Suggestion to reduce the processing time of UPSC examsPublic Service Commission : ಯುಪಿಎಸ್​​​ಸಿ ಪರೀಕ್ಷೆಗಳ ಪ್ರಕ್ರಿಯೆ ಅವಧಿ ಕಡಿಮೆಗೊಳಿಸಲು ಸಲಹೆ - Vistara News

ಕ್ರಿಕೆಟ್

Public Service Commission : ಯುಪಿಎಸ್​​​ಸಿ ಪರೀಕ್ಷೆಗಳ ಪ್ರಕ್ರಿಯೆ ಅವಧಿ ಕಡಿಮೆಗೊಳಿಸಲು ಸಲಹೆ

ಯುಪಿಎಸ್​ ಪರೀಕ್ಷೆ ದೀರ್ಘ ಅವಧಿ ನಡೆಯುವ ಕಾರಣ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಮುಂದಾಗುವುದಿಲ್ಲ ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.

VISTARANEWS.COM


on

Suggestion to reduce the processing time of UPSC exams
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ನಾಗರಿಕ ಸೇವೆಗಳಿಗೆ ನೇಮಕ ನಡೆಸುವ ಪರೀಕ್ಷೆಗಳನ್ನು ದೀರ್ಘ ಅವಧಿಯ ತನಕ ನಡೆಸದಂತೆ ನಾಗರಿಕ ಸೇವಾ ಆಯೋಗಕ್ಕೆ (Public Service Commission) ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. ನಿಧಾನಗತಿಯಲ್ಲಿ ಪ್ರಕ್ರಿಯೆ ಮುಗಿಸುವುದರಿಂದ ಅಭ್ಯರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಿಂದಾಗಿ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಹಿಂಜರಿಯುತ್ತಿದ್ದಾರೆ ಎಂಬುದಾಗಿ ಸಮಿತಿಯ ತನ್ನ ಸಲಹೆಗೆ ಕಾರಣ ಕೊಟ್ಟಿದೆ.

ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಎಂದು ಮೂರು ಹಂತದಲ್ಲಿ ಯುಪಿಎಸ್​ಸಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಒಂದು ಬಾರಿ ದಿನಾಂಕ ಪ್ರಕಟಿಸಿ ಪರೀಕ್ಷೆ ನಡೆದು ಸಂದರ್ಶನಗಳು ಮುಗಿಸಲು 15 ತಿಂಗಳು ತೆಗೆದುಕೊಳ್ಳಲಾಗುತ್ತದೆ. ಇದು ದೀರ್ಘ ಅವಧಿಯಾಗಿದ್ದು ಇದರಿಂದ ಪರೀಕ್ಷೆ ಬರೆಯಲು ಮುಂದಾಗುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ವ್ಯವಹಾರಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ : 7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

ನೇಮಕ ಪರೀಕ್ಷೆಗಳು ಆರು ತಿಂಗಳು ಅವಧಿಯೊಳಗೆ ಮುಗಿಯಬೇಕು. ಪರೀಕ್ಷೆಗಳ ಅವಧಿ ಹೆಚ್ಚಾಗುವ ಮೂಲಕ ಅಭ್ಯರ್ಥಿಗಳ ಜೀವಿತಾವಧಿಯ ಪ್ರಮುಖ ಘಟ್ಟ ನಷ್ಟವಾಗುತ್ತದೆ. ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಯುಪಿಎಸ್​ಸಿ ಪರೀಕ್ಷೆಗಳ ಅವಧಿ ಕುಂಠಿತಗೊಳಿಸುವುದು ಅನಿವಾರ್ಯ ಎಂದು ಹೇಳಿದೆ.

ಪಾಲ್ಗೊಳ್ಳುವಿಕೆ ಕುಸಿತ

2022-23ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಗೆ 32. 39 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಪರೀಕ್ಷೆ ಬರೆದಿರುವುದು 16.82 ಲಕ್ಷ ಮಂದಿ ಮಾತ್ರ. ದೀರ್ಘ ಪ್ರಕ್ರಿಯೆಯಿಂದಾಗಿ ಅಭ್ಯರ್ಥಿಗಳು ಆಸಕ್ತಿ ಕಳೆದುಕೊಂಡ ಕಾರಣ ಅರ್ಧದಷ್ಟು ಅರ್ಜಿದಾರರು ಮಾತ್ರ ಪರೀಕ್ಷೆ ಬರೆದಿದ್ದಾರೆ. ಇದೇ ಅವಧಿಯಲ್ಲಿ ನಡೆದ ನಾಗರಿಕ ಸೇವಾ ಪರೀಕ್ಷೆಗೂ 11.35 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿ 5.73 ಲಕ್ಷ ಮಂದಿ ಮಾತ್ರ ಪರೀಕ್ಷೆ ಬರೆದಿದ್ದಾರೆ. ಈ ಪ್ರವೃತ್ತಿಗೆ ಯಾವುದೋ ಹಿನ್ನೆಲೆಯಿದೆ. ಅವುಗಳ ಬಗ್ಗೆಯೂ ಅಧ್ಯಯನ ನಡೆಸುವುದು ಅಗತ್ಯ ಎಂದು ಸಮಿತಿ ಸಲಹೆ ಕೊಟ್ಟಿದೆ.

ನಾಗರಿಕ ಸೇವಾ ಆಯೋಗವು ಐಎಎಸ್​, ಐಪಿಎಸ್​, ಐಅರ್​ಎಸ್​ ಸೇರಿದಂತೆ ಪ್ರಮುಖ ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಪರೀಕ್ಷೆಗಳು ಕಠಿಣವಾಗಿರುತ್ತವೆ ಹಾಗೂ ಪಾಸಾಗುವುದು ಕೂಡ ಸವಾಲು. ಅದಕ್ಕಿಂತ ಹೆಚ್ಚಾಗಿ ಅದು ದೀರ್ಘ ಅವಧಿಯಲ್ಲಿ ನಡೆಯುವ ಕಾರಣ ಅಷ್ಟು ದಿನಗಳ ಕಾಲ ದುಡಿಮೆ ಇಲ್ಲದೇ ಇರುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕೆಲವರು ಪರೀಕ್ಷೆಗಳನ್ನು ಬರೆಯಲು ಮುಂದಾಗುವುದಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Vinesh Phogat : ವಿನೇಶ್​ ಪೋಗಟ್​ಗೆ ಬೆಳ್ಳಿ ಪದಕ ಕೊಡಿ; ಕುಸ್ತಿಪಟುವಿನ ಬೆಂಬಲಕ್ಕೆ ನಿಂತ ಸಚಿನ್ ತೆಂಡೂಲ್ಕರ್​

Vinesh Phogat : ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿನೇಶ್​ಗೆ ಬೆಂಬಲ ನೀಡಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ. ವಿನೇಶ್ ಫೈನಲ್​​​ಗೆ ನ್ಯಾಯಯುತವಾಗಿ ಅರ್ಹತೆ ಪಡೆದಿದ್ದಾರೆ. ಹೀಗಾಗಿ ಅರ್ಹ ಪದಕವನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸಾಮರ್ಥ್ಯ ವರ್ಧನೆಯ ಔಷಧಿಗಳ ಬಳಕೆಯಂತಹ ದುಷ್ಕೃತ್ಯಗಳಾಗಿದ್ದರೆ ಅನರ್ಹತೆ ಅರ್ಥಪೂರ್ಣವಾಗುತ್ತಿತ್ತು ಎಂದು ಕ್ರಿಕೆಟ್ ದಂತಕಥೆ ಹೇಳಿದ್ದಾರೆ. ವಿನೇಶ್ ಗೆ ಅರ್ಹ ಮನ್ನಣೆ ಸಿಗುತ್ತದೆ ಎಂದು ಆಶಿಸುವ ಮೂಲಕ ತೆಂಡೂಲ್ಕರ್ ತಮ್ಮ ಹೇಳಿಕೆ ಕೊನೆಗೊಳಿಸಿದರು.

VISTARANEWS.COM


on

Vinesh Phogat
Koo

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024) 50 ಕೆ.ಜಿ ವಿಭಾಗದ ಮಹಿಳೆಯ ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿನೇಶ್ ಫೊಗಾಟ್​ಗೆ ಕ್ರಿಕೆಟ್ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿನೇಶ್ ಫೋಗಟ್ (Vinesh Phogat) ಅವರು ಬೆಳ್ಳಿ ಪದಕಕ್ಕೆ ಅರ್ಹರು ಎಂಬುದಾಗಿ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಅಂತಿಮ ಸುತ್ತಿನವರೆಗೆ ರೋಚಕ ಪ್ರದರ್ಶನ ನೀಡಿದ್ದ ವಿನೇಶ್ ಆಗಿರುವ ಹಿನ್ನಡೆಗಾಗಿ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದರು. ಇದೀಗ ಅವರು ಕೋರ್ಟ್ ಆಫ್ ಆರ್ಬಿಟ್ರೇಶನ್ ಆಫ್ ಸ್ಪೋರ್ಟ್ (CAS) ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ. ಅರ್ಜಿಯನ್ನು ಆಗಸ್ಟ್ 8ರಂದು ಸ್ವೀಕರಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿನೇಶ್​ಗೆ ಬೆಂಬಲ ನೀಡಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ. ವಿನೇಶ್ ಫೈನಲ್​​​ಗೆ ನ್ಯಾಯಯುತವಾಗಿ ಅರ್ಹತೆ ಪಡೆದಿದ್ದಾರೆ. ಹೀಗಾಗಿ ಅರ್ಹ ಪದಕವನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸಾಮರ್ಥ್ಯ ವರ್ಧನೆಯ ಔಷಧಿಗಳ ಬಳಕೆಯಂತಹ ದುಷ್ಕೃತ್ಯಗಳಾಗಿದ್ದರೆ ಅನರ್ಹತೆ ಅರ್ಥಪೂರ್ಣವಾಗುತ್ತಿತ್ತು ಎಂದು ಕ್ರಿಕೆಟ್ ದಂತಕಥೆ ಹೇಳಿದ್ದಾರೆ. ವಿನೇಶ್ ಗೆ ಅರ್ಹ ಮನ್ನಣೆ ಸಿಗುತ್ತದೆ ಎಂದು ಆಶಿಸುವ ಮೂಲಕ ತೆಂಡೂಲ್ಕರ್ ತಮ್ಮ ಹೇಳಿಕೆ ಕೊನೆಗೊಳಿಸಿದರು.

ಪ್ರತಿಯೊಂದು ಕ್ರೀಡೆಗೂ ನಿಯಮಗಳಿವೆ. ಆ ನಿಯಮಗಳನ್ನು ಸಂದರ್ಭಕ್ಕೆ ಅನುಗುಣವಾಗಿ ನೋಡಬೇಕು. ನಿಯಮಗಳನ್ನು ಕಾಲಕಾಲಕ್ಕೆ ಮರುಪರಿಶೀಲಿಸಬಹುದು. ವಿನೇಶ್ ಫೋಗಟ್ ಫೈನಲ್​ಗೆ ಅರ್ಹತೆ ಪಡೆದಿದ್ದರು. ಬಳಿಕ ಹೆಚ್ಚು ತೂಕದ ಆಧಾರದ ಮೇಲೆ ಅವರನ್ನು ಅನರ್ಹಗೊಳಿಸಲಾಯಿತು. ಅವರಿಂದ ಬೆಳ್ಳಿ ಪದಕವನ್ನು ಕಸಿದುಕೊಳ್ಳುವುದು ಕ್ರೀಡಾ ಪ್ರಜ್ಞೆಯನ್ನು ಉಲ್ಲಂಘನೆ ಎಂದು ಹೇಳಿದರು.

ಇದನ್ನೂ ಓದಿ: Neeraj Chopra : ಗಾಯದ ಸಮಸ್ಯೆಯಿಂದ ಬಳಲುತ್ತಲೇ ಒಲಿಂಪಿಕ್ಸ್​ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ!

ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಿಗಳ ಬಳಕೆಯಂತಹ ನೈತಿಕತೆಯ ಉಲ್ಲಂಘನೆಗಳಿಗಾಗಿ ಕ್ರೀಡಾಪಟುವನ್ನು ಅನರ್ಹಗೊಳಿಸಿದ್ದರೆ ಅದು ಅರ್ಥವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ, ಯಾವುದೇ ಪದಕ ನೀಡದಿರುವುದು ಮತ್ತು ಕೊನೆಯ ಸ್ಥಾನಕ್ಕೆ ಕೊಂಡೊಯ್ಯುವುದು ಸಮರ್ಥನೀಯ. ವಿನೇಶ್ ತನ್ನ ಎದುರಾಳಿಗಳನ್ನು ನ್ಯಾಯಯುತವಾಗಿ ಸೋಲಿಸಿ ಅಗ್ರ ಎರಡರೊಳಗಿನ ಸ್ಥಾನ ತಲುಪಿದರು. ಅವರು ಖಂಡಿತವಾಗಿಯೂ ಬೆಳ್ಳಿ ಪದಕಕ್ಕೆ ಅರ್ಹರು ಎಂಬದಾಗಿ ಸಚಿನ್​ ಹೇಳಿದ್ದಾರೆ.

ನಾವೆಲ್ಲರೂ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ. ವಿನೇಶ್ ಅವರಿಗೆ ಅರ್ಹವಾದ ಮನ್ನಣೆ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಪ್ರಾರ್ಥಿಸೋಣ” ಎಂದು ಸಚಿನ್ ಹೇಳಿದ್ದಾರೆ.

ಒಲಿಂಪಿಕ್ಸ್ ಮುಗಿಯುವ ಮುನ್ನ ವಿನೇಶ್ ಮೇಲ್ಮನವಿ ತೀರ್ಪು ಸಾಧ್ಯತೆ

ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪದ ಮೊದಲು ವಿನೇಶ್ ಫೋಗಟ್ ಸಲ್ಲಿಸಿದ್ದ ಮನವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಶುಕ್ರವಾರ ತಿಳಿಸಿದೆ. ಇತ್ತೀಚಿನ ನವೀಕರಣದ ಪ್ರಕಾರ ಪ್ರಕ್ರಿಯೆ ನಡೆಯುತ್ತಿದೆ. ಈ ವಿಷಯವನ್ನು ಏಕೈಕ ಮಧ್ಯಸ್ಥಿಕೆದಾರ ಡಾ.ಅನ್ನಾಬೆಲ್ಲೆ ಬೆನೆಟ್ ಅವರು ನಿರ್ವಹಿಸುತ್ತಿದ್ದಾರೆ.

Continue Reading

ಕ್ರೀಡೆ

Neeraj Chopra : ವಿನೇಶ್ ಪೋಗಟ್​​ಗೆ ಅನರ್ಹತೆ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ; ಏನಂದ್ರು ಅವರು?

Neeraj Chopra : ಯುಯಿ ಸುಸಾಕಿಯನ್ನು ಸೋಲಿಸುವುದು ವಿನೇಶ್ ಗೆ ದೊಡ್ಡ ವಿಷಯ. ಅವಳು ಚಿನ್ನದ ಪದಕ ಪಡೆಯುವ ಹಾದಿಯಲ್ಲಿದ್ದರು. ಸುಸಾಕಿಯನ್ನು ಸೋಲಿಸುವುದು ದೊಡ್ಡ ವಿಷಯ. ಕುಸ್ತಿಯ ನಿಯಮಗಳು ನನಗೆ ಚೆನ್ನಾಗಿ ಅರ್ಥವಾಗುವುದಿಲ್ಲ. ಆದರೆ, ಅವರು ಆತ್ಮವಿಶ್ವಾಸದಿಂದ ಚಿನ್ನದ ಕಡೆಗೆ ಸಾಗುತ್ತಿದ್ದರು. ಬಳಿಕ ಅನರ್ಹತೆ) ಸಂಭವಿಸಿತು. ನನಗೆ ನಿಜವಾಗಿಯೂ ದುಃಖವಾಯಿತು, “ಎಂದು ನೀರಜ್ ಹೇಳಿದ್ದಾರೆ.

VISTARANEWS.COM


on

Neeraj Chopra
Koo

ನವದೆಹಲಿ: ಭಾರತದ ಜಾವೆಲಿನ್ ತಾರೆ ಮತ್ತು ಪ್ಯಾರಿಸ್ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಅವರು ಆಗಸ್ಟ್ 8 ರಂದು ನಡೆದ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗೆದ್ದ ಬಳಿಕ ವಿನೇಶ್ ಫೋಗಟ್ (Vinesh Phogat) ಅನರ್ಹ ಘಟನೆ ಬಗ್ಗೆ ಮಾತನಾಡಿದ್ದಾರೆ. ಕುಸ್ತಿಪಟುವನ್ನು ಅವರನ್ನು ಅನರ್ಹಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಬೇಸರವಾಯಿತು ಎಂದು ಹೇಳಿದ್ದಾರೆ. ಮಹಿಳೆಯರ 50 ಕೆ.ಜಿ ಕುಸ್ತಿ ಸ್ಪರ್ಧೆಯ ಫೈನಲ್​ಗೆ ಮುಂಚಿತವಾಗಿ ವಿನೇಶ್ 100 ಗ್ರಾಂ ಅಧಿಕ ತೂಕ ಹೊಂದಿದ್ದರಿಂದ ಅನರ್ಹಗೊಂಡಿದ್ದರು.

ಯುಯಿ ಸುಸಾಕಿಯನ್ನು ಸೋಲಿಸುವುದು ವಿನೇಶ್ ಗೆ ದೊಡ್ಡ ವಿಷಯ. ಅವಳು ಚಿನ್ನದ ಪದಕ ಪಡೆಯುವ ಹಾದಿಯಲ್ಲಿದ್ದರು. ಸುಸಾಕಿಯನ್ನು ಸೋಲಿಸುವುದು ದೊಡ್ಡ ವಿಷಯ. ಕುಸ್ತಿಯ ನಿಯಮಗಳು ನನಗೆ ಚೆನ್ನಾಗಿ ಅರ್ಥವಾಗುವುದಿಲ್ಲ. ಆದರೆ, ಅವರು ಆತ್ಮವಿಶ್ವಾಸದಿಂದ ಚಿನ್ನದ ಕಡೆಗೆ ಸಾಗುತ್ತಿದ್ದರು. ಬಳಿಕ ಅನರ್ಹತೆ) ಸಂಭವಿಸಿತು. ನನಗೆ ನಿಜವಾಗಿಯೂ ದುಃಖವಾಯಿತು, “ಎಂದು ನೀರಜ್ ಹೇಳಿದ್ದಾರೆ.

ವಿನೇಶ್ ಏನು ಮಾಡಿದರೂ ಅದು ಅದ್ಭುತ ಸಾಧನೆ

ಗಾಯಗಳು ಮತ್ತು ವೈಯಕ್ತಿಕ ಹಿನ್ನಡೆಯೊಂದಿಗೆ 2016 ರ ಒಲಿಂಪಿಕ್ಸ್ ನಂತರ ವಿನೇಶ್ ಅವರ ಕುಸ್ತಿ ಪ್ರಯಾಣ ಕಠಿಣವಾಗಿತ್ತು ಎಂಬುದನ್ನು ನೀರಜ್ ನೆನಪಿಸಿಕೊಂಡರು. ಪ್ಯಾರಿಸ್​​ನಲ್ಲಿ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ ಎಂದು ತಿಳಿದು ಖುಷಿಯಾಗಿತ್ತು. ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ವಿನೇಶ್ ಮಾಡಿದ ಸಾಧನೆ ಅದ್ಭುತ ಎಂದು ಜಾವೆಲಿನ್ ತಾರೆ ಅಭಿಪ್ರಾಯಪಟ್ಟರು.

2016 ರಲ್ಲಿ (ರಿಯೋ ಒಲಿಂಪಿಕ್ಸ್), ಅಂತಹ ಅಪಾಯಕಾರಿ ಗಾಯದಿಂದ ಹೊರಬರಲು ಮತ್ತು ನಂತರ 2020ರಲ್ಲಿ ಮತ್ತಷ್ಟು ಗಾಯಗಳನ್ನು ಮಾಡಿಕೊಂಡರು. ಅದೇ ರೀತಿ ಅವರು ಅನೇಕ ವೈಯಕ್ತಿಕ ಹಿನ್ನಡೆಗಳನ್ನು ಅನುಭವಿಸಿದ್ದಾರೆ” ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.

ಅವಳು ಗಾಯಗಳಿಂದ ಸುಧಾರಿಸಿಕೊಳ್ಳಲು. ಅದರಿಂದ ಚೇತರಿಸಿಕೊಳ್ಳಲು ಮತ್ತು ಸ್ಥಾನಕ್ಕೆ ಬರಲು ಮತ್ತು ಮಾನಸಿಕವಾಗಿ ಬಲಶಾಲಿಯಾಗಲು ಸಾಕಷ್ಟು ಯತ್ನಿಸಿದ್ದರು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಬಹುಶಃ ದೇವರು ಅವರಿಗೆ ಬೇರೆ ಏನನ್ನಾದರೂ ಬಯಸಿರಬಹುದು. ಆದರೆ ಅವಳು ಏನು ಮಾಡಿದರೂ ಅದು ಅದ್ಭುತವಾಗಿದೆ ಎಂದು ನಮಗೆ ತಿಳಿದಿದೆ ಎಂದು ನೀರಜ್ ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಲೇ ಒಲಿಂಪಿಕ್ಸ್​ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ!

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ(Paris Olympics 2024) ಬೆಳ್ಳಿ ಪದಕ ಗೆದ್ದ ನಂತರ ನೀರಜ್ ಚೋಪ್ರಾ (Neeraj Chopra) ತಮ್ಮ ಗಾಯದ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ. ತಾನು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು ಎಂದು 26 ವರ್ಷದ ಆಟಗಾರ ಬಹಿರಂಗಪಡಿಸಿದ್ದಾರೆ. ಗಾಯದ ಸಮಸ್ಯೆ ಉಲ್ಬಣಗೊಳ್ಳಬಹುದು ಎಂಬ ನಿರಂತರ ಭಯದಿಂದ ಸ್ಪರ್ಧಿಸಿದೆ ಎಂಬುದಾಗಿ ಅವರು ಹೇಳಿದ್ದಾರೆ. ಬೆಳ್ಳಿ ಪದಕ ವಿಜೇತ ಜಾವೆಲಿನ್ ಎಸೆತಗಾರ ಪ್ಯಾರಿಸ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ತೊಡೆಯ ಸ್ನಾಯುವಿಗೆ ಸಂಬಂಧಿಸಿದ ಗಾಯದಿಂದ ಬಳಲುತ್ತಿದ್ದರು. ಆದಾಗ್ಯೂ, ಅವರು ತಮ್ಮ ಋತುವಿನ ಅತ್ಯುತ್ತಮ ಎಸೆತವಾದ 89.45 ಮೀಟರ್ ಎಸೆದು ಬೆಳ್ಳಿ ಪದಕ ಗಳಿಸಿದ್ದಾರೆ.

ಸ್ಪರ್ಧೆಗೆ ಹೋದಾಗ ನನ್ನ ಮನಸ್ಸಿನಲ್ಲಿ ಬಹಳಷ್ಟು ವಿಷಯಗಳಿರುತ್ತವೆ. ನಾನು ಭರ್ಜಿ ಎಸೆಯುವಾಗ ನನ್ನ ಶೇಕಡಾ 60-70 ರಷ್ಟು ಗಮನ ಗಾಯದ ಮೇಲೆ ಇರುತ್ತಿತ್ತು. ನಾನು ಮತ್ತೆ ಗಾಯಗೊಳ್ಳಲು ಬಯಸುವುದಿಲ್ಲ. ನಾನು ಎಸೆತಕ್ಕೆ ಹೋದಾಗಲೆಲ್ಲಾ, ನನ್ನ ವೇಗ ಕಡಿಮೆ ಇತ್ತು. ಹೀಗಾಗಿ ಸ್ಪರ್ಧೆ ಕಠಿಣವಾಯಿತು ಎಂದು ನೀರಜ್ ಪಿಟಿಐಗೆ ತಿಳಿಸಿದರು. ನೀರಜ್​ ಉತ್ತಮ ಸ್ನೇಹಿತ ಅರ್ಷದ್ ನದೀಮ್ ಅವರನ್ನು ಒಲಿಂಪಿಕ್ ಚಾಂಪಿಯನ್ ಸ್ಥಾನದಿಂದ ಕೆಳಗಿಳಿಸಿ ಪಾಕಿಸ್ತಾನಕ್ಕೆ ಮೊದಲ ಚಿನ್ನ ಗೆದ್ದಾರೆ.

ಇದನ್ನೂ ಓದಿ: PR Sreejesh : ಕಂಚು ಗೆದ್ದ ತಕ್ಷಣ ಗೋಲ್​ ಕೀಪಿಂಗ್​ ಗ್ಲವ್ಸ್​ಗೆ ದೀರ್ಘದಂಡ ನಮಸ್ಕಾರ ಹಾಕಿದ ಶ್ರೀಜೇಶ್​​​

ಕಳೆದ ವರ್ಷ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದರು. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಪಾಯಕ್ಕೆ ಒಳಗಾಗಿದ್ದರು. ಆದರೆ, ಅವರು ಹೋಗಿರಲಿಲ್ಲ. ಇದು ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅಡ್ಡಿಯಾಗುತ್ತಿತ್ತು.

Continue Reading

ಕ್ರೀಡೆ

Gautam Gambhir: 27 ವರ್ಷದ ಬಳಿಕ ಲಂಕಾ ವಿರುದ್ಧ ಸೋಲು; ಗಂಭೀರ್​ ಫುಲ್​ ಟ್ರೋಲ್​

Gautam Gambhir: ಭಾರತ ತಂಡಕ್ಕೆ ಕಠಿಣವಾದ ವಿದೇಶಿ ಕ್ರಿಕೆಟ್​ ಸರಣಿ ಯಾವದು ಎಂದು ಪ್ರಶ್ನೆ ಮಾಡಿದರೆ, ಗಂಭೀರ್​ ಮಾತ್ರ ಶ್ರೀಲಂಕಾ ಪ್ರವಾಸ ಎನ್ನುತ್ತಾರೆ ಎಂದು ಗಂಭೀರ್​ ಅವರನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

VISTARANEWS.COM


on

Gautam Gambhir
Koo

ಮುಂಬಯಿ: ಗೌತಮ್ ಗಂಭಿರ್(Gautam Gambhir)​ ಅವರು ಭಾರತ ತಂಡದ ಕೋಚ್​ ಆಗುತ್ತಿದ್ದಂತೆ ಅವರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ, ಅವರ ಕೋಚಿಂಗ್​ನಲ್ಲಿ ಭಾರತ ತಂಡ ಆಡಿದ ಮೊದಲ ಏಕದಿನ ಸರಣಿಯಲ್ಲೇ ದುರ್ಬಲ ಲಂಕಾ ವಿರುದ್ಧ ಹೀನಾಯವಾಗಿ ಸೋಲು ಕಂಡಿದೆ. ಜತೆಗೆ 27 ವರ್ಷಗಳ ಬಳಿಕ ಭಾರತ ತಂಡ ಲಂಕಾ ವಿರುದ್ಧ ಸರಣಿ ಸೋಲು ಕಂಡ ಅಪಮಾನಕ್ಕೂ ಒಳಗಾಗಿದೆ. ಇದೇ ಕಾರಣದಿಂದ ನೆಟ್ಟಿಗರು ಗಂಭೀರ್​ ಅವರನ್ನು ಮೀಮ್ಸ್​ಗಳ ಮೂಲಕ ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ.

‘ಭಾರತ ತಂಡಕ್ಕೆ ಕಠಿಣವಾದ ವಿದೇಶಿ ಕ್ರಿಕೆಟ್​ ಸರಣಿ ಯಾವದು ಎಂದು ಪ್ರಶ್ನೆ ಮಾಡಿದರೆ ಆಟಗಾರರು, ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ? ಎಂದು ಹೇಳುತ್ತಾರೆ. ಆದರೆ, ಗಂಭೀರ್​ ಮಾತ್ರ ಶ್ರೀಲಂಕಾ ಪ್ರವಾಸ ಕಠಿಣ ಎನ್ನುತ್ತಾರೆ ಎಂದು ನೆಟ್ಟಿಗರೊಬ್ಬರು ಟ್ರೋಲ್​ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ ಬಿಸಿಸಿಐ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಆಟಗಾರರು ಆಡದೇ ಇದ್ದರೆ ಕೋಚ್​ ಏನು ಮಾಡಲು ಸಾಧ್ಯ ಎಂದು ಗಂಭೀರ್​ ಪರ ಬ್ಯಾಟ್​ ಬೀಸಿದ್ದಾರೆ.

ಇದನ್ನೂ ಓದಿ Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

ಬುಧವಾರ ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡ 249 ರನ್‌ ಬಾರಿಸಿ ಸವಾಲೊಡ್ಡಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ರೋಹಿತ್‌ ಶರ್ಮ (35), ವಾಷಿಂಗ್ಟನ್‌ ಸುಂದರ್‌ (30) ರನ್​ ಗಳಿಸಿದರು. ಉಳಿದ ಯಾವ ಬ್ಯಾಟರ್‌ಗಳೂ ರನ್‌ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಪಂದ್ಯ ಸೋತಿತು. ಸತತ ಮೂರು ಪಂದ್ಯಗಳಲ್ಲೂ ಶ್ರೀಲಂಕಾ ತಂಡವು ಸ್ಪಿನ್‌ ದಾಳಿ ನಡೆಸುವ ಮೂಲಕ ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಸ್ಪಿನ್​ಗೆ ಹೆಚ್ಚಾಗಿ ಉತ್ತಮ ಬ್ಯಾಟ್​ ಬೀಸುತ್ತಿದ್ದ ಭಾರತ ಲಂಕಾದಲ್ಲಿ ಪರದಾಟ ನಡೆಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

​ಪಂದ್ಯದ ಸೋಲಿಗೆ ಸಹ ಆಟಗಾರರ ಬ್ಯಾಟಿಂಗ್​ ವೈಫಲ್ಯವೇ ಕಾರಣ ಎಂದು ರೋಹಿತ್​ ನೇರ ಆರೋಪವನ್ನು ಕೂಡ ಮಾಡಿದ್ದಾರೆ. ನಾನು ತಂಡದ ಗೆಲುವಿಗಾಗಿ ಪ್ರಯತ್ನಪಟ್ಟಿದ್ದೇನೆ. ಆದರೆ, ಉಳಿದ ಆಟಗಾರರು ಬ್ಯಾಟಿಂಗ್​ ವೈಫಲ್ಯ ಕಂಡರು. ಒಬ್ಬರೇ ಆಡಿ ಪಂದ್ಯವನ್ನು ಗೆಲ್ಲಿಸುವುದು ಕಷ್ಟ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಸಹ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್​, “ದೇಶೀಯ ಕ್ರಿಕೆಟ್ ಆಡುವುದು ಬಹಳ ಮುಖ್ಯ. ನಾವು ಮುಖ್ಯವಾಗಿ ಟೆಸ್ಟ್ ಮತ್ತು ಏಕದಿನ ಸರಣಿಗೆ ದೇಶೀಯ ಕ್ರಿಕೆಟ್​ ಪ್ರದರ್ಶನ ನೋಡಿ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ದೇಶೀಯ ಕ್ರಿಕೆಟ್, ಭಾರತೀಯ ಕ್ರಿಕೇಟ್‌ನ ಬೆನ್ನೆಲುಬು” ಎಂದು ಹೇಳಿದ್ದಾರೆ.

Continue Reading

ಕ್ರೀಡೆ

Rohit Sharma: ಸೋಲಿನ ಬಳಿಕ ದೇಶೀಯ ಕ್ರಿಕೆಟ್​ನ ಮಹತ್ವ ತಿಳಿಸಿದ ರೋಹಿತ್​; ನೆಟ್ಟಿಗರಿಂದ ತೀವ್ರ ತರಾಟೆ

Rohit Sharma: ​ ಪಂದ್ಯದ ಸೋಲಿಗೆ ಸಹ ಆಟಗಾರರ ಬ್ಯಾಟಿಂಗ್​ ವೈಫಲ್ಯವೇ ಕಾರಣ ಎಂದು ರೋಹಿತ್ ನೇರ ಆರೋಪ ಮಾಡಿದ್ದಾರೆ. ನಾನು ತಂಡದ ಗೆಲುವಿಗಾಗಿ ಪ್ರಯತ್ನಪಟ್ಟಿದ್ದೇನೆ. ಆದರೆ, ಉಳಿದ ಆಟಗಾರರು ಬ್ಯಾಟಿಂಗ್​ ವೈಫಲ್ಯ ಕಂಡರು ಎಂದು ಹೇಳಿದ್ದಾರೆ.

VISTARANEWS.COM


on

Rohit Sharma
Koo

ಕೊಲಂಬೊ: 27 ವರ್ಷ ಬಳಿಕ ಶ್ರೀಲಂಕಾ ವಿರುದ್ಧ ಸರಣಿ ಸೋಲು ಕಂಡ ಭಾರತ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಈ ಸೋಲಿನ ಬಳಿಕ ದೇಶೀಯ ಕ್ರಿಕೆಟ್​ನ ಮಹತ್ವ ಏನೆಂದು ತಿಳಿಸಿದ್ದಾರೆ. ಬುಧವಾರ ನಡೆದಿದ್ದ ಸರಣಿಯ ಅಂಯಿಮ ಏಕದಿನ ಪಂದ್ಯದಲ್ಲಿ ಭಾರತ ಲಂಕಾ(Sri Lanka) ವಿರುದ್ಧ 110 ರನ್​ಗಳ ಹೀನಾಯ ಸೋಲಿಗೆ ತುತ್ತಾಗಿತ್ತು.

ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್​, “ದೇಶೀಯ ಕ್ರಿಕೆಟ್ ಆಡುವುದು ಬಹಳ ಮುಖ್ಯ. ನಾವು ಮುಖ್ಯವಾಗಿ ಟೆಸ್ಟ್ ಮತ್ತು ಏಕದಿನ ಸರಣಿಗೆ ದೇಶೀಯ ಕ್ರಿಕೆಟ್​ ಪ್ರದರ್ಶನ ನೋಡಿ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ದೇಶೀಯ ಕ್ರಿಕೆಟ್, ಭಾರತೀಯ ಕ್ರಿಕೇಟ್‌ನ ಬೆನ್ನೆಲುಬು” ಎಂದು ಹೇಳಿದ್ದಾರೆ.

ರೋಹಿತ್​ ಅವರ ಈ ಹೇಳಿಕೆಗೆ ನೆಟ್ಟಿಗರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಸರಣಿ ಸೋತಾಗ ಮಾತ್ರ ದೇಶೀಯ ಕ್ರಿಕೆಟ್​ ನೆನೆಪಾಗುತ್ತದೆ. ಅದೆಷ್ಟೋ ಆಟಗಾರರು ದೇಶೀಯ ಕ್ರಿಕೆಟ್​ನಲ್ಲಿ ನಿಮಗಿಂತ ಶ್ರೇಷ್ಠ ಸಾಧನೆ ಮತ್ತು ಪ್ರದರ್ಶನ ತೋರಿದರೂ ಅವರಿಗೆ ಅವಕಾಶ ನೀಡದೆ ನಿಮ್ಮ ಒಳ ರಾಜಕೀಯದಿಂದ ಐಪಿಎಲ್​ನಲ್ಲಿ ಆಡಿದ ಆಟಗಾರರಿಗೆ ಮಣೆ ಹಾಕುತ್ತಿದ್ದೀರಿ. ಈಗ ನಿಮ್ಮ ಬುಡಕ್ಕೆ ನೀರು ಬಂದಾಗ ದೇಶೀಯ ಕ್ರಿಕೆಟ್ ನೆನಪಾಗುತ್ತದೆ ಎಂದು ಹೇಳುವ ಮೂಲಕ ರೋಹಿತ್​ಗೆ ತಿವಿದಿದ್ದಾರೆ.

ಇದನ್ನೂ ಓದಿ IND vs SL 3rd ODI: 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಏಕದಿನ ಸರಣಿ ಶ್ರೀಲಂಕಾ ಮಡಿಲಿಗೆ

ಬುಧವಾರ ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡ 249 ರನ್‌ ಬಾರಿಸಿ ಸವಾಲೊಡ್ಡಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ರೋಹಿತ್‌ ಶರ್ಮ (35), ವಾಷಿಂಗ್ಟನ್‌ ಸುಂದರ್‌ (30) ರನ್​ ಗಳಿಸಿದರು. ಉಳಿದ ಯಾವ ಬ್ಯಾಟರ್‌ಗಳೂ ರನ್‌ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಪಂದ್ಯ ಸೋತಿತು. ಸತತ ಮೂರು ಪಂದ್ಯಗಳಲ್ಲೂ ಶ್ರೀಲಂಕಾ ತಂಡವು ಸ್ಪಿನ್‌ ದಾಳಿ ನಡೆಸುವ ಮೂಲಕ ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಸ್ಪಿನ್​ಗೆ ಹೆಚ್ಚಾಗಿ ಉತ್ತಮ ಬ್ಯಾಟ್​ ಬೀಸುತ್ತಿದ್ದ ಭಾರತ ಲಂಕಾದಲ್ಲಿ ಪರದಾಟ ನಡೆಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

​ಪಂದ್ಯದ ಸೋಲಿಗೆ ಸಹ ಆಟಗಾರರ ಬ್ಯಾಟಿಂಗ್​ ವೈಫಲ್ಯವೇ ಕಾರಣ ಎಂದು ರೋಹಿತ್​ ನೇರ ಆರೋಪವನ್ನು ಕೂಡ ಮಾಡಿದ್ದಾರೆ. ನಾನು ತಂಡದ ಗೆಲುವಿಗಾಗಿ ಪ್ರಯತ್ನಪಟ್ಟಿದ್ದೇನೆ. ಆದರೆ, ಉಳಿದ ಆಟಗಾರರು ಬ್ಯಾಟಿಂಗ್​ ವೈಫಲ್ಯ ಕಂಡರು. ಒಬ್ಬರೇ ಆಡಿ ಪಂದ್ಯವನ್ನು ಗೆಲ್ಲಿಸುವುದು ಕಷ್ಟ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಸಹ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

Continue Reading
Advertisement
Tarsem Singh
ದೇಶ48 mins ago

Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Vinesh Phogat
ಕ್ರೀಡೆ51 mins ago

Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

ಕರ್ನಾಟಕ1 hour ago

NEET UG 2024: ಯುಜಿ ನೀಟ್: ಆ.12, 13ಕ್ಕೆ ದಾಖಲಾತಿ ಪರಿಶೀಲನೆ

Paris Olympics 2024
ಕ್ರೀಡೆ1 hour ago

Paris Olympics 2024 : ಲೈಂಗಿಕ ಕಿರುಕುಳದ ಆರೋಪದ ಮೇಲೆ ಈಜಿಪ್ಟ್​​ ಮೊಹಮ್ಮದ್ ಎಲ್ಸಯೀದ್ ಅರೆಸ್ಟ್​​

Independence day 2024
ತಂತ್ರಜ್ಞಾನ1 hour ago

Independence Day 2024: ಹೊಗೆ ಬಂಡಿಯಿಂದ ವಂದೇ ಭಾರತ್‌‌ವರೆಗೆ; ಭಾರತೀಯ ರೈಲ್ವೆಯ ಅದ್ಭುತ ಪಯಣ!

CAA Rules
ದೇಶ1 hour ago

CAA Rules: ಪಾಕ್‌, ಬಾಂಗ್ಲಾ, ಆಘ್ಘನ್‌ ನಿರಾಶ್ರಿತರಿಗೆ ಸಿಹಿ ಸುದ್ದಿ; ಸಿಎಎ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ!

Bengaluru News
ಬೆಂಗಳೂರು2 hours ago

Bengaluru News: ಬೃಹತ್‌ ಜನಾಂದೋಲನಕ್ಕೆ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಬೆಂಬಲ

KCET Mock Allotment 2024
ಕರ್ನಾಟಕ2 hours ago

KCET Mock Allotment 2024: ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಮತ್ತೆ ಮುಂದೂಡಿಕೆ; ಯಾವಾಗ ಪ್ರಕಟ?

Neeraj Chopra
ಕ್ರೀಡೆ2 hours ago

Neeraj Chopra : ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿಯುವ ಅವಕಾಶ ಶ್ರೀಜೇಶ್​ಗೆ ಬಿಟ್ಟುಕೊಟ್ಟ ನೀರಜ್​ ಚೋಪ್ರಾ

Narendra Modi
ದೇಶ2 hours ago

Narendra Modi: ಮೋದಿ ಪ್ರೊಫೈಲ್‌ ಫೋಟೊ ಈಗ ತಿರಂಗಾ; ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಜನರಿಗೆ ಕರೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 day ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 day ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 day ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌