DRDO Test: ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ - Vistara News

ತಂತ್ರಜ್ಞಾನ

DRDO Test: ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ

DRDO Test: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಮತ್ತೊಂದು ಯಶಸ್ಸು ಲಭಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಒಡಿಶಾ ಕರಾವಳಿಯ ಚಾಂದಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ದೇಶೀಯ ತಂತ್ರಜ್ಞಾನದ ಕ್ರೂಸ್ ಕ್ಷಿಪಣಿ ಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.

VISTARANEWS.COM


on

DRDO
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಗುರುವಾರ (ಏಪ್ರಿಲ್‌ 18) ಒಡಿಶಾ ಕರಾವಳಿಯ ಚಾಂದಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ದೇಶೀಯ ತಂತ್ರಜ್ಞಾನದ ಕ್ರೂಸ್ ಕ್ಷಿಪಣಿ (ITCM)ಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ (DRDO Test).

ಕ್ಷಿಪಣಿ ಹಾರಾಟದ ಪರೀಕ್ಷೆಯ ಎಲ್ಲ ಹಂತಗಳು ನಿರೀಕ್ಷೆಯಂತೆ ನಡೆದವು. ಹಾರಾಟ ಮಾರ್ಗದ ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಸ್ಥಳಗಳಲ್ಲಿ ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (Electro-Optical Tracking System) ಮತ್ತು ಟೆಲಿಮೆಟ್ರಿಯಂತಹ ಹಲವಾರು ಶ್ರೇಣಿ ಸಂವೇದಕಗಳನ್ನು ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕ್ಷಿಪಣಿಯ ಹಾರಾಟವನ್ನು ಐಎಎಫ್ ಸು-30-ಎಂಕೆ-I (IAF Su-30-Mk-I) ವಿಮಾನದ ಮೂಲಕವೂ ಮೇಲ್ವಿಚಾರಣೆ ನಡೆಸಲಾಯಿತು. “ಕ್ಷಿಪಣಿಯು ವೇಪಾಯಿಂಟ್ ನ್ಯಾವಿಗೇಷನ್ ಬಳಸಿ ನಿರೀಕ್ಷಿತ ಗುರಿಯನ್ನು ತಲುಪಿತು ಮತ್ತು ಅತ್ಯಂತ ಕಡಿಮೆ ಎತ್ತರದ ಹಾರಾಟ ನಡೆಸಿತು” ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಅಭಿವೃದ್ಧಿ

ವಿಶೇಷ ಎಂದರೆ ಇಡೀ ಕ್ಷಿಪಣಿ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿರುವ ಡಿಆರ್‌ಡಿಒ ಸಂಗಸಂಸ್ಥೆಯಾದ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ (ADE) ಅಭಿವೃದ್ಧಿಪಡಿಸಿದೆ. ಜತೆಗೆ ಇತರ ಪ್ರಯೋಗಾಲಯಗಳು ಮತ್ತು ಉದ್ದಿಮೆಗಳೂ ಈ ಮಹತ್ತರ ಕಾರ್ಯದಲ್ಲಿ ಕೈ ಜೋಡಿಸಿವೆ ಎಂದು ಮೂಲಗಳು ತಿಳಿಸಿವೆ. ಐಟಿಸಿಎಂನ ಯಶಸ್ವಿ ಪರೀಕ್ಷೆಗಾಗಿ ಡಿಆರ್‌ಡಿಒವನ್ನು ಅಭಿನಂದಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ದೇಶೀಯ ತಂತ್ರಜ್ಞಾನದ ಕ್ರೂಸ್ ಕ್ಷಿಪ ಯಶಸ್ವಿ ಅಭಿವೃದ್ಧಿಯು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಮುಖ ಮೈಲಿಗಲ್ಲಾಗಿದೆ” ಎಂದು ಹೇಳಿದ್ದಾರೆ. ಜತೆಗೆ ರಕ್ಷಣಾ ಇಲಾಖೆ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ.ಸಮೀರ್ ವಿ. ಕಾಮತ್ ಕೂಡ ಇಡೀ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

ʼʼಐಟಿಸಿಎಂ ಕ್ಷಿಪಣಿಯು ಉತ್ತಮ ಮತ್ತು ಹೆಚ್ಚು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಿತ ಏವಿಯಾನಿಕ್ಸ್ ಮತ್ತು ಸಾಫ್ಟ್‌ವೇರ್‌ ಅನ್ನು ಸಹ ಹೊಂದಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಲಿಸ್ಟಿಕ್‌ ಕ್ಷಿಪಣಿ ಅಗ್ನಿ- ಪ್ರೈಮ್‌ ಯಶಸ್ವಿ ಪರೀಕ್ಷೆ

ಕೆಲವು ದಿನಗಳ ಹಿಂದೆ ಭಾರತವು ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-ಪ್ರೈಮ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು. ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಇದರ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಪರೀಕ್ಷೆಯು ಎಲ್ಲಾ ಪ್ರಯೋಗದ ಉದ್ದೇಶಗಳನ್ನು ಪೂರೈಸಿದ್ದು, ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ದೃಢೀಕರಿಸಿದೆ. ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ಹಲವಾರು ಶ್ರೇಣಿಯ ಸೆನ್ಸರ್‌ಗಳಿಂದ ಸೆರೆಹಿಡಿಯಲಾದ ಡೇಟಾಗಳು ಇದನ್ನು ದೃಢೀಕರಿಸಿವೆ.

“ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‌ಎಫ್‌ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜೊತೆಗೆ ಹೊಸ ಪೀಳಿಗೆಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-ಪ್ರೈಮ್‌ನ ಯಶಸ್ವಿ ಹಾರಾಟ- ಪರೀಕ್ಷೆಯನ್ನು ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಏಪ್ರಿಲ್ 3ರಂದು ಸುಮಾರು 7 ಗಂಟೆಗೆ ನಡೆಸಿತು,” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Mission Divyastra : ಏನಿದು ಮಿಷನ್​ ದಿವ್ಯಾಸ್ತ್ರ, ಸೇನೆ ಸೇರಲಿರುವ ಹೊಸ ಅಸ್ತ್ರ? ಇಲ್ಲಿದೆ ಪೂರ್ಣ ಮಾಹಿತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

High-tech Gadget: ಸೆಕೆಗೆ ಎಸಿ, ಫ್ಯಾನ್‌, ಕೂಲರ್‌ ಸಾಕಾಗ್ತಿಲ್ವಾ..? ಹಾಗಿದ್ರೆ ಇಲ್ಲಿದೆ ನೋಡಿ ಹೈಟೆಕ್‌ ಗ್ಯಾಜೆಟ್‌

High-tech Gadget:ಸೋನಿ ಸಂಸ್ಥೆ ಸೆಕೆಗೆಂದೇ ಹೈಟೆಕ್‌ ಗ್ಯಾಜೆಟ್‌ವೊಂದನ್ನು ಅನಾವರಣಗೊಳಿಸಿದೆ. ಫ್ಯೂಚರಿಸ್ಟಿಕ್‌ ಬಾಡಿ ಏರ್‌ ಕಂಡೀಷನರ್‌ಎಂಬ ಹೈಟೆಕ್‌ ಗ್ಯಾಜೆಟ್‌ವೊಂದನ್ನು ಪರಿಚಯಿಸಲಾಗಿದ್ದು, ಇದನ್ನು ನಿಮ್ಮ ಶರ್ಟ್‌ನ ಹಿಂಭಾಗದಲ್ಲಿ ಸಿಕ್ಕಿಸಬಹುದಾಗಿದೆ. ಈ ನವೀನ ತಂತ್ರಜ್ಞಾನವು ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ತಪ್ಪಿಸಿ ದೇಹವನ್ನು ತಂಪಾಗಿರಿಸುತ್ತದೆ.

VISTARANEWS.COM


on

High-tec Gadget
Koo

ನವದೆಹಲಿ: ಜನ ಬಿಸಿಲ ಬೇಗೆ ತತ್ತರಿಸಿ ಹೋಗಿದ್ದಾರೆ. ಎಲ್ಲಿ ಹೋರೂ ಬರೀ ಸೆಕೆ…ಸೆಕೆ..ಈ ಸೆಕೆಗೆ ಎಸಿ, ಪ್ಯಾನ್‌, ಕೂಲರ್‌ ಇದ್ಯಾವುದೂ ಸಾಕೇ ಆಗ್ತಿಲ್ಲ. ಹೀಗಿರುವಾಗಿ ಸೋನಿ ಸಂಸ್ಥೆ(Sony) ಸೆಕೆಗೆಂದೇ ಹೈಟೆಕ್‌ ಗ್ಯಾಜೆಟ್‌(high-tech gadget)ವೊಂದನ್ನು ಅನಾವರಣಗೊಳಿಸಿದೆ. ಫ್ಯೂಚರಿಸ್ಟಿಕ್‌ ಬಾಡಿ ಏರ್‌ ಕಂಡೀಷನರ್‌(futuristic body air conditioner) ಎಂಬ ಹೈಟೆಕ್‌ ಗ್ಯಾಜೆಟ್‌ವೊಂದನ್ನು ಪರಿಚಯಿಸಲಾಗಿದ್ದು, ಇದನ್ನು ನಿಮ್ಮ ಶರ್ಟ್‌ನ ಹಿಂಭಾಗದಲ್ಲಿ ಸಿಕ್ಕಿಸಬಹುದಾಗಿದೆ. ಈ ನವೀನ ತಂತ್ರಜ್ಞಾನವು ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ತಪ್ಪಿಸಿ ದೇಹವನ್ನು ತಂಪಾಗಿರಿಸುತ್ತದೆ.

ರಿಯೋನ್‌ ಪಾಕೆಟ್‌ 5ಎಂದು ಕರೆಯಲ್ಪಡುವ ಈ ಥರ್ಮೋ ಸಾಧನ ಕಿಟ್ ಅನ್ನು ಏಪ್ರಿಲ್ 23 ರಂದು ಬಿಡುಗಡೆ ಮಾಡಲಾಗಿದೆ. ಸಾಧನವನ್ನು ಜನ ಸುಭವಾಗಿ ಧರಿಸಬಹುದಾಗಿದ್ದು, ಇದೊಂದು ಹವಾಮಾನ ನಿಯಂತ್ರಣ ವ್ಯವಸ್ಥೆಯಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಅದನ್ನು ಧರಿಸಿದರೆ ಎಸಿಯಂಥ ಅನುಭವ ಆಗುತ್ತದೆ. ನಿಮ್ಮ ಕತ್ತಿನ ಹಿಂಭಾಗದಲ್ಲಿ ಧರಿಸಬಹುದಾದ ಈ ನವೀನ ಸಾಧನವು ಎಸಿಯಂತೆ ಕಾರ್ಯನಿರ್ವಹಿಸುತ್ತದೆ. ರಿಯಾನ್ ಪಾಕೆಟ್ 5 ಬೇಸಿಗೆಯಲ್ಲಿ ಐದು ಕೂಲಿಂಗ್ ಹಂತಗಳನ್ನು ಮತ್ತು ತಂಪಾದ ಪರಿಸರಕ್ಕೆ ನಾಲ್ಕು ವಾರ್ಮಿಂಗ್ ಹಂತಗಳನ್ನು ನೀಡುತ್ತದೆ. ಇದು ಕಿಕ್ಕಿರಿದ ರೈಲುಗಳಿಂದ ಹಿಡಿದು ಏರ್‌ಪ್ಲೇನ್ ಕ್ಯಾಬಿನ್‌ಗಳವರೆಗೆ ವಿವಿಧ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತ ಸಾಧನ. ಈ ಸಣ್ಣ ಸಾಧನ ರಿಮೋಟ್ ಕಂಟ್ರೋಲರ್‌ನಂತೆ ಕಾರ್ಯನಿರ್ವಹಿಸುತ್ತದೆ, ನಿಮ್ಮ ಸುತ್ತಮುತ್ತಲಿನ ತಾಪಮಾನದ ಸ್ಥಿತಿಗೆ ತಕ್ಕಂತೆ ತನ್ನ ಹಂತಗಳನ್ನು ಸೆಟ್‌ ಮಾಡಿಕೊಂಡು ಇದು ಕಾರ್ಯ ನಿರ್ವಹಿಸುತ್ತದೆ. ಇನ್ನು Reon Pocket 5 ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ, ಕೇವಲ ನಿಮ್ಮ ದೇಹದ ಉಷ್ಣತೆಯ ಮೇಲೆ ಕೇಂದ್ರೀಕರಿಸುತ್ತದೆ.

ಮೊಬೈಲ್‌ನಿಂದಲೂ ಆಪರೇಟ್‌ ಸಾಧ್ಯ:

ಇನ್ನು ರಿಯಾನ್ ಪಾಕೆಟ್ 5ಅನ್ನು ಮೊಬೈಲ್‌ನಿಂದ ಆಪರೇಟ್‌ ಮಾಡಬಹುದೇ ಎಂದು ಕೇಳಿದರೆ, ಹೌದು ಅದೂ ಸಾಧ್ಯವಿದೆ. ರಿಯಾನ್ ಪಾಕೆಟ್ 5 ಅನ್ನು ಹೊಸ ರಿಯಾನ್ ಪಾಕೆಟ್ ಅಪ್ಲಿಕೇಶನ್ ಮೂಲಕ ನಿಯಂತ್ರಿಸಬಹುದು, ಇದು iOS ಮತ್ತು Android ಫೋನಗಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಬ್ಲೂಟೂತ್ ಮೂಲಕ ಐದು ಕೂಲಿಂಗ್ ಮತ್ತು ನಾಲ್ಕು ವಾರ್ಮಿಂಗ್ ಮಟ್ಟವನ್ನು ಸರಿಹೊಂದಿಸಲು ನಿಮಗೆ ಅನುಕೂಲ ಮಾಡಿಕೊಡುತ್ತದೆ. ಟೆಕ್ ರಾಡಾರ್ ಪ್ರಕಾರ, Reon ಪಾಕೆಟ್ 5 ಒಂದು ಬಾರಿ ಚಾರ್ಜ್‌ ಮಾಡಿದರೆ ಬರೋಬ್ಬರಿ 17 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.

ಸೋನಿಯ ಈ ಹೊಸ ಗ್ಯಾಜೆಟ್‌ ಸಂಪೂರ್ಣವಾಗಿ ಹೊಸದಲ್ಲ. ರಿಯಾನ್ ಪಾಕೆಟ್ ಸರಣಿಯು 2019 ರಲ್ಲಿ ಜಪಾನ್‌ನಲ್ಲಿ ಪ್ರಾರಂಭವಾಯಿತು, ನಂತರದ ಆವೃತ್ತಿಗಳು ಹಾಂಗ್ ಕಾಂಗ್‌ನಂತಹ ಏಷ್ಯಾದ ಮಾರುಕಟ್ಟೆಗಳಲ್ಲಿ ಯಶಸ್ಸನ್ನು ಕಂಡುಕೊಂಡವು. ರಿಯಾನ್ ಪಾಕೆಟ್ 5, ಆದಾಗ್ಯೂ, ಜಾಗತಿಕ ವಿಸ್ತರಣೆಯನ್ನು ಗುರುತಿಸುತ್ತದೆ, UK ಮಾರುಕಟ್ಟೆಯಲ್ಲೂ ಇದು ಚಾಲ್ತಿಯಲ್ಲಿದೆ.

ಇದನ್ನೂ ಓದಿ:Viral Video: ಕತ್ತಿಯಿಂದ ಐವರ ಮೇಲೆ ಡೆಡ್ಲಿ ಅಟ್ಯಾಕ್‌; ದಾಳಿಕೋರನ ಅರೆಸ್ಟ್‌ ವಿಡಿಯೋ ಫುಲ್‌ ವೈರಲ್‌

ಎಲ್ಲಿ ಲಭ್ಯ, ಬೆಲೆ ಎಷ್ಟು?

Reon ಪಾಕೆಟ್ 5 ಗಾಗಿ ಪ್ರೀ ಆರ್ಡರ್‌ಗಳು ಈಗ ಸೋನಿಯ ವೆಬ್‌ಸೈಟ್‌ನಲ್ಲಿ ಆರಂಭವಾಗಿದೆ. ಇದರ ಬೆಲೆ 139 ಪೌಂಡ್‌ಗಳು (ಸುಮಾರು $170 USD ಅಥವಾ AU$260). ಈ ಪ್ರೀ-ಆರ್ಡರ್‌ಗಳ ಶಿಪ್ಪಿಂಗ್ ಮೇ 15 ರಂದು ಪ್ರಾರಂಭವಾಗುತ್ತದೆ. ಮೂಲ ಪ್ಯಾಕೇಜ್, “Reon 5T,” ಸಾಧನವು ಸ್ವತಃ, ರಿಯಾನ್ ಪಾಕೆಟ್ ಟ್ಯಾಗ್ ಮತ್ತು ಬಿಳಿ ನೆಕ್‌ಬ್ಯಾಂಡ್ ಅನ್ನು ಒಳಗೊಂಡಿದೆ. ಹೊಸ REON POCKET 5 ಮೇ 2024 ರಿಂದ ಸಿಂಗಾಪುರದಲ್ಲಿ ಲಭ್ಯವಿರುತ್ತದೆ ಮತ್ತು ನಂತರದ ದಿನಾಂಕದಲ್ಲಿ ಮಲೇಷ್ಯಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ಲಭ್ಯವಿರಲಿದೆ.

Continue Reading

ದೇಶ

Toyota Kirloskar Motor: ಟೊಯೊಟಾ ರುಮಿಯಾನ್‌ G-AT ಬುಕ್ಕಿಂಗ್‌ ಶುರು! ಏನಿದರ ವಿಶೇಷ?

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಟೊಯೊಟಾ ರುಮಿಯಾನ್ G-AT ನೂತನ ಗ್ರೇಡ್ ಅನ್ನು ಪರಿಚಯಿಸಿದ್ದು, 1.5-ಲೀಟರ್ ಸೀರಿಸ್ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡುತ್ತದೆ. ನಿಯೋ ಡ್ರೈವ್ (ಐಎಸ್‌ಜಿ) ತಂತ್ರಜ್ಞಾನವನ್ನು ಒಳಗೊಂಡಿದೆ.

VISTARANEWS.COM


on

Toyota Kirloskar Motor Introduces New G-AT Grade of Toyota Rumion
Koo

ಬೆಂಗಳೂರು: ಟೊಯೊಟಾ ರುಮಿಯಾನ್‌ನ G-AT ಹೊಸ ಸರಣಿಯ ಅಧಿಕೃತ ಬುಕ್ಕಿಂಗ್ ಆರಂಭಿಸಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಬೆಲೆಯನ್ನು ಇಂದು ಘೋಷಿಸಿದ್ದು, ಹೊಸದಾಗಿ ಬಿಡುಗಡೆಯಾದ G-AT ವೇರಿಯಂಟ್‌ ಸರಿಸಾಟಿಯಿಲ್ಲದ ಸ್ಪೇಸ್ ಮತ್ತು ಕಂಫರ್ಟ್‌, ಅತ್ಯುತ್ತಮ ಇಂಧನ ದಕ್ಷತೆ, ಸ್ಟೈಲಿಶ್ ಮತ್ತು ಪ್ರೀಮಿಯಂ ಎಕ್ಸ್‌ಟೀರಿಯರ್ ಡಿಸೈನ್‌ ಒಳಗೊಂಡಿದೆ.

ಟಿಕೆಎಂನ ಇತ್ತೀಚಿನ ಆಫರ್ ಬೆಲೆಯು 13 ಲಕ್ಷ ರೂ. ಗಳ ಆಕರ್ಷಕ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಡೆಲಿವರಿ ಮೇ 5 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಗ್ರಾಹಕರು ಯಾವುದೇ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ 11 ಸಾವಿರ ರೂ. ಬುಕಿಂಗ್ ಶುಲ್ಕದೊಂದಿಗೆ ವಾಹನವನ್ನು ಬುಕ್ ಮಾಡಬಹುದಾಗಿದೆ.

ಇದನ್ನೂ ಓದಿ: Labour Day 2024: ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಉಪಯುಕ್ತ ಹಣಕಾಸು ಟಿಪ್ಸ್‌ ಇಲ್ಲಿದೆ

ಟೊಯೊಟಾ ರುಮಿಯಾನ್ G-AT ವೇರಿಯಂಟ್ 1.5-ಲೀಟರ್ ಸೀರಿಸ್ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡುತ್ತದೆ. ನಿಯೋ ಡ್ರೈವ್ (ಐಎಸ್‌ಜಿ) ತಂತ್ರಜ್ಞಾನವನ್ನು ಒಳಗೊಂಡಿದೆ. ಪೆಟ್ರೋಲ್ ಗ್ರೇಡ್ 75.8 ಕಿಲೋವ್ಯಾಟ್ @ 6000 rpm ಪವರ್ ಮತ್ತು 136.8 Nm @ 4400 ಆರ್‌ಪಿಎಂ ಟಾರ್ಕ್ ಅನ್ನು ಹೊಂದಿದೆ. ಸಿಎನ್‌ಜಿ ಗ್ರೇಡ್ 64.6 ಕಿಲೋವ್ಯಾಟ್ ಔಟ್‌ಪುಟ್ @ 5500 rpm ಮತ್ತು 121.5 Nm@4200 rpm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟೊಯೊಟಾ ರುಮಿಯಾನ್ ಈಗ ನಿಯೋ ಡ್ರೈವ್ MT ಏಳು ರೂಪಾಂತರಗಳಲ್ಲಿ ಲಭ್ಯವಿದೆ. ಎಸ್, ಜಿ ಮತ್ತು ವಿ ಗ್ರೇಡ್ ಮತ್ತು ನಿಯೋ ಡ್ರೈವ್ AT: ಎಸ್, ಜಿ ಮತ್ತು ವಿ ಗ್ರೇಡ್. ಇ-ಸಿಎನ್ ಜಿ: ಎಸ್ ಗ್ರೇಡ್ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ನೀಡುತ್ತದೆ.

G-AT ವೇರಿಯಂಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 17.78 ಸೆಂ.ಮೀ ಸ್ಮಾರ್ಟ್ ಪ್ಲೇ ಕ್ಯಾಸ್ಟ್ ಟಚ್ ಸ್ಕ್ರೀನ್ ಆಡಿಯೊ ಸಿಸ್ಟಮ್ ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಟೊಯೊಟಾ i-Connect ಹೊಂದಿರುವ ಇದು ಹವಾಮಾನ, ಲಾಕ್ / ಅನ್ಲಾಕ್, ಹಜಾರ್ಡ್ ಲೈಟ್ಸ್ ಸೇರಿದಂತೆ ಅನೇಕ ಸಂಪರ್ಕಿತ ವೈಶಿಷ್ಟ್ಯಗಳಿಗಾಗಿ ರಿಮೋಟ್ ಕಂಟ್ರೋಲ್ ಅನ್ನು ನೀಡುತ್ತದೆ. ಟೊಯೊಟಾ ರುಮಿಯಾನ್ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಹೋಲ್ಡ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ) ಸೇರಿದಂತೆ ಹಲವು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ತನ್ನ ಮಾಲೀಕರ ಸುರಕ್ಷತೆಗೆ ಆದ್ಯತೆ ನೀಡುತ್ತದೆ.

ಇದನ್ನೂ ಓದಿ: IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ಕುಲ್​ದೀಪ್, ನರೈನ್

ಈ ಕುರಿತು ಟಿಕೆಎಂನ ಸೇಲ್ಸ್ ಅಂಡ್ ಸ್ಟ್ರಾಟಜಿಕ್ ಮಾರ್ಕೆಟಿಂಗ್ ನ ಉಪಾಧ್ಯಕ್ಷ ಶಬರಿ ಮನೋಹರ್ ಮಾತನಾಡಿ, ಟೊಯೊಟಾ ರುಮಿಯಾನ್ ಸೀರಿಸ್‌ಗೆ ಹೊಸ ಗ್ರೆಡ್ ಸೇರ್ಪಡೆಯನ್ನು ಘೋಷಿಸಲು ನಾವು ಉತ್ಸುಕರಾಗಿದ್ದೇವೆ, ಇದರಿಂದಾಗಿ ಗ್ರಾಹಕರಿಗೆ ಅವರ ಚಲನಶೀಲತೆ ಅಗತ್ಯತೆಗಳು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ವ್ಯಾಪಕ ಆಯ್ಕೆಗಳನ್ನು ನೀಡುತ್ತದೆ. G-AT ವೇರಿಯಂಟ್‌ನ ಬುಕಿಂಗ್ ಈಗ ತೆರೆದಿದೆ. ಆಗಸ್ಟ್ 23ರಲ್ಲಿ ಬಿಡುಗಡೆಯಾದಾಗಿನಿಂದ ಟೊಯೊಟಾ ರುಮಿಯಾನ್ ಗ್ರಾಹಕರಲ್ಲಿ ಹೆಚ್ಚಿನ ಉತ್ಸಾಹವನ್ನು ಸೃಷ್ಟಿಸಿದೆ. ಇದು ಹೆಚ್ಚಿನ ಎನ್‌ಕ್ವೈರಿ ಮತ್ತು ಆರೋಗ್ಯಕರ ಬುಕಿಂಗ್‌ಗೆ ಕಾರಣವಾಗಿದೆ. ನಮ್ಮ ಮೌಲ್ಯಯುತ ಗ್ರಾಹಕರು ತೋರಿಸಿದ ಪ್ರೀತಿ ಮತ್ತು ನಂಬಿಕೆಯನ್ನು ನಾವು ತುಂಬು ಹೃದಯದಿಂದ ಪ್ರಶಂಸಿಸುತ್ತೇವೆ ಎಂದು ತಿಳಿಸಿದ್ದಾರೆ.

ಟೊಯೊಟಾ MPV ಸಿಗ್ನೇಚರ್ ಫ್ರಂಟ್ ಗ್ರಿಲ್, ಕ್ರೋಮ್ ಫಿನಿಶ್‌ನೊಂದಿಗೆ ಫ್ರಂಟ್ ಬಂಪರ್, ಬ್ಯಾಕ್ ಡೋರ್ ಕ್ರೋಮ್ ಡಿಸೈನ್ ನೊಂದಿಗೆ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಅತ್ಯಾಧುನಿಕ ಡ್ಯುಯಲ್ ಟೋನ್ ಅಲಾಯ್ ವೀಲ್ಸ್, ದೃಢವಾದ ಗುಣಲಕ್ಷಣಗಳೊಂದಿಗೆ ರಫ್ ಲುಕ್‌ಗಾಗಿ ರುಮಿಯನ್ ಸ್ಟೈಲಿಶ್ ಮತ್ತು ಪ್ರೀಮಿಯಂ ಎಕ್ಸ್‌ಟೀರಿಯರ್ ಡಿಸೈನ್ ಅನ್ನು ಹೊಂದಿದೆ. ಐಷಾರಾಮಿ ಒಳಾಂಗಣವು ಮರದ ಫಿನಿಶ್ ಡ್ಯಾಶ್ ಬೋರ್ಡ್ ಮತ್ತು ಡೋರ್ ಟ್ರಿಮ್‌ಗಳೊಂದಿಗೆ ಪ್ರೀಮಿಯಂ ಡ್ಯುಯಲ್-ಟೋನ್, ಪ್ರೀಮಿಯಂ ಡ್ಯುಯಲ್-ಟೋನ್ ಒಳಾಂಗಣ ಮತ್ತು ಅನುಕೂಲಕರ ಸೌಲಭ್ಯಗಳನ್ನು ನೀಡುತ್ತದೆ.

ಇದನ್ನೂ ಓದಿ: Maoists killed: ಭದ್ರತಾ ಪಡೆಗಳ ಜತೆ ಗುಂಡಿನ ಚಕಮಕಿ, ಏಳು ಮಾವೋವಾದಿಗಳು ಫಿನಿಶ್

ಟೊಯೊಟಾ ರುಮಿಯಾನ್ ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಸಹ ನೋಡುತ್ತದೆ. ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್ ಮತ್ತು ಬ್ರೇಕ್ ಅಸಿಸ್ಟ್, ಎಂಜಿನ್ ಇಮೊಬೈಲೈಜರ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಐಎಸ್ ಒ ಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ. ಪ್ರಿಟೆನ್ಷನರ್‌ಗಳು ಮತ್ತು ಫೋರ್ಸ್ ಲಿಮಿಟರ್‌ಗಳೊಂದಿಗೆ ಫ್ರಂಟ್ ಸೀಟ್ ಬೆಲ್ಟ್‌ಗಳು, ಎಲ್ಲಾ ಸೀಟ್‌ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಹೈಸ್ಪೀಡ್ ಅಲರ್ಟ್ ಸಿಸ್ಟಮ್ ಹೊಂದಿದೆ.

Continue Reading

ವಾಣಿಜ್ಯ

Toyota Kirloskar Motor: ಕಾರ್‌ ಕೇರ್‌ಗೆ ʼಟಿಗ್ಲೊಸ್ʼ ಆರಂಭಿಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ (ಟಿಕೆಎಂ) ತನ್ನ ಕ್ರಾಂತಿಕಾರಿ ಕಾರ್ ಕೇರ್ ಬ್ರಾಂಡ್ “ಟಿಗ್ಲೊಸ್” ಅನ್ನು ಪ್ರಾರಂಭಿಸಿದ್ದು, ಟಿಕೆಎಂ ವಾಹನದ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ ಲುಕ್ ಅನ್ನು ಹೆಚ್ಚಿಸಲು ವ್ಯಾಪಕವಾದ ಸೇವೆಗಳನ್ನು ಇದು ನೀಡಲಿದೆ.

VISTARANEWS.COM


on

Toyota Kirloskar Motor launched the Tgloss
Koo

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ (ಟಿಕೆಎಂ) ತನ್ನ ಕ್ರಾಂತಿಕಾರಿ ಕಾರ್ ಕೇರ್ ಬ್ರಾಂಡ್ “ಟಿಗ್ಲೊಸ್” ಅನ್ನು (Toyota Kirloskar Motor) ಪ್ರಾರಂಭಿಸಿದೆ.

ಮೇ 1, 2024 ರಿಂದ, “ಟಿಗ್ಲೊಸ್” ಸೇವೆಯು ಭಾರತದ ಎಲ್ಲಾ ಅಧಿಕೃತ ಟೊಯೊಟಾ ಡೀಲರ್‌ಶಿಪ್‌ಗಳಲ್ಲಿ ದೊರೆಯಲಿದೆ. ಕಾರು ತಯಾರಕರ ಇಂಡಸ್ಟ್ರಿ ಫಸ್ಟ್ ಉದ್ಯಮವಾಗಿ, “ಟಿಗ್ಲೊಸ್” ಬ್ರಾಂಡ್ ಅಡಿಯಲ್ಲಿ ಟಿಕೆಎಂ ವಾಹನದ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ ಲುಕ್ ಅನ್ನು ಹೆಚ್ಚಿಸಲು ವ್ಯಾಪಕವಾದ ಸೇವೆಗಳನ್ನು ಇದು ನೀಡಲಿದೆ.

ವಾಹನಗಳ ಆಕರ್ಷಣೆ ಹೆಚ್ಚಿಸುವ ಗುರಿ

ಇದರಲ್ಲಿ ಸೆರಾಮಿಕ್ ಕೋಟ್, ಅಂಡರ್ ಬಾಡಿ ಕೋಟ್, ಸೈಲೆನ್ಸರ್ ಕೋಟ್ ಮತ್ತು ಇಂಟರ್‌ನಲ್ ಪ್ಯಾನಲ್ ಪ್ರೊಟೆಕ್ಷನ್ ಸೇರಿವೆ. ಇದು ವಾಹನಗಳ ಆಕರ್ಷಣೆಯನ್ನು ಹೆಚ್ಚಿಸುವ ಗುರಿಯ ಜತೆಗೆ ವಾತಾವರಣದಿಂದ ಕಾರಿನ ಮೇಲಾಗುವ ಪರಿಣಾಮಗಳ ವಿರುದ್ಧವೂ ರಕ್ಷಣೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: IPL 2024 Points Table: ಚೆನ್ನೈ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ತಂಡಗಳಿಗೆ ಭಾರೀ ಹೊಡೆತ

ಗ್ರಾಹಕರ ಕಾರಿಗೆ ಹೊಸ ಜೀವ ತುಂಬುವುದು, ಕಾರಿನ ಆಕರ್ಷಣೆಯನ್ನು ಹೆಚ್ಚಿಸುವುದು ಮತ್ತು ಹೊಸದಾಗಿ ಕಾಣುವಂತೆ ಮಾಡುವ ಇಂಟೀರಿಯರ್ ಎನ್‌ರಿಚ್ಮೆಂಟ್, ಎಕ್ಸ್‌ಟೀರಿಯರ್ ಆಕರ್ಷಣೆಯನ್ನು ಹೆಚ್ಚಿಸುವ ಸೇವೆಗಳಂತಹ ಸಮಗ್ರ ಸರ್ವಿಸ್‌ಗಳನ್ನು ಇದರಿಂದ ಪಡೆಯಬಹುದಾಗಿದೆ.

ಹೆಚ್ಚುವರಿಯಾಗಿ ಪ್ರಯಾಣಿಕರ ಯೋಗಕ್ಷೇಮಕ್ಕಾಗಿ “ಟಿಗ್ಲೊಸ್” ಸೇವೆಗಳು ಎಸಿ ಡಕ್ಟ್ ಕ್ಲೀನಿಂಗ್ ಮತ್ತು ಎವಾಪರೇಟರ್ ಕ್ಲೀನಿಂಗ್ ಪರಿಹಾರಗಳನ್ನೂ ಇದು ಹೊಂದಿದೆ. ಇದು ಕಾರಿನಲ್ಲಿ ಪರಿಶುದ್ಧ ವಾತಾವರಣ ನಿರ್ಮಾಣ ಮತ್ತು ಆರೋಗ್ಯಕರ ಚಾಲನೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: WhatsApp Exit India: ವಾಟ್ಸ್ಯಾಪ್‌ ಜೊತೆಗೇ ಭಾರತ ತೊರೆಯಲಿವೆಯೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ?

ಈ ಬಗ್ಗೆ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಸೇಲ್ಸ್–ಸರ್ವೀಸ್-ಯೂಸ್ಡ್ ಕಾರ್ ಬ್ಯುಸಿನೆಸ್‌ನ ಉಪಾಧ್ಯಕ್ಷ ಶಬರಿ ಮನೋಹರ್, ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ‘ಗ್ರಾಹಕ-ಮೊದಲು’ ತತ್ವಕ್ಕೆ ಅಚಲ ಬದ್ಧತೆಯನ್ನು ವ್ಯಕ್ತಪಡಿಸುವ ಇನ್ನೊವೇಟೀವ್ ಮತ್ತು ಇಂಡಸ್ಟ್ರಿ ಫಸ್ಟ್ “ಟಿಗ್ಲೊಸ್” ಅನ್ನು ಅನಾವರಣಗೊಳಿವುದು ನಮಗೆ ಹೆಚ್ಚು ಸಂತಸವನ್ನು ನೀಡುತ್ತದೆ. ಟಿಗ್ಲೊಸ್ ಅನ್ನು ತಮ್ಮ ಕಾರುಗಳನ್ನು ಆಕರ್ಷಣೀಯವಾಗಿ ಅತ್ಯುತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುವ ಮೂಲಕ ಅವರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Drown in Mekedatu: ಮೇಕೆದಾಟು ಬಳಿ ಈಜಲು ಹೋಗಿದ್ದ ಐವರು ಪ್ರವಾಸಿಗರ ಸಾವು

ಟಿಗ್ಲೊಸ್ ಎಂಬುದು ಒನ್-ಸ್ಟಾಪ್-ಶಾಪ್ ಸೊಲ್ಯೂಷನ್ ಆಗಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಕಾರ್‌ ಕೇರ್ ಸರ್ವಿಸ್‌ಗಳನ್ನು ನೀಡುವ ಗುರಿಯನ್ನು ಹೊಂದಿದೆ, ಇದು ಟೊಯೊಟಾ ಮಾಲೀಕರಿಗೆ ಗುಣಮಟ್ಟ, ಬಾಳಿಕೆ ಮತ್ತು ವಿಶ್ವಾಸಾರ್ಹತೆಯ (ಕ್ಯೂಡಿಆರ್) ನಮ್ಮ ಪ್ರಮುಖ ಮೌಲ್ಯಗಳೊಂದಿಗೆ ತಡೆರಹಿತವಾಗಿ ಹೊಂದಾಣಿಕೆಯಾಗುವ ಸೇವೆ ಇದಾಗಿದೆ. ಸಮಗ್ರ ಕಾರ್ ಕೇರ್ ಸೊಲ್ಯೂಷನ್‌ಗಳನ್ನು ತಲುಪಿಸುವ ನಮ್ಮ ಪ್ರಯಾಣದಲ್ಲಿ ಮಹತ್ವದ ಮತ್ತೊಂದು ನಿರ್ಣಾಯಕ ಮೈಲಿಗಲ್ಲನ್ನು ಸೂಚಿಸುತ್ತದೆ. ಇಲ್ಲಿ ಹೆಚ್ಚು ನುರಿತ ಮತ್ತು ತರಬೇತಿ ಪಡೆದ ವೃತ್ತಿಪರರು ಸೇವೆಯನ್ನು ನೀಡುತ್ತಾರೆ ಎಂದು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

WhatsApp Exit India: ವಾಟ್ಸ್ಯಾಪ್‌ ಜೊತೆಗೇ ಭಾರತ ತೊರೆಯಲಿವೆಯೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ?

WhatsApp Exit India: WhatsApp ಪ್ರಕಾರ, ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ವೈಶಿಷ್ಟ್ಯವನ್ನು ತೆಗೆದುಹಾಕಲು ಭಾರತ ಸರಕಾರದಿಂದ ಒತ್ತಡ ಬಂದರೆ, ಅದು ಭಾರತಕ್ಕೆ ವಿದಾಯ ಹೇಳುವುದು ಖಚಿತ. ಐಟಿ ನಿಯಮಗಳು 2021ರ ನಿಯಮ 4(2) ರ ಅಡಿಯಲ್ಲಿ ಭಾರತ ಸರ್ಕಾರ ಮತ್ತು WhatsApp ನಡುವೆ ಸಮರ ನಡೆಯುತ್ತಿದೆ. ಈ ನಿಯಮದ ಪ್ರಕಾರ, ಸರ್ಕಾರ ಕೇಳಿದಾಗ, ವಾಟ್ಸ್ಯಾಪ್‌ ವೇದಿಕೆಯು ನಿರ್ದಿಷ್ಟ ಸಂದೇಶದ ಮೂಲವನ್ನು ಬಹಿರಂಗಪಡಿಸಬೇಕಾಗುತ್ತದೆ.

VISTARANEWS.COM


on

WhatsApp Exit India facebook instagram
Koo

ಹೊಸದಿಲ್ಲಿ; ಐಟಿ ನಿಯಮಗಳಿಗೆ (IT Rules) ವಿರುದ್ಧವಾಗಿ ನಡೆದುಕೊಂಡು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ತುತ್ತಾಗಿರುವ ವಾಟ್ಸ್ಯಾಪ್‌ (WhatsApp), ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌ (End to End encription) ಅನ್ನು ಭೇದಿಸಲಾಗುವುದಿಲ್ಲ ಎಂದಿದೆ. ಈ ವಿಚಾರದಲ್ಲಿ ಒತ್ತಡ ಬಂದರೆ ದೇಶವನ್ನೇ ತೊರೆಯುವುದಾಗಿ (WhatsApp Exit India) ಬೆದರಿಕೆ ಹಾಕಿದೆ. ಇದರೊಂದಿಗೆ, ಇದೇ ಕಂಪನಿಗೇ ಸೇರಿದ ಫೇಸ್‌ಬುಕ್‌ (Facebook) ಹಾಗೂ ಇನ್‌ಸ್ಟಾಗ್ರಾಂ (Instagram) ಕೂಡ ದೇಶವನ್ನು ತೊರೆಯಬಹುದೇ ಎಂಬ ಕುತೂಹಲ ಮೂಡಿದೆ.

ವಾಟ್ಸ್ಯಾಪ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂಗಳು ಪ್ರಪಂಚದಾದ್ಯಂತದ ಬಳಕೆದಾರರಲ್ಲಿ ತುಂಬಾ ಜನಪ್ರಿಯವಾಗಿವೆ. ಇದು ಜನರ ನಡುವಿನ ಸಂವಹನಕ್ಕೆ ಮಾತ್ರವಲ್ಲದೆ ಅನೇಕ ಅಧಿಕೃತ, ಕಚೇರಿ ಕೆಲಸಗಳಿಗೂ ಉತ್ತಮ ಮಾಧ್ಯಮವಾಗಿವೆ. ಆದರೆ ಮೆಟಾ ಒಡೆತನದ ವಾಟ್ಸ್ಯಾಪ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಅದು ಭಾರತವನ್ನು ತೊರೆಯಬಹುದು ಎಂಬ ವರದಿಗಳಿವೆ. ಇದರ ಹಿಂದಿನ ಕಾರಣ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಗೌಪ್ಯತೆ ವೈಶಿಷ್ಟ್ಯ. ಇದು ಭಾರತ ಸರ್ಕಾರದ 2021ರ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ವಿರುದ್ಧವಾಗಿದೆ.

WhatsApp ಪ್ರಕಾರ, ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ವೈಶಿಷ್ಟ್ಯವನ್ನು ತೆಗೆದುಹಾಕಲು ಭಾರತ ಸರಕಾರದಿಂದ ಒತ್ತಡ ಬಂದರೆ, ಅದು ಭಾರತಕ್ಕೆ ವಿದಾಯ ಹೇಳುವುದು ಖಚಿತ. ಐಟಿ ನಿಯಮಗಳು 2021ರ ನಿಯಮ 4(2) ರ ಅಡಿಯಲ್ಲಿ ಭಾರತ ಸರ್ಕಾರ ಮತ್ತು WhatsApp ನಡುವೆ ಸಮರ ನಡೆಯುತ್ತಿದೆ. ಈ ನಿಯಮದ ಪ್ರಕಾರ, ಸರ್ಕಾರ ಕೇಳಿದಾಗ, ವಾಟ್ಸ್ಯಾಪ್‌ ವೇದಿಕೆಯು ನಿರ್ದಿಷ್ಟ ಸಂದೇಶದ ಮೂಲವನ್ನು ಬಹಿರಂಗಪಡಿಸಬೇಕಾಗುತ್ತದೆ.

ಭಾರತದ ಐಟಿ ನಿಯಮಗಳು- 2021ಕ್ಕೆ ಮೆಟಾ ಸವಾಲು ಹಾಕಿದೆ. ಈ ಬಗ್ಗೆ ವಾಟ್ಸ್ಯಾಪ್, ನ್ಯಾಯಾಲಯದಲ್ಲಿ ವೈರಲ್ ಸುದ್ದಿಗೆ ಸಂಬಂಧಿಸಿದಂತೆ ಈಗಾಗಲೇ ಕ್ರಮ ಕೈಗೊಂಡಿರುವುದಾಗಿ ತಿಳಿಸಿತ್ತು. ಆದರೆ, ಬಳಕೆದಾರರ ಗೌಪ್ಯತೆಯ ಹಕ್ಕಿನ ಅಡಿಯಲ್ಲಿ, ಕಂಪನಿಯು ತನ್ನ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌ ಅನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದಿದೆ. ವಾಟ್ಸ್ಯಾಪ್‌ ಹಾಗೂ ಮೂಲ ಕಂಪನಿ ಮೆಟಾ ಭಾರತವನ್ನು ತೊರೆದರೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಕೂಡ ಇಲ್ಲಿಂದ ಹೊರಡಬಹುದು.

WhatsApp ಭಾರತದಲ್ಲಿ ಅತ್ಯಗತ್ಯ ಸೋಶಿಯಲ್‌ ಮೀಡಿಯಾ ಹಾಗೂ ಸಂದೇಶ ವೇದಿಕೆಯಾಗಿದೆ. ಅಂಕಿಅಂಶಗಳ ಪ್ರಕಾರ, ಈ ವೇದಿಕೆಯನ್ನು ವಿಶ್ವಾದ್ಯಂತ 278 ಕೋಟಿ ಬಳಕೆದಾರರು ಬಳಸುತ್ತಾರೆ. ಹೆಚ್ಚಿನ ಭಾರತೀಯ ಬಳಕೆದಾರರು ಇದನ್ನು ಬಳಸುತ್ತಾರೆ. ಮೆಟಾಗೆ 53.58 ಕೋಟಿ ಭಾರತೀಯ ಬಳಕೆದಾರರು ಭಾರತದಲ್ಲಿದ್ದಾರೆ. ಹೀಗಾಗಿ ಮೆಟಾ ಕಂಪನಿಗೆ ಭಾರತದ ಮಾರುಕಟ್ಟೆಯೂ ಮಹತ್ವದ್ದಾಗಿದೆ.

WhatsApp ಅನ್ನು ಫೆಬ್ರವರಿ 2009ರಲ್ಲಿ ಪ್ರಾರಂಭಿಸಲಾಯಿತು. ಇದರ ಆರಂಭಿಕ ಆವೃತ್ತಿಯು ಕ್ರ್ಯಾಶಿಂಗ್ ಸಮಸ್ಯೆಗಳನ್ನು ಹೊಂದಿತ್ತು. ಐಫೋನ್‌ನಲ್ಲಿ WhatsApp 2.0 ಅನ್ನು ಆಗಸ್ಟ್ 2009ರಲ್ಲಿ ಬಿಡುಗಡೆ ಮಾಡಲಾಯಿತು. 250000 ಜನರು ಡೌನ್‌ಲೋಡ್‌ ಮಾಡಿದರು. ನಂತರ 2010ರಲ್ಲಿ Android ಬಳಕೆದಾರರಿಗೆ ಪರಿಚಯಿಸಲಾಯಿತು. ಅಂದಿನಿಂದ ವಾಟ್ಸ್ಯಾಪ್ ಜನಪ್ರಿಯತೆಯ ತುದಿ ಮುಟ್ಟಿದೆ. ಸದ್ಯ ಭಾರತ ಸರ್ಕಾರ ಮತ್ತು ವಾಟ್ಸ್ಯಾಪ್ ನಡುವಿನ ಸಮರ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೇಲೆ ಕೂಡ ಪರಿಣಾಮ ಬೀರುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಇದನ್ನು ಓದಿ: WhatsApp update: ಈ ಹಳೇ ಫೋನ್‌ಗಳಲ್ಲಿ ಇನ್ನು ವಾಟ್ಸ್ಯಾಪ್‌ ಸಿಗೋಲ್ಲ! ನಿಮ್ಮ ಫೋನ್‌ ಕೂಡ ಇದೆಯಾ ನೋಡಿಕೊಳ್ಳಿ

Continue Reading
Advertisement
Veena kashappanavar
ಕರ್ನಾಟಕ21 mins ago

Veena Kashappanavar: ರಾಜಕೀಯದಿಂದ ದೂರ ಸರಿದ್ರಾ ವೀಣಾ ಕಾಶಪ್ಪನವರ್‌? ಭಾವನಾತ್ಮಕ ಪೋಸ್ಟ್‌ ಹಾಕಿದ ಕೈ ನಾಯಕಿ!

Mayank Yadav
ಕ್ರೀಡೆ32 mins ago

Mayank Yadav: ಗಾಯಾಳು ಮಾಯಾಂಕ್‌ ಯಾದವ್‌ ಐಪಿಎಲ್​ನಿಂದ ಔಟ್​?

Bomb threat
ದೇಶ50 mins ago

Bomb Threat: ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮಾಡಿದವ 16 ವರ್ಷದ ಪೋರ?

Saree Fashion
ಫ್ಯಾಷನ್57 mins ago

Saree Fashion: ಸೀರೆಯ ಹೊಸ ಟ್ರೆಂಡ್‌ ಬಗ್ಗೆ ರ‍್ಯಾಪರ್‌ ಇಶಾನಿಯ ವ್ಯಾಖ್ಯಾನ ಇದು!

karnataka weather Forecast
ಮಳೆ1 hour ago

Karnataka Weather : ಮಳೆಗಾಗಿ ಕಪ್ಪೆಗಳಿಗೆ ಮದುವೆ; ಶಾಖದ ಹೊಡೆತಕ್ಕೆ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Lottery
ವೈರಲ್ ನ್ಯೂಸ್1 hour ago

Lottery: ಕೋಟಿ ರೂ. ಲಾಟರಿ ಗೆದ್ದಿದ್ದೀರಿ ಎಂದರೆ, ಸ್ಕ್ಯಾಮ್‌ ಎಂದು ಫೋನಿಟ್ಟ ಮಹಿಳೆ; ಕೊನೆಗೆ ದುಡ್ಡು ಸಿಕ್ತಾ?

Prajwal Revanna Case What is diplomatic passport
ಹಾಸನ1 hour ago

Prajwal Revanna Case: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ಅರೆಸ್ಟ್!

Money Guide
ಮನಿ-ಗೈಡ್1 hour ago

Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

T20 World Cup 2024
ಕ್ರೀಡೆ2 hours ago

T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

Blackmail Case
ಬೆಂಗಳೂರು2 hours ago

Blackmail Case: ಸಹಪಾಠಿಯಿಂದ 35 ಲಕ್ಷ ರೂ. ಚಿನ್ನಾಭರಣ ದೋಚಿದ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರ ಬಂಧನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌