WPL 2023: ಆರ್​ಸಿಬಿ VS ಗುಜರಾತ್​; ಯಾರಿಗೆ ಒಲಿಯಲಿದೆ ಮೊದಲ ಗೆಲುವು?​ - Vistara News

ಕ್ರಿಕೆಟ್

WPL 2023: ಆರ್​ಸಿಬಿ VS ಗುಜರಾತ್​; ಯಾರಿಗೆ ಒಲಿಯಲಿದೆ ಮೊದಲ ಗೆಲುವು?​

ಬುಧವಾರದ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಆರ್​ಸಿಬಿ ಮತ್ತು ಗುಜರಾತ್​ ಜೈಂಟ್ಸ್ ಮುಖಾಮುಖಿಯಾಗಲಿವೆ.

VISTARANEWS.COM


on

WPL 2023: RCB VS Gujarat; Who will win first?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಮಹಿಳಾ ದಿನಾಚರಣೆಯ ದಿನದಂದು(ಮಾರ್ಚ್​ 8) ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ(WPL 2023) ಆರ್​ಸಿಬಿ(Royal Challengers Bangalore) ಮತ್ತು ಗುಜರಾತ್​ ಜೈಂಟ್ಸ್(Gujarat Giants)​ ಪಂದ್ಯಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಪ್ರದರ್ಶನದ ವಿಚಾರದಲ್ಲಿ ಇತ್ತಂಡಗಳು ಒಂದೇ ದೋಣಿಯ ಪಯಣಿಗರು. ಆಡಿದ ಎರಡೂ ಪಂದ್ಯಗಳಲ್ಲಿಯೂ ಸೋಲು ಕಂಡಿದ್ದಾರೆ.

ಈ ಪಂದ್ಯದಲ್ಲಿ ಒಂದು ತಂಡ ತನ್ನ ಸೋಲಿನ ಸರಪಳಿಯನ್ನು ಕಳೆದುಕೊಂಡರೆ ಮತ್ತೊಂದು ತಂಡ ಹ್ಯಾಟ್ರಿಕ್ಸ್​ ಸೋಲಿನ ಅವಮಾನಕ್ಕೆ ಸಿಲುಕಲಿದೆ. ಆದರೆ ಈ ತಂಡ ಯಾವುದೆಂದು ಬುಧವಾರ ರಾತ್ರಿ ಉತ್ತರ ಸಿಗಲಿದೆ. ಬ್ಯಾಟಿಂಗ್​ ವಿಚಾರದಲ್ಲಿ ಗುಜರಾತ್​ ಜೈಂಟ್ಸ್​ ಮತ್ತು ಆರ್​ಸಿಬಿ ಬಲಿಷ್ಠವಾಗಿದೆ. ಆದರೆ ಇತ್ತಂಡಗಳಿಗಿಗೂ ಬೌಲಿಂಗ್​ ದೊಡ್ಡ ಚಿಂತೆಯಾಗಿದೆ. ಆಡಿದ ಎರಡು ಪಂದ್ಯಗಳಲ್ಲಿಯೂ ತಂಡದ ಸೋಲಿಗೆ ಕಾರಣವಾದದ್ದು ಬೌಲಿಂಗ್​. ಹೀಗಾಗಿ ಈ ಪಂದ್ಯದಲ್ಲಿ ಬೌಲಿಂಗ್​ ವಿಭಾಗ ಸುಧಾರಣೆ ಕಾಣಲೇ ಬೇಕು.

ಗುಜರಾತ್​ಗೆ ಗಾಯದ ಚಿಂತೆ

ಗುಜರಾತ್​ ತಂಡಕ್ಕೆ ಗಾಯದ ಚಿಂತೆ ಕಾಡಿದೆ. ತಂಡದ ನಾಯಕಿ ಬೆತ್​ ಮೂನಿ ಮುಂಬೈ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಗಾಯಗೊಂಡು ದ್ವಿತೀಯ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇವರ ಅನುಸ್ಥಿತಿಯಲ್ಲಿ ಸ್ನೇಹ್​ ರಾಣಾ ತಂಡವನ್ನು ಮುನ್ನಡೆಸಿದ್ದರು. ಇದೀಗ ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಅವರು ಅಲಭ್ಯರಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ವೆಸ್ಟ್​ ಇಂಡೀಸ್​ನ ಹಾರ್ಡ್​ ಹಿಟ್ಟರ್​ ಡಿಯಾಂಡ್ರಾ ಡಾಟಿನ್‌ ಗಾಯಗೊಂಡು ಈಗಾಗಲೇ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಇವರೆಲ್ಲರ ಅನುಪಸ್ಥಿತಿಯ ಮಧ್ಯೆಯೂ ಗುಜರಾತ್​ ಗೆದ್ದರೆ ನಿಜಕ್ಕೂ ಮೆಚ್ಚಲೇ ಬೇಕು.

ಆರ್​ಸಿಬಿ ತಂಡ ಉತ್ತಮ ಆರಂಭವನ್ನು ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ಎಡವುತ್ತಿದೆ. ನಾಯಕಿ ಸ್ಮೃತಿ ಮಂಧಾನಾ ಸ್ಫೋಟಕ ಆರಂಭ ಒದಗಿಸಿದರೂ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗುವ ಆಟಗಾರ್ತಿಯರ ಕೊರತೆ ಎದ್ದು ಕಾಣುತ್ತಿದೆ. ಟಿ20 ವಿಶ್ವ ಕಪ್​ನಲ್ಲಿ ಮಿಂಚಿದ ರಿಚಾ ಘೋಷ್​ ಬ್ಯಾಟ್​ ಇಲ್ಲಿ ಸದ್ದು ಮಾಡುತ್ತಿಲ್ಲ. ಜತೆಗೆ ರೇಣುಕಾ ಸಿಂಗ್​ ಕೂಡ ದುಬಾರಿಯಾಗಿ ಪರಿಣಮಿಸುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

IPL 2024: ಶತಕ ಬಾರಿಸಿ ಟಿ20ಯಲ್ಲಿ ದಾಖಲೆ ಬರೆದ ಸೂರ್ಯಕುಮಾರ್ ಯಾದವ್​​

IPL 2024: ಟಿ20ಯಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಆಟಗಾರ ಎನ್ನುವ ದಾಖಲೆ ವಿರಾಟ್​ ಕೊಹ್ಲಿಯ ಹೆಸರಿನಲ್ಲಿದೆ. ವಿರಾಟ್​ 9 ಶತಕ ಬಾರಿಸಿದ್ದಾರೆ. ಇದರಲ್ಲಿ 7 ಶತಕ ಐಪಿಎಲ್​ನಿಂದ ಮೂಡಿ ಬಂದಿದೆ. ಇನ್ನೆರಡು ಶತಕ ಭಾರತ ಪರ ದಾಖಲಾಗಿದೆ.

VISTARANEWS.COM


on

IPL 2024
Koo

ಮುಂಬಯಿ: ಸೋಮವಾರ ರಾತ್ರಿ ನಡೆದ ಐಪಿಎಲ್​ನ(IPL 2024) 55ನೇ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(Suryakumar Yadav) ಅವರು ಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಆಟಗಾರರ ಪೈಕಿ ಜಂಟಿ ಮೂರನೇ ಸ್ಥಾನ ಪಡೆದಿದ್ದಾರೆ. ಇದು ಸೂರ್ಯ ಅವರ 6ನೇ ಟಿ20 ಶತಕವಾಗಿದೆ.

ಟಿ20ಯಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಆಟಗಾರ ಎನ್ನುವ ದಾಖಲೆ ವಿರಾಟ್​ ಕೊಹ್ಲಿಯ ಹೆಸರಿನಲ್ಲಿದೆ. ವಿರಾಟ್​ 9 ಶತಕ ಬಾರಿಸಿದ್ದಾರೆ. ಇದರಲ್ಲಿ 7 ಶತಕ ಐಪಿಎಲ್​ನಿಂದ ಮೂಡಿ ಬಂದಿದೆ. ಇನ್ನೆರಡು ಶತಕ ಭಾರತ ಪರ ದಾಖಲಾಗಿದೆ. 8 ಶತಕ ಬಾರಿಸಿದ ಹಿಟ್​ ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ ದ್ವಿತೀಯ ಸ್ಥಾನಿಯಾಗಿದ್ದಾರೆ. ಋತುರಾಜ್​ ಗಾಯಕ್ವಾಡ್​, ಕೆ.ಎಲ್​ ರಾಹುಲ್​ ಮತ್ತು ಸೂರ್ಯಕುಮಾರ್​ ತಲಾ 6 ಶತಕ ಬಾರಿಸಿ ಜಂಟಿ ಮೂರನೇ ಸ್ಥಾನ ಪಡೆದಿದ್ದಾರೆ.

ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟರ್​ಗಳು


ವಿರಾಟ್​ ಕೊಹ್ಲಿ-9 ಶತಕ

ರೋಹಿತ್​ ಶರ್ಮ-8 ಶತಕ

ಕೆ.ಎಲ್​ ರಾಹುಲ್​-6 ಶತಕ

ಋತುರಾಜ್​ ಗಾಯಕ್ವಾಡ್​-6 ಶತಕ

ಸೂರ್ಯಕುಮಾರ್​ ಯಾದವ್​-6 ಶತಕ

ಸೂರ್ಯಕುಮಾರ್ ಯಾದವ್ ಅವರು ಹೈದರಾಬಾದ್​ ವಿರುದ್ಧ 51 ಎಸೆತ ಎದುರಿಸಿ 6 ಸಿಕ್ಸರ್​ ಮತ್ತು 12 ಬೌಂಡರಿ ಬಾರಿಸಿ ಅಜೇಯ 102 ರನ್​ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಾಂಖೆಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಮುಂಬಯಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್​ ತಂಡ ತನ್ನ ಪಾಲಿನ 20 ಓವರ್​ಗಳಲ್ಲಿ 8 ವಿಕೆಟ್​ಗೆ 173 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ ಆರಂಭಿಕ ಹಿನ್ನಡೆ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ್ ಇನಿಂಗ್ಸ್​ ನೆರವಿನಿಂದ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ IPL 2024 Points Table: ಕೊನೆಯ ಸ್ಥಾನದಿಂದ ಮೇಲೆದ್ದ ಮುಂಬೈ ಇಂಡಿಯನ್ಸ್​

ಮುಂಬೈ ಇಂಡಿಯನ್ಸ್(Mumbai Indians )​ ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನದಿಂದ ಮೇಲೆದ್ದು 9ನೇ ಸ್ಥಾನಿಯಾಗಿದೆ. ಹಾಲಿ ರನ್ನರ್​ ಅಪ್​ ಗುಜರಾತ್​ ಟೈಟಾನ್ಸ್​ ಕೊನೆಯ ಸ್ಥಾನಕ್ಕೆ ಕುಸಿದಿದೆ. ಹೈದರಾಬಾದ್​ ಸೋಲು ಕಂಡರೂ ಈ ಹಿಂದಿನಂತೆ ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದೆ. ಇಂದು ನಡೆಯುವ ಪಂದ್ಯಲ್ಲಿ ರಾಜಸ್ಥಾನ್​ ರಾಯಲ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಲಿದೆ. ಡೆಲ್ಲಿಗೆ ಪ್ಲೇ ಆಫ್​ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ರಾಜಸ್ಥಾನ್​ ಗೆದ್ದರೆ ಮೊದಲ ತಂಡವಾಗಿ ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಡಲಿದೆ.

Continue Reading

ಕ್ರೀಡೆ

IPL 2024 Points Table: ಕೊನೆಯ ಸ್ಥಾನದಿಂದ ಮೇಲೆದ್ದ ಮುಂಬೈ ಇಂಡಿಯನ್ಸ್​

IPL 2024 Points Table: ಇಂದು ನಡೆಯುವ ಪಂದ್ಯಲ್ಲಿ ರಾಜಸ್ಥಾನ್​ ರಾಯಲ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಲಿದೆ. ಡೆಲ್ಲಿಗೆ ಪ್ಲೇ ಆಫ್​ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ರಾಜಸ್ಥಾನ್​ ಗೆದ್ದರೆ ಮೊದಲ ತಂಡವಾಗಿ ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಡಲಿದೆ.

VISTARANEWS.COM


on

IPL 2024 Points Table
Koo

ಮುಂಬಯಿ: ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸಿದ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್(Mumbai Indians )​ ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನದಿಂದ ಮೇಲೆದ್ದು 9ನೇ ಸ್ಥಾನಿಯಾಗಿದೆ. ಹಾಲಿ ರನ್ನರ್​ ಅಪ್​ ಗುಜರಾತ್​ ಟೈಟಾನ್ಸ್​ ಕೊನೆಯ ಸ್ಥಾನಕ್ಕೆ ಕುಸಿದಿದೆ. ಹೈದರಾಬಾದ್​ ಸೋಲು ಕಂಡರೂ ಈ ಹಿಂದಿನಂತೆ ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದೆ.

ಇಂದು ನಡೆಯುವ ಪಂದ್ಯಲ್ಲಿ ರಾಜಸ್ಥಾನ್​ ರಾಯಲ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಲಿದೆ. ಡೆಲ್ಲಿಗೆ ಪ್ಲೇ ಆಫ್​ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ರಾಜಸ್ಥಾನ್​ ಗೆದ್ದರೆ ಮೊದಲ ತಂಡವಾಗಿ ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಡಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​118316 (+1.453)
ರಾಜಸ್ಥಾನ್​ ರಾಯಲ್ಸ್​​​108216 (+0.622)
ಚೆನ್ನೈ​​116514 (+0.700)
ಹೈದರಾಬಾದ್​116512 (-0.065)
ಲಕ್ನೋ​116512 (-0.371)
ಡೆಲ್ಲಿ115610 (-0.442)
ಆರ್​ಸಿಬಿ11478 (-0.049)
ಪಂಜಾಬ್​10468 (-0.062)
ಮುಂಬೈ12488 (-0.212)
ಗುಜರಾತ್​11478 (-1.320)

ಸೂರ್ಯಕುಮಾರ್ ಯಾದವ್ (Suryakumar Yadav) ಬಾರಿಸಿದ ಸ್ಫೋಟಕ ಶತಕ (102,51 ಎಸೆತ, 12 ಫೋರ್, 6 ಸಿಕ್ಸರ್​) ಹಾಗೂ ಬೌಲರ್​ಗಳ ಸಂಘಟಿತ ಹೋರಾಟದಿಂದ ಮಿಂಚಿದ ಮುಂಬೈ ಇಂಡಿಯನ್ಸ್​ (Mumbai Indians) ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 55ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad)​ ವಿರುದ್ಧ 7 ವಿಕೆಟ್​ ಸುಲಭ ವಿಜಯ ದಾಖಲಿಸಿದೆ. ಈ ಮೂಲಕ ಸೂರ್ಯನ ಪ್ರತಾಪಕ್ಕೆ ಸನ್​​ ಮಂಕಾಗಿ ಹೋಯಿತು. 

ಇದನ್ನೂ ಓದಿ IPL 2024 : ಸೂರ್ಯನ ಪ್ರತಾಪಕ್ಕೆ ಮಂಕಾದ ಸನ್​; ಮುಂಬೈಗೆ 7 ವಿಕೆಟ್​ ಭರ್ಜರಿ ಗೆಲುವು

ವಾಂಖೆಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಮುಂಬಯಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್​ ತಂಡ ತನ್ನ ಪಾಲಿನ 20 ಓವರ್​ಗಳಲ್ಲಿ 8 ವಿಕೆಟ್​ಗೆ 173 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ ಆರಂಭಿಕ ಹಿನ್ನಡೆ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ್ ಇನಿಂಗ್ಸ್​ ನೆರವಿನಿಂದ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿ ಗೆಲುವು ಸಾಧಿಸಿತು.

Continue Reading

ಪ್ರಮುಖ ಸುದ್ದಿ

Rohit Sharma : 4 ರನ್​ಗೆ ಔಟಾಗಿ ಕಣ್ಣೀರು ಸುರಿಸಿದ ರೋಹಿತ್​ ಶರ್ಮಾ; ಇಲ್ಲಿದೆ ವಿಡಿಯೊ

Rohit Sharma: ನಾಯಕತ್ವದ ಹೊರೆ ರೋಹಿತ್ ಶರ್ಮಾ ಅವರ ಹೆಗಲ ಮೇಲಿದ್ದ ಅವಧಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬ್ಯಾಟರ್​​ ಆಗಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯ ದೊಡ್ಡ ಹೊರೆಯನ್ನು ಅವರು ಹೊಂದಿದ್ದರು. ವಿಶೇಷವೆಂದರೆ, ರೋಹಿತ್ 5 ಐಪಿಎಲ್ ಚಾಂಪಿಯನ್​ಶಿಪ್​ ಗೆದ್ದಿದ್ದರಿಂದ ಮುಂಬೈ ಇಂಡಿಯನ್ಸ್ ಪರ ಅತ್ಯಂತ ಯಶಸ್ವಿ ನಾಯಕ ಕೂಡ ಔದು. ಆದರೆ ಇದೀಗ ಬ್ಯಾಟಿಂಗ್​ನಲ್ಲಿ ಅವರ ಪ್ರದರ್ಶನವು ಕಡಿಮೆಯಾಗಿದೆ.

VISTARANEWS.COM


on

Rohit Sharma
Koo

ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ (IPL 2024) ಮತ್ತೊಮ್ಮೆ ಬ್ಯಾಟಿಂಗ್​ನಲ್ಲಿ ವಿಫಲವಾದ ನಂತರ ಮುಂಬೈ ಇಂಡಿಯನ್ಸ್ (Mumbai Indians) ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಭಾವುಕರಾದ ಘಟನೆ ನಡೆಯಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪ್ಯಾಟ್ ಕಮಿನ್ಸ್ (Pat Cummins) ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್ (SRH) ವಿರುದ್ಧದ ಪಂದ್ಯದ 55ನೇ ಪಂದ್ಯದಲ್ಲಿ ಅವರಿಗೆ ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಮುಂಬೈ ಇಂಡಿಯನ್ಸ್ (MI) ಅವರ ಬದಲಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಲು ನಿರ್ಧರಿಸಿದ್ದರಿಂದ ರೋಹಿತ್ ಶರ್ಮಾ 2024 ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿಲ್ಲ.

ನಾಯಕತ್ವದ ಹೊರೆ ರೋಹಿತ್ ಶರ್ಮಾ ಅವರ ಹೆಗಲ ಮೇಲಿದ್ದ ಅವಧಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬ್ಯಾಟರ್​​ ಆಗಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯ ದೊಡ್ಡ ಹೊರೆಯನ್ನು ಅವರು ಹೊಂದಿದ್ದರು. ವಿಶೇಷವೆಂದರೆ, ರೋಹಿತ್ 5 ಐಪಿಎಲ್ ಚಾಂಪಿಯನ್​ಶಿಪ್​ ಗೆದ್ದಿದ್ದರಿಂದ ಮುಂಬೈ ಇಂಡಿಯನ್ಸ್ ಪರ ಅತ್ಯಂತ ಯಶಸ್ವಿ ನಾಯಕ ಕೂಡ ಔದು. ಆದರೆ ಇದೀಗ ಬ್ಯಾಟಿಂಗ್​ನಲ್ಲಿ ಅವರ ಪ್ರದರ್ಶನವು ಕಡಿಮೆಯಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸುವ ಮೂಲಕ ಟೂರ್ನಿಯಲ್ಲಿ ಉತ್ತಮ ಆರಂಭ ಕಂಡಿದದ್ದರು. ಮುಂಬೈ ಇಂಡಿಯನ್ಸ್ ಪರ ಮೊದಲ 7 ಪಂದ್ಯಗಳಲ್ಲಿ ರೋಹಿತ್ ಶರ್ಮಾ 49.5 ಸರಾಸರಿಯಲ್ಲಿ 297 ರನ್ ಗಳಿಸಿದ್ದಾರೆ. ಆದಾಗ್ಯೂ, ಅವರ ಫಾರ್ಮ್ ಯು-ಟರ್ನ್ ತೆಗೆದುಕೊಂಡಿತು ಮತ್ತು ಮುಂದಿನ 5 ಪಂದ್ಯಗಳಲ್ಲಿ ಅವರು ದಯನೀಯವಾಗಿ ವಿಫಲರಾಗಿದ್ದಾರೆ. 6.6 ಸರಾಸರಿ ಮತ್ತು 94.3 ಸ್ಟ್ರೈಕ್ ರೇಟ್​ನಲ್ಲಿ ಕೇವಲ 33 ರನ್ ಗಳಿಸಿದರು.

T20 World Cup 2024 : ಕೇಸರಿಯ ರಂಗು; ಟೀಮ್​ ಇಂಡಿಯಾದ ಟಿ20 ವಿಶ್ವ ಕಪ್​​ ಜೆರ್ಸಿ ಬಿಡುಗಡೆ

ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 5 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿದ್ದರು. 4ನೇ ಓವರ್​ನ 2ನೇ ಎಸೆತದಲ್ಲಿ ಕಮಿನ್ಸ್ ಎಸೆತಕ್ಕೆ ಜೋರಾಗಿ ಬಾರಿಸಲು ಹೋಗಿ ಔಟಾದರು. ಹೆನ್ರಿಕ್ ಕ್ಲಾಸೆನ್ ಯಾವುದೇ ತಪ್ಪು ಮಾಡಲಿಲ್ಲ. ಶರ್ಮಾ ಅವರನ್ನು ಔಟ್ ಮಾಡಲು ಸರಳ ಕ್ಯಾಚ್ ಪೂರ್ಣಗೊಳಿಸಿದರು.

ಪ್ಯಾಟ್ ಕಮಿನ್ಸ್ ಟಿ 20 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದು ಇದು ನಾಲ್ಕನೇ ಬಾರಿ. ಒಟ್ಟಾರೆಯಾಗಿ, 9 ಇನ್ನಿಂಗ್ಸ್ ಗಳಲ್ಲಿ, ಅವರು ಕಮಿನ್ಸ್ ವಿರುದ್ಧ 41 ಎಸೆತಗಳಲ್ಲಿ 14.25 ಸರಾಸರಿಯಲ್ಲಿ 57 ರನ್ ಗಳಿಸಿದ್ದಾರೆ.

ಪಂದ್ಯದಲ್ಲಿ ಮುಂಬಯಿಗೆ ಭರ್ಜರಿ ವಿಜಯ

ಮುಂಬಯಿ: ಸೂರ್ಯಕುಮಾರ್ ಯಾದವ್ (Suryakumar Yadav) ಬಾರಿಸಿದ ಸ್ಫೋಟಕ ಶತಕ (102,51 ಎಸೆತ, 12 ಫೋರ್, 6 ಸಿಕ್ಸರ್​) ಹಾಗೂ ಬೌಲರ್​ಗಳ ಸಂಘಟಿತ ಹೋರಾಟದಿಂದ ಮಿಂಚಿದ ಮುಂಬೈ ಇಂಡಿಯನ್ಸ್​ (Mumbai Indians) ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 55ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad)​ ವಿರುದ್ಧ 7 ವಿಕೆಟ್​ ಸುಲಭ ವಿಜಯ ದಾಖಲಿಸಿದೆ. ಈ ಮೂಲಕ ಸೂರ್ಯನ ಪ್ರತಾಪಕ್ಕೆ ಸನ್​​ ಮಂಕಾಗಿ ಹೋಯಿತು. ಇದು ಮುಂಬಯಿ ತಂಡಕ್ಕೆ ಹಾಲಿ ಆವೃತ್ತಿಯ 12 ಪಂದ್ಯಗಳಲ್ಲಿ 4ನೇ ಗೆಲುವಾಗಿದೆ. ಇದರೊಂದಿಗೆ 10ನೇ ಸ್ಥಾನದಿಂದ ಒಂದು ಸ್ಥಾನ ಮೇಲ್ಕಕೇರಿದೆ. ಇದೇ ವೇಳೆ ಕಳೆದ ಆವೃತ್ತಿಯ ರನ್ನರ್​ ಅಪ್​ ತಂಡ ಗುಜರಾತ್​ ಕೊನೇ ಸ್ಥಾನಕ್ಕೆ ಇಳಿದಿದೆ.

ಇಲ್ಲಿನ ಐತಿಹಾಸಿಕ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಮುಂಬಯಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್​ ತಂಡ ತನ್ನ ಪಾಲಿನ 20 ಓವರ್​ಗಳಲ್ಲಿ 8 ವಿಕೆಟ್​ಗೆ 173 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ ಆರಂಭಿಕ ಹಿನ್ನಡೆ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ್ ಇನಿಂಗ್ಸ್​ ನೆರವಿನಿಂದ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿ ಗೆಲುವು ಸಾಧಿಸಿತು.

Continue Reading

ಕ್ರೀಡೆ

IPL 2024 : ಸೂರ್ಯನ ಪ್ರತಾಪಕ್ಕೆ ಮಂಕಾದ ಸನ್​; ಮುಂಬೈಗೆ 7 ವಿಕೆಟ್​ ಭರ್ಜರಿ ಗೆಲುವು

IPL 2024: ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್​ ತಂಡ ತನ್ನ ಪಾಲಿನ 20 ಓವರ್​ಗಳಲ್ಲಿ 8 ವಿಕೆಟ್​ಗೆ 173 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ ಆರಂಭಿಕ ಹಿನ್ನಡೆ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ್ ಇನಿಂಗ್ಸ್​ ನೆರವಿನಿಂದ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿ ಗೆಲುವು ಸಾಧಿಸಿತು.

VISTARANEWS.COM


on

IPL 2024
Koo

ಮುಂಬಯಿ: ಸೂರ್ಯಕುಮಾರ್ ಯಾದವ್ (Suryakumar Yadav) ಬಾರಿಸಿದ ಸ್ಫೋಟಕ ಶತಕ (102,51 ಎಸೆತ, 12 ಫೋರ್, 6 ಸಿಕ್ಸರ್​) ಹಾಗೂ ಬೌಲರ್​ಗಳ ಸಂಘಟಿತ ಹೋರಾಟದಿಂದ ಮಿಂಚಿದ ಮುಂಬೈ ಇಂಡಿಯನ್ಸ್​ (Mumbai Indians) ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 55ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad)​ ವಿರುದ್ಧ 7 ವಿಕೆಟ್​ ಸುಲಭ ವಿಜಯ ದಾಖಲಿಸಿದೆ. ಈ ಮೂಲಕ ಸೂರ್ಯನ ಪ್ರತಾಪಕ್ಕೆ ಸನ್​​ ಮಂಕಾಗಿ ಹೋಯಿತು. ಇದು ಮುಂಬಯಿ ತಂಡಕ್ಕೆ ಹಾಲಿ ಆವೃತ್ತಿಯ 12 ಪಂದ್ಯಗಳಲ್ಲಿ 4ನೇ ಗೆಲುವಾಗಿದೆ. ಇದರೊಂದಿಗೆ 10ನೇ ಸ್ಥಾನದಿಂದ ಒಂದು ಸ್ಥಾನ ಮೇಲ್ಕಕೇರಿದೆ. ಇದೇ ವೇಳೆ ಕಳೆದ ಆವೃತ್ತಿಯ ರನ್ನರ್​ ಅಪ್​ ತಂಡ ಗುಜರಾತ್​ ಕೊನೇ ಸ್ಥಾನಕ್ಕೆ ಇಳಿದಿದೆ.

ಇಲ್ಲಿನ ಐತಿಹಾಸಿಕ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಮುಂಬಯಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್​ ತಂಡ ತನ್ನ ಪಾಲಿನ 20 ಓವರ್​ಗಳಲ್ಲಿ 8 ವಿಕೆಟ್​ಗೆ 173 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ ಆರಂಭಿಕ ಹಿನ್ನಡೆ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ್ ಇನಿಂಗ್ಸ್​ ನೆರವಿನಿಂದ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ: T20 World Cup 2024 : ಕೇಸರಿಯ ರಂಗು; ಟೀಮ್​ ಇಂಡಿಯಾದ ಟಿ20 ವಿಶ್ವ ಕಪ್​​ ಜೆರ್ಸಿ ಬಿಡುಗಡೆ

ಸೂರ್ಯನ ಆಧಾರ

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡ ಆಘಾತಕಾರಿ ಆರಂಭ ಪಡೆಯಿತು. ಇಶಾನ್ ಕಿಶನ್ 9 ರನ್​ಗೆ ಔಟಾದರೆ ರೋಹಿತ್ ಶರ್ಮಾ 4 ರನ್​ಗೆ ಕ್ರೀಸ್ ತೊರೆಯಬೇಕಾಯಿತು. ನಮನ್ ಧಿರ್ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೆ ಸೋಲಿನ ಸುಳಿಗೆ ಸಿಲುಕಿತು. 31 ರನ್​ಗೆ 3 ವಿಕೆಟ್ ಕಳೆದುಕೊಂಡ ಮುಂಬೈ ಆತಂಕಕ್ಕೆ ಬಿತ್ತು. ಈ ವೇಳೆ ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತ ಸೂರ್ಯಕುಮಾರ್​ ಎಸ್​ಆರ್​ಎಚ್​ ಬೌಲರ್​ಗಳನ್ನು ದಂಡಿಸಲು ಆರಂಭಿಸಿದರು. 30 ಎಸೆತಕ್ಕೆ ಅರ್ಧ ಶತಕ ಬಾರಿಸಿದ ಸೂರ್ಯ ನಂತರದ 21 ಎಸೆತದಲ್ಲಿ ಉಳಿದ ರನ್​ಗಳನ್ನು ಪೂರೈಸಿದರು. ಇವರಿಗೆ ಜತೆಯಾದ ತಿಲಕ್​ ವರ್ಮಾ 32 ಎಸೆತಕ್ಕೆ 37 ರನ್ ಬಾರಿಸಿದರು.

ಎಸ್​ಆರ್​ಎಚ್ ಬ್ಯಾಟರ್​ಗಳು ಫೇಲ್​

ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್​ ಉತ್ತಮ ಆರಂಭ ಪಡೆದ ಬಳಿಕವೂ ಆಘಾತಕಾರಿ ಕುಸಿತ ಕಂಡಿತು. ಟ್ರಾವಿಸ್​ ಹೆಡ್​ 40 ರನ್​ ಬಾರಿಸಿದರೆ ಅಭಿಷೇಕ್ ಶರ್ಮಾ 11 ರನ್​ಗೆ ಮೀಸಲಾದರು. ಮತ್ತೆ ಅವಕಾಶ ಪಡೆದ ಮಯಾಂಕ್​ ಅಗರ್ವಾಲ್​ 5 ರನ್ ಬಾರಿಸಿದರೆ ನಿತಿಶ್​ ಕುಮಾರ್​ 20 ರನ್​ಗೆ ಔಟಾದರು. ಕೊನೆಯಲ್ಲಿ ನಾಯಕ ಪ್ಯಾಟ್​ ಕಮಿನ್ಸ್ 17 ಎಸೆತಕ್ಕೆ 35 ರನ್ ಬಾರಿಸಿ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಡುಗೆ ಕೊಟ್ಟರು.

ಮುಂಬೈ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ಪಿಯೂಶ್​ ಚಾವ್ಲಾ 33 ರನ್​ಗೆ 3 ವಿಕೆಟ್ ಪಡೆದರೆ ಹಾರ್ದಿಕ್ ಪಾಂಡ್ಯ 31 ರನ್​ಗೆ 3 ವಿಕೆಟ್ ಉರುಳಿಸಿದರು.

Continue Reading
Advertisement
IPL 2024
ಕ್ರೀಡೆ52 seconds ago

IPL 2024: ಶತಕ ಬಾರಿಸಿ ಟಿ20ಯಲ್ಲಿ ದಾಖಲೆ ಬರೆದ ಸೂರ್ಯಕುಮಾರ್ ಯಾದವ್​​

chikkaballapur road accident
ಕ್ರೈಂ4 mins ago

Road Accident: ಕಲ್ಲು ಸಾಗಿಸುತ್ತಿದ್ದ ಕ್ಯಾಂಟರ್‌ ಪಲ್ಟಿಯಾಗಿ ಮೂವರ ಸಾವು

World Asthma Day
ಆರೋಗ್ಯ12 mins ago

World Asthma Day: ಅಸ್ತಮಾದಿಂದ ಪಾರಾಗಲು ಈ ಸಂಗತಿ ತಿಳಿದುಕೊಂಡಿರಿ

IPL 2024 Points Table
ಕ್ರೀಡೆ23 mins ago

IPL 2024 Points Table: ಕೊನೆಯ ಸ್ಥಾನದಿಂದ ಮೇಲೆದ್ದ ಮುಂಬೈ ಇಂಡಿಯನ್ಸ್​

Lok Sabha Election 2024
Lok Sabha Election 202424 mins ago

Lok Sabha Election 2024: ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ; ಮತದಾನ ಮಾಡಲು ಕನ್ನಡದಲ್ಲೇ ಕರೆ

Google doodle
ದೇಶ27 mins ago

Lok Sabha Elections 2024: ಗೂಗಲ್‌ ಡೂಡಲ್‌ನಲ್ಲೂ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮ

lok sabha electon 2024 voting navadurge
ಪ್ರಮುಖ ಸುದ್ದಿ52 mins ago

Lok Sabha Election 2024: ಮುಂಜಾನೆಯಿಂದಲೇ ಮತದಾನ ಬಿರುಸು, ಎಲ್ಲೆಡೆ ಶಾಂತಿಯುತ

Road rage
ಕ್ರೈಂ1 hour ago

Road rage: BMW ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಪುಂಡರ ಅಟ್ಟಹಾಸ, ಇಲ್ಲಿದೆ ವಿಡಿಯೋ

Lok Sabha Election 2024
Lok Sabha Election 20241 hour ago

Lok Sabha Election 2024: ಮೂರನೇ ಹಂತದ ಮತದಾನ ಆರಂಭ; ಇಂದು ವೋಟು ಮಾಡಲಿದ್ದಾರೆ ಮೋದಿ, ಅಮಿತ್‌ ಶಾ

rajamarga column voting 1
ಪ್ರಮುಖ ಸುದ್ದಿ2 hours ago

ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ14 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ15 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ15 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌