Yashasvi Jaiswal : ಧೋನಿ, ಸೆಹ್ವಾಗ್​ ಇರುವ ವಿಶೇಷ ಪಟ್ಟಿಗೆ ಸೇರ್ಪಡೆಗೊಂಡ ಯಶಸ್ವಿ ಜೈಸ್ವಾಲ್​ - Vistara News

ಕ್ರೀಡೆ

Yashasvi Jaiswal : ಧೋನಿ, ಸೆಹ್ವಾಗ್​ ಇರುವ ವಿಶೇಷ ಪಟ್ಟಿಗೆ ಸೇರ್ಪಡೆಗೊಂಡ ಯಶಸ್ವಿ ಜೈಸ್ವಾಲ್​

Yashasvi Jaiswal : ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಯಶಸ್ವಿ ಜೈಸ್ವಾಲ್ ಸಿಕ್ಸರ್ ಬಾರಿಸುವ ಮೂಲಕ ಶತಕದ ಗಡಿ ದಾಟಿದ್ದರು.

VISTARANEWS.COM


on

Yashasvi Jaiswal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಓವರ್​ಗಳು ಅನಿಯಮಿತವಾಗಿರುವ ಟೆಸ್ಟ್ ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟರ್​ಗಳು ರಕ್ಷಣಾತ್ಮಕ ವಿಧಾನವನ್ನು ಅಳವಡಿಸಿಕೊಳ್ಳುತ್ತಾರೆ. ಅಪಾಯಕಾರಿ ಶಾಟ್​​ಗಳನ್ನು ಹೊಡೆಯುವುದಿಲ್ಲ. ಸಿಕ್ಸರ್ ಹೊಡೆಯುವುದು ಕೂಡ ಅಪಾಯಕಾರಿ ನಡೆ. ಆದರೆ ಆಟಗಾರರು ತಮ್ಮ ಶತಕದ ಸಮೀಪ ಬರುತ್ತಿದ್ದಂತೆ ಎಚ್ಚರಿಕೆಯ ಆಟ ಪ್ರಾರಂಭಿಸುತ್ತಾರೆ. 90ರ ದಶಕದಲ್ಲಿ ಕ್ರಿಕೆಟ್ ಈ ರೀತಿಯೇ ಇತ್ತು. ಯಾಕೆಂದರೆ ಬ್ಯಾಟರ್​ ಶತಕದ ಗಡಿ ದಾಟಿದ ಬಳಿಕ ಬ್ಯಾಟ್​​ ಮೇಲಕ್ಕೆತ್ತುವ ಅವಕಾಶ ಕಳೆದುಕೊಳ್ಳಲು ಬಯಸುವುದಿಲ್ಲ. ಕೆಲವು ಆಟಗಾರರು ಈಗಲೂ ಅದನ್ನೇ ಪಾಲಿಸುತ್ತಾರೆ. ಆದರೆ , ಭಾರತ ತಂಡದ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್ (Yashasvi Jaiswal) ಇದಕ್ಕಿಂತ ಸ್ವಲ್ಪ ಭಿನ್ನ.

ಕೆಲವು ಭಾರತೀಯ ಕ್ರಿಕೆಟಿಗರು ನಿಧಾನವಾಗಿ ಶತಕ ಬಾರಿಸುವ ನಿಯಮವನ್ನು ಉಲ್ಲಂಘಿಸುತ್ತಾರೆ. ಅವರಲ್ಲಿ ಜೈಸ್ವಾಲ್ ಕೂಡ ಒಬ್ಬರು. ಅವರು ನಿರ್ಭೀತ ಮತ್ತು ಧೈರ್ಯಶಾಲಿಯಾಗಿ ಬ್ಯಾಟ್​ ಬೀಸುತ್ತಾರೆ. ಟೆಸ್ಟ್ ಶತಕವನ್ನು ಅತಿ ವೇಗದಲ್ಲಿ ತಲುಪುವ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಬೌಂಡರಿ ಗೆರೆಗಳ ಮೇಲೆ ಚೆಂಡನ್ನು ಹಾರಿಸುವ ಮೂಲಕ ಮೂರಂಕಿ ಮೊತ್ತವನ್ನು ತಲುಪಿದ್ದಾರೆ. ಈ ಆಟಗಾರ ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ನಿರ್ಲಕ್ಷಿಸಿದ್ದಾರೆ. ಅವರಿಗೆ ಶತಕದ ಸಂಭ್ರಮದ ಜತೆಗೆ ಸಿಕ್ಸರ್ ಬಾರಿಸಿ ಉಲ್ಲಾಸವೂ ಸಿಕ್ಕಿದೆ.

ಅಂತೆಯೇ ಅದ್ಭುತ ಸಿಕ್ಸರ್​ ಮೂಲಕ ತಮ್ಮ ಟೆಸ್ಟ್ ಶತಕಗಳನ್ನು ತಲುಪಿದ ನಿರ್ಭೀತ ಕ್ರಿಕೆಟಿಗರ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ಅವರಲ್ಲಿ ಒಬ್ಬರು ಯಶಸ್ವಿ ಜೈಸ್ವಾಲ್​. ಪಟ್ಟಿಯಲ್ಲಿರುವ ಆಟಗಾರರು ಎಷ್ಟು ಬಾರಿ ಸಿಕ್ಸರ್ ಬಾರಿಸುವ ಮೂಲಕ ಶತಕ ಬಾರಿಸಿದ್ದಾರೆ ಎಂಬುದಾಗಿದೆ.

  • ಪಾಲಿ ಉಮ್ರಿಗರ್- 1 ಬಾರಿ
  • ಕಪಿಲ್ ದೇವ್- 1 ಬಾರಿ
  • ಸಚಿನ್ ತೆಂಡೂಲ್ಕರ್- 6 ಬಾರಿ
  • ಮೊಹಮ್ಮದ್ ಅಜರುದ್ದೀನ್- 1 ಬಾರಿ
  • ರಾಹುಲ್ ದ್ರಾವಿಡ್- 1 ಬಾರಿ
  • ವೀರೇಂದ್ರ ಸೆಹ್ವಾಗ್ -1 ಬಾರಿ
  • ಇರ್ಫಾನ್ ಪಠಾಣ್ – 1 ಬಾರಿ
  • ಗೌತಮ್ ಗಂಭೀರ್ -2 ಬಾರಿ
  • ಎಂಎಸ್ ಧೋನಿ- 1 ಬಾರಿ
  • ಹರ್ಭಜನ್ ಸಿಂಗ್ – 1 ಬಾರಿ
  • ಕೆಎಲ್ ರಾಹುಲ್- 2 ಬಾರಿ
  • ರೋಹಿತ್ ಶರ್ಮಾ- 3 ಬಾರಿ
  • ರವಿಚಂದ್ರನ್ ಅಶ್ವಿನ್ – 1 ಬಾರಿ
  • ಚೇತೇಶ್ವರ ಪೂಜಾರ- 1 ಬಾರಿ
  • ರಿಷಭ್ ಪಂತ್- 2 ಬಾರಿ
  • ಯಶಸ್ವಿ ಜೈಸ್ವಾಲ್ – 1 ಬಾರಿ

ಇದನ್ನೂ ಓದಿ : Rohan Bopanna: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ರೋಹನ್ ಬೋಪಣ್ಣ

ವಿಶ್ವ ಕ್ರಿಕೆಟ್​ನಲ್ಲಿ ಉದಯೋನ್ಮುಖ ತಾರೆಯಾಗಿರುವ ಯುವ ಎಡಗೈ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ವಿರುದ್ಧ ಗಮನಾರ್ಹ ಶತಕದೊಂದಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. 151 ಎಸೆತಗಳಲ್ಲಿ ಶತಕ ಬಾರಿಸಿದ ಜೈಸ್ವಾಲ್ ಅವರ ಆಕ್ರಮಣಕಾರಿ ಉದ್ದೇಶ ಆರಂಭದಿಂದಲೂ ಸ್ಪಷ್ಟವಾಗಿತ್ತು. ಅವರು ಆತ್ಮವಿಶ್ವಾಸದಿಂದ ವಿಕೆಟ್​ಗಳ ನಡುವೆ ಓಡಾಡಿದ್ದಾರೆ. ಟಾಮ್ ಹಾರ್ಟ್ಲೆ ಅವರ ಎಸೆತಕ್ಕೆ ಸಿಕ್ಸರ್ ಅನ್ನು ಹೊಡೆದರು. ಇದು ಅವರು 6ನೇ ಟೆಸ್ಟ್ ಪಂದ್ಯದಲ್ಲಿ ಗಳಿಸಿದ ಎರಡನೇ ಶತಕವಾಗಿದೆ. ಸಚಿನ್ ತೆಂಡೂಲ್ಕರ್ ಆರು ಬಾರಿ ಸಿಕ್ಸರ್ ಬಾರಿಸುವ ಮೂಲಕ ಟೆಸ್ಟ್ ಶತಕ ಬಾರಿಸಿದ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಆರ್​ಸಿಬಿ

IPL 2024: ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರ್​ಸಿಬಿ 250ನೇ ಐಪಿಎಲ್​ ಪಂದ್ಯವನ್ನಾಡಿದ ದ್ವಿತೀಯ ತಂಡ ಎಂಬ ದಾಖಲೆ ಬರೆಯಲಿದೆ. ಮುಂಬೈ ಇಂಡಿಯನ್ಸ್​ ಮೊದಲ ತಂಡ

VISTARANEWS.COM


on

IPL 2024
Koo

ಹೈದರಾಬಾದ್​: ಇಂದು(ಗುರುವಾರ) ನಡೆಯುವ ಐಪಿಎಲ್(IPL 2024)​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ಮತ್ತು ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad ) ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯ ಆರ್​ಸಿಬಿಗೆ ಸ್ಮರಣೀಯವಾಗಿದೆ. ಇದು ಆರ್​ಸಿಗೆ(RCB) 250ನೇ ಐಪಿಎಲ್(RCB 250th IPL match)​ ಪಂದ್ಯವಾಗಿದೆ. ಈ ಸಾಧನೆ ಮಾಡಿದ ದ್ವಿತೀಯ ತಂಡ ಎಂಬ ಹೆಗ್ಗಳಿಕೆ ಆರ್​ಸಿಬಿ ಪಾತ್ರವಾಗಲಿದೆ.

“ಇಂದು ಆರ್​ಸಿಬಿಗೆ ಪ್ರಮುಖ ದಿನ. ನಮ್ಮ 250ನೇ ನೇ ಐಪಿಎಲ್​ ಪಂದ್ಯ! ಇದನ್ನು ಸ್ಮರಣೀಯವಾಗಿಸಲು ನಿಮ್ಮೆಲ್ಲರ ಹಾರೈಕೆಗಳು ಮತ್ತು ಬೆಂಬಲವನ್ನು ನಾವು ನಿರೀಕ್ಷಿಸುತ್ತಿದ್ದೇವೆ” ಎಂದು ಆರ್​ಸಿಬಿ ಫ್ರಾಂಚೈಸಿ ಇದುವರೆ ಆರ್​ಸಿಬಿ ತಂಡದ ಪರ ಆಡಿದ ಕೆಲ ಸ್ಟಾರ್​ ಆಟಗಾರರ ಫೋಟೊ ಕೊಲಾಜ್​ ಮಾಡಿ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್​ ಮಾತ್ರ 250 ಪಂದ್ಯಗಳನ್ನಾಡಿದ ಸಾಧನೆ ಮಾಡಿದೆ. ಅಲ್ಲದೆ ಅತ್ಯಧಿಕ ಐಪಿಎಲ್​ ಪಂದ್ಯವನ್ನಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ಕೂಡ ಹೊಂದಿದೆ. ಮುಂಬೈ ಇದುವರೆಗೆ 255* ಐಪಿಎಲ್​ ಪಂದ್ಯಗಳನ್ನಾಡಿದೆ. ಆರ್​ಸಿಬಿ 250 ಪಂದ್ಯಗಳನ್ನಾಡಿದ 2ನೇ ತಂಡ ಎನಿಸಿಕೊಳ್ಳಲಿದೆ. ದುರಾದೃಷ್ಟವೆಂದರೆ ಇಷ್ಟು ಪಂದ್ಯಗಳನ್ನಾಡಿದರೂ ಕೂಡ ತಂಡ ಒಮ್ಮೆಯೂ ಕಪ್​ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಪ್ರತಿ ಐಪಿಎಲ್‌(IPL 2024) ಆರಂಭದ ಸಂದರ್ಭದಲ್ಲಿಯೂ ಆರ್‌ಸಿಬಿ ಒಂದು ಕ್ರೇಜ್‌ ಹುಟ್ಟಿಸುತ್ತದೆ. ದುರಾದೃಷ್ಟವಶಾತ್‌ ಈ ಕ್ರೇಜ್‌ ಬಹುಕಾಲ ಉಳಿಯುವುದಿಲ್ಲ. ಈ ಬಾರಿಯೂ ಅದೇ ರಾಗ ಅದೇ ಹಾಡು. ಅದರಲ್ಲಿಯೂ ಈ ಬಾರಿ ಹೊಸ ಅಧ್ಯಾಯ ಎಂದು ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಆದರೆ ಇದೀಗ ಕ್ಷಮಿಸಿ ನಮ್ಮದು ಮುದಿದು ಹೋದ ಅಧ್ಯಾಯ ಎನ್ನುವ ಹಂತಕ್ಕೆ ತಲುಪಿದೆ.

ಇದನ್ನೂ ಓದಿ IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

ಅತಿ ಹೆಚ್ಚು ಐಪಿಎಲ್​ ಪಂದ್ಯವನ್ನಾಡಿದ ಟಾಪ್​ 5 ತಂಡಗಳು


ಮುಂಬೈ ಇಂಡಿಯನ್ಸ್​-255* ಪಂದ್ಯ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು-249* ಪಂದ್ಯ

ಡೆಲ್ಲಿ ಕ್ಯಾಪಿಟಲ್ಸ್​-247*ಪಂದ್ಯ

ಕೋಲ್ಕತ್ತಾ ನೈಟ್​ ರೈಡರ್ಸ್​-244 ಪಂದ್ಯ

ಪಂಜಾಬ್​ ಕಿಂಗ್ಸ್​-240* ಪಂದ್ಯ

ಆರ್​ಸಿಬಿ(RCB) ಈ ಆವೃತ್ತಿಯಲ್ಲಿ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 7 ಸೋಲು ಕಂಡು ಪ್ಲೇ ಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಆರ್​ಸಿಬಿ ಪಾಲಿಗೆ ಇಂದು ನಡೆಯವ ಪಂದ್ಯ ಕೇವಲ ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆದ್ದರೂ ಕೂಡ ಪ್ಲೇ ಆಫ್​ಗೇರಲು ಸಾಧ್ಯವಿಲ್ಲ. ಪವಾಡ ಸಂಭಿಸಿದರೆ ಮಾತ್ರ ಸಾಧ್ಯ.

ಸಂಭಾವ್ಯ ತಂಡಗಳು


ಆರ್​ಸಿಬಿ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್,ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಸಿರಾಜ್.

ಸನ್​ರೈಸರ್ಸ್​ ಹೈದರಾಬಾದ್​: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್​, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ , ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್.

Continue Reading

ಕ್ರೀಡೆ

IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

IPL 2024: ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿ ಕಂಡು ಬಂದ ಮೋಹಿತ್​ ಶರ್ಮ 4 ಓವರ್​ಗೆ ಬರೋಬ್ಬರಿ 73 ರನ್​ ಬಿಟ್ಟುಕೊಟ್ಟರು. ಈ ಮೂಲಕ ಐಪಿಎಲ್​ನ ಇದುವರೆಗಿನ ಇತಿಹಾಸದಲ್ಲೇ ಅತ್ಯಧಿಕ ರನ್​ ಬಿಟ್ಟುಕೊಟ್ಟ ಮೊದಲ ಬೌಲರ್​ ಎನ್ನುವ ಹಣೆಪಟ್ಟಿ ಕಟ್ಟಿಕೊಂಡರು.

VISTARANEWS.COM


on

IPL 2024
Koo

ನವದೆಹಲಿ: ಗುಜರಾತ್​ ಟೈಟಾನ್ಸ್​( ತಂಡದ ಮಧ್ಯಮ ಕ್ರಮಾಂಕದ ವೇಗಿ ಮೋಹಿತ್​ ಶರ್ಮ(Mohit Sharma) ಅವರು ಐಪಿಎಲ್​ನಲ್ಲಿ(IPL 2024) ಅತಿ ಹೆಚ್ಚು ರನ್​ ಬಿಟ್ಟುಕೊಟ್ಟ ಆಟಗಾರ ಎಂಬ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಈ ಮೂಲಕ ಬಾಸಿಲ್ ಥಾಂಪಿ ದಾಖಲೆಯನ್ನು ಮುರಿದಿದ್ದಾರೆ.

​ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿ ಕಂಡು ಬಂದ ಮೋಹಿತ್​ ಶರ್ಮ 4 ಓವರ್​ಗೆ ಬರೋಬ್ಬರಿ 73 ರನ್​ ಬಿಟ್ಟುಕೊಟ್ಟರು. ಈ ಮೂಲಕ ಐಪಿಎಲ್​ನ ಇದುವರೆಗಿನ ಇತಿಹಾಸದಲ್ಲೇ ಅತ್ಯಧಿಕ ರನ್​ ಬಿಟ್ಟುಕೊಟ್ಟ ಮೊದಲ ಬೌಲರ್​ ಎನ್ನುವ ಹಣೆಪಟ್ಟಿ ಕಟ್ಟಿಕೊಂಡರು. ಅಂತಿಮ ಓವರ್​ನಲ್ಲಿ ರಿಷಭ್​ ಪಂತ್​ ಅವರು 4 ಸಿಕ್ಸರ್​ ಮತ್ತು ಒಂದು ಬೌಂಡರಿ ಬಾರಿಸಿ ಒಟ್ಟು 31 ರನ್​ ಚಚ್ಚಿದರು.

ದುಬಾರಿ ರನ್​ ನೀಡಿದ ಆಟಗಾರರು


ಮೋಹಿತ್​ ಶರ್ಮ-73 ರನ್​. ಡೆಲ್ಲಿ ವಿರುದ್ಧ (2024)

ಬಾಸಿಲ್ ಥಾಂಪಿ-70 ರನ್​. ಆರ್​ಸಿಬಿ ವಿರುದ್ಧ (2018)

ಯಶ್​ ದಯಾಳ್​-69 ರನ್​. ಕೆಕೆಆರ್​ ವಿರುದ್ಧ (2023)

ರೀಸ್‌ ಟೋಪ್ಲೆ-68 ರನ್​. ಹೈದರಾಬಾದ್​ ವಿರುದ್ಧ (2024)

ಇದನ್ನೂ ಓದಿ IPL 2024 Points Table: ಡೆಲ್ಲಿ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

ಗುಜರಾತ್​ಗೆ 4 ರನ್​ ವಿರೋಚಿತ ಸೋಲು


ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು.

ಚೇಸಿಂಗ್​ ವೇಳೆ ಡೇವಿಡ್​ ಮಿಲ್ಲರ್​ ಅರ್ಧಶತಕ ಬಾರಿಸುವ ಮೂಲಕ ಒಂದು ಹಂತದಲ್ಲಿ ಗುಜರಾತ್​ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ದೊಡ್ಡ ಹೊಡೆತಗಳಿಗೆ ಕೈ ಹಾಕಿ ರಾಸಿಖ್ ಸಲಾಂ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಪತನದ ಬಳಿಕ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಸಿಡಿದು ನಿಂತರು. ಅಂತಿಮ ಓವರ್​ನಲ್ಲಿ ಗೆಲುವಿಗೆ 19 ರನ್​ ತೆಗೆಯುವ ಸವಾಲಿನಲ್ಲಿ ರಶೀದ್​ ಅವರು ಮುಕೇಶ್​ ಕುಮಾರ್​ಗೆ ಸತತ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಇದನ್ನು ಬಾರಿಸುವಲ್ಲಿ ರಶೀದ್​ ಎಡವಿದರು. ಡೆಲ್ಲಿ ರೋಚಕ 4 ರನ್​ಗಳ ಗೆಲುವು ಸಾಧಿಸಿತು. ಅಂತಿಮ ಓವರ್​ನಲ್ಲಿ ಮೋಹಿತ್​ ಶರ್ಮ ಕನಿಷ್ಠ ಒಂದು ಬಾಲ್​ ಕಂಟ್ರೋಲ್​ ಮಾಡುತ್ತಿದ್ದರೂ ಕೂಡ ಗುಜರಾತ್​ ಗೆಲ್ಲುವು ಕಾಣುವ ಸಾಧ್ಯತೆ ಇತ್ತು.

Continue Reading

ಕ್ರೀಡೆ

IPL 2024 Points Table: ಡೆಲ್ಲಿ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

IPL 2024 Points Table: ​ಇಂದು ನಡೆಯುವ ಪಂದ್ಯದಲ್ಲಿ ಹೈದರಾಬಾದ್​ ಮತ್ತು ಆರ್​ಸಿಬಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಹೈದರಾಬಾದ್​ ಗೆದ್ದರೆ ಕೆಕೆಆರ್​ ತಂಡವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದೆ. ಕೆಕೆಆರ್​ 2ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಆರ್​ಸಿಬಿ ಗೆದ್ದರೂ ಕೂಡ ಕೊನೆಯ ಸ್ಥಾನದಲ್ಲೇ ಮುಂದುವರಿಯಲಿದೆ.

VISTARANEWS.COM


on

IPL 2024 Points Table
Koo

ನವದೆಹಲಿ: ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಗೆಲುವು ಸಾಧಿಸಿದ ಕಾರಣ ಅಂಕಪಟ್ಟಿಯಲ್ಲಿ(IPL 2024 Points Table) ಭಾರೀ ಬದಲಾವಣೆ ಸಂಭವಿಸಿದ್ದು, ಪ್ಲೇ ಆಫ್​ ರೇಸ್​ ಕೂಟ ತೀವ್ರ ಪೈಪೋಟಿ ಏರ್ಪಟ್ಟಿದೆ. 7ನೇ ಸ್ಥಾನಿಯಾಗಿದ್ದ ಡೆಲ್ಲಿ ಈ ಗೆಲುವಿನೊಂದಿಗೆ 6ನೇ ಸ್ಥಾನಕ್ಕೆ ಬಂದು ನಿಂತಿದೆ. 6ನೇ ಸ್ಥಾನದಲ್ಲಿದ್ದ ಗುಜರಾತ್ 7ಕ್ಕೆ ಕುಸಿದಿದೆ.

​ಇಂದು ನಡೆಯುವ ಪಂದ್ಯದಲ್ಲಿ ಹೈದರಾಬಾದ್​ ಮತ್ತು ಆರ್​ಸಿಬಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಹೈದರಾಬಾದ್​ ಗೆದ್ದರೆ ಕೆಕೆಆರ್​ ತಂಡವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದೆ. ಕೆಕೆಆರ್​ 2ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಆರ್​ಸಿಬಿ ಗೆದ್ದರೂ ಕೂಡ ಕೊನೆಯ ಸ್ಥಾನದಲ್ಲೇ ಮುಂದುವರಿಯಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​87114 (+0.698)
ಕೆಕೆಆರ್​​75210 (+1.206)
ಹೈದರಾಬಾದ್​​75210 (+0.914)
ಲಕ್ನೋ85310 (+0.148)
ಚೆನ್ನೈ8448 (+0.415)
ಡೆಲ್ಲಿ9458 (-0.386)
ಗುಜರಾತ್​9458 (-0.974)
ಮುಂಬೈ8356 (-0.227)
ಪಂಜಾಬ್​8264 (-0.292)
ಆರ್​ಸಿಬಿ8172 (-1.046)

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024: ಬ್ಲಾಕ್​ ಟಿಕೆಟ್ ಮಾರಾಟ ಜಾಲ ಭೇದಿಸಿದ ಚೆನ್ನೈ ಪೊಲೀಸರು; 12 ಮಂದಿ ಸೆರೆ

ಕೆಲ ಕ್ರಮಾಂಕದಲ್ಲಿ ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿದ ಡೇವಿಡ್​ ಮಿಲ್ಲರ್​ ಅರ್ಧಶತಕ ಬಾರಿಸುವ ಮೂಲಕ ಒಂದು ಹಂತದಲ್ಲಿ ಗುಜರಾತ್​ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ದೊಡ್ಡ ಹೊಡೆತಗಳಿಗೆ ಕೈ ಹಾಕಿ ರಾಸಿಖ್ ಸಲಾಂ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಪತನದ ಬಳಿಕ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಸಿಡಿದು ನಿಂತರು. ಅಂತಿಮ ಓವರ್​ನಲ್ಲಿ ಗೆಲುವಿಗೆ 19 ರನ್​ ತೆಗೆಯುವ ಸವಾಲಿನಲ್ಲಿ ರಶೀದ್​ ಅವರು ಮುಕೇಶ್​ ಕುಮಾರ್​ಗೆ ಸತತ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಇದನ್ನು ಬಾರಿಸುವಲ್ಲಿ ರಶೀದ್​ ಎಡವಿದರು. ಡೆಲ್ಲಿ ರೋಚಕ 4 ರನ್​ಗಳ ಗೆಲುವು ಸಾಧಿಸಿತು.

Continue Reading

ಕ್ರೀಡೆ

DC vS GT: ಗುಜರಾತ್​ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು ; ಪ್ಲೇ ಆಫ್​ ರೇಸ್ ಜೀವಂತ

DC vS GT:ಗುಜರಾತ್​ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ರೋಚಕ 4 ರನ್​ಗಳ ಗೆಲುವು ಸಾಧಿಸಿ ತನ್ನ ಪ್ಲೇ ಆಫ್​ ರೇಸ್​ ಜೀವಂತವಿರಿಸಿದೆ.

VISTARANEWS.COM


on

DC vs GT
Koo

ನವದೆಹಲಿ: ಅಂತಿಮ ಎಸೆತದವರೆಗೂ ಅತ್ಯಂತ ರೋಚಕವಾಗಿ ಸಾಗಿದ ಬುಧವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ರೋಚಕ 4 ರನ್​ಗಳ ಗೆಲುವು ಸಾಧಿಸಿ ತನ್ನ ಪ್ಲೇ ಆಫ್​ ರೇಸ್​ ಜೀವಂತವಿರಿಸಿದೆ. ಡೆಲ್ಲಿಗೆ ತವರಿನಲ್ಲಿ ಒಲಿದ ಮೊದಲ ಗೆಲುವು ಇದಾಗಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಹೀನಾಯ ಸೋಲು ಕಂಡಿತ್ತು.

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು.

ವಿಫಲಗೊಂಡ ಗಿಲ್​


ಚೇಸಿಂಗ್​ ವೇಳೆ 100ನೇ ಐಪಿಎಲ್​ ಪಂದ್ಯವನ್ನಾಡಿದ ಶುಭಮನ್​ ಗಿಲ್​ 6 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಆರಂಭಿಕ ಆಘಾತ ಕಂಡ ತಂಡಕ್ಕೆ, ವೃದ್ಧಿಮಾನ್​ ಸಾಹಾ ಮತ್ತು ಸಾಯಿ ಸುದರ್ಶನ್​ ನೆರವಾದರು. ಉಭಯ ಆಟಗಾರರು ಸೇರಿಕೊಂಡು ದ್ವಿತೀಯ ವಿಕೆಟ್​ಗೆ 82 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಸಾಹಾ 39 ರನ್​ ಗಳಿಸಿದರೆ, ಸಾಯಿ ಸುದರ್ಶನ್ 65 ರನ್​ ಬಾರಿಸಿದರು. ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಗುಜರಾತ್​ ಮತ್ತೆ ಕುಸಿತ ಕಂಡಿತು. ಬಳಿಕ ಬಂದ ಅಜ್ಮತುಲ್ಲಾ ಒಮರ್ಜಾಯ್(1), ಶಾರೂಖ್​ ಖಾನ್​(8) ಒಂದಂಕಕ್ಕೆ ಸೀಮಿತರಾಗಿ ನಿರಾಶೆ ಮೂಡಿಸಿದರು.

ಇದನ್ನೂ ಓದಿ IPL 2024: ಬ್ಲಾಕ್​ ಟಿಕೆಟ್ ಮಾರಾಟ ಜಾಲ ಭೇದಿಸಿದ ಚೆನ್ನೈ ಪೊಲೀಸರು; 12 ಮಂದಿ ಸೆರೆ

ಕೆಲ ಕ್ರಮಾಂಕದಲ್ಲಿ ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿದ ಡೇವಿಡ್​ ಮಿಲ್ಲರ್​ ಅರ್ಧಶತಕ ಬಾರಿಸುವ ಮೂಲಕ ಒಂದು ಹಂತದಲ್ಲಿ ಗುಜರಾತ್​ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ದೊಡ್ಡ ಹೊಡೆತಗಳಿಗೆ ಕೈ ಹಾಕಿ ರಾಸಿಖ್ ಸಲಾಂ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಪತನದ ಬಳಿಕ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಸಿಡಿದು ನಿಂತರು. ಅಂತಿಮ ಓವರ್​ನಲ್ಲಿ ಗೆಲುವಿಗೆ 19 ರನ್​ ತೆಗೆಯುವ ಸವಾಲಿನಲ್ಲಿ ರಶೀದ್​ ಅವರು ಮುಕೇಶ್​ ಕುಮಾರ್​ಗೆ ಸತತ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಇದನ್ನು ಬಾರಿಸುವಲ್ಲಿ ರಶೀದ್​ ಎಡವಿದರು. ಡೆಲ್ಲಿ ರೋಚಕ 4 ರನ್​ಗಳ ಗೆಲುವು ಸಾಧಿಸಿತು.

ಸಿಡಿದ ಪಂತ್​-ಅಕ್ಷರ್​


ಮೊದಲು ಇನಿಂಗ್ಸ್ ಆರಂಭಿಸಿದ ಡೆಲ್ಲಿಗೆ ಪೃಥ್ವಿ ಶಾ ಮತ್ತು ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸಿದರು. ಆದರೆ ಈ ಬ್ಯಾಟಿಂಗ್​ ಆರ್ಭಟ ಹೆಚ್ಚು ಹೊತ್ತು ಸಾಗಲಿಲ್ಲ. ಸಂದೀಪ್​ ವಾರಿಯರ್​ ಒಂದೇ ಓವರ್​ನಲ್ಲಿ ಉಭಯ ಆಟಗಾರರ ವಿಕೆಟ್​ ಕಿತ್ತು ಡೆಲ್ಲಿಗೆ ಅವಳಿ ಆಘಾತವಿಕ್ಕಿದರು. 5 ರನ್​ಗಳಿಸಿದ್ದ ವೇಳೆ ಜೀವದಾನ ಪಡೆದಿದ್ದ ಮ್ಯಾಕ್‌ಗುರ್ಕ್ 23 ರನ್​ಗಳಿಸಿ ಔಟಾದರು. ಇದರ ಬೆನ್ನಲ್ಲೇ ಪೃಥ್ವಿ ಶಾ(11) ವಿಕೆಟ್​ ಕೂಡ ಪತನಗೊಂಡಿತು. ನೂರ್ ಅಹ್ಮದ್ ಹಿಡಿದ ಅದ್ಭುತ ಕ್ಯಾಚ್​ಗೆ ಉಭಯ ಆಟಗಾರರು ಬಲಿಯಾದರು. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಶಾಯ್​ ಹೋಪ್​ ಕೂಡ ಡೆಲ್ಲಿಗೆ ಹೋಪ್​ ನೀಡುವಲ್ಲಿ ವಿಫಲರಾದರು. ಕೇವಲ 5 ರನ್​ಗೆ ಆಟ ಮುಗಿಸಿದರು.

44 ರನ್​ಗೆ ಮೂರು ವಿಕೆಟ್​ ಕಳೆದುಕೊಂಡ ವೇಳೆ ಕ್ರೀಸ್​ಗಿಳಿದ ಎಡಗೈ ಬ್ಯಾಟರ್​ಗಳಾದ ರಿಷಭ್​ ಪಂತ್​ ಮತ್ತು ಅಕ್ಷರ್​ ಪಟೇಲ್​ ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅರ್ಧಶತಕ ಪೂರ್ತಿಗೊಂಡ ತಕ್ಷಣ ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಗುಜರಾತ್​ ಬೌಲರ್​ಗಳ ಮೇಲೆ ಸವಾರಿ ಮಾಡಿದರು. 17ನೇ ಓವರ್​ ತನಕ ಕ್ರೀಸ್​ನಲ್ಲಿದ್ದ ಅಕ್ಷರ್​ ಪಟೇಲ್ 5 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ 66 ರನ್​ ಚಚ್ಚಿದರು. ಈ ಜೋಡಿ 4ನೇ ವಿಕೆಟ್​ಗೆ 113 ರನ್​ ಒಟ್ಟುಗೂಡಿಸಿತು.

18 ಎಸೆತಗಳಲ್ಲಿ 67 ರನ್ ದಾಖಲು​


ಅಕ್ಷರ್​ ಪಟೇಲ್​ ವಿಕೆಟ್​ ಪತನದ ಬಳಿಕ ಆಡಲಿಳಿದ ಟ್ರಿಸ್ಟಾನ್ ಸ್ಟಬ್ಸ್ ಬಿರುಸಿನ ಬ್ಯಾಟಿಂಗ್​ ಮೂಲಕ ಕೇವಲ 7 ಎಸೆತಗಳಿಂದ ಅಜೇಯ 26 (2 ಸಿಕ್ಸರ್​, 3 ಬೌಂಡರಿ) ರನ್​ ಬಾರಿಸಿದರು. ಮೋಹಿತ್​ ಶರ್ಮ ಎಸೆತ ಅಂತಿಮ ಓವರ್​ನಲ್ಲಿ ಪಂತ್​ 4 ಸಿಕ್ಸರ್​ ಮತ್ತು ಒಂದು ಬೌಂಡರಿ ಸಿಡಿಸಿ 31 ರನ್ ದೋಚಿದರು. ಹೀಗಾಗಿ ಅಂತಿಮ 18 ಎಸೆತಗಳಲ್ಲಿ ಡೆಲ್ಲಿಗೆ ಬರೋಬ್ಬರಿ 67 ರನ್​ ಹರಿದು ಬಂತು. ಮೋಹಿತ್​ ಶರ್ಮ 4 ಓವರ್​ಗೆ 73 ರನ್​ ಬಿಟ್ಟುಕೊಟ್ಟು ಐಪಿಎಲ್​ನಲ್ಲಿಯೇ ಅತ್ಯಧಿಕ ರನ್​ ಹೊಡೆಸಿಕೊಂಡ ಆಟಗಾರ ಎನ್ನುವ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಪಂತ್​ ಬರೋಬ್ಬರಿ 8 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿ ಅಜೇಯ 88 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 43 ಎಸೆತ. ಸಂದೀಪ್​ ವಾರಿಯರ್​ 15 ರನ್​ಗೆ 3 ವಿಕೆಟ್​ ಕಿತ್ತು ಗುಜರಾತ್​ ಪರ ಉತ್ತಮ ಬೌಲಿಂಗ್​ ನಡೆಸಿದರು. ಉಳಿದೆಲ್ಲರು ದುಬಾರಿಯಾಗಿ ಕಂಡುಬಂದರು. ​

Continue Reading
Advertisement
IPL 2024
ಕ್ರೀಡೆ27 mins ago

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಆರ್​ಸಿಬಿ

Pakistan Teen
ದೇಶ28 mins ago

ಪಾಕಿಸ್ತಾನದ ಯುವತಿಯ ಪ್ರಾಣ ಉಳಿಸಿತು ಭಾರತದ ಹೃದಯ; ‘ಹಾರ್ಟ್‌’ ಟಚಿಂಗ್ ಸ್ಟೋರಿ ಇದು!

Comedy Khiladigalu Premier League From 27th April On Zee Kannada
ಕಿರುತೆರೆ28 mins ago

Comedy Khiladigalu Premier League: ಹೇಗಿರಲಿದೆ ಹೊಸ ಶೋ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ?

Pushpa The Rule first single on May 1
ಟಾಲಿವುಡ್46 mins ago

Pushpa The Rule: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ʻಪುಷ್ಪ 2ʼ: ಮೇ 1ಕ್ಕೆ ತಂಡದಿಂದ ಗುಡ್‌ ನ್ಯೂಸ್‌!

actress amulya father in law election officers ride
ಕ್ರೈಂ51 mins ago

Election Officer Raid: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ

Rahul Gandhi
ದೇಶ54 mins ago

Rahul Gandhi: ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ರಾಮಲಲ್ಲಾನ ದರ್ಶನ!

IPL 2024
ಕ್ರೀಡೆ1 hour ago

IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

Amitabh Bachchan, AR Rahman honoured with Deenanath Mangeshkar award
ಸಿನಿಮಾ1 hour ago

Amitabh Bachchan: ಅಮಿತಾಭ್‌ ಬಚ್ಚನ್, ಎ ಆರ್ ರೆಹಮಾನ್‌ ಸೇರಿ ಹಲವರಿಗೆ ʻದೀನನಾಥ್ ಮಂಗೇಶ್ಕರ್ ಪ್ರಶಸ್ತಿʼ ಗೌರವ

Lok Sabha Election
ಕರ್ನಾಟಕ1 hour ago

Lok Sabha Election: ಕರ್ನಾಟಕ ಸೇರಿ 13 ರಾಜ್ಯದಲ್ಲಿ ನಾಳೆ 2ನೇ ಹಂತದ ಮತದಾನ; ಪಿನ್‌ ಟು ಪಿನ್‌ ಮಾಹಿತಿ ಇಲ್ಲಿದೆ

Subramanya Dhareshwar
ಶ್ರದ್ಧಾಂಜಲಿ1 hour ago

Subramanya Dhareshwar: ಜೇನುದನಿಯ ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌