Wagon R, Celerio price hike, see the new price list here Maruti Suzuki : ವ್ಯಾಗನ್​ ಆರ್​, ಸೆಲೆರಿಯೊ ಬೆಲೆ ಏರಿಕೆ, ಹೊಸ ದರ ಪಟ್ಟಿ ಇಲ್ಲಿದೆ ನೋಡಿ - Vistara News

ಆಟೋಮೊಬೈಲ್

Maruti Suzuki : ವ್ಯಾಗನ್​ ಆರ್​, ಸೆಲೆರಿಯೊ ಬೆಲೆ ಏರಿಕೆ, ಹೊಸ ದರ ಪಟ್ಟಿ ಇಲ್ಲಿದೆ ನೋಡಿ

ಕೇಂದ್ರ ಸರಕಾರ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಬಿಗಿಗೊಳಿಸಿದ ಕಾರಣ ಎಂಜಿನ್​ ಅಪ್​​​ಗ್ರೇಡ್​ ಮಾಡಲಾಗಿದೆ. ಅದರ ವೆಚ್ಚವನ್ನು ಗ್ರಾಹಕರಿಗೆ ವಿಧಿಸಿದೆ ಮಾರುತಿ ಸುಜುಕಿ (Maruti Suzuki )ಕಂಪನಿ.

VISTARANEWS.COM


on

Wagon R, Celerio price hike, see the new price list here
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾರುತಿ ಸುಜುಕಿ ಕಂಪನಿ (Maruti Suzuki) ತನ್ನ ಎಲ್ಲ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ. ಅದರಂತೆ ಸುಜುಕಿ ಕಂಪನಿಯ ಜನಪ್ರಿಯ ಕಾರುಗಳಾಗಿರುವ ಸೆಲೆರಿಯೊ ಹಾಗೂ ವ್ಯಾಗನ್​ ಆರ್​ ಕಾರುಗಳ ಬೆಲೆ 1500 ರೂಪಾಯಿಯಷ್ಟು ಏರಿಕೆಯಾಗಿದೆ. ಕೇಂದ್ರ ಸರಕಾರ ಮಾಲಿನ್ಯ ಮಾನದಂಡಗಳನ್ನು ಬಿಗಿಗೊಳಿಸಿದ ಕಾರಣ ಕಾರಿನ ಎಂಜಿನ್​ನಲ್ಲಿ ಕೆಲವೊಂದು ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ. ಈ ಬದಲಾವಣೆಗೆ ಹೆಚ್ಚುವರಿ ತಾಂತ್ರಿಕತೆಯನ್ನು ಅಳವಡಿಸಲಾಗಿದ್ದು ಅದರ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಿದೆ ಮಾರುತಿ ಸುಜುಕಿ ಕಂಪನಿ.

ಮಾರುತಿ ಸುಜುಕಿ ವ್ಯಾಗನ್​ ಆರ್​ಗೆ ಎಷ್ಟು ಏರಿಕೆ?

ಮಾರುತಿ ಸುಜುಕಿಯ ವ್ಯಾಗನ್​ ಆರ್​ ಕಾರಿಗೆ ಇದುವರೆಗೆ ಆರಂಭಿಕ ಬೆಲೆ 5.54 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್​ ಎಂಡ್​ ಕಾರಿಗೆ 7.42 ಲಕ್ಷ ರೂಪಾಯಿ ನಿಗದಿ ಮಾಡಲಾಗಿತ್ತು. ಟಾಪ್ ಎಂಡ್ ಕಾರು ಜಡ್​ಎಕ್ಸ್​ಐ ಆಟೋಮ್ಯಾಟಿಕ್​. ಹೊಸ ದರ ಪಟ್ಟಿಯ ಪ್ರಕಾರ ವ್ಯಾಗನ್​ ಆರ್​ ಕಾರಿನ ಆರಂಭಿಕ ಬೆಲೆ 5.56 ಲಕ್ಷ ರೂಪಾಯಿಯಿಂದ ಆರಂಭಗೊಂಡು 7.44 ಲಕ್ಷ ರೂಪಾಯಿಗಳಾಗಿವೆ. ಇದು ಎಕ್ಸ್​ ಶೋರೂಮ್​ ಬೆಲೆಯಾಗಿದೆ.

ಮಾರುತಿ ಸುಜುಕಿ ಸೆಲೆರಿಯೊಗೆ ಎಷ್ಟು ಬೆಲೆ ಏರಿಕೆಯಾಗಿದೆ?

ಮಾರುತಿ ಸುಜುಕಿ ಸೆಲೆರಿಯೊ ನಾಲ್ಕು ವೇರಿಯೆಂಟ್​ಗಳಲ್ಲಿ ಲಭ್ಯವಿದೆ. ಎಲ್ಸ್​ಎಕ್ಸ್​ಐ, ವಿಎಕ್ಸ್​ಐ, ಜಡ್​ಎಕ್ಸ್​ಐ ಹಾಗೂ ಜಡ್​ಎಕ್ಸ್​ಐ ಪ್ಲಸ್​. ಈಗ ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಬೆಲೆ 5.38 ಲಕ್ಷ ರೂಪಾಯಿಯಿಂದ ಆರಂಭಗೊಂಡು 7.16 ಲಕ್ಷ ರೂಪಾಯಿ ತನಕ ಆಗಿದೆ. ಒಟ್ಟಾರೆಯಾಗಿ 1500 ರೂಪಾಯಿ ಏರಿಕೆಯಾಗಿದೆ.

ಮಾರುತಿ ಸುಜುಕಿ ವ್ಯಾಗನ್​ ಆರ್​, ಸೆಲೆರಿಯೊ ಎಂಜಿನ್​ ಬಗ್ಗೆ

ಮಾರುತಿ ಸುಜುಕಿ ವ್ಯಾಗನ್​ ಆರ್​ ಆರ್​ ಹಾಗೂ ಸೆಲೆರಿಯೊ 1.0 ಲೀಟರ್​ ಎಂಜಿನ್ ಹೊಂದಿದೆ. ಇದರಲ್ಲಿ ಸಿಎನ್​ಜಿ ಆವೃತ್ತಿಯೂ ಇದೆ. ಈ ಎಂಜಿನ್​ಗೆ ಐದು ಸ್ಪೀಡ್​ನ ಗೇರ್​ ಬಾಕ್ಸ್ ಕೂಡ ಇದೆ. ಜತೆಗೆ ಆಟೋಮ್ಯಾಟಿಕ್​ ಆವೃತ್ತಿಯೂ ಲಭ್ಯವಿದೆ. ಸಿಎನ್​ಜಿ ಎಂಜಿನ್​ ಹೊಂದಿರುವ ಕಾರಿನಲ್ಲಿ ಮ್ಯಾನುಯಲ್​ ಗೇರ್​ ಬಾಕ್ಸ್ ಮಾತ್ರ ಇದೆ.

ಇದನ್ನೂ ಓದಿ : Innova Hycross : ಟಾಪ್​ ಎಂಡ್​ ವೇರಿಯೆಂಟ್​ ಇನ್ನೋವಾ ಕಾರುಗಳ ಬುಕಿಂಗ್​ ಸ್ಥಗಿತ

ಇವೆಲ್ಲದರ ನಡುವೆ ಮಾರುತಿ ಸುಜುಕಿ ಕಾರುಗಳ ಒಟ್ಟು ಮಾರಾಟ ಕಳೆದ ವರ್ಷಕ್ಕಿಂತ ಇಳಿಕೆಯಾಗಿದೆ. 2022ರಲ್ಲಿ 1,70, 395 ಕಾರುಗಳು ಮಾರಾಟವಾಗಿದ್ದರೆ, ಹಾಲಿ ವರ್ಷ 1,70, 071 ಕಾರುಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಬ್ರೆಜಾ, ಎರ್ಟಿಗಾ, ಎಕ್ಸ್​ಎಲ್​6, ಎಸ್​ ಕ್ರಾಸ್​ ಹಾಗೂ ಗ್ರ್ಯಾಂಡ್​ ವಿಟಾರಾ ಕಾರಿಗೆ ಅತಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆಟೋಮೊಬೈಲ್

Mahindra Scorpio N : ಮಹೀಂದ್ರಾ ತನ್ನ ಸ್ಕಾರ್ಪಿಯೋ-ಎನ್ Z8 ವೇರಿಯೆಂಟ್​ನಲ್ಲಿ ನೀಡಿದ ಹಲವು ಫೀಚರ್​ಗಳು

Mahindra Scorpio N :ಒಳ್ಳೆಯ ವಿಷಯವೆಂದರೆ ಈ ಫೀಚರ್​ಗಳ ಸೇರ್ಪಡೆಗಳು ಯಾವುದೇ ಹೆಚ್ಚುವರಿ ದರವಿಲ್ಲದೆ ಗ್ರಾಹಕರಿಗೆ ಸಿಗುತ್ತದೆ. ಝಡ್8 ಸೆಲೆಕ್ಟ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.17.10 ಲಕ್ಷಗಳಾದರೆ, ಝಡ್8 ಮಾದರಿಯ ಬೆಲೆಯು ರೂ.18.74 ಲಕ್ಷಗಳಾಗಿದೆ. ಮಹೀಂದ್ರಾ ಇತ್ತೀಚೆಗೆ ಸ್ಕಾರ್ಪಿಯೋ ಎನ್ ಶ್ರೇಣಿಯ ಬೆಲೆಗಳನ್ನು ಸುಮಾರು 10,000 ರೂ.ಗಳಷ್ಟು ಹೆಚ್ಚಿಸಿದೆ.

VISTARANEWS.COM


on

Koo

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ ಸ್ಕಾರ್ಪಿಯೊ ಎನ್​ (Mahindra Scorpio N ) ಝಡ್ 8 ಸೆಲೆಕ್ಟ್ ಮತ್ತು ಝಡ್ 8 ಈಗ ವೈರ್ ಲೆಸ್ ಚಾರ್ಜರ್ ಮತ್ತು ಸೆಂಟರ್ ಕನ್ಸೋಲ್ ಹೊಸ ಹೈ-ಗ್ಲೋಸ್ ಫಿನಿಶ್ ಪಡೆದುಕೊಂಡಿದೆ. ಏತನ್ಮಧ್ಯೆ, ರೇಂಜ್-ಟಾಪಿಂಗ್ ಝಡ್ 8 ಎಲ್ ಈಗ ವೆಂಟಿಲೇಟೆಡ್​ ಮುಂಭಾಗದ ಸೀಟುಗಳು, ಆಟೋ-ಡಿಮ್ಮಿಂಗ್ ರಿಯರ್ ವ್ಯೂ ಮಿರರ್, ಆ್ಯಕ್ಟಿವ್​ ಕೂಲಿಂಗ್ ಹೊಂದಿರುವ ವೈರ್ ಲೆಸ್ ಚಾರ್ಜಿಂಗ್ ಪ್ಯಾಡ್ ಮತ್ತು ಸೆಂಟರ್ ಕನ್ಸೋಲ್ ಗಾಗಿ ಹೈ-ಗ್ಲೋಸ್ ಫಿನಿಶ್ ಪಡೆದುಕೊಂಡಿದೆ. ಇದಲ್ಲದೆ, ಈ ಹಿಂದೆ ಕೇವಲ ಝಡ್ 8 ಸೆಲೆಕ್ಟ್ ಗೆ ಸೀಮಿತವಾಗಿದ್ದ ಮಿಡ್ ನೈಟ್ ಬ್ಲ್ಯಾಕ್ ಬಣ್ಣವನ್ನು ಈಗ ಎಲ್ಲಾ ಝಡ್ 8 ಟ್ರಿಮ್ ಗಳಲ್ಲಿ ಕೊಡಲಾಗಿದೆ.

ಒಳ್ಳೆಯ ವಿಷಯವೆಂದರೆ ಈ ಫೀಚರ್​ಗಳ ಸೇರ್ಪಡೆಗಳು ಯಾವುದೇ ಹೆಚ್ಚುವರಿ ದರವಿಲ್ಲದೆ ಗ್ರಾಹಕರಿಗೆ ಸಿಗುತ್ತದೆ. ಝಡ್8 ಸೆಲೆಕ್ಟ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.17.10 ಲಕ್ಷಗಳಾದರೆ, ಝಡ್8 ಮಾದರಿಯ ಬೆಲೆಯು ರೂ.18.74 ಲಕ್ಷಗಳಾಗಿದೆ. ಮಹೀಂದ್ರಾ ಇತ್ತೀಚೆಗೆ ಸ್ಕಾರ್ಪಿಯೋ ಎನ್ ಶ್ರೇಣಿಯ ಬೆಲೆಗಳನ್ನು ಸುಮಾರು 10,000 ರೂ.ಗಳಷ್ಟು ಹೆಚ್ಚಿಸಿದೆ.

ಸ್ಕಾರ್ಪಿಯೋ ಎನ್ ನ ಉಪಕರಣಗಳ ಪಟ್ಟಿ ಬದಲಾಗದೆ ಉಳಿದಿದೆ. ಟಾಪ್-ಸ್ಪೆಕ್ ಝಡ್ 8 ಎಲ್ ನಲ್ಲಿ 6 ಏರ್ ಬ್ಯಾಗ್ ಗಳು, 7 ಇಂಚಿನ ಟಚ್ ಸ್ಕ್ರೀನ್, ಪವರ್ ಚಾಲಿತ ಡ್ರೈವರ್ ಸೀಟ್, ಸನ್ ರೂಫ್, 18 ಇಂಚಿನ ಅಲಾಯ್ಸ್, ಸೋನಿ ಆಡಿಯೊ ಸಿಸ್ಟಮ್, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾ ಮತ್ತು ಡ್ರೈವರ್ ಮಂಪರು ಪತ್ತೆ ವ್ಯವಸ್ಥೆಯನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ನಿಂದ ಚಾಲನೆ ಪಡೆಯುತ್ತದೆ. ಪ್ರತಿಯೊಂದೂ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಆದಾಗ್ಯೂ, 4 ಡಬ್ಲ್ಯುಡಿ ಆಯ್ಕೆಯು ಕೇವಲ ಡೀಸೆಲ್ ಎಂಜಿನ್ ಇರುವ ಕಾರಿಗೆ ಸೀಮಿತವಾಗಿದೆ.

Continue Reading

ಕರ್ನಾಟಕ

Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

Foreign Investment: ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಸೋಮವಾರ ಸೋಲ್‌ನಲ್ಲಿ ಹೊಯ್ಸಂಗ್‌ ಅಡ್ವಾನ್ಸ್ಡ್‌ ಮಟೇರಿಯಲ್ಸ್‌, ಎಚ್‌ಎಲ್‌ ಮಾಂಡೊ ಕಾರ್ಪೊರೇಷನ್‌, ನಿಫ್ಕೊ, ಡಿಎನ್‌ ಸೊಲುಷನ್ಸ್‌ ಮತ್ತು ಹುಂಡೈ ಮೋಟರ್ಸ್‌ನ ಮುಖ್ಯಸ್ಥರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು.

VISTARANEWS.COM


on

Manufacturing of auto parts in the state Increased propensity for capital investment
Koo

ಬೆಂಗಳೂರು: ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ (Foreign Investment) ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಸೋಮವಾರ ಸೋಲ್‌ನಲ್ಲಿ ಹೊಯ್ಸಂಗ್‌ ಅಡ್ವಾನ್ಸ್ಡ್‌ ಮಟೇರಿಯಲ್ಸ್‌, ಎಚ್‌ಎಲ್‌ ಮಾಂಡೊ ಕಾರ್ಪೊರೇಷನ್‌, ನಿಫ್ಕೊ, ಡಿಎನ್‌ ಸೊಲುಷನ್ಸ್‌ ಮತ್ತು ಹುಂಡೈ ಮೋಟರ್ಸ್‌ನ ಮುಖ್ಯಸ್ಥರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು.

ಜಪಾನಿನ ಐದು ದಿನಗಳ ಯಶಸ್ವಿ ಭೇಟಿ ಪೂರ್ಣಗೊಳಿಸಿ ದಕ್ಷಿಣ ಕೊರಿಯಾಕ್ಕೆ ತೆರಳಿರುವ ನಿಯೋಗವು ಈ ತಿಂಗಳ 5 ರವರೆಗೆ ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳ ಜತೆ ಸಮಾಲೋಚನೆ ನಡೆಸಿ ಬಂಡವಾಳ ಹೂಡಿಕೆ ಆಕರ್ಷಿಸಲಿದೆ.

ರಾಜ್ಯದಲ್ಲಿ ವಾಹನ ಬಿಡಿಭಾಗ, ಜವಳಿ ಉತ್ಪನ್ನ, ನವೀಕರಿಸಬಹುದಾದ ಇಂಧನ, ಮಷಿನ್‌ಟೂಲ್ಸ್‌ ತಯಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು, ವಹಿವಾಟು ವಿಸ್ತರಿಸಲು ದಕ್ಷಿಣ ಕೊರಿಯಾದ ಈ ಬಹುರಾಷ್ಟ್ರೀಯ ಕಂಪನಿಗಳು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ರಾಜ್ಯದಲ್ಲಿ ವಿದ್ಯುತ್‌ಚಾಲಿತ ವಾಹನಗಳ (ಇವಿ) ಮಾರುಕಟ್ಟೆಯು ವ್ಯಾಪಕವಾಗಿ ವಿಸ್ತರಣೆ ಆಗುತ್ತಿರುವುದು ಮತ್ತು ಭಾರತದಲ್ಲಿನ ತಯಾರಿಕಾ ಘಟಕಗಳಲ್ಲಿ ʼಇವಿʼಗಳನ್ನು ತಯಾರಿಸುವ ಬಗ್ಗೆ ಹುಂಡೈ ಮುಖ್ಯಸ್ಥರ ಜತೆಗಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ರಾಜ್ಯದಲ್ಲಿ ಕೈಗಾರಿಕಾ ಅಶಾಂತಿ (ಕಾರ್ಮಿಕರ ವಿವಾದಗಳು) ಕಡಿಮೆ ಪ್ರಮಾಣದಲ್ಲಿ ಇರುವುದು ಮತ್ತು ಪೂರೈಕೆ ಸರಪಣಿಯಲ್ಲಿ ಸ್ಥಿರತೆ ಇರುವುದನ್ನು ಸಚಿವರು ಹುಂಡೈ ಕಂಪನಿಯ ಪ್ರಮುಖರ ಗಮನಕ್ಕೆ ತಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ವಾಹನಗಳ ಪ್ಲಾಸ್ಟಿಕ್‌ ಬಿಡಿಭಾಗ ತಯಾರಿಸುವ ಘಟಕ ಸ್ಥಾಪಿಸಲಿರುವ ನಿಫ್ಕೊ ಕೊರಿಯಾ ಕಂಪನಿಗೆ ಅಗತ್ಯವಾದ ಭೂಮಿ ಸ್ವಾಧೀನ ಮತ್ತು ಇತರ ಅನುಮೋದನೆಗಳಿಗೆ ರಾಜ್ಯ ಸರ್ಕಾರ ತ್ವರಿತವಾಗಿ ಸ್ಪಂದಿಸಲಿದೆ. ಕಾರ್ಖಾನೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.

ರಾಜ್ಯದಲ್ಲಿ ಫೈಬರ್‌ ಆಪ್ಟಿಕ್‌ ಅಳವಡಿಕೆ ಯೋಜನೆಗಳು ಮತ್ತು ವಿದ್ಯುತ್‌ಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚಿಸುವ ಕ್ಷೇತ್ರಗಳಲ್ಲಿ ವಹಿವಾಟು ನಡೆಸಲು ಹೊಯ್ಸಂಗ್‌ ಅಡ್ವಾನ್ಸ್ಡ್‌ ಮಟೇರಿಯಲ್ಸ್‌ ಇಂಗಿತ ವ್ಯಕ್ತಪಡಿಸಿದೆ.

ಕಂಪನಿಯ ಉಪಾಧ್ಯಕ್ಷ ಹಾಂಗ್‌ ಸಂಗ್‌ ಅಹ್ನ್‌ ಅವರು ರಾಜ್ಯದ ನಿಯೋಗದ ಜತೆಗಿನ ಮಾತುಕತೆಯಲ್ಲಿ ಭಾಗಿಯಾಗಿದ್ದರು. ಟೈರ್‌ ಕೋರ್ಡ್ಸ್‌ ತಯಾರಿಕೆಗೆ ಭಾರತವನ್ನು ಪ್ರಮುಖ ನೆಲೆಯನ್ನಾಗಿ ಅಭಿವೃದ್ಧಿಪಡಿಸಲು ಕಂಪನಿಯ ಉದ್ದೇಶಿಸಿದೆ. ಭಾರತದಲ್ಲಿ ಪರಿಸರ ಸ್ನೇಹಿ ಸರಕುಗಳು ಹಾಗೂ ಸುಧಾರಿತ ಜವಳಿ ಉತ್ಪನ್ನಗಳನ್ನು ತಯಾರಿಸುವ ವಹಿವಾಟು ವಿಸ್ತರಿಸುವ ಅವಕಾಶಗಳನ್ನು ಕಂಪನಿಯು ಪರಿಶೀಲಿಸುತ್ತಿದೆ.

ಇದನ್ನೂ ಓದಿ: Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

ರಾಜ್ಯದಲ್ಲಿನ ನವೀಕರಿಸಬಹುದಾದ ಇಂಧನ ವಲಯದಲ್ಲಿನ ಭವಿಷ್ಯದ ವಿಸ್ತರಣೆ ಬಗ್ಗೆ ಸೌರಕೋಶಗಳ ಸೆಮಿಕಂಡಕ್ಟರ್‌ ತಯಾರಿಸುವ ಒಸಿಐ ಹೋಲ್ಡಿಂಗ್ಸ್‌ ಕಂಪನಿ ಜೊತೆ ಸಚಿವರು ಮಾತುಕತೆ ನಡೆಸಿದರು.

ಸೌರಶಕ್ತಿ ಫಲಕಗಳನ್ನು ತಯಾರಿಸುವ ಯೋಜನೆಗಳಿಗೆ ರಾಜ್ಯ ಸರ್ಕಾರವು ಕೊಡಮಾಡುತ್ತಿರುವ ಉತ್ತೇಜನಗಳನ್ನು ನಿಯೋಗವು ಕಂಪನಿಯ ಪ್ರಮುಖರಿಗೆ ಮನವರಿಕೆ ಮಾಡಿಕೊಟ್ಟಿತು.

ವಾಹನ ಬಿಡಿಭಾಗ ತಯಾರಿಸುವ ಎಚ್‌ಎಲ್‌ ಮಂಡೊ ಕಾರ್ಪೊರೇಷನ್ನಿನ ಸಿಎಫ್‌ಒ ಲೀ ಚುಲ್‌ ಮತ್ತು ನಿರ್ದೇಶಕ ಕಿಮ್‌ ಇವುನ್‌ ಸಂಗ್‌ ಅವರನ್ನು ರಾಜ್ಯದ ನಿಯೋಗವು ಭೇಟಿಯಾಗಿತ್ತು.

ಇದನ್ನೂ ಓದಿ: Kannada New Movie: ಪ್ರವೀಣ್ ತೇಜ್ ಅಭಿನಯದ ʼಜಿಗರ್ ಚಿತ್ರ ಜುಲೈ 5ರಂದು ಬಿಡುಗಡೆ

ಬೆಂಗಳೂರಿನಲ್ಲಿ ತಯಾರಿಕಾ ಘಟಕ ಹೊಂದಿರುವ ಕಂಪನಿಯು ರಾಜ್ಯದಲ್ಲಿ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಲು ಉತ್ಸುಕತೆ ತೋರಿದೆ. ವಿದ್ಯುತ್‌ಚಾಲಿತ ಸೇರಿದಂತೆ ರಾಜ್ಯದಲ್ಲಿನ ಒಟ್ಟಾರೆ ವಾಹನ ಉದ್ಯಮ ಕ್ಷೇತ್ರದಲ್ಲಿನ ಅನುಕೂಲತೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯದ ನಿಯೋಗವು ಆಹ್ವಾನ ನೀಡಿದೆ. ಮಷೀನ್‌ಟೂಲ್ಸ್‌ ತಯಾರಿಕಾ ಕಂಪನಿ ಡಿಎನ್‌ ಸೊಲುಷನ್ಸ್‌, ಬೆಂಗಳೂರು ಬಳಿ 25 ಎಕರೆ ಪ್ರದೇಶದಲ್ಲಿ ತನ್ನ ತಯಾರಿಕಾ ಘಟಕ ಆರಂಭಿಸಲಿದೆ.

Continue Reading

ವಾಣಿಜ್ಯ

Hero MotoCorp: ಹೊಸ ಬೈಕ್‌ ‘ದಿ ಸೆಂಟೆನಿಯಲ್’ ಪರಿಚಯಿಸಿದ ಹೀರೋ ಮೋಟೋಕಾರ್ಪ್

Hero MotoCorp: ಸ್ಕೂಟರ್‌ಗಳು ಹಾಗೂ ಮೋಟಾರ್‌ ಸೈಕಲ್‌ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನ ಸ್ಥಾಪಕ, ಅಧ್ಯಕ್ಷ ದಿ. ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101 ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಸಂಗ್ರಹಕಾರರ ಆವೃತ್ತಿಯ ಮೋಟಾರ್‌ಸೈಕಲ್ ‘ದಿ ಸೆಂಟೆನಿಯಲ್’ ಅನ್ನು ಪರಿಚಯಿಸಿದೆ.

VISTARANEWS.COM


on

Hero MotoCorp has introduced the new motorcycle The Centennial
Koo

ಬೆಂಗಳೂರು: ಸ್ಕೂಟರ್‌ಗಳು ಹಾಗೂ ಮೋಟಾರ್‌ ಸೈಕಲ್‌ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನ (Hero MotoCorp) ಸ್ಥಾಪಕ, ಅಧ್ಯಕ್ಷ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಸಂಗ್ರಹಕಾರರ ಆವೃತ್ತಿಯ ಮೋಟಾರ್‌ ಸೈಕಲ್ ‘ದಿ ಸೆಂಟೆನಿಯಲ್’ ಅನ್ನು ಪರಿಚಯಿಸಿದೆ.

ಈ ಕುರಿತು ಹೀರೋ ಮೋಟೋಕಾರ್ಪ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಪವನ್ ಮುಂಜಾಲ್ ಮಾತನಾಡಿ, ತಮ್ಮ ತಂದೆ ಹಾಗೂ ಹೀರೋ ಮೋಟೋಕಾರ್ಪ್‌ನ ಸ್ಥಾಪಕ ಚೇರ್ಮನ್ ಆದ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ ಅವರ ಶತಮಾನೋತ್ಸವದ ಒಂದು ವರ್ಷದ ಪೂರ್ಣಗೊಳ್ಳುವಿಕೆಯನ್ನು ನಾವು ಆಚರಿಸುತ್ತಿರುವಂತಹ ಸಂದರ್ಭದಲ್ಲಿ ಎಂಜಿನಿಯರಿಂಗ್ ಅದ್ಭುತವಾದ “ದಿ ಸೆಂಟೆನಿಯಲ್” (The Centennial) ಅನ್ನು ಪರಿಚಯಿಸುತ್ತಿರುವುದಕ್ಕೆ ನನಗೆ ಅತೀವ ಉತ್ಸಾಹ ಮತ್ತು ಹೆಮ್ಮೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಭಾರತದ ಹೀರೋ ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (CIT) ಮತ್ತು ಜರ್ಮನಿಯ ಹೀರೋ ಟೆಕ್ ಸೆಂಟರ್ (TCG) ನ ಜಾಗತಿಕ ನಿಪುಣರು ʼದಿ ಸೆಂಟೆನಿಯಲ್ʼ ಅನ್ನು ಪರಿಕಲ್ಪಿಸಿ, ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಇದರ ಆವಿಷ್ಕಾರ ಮತ್ತು ಅತ್ಯುತ್ಕೃಷ್ಟತೆಗೆ ಸಂಸ್ಥೆಯ ಬದ್ಧತೆಯನ್ನು ಪ್ರತಿಫಲಿಸುತ್ತದೆ, ಕೇವಲ 100 ಅತ್ಯಂತ ಸೂಕ್ಷ್ಮವಾಗಿ ರಚಿಸಲಾದ ಯೂನಿಟ್‌ಗಳೊಂದಿಗೆ, ಇದು ಪ್ರೀಮಿಯಮ್ ಕಾರ್ಯಕ್ಷಮತೆ ಹಾಗೂ ಕಲಾಕೃತಿಯ ಆಕರವಾಗಿದೆ.

ದಿ ಸೆಂಟೆನಿಯಲ್

ʼದಿ ಸೆಂಟೆನಿಯಲ್‌ʼ ವಿಶಿಷ್ಟವಾದ ಅಂಶಗಳು, ವರ್ಧಿತ ಚಾಲನಾ ಅನುಭವಕ್ಕಾಗಿ ಹಗುರತೂಕದ ಅಲ್ಯುಮಿನಿಯಮ್ ಸ್ವಿನ್‌ಗರ್ಮ್ ಮತ್ತು ತೆಳುವಾದ ಸೌಂದರ್ಯ ಹಾಗೂ ರಚನಾತ್ಮಕ ದೃಢತೆಗಾಗಿ ಹೊಸದಾಗಿ ವಿನ್ಯಾಸಗೊಂಡಿರುವ ಇಂಗಾಲ ಫೈಬರ್‌ನ ಬಾಡಿ ಪ್ಯಾನೆಲ್‌ಗಳನ್ನು ಒಳಗೊಂಡಿದೆ. ಹ್ಯಾಂಡಲ್‌ಬಾರ್‌ಗಳು, ಹ್ಯಾಂಡಲ್‌ಬಾರ್ ಮೌಂಟ್ಸ್, ಟ್ರಿಪಲ್ ಕ್ಲಾಂಪ್ಸ್, ಮತ್ತು ರೇರ್-ಸೆಟ್ ಫುಟ್ ಪೆಗ್ಸ್ ಒಳಗೊಂಡಂತೆ, ’ದಿ ಸೆಂಟೆನಿಯಲ್ʼ ನ ಗುಣವಿಶೇಷತೆಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿ, ಯಾಂತ್ರೀಕೃತಗೊಳಿಸಿ ಆನೋಡೈಜ್ಡ್ ಮಾಡಲಾಗಿದೆ.

ಮೆಚ್ಚಿಕೊಳ್ಳುವಂತಹ ಕಾರ್ಯಕ್ಷಮತೆ ಹಾಗೂ ಚುರುಕುತನ ಒದಗಿಸುವ ಈ ಬೈಕ್, 43-ಮಿ.ಮೀ ತಲೆಕೆಳಗಾದ ಫ್ರಂಟ್ ಸಸ್ಪೆನ್ಶನ್‌ನೊಂದಿಗೆ ಸಜ್ಜುಗೊಂಡಿದೆ.

ಇದನ್ನೂ ಓದಿ: Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

ʼದಿ ಸೆಂಟೆನಿಯಲ್‌ʼ ಬೈಕ್‌ 158 ಕಿಲೋ ಕಡಿಮೆ ಕರ್ಬ್ ತೂಕದೊಂದಿಗೆ ’ದಿ ಸೆಂಟೆನಿಯಲ್’ಅತ್ಯಂತ ಹಗುರವಾಗಿದ್ದು, ಸುಧಾರಿತ ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ ಒದಗಿಸುತ್ತದೆ. ʼದಿ ಸೆಂಟೆನಿಯಲ್ʼ ನ ಡೆಲಿವರಿ, ಸೆಪ್ಟೆಂಬರ್ 2024ರಿಂದ ಆರಂಭವಾಗಲಿದೆ.

Continue Reading

Latest

BGauss RUV350 : ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಆರ್‌ಯುವಿ350 ಬಿಡುಗಡೆ ಮಾಡಿದ ಬಿಗಾಸ್

BGauss RUV350 : ಬಿಗಾಸ್ ಆರ್‌ಯುವಿ350 ಜುಲೈನಿಂದ ಎಲ್ಲಾ 120 ಬಿಗಾಸ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಬಿಗಾಸ್ ಆರ್‌ಯುವಿ350ಯ ಸ್ಪರ್ಧಾತ್ಮಕ ಆರಂಭಿಕ ಬೆಲೆ ರೂ. 1,09,999/- (ಎಕ್ಸ್ ಶೋ ರೂಂ) ಈ ದ್ವಿಚಕ್ರ ವಾಹನವನ್ನು ವಿಸ್ತಾವಾದ ಗ್ರಾಹಕ ಜಗತ್ತಿಗೆ ಸುಲಭವಾಗಿ ದೊರಕಿಸುವಂತೆ ಮಾಡಲು ವಿವಿಧ ಹಣಕಾಸು (ಫೈನಾನ್ಸಿಂಗ್) ಆಯ್ಕೆಗಳನ್ನು ಸಹ ನೀಡಲಾಗುತ್ತದೆ.

VISTARANEWS.COM


on

BGauss RUV350
Koo

ಮುಂಬೈ : ಆರ್ ಆರ್ ಗ್ಲೋಬಲ್‌ನ ಬಿಗಾಸ್ ತನ್ನ ಹೊಚ್ಚ ಹೊಸ ಮಾಡೆಲ್ ಆರ್‌ಯುವಿ350 (BGauss RUV350 ) ಎಲೆಕ್ಟ್ರಿಕ್​ ಸ್ಕೂಟರ್ ಬಿಡುಗಡೆ ಮಾಡಿದೆ. ನಗರ ಕೇಂದ್ರೀತ ಸ್ಕೂಟರ್​ ಆರ್‌ಯುವಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದ್ದು, ಅತ್ಯುತ್ತಮ ರೈಡಿಂಗ್ ಅನುಭವವನ್ನು ನೀಡುತ್ತಿದೆ. ಅದಕ್ಕಾಗಿ ವಿಭಿನ್ನ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಬಿಗಾಸ್ ಆರ್‌ಯುವಿ350 ಜುಲೈನಿಂದ ಎಲ್ಲಾ 120 ಬಿಗಾಸ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಬಿಗಾಸ್ ಆರ್‌ಯುವಿ350ಯ ಸ್ಪರ್ಧಾತ್ಮಕ ಆರಂಭಿಕ ಬೆಲೆ ರೂ. 1,09,999/- (ಎಕ್ಸ್ ಶೋ ರೂಂ) ಈ ದ್ವಿಚಕ್ರ ವಾಹನವನ್ನು ವಿಸ್ತಾವಾದ ಗ್ರಾಹಕ ಜಗತ್ತಿಗೆ ಸುಲಭವಾಗಿ ದೊರಕಿಸುವಂತೆ ಮಾಡಲು ವಿವಿಧ ಹಣಕಾಸು (ಫೈನಾನ್ಸಿಂಗ್) ಆಯ್ಕೆಗಳನ್ನು ಸಹ ನೀಡಲಾಗುತ್ತದೆ.

ನಗರ ಪ್ರಯಾಣಿಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿರುವ ಬಿಗಾಸ್ ಆರ್‌ಯುವಿ350 ಉನ್ನತ- ಕಾರ್ಯಕ್ಷಮತೆ ಒದಗಿಸುವ, ದಕ್ಷತೆ ಹಾಗೂ ವಿಶ್ವಾಸಾರ್ಹತೆಗೆ ಹೆಚ್ಚಿನ ಒತ್ತು ನೀಡುವ ಇನ್ ವೀಲ್ ಹೈಪರ್ ಡ್ರೈವ್ ಮೋಟಾರ್‌ ಹೊಂದಿದೆ. ಸಾಂಪ್ರದಾಯಿಕ ಬೆಲ್ಟ್- ಚಾಲಿತ ವ್ಯವಸ್ಥೆಗಳಿಗಿಂತ ಭಿನ್ನವಾಗಿರುವ ಆರ್‌ಯುವಿ350ಯ ಡೈರೆಕ್ಟ್ ಡ್ರೈವ್ ಮೋಟಾರ್ ವ್ಯವಸ್ಥೆಯು ಬ್ಯಾಟರಿ ಚಾರ್ಜ್​ (ವಿದ್ಯುತ್) ನಷ್ಟ ಆಗುವುದನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಉತ್ತಮ ದಕ್ಷತೆ ಮತ್ತು ಹೆಚ್ಚುನ ಕಾರ್ಯಕ್ಷಮತೆಗೆ ನೀಡುತ್ತದೆ. ಈ ವಿನ್ಯಾಸವು ಶಕ್ತಿಯುತ ಮತ್ತು ಮೃದುವಾದ ಆಕ್ಸಲರೇಷನ್ ಆಗುವಂತೆ ನೋಡಿಕೊಳ್ಳುತ್ತದೆ.

ಉನ್ನತ ಕಾರ್ಯಕ್ಷಮತೆ ಮತ್ತು ವೈವಿಧ್ಯಮಯತೆ

ಆರ್‌ಯುವಿ350ನ ಅಸಾಧಾರಣ ಫೀಚರ್ ಎಂದರೆ ಅದರ ಗ್ರೇಡೇಬಿಲಿಟಿ. ಇದು ಕಡಿದಾದ ಇಳಿಜಾರು ಹಾದಿಗಳಲ್ಲಿ ಸುಲಭವಾಗಿ ಸಾಗಲು ಅನುವು ಮಾಡಿಕೊಡುತ್ತದೆ. ಈ ದ್ವಿಚಕ್ರ ವಾಹನವು ವಿವಿಧ ರೀತಿಯ ಭೂಪ್ರದೇಶಗಳಿಗೂ ಉತ್ತಮ ಆಯ್ಕೆಯಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಅಥವಾ ಸಮತಟ್ಟಾದ ನಗರ ರಸ್ತೆಗಳಲ್ಲಿ ಹೀಗೆ ಎಲ್ಲೇ ಪ್ರಯಾಣಿಸುತ್ತಿರಲಿ ಆರ್‌ಯುವಿ350 ಸ್ಥಿರ ಮತ್ತು ವಿಶ್ವಾಸಾರ್ಹ ರೈಡಿಂಗ್ ಸೌಕರ್ಯವನ್ನು ಒದಗಿಸುತ್ತದೆ.

ಬಾಳಿಕೆ ಮತ್ತು ಸುರಕ್ಷತೆ

ಬಾಳಿಕೆ ಮತ್ತು ಸುರಕ್ಷತೆ ಎಂಬುದು ಆರ್‌ಯುವಿ350 ವಿನ್ಯಾಸದ ಅವಿಭಾಜ್ಯ ಅಂಗ. ವಾಹನವು ದೃಢವಾದ, ಗಟ್ಟಿಯಾದ ಲೋಹದ ಬಾಡಿ ಹೊಂದಿದ್ದು, ಆ ಮೂಲಕ ವಾಹನದ ಬಾಳಿಕೆ ಹೆಚ್ಚಿಸಲಾಗಿದೆ. ಜೊತೆಗೆ ಸವಾರನಿಗೆ ಹೆಚ್ಚುವರಿ ಸುರಕ್ಷತೆ ಒದಗಿಸುತ್ತದೆ. ಈ ಗಟ್ಟಿಮುಟ್ಟಾದ ವಾಹನವು 16-ಇಂಚಿನ ಚಕ್ರಗಳನ್ನು ಹೊಂದಿದ್ದು, ಆ ಚಕ್ರಗಳು ಹೆಚ್ಚಿನ ಸ್ಥಿರತೆ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ. ಚಕ್ರದ ದೊಡ್ಡ ಗಾತ್ರವು ಸವಾರಿಯ ಗುಣಮಟ್ಟವನ್ನು ಸುಧಾರಿಸುತ್ತದೆ, ಗುಂಡಿಗಳು ಮತ್ತು ಉಬ್ಬು ತಗ್ಗುಗಳನ್ನು ಹೊಂದಿರುವ ರಸ್ತೆಗಳ ಮೇಲ್ಮೈಗಳ ಮೇಲೆ ಸುಗಮವಾಗಿ ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ.

ರೈಡರ್ ನ ಆರಾಮದಾಯಕತೆ ಮತ್ತು ಅನುಕೂಲತೆ

ಆರ್‌ಯುವಿ350 ಅನ್ನು ರೈಡರ್ ಗೆ ಆರಾಮದಾಯಕತೆ ಮತ್ತು ಅನುಕೂಲತೆಯನ್ನು ಒದಗಿಸುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಸೀಟಿಂಗ್ ವ್ಯವಸ್ಥೆಯು ಸುದೀರ್ಘ ಪ್ರಯಾಣದ ಸಮಯದಲ್ಲಿಯೂ ಉತ್ತಮ ಸೌಕರ್ಯವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಸೀಟು ವಿಶಾಲವಾಗಿದ್ದು, ಈ ವಿಶಾಲವಾದ ಸೀಟಿನ ಕೆಳಗೆ ಉತ್ತಮ ಸ್ಟೋರೇಜ್ ವ್ಯವಸ್ಥೆ ಕೂಡ ಇದೆ. ಈ ಮೂಲಕ ರೈಡರ್ ಗಳು ತಮ್ಮ ಅಗತ್ಯ ವಸ್ತುಗಳನ್ನು ಅನುಕೂಲಕರವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ. ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆಯು ಆಘಾತ, ವೈಬ್ರೇಷನ್ ಗಳು ಅಥವಾ ಕಂಪನಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಜೊತೆಗೆ ಉಬ್ಬು ತಗ್ಗು ರಸ್ತೆಗಳಲ್ಲಿ ಸುಗಮ ಸವಾರಿ ಮಾಡುವ ಸೌಕರ್ಯ ಒದಗಿಸುತ್ತದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

ಆಧುನಿಕ ಫೀಚರ್ ಗಳು ಮತ್ತು ಕನೆಕ್ಟಿವಿಟಿ ವ್ಯವಸ್ಥೆ

ಆಧುನಿಕ ಫೀಚರ್ ಗಳ ಶ್ರೇಣಿಯನ್ನು ಹೊಂದಿರುವ ಆರ್‌ಯುವಿ350 ಸವಾರರ ಒಟ್ಟಾರೆ ಅನುಭವ ಹೆಚ್ಚಿಸುವ ಗುರಿ ಹೊಂದಿದೆ. ಡಿಜಿಟಲ್ ಡಿಸ್ಪ್ಲೇ ಕಾಲ್ ನೋಟಿಫಿಕೇಷನ್ ಗಳು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಜಿಯೋ ಫೆನ್ಸಿಂಗ್, ವಾಹನ ಇಮ್ಮೊಬಿಲೈಸೇಷನ್, ಡ್ಯುಯಲ್ ಥೀಮ್, ಹಗಲು ರಾತ್ರಿ ಮೋಡ್, ಡಾಕ್ಯುಮೆಂಟ್ ಸ್ಟೋರೇಜ್, ವೇಗ, ಬ್ಯಾಟರಿ ಸ್ಥಿತಿ ಮತ್ತು ರೇಂಜ್ ನಂತಹ ನೈಜ-ಸಮಯದ ಮಾಹಿತಿ ಒದಗಿಸುತ್ತದೆ. ಈ ಮೂಲಕ ಸವಾರರು ಎಲ್ಲಾ ಅಗತ್ಯ ಮಾಹಿತಿಯು ಸುಲಭವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಇದಲ್ಲದೆ, ವಾಹನವು ಬ್ಲೂಟೂತ್ ಮತ್ತು ಟೆಲಿಮ್ಯಾಟಿಕ್ಸ್‌ ನಂತಹ ಸ್ಮಾರ್ಟ್ ಕನೆಕ್ಟಿವಿಟಿ ಫೀಚರ್ ಗಳನ್ನು ಒಳಗೊಂಡಿದೆ. ಈ ವ್ಯವಸ್ಥೆಯು ಸವಾರರು ಸಂಪರ್ಕದಲ್ಲಿರಲು ಮತ್ತು ಸುಲಭವಾಗಿ ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ.

ಪರಿಸರ ಸ್ನೇಹಿ ಮತ್ತು ಆರ್ಥಿಕ ಸ್ನೇಹಿ

ಆರ್‌ಯುವಿ350 ಕೇವಲ ಹೆಚ್ಚಿನ ಕಾರ್ಯಕ್ಷಮತೆ ಒದಗಿಸುವ ವಾಹನ ಮಾತ್ರವೇ ಅಲ್ಲ, ಜೊತೆಗೆ ಪರಿಸರ ಸ್ನೇಹಿ ಆಯ್ಕೆಯೂ ಆಗಿದೆ. ಆ ಮೂಲಕ ಈ ವಾಹನವು ಸ್ವಚ್ಛ ಮತ್ತು ಆರೋಗ್ಯಕರ ಪರಿಸರಕ್ಕೆ ಕೊಡುಗೆ ನೀಡುತ್ತದೆ. ವಾಹನದ ಸಮರ್ಥ ವಿನ್ಯಾಸ ಮತ್ತು ಕಡಿಮೆ ನಿರ್ವಹಣಾ ಅಗತ್ಯತೆಗಳು ಇದನ್ನು ನಗರ ಪ್ರಯಾಣಿಕರಿಗೆ ಆರ್ಥಿಕವಾಗಿ ನೆರವಾಗುವ ಆಯ್ಕೆಯನ್ನಾಗಿಯೂ ಮಾಡುತ್ತದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದು

ಸ್ಕೂಟರ್​ ಬಿಡುಗಡೆ ಕುರಿತು ಬಿಗಾಸ್ ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹೇಮಂತ್ ಕಾಬ್ರಾ ಮಾತನಾಡಿ “ನಗರದ ಸಂಚಾರ ವ್ಯವಸ್ಥೆಗೆ ಹೊಸತನ ನೀಡಲೆಂದೇ ವಿನ್ಯಾಸಗೊಳಿಸಲಾದ ಕ್ರಾಂತಿಕಾರಿ ಬಿಗಾಸ್ಆರ್‌ಯುವಿ350 ಅನ್ನು ಪರಿಚಯಿಸಲು ಸಂತೋಷ ಪಡುತ್ತೇವೆ. ಇದು ನಾವೀನ್ಯತೆ ಕಡೆಗೆ ನಾವು ಹೊಂದಿರುವ ನಮ್ಮ ಬದ್ಧತೆಗೆ ಸಾಕ್ಷಿ. ಆರ್‌ಯುವಿ350ನ ಸುಧಾರಿತ ಫೀಚರ್ ಗಳು, ದೃಢ ವಿನ್ಯಾಸ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ನೀಡುತ್ತದೆ. ಆರ್‌ಯುವಿ350 ನಮ್ಮ ತಾಂತ್ರಿಕ ಹೆಚ್ಚುಗಾರಿಕೆಗೆ ಉದಾಹರಣೆ. ಇದು ಮೇಕ್ ಇನ್ ಇಂಡಿಯಾ ಉಪಕ್ರಮದೊಂದಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಗುಣಮಟ್ಟದ ಉತ್ಪನ್ನಗಳನ್ನು ದೇಶದಲ್ಲಿಯೇ ಉತ್ಪಾದಿಸುವ ನಮ್ಮ ಬದ್ಧತೆಯನ್ನು ಈ ವಾಹನ ತೋರಿಸುತ್ತದೆ. ಈ ವಾಹನವು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಎಂದು ನಾವು ನಂಬಿದ್ದೇವೆ” ಎಂದು ಹೇಳಿದರು.

Continue Reading
Advertisement
IPS transfer
ಪ್ರಮುಖ ಸುದ್ದಿ33 mins ago

IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

karnataka weather Forecast
ಮಳೆ57 mins ago

Karnataka Weather : ಬೆಂಗಳೂರಲ್ಲಿ ಮರೆಯಾಗುವ ಸೂರ್ಯ; ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ

Dharamshala Tour
ಪ್ರವಾಸ1 hour ago

Dharamshala Tour: ಪರಿಪೂರ್ಣ ಪ್ರವಾಸದ ಅನುಭವ ಕೊಡುವ ಧರ್ಮಶಾಲಾ

Vastu Tips
ಧಾರ್ಮಿಕ1 hour ago

Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

Sour Curd
ಆರೋಗ್ಯ2 hours ago

Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

Dina Bhavishya
ಭವಿಷ್ಯ2 hours ago

Dina Bhavishya : ಒತ್ತಡಗಳು ದೂರವಾಗಿ ಹರ್ಷದಿಂದ ಕಾಲ ಕಳೆಯುವಿರಿ

ಆಟೋಮೊಬೈಲ್6 hours ago

Mahindra Scorpio N : ಮಹೀಂದ್ರಾ ತನ್ನ ಸ್ಕಾರ್ಪಿಯೋ-ಎನ್ Z8 ವೇರಿಯೆಂಟ್​ನಲ್ಲಿ ನೀಡಿದ ಹಲವು ಫೀಚರ್​ಗಳು

suicide news
ಕರ್ನಾಟಕ7 hours ago

Suicide News : ಮಗನ ಕುಡಿತದ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಪ್ಪ, ಅಮ್ಮ

Aditya L1
ದೇಶ7 hours ago

Aditya L1: ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌ 1; ಇಸ್ರೋಗೆ ಭಾರಿ ಮುನ್ನಡೆ

David Miller :
ಪ್ರಮುಖ ಸುದ್ದಿ8 hours ago

David Miller : ಸೋಲಿನ ಬೇಸರದಲ್ಲಿ ವಿದಾಯ ಹೇಳಿದರೇ ಮಿಲ್ಲರ್​​; ದಕ್ಷಿಣ ಆಫ್ರಿಕಾ ಆಟಗಾರನ ಪ್ರತಿಕ್ರಿಯೆ ಏನು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ12 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌