Tata Motors : ಟಾಟಾದ ಕಾರುಗಳಿಗೆ ಭರ್ಜರಿ 1.25 ಲಕ್ಷ ತನಕ ಡಿಸ್ಕೌಂಟ್​​; ಯಾವ ಕಾರಿಗೆ ಎಷ್ಟು? ಇಲ್ಲಿದೆ ವಿವರ - Vistara News

ಆಟೋಮೊಬೈಲ್

Tata Motors : ಟಾಟಾದ ಕಾರುಗಳಿಗೆ ಭರ್ಜರಿ 1.25 ಲಕ್ಷ ತನಕ ಡಿಸ್ಕೌಂಟ್​​; ಯಾವ ಕಾರಿಗೆ ಎಷ್ಟು? ಇಲ್ಲಿದೆ ವಿವರ

Tata Motors : ಟಾಟಾ ಮೋಟಾರ್ಸ್​ ತನ್ನ ಕಾರುಗಳ ಬ್ರಾಂಡ್​ಗಳಿಗೆ ದೊಡ್ಡ ಮಟ್ಟದ ಡಿಸ್ಕೌಂಟ್ ಘೋಷಿಸಿದ್ದು, ಯಾವುದಕ್ಕೆ ಎಷ್ಟು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Tata Motors
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಟಾಟಾ ಮೋಟಾರ್ಸ್ (Tata Motors) ಈ ಫೆಬ್ರವರಿಯಲ್ಲಿ ತನ್ನೆಲ್ಲ ಕಾರುಗಳಲ್ಲಿ ನಗದು ರಿಯಾಯಿತಿ ಮತ್ತು ಎಕ್ಸ್​ಚೇಂಜ್​ ಬೋನಸ್ ಸೇರಿದಂತೆ ಆಕರ್ಷಕ ಪ್ರಯೋಜನಗಳನ್ನು ಕೊಡುತ್ತಿದೆ. ಈ ಕೊಡುಗೆಯ ಪ್ರಯೋಜನಗಳು ಹೊಸ 2024 ಸ್ಟಾಕ್ ಗಳು ಮತ್ತು ಹಳೆಯ 2023 ಮಾದರಿಗಳಿಗೂ ಅನ್ವಯಿಸುತ್ತವೆ.

ರಿಯಾಯಿತಿಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ. ಕಾರುಗಳ ಸ್ಟಾಕ್ ಲಭ್ಯತೆಗೆ ಅನ್ವಯವಾಗಿರುತ್ತವೆ. ನಿಖರ ಡಿಸ್ಕೌಂಟ್​ ಅಂಕಿಅಂಶಗಳಿಗಾಗಿ ಸ್ಥಳೀಯ ಡೀಲರ್ ಬಳಿ ವಿಚಾರಿಸಬೇಕು.

ಟಾಟಾ ಸಫಾರಿಗೆ 1.25 ಲಕ್ಷ ರೂ.ಗಳವರೆಗೆ ಡಿಸ್ಕೌಂಟ್​

ಟಾಟಾ ಸಫಾರಿಯ ಫೇಸ್ ಲಿಫ್ಟ್ ಇತ್ತಿಚೆಗೆ ಮಾರುಕಟ್ಟೆಗೆ ಇಳಿದಿದೆ. ಆದರೆ, ಈಗ ಘೋಷಿಸಿರುವ ರಿಯಾಯಿತಿ ಈ ಮಾಡೆಲ್​​ಗಳಿಗೆ ಸಿಗುವುದಿಲ್ಲ. ಮಾರಾಟವಾಗದ ಹಿಂದಿನ ಆವೃತತಿಯ ಸ್ಟಾಕ್ ಗಳ ಮೇಲೆ ಮಾತ್ರ ನೀಡಲಾಗಿದೆ. ಈ ಕೊಡುಗೆಯಲ್ಲಿ 75,000 ರೂ.ಗಳ ಕ್ಯಾಶ್​ ಡಿಸ್ಕೌಂಟ್​ ಮತ್ತು ಟಾಪ್-ಸ್ಪೆಕ್ ಎಡಿಎಎಸ್ ಇರುವ ವೇರಿಯೆಂಟ್​ಗಳಿಗೆ 50,000 ರೂ.ಗಳವರೆಗೆ ಎಕ್ಸ್​​ಚೇಂಜ್​ ಅಥವಾ ಸ್ಕ್ರ್ಯಾಪೇಜ್ ಬೋನಸ್ ಸೇರಿವೆ. ಎಡಿಎಎಸ್ ಇಲ್ಲದ ರೂಪಾಂತರಗಳು ಒಟ್ಟು 75,000 ರೂ.ಗಳವರೆಗೆ ಡಿಸ್ಕೌಂಟ್ ನೀಡಲಾಗಿದೆ.

ಸಫಾರಿ ಉತ್ತಮ ರೋಡ್ ಅಪೀಯರೆನ್ಸ್​ ​ ಮತ್ತು ಏಳು ಆಸನಗಳೊಂದಿಗೆ ದೃಢವಾದ ಮಾರುಕಟ್ಟೆ ಹೊಂದಿದೆ. ಇದು ಹ್ಯುಂಡೈ ಅಲ್ಕಾಜಾರ್, ಎಂಜಿ ಹೆಕ್ಟರ್ ಪ್ಲಸ್ ಮತ್ತು ಮಹೀಂದ್ರಾ ಎಕ್ಸ್ ಯುವಿ 700 ಗೆ ಪ್ರತಿಸ್ಪರ್ಧಿಯಾಗಿದೆ.

ಟಾಟಾ ಹ್ಯಾರಿಯರ್​ಗೆ 1.25 ಲಕ್ಷ ರೂ.ಗಳವರೆಗೆ ರಿಯಾಯಿತಿ

ಹ್ಯಾರಿಯರ್ ಕೂಡ ತನ್ನ ಹಳೆಯ 2023 ಸ್ಟಾಕ್ ಮೇಲೆ ಎಲ್ಲಾ ಡಿಸ್ಕೌಂಟ್ ನೀಡಿದೆ. ನವೀಕರಿಸಿದ 2024 ಮಾದರಿ ವರ್ಷದ ಯುನಿಟ್ ಗಳಿಗೆ ನೀಡಿಲ್ಲ. ಆದರೆ, ಎಡಿಎಎಸ್ ಮತ್ತು ಎಡಿಎಎಸ್ ಅಲ್ಲದ ರೂಪಾಂತರಗಳಿಗೆ ಟಾಟಾ ಸಫಾರಿಯಂತೆಯೇ ಸಣ್ಣ ಬ್ರೇಕ್​ಅಪ್​ ನೀಡಿದೆ.

ಇದನ್ನೂ ಓದಿ : Tata Nexon EV : ಟಾಟಾದ ಈ ಇವಿ ಕಾರಿಗೆ ಬರೋಬ್ಬರಿ 2.80 ಲಕ್ಷ ರೂಪಾಯಿ ಡಿಸ್ಕೌಂಟ್!

ಸಫಾರಿಯಂತೆ, ಹ್ಯಾರಿಯರ್ ಎಸ್​ಯುವಿ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಹೊಂದಿದೆ. ಅದ್ಭುತ ಸವಾರಿ ಮತ್ತು ನಿರ್ವಹಣೆ ಯಿಂದಾಗಿ ಪ್ರಖ್ಯಾತಿ ಪಡೆದಿದೆ. ಇದು 5 ಸೀಟರ್ ಮಹೀಂದ್ರಾ ಎಕ್ಸ್ ಯುವಿ 700, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಗೆ ಪ್ರತಿಸ್ಪರ್ಧಿಯಾಗಿದೆ.

ಟಾಟಾ ಟಿಯಾಗೊಗೆ 75,000 ರೂ.ಗಳವರೆಗೆ ರಿಯಾಯಿತಿ

ಟಿಯಾಗೊ ತನ್ನ 2023 ಮಾದರಿ ವರ್ಷದಲ್ಲಿ 75,000 ರೂ.ಗಳವರೆಗೆ ಪ್ರಯೋಜನಗಳನ್ನು ಪಡೆಯುತ್ತದೆ, ಇದರಲ್ಲಿ 60,000 ರೂ.ಗಳ ಕ್ಯಾಶ್​ ಡಿಸ್ಕೌಂಟ್​ ಮತ್ತು 15,000 ರೂ.ಗಳವರೆಗೆ ವಿನಿಮಯ ಅಥವಾ ಸ್ಕ್ರ್ಯಾಪೇಜ್ ಬೋನಸ್ ಸೇರಿಕೊಂಡಿವೆ. ಆದಾಗ್ಯೂ, 2024 ಟಿಯಾಗೊಗಳಿಗೂ 40,000 ರೂ.ಗಳವರೆಗೆ ರಿಯಾಯಿತಿ ನೀಡಲಾಗಿದೆ. ಇದರಲ್ಲಿ 30,000 ರೂ.ಗಳವರೆಗೆ ನಗದು ರಿಯಾಯಿತಿ ಮತ್ತು 10,000 ರೂ.ಗಳವರೆಗೆ ವಿನಿಮಯ ಅಥವಾ ಸ್ಕ್ರ್ಯಾಪೇಜ್ ಬೋನಸ್ ಸೇರಿಕೊಂಡಿದೆ. ಟಿಯಾಗೊದ ಸಿಎನ್ ಜಿ ವೇರಿಯೆಂಟ್​ಗಳು 2023ರ ಮಾಡೆಲ್​ಗೆ​​ 75,000 ರೂ.ಗಳವರೆಗೆ ಮತ್ತು ಹೊಸ 2024 ಯುನಿಟ್ ಗಳಿಗೆ 25,000 ರೂ.ಗಳವರೆಗೆ ಡಿಸ್ಕೌಂಟ್ ನೀಡಲಾಗಿದೆ.

ಟಿಯಾಗೊ ತನ್ನ ಉತ್ತಮವಾದ ಕ್ಯಾಬಿನ್ ಮತ್ತು ಆಕರ್ಷಕ ಬೆಲೆಯಿಂದ ಖ್ಯಾತಿ ಪಡೆದಿದೆ. ಇದರ ಎಂಜಿನ್ ದೊಡ್ಡ ಹಿನ್ನಡೆ. ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗೆ ಪ್ರತಿಸ್ಪರ್ಧಿಯಾಗಿದೆ.

ಟಾಟಾ ಟಿಗೋರ್​ಗೆ 75,000 ರೂ.ಗಳವರೆಗೆ ರಿಯಾಯಿತಿ

ಟಿಗೋರ್ 2023 ಮತ್ತು 2024 ಮಾದರಿಗಳ ಮೇಲೆ ಕ್ರಮವಾಗಿ 75,000 ಮತ್ತು 40,000 ರೂ.ಗಳವರೆಗೆ ಪ್ರಯೋಜನಗಳನ್ನು ಪಡೆಯುತ್ತದೆ. ಈ ಕೊಡುಗೆಗಳಲ್ಲಿನ ಪೆಟ್ರೋಲ್ ಎಂಟಿ ಮತ್ತು ಎಎಂಟಿ ರೂಪಾಂತರಗಳಿಗೆ ನೀಡಲಾಗಿದೆ. ಟಿಗೋರ್ ನ ಸಿಎನ್ ಜಿ ರೂಪಾಂತರಗಳು 2023ರ ಮಾಡೆಲ್​ ಮೇಲೆ 75,000 ರೂ.ಗಳವರೆಗೆ ಮತ್ತು 2024ರ ಮಾಡೆಲ್​ಗಳ ಮೇಲೆ 30,000 ರೂ.ಗಳವರೆಗೆ ರಿಯಾಯಿತಿ ಕೊಡಲಾಗಿದೆ. ಇದು ಹೋಂಡಾ ಅಮೇಜ್, ಮಾರುತಿ ಸುಜುಕಿ ಡಿಜೈರ್ ಮತ್ತು ಹ್ಯುಂಡೈ ಔರಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಟಾಟಾ ನೆಕ್ಸಾನ್ ಗೆ 60,000 ರೂ.ಗಳವರೆಗೆ ರಿಯಾಯಿತಿ

ನೆಕ್ಸಾನ್​ 2023ರಲ್ಲಿ ಅಪ್​ಡೇಟ್ ಆಗಿತ್ತು. ಆದಾಗ್ಯೂ, ಹ್ಯಾರಿಯರ್ ಮತ್ತು ಸಫಾರಿಯಂತೆಯೇ, ಪ್ರಯೋಜನಗಳು ಪೂರ್ವ-ಫೇಸ್ ಲಿಫ್ಟ್ ಮಾದರಿಗಳಿಗೆ ಮಾತ್ರ ಇವೆ. ನೆಕ್ಸಾನ್ ನ ಪೆಟ್ರೋಲ್-ಎಂಟಿ ರೂಪಾಂತರಗಳು 40,000 ರೂ.ಗಳ ನಗದು ಡಿಸ್ಕೌಂಟ್​ ಪಡೆದರೆ, ಎಎಂಟಿ ರೂಪಾಂತರಗಳು 20,000 ರೂ.ಗಳ ನಗದು ರಿಯಾಯಿತಿ ಪಡೆಯುತ್ತವೆ. ಹೆಚ್ಚುವರಿಯಾಗಿ, ಎಂಟಿ ಮತ್ತು ಎಎಂಟಿ ರೂಪಾಂತರಗಳಲ್ಲಿ 20,000 ರೂ.ಗಳ ವಿನಿಮಯ ಅಥವಾ ಸ್ಕ್ರ್ಯಾಪೇಜ್ ಬೋನಸ್ ಇದೆ. ಇದು ಮಾರುತಿ ವಿಟಾರಾ ಬ್ರೆಝಾ, ಕಿಯಾ ಸೊನೆಟ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಟಾಟಾ ಆಲ್ಟ್ರೋಜ್​ಗೆ 45,000 ರೂ.ಗಳವರೆಗೆ ರಿಯಾಯಿತಿ

ಆಲ್ಟ್ರೋಜ್ ತನ್ನ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ ಜಿ ರೂಪಾಂತರಗಳಲ್ಲಿ 45,000 ರೂ.ಗಳವರೆಗೆ ರಿಯಾಯಿತಿಯೊಂದಿಗೆ ಲಭ್ಯವಿದೆ. 2023 ಮಾದರಿಗಳಿಗೆ 35,000 ರೂ.ಗಳವರೆಗೆ ಕ್ಯಾಶ್​ ಡಿಸ್ಕೌಂಟ್​ ಸಿಗುತ್ತದೆ. 2024ರ ಮಾಡೆಲ್​ಗಳಿಗೆ 15,000 ರೂ.ಗಳವರೆಗೆ ಕ್ಯಾಶ್​ ಡಿಸ್ಕೌಂಟ್​ ಸಿಗುತ್ತದೆ. 2023 ಮತ್ತು 2024 ರ ಎರಡೂ ಮಾಡೆಲ್​ಗಳ 10,000 ರೂ.ಗಳವರೆಗೆ ಎಕ್ಸ್​​ಚೇಂಜ್​​ ಅಥವಾ ಸ್ಕ್ರ್ಯಾಪೇಜ್ ಬೋನಸ್ ಪಡೆಯುತ್ತವೆ.

ಇದು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಐ 20 ಮತ್ತು ಟೊಯೊಟಾ ಗ್ಲಾಂಝಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Bajaj CNG Bike: ಬಜಾಜ್‌‌ನ ವಿಶ್ವದ ಮೊದಲ ಸಿಎನ್‌‌ಜಿ ಬೈಕ್ ಬೆಲೆ ‌ಕಡಿತ ಸಾಧ್ಯತೆ; ನಿತೀನ್ ಗಡ್ಕರಿ ಸೂಚನೆ

ಪುಣೆಯಲ್ಲಿ ನಡೆದ ಬಜಾಜ್ ಫ್ರೀಡಂ 125 (Bajaj CNG Bike) ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು, ವಾಹನದ ಬೆಲೆಯನ್ನು 1 ಲಕ್ಷ ರೂ. ಗಿಂತ ಕಡಿಮೆ ಮಾಡಲು ಬಜಾಜ್ ಕಂಪನಿಯ ಸಿಇಒ ರಾಜೀವ್ ಜಿ. ಅವರಲ್ಲಿ ಹೇಳಿದ್ದರು. ಈ ಸಲಹೆಯನ್ನು ಬಜಾಜ್ ಕಂಪನಿ ಗಂಭೀರವಾಗಿ ಪರಿಶೀಲಿಸುತ್ತಿದೆ.

VISTARANEWS.COM


on

By

Bajaj CNG Bike
Koo

ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ (Bajaj CNG Bike) ಬಜಾಜ್ ಫ್ರೀಡಂ 125 (Bajaj Freedom 125) ಬೆಲೆ ಇಳಿಯುವ ನಿರೀಕ್ಷೆಗಳಿವೆ. ಯಾಕೆಂದರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ (Union Minister) ನಿತಿನ್ ಗಡ್ಕರಿ (Nitin Gadkari) ಅವರು ಬಜಾಜ್ ಆಟೋ ಸಿಇಒ ರಜಿಬ್ ಬಜಾಜ್ ಅವರ ಬಳಿ ವಾಹನದ ಬೆಲೆಯನ್ನು 1 ಲಕ್ಷ ರೂ. ಗಿಂತ ಕಡಿಮೆ ಮಾಡಲು ಒತ್ತಾಯಿಸಿದ್ದಾರೆ.

ಬಜಾಜ್ ಫ್ರೀಡಂ 125 ಬಿಡುಗಡೆಯೊಂದಿಗೆ ಸಾಂಪ್ರದಾಯಿಕ ಪೆಟ್ರೋಲ್ ಬೈಕ್ ಗಳಿಗಿಂತ ಅಗ್ಗವಾಗಿ ಮತ್ತು ಪರಿಸರ ಸ್ನೇಹಿ ವಾಹನವಾಗಿ ದ್ವಿಚಕ್ರ ವಾಹನ ಉದ್ಯಮವು ಬೃಹತ್ ಕ್ರಾಂತಿಯನ್ನು ಕಂಡಿದೆ. ಇದೇ ರೀತಿಯ ಐಸಿಇ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಹೊಸ ಬೈಕ್ ನಿರ್ವಹಣಾ ವೆಚ್ಚವನ್ನು ಶೇ. 50ರಷ್ಟು ಕಡಿಮೆ ಮಾಡುತ್ತದೆ.

ಪುಣೆಯಲ್ಲಿ ಜುಲೈ 5ರಂದು ನಡೆದ ಬಜಾಜ್ ಫ್ರೀಡಂ 125 ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ವಾಹನದ ಬೆಲೆಯನ್ನು 1 ಲಕ್ಷ ರೂ. ಗಿಂತ ಕಡಿಮೆ ಮಾಡಲು ರಾಜೀವ್ ಜಿ. ಅವರಲ್ಲಿ ವಿನಂತಿಸುವುದಾಗಿ ಹೇಳಿದ್ದರು.


ಬಜಾಜ್ ಫ್ರೀಡಂ 125 ದೇಶದಲ್ಲಿ ಹೆಚ್ಚು ಜನಪ್ರಿಯವಾಗಲಿದೆ ಮತ್ತು ಕಡಿಮೆ ಬೆಲೆಗೆ ಜನರಿಗೆ ಸಿಗಲಿದೆ. ಸರಾಸರಿಗೆ ಹೋಲಿಸಿದರೆ ಒಂದು ವರ್ಷದೊಳಗೆ ಗ್ರಾಹಕರಿಗೆ ಅವರ ಹಣವನ್ನು ಹಿಂತಿರುಗಿಸುತ್ತದೆ ಮತ್ತು ಇದರ ವಿನ್ಯಾಸ ಅತ್ಯಂತ ಸುಂದರವಾಗಿದೆ ಎಂದು ಹೇಳಿ ಕೇಂದ್ರ ಸಚಿವರು ಬಜಾಜ್ ಫ್ರೀಡಂ 125 ರ ಗುಣಮಟ್ಟವನ್ನು ಶ್ಲಾಘಿಸಿದರು.

ಗುಣಮಟ್ಟದ ಬಗ್ಗೆ ಯಾವುದೇ ಸಂದೇಹವಿಲ್ಲ. ಪ್ರಾಮಾಣಿಕತೆ, ಗುಣಮಟ್ಟ ಮತ್ತು ಸ್ಪಷ್ಟತೆ 21 ನೇ ಶತಮಾನದ ಅತಿದೊಡ್ಡ ಬಂಡವಾಳವಾಗಿದೆ. ಗುಣಮಟ್ಟವು ತುಂಬಾ ಸುಧಾರಣೆಯಾಗಿದೆ ಎಂದು ನಾನು ನಿಜವಾಗಿಯೂ ಸಂತೋಷಪಡುತ್ತೇನೆ. ಹೊಸ ಮೋಟಾರ್‌ಸೈಕಲ್‌ನ ಗುಣಮಟ್ಟ ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು.

ಬಜಾಜ್ ಫ್ರೀಡಂ 125 ಮಾರುಕಟ್ಟೆಯನ್ನು ಆಕರ್ಷಿಸಲಿದೆ ಎಂದು ಹೇಳಿರುವ ಗಡ್ಕರಿ, ಈ ಹೊಸ ಉಪಕ್ರಮ ಉತ್ತಮ ಗುಣಮಟ್ಟ ಮತ್ತು ವಿನ್ಯಾಸದಿಂದಾಗಿ 100 ಪ್ರತಿಶತದಷ್ಟು ಪ್ರಪಂಚದಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಪಡೆಯುತ್ತದೆ. ಇದು ಬಜಾಜ್ ಆಟೋಗೆ ಯಶಸ್ಸಿನ ಕಥೆಯಾಗಿದೆ ಎಂದರು.

ಇದನ್ನೂ ಓದಿ: Car price Discounts: ರಿನೊ ಕೈಗರ್, ಕ್ವಿಡ್, ಟ್ರೈಬರ್ ಕಾರುಗಳಿಗೆ 40,000 ರೂ. ತನಕ ರಿಯಾಯಿತಿ

ಬಜಾಜ್ ಫ್ರೀಡಂ 125

ಬಜಾಜ್ ಫ್ರೀಡಂ 125 ಮೂರು ಆವೃತ್ತಿಗಳಲ್ಲಿ ಬರಲಿದೆ. ಫ್ರೀಡಮ್ 125 ಎನ್ ಜಿ04 ಡಿಸ್ಕ್ ಎಲ್ ಇಡಿ, ಫ್ರೀಡಮ್ 125 ಎನ್ ಜಿ04 ಡ್ರಮ್ ಎಲ್ ಇಡಿ ಮತ್ತು ಫ್ರೀಡಮ್ 125 ಎನ್ ಜಿ04 ಡ್ರಮ್. ದೆಹಲಿಯಲ್ಲಿನ ಈ ಮೂರು ಆವೃತ್ತಿಗಳ ಎಕ್ಸ್ ಶೋ ರೂಂ ಬೆಲೆ 95,000 ರೂ., 1,05,000 ರೂ. ಮತ್ತು 1,10,000 ರೂ. ಆಗಿದೆ.

ಬಜಾಜ್ ಫ್ರೀಡಮ್ ಸಿಎನ್‌ಜಿ ಪ್ರತಿ ಕೆ.ಜಿ. ಸಿಎನ್‌ಜಿಗೆ 102 ಕಿ.ಮೀ. ಓಡುತ್ತದೆ. ಅಂದರೆ ಇದು ಸಿಎನ್‌ಜಿಯ ಒಂದು ಪೂರ್ಣ ಟ್ಯಾಂಕ್‌ನಲ್ಲಿ ಸುಮಾರು 200 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ. ಸಿಎನ್ ಜಿ ಟ್ಯಾಂಕ್ ಅನ್ನು ಸೀಟಿನ ಕೆಳಗೆ ಇರಿಸಲಾಗುವುದು ಮತ್ತು ಎರಡು ಕಿಲೋಗ್ರಾಂಗಳಷ್ಟು ಸಾಮರ್ಥ್ಯ ಹೊಂದಿದೆ. ಇದು ಎರಡು ಲೀಟರ್ ಪೆಟ್ರೋಲ್ ಟ್ಯಾಂಕ್‌ನೊಂದಿಗೆ ಜೋಡಿಸಲ್ಪಟ್ಟಿರುತ್ತದೆ ಮತ್ತು 330 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ಕಂಪೆನಿ ಹೇಳಿದೆ.

Continue Reading

ಆಟೋಮೊಬೈಲ್

Mercedes Electric Car: 35 ನಿಮಿಷಗಳಲ್ಲಿ ಶೇ. 80ರಷ್ಟು ಚಾರ್ಜ್! ಮರ್ಸಿಡಿಸ್ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ

7 ಗಂಟೆ 15 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುವ ಮರ್ಸಿಡಿಸ್ ಎಲೆಕ್ಟ್ರಿಕ್ ಕಾರು (Mercedes Electric Car) ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು 100ಕೆಡಬ್ಲ್ಯೂ ಡಿಸಿ ವೇಗದ ಚಾರ್ಜರ್‌ನ ಬೆಂಬಲವನ್ನು ಹೊಂದಿದೆ. ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಇದು ಕಾರು ಪ್ರಿಯರನ್ನು ಸೆಳೆಯುವಲ್ಲಿ ಸಂದೇಹವಿಲ್ಲ. ಈ ಕಾರಿನ ವಿಶೇಷಗಳ ಚಿತ್ರಣ ಇಲ್ಲಿದೆ.

VISTARANEWS.COM


on

By

Mercedes Electric Car
Koo

ಜರ್ಮನ್ ನ (German) ಐಷಾರಾಮಿ ಕಾರು ತಯಾರಕ ಕಂಪೆನಿ ಮರ್ಸಿಡಿಸ್ ಬೆನ್ಜ್ (Mercedes Electric Car) ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಎಸ್ ಯುವಿ- ಮರ್ಸಿಡಿಸ್ ಬೆನ್ಜ್ ಇಕ್ಯೂಎ ( electric SUV- Mercedes-Benz EQA) ಅನ್ನು ಭಾರತದಲ್ಲಿ (India) ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋ ರೂಮ್ ಬೆಲೆ 66 ಲಕ್ಷ ರೂ.ಗಳಾಗಿದೆ.

70.ಕೆಡಬ್ಲ್ಯೂಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಇದು ಹೊಂದಿದ್ದು ಒಂದೇ ಚಾರ್ಜ್‌ನಲ್ಲಿ 560 ಕಿ.ಮೀ. ದೂರ ಕ್ರಮಿಸುತ್ತದೆ. ಇಕ್ಯೂಎ 250+ ಫ್ರಂಟ್ ವೀಲ್ ಡ್ರೈವ್ ಕಾರ್ ಆಗಿದ್ದು, ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಇದರ ಎಲೆಕ್ಟ್ರಿಕ್ ಮೋಟಾರ್ 188bhp ಮತ್ತು 385Nm ಸಾಮರ್ಥ್ಯವನ್ನು ನೀಡಲು ಸಶಕ್ತವಾಗಿದೆ.

ಚಾರ್ಜಿಂಗ್ ಸಮಯ

ಸಾಮಾನ್ಯ 11kW AC ಚಾರ್ಜರ್‌ನೊಂದಿಗೆ ಇದು ಬರಲಿದ್ದು, ಬ್ಯಾಟರಿಯನ್ನು 0 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಲು 7 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದು 100ಕೆಡಬ್ಲ್ಯೂ ಡಿಸಿ ವೇಗದ ಚಾರ್ಜರ್‌ನ ಬೆಂಬಲವನ್ನು ಹೊಂದಿದ್ದು ಕೇವಲ 35 ನಿಮಿಷಗಳಲ್ಲಿ 10ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
ಮರ್ಸಿಡಿಸ್ ಇಕ್ಯೂಎ ಕಂಪೆನಿಯ ಪೋರ್ಟ್‌ಫೋಲಿಯೊದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಎಸ್ ಯುವಿ ಆಗಿದ್ದು, 8.6 ಸೆಕೆಂಡುಗಳಲ್ಲಿ 0 ರಿಂದ 100 km/h ವೇಗವನ್ನು ಪಡೆಯಬಹುದು. ಇದು ಗಂಟೆಗೆ 160 ಕಿಮೀ ವೇಗವನ್ನು ನೀಡುತ್ತದೆ. ಇದು ಕಂಫರ್ಟ್, ಇಕೋ, ಸ್ಪೋರ್ಟ್ ಮತ್ತು ಇಂಡಿವಿಜುವಲ್ ಎಂಬ ನಾಲ್ಕು ಡ್ರೈವ್ ಮೋಡ್‌ಗಳನ್ನು ಹೊಂದಿದೆ.


ಬಣ್ಣದ ಆಯ್ಕೆಗಳು

ಇಕ್ಯೂಬಿ ಮತ್ತು ಜಿಎಲ್ ಎನೊಂದಿಗೆ ಹಲವಾರು ವಿನ್ಯಾಸ ಅಂಶಗಳನ್ನು ಹಂಚಿಕೊಳ್ಳುವ ಮೂಲಕ ಇಕ್ಯೂಎ ಅನ್ನು ಏಳು ಬಣ್ಣದ ಆಯ್ಕೆಗಳಲ್ಲಿ ನೀಡಲಾಗಿದೆ. ಮೌಂಟೇನ್ ಗ್ರೇ, ಪೋಲಾರ್ ವೈಟ್, ಹೈಟೆಕ್ ಸಿಲ್ವರ್, ಮೌಂಟೇನ್ ಗ್ರೇ ಮ್ಯಾಗ್ನೋ, ಕಾಸ್ಮೊಸ್ ಬ್ಲಾಕ್, ಪ್ಯಾಟಗೋನಿಯಾ ರೆಡ್ ಮತ್ತು ಸ್ಪೆಕ್ಟ್ರಲ್ ಬ್ಲೂ.

ಇದನ್ನೂ ಓದಿ: Maruti Brezza Urbano : ಬ್ರೆಜಾ ಎಸ್​​ಯುವಿಯಲ್ಲಿ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ


ವೈಶಿಷ್ಟ್ಯಗಳು ಏನೇನು?

ಇದರ ಪ್ರಮುಖ ವೈಶಿಷ್ಟ್ಯಗಳಲ್ಲಿ ಡ್ಯುಯಲ್ 10.25 ಇಂಚಿನ ಸ್ಕ್ರೀನ್ ಸೆಟಪ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಹೆಚ್ ಯುಡಿ, ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ಆಗ್ಮೆಂಟೆಡ್ ರಿಯಾಲಿಟಿಯೊಂದಿಗೆ ಇನ್‌ಬಿಲ್ಟ್‌ ಆದ ನ್ಯಾವಿಗೇಷನ್, ವಿಹಂಗಮ ಸನ್‌ರೂಫ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಫ್ರಂಟ್ ಸೀಟುಗಳನ್ನು ಒಳಗೊಂಡಿದೆ.

ಬಾಹ್ಯ ವಿನ್ಯಾಸದಲ್ಲಿ ಬ್ಲಾಂಕ್ಡ್-ಆಫ್ ಪಿಯಾನೋ-ಬ್ಲ್ಯಾಕ್ ಗ್ರಿಲ್, ಎಲ್ಇಡಿ ಲೈಟ್ ಬಾರ್ ಮೂಲಕ ಸಂಪರ್ಕಿಸಲಾದ ಹೆಡ್‌ಲ್ಯಾಂಪ್‌ಗಳು, 19 ಇಂಚಿನ ಏರೋ ವೀಲ್‌ಗಳು, ಸ್ಕ್ವೇಡರ್ ವೀಲ್ ಆರ್ಚ್‌ಗಳು, ಕ್ರೋಮ್ ಟ್ರೀಟ್‌ಮೆಂಟ್‌ನೊಂದಿಗೆ ಹೊಸ ಹಿಂಬದಿಯ ಬಂಪರ್, ಸಂಪರ್ಕಿತ ಟೈಲ್‌ಲ್ಯಾಂಪ್‌ಗಳು ಮತ್ತು ಕೂಪ್ ತರಹದ ಇಳಿಜಾರು ಚಾವಣಿಯನ್ನು ಒಳಗೊಂಡಿದೆ.

Continue Reading

ಪ್ರಮುಖ ಸುದ್ದಿ

Car price Discounts: ರಿನೊ ಕೈಗರ್, ಕ್ವಿಡ್, ಟ್ರೈಬರ್ ಕಾರುಗಳಿಗೆ 40,000 ರೂ. ತನಕ ರಿಯಾಯಿತಿ

Car price Discounts: ಈ ತಿಂಗಳು ಹೊಸ ರಿನೊ ಎಸ್ ಯುವಿ ಅಥವಾ ಕಾರಿನಲ್ಲಿ ನೀವು ಎಷ್ಟು ಉಳಿಸಬಹುದು ಎಂಬುದನ್ನು ತಿಳಿಯಲು ಈ ಕೆಳಗಿನ ಲೇಖನಗಳನ್ನು ಓದಿ. ಎಲ್ಲಾ ಮೂರು ಮಾದರಿಗಳಲ್ಲಿ ಎಂಟ್ರಿ ಲೆವೆಲ್ ಆಎಕ್ಸ್​ಇ ವೇರಿಯೆಂಟ್​ಗಳು ಲಾಯಲ್ಟಿ ಬೋನಸ್ ಅನ್ನು ಮಾತ್ರ ಪಡೆಯುತ್ತವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

VISTARANEWS.COM


on

Car price Discounts
Koo

ಬೆಂಗಳೂರು: ರಿನೊ ಇಂಡಿಯಾ ಕಂಪನಿಯು ಈ ತಿಂಗಳು ಕೈಗರ್ ಕಾಂಪ್ಯಾಕ್ಟ್ ಎಸ್ ಯುವಿ ಕೈಗರ್​ (Renault Kiger) , ಕ್ವಿಡ್ ಹ್ಯಾಚ್ ಬ್ಯಾಕ್ (Renault Kwid) ಮತ್ತು ಟ್ರೈಬರ್ 7 (Renault Triber) ಸೀಟರ್​ ಸೇರಿದಂತೆ ತನ್ನ ಎಲ್ಲಾ ಶ್ರೇಣಿಯ ಕಾರುಗಳ ಮೇಲೆ ರಿಯಾಯಿತಿ (Car price Discounts: ) ಘೋಷಿಸಿದೆ. ನಗದು ರಿಯಾಯಿತಿಗಳು, ಎಕ್ಸ್​ಚೇಂಜ್​ ಪ್ರಯೋಜನಗಳು ಮತ್ತು ಲಾಯಲ್ಟಿ ಬೋನಸ್ ಗಳ ಜೊತೆಗೆ, ಆಯ್ದ ಖರೀದಿದಾರರು ಹೆಚ್ಚುವರಿ ರೆಫರಲ್, ಕಾರ್ಪೊರೇಟ್ ಮತ್ತು ಲಾಯಲ್ಟಿ ರಿಯಾಯಿತಿಗಳನ್ನೂ ಪಡೆಯಬಹುದು. ಹೆಚ್ಚುವರಿಯಾಗಿ, ಬ್ರಾಂಡ್ ನ ವಾಹನ ಸ್ಕ್ರ್ಯಾಪೇಜ್ ಯೋಜನೆಯನ್ನು ಆರಿಸಿಕೊಳ್ಳುವ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿ ವಿನಿಮಯ ರಿಯಾಯಿತಿ ಒದಗಿಸುತ್ತಿದೆ.

ಈ ತಿಂಗಳು ಹೊಸ ರಿನೊ ಎಸ್ ಯುವಿ ಅಥವಾ ಕಾರಿನಲ್ಲಿ ನೀವು ಎಷ್ಟು ಉಳಿಸಬಹುದು ಎಂಬುದನ್ನು ತಿಳಿಯಲು ಈ ಕೆಳಗಿನ ಲೇಖನಗಳನ್ನು ಓದಿ. ಎಲ್ಲಾ ಮೂರು ಮಾದರಿಗಳಲ್ಲಿ ಎಂಟ್ರಿ ಲೆವೆಲ್ ಆಎಕ್ಸ್​ಇ ವೇರಿಯೆಂಟ್​ಗಳು ಲಾಯಲ್ಟಿ ಬೋನಸ್ ಅನ್ನು ಮಾತ್ರ ಪಡೆಯುತ್ತವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ರಿನೊ ಕೈಗರ್​ ಕಾರಿಗೆ ಸಿಗುವ ರಿಯಾಯಿತಿಗಳು

ಕೈಗರ್ ಕಾರಿನಲ್ಲಿ 40,000 ರೂ.ಗಳವರೆಗೆ ಪ್ರಯೋಜನ ಸಿಗುತ್ತದೆ. ಇದರಲ್ಲಿ 15,000 ರೂ.ಗಳ ನಗದು ರಿಯಾಯಿತಿ, 15,000 ರೂ.ಗಳ ಎಕ್ಸ್​ಚೇಂಜ್ ಬೋನಸ್​ ಮತ್ತು 10,000 ರೂ.ಗಳ ಲಾಯಲ್ಟಿ ಬೋನಸ್ ಸೇರಿಕೊಂಡಿವೆ. ಇದರ ಬೆಲೆಯು ರೂ.6.00 ಲಕ್ಷದಿಂದ ರೂ.11.23 ಲಕ್ಷ ರೂಪಾಯಿ. ನಾಲ್ಕು ಸಿಲಿಂಡರ್​ ಎಂಜಿನ್ ಮತ್ತು ಗೇರ್ ಬಾಕ್ಸ್ ಸಂಯೋಜನೆಗಳನ್ನು ಇ ಕಾರು ಹೊಂದಿದೆ. 1.0-ಲೀಟರ್ ಪೆಟ್ರೋಲ್ ಎಂಜಿನ್​ 72 ಬಿಹೆಚ್ ಪಿ ಪವರ್​ ಅನ್ನು ಮ್ಯಾನುವಲ್ ಮತ್ತು ಎಎಂಟಿ ವೇರಿಯೆಂಟ್​ನಲ್ಲಿ ಬಿಡುಗಡೆ ಮಾಡುತ್ತದೆ. ಟರ್ಬೊ 1.0 ಪೆಟ್ರೊಲ್​ ಎಂಜಿನ್​ 100 ಬಿಹೆಚ್ ಪಿ ಪವರ್ ಬಿಡಗಡೆ ಮಾಡುತ್ತದೆ. ಇದರಲ್ಲಿ ಸಿವಿಟಿ ಆಯ್ಕೆಯೂ ಇದೆ.

ಇದನ್ನೂ ಓದಿ: Maruti Brezza Urbano : ಬ್ರೆಜಾ ಎಸ್​​ಯುವಿಯಲ್ಲಿ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ರಿನೊ ಟ್ರೈಬರ್ ಡಿಸ್ಕೌಂಟ್​ಗಳು

ರಿನೊ ಟ್ರೈಬರ್ ಏಳು ಸೀಟ್​ಗಳ ಕಾರಾಗಿದ್ದು 40,000 ರೂ.ಗಳವರೆಗೆ ರಿಯಾಯಿತಿ ಇದೆ. ಇದು ನಗದು ರಿಯಾಯಿತಿ, ವಿನಿಮಯ ಪ್ರಯೋಜನಗಳು ಮತ್ತು ಕೈಗರ್​ನಂತೆಯೇ ಲಾಯಲ್ಟಿ ಬೋನಸ್ ಕೂಡ ಪಡೆಯುತ್ತದೆ. ಇದರ ಬೆಲೆ 6.00 ಲಕ್ಷ ರೂಪಾಯಿಯಿಂದ ಆರಂಭಗೊಂಡು ರೂ.8.98 ಲಕ್ಷ ರೂಪಾಯಿ ತನಕ ಇದೆ. ಅದೇ 72 ಬಿಹೆಚ್ ಪಿ, 1.0-ಲೀಟರ್ ಪೆಟ್ರೋಲ್ ಎಂಜಿನ್​ ಮ್ಯಾನುವಲ್ ಮತ್ತು ಎಎಂಟಿ ಆಯ್ಕೆಗಳೊಂದಿಗೆ ಬರುತ್ತದೆ.

ರೆನಾಲ್ಟ್ ಕ್ವಿಡ್ ಕಾರಿಗೆ ಸಿಗುವ ರಿಯಾಯಿತಿಗಳು

ಕ್ವಿಡ್ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಅನ್ನು ಜುಲೈನಲ್ಲಿ ಕೈಗರ್​ ಮತ್ತು ಟ್ರೈಬರ್ ನಂತೆಯೇ ರಿಯಾಯಿತಿ ಹೊಂದಿದೆ. 4.70 ಲಕ್ಷ ರೂ.ಗಳಿಂದ 6.45 ಲಕ್ಷ ರೂ.ಗಳ ನಡುವೆ ಬೆಲೆಯನ್ನು ಹೊಂದಿರುವ ಇದು ಮಾರುತಿ ಸುಜುಕಿ ಆಲ್ಟೋ ಕೆ 10 ಗೆ ಪೈಪೋಟಿ ನೀಡುತ್ತದೆ. ಇದು 68 ಬಿಹೆಚ್ ಪಿ, 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಎಎಂಟಿ ಆಯ್ಕೆಯೊಂದಿಗೆ ಬರುತ್ತದೆ.

Continue Reading

ಪ್ರಮುಖ ಸುದ್ದಿ

Maruti Brezza Urbano : ಬ್ರೆಜಾ ಎಸ್​​ಯುವಿಯಲ್ಲಿ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

Maruti Brezza Urbano : ಅರ್ಬನೊ ಕಾರು ಪೆಟ್ರೋಲ್ ಮತ್ತು ಸಿಎನ್ ಜಿ ಪವರ್ ಟ್ರೇನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್​ಬಾಕ್ಸ್​ಗಳಿವೆ. ಬ್ರೆಝಾ ಪ್ರಸ್ತುತ 8.34 ಲಕ್ಷ ರೂ.ಗಳಿಂದ 14.14 ಲಕ್ಷ ರೂ.ಗಳವರೆಗೆ ಬೆಲೆ ಹೊಂದಿದೆ. ಜುಲೈನಲ್ಲಿ 25,000 ರೂ.ಗಳವರೆಗೆ ರಿಯಾಯಿತಿಗಳಿವೆ.

VISTARANEWS.COM


on

Maruti Brezza Urbano
Koo

ಬೆಂಗಳೂರು: ಮಾರುತಿ ಸುಜುಕಿ ಕಂಪನಿಯು ಬ್ರೆಜಾ ಕಾಂಪ್ಯಾಕ್ಟ್ ಎಸ್​​ಯುವಿಯ ಅರ್ಬನೊ ಎಡಿಷನ್ (Maruti Brezza Urbano) ಎಂಬ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಹೊಸ ಮಾದರಿಯ ಬೆಲೆಯು .8.49 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಿದ್ದು ರಿಯಾಯಿತಿ ಬೆಲೆಯಲ್ಲಿ ಹಲವಾರು ಆಕ್ಷೆಸರಿಗಳನ್ನು ಹೊಂದಿದೆ.

ಅರ್ಬಾನೊ ಎಡಿಷನ್ ಅನ್ನು ಎಂಟ್ರಿ ಲೆವೆಲ್ ಎಲ್ಎಕ್ಸ್ಐ ಮತ್ತು ಮಿಡ್-ಲೆವೆಲ್ ವಿಎಕ್ಸ್ಐ ವೇರಿಯೆಂಟ್​ಗಳಲ್ಲಿ ತಮ್ಮ ಆಕ್ಸೆಸರಿಗಳನ್ನು ಪಟ್ಟಿಯನ್ನು ಸುಧಾರಿಸಲೆಂದೇ ಪರಿಚಯಿಸಲಾಗಿದೆ. ಬ್ರೆಝಾ ಎಲ್ ಎಕ್ಸ್ ಐ ಅರ್ಬನೊ ಎಡಿಷನ್ ಕಾರಿನಲ್ಲಿ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಟಚ್ ಸ್ಕ್ರೀನ್, ಸ್ಪೀಕರ್ ಗಳು, ಫ್ರಂಟ್ ಫಾಗ್ ಲ್ಯಾಂಪ್ ಕಿಟ್, ಫಾಗ್ ಲ್ಯಾಂಪ್ ಗಾರ್ನಿಷ್, ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್ ಗಳು, ಫ್ರಂಟ್ ಗ್ರಿಲ್ ಕ್ರೋಮ್ ಗಾರ್ನಿಷ್, ಬಾಡಿ ಸೈಡ್ ಮೌಲ್ಡಿಂಗ್ ಮತ್ತು ವ್ಹೀಲ್ ಆರ್ಚ್ ಕಿಟ್ ಅನ್ನು ನೀಡಲಾಗಿದೆ. ಈ ಆಕ್ಸೆಸರಿಗಳನ್ನು ಸ್ವತಂತ್ರವಾಗಿ ಖರೀದಿಸಿದಾಗ 52,370 ರೂಪಾಯಿ ಬೆಲೆಯಾದರೆ ಕಿಟ್ ರೂಪದಲ್ಲಿ ಖರೀದಿಸಿದರೆ 42,000 ರೂಪಾಯಿಗೆ ದೊರೆಯುತ್ತದೆ. ಅರ್ಬಾನೊ ಎಡಿಷನ್ ಎಲ್ಎಕ್ಸ್ಐ ವೇರಿಯೆಂಟ್​ಗಳಲ್ಲಿ ಇದರ ಬೆಲೆ ಕೇವಲ 15,000 ರೂಪಾಯಿ.

ವಿಎಕ್ಸ್ಐ ವೇರಿಯೆಂಟ್​​ನ ಅರ್ಬಾನೊ ಆವೃತ್ತಿಯು ಹಿಂಭಾಗದ ಕ್ಯಾಮೆರಾ, ಫಾಗ್ ಲ್ಯಾಂಪ್​​ಗಳು ವಿಶೇಷ ಡ್ಯಾಶ್​ಬೋರ್ಡ್​​ ಟ್ರಿಮ್, ಬಾಡಿ ಸೈಡ್ ಮೌಲ್ಡಿಂಗ್, ವೀಲ್ ಆರ್ಚ್ ಕಿಟ್, ಮೆಟಲ್ ಸಿಲ್ ಗಾರ್ಡ್​ಗಳು , ನಂಬರ್​ ಪ್ಲೇಟ್ ಫ್ರೇಮ್ ಮತ್ತು 3 ಡಿ ಫ್ಲೋರ್ ಮ್ಯಾಟ್​ಗಳು ಸಿಗುತ್ತವೆ. ಈ ಎಲ್ಲಾ ಆಕ್ಸೆಸರಿಗಳನ್ನು ಪ್ರತ್ಯೇಕವಾಗಿ ಖರೀದಿಸಿದಾಗ 26,149 ರೂ ಮತ್ತು ಕಿಟ್ ಆಗಿ ಖರೀದಿಸಿದರೆ 18,500 ರೂಪಾಯಿಗೆ ದೊರೆಯುತ್ತದೆ. ಉರ್ಬಾನೊ ಆವೃತ್ತಿಯು ಬೆಲೆಯನ್ನು 3,500 ರೂಪಾಯಿ ಕಡಿಮೆಯಾಗಿದೆ.

ಇದನ್ನೂ ಓದಿ: Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

ಅರ್ಬನೊ ಕಾರು ಪೆಟ್ರೋಲ್ ಮತ್ತು ಸಿಎನ್ ಜಿ ಪವರ್ ಟ್ರೇನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್​ಬಾಕ್ಸ್​ಗಳಿವೆ. ಬ್ರೆಝಾ ಪ್ರಸ್ತುತ 8.34 ಲಕ್ಷ ರೂ.ಗಳಿಂದ 14.14 ಲಕ್ಷ ರೂ.ಗಳವರೆಗೆ ಬೆಲೆ ಹೊಂದಿದೆ. ಜುಲೈನಲ್ಲಿ 25,000 ರೂ.ಗಳವರೆಗೆ ರಿಯಾಯಿತಿಗಳಿವೆ.

ಅರ್ಬಾನೊ ಆವೃತ್ತಿಯ ಪರಿಚಯವು ಇತ್ತೀಚೆಗೆ ಬಿಡುಗಡೆಯಾದ ಡ್ರೀಮ್ ಸೀರಿಸ್ ನಂತೆಯೇ ಇದೆ. ಇದು ಮಾರಾಟವನ್ನು ಸುಧಾರಿಸುವ ಪ್ರಯತ್ನದಲ್ಲಿ ಆಲ್ಟೋ ಕೆ 10, ಎಸ್ ಪ್ರೆಸ್ಸೊ ಮತ್ತು ಸೆಲೆರಿಯೊ ರೀತಿಯೇ ಹೆಚ್ಚುವರಿ ಫೀಚರ್​ಗಳನ್ನು ನೀಡಲಾಗಿದೆ.

ಮಾರುತಿ ಬ್ರೆಝಾ ಪವರ್ ಟ್ರೇನ್

ಬ್ರೆಝಾ 103 ಬಿಹೆಚ್ ಪಿ, 137 ಎನ್ಎಂ 1.5-ಲೀಟರ್, ನಾಲ್ಕು ಸಿಲಿಂಡರ್ ಎನ್ಎ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದ್ದು, 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಯ್ಕೆ ಮಾಡಲಾಗಿದೆ. ಟಾಟಾ ನೆಕ್ಸಾನ್, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ ಎಕ್ಸ್ ಯುವಿ 3 ಎಕ್ಸ್ ಒ ಸೇರಿದಂತೆ ಇತರ ಸಮಾನ ಬೆಲೆಯ ಎಸ್ ಯುವಿಗಳು ಪ್ರತಿಸ್ಪರ್ಧಿಗಳಾಗಿವೆ.

Continue Reading
Advertisement
Kalki 2898 AD Prabhas thanks fans
ಟಾಲಿವುಡ್32 seconds ago

Kalki 2898 AD: ನೀವಿಲ್ಲದೆ ನಾನು ಶೂನ್ಯ ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ಪ್ರಭಾಸ್‌!

Mahanati Grand Finale priyanka from mysore is the winner season 1 dhanyashree runner up
ಕಿರುತೆರೆ24 mins ago

Mahanati Grand Finale: ʻಮಹಾನಟಿʼ ಚಿನ್ನದ ಕಿರೀಟ ಮುಡಿಗೇರಿಸಿಕೊಂಡ ಪ್ರಿಯಾಂಕಾ; ಧನ್ಯಶ್ರೀಗೆ ಎರಡನೇ ಸ್ಥಾನ, ಬಹುಮಾನ ಏನು?

Suvendu Adhikari
ರಾಜಕೀಯ1 hour ago

Suvendu Adhikari: ಉಪಚುನಾವಣೆಯಲ್ಲಿ ಭಾರಿ ವಂಚನೆ? 2 ಲಕ್ಷ ಹಿಂದುಗಳ ವೋಟಿಂಗ್‌ ಹಕ್ಕು ಕಸಿಯಲಾಗಿತ್ತು ಎಂದ ಬಿಜೆಪಿ ನಾಯಕ

salary hike
ಪ್ರಮುಖ ಸುದ್ದಿ1 hour ago

Salary Hike: ಸರ್ಕಾರಿ ನೌಕರರಿಗೆ ಭರವಸೆಯ ಸುದ್ದಿ; ಇಂದು ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಸಮ್ಮತಿ?

Talguppa Honnavar Railway Line
ಉತ್ತರ ಕನ್ನಡ1 hour ago

Talguppa Honnavar Railway Line: ಹೊನ್ನಾವರ-ತಾಳಗುಪ್ಪ ರೈಲ್ವೆ ಮಾರ್ಗ; ಮಂಕಿಯ ಬಿಜೆಪಿ ಮುಖಂಡರಿಂದ ಸಂಸದ ಕಾಗೇರಿಯವರಿಗೆ ಮನವಿ

road accident chitradurga news
ಕ್ರೈಂ2 hours ago

Road Accident: ನಿದ್ರೆ ಮಂಪರಿನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ, ಇಬ್ಬರು ಸಾವು

Shikakai For Hair
ಆರೋಗ್ಯ2 hours ago

Shikakai For Hair: ಕೂದಲಿನ ಪೋಷಣೆಗೆ ಶ್ಯಾಂಪು ಒಳ್ಳೆಯದೋ ಸೀಗೆಕಾಯಿ ಒಳ್ಳೆಯದೋ?

Terrorist Attack
ಪ್ರಮುಖ ಸುದ್ದಿ2 hours ago

Terrorist Attack: ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದ ಸೇನೆ

karnataka weather Forecast
ಮಳೆ2 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Noodles Side Effect
ಆರೋಗ್ಯ3 hours ago

Noodles Side Effect: ಇನ್‌ಸ್ಟಂಟ್‌ ನೂಡಲ್‌‌ಗಳನ್ನು ಸೇವಿಸಿದರೆ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ15 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ16 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ20 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ21 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ6 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

ಟ್ರೆಂಡಿಂಗ್‌