ತನ್ನ ವಿರುದ್ಧ ಯಾರೆಲ್ಲ ಟೀಕೆ ಮಾಡಿದ್ದಾರೋ ಅವರಿಗೆಲ್ಲ ಮುಟ್ಟಿ ನೋಡುವಂತೆ ತಕ್ಕ ಉತ್ತರ ನೀಡಿದ್ದಾರೆ.

ದಾಖಲೆ ಬರೆದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಈ ಆವೃತ್ತಿಯಲ್ಲಿ 500 ರನ್​ಗಳ ಗಡಿ ದಾಟುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ಬಾರಿ 500 ರನ್ ಗಡಿ ದಾಡಿದ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಅವರ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಕೂಡ 7 ಬಾರಿ ಈ ಸಾಧನೆ ಮಾಡಿದ್ದಾರೆ. ಗುಜರಾತ್​ ವಿರುದ್ಧ ಕೊಹ್ಲಿ ಬಾರಿಸಿದ ಮೂರನೇ ಅರ್ಧಶತಕ ಇದಾಗಿದೆ. ಒಂದು ಶತಕ ಕೂಡ ಒಳಗೊಂಡಿದೆ.

ಇದನ್ನೂ ಓದಿ IPL 2024: 41ನೇ ವಯಸ್ಸಿನಲ್ಲೂ ದಾಖಲೆ ಬರೆದ ಅಮಿತ್ ಮಿಶ್ರಾ

ಪಂದ್ಯ ಗೆದ್ದ ಆರ್​ಸಿಬಿ


ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಟೈಟಾನ್ಸ್​ ಸಾಯಿ ಸುದರ್ಶನ್​(84*) ಮತ್ತು ಶಾರೂಖ್​ ಖಾನ್​(58) ಅರ್ಧಶತಕದ ಉಪಯುಕ್ತ ಬ್ಯಾಟಿಂಗ್​ ನೆರವಿನಿಂದ 20 ಓವರ್​ಗೆ 3 ವಿಕೆಟ್​ ಕಳೆದುಕೊಂಡು ಭರ್ತಿ 200 ರನ್​ ಪೇರಿಸಿತು. ಜವಾಬಿತ್ತ ಆರ್​ಸಿಬಿ ಫುಲ್​ ಬ್ಯಾಟಿಂಗ್​ ಜೋಶ್​ನೊಂದಿಗೆ ಕೇವಲ 16 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 206 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ವಿಲ್​ ಜಾಕ್ಸ್​ 41 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್​ ಮತ್ತು 5 ಬೌಂಡರಿ ಬಾರಿಸಿ ಭರ್ತಿ 100 ರನ್​ ಪೇರಿಸಿದರು. ಈ ಮೂಲಕ ಐಪಿಎಲ್​ನಲ್ಲಿ ಚೊಚ್ಚಲ ಶತಕ ಪೂರ್ತಿಗೊಳಿಸಿದರು.

Continue Reading

ಕ್ರೀಡೆ

RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

RCB vs GT: ಕಳೆದ ಪಂದ್ಯದಲ್ಲಿ ಆಮೆ ಗತಿಯ ಬ್ಯಾಟಿಂಗ್​ ನಡೆಸಿ ಟೀಕೆಗೆ ಗುರಿಯಾಗಿದ್ದ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಬ್ಯಾಟಿಂಗ್​ ಜೋಶ್​ ತೋರ್ಪಡಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಎಸೆದ ಮೊದಲ ಓವರ್​ನಲ್ಲಿ ರನ್​ ಗಳಿಸಲು ಪರದಾಡಿದ ಕೊಹ್ಲಿ ಆ ಬಳಿಕ ಸಿಡಿದು ನಿಂತರು. 44 ಎಸೆತಗಳಿಂದ 70(6 ಬೌಂಡರಿ ಮತ್ತು 3 ಸಿಕ್ಸರ್​) ರನ್​ ಬಾರಿಸಿದರು.

VISTARANEWS.COM


on

RCB vs GT
Koo

ಅಹಮದಾಬಾದ್​: ವಿಲ್​ ಜ್ಯಾಕ್ಸ್ ​(100*) ಅವರ ಶತಕ ಮತ್ತು ವಿರಾಟ್​ ಕೊಹ್ಲಿಯ(70*) ಅರ್ಧಶತಕದ ಸೊಗಸಾದ ಬ್ಯಾಟಿಂಗ್​ ನೆರವಿನಿಂದ ರಾಯಲ್​ ಜಾಲೆಂಜರ್ಸ್​ ಬೆಂಗಳೂರು(RCB vs GT) ತಂಡ ಗುಜರಾತ್​ ಟೈಟಾನ್ಸ್​ ವಿರುದ್ಧ ಭರ್ಜರಿ 9 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಆರ್​ಸಿಬಿಗೆ 10 ಪಂದ್ಯಗಳಲ್ಲಿ ಒಲಿದ ಕೇವಲ ಮೂರನೇ ಗೆಲುವಾಗಿದೆ. ಗೆಲುವು ಕಂಡರೂ ಕೂಡ 6 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಟೈಟಾನ್ಸ್​ ಸಾಯಿ ಸುದರ್ಶನ್​(84*) ಮತ್ತು ಶಾರೂಖ್​ ಖಾನ್​(58) ಅರ್ಧಶತಕದ ಉಪಯುಕ್ತ ಬ್ಯಾಟಿಂಗ್​ ನೆರವಿನಿಂದ 20 ಓವರ್​ಗೆ 3 ವಿಕೆಟ್​ ಕಳೆದುಕೊಂಡು ಭರ್ತಿ 200 ರನ್​ ಪೇರಿಸಿತು. ಜವಾಬಿತ್ತ ಆರ್​ಸಿಬಿ ಫುಲ್​ ಬ್ಯಾಟಿಂಗ್​ ಜೋಶ್​ನೊಂದಿಗೆ ಕೇವಲ 16 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 206 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಕೊಹ್ಲಿ-ಜ್ಯಾಕ್ಸ್ ಬೊಂಬಾಟ್​ ಅರ್ಧಶತಕ


ಕಳೆದ ಪಂದ್ಯದಲ್ಲಿ ಆಮೆ ಗತಿಯ ಬ್ಯಾಟಿಂಗ್​ ನಡೆಸಿ ಟೀಕೆಗೆ ಗುರಿಯಾಗಿದ್ದ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಬ್ಯಾಟಿಂಗ್​ ಜೋಶ್​ ತೋರ್ಪಡಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಎಸೆದ ಮೊದಲ ಓವರ್​ನಲ್ಲಿ ರನ್​ ಗಳಿಸಲು ಪರದಾಡಿದ ಕೊಹ್ಲಿ ಆ ಬಳಿಕ ಸಿಡಿದು ನಿಂತರು. ಅಘಫಾನಿಸ್ತಾನದ ಸಿನ್ನರ್​ಗಳಾದ ರಶೀದ್​ ಖಾನ್​, ನೂರ್​ ಅಹ್ಮದ್​ಗೆ ಸತತ ಸಿಕ್ಸರ್​ ಮತ್ತು ಬೌಂಡರಿಗಳ ರುಚಿ ತೋರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ವಿಲ್​ ಜಾಕ್ಸ್​ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಅಜೇಯ ಶತಕ ಬಾರಿಸಿ ಮಿಂಚಿದರು. ಗೆಲುವಿನ ರನ್​ ಮತ್ತು ಶತಕವನ್ನು ಸಿಕ್ಸರ್​ ಮೂಲಕ ಪೂರ್ತಿಗೊಳಿಸಿದರು.

ಇದನ್ನೂ ಓದಿ IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

ವಿರಾಟ್​ ಕೊಹ್ಲಿ 44 ಎಸೆತಗಳಿಂದ 70(6 ಬೌಂಡರಿ ಮತ್ತು 3 ಸಿಕ್ಸರ್​) ರನ್​ ಬಾರಿಸಿದರು. ವಿಲ್​ ಜಾಕ್ಸ್​ 41 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್​ ಮತ್ತು 5 ಬೌಂಡರಿ ಬಾರಿಸಿ ಭರ್ತಿ 100 ರನ್​ ಪೇರಿಸಿದರು. ಇದು ಅವರ ಚೊಚ್ಚಲ ಐಪಿಎಲ್​ ಶತಕವಾಗಿದೆ. ಆರ್​ಸಿಬಿ ಇದೇ ಆಟವನ್ನು ಆರಂಭಿಕ ಹಂತದಲ್ಲಿ ತೋರ್ಪಡಿಸುತ್ತಿದ್ದರೆ ಇಂದು ಪ್ಲೇ ಆಫ್​ ಸನಿಹಕ್ಕೆ ಬಂದು ನಿಲ್ಲುತ್ತಿತ್ತು. ಗುಜರಾತ್​ ಪರ ರಶೀದ್​ ಖಾನ್​ 51 ರನ್​ ಬಿಟ್ಟುಕೊಟ್ಟರೆ, ಮೋಹಿತ್​ ಶರ್ಮ ಕೇವಲ 2 ಓವರ್​ಗೆ 41 ರನ್​ ಚಚ್ಚಿಸಿಕೊಂಡರು.

ಸಾಯಿ -ಶಾರೂಖ್ ಜತೆಯಾಟ ವ್ಯರ್ಥ


ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ತಂಡಕ್ಕೆ ಸಿನ್ನರ್​ಗಳಾದ ಸ್ವಪ್ನಿಲ್ ಸಿಂಗ್ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ಆರಂಭದಲ್ಲೇ ಆಘಾತವಿಕ್ಕಿದರು. ಸ್ವಪ್ನಿಲ್ ಸಿಂಗ್ ಅವರು ವೃದ್ಧಿಮಾನ್​ ಸಾಹಾ(5) ವಿಕೆಟ್​ ಕಡೆವಿದರೆ, ಮ್ಯಾಕ್ಸ್​ವೆಲ್ ನಾಯಕ ಶುಭಮನ್​ ಗಿಲ್​(16) ವಿಕೆಟ್​ ಕಿತ್ತರು. ಆರಂಭಿಕ ಆಘಾತ ಕಂಡ ಗುಜತಾರ್​ ತಂಡವನ್ನು ಮೇಲೆತ್ತಿದ್ದು ತಮಿಳುನಾಡು ಮೂಲಕದ ಆಟಗಾರರಾದ ಸಾಯಿ ಸುದರ್ಶನ್​ ಮತ್ತು ಶಾರೂಖ್​ ಖಾನ್​.

ಉಭಯ ಆಟಗಾರರು ಆರ್​ಸಿಬಿ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಅರ್ಧಶತಕ ಪೂರ್ತಿಗೊಳಿಸಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಜೋಡಿ ಮೂರನೇ ವಿಕೆಟ್​ಗೆ ಅತ್ಯಮೂಲ್ಯ 86 ರನ್​ ಜತೆಯಾಟ ನಡೆಸಿತು. ಅರ್ಧಶತಕ ಪೂರ್ತಿಗೊಂಡು ಅಪಾಯಕಾರಿಯಾಗಿ ಗೋಚರಿಸಿದ್ದ ಶಾರೂಖ್​ ಖಾನ್​ ಮೊಹಮ್ಮದ್​ ಸಿರಾಜ್​ ಅವರ ಯಾರ್ಕರ್​ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಒಟ್ಟು 30 ಎಸೆತ ಎದುರಿಸಿ 5 ಸಿಕ್ಸರ್​ ಮತ್ತು 3 ಬೌಂಡರಿ ನೆರವಿನಿಂದ 58 ರನ್​ ಬಾರಿಸಿದರು. ಪಂದ್ಯ ಸೋತ ಕಾರಣ ಉಭಯ ಆಟಗಾರರ ಈ ಉತ್ತಮ ಜತೆಯಾಟ ವ್ಯರ್ಥಗೊಂಡಿತು.

ಶಾರೂಖ್ ವಿಕೆಟ್​ ಪತನದ ಬಳಿಕ ಆಡಲಿಳಿದ ಡೇವಿಡ್​ ಮಿಲ್ಲರ್ ಕೂಡ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಅಜೇಯ 26 ರನ್​ ಬಾರಿಸಿದರು. ಸಾಯಿ ಸುದರ್ಶನ್ ಬರೋಬ್ಬರಿ 8 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ 84 ರನ್​ ಗಳಿಸಿ ಅಜೇಯರಾಗಿ ಉಳಿದರು. ಆರ್​ಸಿಬಿ ಪರ ಸಿರಾಜ್​, ಸ್ವಪ್ನಿಲ್ ಸಿಂಗ್ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ತಲಾ ಒಂದು ವಿಕೆಟ್​ ಪಡೆದರು. ಗ್ರೀನ್​ ಮೂರು ಓವರ್​ಗೆ 42 ರನ್​ ಬಿಟ್ಟುಕೊಟ್ಟು ದುಬಾರಿಯಾಗಿ ಕಂಡುಬಂದರು.

Continue Reading
Advertisement
Arecanut cultivation
ಚಿತ್ರದುರ್ಗ2 mins ago

Arecanut Cultivation: ಒಣಗುತ್ತಿರುವುದು ಅಡಿಕೆ ಮರಗಳಲ್ಲ ರೈತರ ಬದುಕು!

IPL 2024
ಕ್ರೀಡೆ28 mins ago

IPL 2024: ಗೆಲುವಿನಲ್ಲೂ ನೂತನ ದಾಖಲೆ ಬರೆದ ಆರ್​ಸಿಬಿ

PUC Exam 2024
ಕರ್ನಾಟಕ30 mins ago

PUC Exam 2024: ನಾಳೆಯಿಂದ ಪಿಯುಸಿ 2ನೇ ವಾರ್ಷಿಕ ಪರೀಕ್ಷೆ; ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಫ್ರೀ!

Money Guide
ಮನಿ-ಗೈಡ್39 mins ago

Money Guide: ಫೊರೆಕ್ಸ್‌ ಕಾರ್ಡ್‌ V/S ಕ್ರೆಡಿಟ್‌ ಕಾರ್ಡ್‌: ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ?

lehar singh siroya
ದಾವಣಗೆರೆ55 mins ago

Lehar Singh Siroya: ಹರಿಹರದ ಪಂಚಮಸಾಲಿ ಜಗದ್ಗುರು ಪೀಠಕ್ಕೆ ರಾಜ್ಯಸಭಾ ಸದಸ್ಯ ಲೆಹರ್​ಸಿಂಗ್ ಭೇಟಿ

Car Accident
ಬೆಂಗಳೂರು1 hour ago

Car Accident: ಮಾದಾವರ ಟೋಲ್‌ಗೇಟ್ ಬಳಿ ಕಾರು ಅಪಘಾತ ಪ್ರಕರಣ; ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೆ ಸಾವು

CET
ಕರ್ನಾಟಕ1 hour ago

CET 2024: ಸಿಇಟಿ ಮರು ಪರೀಕ್ಷೆಯೋ? ಗ್ರೇಸ್‌ ಮಾರ್ಕ್ಸ್‌ ಭಾಗ್ಯವೋ? ನಾಳೆ ನಿರ್ಧಾರ ಪ್ರಕಟ?

YAJAMANA PREMIER LEAGUE SEASON-3 (2)
ಕ್ರೀಡೆ2 hours ago

YAJAMANA PREMIER LEAGUE SEASON-3: ಈ ಬಾರಿ ಟಿ10 ಮಾದರಿಯಲ್ಲಿ ನಡೆಯಲಿದೆ ಯಜಮಾನ ಪ್ರೀಮಿಯರ್ ಲೀಗ್​

Lok Sabha Election 2024
Lok Sabha Election 20242 hours ago

Lok Sabha Election 2024: ಒವೈಸಿ ಪ್ರಕಾರ ಮುಸ್ಲಿಮರೇ ಹೆಚ್ಚು ಕಾಂಡೋಮ್ ಬಳಸುತ್ತಾರಂತೆ!

Virat Kohli
ಕ್ರಿಕೆಟ್2 hours ago

Virat Kohli: ಟೀಕೆಗಳಿಗೆ ಬಹಿರಂಗವಾಗಿಯೇ ತಿರುಗೇಟು ನೀಡಿದ ಕಿಂಗ್​ ಕೊಹ್ಲಿ​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20245 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20248 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202410 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202410 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ13 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ17 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20241 day ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

ಟ್ರೆಂಡಿಂಗ್‌