Vinesh Phogat: ಇಂದು ರಾತ್ರಿ 9.30ಕ್ಕೆ ವಿನೇಶ್ ಫೋಗಟ್‌ ಬೆಳ್ಳಿ​ ಪದಕದ ಭವಿಷ್ಯ ನಿರ್ಧಾರ - Vistara News

ಕ್ರೀಡೆ

Vinesh Phogat: ಇಂದು ರಾತ್ರಿ 9.30ಕ್ಕೆ ವಿನೇಶ್ ಫೋಗಟ್‌ ಬೆಳ್ಳಿ​ ಪದಕದ ಭವಿಷ್ಯ ನಿರ್ಧಾರ

Vinesh Phogat: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್​​ ಅವರು ಶುಕ್ರವಾರ ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದು, ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕಗಳನ್ನು ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Vinesh Phogat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​: ಕೇವಲ 100 ಗ್ರಾಂ ತೂಕ ಹೆಚ್ಚಳವಾದ ಕಾರಣ ಒಲಿಂಪಿಕ್ಸ್‌ನಿಂದ(Paris Olympics 2024) ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಫೋಗಟ್‌(Vinesh Phogat) ತನಗೆ ಜಂಟಿ ಬೆಳ್ಳಿ ಪದಕ ನೀಡಬೇಕೆಂದು ಸಲ್ಲಿದ್ದ ಮನವಿಯ ವಿಚಾರಣೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ(CAS​) ಶುಕ್ರವಾರವೇ ಮುಕ್ತಾಯಗೊಳಿಸಿದೆ. ಇದೀಗ ಅಂತಿಮ ತೀರ್ಪು ಇಂದು ರಾತ್ರಿ 9.30ಕ್ಕೆ ಪ್ರಕಟಗೊಳ್ಳಲಿದೆ. ತಮ್ಮ ಪರ ಸಕಾರತ್ಮಕ ತೀರ್ಪು ವಿಶ್ವಾಸವನ್ನು ಭಾರತೀಯ ಒಲಿಂಪಿಕ್ಸ್​ ಸಂಸ್ಥೆ(ಐಒಎ) ವ್ಯಕ್ತಪಡಿಸಿದೆ. ಹರೀಶ್ ಸಾಳ್ವೆ ಅವರು ಸತತ ಒಂದು ಗಂಟೆಗಳ ಕಾಲ ವಾದ ಮಂಡಿಸಿದ್ದರು. ವಿನೇಶ್​ಗೆ ಪದಕ ಒಲಿಯಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ.

ಮಂಗಳವಾರ ನಡೆದ ಅರ್ಹತಾ ಸುತ್ತಿಗೂ ಮುನ್ನ ವಿನೇಶ್‌ ಅವರ ತೂಕವನ್ನು ಲೆಕ್ಕ ಮಾಡಲಾಗಿತ್ತು. ಈ ವೇಳೆ ಅವರು 49.9 ಕೆಜಿ ತೂಕವಿದ್ದರು. 3 ಬೌಟ್‌ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್‌ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್‌ ನಡೆಸಿ, ಸ್ಕಿಪ್ಪಿಂಗ್‌ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು.

ಪದಕ ನೀಡಲು ಸಾಧ್ಯವಿಲ್ಲ ಎಂದ ಥಾಮಸ್ ಬಾಕ್


ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್​​ ಅವರು ಶುಕ್ರವಾರ ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದು, ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕಗಳನ್ನು ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಚಿನ್ನದ ಪದಕದ ಪಂದ್ಯಕ್ಕೆ ಮುಂಚಿತವಾಗಿ ಅನರ್ಹಗೊಂಡ ಭಾರತೀಯ ಕುಸ್ತಿಪಟುವಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ ಎಂಬುದಾಗಿ ನುಡಿದಿದ್ದಾರೆ. ಪ್ಯಾರಿಸ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಥಾಮಸ್, ಸಿಎಎಸ್ ನಿರ್ಧಾರಕ್ಕೆ ಐಒಸಿ ಬದ್ಧವಾಗಿರುತ್ತದೆ ಎಂದು ಹೇಳಿದರು. ಎರಡು ಬೆಳ್ಳಿ ಪದಕಗಳನ್ನು ನೀಡುವುದು ತಪ್ಪು ಎಂದರು.

ಅಂತಾರಾಷ್ಟ್ರೀಯ ಒಕ್ಕೂಟದ ನಿಯಮಗಳನ್ನು ಎಲ್ಲರೂ ಅನುಸರಿಸಬೇಕು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಫೆಡರೇಶನ್, ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಕುಸ್ತಿಪಟು ನಿರ್ದಿಷ್ಟ ತಿಳುವಳಿಕೆಯನ್ನು ಹೊಂದಿರಬೇಕು. ಮಾನವೀಯತೆ ಸರಿಯಾಗಿರಬಹುದು. ಆದರೆ, ಒಕ್ಕೂಟ ಅಥವಾ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾದಾಗ ಎಲ್ಲರವನ್ನೂ ಗೌರವಿಸಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

ಪದಕ ನೀಡುವಂತೆ ಸಚಿನ್​ ಒತ್ತಾಯ

ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿನೇಶ್​ಗೆ ಬೆಂಬಲ ನೀಡಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ. ವಿನೇಶ್ ಫೈನಲ್​​​ಗೆ ನ್ಯಾಯಯುತವಾಗಿ ಅರ್ಹತೆ ಪಡೆದಿದ್ದಾರೆ. ಹೀಗಾಗಿ ಅರ್ಹ ಪದಕವನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸಾಮರ್ಥ್ಯ ವರ್ಧನೆಯ ಔಷಧಿಗಳ ಬಳಕೆಯಂತಹ ದುಷ್ಕೃತ್ಯಗಳಾಗಿದ್ದರೆ ಅನರ್ಹತೆ ಅರ್ಥಪೂರ್ಣವಾಗುತ್ತಿತ್ತು ಎಂದು ಕ್ರಿಕೆಟ್ ದಂತಕಥೆ ಹೇಳಿದ್ದಾರೆ. ವಿನೇಶ್ ಗೆ ಅರ್ಹ ಮನ್ನಣೆ ಸಿಗುತ್ತದೆ ಎಂದು ಆಶಿಸುವ ಮೂಲಕ ತೆಂಡೂಲ್ಕರ್ ತಮ್ಮ ಹೇಳಿಕೆ ಕೊನೆಗೊಳಿಸಿದರು.

ಪ್ರತಿಯೊಂದು ಕ್ರೀಡೆಗೂ ನಿಯಮಗಳಿವೆ. ಆ ನಿಯಮಗಳನ್ನು ಸಂದರ್ಭಕ್ಕೆ ಅನುಗುಣವಾಗಿ ನೋಡಬೇಕು. ನಿಯಮಗಳನ್ನು ಕಾಲಕಾಲಕ್ಕೆ ಮರುಪರಿಶೀಲಿಸಬಹುದು. ವಿನೇಶ್ ಫೋಗಟ್ ಫೈನಲ್​ಗೆ ಅರ್ಹತೆ ಪಡೆದಿದ್ದರು. ಬಳಿಕ ಹೆಚ್ಚು ತೂಕದ ಆಧಾರದ ಮೇಲೆ ಅವರನ್ನು ಅನರ್ಹಗೊಳಿಸಲಾಯಿತು. ಅವರಿಂದ ಬೆಳ್ಳಿ ಪದಕವನ್ನು ಕಸಿದುಕೊಳ್ಳುವುದು ಕ್ರೀಡಾ ಪ್ರಜ್ಞೆಯನ್ನು ಉಲ್ಲಂಘನೆ ಎಂದು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Smriti Mandhana : ವಿರಾಟ್​ ಕೊಹ್ಲಿ ಜತೆ ನನ್ನನ್ನು ಹೋಲಿಕೆ ಮಾಡಬೇಡಿ; ಸ್ಮೃತಿ ಮಂದಾನ ಮನವಿ

Smriti Mandhana : ಮಂದಾನ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಕ್ರಮವಾಗಿ ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ. ಅವರಿಬ್ಬರ ಅದೇ ಜರ್ಸಿ ಸಂಖ್ಯೆ 18 . ಅನೇಕ ಅಭಿಮಾನಿಗಳು ಮತ್ತು ತಜ್ಞರು ಸ್ಮೃತಿಯನ್ನು ಕೊಹ್ಲಿಗೆ ಹೋಲಿಕೆ ಮಾಡುತ್ತಲೇ ಇದ್ದಾರೆ. ಅವರಿಬ್ಬರೂ ಒಂದೇ ರೀತಿಯ ವರ್ತನೆ ಮತ್ತು ಶೈಲಿಯನ್ನೂ ಹೊಂದಿದ್ದಾರೆ. ಆಟದ ಬಗ್ಗೆ ಭಾವೋದ್ರಿಕ್ತರಾಗುತ್ತಾರೆ.

VISTARANEWS.COM


on

Smriti Mandhana
Koo

ನವದೆಹಲಿ: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಜತೆ ತನ್ನನ್ನು ಹೋಲಿಕೆ ಮಾಡಬಾರದಾಗಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ (Smriti Mandhana) ಮನವಿ ಮಾಡಿದ್ದಾರೆ. ತಾವು ಧರಿಸುವ ನಂ.18 ಜರ್ಸಿಯ ಆಧಾರದ ಮೇಲೆ ಜನರು ಅವಳನ್ನು ಅವನೊಂದಿಗೆ ಹೋಲಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂದಾನ ಅವರನ್ನು ಭಾರತೀಯ ಕ್ರಿಕೆಟ್​ನ ರಾಣಿ ಎಂದು ಕರೆಯಲಾಗುತ್ತದೆ. ಏಕೆಂದರೆ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರು.

ವಿರಾಟ್ ಕೊಹ್ಲಿ ಅವರು ಕ್ರಿಕೆಟ್​ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾಗಿರುವುದರಿಂದ ಅವರಿಗೆ ಯಾವುದೇ ಹೋಲಿಕೆ ಇಲ್ಲ. ಸಚಿನ್ ತೆಂಡೂಲ್ಕರ್ ಮತ್ತು ವಿವಿಯನ್ ರಿಚರ್ಡ್ಸ್ ಅವರಂತೆಯೇ ಅವರು ಪ್ರತ್ಯೇಕ ಕ್ರಿಕೆಟ್ ಅಧ್ಯಾಯ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ.

ಮಂದಾನ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಕ್ರಮವಾಗಿ ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ. ಅವರಿಬ್ಬರ ಅದೇ ಜರ್ಸಿ ಸಂಖ್ಯೆ 18 . ಅನೇಕ ಅಭಿಮಾನಿಗಳು ಮತ್ತು ತಜ್ಞರು ಸ್ಮೃತಿಯನ್ನು ಕೊಹ್ಲಿಗೆ ಹೋಲಿಕೆ ಮಾಡುತ್ತಲೇ ಇದ್ದಾರೆ. ಅವರಿಬ್ಬರೂ ಒಂದೇ ರೀತಿಯ ವರ್ತನೆ ಮತ್ತು ಶೈಲಿಯನ್ನೂ ಹೊಂದಿದ್ದಾರೆ. ಆಟದ ಬಗ್ಗೆ ಭಾವೋದ್ರಿಕ್ತರಾಗುತ್ತಾರೆ.

ಸ್ಮೃತಿ ಮಂದಾನ ಅವರು ಹೋಲಿಕೆಗಳನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿಯನ್ನು ಶ್ರೇಷ್ಠ ಆಟಗಾರ ಎಂದು ಕರೆದ ಅವರು, ಅವರು ಸಾಕಷ್ಟು ಸಾಧನೆ ಮಾಡಿರುವುದರಿಂದ ಜನರು ನನ್ನನ್ನು ಕೊಹ್ಲಿ ಎಂದು ಕರೆಯುವುದು ಆಧಾರರಹಿತ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ. ಅವರು ತಮ್ಮ ವೃತ್ತಿಜೀವನದಲ್ಲಿ ಭಾರತೀಯ ಕ್ರಿಕೆಟ್​ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ. ನಾನು ಹೋಲಿಕೆಗಳನ್ನು ಇಷ್ಟಪಡುವುದಿಲ್ಲ, ನಾನು ನಂ.18 ಜರ್ಸಿ ಧರಿಸಿದ್ದೇನೆ ಎಂಬ ಕಾರಣಕ್ಕೆ ಅವನನ್ನು ನನ್ನೊಂದಿಗೆ ಹೋಲಿಸಬೇಡಿ ಎಂದು ಮಂದಾನ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.

2024ರ ಟಿ20 ವಿಶ್ವಕಪ್​ಲ್ಲಿ ಕಣಕ್ಕಿಳಿಯಲಿದ್ದಾರೆ ಸ್ಮೃತಿ

ಕಳೆದ ಕೆಲವು ತಿಂಗಳುಗಳಿಂದ ಸ್ಮೃತಿ ಮಂದಾನ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬ್ಯಾಟರ್​ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡಕ್ಕಾಗಿ ನಿರಂತರ ರನ್​ಗಳನ್ನು ಗಳಿಸುತ್ತಿದ್ದಾರೆ. ವೈಟ್-ಬಾಲ್ ಮತ್ತು ರೆಡ್-ಬಾಲ್ ಕ್ರಿಕೆಟ್​​ನಲ್ಲಿ ತಂಡದ ಪ್ರಾಬಲ್ಯಕ್ಕೆ ಅವರೂ ಕಾರಣ.

ಸ್ಮೃತಿ ಮಂದಾನ 2024ರ ಟಿ20 ವಿಶ್ವಕಪ್​​ನಲ್ಲಿ ಆಡಲಿದ್ದಾರೆ. ಬ್ಯಾಟ್ಸ್ಮನ್ ಪಂದ್ಯಾವಳಿಯಲ್ಲಿ ಬ್ಯಾಟಿಂಗ್​ ಫಾರ್ಮ್ ಮುಂದುವರಿಸಲು ಉತ್ಸುಕರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಮಾಡುತ್ತಿರುವ ಪ್ರದರ್ಶನವನ್ನು ಮುಂದುವರಿಸಿದರೆ, ಭಾರತವು ಪ್ರಶಸ್ತಿ ಗೆಲ್ಲಬಹುದು.

ಇದನ್ನೂ ಓದಿ: Saina Nehwal : ನನ್ನ ಸ್ಮ್ಯಾಶ್​ ತಡೆಯಲು ಬುಮ್ರಾಗೆ ಸಾಧ್ಯವಿಲ್ಲ; ಕ್ರಿಕೆಟ್​ಗೆ ಹೆಚ್ಚು ಆದ್ಯತೆ ಬಗ್ಗೆ ತಕರಾರು ಎತ್ತಿದ ಸೈನಾ ನೆಹ್ವಾಲ್​

ಅಕ್ಟೋಬರ್ 3 ರಿಂದ 20 ರವರೆಗೆ ಏಷ್ಯನ್ ಕೌಂಟಿಯಲ್ಲಿ ಪಂದ್ಯಾವಳಿ ನಡೆಯಲಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯು 18 ದಿನಗಳ ಕಾಲ ನಡೆಯಲಿದ್ದು, 10 ತಂಡಗಳು ಬಾಂಗ್ಲಾದೇಶದ ಎರಡು ಸ್ಥಳಗಳಲ್ಲಿ 23 ಪಂದ್ಯಗಳನ್ನು ಆಡಲಿವೆ.

Continue Reading

ಪ್ರಮುಖ ಸುದ್ದಿ

Saina Nehwal : ನನ್ನ ಸ್ಮ್ಯಾಶ್​ ತಡೆಯಲು ಬುಮ್ರಾಗೆ ಸಾಧ್ಯವಿಲ್ಲ; ಕ್ರಿಕೆಟ್​ಗೆ ಹೆಚ್ಚು ಆದ್ಯತೆ ಬಗ್ಗೆ ತಕರಾರು ಎತ್ತಿದ ಸೈನಾ ನೆಹ್ವಾಲ್​

Saina Nehwal : ಕ್ರಿಕೆಟ್ ಮತ್ತು ಇತರ ಭಾರತೀಯ ಕ್ರೀಡೆಗಳ ನಡುವಿನ ಅಸಮಾನತೆ ಕಡಿಮೆಯಾಗಿ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡಿದರೆ, ಅವರು ದೇಶಕ್ಕೆ ಹೆಚ್ಚಿನ ಪದಕ ತರಲು ಸಾಧ್ಯವಾಗುತ್ತದೆ ಎಂದು ಸೈನಾ ನೆಹ್ವಾಲ್ ಗಮನಸೆಳೆದರು.

VISTARANEWS.COM


on

Saina Nehwal
Koo

ಬೆಂಗಳೂರು : 2012 ರ ಲಂಡನ್ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ (Saina Nehwal), ಭಾರತದಲ್ಲಿ ಇತರ ಕ್ರೀಡೆಗಳಿಗಿಂತ ಕ್ರಿಕೆಟ್ ಗೆ ಹೆಚ್ಚಿನ ಸೌಲಭ್ಯಗಳು ಮತ್ತು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಮತ್ತೊಮ್ಮೆ ತಕರಾರರು ತೆಗೆದಿದ್ದಾರೆ. ಇತ್ತೀಚೆಗೆ, ಕೆಕೆಆರ್​ನ ಯುವ ಬ್ಯಾಟರ್​​ ಆಂಗ್ರಿಶ್ ರಘುವಂಶಿ ಅವರು ಸೈನಾ ನೆಹ್ವಾಲ್ ಅವರನ್ನು ಅಣಕಿಸುವ ಟ್ವೀಟ್ ಮಾಡಿದ್ದರು. ಅದರಿಂದ ಬೇಸರಗೊಂಡಿರುವ ನೆಹ್ವಾಲ್​ ಪರೋಕ್ಷವಾಗಿ ಕ್ರಿಕೆಟ್​ ಕ್ಷೇತ್ರಕ್ಕೆ ಟಾಂಗ್ ಕೊಟ್ಟಿದ್ದಾರೆ. ಕ್ರಿಕೆಟರ್​ಗಳಿಂತ ಉಳಿದ ಕ್ರೀಡಾಕೂಟಗಳ ಆಟಗಾರರೇ ಹೆಚ್ಚು ಶ್ರಮ ವಹಿಸುತ್ತಾರೆ. ನನ್ನ ಸ್ಮ್ಯಾಶ್ ತಡೆದುಕೊಳ್ಳುವುದಕ್ಕೂ ಜಸ್​ಪ್ರಿತ್​​ ಬುಮ್ರಾಗೆ ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ.

“ವಿರಾಟ್ ಕೊಹ್ಲಿ ಆ ಮಟ್ಟದಲ್ಲಿ ಬೆಳೆದಿದ್ದು ಹೇಗೆ? ಎಲ್ಲರೂ ಏಕೆ ರೋಹಿತ್ ಶರ್ಮಾ ರೀತಿ ಆಗಲು ಬಯಸುತ್ತಾರೆ. ಆದರೆ ಕೆಲವರಿಗಷ್ಟೇ ಆ ರೀತಿ ಆಗಲು ಸಾಧ್ಯವಾಗುತ್ತದೆ. ಅದು ಕೌಶಲ್ಯ ಆಧಾರಿತ ಕ್ರೀಡೆ ಎಂದು ನಾನು ಭಾವಿಸುತ್ತೇನೆ. ನಾನ್ಯಾಕೆ ಬೌಲರ್​ಗಳನ್ನು ಎದುರಿಸಬೇಕು ಎಂದು ಸೈನಾ ಪ್ರಶ್ನಿಸಿದ್ದಾರೆ. (ಅಂಗ್​ಕ್ರಿಶ್​ ಸೈನಾ ಅವರನ್ನು ಲೇವಡಿ ಮಾಡುವ ಭರದಲ್ಲಿ ಬುಮ್ರಾ ಅವರ ಬೌಲಿಂಗ್ ಎದುರಿಸಲಿ ಎಂದು ಸವಾಲೊಡ್ಡಿದ್ದರು) ನಾನು 8 ವರ್ಷಗಳಿಂದ ಆಡುತ್ತಿದ್ದರೆ, ಬಹುಶಃ ನಾನು ಜಸ್ಪ್ರೀತ್ ಬುಮ್ರಾಗೆ ಉತ್ತರಿಸುತ್ತಿದ್ದೆ”ಎಂದು ಸೈನಾ ನೆಹ್ವಾಲ್ ಶುಭಂಕರ್ ಮಿಶ್ರಾ ಅವರ ಪಾಡ್​ಕಾಸ್ಟ್​​ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಇತ್ತೀಚೆಗೆ ರಾಜಕಾರಣಿಯಾಗಿ ಮಾರ್ಪಟ್ಟ ಸೈನಾ ನೆಹ್ವಾಲ್, ದೇಶದಲ್ಲಿ ಇಂತಹ ವಿಷಯಗಳಿಗಾಗಿ ಪೈಪೋಟಿ ಮಾಡಬಾರದು. ಪ್ರತಿಯೊಂದು ಕ್ರೀಡೆಯೂ ಪ್ರವರ್ಧಮಾನಕ್ಕೆ ಬರಲು ಅವಕಾಶ ಇರಬೇಕು ಎಂದು ಹೇಳಿದರು.

“ಜಸ್ಪ್ರೀತ್ ಬುಮ್ರಾ ನನ್ನೊಂದಿಗೆ ಬ್ಯಾಡ್ಮಿಂಟನ್ ಆಡಿದರೆ ಬಹುಶಃ ಅವರು ನನ್ನ ಸ್ಮಾಶ್ ತೆಗೆದುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಈ ವಿಷಯಗಳಿಗಾಗಿ ನಾವು ನಮ್ಮ ಸ್ವಂತ ದೇಶದಲ್ಲಿ ನಮ್ಮೊಂದಿಗೆ ಜಗಳವಾಡಬಾರದು. ಅದನ್ನೇ ನಾನು ಹೇಳಲು ಬಯಸುತ್ತೇನೆ. ಪ್ರತಿಯೊಂದು ಕ್ರೀಡೆಯೂ ಅದರ ಸ್ಥಾನದಲ್ಲಿ ಅತ್ಯುತ್ತಮವಾಗಿದೆ. ಆದರೆ ಇತರ ಕ್ರೀಡೆಗಳಿಗೂ ಮೌಲ್ಯ ನೀಡಿ ಎಂದು ನಾನು ಹೇಳಲು ಬಯಸುತ್ತೇನೆ. ಇಲ್ಲದಿದ್ದರೆ, ನಾವು ಕ್ರೀಡಾ ಸಂಸ್ಕೃತಿಯನ್ನು ಎಲ್ಲಿಂದ ಬೆಳೆಸುತ್ತೇವೆ. ಕ್ರಿಕೆಟ್, ಬಾಲಿವುಡ್ ಯಾವಾಗಲೂ ನಮ್ಮ ಉದ್ದೇಶವಾಗಿರುತ್ತದೆ ಎಂದು 2012 ರ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಹೇಳಿದರು.

ಇದನ್ನೂ ಓದಿ: Neeraj Chopra : ನೀರಜ್ ಚೋಪ್ರಾ ಭೇಟಿಯಾದ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ

ಕ್ರಿಕೆಟ್ ಮತ್ತು ಇತರ ಭಾರತೀಯ ಕ್ರೀಡೆಗಳ ನಡುವಿನ ಅಸಮಾನತೆ ಕಡಿಮೆಯಾಗಿ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡಿದರೆ, ಅವರು ದೇಶಕ್ಕೆ ಹೆಚ್ಚಿನ ಪದಕ ತರಲು ಸಾಧ್ಯವಾಗುತ್ತದೆ ಎಂದು ಸೈನಾ ನೆಹ್ವಾಲ್ ಗಮನಸೆಳೆದರು.

“ನಮ್ಮಲ್ಲಿ ಎಷ್ಟು ಬ್ಯಾಡ್ಮಿಂಟನ್ ಅಕಾಡೆಮಿಗಳಿವೆ? ಕ್ರಿಕೆಟ್​ನಲ್ಲಿ ಎಷ್ಟು ಇಲ್ಲ ಎಂದು ಯೋಚಿಸಿ… ಬ್ಯಾಡ್ಮಿಂಟನ್​ಗಾಗಿ ಅತ್ಯುತ್ತಮ ಸೌಲಭ್ಯಗಳಿರುವ ಅನೇಕ ಅಕಾಡೆಮಿಗಳು ಇದ್ದರೆ ನಾವು ಗುಣಮಟ್ಟದ ಆಟಗಾರರನ್ನು ಪಡೆಯಲು ಸಾಧ್ಯ ಎಂಬುದಾಗಿ ಅವರು ಹೇಳಿದ್ದಾರೆ.

Continue Reading

ಕ್ರೀಡೆ

Neeraj Chopra : ನೀರಜ್ ಚೋಪ್ರಾ ಭೇಟಿಯಾದ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ

Neeraj Chopra : ಗುರುವಾರ ನಡೆದ 2024 ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿನ ಜಾವೆಲಿನ್​ ಥ್ರೋ ಫೈನಲ್​​​ನಲ್ಲಿ 89.45 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗಳಿಸಿದರು. ಇದು ಟೋಕಿಯೊ 2020 ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್​ಗೆ ಸಿಕ್ಕಿದ ಇನ್ನೊಂದು ಪದಕವಾಗಿದೆ. ಪ್ಯಾರಿಸ್ 2024 ಒಲಿಂಪಿಕ್ಸ್​​ನಲ್ಲಿ ಅರ್ಷದ್ ನದೀಮ್ ತಮ್ಮ ಎರಡನೇ ಪ್ರಯತ್ನದಲ್ಲಿ 92.97 ಮೀಟರ್ ಎಸೆಯುವ ಮೂಲಕ ಒಲಿಂಪಿಕ್ ದಾಖಲೆ ನಿರ್ಮಿಸಿ ಚಿನ್ನ ಗೆದ್ದರು

VISTARANEWS.COM


on

Neeraj Chopra
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಅಥ್ಲೀಟ್ ನೀರಜ್ ಚೋಪ್ರಾ (Neeraj Chopra) ಅವರನ್ನು ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಸುನಿಲ್ ಛೆಟ್ರಿ ಭೇಟಿಯಾಗಿ ಶುಭ ಹಾರೈಸಿದರು. ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಭೇಟಿಯಾಗಲು ಛೆಟ್ರಿ ಪ್ಯಾರಿಸ್ ಪ್ರಯಾಣಿಸಿದ್ದರು. ಸತತ ಒಲಿಂಪಿಕ್ಸ್​​ನಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದಾರೆ.

ಗುರುವಾರ ನಡೆದ 2024 ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿನ ಜಾವೆಲಿನ್​ ಥ್ರೋ ಫೈನಲ್​​​ನಲ್ಲಿ 89.45 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗಳಿಸಿದರು. ಇದು ಟೋಕಿಯೊ 2020 ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್​ಗೆ ಸಿಕ್ಕಿದ ಇನ್ನೊಂದು ಪದಕವಾಗಿದೆ. ಪ್ಯಾರಿಸ್ 2024 ಒಲಿಂಪಿಕ್ಸ್​​ನಲ್ಲಿ ಅರ್ಷದ್ ನದೀಮ್ ತಮ್ಮ ಎರಡನೇ ಪ್ರಯತ್ನದಲ್ಲಿ 92.97 ಮೀಟರ್ ಎಸೆಯುವ ಮೂಲಕ ಒಲಿಂಪಿಕ್ ದಾಖಲೆ ನಿರ್ಮಿಸಿ ಚಿನ್ನ ಗೆದ್ದರು. ಆದರ ನೀರಜ್​ ಗೆದ್ದಿರುವ ಬೆಳ್ಳಿ ಭಾರತದ ಪಾಲಿಗೆ ಬಹುಮುಖ್ಯವಾಗಿದೆ. ಅಂತೆಯೇ ನೀರಜ್ ಅವರನ್ನು ಭೇಟಿಯಾದ ಛೆಟ್ರಿ ಅಭಿನಂದನೆ ಸಲ್ಲಿಸಿದರು.

ಈ ಸಾಧನೆಯು ಒಲಿಂಪಿಕ್ಸ್​ನಲ್ಲಿ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳ ಎಲೈಟ್ ಗುಂಪಿಗೆ ನೀರಜ್ ಅವರನ್ನು ಸೇರಿಸಿದೆ. ಇದಕ್ಕೂ ಮುನ್ನ ಸುಶೀಲ್ ಕುಮಾರ್ (ಕುಸ್ತಿ) ಮತ್ತು ಪಿ.ವಿ.ಸಿಂಧು (ಬ್ಯಾಡ್ಮಿಂಟನ್) ಮಾತ್ರ ಎರಡೆದರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ನಾರ್ಮನ್ ಪ್ರಿಚರ್ಡ್ , ಸುಶೀಲ್ ಕುಮಾರ್, ಪಿ.ವಿ.ಸಿಂಧು ಮತ್ತು ಮನು ಭಾಕರ್ ಅವರ ಸಾಲಿಗೆ ಸೇರಿರುವ ನೀರಜ್ ಒಲಿಂಪಿಕ್ಸ್ ನಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಐದನೇ ಭಾರತೀಯರಾಗಿದ್ದಾರೆ.

ಇದನ್ನೂ ಓದಿ: Rahul Dravid : ಕೋಚಿಂಗ್​ ಅವಧಿಯ ಅತ್ಯಂತ ಕೆಟ್ಟ ಸರಣಿಯನ್ನು ವಿವರಿಸಿದ ರಾಹುಲ್ ದ್ರಾವಿಡ್​

ಪುರುಷರ ಜಾವೆಲಿನ್ ಫೈನಲ್​​ನಲ್ಲಿ ನೀರಜ್ ಚೋಪ್ರಾ ದೀರ್ಘಕಾಲದ ಸೊಂಟದ ಗಾಯಕ್ಕೆ ಚಿಕಿತ್ಸೆ ಪಡೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. ಕಳೆದ ಕೆಲವು ತಿಂಗಳುಗಳಿಂದ ಶಸ್ತ್ರಚಿಕಿತ್ಸೆಯ ಬಗ್ಗೆ ಯೋಚಿಸಿದ ನಂತರ ಜಾವೆಲಿನ್ ಸೂಪರ್​ಸ್ಟಾರ್​ ಒಲಿಂಪಿಕ್ಸ್​ ಮುಗಿದ ಬಳಿಕ ನಿರ್ಧಾರಕ್ಕೆ ಬಂದಿದ್ದಾರೆ.

Continue Reading

ಪ್ರಮುಖ ಸುದ್ದಿ

Rahul Dravid : ಕೋಚಿಂಗ್​ ಅವಧಿಯ ಅತ್ಯಂತ ಕೆಟ್ಟ ಸರಣಿಯನ್ನು ವಿವರಿಸಿದ ರಾಹುಲ್ ದ್ರಾವಿಡ್​

Rahul Dravid : ಸೆಂಚೂರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 113 ರನ್​ಗಳಿಂದ ಗೆಲ್ಲುವ ಮೂಲಕ ಭಾರತ ತಂಡವು ಪ್ರವಾಸವನ್ನು ಉತ್ತಮವಾಗಿ ಪ್ರಾರಂಭಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊದಲ ಸರಣಿಯನ್ನು ಗೆಲ್ಲುವ ಅಂಚಿನಲ್ಲಿತ್ತು. ಆದಾಗ್ಯೂ, ದಕ್ಷಿಣ ಆಫ್ರಿಕಾ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಪುನರಾಗಮನ ಮಾಡಿತು. ತವರಿನಲ್ಲಿ ಭಾರತದ ವಿರುದ್ಧ ಅಜೇಯ ಗೆಲುವು ದಾಖಲಿಸಿತು.

VISTARANEWS.COM


on

Rahul Dravid
Koo

ನವದೆಹಲಿ: ಭಾರತದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ತಮ್ಮ ಕೋಚಿಂಗ್ ಅವಧಿಯ ಅತ್ಯಂತ ಕೆಟ್ಟ ಸೋಲನ್ನು ನೆನಪಿಸಿಕೊಂಡಿದ್ದಾರೆ. ಅವರ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲದಿರುವುದೇ ಅತ್ಯಂತ ಬೇಸರದ ವಿಷಯವಾಗಿದೆ. ವಿಶೇಷ ಏನೆಂದರೆ ದ್ರಾವಿಡ್ ಅವರನ್ನು ನವೆಂಬರ್ 2021 ರಲ್ಲಿ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸ್ವಲ್ಪ ಮುಂಚಿತವಾಗಿ ಭಾರತದ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ಆರಂಭದಲ್ಲೇ ಅವರಿಗೆ ಹಿನ್ನಡೆಯಾಗಿತ್ತು.

ಸೆಂಚೂರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 113 ರನ್​ಗಳಿಂದ ಗೆಲ್ಲುವ ಮೂಲಕ ಭಾರತ ತಂಡವು ಪ್ರವಾಸವನ್ನು ಉತ್ತಮವಾಗಿ ಪ್ರಾರಂಭಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊದಲ ಸರಣಿಯನ್ನು ಗೆಲ್ಲುವ ಅಂಚಿನಲ್ಲಿತ್ತು. ಆದಾಗ್ಯೂ, ದಕ್ಷಿಣ ಆಫ್ರಿಕಾ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಪುನರಾಗಮನ ಮಾಡಿತು. ತವರಿನಲ್ಲಿ ಭಾರತದ ವಿರುದ್ಧ ಅಜೇಯ ಗೆಲುವು ದಾಖಲಿಸಿತು.

ಸರಣಿಯನ್ನು ನೆನಪಿಸಿಕೊಂಡ ದ್ರಾವಿಡ್, ಇದು ಅತ್ಯಂತ ಕೆಟ್ಟ ಪ್ರದರ್ಶನ ಎಂದು ಹೇಳಿದರು.

“ಅತ್ಯಂತ ಕಡಿಮೆ ಅಂಕ ನೀಡುವ ತಮ್ಮ ಸರಣಿ ಯಾವುದು ಎಂದು ನೀವು ನನ್ನನ್ನು ಕೇಳಿದರೆ, ನನ್ನ ವೃತ್ತಿಜೀವನದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಎಂದು ನಾನು ಹೇಳುತ್ತೇನೆ. ನಾವು ಸೆಂಚೂರಿಯನ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿದ್ದೆವು. ನಂತರ ನಾವು ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದೆವು. ನಿಮಗೆ ತಿಳಿದಿರುವಂತೆ ನಾವು ದಕ್ಷಿಣ ಆಫ್ರಿಕಾದಲ್ಲಿ ಎಂದಿಗೂ ಸರಣಿಯನ್ನು ಗೆದ್ದಿಲ್ಲ. ಆ ಸರಣಿಯನ್ನು ಗೆಲ್ಲಲು ಇದು ನಮಗೆ ನಿಜವಾಗಿಯೂ ದೊಡ್ಡ ಅವಕಾಶವಾಗಿತ್ತು. ನಮ್ಮ ಕೆಲವು ಹಿರಿಯ ಆಟಗಾರರು ಅಲ್ಲಿ ಇರಲಿಲ್ಲ, “ಎಂದು ದ್ರಾವಿಡ್ ಹೇಳಿದ್ದಾರೆ.

ಸರಣಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಅವಕಾಶವಿದೆ. ಪಂದ್ಯವನ್ನು ಮುಕ್ತಾಯಗೊಳಿಸಲು ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಗುರಿಯನ್ನು ನಿಗದಿಪಡಿಸಬಹುದಿತ್ತು ಎಂದು ಅವರು ಬಹಿರಂಗಪಡಿಸಿದರು.

ಸರಣಿಯಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಆ ಸರಣಿಯಲ್ಲಿ ನಾವು ಕೆಲವು ಹಿರಿಯ ಆಟಗಾರರ ಸೇವೆ ಕಳೆದುಕೊಂಡಿದ್ದೆವು. ಆದರೂ ಗೆಲುವಿಗೆ ಹತ್ತಿರದಲ್ಲಿದ್ದೆವು. ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಗಳಲ್ಲಿ ಮೂರನೇ ಇನ್ನಿಂಗ್ಸ್​ನಲ್ಲಿ ನಮಗೆ ದೊಡ್ಡ ಅವಕಾಶವಿತ್ತು. ನಾವು ಯೋಗ್ಯವಾದ ಸ್ಕೋರ್ ಅನ್ನು ಹೊಂದಿಸಬಹುದಿತ್ತು ಮತ್ತು ಪಂದ್ಯವನ್ನು ಗೆಲ್ಲಬಹುದಿತ್ತು. ಆದರೆ ದಕ್ಷಿಣ ಆಫ್ರಿಕಾ ಉತ್ತಮವಾಗಿ ಆಡಿತು. ಅವರು ನಾಲ್ಕನೇ ಇನ್ನಿಂಗ್ಸ್ ನಲ್ಲಿ ಹಿನ್ನಡೆಯಾಯಿತು. ಆದ್ದರಿಂದ ಅದು ಬಹುಶಃ ನನ್ನ ಕೋಚಿಂಗ್​​ನಲ್ಲಿ ನನ್ನ ಅತ್ಯಂತ ಕೆಳಮಟ್ಟದ ಪ್ರದರ್ಶನ ಎಂದು ನಾನು ಹೇಳುತ್ತೇನ, “ಎಂದು ಅವರು ಹೇಳಿದರು.

ಇದನ್ನೂ ಓದಿ: Arshad Nadeem : ಒಲಿಂಪಿಕ್ಸ್ ದಾಖಲೆಯೊಂದಿಗೆ ಬಂಗಾರ ಗೆದ್ದ ಅರ್ಷದ್ ನದೀಮ್​ಗೆ ಪಾಕ್​ ಪ್ರಧಾನಿ ಕೊಟ್ಟ ಬಹುಮಾನ ಕೇವಲ 3 ಲಕ್ಷ ರೂಪಾಯಿ!

ಭಾರತವು ಎರಡನೇ ಟೆಸ್ಟ್​​ನಲ್ಲಿ ಕೊಹ್ಲಿಯ ಸೇವೆಯನ್ನೂ ಕಳೆದುಕೊಂಡಿತ್ತು. ಪರಿಣಾಮವಾಗಿ, ಕೆ.ಎಲ್.ರಾಹುಲ್ ಎರಡನೇ ಟೆಸ್ಟ್ ನಲ್ಲಿ ಭಾರತವನ್ನು ಮುನ್ನಡೆಸಿದರು. ದಕ್ಷಿಣ ಆಫ್ರಿಕಾ 240 ರನ್​ ಬೆನ್ನಟ್ಟುವ ಮೂಲಕ ಪಂದ್ಯವನ್ನು ಗೆದ್ದಿತು. ನಂತರ ಅಂತಿಮ ಟೆಸ್ಟ್ ನಲ್ಲಿ 212 ರನ್ ಗಳನ್ನು ಬೆನ್ನಟ್ಟಿತು ಮತ್ತು ಸರಣಿಯನ್ನು 2-1ರಿಂದ ಗೆದ್ದುಕೊಂಡಿತು. ಪ್ರವಾಸದ ನಂತರ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರಿಂದ ಕೊಹ್ಲಿ ಅವರ ನಾಯಕತ್ವದ ಅವಧಿಯನ್ನು ಈ ಸರಣಿಯು ಕೊನೆಗೊಳಿಸಿತು.

Continue Reading
Advertisement
KCET Mock Allotment 2024 Engineering mock seat allotment announced
ಬೆಂಗಳೂರು13 mins ago

KCET Mock Allotment 2024: ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಪ್ರಕಟ

Viral News
ವೈರಲ್ ನ್ಯೂಸ್20 mins ago

Viral News: 5 ಕೆಜಿ ಆಲೂಗಡ್ಡೆ ಲಂಚ ಕೇಳಿ ಅಮಾನತುಗೊಂಡ ಸಬ್‌ ಇನ್ಸ್‌ಪೆಕ್ಟರ್ !

CM Siddaramaiah
ಚಾಮರಾಜನಗರ38 mins ago

CM Siddaramaiah: ನಮಗೆ ಮನೇಲಿ ತಂಗಳು ಇರ್ತಿತ್ತು, ಇಡ್ಲಿ-ದೋಸೆ ಇರ್ತಿಲಿಲ್ಲ ಎಂದ ಸಿಎಂ

High Calcium Foods
ಆರೋಗ್ಯ42 mins ago

High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

Narendra Modi
ದೇಶ42 mins ago

Narendra Modi: ಮಕ್ಕಳು, ಸ್ತ್ರೀಯರು ಸೇರಿ ವಯನಾಡು ಸಂತ್ರಸ್ತರನ್ನು ಸಂತೈಸಿದ ಮೋದಿ; Photos ಇಲ್ಲಿವೆ

Smriti Mandhana
ಪ್ರಮುಖ ಸುದ್ದಿ44 mins ago

Smriti Mandhana : ವಿರಾಟ್​ ಕೊಹ್ಲಿ ಜತೆ ನನ್ನನ್ನು ಹೋಲಿಕೆ ಮಾಡಬೇಡಿ; ಸ್ಮೃತಿ ಮಂದಾನ ಮನವಿ

Tharun Sudhir
ಸಿನಿಮಾ48 mins ago

Tharun Sudhir: ತರುಣ್ ಸುಧೀರ್-ಸೋನಲ್ ಮದುವೆ ಸಂಭ್ರಮ; ರಿಸೆಪ್ಶನ್‌ ಲೈವ್‌ ವಿಡಿಯೊ ಇಲ್ಲಿದೆ ನೋಡಿ

ಪ್ರಮುಖ ಸುದ್ದಿ59 mins ago

BJP-JDS Padayatra: ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ನಿಲ್ಲಲ್ಲ: ಸಿಎಂ, ಡಿಸಿಎಂ ವಿರುದ್ಧ ಬಿಎಸ್‌ವೈ ಗುಡುಗು

Bengaluru Power Cut
ಕರ್ನಾಟಕ1 hour ago

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.13ರಂದು ಕರೆಂಟ್‌ ಇರಲ್ಲ

Saina Nehwal
ಪ್ರಮುಖ ಸುದ್ದಿ1 hour ago

Saina Nehwal : ನನ್ನ ಸ್ಮ್ಯಾಶ್​ ತಡೆಯಲು ಬುಮ್ರಾಗೆ ಸಾಧ್ಯವಿಲ್ಲ; ಕ್ರಿಕೆಟ್​ಗೆ ಹೆಚ್ಚು ಆದ್ಯತೆ ಬಗ್ಗೆ ತಕರಾರು ಎತ್ತಿದ ಸೈನಾ ನೆಹ್ವಾಲ್​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌