Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್​, ಏನಿದರ ಪ್ರಯೋಜನ? Vistara News

ಆಟೋಮೊಬೈಲ್

Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್​, ಏನಿದರ ಪ್ರಯೋಜನ?

ದೆಹಲಿಯಲ್ಲಿ ಮೊದಲ ಗ್ರೀನ್​ ಹೈಡ್ರೋಜನ್ ಫ್ಯೂಯಲ್ ಸೆಲ್ (Hydrogen fuel cell) ಬಸ್​ಗೆ ಕೇಂದ್ರ ಸಚಿವರು ಹಸಿರು ನಿಶಾನೆ ತೋರಲಿದ್ದಾರೆ. ಇಂಡಿಯನ್ ಆಯಿಲ್ 15 ಫ್ಯೂಯಲ್ ಸೆಲ್ ಬಸ್ ಗಳ ಪ್ರಯೋಗಗಳನ್ನು ನಡೆಸಲಿದೆ.

VISTARANEWS.COM


on

Indian Oil
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಇಂಧನ ಕೋಶ ಚಾಲಿತ ಬಸ್​ (Hydrogen fuel cell Bus) ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ನಿಗಿದತ ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ನಿಂದ ಚಾಲಿತ 15 ಬಸ್ ಗಳ ಕಾರ್ಯಾಚರಣೆ ನಡೆಯಲಿದೆ. ಇಂಡಿಯನ್ ಆಯಿಲ್ ಸಂಸ್ಥೆಯು ಪ್ರಯೋಗಾರ್ಥವಾಗಿ ಈ ಬಸ್​ಗಳ ಸಂಚಾರವನ್ನು ನಡೆಸಲಿದೆ. ಇಂಡಿಯಾ ಗೇಟ್ ನಲ್ಲಿ ಮೊದಲ ಎರಡು ಫ್ಯೂಯಲ್ ಸೆಲ್ ಬಸ್​ಗಳಿಗೆ ಚಾಲನೆ ಸಿಗಲಿದೆ.

ಈ ಯೋಜನೆಯು ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಫ್ಯೂಯಲ್ ಸೆಲ್ ಬಸ್ ಕಾರ್ಯಾಚರಣೆಗಾಗಿ 350 ಬಾರ್ ಒತ್ತಡದಲ್ಲಿ ಗ್ರೀನ್​ ಹೈಡ್ರೋಜನ್ ಒದಗಿಸುವ ಭಾರತದ ಮೊದಲ ಯೋಜನೆಯಾಗಿದೆ. ಇಂಡಿಯನ್ ಆಯಿಲ್ ಫರಿದಾಬಾದ್​ನಲ್ಲಿರುವ ತನ್ನ ಆರ್ &ಡಿ ಕ್ಯಾಂಪಸ್​ನಲ್ಲಿ ಇಂಧನ ತುಂಬಿಸುವ ಸೌಲಭ್ಯವನ್ನು ಸ್ಥಾಪಿಸಿದೆ, ಇದು ಸೌರ ಪಿವಿ ಫಲಕಗಳನ್ನು ಬಳಸಿಕೊಂಡು ವಿದ್ಯುದ್ವಿಭಜನೆಯ ಮೂಲಕ ಉತ್ಪಾದಿಸಿದ ಹಸಿರು ಹೈಡ್ರೋಜನ್​ ಅನ್ನು ತುಂಬಿಸಲಿದೆ.

ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಉತ್ಪಾದಿಸುವ ಹಸಿರು ಹೈಡ್ರೋಜನ್ ಅನ್ನು ಕಡಿಮೆ ಇಂಗಾಲದ ಇಂಧನ ಮತ್ತು ಆಮದು ಮಾಡಲಾಗುವ ಪೆಟ್ರೋಲಿಯಂ ಇಂಧನಗಳಿಗೆ ಪರ್ಯಾಯವೆಂದು ಹೇಳಲಾಗಿದೆ . ಇದು ಭಾರತದ ಹೇರಳವಾದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ. ಪೆಟ್ರೋಲಿಯಂ ಸಂಸ್ಕರಣೆ, ರಸಗೊಬ್ಬರ ಉತ್ಪಾದನೆ ಮತ್ತು ಉಕ್ಕು ಉತ್ಪಾದನೆಯಂತಹ ಕ್ಷೇತ್ರಗಳಿಗೂ ಪೂರಕವಾಗಿದೆ.

ಇದನ್ನೂ ಓದಿ : Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್​ನ ಚಕ್ರದ​ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !

ಸಂಭಾವ್ಯ ಇಂಧನ, ಶೂನ್ಯ ಮಾಲಿನ್ಯ

ಇ-ಮೊಬಿಲಿಟಿ ಕ್ಷೇತ್ರದಲ್ಲಿ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನವು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಹೈಡ್ರೋಜನ್ ಕೋಶಗಳನ್ನು ಇಂಧನವಾಗಿ ಪರಿವರ್ತಿಸುವ ತಾಂತ್ರಿಕತೆ ಇದಾಗಿದೆ. ಇಂಧನ ಕೋಶಗಳಲ್ಲಿನ ಎಲೆಕ್ಟ್ರೋ-ರಾಸಾಯನಿಕ ಪ್ರಕ್ರಿಯೆಯು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕರೆಂಟ್​ ಮೂಲಕ ಬಸ್​ಗಳಲ್ಲಿ ಅಳವಡಿಸಿರುವ ಬ್ಯಾಟರಿಗಳನ್ನು ಚಾರ್ಜ್​ ಮಾಡಲಾಗುತ್ತದೆ. ಅದರ ಮೂಲಕ ಬಸ್​ನ ಮೋಟಾರ್​ಗೆ ಚಾಲನೆ ನೀಡಲಾಗುತ್ತದೆ.

ಬ್ಯಾಟರಿ ಚಾಲಿತ ವಾಹನಗಳಿಗೆ ಹೋಲಿಸಿದರೆ ಫ್ಯೂಯಲ್ ಸೆಲ್ ವಾಹನಗಳು ಕಡಿಮೆ ಸಮಯದಲ್ಲಿ ಇಂಧನ ತುಂಬಿಸುವ ಅನುಕೂಲಗಳನ್ನು ಹೊಂದಿವೆ. ಹೈಡ್ರೋಜನ್ ಅನಿಲವನ್ನು ಹೆಚ್ಚಿನ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ 350 ಬಾರ್​ನಲ್ಲಿ ಇರುತ್ತದೆ. ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್​ ಮಾಡಲೆಂದು ದೀರ್ಘ ಕಾಲ ನಿಲ್ಲಿಸಬೇಕಾಗುತ್ತದೆ. ಆದರೆ, ಇದರಲ್ಲಿ ಪೆಟ್ರೋಲ್​ನಂತೆಯೇ ಹೈಡ್ರೋಜನ್ ತುಂಬಿಸಬಹುದಾಗಿದೆ.

ಈ ಮೊದಲ ಎರಡು ಬಸ್ಸುಗಳು ಬಿಡುಗಡೆಯಾದ ನಂತರ, ದೀರ್ಘಕಾಲೀನ ಕಾರ್ಯಕ್ಷಮತೆ ಮತ್ತು ಬಾಳಿಕೆಯನ್ನು ಪರಿಶೀಲಿಸಲು 300,000 ಕಿಲೋಮೀಟರ್ ಸಂಚಾರ ನಡೆಸಲಿದೆ. ಇದು ಶೂನ್ಯ ಹೊರ ಸೂಸುವಿಕೆಯನ್ನು ಹೊಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Bhavani Revanna : ಭವಾನಿ ರೇವಣ್ಣರ 1.5 ಕೋಟಿಯ ಕಾರು ಯಾವುದು? ಅದರ ವಿಶೇಷತೆಯೇನು?

Bhavani Revanna: ಭವಾನಿ ರೇವಣ್ಣ ಅವರು ಸುಖಕರ ಪ್ರಯಾಣಕ್ಕೆ ಬಳಸಿದ್ದ ಕಾರಿನ ಕಿಮ್ಮತ್ತು ಏನು ಎಂಬುದ ಮಾಹಿತಿ ಇಲ್ಲಿದೆ.

VISTARANEWS.COM


on

Toyoto Vellfire
Koo

ಹಾಸನ: ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡರ ಸೊಸೆ, ಮಾಜಿ ಸಚಿವ ರೇವಣ್ಣ ಅವರ ಪತ್ನಿ, ಸಂಸದ ಪ್ರಜ್ವಲ್ ತಾಯಿ ಭವಾನಿ ರೇವಣ್ಣ (Bhavani Revanna) ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ಕಾರಿಗೆ ಗುದ್ದಿದ ಬೈಕ್​ ಸವಾರನೊಬ್ಬನಿಗೆ ಅವಾಚ್ಯ ಪದಗಳಿಂದ ಬೈಯುವ ಮೂಲಕ ಅವರು ಜನಸಾಮಾನ್ಯರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರಕರಣವನ್ನು ಸುಖಾಂತ್ಯ ಮಾಡಲು ದೊಡ್ಡಗೌಡರ ಫ್ಯಾಮಿಲಿ ಶ್ರಮ ವಹಿಸುತ್ತಿದೆ. ಏತನ್ಮಧ್ಯೆ, ಭವಾನಿ ರೇವಣ್ಣ ಅವರು ಬೈಗುಳದ ನಡುವೆ ನನ್ನ 1.5 ಕೋಟಿ ರೂಪಾಯಿಯ ಕಾರಿಗೆ ಡ್ಯಾಮೇಜ್​ ಆಗಿದೆ. ನ್ಯಾಯ ಮಾತನಾಡೋರು ರಿಪೇರಿ ಮಾಡೋದಕ್ಕೆ 50 ಲಕ್ಷ ರೂಪಾಯಿ ಕೊಡಿ ಎಂದು ಹೇಳಿದ್ದರು. ಹೀಗಾಗಿ ಇದ್ಯಾವ ಕಾರು ಎಂಬ ಕುತೂಹಲ ಮೂಡಿದೆ. ಹೀಗಾಗಿ ಭವಾನಿ ಅವರು ಪ್ರಯಾಣಿಸುತ್ತಿದ್ದ ಕಾರು ಯಾವುದು ಮತ್ತು ಅದರ ವಿಶೇಷತೆ ಏನು ಎಂಬುದನ್ನು ನೋಡೋಣ.

ಭವಾನಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಬ್ರಾಂಡ್ ನೇಮ್​ ಟೊಯೋಟಾ ವೆಲ್​ಫೈರ್ (Toyoto Vellfire)​​. ಇದು ಜಪಾನ್ ಮೂಲಕ ಟೋಯೋಟಾ ಕಂಪನಿಯು ನಿರ್ಮಿಸುವ ಕಾರು. ಜಪಾನ್​ ತಾಂತ್ರಿಕತೆಯೊಂದಿಗೆ ಟೋಯೋಟಾ ಕಂಪನಿಯು ಭಾರತದಲ್ಲಿ ಮಾರುತ್ತಿರುವ ಅತ್ಯಂತ ದುಬಾರಿ ಬೆಲೆಯ ಕಾರು. ಅಂದ ಹಾಗೆ ಬೆಂಗಳೂರಿನ ಬಿಡದಿಯಲ್ಲಿರುವ ಟೊಯೋಟಾ ಕಂಪನಿಯ ನಿರ್ಮಾಣ ಘಟಕದಲ್ಲಿಯೇ ಈ ಕಾರನ್ನು ಉತ್ಪಾದಿಸಲಾಗುತ್ತದೆ. ಫೆಬ್ರವರಿ 26, 2020 ರಂದು ಸುಮಾರು 80 ಲಕ್ಷ ರೂ.ಗಳ ಎಕ್ಸ್ ಶೋರೂಂ ಬೆಲೆಯೊಂದಿಗೆ ಮೊಟ್ಟ ಮೊದಲ ಕಾರು ಭಾರತದಲ್ಲಿ ಬಿಡುಗಡೆಯಾಗಿತ್ತು. ಇದರ ಸುಧಾರಿತ ಆವೃತ್ತಿ (ಫೇಸ್​ಲಿಫ್ಟ್​) ಸೆಪ್ಟೆಂಬರ್ 2023ರಲ್ಲಿ ಬಿಡುಗಡೆ ಮಾಡಲಾಗಿದೆ.

ಸೆಲೆಬ್ರಿಟಿಗಳ ಕಾರು

ಇದು ಎಂಪಿವಿ (ಮಲ್ಟಿ ಪರ್ಪಸ್​ ವೆಹಿಕಲ್​) ಮಾಡೆಲ್​ನ ಕಾರು. ಟೊಯೊಟಾದ ಇನ್ನೋವಾ ಕೂಡ ಎಂಪಿವಿ ವರ್ಗಕ್ಕೆ ಸೇರಿದ ಕಾರು. ಆದರೆ, ಐಷಾರಾಮಿ ಫೀಚರ್​ಗಳು ಹಾಗೂ ವಿಶಾಲವಾದ ಜಾಗ ಹಾಗೂ ಸುಖಮಯ ಪ್ರಯಾಣದ ಕಾರಣಕ್ಕೆ ವೆಲ್​ಫೈರ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಜತೆಗೆ ಬೆಲೆಯೂ ಹೆಚ್ಚು. ಹೀಗಾಗಿ ಇದನ್ನು ಹೆಚ್ಚಾಗಿ ಸೆಲೆಬ್ರಿಟಿಗಳೇ ಖರೀದಿ ಮಾಡುತ್ತಿದ್ದಾರೆ. ಬಾಲಿವುಡ್​ ತಾರೆಯರು ಸೇರಿದಂತೆ ಭಾರತದ ಶ್ರೀಮಂತರು ಈ ಕಾರಿನ ಟಾರ್ಗೆಟ್ ಕಸ್ಟಮರ್ಸ್​​. ರಾಜಕಾರಣಿಗಳ ಕುಟುಂಬದ ಸೊಸೆಯಾಗಿರುವ ಭವಾನಿ ಅವರು ಅರ್ಹವಾಗಿ ಇದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ.

ಹೊಸ ಟೊಯೊಟಾ ವೆಲ್ಫೈರ್ ವಿನ್ಯಾಸ

ಇತ್ತೀಚೆಗೆ ಬಿಡುಗಡೆಯಾದ ವೆಲ್ ಫೈರ್ ಬಹುತೇಕ ಹಳೆಯ ನೋಟವನ್ನೇ ಉಳಿಸಿಕೊಂಡಿದೆ ಅಂದರೇ ಒಂದು ರೀತಿ ಸಣ್ಣ ವ್ಯಾನ್ ಮಾದರಿಯ ಐಷಾರಾಮಿ ನೋಟ. ಟೊಯೊಟಾ ಮುಂಭಾಗದಲ್ಲಿ ಆರು-ಸ್ಲಾಟ್ ಗ್ರಿಲ್ ಗಳಿದ್ದು. ಮಧ್ಯದಲ್ಲಿ ಟೊಯೋಟಾ ಲೋಗೋವನ್ನು ಅಳವಡಿಸಲಾಗಿದೆ. ಇದು ಸ್ಪ್ಲಿಟ್ ಹೆಡ್ ಲ್ಯಾಂಪ್ ಗಳಿಂದ ಹೊಂದಿದೆ. ಹೆಡ್ ಲ್ಯಾಂಪ್ ಗಳ ಕೆಳಭಾಗದಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳಿವೆ. ಯು-ಆಕಾರದ ಕ್ರೋಮ್ ಸ್ಟ್ರಿಪ್ ಎರಡು ಹೆಡ್ ಲ್ಯಾಂಪ್ ಗಳನ್ನು ಸಂಪರ್ಕಿಸುವ ಬಂಪರ್ ನಡುವೆ ಸಾಗಿದೆ.

ವೆಲ್​ಫೈರ್​​ನ ಗ್ಲಾಸ್ ಹೌಸ್ ಕ್ರೋಮ್ ಔಟ್ ಲೈನ್ ಹೊಂದಿದೆ. ಹಿಂಭಾಗದಲ್ಲಿ ವಿ-ಆಕಾರದ ಟೈಲ್ ಲ್ಯಾಂಪ್ ಆವರಣವನ್ನು ಹೊಂದಿದ್ದು, ವಿಸ್ತ್ರತ ಕ್ರೋಮ್ ಟ್ರಿಮ್ ಇದೆ. ವೆಲ್ಫೈರ್ ಬ್ಯಾಡ್ಜಿಂಗ್ ಮತ್ತು ಮಧ್ಯದಲ್ಲಿ ದೊಡ್ಡ ಟೊಯೊಟಾ ಲೋಗೊವನ್ನು ಹೊಂದಿದೆ.

ಇಂಟೀರಿಯರ್ ವಿಶೇಷತೆ

ಹೊಸ ವೆಲ್ ಫೈರ್​ನಲ್ಲಿ ಕಡಿಮೆ ಬಟನ್ ಇರುವ ಮತ್ತು ಅತ್ಯಂತ ಸರಳವಾಗಿ ಕಾಣುವ ಡ್ಯಾಶ್ ಬೋರ್ಡ್ ನೀಡಲಾಗಿದೆ. ಬಹುತೇಕ ಕೆಲಸವನ್ನು ದೊಡ್ಡ, 14-ಇಂಚಿನ ಟಚ್ ಸ್ಕ್ರೀನ್ ನಲ್ಲಿ ಅಳವಡಿಸಲಾಗಿದೆ. ಹೆಚ್ಚು ಆರಾಮದಾಯಕ ಸೀಟ್ ವಿನ್ಯಾಸವನ್ನು ಇದು ಹೊಂದಿದೆ. ದೊಡ್ಡ ಓವರ್ ಹೆಡ್ ಕನ್ಸೋಲ್, ಹಲವು ಎಸಿ ವೆಂಟ್ ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಪುಲ್-ಡೌನ್ ಸನ್ ಶೇಡ್​ ಈ ಕಾರಿನಲ್ಲಿದೆ.

ಟಾಪ್ ಎಂಡ್​ ವೆಲ್​ಫೈರ್​ ವಿಐಪಿ ಟ್ರಿಮ್​ನಲ್ಲಿ ಎಕ್ಸಿಕ್ಯೂಟಿವ್ ಲಾಂಜ್ ಪ್ಯಾಕೇಜ್​ ಜತೆ ನೀಡಲಾಗುತ್ತದೆ. ಈ ಕಾರಿನ ಎರಡನೇ ಸಾಲಿನಲ್ಲಿ ಎರಡು ಕ್ಯಾಪ್ಟನ್ ಸೀಟ್​ಗಳು ಮಾತ್ರ ಇರುತ್ತವೆ. ಪ್ರತ್ಯೇಕ ಕಂಟ್ರೋಲ್​ ಯೂನಿಟ್​ ಕೂಡ ಇದೆ. ಇದು ಹಿಂಬದಿ ಪ್ರಯಾಣಿಕರಿಗೆ ಮೀಡಿಯಾ ಮತ್ತು ಕ್ಲೈಮೇಟ್​ ಕಂಟ್ರೋಲ್​ ಸೆಟ್ಟಿಂಗ್​​ಗಳನ್ನು ಮತ್ತು ಸನ್​​ಶೇಡ್​ಗಳನ್ನು ನೀಡುತ್ತದೆ.

ಇದನ್ನೂ ಓದಿ : Bhavani Revanna : ಸಾಯೋಕೆ ನನ್ನ 1.5 ಕೋಟಿ ಕಾರೇ ಬೇಕಾ?; ಭವಾನಿ ರೇವಣ್ಣ ದರ್ಪಕ್ಕೆ ಎಲ್ಲೆಡೆ ಆಕ್ರೋಶ

ಹೆಡ್ಸ್-ಅಪ್ ಡಿಸ್​ಪ್ಲೇ ವೈರ್​ಲೆಸ್​ ಚಾರ್ಜರ್, ಎರಡನೇ ಸಾಲಿನ ಸೀಟುಗಳಿಗೆ ಒಟ್ಟೋಮನ್ (ಹೈ ಟ್ರಿಮ್) ಮತ್ತು ಎಂಟು ರೀತಿಯಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತಿತರ ವೈಶಿಷ್ಟ್ಯಗಳನ್ನು ನೀಡಲಾಗಿದೆ.. ಟೊಯೊಟಾ 60 ಕ್ಕೂ ಹೆಚ್ಚು ಕನೆಕ್ಟೆಡ್​ ವಿಶೇಷತೆಗಳನ್ನು ಹೊಂದಿದೆ.\

ಸಿಕ್ಕಾಪಟ್ಟೆ ಸೇಫ್​ ಕಾರು

ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ವೆಲ್​ಫೈರ್​ ಎಂಪಿವಿ ಟೊಯೊಟಾ ಸೇಫ್ಟಿ ಸೆನ್ಸ್ ಅಡಾಸ್​​ ಸಿಸ್ಟಮ್ ಅನ್ನು ಹೊಂದಿದೆ. ಇದು ಅಪಘಾತದ ಮೊದಲಿನ ಸುರಕ್ಷತಾ ವ್ಯವಸ್ಥೆ, ಲೇನ್ ಟ್ರೇಸ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್​ನೊಂದಿಗೆ ಬರುತ್ತದೆ. ಇದಲ್ಲದೆ, ಇದು ಆರು ಏರ್ ಬ್ಯಾಗ್​​ಗಳು, ಸ್ಟೆಬಿಲಿಟಿ ಕಂಟ್ರೋಲ್, ಪಾರ್ಕ್ ಅಸಿಸ್ಟ್, ಹಿಲ್ ಅಸಿಸ್ಟ್ ಕಂಟ್ರೋಲ್ ಕೂಡ ಪಡೆಯುತ್ತದೆ.

ಎಂಜಿನ್ ಪವರ್​ ಏನಿದೆ?

ವೆಲ್ ಫೈರ್ ಟೊಯೊಟಾದ ಮಾಡ್ಯುಲರ್ ಟಿಎನ್​​ಜಿಎ-ಕೆ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಾಣಗೊಂಡಿದೆ. ಇದು 4,995 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,950 ಎಂಎಂ ಎತ್ತರ ಮತ್ತು 3,000 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ವೆಲ್ ಫೈರ್ 193 ಬಿಹೆಚ್​​ಪಿ, 240 ಎನ್ಎಂ ಪವರ್​ ಸೃಷ್ಟಿಸುವ 2.5-ಲೀಟರ್​ನ ನಾಲ್ಕು ಸಿಲಿಂಡರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಹೊಂದಿದೆ. ಇದರಲ್ಲಿ ಇ ಸಿವಿಟಿ ಗೇರ್​ಬಾಕ್ಸ್​ ಇದೆ. ವೆಲ್​ಫೈರ್​ ಪ್ರತಿ ಲೀಟರ್​ ಪೆಟ್ರೋಲ್​ಗೆ 19.28 ಕಿ.ಮೀ ಮೈಲೇಜ್ ನೀಡುತ್ತದೆ.

ಒಂದೂವರೆ ಕೋಟಿ ಬೆಲೆ ಇರೋದು ಹೌದಾ?

ಖಂಡಿತಾ. ಭವಾನಿ ರೇವಣ್ಣ ಅವರು ಕೋಪದ ಭರದಲ್ಲಿ ಕೆಟ್ಟದಾಗಿ ಬೈದಿರಬಹುದು. ಆದರೆ, ರೇಟ್​ ಬಗ್ಗೆ ಸುಳ್ಳು ಹೇಳಿಲ್ಲ. ಈ ಕಾರಿನ ಬೆಲೆ 1. 5 ಕೋಟಿ ರೂಪಾಯಿಗಿಂತಲೂ ಹೆಚ್ಚಿದೆ. ಕಾರು ಕೇವಲ 2 ವೇರಿಯೆಂಟ್​ಗಳಲ್ಲಿ ಮಾತ್ರ ಲಭ್ಯವಿದೆ. ಬೇಸ್​ ಮಾಡೆಲ್​ ಹೈ (hi) ಎಂಬ ಹೆಸರಿನೊಂದಿಗೆ ಲಭ್ಯವಿದ್ದರೆ, ಇನ್ನೊಂದು ಮಾಡೆಲ್​ ವಿಐಪಿ ಎಕ್ಸೆಕ್ಯುಟಿವ್​ ಲಾಂಜ್​ (VIP Executive Lounge) ರೂಪದಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಬೇಸ್​ ಮಾಡೆಲ್​ ಕಾರಿನ ಆನ್​ ರೋಡ್ ಬೆಲೆ 1,48,58,511 ರೂಪಾಯಿ (1.48 ಕೋಟಿ). ಇನ್ನೊಂದು ವೇರಿಯೆಂಟ್​ಗೆ 1,60,94,733 ಕೋಟಿ ರೂಪಾಯಿ. ಅಂದರೆ ಭವಾನಿ ರೇವಣ್ಣ ಅವರು ಹೇಳಿದ್ದಕ್ಕಿಂತ ಇನ್ನೂ 10 ಲಕ್ಷ ರೂಪಾಯಿ ಅಧಿಕ. ಇಲ್ಲಿಗೆ ಮುಗಿದಿಲ್ಲ. 1.5 ಕೋಟಿ ಇದ್ದ ತಕ್ಷಣವೇ ಈ ಕಾರು ತಗೊಂಡು ಬರೋದಿಕ್ಕೆ ಆಗುವುದಿಲ್ಲ. ಇತ್ತೀಚಿನ ಮಾಹಿತಿ ಪ್ರಕಾರ ಈ ಕಾರಿನ ವೇಟಿಂಗ್ ಪಿರಿಯೆಡ್​ (ಕಾಯುವಿಕೆಯ ಅವಧಿ) 14 ತಿಂಗಳು. ಅಂದರೆ, ಕಾರು ಬುಕ್ ಮಾಡಿ 1 ವರ್ಷಕ್ಕೂ ಅಧಿಕ ದಿನಗಳು ಕಾಯಬೇಕು.

Continue Reading

ಆಟೋಮೊಬೈಲ್

ಮಾರುತಿ ಸುಜುಕಿ ಕಾರುಗಳನ್ನು ಈಗ್ಲೇ ಖರೀದಿಸಿ; ಜನವರಿಯಿಂದ ಆಗಲಿವೆ ತುಟ್ಟಿ!

Maruti Suzuki: ಮಾರುತಿ ಸುಜುಕಿ ಕಂಪನಿಯು 2024 ಜನವರಿಯಿಂದ ತನ್ನ ಎಲ್ಲ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

VISTARANEWS.COM


on

Maruti suzuki cars price will be hike in January 2024
Koo

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ (Maruti Suzuki) ಮುಂದಿನ ವರ್ಷದಿಂದ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವ (Car Price Hike) ನಿರ್ಧಾರ ಮಾಡಿದೆ. ಹೆಚ್ಚುತ್ತಿರುವ ಹಣದುಬ್ಬರದ (Inflation) ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಪನಿಯು ಸೋಮವಾರ ಷೇರು ಮಾರುಕಟ್ಟೆಗೆ ತಿಳಿಸಿದೆ. ಹಾಗಿದ್ದೂ, ಎಷ್ಟರ ಮಟ್ಟಿಗೆ ದರ ಏರಿಕೆಯಾಗಲಿದೆ ನಿಖರ ಮಾಹಿತಿಯನ್ನು ಕಂಪನಿಯೇನೂ ನೀಡಿಲ್ಲ. ಆದರೆ, ಎಲ್ಲ ಮಾದರಿ ಕಾರುಗಳ ಬೆಲೆ ಏರಿಕೆಯಾಗಲಿದೆ.

ಒಟ್ಟಾರೆ ಹಣದುಬ್ಬರ ಮತ್ತು ಸರಕು ಬೆಲೆಗಳು ಹೆಚ್ಚುತ್ತಿರುವ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 2024ರಿಂದ ಜನವರಿಯಿಂದ ಕಾರುಗಳ ಬೆಲೆಯನ್ನು ಹೆಚ್ಚಿಸುವ ಕುರಿತು ಕಂಪನಿ ಪ್ಲ್ಯಾನ್ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ, ಕಂಪನಿಯು ಹೆಚ್ಚುತ್ತಿರುವ ವೆಚ್ಚವನ್ನು ತಡೆಯುವ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದೆ.

ಮಾರುತಿ ಸುಜುಕಿ ತನ್ನ ಅತಿ ಹೆಚ್ಚು ಮಾಸಿಕ ಮಾರಾಟವನ್ನು ಅಕ್ಟೋಬರ್‌ನಲ್ಲಿ 1.99 ಲಕ್ಷ ಯುನಿಟ್‌ಗಳಲ್ಲಿ ದಾಖಲಿಸಿದೆ. ಇದು ವರ್ಷದಿಂದ ವರ್ಷಕ್ಕೆ ಶೇ.19 ರಷ್ಟು ಬೆಳವಣಿಗೆಯಾಗಿದೆ. ಏತನ್ಮಧ್ಯೆ, ಕಂಪನಿಯ ನಿವ್ವಳ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.80.3 ರಷ್ಟು ಏರಿಕೆಯಾಗಿ 3,716.5 ಕೋಟಿ ರೂಪಾಯಿಗಳಿಗೆ ತಲುಪಿದೆ. ಉತ್ತಮ ಮಾರಾಟ, ಸರಕುಗಳ ಬೆಲೆಗಳನ್ನು ಕಡಿಮೆ ಮತ್ತು ವೆಚ್ಚ ಕಡಿತದ ಪ್ರಯತ್ನಗಳ ಫಲವಾಗಿ ಆದಾಯ ಹೆಚ್ಚಾಗಿದೆ.

ಮುಂದಿನ 2-3 ವರ್ಷಗಳಲ್ಲಿ ಹೆಚ್ಚುತ್ತಿರುವ ಜನರ ಆದಾಯದ ಮಟ್ಟಗಳು ಮತ್ತು ಬೆಳೆಯುತ್ತಿರುವ ಆರ್ಥಿಕತೆಯ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ, ಕೈಗೆಟುಕುವ ಸಣ್ಣ ಕಾರುಗಳ ಮತ್ತೆ ಪ್ರಾಬಲ್ಯ ಮೆರೆಯುವ ನಿರೀಕ್ಷೆ ಇದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿಕೊಂಡಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಹೆಚ್ಚಿನ ಮಾರಾಟದ ಪ್ರಮಾಣ ಮತ್ತು ಉತ್ಪನ್ನ ಮಿಶ್ರಣದ ಕಾರಣದಿಂದಾಗಿ ಕಂಪನಿಯು ಹಿಂದಿನ ಹಣಕಾಸು ವರ್ಷದ ಅದೇ ತ್ರೈಮಾಸಿಕದಲ್ಲಿ 28,543.50 ಕೋಟಿ ರೂ.ಗಳ ವಿರುದ್ಧ 35,535.1 ಕೋಟಿ ರೂ.ಗಳ ನಿವ್ವಳ ಮಾರಾಟವನ್ನು ದಾಖಲಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Maruti Suzuki: ಇನ್‌ಕಮ್‌ ಟ್ಯಾಕ್ಸ್‌ ನೋಟೀಸ್‌, ಮಾರುತಿ ಸುಜುಕಿ ಷೇರು ಬೆಲೆ 2% ಕುಸಿತ

Continue Reading

ಆಟೋಮೊಬೈಲ್

Royal Enfield Himalayan : ಭರ್ಜರಿ ಲುಕ್​ನ ಎನ್​ಫೀಲ್ಡ್​ ಹಿಮಾಲಯನ್​ ಬೆಲೆ ಬಹಿರಂಗ

ರಾಯಲ್​ ಎನ್​ಫೀಲ್ಡ್​ ಬೈಕಿನ (Royal Enfield Himalayan) ಬೆಲೆಯನ್ನು ಕಂಪನಿಯು ಘೋಷಿಸಿದ್ದು ನಾನಾ ವೇರಿಯೆಂಟ್​ಗಳ ಮೂಲಕ ಮಾರಾಟ ಮಾಡಿದೆ.

VISTARANEWS.COM


on

Royal Enfield Himalayan
Koo

ಬೆಂಗಳೂರು : ಇತ್ತೀಚೆಗೆ ಅನಾವರಣಗೊಂಡ ರಾಯಲ್ ಎನ್ ಫೀಲ್ಡ್ (royal Enfield bike price) ಹಿಮಾಲಯನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರ ರೂ.2.69 ಲಕ್ಷ ರೂಪಾಯಿಗಳಾಗಿವೆ. ಡಿಸೆಂಬರ್ 31ರವರೆಗೆ ಈ ಬೆಲೆಯಲ್ಲಿ ಬೈಕ್ ದೊರೆಯಲಿದೆ. ಹಿಮಾಲಯನ್ 450 ಸರಣಿಯ ಬೇಸ್ ವೇರಿಯೆಂಟ್​ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 2.74 ಲಕ್ಷ ರೂಪಾಯಿಗಳಾದರೆ, ಪಾಸ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.79 ಲಕ್ಷ ರೂಪಾಯಿಗಳಾಗಿದೆ. ಬೈಕ್​ಗಳು ಏಕ ರೂಪದಲ್ಲಿ ಇರುವ ಹೊರತಾಗಿಯೂ ಪ್ರತಿ ವೇರಿಯೆಂಟ್​ ವಿಭಿನ್ನ ಬಣ್ಣಗಳನ್ನು ಹೊಂದಿದೆ. ಅಂದ ಹಾಗೆ ಈ ಬೆಲೆಗಳು ಪರಿಚಯಾತ್ಮಕ ಬೆಲೆಯಾಗಿದೆ.

ಈ ಮಾಡೆಲ್​ಗಳು ಗ್ರೌಂಡ್ ಲೆವೆಲ್​ ಅಭಿವೃದ್ಧಿಯಾಗಿದ್ದು. ರಾಯಲ್​ ಎನ್ ಫೀಲ್ಡ್ ನಿಂದ ಹೊಸ ಸರಣಿಯ ಉತ್ಪನ್ನಗಳ ಪ್ರಾರಂಭವನ್ನು ಸೂಚಿಸುತ್ತದೆ. ಟ್ವಿನ್ ಸ್ಪಾರ್ ಫ್ರೇಮ್ ಹೊಂದಿರುವ ಈ ಬೈಕ್ ಅನ್ನು ಹೊಸದಾಗಿ ಅಭಿವೃದ್ಧಿಪಡಿಸಿದ ಶೆರ್ಪಾ 450 ಎಂಜಿನ್ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾಗಿದೆ.

ಇದನ್ನೂ ಓದಿ :

ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಹಿಮಾಲಯನ್ ನ 452 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್​ ಹೊಂದಿದೆ ಈ ಎಂಜಿನ್ 39.4 ಬಿ ಹೆಚ್ ಪಿ ಪವರ್ ಮತ್ತು 40 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಂಜಿನ್​ ಸಾಮರ್ಥ್ಯ ಎಷ್ಟು?

ಹಿಮಾಲಯನ್ 450 ಬೈಕಿನ ಸಸ್ಪೆಂಷನ್ ಸೆಟಪ್ ಮುಂಭಾಗದಲ್ಲಿ ಯುಎಸ್ ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದೆ. ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಈ ಬೈಕ್ 230 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಸೀಟ್ ಎತ್ತರವನ್ನು ಸರಿಹೊಂದಿಸಬಹುದು, 825 ಎಂಎಂ ನಿಂದ 845 ಎಂಎಂ ವರೆಗೆ ಏರಿಸಲು ಸಾಧ್ಯ. 805 ಎಂಎಂ ಸೀಟ್ ಅಕ್ಸೆಸರಿಯಾಗಿ ಲಭ್ಯವಿದೆ. ರಾಯಲ್ ಎನ್ ಫೀಲ್ಡ್ ಅಡ್ವೆಂಚರ್ ರೇಂಜ್ ಸೇರಿದಂತೆ ಅಡ್ವೆಂಚರ್ ಬೈಕ್ ಗಾಗಿ ವಿವಿಧ ಅಕ್ಸೆಸರಿಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಎತ್ತರದ ಸೀಟ್​ ಹಾಗೂ ಸುಧಾರಿತ ರಕ್ಷಣಾ ರ್ಯಾಲಿ ಕಿಟ್ ಆಯ್ಕೆ ನೀಡಲಾಗಿದೆ.

ಟ್ಯೂಬ್​ ಟಯರ್​ಗಳು

ಹಿಮಾಲಯನ್ 450 ಬೈಕ್ 21 ಇಂಚಿನ ಫ್ರಂಟ್ ಮತ್ತು 17 ಇಂಚಿನ ರಿಯರ್ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಟ್ಯೂಬ್ ಮಾದರಿಯ ಟೈರ್ ಗಳನ್ನು ಹೊಂದಿದೆ. ರಾಯಲ್ ಎನ್ ಫೀಲ್ಡ್ ಮುಂದಿನ ವರ್ಷ ಟ್ಯೂಬ್ ಲೆಸ್ ಟೈರ್ ಗಳನ್ನು ಸ್ವಲ್ಪ ಹೆಚ್ಚಿನ ಬೆಲೆಗೆ ಪರಿಚಯಿಸುವ ಯೋಜನೆಯನ್ನು ಹೊಂದಿದೆ. ಹೊಸ ಹಿಮಾಲಯನ್ ಬೈಕಿನ ವಿತರಣೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕೆಟಿಎಂ 390 ಅಡ್ವೆಂಚರ್, ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

ಎನ್​ಫೀಲ್ಡ್ ಶಾಟ್​ಗನ್​ 650 ಅನಾವರಣ

ರಾಯಲ್ ಎನ್ ಫೀಲ್ಡ್ ಕಂಪನಿಯು 2023ರ ಮೋಟೊವರ್ಸ್ ನಲ್ಲಿ ಶಾಟ್ ಗನ್ 650 ಬೈಕ್ ಅನ್ನು ಅನಾವರಣಗೊಳಿಸಿದೆ. ಈಗಾಗಲೇ ಇಂಟರ್ ಸೆಪ್ಟರ್, ಕಾಂಟಿನೆಂಟಲ್ ಜಿಟಿ ಮತ್ತು ಸೂಪರ್ ಮೆಟಿಯೋರ್ ಬೈಕುಗಳನ್ನು ಒಳಗೊಂಡಿರುವ 650 ಸಿಸಿ ಸರಣಿಯನ್ನು ವಿಸ್ತರಿಸಿದೆ.

ಈ ಬೈಕ್ ಬುಲೆಟ್ 350 ಬೈಕಿನಲ್ಲಿ ಕೈಯಿಂದ ಮಾಡಿದ ಪಿನ್ ಸ್ಟ್ರೈಪಿಂಗ್ ನಂತೆಯೇ. ವೈಶಿಷ್ಟ್ಯ ಹೆಚ್ಚಿಸಲು ಕೈಯಿಂದ ಬಣ್ಣ ಬಳಿಯಲಾಗಿದೆ. ವಿಶೇಷವೆಂದರೆ, ಎಂಜಿನ್ ಕೇಸಿಂಗ್ ಅನ್ನು ಹೊಳಪುಳ್ಳ ಕಪ್ಪು ಫಿನಿಶ್ ನಲ್ಲಿ ನೀಡಲಾಗಿದೆ. ಇದು ರಾಯಲ್ ಎನ್ ಫೀಲ್ಡ್ ನಲ್ಲಿ ಸಿಗುವ ಹೊಸ ವಿನ್ಯಾಸವಾಗಿದೆ.

ವಿಶೇಷ ಆವೃತ್ತಿಯ ಶಾಟ್ ಗನ್ 650 ಮೋಟಾರ್ ವರ್ಸ್ ಎಡಿಷನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.4.25 ಲಕ್ಷಗಳಾಗಿದೆ. 2024ರ ಜನವರಿಯಿಂದ ಈ ಬೈಕಿನ ಡೆಲಿವರಿ ಆರಂಭವಾಗಲಿದೆ. ಈ ಬೆಲೆಯನ್ನು ಒಳಗೊಂಡಂತೆ, ಈ ಬೈಕಿನಲ್ಲಿ ಬಾರ್-ಎಂಡ್ ಮಿರರ್ ಗಳು ಮತ್ತು ಎಲ್ ಇಡಿ ಟರ್ನ್ ಇಂಡಿಕೇಟರ್ ಗಳಂತಹ ಆಯ್ದ ನೈಜ ಬಿಡಿಭಾಗಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ, ಸೀಮಿತ ಆವೃತ್ತಿಯ ಮೋಟಾರ್ ಸೈಕಲ್ ವಿಸ್ತರಿತ ವಾರಂಟಿ ಸೇವೆಯನ್ನು ಹೊಂದಿರುತ್ತದೆ.

Continue Reading

ಆಟೋಮೊಬೈಲ್

ಭಾರತದಲ್ಲಿ ಫ್ಯಾಕ್ಟರಿ ಆರಂಭಿಸಲು ಸಿದ್ಧ, ಆದ್ರೆ ಒಂದ್ ಕಂಡೀಷನ್ ಎಂದ ಟೆಸ್ಲಾ!

Tesla: ಭಾರತದಲ್ಲಿ ಫ್ಯಾಕ್ಟರಿ ಆರಂಭಿಸುವ ಸಂಬಂಧ ಭಾರತ ಸರ್ಕಾರ ಮತ್ತು ಟೆಸ್ಲಾ ಕಂಪನಿಯ ಮಧ್ಯೆ ಒಪ್ಪಂದವು ಅಂತಿಮ ಹಂತಕ್ಕೆ ತಲುಪಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

VISTARANEWS.COM


on

Tesla is ready to start a factory in India, but it has one condition
Koo

ನವದೆಹಲಿ: ಎಲಾನ್ ಮಸ್ಕ್ (Elon Musk) ನೇತೃತ್ವದ ಟೆಸ್ಲಾ ಕಂಪನಿ (Tesla Company) ಮುಂದಿನ ವರ್ಷದಿಂದ ಭಾರತದಲ್ಲಿ ಕಾರ್ಯಾಚಣೆ (India Operation) ನಡೆಸಲಿದೆ. ಈ ಬಗ್ಗೆ ಭಾರತ ಸರ್ಕಾರ (Indian Government) ಮತ್ತು ಕಂಪನಿ ನಡುವಿನ ಒಪ್ಪಂದವು ಅಂತಿಮ ಹಂತದಲ್ಲಿದೆ. ಹಾಗಿದ್ದೂ, ಟೆಸ್ಲಾ ಕಂಪನಿ ಷರತ್ತೊಂದನ್ನು ವಿಧಿಸಿದೆ ಎಂದು ತಿಳಿದು ಬಂದಿದೆ. ತನ್ನ ವಾಹನಗಳ ಮೇಲಿನ ಆಮದು ಸುಂಕವನ್ನು (import duty) ಮೊದಲ ಎರಡು ವರ್ಷಗಳ ಕಾರ್ಯಾಚರಣೆಗೆ ಶೇ.15 ಕಡಿತಗೊಳಿಸಿದರೆ ಭಾರತದಲ್ಲಿ ಕಾರ್ಖಾನೆಯನ್ನು (Factory in India) ಸ್ಥಾಪಿಸಲು 2 ಶತಕೋಟಿ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಎಲೆಕ್ಟ್ರಿಕ್ ವಾಹನಗಳಗೆ ಸಂಬಂಧಿಸಿದಂತೆ ಭಾರತವು ಹೊಸ ನೀತಿಯನ್ನು ರೂಪಿಸುತ್ತಿದೆ. ಇದರ ಪ್ರಕಾರ, 40 ಸಾವಿರ ಡಾಲರ್ ಮೇಲ್ಪಟ್ಟ ಇವಿ ಕಾರುಗಳ ಮೇಲಿನ ಆಮದು ಸಂಕವನ್ನು ಶೇ.100 ಬದಲಿಗೆ ಶೇ.15ರಷ್ಟು ಇಳಿಸಲಾಗುತ್ತದೆ ಮತ್ತು ಸ್ಥಳೀಯವಾಗಿ ನಿರ್ಮಾಣದ ಬದ್ಧತೆಯನ್ನು ತೋರುವ ಕಂಪನಿಗಳಿಗೆ ಶೇ.70ರಷ್ಟು ಕಡಿಮೆ ಮಾಡುವ ನೀತಿಯನ್ನು ಒಳಗೊಳ್ಳಲಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಎಲಾನ್ ಮಸ್ಕ್ ನೇತೃತ್ವದ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಟೆಸ್ಲಾ ಕಂಪನಿಯು, ಸರ್ಕಾರವು 12,000 ವಾಹನಗಳಿಗೆ ಕಡಿಮೆ ಸುಂಕವನ್ನು ಅನುಮೋದಿಸಿದರೆ 500 ಮಿಲಿಯನ್ ಡಾಲರ್ ಮತ್ತು 30,000 ವಾಹನಗಳಿಗೆ ರಿಯಾಯಿತಿ ನೀಡಿದರೆ 2 ಬಿಲಿಯನ್ ಡಾಲರ್‌ವರೆಗೆ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.

2 ಶತಕೋಟಿ ಡಾಲರ್ ಹೂಡಿಕೆ ಮಾಡುವ ಟೆಸ್ಲಾ ಪ್ರಸ್ತಾವನೆಯ ಕಾರ್ಯಸಾಧ್ಯತೆಯನ್ನು ಸರ್ಕಾರವು ಪರಿಶೀಲಿಸುತ್ತಿದೆ. ಆದರೆ ಟೆಸ್ಲಾದ ಪ್ರಸ್ತಾಪಕ್ಕೆ ಹೋಲಿಸಿದರೆ ಕಡಿಮೆ ಸುಂಕದ ಮೇಲೆ ಆಮದು ಮಾಡಿಕೊಳ್ಳುವ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಯಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ಬಗ್ಗೆ ಟೆಸ್ಲಾ ಕಂಪನಿಯಾಗಲಿ ಅಥವಾ ಸಂಬಂಧಿ ಕೇಂದ್ರ ಸರ್ಕಾರದ ಇಲಾಖೆಗಳಾಗಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ ರಾಜ್ಯದಲ್ಲಿ ಫ್ಯಾಕ್ಟರಿ?

ಅಮೆರಿಕ ನಿರ್ಮಿತ ಟೆಸ್ಲಾ ಕಾರುಗಳನ್ನು (Tesla Car) ಭಾರತೀಯ ಮಾರುಕಟ್ಟೆಗೆ (Indian Market) ತರುವ ಸಂಬಂಧ ಟೆಸ್ಲಾ ಕಂಪನಿ ಮತ್ತು ಭಾರತೀಯ ಸರ್ಕಾರವು (Indian Government) ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮುಂದಿನ ವರ್ಷ ಟೆಸ್ಲಾ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ ಬ್ಲೂಮ್‌ಬರ್ಗ್ ತಿಳಿಸಿದೆ. 2024ರಲ್ಲಿ ಟೆಸ್ಲಾ ಕಂಪನಿ ಭಾರತದಲ್ಲಿ ಫ್ಯಾಕ್ಟರಿ (Tesla Factory) ಕೂಡ ಆರಂಭಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಟೆಸ್ಲಾ ಕಂಪನಿ ಭಾರತಕ್ಕೆ ಎಂಟ್ರಿ ಕೊಡಲಿದೆ ಎನ್ನುವ ಸುದ್ದಿಗಳು ಮೊದಲಿಗೆ ಹೊರ ಬಂದಾಗಲೇ ಕರ್ನಾಟಕದಲ್ಲಿ ಫ್ಯಾಕ್ಟರಿ ತೆರೆಯಬಹುದು ಎಂದು ಹೇಳಲಾಗಿತ್ತು. ಆದರೆ, ಈಗ ಕಂಪನಿಯ ಯೋಜನೆಗಳು ಬದಲಾಗಿವೆ.

ಭಾರತ ಸರ್ಕಾರ ಮತ್ತು ಟೆಸ್ಲಾ ಕಂಪನಿ ಒಪ್ಪಂದವನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿವೆ. ಈ ಒಪ್ಪಂದ ಅನ್ವಯ ಟೆಸ್ಲಾ ಕಂಪನಿಯ ಅಮೆರಿಕದಲ್ಲಿ ನಿರ್ಮಿತ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. ಹಾಗೆಯೇ, ಮುಂದಿನ ವರ್ಷ ಭಾರತದಲ್ಲಿ ಫ್ಯಾಕ್ಟರಿ ಕೂಡ ಆರಂಭಿಸಲಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Tesla Inc: ಟೆಸ್ಲಾ ಕಂಪನಿಗೆ ಭಾರತೀಯ ಮೂಲದ ವೈಭವ್ ತನೇಜಾ ಹೊಸ ಸಿಎಫ್ಒ

Continue Reading
Advertisement
murder case in Bengaluru
ಕರ್ನಾಟಕ52 seconds ago

Murder Case : ಸ್ನೇಹಿತನ ಹಣ ಕೊಡಿಸಿ ಕಿರಿಕ್ ಮಾಡಿಕೊಂಡು ಹೆಣವಾದ ಯುವಕ!

Government Job Vistara Exclusive
ಉದ್ಯೋಗ20 mins ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

danish
ಕ್ರಿಕೆಟ್25 mins ago

Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

Snehith Gowda Became Villain In Bigg Boss Kannada in rakshasa task
ಬಿಗ್ ಬಾಸ್28 mins ago

BBK SEASON 10: ನ್ಯಾಯವಾಗಿ ಆಡೋಕ್‌ ಬಂದಿಲ್ಲ ಅಂದ್ರೆ ಹೋಗ್ತಿರ್ಬೇಕು; ಸ್ನೇಹಿತ್‌ ವಿರುದ್ಧ ರಕ್ಕಸರು ಉರಿ ಉರಿ!

pranab mukherjee and rahul gandhi
ದೇಶ28 mins ago

ʼರಾಹುಲ್‌ ಗಾಂಧಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲʼ ಎಂದಿದ್ದರು ಪ್ರಣಬ್‌ ಮುಖರ್ಜಿ!

Murder case in kopal
ಕರ್ನಾಟಕ38 mins ago

Murder Case : ನಿದ್ರೆಗೆ ಜಾರಿದಾಗ ವ್ಯಕ್ತಿಯ ಕತ್ತು ಕೊಯ್ದ ಹಂತಕರು!

gold bride
ಕರ್ನಾಟಕ1 hour ago

Gold Rate Today: ಬಂಗಾರದ ಬೆಲೆಯಲ್ಲಿ ತುಸು ಇಳಿಕೆ, ಬೆಳ್ಳಿ ದರವೂ ಕುಸಿತ

road Accident
ಕರ್ನಾಟಕ1 hour ago

Road Accident : ಸಿಎಂ‌ ಬರುವ ದಾರಿಯಲ್ಲಿ ಅಪಘಾತ; ಆಂಬ್ಯುಲೆನ್ಸ್‌ ಬಾರದೆ ವ್ಯಕ್ತಿ ನರಳಾಟ

Brindavana Serial Kannada Vishwanath Ravindra Haveri
ಕಿರುತೆರೆ1 hour ago

Brindavana Serial Kannada: ʻಏನಾಗಲಿ ಮುಂದೆ ಸಾಗು ನೀʼಎಂದ ʻಬೃಂದಾವನʼ ಧಾರಾವಾಹಿ ಮಾಜಿ ನಾಯಕ!

mamtha
ದೇಶ1 hour ago

Mamata Banerjee: ಸಲ್ಮಾನ್‌ ಖಾನ್‌ ಜತೆ ಮಮತಾ ಬ್ಯಾನರ್ಜಿ ಡ್ಯಾನ್ಸ್‌! ವಿಡಿಯೊ ಇಲ್ಲಿದೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Government Job Vistara Exclusive
ಉದ್ಯೋಗ20 mins ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ7 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ15 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ16 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ16 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ4 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

ಟ್ರೆಂಡಿಂಗ್‌