Virat Kohli: ಲಂಕಾದ ದಿಗ್ಗಜ ಬ್ಯಾಟರ್​ನ ವಿಶ್ವಕಪ್ ದಾಖಲೆ ಮುರಿದ ಕಿಂಗ್​ ಕೊಹ್ಲಿ - Vistara News

ಕ್ರಿಕೆಟ್

Virat Kohli: ಲಂಕಾದ ದಿಗ್ಗಜ ಬ್ಯಾಟರ್​ನ ವಿಶ್ವಕಪ್ ದಾಖಲೆ ಮುರಿದ ಕಿಂಗ್​ ಕೊಹ್ಲಿ

ಕೋಲ್ಕೊತಾದ ಐತಿಹಾಸಿಕ ಮೈದಾನ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು ಅತ್ಯಂತ ತಾಳ್ಮೆಯುವ ಬ್ಯಾಟಿಂಗ್​ ನಡೆಸಿ 121 ಎಸೆತಗಳಿಂದ ಅಜೇಯ 101 ರನ್​ ಬಾರಿಸಿ ಮಿಂಚಿದ್ದರು.

VISTARANEWS.COM


on

virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕೊತಾ: ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ್ದರು. ಇದೇ ವೇಳೆ ಅವರು ಶ್ರೀಲಂಕಾ ಕ್ರಿಕೆಟ್​ ತಂಡದ ಮಾಜಿ ಆಟಗಾರ ಮತ್ತು ನಾಯಕ ಕುಮಾರ ಸಂಗಕ್ಕರ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಕೋಲ್ಕೊತಾದ ಐತಿಹಾಸಿಕ ಮೈದಾನ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು ಅತ್ಯಂತ ತಾಳ್ಮೆಯುವ ಬ್ಯಾಟಿಂಗ್​ ನಡೆಸಿ 121 ಎಸೆತಗಳಿಂದ ಅಜೇಯ 101 ರನ್​ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 10 ಬೌಂಡರಿ ದಾಖಲಾಯಿತು. ಹುಟ್ಟುಹಬ್ಬದಂದೆ ಕೊಹ್ಲಿ ಶತಕ ಬಾರಿಸಿದ್ದು ವಿಶೇಷ. ಈ ಶತಕದೊಂದಿಗೆ ಕೊಹ್ಲಿ ಅವರು ಕ್ರಿಕೆಟ್​ ದೇವರು ಎಂದು ಕರೆಯಲ್ಪಡುವ ಸಚಿನ್​ ತೆಂಡೂಲ್ಕರ್​ ಅವರ ಏಕದಿನ ಕ್ರಿಕೆಟ್​​ನ ಸಾರ್ವಕಾಲಿಕ 49ನೇ ಶತಕವನ್ನು ಸರಿಗಟ್ಟಿದರು.

ಸಂಗಕ್ಕರ ದಾಖಲೆ ಪತನ

ಕೊಹ್ಲಿ ಅವರು 101 ರನ್​ ಗಳಿಸಿ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಮೂಲಕ ಸಂಗಕ್ಕರ ದಾಖಲೆಯನ್ನು ಮುರಿದಿದ್ದಾರೆ. ಸಂಗಕ್ಕರ ಅವರು 37 ವಿಶ್ವಕಪ್​ ಪಂದ್ಯಗಳನ್ನು ಆಡಿ 1532 ರನ್​ ಬಾರಿಸಿದ್ದರು. ಇದೀಗ ವಿರಾಟ್ ಕೊಹ್ಲಿ 34* ಪಂದ್ಯಗಳನ್ನು ಆಡಿ 1573* ರನ್​ ಬಾರಿಸಿದ್ದಾರೆ.

ಇದನ್ನೂ ಓದಿ IND vs SA Live: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 243 ರನ್​ ಭರ್ಜರಿ ವಿಜಯ

ಸಚಿನ್​ ​ಮೊದಲಿಗ

ಮಾಜಿ ದಿಗ್ಗಜ ಆಟಗಾರ ಸಚಿನ್​ ತೆಂಡೂಲ್ಕರ್​ ಅವರು ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಬಾರಿಸಿದ ದಾಖಲೆ ಹೊಂದಿದ್ದಾರೆ. ಸಚಿನ್ 45 ಪಂದ್ಯಗಳನ್ನು ಆಡಿ​ 2278 ರನ್​ ಬಾರಿಸಿದ್ದಾರೆ. ಒಟ್ಟು 6 ವಿಶ್ವಕಪ್​ ಶತಕ ಬಾರಿಸಿದ್ದಾರೆ. ಒಂದೇ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಅವರಿಗೆ 6ನೇ ಸ್ಥಾನ. 1996ರ ವಿಶ್ವಕಪ್​ನಲ್ಲಿ 2 ಶತಕ ಬಾರಿಸಿದ್ದರು. ಇದಾದ ಬಳಿಕ 2011ರ ವಿಶ್ವಕಪ್​ನಲ್ಲಿಯೂ 2 ಶತಕ ಗಳಿಸಿದ್ದರು. ಅತಿ ಹೆಚ್ಚು ವಿಶ್ವಕಪ್​ ಆಡಿದ ದಾಖಲೆಯೂ ಸಚಿನ್​ ಹೆಸೆರಿನಲ್ಲಿದೆ. 1992-2011ರ ವರೆಗೆ ವಿಶ್ವಕಪ್​ ಆಡಿದ್ದಾರೆ.

ಪಾಂಟಿಂಗ್​ಗೆ 2ನೇ ಸ್ಥಾನ

ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಅವರು ವಿಶ್ವಕಪ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 46 ಪಂದ್ಯಗಳನ್ನು ಆಡಿ 1743 ರನ್​ ಬಾರಿಸಿದ್ದಾರೆ. 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್​ ಗೆದ್ದ ಸಾಧನೆಯೂ ಇವರದ್ದಾಗಿದೆ. 1996-2011ರ ತನಕದ ವಿಶ್ವಕಪ್ ಪಂದ್ಯ ಆಡಿದ್ದಾರೆ.

ವಿರಾಟ್​ ವಿಶ್ವಕಪ್​ ಸಾಧನೆ

ವಿರಾಟ್​ ಕೊಹ್ಲಿ ಅವರು ಸದ್ಯ 34* ವಿಶ್ವಕಪ್​ ಪಂದ್ಯಗಳನ್ನು ಆಡಿದ್ದು 1573 ಬಾರಿಸಿದ್ದಾರೆ. ಇದರಲ್ಲಿ 4 ಶತಕ ಮತ್ತು 10 ಅರ್ಧಶತಕ ಒಳಗೊಂಡಿದೆ. ಈ ಬಶರಿಯ ಆವೃತ್ತಿಯಲ್ಲಿ 2 ಶತಕ ಬಾರಿಸಿದ್ದಾರೆ. 1 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Chirag Shetty: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗುಡುಗಿದ ಶಟ್ಲರ್ ಚಿರಾಗ್ ಶೆಟ್ಟಿ; ಕಾರಣವೇನು?

Chirag Shetty: ಕ್ರಿಕೆಟಿಗರಿಗೆ ಕೊಡುವ ಬೆಲೆಯನ್ನು ಸರ್ಕಾರ ಬ್ಯಾಡ್ಮಿಂಟನ್ ಸಾಧಕರಿಗೆ ಕೊಡುತ್ತಿಲ್ಲ. ಈ ರೀತಿ ತಾರತಮ್ಯ ತೋರುವುದು ಸರಿಯಲ್ಲ. ಸರ್ಕಾರ ಎಲ್ಲಾ ಕ್ರೀಡೆಗಳನ್ನು ಸಮಾನವಾಗಿ ನೋಡಬೇಕು ಎಂದು ಭಾರತದ ತಾರಾ ಶಟ್ಲರ್‌ ಚಿರಾಗ್‌ ಶೆಟ್ಟಿ(Chirag Shetty) ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

Chirag Shetty
Koo

ಮುಂಬಯಿ: ಟಿ20 ವಿಶ್ವಕಪ್(T20 world cup) ವಿಜೇತ ತಂಡದ ಭಾಗವಾಗಿದ್ದ ನಾಲ್ವರು ಭಾರತೀಯ ಕ್ರಿಕೆಟಿಗರನ್ನು ಮಹಾರಾಷ್ಟ್ರ ಸರ್ಕಾರ(Maharashtra Government) ಕಳೆದ ವಾರ ಸನ್ಮಾನಿಸಿತ್ತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ(Rohit Sharma), ಸೂರ್ಯಕುಮಾರ್ ಯಾದವ್(Suryakumar Yadav), ಶಿವಂ ದುಬೆ(Shivam Dube) ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal) ಅವರನ್ನು ಏಕನಾಥ್ ಶಿಂಧೆ(Eknath Shinde) ನೇತೃತ್ವದ ಮಹಾರಾಷ್ಟ್ರ ಸರ್ಕಾರ ನಗದು ಬಹುಮಾನ ನೀಡಿ ಗೌರವಿಸಿತ್ತು. ಈ ಬಗ್ಗೆ ಭಾರತದ ತಾರಾ ಶಟ್ಲರ್‌ ಚಿರಾಗ್‌ ಶೆಟ್ಟಿ(Chirag Shetty) ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಕ್ರಿಕೆಟ್‌ ವಿರೋಧಿಯಲ್ಲ. ಆದರೆ, ಕ್ರಿಕೆಟಿಗರಿಗೆ ಕೊಡುವ ಬೆಲೆಯನ್ನು ಸರ್ಕಾರ ಬ್ಯಾಡ್ಮಿಂಟನ್ ಸಾಧಕರಿಗೆ ಕೊಡುತ್ತಿಲ್ಲ. ಥಾಮಸ್‌ ಕಪ್‌ ಗೆಲುವು ಕೂಡ ಕ್ರಿಕೆಟ್‌ನ ವಿಶ್ವಕಪ್‌ಗೆ ಸಮ. ಥಾಮಸ್‌ ಕಪ್‌ ವಿಜೇತ ತಂಡದಲ್ಲಿ ನಾನೊಬ್ಬನೇ ಮಹಾರಾಷ್ಟ್ರದವನು. ಸರ್ಕಾರ ನಮ್ಮನ್ನು ಸನ್ಮಾನಿಸಿಲ್ಲ. ಆದರೆ, ವಿಶ್ವಕಪ್‌ ಗೆದ್ದ ಕ್ರಿಕೆಟಿಗರನ್ನು ಗೌರವಿಸಿದೆ. ಈ ರೀತಿ ತಾರತಮ್ಯ ತೋರುವುದು ಸರಿಯಲ್ಲ. ಸರ್ಕಾರ ಎಲ್ಲಾ ಕ್ರೀಡೆಗಳನ್ನು ಸಮಾನವಾಗಿ ನೋಡಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

ಚಿರಾಗ್‌ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಜತೆಗೂಡಿ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ ಸೇರಿ ಹಲವು ಜಾಗತಿಕ ಕೂಟಗಳಲ್ಲಿ ಚಾಂಪಿಯನ್ ಆಗಿದ್ದಾರೆ. ಚಿರಾಗ್‌ 2022 ರಲ್ಲಿ ಥಾಮಸ್ ಕಪ್ ವಿಜೇತ ಭಾರತೀಯ ತಂಡದ ಭಾಗವಾಗಿದ್ದರು. ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಜೋಡಿ(Satwik-Chirag) ಏಷ್ಯನ್​ ಗೇಮ್ಸ್​ನಲ್ಲಿ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1982ರಲ್ಲಿ ಲೆರೋಯ್‌ ಫ್ರಾನ್ಸಿಸ್‌-ಪ್ರದೀಪ್‌ ಗಾಂಧಿ ಕಂಚು ಗೆದ್ದಿದ್ದು ಭಾರತಕ್ಕೆ ಪುರುಷರ ಡಬಲ್ಸ್‌ನಲ್ಲಿ ಸಿಕ್ಕ ಏಕೈಕ ಪದಕವಾಗಿತ್ತು. ಇದೇ ವರ್ಷ ಚಿರಾಗ್‌ ಶೆಟ್ಟಿಗೆ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಟ್ರೋಫಿ ಗೆದ್ದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 125 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಜೂನ್ 4 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಬಹುಮಾನದ ಮೊತ್ತವನ್ನು ಹಸ್ತಾಂತರಿಸಲಾಗಿತ್ತು. ಅದರಲ್ಲಿ ಯಾರಿಗೆ ಎಷ್ಟು ಎಂಬ ಕುತೂಹಲ ಮೂಡಿತ್ತು. ಆ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ವರದಿಗಳ ಪ್ರಕಾರ, ತಂಡದ ಎಲ್ಲಾ 15 ಸದಸ್ಯರು ತಲಾ 5 ಕೋಟಿ ರೂ ಪಡೆದಿದ್ದಾರೆ. ಮುಖ್ಯ ಕೋಚ್ ದ್ರಾವಿಡ್ ಕೂಡ ಇದೇ ಮೊತ್ತವನ್ನು ಪಡೆದಿದ್ದಾರೆ. ಉಳಿದ ಕೋಚಿಂಗ್ ಗ್ರೂಪ್ ತಲಾ 2.5 ರೂಪಾಯಿ ಪಡೆದುಕೊಂಡಿದ್ದಾರೆ. ವಿಡಿಯೋ ನಿರ್ಮಾಣ ತಂಡ ಸೇರಿದಂತೆ ಬ್ಯಾಕ್ರೂಮ್ ಸಿಬ್ಬಂದಿಗೆ ತಲಾ 2 ಕೋಟಿ ರೂ., ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ತಲಾ 1 ಕೋಟಿ ರೂಪಾಯಿ, ಮೀಸಲು ಆಟಗಾರರಾದ ರಿಂಕು ಸಿಂಗ್, ಖಲೀಲ್ ಅಹ್ಮದ್, ಶುಭ್ಮನ್ ಗಿಲ್ ಮತ್ತು ಅವೇಶ್ ಖಾನ್ ಅವರಿಗೆ ತಲಾ 1 ಕೋಟಿ ರೂಪಾಯಿ ದೊರಕಿದೆ.

Continue Reading

ಕ್ರೀಡೆ

Suryakumar Yadav: 8 ವರ್ಷಗಳ ಹಿಂದೆಯೇ ಅದ್ಭುತ ಕ್ಯಾಚ್​ ಹಿಡಿದೆ ಎಂದು ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೂರ್ಯಕುಮಾರ್

Suryakumar Yadav: ಆ ಕ್ಯಾಚ್‌ ಹಿಡಿದು 8 ದಿನಗಗಳು ಕಳೆದಿವೆ. ಆದರೆ ನನ್ನ ಪ್ರಮುಖ ಕ್ಯಾಚ್ 8 ವರ್ಷಗಳ ಹಿಂದೆ ಹಿಡಿದದ್ದು!’ ಎಂದು ಬರೆದುಕೊಳ್ಳುವ ಮೂಲಕ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿಗೆ ವಿವಾಹ ವಾರ್ಷಿಕೋತ್ಸದ ಶುಭ ಹಾರೈಸಿದ್ದಾರೆ.

VISTARANEWS.COM


on

Suryakumar Yadav
Koo

ಮುಂಬಯಿ: ಟಿ20 ವಿಶ್ವಕಪ್ ವಿಜೇತ ಹೀರೋ ಸೂರ್ಯಕುಮಾರ್ ಯಾದವ್(Suryakumar Yadav) ಅವರು ತಮ್ಮ ಎಂಟನೇ ವಿವಾಹ ವಾರ್ಷಿಕೋತ್ಸವನ್ನು ಪತ್ನಿ ದೇವಿಶಾ ಶೆಟ್ಟಿ(Devisha Shetty) ಜತೆ ಆಚರಿಸಿಕೊಂಡಿದ್ದಾರೆ. ವಿದೇಶದಲ್ಲಿ ಈ ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿರುವ ಫೋಟೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯಕುಮಾರ್​ ಅವರು ಪತ್ನಿಗೆ ಶುಭ ಹಾರೈಸಿರುವ ಪೋಸ್ಟ್​ ಇದೀಗ ವೈರಲ್​ ಆಗಿದೆ.

ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್​ ಯಾದವ್ ಅದ್ಭುತ ಕ್ಯಾಚ್​ ಹಿಡಿದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ಕ್ಯಾಚ್​ ಅನ್ನು ಸೂರ್ಯಕುಮಾರ್ ತಮ್ಮ ವಿವಾಹ ವಾರ್ಷಿಕೋತ್ಸ ಆಚರಣೆಯ ವೇಳೆಯೂ ಬಳಸಿಕೊಂಡಿದ್ದಾರೆ. ‘ಆ ಕ್ಯಾಚ್‌ ಹಿಡಿದು 8 ದಿನಗಗಳು ಕಳೆದಿವೆ. ಆದರೆ ನನ್ನ ಪ್ರಮುಖ ಕ್ಯಾಚ್ 8 ವರ್ಷಗಳ ಹಿಂದೆ ಹಿಡಿದದ್ದು!’ ಎಂದು ಬರೆದುಕೊಳ್ಳುವ ಮೂಲಕ ಪತ್ನಿಗೆ ವಿವಾಹ ವಾರ್ಷಿಕೋತ್ಸದ ಶುಭ ಹಾರೈಸಿದ್ದಾರೆ. ಸದ್ಯ ಸೂರ್ಯ ಅವರು ಈ ಪೋಸ್ಟ್​ ವೈರಲ್ ಆಗಿದೆ. ಜುಲೈ 7, 2016ರಲ್ಲಿ ಸೂರ್ಯ ಮತ್ತು ದೇವಿಶಾ ವಿವಾಹವಾಗಿದ್ದರು. ದೇವಿಶಾ ಶೆಟ್ಟಿ ಮೂಲತಃ ಕರಾವಳಿಯವರಾಗಿದ್ದಾರೆ.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಮಿಲ್ಲರ್​ ಔಟ್​ ಆಗುತ್ತಿದ್ದಂತೆ ಭಾರತದ ಗೆಲುವು ಕೂಡ ಖಚಿತಗೊಂಡಿತ್ತು. ಸೂರ್ಯ ಈ ಕ್ಯಾಚ್​ ಹಿಡಿಯದೇ ಹೋಗಿದ್ದರೆ ಭಾರತ ಸೋಲುವ ಸಾಧ್ಯತೆಯೂ ಅಧಿಕವಾಗಿತ್ತು.

ಇದನ್ನೂ ಓದಿ Suryakumar Yadav: ದಿಲ್ಲಿಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಸೂರ್ಯಕುಮಾರ್​ ಯಾದವ್​; ವಿಡಿಯೊ ವೈರಲ್​

ಸೂರ್ಯಕುಮಾರ್​ ಯಾದವ್(Suryakumar Yadav Catch)​ ಅವರು ಹಿಡಿದ ಈ ಕ್ಯಾಚ್​ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಸೂರ್ಯಕುಮಾರ್​ ಬೌಂಡರಿ ಗೆರೆಯನ್ನು ತುಳಿದಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈಗಲೂ ಕೂಡ ಈ ಚರ್ಚೆ ನಿಂತಿಲ್ಲ.

ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ರಜನೀಶ್ ಗುಪ್ತಾ ಎಂಬವರು ಸೂರ್ಯಕುಮಾರ್​ ಕ್ಯಾಚ್​ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ನಾನು ಅಂದು ಮೈದಾನದ ಟಿವಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದೆ. ಬಿಳಿ ಗೆರೆಯು ಬೌಂಡರಿಯಾಗಿರಲಿಲ್ಲ ಎಂದು ನಾನು ಹೇಳಬಲ್ಲೆ. ಏಕೆಂದರೆ ಬೌಂಡರಿ ರೋಪ್ ವೆಡ್ಜ್ ಆ ಬಿಳಿ ಗೆರೆಯ ಹಿಂದೆ ಇತ್ತು. ಪಂದ್ಯದ ಆರಂಭದಿಂದಲೂ ಹಾಗೆಯೇ ಇತ್ತು. ಪಿಚ್ ಅನ್ನು ಬದಲಾಯಿಸಿದಾಗ, ಬೌಂಡರಿಗಳನ್ನು ಸರಿಹೊಂದಿಸಲಾಗುತ್ತದೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.

Continue Reading

ಕ್ರೀಡೆ

Rohit Sharma: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡ ರೋಹಿತ್​

Rohit Sharma: ವಿಶ್ವಕಪ್​ ಆಡಿದ ಟೀಮ್​ ಇಂಡಿಯಾದ ಹಲವು ಆಟಗಾರರು ಮುಂದಿನ ಸರಣಿಗೂ ಮುನ್ನ ಕೊಂಚ ರಿಲ್ಯಾಕ್ಸ್ ಆಗುವ ನಿಟ್ಟಿನಲ್ಲಿ ತಮ್ಮ ಕುಟುಂಬದ ಜತೆ ನೆಚ್ಚಿನ ತಾಣಗಳಿಗೆ ಪ್ರವಾಸ ಕೈಗೊಂಡಿದ್ದಾರೆ.

VISTARANEWS.COM


on

Rohit Sharma
Koo

ಮುಂಬಯಿ: ಟಿ20 ವಿಶ್ವಕಪ್​ ಗೆದ್ದು ತವರಿಗೆ ಮರಳಿ ಎಲ್ಲ ಅಭಿನಂದನಾ ಕಾರ್ಯಕ್ರಮ ಮತ್ತು ಸನ್ಮಾನಗಳನ್ನು ಸ್ವೀಕರಿಸಿರುವ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ(Rohit Sharma) ಇದೀಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ರೋಹಿತ್ ತಮ್ಮ ಪತ್ನಿ, ಮಗಳ ಜತೆ ಮುಂಬೈ ವಿಮಾನ ನಿಲ್ದಾಣದಿಂದ ವಿದೇಶ ಪ್ರಯಾಣ ಬೆಳೆಸಿದ ವಿಡಿಯೊ ವೈರಲ್​ ಆಗಿದೆ. ರೋಹಿತ್​ ಮಾತ್ರವಲ್ಲದೆ ಸೂರ್ಯಕುಮಾರ್ ಯಾದವ್ ಕೂಡಾ ಪತ್ನಿ ಜತೆ ಪ್ರವಾಸಕ್ಕೆ ತೆರಳಿದ್ದಾರೆ. ಒಟ್ಟಾರೆ ವಿಶ್ವಕಪ್​ ಆಡಿದ ಟೀಮ್​ ಇಂಡಿಯಾದ ಹಲವು ಆಟಗಾರರು ಮುಂದಿನ ಸರಣಿಗೂ ಮುನ್ನ ಕೊಂಚ ರಿಲ್ಯಾಕ್ಸ್ ಆಗುವ ನಿಟ್ಟಿನಲ್ಲಿ ತಮ್ಮ ಕುಟುಂಬದ ಜತೆ ನೆಚ್ಚಿನ ತಾಣಗಳಿಗೆ ಪ್ರವಾಸ ಕೈಗೊಂಡಿದ್ದಾರೆ.

ರೋಹಿತ್ ನಾಯಕತ್ವದಲ್ಲಿ, ಕಳೆದ ವಾರ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.

ಇದನ್ನೂ ಓದಿ Rohit Sharma: ನನಗೆ ಟಿ20ಗೆ ನಿವೃತ್ತಿ ಘೋಷಿಸಲು ಮನಸ್ಸು ಇರಲಿಲ್ಲ; ಆಘಾತಕಾರಿ ಹೇಳಿಕೆ ನೀಡಿದ ರೋಹಿತ್​ ಶರ್ಮಾ

ಚಾಂಪಿಯನ್ಸ್​ ಟ್ರೋಫಿಗೂ ರೋಹಿತ್​ ನಾಯಕ


ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(BCCI secretary Jay Shah) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy) ಟೂರ್ನಿಯಲ್ಲಿಯೂ ರೋಹಿತ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮುಂಬರುವ ಚಾಂಪಿಯನ್ಸ್ ಟ್ರೋಫಿ 2025 ಮತ್ತು ಮುಂದಿನ ವರ್ಷ ನಡೆಯಲಿರುವ ಮೂರನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತ ತಂಡ ರೋಹಿತ್​ ಶರ್ಮ ನಾಯಕತ್ವದಲ್ಲಿ ಚಾಂಪಿಯನ್​ ಆಗಲಿದೆ” ಎಂದು ಜಯ್​ ಶಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

2025ರಲ್ಲಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ತಿಳಿದುಬಂದಿದೆ. ಕೆಲದಿನಗಳ ಹಿಂದಷ್ಟೇ ಚಾಂಪಿಯನ್ಸ್‌ ಟ್ರೋಫಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌, ಮಾ.1ಕ್ಕೆ ಲಾಹೋರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನಿಗದಿ ಮಾಡಿತ್ತು. ಆದರೆ, ಭದ್ರತೆಯ ಕಾರಣವನ್ನು ನೀಡಿರುವ ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ.

Continue Reading

ಕ್ರೀಡೆ

Hasin Jahan: ‘ನಾಯಿಗಳ ದಂಡು’… ಎಂದು ಶಮಿಯನ್ನು ಅನಗತ್ಯವಾಗಿ ಕೆಣಕಿದರೇ ವಿಚ್ಛೇದಿತ ಪತ್ನಿ?; ವಿಡಿಯೊ ವೈರಲ್​

Hasin Jahan: ಶಮಿ ವಿರುದ್ಧ ಹಸೀನ್ ಜಹಾನ್ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಏಕದಿನ ವಿಶ್ವಕಪ್​ ಟೂರ್ನಿಯ ವೇಳೆ ಉತ್ತಮ ಪ್ರದರ್ಶನ ತೋರಿದಾಗ ಎಮ್ಮೆ ನೀರು ಕುಡಿಯುತ್ತಿರುವ ಚಿತ್ರಗಳನ್ನು ಪೋಸ್ಟ್​ ಮಾಡುವ ಮೂಲಕ ವಿಲಕ್ಷಣದ ಹೇಳಿಕೆ ನೀಡಿದ್ದರು.

VISTARANEWS.COM


on

Hasin Jahan: Divorced wife who scolded Shami unnecessarily as 'pack of dogs'; The video is viral
Koo

ಕೋಲ್ಕತ್ತಾ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರ ವಿರುದ್ಧ ಸದಾ ಒಂದಿಲ್ಲೊಂದು ಕಾರಣಗಳಿಂದ ಟೀಕಿಸುತ್ತಿರುವ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್(Hasin Jahan) ಈ ಬಾರಿ ನಾಯಿಗೆ ಹೋಲಿಕೆ ಮಾಡಿ ಪರೋಕ್ಷವಾಗಿ ಹೀಯಾಳಿಸಿದ್ದಾರೆ.

ಹೌದು, ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಣ್ಣು ಮಿಟುಕಿಸುವ ಒಂದು ನಿಮಿಷದ ವಿಡಿಯೊ ಹಂಚಿಕೊಂಡಿರುವ ಹಸೀನ್ ಜಹಾನ್, ನಾಯಿಗಳ ದಂಡು ಹೆಣ್ಣು ಮಕ್ಕಳ ಹಿಂದಿನಿಂದ ಮಾತ್ರ ಬೊಗಳುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಶಮಿಯನ್ನು ಅನಗತ್ಯವಾಗಿ ಕೆಣಕಿದರೇ ಎಂದ ಅನುಮಾನ ಮೂಡಿದೆ.

ಶಮಿ ವಿರುದ್ಧ ಹಸೀನ್ ಜಹಾನ್ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಏಕದಿನ ವಿಶ್ವಕಪ್​ ಟೂರ್ನಿಯ ವೇಳೆ ಉತ್ತಮ ಪ್ರದರ್ಶನ ತೋರಿದಾಗ ಎಮ್ಮೆ ನೀರು ಕುಡಿಯುತ್ತಿರುವ ಚಿತ್ರಗಳನ್ನು ಪೋಸ್ಟ್​ ಮಾಡುವ ಮೂಲಕ ವಿಲಕ್ಷಣದ ಹೇಳಿಕೆ ನೀಡಿದ್ದರು.

ಕೆಲವು ತಿಂಗಳ ಹಿಂದೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರೋಹಿತ್​ ಶರ್ಮ ಅವರು ತಮ್ಮ ಪುಟ್ಟ ಮಗಳು ಸಮೈರಾ ತೊಡೆ ಮೇಲೆ ಹಾಯಾಗಿ ಮಲಗಿರುವ ಫೋಟೊ ಹಂಚಿಕೊಂಡಿದ್ದ ಹಸೀನ್ ಜಹಾನ್, ಹೆಚ್ಚಿನ ತಂದೆಯಂದಿರು ತಮ್ಮ ಪುಟ್ಟ ಮಗಳನ್ನು ದೇವರಂತೆ ಕಂಡು ಅವರಿಂದ ಶಾಂತಿ ಕಂಡುಕೊಳ್ಳುತ್ತಾರೆ. ಮತ್ತು ಕೆಲವು ತಂದೆಯರು ವೇಶ್ಯೆಯರ ಮಡಿಲಲ್ಲಿ!. ಅಲ್ಲಾಹು ಯಾವುದೇ ಮಗಳಿಗೆ ಇಂತಹ ಗುಣವಿಲ್ಲದ ತಂದೆಯನ್ನು ಎಂದಿಗೂ ನೀಡದಿರಲಿ. ಆಮೀನ್. ನನ್ನ ಪುಟ್ಟ ಮಗಳಿಗೆ ತಾಳ್ಮೆಯನ್ನು ನೀಡುವಂತೆ ನಾನು ಅಲ್ಲಾಹುವಿನನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್​ ಮಾಡಿ ಶಮಿಯನ್ನು ಅನಗತ್ಯವಾಗಿ ಕೆಣಕ್ಕಿದ್ದರು.

16 ಆಗಸ್ಟ್ 2018 ರಂದು, ಹಸಿನ್ ಜಹಾನ್(Hasin Jahan) ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು.

ಜೀವನಾಂಶ ನೀಡುತ್ತಿರುವ ಶಮಿ

2018 ರಲ್ಲಿ ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂ ಜೀವನಾಂಶವನ್ನು ಕೋರಿ ಶಮ್ಮಿ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದರು. ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂ., ತಮ್ಮ ಮಗಳ ನಿರ್ವಹಣೆಗಾಗಿ 3 ಲಕ್ಷ ರೂ. ಕೇಳಿದ್ದರು. ಇದರ ವಿಚಾರಣೆ ನಡೆಸಿದ ಕೋಲ್ಕೊತಾ ನ್ಯಾಯಾಲಯ ಇದೇ ವರ್ಷದ ಜನವರಿಯಲ್ಲಿ ತೀರ್ಪು ಪ್ರಕಟಿಸಿ, ಶಮಿ ಅವರು ಪತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜಹಾನ್​ಗೆ ತಿಂಗಳಿಗೆ 50 ಸಾವಿರ ರೂ. ನೀಡುವಂತೆ ಸೂಚಿಸಿತ್ತು. ಕೋರ್ಟ್​ ಸೂಚನೆಯಂತೆ ಶಮಿ ಅವರು ಈ ಮೊತ್ತವನ್ನು ನೀಡಿತ್ತಲೇ ಬರುತ್ತಿದ್ದಾರೆ.

Continue Reading
Advertisement
Self Harming
ಪ್ರಮುಖ ಸುದ್ದಿ5 mins ago

Self Harming: ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಆತ್ಮಹತ್ಯೆ; ಕಾರಿನಲ್ಲೇ ವಿಷ ಸೇವನೆ

Terrorists Attack
ದೇಶ18 mins ago

Terrorists Attack: ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ; ಇಬ್ಬರು ಯೋಧರಿಗೆ ಗಾಯ, ಉಗ್ರರಿಗಾಗಿ ಶೋಧ

Tamil Nadu violence
ದೇಶ18 mins ago

Tamil Nadu Violence: NDA ಮಿತ್ರಪಕ್ಷದ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್‌

Rain Effect
ಮಳೆ21 mins ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Chirag Shetty
ಕ್ರೀಡೆ24 mins ago

Chirag Shetty: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗುಡುಗಿದ ಶಟ್ಲರ್ ಚಿರಾಗ್ ಶೆಟ್ಟಿ; ಕಾರಣವೇನು?

Viral Video
Latest35 mins ago

Viral Video: ಹೃಷಿಕೇಶದ ಗಂಗಾ ಘಾಟ್‌ನಲ್ಲಿ ಬಿಕಿನಿ ಧರಿಸಿದ ವಿದೇಶಿಯರ ಮೋಜು ಮಸ್ತಿ!

Dengue Cases
ರಾಜಕೀಯ38 mins ago

Dengue Cases: ಕಲುಷಿತ ನೀರು ಪೂರೈಕೆಯಾದ್ರೆ ಅಧಿಕಾರಿಗಳೇ ಹೊಣೆ; 15 ದಿನಕ್ಕೊಮ್ಮೆ ಕ್ವಾಲಿಟಿ ಟೆಸ್ಟ್ ಮಾಡಿ ಎಂದ ಸಿಎಂ

Mahanati Show bindu honnali not selected
ಕಿರುತೆರೆ43 mins ago

Mahanati Show: ಫಿನಾಲೆಗೆ ಆಯ್ಕೆಯಾಗಿಲ್ಲ ದಾವಣಗೆರೆ ಟೀಚರ್; ಕೋಪಗೊಂಡ ನೆಟ್ಟಿಗರು!

PGET 2024 Online application for PGET can be submitted till July 10
ಶಿಕ್ಷಣ1 hour ago

PGET 2024 : ಪಿಜಿಇಟಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 10ರವರೆಗೆ ಅವಕಾಶ

Suryakumar Yadav
ಕ್ರೀಡೆ1 hour ago

Suryakumar Yadav: 8 ವರ್ಷಗಳ ಹಿಂದೆಯೇ ಅದ್ಭುತ ಕ್ಯಾಚ್​ ಹಿಡಿದೆ ಎಂದು ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೂರ್ಯಕುಮಾರ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect
ಮಳೆ21 mins ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ2 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ5 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು6 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ22 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ1 day ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 day ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

ಟ್ರೆಂಡಿಂಗ್‌