Radhika Pandit: ಯಶ್‌-ರಾಧಿಕಾ ಪಂಡಿತ್‌ ಎಂಗೇಜ್‌ಮೆಂಟ್‌ಗೆ 8 ವರ್ಷ; ಇದು ನೂರು ಜನ್ಮದ ನಂಟು ಎಂದ ಮಿಸೆಸ್‌ ರಾಮಾಚಾರಿ - Vistara News

ಸ್ಯಾಂಡಲ್ ವುಡ್

Radhika Pandit: ಯಶ್‌-ರಾಧಿಕಾ ಪಂಡಿತ್‌ ಎಂಗೇಜ್‌ಮೆಂಟ್‌ಗೆ 8 ವರ್ಷ; ಇದು ನೂರು ಜನ್ಮದ ನಂಟು ಎಂದ ಮಿಸೆಸ್‌ ರಾಮಾಚಾರಿ

Radhika Pandit: ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ ಎಂದೇ ಜನಪ್ರಿಯವಾಗಿರುವ ಯಶ್‌ ಮತ್ತು ರಾಧಿಕಾ ಪಂಡಿತ್‌ ನಿಶ್ಚಿತಾರ್ಥ ನಡೆದು 8 ವರ್ಷ ಆಗಿದೆ. ಈ ಹಿನ್ನಲೆಯಲ್ಲಿ ರಾಧಿಕಾ ಪಂಡಿತ್‌ ಇನ್‌ಸ್ಟಾಗ್ರಾಮ್‌ನಲ್ಲಿ ಯಶ್‌ ಜತೆಗಿನ ಫೋಟೊ ಹಂಚಿಕೊಂಡು, ʼʼ8 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಾಲೇ ನನಗೆ 100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂಬುದು ತಿಳಿದಿತ್ತುʼʼ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

VISTARANEWS.COM


on

Radhika Pandit
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ ಎಂದೇ ಜನಪ್ರಿಯವಾಗಿರುವ ಯಶ್‌ ಮತ್ತು ರಾಧಿಕಾ ಪಂಡಿತ್‌ ನಿಶ್ಚಿತಾರ್ಥ ನಡೆದು 8 ವರ್ಷ ಆಗಿದೆ. ಈ ಹಿನ್ನಲೆಯಲ್ಲಿ ರಾಧಿಕಾ ಪಂಡಿತ್‌ (Radhika Pandit) ಇನ್‌ಸ್ಟಾಗ್ರಾಮ್‌ನಲ್ಲಿ ಯಶ್‌ ಜತೆಗಿನ ಫೋಟೊ ಹಂಚಿಕೊಂಡು, ʼʼ8 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಾಲೇ ನನಗೆ 100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂಬುದು ತಿಳಿದಿತ್ತುʼʼ ಎಂದು ಬರೆದುಕೊಂಡಿದ್ದಾರೆ.

2016ರ ಆಗಸ್ಟ್‌ 12ರಂದು ಗೋವಾದಲ್ಲಿ ಅದ್ಧೂರಿಯಾಗಿ ಯಶ್- ರಾಧಿಕಾ ನಿಶ್ಚಿತಾರ್ಥ ನೆರವೇರಿತ್ತು. ಬಳಿಕ ಅದೇ ವರ್ಷ ಡಿಸೆಂಬರ್‌ 9ರಂದು ಗೋವಾದಲ್ಲಿ ಸಪ್ತಪದಿ ಇವರು ಸಪ್ತಪದಿ ತುಳಿದಿದ್ದರು.

ಧಾರಾವಾಹಿಯಲ್ಲಿ ನಟಿಸುತ್ತಿದ್ದ ರಾಧಿಕಾ ಪಂಡಿತ್‌ 2008ರಲ್ಲಿ ತೆರೆಕಂಡ ʼಮೊಗ್ಗಿನ ಮನಸ್ಸುʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದರು. ವಿಶೇಷ ಎಂದರೆ ಇದರಲ್ಲಿ ಯಶ್‌ ಕೂಡ ನಟಿಸಿದ್ದರು. ಮೊದಲ ಚಿತ್ರದಲ್ಲೇ ಮೋಡಿ ಮಾಡಿದ ಇವರು ಬಳಿಕ ʼಡ್ರಾಮʼ, ʼಮಿ. ಆ್ಯಂಡ್‌ ಮಿ. ರಾಮಾಚಾರಿʼ, ʼಸಂತು ಸ್ಟ್ರೈಟ್‌ ಫಾರ್ವರ್ಡ್‌ʼ ಮುಂತಾದ ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದರು.

ಮಕ್ಕಳಾದ ಐರಾ ಹಾಗೂ ಯಥರ್ವ್ ಅವರೊಂದಿಗೆ ಸಾಕಷ್ಟು ಸಮಯ ಕಳೆಯುವ ಯಶ್‌ ಮತ್ತು ರಾಧಿಕಾ ಪಂಡಿತ್‌, ಕುಟುಂಬದೊಂದಿಗಿನ ಫೋಟೊಗಳನ್ನು ಆಗಾಗ ಶೇರ್‌ ಮಾಡುತ್ತಿರುತ್ತಾರೆ.

ಸದ್ಯ ಯಶ್‌ ಬಹು ನಿರೀಕ್ಷಿತ ‘ಟಾಕ್ಸಿಕ್‌’ ಚಿತ್ರದಲ್ಲಿ ನಿರತರಾಗಿದ್ದಾರೆ. ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡಿರುವ ರಾಧಿಕಾ ಪಂಡಿತ್‌ ಚಿತ್ರರಂಗಕ್ಕೆ ಯಾವಾಗ ಮರುಳುತ್ತಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಆಗಾಗ ಕೇಳುತ್ತಲೇ ಇರುತ್ತಾರೆ. ಆದರೆ ಅವರು ಇದುವರೆಗೆ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ರಾಧಿಕಾ ಪಂಡಿತ್‌ ಕೊನೆಯದಾಗಿ 2019ರಲ್ಲಿ ತೆರೆಕಂಡ ʼಆದಿ ಲಕ್ಷ್ಮೀ ಪುರಾಣʼ ಚಿತ್ರದಲ್ಲಿ ನಟಿಸಿದ್ದರು. ಇದರಲ್ಲಿ ನಿರೂಪ್‌ ಭಂಡಾರಿ ನಾಯಕನಾಗಿ ಅಭಿನಯಿಸಿದ್ದರು. ಇತ್ತೀಚೆಗೆ ಯಶ್‌ ಜತೆ ಜಾಹೀರಾತಿನಲ್ಲಿ ನಟಿಸಿದ್ದ ರಾಧಿಕಾ ಪಂಡಿತ್‌ ಸಿನಿಮಾಕ್ಕೆ ಬಣ್ಣ ಹಚ್ಚಿಲ್ಲ.

‘ನಂದಗೋಕುಲ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಾಧಿಕಾ ಪಂಡಿತ್, ಉತ್ತಮ ಕಥೆ ಸಿಕ್ಕರೆ ಮತ್ತೆ ಖಂಡಿತಾ ನಟಿಸುತ್ತೇನೆ ಎಂದು ಈ ಹಿಂದೆ ತಿಳಿಸಿದ್ದು, ಅವರ ಕಂಬ್ಯಾಕ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ಎಂದೇ ಕರೆಯಲ್ಪಡುವ ರಾಧಿಕಾ ಪಂಡಿತ್‌ ಕೆಲವು ದಿನಗಳ ಹಿಂದೆ ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದರು. ಈ ವೇಳೆ ʼʼಮತ್ತೆ ನೀವು ಯಾವಾಗ ಚಿತ್ರದಲ್ಲಿ ನಟಿಸುತ್ತೀರಾ? ಬೆಳ್ಳಿ ತೆರೆಯಲ್ಲಿ ನಿಮ್ಮನ್ನು ನೋಡಲು ನಾವೆಲ್ಲ ಕಾತುರದಿಂದ ಕಾಯುತ್ತಿದ್ದೇವೆʼʼ ಎಂದು ಹೇಳಿದಾಗ ʼʼಸರಿಯಾದ ಸಮಯ ಬಂದಾಗʼʼ ಎಂದಷ್ಟೇ ಉತ್ತರಿಸಿ ಕುತೂಹಲ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: Radhika Pandit: ನಟಿ ರಾಧಿಕಾ ಪಂಡಿತ್‌ ಕಮ್‌ ಬ್ಯಾಕ್‌ ಯಾವಾಗ? ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

Actor Darshan : ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ಸಲ್ಲಿಕೆ ಆಗಿದೆ. ಈ ಮಧ್ಯೆ ಡಿ ಗ್ಯಾಂಗ್‌ಗೆ ಜಾಮೀನು ಸಿಗುತ್ತಾ ಇಲ್ವಾ ಎಂಬ ಕುತೂಹಲ ಮೂಡಿದೆ. ಜತೆಗೆ ಮನೆ ಊಟಕ್ಕೆ ಸಲ್ಲಿಸಿದ್ದ ಅರ್ಜಿವಿಚಾರಣೆ ನಡೆಯಲಿದೆ.

VISTARANEWS.COM


on

By

actor darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ (Actor Darshan) ಹಾಗೂ ಪವಿತ್ರಾಗೌಡ ಫೋನ್‌ಗಳು ಕೊನೆಗೂ ರಿಟ್ರೀವ್ ಆಗಿಲ್ಲ. ಕಳೆದ ಒಂದೂವರೆ ತಿಂಗಳಿಂದ ಹೈದರಾಬಾದ್ ಸಿಎಫ್ಎಸ್ಎಲ್‌ನಲ್ಲಿದ್ದ ಇಬ್ಬರು ಆರೋಪಿಗಳ ಐಫೋನ್‌ಗಳು ರಿಟ್ರೀವ್ ಆಗದೇ ರಿಟರ್ನ್ ಆಗಿವೆ. ಸದ್ಯ ಎರಡು ಐಫೋನ್‌ಗಳನ್ನು ಗುಜರಾತ್‌ಗೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಗುಜರಾತ್‌ನ ಎಫ್ಎಸ್ಎಲ್ ಯೂನಿವರ್ಸಿಟಿಯಲ್ಲಿ ಆತ್ಯಾಧುನಿಕ ತಂತ್ರಜ್ಞಾನ, ಎಕ್ಪ್ಮೆಂಟ್ ಇದೆ. ಎಫ್ಎಸ್ಎಲ್ ತಜ್ಞರ ತಂಡದಿಂದ ಎರಡು ಐಫೋನ್‌ಗಳ ರಹಸ್ಯ ಭೇದಿಸಲು ಚಿಂತನೆ ನಡೆದಿದೆ.

ನಟ ದರ್ಶನ್‌ಗೆ ಇಂದಾದರೂ ಸಿಗುತ್ತಾ ಮನೆ ಊಟ?

ಬೆಂಗಳೂರು/ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (renukaswamy murder case) ಜೈಲುಪಾಲಾಗಿರುವ ನಟ ದರ್ಶನ್‌ (Actor Darshan) ಮನೆ ಊಟದ ಅರ್ಜಿ ವಿಚಾರಣೆಯು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಗುರುವಾರ ನಡೆದಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯದ ಬಳಿಕ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು. ನಿನ್ನೆ ಬುಧವಾರವಷ್ಟೇ ಪೊಲೀಸರು ಪ್ರಕರಣದ ಚಾರ್ಜ್‌ ಶೀಟ್‌ ಅನ್ನು ಸಲ್ಲಿಸಿದ್ದರು. ಇಂದು ಮನೆ ಊಟದ ಅರ್ಜಿ ವಿಚಾರಣೆ ನಡೆಯಲಿದ್ದು, ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿಯಿಂದ ವಾದ ಮಂಡಿಸಲಿದ್ದಾರೆ.

ಚಾರ್ಜ್‌ಶೀಟ್‌ ಸಲ್ಲಿಕೆ ಬಳಿಕ ಡಿ ಗ್ಯಾಂಗ್‌ ಮುಂದಿನ ನಡೆ ಏನು?

ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೆಪ್ಟೆಂಬರ್ 9ರಂದು ದರ್ಶನ್ ನ್ಯಾಯಾಂಗ ಅವಧಿ ಮುಕ್ತಾಯ ಆಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೆ 09ರಂದು 24ನೇ ಎಸಿಎಂಎಂ ( ACMM) ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.

ಅದೇ ದಿನ ಚಾರ್ಜ್ ಶೀಟ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಸೆಷನ್ಸ್ ಕೋರ್ಟ್‌ಗೆ ವರ್ಗಾವಣೆ ಆಗಲಿದೆ. ಚಾರ್ಜ್ ಶೀಟ್ ವರ್ಗಾವಣೆ ಆದ 2 /3 ದಿನಗಳಲ್ಲಿ ಕೇಸ್‌ಗೆ ಸಂಬಂಧಿಸಿದಂತೆ ಸ್ಕ್ರೂಟಿನಿ ಆಗಲಿದೆ. ಕೇಸ್ ಸ್ಕ್ರೂಟಿನಿ ಆದ ನಂತರ ಕೋರ್ಟ್‌ನಿಂದ ಪ್ರಕರಣಕ್ಕೆ ಸಿಸಿ ನಂಬರ್‌ ನೀಡಲಾಗುತ್ತದೆ. ಕೇಸ್‌ನ ಸಿಸಿ ನಂಬರ್ ಪಡೆದ ನಂತರ ಆರೋಪಿಗಳ ಪರ ವಕೀಲರಿಗೆ ಚಾರ್ಜ್ ಶೀಟ್ ಪ್ರತಿಯನ್ನು ನೀಡಲಾಗುತ್ತದೆ. ಆರೋಪಿ ಪರ ವಕೀಲರು ಚಾರ್ಜ್ ಸೀಟ್ ಪ್ರತಿ ಕೈಗೆ ಸಿಕ್ಕ ನಂತರ, ಜಾಮೀನಿಗೆ ಅರ್ಜಿ ಸಲ್ಲಿಸಲಿಸಬಹುದು.

ಸೆಪ್ಟೆಂಬರ್ 9 ರ ನಂತರ ಜಾಮೀನಿಗೆ ಅರ್ಜಿ ಸಲ್ಲಿಸುವುದಕ್ಕೆ ದರ್ಶನ್, ಪವಿತ್ರ ಗೌಡ ಸೇರಿ ಉಳಿದ ಆರೋಪಿಗಳ ಪರ ವಕೀಲರಿಂದ ಸಿದ್ಧತೆ ನಡೆಯುತ್ತಿದೆ. ಚಾರ್ಜ್ ಶೀಟ್‌ಗೂ ಮುನ್ನ ಪವಿತ್ರ ಗೌಡ, ಅನು ಕುಮಾರ್ ಸೇರಿ ಹಲವರು ಸಲ್ಲಿಸಿದ್ದ ಜಾಮೀನು ಅರ್ಜಿಗಳು ವಜಾ ಆಗಿತ್ತು.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ಡಿ ಗ್ಯಾಂಗ್‌ಗೆ ಸಿಗುತ್ತಾ ಜಾಮೀನು?

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17 ಜನ ಆರೋಪಿಗಳು ಇದ್ದಾರೆ. ಆರೋಪಿಗಳ ಪರ ವಕೀಲರು ತಮ್ಮ ತಮ್ಮ ಕಕ್ಷಿದಾರ ದೋಷಾರೋಪಣ ಪಟ್ಟಿ ಪಡೆದುಕೊಳ್ಳುತ್ತಾರೆ. ಒಬ್ಬೊಬ್ಬ ಆರೋಪಿಯ ಮೇಲೆ ಇರುವ ಪ್ರತ್ಯೇಕ ಆರೋಪದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ದೋಷಾರೋಪಣ ಪಟ್ಟಿಯಿಂದ ಆರೋಪಿಯನ್ನು ಹೊರತರಲು ಚಿಂತನೆ ನಡೆಸಲಿದ್ದಾರೆ. ರಿಸರ್ಚ್ ಮಾಡಿಕೊಂಡು ಬೇರೆ ತೀರ್ಪುಗಳನ್ನು ಉಲ್ಲೇಖ ಮಾಡಿಕೊಳ್ಳುತ್ತಾರೆ. ಬಳಿಕ ಸಂಬಂಧಪಟ್ಟ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತಾರೆ.

ಮೊದಲು ವಕಾಲತ್ತು ಹಾಕಿದ ಅರ್ಜಿಯನ್ನು ಸಲ್ಲಿಕೆ ಮಾಡಲಾಗುತ್ತದೆ. ಕೋರ್ಟ್‌ನಲ್ಲಿ ಅರ್ಜಿ ದಾಖಲಾದ ಬಳಿಕ ಅರ್ಜಿ ವಿಚಾರಣೆ ಬರಲಿದೆ. ಈ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಲಿದ್ದಾರೆ. ಅರ್ಜಿ ವಿಚಾರಣೆ ಸಾಕ್ಷ್ಯಾಧಾರ ಪರಿಶೀಲನೆ ನಡೆಸಿ ಜಾಮೀನು ಕೊಡುವುದು ಬಿಡುವುದು ಕೋರ್ಟ್ ವಿವೇಚನೆಗೆ ಬಿಟ್ಟಿದ್ದಾಗಿದೆ. ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದರೆ ಹೈಕೋರ್ಟ್ ಮೊರೆ ಹೋಗಲಿದ್ದಾರೆ. ಅಲ್ಲೂ ಕೂಡ ಜಾಮೀನು ಅರ್ಜಿ ವಜಾ ಆದರೆ ಸುಪ್ರಿಂ ಕೋರ್ಟ್ ಮೊರೆ ಹೋಗಬೇಕು.

ಇಷ್ಟೆಲ್ಲ ಸರ್ಕಸ್ ನಡುವೆಯೂ ಜಾಮೀನು ಸಿಗದಿದ್ದರೆ ಆರೋಪಿತರು ಜೈಲಿನಲ್ಲಿ ಕಾಲ ಕಳೆಯಬೇಕು. ಇದರ ಜತೆಗೆ ತನಿಖಾಧಿಕಾರಿಗಳು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮನವಿ ಮಾಡಬಹುದು. ಮಾಡಿ ಅದನ್ನ ನ್ಯಾಯಾಲಯ ಪುರಸ್ಕರಿಸಿದರೆ ಪ್ರಕರಣದ ಟ್ರಯಲ್ ಆರಂಭವಾಗುತ್ತದೆ. ಟ್ರಯಲ್ ಮುಗಿದು ಆರೋಪಿಗಳ ತಪ್ಪು ಸಾಬೀತು ಆದರೆ ಸಜಾ ಆಗಬಹುದು. ಇಲ್ಲ ಪೊಲೀಸರು ಸರಿಯಾದ ಸಾಕ್ಷಿ ನೀಡಿ ಆರೋಪವನ್ನು ಸಾಬೀತು ಮಾಡದಿದ್ದರೆ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋಗಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshan : ರೇಣುಕಾಸ್ವಾಮಿ ಕೊಲೆ (Renukaswamy murder case) ಆರೋಪಿಗಳು ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ ಹೋಗಿದ್ದರು. ರೇಣುಕಾ ಸ್ವಾಮಿ‌ ಹತ್ಯೆಯ ಮ್ಯಾಪಿಂಗ್ ಮಾಡಿ ಇಂಚಿಂಚು ಮಾಹಿತಿಯನ್ನು ಪೊಲೀಸರು ಕಲೆ ಹಾಕಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

VISTARANEWS.COM


on

By

Actor Darshans gang moves Google to destroy evidence after Renukaswamys murder
Koo

ಬೆಂಗಳೂರು: ರೇಣುಕಾ ಸ್ವಾಮಿ‌ ಹತ್ಯೆ (Renuka swamy Murder case) ಪ್ರಕರಣದ ಇಂಚಿಂಚು ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ರೇಣುಕಾ ಸ್ವಾಮಿ‌ ಹತ್ಯೆಯ ಮ್ಯಾಪಿಂಗ್ ಮಾಡಿ ಚಾರ್ಜ್ ಶೀಟ್ ಮಾಡಿದ್ದಾರೆ. ಇಷ್ಟಕ್ಕೂ ಹೇಗಿದೆ ಗೊತ್ತಾ ಪೊಲೀಸರಿಂದ ಮರ್ಡರ್ ಕಹಾನಿಯ ಮ್ಯಾಪಿಂಗ್?

ಪವಿತ್ರಗೌಡ ರೇಣುಕಾಸ್ವಾಮಿಯ ಮೆಸೇಜ್ ವಿಚಾರವನ್ನು ಮೊದಲಿಗೆ ಪವನ್‌ಗೆ ತಿಳಿಸುತ್ತಾಳೆ. ಬಳಿಕ ಪವನ್ ಫೇಕ್‌ ಐಡಿ ಮಾಡಿ ಗೌತಮ್ ಹೆಸರಲ್ಲಿ ರೇಣುಕಾಸ್ವಾಮಿ ಜತೆಗೆ ಚಾಟಿಂಗ್‌ ಮಾಡುತ್ತಾನೆ. ಚಾಟ್ ಮಾಡಿ ರೇಣುಕಾ ಸ್ವಾಮಿ ಲೊಕೇಶನ್ ಕಂಡು ಹಿಡಿತ್ತಾರೆ. ಅದಕ್ಕೂ ಮೊದಲು ರೇಣುಕಾಸ್ವಾಮಿ ಫೇಕ್ ವಿಳಾಸವನ್ನು ಕೊಟ್ಟಿದ್ದ.

ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್ ಮಾಡಿರುವುದನ್ನು ಪವನ್‌ ದರ್ಶನ್‌ಗೆ ತೋರಿಸುತ್ತಾನೆ. ನಂತರ ದರ್ಶನ್‌ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬರುವಂತೆ ತಿಳಿಸುತ್ತಾನೆ. ನಂತರ ರಾಘವೇಂದ್ರ ಮುಖಾಂತರ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿಸಿ, ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬರುತ್ತಾರೆ.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ಇತ್ತ ಶೂಟಿಂಗ್ ಮುಗಿಸಿ ಊಟಕ್ಕೆ ಹೋಗಿದ್ದ ದರ್ಶನ್‌ಗೆ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿರುವ ವಿಚಾರವನ್ನು ಮುಟ್ಟಿಸುತ್ತಾರೆ. ಅಲ್ಲಿಂದ ದರ್ಶನ್, ನಾಗರಾಜು, ಪವಿತ್ರಾಳನ್ನು ಪಿಕ್ ಅಪ್‌ ಮಾಡಿಕೊಂಡು ಶೆಡ್‌ಗೆ ಬರುತ್ತಾರೆ. ದರ್ಶನ್‌ ಬರುವ ಮುನ್ನ ಪವನ್‌ ಮತ್ತು ಗ್ಯಾಂಗ್‌ ಮೊದಲೇ ರೇಣುಕಾಸ್ವಾಮಿಯನ್ನು ಥಳಿಸಿರುತ್ತಾರೆ.

ನಂತರ ಶೆಡ್ಡಿಗೆ ಬಂದಿದ್ದ ದರ್ಶನ್ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಬಳಿಕ ಲಾಠಿಯಿಂದ ಹೊಡೆದು ರೇಣುಕಾಸ್ವಾಮಿ ಗುಪ್ತಾಂಗಕ್ಕೆ ಬಲವಾಗಿ ಒದ್ದಿದ್ದ. ನಂತರ ಪವಿತ್ರಾಗೌಡ ನಿನ್ನಂತವರು ಇರಬಾರೆಂದು ಎಂದು ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ರೇಣುಕಾಸ್ವಾಮಿಗೆ ಥಳಿಸಿದ ನಂತರ ದರ್ಶನ್‌ ಅಲ್ಲಿಂದ ಮನೆಗೆ ವಾಪಸ್‌ ಹೋಗಿದ್ದ.

ನಂತರ ರೇಣುಕಾ ಸ್ವಾಮಿಯನ್ನು ಎಳೆದುಕೊಂಡು ಹೋಗಿ ವಾಚ್ ಮ್ಯಾನ್ ರೂಮಿಗೆ ಬಿಸಾಡುತ್ತಾರೆ. ಎಲ್ಲರ ಬಲವಾದ ಹೊಡೆತಕ್ಕೆ ರೇಣುಕಾಸ್ವಾಮಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ರೇಣುಕಾ ಸ್ವಾಮಿಯ ಪಲ್ಸ್ ಚೆಕ್‌ ಮಾಡಿದ ಪ್ರದೋಶ್, ದರ್ಶನ್‌ಗೆ ಫೋನ್‌ ಮಾಡಿ ಸತ್ತಿರುವ ವಿಷ್ಯವನ್ನು ಮುಟ್ಟಿಸುತ್ತಾನೆ. ಡೆಡ್‌ ಬಾಡಿಯನ್ನು ಡಿಸ್ಪಾಚ್‌ ಮಾಡುವ ಕೆಲಸದ ಜತೆಗೆ ಸೆರಂಡರ್‌ ಆಗುವವರನ್ನು ರೆಡಿ ಮಾಡುತ್ತಾರೆ. ಬಳಿಕ ರಾಘವೇಂದ್ರ, ಕಾರ್ತಿಕ್‌, ನಿಖಿಲ್ ನಾಯ್ಕ, ಕೇಶವ್ ಮೂರ್ತಿಯನ್ನು ಸರೆಂಡರ್‌ ಆಗಲು ಒಪ್ಪಿಸುತ್ತಾರೆ.

ಮಾರನೇ ದಿನ ನಟ ದರ್ಶನ್ ಮನೆಯಲ್ಲಿ ನಡೆದಿದ್ದ ಪೂಜೆಯಲ್ಲಿ ಭಾಗಿಯಾಗಿದ್ದು, ಮುಂದೆ ಏನು ಆಗುತ್ತೋ ಏನೋ ಎಂದು ಟೆನ್ಷನ್‌ನಲ್ಲೇ ಓಡಾಡಿದ್ದಾರೆ. ಪೂಜೆ ಮುಗಿಸಿ ರಾತ್ರೋ ರಾತ್ರಿ‌ ದರ್ಶನ್‌ ಮೈಸೂರಿಗೆ ತೆರಳಿದ್ದರು. ಇದಾದ ಬಳಿಕ ಹಣ ಪಡೆದು ಬಂದು ಕೆಲವರು ಸರೆಂಡರ್ ಆಗಿದ್ದರು. ಇತ್ತ ಮೋರಿಯಲ್ಲಿ ಸಿಕ್ಕಿದ್ದ ಮೃತದೇಹವನ್ನು ಕಂಡು ಅಸಹಜ ಸಾವು ಎಂದು ದೂರು ದಾಖಲಿಸಲು ಮುಂದಾಗಿದ್ದರು. ಗಾಯಗಳನ್ನು ನೋಡಿ ಡಿಸಿಪಿ ಕೊಲೆ ಕೇಸ್ ಎಂದು ದಾಖಲಿಸಿಕೊಳ್ಳಿ ಎಂದಿದ್ದರು. ಇತ್ತ ತಾವಾಗಿಯೇ ಸರೆಂಡರ್ ಆಗಿದ್ದು ಕಂಡು ಪೊಲೀಸರಿಗೆ ಅನುಮಾನ ಬಂದಿತ್ತು.

ಪೊಲೀಸರಿಗೆ ಮೊದಲಿಗೆ ಇದು ರೌಡಿಯೊಬ್ಬನ ಕೊಲೆ ಎಂಬ ಸಂಶಯ ಇತ್ತು. ಡಿಸಿಪಿ ಮತ್ತು ಎಸಿಪಿ ಹೋದಾಗ ರಾಘವೇಂದ್ರನ‌ ಬಗ್ಗೆ ಪೊಲೀಸರು ಹೇಳುತ್ತಾರೆ. ಈತ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಎನ್ನುವ ಮಾಹಿತಿ ಲಭ್ಯವಾಗುತ್ತದೆ. ಚಿತ್ರದುರ್ಗದಿಂದ ಇಲ್ಲಿ ಯಾಕೆ ಬಂದ ಎಂದು ಅನುಮಾನ ಮೂಡಿದೆ. ಆಗ ಪವಿತ್ರಾಗೌಡ ಬಗ್ಗೆ ಕೆಟ್ಟ ಮೆಸೇಜ್ ಮಾಡಿದ್ದ ಎಂದು ಹೇಳುತ್ತಾನೆ.

ಬೆಳಗಿನ ಜಾವ ಮೂರು ಗಂಟೆಗೆ ಎಸಿಪಿ ಚಂದನ್ ಡಿಸಿಪಿ ಗಿರೀಶ್‌ ಅವರಿಗೆ ಕರೆ ಮಾಡಿ ದರ್ಶನ್ ಭಾಗಿ ಬಗ್ಗೆ ಹೇಳುತ್ತಾರೆ. ಡಿಸಿಪಿ ಗಿರೀಶ್‌ 6 ಗಂಟೆಗೆ ನಗರ ಪೊಲೀಸ್ ಆಯುಕ್ತರಿಗೆ ಹೇಳಿದ್ದರು. ಅಷ್ಟರಾಗಲೇ ಕೇಶವ ಮೂರ್ತಿ ಪವಿತ್ರಾ ಗೌಡ ಹೆಸರು ಬಾಯಿಬಿಟ್ಟಿದ್ದ.

ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ ಹೋಗಿದ್ದ ಆರೋಪಿಗಳು

ತನಿಖೆ ವೇಳೆ ಹಂತಕರು ಸಾಕ್ಷಿ ನಾಶಕ್ಕೆ ಏನೇನು ಮಾಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಡಿಜಿಟಲ್ ಸಾಕ್ಷಿಗಳನ್ನು ನಾಶ ಮಾಡಲು ಆರೋಪಿಗಳು ಗೂಗಲ್ ಮೊರೆ ಹೋಗಿದ್ದರು. ಒಂದು ವೇಳೆ ಅರೆಸ್ಟ್ ಆದರೆ ತಮ್ಮ ಬಗ್ಗೆ ಯಾವುದೇ ಸಾಕ್ಷಿ ಸಿಗಬಾರದು ಎಂದು ಮಾಸ್ಟರ್ ಪ್ಲಾನ್ ಮಾಡಿದ್ದರು. ಆರೋಪಿಗಳು ಓಡಾಡಿದ್ದ ಲೋಕೇಷನ್ ಸಿಗದಂತೆ ಡಾಟಾ ಡಿಲೀಟ್‌ಗೆ ಯತ್ನಿಸಿದ್ದರು. ಯಾವ ರೀತಿ ಡಿಲೀಟ್ ಮಾಡಬೇಕು ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು. ಆರೋಪಿ ಟೆಕ್ಕಿ ಪ್ರದೂಶ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ವೇಳೆ ಕಳ್ಳಾಟ ಬಯಲಾಗಿದೆ. ಪ್ರದೂಶ್, ಇತರೆ ಆರೋಪಿಗಳ ಲೋಕೇಷನ್ ಜತೆ ಸರ್ಚ್ ಹಿಸ್ಟರಿ ಕೂಡ ಪತ್ತೆಯಾಗಿದೆ. ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ಬಗ್ಗೆ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ ಸಂಬಂಧ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಕೆ ಬಳಿಕ ನಟ ದರ್ಶನ್‌ ಮತ್ತು ಗ್ಯಾಂಗ್‌ನ ಒಂದೊಂದೆ ಕರಾಳ ಮುಖ ಹೊರಬರುತ್ತಿದೆ. ಸದ್ಯ ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆಯಾಗಿವೆ.

VISTARANEWS.COM


on

By

Actor Darshan gang
ರೆಸ್ಟೋರಂಟ್‌ನಲ್ಲಿ ಪಾರ್ಟಿ ಮಾಡಿದ್ದನ್ನು ರಿಕ್ರಿಯೇಟ್‌ ಮಾಡಿದ್ದ ಪೊಲೀಸರು
Koo

ಬೆಂಗಳೂರು: ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಮತ್ತು ಗ್ಯಾಂಗ್‌ ಅರೆಸ್ಟ್‌ ಆಗಿದ್ದು, ಕೇಸ್‌ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಕೊಲೆ ಕೇಸ್‌ ತನಿಖೆ ವೇಳೆ ಆರೋಪಿ ಪವನ್‌ ಫೋನ್‌ನಲ್ಲಿ ಎರಡು ಫೋಟೊಗಳು ಪತ್ತೆಯಾಗಿವೆ. ಮೊಬೈಲ್ ರಿಟ್ರೀವ್ ಮಾಡಿದಾಗ ರೇಣುಕಾಸ್ವಾಮಿಯ ಎರಡು ಫೋಟೋಗಳು ಸಿಕ್ಕಿವೆ ಎನ್ನಲಾಗಿದೆ.

ನಟ ದರ್ಶನ್ ಬರುವ ಮುಂಚೆ ಆತನ ಸಹಚರರು 8ನೇ ತಾರೀಖು ಮಧ್ಯಾಹ್ನ‌ 2.30 ರಿಂದ 4ಗಂಟೆವರೆಗೂ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ನಟ ದರ್ಶನ್‌ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಆರೋಪಿ ಪವನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಎರಡು ಫೋಟೊ ತೆಗೆದುಕೊಂಡು ಹೋಗಿ ದರ್ಶನ್‌ಗೆ ತೋರಿಸಿದ್ದ.

ಈ ರೀತಿ ಕರೆದುಕೊಂಡು ಬಂದು, ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪವನ್‌ ದರ್ಶನ್‌ಗೆ ಫೋಟೊ ತೋರಿಸಿದ್ದ. ಫೋಟೊ ನೋಡಿ ಸುಮಾರು ನಾಲ್ಕುವರೆ ದರ್ಶನ್‌ ಪಟ್ಟನಗೆರೆ ಶೆಡ್‌ಗೆ ಹೋಗಿದ್ದ. ಬಳಿಕ ರೇಣುಕಾಸ್ವಾಮಿಗೆ ದರ್ಶನ್‌ ಕೂಡ ಹಲ್ಲೆ ಮಾಡಿದ್ದ. ದರ್ಶನ್ ಹೋದಮೇಲೆ ಡಿ ಗ್ಯಾಂಗ್‌ ಮತ್ತಷ್ಟು ಕ್ರೂರವಾಗಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ಸದ್ಯ ಘಟನೆ ಬಗ್ಗೆ ಸಂಪೂರ್ಣವಾಗಿ ಚಾರ್ಜ್ ಶೀಟ್‌ನಲ್ಲಿ ಪೊಲೀಸರು ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: Actor Darshan : ಪವಿತ್ರಾಗೌಡಗೆ ಅಶ್ಲೀಲ ಫೋಟೊ ಕಳಿಸಿದ್ದು ದೃಢ; ಆದ್ರೆ ರೇಣುಕಾಸ್ವಾಮಿ ಕೊಲೆಯಲ್ಲಿ ಈ ಮೂವರು ಭಾಗಿಯೇ ಆಗಿಲ್ಲ! ಯಾರವರು?

ಕೊಲೆ ಬಳಿಕ ಪಾರ್ಟಿ

ರೇಣುಕಾಸ್ವಾಮಿ ಕೊಲೆ‌ ಮೊದಲು ಹಾಗೂ ಕೊಲೆ ನಂತರ ಡಿ‌ ಗ್ಯಾಂಗ್ ಪಾರ್ಟಿ ಮಾಡಿದ್ದರು. ಡಿ ಗ್ಯಾಂಗ್ ಪಾರ್ಟಿ ಮಾಡಿದ್ದನ್ನು ಪೊಲೀಸರು ಸ್ಟೋನಿ ಬ್ರೂಕ್‌ನಲ್ಲಿ ರೀ ಕ್ರಿಯೇಟ್ ಮಾಡಿದ್ದಾರೆ. ದರ್ಶನ್, ವಿನಯ್ ಸೇರಿದಂತೆ ಇತರೆ ಆರೋಪಿಗಳೊಂದಿ ರೀ ಕ್ರಿಯೇಟ್ ಮಾಡಿದ್ದಾರೆ. ನಟ ಚಿಕ್ಕಣ್ಣ ಲಾಸ್ಟ್ ಸೀಟ್‌ನಲ್ಲಿದ್ದರೆ, ದರ್ಶನ್ ಹಾಗೂ ವಿನಯ್ ಅಕ್ಕಪಕ್ಕ, ದರ್ಶನ್ ಎದುರುಗಡೆ ನಾಗ ಕುಳಿತಿದ್ದ. ಡಿ ಗ್ಯಾಂಗ್‌ ಪಾರ್ಟಿ ಮಾಡಿಕೊಂಡು ಮಸ್ತ್ ಮಜಾ ಮಾಡಿದ್ದರು.

ಕೊಲೆ ಬಳಿಕ ಆಪ್ತ ಸ್ನೇಹಿತೆಯನ್ನು ಸಂಪರ್ಕಿಸಿದ್ದ ಪವಿತ್ರಾಗೌಡ

ನಟ ದರ್ಶನ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಸಮತಾ ಹೇಳಿಕೆಯನ್ನು ದಾಖಲು ಮಾಡಲಾಗಿದೆ. ಸಮತಾ ನಟಿ ಪವಿತ್ರಾಗೌಡಳ ಆಪ್ತ ಸ್ನೇಹಿತೆ ಆಗಿದ್ದಾಳೆ. ರೇಣುಕಾಸ್ವಾಮಿ ಕೊಲೆ ಬಳಿಕ ಪವಿತ್ರಾಗೌಡ ಸಮತಾಳನ್ನು ಸಂಪರ್ಕಿಸಿದ್ದಳು. ಒಮ್ಮೆ ಫೋನ್ ಮೂಲಕ ಮತ್ತೊಮ್ಮೆ ಖುದ್ದು ಭೇಟಿಯಾಗಿದ್ದಾಗಿ ತನಿಖೆ ವೇಳೆ ಗೊತ್ತಾಗಿದೆ. ಅಲ್ಲದೇ ಸಮತಾ ಜೈಲಿನಲ್ಲೂ ಕೂಡ ಪವಿತ್ರಾಗೌಡ ಹಾಗೂ ದರ್ಶನ್ ಭೇಟಿಯಾಗಿದ್ದರು. ಹೀಗಾಗಿ ಪೊಲೀಸರು ಸಮತಾಳ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಸಮತಾ ಹಾಗೂ ಪವಿತ್ರಾಗೌಡ ಭೇಟಿ ಬಗ್ಗೆ ಉಲ್ಲೇಖ ಮಾಡಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ದರ್ಶನ್‌-ಪವಿತ್ರಾರ ಐಫೋನ್‌ಗಳ ರಹಸ್ಯ ಭೇದಿಸಲು ಚಿಂತನೆ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಹಾಗೂ ಪವಿತ್ರಾಗೌಡ ಫೋನ್‌ಗಳು ಕೊನೆಗೂ ರಿಟ್ರೀವ್ ಆಗಿಲ್ಲ. ಕಳೆದ ಒಂದೂವರೆ ತಿಂಗಳಿಂದ ಹೈದರಾಬಾದ್ ಸಿಎಫ್ಎಸ್ಎಲ್‌ನಲ್ಲಿದ್ದ ಇಬ್ಬರು ಆರೋಪಿಗಳ ಐಫೋನ್‌ಗಳು ರಿಟ್ರೀವ್ ಆಗದೇ ರಿಟರ್ನ್ ಆಗಿವೆ. ಸದ್ಯ ಎರಡು ಐಫೋನ್‌ಗಳನ್ನು ಗುಜರಾತ್‌ಗೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಗುಜರಾತ್‌ನ ಎಫ್ಎಸ್ಎಲ್ ಯೂನಿವರ್ಸಿಟಿಯಲ್ಲಿ ಆತ್ಯಾಧುನಿಕ ತಂತ್ರಜ್ಞಾನ, ಎಕ್ಪ್ಮೆಂಟ್ ಇದೆ. ತಜ್ಞ ಎಫ್ಎಸ್ಎಲ್ ತಂಡದಿಂದ ಎರಡು ಐಫೋನ್‌ಗಳ ರಹಸ್ಯ ಭೇದಿಸಲು ಚಿಂತನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ

Darling Krishna: ಸ್ಯಾಂಡಲ್‌ವುಡ್ ಕ್ಯೂಟ್‌ ಜೋಡಿ ಮಿಲನ ನಾಗರಾಜ್ – ಡಾರ್ಲಿಂಗ್ ಕೃಷ್ಣ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಮಿಲನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ.

VISTARANEWS.COM


on

darling krishna
Koo
darling krishna milana nagaraj
‘ಲವ್ ಮಾಕ್ಟೇಲ್’ ಸಿನಿಮಾದಿಂದ ಜನರ ಮನಗೆದ್ದ ಈ ಮುದ್ದಾದ ಜೋಡಿ ರಿಯಲ್‌ ಲೈಫ್‌ನಲ್ಲಿ ಕ್ಯೂಟ್‌ ಕಪಲ್‌ ಸಹ ಹೌದು. ಮಿಲನ ನಾಗರಾಜ್ (milana nagaraj) ಮತ್ತು ಡಾರ್ಲಿಂಗ್ ಕೃಷ್ಣ (darling krishna) ಈಗ ತಂದೆ ತಾಯಿಯಾದ ಸಂತಸದಲ್ಲಿದ್ದಾರೆ.
darling krishna milana nagaraj
ಮಿಲನ ನಾಗರಾಜ್ (milana nagaraj) ಹೆಣ್ಣು ಮಗುವಿಗೆ ಜನ್ಮನೀಡಿದ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ ಸೋಶಿಯಲ್‌ ಮಿಡಿಯಾದಲ್ಲಿ ಫೋಟೋ ಪೋಸ್ಟ್‌ ಮಾಡುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿಕೊಂಡಿದ್ದಾರೆ.
darling krishna milana nagaraj
ನಮಗೆ ಹೆಣ್ಣು ಮಗುವಾಗಿದೆ. ಅಮ್ಮ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕೃಷ್ಣ ಪೋಸ್ಟ್‌ ಮಾಡಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
darling krishna milana nagaraj
ಈ ತ್ಯಾಗ ಮಾಡುವ ಎಲ್ಲಾ ತಾಯಂದಿರಿಗೂ ದೊಡ್ಡ ಧನ್ಯವಾದಗಳು. ನಿನ್ನನ್ನು ನೋಡಿದ ಮೇಲೆ ನನಗೆ ಮಹಿಳೆಯರ ಮೇಲಿನ ಗೌರವ ಇನ್ನಷ್ಟು ಜಾಸ್ತಿಯಾಗಿದೆ. ನನಗೀಗ ಹೆಣ್ಣು ಮಗುವಾಗಿದೆ ಹೀಗಾಗಿ ನಾನು ಅದೃಷ್ಟವಂತ’ ಎಂದು ಡಾರ್ಲಿಂಗ್ ಕೃಷ್ಣ ಬರೆದುಕೊಂಡಿದ್ದಾರೆ.
darling krishna milana nagaraj
ಕಳೆದ ಮಹಾಶಿವರಾತ್ರಿಯಂದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದ ದಂಪತಿ ಬೇಬಿ ಬಂಪ್‌ ಫೋಟೋವನ್ನು ಆಗಾಗಾ ಶೇರ್‌ ಮಾಡುತ್ತಿದ್ದರು.
Continue Reading
Advertisement
TA Sharavana
ಕರ್ನಾಟಕ4 hours ago

TA Sharavana : ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾದ ಬಳಿಕ ಕಚೇರಿ ಉದ್ಘಾಟನೆ ಮಾಡಿದ ಟಿ.ಎ ಶರವಣ

actor darshan
ಸಿನಿಮಾ6 hours ago

Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

Actor Darshans gang moves Google to destroy evidence after Renukaswamys murder
ಸಿನಿಮಾ6 hours ago

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshan gang
ಬೆಂಗಳೂರು7 hours ago

Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ROad Accident
ಗದಗ9 hours ago

Road Accident : ನೀರಿನಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ ಶವವಾಗಿ ಪತ್ತೆ; ಸ್ಕಿಡ್ ಆಗಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಗೂಡ್ಸ್ ಗಾಡಿ

darling krishna
ಸಿನಿಮಾ10 hours ago

Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ

Road Accident
ರಾಯಚೂರು11 hours ago

Road Accident : ಸ್ಕೂಲ್‌ ಬಸ್‌-ಸಾರಿಗೆ ಬಸ್‌ ಡಿಕ್ಕಿ; ಡೆಡ್ಲಿ ಆ್ಯಕ್ಸಿಡೆಂಟ್‌ಗೆ ಮಕ್ಕಳಿಬ್ಬರು ಬಲಿ, ತುಂಡಾಯ್ತು ಮಕ್ಕಳ ಕಾಲುಗಳು

Road Accident
ಚಿಕ್ಕಬಳ್ಳಾಪುರ11 hours ago

Road Accident : ಕಂಟ್ರೋಲ್ ತಪ್ಪಿ‌ ಹೋಟೆಲ್‌ಗೆ ನುಗ್ಗಿದ ಟಿಪ್ಪರ್ ಲಾರಿ; ಕ್ಯಾಶಿಯರ್‌, ಅಡುಗೆ ಭಟ್ಟ ದಾರುಣ ಸಾವು

One and a half year old boy dies of suffocation after swallowing bottle cap in Shivamogga
ಶಿವಮೊಗ್ಗ12 hours ago

Child Death: ಶಿವಮೊಗ್ಗದಲ್ಲಿ ಜ್ಯೂಸ್‌ ಬಾಟೆಲ್‌ನ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಉಸಿರುಗಟ್ಟಿ ಸಾವು

Karnataka Weather Forecast
ಮಳೆ12 hours ago

Karnataka Weather : ಗೌರಿ-ಗಣೇಶ ಹಬ್ಬಕ್ಕೆ ಮಳೆ ಅಡ್ಡಿ!ನಿರಂತರ ಗಾಳಿ ಜತೆಗೆ ಭಾರಿ‌ ವರ್ಷಧಾರೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್5 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌