Rishabh Pant : ರಿಷಭ್ ಪಂತ್​ ಅಕ್ಕ ವಿವಾಹವಾಗುತ್ತಿರುವ ಅಂಕಿತ್ ಚೌಧರಿ ಯಾರು? ಇಲ್ಲಿದೆ ವಿವರ - Vistara News

ಕ್ರಿಕೆಟ್

Rishabh Pant : ರಿಷಭ್ ಪಂತ್​ ಅಕ್ಕ ವಿವಾಹವಾಗುತ್ತಿರುವ ಅಂಕಿತ್ ಚೌಧರಿ ಯಾರು? ಇಲ್ಲಿದೆ ವಿವರ

Rishabh Pant : ತನ್ನ ಸಹೋದರಿ ವಿವಾಹವಾಗುತ್ತಿರುವ ಸುದ್ದಿಯನ್ನು ರಿಷಭ್ ಪಂತ್​ ಇನ್​ಸ್ಟಾಗ್ರಾಮ್​ ಮೂಲಕ ಬಹಿರಂಗಪಡಿಸಿದ್ದರು.

VISTARANEWS.COM


on

Sakshi Pant
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್​​ ರಿಷಭ್ ಪಂತ್ (Rishabh Pant) ಸಹೋದರಿ ಸಾಕ್ಷಿ ಪಂತ್ (Sakshi Pant) ಜನವರಿ 5 ರಂದು ಲಂಡನ್​ನಲ್ಲಿ ಅಂಕಿತ್ ಚೌಧರಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೋಡಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಕ್ಷಿ ಪಂತ್ ತಮ್ಮ ನಿಶ್ಚಿತಾರ್ಥದ ಒಂದು ನೋಟವನ್ನು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿಯೂ ಹಂಚಿಕೊಂಡಿದ್ದಾರೆ. ಅವರಿಬ್ಬರು ಈಗ ಮದುವೆಯಾಗುತ್ತಿರುವ ಹೊರತಾಗಿಯೂ 9 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ.

ಒಂಬತ್ತು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಸಾಕ್ಷಿ ಪಂತ್ ಮತ್ತು ಅಂಕಿತ್ ಚೌಧರಿ ನಿಶ್ಚಿತಾರ್ಥದ ಉಂಗುರಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ನಿಶ್ಚಿತಾರ್ಥದ ಫೊಟೋಗಳು ಬಹಿರಂಗಗೊಳ್ಳುತ್ತಿದ್ದಂತೆ ಜೋಡಿಯ ಕುರಿತ ಕೌತುಕ ಹೆಚ್ಚಾಗಿದೆ. ಅಂಕಿತ್ ಚೌಧರಿ ಯಾರು ಮತ್ತು ಆತ ಏನು ಮಾಡುತ್ತಾನೆ? ಸಾಕ್ಷಿ ಪಂತ್ ಮತ್ತು ಅವರು ಮೊದಲು ಹೇಗೆ ಸಂಧಿಸಿದ್ದು ಎಲ್ಲಿ ಎಂಬೆಲ್ಲ ಪ್ರಶ್ನೆಗಳು ಎದ್ದಿವೆ.

ಎಲ್ಲಿದ್ದಾರೆ ಅಂಕಿತ್​?

ಅಂಕಿತ್ ಚೌಧರಿ ಪ್ರಸ್ತುತ ಲಂಡನ್​ನಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಣ ಮತ್ತು ಪರಿಸರದ ಮೇಲೆ ಹೂಡಿಕೆ ಮಾಡುವ ಎಲೈಟ್ ಇ 2 ಕಂಪನಿಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 2021ರಲ್ಲಿ ಈ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಅವರ ವೃತ್ತಿಪರ ಸಾಧನೆಗಳ ಬಗ್ಗೆ ಹೆಚ್ಚುವರಿ ಮಾಹಿತಿ ಇಲ್ಲ.

2021ರಲ್ಲಿ, ರಿಷಭ್ ಪಂತ್ ಅವರ ಸಹೋದರಿ ಸಾಕ್ಷಿ ಪಂತ್ ಅವರನ್ನೂ ಅದೇ ಕಂಪನಿಯ ಮಂಡಳಿಯ ಸದಸ್ಯರಾಗಿ ನೇಮಿಸಲಾಗಿದೆ. ಜೋಡಿ ಲಂಡನ್ ನಲ್ಲಿ ತಮ್ಮ ವ್ಯವಹಾರ ಉದ್ಯಮಗಳನ್ನು ನೋಡಿಕೊಳ್ಳುತ್ತಿದೆ.

ಸಾಕ್ಷಿ ಪಂತ್ ಅಂಕಿತ್ ಚೌಧರಿಯನ್ನು ಭೇಟಿಯಾಗಿದ್ದು ಯಾವಾಗ?

ರಿಷಭ್ ಗಿಂತ ಎರಡು ವರ್ಷ ದೊಡ್ಡವರಾದ ಸಾಕ್ಷಿ ಪಂತ್ ಡೆಹ್ರಾಡೂನ್ ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಬಳಿಕ ಯುನೈಟೆಡ್ ಕಿಂಗ್ ಡಮ್ ನಲ್ಲಿ ಪದವಿ ಪಡೆದಿದ್ದಾರೆ. ಇಂಗ್ಲೆಂಡ್​ನಲ್ಲಿ ಅವರು ಸಾಕಷ್ಟು ಸಮಯವನ್ನು ಕಳೆದಿದ್ದರಿಂದ ಅಂಕಿತ್ ಚೌಧರಿ ಅವರನ್ನು ಭೇಟಿಯಾಗಿದ್ದಾರೆ. ಅಲ್ಲಿ ಅವರ ಪ್ರೀತಿ ಮೊಳಕೆ ಒಡೆದಿತ್ತು.

ಇನ್​ಸ್ಟಾದಲ್ಲಿವೆ ಫೋಟೋಗಳು

ಸಹೋದರಿ ಸಾಕ್ಷಿ ಅವರ ನಿಶ್ಚಿತಾರ್ಥ ಈ ಸಮಾರಂಭದ ಫೋಟೊಗಳನ್ನು ಪಂತ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಭ್​ ಪಂತ್​ ಅವರು ಕಪ್ಪು ಬಣ್ಣದ ಬ್ಲೇಸರ್​ ಧರಿಸಿ ತಮ್ಮ ತಂಗಿ ಹಾಗೂ ತಾಯಿಯ ಜತೆ ಕುಟುಂಬ ಸಮೇತರಾಗಿ ಫೋಟೊ ತೆಗಿಸಿಕೊಂಡಿದ್ದಾರೆ. ಈ ಫೋಟೊಗಳು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪಂತ್​ ಸಹೋದರಿಗೆ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ : Boycott Maldives : ಮಾಲ್ಡೀವ್ಸ್ ಉದ್ಧಟತನ; ಮೋದಿ ಪರ ಬ್ಯಾಟಿಂಗ್ ಮಾಡಿದ ಸಚಿನ್

ಅಂಕಿತ್ ಚೌಧರಿ, ಸಹೋದರಿ ಸಾಕ್ಷಿ ಮತ್ತು ತಾಯಿಯ ಜತೆಗಿರುವ ಫೋಟೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಪಂತ್​ “ಅಭಿನಂದನೆಗಳು ನನ್ನ ಸಹೋದರಿ” ಎಂದು ಬರೆದುಕೊಂಡಿದ್ದಾರೆ. ಸಾಕ್ಷಿ ಕೂಡ ನಿಶ್ಚಿತಾರ್ಥದ ಫೋಟೊಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅರ್ಪಆತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs ENG: ರಾಂಚಿ ಟೆಸ್ಟ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!

ಫೆ.23ರಿಂದ ರಾಂಚಿಯಲ್ಲಿ ಆರಂಭಗೊಳ್ಳಲಿರುವ ಭಾರತ ಮತ್ತುಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯವನ್ನು(IND vs ENG) ರದ್ದು ಮಾಡುವಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆಯೊಡ್ಡಿದ್ದಾನೆ.

VISTARANEWS.COM


on

Gurpatwant Singh Pannun
Koo

ರಾಂಚಿ: ಭಾರತ ಮತ್ತು ಇಂಗ್ಲೆಂಡ್​(India vs England 4th test) ನಡುವೆ ಫೆ.23ರಿಂದ ರಾಂಚಿಯಲ್ಲಿ ಆರಂಭಗೊಳ್ಳಲಿರುವ ನಾಲ್ಕನೇ ಟೆಸ್ಟ್​ ಪಂದ್ಯವನ್ನು(IND vs ENG) ರದ್ದು ಮಾಡುವಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆಯೊಡ್ಡಿದ್ದಾನೆ. ಸಿಪಿಐ (ಮಾವೋವಾದಿ)ಗೆ ಗಲಭೆ ಸೃಷ್ಟಿಸುವಂತೆ ವಿಡಿಯೊ ಮೂಲಕ ಒತ್ತಾಯಿಸಿದ್ದಾನೆ.

ಭಾರತ ಮತ್ತು ಇಂಗ್ಲೆಂಡ್ ಆಟಗಾರರು ಈಗಾಗಲೇ ರಾಂಚಿ ತಲುಪಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಗುರುಪತ್ವಂತ್ ಸಿಂಗ್ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಯ ಹಿನ್ನೆಲೆಯಲ್ಲಿ ಜಾರ್ಖಂಡ್ ಪೊಲೀಸರು ಅಲರ್ಟ್ ಆಗಿದ್ದು ಪಂದ್ಯ ನಡೆಯುವ ಜೆಎಸ್​ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ(JSCA International Stadium Complex, Ranchi) ಸಂಕೀರ್ಣದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಿದ್ದಾರೆ ಮಾಡಿದ್ದಾರೆ. ಜತೆಗೆ ಪ್ರಚೋಧನೆ ನೀಡಿರುವ ಗುರುಪತ್ವಂತ್ ವಿರುದ್ಧ ದೂರ್ವಾ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಇಲ್ಲಿನ ಡಿಎಸ್ಪಿ ಪಿ.ಕೆ.ಮಿಶ್ರಾ, ಪಂದ್ಯಕ್ಕೆ ಯಾರು ಅಡ್ಡಿಪಡಿಸದಂತೆ ಸಂಪೂರ್ಣ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಯಾರಿಗೂ ಭಯ ಬೇಡ. ಗುರುಪತ್ವಂತ್ ಸಿಂಗ್ ಈ ರೀತಿಯ ಬೆದರಿಕೆ ಒಡ್ಡುತ್ತಿರುವುದು ಇದೇ ಮೊದಲೆನಲ್ಲ. ಇದಕ್ಕೂ ಮುನ್ನ ಹಲವು ಬಾರಿ ಈ ರೀತಿಯ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಬೆದರಿಕೆಯೊಡ್ಡಿದ್ದ. ಈ ಕಾರಣಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಆತನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ Ind vs Eng : ನಾಲ್ಕನೇ ಟೆಸ್ಟ್​ಗೆ ಜಸ್​ಪ್ರಿತ್ ಬುಮ್ರಾ ಬಿಡುಗಡೆ ​, ರಾಹುಲ್ ಔಟ್​

ಇದಕ್ಕೂ ಮೊದಲು ಪನ್ನುನ್ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ ಬೆದರಿಕೆ ಹಾಕಿದ್ದ. ಡಿಸೆಂಬರ್ 30ರಂದು ಪ್ರಧಾನಿಯವರ ಅಯೋಧ್ಯೆ ರೋಡ್‌ಶೋ ಅನ್ನು ಹಾಳುಗೆಡಹುವಂತೆ ಮುಸ್ಲಿಮರನ್ನು ಪ್ರಚೋದಿಸಲು ಯತ್ನಿಸಿದ್ದ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Punjab CM Bhagwant Mann) ಮತ್ತು ಡಿಜಿಪಿ ಗೌರವ್ ಯಾದವ್ ಅವರನ್ನು ಕೂಡ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದ. ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದಂದು ಸಿಎಂ ಮಾನ್ ಮೇಲೆ ದಾಳಿ ಮಾಡಲು ಒಟ್ಟಾಗುವಂತೆ ಪನ್ನುನ್‌, ಇತರ ಖಲಿಸ್ತಾನಿ ಗ್ಯಾಂಗ್‌ಸ್ಟರ್‌ಗಳಿಗೆ ಕರೆ ನೀಡಿದ್ದ.

ಜನವರಿ 22ರಂದು ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಶಂಕುಸ್ಥಾಪನೆ ಸಮಾರಂಭದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಾಗಿ ಬೆದರಿಕೆ ಹಾಕಿದ್ದ. ʼಬಾಬರಿ ಮಸೀದಿಯನ್ನು ನಾಶ ಮಾಡಿ ನಿರ್ಮಿಸಲಾದ ಸಮಾರಂಭವನ್ನು ವಿರೋಧಿಸಿʼ ಎಂದು ಕೂಡ ಈತ ಮುಸ್ಲಿಂ ಸಮುದಾಯವನ್ನು ಒತ್ತಾಯಿಸಿದ್ದಾನೆ. ಹತರಾದ ಸಾವಿರಾರು ಮುಸ್ಲಿಮರ ದೇಹಗಳ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ ಎಂದಿದ್ದಾನೆ ಆತ. ಪ್ರಧಾನಿ ನರೇಂದ್ರ ಮೋದಿ (pm narendra modi) ಅವರನ್ನು ಪನ್ನುನ್‌ ʼಮುಸ್ಲಿಮರ ಜಾಗತಿಕ ಶತ್ರುʼ ಎಂದು ಕರೆದಿದ್ದ.

ಗುರುಪತ್ವಂತ್ ಸಿಂಗ್ ಪನ್ನುನ್ ಅವರು ಸಿಖ್ಸ್ ಫಾರ್ ಜಸ್ಟಿಸ್ (SFJ) ಎಂಬ ಪ್ರತ್ಯೇಕತಾವಾದಿ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದಾನೆ. 2007 ರಲ್ಲಿ ಸ್ಥಾಪಿತವಾದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯನ್ನು ಭಾರತ ಸರ್ಕಾರ 2019 ರಲ್ಲಿ ನಿಷೇಧಿಸಿತು. ಅಂದಿನಿಂದ ಪನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಕಣ್ಗಾವಲಿನಲ್ಲಿದ್ದ. ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆಯಡಿ 2020 ರಲ್ಲಿ ಭಾರತ ಸರ್ಕಾರವು ಪನ್ನುವನ್ನು ಭಯೋತ್ಪಾದಕ ಎಂದು ಘೋಷಿಸಿತು. ಹೊರಡಿಸಿತು.

Continue Reading

ಕ್ರೀಡೆ

C K Nayudu Trophy: ಒಂದೇ ಓವರ್​ನಲ್ಲಿ 6 ಸಿಕ್ಸರ್ ಬಾರಿಸಿದ ವಂಶಿ ಕೃಷ್ಣ; ವಿಡಿಯೊ ವೈರಲ್​

ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ನಡೆದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವಂಶಿ ಕೃಷ್ಣ ಸ್ಪಿನ್ನರ್ ದಮನ್‌ದೀಪ್ ಸಿಂಗ್(Damandeep Singh) ಅವರ ಒಂದು ಓವರ್​ನಲ್ಲಿ 6 ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

VISTARANEWS.COM


on

Vamshi Krishna hits six sixes
Koo

ಆಂಧ್ರಪ್ರದೇಶ: ಸಿ.ಕೆ.ನಾಯ್ಡು ಟ್ರೋಫಿಯಲ್ಲಿ(C K Nayudu Trophy) ಆಂಧ್ರ ತಂಡದ ಆಟಗಾರ ವಂಶಿ ಕೃಷ್ಣ(Vamshhi Krrishna) ಸತತ 6 ಎಸೆತಗಳಿಗೆ 6 ಸಿಕ್ಸರ್(six sixes in an over)​ ಬಾರಿಸಿ ಸುದ್ದಿಯಾಗಿದ್ದಾರೆ. ರೈಲ್ವೇಸ್(Andhra and Railways) ವಿರುದ್ಧದ ಪಂದ್ಯದಲ್ಲಿ ಅವರು ಈ ಪ್ರದರ್ಶನ ತೋರಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರವಿಶಾಸ್ತ್ರಿ (1985), ಯುವರಾಜ್ ಸಿಂಗ್ (2007) ಮತ್ತು ಋತುರಾಜ್ ಗಾಯಕ್ವಾಡ್ (2022) ಅವರು ಈ ಹಿಂದೆ ಒಂದೇ ಓವರ್​ನಲ್ಲಿ ಆರು ಸಿಕ್ಸರ್​ಗಳನ್ನು ಬಾರಿಸಿದ್ದರು. ಇದೀಗ ಈ ಎಲೈಟ್​ ಕ್ಲಬ್​ಗೆ ವಂಶಿ ಕೃಷ್ಣ ಕೂಡ ಸೆರ್ಪಡೆಗೊಂಡಿದ್ದಾರೆ. ವಂಶಿ ಕೃಷ್ಣ ಅವರು ಸಿಕ್ಸ್​ ಸಿಕ್ಸರ್​ ಬಾರಿಸಿದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ನಡೆದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವಂಶಿ ಕೃಷ್ಣ ಸ್ಪಿನ್ನರ್ ದಮನ್‌ದೀಪ್ ಸಿಂಗ್(Damandeep Singh) ಅವರ ಒಂದು ಓವರ್​ನಲ್ಲಿ 6 ಸಿಕ್ಸರ್​ಗಳನ್ನು ಬಾರಿಸಿದರು. ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಅವರು 64 ಎಸೆತಗಳಲ್ಲಿ 110 ರನ್​ ಬಾರಿಸಿ ಗಮನಸೆಳೆದರು.

ಇದನ್ನೂ ಓದಿ Sachin Tendulkar: ಕೊಹ್ಲಿ ಪುತ್ರನಿಗೆ ಸಚಿನ್ ತೆಂಡೂಲ್ಕರ್​ ಇಟ್ಟಿದ್ದಾರೆ ಈ ಕ್ಯೂಟ್ ಹೆಸರು!

1985 ರ ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈ ಪರ ಆಡಿದ ರವಿಶಾಸ್ತ್ರಿ ಬರೋಡಾ ವಿರುದ್ಧ ಒಂದೇ ಓವರ್​ನಲ್ಲಿ ಆರು ಸಿಕ್ಸರ್​ಗಳನ್ನು ಬಾರಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಓವರ್​ಗೆ 6 ಸಿಕ್ಸರ್​ ಬಾರಿಸಿದ ಭಾರತೀಯ ದಾಖಲೆ ಯುವರಾಜ್​ ಸಿಂಗ್(yuvraj singh)​ ಹೆಸರಿನಲ್ಲಿದೆ. 2007ರಲ್ಲಿ ನಡೆದ ಚೊಚ್ಚಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ಸ್ಟುವರ್ಟ್ ಬ್ರಾಡ್ ಅವರ ಓವರ್​ಗೆ ಯುವಿ ಸತತ 6 ಸಿಕ್ಸರ್ ಬಾರಿಸಿದ್ದರು. ಅಚ್ಚರಿ ಎಂದರೆ ಈ ಸಿಕ್ಸರ್​ ಹೊಡೆತಗಳ ಕಾಮೆಂಟ್ರಿ ಮೂಲಕ ವರ್ಣನೆ ಮಾಡಿದ್ದು ರವಿಶಾಸ್ತ್ರಿಯವರೇ.

7 ಸಿಕ್ಸರ್​ ಬಾರಿಸಿದ್ದ ಗಾಯಕ್ವಾಡ್


ಋತುರಾಜ್ ಗಾಯಕ್ವಾಡ್ 2022ರಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಒಂದೇ ಓವರ್​ಗೆ 7 ಸಿಕ್ಸರ್​ ಚಚ್ಚಿದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗಾಯಕ್ವಾಡ್ ಶಿವ ಸಿಂಗ್ ಅವರ ಓವರ್​ನಲ್ಲಿ ಈ ಸಾಧನೆ ಮಾಡಿದ್ದರು. ಒಂದು ನೋ ಬಾಲ್ ಸಹಿತ ಶಿವ ಸಿಂಗ್ ಎಸೆದ ಏಳೂ ಎಸೆತಗಳನ್ನು ಋತುರಾಜ್ ಸಿಕ್ಸರ್ ಬಡಿದಟ್ಟಿದ್ದರು.

Continue Reading

ಕ್ರೀಡೆ

WPL 2024: ಡಬ್ಲ್ಯುಪಿಎಲ್‌ ಟ್ರೋಫಿಯೊಂದಿಗೆ ಕಣ್ಮನ ಸೆಳೆದ ನಾಯಕಿಯರು

ಐವರು ನಾಯಕಿಯರಾದ ಹರ್ಮನ್‌ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್), ಸ್ಮೃತಿ ಮಂಧಾನ (ಆರ್‌ಸಿಬಿ), ಅಲಿಸ್ಸಾ ಹೀಲಿ (ಯುಪಿ ವಾರಿಯರ್ಸ್), ಮೆಗ್ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್), ಮತ್ತು ಬೆತ್ ಮೂನಿ (ಗುಜರಾತ್ ಜೈಂಟ್ಸ್) ಟ್ರೋಫಿ ಅನಾವರಣದ ವೇಳೆ ಕಂಗೊಳಿಸಿದರು

VISTARANEWS.COM


on

wpl 2024 trophy
Koo

ಬೆಂಗಳೂರು: ಎರಡನೇ ಆವೃತ್ತಿಯ(WPL 2024) ಮಹಿಳಾ ಪ್ರೀಮಿಯರ್‌ ಲೀಗ್‌ (Women’s Premier League) ಇದೇ ಶುಕ್ರವಾರ(ಫೆ. 23) ದಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(M. Chinnaswamy Stadium) ಆರಂಭವಾಗಲಿದೆ. ಅದ್ಧೂರಿ ಉದ್ಘಾಟನ ಸಮಾರಂಭದಲ್ಲಿ ಬಾಲಿವುಡ್​ ಖ್ಯಾತ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ(sidharth malhotra), ಶಾಹಿದ್ ಕಪೂರ್(shahid kapoor)​ ಮತ್ತು ಕಾರ್ತಿಕ್‌ ಆರ್ಯನ್‌(kartik aaryan) ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ಶುಕ್ರವಾರ ಸಂಜೆ 6.30ಕ್ಕೆ ಉದ್ಘಾಟನ ಸಮಾರಂಭ ಆರಂಭಗೊಳ್ಳಲಿದೆ. ಬುಧವಾರ 5 ತಂಡದ ತಂಡದ ನಾಯಕಿಯರು ಟ್ರೋಫಿಯೊಂದಿಗೆ ಫೋಟೊ ಶೂಟ್​ ಮಾಡಿಸಿಕೊಂಡಿದ್ದಾರೆ.

ಐವರು ನಾಯಕಿಯರಾದ ಹರ್ಮನ್‌ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್), ಸ್ಮೃತಿ ಮಂಧಾನ (ಆರ್‌ಸಿಬಿ), ಅಲಿಸ್ಸಾ ಹೀಲಿ (ಯುಪಿ ವಾರಿಯರ್ಸ್), ಮೆಗ್ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್), ಮತ್ತು ಬೆತ್ ಮೂನಿ (ಗುಜರಾತ್ ಜೈಂಟ್ಸ್) ಟ್ರೋಫಿ ಅನಾವರಣದ ವೇಳೆ ಕಂಗೊಳಿಸಿದರು. ಇದೇ ವೇಳೆ ಆಸ್ಟ್ರೇಲಿಯಾದವರಾದ ಬೆತ್ ಮೂನಿ ಮೆಗ್ ಲ್ಯಾನಿಂಗ್ ಮತ್ತು ಅಲಿಸ್ಸಾ ಹೀಲಿ ಟ್ರೋಫಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಟ್ರೋಫಿಯೊಂದಿಗೆ ಕಂಗೊಳಿಸಿದ ನಾಯಕಿಯರ ವಿಡಿಯೊವನ್ನು ಡಬ್ಲ್ಯುಪಿಎಲ್‌ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದು 5 ನಾಯಕಿಯರು…ಒಂದು ಗುರಿ(5 Captains. 1 Goal) ಎಂದು ಬರೆದುಕೊಂಡಿದೆ. ಶುಕ್ರವಾರ ನಡೆಯುವ ಉದ್ಘಾಟನ ಪಂದ್ಯದಲ್ಲಿ ಕಳೆದ ಬಾರಿಯ ಫೈನಲೀಸ್ಟ್​ಗಳಾದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ರನ್ನರ್ಸ್​ ಅಪ್​ ಡೆಲ್ಲಿ ಕ್ಯಾಪಿಲ್ಸ್​ ಮುಖಾಮುಖಿಯಾಗಲಿವೆ. ಫೆ. 23ರಿಂದ ಮಾ. 4ರ ತನಕ ಬೆಂಗಳೂರಿನಲ್ಲಿ ಲೀಗ್‌ ಪಂದ್ಯಗಳು ನಡೆಯಲಿವೆ. ಮಾ. 5ರಿಂದ ಹೊಸದಿಲ್ಲಿಯಲ್ಲಿ ಪಂದ್ಯಾವಳಿ ಮುಂದುವರಿಯುತ್ತದೆ.

ಇದನ್ನೂ ಓದಿ WPL 2024: ಡಬ್ಲ್ಯುಪಿಎಲ್ ಟಿಕೆಟ್ ದರ ಎಷ್ಟು?; ಯಾವ ವೆಬ್​ಸೈಟ್​ನಲ್ಲಿ ಲಭ್ಯ?

ಆತಿಥೇಯ ಆರ್​ಸಿಬಿ ಮಹಿಳಾ ತಂಡ ಫೆಬ್ರವರಿ 4ರಂದು ಯುಪಿ ವಾರಿಯರ್ಸ್​ ವಿರುದ್ಧ ತನ್ನ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿ ಲೀಗ್​ನಿಂದ ಮೊದಲ ತಂಡವಾಗಿ ಹೊರಬಿದ್ದಿದ್ದ ಆರ್​ಸಿಬಿ ಈ ಬಾರಿ ತವರಿನ ಸಂಪೂರ್ಣ ಲಾಭವೆತ್ತಿ ಶ್ರೇಷ್ಠ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

ಡಬ್ಲ್ಯುಪಿಎಲ್ 2024ರ ಆವೃತ್ತಿ ಕೂಡ ಕಳೆದ ವರ್ಷದಂತೆ ಅದೇ ಸ್ವರೂಪದಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಅಗ್ರ ಮೂರು ಸ್ಥಾನ ಪಡೆದ ತಂಡಗಳು ಪ್ಲೇ ಆಫ್​ಗಳಿಗೆ ಅರ್ಹತೆ ಪಡೆಯುತ್ತವೆ. ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್​ನಲ್ಲಿ ಆಡಿ ಫೈನಲ್​ ಪ್ರವೇಶಿಸಲಿದೆ.

Continue Reading

ಕ್ರಿಕೆಟ್

Suryakumar Yadav: ರೋಲರ್​ನಲ್ಲಿ ಜಾಲಿ ರೈಡ್ ಮಾಡಿದ ಸೂರ್ಯಕುಮಾರ್​ ಯಾದವ್

ಎಡ ಪಾದದ ನೋವಿಗೆ ಸಿಲುಕಿ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(Suryakumar Yadav) ಸಂಪೂರ್ಣ ಚೇತರಿಕೆ ಕಂಡಿದ್ದು ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ತರಬೇತಿ ಆರಂಭಿಸಿದ್ದಾರೆ.

VISTARANEWS.COM


on

suryakumar yadav
Koo

ಬೆಂಗಳೂರು: ದಕ್ಷಿಣ ಆಫ್ರಿಕಾ ಟಿ20 ಸರಣಿಯ ಪ್ರವಾಸದ ವೇಳೆ ಎಡ ಪಾದದ ನೋವಿಗೆ ಸಿಲುಕಿ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(Suryakumar Yadav) ಈಗ ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಅವರು ಬೆಂಗಳೂರಿನ ಎನ್​ಸಿಎಯಲ್ಲಿ(NCA) ಫಿಟ್​ನೆಸ್​ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಅವರು ಪಿಚ್​ ರೋಲರ್​ನಲ್ಲಿ ಜಾಲಿ ರೈಡ್ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್​ಸಿಎ)ಯಲ್ಲಿ ಫಿಟ್​ನೆಸ್​ ತರಬೇತಿ ಪಡೆಯುತ್ತಿರುವ ಸೂರ್ಯಕುಮಾರ್ ಯಾದವ್​ ಅವರು ಇಲ್ಲಿನ ಪಿಚ್​ ಕ್ಯೂರೆಟರ್​ ಜತೆಗೆ ರೋಲರ್​ನಲ್ಲಿ ಸಂಚಾರ ಮಾಡಿದ್ದಾರೆ. ಈ ವಿಡಿಯೊವನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ(suryakumar yadav instagram) ಹಂಚಿಕೊಂಡಿದ್ದು ಅಕ್ಷಯ್​ ಕುಮಾರ್​, ತ್ರಿಶಾ, ಜಾನಿಲಿವರ್‌ ನಟಿಸಿರುವ ಖಟ್ಟಾ ಮೀಠಾ ಚಿತ್ರದ ಡೈಲಾಗ್​ ಸೇರಿದ್ದಾರೆ. ಜತೆಗೆ ಇದೇ ಸಿನೆಮಾದಲ್ಲಿ ಬರುವ ಗಿರ್ಗರ್ಧನ್ ಘಾಟ್ ಕಾ ನಾಮ್ ತೋ ಸುನಾ ಹೈ ಹೋಗಾ!(ಗಿರ್ಗರ್ಧನ್ ಘಾಟ್ ಅವರ ಹೆಸರು ಹೇಳಿದ್ದೀಯಾ) ಎನ್ನುವ ಡೈಲಾಗ್​ ಅನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Suryakumar Yadav: ಸೂರ್ಯಕುಮಾರ್​ ಚೇತರಿಕೆಗೆ ಹಾರೈಸಿದ ಆಯುಷ್ಮಾನ್ ಖುರಾನ

ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್​ ಎಡ ಪಾದದ ನೋವಿಗೆ ಸಿಲುಕಿದ್ದರು. ಗಾಯದ ಬಳಿಕ ಸ್ಟಿಕ್​ನಲ್ಲಿ ನಡೆದಾಡುದ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. “ಗಾಯಗಳು ಎಂದಿಗೂ ವಿನೋದಮಯವಾಗಿರುವುದಿಲ್ಲ, ಆದರೆ ನಾನು ಅದನ್ನು ನನ್ನ ಹೆಜ್ಜೆಯಲ್ಲಿ ತೆಗೆದುಕೊಳ್ಳುತ್ತೇನೆ ಮತ್ತು ಯಾವುದೇ ಸಮಯದಲ್ಲಿ ಹಿಂತಿರುಗಿ, ಸಂಪೂರ್ಣವಾಗಿ ಫಿಟ್ ಆಗುತ್ತೇನೆ ಎಂದು ಭರವಸೆ ನೀಡುತ್ತೇನೆ! ಅಲ್ಲಿಯವರೆಗೆ, ನೀವೆಲ್ಲರೂ ರಜಾದಿನವನ್ನು ಆನಂದಿಸುತ್ತಿದ್ದೀರಿ ಮತ್ತು ಪ್ರತಿದಿನ ಸ್ವಲ್ಪ ಸಂತೋಷವನ್ನು ಕಂಡುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇವೆ” ಎಂದು ಸೂರ್ಯಕುಮಾರ್​ ಬರೆದುಕೊಂಡಿದ್ದರು.

ಫಿಟ್​ನೆಸ್​ ಅಭ್ಯಾಸ ನಿರತ ಸೂರ್ಯ

ಸದ್ಯ ಗುಣಮುಖರಾಗಿರುವ ಸೂರ್ಯಕುಮಾರ್​ ಅವರು ಮುಂದಿನ ತಿಂಗಳು ನಡೆಯುವ ಐಪಿಎಲ್​ ಟೂರ್ನಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್​ ತಂಡದ ಆಟಗಾರನಾಗಿದ್ದಾರೆ. ಈ ಬಾರಿ ಈ ತಂಡವನ್ನು ಹಾರ್ದಿಕ್​ ಪಾಂಡ್ಯ ಮುನ್ನಡೆಸಲಿದ್ದಾರೆ. ರೋಹಿತ್​ ಅವರನ್ನು ತಂಡದ ನಾಯಕತ್ವದಿಂದ ಕೈಬಿಟ್ಟದ್ದಕ್ಕೆ ಸೂರ್ಯಕುಮಾರ್​ ಅವರು ಒಡೆದು ಹೋದ ಹೃದಯದ ಎಮೊಜಿಯನ್ನು ಪೋಸ್ಟ್​ ಮಾಡಿ ಫ್ರಾಂಚೈಸಿ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದರು.

Continue Reading
Advertisement
Shivraj Singh Chouhan
ಕರ್ನಾಟಕ42 mins ago

Shivraj Singh Chouhan: ಮೋದೀಜಿ ನಾಯಕತ್ವದಲ್ಲಿ ಭಾರತ ವಿಶ್ವಗುರುವಾಗಲಿದೆ ಎಂದ ಶಿವರಾಜ್ ಸಿಂಗ್ ಚೌಹಾಣ್

Vistara editorial, Do not disrespectful to the Anthem of Karnataka
ಪ್ರಮುಖ ಸುದ್ದಿ47 mins ago

ವಿಸ್ತಾರ ಸಂಪಾದಕೀಯ: ನಾಡಗೀತೆ, ಕವಿವಾಕ್ಯಕ್ಕೆ ಅಪಚಾರ ಆಗದಿರಲಿ

Karnataka Government clarified about Non Hindus in Hindu Temples Management
ಕರ್ನಾಟಕ1 hour ago

Hindu Temples: ದೇವಸ್ಥಾನ ಸಮಿತಿಗೆ ಅನ್ಯಧರ್ಮೀಯರ ನೇಮಕ; ಧಾರ್ಮಿಕ ದತ್ತಿ ಇಲಾಖೆ ಸ್ಪಷ್ಟನೆ

Gavyamrita Book
ಉತ್ತರ ಕನ್ನಡ1 hour ago

ಗವ್ಯಾಮೃತ ಪುಸ್ತಕ ಲೋಕಾರ್ಪಣೆ; ಗೋವಿನ ಕುರಿತ ಸುವಿಚಾರಗಳನ್ನು ಸಮಾಜಕ್ಕೆ ತಲುಪಿಸಲು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ

Indus App Store launched by Walmart-owned PhonePe
ದೇಶ2 hours ago

PhonePay: ಫೋನ್‌ಪೇ ಸ್ವದೇಶಿ ಆ್ಯಪ್‌ಸ್ಟೋರ್ ‘ಇಂಡಸ್’ ಲಾಂಚ್; ಗೂಗಲ್‌ ಪ್ಲೇ ಸ್ಟೋರ್‌ಗೆ ಪಂಚ್!

shishya sweekara Mahotsav in shri swarnavalli maha samsthana matha dharmasabhe
ಉತ್ತರ ಕನ್ನಡ2 hours ago

Sirsi News: ಅಪಕಾರ ಮಾಡಿದವರಿಗೂ ಉಪಕಾರ ಬಯಸುವ ಸದ್ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಿ: ಶ್ರೀವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ

Gurpatwant Singh Pannun
ಕ್ರೀಡೆ2 hours ago

IND vs ENG: ರಾಂಚಿ ಟೆಸ್ಟ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!

Hello-minister-N-chaluvarayaswamy-in-vistara-news-2
ಕರ್ನಾಟಕ2 hours ago

Krishi Bhagya Scheme: 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಮರು ಜಾರಿ: ಎನ್. ಚಲುವರಾಯಸ್ವಾಮಿ

bike accident
ಪ್ರಮುಖ ಸುದ್ದಿ3 hours ago

Road Accident: ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ; ಬಸ್-ಬೈಕ್ ಡಿಕ್ಕಿಯಾಗಿ ನಾಲ್ವರ ದುರ್ಮರಣ

vistara top ten
ಟಾಪ್ 10 ನ್ಯೂಸ್3 hours ago

VISTARA TOP 10 NEWS: ನಾಡಗೀತೆಯಲ್ಲೂ ಸರಕಾರ ಎಡವಟ್ಟು ಪಬ್ಲಿಕ್‌ ಪ್ಲೇಸಲ್ಲಿ ಸೇದಬಾರದು ಸಿಗರೇಟು.. ಮತ್ತು ಇತರ ಸುದ್ದಿಗಳು

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 21 2024
ಭವಿಷ್ಯ20 hours ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ2 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ3 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ4 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ5 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ5 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

read your daily horoscope predictions for february 16 2024
ಭವಿಷ್ಯ6 days ago

Dina Bhavishya : ಈ ಹಿಂದೆ ಹಣ ಹೂಡಿಕೆ ಮಾಡಿದ್ದರೆ ಇಂದು ಈ ರಾಶಿಯವರಿಗೆ ಡಬಲ್‌ ಲಾಭ

Siddaramaiah
ರಾಜಕೀಯ6 days ago

Karnataka Budget Session 2024: ಬಿಜೆಪಿಯವರು ಗೂಂಡಾಗಳು ಎಂದ ಸಿಎಂ; ತೊಡೆ ತಟ್ಟಿದ್ದು ನಾವಾ – ನೀವಾ ಎಂದ ವಿಪಕ್ಷ!

ಟ್ರೆಂಡಿಂಗ್‌