Rishabh Pant Accident | ಕಾರುಗಳು ಅಪಘಾತಕ್ಕೆ ಒಳಗಾದಾಗ ಬೆಂಕಿ ಹೊತ್ತಿಕೊಳ್ಳುವುದು ಯಾಕೆ? ಅದಕ್ಕೆ ಪರಿಹಾರವೇನು? - Vistara News

ಆಟೋಮೊಬೈಲ್

Rishabh Pant Accident | ಕಾರುಗಳು ಅಪಘಾತಕ್ಕೆ ಒಳಗಾದಾಗ ಬೆಂಕಿ ಹೊತ್ತಿಕೊಳ್ಳುವುದು ಯಾಕೆ? ಅದಕ್ಕೆ ಪರಿಹಾರವೇನು?

ಅಪಘಾತಕ್ಕೆ ಒಳಗಾದ ಕಾರಿಗೆ ಬೆಂಕಿ ಹೊತ್ತಿಕೊಂಡರೆ ಏನು ಮಾಡಬೇಕು? ಇಲ್ಲಿದೆ ಸಲಹೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಶುಕ್ರವಾರ ಮುಂಜಾನೆ ವೇಳೆಗೆ ಭಾರತದ ಕ್ರಿಕೆಟ್​ ಅಭಿಮಾನಿಗಳೆಲ್ಲರೂ ಬೆಚ್ಚಿ ಬೀಳುವಂಥ ಸುದ್ದಿಯೊಂದು ಬಂತು. ವಿಕೆಟ್​ಕೀಪರ್​ ಬ್ಯಾಟರ್ ರಿಷಭ್​ ಪಂತ್ (Rishabh Pant Accident) ಅವರ ಕಾರು ಅಪಘಾತಕ್ಕೆ ಒಳಗಾಗಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು. ಈ ವೇಳೆ ಎಲ್ಲರೂ ರಿಷಭ್​ಗಾಗಿ ಪ್ರಾರ್ಥನೆ ಮಾಡಿದ್ದರು. ಅದರ ಫಲ ದೊರಕಿದ್ದು, ಸಾಮಾನ್ಯ ಮಟ್ಟದ ಗಾಯಗಳೊಂದಿಗೆ ರಿಷಭ್​ ಅವರು ಆರೋಗ್ಯವಾಗಿದ್ದಾರೆ. ಆದರೆ, ಡಿವೈಡರ್​ಗೆ ಗುದ್ದಿದ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿತು. ಅದಕ್ಕೇನು ಕಾರಣ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಕಾರುಗಳು ದೊಡ್ಡ ಮಟ್ಟದ ಅಪಘಾತಕ್ಕೆ ಒಳಗಾದಾಗ ಬೆಂಕಿ ಹೊತ್ತಿಕೊಳ್ಳುವುದು ಸಾಮಾನ್ಯ. ಅಪಘಾತದ ಸಂದರ್ಭದಲ್ಲಿ ಕಾರಿನ ಲೋಹಗಳ ನಡುವೆ ಉಂಟಾಗುವ ಘರ್ಷಣೆ ಬೆಂಕಿಯ ಕಿಡಿ ಉಂಟಾಗಿ ಬಹುಬೇಗನೆ ಕಾರನ್ನು ವ್ಯಾಪಿಸುತ್ತದೆ. ಅಂತೆಯೇ ಆಧುನಿಕ ಕಾರುಗಳ ನಿರ್ಮಾಣಕ್ಕೆ ಬಳಸುವ ವಸ್ತುಗಳಾದ ಪ್ಲಾಸ್ಟಿಕ್​, ಎಲೆ್ಕ್ಟ್ರಿಕಲ್​ ವೈರಿಂಗ್, ಫ್ಯಾಬ್ರಿಕ್​ಗಳಿಗೆ ಬೇಗ ಬೆಂಕಿ ಅಂಟಿಕೊಳ್ಳುತ್ತವೆ. ಅಪಘಾತದ ಸಂದರ್ಭದಲ್ಲಿ ಇಂಧನ ಸೋರಿಕೆ ಉಂಟಾಗಿ ಅದಕ್ಕೂ ಬೆಂಕಿ ತಗುಲುತ್ತದೆ. ಅಪಘಾತದ ವೇಳೆ ಎಂಜಿನ್​ ಮತ್ತು ಬ್ಯಾಟರಿಗಳು ಅತಿಯಾಗಿ ಬಿಸಿಯಾಗಿ ಬೆಂಕಿ ಕಿಡಿಯಾಗಿ ಪರಿವರ್ತನೆಗೊಳ್ಳುವುದು ಕೂಡ ಕಾರುಗಳು ಭಸ್ಮವಾಗಲು ಕಾರಣವಾಗುತ್ತದೆ.

ಪರಿಹಾರ ಏನು?

ಬೆಂಕಿ ಹಿಡಿದಿರುವ ಕಾರಿನಿಂದ ಹೊರಕ್ಕೆ ಬರುವುದು ಮೊದಲ ಆದ್ಯತೆಯಾಗಬೇಕು. ಹಿಂದೆ ಮುಂದೆ ಯೋಚನೆ ಮಾಡದೇ ಅಥವಾ ಮಾನಸಿಕ ಆಘಾತದಿಂದ ಹೊರಕ್ಕೆ ಬಂದು ಗಟ್ಟಿಯಾದ ಸಾಧನದಿಂದ ಗಾಜು ಒಡೆದು ಕಾರಿನಿಂದ ಹೊರಕ್ಕೆ ಜಿಗಿಯಬೇಕು. ಅಗ್ನಿಶಾಮಕ ಸಾಧನವನ್ನು ಯಾವಾಗಲೂ ಜತೆಯಲ್ಲಿ ಇಟ್ಟುಕೊಂಡಿರಬೇಕು ಹಾಗೂ ಇದರಿಂದ ಅಪಾಯ ಹೆಚ್ಚು. ಬೆಂಕಿಗೆ ಬೇಗ ಆಹುತಿಯಾಗಬಲ್ಲ ಯಾವುದೇ ವಸ್ತುಗಳನ್ನು ಪ್ರಯಾಣಿಕರ ಕಾರಿನಲ್ಲಿ ಕೊಂಡೊಯ್ಯಬಾರದು.

ಸಹಾಯ ಮಾಡಿ

ನೀವು ಜವಾಬ್ದಾರಿಯುತ ನಾಗರಿಕರಾಗಿದ್ದರೆ ಇಂಥ ಅಪಘಾತಗಳು ನಡೆದಾಗ ಕಾರಿನೊಳಗೆ ಯಾರಾದರೂ ಸಿಲುಕಿದ್ದರೆ ಅವರನ್ನು ಮೊದಲು ರಕ್ಷಿಸಬೇಕು. ರಿಷಭ್​ ಪಂತ್ ಪ್ರಕರಣದಲ್ಲಿ ಸ್ಥಳೀಯರು ಕಾರಿನೊಳಗಿಂದ ಅವರಿಗೆ ಬರಲು ನೆರವಾಗಿದ್ದರು. ಅದೇ ರೀತಿ ಬೆಂಕಿ ಬಿದ್ದ ಕಾರಿನಲ್ಲಿ ಯಾರಾದರೂ ಸಿಲುಕಿದ್ದರೆ ಅವರಿಗೆ ನೆರವಾಗಿ. ಪ್ರಯಾಣಿಕರು ಒಳಗೆ ಪ್ರಜ್ಞೆ ಕಳೆದುಕೊಂಡಿದ್ದರೆ ಗಟ್ಟಿಯಾದ ವಸ್ತುವಿನಲ್ಲಿ ಗಾಜು ಒಡೆದು ಸೀಟ್​ ಬೆಲ್ಟ್​ ಕತ್ತರಿಸಿ ಅವರನ್ನು ಹೊರಕ್ಕೆ ತನ್ನಿ.

ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಲಿ

ಕಾರಿನಲ್ಲಿ ಪ್ರಥಮ ಚಿಕಿತ್ಸೆಯ ಪೆಟ್ಟಿಯನ್ನು ಸದಾ ಕೊಂಡೊಯ್ಯಬೇಕು. ಬೆಂಕಿ ತಗುಲಿದಾಗ ಆಗುವ ಉರಿಯನ್ನು ತಪ್ಪಿಸಲು ಬೇಕಾದ ಜೆಲ್​ ಬಳಸಿಕೊಳ್ಳಿ. ಸಣ್ಣ ಪುಟ್ಟ ಬ್ಯಾಂಡೇಜ್​ಗಳನ್ನು ಜತೆಗೆ ಇಟ್ಟುಕೊಳ್ಳಿ.

ಕಾರಿನಿಂದ ದೂರ ಇರಿ

ಬೆಂಕಿ ಹೊತ್ತಿಕೊಂಡ ಕಾರಿನಿಂದ ಅಂತರ ಕಾಪಾಡಿಕೊಂಡು ನಿಲ್ಲಬೇಕು. ಕಾರಿನಿಂದ ಹೊರಕ್ಕೆ ಬಂದ ಬಳಿಕ ಬೆಲೆ ಬಾಳುವ ವಸ್ತುಗಳಿವೆ ಎಂಬ ನೆಪ ಹೇಳಿ ಸುತ್ತಮುತ್ತ ನಿಲ್ಲಬಾರದು. ಬೆಂಕಿಯ ಕೆನ್ನಾಲಗೆ ಯಾವತ್ತೂ ಬೇಕಾದರೂ ಚಾಚಿಕೊಳ್ಳಬಹುದು. ಸಣ್ಣ ಪುಟ್ಟ ಸ್ಫೋಟಗಳು ಆಗಬಹುದು. ಹತ್ತಿರದಲ್ಲಿ ಇನ್ಯಾವುದೇ ವಾಹನಗಳನ್ನು ನಿಲ್ಲಿಸಬಾರದು.

ಸಹಾಯಕ್ಕಾಗಿ ಕರೆ ಮಾಡಿ

ವಾಹನಗಳಿಗೆ ಬೆಂಕಿ ತಗುಲಿದ ತಕ್ಷಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ. ಅಲ್ಲದೆ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಟ್ರಾಫಿಕ್ ಜಾಮ್​ ಉಂಟಾಗದಂತೆ ನೋಡಿಕೊಳ್ಳಲು ಹೇಳಿ. ಇದರಿಂದ ವಾಹನ ಸಂಚಾರದ ಮಾರ್ಗವನ್ನು ಬದಲಾಯಿಸಿ ಆಂಬ್ಯುಲೆನ್ಸ್​ ಹಾಗೂ ಅಗ್ನಿ ಶಾಮಕ ದಳದ ವಾಹನ ಬರಲು ಅನುಕೂಲ ಮಾಡಿಕೊಡಬಹುದು. ನಷ್ಟ ಪರಿಹಾರಕ್ಕಾಗಿ ಇನ್ಯೂರೆನ್ಸ್​ ಕಂಪನಿಗೂ ಮಾಹಿತಿ ನೀಡಿ.

ಇದನ್ನೂ ಓದಿ | Rishabh Pant | ಪಂತ್​ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಲು ಕಳಪೆ ರಸ್ತೆ ಕಾರಣ ಎಂದ ಸ್ಥಳೀಯರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆಟೋಮೊಬೈಲ್

Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

Xiaomi EV: ಟೆಕ್ ದೈತ್ಯ ಕಂಪೆನಿ ಚೀನಾದ ಕ್ಸಿಯೋಮಿ (Xiaomi) ಆಟೋ ಉದ್ಯಮವನ್ನು ಪ್ರವೇಶಿಸಿದ್ದು, ಕೇವಲ ಒಂದು ತಿಂಗಳಲ್ಲಿ 75 ಸಾವಿರಕ್ಕೂ ಹೆಚ್ಚು ಆರ್ಡರ್ ಸ್ವೀಕರಿಸಿದೆ. ಕ್ಸಿಯೋಮಿ ಇವಿ ಎಸ್ ಯು7 ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಾಹನ ಮಾರಾಟ ಗುರಿಯನ್ನು ಹೊಂದಿದೆ.

VISTARANEWS.COM


on

By

Xiaomi EV
Koo

ಸ್ಮಾರ್ಟ್‌ಫೋನ್ (smart phone) ತಯಾರಿಕ ಟೆಕ್ ದೈತ್ಯ ಕಂಪನಿ ಚೀನಾದ (china) ಕ್ಸಿಯೋಮಿ (Xiaomi) ಇದೀಗ ಆಟೋ (auto) ಉದ್ಯಮವನ್ನು ಪ್ರವೇಶಿಸಲು ಸಜ್ಜಾಗಿದ್ದು, ಕ್ಸಿಯೋಮಿ ಈ ತಿಂಗಳಲ್ಲಿ ತನ್ನ ಹೊಸ ಎಸ್ ಯು 7 (Xiaomi EV) ಎಲೆಕ್ಟ್ರಿಕ್ ಸೆಡಾನ್‌ಗಾಗಿ 75,723 ಆರ್ಡರ್‌ಗಳನ್ನು ಪಡೆದುಕೊಂಡಿದೆ ಮತ್ತು ಜೂನ್ ವೇಳೆಗೆ 10,000 ಯೂನಿಟ್‌ಗಳನ್ನು ತಲುಪಿಸಲು ಯೋಜನೆ ರೂಪಿಸಿದೆ ಎಂದು ಕ್ಸಿಯೋಮಿ ಸಂಸ್ಥಾಪಕ ಲೀ ಜುನ್ ತಿಳಿಸಿದ್ದಾರೆ.

ಬೀಜಿಂಗ್ (Beijing) ಆಟೋ ಶೋನ ಮೊದಲ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿತರಣೆ ಗುರಿಯು ಎಲೆಕ್ಟ್ರಿಕ್ ವೆಹಿಕಲ್ (EV) ಸ್ಟಾರ್ಟ್‌ಅಪ್‌ಗಾಗಿ ಹೊಸ ದಾಖಲೆಯನ್ನು ಸ್ಥಾಪಿಸುತ್ತದೆ ಎಂದು ಹೇಳಿದರು.

ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಆರ್ಡರ್ ಸ್ವೀಕರಿಸಲು ಪ್ರಾರಂಭಿಸಲಾಗಿದ್ದು, ಮರುಪಾವತಿಸಲಾಗದ ಠೇವಣಿಗಳೊಂದಿಗೆ 75,೦೦೦ಕ್ಕೂ ಹೆಚ್ಚು SU7 ನ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ. ಕೇವಲ ಒಂದು ತಿಂಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಆರ್ಡರ್ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?


ವರ್ಷದಲ್ಲಿ 1 ಲಕ್ಷ ಮಾರಾಟ ಗುರಿ

ಕ್ಸಿಯೋಮಿ ಈ ವರ್ಷ ಎಸ್ ಯು7ಗಾಗಿ 1,00,000ಕ್ಕೂ ಹೆಚ್ಚು ವಿತರಣೆ ಗುರಿಯನ್ನು ಹೊಂದಿದೆ. ಮುಂದಿನ ಮೂರು ವರ್ಷಗಳವರೆಗೆ ಚೀನೀ ಮಾರುಕಟ್ಟೆಯ ಮೇಲೆ ಸ್ಥಿರವಾದ ಬೇಡಿಕೆಯನ್ನು ಉಳಿಸಿಕೊಳ್ಳಲು ಕಂಪನಿ ಉದ್ದೇಶಿಸಿದೆ ಎಂದು ಲೀ ತಿಳಿಸಿದರು.

ಮೇ ಅಂತ್ಯಕ್ಕೆ ಪ್ರೊ ಮಾದರಿ ಪರಿಚಯ

ಬೇಡಿಕೆಯನ್ನು ಪೂರೈಸಲು ಕ್ಸಿಯಾವೋಮಿ SU7ನ ಪ್ರಮಾಣಿತ ಮತ್ತು ಮ್ಯಾಕ್ಸ್ ಆವೃತ್ತಿಗಳ ವಿತರಣೆಯನ್ನು ನಿಗದಿತ ಸಮಯಕ್ಕಿಂತ ಹನ್ನೆರಡು ದಿನಗಳ ಮುಂಚಿತವಾಗಿ ಪೂರ್ಣಗೊಳಿಸಿದೆ. ಮೇ ಅಂತ್ಯದ ವೇಳೆಗೆ ಪ್ರೊ ಮಾದರಿಗಳನ್ನು ಪರಿಚಯಿಸಲು ಕಂಪೆನಿಯು ಯೋಜನೆ ಹಾಕಿಕೊಂಡಿದೆ.

ಬೆಲೆ ಕಡಿತ, ಸಬ್ಸಿಡಿ ಘೋಷಣೆ

ಟೆಸ್ಲಾದ ಮಾಡೆಲ್ 3 ಗೆ ಪೈಪೋಟಿ ನೀಡುವ SU7ನ ಚೀನಾದ ಬೃಹತ್ ವಾಹನ ಮಾರುಕಟ್ಟೆಯಲ್ಲಿ EV ಬೆಲೆಗೆ ಪೈಪೋಟಿ ನೀಡಲಿದೆ. Xiaomi ಮಾರುಕಟ್ಟೆ ಪ್ರವೇಶಕ್ಕೆ ಮುಂಚಿತವಾಗಿಯೇ ವಾಹನ ತಯಾರಕರು ಬೆಲೆ ಕಡಿತ ಮತ್ತು ಸಬ್ಸಿಡಿಗಳನ್ನು ಘೋಷಿಸಿದ್ದಾರೆ.


Xiaomiಯ ತಯಾರಿಕೆಯಲ್ಲಿ 6,000 ಆಟೋ ತಂಡವು ಕಾರ್ಯ ನಿರ್ವಹಿಸುತ್ತಿದ್ದು, ಇದು ಸಾಕಾಗುವುದಿಲ್ಲ. ಕಂಪೆನಿಯ ಶೀಘ್ರದಲ್ಲೇ ಹೊಸ ಪ್ರತಿಭೆಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳಲಿದೆ. ಆಟೋಮೋಟಿವ್ ಕ್ಷೇತ್ರದಲ್ಲಿ ಆಸಕ್ತರಿರುವವರು ಕಂಪೆನಿ ಸೇರಲು ಈ ಸಂದರ್ಭದಲ್ಲಿ ಜಾಗತಿಕ ಪ್ರತಿಭೆಗಳಿಗೆ ಕರೆ ನೀಡಿದರು.

ಟೆಸ್ಲಾಗಿಂತ ಅಗ್ಗ

ಎಸ್ ಯು7 ಅನ್ನು ಸ್ಪೀಡ್ ಅಲ್ಟ್ರಾ 7 ಎಂದೂ ಕರೆಯುತ್ತಾರೆ. ಇದು ಸ್ಪರ್ಧಾತ್ಮಕ ಚೈನೀಸ್ ಇವಿ ಮಾರುಕಟ್ಟೆಯನ್ನು 30,000 ಡಾಲರ್ ಗಿಂತ ಕಡಿಮೆ ಬೆಲೆಯ ಮೂಲ ಮಾದರಿಯೊಂದಿಗೆ ಪ್ರವೇಶಿಸಲಿದೆ. ಇದು ಚೀನಾದಲ್ಲಿ ಟೆಸ್ಲಾ ಮಾದರಿ 3ಕ್ಕಿಂತ ಅಗ್ಗವಾಗಿ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.


5,000 ಉತ್ಪಾದನೆ

Xiaomi ಈಗಾಗಲೇ 5,000 SU7 ವಾಹನಗಳನ್ನು ಉತ್ಪಾದಿಸಿದೆ. ಇದನ್ನು “ಸ್ಥಾಪಕರ ಆವೃತ್ತಿ” ಎಂದು ಕರೆಯಲಾಗುತ್ತದೆ. ವಿಶೇಷ ಆವೃತ್ತಿ, EV ಯ ಸೀಮಿತ ಉತ್ಪಾದನಾ ಆವೃತ್ತಿಯು ಆರಂಭಿಕ ಖರೀದಿದಾರರಿಗೆ ಹೆಚ್ಚುವರಿ ಬಿಡಿಭಾಗಗಳೊಂದಿಗೆ ಬರಲಿದೆ.

SU7 ವಾಹನಗಳ ಆರಂಭಿಕ ಬ್ಯಾಚ್‌ನ ವಿತರಣೆಗಳು ಶೀಘ್ರದಲ್ಲೇ 28 ಚೀನೀ ನಗರಗಳಲ್ಲಿ ಪ್ರಾರಂಭವಾಗಲಿದೆ ಎಂದು ಲೀ ಜುನ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು.

Xiaomi SU7 ಆಟೋ ವ್ಯವಹಾರದಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡಲಾಗಿದೆ. ಪ್ರಾರಂಭದಲ್ಲಿ ಕಂಪೆನಿ ಸಲ್ಪ ನಷ್ಟ ಅನುಭವಿಸಬೇಕಾಗುತ್ತದೆ. ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ. Xiaomi ಗಮನಾರ್ಹ ಪ್ರಮಾಣದ ಹಣವನ್ನು ಕಳೆದುಕೊಳ್ಳುತ್ತಾರೆ. ಯೋಜಿತ ಮಾರಾಟದ ಪರಿಮಾಣದ ಆಧಾರದ ಮೇಲೆ 4.1 ಶತಕೋಟಿ ಯುವಾನ್ ಅಥವಾ ಸುಮಾರು 566.82 ಮಿಲಿಯನ್ ಡಾಲರ್ ನಷ್ಟವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Continue Reading

ವಾಣಿಜ್ಯ

Tata Motors: ಮ್ಯಾಜಿಕ್ ಬೈ-ಫ್ಯುಯೆಲ್ ವ್ಯಾನ್‌ ಬಿಡುಗಡೆ ಮಾಡಿದ ಟಾಟಾ ಮೋಟರ್ಸ್

Tata Motors: ಟಾಟಾ ಮೋಟರ್ಸ್ ಕಂಪನಿಯು ಟಾಟಾ ಮ್ಯಾಜಿಕ್‌ನ ಹೊಸ ಶ್ರೇಣಿಯಾದ ಮ್ಯಾಜಿಕ್ ಬೈ-ಫ್ಯುಯೆಲ್ ವ್ಯಾನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 10 ಆಸನಗಳ ಟಾಟಾ ಮ್ಯಾಜಿಕ್ ವ್ಯಾನ್‌ ಪ್ರಯಾಣಿಕರು ಮತ್ತು ಚಾಲಕರಿಗೆ ಹೇಳಿ ಮಾಡಿಸಿದ ವಾಹನವಾಗಿದೆ.

VISTARANEWS.COM


on

Tata Motors launched the Magic bi fuel van
Koo

ಬೆಂಗಳೂರು: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ (Tata Motors), ದೇಶದ ಅತ್ಯಂತ ಜನಪ್ರಿಯ ವ್ಯಾನ್ ಟಾಟಾ ಮ್ಯಾಜಿಕ್ (Tata Magic) ಅನ್ನು 4 ಲಕ್ಷ ಗ್ರಾಹಕರು ಖರೀದಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದ್ದು, ಟಾಟಾ ಮ್ಯಾಜಿಕ್‌ನ ಹೊಸ ಶ್ರೇಣಿಯಾದ ಮ್ಯಾಜಿಕ್ ಬೈ-ಫ್ಯುಯೆಲ್ (Magic Bi Fuel) ಅನ್ನು ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವಿಶ್ವಾಸಾರ್ಹತೆ, ಕಾರ್ಯದಕ್ಷತೆ ಮತ್ತು ಕೈಗೆಟುಕುವ ದರಕ್ಕೆ ಹೆಸರುವಾಸಿಯಾಗಿರುವ ಟಾಟಾ ಮೋಟರ್ಸ್ ಅತ್ಯುತ್ತಮ ಸೇವೆಯನ್ನು ನೀಡುವ ಬದ್ಧತೆಯನ್ನು ಹೊಂದಿದೆ. 10 ಆಸನಗಳ ಟಾಟಾ ಮ್ಯಾಜಿಕ್ ವ್ಯಾನ್‌ ಪ್ರಯಾಣಿಕರು ಮತ್ತು ಚಾಲಕರಿಗೆ ಹೇಳಿ ಮಾಡಿಸಿದ ವಾಹನವಾಗಿದೆ. ಸ್ಲೀಕ್ ಡಿಸೈನ್, ಸುರಕ್ಷತೆ ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಟಾಟಾ ಮ್ಯಾಜಿಕ್ ಕಳೆದ ಹಲವು ವರ್ಷಗಳಿಂದ ಯಶಸ್ಸಿನ ಹಾದಿಯಲ್ಲಿ ಸಾಗಿದೆ.

ಇದನ್ನೂ ಓದಿ: Ayodhya Ram mandir: ಈವರೆಗೆ ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿದವರ ಸಂಖ್ಯೆ 1.5 ಕೋಟಿ!

ಇಕೋ ಸ್ವಿಚ್, ಗೇರ್ ಶಿಫ್ಟ್ ಅಡ್ವೈಸರ್ ಮತ್ತು ಚಾಲಕರಿಗೆ ಅನುಕೂಲದಾಯಕ ಅಂಶಗಳು ಸೇರಿದಂತೆ ಹಲವಾರು ಮೌಲ್ಯವರ್ಧಿತ ವೈಶಿಷ್ಟ್ಯತೆಗಳನ್ನು ಈ ಟಾಟಾ ಮ್ಯಾಜಿಕ್ ಹೊಂದಿದೆ. ಇದಲ್ಲದೇ, ಕೈಗೆಟುಕುವ ದರದಲ್ಲಿ ಈ ವಾಹನ ಲಭ್ಯವಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರಯಾಣಕ್ಕೆ ಸೂಕ್ತವಾದ ವಾಹನವಾಗಿರುವ ಟಾಟಾ ಮ್ಯಾಜಿಕ್, ಕಟ್ಟಕಡೆಯ ಮೈಲಿಯವರೆಗೆ ಸಾರಿಗೆ ಸೌಲಭ್ಯ ಒದಗಿಸುವ ವಾಹನವಾಗಿದೆ.

ಟಾಟಾ ಮ್ಯಾಜಿಕ್ –ಬೈ-ಫ್ಯುಯೆಲ್ ವಾಹನವು 694 ಸಿಸಿ ಎಂಜಿನ್ ಮತ್ತು 60 ಲೀಟರ್ ಸಾಮರ್ಥ್ಯದ ಸಿಎನ್‌ಜಿ ಟ್ಯಾಂಕ್ ಹಾಗೂ 5 ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಹೊಂದಿದೆ. ಒಂದು ಬಾರಿ ಸಿಎನ್‌ಜಿ ಟ್ಯಾಂಕ್ ತುಂಬಿಸಿದರೆ 380 ಕಿಲೋಮೀಟರ್‌ವರೆಗೆ ಸಾಗಬಹುದಾಗಿದೆ. ಸರಿಸಾಟಿಯಿಲ್ಲದ ಕಾರ್ಯದಕ್ಷತೆ ಮತ್ತು ಕಡಿಮೆ ನಿರ್ವಹಣೆ ವೆಚ್ಚದಿಂದ ಕೂಡಿರುವ ಈ ಮ್ಯಾಜಿಕ್ ವಾಹನಕ್ಕೆ 2 ವರ್ಷಗಳ ಅಥವಾ 72,000 ಕಿಲೋಮೀಟರ್‌ಗಳ ವಾರಂಟಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Leopard Attack: ನೂರಕ್ಕೂ ಹೆಚ್ಚು ಕುರಿಗಳ ಜತೆಯೇ ಎರಡು ಗಂಟೆ ಇದ್ದ ಚಿರತೆ!

ಈ ಕುರಿತು ಮಾತನಾಡಿದ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ವಿಭಾಗದ ಪ್ಯಾಸೆಂಜರ್ ಬ್ಯುಸಿನೆಸ್‌ನ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಆನಂದ್ ಎಸ್., ನಮ್ಮ ವಿನೂತನವಾದ ಮ್ಯಾಜಿಕ್ ಬ್ರ್ಯಾಂಡ್ ಅನ್ನು 4 ಲಕ್ಷ ಗ್ರಾಹಕರಿಗೆ ತಲುಪಿಸಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಈ ಮೈಲಿಗಲ್ಲು ಸ್ಥಾಪಿಸಿರುವ ಸವಿನೆನಪಿಗಾಗಿ ನಾವು ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಮ್ಯಾಜಿಕ್ ಬೈ-ಫ್ಯುಯೆಲ್ ವಾಹನವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇದು ಪೆಟ್ರೋಲ್‌ನೊಂದಿಗೆ ಸಿಎನ್‌ಜಿ ಚಾಲಿತ ವಾಹನವಾಗಿದೆ. ಸಾರಿಗೆ ಅಗತ್ಯತೆಗಳನ್ನು ಪೂರೈಸುವುದು ಮತ್ತು ನಮ್ಮ ಗ್ರಾಹಕರ ಲಾಭದ ಪ್ರಮಾಣ ಹಾಗೂ ಅನುಕೂಲವನ್ನು ಸುಧಾರಣೆ ಮಾಡುವುದಕ್ಕೆ ಪೂರಕವಾಗಿ ಈ ಹೊಸ ಶ್ರೇಣಿಯ ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Continue Reading

ದೇಶ

Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?

Innova Hycross: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹೊಸ ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಅನ್ನು ಪರಿಚಯಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ GX (O) ಗ್ರೇಡ್ 10 ಕ್ಕೂ ಹೆಚ್ಚು ಅಡ್ವಾನ್ಸ್ ಟೆಕ್ನಾಲಜಿ ಮತ್ತು ಕಂಫರ್ಟ್ ಫೀಚರ್‌ಗಳನ್ನು ಹೊಂದಿರುವ ವಾಹನ ಇದಾಗಿದೆ.

VISTARANEWS.COM


on

Toyota Kirloskar Motor Launches New Innova Hicross Petrol GX (O) Grade
Koo

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ‘ಗ್ರಾಹಕ-ಮೊದಲು’ ತತ್ವಕ್ಕೆ ಅನುಗುಣವಾಗಿ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಿ ಹೊಸ ಇನ್ನೋವಾ ಹೈಕ್ರಾಸ್ GX (O) ಗ್ರೇಡ್ ಅನ್ನು ಪೆಟ್ರೋಲ್ ರೂಪಾಂತರದಲ್ಲಿ ಪರಿಚಯಿಸುವುದಾಗಿ (Innova Hycross) ಘೋಷಿಸಿದೆ.

ಇನ್ನೋವಾ ಹೈಕ್ರಾಸ್ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿರುವ GX (O) ಗ್ರೇಡ್ 10 ಕ್ಕೂ ಹೆಚ್ಚು ಸುಧಾರಿತ ಆರಾಮದಾಯಕ ಮತ್ತು ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಹೊಂದಿದ್ದು, ಇನ್ನೋವಾ ಹೈಕ್ರಾಸ್ ಪೆಟ್ರೋಲ್ ಜಿಎಕ್ಸ್ (ಒ) ಹೆಚ್ಚಿನ ಅಗತ್ಯತೆಗಳನ್ನು ಬಯಸುವ ಗ್ರಾಹಕರಿಗೆ ಮೌಲ್ಯಾಧಾರಿತವಾಗಿದೆ.

ಇದನ್ನೂ ಓದಿ: NEET PG-2024: ನೀಟ್‌ ಪಿಜಿ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ; ಇಲ್ಲಿದೆ ನೋಂದಣಿ ಮಾಹಿತಿ

ವಿಶೇಷತೆಗಳೇನು?

ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಪ್ಸ್ , ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ಸ್, ರಿಯರ್ ಡೀಫಾಗರ್ ಫೀಚರ್‌ಗಳನ್ನು ಇದು ಒಳಗೊಂಡಿದೆ. ಸುಪೀರಿಯರ್ ಕಂಫರ್ಟ್ – ಚೆಸ್ಟ್ ನಟ್ ಥೀಮ್ ಇಂಟೀರಿಯರ್, ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು ಡೋರ್ ಪ್ಯಾನಲ್, ಮಿಡ್-ಗ್ರೇಡ್ ಫ್ಯಾಬ್ರಿಲ್ ಸೀಟ್ಸ್, ರಿಯರ್ ಸನ್ ಶೇಡ್ ವೈಶಿಷ್ಟ್ಯವನ್ನು ಹೊಂದಿದ್ದು, ಆಟೋ ಎಸಿ, 10.1″ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಪನೋರಮಿಕ್ ವ್ಯೂ ಮಾನಿಟರ್‌ಗಳನ್ನು ಒಳಗೊಂಡಿದೆ.

7 ಡೈನಾಮಿಕ್ ಬಣ್ಣಗಳಲ್ಲಿ ಲಭ್ಯ

7 ಮತ್ತು 8 ಸೀಟರ್ ಆಯ್ಕೆಗಳಲ್ಲಿ ಲಭ್ಯವಿರುವ GX (O) ಗ್ರೇಡ್ 7 ಡೈನಾಮಿಕ್ ಬಣ್ಣಗಳಲ್ಲಿ ಲಭ್ಯವಿದೆ. ಬ್ಲ್ಯಾಕಿಶ್ ಅಗೆಹಾ ಗ್ಲಾಸ್ ಫ್ಲೇಕ್, ಪ್ಲಾಟಿನಂ ವೈಟ್ ಪರ್ಲ್ , ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್, ಸಿಲ್ವರ್ ಮೆಟಾಲಿಕ್, ಸೂಪರ್ ವೈಟ್ ಮತ್ತು ಅವಂಟ್ ಗ್ರೇಡ್ ಬ್ರೋನ್ಜ್ ಮೆಟಾಲಿಕ್ ಕಲರ್ ಗಳಲ್ಲಿ ದೊರೆಯಲಿದೆ.

ಈ ಕುರಿತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಸೇಲ್ಸ್-ಸರ್ವೀಸ್-ಯೂಸ್ಡ್ ಕಾರ್ ಬಿಸಿನೆಸ್‌ನ ಉಪಾಧ್ಯಕ್ಷ ಶಬರಿ ಮನೋಹರ್ ಮಾತನಾಡಿ, ನಿರಂತರವಾಗಿ ಮಾರುಕಟ್ಟೆಯ ಅಗತ್ಯಗಳನ್ನು ಆಲಿಸುತ್ತೇವೆ. ಇದರಿಂದಾಗಿ ನಾವು ನೀಡುವ ಪ್ರತಿಯೊಂದು ವಾಹನವು ನಮ್ಮ ಗ್ರಾಹಕರ ವಿಕಸನಗೊಳ್ಳುವ ಅಗತ್ಯಗಳಿಗೆ ಹೊಂದಿಕೆಯಾಗುತ್ತದೆ. ಹೊಸ ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಈ ತತ್ವಕ್ಕೆ ನಿದರ್ಶನವಾಗಿದೆ.

ಇದನ್ನೂ ಓದಿ: Dinesh Karthik: ಕಾರ್ತಿಕ್​ಗೆ ಟಿ20 ವಿಶ್ವಕಪ್​ನಲ್ಲಿ ಅವಕಾಶ ನೀಡಿ; ದಿಗ್ಗಜ ಕ್ರಿಕೆಟಿಗರ ಒತ್ತಾಯ

ಇದು ಹೆಚ್ಚಿನ ಆರಾಮದಾಯಕ ಮತ್ತು ಸುಧಾರಿತ ತಂತ್ರಜ್ಞಾನವನ್ನು ಐಷಾರಾಮಿ ಮತ್ತು ದಕ್ಷತೆಯೊಂದಿಗೆ ಎಚ್ಚರಿಕೆಯಿಂದ ಬೆರೆಸುತ್ತದೆ. ಕಾರ್ಯಕ್ಷಮತೆಯು ಉನ್ನತ ದರ್ಜೆಯದ್ದಾಗಿದ್ದು, 10ಕ್ಕೂ ಹೆಚ್ಚು ವೈಶಿಷ್ಟ್ಯಗಳು ತಮ್ಮ ವಿಕಸನಗೊಳ್ಳುತ್ತಿರುವ ಲೈಫ್‌ಸ್ಟೈಲ್ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಆಕರ್ಷಕ ಪ್ರಸ್ತಾಪದೊಂದಿಗೆ ಸಂಪೂರ್ಣವಾಗಿ ಲೋಡ್ ಮಾಡಲಾದ ಪೆಟ್ರೋಲ್ ಆವೃತ್ತಿಯನ್ನು ಹುಡುಕುತ್ತಿರುವ ಗ್ರಾಹಕರಿಂದ ಹೆಚ್ಚಿನ ಸ್ಪಂದನೆ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಎಕ್ಸ್‌ ಶೋರೂಂ ಬೆಲೆಗಳ ವಿವರಗಳು

Variant Ex Showroom Price (W.E.F 15th Apr 2024) Hycross Petrol GX (O) – 8-Seater 20.99 ಲಕ್ಷ ರೂ, ಮತ್ತು Hycross Petrol GX (O) – 7-Seater 21.13 ಲಕ್ಷ ರೂಗಳು ಆಗಿದೆ.

ಹೆಚ್ಚಿನ ಕಾರ್ಯಕ್ಷಮತೆ

ಇನ್ನೋವಾ ಹೈಕ್ರಾಸ್ 2 ಲೀ ಟಿಎನ್‌ಜಿಎ ಗ್ಯಾಸೋಲಿನ್ ಎಂಜಿನ್ ಹೊಂದಿದ್ದು, 128 ಕಿಲೋವ್ಯಾಟ್ (174 ಪಿಎಸ್) ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಲಾಂಚ್ ಗೇರ್ ಕಾರ್ಯ ವಿಧಾನದೊಂದಿಗೆ ಡೈರೆಕ್ಟ್ ಶಿಫ್ಟ್ ಸಿವಿಟಿ ಮತ್ತು ಸುಗಮ ಹಾಗೂ ಸ್ಪಂದಿಸುವ ವೇಗವರ್ಧನೆಗಾಗಿ 10 ಸ್ಪೀಡ್ ಸೀಕ್ವೆನ್ಸಿಯಲ್ ಶಿಫ್ಟ್ ಜತೆಗೆ 16.13 ಕಿ.ಮೀ ಬೆಸ್ಕ್ ಇನ್‌ಕ್ಲಾಸ್‌ ಫ್ಯೂಯಲ್ ಎಕಾನಮಿಯನ್ನು ಹೊಂದಿದೆ.

ಇದನ್ನೂ ಓದಿ: Gold Rate Today: ಏರಿಕೆಯಲ್ಲಿ ದಾಖಲೆ ಬರೆಯುತ್ತಲೇ ಇದೆ ಚಿನ್ನದ ದರ! ಇಂದಿನ ಬೆಲೆ ₹74,130 !

ಟಫ್ ಎಕ್ಸ್‌ಟೀರಿಯರ್

ಹೊಸ ಗ್ರೇಡ್ ಬೋಲ್ಡ್ ಮತ್ತು ಮಸ್ಕ್ಯುಲಾರ್ ಎಸ್‌ಯುವಿ ತರಹದ ಎಕ್ಸ್‌ಟೀರಿಯರ್ ಅನ್ನು ಹೊಂದಿದೆ. 16-ಇಂಚಿನ ಸಿಲ್ವರ್ ಅಲಾಯ್ ವೀಲ್ಸ್, ಎಲ್ಇಡಿ ಸ್ಟಾಪ್ ಲ್ಯಾಂಪ್‌ನೊಂದಿಗೆ ರೂಫ್ ಎಂಡ್ ಸ್ಪಾಯ್ಲರ್ ಮತ್ತು ಎಲ್‌ಇಡಿ ಸ್ಪಾಟ್ ಲ್ಯಾಂಪ್ ಜತೆಗೆ ರೂಫ್ ಎಂಡ್ ಸ್ಪಾಯ್ಲರ್, ಆಟೋ ಫೋಲ್ಡ್ ಓಆರ್‌ವಿಎಂ, ಎಲೆಕ್ಟ್ರಿಕ್ ಅಡ್ಜಸ್ಟ್ ಮತ್ತು ಟರ್ನ್ ಇಂಡಿಕೇಟರ್ ವೈಶಿಷ್ಟ್ಯಗಳನ್ನು ಹೊಂದಿದೆ.

ಐಷಾರಾಮಿ ಮತ್ತು ಆರಾಮದಾಯಕ ಇಂಟೀರಿಯರ್

ಇನ್ನೋವಾ ಹೈಕ್ರಾಸ್ GX (O) ಸುಧಾರಿತ ಕ್ಯಾಬಿನ್ ಸೌಂದರ್ಯವನ್ನು ಹೊಂದಿದೆ. ಡಾರ್ಕ್ ಚೆಸ್ಟ್ನಟ್ ಕ್ವಿಲ್ಟೆಡ್ ಲೆದರ್ ಸೀಟುಗಳೊಂದಿಗೆ ಸಾಫ್ಟ್‌ ಟಚ್ ಲೆದರ್ ಮತ್ತು ಮೆಟಾಲಿಕ್ ಡೆಕೋರೇಟೆಡ್ ಲೈನಿಂಗ್ ಅನ್ನು ಒಳಗೊಂಡಿದೆ.

ಕಾಕ್‌ ಪಿಟ್ ಅನ್ನು ಸಮತಲ ಟೋನ್‌ಗಳಲ್ಲಿ ವಿನ್ಯಾಸಗೊಳಿಸಲಾಗಿದ್ದು, ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಲಿದೆ. ಶಕ್ತಿಯುತ ಎಕ್ಸ್‌ಟೀರಿಯರ್ ಅನ್ನು ಪ್ರತಿಬಿಂಬಿಸಲು ಸೆಂಟ್ರಲ್ ಕ್ಲಸ್ಟರ್ ಮತ್ತು ಡೋರ್ ಡೆಕೋರ್‌ಗಾಗಿ ವರ್ಟಿಕಲ್ ಟೋನ್‌ಅನ್ನು ಬಳಸಲಾಗಿದೆ.

ಸುಧಾರಿತ ಸುರಕ್ಷತಾ ಕೊಡುಗೆ

ಇನ್ನೋವಾ ಹೈಕ್ರಾಸ್ ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಆಲ್-ವೀಲ್ ಡಿಸ್ಕ್ ಬ್ರೇಕ್ 6 ಎಸ್‌ಆರ್‌ಎಸ್ ಏರ್ ಬ್ಯಾಗ್ ಮತ್ತು ಐಎಸ್ ಒಫಿಕ್ಸ್ ಆಂಕರ್‌ಗಳು ಸೇರಿದಂತೆ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಸಾಟಿಯಿಲ್ಲದ ಆರಾಮದೊಂದಿಗೆ ನೀಡುತ್ತಿದೆ. ವೈಯಕ್ತಿಕ ಐಷಾರಾಮಕ್ಕಾಗಿ ಕ್ಯಾಪ್ಟನ್ ಸೀಟುಗಳನ್ನು ನೀಡುತ್ತದೆ, ಹೆಚ್ಚಿದ ಬೂಟ್ ಸ್ಪೇಸ್ ಗಾಗಿ 3ನೇ ಸಾಲಿನ ಫೋಲ್ಡ್-ಫ್ಲಾಟ್ ಸೀಟ್, ರೀಕ್ಲೈನ್ ಮೂರನೇ ಸಾಲಿನ ಸೀಟ್‌ಗಳು ಎಲ್ಲಾ ಪ್ರಯಾಣಿಕರಿಗೆ ಪ್ರತಿ ಪ್ರಯಾಣವು ಆನಂದದಾಯಕವಾಗಿರಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: Auto Fare : ಮೆಜೆಸ್ಟಿಕ್‌ ಟು ಲಾಲ್‌ಬಾಗ್‌ಗೆ ಆಟೋ ಚಾರ್ಜ್‌ 400 ರೂ; ಸೆಕೆಂಡ್‌ಗೆ 5ರೂ ಏರಿಕೆಗೆ ಪ್ರಯಾಣಿಕ ಕಕ್ಕಾಬಿಕ್ಕಿ

ಮೌಲ್ಯವರ್ಧಿತ ಸೇವೆಗಳು

ಹೊಸ ಜಿಎಕ್ಸ್ (ಒ) ಗ್ರೇಡ್ ಐದು ವರ್ಷಗಳ ಕಾಂಪ್ಲಿಮೆಂಟರಿ ರೋಡ್ ಸೈಡ್ ಅಸಿಸ್ಟೆನ್ಸ್ , ಮೂರು ವರ್ಷ ಅಥವಾ 1,00,000 ಕಿಲೋಮೀಟರ್ ಸ್ಟ್ಯಾಂಡರ್ಡ್ ವಾರಂಟಿ, ಪ್ರಮಾಣೀಕೃತ ವಿನಿಮಯ ಕಾರ್ಯಕ್ರಮದ ಜತೆಗೆ ವೈಯಕ್ತಿಕ ಅಗತ್ಯಗಳು ಮತ್ತು ಆದ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವಿಸ್ತರಿತ ವಾರಂಟಿ ಕಾರ್ಯಕ್ರಮದಂತಹ ಮೌಲ್ಯವರ್ಧಿತ ಸೇವೆಗಳ ಈ ಶ್ರೇಣಿಯಲ್ಲಿ ದೊರೆಯಲಿವೆ.

Continue Reading

ಪ್ರಮುಖ ಸುದ್ದಿ

Nita Ambani : 12 ಕೋಟಿ ರೂಪಾಯಿಯ ರೋಲ್ಸ್​ ರಾಯ್ಸ್​ ಕಾರು ಖರೀದಿಸಿದ ಅಂಬಾನಿ ಪತ್ನಿ ನೀತಾ, ಇಲ್ಲಿದೆ ವಿಡಿಯೊ

Nita Ambani: ನೀತಾ ಅಂಬಾನಿ ಅವರ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿಯ ರೋಸ್ ಕ್ವಾರ್ಟ್ಜ್ ಶೇಡ್​ ಹೊಂದಿದೆ. ಇದು ಕಾರುಗಳಲ್ಲಿ ಬಳಸಲು ಅತ್ಯಂತ ವಿರಳ ಬಣ್ಣವಾಗಿದೆ. ಇಂಟೀರಿಯರ್​ ಆರ್ಕಿಡ್ ವೆಲ್ವೆಟ್ ಬಣ್ಣವನ್ನು ಹೊಂದಿದೆ ಹಾಗೂ ಹೆಚ್ಚು ಆಕರ್ಷಣೀಯವಾಗಿದೆ.

VISTARANEWS.COM


on

Nita ambani
Koo

ಮುಂಬಯಿ: ಬಿಲೇನಿಯರ್ ನೀತಾ ಅಂಬಾನಿ (Nita Ambani) ಕಾರುಗಳ ಪ್ರೇಮಿ ಎಂಬುದು ಹಲವು ಬಾರಿ ಸಾಬೀತಾಗಿದೆ. ಹೀಗಾಗಿ ಅವರ ಕಾರು ಗ್ಯಾರೇಜ್​ನಲ್ಲಿ ಹಲವಾರು ಐಷಾರಾಮಿ ಕಾರುಗಳಿವೆ ಆ ಪಟ್ಟಿಗೆ ಇದೀಗ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿ ಸೆಡಾನ್ ಸೇರಿಕೊಂಡಿದೆ. ಅಂಬಾನಿ ಕುಟುಂಬದ ಆಕರ್ಷಕ ಕಾರುಗಳ ಸಂಗ್ರಹಕ್ಕೆ ಈ ಆಕರ್ಷಕ ರೋಸ್ ಕ್ವಾರ್ಟ್ಜ್ ಶೇಡ್ ವಾಹನ ಸೇರ್ಪಡೆಯು ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲ ಹುಟ್ಟುಹಾಕಿದೆ. ವಿಶೇಷ ಬಣ್ಣಗಳು ಸೇರಿದಂತೆ ನಾನಾ ರೀತಿಯ 168 ಕ್ಕೂ ಹೆಚ್ಚು ಕಾರುಗಳು ಮುಖೇಶ್ ಅಂಬಾನಿ ಕಾರು ಗ್ಯಾರೇಜಿನಲ್ಲಿದೆ. ಈ ಸಂಗ್ರಹವು ದುಬಾರಿ ಮತ್ತು ವಿಶೇಷ ವಾಹನಗಳ ಶ್ರೇಣಿಯನ್ನು ಹೊಂದಿದೆ/ ಇದು ಐಷಾರಾಮಿ ಜೀವನ ಶೈಲಿಯ ಭಾಗವಾಗಿದೆ.

ನೀತಾ ಅಂಬಾನಿ ಅವರ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿಯ ರೋಸ್ ಕ್ವಾರ್ಟ್ಜ್ ಶೇಡ್​ ಹೊಂದಿದೆ. ಇದು ಕಾರುಗಳಲ್ಲಿ ಬಳಸಲು ಅತ್ಯಂತ ವಿರಳ ಬಣ್ಣವಾಗಿದೆ. ಇಂಟೀರಿಯರ್​ ಆರ್ಕಿಡ್ ವೆಲ್ವೆಟ್ ಬಣ್ಣವನ್ನು ಹೊಂದಿದೆ ಹಾಗೂ ಹೆಚ್ಚು ಆಕರ್ಷಣೀಯವಾಗಿದೆ.

ರೋಲ್ಸ್ ರಾಯ್ಸ್ ಕಸ್ಟಮೈಸ್ಡ್​ ಆಯ್ಕೆಯನ್ನು ನೀಡುತ್ತದೆ. ಖರೀದಿದಾರ ಆದ್ಯತೆಗಳಿಗೆ ತಕ್ಕಂತೆ ಸಿದ್ಧಪಡಿಸಿಕೊಡುತ್ತದೆ. ಸ್ಟ್ಯಾಂಡರ್ಡ್ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿ ಕಾರಿನ ಬೆಲೆಯು ರೂ.12 ಕೋಟಿಗಳಾಗಿದ್ದರೆ, ನೀತಾ ಅಂಬಾನಿಯ ರೋಸ್ ಕ್ವಾರ್ಟ್ಜ್ ಆರ್ಕಿಡ್ ವೆಲ್ವೆಟ್ ಇಂಟೀರಿಯರ್​ ಹೊಂದಿರುವ ಕಾರಣ ಬೆಲೆ ಇನ್ನಷ್ಟು ಹೆಚ್ಚಾಗಿರಬಹುದು.

ಇದನ್ನೂ ಓದಿ: Rishabh Pant : ವಿಶ್ವ ಕಪ್​ ತಂಡದಲ್ಲಿ ರಿಷಭ್ ಪಂತ್​ಗೆ ಚಾನ್ಸ್​ ಖಚಿತ, ಇಲ್ಲಿದೆ ವಿವರ

ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿ ಐಷಾರಾಮಿ ಸೆಡಾನ್ 6.75-ಲೀಟರ್ ಟ್ವಿನ್-ಟರ್ಬೊ ವಿ 12 ಎಂಜಿನ್ ಹೊಂದಿದ್ದು, 571 ಬಿಹೆಚ್ ಪಿ ಮತ್ತು 900 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂಭಾಗದ ಚಕ್ರಗಳಿಗೆ ಶಕ್ತಿ ನೀಡುವ ಸ್ವಯಂಚಾಲಿತ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾದ ಇದು ರೋಲ್ಸ್ ರಾಯ್ಸ್ ಬ್ರಾಂಡ್ ನ ವಿಶಿಷ್ಟ ಚಾಲನಾ ಅನುಭವ ನೀಡುತ್ತದೆ.

117 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿರುವ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ. ಅಂಬಾನಿ ಕುಟುಂಬವು ವ್ಯಾಪಕವಾದ ಕಾರು ಸಂಗ್ರಹಕ್ಕೆ ಹೆಸರುವಾಸಿಯಾಗಿದೆ. ಮುಖೇಶ್ ಅಂಬಾನಿ ಅವರ ಕುಟುಂಬ ಈ ಹಿಂದೆ ರೋಲ್ಸ್ ರಾಯ್ಸ್ ಕಲಿನನ್​ ಬ್ಲ್ಯಾಕ್ ಬ್ಯಾಡ್ಜ್ ಎಸ್ ಯುವಿ ಕಾರನ್ನು ಖರೀದಿ ಮಾಡಿತ್ತು.

Continue Reading
Advertisement
ವೈರಲ್ ನ್ಯೂಸ್9 mins ago

Viral Video: ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು; ವಿಡಿಯೋ ವೈರಲ್‌

tomato price rise
ಕರ್ನಾಟಕ30 mins ago

Tomato Price: ಗ್ರಾಹಕನ ಜೇಬು ಸುಡಲು ಟೊಮ್ಯಾಟೊ ಸಜ್ಜು, ಬಾಕ್ಸ್‌ಗೆ 400 ರೂಪಾಯಿಗೆ ಬೆಲೆ ಏರಿಕೆ

srinivasa prasad
ಪ್ರಮುಖ ಸುದ್ದಿ1 hour ago

Srinivasa Prasad passes away‌: 7 ಬಾರಿ ಸಂಸದರಾಗಿದ್ದ ಸ್ವಾಭಿಮಾನಿ, ದಕ್ಷಿಣ ಕರ್ನಾಟಕದ ʼದಲಿತ ಸೂರ್ಯʼ

ಕರ್ನಾಟಕ1 hour ago

Srinivas Prasad: ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

Sleeping Tips
ಆರೋಗ್ಯ2 hours ago

Sleeping Tips: ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು? ಇದು ಗಂಭೀರ ವಿಷಯ!

Rishabh Pant
ಅಂಕಣ2 hours ago

ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Karnataka Weather
ಕರ್ನಾಟಕ2 hours ago

Karnataka Weather: ಇಂದು ಬೀದರ್, ಕಲಬುರಗಿ ಸೇರಿ ಹಲವೆಡೆ ಶಾಖದ ಅಲೆ ಎಚ್ಚರಿಕೆ; ಇನ್ನೂ ಎಲ್ಲಿಯವರೆಗೆ ಈ ರಣ ಬಿಸಿಲು?

Tooth Decay
ಆರೋಗ್ಯ3 hours ago

Tooth Decay: ನಮ್ಮ ಈ ದುರಭ್ಯಾಸಗಳು ಹಲ್ಲಿನ ಹುಳುಕಿಗೆ ಕಾರಣವಾಗುತ್ತವೆ

dina bhavishya read your daily horoscope predictions for April 29 2024
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

love jihad
ಕರ್ನಾಟಕ8 hours ago

Love Jihad Case: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್; ಬಾಲಕಿಯನ್ನು ಪುಸಲಾಯಿಸಿ ಕರೆತಂದ ಅನ್ಯಕೋಮಿನ ಯುವಕ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 29 2024
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202416 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202418 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202420 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202420 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ23 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

ಟ್ರೆಂಡಿಂಗ್‌