ಮುಖ್ಯವಾಗಿ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ಒಬಿಸಿ ಸಮುದಾಯವನ್ನು ಬಿಜೆಪಿಯ ಭದ್ರ ವೋಟ್ ಬ್ಯಾಂಕ್ ಆಗಿ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಶಿಕ್ಷಣದ ಸಮಾರೋಪ ಸಮಾರಂಭದಲ್ಲಿ ಜೆ.ಪಿ. ನಡ್ಡಾ ಭಾಗಿಯಾಗಲಿದ್ದಾರೆ.
ಕೆಲವರು ಸಚಿವರಾಗಿದ್ದು ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು, ಕೆಲವರು ಸಂಘಟನೆಯನ್ನು ಬಲಪಡಿಸಿ ಚುನಾವಣೆಗೆ ಕಾರ್ಯಕರ್ತರನ್ನು ಸಿದ್ಧಗೊಳಿಸಬೇಕು ಎಂದು ವರಿಷ್ಠರು ಹೇಳಿದ್ದಾರೆ.