ಕ್ರಿಕೆಟ್
Team India: ರೋಹಿತ್ ಬಳಿಕ ಭಾರತ ತಂಡಕ್ಕೆ ಈತನೇ ನಾಯಕ; ರವಿ ಶಾಸ್ತ್ರಿ ಸೂಚಿಸಿದ ಆಟಗಾರ ಯಾರು?
ರೋಹಿತ್ ಶರ್ಮ(rohit sharma) ಬಳಿಕ ಹಾರ್ದಿಕ್ ಪಾಂಡ್ಯ(hardik pandya) ಅವರನ್ನು ಟೀಮ್ ಇಂಡಿಯಾಕ್ಕೆ ನಾಯಕನನ್ನಾಗಿ ಮಾಡಬೇಕೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಮುಂಬಯಿ: ವಿರಾಟ್ ಕೊಹ್ಲಿ(virat kohli) ನಾಯಕತ್ವದಲ್ಲಿ ಭಾರತ ತಂಡ(Team India) ಐಸಿಸಿ(ICC) ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮ(rohit sharma) ಅವರಿಗೆ ನಾಯಕನ ಪಟ್ಟ ನೀಡಲಾಗಿತ್ತು. ಐಪಿಎಲ್ನಲ್ಲಿ ಮುಂಬೈ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ್ದ ಅವರ ಮೇಲೆ ಭಾರಿ ನಿರೀಕ್ಷೆಯೊಂದನ್ನು ಇಡಲಾಗಿತ್ತು. ಆದರೆ ಅವರ ನಾಯಕತ್ವದಲ್ಲಿಯೂ ತಂಡ ಯಾವುದೇ ಏಳಿಗೆ ಕಾಣಲಿಲ್ಲ. ಟಿ20 ಮತ್ತು ಟೆಸ್ಟ್ ವಿಶ್ವ ಕಪ್ಗಳಲ್ಲಿ ಸೋಲು ಕಂಡಿತ್ತು.
ಸದ್ಯ ರೋಹಿತ್ಗೆ ಅಂತಿಮ ಅವಕಾಶವಾಗಿ ಉಳಿದಿರುವುದು ಏಕದಿನ ವಿಶ್ವ ಕಪ್ ಟೂರ್ನಿ ಮಾತ್ರ. ಇದರಲ್ಲಿ ಯಶಸ್ಸು ಸಾಧಿಸಿದರೂ ಅವರು ನಾಯಕನಾಗಿ ಮುಂದುವರೆಯುವುದು ಅನುಮಾನ. ಏಕೆಂದೆ ಅವರಿಗೆ ಈಗಾಗಲೇ 36 ವರ್ಷ ವಯಸ್ಸು. ಹೀಗಾಗಿ ರೋಹಿತ್ ಬಳಿಕ ಭಾರತ ತಂಡಕ್ಕೆ ಮುಂದಿನ ಸಾರಥಿ ಯಾರೆಂಬ ಚರ್ಚೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಮಾಜಿ ಆಟಗಾರ ರವಿಶಾಸ್ತ್ರಿ (Ravi Shastri)ಸೂಕ್ತ ಆಟಗಾರನೊಬ್ಬನನ್ನು ಸೂಚಿಸಿದ್ದಾರೆ.
ಟಿ 20 ಸೇರಿ ಕೆಲ ಏಕದಿನ ಪಂದ್ಯಗಳಲ್ಲಿ ಹಂಗಾಮಿಯಾಗಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ(hardik pandya) ಅವರನ್ನು ರೋಹಿತ್ ಬಳಿಕ ಟೀಮ್ ಇಂಡಿಯಾಕ್ಕೆ ನಾಯಕನನ್ನಾಗಿ ಮಾಡಬೇಕೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
“ಪಾಂಡ್ಯ ಅವರ ನಾಯಕತ್ವವನ್ನು ನಾವು ಈಗಾಗಲೇ ಹಲವು ಪಂದ್ಯಗಳಲ್ಲಿ ನೋಡಿದ್ದೇವೆ. ಮಹೇಂದ್ರ ಸಿಂಗ್ ಧೋನಿ ಅವರ ಗರಡಿಯಲ್ಲಿ ಪಳಗಿದ ಪಾಂಡ್ಯ ಅವರು ಧೋನಿಯಂತೆಯೇ ಕೆಲ ನಾಯಕತ್ವದ ಗುಣವನ್ನು ಹೊಂದಿದ್ದಾರೆ. ತಂಡದ ಆಯ್ಕೆ ಮತ್ತು ಆಟಗಾರರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬ ಬಗ್ಗೆ ಸರಿಯಾದ ಅರಿವು ಅವರಿಗಿದೆ. ಹೀಗಾಗಿ ರೋಹಿತ್ ಬಳಿಕ ವೈಟ್ ಬಾಲ್ ಕ್ರಿಕೆಟ್ನಲ್ಲಿ ಅವರಿಗೆ ಭಾರತ ತಂಡದ ನಾಯಕತ್ವ ನೀಡಬೇಕು” ಎಂದು ಬಿಸಿಸಿಐಗೆ ಸಲಹೆಯೊಂದನ್ನು ನೀಡಿದ್ದಾರೆ.
ಇದನ್ನೂ ಓದಿ Sourav Ganguly: ಹಾರ್ದಿಕ್ ಪಾಂಡ್ಯಗೆ ವಿಶೇಷ ಮನವಿ ಮಾಡಿದ ದಾದಾ
ಆಲ್ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು ಅವರ ಸಾಧನೆಯಾಗಿದೆ. ಈ ಬಾರಿಯೂ ಅವರ ತಂಡ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿ ಫೈನಲ್ ಪ್ರವೇಶಿಸಿತ್ತು. ಆದರೆ ಅಂತಿಮ ಹಂತದಲ್ಲಿ ಎಡವಿ ಚೆನ್ನೈ ವಿರುದ್ಧ ಸೋಲು ಕಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕ್ರಿಕೆಟ್
NZ vs BAN: ಮಂಕಡ್ ನಿರಾಕರಿಸಿ ಕ್ರೀಡಾ ಸ್ಫೂರ್ತಿ ಮೆರೆದ ಲಿಟನ್ ದಾಸ್‌ಗೆ ನೆಟ್ಟಿಗರ ಮೆಚ್ಚುಗೆ
ಮಂಕಡಿಂಗ್ ರೂಪದಲ್ಲಿ ರನೌಟ್(mankading out) ಆದ ಇಶ್ ಸೋಧಿ ಅಂಪೈರ್ ಜತೆ ಮಾತನಾಡಿ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದ ಬಾಂಗ್ಲಾ ನಾಯಕ ಲಿಟನ್ ದಾಸ್ ಅವರ ನಡೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಢಾಕಾ: ನ್ಯೂಜಿಲ್ಯಾಂಡ್(NZ vs BAN) ವಿರುದ್ಧದ ತವರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಹೀನಾಯ ಸೋಲು ಕಂಡಿದೆ. ಆದರೆ ಪಂದ್ಯದಲ್ಲಿ ಹಂಗಾಮಿ ನಾಯಕ ಲಿಟನ್ ದಾಸ್(Litton Das) ಅವರು ತೋರಿದ ಕ್ರೀಡಾಸ್ಫೂರ್ತಿಗೆ ಎದುರಾಳಿ ತಂಡದ ಆಟಗಾರರು ಮಾತ್ರವಲ್ಲದೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿವೀಸ್ ಬ್ಯಾಟಿಂಗ್ ಸರದಿಯಲ್ಲಿ ಬಾಂಗ್ಲಾ ಬೌಲರ್ ಹಸನ್(Hasan Mahmud) 46ನೇ ಓವರ್ ಬೌಲ್ ಮಾಡುತ್ತಿದ್ದ ವೇಳೆ ನಾನ್ ಸ್ಟ್ರೈಕ್ನಲ್ಲಿದ್ದ ಇಶ್ ಸೋಧಿ(Ish Sodhi) ಬೌಲಿಂಗ್ ನಡೆಸುವ ಮುನ್ನವೇ ಕ್ರೀಸ್ ತೊರೆದು ಮಂಕಡಿಂಗ್ ರೂಪದಲ್ಲಿ ರನೌಟ್(mankading out) ಆದರು. ಆದರೆ ಅಂಪೈರ್ ಜತೆ ಮಾತನಾಡಿ ಲಿಟ್ಟನ್ ದಾಸ್ ಅವರು ಇಶ್ ಸೋಧಿಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಅವರ ಈ ನಡೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಕಡಿಂಗ್ ವೇಳೆ ಸೋಧಿ 17 ರನ್ ಗಳಿಸಿದರು. ಬಳಿಕ 35 ರನ್ ಬಾರಿಸಿದರು. ಇದರಲ್ಲಿ ಮೂರು ಸೊಗಸಾದ ಸಿಕ್ಸರ್ ಕೂಡ ಸಿಡಿಯಿತು.
ಸೋಲು ಕಂಡ ಬಾಂಗ್ಲಾ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡ 49.2 ಓವರ್ಗಳಲ್ಲಿ 254ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಬಾಂಗ್ಲಾ ಸತತ ವಿಕೆಟ್ ಕಳೆದುಕೊಂಡು 41.1 ಓವರ್ಗಳಲ್ಲಿ ಕೇವಲ 168 ರನ್ಗೆ ಸರ್ವಪತನ ಕಂಡಿತು. ಕಿವೀಸ್ 86 ರನ್ಗಳ ಗೆಲುವು ಸಾಧಿಸಿತು. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಮೂರು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಕಿವೀಸ್ ತಂಡ 1-0 ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯ ಸೆಪ್ಟೆಂಬರ್ 26ರಂದು ನಡೆಯಲಿದೆ.
Ish Sodhi was run out at the non strikers end by Hasan Mahmud. The third umpire checked and gave OUT! But when Sodhi started walking out, skipper Litton Das and Hasan Mahmud called him back again. What a beautiful scene! Lovely spirit of the game. The hug at the end was wonderful… pic.twitter.com/GvrpjXcJwB
— SportsTattoo Media (@thesportstattoo) September 23, 2023
ಏನಿದು ಮಂಕಡಿಂಗ್ ಔಟ್
ಕ್ರಿಕೆಟ್ ಆಟದಲ್ಲಿ ಬೌಲರ್ ಒಬ್ಬ ಚೆಂಡನ್ನು ಬ್ಯಾಟರ್ನತ್ತ ಎಸೆಯುವ ಮೊದಲೇ ನಾನ್ ಸ್ಟ್ರೈಕ್ ನಲ್ಲಿರುವ ಬ್ಯಾಟರ್ ಕ್ರೀಸ್ ಬಿಟ್ಟಿದ್ದರೆ ಆಗ ಬೌಲರ್ ಆತನನ್ನು ರನೌಟ್ ಮಾಡುವ ಅವಕಾಶವನ್ನು ಕ್ರಿಕೆಟ್ ಕಾನೂನಿನ 41.46 ನಿಯಮ ನೀಡುತ್ತದೆ. ನಾನ್ ಸ್ಟ್ರೈಕ್ನಲ್ಲಿರುವ ಬ್ಯಾಟರ್ ಒಬ್ಬನನ್ನು ಆತನ ಅರಿವಿಗೆ ಬರದಂತೆ ರನೌಟ್ ಮಾಡುವ ವಿಧಾನ ಇದಾಗಿದೆ. ಈ ಅವಕಾಶ ಆ ಓವರ್ ಬೌಲಿಂಗ್ ಮಾಡುತ್ತಿರುವ ಬೌಲರ್ಗೆ ಮಾತ್ರವೇ ಇರುತ್ತದೆ. ಮತ್ತು ಇದು ಸಂಪೂರ್ಣವಾಗಿ ಬೌಲರೊಬ್ಬನ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿರುತ್ತದೆ.
ಇದನ್ನೂ ಓದಿ Litton Das: ಬಾಂಗ್ಲಾ ತಂಡಕ್ಕೆ ಲಿಟ್ಟನ್ ದಾಸ್ ನಾಯಕ
ಮಂಕಡಿಂಗ್ ಹೆಸರು ಬರಲು ಕಾರಣವೇನು?
1947ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕ್ವೀನ್ಸ್ ಲ್ಯಾಂಡ್ ವಿರುದ್ಧದ ಪಂದ್ಯವೊಂದರಲ್ಲಿ ಭಾರತದ ಎಡಗೈ ಸ್ಪಿನ್ನರ್ ವೀನೂ ಮಂಕಡ್ ಅವರು ಬಿಲ್ ಬ್ರೌನ್ ಅವರನ್ನು ನಾನ್ ಸ್ಟ್ರೈಕ್ ಭಾಗದಲ್ಲಿ ರನೌಟ್ ಮಾಡಿದ್ದರು. ಆ ಬಳಿಕ ಕ್ರಿಕೆಟ್ ನ ಈ ವಿಚಿತ್ರ ನಿಯಮಕ್ಕೆ ‘ಮಂಕಡ್’ ನಿಯಮ ಎಂದೇ ಪ್ರಸಿದ್ಧಿ ಪಡೆಯಿತು.
ಕ್ರಿಕೆಟ್
Mohammed Shami: 16 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಮೊಹಮ್ಮದ್ ಶಮಿ
ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಕಿತ್ತ ಮೂರನೇ ವೇಗಿ ಎಂಬ ಖ್ಯಾತಿಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ಆ ಮೂಲಕ ದಿಗ್ಗಜರಾದ ಕಪಿಲ್ ದೇವ್ ಹಾಗೂ ಅಜಿತ್ ಅಗರ್ಕರ್ ಅವರನ್ನೊಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.
ಮೊಹಾಲಿ: ಆಸ್ಟ್ರೇಲಿಯಾ(India vs Australia, 1st ODI) ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಘಾತಕ ಬೌಲಿಂಗ್ ಮೂಲಕ ಗಮನಸೆಳೆದ ಮೊಹಮ್ಮದ್ ಶಮಿ(Mohammed Shami) 16 ವರ್ಷಗಳ ಬಳಿಕ ದಾಖಲೆಯೊಂದನ್ನು ಬರೆದಿದ್ದಾರೆ. ಇದಕ್ಕೂ ಮುನ್ನ 2007ರಲ್ಲಿ ಜಹೀರ್ ಖಾನ್(Zaheer Khan) ಗೋವಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಲಂಕಾ ವಿರುದ್ಧ 5 ವಿಕೆಟ್ ಸಾಧನೆ ಮಾಡಿದ್ದರು. ಇದೀಗ 16 ವರ್ಷಗಳ ಬಳಿಕ ಶಮಿ ತವರು ಅಂಗಣದಲ್ಲಿ 5 ವಿಕೆಟ್ ಸಾಧನೆ ಮಾಡಿದ್ದಾರೆ.
ಮೂರನೇ ವೇಗಿ
ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಕಿತ್ತ ಮೂರನೇ ವೇಗಿ ಎಂಬ ಖ್ಯಾತಿಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ಆ ಮೂಲಕ ದಿಗ್ಗಜರಾದ ಕಪಿಲ್ ದೇವ್ ಹಾಗೂ ಅಜಿತ್ ಅಗರ್ಕರ್ ಅವರನ್ನೊಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.
2019ರ ವಿಶ್ವಕಪ್ನಲ್ಲಿ ಬರ್ಮಿಂಗ್ ಹ್ಯಾಮ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 69 ರನ್ಗೆ 5 ವಿಕೆಟ್ ಪಡೆದದ್ದು ಶಮಿಯ ಇದುವರೆಗಿನ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿತ್ತು. ಆದರೆ ಆಸೀಸ್ ವಿರುದ್ಧ ಶಮಿ 51 ರನ್ಗೆ 5 ವಿಕೆಟ್ ಕೆಡವಿ ಈ ಸಾಧನೆಯನ್ನು ಉತ್ತಮ ಪಡಿಸಿಕೊಂಡರು. ಇದು ಏಕದಿನ ಕ್ರಿಕೆಟ್ನಲ್ಲಿ ಶಮಿ ಅವರ ಎರಡನೇ ಐದು ವಿಕೆಟ್ ಸಾಧನೆಯಾಗಿದೆ. ಒಟ್ಟಾರೆ 50 ಓವರ್ಗಳ ಸ್ವರೂಪದಲ್ಲಿ ಶಮಿ ಒಂಬತ್ತು ಬಾರಿ ನಾಲ್ಕು ವಿಕೆಟ್ಗಳನ್ನು ಕಿತ್ತ ಸಾಧನೆ ಮಾಡಿದ್ದಾರೆ.
For his brilliant bowling figures of 5/51, @MdShami11 is adjudged Player of the Match as #TeamIndia win by 5 wickets.
— BCCI (@BCCI) September 22, 2023
Take a 1-0 lead in the three match ODI series.
Scorecard – https://t.co/H6OgLtww4N…… #INDvAUS@IDFCFIRSTBank pic.twitter.com/gIZJFkWj2L
ಶಮಿ ಈಗ ಏಕದಿನ ಪಂದ್ಯಗಳಲ್ಲಿ ಕಾಂಗರೂ ಬಳಗದ ವಿರುದ್ಧ 37 ವಿಕೆಟ್ಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಮೆನ್ ಇನ್ ಬ್ಲೂ ಪರ ಅತಿ ಹೆಚ್ಚು ವಿಕೆಟ್ (45) ಪಡೆದ ಕಪಿಲ್ ದೇವ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ 277 ರನ್ಗಳ ಗುರಿ ಬೆನ್ನತ್ತಿದಿದೆ. ಸರಣಿಯ ಎರಡನೇ ಪಂದ್ಯ ಇಂದೋರ್ನಲ್ಲಿ ಮತ್ತು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ರಾಜ್ಕೋಟ್ನಲ್ಲಿ ನಡೆಯಲಿದೆ.
ಇದನ್ನೂ ಓದಿ IND vs AUS: ಆಸೀಸ್ಗೆ ಬೀಳಲಿ ಸರಣಿ ಸೋಲಿನ ಏಟು
ಪಂದ್ಯ ಗೆದ್ದ ಭಾರತ
ಇಲ್ಲಿನ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 276 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ. 48.4 ಓವರ್ಗಳಲ್ಲಿ. 5 ವಿಕೆಟ್ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು. ಭಾರತ ತಂಡದ ಪರ ಬೌಲಿಂಗ್ನಲ್ಲಿ 51 ರನ್ಗಳಿಗೆ 5 ವಿಕೆಟ್ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್ಮನ್ ಗಿಲ್ (74) ಹಾಗೂ ಋತುರಾಜ್ ಗಾಯಕ್ವಾಡ್ (71), ಸೂರ್ಯಕುಮಾರ್ ಯಾದವ್ (50), ಮತ್ತು ಕೆ. ಎಲ್ ರಾಹುಲ್ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು. ಶಮಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
ಕ್ರಿಕೆಟ್
‘ಎಂದಿಗೂ ಬದಲಾಗಬೇಡ’ ನವೀನ್ ಉಲ್ ಹಕ್ಗೆ ಜನ್ಮದಿನದ ಶುಭಾಶಯ ಕೋರಿದ ಗಂಭೀರ್; ಹಾರೈಕೆ ಹಿಂದಿದೆ ನರಿ ಬುದ್ಧಿ
ಐಪಿಎಲ್ನ ಲಕ್ನೋ ತಂಡದ ಜೆರ್ಸಿಯಲ್ಲಿ ಜತೆಗಿರುವ ಫೋಟೊವನ್ನು ಹಂಚಿಕೊಂಡು ನವೀನ್ ಉಲ್ ಹಕ್ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ನೀನು ಯಾವುದೇ ಕಾರಣಕ್ಕೂ, ಬದಲಾಗಬೇಡ, ನಿನ್ನಂತಹ ವ್ಯಕ್ತಿಗಳು ಸಿಗುವುದು ತುಂಬಾ ಕಡಿಮೆ” ಎಂದು ಗೌತಮ್ ಗಂಭೀರ್ ಬರೆದುಕೊಂಡಿದ್ದಾರೆ.
ಮುಂಬಯಿ: ವಿರಾಟ್ ಕೊಹ್ಲಿಯ(virat kohli) ಬದ್ಧ ಎದುರಾಳಿ ಅಫಘಾನಿಸ್ತಾನ ತಂಡದ ವೇಗಿ ನವೀನ್ ಉಲ್ ಹಕ್ (Naveen-ul-Haq) 24ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನೇಕರು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಆದರೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಅವರ ಹಾರೈಕೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.
ವಿರಾಟ್ ಕೊಹ್ಲಿ ಅವರನ್ನು ಒಂದಲ್ಲ ಒಂದು ವಿಚಾರವಾಗಿ ಕೆಣಕುವ ಮತ್ತು ಅಪಹಾಸ್ಯ ಮಾಡುವ ಗಂಭೀರ್ ಈ ಬಾರಿಯೂ ಇದೇ ಕೀಳುಮಟ್ಟದ ಪ್ರವೃತ್ತಿಯನ್ನು ತೋರಿದ್ದಾರೆ. ಐಪಿಎಲ್ನ ಲಕ್ನೋ ತಂಡದ ಜೆರ್ಸಿಯಲ್ಲಿ ಜತೆಗಿರುವ ಫೋಟೊವನ್ನು ಹಂಚಿಕೊಂಡು ನವೀನ್ ಉಲ್ ಹಕ್ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ನೀನು ಯಾವುದೇ ಕಾರಣಕ್ಕೂ, ಬದಲಾಗಬೇಡ, ನಿನ್ನಂತಹ ವ್ಯಕ್ತಿಗಳು ಸಿಗುವುದು ತುಂಬಾ ಕಡಿಮೆ” ಎಂದು ಹರಸಿ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನವೀನ್ ಉಲ್ ಹಕ್ ವಿಚಾರದಲ್ಲಿ ಕೊಹ್ಲಿ ಜತೆ ಕಿರಿಕ್
ಈ ಬಾರಿಯ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದ ಗೌತಮ್ ಗಂಭಿರ್ ಅವರು ನವೀನ್ ಉಲ್ ಹಕ್ ವಿಚಾರದಲ್ಲಿ ಕೊಹ್ಲಿ(virat kohli and naveen ul haq) ಜತೆ ಮೈದಾನದಲ್ಲೇ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸುವ ಹಂತದದ ವರೆಗೂ ಹೋಗಿದ್ದರು. ಅತ್ತ ನವೀನ್ ಕೂಡ ಕೊಹ್ಲಿಯನ್ನು ಪದೇಪದೆ ಕೆಣಕಿ ಅಗೌರವದಿಂದ ನಡೆದುಕೊಂಡಿದ್ದರು. ಇದಕ್ಕೆ ಕೊಹ್ಲಿ ಅಭಿಮಾನಿಗಳು ಗಂಭೀರ್ ಮತ್ತು ನವೀನ್ ಅವರನ್ನು ಕಂಡಾಗಲೆಲ್ಲಾ ಕೊಹ್ಲಿಯ ಹೆಸರನ್ನು ಜೋರಾಗಿ ಕರೆದು ಕೆಣಕುತ್ತಿದ್ದಾರೆ.
ಏಷ್ಯಾಕಪ್ನಲ್ಲಿಯೂ ಕೊಹ್ಲಿಯನ್ನು ಕೆಣಕಿದ್ದ ಗಂಭೀರ್
ಕಳೆದ ವಾರ ಮುಕ್ತಾಯ ಕಂಡ ಏಷ್ಯಾಕಪ್ ಟೂರ್ನಿಯಲ್ಲಿಯೂ ಕೊಹ್ಲಿಯನ್ನು ಗಂಭೀರ್ ಅಪಹಾಸ್ಯ ಮಾಡಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಕೊಹ್ಲಿ, ಶಾಹೀನ್ ಅಫ್ರಿದಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ವೇಳೆ ಲೈವ್ ಕಾಮೆಂಟ್ರಿಯಲ್ಲೇ ಟೀಕಿಸಿದ್ದರು. ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ “ಈ ಎಸೆತಕ್ಕೆ ಬ್ಯಾಟ್ ಬೀಸುವ ಅಗತ್ಯವೇ ಇರಲಿಲ್ಲ. ವಿಕೆಟ್ನ ಮುಂದೆ ಕೂಡ ಈ ಚೆಂಡು ಇರಲಿಲ್ಲ. ಸಂಪೂರ್ಣವಾಗಿ ವಿಕೆಟ್ ನಿಂದ ಚೆಂಡು ಹೊರ ಭಾಗದಲ್ಲಿತ್ತು. ವಿಶ್ವದ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿರುವ ಶಾಹೀನ್ ಅಫ್ರಿದಿ ಅವರಂತ ಬೌಲರ್ಗಳ ಮುಂದೆ ಶ್ರೇಷ್ಠ ಬ್ಯಾಟರ್ ಈ ಎಸೆತಕ್ಕೆ ಮುಂದೆ ಹೋಗಬೇಕೋ ಅಥವಾ ಹಿಂದೆ ಹೋಗಬೇಕೋ ಎಂಬುದನ್ನು ತಿಳಿದಿರಬೇಕು” ಎಂದು ಹೇಳುವ ಮೂಲಕ ಗಂಭೀರ್ ಅವರು ಕೊಹ್ಲಿಯನ್ನು ಟೀಕಿಸಿ ವ್ಯಂಗ್ಯವಾಡಿದ್ದರು.
ಇದನ್ನೂ ಓದಿ IND vs PAK : ಭಾರತದ ಕ್ರಿಕೆಟಿಗರು ಪಾಕಿಸ್ತಾನದವರ ಕೈ ಕುಲುಕುವುದು ಸರಿಯಲ್ಲ; ಗಂಭೀರ್ ಹೀಗೆ ಹೇಳಿದ್ಯಾಕೆ?
ಇದಾದ ಬಳಿಕ ಪಾಕ್ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದನ್ನು ಗಂಭೀರ್ ಟೀಕಿಸಿದ್ದರು. 94 ಎಸೆತದಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 122 ರನ್ ಗಳಿಸಿದ್ದರು. ಅಲ್ಲದೆ ಅತಿ ವೇಗವಾಗಿ 13 ಸಾವಿರ ರನ್ ಪೂರ್ತಿಗೊಳಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಈ ಎಲ್ಲ ಕಾರಣದಿಂದ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಆದರೆ ಗಂಭೀರ್ ಈ ಪ್ರಶಸ್ತಿಗೆ ಕೊಹ್ಲಿ ಅರ್ಹನಲ್ಲ ಎಂದು ಹೇಳಿದ್ದರು.
ಕ್ರಿಕೆಟ್
Sara vs Gill: ಶುಭಮನ್ ಗಿಲ್ ಜತೆಗಿನ ಪ್ರೀತಿಗೆ ಕ್ಲ್ಯಾರಿಟಿ ನೀಡಿದ ಸಾರಾ ತೆಂಡೂಲ್ಕರ್
ಸಾರಾ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ವೆಲ್ ಪ್ಲೇ ಶುಭಮನ್ ಗಿಲ್’ ಎಂದು ಬರೆದು ಚಪ್ಪಾಳೆ ತಟ್ಟುವ ಎಮೊಜಿಯನ್ನು ಹಾಕಿದ್ದಾರೆ. ಇದು ನೆಟ್ಟಿಗರಿಗೆ ಆಹಾರವಾಗಿದೆ.
ಮುಂಬಯಿ: ಸಚಿನ್ ತೆಂಡೂಲ್ಕರ್(sachin tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಟೀಮ್ ಇಂಡಿಯಾದ ಸ್ಟಾರ್ ಯುವ ಆಟಗಾರ ಶುಭಮನ್ ಗಿಲ್ ಇಬ್ಬರು ಕದ್ದು ಮುಚ್ಚಿ ಡೇಟಿಂಗ್(sara tendulkar and shubman gill relationship) ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ಕೇಳಿಬಂದಿದೆ. ಇದೇ ಕಾರಣಕ್ಕೆ ಇವರಿಬ್ಬರನ್ನು ನೆಟ್ಟಿಗರು ಹಲವು ಬಾರಿ ಟ್ರೋಲ್ ಕೂಡ ಮಾಡಿದ್ದಾರೆ. ಆದರೆ ಗಿಲ್ ಮತ್ತು ಸಾರಾ ತಮ್ಮ ಪ್ರೀತಿ ಮತ್ತು ಡೇಟಿಂಗ್ ವಿಚಾರವಾಗಿ ಇದುವರೆಗೂ ಎಲ್ಲಯೂ ತುಟಿಬಿಚ್ಚಿಲ್ಲ. ಎಷ್ಟೇ ರೂಮರ್ಸ್ ಹಬ್ಬಿದರೂ ತಮ್ಮ ಪಾಡಿಗೆ ತಾವು ಸುಮ್ಮನಿದ್ದರು. ಇದೀಗ ಸಾರಾ ಅವರು ಮಾಡಿರುವ ಟ್ವೀಟ್ ಈ ಜೋಡಿ ನಿಜವಾಗಿಯೂ ಪ್ರೀತಿಸುತ್ತಿರುವುದು ಖಚಿತ ಎಂಬ ಸುಳಿವು ನೀಡಿದಂತಿದೆ.
“ವೆಲ್ ಪ್ಲೇ ಶುಭಮನ್ ಗಿಲ್”
ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಶುಭಮನ್ ಗಿಲ್ 63 ಎಸೆತ ಎದುರಿಸಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 74 ರನ್ ಬಾರಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಪ್ರದರ್ಶನಕ್ಕೆ ಸಾರಾ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ವೆಲ್ ಪ್ಲೇ ಶುಭಮನ್ ಗಿಲ್’ ಎಂದು ಬರೆದು ಚಪ್ಪಾಳೆ ತಟ್ಟುವ ಎಮೊಜಿಯನ್ನು ಹಾಕಿದ್ದಾರೆ. ಇದು ನೆಟ್ಟಿಗರಿಗೆ ಆಹಾರವಾಗಿದೆ. ಇಬರಿಬ್ಬರ ಮಧ್ಯೆ ಪ್ರೇಮಾಂಕುರ ಇರುವುದು ಪಕ್ಕಾ ಎಂದಿದ್ದಾರೆ.
Well played #ShubmanGill 👏 & Team india 🇮🇳 #INDvAUS
— Sara Tendulkar (@imsaratendulkar) September 22, 2023
ಶುಭಮನ್ ಗಿಲ್ ಅವರು ಆಡುವ ವೇಳೆ ಹಲವು ಬಾರಿ ಪ್ರೇಕ್ಷಕರು ಸಾರಾ, ಸಾರಾ… ಎಂದು ಕೂಗಿದ್ದರು. ಈ ಸಾರಾ ಯಾರೆಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದ್ದರೂ ಇದಕ್ಕೆ ಯಾವುದೇ ಕ್ಲ್ಯಾರಿಟಿ ಸಿಕ್ಕಿರಲಿಲ್ಲ. ಕೆಲವರು ಗಿಲ್ ಸಚಿನ್ ತೆಂಡೂಲ್ಕರ್ ಪುತ್ರಿ ಜತೆ ಅಂದುಕೊಂಡಿದ್ದರೆ, ಇನ್ನೂ ಕೆಲವರು ನಟಿ ಸಾರಾ ಅಲಿ ಖಾನ್ ಎಂದುಕೊಂಡಿದ್ದರು. ಆದರೆ ಈಗ ನೆಟ್ಟಿಗರಿಗೆ ಒಂದು ಹಂತದ ಕ್ಲ್ಯಾರಿಟಿ ಸಿಕ್ಕಿದ್ದು ಸಚಿನ್ ಪುತ್ರಿ ಸಾರಾ ಅವರರೇ ಗಿಲ್ ಪ್ರೇಯಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ Viral Video: ಪಂದ್ಯ ಮುಗಿದರೂ ತಡರಾತ್ರಿವರೆಗೂ ಬ್ಯಾಟಿಂಗ್ ಅಭ್ಯಾಸ ನಡೆಸಿದ ಟೀಮ್ ಇಂಡಿಯಾ ಆಟಗಾರ
ಭಾರತಕ್ಕೆ 5 ವಿಕೆಟ್ ಜಯ
ಇಲ್ಲಿನ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 276 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ. 48.4 ಓವರ್ಗಳಲ್ಲಿ. 5 ವಿಕೆಟ್ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು. ಭಾರತ ತಂಡದ ಪರ ಬೌಲಿಂಗ್ನಲ್ಲಿ 51 ರನ್ಗಳಿಗೆ 5 ವಿಕೆಟ್ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್ಮನ್ ಗಿಲ್ (74) ಹಾಗೂ ಋತುರಾಜ್ ಗಾಯಕ್ವಾಡ್ (71), ಸೂರ್ಯಕುಮಾರ್ ಯಾದವ್ (50), ಮತ್ತು ಕೆ. ಎಲ್ ರಾಹುಲ್ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು.
-
ಸುವಚನ19 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವೈರಲ್ ನ್ಯೂಸ್5 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಕರ್ನಾಟಕ10 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ14 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
South Cinema7 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಅಂಕಣ17 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ24 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
ಬಾಲಿವುಡ್10 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!