Year Ender 2023 : 5 ಭಾರತೀಯರು ಇರುವ ಈ ವರ್ಷದ ಅತ್ಯುತ್ತಮ ಕ್ರಿಕೆಟ್​ ತಂಡ ಇದು - Vistara News

ಕ್ರಿಕೆಟ್

Year Ender 2023 : 5 ಭಾರತೀಯರು ಇರುವ ಈ ವರ್ಷದ ಅತ್ಯುತ್ತಮ ಕ್ರಿಕೆಟ್​ ತಂಡ ಇದು

Year Ender 2023: ವರ್ಷದ ಕ್ರಿಕೆಟ್​ ತಂಡದಲ್ಲಿ ಭಾರತ ತಂಡದ ಐದು ಆಟಗಾರರು ಸ್ಥಾನ ಪಡೆದಿರುವುದು ವಿಶೇಷ ಎನಿಸಿದೆ.

VISTARANEWS.COM


on

Rohit Sharma and kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

2023 ಕ್ರಿಕೆಟ್​ ಕ್ಷೇತ್ರವು ಸ್ಮರಣೆಯಲ್ಲಿ ಇಟ್ಟುಕೊಳ್ಳಬೇಕಾದ ವರ್ಷ. ಐಪಿಎಲ್ ವಿಶ್ವ ಕಪ್​, ಏಷ್ಯನ್​ ಗೇಮ್ಸ್​, ಏಷ್ಯಾ ಕಪ್​ ಸೇರಿದಂತೆ ನಾನಾ ಟೂರ್ನಿಗಳು ನಡೆದಿವೆ. ಇಲ್ಲೆಲ್ಲ ಪ್ರತಿಭೆಗಳ ಅನಾವರಣ ಹಾಗೂ ಅತ್ಯುತ್ತಮ ಪ್ರದರ್ಶನಗಳಿಗೆ ಕ್ರಿಕೆಟ್​ ಪ್ರೇಮಿಗಳು ಸಾಕ್ಷಿಯಾಗಿದ್ದಾರೆ. ಹಿರಿಯ ಮತ್ತು ಕಿರಿಯ ಕ್ರಿಕೆಟಿಗರು ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ. ವಿಶೇಷವಾಗಿ 2023ರ ಏಕದಿನ ವಿಶ್ವ ಕಪ್​ನಲ್ಲಿ (Year Ender 2023) ಬ್ಯಾಟ್ಸ್​ಮನ್​ಗಳು ಮತ್ತು ಬೌಲರ್​ಗಳು ನಂಬಲಾಗದ ಸಾಧನೆಗಳನ್ನು ಮಾಡಿದ್ದಾರೆ.

ಸ್ಫೋಟಕ ಆರಂಭಿಕರಿಂದ ಹಿಡಿದು ಮಧ್ಯಮ ಕ್ರಮಾಂಕದಲ್ಲಿ ರನ್ ಬಾರಿಸುವ ಬ್ಯಾಟರ್​ಗಳು ಮಿಂಚಿದ್ದಾರೆ. ಬೌಲಿಂಗ್​ನಲ್ಲಿ ಆರಂಭಿಕ ಸ್ಪೆಲ್​ನಿಂದ ಹಿಡಿದು ಡೆತ್ ಓವರ್​ ತನಕ ಅನೇಕ ವೇಗಿಗಳು ಗಮನ ಸೆಳೆದಿದ್ದಾರೆ. ಸ್ಪಿನ್​ ಕೈಚಳಕವೂ ಕಣ್ಣಿಗೆ ಹಬ್ಬವಾಗಿದೆ. ಹೀಗಾಗಿ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಸೇರಿಸಿಕೊಂಡು 11 ಆಟಗಾರರು ಇರುವ ತಂಡವನ್ನು ರಚಿಸಲಾಗಿದೆ. ಇವರಲ್ಲಿ 4 ಭಾರತಿಯರೇ ಇದ್ದಾರೆ. ಇದು 2023 ರ ಬೆಸ್ಟ್​ ಪ್ಲೇಯಿಂಗ್ ಇಲೆವೆನ್. ಅದರಲ್ಲಿ ಯಾರೆಲ್ಲ ಇದ್ದಾರೆ ಎಂದು ನೋಡೋಣ.

1. ಶುಬ್ಮನ್ ಗಿಲ್ (ಭಾರತ)

ಶುಬ್ಮನ್ ಗಿಲ್ 2023 ರಲ್ಲಿ ಬ್ಯಾಟ್​ನೊಂದಿಗೆ ವಿಶೇಷವಾಗಿ ಏಕದಿನ ಕ್ರಿಕೆಟ್​ನಲ್ಲಿ ಅದ್ಭುತ ವರ್ಷವನ್ನು ಹೊಂದಿದ್ದರು. ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಸೇರಿದಂತೆ ಎರಡು ಶತಕಗಳನ್ನು ಬಾರಿಸುವ ಮೂಲಕ ಅವರು ವರ್ಷವನ್ನು ಭರ್ಜರಿಯಾಗಿ ಪ್ರಾರಂಭಿಸಿದ್ದರು. ಅವರು ವರ್ಷವಿಡೀ ಆ ಫಾರ್ಮ್ ಅನ್ನು ಮುಂದುವರಿಸಿದ್ದರು. 2023ರಲ್ಲಿ 29 ಏಕದಿನ ಪಂದ್ಯಗಳನ್ನಾಡಿರುವ ಗಿಲ್ 63.36ರ ಸರಾಸರಿಯಲ್ಲಿ 105.45ರ ಸ್ಟ್ರೈಕ್ ರೇಟ್​ನಲ್ಲಿ 1584 ರನ್ ಗಳಿಸಿದ್ದಾರೆ.

ಅವರು ಒಟ್ಟು ಐದು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 208 ಆಗಿದ್ದು, ಏಕದಿನ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಷ್ಟೇ ಅಲ್ಲ, ಅವರು ಒಟ್ಟು 41 ಸಿಕ್ಸರ್ ಮತ್ತು 180 ಬೌಂಡರಿಗಳನ್ನು ಬಾರಿಸಿದ್ದಾರೆ.

2. ರೋಹಿತ್ ಶರ್ಮಾ (ಭಾರತ)

2023ರಲ್ಲಿ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದು ಒಟ್ಟು 27 ಪಂದ್ಯಗಳನ್ನು ಆಡಿದ್ದಾರೆ. ಎರಡು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳೊಂದಿಗೆ 1255 ರನ್ ಗಳಿಸಿದ್ದಾರೆ. ಅವರು 52.29 ಸರಾಸರಿ ಮತ್ತು 117.07 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದು ಈ ವರ್ಷ ಏಕದಿನ ಮಾದರಿಯಲ್ಲಿ ಗರಿಷ್ಠ, ಅವರು ಹೆಚ್ಚು ಪ್ರಭಾವ ಬೀರಿದ್ದು 2023 ರ ವಿಶ್ವಕಪ್​ನಲ್ಲಿ. ಅಲ್ಲಿ ಅವರು ಒಂದು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ 2023ರಲ್ಲಿ ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ 131 ಬೌಂಡರಿಗಳು ಮತ್ತು ಒಟ್ಟು 67 ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

3. ವಿರಾಟ್ ಕೊಹ್ಲಿ (ಭಾರತ)

2023 ವಿರಾಟ್ ಕೊಹ್ಲಿಗೆ ವಿಮೋಚನೆಯ ವರ್ಷದಂತಿತ್ತು. ಮೊದಲಾಗಿ ಅವರು ತಮ್ಮ ಶತಕಗಳ ಬರವನ್ನು ಕೊನೆಗೊಳಿಸಿದರು. ಬಳಿಕ ಪ್ರಭಾವಶಾಲಿ ಫಾರ್ಮ್​ಗೆ ಮರಳಿದರು. ಕೊಹ್ಲಿ 27 ಏಕದಿನ ಪಂದ್ಯಗಳಲ್ಲಿ 6 ಶತಕ ಮತ್ತು 8 ಅರ್ಧಶತಕಗಳೊಂದಿಗೆ 1377 ರನ್ ಗಳಿಸಿದ್ದಾರೆ. ಅವರ ಸರಾಸರಿ 72.47 ಮತ್ತು ಸ್ಟ್ರೈಕ್ ರೇಟ್ 99.13 ಆಗಿದೆ. ಅವರು ಒಟ್ಟು 122 ಬೌಂಡರಿಗಳು ಮತ್ತು 24 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.

ಕಿಂಗ್ ಕೊಹ್ಲಿ 2023 ರ ಐಸಿಸಿ ವಿಶ್ವ ಕಪ್​ನಲ್ಲಿ ಪ್ರಾಬಲ್ಯ ಮೆರೆದರು. ಅಲ್ಲಿ ಅವರು ಲೆಜೆಂಡ್​ ಸಚಿನ್ ತೆಂಡೂಲ್ಕರ್ ಅವರ ಎರಡು ವಿಶ್ವ ದಾಖಲೆಗಳನ್ನು ಮುರಿದರು. ಅವರು 765 ರನ್ ಗಳಿಸುವ ಮೂಲಕ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ಅವರ ದಾಖಲೆಯನ್ನು ಮುರಿದರು. ಏಕದಿನ ಕ್ರಿಕೆಟ್​​ನಲ್ಲಿ 50 ಶತಕಗಳನ್ನು ಬಾರಿಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ವಿಶ್ವಕಪ್ 2023 ರಲ್ಲಿ ಮೂರು ಶತಕಗಳು ಮತ್ತು ಆರು ಅರ್ಧಶತಕಗಳನ್ನು ಬಾರಿಸಿದ್ದರು.

4. ಬಾಬರ್ ಅಜಮ್ (ಪಾಕಿಸ್ತಾನ)

ಪಾಕಿಸ್ತಾನ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ಪಾಕಿಸ್ತಾನ ನಾಯಕತ್ವದಿಂದ ಕೆಳಗಿಳಿಯಬೇಕಾಗಿ ಬಂದಿದ್ದರಿಂದ ಬಾಬರ್ ಅಜಮ್​ಗೆ 2023 ನಿರೀಕ್ಷೆ ಮೂಡಿಸಿರಬಹುದು. ಆದರೆ ಬ್ಯಾಟರ್ ಆಗಿ ಅವರು ಗರಿಷ್ಠ ಸಾಧನೆ ಮಾಡಿದ್ದಾರೆ. ಬಾಬರ್ 25 ಪಂದ್ಯಗಳಲ್ಲಿ 2 ಶತಕ ಮತ್ತು 10 ಅರ್ಧಶತಕಗಳೊಂದಿಗೆ 1065 ರನ್ ಗಳಿಸಿದ್ದಾರೆ. ಅವರ ಸರಾಸರಿ 46.30 ಮತ್ತು ಸ್ಟ್ರೈಕ್ ರೇಟ್ 84.65 ಆಗಿದೆ. ಏಷ್ಯಾಕಪ್​ನಲ್ಲಿ ನೇಪಾಳ ವಿರುದ್ಧ 151 ರನ್ ಗಳಿಸಿದ್ದು ಅವರ ಗರಿಷ್ಠ ಸ್ಕೋರ್ ಆಗಿದೆ.

5. ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್)

ಡ್ಯಾರಿಲ್ ಮಿಚೆಲ್ 2023 ರಲ್ಲಿ ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಪರ ಅತ್ಯುತ್ತಮ ಬ್ಯಾಟರ್​ ಆಗಿದ್ದಾರೆ. ಈ ವರ್ಷ 26 ಏಕದಿನ ಪಂದ್ಯಗಳನ್ನು ಆಡಿರುವ ಅವರು ಐದು ಶತಕಗಳು ಮತ್ತು ಮೂರು ಅರ್ಧಶತಕಗಳೊಂದಿಗೆ 1204 ರನ್ ಗಳಿಸಿದ್ದಾರೆ. ಅವರು 52.34 ಸರಾಸರಿಯನ್ನು ಹೊಂದಿದ್ದಾರೆ. 100.24 ಸ್ಟ್ರೈಕ್ ರೇಟ್ ಅವರಿಗಿದೆ. ಅವರು ಒಟ್ಟು 37 ಸಿಕ್ಸರ್ ಮತ್ತು 93 ಬೌಂಡರಿಗಳನ್ನು ಬಾರಿಸಿದ್ದಾರೆ.

ವಿಶ್ವಕಪ್ 2023 ರಲ್ಲಿ, ಮಿಚೆಲ್ ಭಾರತದ ವಿರುದ್ಧ 2 ಶತಕಗಳನ್ನು ಬಾರಿಸಿದ್ದಾರೆ. 69 ಸರಾಸರಿ ಮತ್ತು 111.06 ಸ್ಟ್ರೈಕ್ ರೇಟ್​ನಲ್ಲಿ 552 ರನ್ ಪೇರಿಸಿದ್ದಾರೆ. ವಿಶ್ವಕಪ್​​ನಲ್ಲಿ ಭಾರತದ ವಿರುದ್ಧ ಬಂದ 134 ರನ್ ಈ ವರ್ಷ ಏಕದಿನ ಪಂದ್ಯಗಳಲ್ಲಿ ಅವರ ಗರಿಷ್ಠ ಸ್ಕೋರ್ ಆಗಿದೆ.

6. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನದ ವಿಕೆಟ್​ಕೀಪರ್​ )

ಮೊಹಮ್ಮದ್ ರಿಜ್ವಾನ್ 2023 ರಲ್ಲಿ ಏಕದಿನ ಪಂದ್ಯಗಳಲ್ಲಿ 1000 ರನ್ ಗಳಿಸಿದ ಪಾಕಿಸ್ತಾನದ ಮತ್ತೊಬ್ಬ ಬ್ಯಾಟ್ಸ್ಮನ್. ಅವರು 25 ಏಕದಿನ ಪಂದ್ಯಗಳಲ್ಲಿ ಒಂದು ಶತಕ ಮತ್ತು ಏಳು ಅರ್ಧಶತಕಗಳೊಂದಿಗೆ 1023 ರನ್ ಗಳಿಸಿದ್ದಾರೆ. ಅವರ ಸರಾಸರಿ 63.93 ಮತ್ತು ಸ್ಟ್ರೈಕ್ ರೇಟ್ 93.76 ಆಗಿದೆ.. ರಿಜ್ವಾನ್ 95 ಬೌಂಡರಿ ಮತ್ತು 12 ಸಿಕ್ಸರ್ ಬಾರಿಸಿದ್ದಾರೆ. ಹೈದರಾಬಾದ್​ನಲ್ಇ ನಡೆದ ಶ್ರೀಲಂಕಾ ವಿರುದ್ಧದ ಪಾಕಿಸ್ತಾನ ವಿಶ್ವಕಪ್ 2023 ರ ದಾಖಲೆಯ ಚೇಸಿಂಗ್​ನಲ್ಲಿ ಅವರ ಗರಿಷ್ಠ ಸ್ಕೋರ್ 131* ಆಗಿತ್ತು.

7. ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ)

ಮಿಚೆಲ್ ಮಾರ್ಷ್ 2023 ರಲ್ಲಿ ಆಸ್ಟ್ರೇಲಿಯಾ ಪರ ಅದ್ಭುತ ವರ್ಷವನ್ನು ಹೊಂದಿದ್ದರು. ಮಾರ್ಷ್ 20 ಏಕದಿನ ಪಂದ್ಯಗಳಲ್ಲಿ 47.66ರ ಸರಾಸರಿಯಲ್ಲಿ 858 ರನ್ ಗಳಿಸಿದ್ದಾರೆ. ಅವರು 2023 ರಲ್ಲಿ ಏಕದಿನ ಪಂದ್ಯಗಳಲ್ಲಿ 96 ಬೌಂಡರಿಗಳು ಮತ್ತು 43 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. 2023ರ ವಿಶ್ವಕಪ್​​ನಲ್ಲಿ ಬಾಂಗ್ಲಾದೇಶ ವಿರುದ್ಧ 177* ರನ್ ಬಾರಿಸಿದ್ದು ಅವರ ಗರಿಷ್ಠ ಸ್ಕೋರ್ ಆಗಿತ್ತು. ಮಾರ್ಷ್ ತಮ್ಮ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ವಿಶ್ವ ಕಪ್​ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ.

8. ಕುಲದೀಪ್ ಯಾದವ್ (ಭಾರತ)

ಕುಲದೀಪ್ ಯಾದವ್ 2023 ರಲ್ಲಿ ಏಕದಿನ ಪಂದ್ಯಗಳಲ್ಲಿ ಬಹಳ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು. ಅವರು ಭಾರತೀಯ ತಂಡದಲ್ಲಿ ಪ್ರಮುಖ ಸ್ಪಿನ್ನರ್ ಆಗಿ 49 ವಿಕೆಟ್​ ಉರುಳಿಸಿದರು. ಅವರು 4.61 ಎಕಾನಮಿ ಮತ್ತು 20.48 ಸರಾಸರಿಯಲ್ಲಿ ಆ ವಿಕೆಟ್​​ಗಳನ್ನು ಪಡೆದರು. ಅವರ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶ 25 ರನ್​ಗೆ 5 ವಿಕೆಟ್​. ಇದು ಏಷ್ಯಾ ಕಪ್ 2023 ರಲ್ಲಿ ಬಂದಿತ್ತು. ಐಸಿಸಿ ವಿಶ್ವಕಪ್ 2023 ರಲ್ಲಿ ಕುಲ್ದೀಪ್ ಯಾದವ್ ಮಧ್ಯಮ ಓವರ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿ , ಭಾರತಕ್ಕಾಗಿ ನಿರ್ಣಾಯಕ ವಿಕೆಟ್ ಗಳಿಸಿದ್ದರು. ವಿಶ್ವಕಪ್ನಲ್ಲಿ ಅವರು 11 ಪಂದ್ಯಗಳಲ್ಲಿ 4.45 ಎಕಾನಮಿಯಲ್ಲಿ 15 ವಿಕೆಟ್ ಉರುಳಿಸಿದ್ದಾರೆ.

9. ಕೇಶವ್ ಮಹಾರಾಜ್ (ದಕ್ಷಿಣ ಆಫ್ರಿಕಾ)

ಕೇಶವ್ ಮಹಾರಾಜ್ 2023 ರಲ್ಲಿ ದಕ್ಷಿಣ ಆಫ್ರಿಕಾ ಪರ 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 27 ವಿಕೆಟ್​​ ಗಳನ್ನು ಪಡೆದಿದ್ದಾರೆ. ಅವರ ಸರಾಸರಿ 24.55 ಮತ್ತು 4.32 ಎಕಾನಮಿ ಹೊಂದಿದ್ದರು. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ 33 ರನ್​ಗೆ 4 ವಿಕೆಟ್​. ಐಸಿಸಿ ವಿಶ್ವಕಪ್ 2023 ರಲ್ಲಿ, ಮಹಾರಾಜ್ ದಕ್ಷಿಣ ಆಫ್ರಿಕಾ ಪರ 10 ಪಂದ್ಯಗಳಲ್ಲಿ 4.45 ಎಕಾನಮಿಯಲ್ಲಿ 15 ವಿಕೆಟ್ ಪಡೆದಿದ್ದರು. ಅವರು ಪ್ರಸ್ತುತ ಐಸಿಸಿ ಶ್ರೇಯಾಂಕದಲ್ಲಿ ನಂ.1 ಏಕದಿನ ಬೌಲರ್ ಆಗಿದ್ದಾರೆ.

10. ಶಾಹೀನ್ ಅಫ್ರಿದಿ (ಪಾಕಿಸ್ತಾನ)

ಶಾಹೀನ್ ಅಫ್ರಿದಿ 2023 ರಲ್ಲಿ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನದ ಅತ್ಯುತ್ತಮ ಬೌಲರ್. ಅವರು 21 ಪಂದ್ಯಗಳನ್ನು ಆಡಿದ್ದಾರೆ ಮತ್ತು 24.04 ಸರಾಸರಿಯಲ್ಲಿ 42 ವಿಕೆಟ್​ ಪಡೆದಿದ್ದಾರೆ. ಪಾಕಿಸ್ತಾನದ ಪರ 54 ರನ್​ಗೆ 5 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು. ಐಸಿಸಿ ವಿಶ್ವಕಪ್ 2023 ರಲ್ಲಿ, ಶಾಹೀನ್ ಅಫ್ರಿದಿ ಮೆನ್ ಇನ್ ಗ್ರೀನ್ ಪರ ಒಂಬತ್ತು ಪಂದ್ಯಗಳಲ್ಲಿ 18 ವಿಕೆಟ್​ ಉರುಳಿಸಿದ್ದಾರೆ.

11. ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ 19 ಪಂದ್ಯಗಳಲ್ಲಿ 43 ವಿಕೆಟ್ ಪಡೆದಿದ್ದಾರೆ. ಅವರ ಸರಾಸರಿ 16.46 ಮತ್ತು 5.32 ಎಕಾನಮಿ ಹೊಂದಿದ್ದರು. ಶಮಿ 2023 ರಲ್ಲಿ ಏಕದಿನ ಪಂದ್ಯಗಳಲ್ಲಿ ನಾಲ್ಕು ಬಾರಿ ಐದು ವಿಕೆಟ್​ಗಳನ್ನು ಪಡೆದ್ದಾರೆ. ಇದು ವಿಶ್ವ ದಾಖಲೆಯಾಗಿದೆ. ಅವರು 2023 ರ ವಿಶ್ವಕಪ್​​ನಲ್ಲಿ ಭಾರತಕ್ಕಾಗಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ವಿಶ್ವ ಕಪ್​ನಲ್ಲಿ ಕೇವಲ ಏಳು ಪಂದ್ಯಗಳನ್ನು ಆಡಿದ ಶಮಿ 24 ವಿಕೆಟ್​ ಪಡೆದರು. ಇದು ಪಂದ್ಯಾವಳಿಯಲ್ಲಿ 5.26 ಎಕಾನಮಿ ಮತ್ತು 10.70 ಸರಾಸರಿಯಲ್ಲಿ ಬಂದ ಅತಿ ಹೆಚ್ಚು ವಿಕೆಟ್ ಆಗಿದೆ. ವಿಶ್ವ ಕಪ್​ನಲ್ಲಿ ಮೂರು ಬಾರಿ ಐದು ವಿಕೆಟ್ ಸಾಧನೆ ಮಾಡಿರುವುದು ಅವರ ಮತ್ತೊಂದು ವಿಶ್ವ ದಾಖಲೆ. ವಿಶ್ವ ಕಪ್​ನಲ್ಲಿ 57 ರನ್​ಗೆ 7 ವಿಕೆಟ್ ಮತ್ತೊಂದು ವಿಶ್ವ ದಾಖಲೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

LSG vs SRH: ಹೆಡ್, ಅಭಿಷೇಕ್ ಬ್ಯಾಟಿಂಗ್​ ಸುಂಟರಗಾಳಿಗೆ ತತ್ತರಿಸಿದ ಲಕ್ನೋ; 10 ವಿಕೆಟ್​ ಹೀನಾಯ ಸೋಲು

LSG vs SRH: ಚೇಸಿಂಗ್​ ವೇಳೆ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಹೆಡ್​ ಮತ್ತು ಅಭಿಷೇಕ್ ಲಕ್ನೋ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದರು. ಹೆಡ್​ 16 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರೆ, ಅಭಿಷೇಕ್​ ಶರ್ಮ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

VISTARANEWS.COM


on

LSG vs SRH
Koo

ಹೈದರಾಬಾದ್​: ಟ್ರಾವಿಸ್​ ಹೆಡ್(89*)​ ಮತ್ತು ಅಭಿಷೇಕ್​ ಶರ್ಮ(75*) ಅವರ ಸುಂಟರಗಾಳಿ ಬ್ಯಾಟಿಂಗ್​ಗೆ ತತ್ತರಿಸಿದ ಲಕ್ನೋ ಸೂಪರ್​ ಜೈಂಟ್ಸ್​(LSG vs SRH) 10 ವಿಕೆಟ್​ಗಳ ಅಂತರದ ಹೀನಾಯ ಸೋಲಿಗೆ ತುತ್ತಾಗಿದೆ. ಈ ಸೋಲಿನಿಂದ ರಾಹುಲ್​ ಪಡೆಯ ಪ್ಲೇ ಆಫ್​ ಹಾದಿ ದುರ್ಗಮವಾಗಿದೆ.

ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಆಮೆ ಗತಿಯ ಬ್ಯಾಟಿಂಗ್​ ನಡೆಸಿದ ಲಕ್ನೋ ಸೂಪರ್​ ಜೈಂಟ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 165 ರನ್​ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್​ ಯಾವುದೇ ವಿಕೆಟ್​ ನಷ್ಟವಿಲ್ಲದೆ ಕೇವಲ 9.4 ಓವರ್​ಗಳಲ್ಲಿ 167 ರನ್​ ಬಾರಿಸಿ ಭರ್ಜರಿ 10 ವಿಕೆಟ್​ ಅಂತರದ ಗೆಲುವು ಸಾಧಿಸಿತು.

ಚೇಸಿಂಗ್​ ವೇಳೆ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಹೆಡ್​ ಮತ್ತು ಅಭಿಷೇಕ್ ಲಕ್ನೋ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದರು. ಹೆಡ್​ 16 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಇದು ಈ ಆವೃತ್ತಿಯಲ್ಲಿ ಹೆಡ್​ 16 ಎಸೆತಗಳಿಂದ ಬಾರಿಸಿದ ಮೂರನೇ ಅರ್ಧಶತಕವಾಗಿದೆ. ಅಭಿಷೇಕ್​ ಶರ್ಮ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅದರಲ್ಲೂ ಹೆಡ್​ ಕನ್ನಡಿಗ ಕೃಷ್ಣಪ್ಪ ಗೌತಮ್​ ಅವರಿಗೆ ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಚಳಿ ಬಿಡಿಸಿದರು. 2 ಓವರ್​ಗೆ 29 ರನ್​ ಬಿಟ್ಟುಕೊಟ್ಟರು. 30 ಎಸೆತ ಎದುರಿಸಿದ ಹೆಡ್​ ತಲಾ 8 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ ಅಜೇಯ 89 ರನ್​ ಬಾರಿಸಿದರು. ಅಭಿಷೇಕ್​ ಶರ್ಮ 8 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ ಅಜೇಯ 75 ರನ್​ ಬಾರಿಸಿ ತಂಡದ ಜಯ ಸಾರಿದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ತಂಡದ ಪವರ್​ ಪ್ಲೇ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ರನ್​ ಗಳಿಸಲು ಪರದಾಡಿದ ಕ್ವಿಂಟನ್​ ಡಿ ಕಾಕ್(2) ರನ್​ಗೆ ವಿಕೆಟ್​ ಕಳೆದುಕೊಂಡರೆ, ಇದರ ಬೆನ್ನಲ್ಲೇ ಮಾರ್ಕಸ್​ ಸ್ಟೋಯಿನಿಸ್​ 3 ರನ್​ ಗಳಿಸಿ ಪೆವಿಲಿಯನ್​ ಕಡೆಗೆ ನಡೆದರು. 21 ರನ್​ಗೆ 2 ವಿಕೆಟ್​ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು. ಪವರ್​ ಪ್ಲೇಯಲ್ಲಿ ದಾಖಲಾದದ್ದು ಕೇವಲ 27 ರನ್​ ಮಾತ್ರ. ಇದು ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆಯಾಯಿತು.

ನಾಯಕ ರಾಹುಲ್​ ಕೂಡ ಅತ್ಯಂತ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟು 33 ಎಸೆತಗಳಿಂದ 29 ರನ್​ ಬಾರಿಸಿದರು. ಬಾರಿಸಿದ್ದು ತಲಾ ಒಂದು ಸಿಕ್ಸರ್​ ಮತ್ತು ಬೌಂಡರಿ ಮಾತ್ರ. 4ನೇ ವಿಕೆಟ್​ಗೆ ಆಡಲು ಬಂದ ಕೃಣಾಲ್​ ಪಾಂಡ್ಯ ಮಧ್ಯಮ ಕ್ರಮಾಂದಲ್ಲಿ ಸಣ್ಣ ಮಟ್ಟದ ಹೋರಾಟ ಸಂಘಟಿಸಿ 2 ಸಿಕ್ಸರ್​ ಸಿಡಿಸಿ 24 ರನ್​ ಗಳಿಸಿ ಪ್ಯಾಟ್​ ಕಮಿನ್ಸ್​ ಅವರ ನೇರ ಥ್ರೋಗೆ ರನೌಟ್​ ಆದರು. ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದದ್ದು ಆಯುಷ್​ ಬದೋನಿ ಮತ್ತು ನಿಕೋಲಸ್​ ಪೂರನ್​. ಉಭಯ ಆಟಗಾರರು ಹೈದರಾಬಾದ್​ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 5ನೇ ವಿಕೆಟ್​ಗೆ ಮುರಿಯದ 99 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಹೀಗಾಗಿ ತಂಡ 150ರ ಗಡಿ ದಾಡಿತು.

ಬದೋನಿ 30 ಎಸೆತ ಎದುರಿಸಿ 55 ರನ್​ ಬಾರಿಸುವ ಮೂಲಕ ಅರ್ಧಶತಕ ಪೂರ್ತಿಗೊಳಿಸಿದರು. ನಿಕೋಲಸ್​ ಪೂರನ್​ 26 ಎಸೆತಗಳಿಂದ 48 ರನ್​ ಗಳಿಸಿದರು. ಹೈದರಾಬಾದ್​ ಪರ ಅನುಭವಿ ಭುವನೇಶ್ವರ್ ಕುಮಾರ್​ 2 ವಿಕೆಟ್​ ಪಡೆದರೆ, ಕಮಿನ್ಸ್​ 1 ವಿಕೆಟ್​ ಕಿತ್ತರು. ಹುಟ್ಟುಹಬ್ಬದ ದಿನವೇ ಕಮಿನ್ಸ್​ಗೆ ಭರ್ಜರಿ ಗೆಲುವಿನ ಉಡುಗೊರೆ ದೊರೆತಿದೆ.​

Continue Reading

ಕ್ರಿಕೆಟ್

Monty Panesar: ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರದಲ್ಲಿ ಗುಡ್​ ಬೈ ಹೇಳಿದ ಇಂಗ್ಲೆಂಡ್​ ಸ್ಪಿನ್ನರ್

Monty Panesar: 42 ವರ್ಷದ ಪನೇಸರ್ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಲಂಡನ್‌ನ ಈಲಿಂಗ್ ಸೌಥಾಲ್ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆಯಾಗಿದ್ದರು. ಇದೀಗ ಅಚ್ಚರಿ ಎಂಬತ್ತೆ ಒಂದೇ ವಾರಕ್ಕೆ ರಾಜಕೀಯಕ್ಕೆ ಗುಡ್​ ಬೈ ಹೇಳಿದ್ದಾರೆ. ಆದರೆ, ರಾಜಕೀಯದಿಂದ ದೂರವಾಗಲು ಕಾರಣ ಏನೆಂಬುದನ್ನು ಪನೇಸರ್ ತಿಳಿಸಿಲ್ಲ.

VISTARANEWS.COM


on

Monty Panesar
Koo

ಲಂಡನ್​: ಕಳೆದ ವಾರವಷ್ಟೇ ಇಂಗ್ಲೆಂಡ್‌ನ‌ ಮಾಂಟಿ ಪನೇಸರ್‌(Monty Panesar) ರಾಜಕೀಯಕ್ಕೆ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದ್ದರು. ಇದೀಗ ಒಂದು ವಾರ ಆಗುವಷ್ಟರಲ್ಲಿ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಜಾರ್ಜ್ ಗ್ಯಾಲೋವೆ ನೇತೃತ್ವದ ವರ್ಕರ್ಸ್ ಪಾರ್ಟಿ ಆಫ್ ಗ್ರೇಟ್ ಬ್ರಿಟನ್‌ನ ಸಂಸದೀಯ ಅಭ್ಯರ್ಥಿಯಾಗಿದ್ದ ಮಾಂಟಿ ಪನೇಸರ್‌, ತಮ್ಮ ಹೆಸರನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಇದೇ ವರ್ಷಾರಂಭದಲ್ಲಿ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರಕ್ಕೆ ದಿಢೀರ್​ ರಾಜಕೀಯದಿಂದ ಹಿಂದೆ ಸರಿದಿದ್ದರು.

42 ವರ್ಷದ ಪನೇಸರ್ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಲಂಡನ್‌ನ ಈಲಿಂಗ್ ಸೌಥಾಲ್ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆಯಾಗಿದ್ದರು. ಇದೀಗ ಅಚ್ಚರಿ ಎಂಬತ್ತೆ ಒಂದೇ ವಾರಕ್ಕೆ ರಾಜಕೀಯಕ್ಕೆ ಗುಡ್​ ಬೈ ಹೇಳಿದ್ದಾರೆ. ಆದರೆ, ರಾಜಕೀಯದಿಂದ ದೂರವಾಗಲು ಕಾರಣ ಏನೆಂಬುದನ್ನು ಪನೇಸರ್ ತಿಳಿಸಿಲ್ಲ. ಮೂಲಗಳ ಪ್ರಕಾರ ಮಾಧ್ಯಮಗಳ ನಿರಂತರವಾದ ಸಂದರ್ಶನಗಳಿಂದ ಬೇಸತ್ತು ಅವರು ಈ ನಿರ್ಧಾರ ಕೈಗೊಂಡರು ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ನಡೆದಿದ್ದ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಪನೇಸರ್ ನ್ಯಾಟೊದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಮುಂದುವರಿದ ಸದಸ್ಯತ್ವದ ಬಗ್ಗೆ ಕೇಳಲಾಗಿದ್ದ ಪ್ರಶ್ನೆಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಹೆಣಗಾಡಿದ್ದರು. ಈ ಘಟನೆ ನಡೆದ 2 ದಿನಗಳ ಅಂತರದಲ್ಲಿ ಪನೇಸರ್ ರಾಜಕೀಯದಿಂದ ದೂರ ಸರಿದಿದ್ದಾರೆ. ರಾಜಕೀಯವು ಜನರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾನಿನ್ನೂ ಕಲಿಯಬೇಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ತಮ್ಮ ರಾಜಕೀಯ ನಿವೃತ್ತಿಯನ್ನು ಪ್ರಕಟಿಸಿದ್ದಾರೆ.

“ವರ್ಕರ್ಸ್ ಪಾರ್ಟಿಯ ಸಾರ್ವತ್ರಿಕ ಚುನಾವಣಾ ಅಭ್ಯರ್ಥಿಯಾಗಿ ನನ್ನ ಹೆಸರನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ನನ್ನ ವೈಯಕ್ತಿಕ ಮತ್ತು ರಾಜಕೀಯ ಮೌಲ್ಯಗಳಿಗೆ ಹೊಂದಿಕೆಯಾಗುವ ರಾಜಕೀಯ ನೆಲೆಯನ್ನು ಹುಡುಕಲು ನನಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅರಿತುಕೊಂಡಿದ್ದೇನೆ. ಹೀಗಾಗಿ ನಾನು ಈ ನಿಲುವು ಕೈಗೊಂಡಿದ್ದೇನೆ. ವರ್ಕರ್ಸ್ ಪಾರ್ಟಿಗೆ ಶುಭ ಹಾರೈಸುತ್ತೇನೆ. ನನ್ನ ರಾಜಕೀಯ ನೆಲೆಯನ್ನು ಪ್ರಬುದ್ಧಗೊಳಿಸಲು ಮತ್ತು ಕಂಡುಕೊಳ್ಳಲು ಸ್ವಲ್ಪ ಸಮಯ ಬೇಕು. ಮುಂದಿನ ದಿನಗಳಲ್ಲಿ ಮತ್ತೆ ಬಲಿಷ್ಠನಾಗಿ ರಾಜಕೀಯಕ್ಕೆ ಟಂಟ್ರಿ ಕೊಡಲಿದ್ದೇನೆ” ಎಂದು ಪನೇಸರ್ ಹೇಳಿದ್ದಾರೆ.

ಇಂಗ್ಲೆಂಡ್ ಪರ 50 ಟೆಸ್ಟ್ ಪಂದ್ಯಗಳಲ್ಲಿ 167 ವಿಕೆಟ್ ಪಡೆದಿದ್ದಾರೆ. 26 ಏಕದಿನ ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಪನೇಸರ್ ಕ್ರಿಕೆಟ್​ ಕಾಮೆಂಟ್ರಿಯಲ್ಲಿ ತೊಡಗಿಕೊಂಡಿದ್ದಾರೆ.

Continue Reading

ಕ್ರೀಡೆ

Virat Kohli: ಪಂಜಾಬಿ ಮಾತನಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Virat Kohli: ಅಭ್ಯಾಸದ ವೇಳೆ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ಪಂಜಾಬ್​ನ ಸ್ಥಳೀಯ ಕ್ರಿಕೆಟಿಗರೊಂದಿಗೆ ಪಂಜಾಬಿ ಮಾತನಾಡಿ ಗಮನಸೆಳೆದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Virat Kohli
Koo

ಧರ್ಮಶಾಲಾ: ನಾಳೆ(ಗುರುವಾರ) ನಡೆಯುವ ಐಪಿಎಲ್​ನ(IPL 2024) 58ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(Punjab Kings)​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ಮುಖಾಮುಖಿಯಾಗಲಿವೆ. ಈ ಪಂದ್ಯ ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ಇಲ್ಲಿನ ಸ್ಥಳೀಯ ಆಟಗಾರರೊಂದಿಗೆ ಪಂಜಾಬಿ ಮಾತನಾಡಿ ಗಮನಸೆಳೆದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಪಂಜಾಬ್​ನ ಸ್ಥಳೀಯ ಕ್ರಿಕೆಟಿಗರು ಕೂಡ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ (ಎಚ್‌ಪಿಸಿಎ)ನಲ್ಲಿ ಕ್ರಿಕೆಟ್​ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ತಮ್ಮ ನೆಚ್ಚಿನ ಆಟಗಾರರ ವಿರಾಟ್​ ಕೊಹ್ಲಿಯ ಆಟೋಗ್ರಾಫ್​ ಪಡೆದುಕೊಂಡಿದ್ದಾರೆ. ಈ ವೇಳೆ ಕೊಹ್ಲಿ ಕೆಲವು ಪಂಜಾಬಿ ಪದಗಳನ್ನು ಹೇಳಿದ್ದಾರೆ. ಕೊಹ್ಲಿಯ ಪಂಜಾಬಿ ಮಾತುಗಳು ಕೇಳಿ ಸಹ ಆಟಗಾರರು ಜೋರಾಗಿ ನಕ್ಕಿದ್ದಾರೆ. ಕೊಹ್ಲಿ ಕೂಡ ಇವರೊಂದಿಗೆ ನಕ್ಕಿದ್ದಾರೆ.

ಶನಿವಾರ ನಡೆದಿದ್ದ ಗುಜರಾತ್​ ಟೈಟಾನ್ಸ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 4 ವಿಕೆಟ್​ ಅಂತರದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat- Anushka) ಅವರು ಎದುರಾಳಿ ತಂಡದ ಆಟಗಾರ ಶಾರೂಖ್​ ಖಾನ್​ ಅವರನ್ನು ಮಿಂಚಿನ ಎಸೆತದ ಮೂಲಕ ರನೌಟ್​ ಮಾಡಿ ಗಮನಸೆಳೆದಿದ್ದರು. ಬುಲೆಟ್​ ಚಿಮ್ಮಿದ ವೇಗದಲ್ಲಿ ರನೌಟ್​ ಮಾಡಿದ್ದನ್ನು ಕಂಡು ಪತ್ನಿ ಅನುಷ್ಕಾ(Anushka Sharma) ದಂಗಾಗಿದ್ದರು. ಇದರ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video)​ ಆಗಿತ್ತು.

ಆರಂಭಿಕ ಆಘಾತ ಕಂಡಿದ್ದ ಗುಜರಾತ್​ಗೆ ಶಾರೂಖ್​ ಖಾನ್​ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್​ ಮೂಲಕ ಆಸರೆಯಾಗಿದ್ದರು. 24 ಎಸೆತಗಳಿಂದ 37 ರನ್​ ಗಳಿಸಿ ನಾನ್​ಸ್ಟ್ರೈಕ್​ನಲ್ಲಿದ್ದ ಶಾರೂಖ್ ಇಲ್ಲದ ರನ್​ ಕದಿಯಲು ಯತ್ನಿಸಿದ ವೇಳೆ ಚಿರತೆ ವೇಗದಲ್ಲಿ ಫೀಲ್ಡಿಂಗ್​ ನಡೆಸಿ ಕೊಹ್ಲಿ ಚೆಂಡನ್ನು ನೇರವಾಗಿ ವಿಕೆಟ್​ಗೆ ಎಸೆದು ರನೌಟ್​ ಮಾಡಿದರು. ಒಂದೊಮ್ಮೆ ಕೊಹ್ಲಿ ಈ ರನೌಟ್​ ಮಾಡದಿದ್ದರೆ ಶಾರೂಖ್​ ಆರ್​ಸಿಬಿಗೆ ಅಪಾಯಕಾರಿಯಾಗಿ ಗೋಚರಿಸುವ ಸಾಧ್ಯತೆಯೂ ಇತ್ತು.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ದಾಖಲೆ ಬರೆದ ಮ್ಯಾಕ್‌ಗುರ್ಕ್; ಜೈಸ್ವಾಲ್​ ದಾಖಲೆ ಪತನ

ಗುಜರಾತ್​ ವಿರುದ್ಧ  6 ರನ್​ ಗಳಿಸುತ್ತಿದ್ದಂತೆ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದ ಮೊದಲ ಭಾರತೀಯ ಎನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಮೋಹಿತ್​ ಶರ್ಮ ಎಸೆದ ಇನಿಂಗ್ಸ್​ನ ಮೊದಲ ಓವರ್​ನ ದ್ವಿತೀಯ ಎಸೆತವನ್ನು ಸಿಕ್ಸರ್​ಗೆ ಬಡಿದಟ್ಟುವ ಮೂಲಕ ​ ವಿರಾಟ್​ ಕೊಹ್ಲಿ ರನ್​ ಖಾತೆ ತೆರೆದರು. ಜತೆಗೆ ಈ ರನ್​ ಮೂಲಕ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದರು. ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ವಿಂಡೀಸ್​ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 14562 ರನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಶೊಯೆಬ್ ಮಲಿಕ್ (13360) ದ್ವಿತೀಯ, ವೆಸ್ಟ್ ಇಂಡೀಸ್​ನ ಕೀರನ್ ಪೊಲಾರ್ಡ್(12900) ತೃತೀಯ ಸ್ಥಾನದಲ್ಲಿದ್ದಾರೆ. ಕೊಹ್ಲಿ 12536* ರನ್​ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

Continue Reading

ಕ್ರೀಡೆ

RCB vs PBKS: ಪಂಜಾಬ್​-ಆರ್​ಸಿಬಿ ಸೆಣಸಾಟ; ಸೋತವರು ಟೂರ್ನಿಯಿಂದ ಔಟ್​

RCB vs PBKS: ಎರಡೂ ತಂಡಗಳು 11 ಪಂದ್ಯಗಳಿಂದ ಎಂಟು ಅಂಕಗಳನ್ನು ಹೊಂದಿದ್ದರೂ, ಆರ್​ಸಿಬಿ ಉತ್ತಮ ರನ್ ರೇಟ್​ ಆಧಾರದಲ್ಲಿ 7ನೇ ಸ್ಥಾನದಲ್ಲಿದೆ ಪಂಜಾಬ್​ 8ನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿವೆ. ಈ ಮೂರು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶ ಇದೆ.

VISTARANEWS.COM


on

RCB vs PBKS
Koo

ಧರ್ಮಶಾಲಾ: ಆರಂಭಿಕ ಹಂತದಲ್ಲಿ ನಿರಾಶಾದಾಯಕ ಪ್ರದರ್ಶನ ತೋರಿ, ಟೂರ್ನಿ ಮುಕ್ತಾಯದ ಹಂತದಲ್ಲಿ ಶ್ರೇಷ್ಠ ಪ್ರದರ್ಶನದ ಮೂಲಕ ಹ್ಯಾಟ್ರಿಕ್​ ಗೆಲುವು ಸಾಧಿಸಿರುವ ಆರ್​ಸಿಬಿ ತಂಡ ನಾಳೆ ನಡೆಯುವ ಐಪಿಎಲ್​(IPL 2024) ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(RCB vs PBKS)​ ವಿರುದ್ಧ ಕಣಕ್ಕಿಳಿಯಲಿದೆ. ಪ್ಲೇ ಆಫ್​ಗೆ ಕ್ಷೀಣ ಅವಕಾಶ ಹೊಂದಿರುವ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಪಂದ್ಯ ಅತ್ಯಂತ ರೋಚಕವಾಗಿ ಸಾಗುವ ಸಾಧ್ಯತೆ ಇದೆ. ಸೋತ ತಂಡದ ಪ್ಲೇ ಆಫ್​ ಹಾದಿ ಬಂದ್​ ಆಗಲಿದೆ.

ಎರಡೂ ತಂಡಗಳು 11 ಪಂದ್ಯಗಳಿಂದ ಎಂಟು ಅಂಕಗಳನ್ನು ಹೊಂದಿದ್ದರೂ, ಆರ್​ಸಿಬಿ ಉತ್ತಮ ರನ್ ರೇಟ್​ ಆಧಾರದಲ್ಲಿ 7ನೇ ಸ್ಥಾನದಲ್ಲಿದೆ ಪಂಜಾಬ್​ 8ನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿವೆ. ಈ ಮೂರು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶ ಇದೆ. ಜತೆಗೆ ಇತರ ತಂಡಗಳ ಫಲಿತಾಂಶಗಳು ಕೂಡ ಮುಖ್ಯವಾಗಿದೆ. ಒಟ್ಟಾರೆ ನಾಳೆ ಗೆದ್ದ ತಂಡ ಪ್ಲೇ ಆಪ್​ ರೇಸ್​ನಲ್ಲಿ ಉಳಿಯಲಿದೆ.

ಪಿಚ್​ ರಿಪೋರ್ಟ್​

ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್‌ ಓವಲ್‌, ನ್ಯೂಜಿಲ್ಯಾಂಡ್​ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿದೆ. ರಾತ್ರಿ ಪಂದ್ಯ ನಡೆಯುವ ಕಾರಣ ಇಲ್ಲಿ ಹುಳದ ಕಾಟ ಕೂಡ ಹೆಚ್ಚಾಗಿ ಕಾಡಲಿದೆ. ಜತೆಗೆ ಮಳೆಯ ಮುನ್ಸೂಚನೆಯೂ ಇದೆ.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ದಾಖಲೆ ಬರೆದ ಮ್ಯಾಕ್‌ಗುರ್ಕ್; ಜೈಸ್ವಾಲ್​ ದಾಖಲೆ ಪತನ

ಆರ್​ಸಿಬಿ ತಂಡದ ನಾಯಕ ಫಾಫ್​ ಡು ಪ್ಲೆಸಿಸ್​ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದು ಈ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಒಂದೊಮ್ಮೆ ಅವರು ಪಂದ್ಯದಿಂದ ಇಂಪ್ಯಾಕ್ಟ್​ ಆಟಗಾರನಾಗಿ ಕೇವಲ ಬ್ಯಾಟಿಂಗ್​ ಮಾಡುವ ಸಾಧ್ಯತೆ ಇದೆ. ವಿರಾಟ್​ ಕೊಹ್ಲಿ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಬಹುದು.

ಪಂಜಾಬ್​ ಗೆದ್ದಿರುವುದು ಬ್ಯಾಟಿಂಗ್​ ಬಲದಿಂದ. ಹೀಗಾಗಿ ಈ ಪಂದ್ಯದಲ್ಲಿಯೂ ಪಂಜಾಬ್​ ಬ್ಯಾಟಿಂಗ್​ ಬಲವನ್ನೇ ನಂಬಿದೆ. ಕಳೆದೊಂದು ವರ್ಷದಿಂದ ತೀವ್ರ ಬ್ಯಾಟಿಂಗ್​ ಬರ ಎದುರಿಸಿದ್ದ ಜಾನಿ ಬೇರ್​ಸ್ಟೋ ಪ್ರಚಂಡ ಫಾರ್ಮ್​ಗೆ ಮರಳಿದ್ದಾರೆ. ಇದು ಪಂಜಾಬ್​ಗೆ ಆನೆ ಬಲ ಬಂದಂತಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್​ ಸಿಂಗ್​ ಮತ್ತು ಅಶುತೋಷ್ ಶರ್ಮಾ ಸಿಡಿಲಬ್ಬರ ಬ್ಯಾಟಿಂಗ್​ ಮೂಲಕ ತಂಡಕ್ಕೆ ನೆರವಾಗಬಲ್ಲರು. ಒಟ್ಟಾರೆಯಾಗಿ ಪಂಜಾಬ್​ಗೆ ಬ್ಯಾಟಿಂಗ್​ಗೇ ಮುಖ್ಯ ಬಲವಾಗಿದೆ.

ಎಚ್‌ಪಿಸಿಎ ಕ್ರಿಕೆಟ್​ ಸ್ಟೇಡಿಯಂನಲ್ಲಿ ಇದುವರೆಗೆ 12 ಐಪಿಎಲ್​ ಪಂದ್ಯಗಳು ನಡೆದಿವೆ. ಈ ಪೈಕಿ 7 ಪಂದ್ಯಗಳನ್ನು ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದ್ದರೆ, 5 ಬಾರಿ ಚೇಸಿಂಗ್​ ನಡೆಸಿದ ತಂಡ ಗೆದ್ದಿದೆ. 2 ವಿಕೆಟ್​ಗೆ 232 ರನ್​ ಇಲ್ಲಿ ದಾಖಲಾದ ಅತ್ಯಧಿಕ ರನ್​ ಗಳಿಕೆಯಾಗಿದೆ. 2011ರಲ್ಲಿ ಪಂಜಾಬ್​ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಈ ಮೊತ್ತ ದಾಖಲಾಗಿತ್ತು.

ಸಂಭಾವ್ಯ ತಂಡಗಳು

ಪಂಜಾಬ್​ ಕಿಂಗ್ಸ್​: ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್ (ನಾಯಕ), ರಿಲೀ ರೊಸೊ, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆ), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್

ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವಿಜಯ್ ಕುಮಾರ್ ವೈಶಾಕ್.

Continue Reading
Advertisement
bagalakote unrest
ಕ್ರೈಂ4 mins ago

Bagalakote Unrest: ಹಿಂದೂ ಯುವಕ- ಮುಸ್ಲಿಂ ಯುವತಿ ನವದಂಪತಿ ರಕ್ಷಣೆಗೆ ನಿಂತ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್‌ ಲಾಠಿಚಾರ್ಜ್‌

Do You Know
ಲೈಫ್‌ಸ್ಟೈಲ್14 mins ago

Do You Know: ನಿಮಗಿದು ಗೊತ್ತಾ? ಲವ್‌ ಮಾಡುತ್ತಿದ್ದರೆ ತೂಕ ಜಾಸ್ತಿಯಾಗುತ್ತದೆ!

hd revanna jailed prajwal revanna case
ಕ್ರೈಂ33 mins ago

Prajwal Revanna Case: ಎಚ್‌.ಡಿ ರೇವಣ್ಣ ಈಗ ಕೈದಿ ನಂಬರ್‌ 4567, ನಿದ್ದೆ ಮಾಡದೆ ಮೌನಿಯಾಗಿ ಕುಳಿತ ಮಾಜಿ ಸಚಿವ

Nijjar Killling
ವಿದೇಶ33 mins ago

Nijjar Killing: ಒಂದೇ ದಿನದಲ್ಲಿ ಸ್ಟೂಡೆಂಟ್‌ ವೀಸಾ ಪಡೆದು ಕೆನಡಾಕ್ಕೆ ಬಂದಿದ್ನಂತೆ ನಿಜ್ಜರ್‌ ಹಂತಕ

Maldives
ದೇಶ38 mins ago

Maldives: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಆಗಮಿಸಿದ ಮಾಲ್ಡೀವ್ಸ್ ಸಚಿವ ಮೂಸಾ ಜಮೀರ್

SSLC Exam Result 2024 to be declared tomorrow Here are the details
ಶಿಕ್ಷಣ1 hour ago

SSLC Exam Result 2024: ಇಂದು ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಪ್ರಕಟ; ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು? ಇಲ್ಲಿದೆ ಡಿಟೇಲ್ಸ್‌

Cooking Oils
ಆಹಾರ/ಅಡುಗೆ1 hour ago

Cooking Oils: ಭಾರತೀಯ ಅಡುಗೆ ಶೈಲಿಗೆ ಯೋಗ್ಯವಾದ 7 ಅಡುಗೆ ಎಣ್ಣೆಗಳಿವು

Karnataka Weather
ಕರ್ನಾಟಕ2 hours ago

Karnataka Weather: ಇಂದು ಕೊಡಗು, ಹಾಸನ, ಚಿಕ್ಕಮಗಳೂರು ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ!

Sam Pitroda
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

dina bhavishya read your daily horoscope predictions for May 09 2024
ಪ್ರಮುಖ ಸುದ್ದಿ3 hours ago

Dina Bhavishya: 12 ರಾಶಿಗಳ ಇಂದಿನ ಭವಿಷ್ಯ ಏನು? ಯಾರಿಗೆ ಪ್ಲಸ್‌? ಯಾರಿಗೆ ಮೈನಸ್!?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 day ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ4 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌