ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ? - Vistara News

ಕ್ರಿಕೆಟ್

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

ಅಂಡರ್​-19 ಏಷ್ಯಾಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಡಿ.10 ರಂದು ನಡೆಯಲಿದೆ.

VISTARANEWS.COM


on

U-19 Asia Cup IND vs PAK
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ: ದುಬೈ (Dubai) ಆತಿಥ್ಯನಲ್ಲಿ ನಡೆಯುವ ಪುರುಷರ ಅಂಡರ್​-19 ಏಷ್ಯಾಕಪ್ (ACC Men’s U19 Asia Cup 2023) ಟೂರ್ನಿಯ ಪಂದ್ಯಾವಳಿಗಳು ಡಿಸೆಂಬರ್ 8 ರಿಂದ ಆರಂಭಗೊಳ್ಳಲಿದೆ. ಟೂರ್ನಿ ಡಿಸೆಂಬರ್ 17 ರವರೆಗೆ ನಡೆಯಲಿದೆ. ಡಿ.8ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಭಾರತ ತಂಡ ಅಫಘಾನಿಸ್ತಾನ​ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ. ಸಾಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಡಿ.10 ರಂದು ಕಣಕಿಳಿಯಲಿದೆ.

15 ಪಂದ್ಯಗಳು

50-ಓವರ್‌ಗಳ ಸ್ಪರ್ಧೆಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಇದರಲ್ಲಿ ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಪಂದ್ಯ ಕೂಡ ಸೇರಿದೆ. ಫೈನಲ್ ಪಂದ್ಯ ಡಿಸೆಂಬರ್ 17 ರಂದು ನಡೆಯಲ್ಲಿದೆ. ಈ ಟೂರ್ನಿಯ ಪಂದ್ಯಗಳು ಐಸಿಸಿ ಅಕಾಡೆಮಿ ಓವಲ್ ಸೇರಿದಂತೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ನಡೆಯಲಿವೆ. ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸಣಸಾಡಲಿವೆ.

ತಂಡಗಳು

ಕೂಟದಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಅವುಗಳೆಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಜಪಾನ್, ಯುಎಇ
ಅಫಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ. ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಹಾಲಿ ಚಾಂಪಿಯನ್ ಭಾರತ, ನೇಪಾಳ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಜಪಾನ್ ಮತ್ತು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಸ್ಥಾನ ಪಡೆದಿವೆ.

ಇದನ್ನೂ ಓದಿ ACC Under-19 Asia Cup : ಜೂನಿಯರ್​ಗಳ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ವೇಳಾಪಟ್ಟಿ

ಡಿಸೆಂಬರ್ 8 – ಭಾರತ vs ಅಫ್ಘಾನಿಸ್ತಾನ – ICC ಅಕಾಡೆಮಿ ಓವಲ್ 1

ಡಿಸೆಂಬರ್ 8 – ಪಾಕಿಸ್ತಾನ vs ನೇಪಾಳ – ICC ಅಕಾಡೆಮಿ ಓವಲ್ 2

ಡಿಸೆಂಬರ್ 9 – ಬಾಂಗ್ಲಾದೇಶ vs ಯುಎಇ – ICC ಅಕಾಡೆಮಿ ಓವಲ್ 1

ಡಿಸೆಂಬರ್ 9 – ಶ್ರೀಲಂಕಾ vs ಜಪಾನ್ – ICC ಅಕಾಡೆಮಿ ಓವಲ್ 2

ಡಿಸೆಂಬರ್ 10 – ಭಾರತ vs ಪಾಕಿಸ್ತಾನ – ICC ಅಕಾಡೆಮಿ ಓವಲ್ 1

ಡಿಸೆಂಬರ್ 10 – ಅಫ್ಘಾನಿಸ್ತಾನ vs ನೇಪಾಳ – ICC ಅಕಾಡೆಮಿ ಓವಲ್ 2

ಡಿಸೆಂಬರ್ 11 – ಶ್ರೀಲಂಕಾ vs ಯುಎಇ – ICC ಅಕಾಡೆಮಿ ಓವಲ್ 1

ಡಿಸೆಂಬರ್ 11 – ಬಾಂಗ್ಲಾದೇಶ vs ಜಪಾನ್ – ICC ಅಕಾಡೆಮಿ ಓವಲ್ 2

ಡಿಸೆಂಬರ್ 12 – ಪಾಕಿಸ್ತಾನ vs ಅಫ್ಘಾನಿಸ್ತಾನ – ICC ಅಕಾಡೆಮಿ ಓವಲ್ 1

ಡಿಸೆಂಬರ್ 12 – ಭಾರತ vs ನೇಪಾಳ – ICC ಅಕಾಡೆಮಿ ಓವಲ್ 2

ಡಿಸೆಂಬರ್ 13 – ಬಾಂಗ್ಲಾದೇಶ vs ಶ್ರೀಲಂಕಾ – ICC ಅಕಾಡೆಮಿ ಓವಲ್ 1

ಡಿಸೆಂಬರ್ 13 – ಯುಎಇ vs ಜಪಾನ್ – ಐಸಿಸಿ ಅಕಾಡೆಮಿ ಓವಲ್ 2

ಡಿಸೆಂಬರ್ 15 – ಸೆಮಿಫೈನಲ್ 1 – ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ

ಡಿಸೆಂಬರ್ 15 – ಸೆಮಿ-ಫೈನಲ್ 2 – ICC ಅಕಾಡೆಮಿ ಓವಲ್ 1

ಡಿಸೆಂಬರ್ 17 – ಫೈನಲ್ – ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ

ಭಾರತ ಅಂಡರ್-19 ತಂಡ

ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಅರ್ವೆಲ್ಲಿ ಅವನೀಶ್ ರಾವ್ (ವಿಕೆಟ್​ ಕೀಪರ್​), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.

ಟ್ರಾವೆಲಿಂಗ್ ಮೀಸಲು ಆಟಗಾರರು: ಪ್ರೇಮ್ ದಿಯೋಕರ್, ಅನ್ಶ್ ಗೋಸಾಯಿ, ಎಂಡಿ ಅಮನ್

ಮೀಸಲು ಆಟಗಾರರು: ದಿಗ್ವಿಜಯ್ ಪಾಟೀಲ್, ಜಯಂತ್ ಗೋಯತ್, ಪಿ.ವಿಘ್ನೇಶ್, ಕಿರಣ್ ಚೋರ್ಮಾಲೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Pakistan Cricket: ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್ ಪಾಕ್​ ತಂಡಕ್ಕೆ ನೂತನ ಕೋಚ್​

Pakistan Cricket: ಗ್ಯಾರಿ ಕರ್ಸ್ಟನ್(Gary Kirsten) ಮತ್ತು ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ(Jason Gillespie) ಅವರು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್(Pakistan Cricket Team) ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಗ್ಯಾರಿ ಕರ್ಸ್ಟನ್ ವೈಟ್-ಬಾಲ್ ವ್ಯವಹಾರಗಳನ್ನು ಮಾತ್ರ ನಿರ್ವಹಿಸಲಿದ್ದಾರೆ. ಜೇಸನ್ ಗಿಲ್ಲೆಸ್ಪಿ ಟೆಸ್ಟ್​ ತಂಡಕ್ಕೆ ಕೋಚ್​ ಆಗಿದ್ದಾರೆ

VISTARANEWS.COM


on

Pakistan Cricket
Koo

ಕರಾಚಿ: ಭಾರತದ ಮಾಜಿ ಮುಖ್ಯ ಕೋಚ್, 2011ರಲ್ಲಿ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್(Gary Kirsten) ಮತ್ತು ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ(Jason Gillespie) ಅವರು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್(Pakistan Cricket Team) ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಗ್ಯಾರಿ ಕರ್ಸ್ಟನ್ ವೈಟ್-ಬಾಲ್ ವ್ಯವಹಾರಗಳನ್ನು ಮಾತ್ರ ನಿರ್ವಹಿಸಲಿದ್ದಾರೆ. ಜೇಸನ್ ಗಿಲ್ಲೆಸ್ಪಿ ಟೆಸ್ಟ್​ ತಂಡಕ್ಕೆ ಕೋಚ್​ ಆಗಿದ್ದಾರೆ. ಅಜರ್ ಮಹಮೂದ್ ಮೂರು ಮಾದರಿಯ ಕ್ರಿಕೆಟ್​ಗೆ ಸಹಾಯಕ ಕೋಚ್​ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

​ಇದೇ ಜೂನ್​ 1ರಿಂದ 29ರ ತನಕ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಗ್ಯಾರಿ ಕರ್ಸ್ಟನ್​ಗೆ ಮೊದಲ ಸವಾಲಾಗಿದೆ. ಗ್ಯಾರಿ ಕರ್ಸ್ಟನ್​ ಅವರು 2008ರಿಂದ 2011ರವರೆಗೆ ಭಾರತ ತಂಡದ ಮುಖ್ಯ ಕೋಚ್​ ಆಗಿದ್ದರು. ಇವರ ಮಾರ್ಗದರ್ಶನದಲ್ಲೇ ಭಾರತ 2011ರ ಏಕದಿನ ವಿಶ್ವಕಪ್​ ಗೆದ್ದಿತ್ತು. 56 ವರ್ಷದ ಕರ್ಸ್ಟನ್​ ಪ್ರಸಕ್ತ ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​ ತಂಡದ ಬ್ಯಾಟಿಂಗ್​ ಕೋಚ್​ ಮತ್ತು ಮೆಂಟರ್​ ಆಗಿದ್ದಾರೆ. ಐಪಿಎಲ್​ನಲ್ಲಿಯೂ ಇವರ ನೇತೃತ್ವದಲ್ಲಿ ಗುಜರಾತ್​ ಚೊಚ್ಚಲ ಪ್ರಯತ್ನದಲ್ಲೇ ಕಪ್​ ಗೆದ್ದು ಸಂಭ್ರಮಿಸಿತ್ತು. ಕಳೆದ ಬಾರಿ ತಂಡ ಫೈನಲ್​ ಕೂಡ ಪ್ರವೇಶಿಸಿತ್ತು. ಇದೀಗ ಪಾಕ್​ ತಂಡ ಕೂಡ ಇದೇ ವರ್ಷ ನಡೆಯುವ ಟಿ20 ವಿಶ್ವಕಪ್​ ಮೇಲೆ ಕಣ್ಣಿಟ್ಟಿದ್ದಾರೆ.

ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಹೈ-ವೋಲ್ಟೇಜ್ ಪಂದ್ಯ ಜೂನ್ 9 ರಂದು ನಡೆಯಲಿದೆ.

ಲಾಹೋರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಂಡದ ನೂತನ ಕೋಚ್​ಗಳ ಹೆಸರನ್ನು ಘೋಷಣೆ ಮಾಡಿದರು. “ರಾಷ್ಟ್ರೀಯ ತಂಡಕ್ಕೆ ಉನ್ನತ ಶ್ರೇಣಿಯ ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸುವ ತನ್ನ ಬದ್ಧತೆಯಲ್ಲಿ ಪಿಸಿಬಿ ಅಚಲವಾಗಿದೆ. ನೂತನ ಕೋಚ್​ಗಳ ಅವಧಿಯಲ್ಲಿ ಆಟಗಾರರ ಸಂಪೂರ್ಣ ಸಾಮರ್ಥ್ಯವನ್ನು ಹೊರತೆಗೆಯಲು ಮತ್ತು ಹಲವು ಪ್ರಯೋಗ ನಡೆಸಲು ಪಿಸಿಬಿ ಮುಕ್ತವಾದ ಬೆಂಗಲ ನೀಡಲಿದೆ” ಎಂದು ನಖ್ವಿ ಹೇಳಿದರು.

ಇದನ್ನೂ ಓದಿ Pakistan Cricket : ಪಾಕಿಸ್ತಾನ ಟಿ20 ತಂಡದಲ್ಲಿ ನಿಷೇಧಿತ ಆಟಗಾರನಿಗೂ ಸ್ಥಾನ!

ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ಮರು ನೇಮಕಗೊಂಡ ನಾಯಕ ಬಾಬರ್ ಅಜಂ ನೇತೃತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಸೇನೆಯೊಂದಿಗೆ ಇತ್ತೀಚೆಗೆ ತರಬೇತಿ ನಡೆಸಿತ್ತು. ಆರ್ಮಿ ತರಬೇತಿಯ ಅನುಭವ ಹಂಚಿಕೊಂಡ ಆಟಗಾರರು ಇದೇ ರೀತಿಯ ಅಭ್ಯಾಸ ನಡೆಸಿದರೆ ನಮ್ಮ ತಂಡ ಕೂಡ ಫುಲ್​ ಫಿಟ್​ ಆಗಲಿದೆ ಎಂದರು. ಕಳೆದ ವರ್ಷ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದ ವೇಗಿ ನಸೀಮ್ ಶಾ ಅವರು ಹಿಂದೆಂದು ಕೂಡ ಈ ರೀತಿಯ ಫಿಟ್​ನೆಸ್​ ತರಬೇತಿ ನಡೆಸಿಲ್ಲ ಎಂದಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೈಯದ್ ಮೊಹ್ಸಿನ್ ರಜಾ ನಖ್ವಿ(Syed Mohsin Naqvi) ಅವರ ನೇತೃತ್ವದಲ್ಲಿ ಈ ಪ್ರಯೋಗ ನಡೆಸಲಾಗಿತ್ತು. ನ್ಯೂಜಿಲ್ಯಾಂಡ್​ ವಿರುದ್ಧ ತವರಿನಲ್ಲೇ ನಡೆದ ಟಿ20 ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಂಡಿತ್ತು.

Continue Reading

ಕ್ರೀಡೆ

IPL 2024: 41ನೇ ವಯಸ್ಸಿನಲ್ಲೂ ದಾಖಲೆ ಬರೆದ ಅಮಿತ್ ಮಿಶ್ರಾ

IPL 2024: ರಾಜಸ್ಥಾನ್​ ರಾಯಲ್ಸ್​ ವಿರುದ್ಧ 2 ಓವರ್​ ಬೌಲಿಂಗ್​ ನಡೆಸಿದ ವಿಶ್ರಾ, 20 ರನ್​ ನೀಡಿ 1 ವಿಕೆಟ್​ ಕೀತ್ತು ಮಿಂಚಿದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿಕೆಟ್ ಪಡೆದ ಅತ್ಯಂತ ಹಿರಿಯ ಬೌಲರ್ ಮತ್ತು ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ.

VISTARANEWS.COM


on

IPL 2024
Koo

ಲಕ್ನೋ: ಶನಿವಾರ ರಾತ್ರಿ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​(Lucknow Super Giants) ತಂಡದ ಹಿರಿಯ ಸ್ಪಿನ್ನರ್​ ಅಮಿತ್ ಮಿಶ್ರಾ(Amit Mishra) ಅವರು ಐಪಿಎಲ್​ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ರಾಜಸ್ಥಾನ್​ ರಾಯಲ್ಸ್​(Rajasthan Royals) ವಿರುದ್ಧ 1 ವಿಕೆಟ್​ ಕೀಳುವ ಮೂಲಕ ಐಪಿಎಲ್​ನಲ್ಲಿ ವಿಕೆಟ್​ ಕಿತ್ತ ಅತಿ ಹಿರಿಯ ಆಟಗಾರ ಎನಿಸಿಕೊಂಡರು. 41ನೇ ವಯಸ್ಸಿನಲ್ಲಿ ಅಮಿತ್​ ಮಿಶ್ರಾ ಈ ಸಾಧನೆ ಮಾಡಿದ್ದಾರೆ.

2 ಓವರ್​ ಬೌಲಿಂಗ್​ ನಡೆಸಿದ ವಿಶ್ರಾ, 20 ರನ್​ ನೀಡಿ 1 ವಿಕೆಟ್​ ಕೀತ್ತು ಮಿಂಚಿದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿಕೆಟ್ ಪಡೆದ ಅತ್ಯಂತ ಹಿರಿಯ ಬೌಲರ್ ಮತ್ತು ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಲಸಿತ್ ಮಾಲಿಂಗ (173) ಅವರನ್ನು ಹಿಂದಿಕ್ಕಿದ್ದಾರೆ. ಇದುವರೆಗೆ ಐಪಿಎಲ್​ನಲ್ಲಿ 162 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅಮಿತ್ ಮಿಶ್ರಾ 174 ವಿಕೆಟ್ ಕಬಳಿಸಿದ್ದಾರೆ. ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆಯೂ ಮಾಡಿದ್ದಾರೆ. ಯಜುವೇಂದ್ರ ಚಹಲ್​ 200 ವಿಕೆಟ್​ ಕಿತ್ತು ಅಗ್ರಸ್ಥಾನದಲ್ಲಿದ್ದಾರೆ.

ಪಂದ್ಯ ಸೋತ ಲಕ್ನೋ

ಇಲ್ಲಿನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​​ ನಡೆಸಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್​ 6 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ಗೆ 199 ರನ್ ಬಾರಿಸಿ ಭರ್ಜರಿಗೆ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ರಾಜಸ್ಥಾನ್ ತಂಡ ರನ್ ಗಳಿಸುತ್ತಲೇ ಸಾಗಿತು. ಯಶಸ್ವಿ ಜೈಸ್ವಾಲ್​ 24 ರನ್ ಬಾರಿಸಿದರೆ ಜೋಸ್​ ಬಟ್ಲರ್​​ 34 ರನ್​ಗಳ ಕೊಡುಗೆ ಕೊಟ್ಟರು. ಆ ಬಳಿಕ ಬಂದ ಸಂಜು ಸ್ಯಾಮ್ಸನ್ ವಿಕೆಟ್​ ಉರುಳದಂತೆ ನೋಡಿಕೊಂಡ ಜತೆಗೆ 33 ಎಸೆತಗಳಲ್ಲಿ 71 ರನ್ ಬಾರಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್​ 14 ರನ್​ಗೆ ಸೀಮಿತಗೊಂಡರು. ಆದರೆ ಐದನೇ ಕ್ರಮಾಂಕದಲ್ಲಿ ಆಡಿದ ಧ್ರುವ್ ಜುರೆಲ್​ ಅಮೋಘ ಇನಿಂಗ್ಸ್ ಆಡಿದರು. ಅವರು 34 ಎಸೆತಕ್ಕೆ 52 ರನ್​ ಕೊಡುಗೆ ಕೊಟ್ಟರು. ಇದು ಹಾಲಿ ಅವೃತ್ತಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ.

ರಾಹುಲ್​ 31 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಈ ವೇಳೆ ಅವರು ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಐದನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯನ್ನು ಸಾಧಿಸಲು ಅವರು 94 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡರು. ಶಿಖರ್ ಧವನ್ (6362), ಡೇವಿಡ್ ವಾರ್ನರ್ (5909), ಕ್ರಿಸ್ ಗೇಲ್ (4480) ಮತ್ತು ವಿರಾಟ್ ಕೊಹ್ಲಿ (4041) ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Continue Reading

ಕ್ರೀಡೆ

T20 World Cup 2024: ಸಭೆ ನಡೆಸಿದ ರೋಹಿತ್​, ಅಗರ್ಕರ್​; ಈ ಆಟಗಾರನಿಗೆ ಅವಕಾಶವಿಲ್ಲ!

T20 World Cup 2024: ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಐಪಿಎಲ್​ ಪ್ರದರ್ಶನ ನೋಡಿ ಟಿ20ಯಲ್ಲಿ ಅವಕಾಶ ಸಿಗಬಹುದು ಎನ್ನಲಾಗಿತ್ತು. ಆದರೆ, ಅವರು ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

VISTARANEWS.COM


on

T20 World Cup 2024
Koo

ನವದೆಹಲಿ: ಕೆಲವು ದಿನಗಳಿಂದ ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿದ್ದ ಟಿ20 ವಿಶ್ವಕಪ್​ಗೆ(T20 World Cup 2024) ಟೀಮ್​ ಇಂಡಿಯಾ(Team India) ಪ್ರಕಟಗೊಳ್ಳುವ ವಿಚಾರದಲ್ಲಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್(Ajit Agarkar) ಮತ್ತು ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮಾ(Rohit Sharma) ಅವರು ದೆಹಲಿಯಲ್ಲಿ ಇಂದು ಸಭೆ ಸೇರಿ ಆಟಗಾರರ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯದ ಮಾಹಿತಿ ಪ್ರಕಾರ ಆರಂಭಿಕ ಆಟಗಾರನ ಸ್ಥಾನ ಮತ್ತು ವಿಕೆಟ್ ಕೀಪರ್ ಆಯ್ಕೆ ಹಾಗೂ ಆಲ್ ರೌಂಡರ್ ಕುರಿತು ಹೆಚ್ಚಿನ ಚರ್ಚೆಗಳಾಗಲಿದೆ ಎಂದು ತಿಳಿದುಬಂದಿದೆ. ಹಾರ್ದಿಕ್ ಪಾಂಡ್ಯ ಅವರು ಸಂಪೂರ್ಣ ಫಿಟ್​ ಆಗಿದ್ದರೆ ಮಾತ್ರ ಅವರಿಗೆ ಅವಕಾಶ ಎನ್ನಲಾಗಿದೆ. ಮೇ 1ರಂದು ತಂಡ ಅಧಿಕೃತವಾಗಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಇದೇ ಕಾರಣದಿಂದ ಆಯ್ಕೆ ಸಮಿತಿಯು ಭಾರತದ ಮೊದಲ ಸಂಭಾವ್ಯ ತಂಡವನ್ನು ಮೇ 1ರಂದು ಪ್ರಕಟಿಸಲಿದೆ ಎನ್ನಲಾಗಿದೆ. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

ಚಹಲ್​ಗೆ ಅವಕಾಶ ಅನುಮಾನ


ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಐಪಿಎಲ್​ ಪ್ರದರ್ಶನ ನೋಡಿ ಟಿ20ಯಲ್ಲಿ ಅವಕಾಶ ಸಿಗಬಹುದು ಎನ್ನಲಾಗಿತ್ತು. ಆದರೆ, ಅವರು ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೋಚಿಂಗ್ ಸ್ಟಾಫ್‌ ನ ಪ್ರಭಾವಿ ಸದಸ್ಯರಿಗೆ ಚಾಹಲ್ ಆದ್ಯತೆಯ ಆಯ್ಕೆಯಾಗಿಲ್ಲ ಎಂದು ವರದಿಯಾಗಿದೆ. ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ವಿಭಾಗದಲ್ಲಿ ಮೊದಲ ಆಯ್ಕೆಯಾಗಿದ್ದು, ಮೂರನೇ ಸ್ಪಿನ್ನರ್ ಸ್ಥಾನಕ್ಕೆ ಅಕ್ಷರ್ ಪಟೇಲ್ ಅಥವಾ ರವಿ ಬಿಷ್ಣೋಯಿ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್, ಐರ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ; ರಣಜಿ ತಂಡ ಕಾಣಲ್ಲವೇ ಎಂದ ಮೋಹನ್‌ದಾಸ್‌ ಪೈ

ಸದ್ಯಕ್ಕೆ ಆರಂಭಿಕ ಸ್ಥಾನಕ್ಕೆ ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​ ಮತ್ತು ಅಭಿಷೇಕ್​ ಶರ್ಮ, ಆಲ್​ರೌಂಡರ್​ ಕೋಟಾದಲ್ಲಿ ಶಿವಂ ದುಬೆ ಮತ್ತು ಹಾರ್ದಿಕ್​ ಪಾಂಡ್ಯ ನಡುವೆ ತೀವ್ರ ಪೈಪೋಟಿ ಇದೆ. ರೋಹಿತ್​ ಶರ್ಮ ಜತೆ ಕೊಹ್ಲಿ ಇನಿಂಗ್ಸ್​ ಆರಂಭಿಸಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

ರಿಷಭ್​ ಪಂತ್​ ಅವರು ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಆಗಿದ್ದರೆ, 2ನೇ ಕೀಪರ್ ಆಯ್ಕೆಗೆ ಒಟ್ಟು 4 ಮಂದಿ ಆಟಗಾರರ ನಡುವೆ ತೀವ್ರ ಸ್ಪರ್ಧೆ ಇದೆ. ರಾಹುಲ್​, ಜಿತೇಶ್​ ಶರ್ಮ, ಇಶಾನ್​ ಕಿಶನ್​ ಮತ್ತು ಸಂಜು ಸ್ಯಾಮ್ಸನ್ ಇವರಲ್ಲಿ ಒಬ್ಬರು ಆಯ್ಕೆಯಾಗಬಹುದು. ಈ ಬಾರಿಯ ಐಪಿಎಲ್‌ನಲ್ಲಿ ಶರವೇಗದ ಎಸೆತಗಳ ಮೂಲಕ ಭಾರೀ ಸಂಚಲನ ಮೂಡಿಸಿದ ಲಕ್ನೋ ತಂಡದ ಮಾಯಾಂಕ್‌ ಯಾದವ್‌ ಮತ್ತು ಹರ್ಷಿತ್​ ರಾಣಾ ಮೀಸಲು ಬೌಲರ್​ಗಳಾಗಿ ತಂಡದೊಂದಿಗೆ ಪ್ರಯಾಣಿಸಬಹುದು. ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್​ ಅಯ್ಯರ್​ಗೆ ಸ್ಥಾನ ಸಿಗುವುದು ಬಹುತೇಕ ಡೌಟ್​ ಎನ್ನಲಾಗಿದೆ.

ಈಗಾಗಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

Continue Reading

ಕ್ರೀಡೆ

IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

IPL 2024 Points Table: 17ನೇ ಆವೃತ್ತಿಯ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡ 16 ಅಂಕ ಗಳಿಸಿ ಪ್ಲೇ ಆಫ್​ ಟಿಕೆಟ್ ಬಹುತೇಕ​ ಖಚಿತಪಡಿಸಿಕೊಂಡಿದೆ.

VISTARANEWS.COM


on

IPL 2024 Points Table
Koo

ಬೆಂಗಳೂರು: ಶನಿವಾರ ನಡೆದ ಐಪಿಎಲ್​ನ ಡಬಲ್​ ಹೆಡರ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ಮತ್ತು ರಾಜಸ್ಥಾನ್(Rajasthan Royals)​ ರಾಯಲ್ಸ್​ ತಂಡಗಳು ಗೆಲುವು ಸಾಧಿಸಿದರೆ. ಲಕ್ನೋ ಸೂಪರ್​ ಜೈಂಟ್ಸ್(Lucknow Super Giants )​ ಮತ್ತು ಮುಂಬೈ ಇಂಡಿಯನ್ಸ್(Mumbai Indians)​​ ಸೋಲು ಕಂಡಿತು. ಈ ಸೋಲು ಮತ್ತು ಗೆಲುವಿನಿಂದ ಅಂಕಪಟ್ಟಿಯಲ್ಲಿ(IPL 2024 Points Table) ಮಹತ್ವದ ಬದಲಾವಣೆ ಸಂಭವಿಸಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​85310 (+0.972)
ಹೈದರಾಬಾದ್​​85310 (+0.577)
ಲಕ್ನೋ95410 (+0.059)
ಡೆಲ್ಲಿ105510 (0.276)
ಚೆನ್ನೈ8448 (+0.415)
ಗುಜರಾತ್​9458 (-0.974)
ಪಂಜಾಬ್9366 (-0.187)
ಮುಂಬೈ9366 (-0.261)
ಆರ್​ಸಿಬಿ9274 (-0.721)

ರಾಜಸ್ಥಾನ್​ಗೆ 7 ವಿಕೆಟ್​ ಗೆಲುವು


ಇಲ್ಲಿನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​​ ನಡೆಸಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್​ 6 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ಗೆ 199 ರನ್ ಬಾರಿಸಿ ಭರ್ಜರಿಗೆ ಗೆಲುವು ತನ್ನದಾಗಿಸಿಕೊಂಡಿತು. ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ರಾಜಸ್ಥಾನ್ ತಂಡ ರನ್ ಗಳಿಸುತ್ತಲೇ ಸಾಗಿತು. ಯಶಸ್ವಿ ಜೈಸ್ವಾಲ್​ 24 ರನ್ ಬಾರಿಸಿದರೆ ಜೋಸ್​ ಬಟ್ಲರ್​​ 34 ರನ್​ಗಳ ಕೊಡುಗೆ ಕೊಟ್ಟರು. ಆ ಬಳಿಕ ಬಂದ ಸಂಜು ಸ್ಯಾಮ್ಸನ್ ವಿಕೆಟ್​ ಉರುಳದಂತೆ ನೋಡಿಕೊಂಡ ಜತೆಗೆ 33 ಎಸೆತಗಳಲ್ಲಿ 71 ರನ್ ಬಾರಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್​ 14 ರನ್​ಗೆ ಸೀಮಿತಗೊಂಡರು. ಆದರೆ ಐದನೇ ಕ್ರಮಾಂಕದಲ್ಲಿ ಆಡಿದ ಧ್ರುವ್ ಜುರೆಲ್​ ಅಮೋಘ ಇನಿಂಗ್ಸ್ ಆಡಿದರು. ಅವರು 34 ಎಸೆತಕ್ಕೆ 52 ರನ್​ ಕೊಡುಗೆ ಕೊಟ್ಟರು. ಇದು ಹಾಲಿ ಅವೃತ್ತಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ.

ಇದನ್ನೂ ಓದಿ IPL 2024 : ಲಕ್ನೊ ವಿರುದ್ಧ ರಾಜಸ್ಥಾನ್​ಗೆ 7 ವಿಕೆಟ್​ ಭರ್ಜರಿ ಜಯ, ಪ್ಲೇಆಫ್​ ಹೊಸ್ತಿಲಲ್ಲಿ ಸಂಜು ಬಳಗ

ಡೆಲ್ಲಿಗೆ 10 ರನ್​ ಗೆಲುವು


ದಿನದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 10 ರನ್​ ಗೆಲುವು ಸಾಧಿಸಿತು. ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬಳಗ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ಗೆ 257 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ನಷ್ಟಕ್ಕೆ 247 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

Continue Reading
Advertisement
Drugs Smuggling
ದೇಶ53 seconds ago

Drugs Smuggling: ಗುಜರಾತ್‌ನಲ್ಲಿ ಪಾಕ್‌ನ 14 ಜನರ ಬಂಧನ, 600 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ!

Shiva Rajkumar Graces Muhurtha Of Father Kannada Movie
ಸ್ಯಾಂಡಲ್ ವುಡ್2 mins ago

Shiva Rajkumar: ಸೆಟ್ಟೇರಿತು ಶಿವರಾಜ್‌ಕುಮಾರ್‌ – ಆರ್ ಚಂದ್ರು ಕಾಂಬಿನೇಷನ್‌ನ ಹೊಸ ಸಿನಿಮಾ!

Hassan Pen Drive Case
ಕರ್ನಾಟಕ9 mins ago

Hassan Pen Drive Case: ಹಾಸನ ಅಶ್ಲೀಲ ವಿಡಿಯೊ ಪ್ರಕರಣ; ಬಿ.ಕೆ.ಸಿಂಗ್‌ ನೇತೃತ್ವದಲ್ಲಿ ಎಸ್‌ಐಟಿ ರಚನೆ

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202414 mins ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ದೇಶ29 mins ago

Trinmool Congress: ಟಿಎಂಸಿ ಕಾರ್ಯಕರ್ತನ ಭೀಕರ ಹತ್ಯೆ; ಬಿಜೆಪಿ ನಾಯಕಿ ಮೇಲೆ ಡೆಡ್ಲಿ ಅಟ್ಯಾಕ್‌!

Crime News
ವೈರಲ್ ನ್ಯೂಸ್35 mins ago

ನೆಚ್ಚಿನ ಶ್ವಾನ ಮರಿ ನಾಪತ್ತೆಯಾದ ಕೊರಗಿನಿಂದ ಆತ್ಮಹತ್ಯೆಗೆ ಶರಣಾದ 12 ವರ್ಷದ ಬಾಲಕಿ

Pakistan Cricket
ಕ್ರಿಕೆಟ್40 mins ago

Pakistan Cricket: ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್ ಪಾಕ್​ ತಂಡಕ್ಕೆ ನೂತನ ಕೋಚ್​

Amit Shah
ದೇಶ42 mins ago

Amit Shah: ಬಿಜೆಪಿ ಗೆದ್ದರೆ ಮುಸ್ಲಿಮರ ಮೀಸಲಾತಿ ಒಬಿಸಿಗೆ; ಅಮಿತ್‌ ಶಾ ಘೋಷಣೆ

Samantha Ruth Prabhu announces new film Bangaram
ಟಾಲಿವುಡ್60 mins ago

Samantha Ruth Prabhu: ಜನ್ಮದಿನದಂದೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟಿ ಸಮಂತಾ!

Aamir Khan talks about power of namaste
ಬಾಲಿವುಡ್1 hour ago

Aamir Khan: ನಾನು ಮುಸ್ಲಿಮನಾಗಿರುವುದರಿಂದ ʻನಮಸ್ತೆʼ ಹೇಳುವ ಅಭ್ಯಾಸವಿರಲಿಲ್ಲ ಎಂದ ಆಮೀರ್‌ ಖಾನ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202414 mins ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20245 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ8 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20241 day ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

ಟ್ರೆಂಡಿಂಗ್‌