ಪಿಎಸ್ಐ ಹಗರಣದಲ್ಲಿ ಅಮೃತ್ ಪಾಲ್ ಡೈರಿ ಪತ್ತೆಯಾಗಿರುವುದರ ಜತೆಗೆ ಇದೇ ಹಗರಣದ ಮತ್ತೊಂದು ಪ್ರಕರಣದಲ್ಲಿ ಅಫಜಲಪುರ ಶಾಸಕರ ಪುತ್ರನ ಹೆಸರೂ ತಳುಕುಹಾಕಿಕೊಂಡಿದೆ.
ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ 1974 ಪುಟಗಳ ಸುದೀರ್ಘ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಚುನಾವಣೆ ವರ್ಷದಲ್ಲಿ ಈಗಾಗಲೆ 40%, 30% ಮಿಷನ್ ಆರೋಪಗಳಿಂದ ಪಾರಾಗಲು ಯತ್ನಿಸುತ್ತಿರುವ ಬಿಜೆಪಿಗೆ PSI ಹಗರಣ ಎದುರಾಗಿದೆ. ಇನ್ನೂ ಪ್ರಮುಖ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ.