Wrestler Protest | ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; ಬ್ರಿಜ್ ಭೂಷಣ್ - Vistara News

ಕ್ರೀಡೆ

Wrestler Protest | ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; ಬ್ರಿಜ್ ಭೂಷಣ್

ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Brij Bhushan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ(Wrestler Protest) ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತನ್ನ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಜತೆಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಜತೆ ನಾಲ್ಕು ಗಂಟೆಗಳ ಕಾಲ ನಡೆದ ತಡರಾತ್ರಿಯ ಸಭೆಯಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿಯಾದ ಬಳಿಕ ಬ್ರಿಜ್​ ಭೂಷಣ್ ಶರಣ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

ಈ ಆರೋಪ ಕೇಳಿ ಬಂದ ಬಳಿಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಒಂದೊಮ್ಮೆ ಈ ಆರೋಪ ನಿಜವಾದಲ್ಲಿ ತಾನು ಗಲ್ಲು ಶಿಕ್ಷೆಗೂ ಸಿದ್ಧನಿದ್ದೇನೆ ಎಂದು ಹೇಳಿದ್ದರು. ಇದೀಗ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿಯಾದ ಬಳಿಕ ತಾನು ಈ ಆರೋಪ ಹೊತ್ತು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಅತ್ತ ಕುಸ್ತಿ ಪಟುಗಳು ರಾಜಿನಾಮೆ ನೀಡುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಈ ಪ್ರಕರಣ ಯಾವ ರೀತಿಯಲ್ಲಿ ಅಂತ್ಯ ಕಾಣಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಬುಧವಾರ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಪೋಗಟ್ ಅವರು ರಾಷ್ಟ್ರೀಯ ತರಬೇತುದಾರರು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ಅಧಿಕಾರಿಗಳು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಇದೇ ವಿಚಾರವಾಗಿ ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಒಲಿಂಪಿಕ್ ಪದಕ ವಿಜೇತರಾದ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಮೂರು ದಿನಗಳಿಂದ ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Wrestling Federation of India ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವುದು ಯಾಕೆ? ಅವರ ಆರೋಪಗಳೇನು; ಏನಿದು ಪ್ರಕರಣ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Brij Bhushan : ಡಬ್ಲ್ಯುಎಫ್​ಐ ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಲು ಕೋರ್ಟ್​ ಆದೇಶ

VISTARANEWS.COM


on

Brij Bhushan
Koo

ನವದೆಹಲಿ: ಕುಸ್ತಿ ಒಕ್ಕೂಟದ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಲು ದೆಹಲಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಮಹಿಳೆಯರ ಘನತೆಗೆ ಧಕ್ಕೆ ತಂದ ಅಪರಾಧವನ್ನೂ ಬಿಜೆಪಿ ನಾಯಕನ ಮೇಲೆ ಹೊರಿಸಲಾಗಿದ್ದು ಎಲ್ಲ ಆರೋಪಗಳ ಮೇಲೆ ಕೇಸು ದಾಖಲಿಸುವಂತೆ ಹೇಳಿದೆ.

2023ರಲ್ಲಿ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ಎರಡು ಬಾರಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಜೂನ್ 15 ರಂದು ಬ್ರಿಜ್ ಭೂಷಣ್ ಶರಣ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354, 354 (ಎ), 354 (ಡಿ) ಅಡಿಯಲ್ಲಿ ಚಾರ್ಚ್​ಶೀಟ್​ ಸಲ್ಲಿಸಲಾಗಿದೆ. ಈ ಗಂಭೀರ ಆರೋಪಗಳ ನಡುವೆ, ಬ್ರಿಜ್ ಭೂಷಣ್ ಅವರಿಗೆ ಕೈಸರ್ಗಂಜ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಆದರೆ, ಬಿಜೆಪಿ ವರಿಷ್ಠರು ಅವರ ಪುತ್ರ ಕರಣ್ ಭೂಷಣ್ ಸಿಂಗ್ ಅವರ ಉಮೇದುವಾರಿಕೆಗೆ ಅವಕಾಶ ನೀಡಿದೆ.

ಇದನ್ನೂ ಓದಿ: MS Dhoni : ಧೋನಿಯ ಗಾಯದ ಗುಮಾನಿಗೆ ಸ್ಪಷ್ಟತೆ ನೀಡಿದ ಕೋಚ್ ಫ್ಲೆಮಿಂಗ್​

ಆರು ಕುಸ್ತಿಪಟುಗಳ ದೂರುಗಳನ್ನು ಆಧರಿಸಿ ದೆಹಲಿ ಪೊಲೀಸರು ಚಾರ್ಜ್​​ಶೀಟ್​ ಸಲ್ಲಿಸಿದೆ. ಬ್ರಿಜ್ ಭೂಷಣ್ ಅವರನ್ನು “ಲೈಂಗಿಕ ಕಿರುಕುಳ, ಕಿರುಕುಳ ಮತ್ತು ಹಿಂಬಾಲಿಸುವ ಅಪರಾಧಗಳಿಗಾಗಿ ವಿಚಾರಣೆಗೆ ಒಳಪಡಿಸಬೇಕು ಮತ್ತು ಶಿಕ್ಷಿಸಬೇಕು” ಎಂದು ಹೇಳಿದೆ. ಆಗಿನ ಡಬ್ಲ್ಯುಎಫ್ಐ ಅಧ್ಯಕ್ಷರ “ದೈಹಿಕವಾಗಿ ತಪ್ಪು ನಡತೆ” ಯನ್ನು ಸಹ ನೋಡಿದ್ದೇವೆ ಎಂದು ಸಾಕ್ಷಿಗಳು ಉಲ್ಲೇಖಿಸಿವೆ ಎಂದು ಚಾರ್ಜ್​ಶೀಟ್​​ನಲ್ಲಿ ತಿಳಿಸಲಾಗಿದೆ.

ಕುಸ್ತಿಪಟುಗಳ ದೂರಿನ ಆಧಾರದ ಮೇಲೆ ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್ಐಆರ್ ದಾಖಲಿಸಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಒಂದು ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟುವಿನ ಈ ಪ್ರಕರಣವನ್ನು ರದ್ದು ಮಾಡುವಂತೆ ಕೋರಲಾಗಿದೆ.

ಕುಸ್ತಿಪಟುಗಳು ದಾಖಲಿಸಿದ ಎಫ್ಐಆರ್​ ಪ್ರಕಾರ, ತನಿಖೆ ಪೂರ್ಣಗೊಳಿಸಲಾಗಿದೆ. ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಐಪಿಸಿಯ ಸೆಕ್ಷನ್ 354, 354 ಎ, 354 ಡಿ ಮತ್ತು ಐಪಿಸಿಯ ಸೆಕ್ಷನ್ 109, 354, 354 ಎ ಮತ್ತು 506 ರ ಅಡಿಯಲ್ಲಿ ಆರೋಪಿ ವಿನೋದ್ ತೋಮರ್ (ಕುಸ್ತಿ ಒಕ್ಕೂಟದ ಅಂದಿನ ಸಹಾಯಕ ಕಾರ್ಯದರ್ಶಿ) ವಿರುದ್ಧ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಚಾರ್ಜ್​ಶೀಟ್​ ಸಲ್ಲಿಸುತ್ತಿದ್ದೇವೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

MS Dhoni : ಧೋನಿಯ ಗಾಯದ ಗುಮಾನಿಗೆ ಸ್ಪಷ್ಟತೆ ನೀಡಿದ ಕೋಚ್ ಫ್ಲೆಮಿಂಗ್​

VISTARANEWS.COM


on

MS Dhoni
Koo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ (IPL 2024) ಋತುವಿನಲ್ಲಿ ಎಂಎಸ್ ಧೋನಿ (MS Dhoni) ಕೆಳ ಕ್ರಮಾಂಕದಲ್ಲಿ ಬ್ಯಾಟ್​ ಮಾಡುತ್ತಿರುವುದಕ್ಕೆ ಕಾರಣವನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಬಹಿರಂಗಪಡಿಸಿದ್ದಾರೆ. ಎಂಎಸ್ ಧೋನಿ ಸ್ನಾಯು ಗಾಯದಿಂದ ಬಳಲುತ್ತಿದ್ದಾರೆ, ಇದು ಐಪಿಎಲ್ 2024 ರಲ್ಲಿ ಭಾಗವಹಿಸುವ ಮೇಲೆ ಪರಿಣಾಮ ಬೀರಬಹುದು ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಹೀಗಾಗಿ ಅವರು ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ವಿಕೆಟ್​ಗಳ ನಡುವೆ ರನ್​ಗಾಗಿ ಹೆಚ್ಚು ಓಡುತ್ತಿಲ್ಲ ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಧೋನಿಯನ್ನು ನೋಡುವುದು ಐಪಿಎಲ್ ಅಭಿಮಾನಿಗಳಿಗೆ ದೊಡ್ಡ ವಿಷಯ. ಹೀಗಾಗಿ ಅವರು ಆಡುತ್ತಿದ್ದಾರೆ ಎಂಬುದೇ ಅವರ ಮಾತಿನ ಸಾರಾಂಶ.

ನಾಯಕ ಸ್ಥಾನದಿಂದ ಕೆಳಗಿಳಿದರೂ ಎಂಎಸ್ ಧೋನಿ ಸಿಎಸ್​ಕೆ ತಂಡದ ನಿರ್ಣಾಯಕ ಸದಸ್ಯರಾಗಿ ಉಳಿದಿದ್ದಾರೆ. ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಮತ್ತು ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ 9 ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದಿದ್ದರು. 42 ವರ್ಷದ ಕ್ರಿಕೆಟಿಗ ಹಾಲಿ ಆವೃತ್ತಿಯಲ್ಲಿ 55 ಸರಾಸರಿಯಲ್ಲಿ 110 ರನ್ ಗಳಿಸಿದ್ದಾರೆ ಮತ್ತು 224.49 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ವಿಕೆಟ್ ಕೀಪರ್-ಬ್ಯಾಟರ್​ ಪ್ರಸ್ತುತ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಏಳು ಇನ್ನಿಂಗ್ಸ್​ಗಳಲ್ಲಿ ಔಟಾಗದೆ ಉಳಿದಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧದ ತವರು ಪಂದ್ಯದ ವೇಳೆ ಬಲಗೈ ಬ್ಯಾಟರ್​ ರನೌಟ್ ಆಗಿದ್ದರು. ಧೋನಿ ತಮ್ಮ ಇತ್ತೀಚಿನ ಪಂದ್ಯದಲ್ಲಿ ಗೋಲ್ಡನ್ ಡಕ್ ಔಟ್ ಆಗಿದ್ದರು. ಅವರು ಋತುವಿನಾದ್ಯಂತ ಸ್ಟಂಪ್ ಗಳ ಹಿಂದೆ ಉತ್ತಮ ಕೆಲಸ ಮಾಡಿದ್ದಾರೆ.

ಎಂಎಸ್ ಧೋನಿಯ ಕೆಲಸದ ಹೊರೆಯನ್ನು ನಿರ್ವಹಿಸುತ್ತಿದ್ದೇವೆ – ಸ್ಟೀಫನ್ ಫ್ಲೆಮಿಂಗ್

ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಟೀಫನ್ ಫ್ಲೆಮಿಂಗ್, ಇಡೀ ಪಂದ್ಯಾವಳಿಗೆ ಅವರ ಲಭ್ಯತೆಯನ್ನು ಉಳಿಸಿಕೊಳ್ಳುವುದಕ್ಕೆ ಎಂಎಸ್ ಧೋನಿ ಅವರ ಕೆಲಸದ ಹೊರೆಯನ್ನು ನಿರ್ವಹಿಸಬೇಕಾಗಿದೆ. ಡೆತ್ ಓವರ್ಗಳಲ್ಲಿ ಧೋನಿ ಬ್ಯಾಟ್​ನೊಂದಗೆ ನೀಡಬಹುದಾದ ಕೊಡುಗೆ ಸಮತೋಲನವನ್ನು ಕಂಡುಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಸುನಿಲ್ ಗವಾಸ್ಕರ್ ಮತ್ತು ಹರ್ಷ ಭೋಗ್ಲೆ ವಿರುದ್ಧ ವಿರಾಟ್ ಕೊಹ್ಲಿ ವಾಗ್ದಾಳಿ

ನಾವು ಅವರ ಕೆಲಸದ ಹೊರೆಯನ್ನು ನಿರ್ವಹಿಸುತ್ತಿದ್ದೇವೆ. ಇದು ಅಪಾಯಕಾರಿ ಮತ್ತು ಋತುವಿನ ಆರಂಭದಲ್ಲಿ ಸ್ವಲ್ಪ ಸ್ನಾಯು ಸೆಳೆತವನ್ನುಅ ನುಭವಿಸಿದ್ದಾರೆ. ಅವರು ಹೆಚ್ಚು ಸಮಯ ಬ್ಯಾಟಿಂಗ್ ಮಾಡಿದರೆ ನಾವು ಅವರನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತೇವೆ. ಆದ್ದರಿಂದ ನಾವು ಆ ಸಮತೋಲನವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಧೋನಿ ಕೇವಲ ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆಯುವ ಮೂಲಕ ಪಂದ್ಯದ ಮೇಲೆ ಪರಿಣಾಮ ಬೀರುತ್ತಿದ್ದಾರೆಎಂದು ಫ್ಲೆಮಿಂಗ್ ಹೇಳಿದರು.

ಎಚ್ಚರಿಕೆ ಅಗತ್ಯ

ಈ ಋತುವಿನಲ್ಲಿ ಎಂಎಸ್ ಧೋನಿ ಅವರ ಕೆಲಸದ ಹೊರೆಯನ್ನು ಟೀಮ್ ಮ್ಯಾನೇಜ್ಮೆಂಟ್ ನಿರ್ವಹಿಸುವ ಅಗತ್ಯವಿದೆ ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಅಂತಿಮ ಓವರ್​ಗಳಲ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮದ ಜೊತೆಗೆ ಹೊಸ ನಾಯಕ ಋತುರಾಜ್ ಗಾಯಕ್ವಾಡ್​ಗೆ ಧೋನಿ ತಂತ್ರಗಾರಿಕೆಯ ಸಲಹೆಯನ್ನು ನೀಡುತ್ತಿದ್ದಾರೆ. ಅವರು ಎಲ್ಲ ರೀತಿಯಲ್ಲೂ ತಂಡಕ್ಕೆ ಅಗತ್ಯ ಎಂದು ಅವರು ಹೇಳಿದರು.

ಕಳೆದ ವರ್ಷ ಅವರು ಎದುರಿಸಿದ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಆದರೂ ಅದು ಅವರನ್ನು ಸಾಕಷ್ಟು ದುರ್ಬಲಗೊಳಿಸಿದೆ. ಈ ವರ್ಷ ಅವರು ನಿರ್ವಹಿಸಬಹುದಾದ ಒಂದು ನಿರ್ದಿಷ್ಟ ಕೆಲಸದ ಹೊರೆ ಇರುತ್ತದೆ ಎಂದು ನಾವು ಮೊದಲೇ ಹೇಳಿದ್ದೇವೆ. ನಮ್ಮಲ್ಲಿ ಬ್ಯಾಕ್​ಅಪ್​ ಕೀಪರ್​ಗಳು ಇದ್ದಾರೆ. ಆದಾಗ್ಯೂ ಎಂಎಸ್ ಧೋನಿಯನ್ನು ಮೈದಾನದಲ್ಲಿ ಇರಿಸಲು ಬಯಸುತ್ತೇವೆ. ಬ್ಯಾಟಿಂಗ್​ನಲ್ಲಿ ನಾಲ್ಕು ಓವರ್​ಗಳು ಮತ್ತು ಅವರ ಕೀಪಿಂಗ್ ಮತ್ತು ಹೊಸ ನಾಯಕನೊಂದಿಗೆ ಕಾರ್ಯತಂತ್ರದ ಸಲಹೆಯನ್ನು ನೀಡುತ್ತಿದ್ದಾರೆ, “ಎಂದು ಫ್ಲೆಮಿಂಗ್ ಹೇಳಿದರು.

ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವು ಪ್ರಸ್ತುತ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು +0.700 ನೆಟ್ ರನ್ ರೇಟ್ (ಎನ್ಆರ್​ಆರ್) ಹೊಂದಿದೆ. ಮೇ 10ರಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಚೆನ್ನೈ ಮೂಲದ ತಂಡವು ಪಂದ್ಯಾವಳಿಯಲ್ಲಿ ಸ್ಥಾನ ಪಡೆಯಲು ಉಳಿದಿರುವ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಬೇಕಾಗಿದೆ.

Continue Reading

ಪ್ರಮುಖ ಸುದ್ದಿ

IPL 2024 : ಸುನಿಲ್ ಗವಾಸ್ಕರ್ ಮತ್ತು ಹರ್ಷ ಭೋಗ್ಲೆ ವಿರುದ್ಧ ವಿರಾಟ್ ಕೊಹ್ಲಿ ವಾಗ್ದಾಳಿ

IPL 2024: ನಿರಂತರವಾಗಿ ವಿಕಸನಗೊಳ್ಳುತ್ತಿರುವ ಟಿ20 ಸ್ವರೂಪದಲ್ಲಿ ನಿರಂತರ ಸುಧಾರಣೆಯ ಮಹತ್ವವನ್ನು ಕೊಹ್ಲಿ ಒತ್ತಿಹೇಳಿದ್ದಾರೆ ತಮ್ಮ ಕೌಶಲಗಳನ್ನು ಪರಿಷ್ಕರಿಸಲು ಮತ್ತು ಹೊಸ ಸವಾಲುಗಳನ್ನು ಸ್ವೀಕರಿಸಲು ತೋರಿದ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಧರ್ಮಶಾಲಾದಲ್ಲಿ ನಡೆದ ಐಪಿಎಲ್ 2024 ರ ರೋಮಾಂಚಕ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂಜಾಬ್ ಕಿಂಗ್ಸ್ (PBKS) ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರ ಹಿಂದೆ ಕೊಹ್ಲಿಯ 92 ರನ್​ಗಳ ಶ್ರಮವಿದೆ.

VISTARANEWS.COM


on

IPL 2024
Koo

ಧರ್ಮಶಾಲಾ: ಮೇ 9 ರಂದು ನಡೆದ ಐಪಿಎಲ್ 2024 ರ (IPL 2024) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challegers Bangalore) ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ತಮ್ಮ ಆಟದ ವಿಧಾನದ ಬಗ್ಗೆ ಮಾತನಾಡಿದ ಅವರು ಅಭ್ಯಾಸದ ಸಮಯ ಹಾಗೂ ವ್ಯಾಪಕ ಅನುಭವವು ಹೇಗೆ ತಮ್ಮ ನ್ನು ಶಕ್ತಗೊಳಿಸಿದೆ ಎಂಬುದನ್ನು ವಿವರಿಸಿದ್ದಾರೆ. ಇದೇ ವೇಳೆ ತಮ್ಮನ್ನು ಅನವಶ್ಯಕವಾಗಿ ಟೀಕೆ ಮಾಡುವ ಸುನಿಲ್ ಗವಾಸ್ಕರ್ ವಿರುದ್ಧ ಕೆಂಡ ಕಾರಿದ್ದಾರೆ.

ನಿರಂತರವಾಗಿ ವಿಕಸನಗೊಳ್ಳುತ್ತಿರುವ ಟಿ20 ಸ್ವರೂಪದಲ್ಲಿ ನಿರಂತರ ಸುಧಾರಣೆಯ ಮಹತ್ವವನ್ನು ಅವರು ಒತ್ತಿಹೇಳಿದ್ದಾರೆ ತಮ್ಮ ಕೌಶಲಗಳನ್ನು ಪರಿಷ್ಕರಿಸಲು ಮತ್ತು ಹೊಸ ಸವಾಲುಗಳನ್ನು ಸ್ವೀಕರಿಸಲು ತೋರಿದ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಧರ್ಮಶಾಲಾದಲ್ಲಿ ನಡೆದ ಐಪಿಎಲ್ 2024 ರ ರೋಮಾಂಚಕ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂಜಾಬ್ ಕಿಂಗ್ಸ್ (PBKS) ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರ ಹಿಂದೆ ಕೊಹ್ಲಿಯ 92 ರನ್​ಗಳ ಶ್ರಮವಿದೆ.

ಗುಣಮಟ್ಟ ನನಗೆ ಚೆನ್ನಾಗಿ ಕೆಲಸ ಮಾಡುತ್ತದೆ: ವಿರಾಟ್ ಕೊಹ್ಲಿ

ಕೊಹ್ಲಿಯ 92 ರನ್​ಗಳ ರೋಚಕ ಇನ್ನಿಂಗ್ಸ್ ತಂತ್ರಗಾರಿಕೆ ಮತ್ತು ಲೆಕ್ಕಾಚಾರದ ಆಕ್ರಮಣಶೀಲತೆಯ ಫಲವಾಗಿದೆ. ಅಲ್ಲದೆ ಅವರು ತಮ್ಮ ಭಯಂಕರ ಇನಿಂಗ್ಸ್​ ಮೂಲಕ ಸ್ಟ್ರೈಕ್ ರೇಟ್ ಅನ್ನು ಪ್ರಶ್ನಿಸಿದ ಟೀಕಾಕಾರರನ್ನು ಮೌನಗೊಳಿಸಿದ್ದಾರೆ. 195 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​ನೊಂದಿಗೆ ಕೊಹ್ಲಿ ಅವರ 47 ಎಸೆತಗಳು ಪರಿಣಾಮಕಾರಿ ಸ್ಟ್ರೋಕ್​ಗಳಿಮದ ತುಂಬಿದ್ದ ರನ್​ ಬಾರಿಸಿದ್ದಾರೆ. ಡ್ಯಾಶಿಂಗ್ ಬಲಗೈ ಬ್ಯಾಟರ್​ ತಮ್ಮ ಅದ್ಭುತ ಇನ್ನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್​ಗಳನ್ನು ಸಿಡಿಸಿದ್ದರು.

ಪಂದ್ಯದ ನಂತರ ಮಾತನಾಡಿದ ಕೊಹ್ಲಿ ವೈಯಕ್ತಿಕ ಮೈಲಿಗಲ್ಲುಗಳಿಗಿಂತ ತಮ್ಮ ಆಟದ ಗುಣಮಟ್ಟ ಹೆಚ್ಚಿಸುವ ಬದ್ಧತೆ ಪುನರುಚ್ಚರಿಸಿದರು. ಆತಿಥೇಯ ಪಿಬಿಕೆಎಸ್ ವಿರುದ್ಧದ ಪಂದ್ಯ ವಿಜೇತ ಇನ್ನಿಂಗ್ಸ್​ಗಾಗಿ ಮಾಜಿ ಆರ್​ಸಿಬಿ ನಾಯಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಗುಣಮಟ್ಟವೇ ನನಗೆ ಮುಖ್ಯ

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, “ನನಗೆ ದಾಖಲೆಗಿಂತ ಗುಣಮಟ್ಟದ ಕ್ರಿಕೆಟ್ ಮುಖ್ಯ. ನನ್ನ ವೃತ್ತಿಜೀವನದ ಮಹತ್ವದ ಹಂತದಲ್ಲಿದ್ದೇನೆ. ನಾನು 35 ವರ್ಷದವನಾಗಿದ್ದೇನೆ. ಹೀಗಾಗಿ ದೊಡ್ಡ ರನ್​ಗಿಂತ ಗುಣಮಟ್ಟವು ನನಗೆ ಬೆಂಬಲವಾಗಿರುತ್ತದೆ. ಅನೇಕ ವರ್ಷಗಳ ಆಟದ ಅರಿವು ಮಾನಸಿಕವಾಗಿ ಬಲಗೊಳಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: IPL 2024: ಕೆ.ಎಲ್​ ರಾಹುಲ್​ಗೆ ಬೈದ ಎಲ್​​ಎಸ್​​ಜಿ ಮಾಲೀಕ ಗೋಯೆಂಕಾ ವರ್ತನೆಗೆ ಮೊಹಮ್ಮದ್​ ಶಮಿ ಆಕ್ರೋಶ

ಇದನ್ನು ನಾನು ಪ್ರತಿ ಪಂದ್ಯದಲ್ಲಿ ಪುನರಾವರ್ತಿಸಲು ಪ್ರಯತ್ನಿಸಿದ್ದೇನೆ..ನನ್ನ ಆಟವನ್ನು ಸುಧಾರಿಸುವ ವಿಷಯದಲ್ಲಿ ಕೆಲವು ಹೆಚ್ಚುವರಿ ಸವಾಲುಗಳಿವೆ ಇದು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಪ್ರಕ್ರಿಯೆ. ನಾನು ಉತ್ತಮವಾಗಿ ಆಡುವವ. ಸುಮ್ಮನೆ ವಿವರಣೆ ನೀಡುವ ವ್ಯಕ್ತಿಯಲ್ಲ ಎಂದು ಗವಾಸ್ಕರ್ ಮತ್ತು ಹರ್ಷ ಭೋಗ್ಲೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ ಹೊಡೆಗಳ ಬಗ್ಗೆ ಮಾತನಾಡಿದ ಕೊಹ್ಲಿ

ಐಪಿಎಲ್ 2024 ರಲ್ಲಿ ಕೊಹ್ಲಿ ಆಗಾಗ್ಗೆ ಸ್ಲಾಗ್-ಸ್ವೀಪ್ಗಳನ್ನು ಬಳಸುತ್ತಿದ್ದಾರೆ. ಇದು ಅನೇಕರನ್ನು ಆಶ್ಚರ್ಯಗೊಳಿಸಿದೆ. ಭಾರತದ ಮಾಜಿ ನಾಯಕ ಎಂದಿಗೂ ಅಂಥ ಶಾಟ್ ಅನ್ನು ನಿರ್ದಿಷ್ಟವಾಗಿ ಅಭ್ಯಾಸ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಬದಲಾಗಿ, ಬ್ಯಾಟಿಂಗ್ ಮಾಂತ್ರಿಕ ಅವುಗಳನ್ನು ತಿಳಿವಳಿಕೆ ಮೇಲೆ ಮಾಡಿದ್ದಾರೆ.

ಇದು ಪ್ರತಿ ಶಾಟ್ ಅನ್ನು ನಿಖರವಾಗಿ ಅಭ್ಯಾಸ ಮಾಡುವ ಬಗ್ಗೆ ಅಲ್ಲ, ಆದರೆ ಪರಿಸ್ಥಿತಿಗೆ ಅಗತ್ಯವಿರುವಾಗ ಅವುಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು. ನಾನು ಸ್ಪಿನ್ನರ್​ಗಳ ವಿರುದ್ಧ ಸ್ಲಾಗ್-ಸ್ವೀಪ್ ಅನ್ನು ಬಳಸುತ್ತಿದ್ದೇನೆ. ಮಾನಸಿಕವಾಗಿ ಆ ಪರಿಸ್ಥಿತಿಯಲ್ಲಿ ಬೆಳೆದಿದ್ದೇನೆ ಎಂದು ಹೇಳಿದರು.

Continue Reading

ಕ್ರೀಡೆ

IPL 2024: ಕೆ.ಎಲ್​ ರಾಹುಲ್​ಗೆ ಬೈದ ಎಲ್​​ಎಸ್​​ಜಿ ಮಾಲೀಕ ಗೋಯೆಂಕಾ ವರ್ತನೆಗೆ ಮೊಹಮ್ಮದ್​ ಶಮಿ ಆಕ್ರೋಶ

IPL 2024: ಮೇ 8 ರಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೂಪರ್ ಜೈಂಟ್ಸ್ 10 ವಿಕೆಟ್ ಗಳ ಸೋಲನುಭವಿಸಿತು. ಈ ಸೋಲು ನೆಟ್ ರನ್ ರೇಟ್ (ಎನ್ಆರ್ಆರ್) ಕುಸಿತದೊಂದಿಗೆ ಐಪಿಎಲ್ 2024 ಪ್ಲೇಆಫ್ ತಲುಪುವ ಅವರ ಭರವಸೆಯನ್ನು ಭಗ್ನಗೊಳಿಸಿತು. ಈಗ, ಅವರ ಭವಿಷ್ಯವು ಇತರ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ.

VISTARANEWS.COM


on

IPL 2024
Koo

ನವದೆಹಲಿ: ಐಪಿಎಲ್ ಪಂದ್ಯ (IPL 2024) ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಾಯಕ ಕೆಎಲ್ ರಾಹುಲ್ (KL Rahul) ಮತ್ತು ಸಂಜೀವ್ ಗೋಯೆಂಕಾ ನಡುವಿನ ಮಾತುಕತೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನೆಟ್ಟಿಗರು ಈ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿರುವ ನಡುವೆಯೇ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ರಾಹುಲ್​ಗೆ ಬೆಂಬಲ ವ್ಯಕ್ತಪಡಿಸಿರುವ ಅವರು ಗೊಯೆಂಕಾ ವರ್ತನೆಗೆ ಕಿಡಿಕಾರಿದ್ದಾರೆ. ಸಂಜೀವ್ ಗೋಯೆಂಕಾ ಅವರ ಕ್ರಮವನ್ನು ಟೀಕಿಸಿದ ಮೊಹಮ್ಮದ್ ಶಮಿ, ಈ ವಿಷಯವನ್ನು ಸಾರ್ವಜನಿಕವಾಗಿ ಮಾತನಾಡುವ ಬದಲು ಡ್ರೆಸ್ಸಿಂಗ್ ಕೋಣೆಯಲ್ಲಿ ಪರಿಹರಿಸಬಹುದಿತ್ತು ಎಂದು ಹೇಳಿದ್ದಾರೆ.

ಮೇ 8 ರಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೂಪರ್ ಜೈಂಟ್ಸ್ 10 ವಿಕೆಟ್ ಗಳ ಸೋಲನುಭವಿಸಿತು. ಈ ಸೋಲು ನೆಟ್ ರನ್ ರೇಟ್ (NRR) ಕುಸಿತದೊಂದಿಗೆ ಐಪಿಎಲ್ 2024 ಪ್ಲೇಆಫ್ ತಲುಪುವ ರಾಹುಲ್ ಬಳಗದ ಭರವಸೆಯನ್ನು ಭಗ್ನಗೊಳಿಸಿತು. ಈಗ, ಅವರ ಭವಿಷ್ಯವು ಇತರ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ.

ಹೈದರಾಬಾದ್​ನಲ್ಲಿ ಎದುರಾದ ಸೋಲಿನ ನಂತರ, ಎಲ್ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ ಅಸಮಾಧಾನಗೊಂಡಿದ್ದರು. ಮೈದಾನದಲ್ಲಿಯೇ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ವಾಗ್ವಾದ ನಡೆಸಿದ್ದರು. ಸಾರ್ವಜನಿಕವಾಗಿ ನಡೆದ ಸಂಭಾಷಣೆಯ ಬಗ್ಗೆ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಗೋಯೆಂಕಾ ಅವರನ್ನು ಟೀಕಿಸಿದ್ದಾರೆ. ರಾಹುಲ್ ಅವರೊಂದಿಗಿನ ನಡವಳಿಕೆಯನ್ನು ವೃತ್ತಿಪರವಲ್ಲ ಮತ್ತು ಸ್ವೀಕಾರಾರ್ಹವಲ್ಲ ಎಂದು ಕರೆದಿದ್ದಾರೆ.

ನೀವು ಗೌರವಾನ್ವಿತ ವ್ಯಕ್ತಿ – ಮೊಹಮ್ಮದ್ ಶಮಿ ಟೀಕೆ

ಕ್ರಿಕ್ಬಝ್ ಜೊತೆ ಮಾತನಾಡಿದ ಮೊಹಮ್ಮದ್ ಶಮಿ, ಸಂಜೀವ್ ಗೋಯೆಂಕಾ ಕೆಎಲ್ ರಾಹುಲ್​​ಗೆ ಸಾರ್ವಜನಿಕವಾಗಿ ಅಗೌರವ ತೋರಿದ್ದಾರೆ ಎಂದು ಟೀಕಿಸಿದರು. ಅಂತಹ ವಿಷಯಗಳನ್ನು ಕ್ಯಾಮೆರಾಗಳ ಮುಂದೆ ಪರಿಹರಿಸುವ ಬದಲು ಖಾಸಗಿಯಾಗಿ ಇತ್ಯರ್ಥಪಡಿಸಬೇಕು ಎಂದು ಶಮಿ ಹೇಳಿದ್ದಾರೆ.

ಆಟಗಾರರಿಗೆ ಗೌರವವಿದೆ, ಮತ್ತು ನೀವು ಮಾಲೀಕರಾಗಿರುವುದರಿಂದ ನೀವು ಗೌರವಾನ್ವಿತ ವ್ಯಕ್ತಿಯೂ ಹೌದು. ಅನೇಕ ಜನರು ನಿಮ್ಮನ್ನು ನೋಡುತ್ತಿರುತ್ತಾರೆ. ನಿಮ್ಮಿಂದ ಕಲಿಯುತ್ತಿದ್ದಾರೆ. ಕ್ಯಾಮೆರಾಗಳ ಮುಂದೆ ಈ ವಿಷಯಗಳು ಸಂಭವಿಸಿದರೆ ಅ ದು ನಾಚಿಕೆಗೇಡಿನ ವಿಷಯವಾಗುತ್ತದೆ ಎಂದು ಶಮಿ ಹೇಳಿದ್ದಾರೆ.

ನೀವು ನಿಮ್ಮ ಅಭಿಪ್ರಾಯಗಳನ್ನು ಹೇಳಲು ಅನೇಕ ವಿಭಿನ್ನ ಮಾರ್ಗಗಳಿವೆ. ಡ್ರೆಸ್ಸಿಂಗ್ ರೂಮ್ ಅಥವಾ ಹೋಟೆಲ್​ನಲ್ಲಿ ಅದೇ ಕೆಲಸವನ್ನು ಮಾಡಬಹುದಿತ್ತು. ಅದನ್ನು ಮೈದಾನದಲ್ಲಿ ಮಾಡುವ ಅಗತ್ಯವಿರಲಿಲ್ಲ. ಈ ರೀತಿ ಮಾಡುವುದು ಗೌರವ ಸಂಕೇತ ಅಲ್ಲ ” ಎಂದು ಶಮಿ ಹೇಳಿದ್ದಾರೆ.

ಕೆಎಲ್ ರಾಹುಲ್ 33 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಪ್ರವಾಸಿ ತಂಡವು ಪವರ್ ಪ್ಲೇನಲ್ಲಿ ಕೇವಲ ೨೭ ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಆಯುಷ್ ಬಡೋನಿ (55) ಮತ್ತು ನಿಕೋಲಸ್ ಪೂರನ್ (48) ಅವರ ಕೊನೇ ಹಂತದ ಕೊಡುಗೆಯೊಂದಿಗೆ ಲಕ್ನೋ ಮೂಲದ ತಂಡವು 20 ಓವರ್​ಗಳಲ್ಲಿ 165 ರನ್ ಗಳಿಸಿತು.

ಉತ್ತರವಾಗಿ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಕೇವಲ 9.4 ಓವರ್​ಗಳಲ್ಲಿ 166 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 38 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿದರು. ಹೀಗಾಗಿ 10 ವಿಕೆಟ್​ಗಳ ವಿಜಯ ಲಭಿಸಿತು.

ಇದನ್ನೂ ಓದಿ: IPL 2024 : ಆರ್​ಸಿಬಿಯ ಪ್ಲೇಆಫ್​ ಚಾನ್ಸ್​ ಇದೆಯೇ? ಇಲ್ಲಿದೆ ನೋಡಿ ಲೆಕ್ಕಾಚಾರ

ಇದು ಕೆಟ್ಟ ಸಂದೇಶ ರವಾನಿಸುತ್ತದೆ – ಮೊಹಮ್ಮದ್ ಶಮಿ

ನಾಯಕನ ಬಗ್ಗೆ ಸಾರ್ವಜನಿಕ ಟೀಕೆ ನ್ಯಾಯಸಮ್ಮತವಲ್ಲ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ. ತಂಡದ ಯೋಜನೆಗಳು ಯಾವಾಗಲೂ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬ ಆಟಗಾರನು ಗೌರವಕ್ಕೆ ಅರ್ಹನಾಗಿದ್ದಾನೆ ಮತ್ತು ಗೌರವಯುತ ಸಂವಹನದ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

ರಾಹುಲ್ ನಾಯಕರೂ ಹೌದು. ಅವರು ಸಾಮಾನ್ಯ ಆಟಗಾರನಲ್ಲ. ಇದು ಒಂದು ತಂಡದ ಆಟ. ಯೋಜನೆ ಯಶಸ್ವಿಯಾಗದಿದ್ದರೆ, ಅದು ದೊಡ್ಡ ವಿಷಯವಲ್ಲ. ಆಟದಲ್ಲಿ ಏನು ಬೇಕಾದರೂ ಸಾಧ್ಯ. ಒಳ್ಳೆಯ ಅಥವಾ ಕೆಟ್ಟ ದಿನಗಳು ಇರಬಹುದು. ಆದರೆ ಪ್ರತಿಯೊಬ್ಬ ಆಟಗಾರನಿಗೆ ಗೌರವವಿದೆ, ಮತ್ತು ಮಾತನಾಡಲು ಒಂದು ಮಾರ್ಗವಿದೆ. ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ, “ಎಂದು ಶಮಿ ಹೇಳಿದರು.

ಕೆಎಲ್ ರಾಹುಲ್ ನೇತೃತ್ವದ ತಂಡವು ಪ್ರಸ್ತುತ ಆರು ಗೆಲುವು ಮತ್ತು ಆರು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್ ರೇಸ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CKS), ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ ) ತಂಡಗಳಿಂದ ಎಲ್ಎಸ್​​ಜಿ ತಂಡವು ಕಠಿಣ ಸ್ಪರ್ಧೆ ಎದುರಿಸುತ್ತಿದೆ.

Continue Reading
Advertisement
New Tata Ace EV 1000 launched by Tata Motors
ವಾಣಿಜ್ಯ44 seconds ago

Tata Motors: Tata Ace EV 1000 ಬಿಡುಗಡೆ ಮಾಡಿದ ಟಾಟಾ ಮೋಟರ್ಸ್‌; ಏನಿದರ ವಿಶೇಷತೆ? ದರ ಎಷ್ಟು?

Brij Bhushan
Latest7 mins ago

Brij Bhushan : ಡಬ್ಲ್ಯುಎಫ್​ಐ ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಲು ಕೋರ್ಟ್​ ಆದೇಶ

Dates Benefits
ಆರೋಗ್ಯ8 mins ago

Dates Benefits: ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ದಿನಕ್ಕೊಂದು ಖರ್ಜೂರ ತಿಂದರೆ ಸಾಕು!

Sanatan Sanstha
ದೇಶ18 mins ago

Sanatan Sanstha: ದಾಭೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು: ಚೇತನ್ ರಾಜಹಂಸ

Prajwal Revanna Case Revanna bail plea to be heard on Monday What is SIT argument
ಕ್ರೈಂ26 mins ago

Prajwal Revanna Case: ಸೋಮವಾರ ರೇವಣ್ಣ ಜಾಮೀನು ಅರ್ಜಿ ವಿಚಾರಣೆ: SIT ವಾದ ಏನು? ವಕೀಲ ನಾಗೇಶ್‌ ಕೌಂಟರ್‌ ಏನು?

US Officer
ವಿದೇಶ31 mins ago

ಮನೆಗೆ ನುಗ್ಗಿ ತಮ್ಮದೇ ದೇಶದ ಕಪ್ಪುವರ್ಣೀಯ ಸೇನಾಧಿಕಾರಿಯನ್ನು ಕೊಂದ ಅಮೆರಿಕ ಪೊಲೀಸರು; Video ಇದೆ

Absence Video Case registered against Prajwal for sharing and uploading obscene video in Kudremukh
ಕರ್ನಾಟಕ46 mins ago

Absence Video: ಅಶ್ಲೀಲ ವಿಡಿಯೋ ಶೇರ್‌, ಅಪ್ಲೋಡ್‌ ಮಾಡುತ್ತಿದ್ದ ಪ್ರಜ್ವಲ್‌ ಮೇಲೆ ಕುದುರೆಮುಖದಲ್ಲಿ ಕೇಸ್‌ ದಾಖಲು!

MS Dhoni
ಪ್ರಮುಖ ಸುದ್ದಿ48 mins ago

MS Dhoni : ಧೋನಿಯ ಗಾಯದ ಗುಮಾನಿಗೆ ಸ್ಪಷ್ಟತೆ ನೀಡಿದ ಕೋಚ್ ಫ್ಲೆಮಿಂಗ್​

Road Accident
ಕ್ರೈಂ53 mins ago

Road Accident : ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು; ಕರೆಂಟ್‌ ವೈರ್‌ ತಾಗಿ ವ್ಯಕ್ತಿ ಮೃತ್ಯು

IPL 2024
ಪ್ರಮುಖ ಸುದ್ದಿ1 hour ago

IPL 2024 : ಸುನಿಲ್ ಗವಾಸ್ಕರ್ ಮತ್ತು ಹರ್ಷ ಭೋಗ್ಲೆ ವಿರುದ್ಧ ವಿರಾಟ್ ಕೊಹ್ಲಿ ವಾಗ್ದಾಳಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ4 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ6 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ7 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ13 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ20 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ22 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ22 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌