ಸುಮಾರು 15 ವರ್ಷದ ನಂತರ ಹಾಸನ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶಾಸಕರೊಬ್ಬರು ಗೆದ್ದು ಬಂದ ದಾಖಲೆಯನ್ನು 2018ರಲ್ಲಿ ಪ್ರೀತಂ ಗೌಡ ಮಾಡಿದ್ದಾರೆ. ಆದರೆ ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರವನ್ನು ಪುನಃ ಪಡೆಯಲು ಜೆಡಿಎಸ್ ಎಲ್ಲ ಪ್ರಯತ್ನವನ್ನೂ...
ಕಳೆದ ಮೂರು ಬಾರಿಯಿಂದಲೂ ಅರಸೀಕೆರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಎಂ. ಶಿವಲಿಂಗೇಗೌಡ ಅವರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಒಟ್ಟಾರೆ ಚುನಾವಣೆ ಚಿತ್ರಣದಲ್ಲಿ ಪ್ರಭಾವ ಬೀರುತ್ತದೆ.
ಪ್ರಖ್ಯಾತ ಪ್ರವಾಸಿ ತಾಣವನ್ನು ಹೊಂದಿರುವ ಬೇಲೂರು ಕ್ಷೇತ್ರದಲ್ಲಿ ಪರಿಶಿಷ್ಟರ ನಂತರ ಎರಡನೇ ಸ್ಥಾನದಲ್ಲಿರುವ ಲಿಂಗಾಯತರು ಕಳೆದ ಒಂದು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಒಕ್ಕಲಿಗರು ಮೂರನೇ ಸ್ಥಾನದಲ್ಲಿದ್ದರೂ ಇತರ ವರ್ಗದ ಮತಗಳಿಕೆಯಲ್ಲಿ ಮುಂದಿರುವುದರಿಂದ ಗೆಲುವಿಗೆ ಅಡ್ಡಿಯಾಗಿಲ್ಲ.
ಬಿಜೆಪಿಯ ಹಿರಿಯ ನಾಯಕ ಬಿ.ಬಿ. ಶಿವಪ್ಪನವರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಕಳೆದ ಮೂರು ಬಾರಿಯಿಂದಲೂ ಜೆಡಿಎಸ್ನ ಎಚ್.ಕೆ. ಕುಮಾರಸ್ವಾಮಿ ಹ್ಯಾಟ್ರಿಕ್ ಸಾಧಿಸಿದ್ದಾರೆ. ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದರೂ ಪ್ರತಿಪಕ್ಷಗಳ ಪೈಪೋಟಿ ಹೆಚ್ಚಾಗಿಯೇ ಇದೆ.
ಎಚ್.ಡಿ. ರೇವಣ್ಣ ಅವರ ಕಾರ್ಯವೈಖರಿಯಿಂದಾಗಿ ಜೆಡಿಎಸ್ ಭದ್ರಕೋಟೆ ಎನ್ನುವಂತೆ ಹೊಳೆನರಸೀಪುರ ಕ್ಷೇತ್ರ ಮಾರ್ಪಟ್ಟಿದೆ. ಆದರೆ ಕಾಂಗ್ರೆಸ್ ಬೇರುಗಳು ಇನ್ನೂ ಜೀವಂತವಾಗಿವೆ. ಒಮ್ಮತದ, ದೃಢ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇ ಆದಲ್ಲಿ ತುರುಸಿನ ಸ್ಪರ್ಧೆ ನಿಶ್ಚಿತ.
ಹಾಸನ ಜಿಲ್ಲೆಯಲ್ಲಿ ಅನೇಕ ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ ಎನ್ನುವುದು ಒಂದೆಡೆಯಾದರೆ, ಜಿಲ್ಲಾ ಕೇಂದ್ರವನ್ನೇ ಕಳೆದುಕೊಂಡ ಆಕ್ರೋಶದಲ್ಲಿ ಜೆಡಿಎಸ್ ಪಕ್ಷವಿದೆ. ಈ ಕುರಿತೂ ಸಭೆಯಲ್ಲಿ ಚರ್ಚೆಯಾಗಲಿದೆ.
ಹಾಸನ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಗೋಪಾಲಯ್ಯ ಮಾತನಾಡಿದರು.