Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್‌ ಕವಾಯ್ Vistara News
Connect with us

ಕ್ರೀಡೆ

Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್‌ ಕವಾಯ್

ಭಾರತೀಯ ಕ್ರೀಡಾಪಟುಗಳು ಶಾಂತಿಯಿಂದ ಅಭ್ಯಾಸ ನಡೆಸುವ ವಾತಾವರಣ ಶೀಘ್ರದಲ್ಲೇ ಸೃಷ್ಟಿಯಾಗಲಿ ಎಂದು ಹೇಳುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಕವಾಯ್ ಅವರು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದಾರೆ.

VISTARANEWS.COM


on

Tokyo Olympics Champion Risako Kawai
Koo

ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದು ಕಳೆದ ಸುಮಾರು ಒಂದು ತಿಂಗಳಿನಿಂದ ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಒಲಿಂಪಿಯನ್​ ಕುಸ್ತಿಪಟುಗಳಿಗೆ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ರಿಸಾಕೊ ಕವಾಯ್ ಅವರ ಬೆಂಬಲವೊಂದು ದೊರೆತಿದೆ.

ಎರಡು ವಾರಗಳ ಹಿಂದೆ ಕುಸ್ತಿಪಟುಗಳು ತಮ್ಮ ಪ್ರತಿಭಟನೆಗೆ ಬೆಂಬಲಿಸುವಂತೆ ಒಲಿಂಪಿಕ್‌ ಪದಕ ವಿಜೇತರು ಸೇರಿ ತಾರಾ ವಿದೇಶಿ ಅಥ್ಲೀಟ್‌ಗಳನ್ನು ವಿನಂತಿಸಿಕೊಂಡಿದ್ದರು. ಇದೀಗ ಮೂರು ಬಾರಿಯ ವಿಶ್ವ ಚಾಂಪಿಯನ್‌ ಜಪಾನ್‌ನ ರಿಸಾಕೊ ಕವಾಯ್ ಅವರು ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದಾರೆ. ಇದರೊಂದಿಗೆ ಕುಸ್ತಿಪಟುಗಳಿಗೆ ಬೆಂಬಲವಾಗಿ ಬಂದ ಮೊದಲ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಕವಾಯ್ ಅವರು ಟೋಕಿಯೊದಲ್ಲಿ ನಡೆದ 57 ಕೆಜಿ ಮಹಿಳಾ ಫ್ರೀಸ್ಟೈಲ್​ನಲ್ಲಿ ಚಿನ್ನ ಗೆದ್ದ ವೇಟ್‌ ಲಿಫ್ಟರ್.

ಕುಸ್ತಿಪಟುಗಳ ಪ್ರತಿಭಟನೆಯ ಕುರಿತು ಬಿಬಿಸಿ ನ್ಯೂಸ್​ನ ವೀಡಿಯೋವನ್ನು ರಿಟ್ವೀಟ್ ಮಾಡುವ ಮೂಲಕ, “ಭಾರತೀಯ ಕ್ರೀಡಾಪಟುಗಳು ಶಾಂತಿಯಿಂದ ಅಭ್ಯಾಸ ನಡೆಸುವ ವಾತಾವರಣ ಶೀಘ್ರದಲ್ಲೇ ಸೃಷ್ಟಿಯಾಗಲಿ” ಎಂದು ಹೇಳುವ ಮೂಲಕ ಕವಾಯ್ ಬೆಂಬಲ ಸೂಚಿಸಿದ್ದಾರೆ.

ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ Wrestlers Protest: ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ,ಯೋಗಿ ಹೆಸರು ಬಳಕೆ; ಬ್ರಿಜ್ ಭೂಷಣ್ ಆರೋಪ

ಇತ್ತೀಚೆಗೆ ಕುಸ್ತಿಪಟುಗಳು ಸಾವಿರಾರು ಪ್ರತಿಭಟನಾಕಾರರ ಬೆಂಬಲದೊಂದಿಗೆ ಇಂಡಿಯಾ ಗೇಟ್‌ ತನಕ ಕ್ಯಾಂಡಲ್ ಮಾರ್ಚ್ ಮಾಡಿದ್ದರು. ಇದೇ ವೇಳೆ ಮಾತನಾಡಿದ್ಧ ವಿನೇಶ್​ ಪೋಗಟ್​ ಇದು ಕೇವಲ ಆರಂಭವಷ್ಟೇ ಅಸಲಿ ಹೋರಾಟ ಇನ್ನು ಮುಂದೆ ಇದೆ ಎಂದು ಹೇಳುವ ಮೂಲಕ ಉಗ್ರ ಹೋರಟದ ಎಚ್ಚರಿಕೆಯನ್ನು ನೀಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್​ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್​

ಪಾರುಲ್ ಅವರ ಚಿನ್ದದ ಪದಕದೊಂದಿಗೆ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

VISTARANEWS.COM


on

Parul won gold medal in asian Games
Koo

ಹ್ಯಾಂಗ್​ಜೌ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನಲ್ಲಿ (Asian Games) ಸೋಮವಾರ ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಾರುಲ್ ಚೌಧರಿ, ಮಂಗಳವಾರ ನಡೆದ ಮಹಿಳೆಯರ 5000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಓಟದ ಅಂತಿಮ ಕ್ಷಣದಲ್ಲಿ ವೇಗ ಹೆಚ್ಚಿಸಿದ ಅವರು ಅವರು 15:14.75 ಸೆಕೆಂಡುಗಳಲ್ಲಿ ಗುರಿ ತಲುಪಿ ಜಪಾನ್ ನ ರಿರಿಕಾ ಹಿರೊನಾಕಾ ಅವರನ್ನು ಹಿಂದಿಕ್ಕಿದರು. ಈ ಮೂಲಕ ಭಾರತದ ಒಟ್ಟು ಚಿನ್ನದ ಪದಕಗಳ ಸಂಕೆಯ 14ಕ್ಕೆ ಏರಿಕೆಯಾಗಿದೆ ಹಾಗೂ ಒಟ್ಟಾರೆಯಾಗಿ 65 ಪದಕಗಳನ್ನು ಗೆದ್ದುಕೊಂಡಿದೆ.

ಮಹಿಳೆಯರ 400 ಮೀಟರ್ ಓಟದ ಫೈನಲ್​ನಲ್ಲಿ ವಿಥ್ಯಾ ರಾಮರಾಜ್ ಕಂಚಿನ ಪದಕ ಗೆದ್ದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಶತಕ (100), ರಿಂಕು ಸಿಂಗ್ ಅವರ ಅದ್ಭುತ ಶತಕ (37*) ಮತ್ತು ಬೌಲರ್​ಗಳ ಅಬ್ಬರದಿಂದಾಗಿ ಭಾರತ ಕ್ರಿಕೆಟ್​ ತಂಡವು ತಂಡವು ನೇಪಾಳ ವಿರುದ್ಧ 23 ರನ್​ಗಳ ವಿಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ಭಾರತ ಪುರುಷರ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.

ಭಾರತ ಪುರುಷರ ಕಬಡ್ಡಿ ತಂಡವು ಪಂದ್ಯಾವಳಿಯಲ್ಲಿ 55-18 ಅಂಕಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದರೆ, ಮಹಿಳಾ ಹಾಕಿ ತಂಡವು ಹಾಂಗ್ ಕಾಂಗ್ ವಿರುದ್ಧ 13-0 ಅಂತರದಿಂದ ಗೆಲುವು ಸಾಧಿಸಿತು. ಅರ್ಚರಿಯಲ್ಲಿ ಭಾರತೀಯರು ಪ್ರಾಬಲ್ಯ ಮೆರೆದಿದ್ದು, ಪುರುಷರ ವಿಭಾಗದಲ್ಲಿ ಓಜಾಸ್ ಪ್ರವೀಣ್ ಡಿಯೋಟಾಲೆ ಮತ್ತು ಅಭಿಷೇಕ್ ಶರ್ಮಾ ಅಖಿಲ ಭಾರತ ಫೈನಲ್ ತಲುಪಿದರೆ, ಜ್ಯೋತಿ ಸುರೇಖಾ ವೆನ್ನಮ್ ಕೂಡ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.

ಬ್ಯಾಡ್ಮಿಂಟರ್​ನಲ್ಲಿ ಭಾರತದ ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ 16ನೇ ಸುತ್ತಿಗೆ ತಲುಪಿದ್ದಾರೆ. ಮಹಿಳೆಯರ 800 ಮೀಟರ್ ಓಟದಲ್ಲಿ ಕುಮಾರಿ ಚಂದಾ ಮತ್ತು ಹರ್ಮಿಲನ್ ಬೈನ್ಸ್ ಅಂತಿಮ ಸ್ಥಾನಗಳನ್ನು ಗಳಿಸಿದರೆ. ಭಾರತವು 4×400 ಮೀಟರ್ ತಂಡ ಪುರುಷರ ಸ್ಪರ್ಧೆಯಲ್ಲಿ ಫೈನಲ್​ಗೆ ಅರ್ಹತೆ ಪಡೆಯಿತು.

ಪುರುಷರ ಡೆಕಾಥ್ಲಾನ್​ನಲ್ಲಿ ಅಗ್ರ ಸ್ಥಾನವನ್ನು ಗಳಿಸುವ ಗುರಿಯನ್ನು ತೇಜಸ್ವಿನ್ ಶಂಕರ್ ಹೊಂದಿದ್ದಾರೆ. 2014ರ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದಿದ್ದ ಮಹಿಳಾ ಜಾವೆಲಿನ್ ಸ್ಪರ್ಧಿ ಅನ್ನು ರಾಣಿ ಇನ್ನೊಂದು ಪದಕದ ಮೇಲೆ ಗುರಿಯಿಟ್ಟಿದ್ದಾರೆ.

ಭಾರತದ ಪದಕಗಳ ಪಟ್ಟಿ-

 • ಚಿನ್ನ: 14
 • ಬೆಳ್ಳಿ: 24
 • ಕಂಚು: 26

10ನೇ ದಿನದಲ್ಲಿ ಭಾರತದ ಫಲಿತಾಂಶಗಳು

ಮಹಿಳೆಯರ 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದಿದ್ದಾರೆ.

ಮಹಿಳೆಯರ 400 ಮೀಟರ್ ಹರ್ಡಲ್ಸ್​ನಲ್ಲಿ ವಿಥ್ಯಾ ರಾಮ್​​ರಾಜ್​ ಕಂಚಿನ ಪದಕ ಗೆದ್ದಿದ್ದಾರೆ.

ಮಹಿಳೆಯರ 54 ಕೆಜಿ ಬಾಕ್ಸಿಂಗ್​ನಲ್ಲಿ ಪ್ರೀತಿ ಪವಾರ್ ಕಂಚಿನ ಪದಕ ಗೆದ್ದಿದ್ದಾರೆ.

ಪುರುಷರ ಕ್ಯಾನೋ ಡಬಲ್ 1000 ಮೀಟರ್​ನಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.

ಪುರುಷರ ಕ್ರಿಕೆಟ್: ನೇಪಾಳವನ್ನು 23 ರನ್ ಗಳಿಂದ ಮಣಿಸಿದ ಭಾರತ ಸೆಮಿಫೈನಲ್ ಗೆ

ಕಬಡ್ಡಿ: ಭಾರತ ಪುರುಷರ ತಂಡ ಬಾಂಗ್ಲಾದೇಶ ವಿರುದ್ಧ 55-18, ಮಹಿಳಾ ತಂಡ ದಕ್ಷಿಣ ಕೊರಿಯಾ ವಿರುದ್ಧ 56-23 ಅಂತರದಲ್ಲಿ ಜಯ ಸಾಧಿಸಿತು.

ಇದನ್ನೂ ಓದಿ : Asian Games 2023: ಸೆಮಿಯಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟ ಪ್ರೀತಿ ಪವಾರ್

ಮಹಿಳಾ ಹಾಕಿ: ಹಾಂಕಾಂಗ್ ವಿರುದ್ಧ ಭಾರತಕ್ಕೆ 13-0 ಅಂತರದ ಗೆಲುವು

ಆರ್ಚರಿ (ಕಾಂಪೌಂಡ್): ಓಜಾಸ್ ಪ್ರವೀಣ್ ಡಿಯೋಟಾಲೆ ಮತ್ತು ಅಭಿಷೇಕ್ ಅಖಿಲ ಭಾರತ ಅಂತಿಮ ವೈಯಕ್ತಿಕ ಪುರುಷರ ಸ್ಪರ್ಧೆಯನ್ನು (ಅಕ್ಟೋಬರ್ 7 ರಂದು ಫೈನಲ್) ಸ್ಥಾಪಿಸಿದರು; ಮಹಿಳಾ ಫೈನಲ್​ನಲ್ಲಿ ಜ್ಯೋತಿ ಸುರೇಖಾ ವೆನ್ನಮ್, ಕಂಚಿನ ಪದಕಕ್ಕಾಗಿ ಅದಿತಿ ಸೆಣಸಲಿದ್ದಾರೆ (ಇಬ್ಬರೂ ಅಕ್ಟೋಬರ್ 7 ರಂದು)

ಆರ್ಚರಿ (ರಿಕರ್ವ್): ಅತನು ದಾಸ್ ಮತ್ತು ಧೀರಜ್ ಬೊಮ್ಮದೇವರ ಕ್ವಾರ್ಟರ್ ಫೈನಲ್​ನಲ್ಲಿ ನಿರ್ಗಮನ.

ಬ್ಯಾಡ್ಮಿಂಟನ್: ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್, ಕಿಡಂಬಿ ಶ್ರೀಕಾಂತ್ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್​ನಲ್ಲಿ 16ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಹಿಳೆಯರ 800 ಮೀಟರ್ ಓಟ: ಫೈನಲ್​ಗೆ ಅರ್ಹತೆ ಪಡೆದ ಕುಮಾರಿ ಚಂದಾ ಮತ್ತು ಹರ್ಮಿಲನ್ ಬೈನ್ಸ್

ಪುರುಷರ 4*400 ಮೀಟರ್: ಫೈನಲ್ಸ್​​ ಅರ್ಹತೆ ಪಡೆದ ಭಾರತ

ಸ್ಕ್ವಾಷ್: ಪುರುಷರ ಸಿಂಗಲ್ಸ್​ನಲ್ಲಿ ಸೌರವ್ ಘೋಷಾಲ್, ಮಿಶ್ರ ಡಬಲ್ಸ್​ನಲ್ಲಿ ಅಭಯ್-ಅನಾಹತ್ ಮತ್ತು ದೀಪಿಕಾ-ಹರಿಂದರ್ಪಾಲ್ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

Continue Reading

ಕ್ರಿಕೆಟ್

ICC World Cup 2023 : ಭಾರತ- ನೆದರ್ಲ್ಯಾಂಡ್ಸ್​ ​​​ ಅಭ್ಯಾಸ ಪಂದ್ಯವೂ ರದ್ದು

ಎರಡೂ ಅಭ್ಯಾಸ ಪಂದ್ಯಗಳು ಮಳೆಯಿಂದ ರದ್ದಾಗಿರುವ ಕಾರಣ ವಿಶ್ವ ಕಪ್​ನಲ್ಲಿ (ICC World Cup 2023) ಭಾರತ ತಂಡ ನೇರವಾಗಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

VISTARANEWS.COM


on

indvsned practice match
Koo

ತಿರುವನಂತಪುರ : ನೆದರ್ಲ್ಯಾಂಡ್ಸ್ ವಿರುದ್ಧದ ಭಾರತ ತಂಡದ ವಿಶ್ವ ಕಪ್​ (ICC World Cup 2023) ಅಭ್ಯಾಸ ಪಂದ್ಯವೂ ರದ್ದಾಗಿದೆ. ಗುವಾಹಟಿಯಲ್ಲಿ ನಿಗದಿಯಾಗಿದ್ದ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯವೂ ಮಳೆಯ ಕಾರಣಕ್ಕೆ ರದ್ದಾಗಿತ್ತು. ಆ ಪಂದ್ಯ ಗುವಾಹಟಿಯಲ್ಲಿ ಆಯೋಜನೆಗೊಂಡಿತ್ತು. ಹೀಗಾಗಿ ಯಾವುದೇ ಅಭ್ಯಾಸ ಪಂದ್ಯಗಳು ಇಲ್ಲದೆ ಭಾರತ ತಂಡ ನೇರವಾಗಿ ವಿಶ್ವ ಕಪ್​ ಆಡಲಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ತನ್ನ ವಿಶ್ವ ಕಪ್ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 8ರಂದು ಚೆನ್ನೈನ ಚೆಪಾಕ್​ ಸ್ಟೇಡಿಯಮ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಆಯೋಜನೆಗೊಂಡಿದೆ.

ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿರುವ ವಿಶ್ವಕಪ್ 2023 ಕ್ಕೆ ಮುಂಚಿತವಾಗಿ ಭಾರತ ಮತ್ತು ನೆದರ್ಲ್ಯಾಂಡ್ಸ್ ಇಂದು ತಮ್ಮ ಅಂತಿಮ ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗಬೇಕಾಗಿತ್ತು.. ಇಂಗ್ಲೆಂಡ್ ವಿರುದ್ಧದ ಭಾರತದ ಹಿಂದಿನ ಅಭ್ಯಾಸ ಪಂದ್ಯಗಳು ಒಂದು ಎಸೆತವೂ ನಡೆಯದೇ ರದ್ದಾಗಿದ್ದವು. ಮತ್ತೊಂದೆಡೆ, ಆಸ್ಟ್ರೇಲಿಯಾ ವಿರುದ್ಧದ ನೆದರ್ಲ್ಯಾಂಡ್ಸ್ ಪಂದ್ಯವು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿತ್ತು. ಆ ಪಂದ್ಯದಲ್ಲಿ ನೆದರ್ಲ್ಯಾಂಡ್​ ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ತಂಡವನ್ನು 23 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್​ಗಳಿಗೆ ನಿಯಂತ್ರಿಸಿತ್ತು,

ಇದೀಗ ನೆದಲ್ಯಾಂಡ್ಸ್ ತಂಡದ ಮತ್ತೊಂದು ಪಂದ್ಯವೂ ಫಲಿತಾಂಶವೇ ಇಲ್ಲದೆ ರದ್ದಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕನಿಷ್ಠ ಬೌಲಿಂಗ್ ಮಾಡುವ ಅವಕಾಶವಾದರೂ ಆ ತಂಡಕ್ಕೆ ಸಿಕ್ಕಿತ್ತು. ಆದರೆ, ಭಾರತ ವಿರುದ್ಧ ಒಂದೇ ಒಂದು ಎಸೆತ ಮಾಡಲು ಅವಕಾಶ ಸಿಗಲಿಲ್ಲ.

ಪ್ರಯಾಣದ ಸುಸ್ತು

ಸ್ಥಳೀಯ ಅನುಕೂಲಗಳನ್ನು ಬಳಸಿಕೊಂಡು ಭಾರತ ತಂಡ ವಿಶ್ವ ಕಪ್ ಗೆಲ್ಲುತ್ತದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಅದಕ್ಕೆ ಪೂರವಕಾಗಿ ಭಾರತ ತಂಡವೂ ಅತ್ಯಂತ ಉಮೇದಿನಲ್ಲಿದೆ. ಹೀಗಾಗಿ ವಿಶ್ವ ಕಪ್​ಗೆ ಮೊದಲು ಅಭ್ಯಾಸ ಪಂದ್ಯದಲ್ಲಿ ಆಡುವುದು ಈ ತಂಡಕ್ಕೆ ಅನಿವಾರ್ಯವಾಗಿತ್ತು. ಆದರೆ, ತಂಡಕ್ಕೆ ಎರಡೂ ಅಭ್ಯಾಸ ಪಂದ್ಯಗಳು ದೊರಕಿಲ್ಲ.

ಭಾರತ ತಂಡದ ಪಂದ್ಯಗಳು ಭಾರತದ 10 ಪ್ರದೇಶಗಳಲ್ಲಿ ನಡೆಯಲಿದೆ. ಹೀಗಾಗಿ ತಂಡವು ಒಂದೂವರೆ ತಿಂಗಳ ಅವಧಿಯಲ್ಲಿ ಸುಮಾರು ಸಾವಿರಾರು ಕಿಲೋ ಮೀಟರ್ ಪ್ರಯಾಣ ಮಾಡಬೇಕಾಗಿದೆ. ಹೀಗಾಗಿ ಅಭ್ಯಾಸ ಪಂದ್ಯದ ಪ್ರಯಾಣ ತಂಡಕ್ಕೆ ಹೊರೆಯೆನಿಸಬಹುದು. ಮೂರು ದಿನಗಳ ಹಿಂದೆ 15 ಆಟಗಾರರು ನೇರವಾಗಿ ಗುವಾಹಟಿಗೆ ಹೋಗಿತ್ತು. ಆದರೆ ಆ ಪ್ರಯಾಣದಿಂದ ತಂಡಕ್ಕೆ ಏನೂ ಲಾಭವಾಗಿರಲಿಲ್ಲ. ಮಳೆಯಿಂದಾಗಿ ಆಟ ರದ್ದಾಗಿತ್ತು. ಅಲ್ಲಿಂದ 2604 ಕಿಲೋ ಮೀಟರ್ ಪ್ರಯಾಣಿಸಿ ತಿರುವನಂತಪುರಕ್ಕೆ ಬಂದಿದ್ದ ಭಾರತ ತಂಡ ಇಲ್ಲಿಯೂ ನೆಟ್​ ಪ್ರಾಕ್ಟೀಸ್ ಮಾಡಿದ್ದಷ್ಟೇ ಬಂತು. ಪಂದ್ಯ ನಡೆಯದ ಕಾರಣ ಹೆಚ್ಚಿನ ಪ್ರಯೋಜನ ದೊರಕಿಲ್ಲ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ (ವಿಕೆ), ಸೂರ್ಯಕುಮಾರ್ ಯಾದವ್.

ನೆದರ್ಲ್ಯಾಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ಸಿ & ವಿಕೆ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡ್, ವಿಕ್ರಮ್ಜಿತ್ ಸಿಂಗ್, ತೇಜಾ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಆಕರ್ಮ್ಯಾನ್, ರೋಲೊಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬಾರೆಸಿ, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸಿಬ್ರಾಂಡ್ ಎಂಗೆಲ್ಬ್ರೆಕ್ಟ್.

Continue Reading

ಕ್ರಿಕೆಟ್

ICC World Cup 2023: ವಿಶ್ವಕಪ್‌ ಫೈಟ್‌ಗೆ ಪಾಕ್‌ ಸಜ್ಜು; ತಂಡದ ಬಲ-ದೌರ್ಬಲ್ಯಗಳೇನು? ಇಲ್ಲಿದೆ ವಿವರಣೆ

ICC World Cup 2023: ಬಾಬರ್‌ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಭಾರತಕ್ಕೆ ಬಂದಿಳಿದಿದ್ದು, ಭರ್ಜರಿ ಸ್ವಾಗತ ದೊರೆತಿದೆ. ವಿಶ್ವಕಪ್‌ಗೆ ಪಾಕ್‌ ತಂಡ ಹೇಗೆ ಸಿದ್ಧವಾಗಿದೆ? ತಂಡದ ಪ್ಲಸ್‌ ಹಾಗೂ ಮೈನಸ್‌ ಏನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

VISTARANEWS.COM


on

Edited by

Pakistan Cricket Team
Koo

ಬೆಂಗಳೂರು: 2019ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪುವಲ್ಲಿಯೂ ವಿಫಲ. 2021 ಹಾಗೂ 2022ರಲ್ಲಿ ನಡೆದ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಹಿನ್ನಡೆ. 2022ರ ಏಷ್ಯಾಕಪ್‌ ಫೈನಲ್‌ನಲ್ಲಿ ಸೋಲು. 2023ರ ಏಷ್ಯಾಕಪ್‌ನಲ್ಲೂ ಫೈನಲ್‌ ತಲುಪುವಲ್ಲಿ ವಿಫಲ. ಅತ್ಯುತ್ತಮ ತಂಡವನ್ನೇ ಹೊಂದಿದ್ದರೂ ಪಾಕಿಸ್ತಾನ ಕ್ರಿಕೆಟ್‌ ತಂಡವು ಹೀಗೆ ಸಾಲು ಸಾಲು ವಿಶ್ವ ಕ್ರಿಕೆಟ್‌ ಟೂರ್ನಿಗಳಲ್ಲಿ ಸೋಲನುಭವಿಸಿದೆ. ಆದರೆ, ಈ ಸೋಲನ್ನು ಮರೆತು, ಗೆಲುವಿನ ಸಂಭ್ರಮ ಆಚರಿಸುವ ಮನೋಭಾವದೊಂದಿಗೆ ಪಾಕ್‌ ಕ್ರಿಕೆಟ್‌ ತಂಡವು ಭಾರತಕ್ಕೆ ಆಗಮಿಸಿದೆ. ಹಾಗಾದರೆ, 2023ರ ವಿಶ್ವಕಪ್‌ಗೆ ಪಾಕ್‌ ಕ್ರಿಕೆಟ್‌ ತಂಡ ಹೇಗೆ ಸಿದ್ಧವಾಗಿದೆ? ಅದರ ಬಲಾಬಲವೇನು ಎಂಬುದರ ಇಣುಕು ನೋಟ ಇಲ್ಲಿದೆ.

ಪಾಕಿಸ್ತಾನದ 15 ಸದಸ್ಯರ ತಂಡ

ಬಾಬರ್‌ ಅಜಂ (ನಾಯಕ), ಶದಾಬ್‌ ಖಾನ್‌ (ಉಪ ನಾಯಕ), ಫಖರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಅಬ್ದುಲ್ಲಾ ಶಫೀಕ್‌, ಮೊಹಮ್ಮದ್‌ ರಿಜ್ವಾನ್‌, ಇಫ್ತಿಕಾರ್‌ ಅಹ್ಮದ್‌, ಅಘಾ ಸಲ್ಮಾನ್‌, ಸೌದ್‌ ಶಕೀಲ್‌, ಮೊಹಮ್ಮದ್‌ ನವಾಜ್‌, ಶಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌, ಹಸನ್‌ ಅಲಿ, ಉಸಾಮ ಮಿರ್‌, ಮೊಹಮ್ಮದ್‌ ವಸೀಂ.

ಬಾಬರ್‌ ಅಜಂ ಬಳಗದ ಸಾಮರ್ಥ್ಯವೇನು?

 1. ಬಲಿಷ್ಠ ಬ್ಯಾಟಿಂಗ್‌ ಲೈನ್‌ಅಪ್‌ ಹೊಂದಿರುವುದು ಪಾಕ್‌ ತಂಡದ ಸಾಮರ್ಥ್ಯ. ಬಾಬರ್‌ ಅಜಂ, ಫಖರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಮೊಹಮ್ಮದ್‌ ರಿಜ್ವಾನ್‌, ಇಫ್ತಿಕಾರ್‌ ಅಹ್ಮದ್‌ ಅವರು ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇವರು ಯಾವುದೇ ಪಂದ್ಯದ ಗತಿ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.
 2. ಪಾಕಿಸ್ತಾನದ ವೇಗದ ಬೌಲಿಂಗ್‌ ಅಟ್ಯಾಕ್‌ಗೆ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳೇ ಒಂದು ಕ್ಷಣ ಯೋಚಿಸುತ್ತಾರೆ. ಶಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌, ಮೊಹಮ್ಮದ್‌ ವಸೀಂ ಪ್ರಮುಖ ಪೇಸರ್‌ಗಳಾಗಿದ್ದಾರೆ.
 3. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಜತೆಗೆ ಫೀಲ್ಡಿಂಗ್‌ನಲ್ಲೂ ಪಾಕಿಸ್ತಾನ ತಂಡವು ಬಲಿಷ್ಠವಾಗಿದೆ. ಜಗತ್ತಿನಲ್ಲೇ ಉತ್ತಮ ಫೀಲ್ಡರ್‌ಗಳಿರುವ ರಾಷ್ಟ್ರದಲ್ಲಿ ಪಾಕ್‌ 2ನೇ ಸ್ಥಾನದಲ್ಲಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ, ಪ್ರತಿ ಪಂದ್ಯದಲ್ಲಿ ಪಾಕ್‌ ತಂಡವು 20-30 ರನ್‌ ಉಳಿಸುವುದರಲ್ಲಿ ಎರಡು ಮಾತಿಲ್ಲ.
 4. ಬಾಬರ್‌ ಅಜಂ ಉತ್ತಮ ನಾಯಕತ್ವ ಹಾಗೂ ಅವರ ಅತ್ಯದ್ಭುತ ಬ್ಯಾಟಿಂಗ್‌ ಕೂಡ ಪಾಕ್‌ಗೆ ಸಕಾರಾತ್ಮಕವಾಗಿದೆ. ಮಹತ್ವದ ಟೂರ್ನಿಗಳಲ್ಲಿ ಇದು ಸಾಬೀತಾಗಿದೆ.

ಪಾಕ್‌ ತಂಡದ ದೌರ್ಬಲ್ಯಗಳೇನು?

 1. ಸ್ಪಿನ್‌ ವಿಭಾಗವೇ ಪಾಕ್‌ ಕ್ರಿಕೆಟ್‌ ತಂಡದ ದೊಡ್ಡ ತಲೆನೋವಾಗಿದೆ. ಉಪ ನಾಯಕ ಶದಾಬ್‌ ಖಾನ್‌ ಅವರು ಅಲ್‌ರೌಂಡರ್‌ ಆಗದ್ದರೂ ಏಷ್ಯಾ ಕಪ್‌ ಟೂರ್ನಿಯಲ್ಲ ಅವರ ಆಟ ನಡೆದಿರಲಿಲ್ಲ. ಸ್ಪಿನ್ನರ್‌ಗಳಿಗೆ ಭಾರತದ ಪಿಚ್‌ಗಳು ಹೇಳಿ ಮಾಡಿಸಿದಂತಿರುವ ಕಾರಣ ಸ್ಪಿನ್‌ ವಿಭಾಗವು ಪಾಕ್‌ಗೆ ತಲೆನೋವಾಗಿದೆ.
 2. ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದ ವೇಳೆ ಗಾಯಗೊಂಡಿರುವ ನಸೀಮ್‌ ಶಾ ಅನುಪಸ್ಥಿತಿಯೂ ಪಾಕ್‌ಗೆ ಕಾಡಲಿದೆ. ಇವರ ಜಾಗಕ್ಕೆ ಅಷ್ಟೇನೂ ಫಾರ್ಮ್‌ನಲ್ಲಿರುವ ಹಸನ್‌ ಅಲಿಗೆ ಪಾಕ್‌ ಮಣೆ ಹಾಕಿದೆ. ಆದರೂ, ವೇಗಿ ನಸೀಮ್‌ ಶಾ ಅಲಭ್ಯತೆಯು ಪಾಕಿಸ್ತಾನಕ್ಕೆ ಕಾಡಲಿದೆ.
 3. ಇತ್ತೀಚಿನ ಸರಣಿಗಳಲ್ಲಿ ಮೊಹಮ್ಮದ್‌ ರಿಜ್ವಾನ್‌ ಹಾಗೂ ಸಲ್ಮಾನ್‌ ಅಲಿ ಅಘಾ ಅವರಿಂದ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ಕಾಣದಿರುವುದು ಬಾಬರ್‌ ಅಜಂ ಅವರಿಗೆ ನುಂಗಲಾರದ ತುತ್ತಾಗಿದೆ. ಪ್ರಮುಖ ಪಂದ್ಯಗಳಲ್ಲಿಯೇ ಇವರು ಕೈಕೊಡುವುದು ಕೂಡ ಹೆಚ್ಚು ರೂಢಿಯಾಗಿದೆ.
 4. ಅಗ್ರ ಕ್ರಮಾಂಕದ ಸದೃಢ ಬ್ಯಾಟಿಂಗ್‌ ಪಾಕಿಸ್ತಾನದ ಬಲವಾದರೆ, ಇದೇ ದೌರ್ಬಲ್ಯವೂ ಆಗಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಔಟಾದರೆ ಸಾಕು, ಪಾಕ್‌ ಇನಿಂಗ್ಸ್‌ ಮುಗಿದಂತೆಯೇ ಎಂಬಂತಾಗಿದೆ. ಅದರಲ್ಲೂ, ದೀರ್ಘ ಸಮಯದ ನಂತರ ಭಾರತದ ಪಿಚ್‌ಗಳಲ್ಲಿ ಆಡುತ್ತಿದ್ದು, ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಇದನ್ನೂ ಓದಿ: ICC World Cup 2023 : ವಿಶ್ವ ಕಪ್​ಗೆ ಆಡುವ ಭಾರತ ತಂಡದ ಬಲಾಬಲವೇನು? ಗೆಲುವಿನ ಅವಕಾಶ ಎಷ್ಟಿದೆ?

Shaheen Afridi

ಪಾಕ್‌ಗೆ ಇರುವ ಒಳ್ಳೆಯ ಅವಕಾಶಗಳೇನು?

ಪಾಕಿಸ್ತಾನ ತಂಡವು ಕಳೆದ 12 ತಿಂಗಳಿಂದ ಸತತವಾಗಿ ಉತ್ತಮ ಪ್ರದರ್ಶನ ತೋರಿದೆ. ವಿಶ್ವ ಏಕದಿನ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಪಾಕ್‌ ತಂಡವು ಏಕದಿನ ಕ್ರಿಕೆಟ್‌ನ ಅತ್ಯುತ್ತಮ ತಂಡ ಎನಿಸಿದೆ. ಬಾಬರ್‌ ಅಜಂ ನಾಯಕತ್ವವೂ ಉತ್ತಮವಾಗಿದೆ. ಕಳೆದ 27 ವರ್ಷಗಳಿಂದ ಪಾಕಿಸ್ತಾನ ಏಕದಿನ ವಿಶ್ವಕಪ್‌ ಗೆದ್ದಿಲ್ಲ. ಬಲಿಷ್ಠ ತಂಡ, ಉತ್ತಮ ನಾಯಕತ್ವ, ಏಷ್ಯಾದಲ್ಲಿಯೇ ಪಂದ್ಯ ಆಯೋಜನೆಗೊಂಡಿರುವ ಕಾರಣ ವಿಶ್ವಕಪ್‌ ಗೆಲ್ಲಲು ಪಾಕ್‌ಗೆ ಒಳ್ಳೆಯ ಅವಕಾಶಗಳಿವೆ.

babar azam

ಹೀಗಿದೆ ಪಾಕ್‌ ತಂಡದ ವೇಳಾಪಟ್ಟಿ

ಅಕ್ಟೋಬರ್‌ 5ರಿಂದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಪಾಕಿಸ್ತಾನವು ಮೊದಲ ಪಂದ್ಯವನ್ನು ಅಕ್ಟೋಬರ್‌ 6ರಂದು ನೆದರ್ಲೆಂಡ್ಸ್‌ ವಿರುದ್ಧ ಆಡಲಿದೆ. ಅ.10ರಂದು ಶ್ರೀಲಂಕಾ, ಅ.14ರಂದು ಭಾರತ, ಅ.20 ಆಸ್ಟ್ರೇಲಿಯಾ, ಅ.23 ಅಫಘಾನಿಸ್ತಾನ, ಅ.26 ದಕ್ಷಿಣ ಆಫ್ರಿಕಾ, ಅ.31 ಬಾಂಗ್ಲಾದೇಶ, ನವೆಂಬರ್‌ 4 ನ್ಯೂಜಿಲ್ಯಾಂಡ್‌ ಹಾಗೂ ನವೆಂಬರ್‌ 11ರಂದು ಇಂಗ್ಲೆಂಡ್‌ ವಿರುದ್ಧ ಆಡಲಿದೆ. ಅದರಲ್ಲೂ, ಅಹ್ಮದಾಬಾದ್‌ನಲ್ಲಿ ನಡೆಯುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ.

ವಿಶ್ವಕಪ್‌ ಕುರಿತ ಇನ್ನಷ್ಟು ಆಸಕ್ತಿದಾಯಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Continue Reading

ಕ್ರಿಕೆಟ್

ಫೈನಲ್​ ಪ್ರವೇಶಿಸಿ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಲವ್ಲಿನಾ ಬೋರ್ಗಹೈನ್‌

ಬಾಕ್ಸರ್‌ ಲವ್ಲಿನಾ ಬೋರ್ಗಹೈನ್‌(Lovlina Borgohain) ಇಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದಲ್ಲಿ ಫೈನಲ್​ ಪ್ರವೇಶಿಸುವ ಮೂಲಕ ಚಿನ್ನದ ಪದಕ ಬರವಸೆ ಮೂಡಿಸಿದ್ದಾರೆ.

VISTARANEWS.COM


on

Edited by

Lovlina Borgohain
Koo

ಹ್ಯಾಂಗ್‌ಝೌ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್‌ ಲವ್ಲಿನಾ ಬೋರ್ಗಹೈನ್‌(Lovlina Borgohain) ಇಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದಲ್ಲಿ ಫೈನಲ್​ ಪ್ರವೇಶಿಸುವ ಮೂಲಕ ಚಿನ್ನದ ಪದಕ ಬರವಸೆ ಮೂಡಿಸಿದ್ದಾರೆ. ಜತೆಗೆ ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ ಅರ್ಹತೆಯನ್ನು ಪಡೆದಿದ್ದಾರೆ.

ಮಂಗಳವಾರ ಹ್ಯಾಂಗ್‌ಝೌನಲ್ಲಿ ನಡೆದ 75 ಕೆಜಿ ವಿಭಾಗದ ಮಹಿಳಾ ಬಾಕ್ಸಿಂಗ್​ ಸೆಮಿಫೈನಲ್‌ನಲ್ಲಿ ಲವ್ಲಿನಾ ಅವರು ಥಾಯ್ಲೆಂಡ್‌ನ ಬೈಸನ್ ಮನೀಕಾನ್ ವಿರುದ್ಧ ಕಮಾಂಡಿಂಗ್ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದರು. ಲವ್ಲಿನಾ 5-0 ಅಂಕಗಳಿಂದ ಗೆದ್ದು ಮರೆದಾಡಿದರು. ಈ ಮೂಲಕ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಚಿತಪಡಿಸಿದರು. ಭಾರತ ಸದ್ಯ 13 ಚಿನ್ನ, 24 ಬೆಳ್ಳಿ ಮತ್ತು 25 ಕಂಚಿನ ಪದಕ ಸೇರಿದಂತೆ ಒಟ್ಟು 62 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಇದೇ ವರ್ಷ ಮಾರ್ಚ್​ನಲ್ಲಿ ನಡೆದಿದ್ದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Women’s Boxing Championship) ಲವ್ಲಿನಾ ​ ಅವರು ಚಿನ್ನದ ಪದಕ ಜಯಿಸಿದ್ದರು. ನೂತನ ತೂಕ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. 69 ಕೆಜಿ ವೆಲ್ಟರ್‌ವೆಟ್‌ನಿಂದ 75 ಕೆಜಿ ಮಿಡ್ಲ್ ವೇಟ್‌ಗೆ ಸ್ಪರ್ಧೆಯನ್ನು ಬದಲಿಸಿಕೊಂಡು ಸ್ಪರ್ಧಿಸಿದ್ದರು.​ ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಲವ್ಲಿನಾ 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.

ಕಂಚಿಗೆ ಪಂಚ್​ ನೀಡಿದ ಪ್ರೀತಿ

ಇಂದು(ಮಂಗಳವಾರ) ನಡೆದ 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮಹಿಳಾ ಬಾಕ್ಸರ್ ಪ್ರೀತಿ ಪವಾರ್(Preeti Pawar) ಕಂಚಿನ ಪದಕ್ಕೆ ಪಂಚ್​ ನೀಡಿದ್ದಾರೆ. ಪ್ರೀತಿ ಸೆಮಿಫೈನಲ್​ನಲ್ಲಿ ಸೋಲು ಕಂಡು ಕಂಚಿಗೆ ತೃಪ್ತಿಪಟ್ಟರು. ಚೀನಾದ ಯುವಾನ್ ಚಾಂಗ್ ವಿರುದ್ಧ ಮೊದಲ ಸುತ್ತಿನಲ್ಲಿ 4-1 ಅಂತರದಿಂದ ಸೋಲು ಕಂಡರು. ಆದರೆ ದ್ವಿತೀಯ ಸುತ್ತಿನಲ್ಲಿ ತಮ್ಮ ಪವರ್​ ಪಂಚ್​ಗಳ ಮೂಲಕ ಗೆದ್ದು ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಆ ಬಳಿಕದ ಸುತ್ತಿನಲ್ಲಿ ಇದೇ ಲಯವನ್ನು ಮುಂದುವರಿಸಲು ಸಾಧ್ಯವಾಗದೆ ಅಂತಿಮವಾಗಿ ವಿರುದ್ಧ 5-0 ಅಂಕದಿಂದ ಸೋಲು ಕಂಡರು. 

ಇದನ್ನೂ ಓದಿ Asian Games 2023: ಸೆಮಿಯಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟ ಪ್ರೀತಿ ಪವಾರ್

ಪುರುಷರ ಕ್ಯಾನೋ ತಂಡಕ್ಕೆ ಕಂಚು

ಬೆಳಗ್ಗೆ ನಡೆದ ಪುರುಷರ ಕ್ಯಾನೋ ಡಬಲ್ 1000 ಮೀ ಫೈನಲ್‌ನಲ್ಲಿ ಭಾರತದ ಅರ್ಜುನ್ ಸಿಂಗ್(Arjun Singh) ಮತ್ತು ಸುನಿಲ್ ಸಿಂಗ್(Sunil Singh) ಅವರು ಕಂಚಿನ ಪದಕ ಗೆದ್ದಿದ್ದರು. ಭಾರತದ ಜೋಡಿಯು 3:53.329 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಏಷ್ಯನ್​ ಗೇಮ್ಸ್​ ಇತಿಹಾಸದಲ್ಲಿ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಇಲಿದ 2ನೇ ಪದಕವಾಗಿದೆ. ಇದಕ್ಕೂ ಮುನ್ನ 1994 ರಲ್ಲಿ ಹಿರೋಷಿಮಾದಲ್ಲಿ ನಡೆದಿದ್ದ ಕೂಟದಲ್ಲಿ ಭಾರತದ ಜಾನಿ ರೋಮೆಲ್ ಮತ್ತು ಸಿಜಿ ಕುಮಾರ್ ಸದಾನಂದನ್ ಕಂಚು ಗೆದ್ದಿದ್ದರು. ಉಜ್ಬೇಕಿಸ್ತಾನದ ಖೋಲ್ಮುರಾಡೋವ್ ಮತ್ತು ನುರಿಸ್ಲೋಮ್ ತುಖ್ತಾಸಿನ್ ಉಗ್ಲಿ (3:43.796 ಸೆಕೆಂಡು) ಚಿನ್ನ ಗೆದ್ದರೆ, ಕಜಕಿಸ್ತಾನದ ಟಿಮೊಫಿ ಯೆಮೆಲಿಯಾನೊವ್ ಮತ್ತು ಸೆರ್ಗೆ ಯೆಮೆಲಿಯಾನೊವ್ (3:49.991 ಸೆಕೆಂಡ್‌) ಬೆಳ್ಳಿ ಗೆದ್ದರು.

ನಿಖತ್‌ ಜರೀನ್‌ ವಿಫಲ

ಭಾರತದ ಬಾಕ್ಸಿಂಗ್‌ ತಾರೆ, 2 ಬಾರಿ ವಿಶ್ವ ಚಾಂಪಿಯನ್‌, 2022ರ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ನಿಖತ್‌ ಜರೀನ್‌ ಅವರು ಸೋವಮಾರ ನಡೆದಿದ್ದ 50 ಕೆ.ಜಿ. ವಿಭಾಗದ ಸೆಮಿಫೈನಲ್​ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟಿದ್ದರು. ಅವರ ಮೇಲೆ ಚಿನ್ನದ ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರು ನಿರಾಸೆ ಮೂಡಿಸಿದ್ದರು. ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ ಅರ್ಹತೆಯನ್ನು ಪಡೆದಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.

Continue Reading
Advertisement
Old Pension Scheme Madhu Bangarappa
ಕರ್ನಾಟಕ8 mins ago

Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ

No Rain Girl waiting For rain and holding Umbrella
ಉಡುಪಿ36 mins ago

karnataka weather forecast : ಮುಕ್ಕಾಲು ಜಿಲ್ಲೆಗೆ ಕೈಕೊಟ್ಟ ಮಳೆರಾಯ; ಮತ್ತೆ ಮುಂಗಾರು ದುರ್ಬಲ

Paris facing bed bugs and France government is trying to tackle crisis
ಪ್ರಮುಖ ಸುದ್ದಿ38 mins ago

Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ

Parul won gold medal in asian Games
ಕ್ರೀಡೆ39 mins ago

Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್​ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್​

Siddaramaiah felicitated at Shepherds India International Conference
ಕರ್ನಾಟಕ51 mins ago

Kuruba Conference: ಬೆಳಗಾವಿಯಲ್ಲಿ ಬೃಹತ್‌ ಕುರುಬ ಸಮಾವೇಶದ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನ

Shivamogga encounter Fake News
ಕರ್ನಾಟಕ57 mins ago

Shivamogga Violence : ಎನ್‌ಕೌಂಟರ್‌ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್‌ ಎಂದ ಎಸ್ಪಿ

boney kapoor
ಬಾಲಿವುಡ್1 hour ago

Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?

indvsned practice match
ಕ್ರಿಕೆಟ್1 hour ago

ICC World Cup 2023 : ಭಾರತ- ನೆದರ್ಲ್ಯಾಂಡ್ಸ್​ ​​​ ಅಭ್ಯಾಸ ಪಂದ್ಯವೂ ರದ್ದು

Bhagwant Mann
ದೇಶ1 hour ago

Punjab Debt: 47,107 ಕೋಟಿ ರೂ. ಸಾಲದ ಪೈಕಿ ಅರ್ಧದಷ್ಟು ಬಡ್ಡಿ ಪಾವತಿಗೆ ಬಳಕೆ ಎಂದ ಪಂಜಾಬ್ ಸಿಎಂ

Side Effects Of Bananas
ಆರೋಗ್ಯ1 hour ago

Side Effects Of Bananas: ಬಾಳೆಹಣ್ಣು ಹೆಚ್ಚು ತಿಂದರೆ ಏನಾಗುತ್ತದೆ?

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

The maintenance train finally lifted Metro services as usual
ಕರ್ನಾಟಕ3 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ4 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ14 hours ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ1 day ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ2 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಮನೆಯಲ್ಲೂ ಕಿರಿಕಿರಿ, ಆಫೀಸ್‌ನಲ್ಲೂ ಕಿರಿಕ್‌!

ಟ್ರೆಂಡಿಂಗ್‌