IND vs AUS | ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 209 ರನ್‌ ಗೆಲುವಿನ ಸವಾಲೊಡ್ಡಿದ ಭಾರತ - Vistara News

ಕ್ರಿಕೆಟ್

IND vs AUS | ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 209 ರನ್‌ ಗೆಲುವಿನ ಸವಾಲೊಡ್ಡಿದ ಭಾರತ

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 208 ರನ್‌ ಬಾರಿಸಿದೆ.

VISTARANEWS.COM


on

ind vs aus
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊಹಾಲಿ : ಕೆ. ಎಲ್ ರಾಹುಲ್ (೫೫). ಹಾರ್ದಿಕ್‌ ಪಾಂಡ್ಯ (೭೧*) ಜೋಡಿಯ ಅರ್ಧ ಶತಕಗಳು ಹಾಗೂ ಸೂರ್ಯಕುಮಾರ್‌ ಯಾದವ್‌ (೪೬) ಅವರ ಉಪಯುಕ್ತ ಬ್ಯಾಟಿಂಗ್ ನೆರವು ಪಡೆದ ಭಾರತ ತಂಡ, ಮೂರು ಟಿ೨೦ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ ೨೦೯ ರನ್‌ಗಳ ಗೆಲುವಿನ ಗುರಿಯನ್ನೊಡ್ಡಿದೆ.

ಇಲ್ಲಿನ ಐಎಸ್‌ ಬಿಂದ್ರಾ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್‌ ನಷ್ಟಕ್ಕೆ ೨೦೮ ರನ್ ಪೇರಿಸಿದೆ.

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಉತ್ತಮ ಆರಂಭದ ಸೂಚನೆ ನೀಡಿದ ಹೊರತಾಗಿಯೂ ೨೧ ರನ್‌ ಆಗುವಷ್ಟರಲ್ಲಿ ರೋಹಿತ್‌ ಶರ್ಮ (೧೧) ಅವರ ವಿಕೆಟ್‌ ಕಳೆದುಕೊಂಡಿತು. ಬಳಿಕ ಬಂದ ವಿರಾಟ್‌ ಕೊಹ್ಲಿಯೂ ೨ ರನ್‌ಗಳಿಗೆ ವಿಕೆಟ್‌ ಒಪ್ಪಿಸುವುದರೊಂದಿಗೆ ೩೫ ರನ್‌ಗಳಿಗೆ ೨ ವಿಕೆಟ್‌ ಕಳೆದುಕೊಂಡ ಭಾರತ ತಂಡ ಹಿನ್ನಡೆ ಎದುರಿಸಿತು. ಆದರೆ, ಆ ಬಳಿಕ ಜತೆಯಾದ ಕೆ. ಎಲ್‌ ರಾಹುಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅರಂಭಿಕ ಕುಸಿತದಿಂದ ಮೇಲಕ್ಕೆತ್ತಿದರು. ಈ ಜೋಡಿ ಮೂರನೇ ವಿಕೆಟ್‌ಗೆ ೬೮ ರನ್‌ಗಳನ್ನು ಪೇರಿಸಿತು. ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ ರಾಹುಲ್ ೩೫ ಎಸೆತಗಳಲ್ಲಿ ೫೫ ರನ್‌ ಬಾರಿಸಿದರು. ಆದರೆ, ಹೇಜಲ್‌ವುಡ್‌ ಎಸೆತಕ್ಕೆ ದೊಡ್ಡ ಹೊಡೆತ ಬಾರಿಸಲು ಹೋಗಿ ಔಟಾದರು.

ಪಾಂಡ್ಯ ಅಬ್ಬರ

ಸೂರ್ಯಕುಮಾರ್‌ ಯಾದವ್‌ ಆರಂಭದಿಂದಲೇ ಮಿಂಚಿದರಲ್ಲದೆ, ೨೫ ಎಸೆತಗಳಲ್ಲಿ ೪೬ ರನ್‌ ಬಾರಿಸಿದರು. ಬಳಿಕ ಆಡಲು ಇಳಿದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸ್ಫೋಟಕ ಬ್ಯಾಟಿಂಗ್‌ ಮಾಡುವ ಮೂಲಕ ೩೦ ಎಸೆತಗಳಲ್ಲಿ ಅಜೇಯ ೭೧ ರನ್‌ ಬಾರಿಸಿದರು. ಆರಂಭದಿಂದಲೇ ಆಸ್ಟ್ರೇಲಿಯಾದ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಪಾಂಡ್ಯ ಇನಿಂಂಗ್ಸ್‌ನ ಕೊನೇ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ ಬಾರಿಸುವುದರೊಂದಿಗೆ ಸ್ಮರಣೀಯ ಬ್ಯಾಟಿಂಗ್‌ ಮಾಡಿದರು.

ಸ್ಕೋರ್‌ ವಿವರ: ಭಾರತ ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೨೦೮ (ಕೆ.ಎಲ್‌ ರಾಹುಲ್‌ ೫೫, ಸೂರ್ಯಕುಮಾರ್‌ ಯಾದವ್‌ ೪೦, ಹಾರ್ದಿಕ್‌ ಪಾಂಡ್ಯ೭೧*; ಜೋಶ್‌ ಹೇಜಲ್‌ವುಡ್‌ ೩೯ಕ್ಕೆ೨, ನಥಾನ್‌ ಎಲ್ಲಿಸ್‌ ೩೦ಕ್ಕೆ೩).

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Riyan Parag: ಟಿ20 ವಿಶ್ವಕಪ್​ ನೋಡಲಾರೆ ಎಂದ ‘ಹಾಟ್​ ಫೇವರಿಟ್’ ರಿಯಾನ್​ ಪರಾಗ್

Riyan Parag: ಸಂದರ್ಶಕರೊಬ್ಬರು ಟಿ20 ವಿಶ್ವಕಪ್​ ಬಗ್ಗೆ ಕೇಳಿದ ಪ್ರಶ್ನೆ ಉತ್ತರಿಸಿದ ಪರಾಗ್​, ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ವಿಶ್ವಕಪ್ ಪಂದ್ಯಗಳನ್ನು ನೋಡ ಬಯಸುವುದಿಲ್ಲ. ನಾನು ಕೇವಲ ಯಾರು ಗೆಲ್ಲುತ್ತಿದ್ದಾರೆ ಎಂದಷ್ಟೇ ನೋಡಬಯಸುತ್ತೇನೆ. ನಾನು ಯಾವಾಗ ವಿಶ್ವಕಪ್ ಆಡುತ್ತೇನೆಯೋ ಆಗ ಈ ಟೂರ್ನಿಯ ಬಗ್ಗೆ ಯೋಚಿಸುತ್ತೇನೆ” ಎಂದು ಹೇಳಿದ್ದಾರೆ.

VISTARANEWS.COM


on

Riyan Parag
Koo

ಮುಂಬಯಿ: ಕೆಲ ದಿನಗಳ ಹಿಂದೆ ಯೂಟ್ಯೂಬ್ ಖಾತೆಯಲ್ಲಿ ಬಾಲಿವುಡ್ ನಟಿಯರಾದ ಅನನ್ಯಾ ಪಾಂಡೆ(ananya pandey) ಹಾಗೂ ಸಾರಾ ಅಲಿ ಖಾನ್(sara ali khan) ಅವರ ಹಾಟ್ ವಿಡಿಯೋಗಳನ್ನು ಹುಡುಕಾಡಿದ ವಿಚಾರದಲ್ಲಿ ಭಾರೀ ಸುದ್ದಿಯಾಗಿದ್ದ ರಾಜಸ್ಥಾನ್​ ರಾಯಲ್ಸ್​ ತಂಡದ ಬ್ಯಾಟರ್​ ರಿಯಾನ್​ ಪರಾಗ್​(Riyan Parag) ಅವರು ಟಿ20 ವಿಶ್ವಕಪ್​ ಟೂರ್ನಿಯನ್ನು ನೋಡಲಾರೆ ಎಂದು ಹೇಳಿದ್ದಾರೆ.

ಸಂದರ್ಶಕರೊಬ್ಬರು ಟಿ20 ವಿಶ್ವಕಪ್​ ಬಗ್ಗೆ ಕೇಳಿದ ಪ್ರಶ್ನೆ ಉತ್ತರಿಸಿದ ಪರಾಗ್​, ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ವಿಶ್ವಕಪ್ ಪಂದ್ಯಗಳನ್ನು ನೋಡ ಬಯಸುವುದಿಲ್ಲ. ನಾನು ಕೇವಲ ಯಾರು ಗೆಲ್ಲುತ್ತಿದ್ದಾರೆ ಎಂದಷ್ಟೇ ನೋಡಬಯಸುತ್ತೇನೆ. ನಾನು ಯಾವಾಗ ವಿಶ್ವಕಪ್ ಆಡುತ್ತೇನೆಯೋ ಆಗ ಈ ಟೂರ್ನಿಯ ಬಗ್ಗೆ ಯೋಚಿಸುತ್ತೇನೆ” ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್​ ಟೂರ್ನಿಗೆ ಭಾರತ ತಂಡ ಪ್ರಕಟಗೊಳ್ಳುವ ಮುನ್ನ ಸಂಭಾವನೀಯರ ಪಟ್ಟಿಯಲ್ಲಿ ರಿಯಾನ್ ಪರಾಗ್ ಹೆಸರೂ ಕೇಳಿ ಬಂದಿತ್ತು, ಅಲ್ಲದೆ ಪರಾಗ್​ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರು. ಹೀಗಾಗಿ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಸ್ಥಾನ ಸಿಗಲಿಲ್ಲ. ಇದೇ ಬೇಸರದಲ್ಲಿ ಅವರು ತಾನು ವಿಶ್ವಕಪ್​ ನೋಡುವುದಿಲ್ಲ ಎಂದು ಹೇಳಿದಂತಿದೆ.

ಇದನ್ನೂ ಓದಿ T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್

ಕೆಲವು ದಿನಗಳ ಹಿಂದೆ ರಿಯಾನ್​ ಪರಾಗ್​ ಅವರು ಲೈವ್ ಸ್ಟ್ರೀಮಿಂಗ್​ನಲ್ಲಿ ಮಾತನಾಡುತ್ತಿದ್ದ ವೇಳೆ ಅವರ ಯೂಟ್ಯೂಬ್ ಸರ್ಚ್ ಹಿಸ್ಟರಿ ಕೂಡ ಕಾಣಿಸಕೊಂಡಿತ್ತು. ಈ ವೇಳೆ ಅವರು ನಟಿಮಣಿಯರ ಹೆಸರುಗಳೊಂದಿಗೆ ಹಾಟ್ ವಿಡಿಯೊಗಳನ್ನು ಹುಡುಕಾಡಿರುವುದು ಕಂಡು ಬಂದಿತ್ತು. ಅವರ ಸರ್ಚ್ ಹಿಸ್ಟರಿ ಸ್ಕ್ರೀನ್ ಶಾಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಈ ಬಾರಿಯ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರಿಯಾನ್ ಪರಾಗ್ ಅದ್ಭುತ ಪ್ರದರ್ಶನ ನೀಡಿದ್ದರು. 15 ಇನಿಂಗ್ಸ್​ ಆಡಿ 4 ಅರ್ಧಶತಕಗಳೊಂದಿಗೆ ಒಟ್ಟು 573 ರನ್ ಕಲೆಹಾಕಿದ್ದರು.

 ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.

ಏಕದಿನ ವಿಶ್ವಕಪ್​ ಟೂರ್ನಿಯಂತೆ ಈ ಬಾರಿಯೂ ಟಿ20 ವಿಶ್ವಕಪ್​ ಪಂದ್ಯಾವಳಿಗಳನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಉಚಿತವಾಗಿ ನೋಡಬಹುದಾಗಿದೆ. ​ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಈ ಅವಕಾಶ ಕಲ್ಪಿಸಿದೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.

Continue Reading

ಕ್ರೀಡೆ

Nataša Stanković: ಹಾರ್ದಿಕ್ ಪಾಂಡ್ಯ ಜತೆ ವಿಚ್ಛೇದನ?; ಅನುಮಾನಕ್ಕೆ ತೆರೆ ಎಳೆದ ಪತ್ನಿ ನತಾಶಾ

Nataša Stanković: ನತಾಶಾ ಅವರು ಪಾಂಡ್ಯ ಜತೆಗಿನ ಮದುವೆಯ ಹಲವು ಸುಂದರ ಫೋಟೊಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡು ನಮ್ಮ ಮಧ್ಯೆ ಯಾವುದೇ ಮನಸ್ತಾಪವಿಲ್ಲ ಎನ್ನುವಂತೆ ಎಲ್ಲ ಅನುಮಾನಕ್ಕೆ ತೆರೆ ಎಳೆದಿದ್ದಾರೆ.

VISTARANEWS.COM


on

Nataša Stanković
Koo

ಮುಂಬಯಿ: ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾನ್‌ಕೋವಿಕ್‌(Nataša Stanković) ಅವರ ವಿವಾಹ ಮುರಿದು ಬಿದ್ದಿದೆಯೇ?, ಈ ಜೋಡಿ ವಿಚ್ಛೇದನಕ್ಕೆ ಪಡೆಯಲಿದೆಯೇ? ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳ ಹಿಂದೆ ಭಾರಿ ಚರ್ಚೆಯಾಗುತ್ತಿತ್ತು. ಇದರ ಮಧ್ಯ ಈ ಜೋಡಿಯ ಸಾಮಾಜಿಕ ಜಾಲತಾಣಗಳ ಒಂದೊಂದು ಪೋಸ್ಟ್​ಗಳು ಕೂಡ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ, ಇದೀಗ ಈ ಜೋಡಿಯ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ವಿಚ್ಛೇದನದ ಸುದ್ದಿಯ ನಡುವೆ, ನತಾಶಾ ಮೊದಲ ಬಾರಿಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್​ಫ್ರೆಂಡ್​ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದರು. ಈ ವೇಳೆ ನತಾಶಗೆ ಪಾಪರಾಜಿಗಳು ಪಾಂಡ್ಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನತಾಶ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದರು.

ಇದಾಗ ಬಳಿಕ ನತಾಶಾ ಸ್ಟಾನ್‌ಕೋವಿಕ್‌ ಅವರು ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದರು. ಯೇಸು ತನ್ನ ಜಾಡನ್ನು ಹಿಂಬಾಲಿಸಿದಾಗ ಕುರಿಮರಿ ಮುಂದಾಳತ್ವ ವಹಿಸುತ್ತಿರುವ ಫೋಟೊ ಇದಾಗಿತ್ತು. ಈ ಫೋಟೊವನ್ನು ಕಂಡಾಗ ಈ ಜೋಡಿ ಶೀಘ್ರದಲ್ಲೇ ದೂರವಾಗುವುದು ಖಚಿತ ಎನ್ನುವಂತಿತ್ತು. ಅಲ್ಲದೆ ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು ಎಂದು ವರದಿಯಾಗಿತ್ತು. ಈ ಎಲ್ಲ ಅನುಮಾನಗಳಿಗೆ ಇದೀಗ ತೆರೆಬಿದ್ದಂತಿದೆ. ಹೌದು, ನತಾಶಾ ಅವರು ಪಾಂಡ್ಯ ಜತೆಗಿನ ಮದುವೆಯ ಹಲವು ಸುಂದರ ಫೋಟೊಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡು ನಮ್ಮ ಮಧ್ಯೆ ಯಾವುದೇ ಮನಸ್ತಾಪವಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ Hardik Pandya: ಕೌಟುಂಬಿಕ ಸಮಸ್ಯೆ ಬದಿಗೊತ್ತಿ ಭಾರತ ತಂಡದ ಯಶಸ್ಸಿಗಾಗಿ ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಹಾರ್ದಿಕ್​ ಪಾಂಡ್ಯ

ಪ್ರಚಾರಕ್ಕಾಗಿ ಮಾಡಿದ್ದೇ?


ಕೆಲ ಮೂಲಗಳ ಪ್ರಕಾರ ವಿಚ್ಚೇದನದ ಸುದ್ದಿ ಪಿಆರ್‌ ತಂಡ ಮಾಡಿದ ಪಬ್ಲಿಕ್‌ ಸ್ಟಂಟ್‌ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ನತಾಶ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪಾಂಡ್ಯ ಜತೆಗಿನ ಫೋಟೊಗಳನ್ನು ಡಿಲೀಟ್​ ಮಾಡಿ ಈಗ ಹಳೆಯ ಫೋಟೋಗಳನ್ನು ರೀಸ್ಟೋರ್‌ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ನತಾಶಾ ಅವರು ಗರ್ಭಿಣಿ ಆಗಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು. ಪುನರ್‌ ವಿವಾಹವಾಗಿದ್ದ ಫೋಟೊವನ್ನೇ ಈಗ ನತಾಶ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವುದು.

Continue Reading

ಪ್ರಮುಖ ಸುದ್ದಿ

Team India : ಈ ಕೆಲಸ ಇಷ್ಟವಿದೆ; ಟೀಮ್ ಇಂಡಿಯಾ ಕೋಚ್​ ಹುದ್ದೆಯ ಬಗ್ಗೆ ಮೊದಲ ಹೇಳಿಕೆ ನೀಡಿದ ಗೌತಮ್ ಗಂಭೀರ್​

Team India: ಅಬುಧಾಬಿಯ ಮೆಡಿಯೋರ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಭೀರ್, ಇತ್ತೀಚೆಗೆ ಕೆಕೆಆರ್​ ತಂಡಕ್ಕೆ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಮಾರ್ಗದರ್ಶನ ನೀಡಿದ ಬಗ್ಗೆ ಮಾತನಾಡಿದರು. ಅವರು ಯುವ ಕ್ರೀಡಾ ಉತ್ಸಾಹಿಗಳೊಂದಿಗೆ ಮಾತುಕತೆ ನಡೆಸಿದರು. ಭಾರತೀಯ ಕ್ರಿಕೆಟ್ ಬಗ್ಗೆ ತಮ್ಮ ಆಕಾಂಕ್ಷೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು. ಈ ವೇಳೆ ಅವರು ಭಾರತ ತಂಡದ ಕೋಚ್ ಆಗುವ ಬಗ್ಗೆಯೂ ಮಾತನಾಡಿದ್ದಾರೆ.

VISTARANEWS.COM


on

Team India
Koo

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮುಂದಿನ ಕೋಚ್ ಯಾರು ಆಗುತ್ತಾರೆ ಎಂಬ ಕೌತುಕದ ನಡುವೆಯೂ ಗೌತಮ್ ಗಂಭೀರ್ ಅವರ ಹೆಸರು ಮೊದಲಾಗಿ ಕೇಳಿ ಬರುತ್ತಿದೆ. ಆದರೆ, ಅವರಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಹಲವಾರು ದಿನಗಳಿಂದ ಇದೇ ಊಹಾಪೋಹ ನಡೆಯುತ್ತಿದೆ. ಏತನ್ಮಧ್ಯೆ, ಭಾರತದ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರು ಭಾರತೀಯ ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ನನ್ನ ವೃತ್ತಿಜೀವನದ ಅತ್ಯುನ್ನತ ಗೌರವ ಎಂಬದಾಗಿಯೂ ಹೇಳಿದ್ದಾರೆ.

ಅಬುಧಾಬಿಯ ಮೆಡಿಯೋರ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಭೀರ್, ಇತ್ತೀಚೆಗೆ ಕೆಕೆಆರ್​ ತಂಡಕ್ಕೆ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಮಾರ್ಗದರ್ಶನ ನೀಡಿದ ಬಗ್ಗೆ ಮಾತನಾಡಿದರು. ಅವರು ಯುವ ಕ್ರೀಡಾ ಉತ್ಸಾಹಿಗಳೊಂದಿಗೆ ಮಾತುಕತೆ ನಡೆಸಿದರು. ಭಾರತೀಯ ಕ್ರಿಕೆಟ್ ಬಗ್ಗೆ ತಮ್ಮ ಆಕಾಂಕ್ಷೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು. ಈ ವೇಳೆ ಅವರು ಭಾರತ ತಂಡದ ಕೋಚ್ ಆಗುವ ಬಗ್ಗೆಯೂ ಮಾತನಾಡಿದ್ದಾರೆ.

ಭಾರತ ಹಿರಿಯರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಬದಲಿಗೆ ಗಂಭೀರ್ ಅವರನ್ನು ನೇಮಕ ಮಾಡಲಾಗುತ್ತಿದೆ ಎಂಬ ಸುದ್ದಿಗಳಿವೆ. ಐಪಿಎಲ್ ಫ್ರಾಂಚೈಸಿ ನೈಟ್ ರೈಡರ್ಸ್​ಗೆ ಇತ್ತೀಚಿನ ಬದ್ಧತೆಯ ಹೊರತಾಗಿಯೂ ವಿಶ್ವಕಪ್ ವಿಜೇತ ಮಾಜಿ ಆರಂಭಿಕ ಆಟಗಾರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ದ್ರಾವಿಡ್ ಅವರ ಅಧಿಕಾರಾವಧಿ ಜೂನ್ ನಲ್ಲಿ ಕೊನೆಗೊಳ್ಳಲಿರುವುದರಿಂದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಉನ್ನತ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿತ್ತು.

ನಾನು ಭಾರತ ತಂಡಕ್ಕೆ ತರಬೇತುದಾರನಾಗಲು ಇಷ್ಟಪಡುತ್ತೇನೆ. ನಿಮ್ಮ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ನೀವು ವಿಶ್ವದಾದ್ಯಂತ 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೀರಿ ಮತ್ತು ನೀವು ಭಾರತವನ್ನು ಪ್ರತಿನಿಧಿಸಿದಾಗ ಅದಕ್ಕಿಂತ ಗೌರವ ಇನ್ನೇನು?” ಎಂದು ಗಂಭೀರ್ ಎನ್​ಐ ಜತೆ ಮಾತನಾಡುತ್ತಾ ಹೇಳಿದ್ದಾರೆ.

ವಿಶ್ವ ಕಪ್​​ನಲ್ಲಿ ಯಶಸ್ಸನ್ನು ಸಾಧಿಸಲು ಸಾಮೂಹಿಕ ಪ್ರಯತ್ನವನ್ನು ಗಂಭೀರ್ ಒತ್ತಿಹೇಳಿದರು. ವಿಶೇಷವಾಗಿ ಅಪೇಕ್ಷಿತ ಕ್ರಿಕೆಟ್ ವಿಶ್ವಕಪ್ ಅನ್ನು ಉಲ್ಲೇಖಿಸಿದರು.”ಭಾರತ ವಿಶ್ವಕಪ್ ಗೆಲ್ಲಲು ಸಹಾಯ ಮಾಡುವುದು ನಾನಲ್ಲ. 140 ಕೋಟಿ ಭಾರತೀಯರು ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡುತ್ತಾರೆ. ಪ್ರತಿಯೊಬ್ಬರೂ ನಮಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದರೆ ಮತ್ತು ನಾವು ಆಡಲು ಮತ್ತು ಪ್ರತಿನಿಧಿಸಲು ಪ್ರಾರಂಭಿಸಿದರೆ, ಭಾರತವು ವಿಶ್ವಕಪ್ ಗೆಲ್ಲುತ್ತದೆ, “ಎಂದು ಅವರು ಹೇಳಿದರು.

ಇದನ್ನೂ ಓದಿ: T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್

ಮಾಜಿ ಆರಂಭಿಕ ಬ್ಯಾಟ್ಸ್ಮನ್ ಆಟವನ್ನು ಆಡುವ ತಮ್ಮ ಯೋಚನೆಗಳನ್ನು ಹಂಚಿಕೊಂಡರು. ನಿರ್ಭೀತ ವಿಧಾನದ ಮಹತ್ವ ಒತ್ತಿ ಹೇಳಿದರು. ಅತ್ಯಂತ ಮುಖ್ಯವಾದ ವಿಷಯವೆಂದರೆ ನಿರ್ಭೀತರಾಗಿರುವುದು ಎಂದು ಗಂಭೀರ್ ಪ್ರತಿಪಾದಿಸಿದರು. ಗರಿಷ್ಠ ಗುರಿಯಾಗಿಸಿಕೊಂಡಿರುವ ಯಾವುದೇ ತಂಡಕ್ಕೆ ಧೈರ್ಯ ಮತ್ತು ಆತ್ಮವಿಶ್ವಾಸವು ನಿರ್ಣಾಯಕ ಅಂಶಗಳಾಗಿವೆ ಎಂದು ಸೂಚಿಸಿದರು.

ವಿಶ್ವ ಕಪ್​ ಗೆಲುವುಗಳಲ್ಲಿ ಗಂಭೀರ್​ ಪ್ರಯತ್ನ ಸ್ಮರಣೀಯ

2007ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ದೃಢತೆ ಮತ್ತು ತಂತ್ರಗಾರಿಕೆಗೆ ಹೆಸರುವಾಸಿಯಾದ ಅವರು ಕೋಚಿಂಗ್ ಪಾತ್ರದಲ್ಲಿ ಸಂಭಾವ್ಯ ಪಾಲ್ಗೊಳ್ಳುವಿಕೆಯು ಪ್ರಸ್ತುತ ತಂಡಕ್ಕೆ ಅನುಭವ ಮತ್ತು ಒಳನೋಟದ ಸಂಪತ್ತನ್ನು ತರಬಹುದು.

ಗಂಭೀರ್ 2022 ರಲ್ಲಿ ಲಕ್ನೋ ಐಪಿಎಲ್ ಫ್ರಾಂಚೈಸಿಯೊಂದಿಗೆ ತಮ್ಮ ಮಾರ್ಗದರ್ಶಕ ವೃತ್ತಿಜೀವನವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರಾರಂಭಿಸಿದರು. ಅವರ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ, ಆಂಡಿ ಫ್ಲವರ್ ತರಬೇತುದಾರರಾಗಿದ್ದ ಲಕ್ನೊ ಸೂಪರ್ ಜೈಂಟ್ಸ್ ತಂಡವು ಪ್ಲೇಆಫ್ ತಲುಪಿತ್ತು 2024ರಲ್ಲಿ ಗಂಭೀರ್ ಕೆಕೆಆರ್​ಗೆ ಮರಳಿದ್ದರು. ಅಲ್ಲಿ ಅವರು ತಮ್ಮ ಮೂರನೇ ಐಪಿಎಲ್ ಚಾಂಪಿಯನ್​ಶಿಪ್​ ಗೆಲ್ಲಲು ನೆರವಾದರು.

Continue Reading

ಪ್ರಮುಖ ಸುದ್ದಿ

T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್

T20 World Cup 2024 : ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಒಮಾನ್ ಬ್ಯಾಟಿಂಗ್ ಘಟಕವನ್ನು ಛಿದ್ರಗೊಳಿಸುವ ಮೂಲಕ 26 ವರ್ಷದ ಎಡಗೈ ವೇಗಿ ಟಿ 20 ಐ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್​: ಸೋಮವಾರ (ಜೂನ್ 3 ರಂದು) ನಡೆದ ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲಿ ಒಮಾನ್ ತಂಡದ ವಿರುದ್ಧ ನಮೀಬಿಯಾ ತಂಡದ ರೂಬೆನ್ ಟ್ರಂಪೆಲ್ಮನ್ ಹೊಸ ಟಿ20 ದಾಖಲೆ ಬರೆದಿದ್ದಾರೆ. ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಒಮಾನ್ ಬ್ಯಾಟಿಂಗ್ ಘಟಕವನ್ನು ಛಿದ್ರಗೊಳಿಸುವ ಮೂಲಕ 26 ವರ್ಷದ ಎಡಗೈ ವೇಗಿ ಟಿ 20 ಐ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಯಕ ಗೆರ್ಹಾರ್ಡ್ ಎರಾಸ್ಮಸ್ ಟಾಸ್ ಗೆದ್ದ ನಂತರ ರೂಬೆನ್ ಟ್ರಂಪೆಲ್ಮನ್ ಮಾರಕ ಬೌಲಿಂಗ್ ದಾಳಿ ಮಾಡಿದರು. ಬೌಲರ್​ಗಳಿಗೆ ಸಾಕಷ್ಟು ಮಾಡುವ ಪಿಚ್​ನಲ್ಲಿ ಭರ್ಜರಿ ಬೌಲಿಂಗ್​ ಮಾಡಲು ಮುಂದಾದರು. ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಆರಂಭಿಕ ಆಟಗಾರ ಕಶ್ಯಪ್ ಪ್ರಜಾಪತಿ ಮತ್ತು ನಾಯಕ ಅಕಿಬ್ ಇಲ್ಯಾಸ್ ಅವರ ದೊಡ್ಡ ವಿಕೆಟ್​​ಗಳನ್ಉ ಉರುಳಿಸುದರ. ಹೀಗಾಗಿ ನಮೀಬಿಯಾ ಉತ್ತಮ ಆರಂಭ ಪಡೆಯಿತು. ಇದು ಟ್ರಂಪೆಲ್ಮನ್ ಅವರ ಎಡಗೈ ಸ್ವಿಂಗ್ ಬೌಲಿಂಗ್ ಮಾಸ್ಟರ್ ಕ್ಲಾಸ್ ಪ್ರದರ್ಶನವಾಗಿದೆ. ಪ್ರಜಾಪತಿಯನ್ನು ಲೆಂತ್ ಎಸೆತದ ಮೂಲಕ ಹಿಮ್ಮೆಟ್ಟಿಸಿದರೆ ಇಲ್ಯಾಸ್ ಗೆ ಆಡಲು ಸಾಧ್ಯವೇ ಇಲ್ಲದ ಸ್ವಿಂಗ್ ಯಾರ್ಕರ್ ಹಾಕಿದರು. ಆದಾಗ್ಯೂ, ಟ್ರಂಪೆಲ್ಮನ್ ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರು ತಮ್ಮ ಎರಡನೇ ಓವರ್​ನಲ್ಲಿ ವಿಕೆಟ್ ಕೀಪರ್ ನಸೀಮ್ ಅವರನ್ನು 6 ರನ್​ಗಳಿಗೆ ಔಟ್ ಮಾಡಿದರು. ಪಂದ್ಯದ ಮೂರನೇ ಓವರ್​ನಲ್ಲಿ ನಮೀಬಿಯಾ 3 ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿತ್ತು.

ಇನ್ನಿಂಗ್ಸ್ ನ 19 ನೇ ಓವರ್ ನಲ್ಲಿ ಟೇಲ್ ಎಂಡರ್ ಕಲೀಮುಲ್ಲಾ ಅವರನ್ನು ಔಟ್ ಮಾಡುವ ಮೂಲಕ ಟ್ರಂಪೆಲ್ಮನ್ ಸೋಮವಾರ ತಮ್ಮ ಖಾತೆಗೆ ಮತ್ತೊಂದು ವಿಕೆಟ್ ಸೇರಿಸಿದರು. ಟ್ರಂಪೆಲ್ಮನ್ 21 ರನ್ಗಳಿಗೆ 4 ವಿಕೆಟ್​​ ಪಡೆದರು. ಇದು ಟಿ 20 ಐ ಕ್ರಿಕೆಟ್​​ನಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಸಾಧನೆ.

ಇದನ್ನೂ ಓದಿ: T20 World Cup 2024 : ಉಗ್ರರ ಬೆದರಿಕೆ ನಡುವೆಯೂ ನ್ಯೂಯಾರ್ಕ್​ನಲ್ಲಿ ಭಾರತ ತಂಡದ ಆಟಗಾರರ ಬಿಂದಾಸ್​ ತಿರುಗಾಟ!

ಟಿ 20 ವಿಶ್ವಕಪ್ ಪಂದ್ಯದಲ್ಲಿ ಟ್ರಂಪೆಲ್ಮನ್ ಅವರ 21 ರನ್​ಗಳಿಗೆ 4 ವಿಕೆಟ್​ ಸಾಧನೆಯೊಂದಿಗೆ ನಮೀಬಿಯಾ ತಂಡವು ಒಮಾನ್ ತಂಡವನ್ನು 19.4 ಓವರ್​​ಗಳಲ್ಲಿ 109 ರನ್​ಗಳಿಗೆ ಆಲೌಟ್ ಮಾಡಿತು.

ಬಾರ್ಬಡೋಸ್ ನಲ್ಲಿ ಒಮಾನ್ ಹೋರಾಟ

ಒಮಾನ್ ತಂಡ ತನ್ನ ಇನಿಂಗ್ಸ್​ನಲ್ಲಿ ಉತ್ತಮವಾಗಿ ಆಡಲಿಲ್ಲ. ಅವರು ನಿಯಮಿತವಾಗಿ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಲೇ ಸಾಗಿದರು. ಅನುಭವಿ ಆಲ್ರೌಂಡರ್ ಝೀಶಾನ್ ಮಕ್ಸೂದ್ ಮಾತ್ರ ಅಗ್ರ ಕ್ರಮಾಂಕದಲ್ಲಿ 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​​ನಲ್ಲಿ ಸ್ಕೋರ್ ಮಾಡಿದ್ದಾರೆ. ಮಕ್ಸೂದ್ 20 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು,. ಪವರ್ ಪ್ಲೇ ನಂತರ ಒಮಾನ್ 4 ವಿಕೆಟ್ ನಷ್ಟಕ್ಕೆ 37 ರನ್ ಗಳಿಗೆ ಕುಸಿಯಿತು.

ಖಾಲಿದ್ ಕೈಲ್ ಮತ್ತು ಅಯಾನ್ ಖಾನ್ 31 ರನ್​ಗಳ ಜೊತೆಯಾಟ ನೀಡಿದರು. ಆದರೆ ಒಮಾನ್ ನಮೀಬಿಯಾದ ಬೌಲಿಂಗ್ ದಾಳಿಯ ವೈವಿಧ್ಯತೆ ಮತ್ತು ಗುಣಮಟ್ಟವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಅನುಭವಿ ಡೇವಿಡ್ ವೈಸ್ ಮೂರು ವಿಕೆಟ್ ಪಡೆದರೆ, ನಾಯಕ ಗೆರ್ಹಾರ್ಡ್ ಎರಾಸ್ಮಸ್​ ನಾಲ್ಕು ಓವರ್​ಗಳಲ್ಲಿ ಕೇವಲ 20 ರನ್ ನೀಡಿ ಎರಡು ವಿಕೆಟ್ ಪಡೆದರು. ಬಳಿಕ ಬ್ಯಾಟ್ ಮಾಡಿದ ನಮೀಬಿಯಾ ತಂಡವೂ 106 ರನ್​ ಗಳಿಸಿತು. ಪಂದ್ಯ ಟೈ ಆದ ಕಾರಣ ಸೂಪರ್ ಓವರ್​ ನಡೆಸಲಾಯಿತು. ಅಲ್ಲಿ ನಮೀಬಿಯಾ ಗೆಲುವು ಸಾಧಿಸಿತು.

Continue Reading
Advertisement
Self Harming
ಕ್ರೈಂ3 mins ago

Self Harming: ಐಎಎಸ್‌ ದಂಪತಿ ಪುತ್ರಿ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

mlc election nomination
ಪ್ರಮುಖ ಸುದ್ದಿ9 mins ago

MLC Election: ಕಾಂಗ್ರೆಸ್‌ನ 7, ಬಿಜೆಪಿಯ 3, ಜೆಡಿಎಸ್‌ನ ಒಬ್ಬ ಅಭ್ಯರ್ಥಿಯಿಂದ ಮೇಲ್ಮನೆಗೆ ನಾಮಪತ್ರ ಸಲ್ಲಿಕೆ

Snake Rescue Snakes spotted in heavy rain
ಮಳೆ11 mins ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Riyan Parag
ಕ್ರಿಕೆಟ್25 mins ago

Riyan Parag: ಟಿ20 ವಿಶ್ವಕಪ್​ ನೋಡಲಾರೆ ಎಂದ ‘ಹಾಟ್​ ಫೇವರಿಟ್’ ರಿಯಾನ್​ ಪರಾಗ್

Actor Chetan Ahimsa
ಪ್ರಮುಖ ಸುದ್ದಿ29 mins ago

Actor Chetan Ahimsa: ಬಿಜೆಪಿ ಸಂವಿಧಾನ ಬದಲಿಸಲ್ಲ; ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಏನೂ ಕಮ್ಮಿ ಇಲ್ಲ ಎಂದ ನಟ ಚೇತನ್!

World Bicycle Day
ಆರೋಗ್ಯ47 mins ago

World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು!

Battery Life Tips
ಗ್ಯಾಜೆಟ್ಸ್49 mins ago

Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!

MP Renukacharya
ಕ್ರೈಂ56 mins ago

MP Renukacharya : ಎಂ.ಪಿ ರೇಣುಕಾಚಾರ್ಯ, ಪುತ್ರನಿಗೆ ಫೋನ್‌ನಲ್ಲಿ ಕೊಲೆ ಬೆದರಿಕೆ

Nataša Stanković
ಕ್ರೀಡೆ1 hour ago

Nataša Stanković: ಹಾರ್ದಿಕ್ ಪಾಂಡ್ಯ ಜತೆ ವಿಚ್ಛೇದನ?; ಅನುಮಾನಕ್ಕೆ ತೆರೆ ಎಳೆದ ಪತ್ನಿ ನತಾಶಾ

Drowns in Lake
ಕರ್ನಾಟಕ1 hour ago

Drowns in Lake: ಕೆರೆಯಲ್ಲಿ ಮುಳುಗಿ ಯುವಕ ಸಾವು; ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Snake Rescue Snakes spotted in heavy rain
ಮಳೆ11 mins ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌