Google Map: ಪ್ರಯಾಣ ಇನ್ನೂ ಸಲೀಸು! ಗೂಗಲ್ ಮ್ಯಾಪ್‌ನಲ್ಲಿ ಲಭ್ಯವಾಗಲಿದೆ ಈ 6 ಹೊಸ ವೈಶಿಷ್ಟ್ಯ! - Vistara News

ತಂತ್ರಜ್ಞಾನ

Google Map: ಪ್ರಯಾಣ ಇನ್ನೂ ಸಲೀಸು! ಗೂಗಲ್ ಮ್ಯಾಪ್‌ನಲ್ಲಿ ಲಭ್ಯವಾಗಲಿದೆ ಈ 6 ಹೊಸ ವೈಶಿಷ್ಟ್ಯ!

ಗೂಗಲ್ ಸಂಸ್ಥೆ ಭಾರತದಲ್ಲಿ ಗೂಗಲ್ ಮ್ಯಾಪ್‌ಗಳಿಗಾಗಿ (Google Map) ಆರು ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. ಬಳಕೆದಾರರ ಪ್ರಯಾಣ ಸುಧಾರಿಸಲು, ಸುಸ್ಥಿರ ಪ್ರಯಾಣಕ್ಕೆ ಬೆಂಬಲ ನೀಡಲು ಗೂಗಲ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಸ್ಥಳೀಯ ಪಾಲುದಾರಿಕೆಗಳ ಮೇಲೆ ಕೇಂದ್ರೀಕರಿಸಿ ಈ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ. ಈ ಎಲ್ಲ ಅಪ್ಡೇಟ್‌ಗಳು ಈ ವಾರದಿಂದಲೇ ಬೆಂಗಳೂರು ಸೇರಿದಂತೆ ಭಾರತದ ಕೆಲವು ನಗರಗಳಲ್ಲಿ ಲಭ್ಯವಾಗಲಿವೆ.

VISTARANEWS.COM


on

Google Map
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಸುಸ್ಥಿರ ಪ್ರಯಾಣಕ್ಕೆ ಬೆಂಬಲ ನೀಡಲು ಗೂಗಲ್ (google) ಸಂಸ್ಥೆಯು ಭಾರತದಲ್ಲಿ ಗೂಗಲ್ ಮ್ಯಾಪ್‌ಗಳಿಗಾಗಿ (Google Map) ಆರು ಹೊಸ ವೈಶಿಷ್ಟ್ಯಗಳನ್ನು (new features) ಅನಾವರಣಗೊಳಿಸಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ (Artificial Intelligence) ಮತ್ತು ಸ್ಥಳೀಯ ಪಾಲುದಾರಿಕೆಗಳ ಮೇಲೆ ಕೇಂದ್ರೀಕರಿಸಿ ಈ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುತ್ತಿದೆ. ಸಾಮಾನ್ಯ ಪ್ರಯಾಣಿಕರಿಗೆ ಎದುರಾಗುವ ಸವಾಲುಗಳನ್ನು ಗುರಿಯಾಗಿಸಿಕೊಂಡು ಮಾಡಿರುವ ಈ ಹೊಸ ವೈಶಿಷ್ಟ್ಯಗಳು ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿವೆ.

1. ಕಿರಿದಾದ ರಸ್ತೆ ತಪ್ಪಿಸುವಿಕೆ

ನಾಲ್ಕು ಚಕ್ರ ವಾಹನಗಳಿಗೆ ಸೂಕ್ತವಲ್ಲದ ರಸ್ತೆಗಳ ಮೂಲಕ ಸಂಚಾರವನ್ನು ತಡೆಯಲು, ಕಿರಿದಾದ ರಸ್ತೆಗಳನ್ನು ಗುರುತಿಸಲು ಮತ್ತು ಅವುಗಳನ್ನು ತಪ್ಪಿಸಲು ಗೂಗಲ್ ನಕ್ಷೆಗಳು ಈಗ ಎಐ ಅನ್ನು ಬಳಸುತ್ತವೆ. ಈ ವೈಶಿಷ್ಟ್ಯವು ರಸ್ತೆಯ ಅಗಲವನ್ನು ಅಂದಾಜು ಮಾಡಲು ಮತ್ತು ರೂಟಿಂಗ್ ಅಲ್ಗಾರಿದಮ್‌ಗಳನ್ನು ಪರಿಷ್ಕರಿಸಲು ಉಪಗ್ರಹ ಚಿತ್ರಣ, ಗಲ್ಲಿ ವೀಕ್ಷಣೆ ಡೇಟಾವನ್ನು ಬಳಸಿಕೊಳ್ಳುತ್ತದೆ. ಇದು ಆರಂಭದಲ್ಲಿ ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಾಗಲಿದೆ.

2. ಫ್ಲೈಓವರ್ ನ್ಯಾವಿಗೇಷನ್

ಗೂಗಲ್ ನಕ್ಷೆಗಳು ಈಗ 40 ಭಾರತೀಯ ನಗರಗಳಲ್ಲಿ ಶಿಫಾರಸು ಮಾಡಲಾದ ಮಾರ್ಗಗಳಲ್ಲಿ ಫ್ಲೈಓವರ್‌ಗಳನ್ನು ಹೈಲೈಟ್ ಮಾಡುತ್ತವೆ. ಇದು ಚಾಲಕರು ಎತ್ತರದ ರಸ್ತೆ ಮಾರ್ಗಗಳಲ್ಲಿ ಸರಾಗವಾಗಿ ಸಾಗಲು ಸಹಾಯ ಮಾಡುತ್ತದೆ.


3. ಮೆಟ್ರೋ ಟಿಕೆಟ್ ಬುಕಿಂಗ್

ಕೊಚ್ಚಿ ಮತ್ತು ಚೆನ್ನೈನಲ್ಲಿ ಬಳಕೆದಾರರು ಈಗ ನೇರವಾಗಿ ಗೂಗಲ್ ನಕ್ಷೆಗಳು, ಒಎನ್‌ಡಿಸಿ ಮತ್ತು ನಮ್ಮ ಯಾತ್ರಿ ಜೊತೆಗಿನ ಏಕೀಕರಣದ ಮೂಲಕ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

4. ಇವಿ ಚಾರ್ಜಿಂಗ್ ಸ್ಟೇಷನ್ ಇಂಟಿಗ್ರೇಷನ್

ನಕ್ಷೆಗಳು ಮತ್ತು ಹುಡುಕಾಟದಲ್ಲಿ 8,000ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳ ವಿವರಗಳನ್ನು ಸಂಯೋಜಿಸಲು ಗೂಗಲ್ ಇವಿ ಚಾರ್ಜಿಂಗ್ ಪೂರೈಕೆದಾರರೊಂದಿಗೆ ಪಾಲುದಾರಿಕೆ ಹೊಂದಿದೆ. ಇದು ನೈಜ ಸಮಯದ ಲಭ್ಯತೆ ಮತ್ತು ಚಾರ್ಜರ್ ಪ್ರಕಾರದ ಮೂಲಕ ಫಿಲ್ಟರಿಂಗ್ ಅನ್ನು ಒಳಗೊಂಡಿರುತ್ತದೆ. ಗೂಗಲ್ ನಕ್ಷೆಗಳಲ್ಲಿ ದ್ವಿಚಕ್ರ ವಾಹನ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಒಳಗೊಂಡಿರುವ ಮೊದಲ ದೇಶವಾಗಿ ಭಾರತವನ್ನು ಮಾಡಿದೆ.


5. ಮುಖ್ಯ ಸ್ಥಳಗಳ ಶಿಫಾರಸುಗಳು

ಪ್ರಮುಖ ನಗರಗಳು ಮತ್ತು ಪ್ರವಾಸಿ ತಾಣಗಳಲ್ಲಿ ಶಿಫಾರಸು ಮಾಡಲಾದ ಸ್ಥಳಗಳ ಪಟ್ಟಿಗಳನ್ನು ಸಂಗ್ರಹಿಸಲು ಸ್ಥಳೀಯ ತಜ್ಞರು ಗೂಗಲ್‌ನೊಂದಿಗೆ ಸಹಕರಿಸುತ್ತಿದ್ದಾರೆ.

ಇದನ್ನೂ ಓದಿ: Bike Mileage Tips: ಬೈಕ್‌‌ಗೆ ಟ್ಯೂಬ್, ಟ್ಯೂಬ್ ಲೆಸ್ ಟಯರ್; ಇವೆರಡರಲ್ಲಿ ಯಾವುದು ಬೆಸ್ಟ್?

6. ಸುಧಾರಿತ ರಸ್ತೆ ಮಾಹಿತಿ

ಆಂಡ್ರಾಯ್ಡ್, ಐಒಎಸ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇನಲ್ಲಿ ಲಭ್ಯವಿರುವ ರಸ್ತೆಗಳ ನೈಜ ಚಿತ್ರಣದ ವಿವರಗಳನ್ನು ಬಳಕೆದಾರರು ವರದಿ ಮಾಡಲು ಅನುಮತಿಸುತ್ತದೆ. ಸ್ಥಳೀಯ ಸಾರಿಗೆ ಸವಾಲುಗಳನ್ನು ಪರಿಹರಿಸಲು ಈ ವೈಶಿಷ್ಟ್ಯಗಳನ್ನು ವಿನ್ಯಾಸಗೊಳಿಸಲಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ ಇದು ಕ್ರಮೇಣ ಲಭ್ಯವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Nissan Magnite : ನಿಸ್ಸಾನ್‌ ಮ್ಯಾಗ್ನೈಟ್‌ ಇಜಡ್‌- ಶಿಫ್ಟ್‌ ಕಾರು ಹೇಗಿದೆ?; ಪವರ್‌, ಫೀಚರ್‌ಗಳು ಹೇಗಿವೆ? ಇಲ್ಲಿದೆ ವಿವರ

Nissan Magnite EZ : ಮ್ಯಾಗ್ನೈಟ್ ನೋಡಲು ತುಂಬಾ ಸುಂದರವಾದ ಕಾರು ಎಂಬುದ ಸಾಬೀತಾಗಿದೆ. 6 ಲಕ್ಷ ರೂ.ಗಳ ಆರಂಭಿಕ ಬೆಲೆ ಹೊಂದಿರುವ ಹೊರತಾಗಿಯೂ ಕಾರು ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ದೊಡ್ಡ ಎಲ್- ಆಕಾರದ ಡಿಆರ್‌ಎಲ್‌ಗಳನ್ನು ಹೊಂದಿರುವ ಇದ ಮುಂಭಾಗ ಎಲ್ಲ ರಸ್ತೆಯಲ್ಲಿ ಉತ್ತಮ ನೋಟ ನೀಡುತ್ತದೆ. ಮ್ಯಾಗ್ನೈಟ್ ನ ಸೈಡ್ ಪ್ರೊಫೈಲ್ ಸಹ ನಿಮಗೆ ಅತ್ಯುತ್ತಮವಾಗಿದ್ದ ನೋಡುವುದಕ್ಕೆ ಹೆಚ್ಚು ಆಕರ್ಷಕವಾಗಿದೆ.

VISTARANEWS.COM


on

Nissan Magnite EZ
Koo

ಬೆಂಗಳೂರು : ಭಾರತದ ಕಾರು ಮಾರುಕಟ್ಟೆಯಲ್ಲಿ ಸಬ್ -4 ಮೀಟರ್ ಎಸ್‌‌ಯುವಿಗೆ ಇದೀಗ ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್‌. ಎಲ್ಲ ಕಂಪನಿಗಳು ಕನಿಷ್ಠ ಒಂದು ಸಬ್‌ ಕಾಂಪಾಕ್ಟ್‌ ಕಾರುಗಳನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಹೋರಾಟ ನಡೆಸುತ್ತಿದೆ. ಅಂತೆಯೇ ನಿಸ್ಸಾನ್ ಇಂಡಿಯಾ ಕಳೆದ ಕೆಲವು ವರ್ಷಗಳಿಂದ ಮ್ಯಾಗ್ನೈಟ್‌ (Nissan Magnite) ಮೂಲಕ ಪ್ರತಿಸ್ಪರ್ಧಿಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಕಾರು ಭಾರತೀಯ ಕಾರು ಗ್ರಾಹಕರ ಗಮನವನ್ನೂ ಸೆಳೆದಿದೆ. ಇದರ ಹಲವು ವೇರಿಯೆಂಟ್‌ಗಳಲ್ಲಿ ನ್ಯಾಚುರಲ್ ಆಸ್ಪಿರೇಟೆಡ್‌‌ ಎಂಜಿನ್‌ನೊಂದಿಗಿನ ಎಎಮ್‌ಟಿ ಗೇರ್‌ ಬಾಕ್ಸ್ ಹೊಂದಿರುವ ಕಾರು ವಿಶೇಷ ಎನಿಸಿದೆ. ಅದುವೇ ನಿಸ್ಸಾನ್‌ ಮ್ಯಾಗ್ನೈಟ್‌ ಇಜಡ್‌ ಶಿಫ್ಟ್‌. (Nissan Magnite EZ- Shift). ಇದರಲ್ಲಿ ಟರ್ಬೊ ಇಲ್ಲದ ಎಂಜಿನ್‌ಗೆ ಸ್ವಯಂಚಾಲಿತ ಟ್ರಾನ್ಸ್ ಮಿಷನ್‌ ಜೋಡಿಸಲಾಗಿದೆ. ಈ ಕಾರು ಹೇಗಿದೆ, ನಾನಾ ಪರಿಸ್ಥಿತಿಯಲ್ಲಿ ಈ ಕಾರಿನ ಸ್ಪಂದನೆ ಹೇಗಿದೆ ಎಂಬುದನ್ನು ನೋಡೋಣ.

ಮ್ಯಾಗ್ನೈಟ್ ನೋಡಲು ತುಂಬಾ ಸುಂದರವಾದ ಕಾರು ಎಂಬುದರಲ್ಲಿ ಅನುಮಾನ ಇಲ್ಲ. 6 ಲಕ್ಷ ರೂ.ಗಳ ಆರಂಭಿಕ ಬೆಲೆ ಹೊಂದಿರುವ ಹೊರತಾಗಿಯೂ ಕಾರು ಹೆಚ್ಚು ಪ್ರೀಮಿಯಂ ಆಗಿದೆ. ದೊಡ್ಡ ಎಲ್- ಆಕಾರದ ಡಿಆರ್‌ಎಲ್‌ಗಳನ್ನು ಹೊಂದಿರುವ ಇದರ ಮುಂಭಾಗ ರಸ್ತೆಯಲ್ಲಿನ ಓಡಾಟದ ವೇಳೆ ಉತ್ತಮ ನೋಟ ನೀಡುತ್ತದೆ. ಮ್ಯಾಗ್ನೈಟ್ ನ ಸೈಡ್ ಪ್ರೊಫೈಲ್ ಕೂಡ ಆಕರ್ಷಕವಾಗಿದೆ. ವಿಶೇಷವಾಗಿ 16 ಇಂಚಿನ ಇಂಚಿನ ಮಿಶ್ರಲೋಹದ ವೀಲ್‌‌‌ಗಳು ನೋಟವನ್ನು ಹೆಚ್ಚಿಸಿದೆ. ಆರ್ಚ್‌ಗಳು ಇದು ಆಫ್-ರೋಡರ್ ವಾಹನದ ಲುಕ್‌ ಕೊಟ್ಟಿದೆ.

ಮ್ಯಾಗ್ನೈಟ್‌ನ ಬಾಡಿಲೈನ್‌ಗಳು ಹೆಚ್ಚು ತಿಕ್ಷ್ಣವಾಗಿದ್ದು ಕಾಂಪ್ಯಾಕ್ಟ್ ಎಸ್‌ಯುವಿಗೆ ಉತ್ತಮ ನೋಟ ನೀಡುತ್ತದೆ. ಅಥ್ಲೆಟಿಕ್ ನೋಟಕ್ಕಾಗಿ ರೂಫ್‌‌ ಅನ್ನು ಸ್ಲ್ಯಾಪಿಂಗ್ ಆಗಿ ಇಡಲಾಗಿದೆ. ಅದೇ ರೀತಿ ದೊಡ್ಡ ಗಾತ್ರದ ಸ್ಪಾಯ್ಲರ್‌ಗಳು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ವಿಶೇಷ ನೀಲಿ ಬಣ್ಣ

ಕಾರಿನ ಆಕರ್ಷಕ ನೀಲಿ ಬಣ್ಣವು ಎಲ್ಲಾ ವೇರಿಯೆಂಟ್‌‌ಗಳಲ್ಲಿ ಲಭ್ಯವಿದೆ. ಆದರೆ, ಬಹುತೇಕ ಎಲ್ಲವೂ ಬಿಳಿ ರೂಫ್‌ ಕಲರ್ ಹೊಂದಿದೆ. ಹೀಗಾಗಿ ಬ್ಲ್ಯಾಕ್‌ ರೂಫ್‌ ಬೇಕಾದರೆ ಇಲ್ಲಿ ವಿಶ್ಲೇಷಣೆ ಮಾಡುತ್ತಿರುವ ಇಝಡ್-ಶಿಫ್ಟ್ ಕಾನ್ಫಿಗರೇಶನ್ ಕಾರನ್ನು ಖರೀದಿ ಮಾಡಬೇಕಾಗುತ್ತದೆ.

ಬೂಟ್ ಡೋರ್‌ನ ಕೆಳಗಿನ ಬಲಭಾಗದಲ್ಲಿರುವ ‘ಇಝಡ್-ಶಿಫ್ಟ್’ ಬ್ಯಾಡ್ಜ್ ನೀಡಲಾಗಿದೆ. ಎಎಂಟಿ ವೇರಿಯೆಂಟ್‌ನಲ್ಲಿ ಇದೊಂದು ಬದಲಾವಣೆ ಹೊರತುಪಡಿಸಿ ವಿನ್ಯಾಸದಲ್ಲಿ ಬೇರೆ ಬದಲಾವಣೆ ಇಲ್ಲ. ಎಲ್ಲ ಕಾರು ಕಂಪನಿಗಳು ಟೈಲ್‌ ಲ್ಯಾಂಪ್‌ ಅನ್ನು ಎಲ್‌ಇಡಿಗೆ ಪರಿವರ್ತಿಸಿದ್ದರೂ ನಿಸ್ಸಾನ್ ಇನ್ನೂ ಮಾಡಿಲ್ಲ. ಆದಾಗ್ಯೂ ಹಿಂಭಾಗದ ವಿನ್ಯಾಸದಲ್ಲಿ ಯಾವುದೇ ಕೊರತೆ ಇಲ್ಲ. ಕಾರಿನ ಹಿಂಭಾಗದ ಬಂಪರ್ ಲೇಯರ್ಡ್ ವಿನ್ಯಾಸ ಹೊಂದಿದೆ. ಟೈಲ್‌ಗೇಟ್‌ ಹೆಚ್ಚು ದೊಡ್ಡದಾಗಿದ್ದು ಮಧ್ಯದಲ್ಲಿ ಮ್ಯಾಗ್ನೈಟ್‌ ಎಂದು ಬರೆಯಲಾಗಿದೆ. ಹೀಗಾಗಿ ಇದು ಮುಂಭಾಗದಂತೆಯೇ ಹೆಚ್ಚು ಅತ್ಯಾಕರ್ಷಕವಾಗಿ ಕಾಣುತ್ತದೆ.

ಇಂಟೀರಿಯರ್ ವಿವರ ಇಲ್ಲಿದೆ

ಹೊರ ನೋಟದಂತೆಯೇ ಒಳ ನೋಟದಲ್ಲೂ ಹೆಚ್ಚು ಕೆಲಸ ಮಾಡಲಾಗಿದೆ. ಪ್ರಯಾಣಿಕರಿಗೆ ಹೆಚ್ಚು ಉತ್ಸಾಹ ತುಂಬಬಲ್ಲ ವಿನ್ಯಾಸ ನೀಡಲಾಗಿದೆ. 8-ಇಂಚಿನ ಟಚ್ ಸ್ಕ್ರೀನ್ ದೊಡ್ಡ ಆಕರ್ಷಣೆಯಾಗಿದೆ. ಗ್ರಾಫಿಕ್ಸ್ ನಿಖರ ಮಾಹಿತಿಯೊಂದಿಗೆ 7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ನೀಡಿದ್ದಾರೆ. ಎಸಿ ಸೇರಿದಂತೆ ಕ್ಲೈಮೇಟ್‌ ಕಂಟ್ರೋಲ್‌ಗಳನ್ನು ರೌಂಡ್‌ ನಾಬ್‌‌ಗಳಲ್ಲಿ ನಿಯತ್ರಿಸಬಹುದು. ಒಟ್ಟಾರೆಯಾಗಿ ಕ್ಯಾಬಿನ್ ಒಳಗೆ ಪ್ರೀಮಿಯಂ ಫೀಲ್ ಇದೆ.

ಇದನ್ನೂ ಓದಿ: Tata Nexon EV: ಕೇವಲ 200 ರೂ. ಖರ್ಚಿನಲ್ಲಿ ಈ ಕಾರು 323 ಕಿ.ಮೀ ದೂರ ಸಾಗುತ್ತದೆ!

ಇನ್ನು ಇಂಟೀರಿಯರ್‌ಗೆ ಬಳಸಿದ ಪ್ಲಾಸ್ಟಿಕ್‌‌ನ ಗುಣಮಟ್ಟ ತಕ್ಕ ಮಟ್ಟಿಗಿದೆ. ಫಿಟ್ ಮತ್ತು ಫಿನಿಶ್ ಸಮಾಧಾನಕರ. ಡಿಜಿಟಲ್ ಕ್ಲಸ್ಟರ್‌ನಲ್ಲಿ ಮಾಹಿತಿ ಪುನರಾವರ್ತನೆಯಾಗುತ್ತದೆ. ಒಂದೇ ನೋಟಕ್ಕೆ ಗುರುತಿಸಲು ಸಾಧ್ಯವೂ ಇಲ್ಲ ಎಂಬುದು ಸಣ್ಣ ಹಿನ್ನಡೆ. ರಿಯರ್ ಸೀಟ್‌‌ಗೆ ಪ್ರತ್ಯೇಕ ಎಸಿ ವೆಂಟ್‌ಗಳನ್ನು ನೀಡಲಾಗಿದೆ. ಸೀಟ್‌ಗಳು ಆರಾಮವಾಗಿ ಕುಳಿತುಕೊಳ್ಳುವುದಕ್ಕೆ ನೆರವಾಗುತ್ತದೆ. ದೀರ್ಘ ಪ್ರಯಾಣದ ವೇಳೆ ತೊಡೆಯ ಭಾಗಕ್ಕೆ ಹೆಚ್ಚು ಆರಾಮ ನೀಡುವಂಥ ಸೀಟ್‌ಗಳನ್ನು ಕೊಡಲಾಗಿದೆ.

ಫೀಚರ್‌ಗಳಲ್ಲಿ ಅತ್ಯುತ್ತಮ

ಮ್ಯಾಗ್ನೈಟ್‌ ಇಝಡ್-ಶಿಫ್ಟ್ ಎಎಂಟಿ ಹೆಚ್ಚು ಫೀಚರ್‌ಗಳನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್‌‌ಗಳು ಮತ್ತು ಎಲ್ಇಡಿ ಫಾಗ್ ಲ್ಯಾಂಪ್‌ಗಳು, 360 ಡಿಗ್ರಿ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, ಪಿಎಂ 2.5 ಏರ್ ಕಂಡಿಷನರ್ ಹೊಂದಿದೆ. ಮುಂಭಾಗದಲ್ಲಿ ಯುಎಸ್‌ಬಿ ಮತ್ತು 12 ವೋಲ್ಟ್‌‌ ಸಾಕೆಟ್ ಮತ್ತು ಹಿಂಭಾಗದಲ್ಲಿ ಒಂದು ಸಾಕೆಟ್‌ ನೀಡಲಾಗಿದೆ. ಸ್ಟೋರೇಜ್ ಸ್ಪೇಸ್‌ಗಳನ್ನು ಯಥೇಚ್ಛವಾಗಿ ನೀಡಲಾಗಿದೆ. ಆದರೆ ಆರ್ಮ್‌ರೆಸ್ಟ್ ಒಳಗೆ ಜಾಗ ಕೊಟ್ಟಿಲ್ಲ. ಕೇವಲ ಕುಷನ್ ಮಾತ್ರ ಇಡಲಾಗಿದೆ. ವೈರ್ ಲೆಸ್ ಚಾರ್ಜರ್, ಆಂಬಿಯೆಂಟ್ ಮೂಡ್ ಲೈಟಿಂಗ್, ಮ್ಯೂಸಿಕ್‌ ಸಿಸ್ಟಮ್‌ ಇಲ್ಲದಿರುವುದನ್ನು ಕೊರತೆ ಎನ್ನಬಹುದು. ಆದರೆ ಬೆಲೆಯ ವಿಚಾರಕ್ಕೆ ಬಂದಾಗ ಇದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಸೆಫ್ಟಿ ಫೀಚರ್‌ ಕೂಡ ಅತ್ಯುತ್ತಮವಾಗಿದೆ. ಗ್ಲೋಬಲ್ ಅನ್‌ ಕ್ಯಾಪ್ ಪ್ರಕಾರ 4 ಸ್ಟಾರ್ ರೇಟಿಂಗ್ ಇದೆ. ಇನ್ನು ಎರಡು ಏರ್‌ಬ್ಯಾಗ್‌ಗಳು ಸಾಕಷ್ಟು ಸುರಕ್ಷತೆ ಕೊಡುತ್ತದೆ. ಸೀಟ್‌ ಬೆಲ್ಟ್ ವಾರ್ನಿಂಗ್‌ ಡೋರ್ ಓಪನ್‌ ವಾರ್ನಿಂಗ್ ಕಾರಿನಲ್ಲಿದೆ. ಹೀಗಾಗಿ ಭಾರತದ ಮಟ್ಟಿಗೆ ಸಮಾಧಾನಕರ ಸುರಕ್ಷತೆ ಖಾತರಿಯಿದೆ.

ಎಎಂಟಿ ಡ್ರೈವಿಂಗ್ ಅನುಭವ ಹೇಗಿದೆ?

ಮ್ಯಾಗ್ನೈಟ್‌ ಇಝಡ್-ಶಿಫ್ಟ್ ಎಎಂಟಿ ಟ್ರಾನ್ಸ್‌ಮಿಷನ್‌ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ ನಗರದಲ್ಲಿ ಮತ್ತು ಹೈವೆ ರಸ್ತೆಯಲ್ಲಿ ಅತ್ಯುತ್ತಮ ಪ್ರಯಾಣದ ಅನುಭವ ನೀಡುತ್ತದೆ. ನಿಧಾನಗತಿಯ ವೇಗದಲ್ಲಿ ಇದು ಸ್ವಲ್ಪ ಗೊಂದಲಕ್ಕೆ ಈಡು ಮಾಡುತ್ತದೆ. ಗೇರ್ ಬದಲಾವಣೆ ಸಾಕಷ್ಟು ಸಮಯ ತೆಗೆದುಕೊಳ್ಳುವುದು ಗೊಂದಲಕ್ಕೆ ಈಡು ಮಾಡುತ್ತದೆ. ಆಕ್ಸಿಲೇಟರ್ ಮೇಲೆ ಹೆಚ್ಚು ಬಲ ನೀಡಬೇಕಾಗುತ್ತದೆ. ನೀವು ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಗೇರ್ ಬದಲಾವಣೆ ಆಗುವಾಗಲು ಹೆಚ್ಚು ಅಲುಗಾಟದ ಅನುಭವ ಕೊಡುತ್ತದೆ. ಇನ್ನು ಹಂಪ್‌ನಂಥ ಅಡೆ ತಡೆಗಳನ್ನು ದಾಟುವಾಗ ಗೊಂದಲ ಗ್ಯಾರಂಟಿ. ಆಕ್ಸಿಲೇಟರ್ ಕೊಟ್ಟರೆ ಟೈರ್ ಸ್ಪಿನ್ ಆಗುತ್ತದೆ. ಕೊಡದೇ ಹೋದರೆ ಕಾರು ಮುಂದಕ್ಕೆ ಹೋಗುವುದಿಲ್ಲ ಎಂಬ ಗೊಂದಲ ಗ್ಯಾರಂಟಿ. ಆದರೆ, ಹೈವೆ ರಸ್ತೆಯಲ್ಲಿ ನಯವಾದ ಚಾಲನೆಯ ಖಾತರಿ.

ಎಂಜಿನ್ ಸಣ್ಣದಾಗಿರುವ ಕಾರಣ ಗೇರ್ ಬಾಕ್ಸ್‌‌ನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. 100 ಸಿಸಿಯ ಎಂಜಿನ್‌ 72 ಪಿಎಸ್ ಮತ್ತು 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೀಗಾಗಿ ಎತ್ತರದ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಕಾರು ಬೇಗ ಸುಸ್ತಾಗುತ್ತದೆ! ನೇರ ರಸ್ತೆಯಲ್ಲಿ ಸಾಗುವಾಗಲೂ ಎಎಂಟಿ ಗೇರ್ ಬಾಕ್ಸ್ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವೈಫಲ್ಯ ಕಾಣುತ್ತದೆ. ಒಂದು ವೇಳೆ ಹೆಚ್ಚು ಶಕ್ತಿ ಬೇಕಾದರೆ ಹೆಚ್ಚು ಇಂಧನ ಖಾಲಿಯಾಗುವುದು ಖಾತರಿ.

ಸಸ್ಪೆನ್ಷನ್‌ ಮ್ಯಾಗ್ನೈಟ್ ಪಾಲಿಗೆ ಉತ್ತಮ ಅಂಶ. ಇದು ಪ್ರಯಾಣದ ಗುಣಮಟ್ಟ ಹೆಚ್ಚಿಸುತ್ತದೆ. ಸಣ್ಣ ಹಂಪ್‌ಗಳಲ್ಲಿ ಸರಾಗವಾಗಿ ಸಾಗುತ್ತದೆ. ಆದರೆ ಟೆಸ್ಟ್‌ ರೈಡ್‌ಗೆ ಕೊಟ್ಟ ಕಾರಿನ ಮುಂದಿನ ಎರಡೂ ಸಸ್ಪೆನ್ಷನ್‌ನಲ್ಲಿ ಸಣ್ಣ ಹಳ್ಳಕ್ಕೆ ಬಿದ್ದಾಗಲೂ ಅನಗತ್ಯ ಸದ್ದೊಂದು ಹೊರಡುತ್ತಿತ್ತು. ಆದರೆ, ಹಳ್ಳಿಯ ಕಚ್ಚಾ ರಸ್ತೆಯಲ್ಲೂ ಉತ್ತಮ ಸವಾರಿ ಅನುಭವ ನೀಡುತ್ತಿತ್ತು. ನಗರದ ಸವಾರಿಯ ವೇಳೆ ಕ್ಯಾಬಿನ್ ಒಳಗೆ ವೈಬ್ರೇಷನ್ ಬರುತ್ತದೆ. ಹೈವೆನಲ್ಲಿ ಗೊತ್ತಾಗುವುದಿಲ್ಲ. ಆದರೆ, ಅಷ್ಟೊಂದು ಪ್ರಮಾಣದಲ್ಲಿ ರೋಡ್‌ ಗ್ರಿಪ್ ನೀಡುವುದಿಲ್ಲ ಎಂದು ಹೇಳಬಹುದು. 100 ಕಿ.ಮೀ ವೇಗದ ದಾಟಿದ ಬಳಿಕ ಇದು ಅನುಭವಕ್ಕೆ ಬರುತ್ತದೆ. ಇನ್ನು ಬ್ರೇಕಿಂಗ್ ಉತ್ತಮವಾಗಿದೆ. ತಕ್ಷಣವೇ ಪ್ರತಿಕ್ರಿಯೆ ಕೊಡುತ್ತದೆ.

ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಬಗ್ಗೆ ಇನ್ನೇನು ಹೇಳಬಹುದು?

ನಿಸ್ಸಾನ್ ಮ್ಯಾಗ್ನೈಟ್ 6 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ (ಎಕ್ಸ್‌‌ ಶೋರೂಮ್‌ ಬೆಲೆ) ಮತ್ತು 10.86 ಲಕ್ಷ ರೂ.ಗಳವರೆಗೆ ಇದೆ. ಬೆಲೆ ವಿಚಾರಕ್ಕೆ ಬಂದಾಗ ಉತ್ತಮವಾಗಿದೆ. ಹೀಗಾಗಿ ನಿಸ್ಸಾನ್‌ ಎಎಂಟಿ ಉತ್ತಮ ಪ್ಯಾಕೇಜ್ ಎಂದೇ ಹೇಳಬಹುದು. ಈ ದರಕ್ಕೆ ಒಳ್ಳೆಯ ಫಿಚರ್‌ಗಳನ್ನು ಕಾರಿನಲ್ಲಿ ನೀಡಲಾಗಿದೆ.

ಹ್ಯಾಚ್‌ ಬ್ಯಾಕ್‌ ಬೆಲೆಗೆ ಕಾರು ಕೊಡುತ್ತಿರುವ ಕಾರಣ ಕಾಂಪ್ಯಾಕ್ಟ್‌‌ ಎಸ್‌ಯುವಿ ವರ್ಗದಲ್ಲಿ ಅತ್ಯುತ್ತಮ ಎಂದೇ ಹೇಳಬಹುದು. ನ್ಯಾಚುರಲ್‌ ಆಸ್ಪಿರೇಟೆಡ್ ಎಂಜಿನ್ ಅತ್ಯಂತ ಕಡಿಮೆ ಶಕ್ತಿ ನೀಡುತ್ತದೆ. ಎಎಂಟಿ ನಗರ ಚಾಲನೆಗೆ ಸಾಕಷ್ಟು ಉತ್ತಮವಾಗಿದ್ದರೂ ನೀವು ಟರ್ಬೊ ಸಿವಿಟಿ ಇನ್ನಷ್ಟು ಪವರ್‌ ಹೊಂದಿದೆ ಎಂಬುದನ್ನು ಗಮನ ಹರಿಸಬೇಕಾಗುತ್ತದೆ.

Continue Reading

ತಂತ್ರಜ್ಞಾನ

Mission RHUMI: ದೇಶದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್‌ ರಾಕೆಟ್‌ನ ಯಶಸ್ವಿ ಉಡಾವಣೆ

Mission RHUMI: ರೂಮಿ 1 ಹೆಸರಿನ ದೇಶದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್​​​ ಅನ್ನು ಇಂದು (ಆಗಸ್ಟ್ 24) ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಕಂಪನಿ ಸ್ಪೇಸ್ ಝೋನ್ ಇಂಡಿಯಾವು ಮಾರ್ಟಿನ್‌ ಗ್ರೂಪ್‌ ಜತೆ ಸೇರಿ ಅಭಿವೃದ್ಧಿಪಡಿಸಿದ ಈ ರಾಕೆಟ್​​ನ್ನು ಚೆನ್ನೈಯ ತಿರುವಿದಂಧೈನಲ್ಲಿರುವ ಟಿಟಿಡಿಸಿ (TTDC) ಮೈದಾನದಿಂದ ಉಡಾವಣೆ ಮಾಡಲಾಯಿತು.

VISTARANEWS.COM


on

Mission RHUMI
Koo

ಚೆನ್ನೈ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ರೂಮಿ 1 (RHUMI 1) ಹೆಸರಿನ ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್​​​ (Reusable hybrid rocket) ಅನ್ನು ಇಂದು (ಆಗಸ್ಟ್ 24) ಯಶಸ್ವಿಯಾಗಿ ಉಡಾವಣೆ ಮಾಡಿದೆ. ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಕಂಪನಿ ಸ್ಪೇಸ್ ಝೋನ್ ಇಂಡಿಯಾವು ಮಾರ್ಟಿನ್‌ ಗ್ರೂಪ್‌ ಜತೆ ಸೇರಿ ಅಭಿವೃದ್ಧಿಪಡಿಸಿದ ಈ ರಾಕೆಟ್​​ನ್ನು ಚೆನ್ನೈಯ ತಿರುವಿದಂಧೈನಲ್ಲಿರುವ ಟಿಟಿಡಿಸಿ (TTDC) ಮೈದಾನದಿಂದ ಉಡಾವಣೆ ಮಾಡಲಾಯಿತು (Mission RHUMI).

ಈ ರಾಕೆಟ್ 3 ಕ್ಯೂಬ್ ಉಪಗ್ರಹಗಳು ಮತ್ತು 50 ಪಿಐಸಿಒ (PICO) ಉಪಗ್ರಹಗಳನ್ನು ಉಪಕಕ್ಷೆಯ ಪಥಕ್ಕೆ ಕೊಂಡೊಯ್ಯಲಿದೆ. ರಾಕೆಟ್ ಅನ್ನು ಮೊಬೈಲ್ ಲಾಂಚರ್ ಬಳಸಿ ಸಬ್ ಆರ್ಬಿಟಲ್ ಪಥಕ್ಕೆ ಉಡಾಯಿಸಲಾಯಿತು. ಈ ಉಪಗ್ರಹಗಳು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸಂಶೋಧನಾ ಉದ್ದೇಶಗಳಿಗಾಗಿ ಡೇಟಾವನ್ನು ಸಂಗ್ರಹಿಸಲಿವೆ.

ಇಸ್ರೋ ಉಪಗ್ರಹ ಕೇಂದ್ರದ (ISAC) ಮಾಜಿ ನಿರ್ದೇಶಕ ಡಾ.ಮೈಲ್‌ಸ್ವಾಮಿ ಅಣ್ಣಾದೊರೈ ಅವರ ಮಾರ್ಗದರ್ಶನದಲ್ಲಿ ಸ್ಪೇಸ್ ಝೋನ್ ಇಂಡಿಯಾ ಸಂಸ್ಥಾಪಕ ಆನಂದ್ ಮೆಗಾಲಿಂಗಂ ಅವರು ಆರ್‌ಎಚ್‌ಯುಎಂಐ ಮಿಷನ್ ಅನ್ನು ಮುನ್ನಡೆಸುತ್ತಿದ್ದಾರೆ. ದಕ್ಷತೆಯನ್ನು ಸುಧಾರಿಸಲು ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಆರ್‌ಎಚ್‌ಯುಎಂಐ -1 (ರೂಮಿ 1) ರಾಕೆಟ್ ದ್ರವ ಮತ್ತು ಘನ ಇಂಧನ ಪ್ರೊಪೆಲ್ಲಂಟ್ ವ್ಯವಸ್ಥೆಗಳ ಅನುಕೂಲಗಳನ್ನು ಸಂಯೋಜಿಸುತ್ತದೆ.

3.5 ಮೀಟರ್‌ ಉದ್ದ 80 ಕೆಜಿ ತೂಕದ ಈ ರಾಕೆಟ್‌ನ ಶೇ. 70ರಷ್ಟನ್ನು ಮರುಬಳಕೆ ಮಾಡಬಹುದು. ರಾಕೆಟ್‌ನ ಮುಖ್ಯಭಾಗ, ಉಪಗ್ರಹಗಳನ್ನು ಹೊಂದಿರುವ ಭಾಗ ಯಶಸ್ವಿ ಉಡ್ಡಯನದ ಬಳಿಕ ಮರಳಿ ಭೂಮಿ ವಾತಾವರಣ ಪ್ರವೇಶಿಸಿ ಸಮುದ್ರದಲ್ಲಿ ಬೀಳಲಿದೆ. ಅಲ್ಲಿಂದ ಈ ಭಾಗಗಳನ್ನು ಸಂಗ್ರಹಿಸಿ, ಇನ್ನೊಂದು ಉಡ್ಡಯನಕ್ಕೆ ಬಳಸಬಹುದು. ಇದು ಭವಿಷ್ಯದ ಉಡ್ಡಯನ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಈ ರೂಮಿ 1 ರಾಕೆಟ್‌ 35 ಕಿ.ಮೀ ಎತ್ತರದ ಕಕ್ಷೆವರೆಗೆ ಹಾರಬಲ್ಲದು.

ಇದನ್ನೂ ಓದಿ: Aditya L1 Launch: ರಾಕೆಟ್‌ನಿಂದ ಬೇರ್ಪಟ್ಟ ಆದಿತ್ಯ ಎಲ್‌ 1 ಮಿಷನ್;‌ ಇಸ್ರೋಗೆ ಶಹಬ್ಬಾಶ್‌ ಎಂದ ಮೋದಿ

ಚೆನ್ನೈ ಮೂಲದ ಸ್ಪೇಸ್‌ ಝೋನ್‌ ಇಂಡಿಯಾ ಏರೋ-ಟೆಕ್ನಾಲಜಿ ಕಂಪನಿಯಾಗಿದ್ದು, ಬಾಹ್ಯಾಕಾಶ ಉದ್ಯಮದಲ್ಲಿ ಕಡಿಮೆ ವೆಚ್ಚದ, ದೀರ್ಘಾವಧಿಯ ಪರಿಹಾರವನ್ನು ಒದಗಿಸುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

Continue Reading

ಗ್ಯಾಜೆಟ್ಸ್

Old Phone Sale: ನಿಮ್ಮ ಹಳೆಯ ಫೋನ್ ಮಾರಾಟ ಮಾಡುವ ಮೊದಲು ಈ ವಿಷಯ ತಿಳಿದಿರಲಿ!

ಬಹಳಷ್ಟು ಬಾರಿ ಜನರು ತಮ್ಮ ಫೋನ್ ಅನ್ನು ಅಪರಿಚಿತರಿಗೆ ಮಾರಾಟ ಮಾಡುವ ಮೊದಲು ಅಗತ್ಯ ಅಥವಾ ಮೂಲಭೂತ ಹಂತಗಳನ್ನು ನಿರ್ವಹಿಸುವುದಿಲ್ಲ. ಇದರಿಂದ ಮುಂದೆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಹಳೆಯ ಫೋನ್ ಮಾರಾಟ (Old Phone Sale) ಮಾಡುವ ಮೊದಲು ನಿರ್ವಹಿಸಬೇಕಾದ ಕೆಲವು ಕ್ರಮಗಳನ್ನು ತಿಳಿದುಕೊಳ್ಳಿ.

VISTARANEWS.COM


on

By

Old Phone Sale
Koo

ಹಳೆಯ ಫೋನ್ (Old Phone) ಮಾರಾಟ (Old Phone Sale) ಮಾಡುವ ಅಥವಾ ಎಕ್ಸ್ ಚೇಂಚ್ (Old Phone exchange) ಮಾಡುವ ಆಲೋಚನೆಯಲ್ಲಿ ಇದ್ದೀರಾ ? ಹಾಗಿದ್ದರೆ ಅದಕ್ಕೂ ಮೊದಲು ಗಮನಿಸಬೇಕಾದ ಹಲವು ಸಂಗತಿಗಳಿವೆ. ಇಲ್ಲವಾದರೆ ನಿಮ್ಮ ಅಮೂಲ್ಯ ದಾಖಲೆಗಳು ಇನ್ನೊಬ್ಬರ ಕೈಸೇರುವ, ದುರ್ಬಳಕೆಯಾಗುವ ಸಾಧ್ಯತೆ ಇದೆ.

ಹಳೆಯ ಮೊಬೈಲ್ ಮಾರಾಟ ಮಾಡುವ ಮೊದಲು ಡೇಟಾವನ್ನು ಬ್ಯಾಕಪ್ ಮಾಡಬೇಕು, ಅನಂತರ ಫ್ಯಾಕ್ಟರಿ ರೀಸೆಟ್ ಮಾಡಿ ಮೊಬೈಲ್ ನಲ್ಲಿರುವ ಎಲ್ಲ ಡೇಟಾಗಳನ್ನು ಅಳಿಸಿ ಹಾಕಬೇಕು. ಎಲ್ಲಾ ಖಾತೆಗಳಿಂದ ಫೋನ್ ಅನ್ನು ಲಾಗೌಟ್ ಮಾಡಿ ಫೋನ್ ಅನ್ನು ಸಂಪೂರ್ಣವಾಗಿ ರಿಸೆಟ್ ಮಾಡಿಯೇ ಕೊಡಬೇಕು. ಜೊತೆಗೆ ಕೆಲವು ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ ಪೊಲೀಸರು.

ಬಹಳಷ್ಟು ಬಾರಿ ಜನರು ತಮ್ಮ ಫೋನ್ ಅನ್ನು ಅಪರಿಚಿತರಿಗೆ ಮಾರಾಟ ಮಾಡುವ ಮೊದಲು ಅಗತ್ಯ ಅಥವಾ ಮೂಲಭೂತ ಹಂತಗಳನ್ನು ನಿರ್ವಹಿಸುವುದಿಲ್ಲ. ಇದರಿಂದ ಮುಂದೆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಏನು ಮಾಡಬೇಕು?

ಹಳೆಯ ಫೋನ್ ಮಾರಾಟ ಮಾಡುವ ಮುನ್ನ ಈ ಕೆಳಗಿನ ಅಂಶಗಳು ಗಮನದಲ್ಲಿ ಇರಿಸಿ.

Old Phone Sale
Old Phone Sale


ಡೇಟಾ ಬ್ಯಾಕಪ್

ಮೊಬೈಲ್ ನಲ್ಲಿರುವ ಡೇಟಾವನ್ನು ಮುಖ್ಯವಾಗಿ ಫೋಟೋ, ವಿಡಿಯೋ, ಡಾಕ್ಯುಮೆಂಟ್‌ಗಳನ್ನು ಗೂಗಲ್ ಖಾತೆಗೆ ಅಥವಾ ಐ ಕ್ಲೌಡ್ ಗೆ ಬ್ಯಾಕಪ್ ಮಾಡಿ. ಫೋನ್‌ನಿಂದ ಎಲ್ಲಾ ಫೈಲ್‌ಗಳನ್ನು ತೆಗೆದುಹಾಕಿ. ಇದನ್ನು ಕ್ಲೌಡ್‌ನಲ್ಲಿ ಸಂಗ್ರಹಿಸುವ ಬದಲು ಕಂಪ್ಯೂಟರ್‌ ನಲ್ಲೂ ಸಂಗ್ರಹಿಸಿ ಇಡಬಹುದು. ಸೆಟ್ಟಿಂಗ್‌ ಗೆ ಹೋಗುವ ಮೂಲಕ ನಿಮ್ಮ ಎಲ್ಲಾ ಡೇಟಾವನ್ನು ಬ್ಯಾಕಪ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸೈನ್ ಔಟ್

ಜನರು ಸಾಮಾನ್ಯವಾಗಿ ನಿರ್ಲಕ್ಷಿಸುವ ಅಥವಾ ಮರೆತುಬಿಡುವ ಅತ್ಯಂತ ನಿರ್ಣಾಯಕ ಹಂತ ಇದಾಗಿದೆ. ಭವಿಷ್ಯದಲ್ಲಿ ಯಾವುದೇ ವಂಚನೆಯನ್ನು ತಪ್ಪಿಸುವ ಸಲುವಾಗಿ ಪೇಟಿಎಂ, ಗೂಗಲ್ ಪೇ, ಭೀಮ್, ಬ್ಯಾಂಕ್ ಅಪ್ಲಿಕೇಶನ್‌ಗಳು ಇತ್ಯಾದಿ ಎಲ್ಲಾ ಪಾವತಿ ಅಪ್ಲಿಕೇಶನ್‌ಗಳಿಂದ ಸೈನ್ ಔಟ್ ಮಾಡಿ. ನಿಮ್ಮ ವಿವರಗಳನ್ನು ಈ ಖಾತೆಗಳಿಗೆ ಲಾಗ್ ಇನ್ ಆಗಿರಿಸುವುದು ಕಳ್ಳತನ ಮತ್ತು ಇತರ ಗಂಭೀರ ಭದ್ರತಾ ಉಲ್ಲಂಘನೆಗಳಿಗೆ ಕಾರಣವಾಗಬಹುದು. ಅನಗತ್ಯ ಭದ್ರತಾ ಹಗರಣವನ್ನು ತಪ್ಪಿಸಲು ಗೂಗಲ್, ಫೇಸ್ ಬುಕ್, ಇನ್ ಸ್ಟಾ ಗ್ರಾಮ್ ಇತ್ಯಾದಿ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಸೈನ್ ಔಟ್ ಮಾಡಲು ಮರೆಯದಿರಿ.

ಜೋಡಣೆಯನ್ನು ತೆಗೆದು ಹಾಕಿ

ಸ್ಮಾರ್ಟ್ ವಾಚ್‌, ಬ್ಲೂಟೂತ್, ಇಯರ್‌ಫೋನ್‌, ಫಿಟ್‌ನೆಸ್ ಬ್ಯಾಂಡ್‌ ಅಥವಾ ಏರ್‌ಪಾಡ್‌ಗಳಂತಹ ಸಾಧನಗಳನ್ನು ಅನ್‌ಪೇರ್ ಮಾಡಿ. ಅಲ್ಲದೇ ಫೋನ್‌ನಲ್ಲಿ ಏನೂ ಉಳಿಯದಂತೆ ಎಲ್ಲಾ ಜೋಡಿಸಲಾದ ಸಾಧನಗಳಿಂದ ಡೇಟಾವನ್ನು ತೆಗೆದುಹಾಕಿ.

ಫ್ಯಾಕ್ಟರಿ ರೀಸೆಟ್

ಸಾಧನವನ್ನು ಅದರ ಫ್ಯಾಕ್ಟರಿ ಸ್ಥಿತಿಗೆ ಹೊಂದಿಸಲು ಪೂರ್ಣ ಫ್ಯಾಕ್ಟರಿ ಮರುಹೊಂದಿಕೆಯನ್ನು ನಿರ್ವಹಿಸಿ. ಇದು ಸಾಧನದಿಂದ ಎಲ್ಲವನ್ನೂ ಅಳಿಸುತ್ತದೆ ಮತ್ತು ನಿಮ್ಮ ಫೋನ್ ಅನ್ನು ಹೊಚ್ಚ ಹೊಸ ಸ್ಥಿತಿಯಲ್ಲಿ ಇರಿಸುತ್ತದೆ. ಫೋನ್‌ನಿಂದ ಎಲ್ಲಾ ಡೇಟಾ ಮತ್ತು ಸೆಟ್ಟಿಂಗ್‌ಗಳನ್ನು ಅಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಫ್ಯಾಕ್ಟರಿ ಮರುಹೊಂದಿಕೆಯನ್ನು ಎರಡು ಬಾರಿ ಮಾಡಬಹುದು.


ಸಿಮ್ ಕಾರ್ಡ್ ತೆಗೆದುಹಾಕಿ

ಫೋನ್‌ನಿಂದ ಸಿಮ್ ಮತ್ತು ಎಸ್ ಡಿ ಕಾರ್ಡ್ ಅನ್ನು ತೆಗೆಯಲು ಮರೆಯಬೇಡಿ. ಕೆಲವು ಸಾಧನ, ಸಂಪರ್ಕ ಮತ್ತು ಕರೆ ಲಾಗ್‌ಗಳನ್ನು ಸಿಮ್ ಕಾರ್ಡ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಆದ್ದರಿಂದ ಇವುಗಳು ಪ್ರಮುಖ ಹಾರ್ಡ್‌ವೇರ್ ತುಣುಕುಗಳಾಗಿವೆ. ಖರೀದಿದಾರರಿಗೆ ಮೊಬೈಲ್ ಹಸ್ತಾಂತರಿಸುವ ಮೊದಲು ಇದರಲ್ಲಿರುವ ಪಠ್ಯ ಸಂದೇಶ, ಕರೆ ಲಾಗ್‌ ಅನ್ನು ಬ್ಯಾಕಪ್ ನಲ್ಲಿ ಇಡಿ. ಇದಕ್ಕಾಗಿ ಗೂಗಲ್ ಡ್ರೈವ್ ಅಥವಾ ಡ್ರಾಪ್‌ಬಾಕ್ಸ್‌ ಬಳಸಿ. ಹೊಸ ಫೋನ್ ಬಂದಾಗ ಇದನ್ನು ಶೇರ್ ಇಟ್ ಅಪ್ಲಿಕೇಶನ್ ಮೂಲಕ ವರ್ಗಾಯಿಸಿಕೊಳ್ಳಬಹುದು.

ಇದನ್ನೂ ಓದಿ: TRAI New Rules: ನಿಮಗೆ ಗೊತ್ತಿರಲಿ; ಸೆ.1ರಿಂದ ಈ ಸಿಮ್ ಕಾರ್ಡ್‌ಗಳು ಕಪ್ಪು ಪಟ್ಟಿಗೆ!

ಬಿಲ್ ಪಡೆಯಿರಿ

ಫೋನ್ ಅನ್ನು ಮಾರಾಟ ಮಾಡಲು ನಿರ್ಧರಿಸಿದರೆ ಬಿಲ್ ಅನ್ನು ಪಡೆಯಲು ಮರೆಯದಿರಿ. ಇದು ಯಾವುದೇ ವಂಚನೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಯಾವುದೇ ದುಷ್ಕೃತ್ಯವನ್ನು ನಿರ್ವಹಿಸಲು ಫೋನ್ ಅನ್ನು ಬಳಸಿದರೆ ನಿಮ್ಮನ್ನು ರಕ್ಷಿಸುತ್ತದೆ.

Continue Reading

ಆಟೋಮೊಬೈಲ್

Skoda Kylaq: ಸ್ಕೋಡಾ ಕಾರಿಗೆ ಸಂಸ್ಕೃತ ಹೆಸರು ಸೂಚಿಸಿ ಕಾರು ಗೆದ್ದ ಕುರಾನ್‌ ಶಿಕ್ಷಕ!

Skoda Kylaq: ಇಂಗ್ಲಿಷ್ ವರ್ಣಮಾಲೆಯಲ್ಲಿ Kಯಿಂದ ಪ್ರಾರಂಭವಾಗುವ ಮತ್ತು Q ನೊಂದಿಗೆ ಕೊನೆಗೊಳ್ಳುವ ಹೆಸರನ್ನು ಸೂಚಿಸಲು ಕಂಪನಿ ಕೇಳಿತ್ತು. ಐದು ಹೆಸರು ಸೂಚಿಸುವ ಆಯ್ಕೆಯನ್ನು ನೀಡಿತ್ತು. ಕಾಸರಗೋಡು ಮೂಲದ ಮೊಹಮ್ಮದ್ ಜಿಯಾದ್ ಎಂಬವರು ಎಸ್‌ಯುವಿಗೆ ʼಕೈಲಾಕ್’ ಎಂಬ ಹೆಸರನ್ನು ಸೂಚಿಸಿ ಗೆದ್ದರು.

VISTARANEWS.COM


on

skoda Kylaq
Koo

ಹೊಸದಿಲ್ಲಿ: ಸ್ಕೋಡಾ ಕಂಪನಿಯ (Skoda Company) ಹೊಸ ಕಾರಿಗೆ ಸಂಸ್ಕೃತದ (Sanskrit) ಹೆಸರೊಂದನ್ನು ಕಾಸರಗೋಡಿನ ಕುರಾನ್‌ ಶಿಕ್ಷಕರೊಬ್ಬರು (Quran teacher) ಸೂಚಿಸಿದ್ದು, ಅದನ್ನು ಕಂಪನಿ (Skoda Kylaq) ಆಯ್ಕೆ ಮಾಡಿದೆ. ಜೊತೆಗೆ, ಈ ಹೆಸರನ್ನು ಸೂಚಿಸಿದ ಶಿಕ್ಷಕರಿಗೆ ಒಂದು ಹೊಸ ಕಾರನ್ನೂ ಕೊಡುಗೆಯಾಗಿ ನೀಡಿದೆ.

ʼನೇಮ್ ಯುವರ್ ಸ್ಕೋಡಾ’ ಅಭಿಯಾನದ ಮೂಲಕ ಹೊಸ ಕಾರಿಗೆ ಹೆಸರು ನೀಡಲು ಕಂಪನಿ ಪ್ರಕಟಣೆ ನೀಡಿತ್ತು. ದೇಶಾದ್ಯಂತ ಸಾಕಷ್ಟು ಕಾರು ಪ್ರಿಯರು ಹೆಸರನ್ನು ಸೂಚಿಸಿ ಅಭಿಯಾನದಲ್ಲಿ ಭಾಗವಹಿಸಿದ್ದರು. ಕರ್ನಾಟಕ- ಕೇರಳ ಗಡಿಭಾಗದ ಕಾಸರಗೋಡಿನ ವ್ಯಕ್ತಿಯೊಬ್ಬರು ಸ್ಕೋಡಾ ಎಸ್‌ಯುವಿ (Skoda SUV) ಹೆಸರನ್ನು ಸೂಚಿಸುವ ಮೂಲಕ ಬಹುಮಾನವನ್ನು ಗೆದ್ದಿದ್ದಾರೆ.

ಸ್ಕೋಡಾ ಈ ವರ್ಷದ ಫೆಬ್ರವರಿಯಲ್ಲಿ ʼನೇಮ್ ಯುವರ್ ಸ್ಕೋಡಾ’ ಅಭಿಯಾನವನ್ನು ಪ್ರಾರಂಭಿಸಿತು. ಇಂಗ್ಲಿಷ್ ವರ್ಣಮಾಲೆಯಲ್ಲಿ Kಯಿಂದ ಪ್ರಾರಂಭವಾಗುವ ಮತ್ತು Q ನೊಂದಿಗೆ ಕೊನೆಗೊಳ್ಳುವ ಹೆಸರನ್ನು ಸೂಚಿಸಲು ಕಂಪನಿ ಕೇಳಿತ್ತು. ಐದು ಹೆಸರು ಸೂಚಿಸುವ ಆಯ್ಕೆಯನ್ನು ನೀಡಿತ್ತು. ಕಾಸರಗೋಡು ಮೂಲದ ಮೊಹಮ್ಮದ್ ಜಿಯಾದ್ ಎಂಬವರು ಎಸ್‌ಯುವಿಗೆ ʼಕೈಲಾಕ್’ ಎಂಬ ಹೆಸರನ್ನು ಸೂಚಿಸಿ ಗೆದ್ದರು.

24 ವರ್ಷ ವಯಸ್ಸಿನ ಜಿಯಾದ್ ಅವರು ಕಾಸರಗೋಡಿನ ನಜಾತ್ ಕುರಾನ್ ಅಕಾಡೆಮಿಯಲ್ಲಿ ಶಿಕ್ಷಕರಾಗಿದ್ದಾರೆ. ಹೆಸರನ್ನು ಸೂಚಿಸಿದ ನಂತರ, ಸ್ಪರ್ಧೆಯ ಅಪ್‌ಡೇಟ್‌ಗಳಿಗಾಗಿ ಸ್ಕೋಡಾದ Instagram ಖಾತೆಯನ್ನು ಜಿಯಾದ್ ಫಾಲೋ ಮಾಡಿದ್ದರು. ವಿವಿಧ ಹಂತಗಳಲ್ಲಿ ಸುಮಾರು ಎರಡು ಲಕ್ಷ ಹೆಸರುಗಳು ಬಂದಿದ್ದವಂತೆ. ಮೊದಲ 100 ಜನರ ಶಾರ್ಟ್‌ಲಿಸ್ಟ್‌ನಲ್ಲಿ ಜಿಯಾದ್ ಹೆಸರು ಬಂತು. ಆದರೆ ಬಹುಮಾನ ಬಂದಿರುವುದನ್ನು ನಂಬಲೇ ಸಾಧ್ಯವಿಲ್ಲ ಎಂಬುದು ಜಿಯಾದ್‌ ಅವರ ಅಚ್ಚರಿ.

ಫೆಬ್ರವರಿಯಲ್ಲಿ ನಾಮಕರಣ ಸ್ಪರ್ಧೆ ಆರಂಭವಾದಾಗಲೇ ಜಿಯಾದ್ ಹೊಸ ವಾಹನದ ಹೆಸರನ್ನು ಸೂಚಿಸಿದ್ದರು. ವಾಟ್ಸಾಪ್ ಗ್ರೂಪ್ ಮೂಲಕ ಬಂದ ಲಿಂಕ್ ಮೂಲಕ ಸಿಯಾದ್ ಈ ಸ್ಪರ್ಧೆಯ ಬಗ್ಗೆ ತಿಳಿದುಕೊಂಡಿದ್ದಾರೆ. ನಂತರ, ಹೆಸರನ್ನು ಸೂಚಿಸಿದ್ದರು. 10 ಜನರ ಶಾರ್ಟ್‌ಲಿಸ್ಟ್‌ನಲ್ಲಿ ಅವರ ಹೆಸರು ಕಾಣಿಸಿಕೊಂಡಾಗ ಅವರು ತುಂಬಾ ಸಂತೋಷಪಟ್ಟರು. ಆದರೆ ಅವರು ವಿಜೇತರು ಎಂದು ತಿಳಿದಾಗ ಅವರು ಆಘಾತಕ್ಕೇ ಒಳಗಾದರಂತೆ.

ಕಾರು ತಯಾರಕ ಕಂಪನಿ ಸ್ಕೋಡಾ ಪ್ರಕಾರ, ಕೈಲಾಕ್ ಎಂಬುದು ಸಂಸ್ಕೃತ ಪದ ಹಾಗೂ ʼಸ್ಫಟಿಕʼ ಎಂಬುದು ಅದರ ಅರ್ಥ. ಸ್ಕೋಡಾ ಕಂಪನಿಯು ಕ್ವಿಕ್, ಕಾಸ್ಮಿಕ್, ಕ್ಲಿಕ್ ಮತ್ತು ಕಯಾಕ್ ಹೆಸರುಗಳನ್ನು ಹೊಂದಿತ್ತು. ಅವುಗಳನ್ನು ಬದಲಿಸಿ ಹೊಸ ಮಾದರಿಗೆ ಕೈಲಾಕ್ ಎಂದು ಹೆಸರನ್ನು ನೀಡಿದೆ.

ಸ್ಕೋಡಾ ಭಾರತದಲ್ಲಿ ವಿಶೇಷ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಕಾರು ತಯಾರಕ ಕಂಪನಿ. ಈ ಸ್ಕೋಡಾ ಕಂಪನಿಯು ಕುಶಾಕ್ ಮತ್ತು ಸ್ಲಾವಿಯಾ ಕಾರುಗಳನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ಸ್ಕೋಡಾ ಆಟೋ ಭಾರತದಲ್ಲಿ ತನ್ನ ಮುಂಬರುವ ಹೊಸ ಎಸ್‍ಯುವಿಯ ಹೆಸರನ್ನು ಆಗಸ್ಟ್ 21ರಂದು ಘೋಷಿಸಿತು. ಸ್ಕೋಡಾ ಕೈಲಾಕ್ (Skoda Kylaq) ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸಬ್ 4 ಮೀಟರ್ ಎಸ್‌ಯುವಿ ವಿಭಾಗವನ್ನು ಬದಲಾಯಿಸಲಿದೆ. ಕೈಲಾಕ್ ಜನಪ್ರಿಯ ಮಾದರಿಗಳಾದ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳೊಂದಿಗೆ ಸ್ಪರ್ಧಿಸಲಿದೆ.

ಸ್ಕೋಡಾದ ಇಂಡಿಯಾ 2.0 ಕಾರ್ಯಕ್ರಮದ ಭಾಗವಾಗಿರುವ ಮೂರನೇ ಕಾರು ಇದಾಗಿದೆ. ಹೊಸ ವಾಹನವನ್ನು ಅದೇ MQB-M00 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಅದು ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾಕ್ಕೆ ಆಧಾರವಾಗಿದೆ. ಸ್ಕೋಡಾದ ಹೊಸ ಸಬ್-4 ಮೀಟರ್ ಎಸ್‌ಯುವಿಯು ಕುಶಾಕ್ ಮತ್ತು ಸ್ಲಾವಿಯಾದೊಂದಿಗೆ ಬಳಸಿದ ಅದೇ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗುತ್ತದೆ. ಈ ಹೊಸ ಕಾಂಪ್ಯಾಕ್ಟ್ ಎಸ್‍ಯುವಿಗಾಗಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಶೇಕಡಾ 30 ರಷ್ಟು ಹೆಚ್ಚಿಸುವುದಾಗಿ ಕಂಪಬಿ ಹೇಳಿದೆ. ಸ್ಕೋಡಾ ಒಂದು ವರ್ಷದಲ್ಲಿ ಬ್ರೆಝಾ, ನೆಕ್ಸಾನ್ ಪ್ರತಿಸ್ಪರ್ಧಿಯ ಒಂದು ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ.

ಇದನ್ನೂ ಓದಿ: Auto Launches: ಸ್ಕೋಡಾ ಕುಶಾಕ್‌, ಬಿಎಂಡಬ್ಲ್ಯು ಆರ್ 1300 ಸೇರಿ ಇನ್ನೂ ಹಲವು ಹೊಸ ವಾಹನ ಮಾರುಕಟ್ಟೆಗೆ!

Continue Reading
Advertisement
Prosecution against Siddaramaiah Hc reserves verdict after hearing arguments
ಕೋರ್ಟ್1 hour ago

CM Siddaramaiah : ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್;​ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿಸಿರಿದ ಹೈಕೋರ್ಟ್, ಮಧ್ಯಂತರ ತಡೆ ಮುಂದುವರಿಕೆ

Colon cancer is on the rise‌ Those above 50 years of age are targeted
ಆರೋಗ್ಯ2 hours ago

Colon cancer : ಕರುಳಿನ ಕ್ಯಾನ್ಸರ್ ವಯಸ್ಸಾದವರಿಗೆ ಕಂಟಕ! ಈ ಆಹಾರಗಳನ್ನು ತಿನ್ನಲೇಬೇಡಿ

Suvarna Celebrity League a reality show launched on Star Suvarna
ಸಿನಿಮಾ3 hours ago

Suvarna Celebrity League : ವಾರಾಂತ್ಯದಲ್ಲಿ ಸೆಲೆಬ್ರಿಟಿಗಳ ಸಮರ; ಕಿರುತೆರೆಯಲ್ಲಿ ಶುರುವಾಗಲಿದೆ ಸುವರ್ಣ ಸೆಲೆಬ್ರಿಟಿ ಲೀಗ್

Self harming
ಬೆಂಗಳೂರು5 hours ago

Self Harming : ಅಮ್ಮ ಬೈಕ್‌ ಕೊಡಿಸಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವಕ

Actor darshan
ಸಿನಿಮಾ6 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್‌ಗೆ ಮತ್ತೊಂದು ದಿನ ಸೆರೆವಾಸ; ನಾಳೆಗೆ ವಿಚಾರಣೆ ಮುಂದೂಡಿದ ಕೋರ್ಟ್‌

CM Siddaramaiah
ರಾಜಕೀಯ6 hours ago

CM Siddaramaiah : ಸಿದ್ದರಾಮಯ್ಯ ವಿಷ್ಯದಲ್ಲಿ ಆತುರದ ನಿರ್ಣಯ; ರಾಜ್ಯಪಾಲರಿಂದ ಸಂವಿಧಾನಕ್ಕೆ ಅಪಚಾರ- ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ

Road Accident
ಪ್ರಮುಖ ಸುದ್ದಿ8 hours ago

Road Accident : ಏರ್‌ಪೋರ್ಟ್‌ ರೋಡ್‌ನಲ್ಲಿ ಡೆಡ್ಲಿ ಹಿಟ್‌ ಆ್ಯಂಡ್‌ ರನ್‌; ಲಾಂಗ್‌ ಡ್ರೈವ್‌‌ ಬಂದಿದ್ದ ಮೂವರು ವಿದ್ಯಾರ್ಥಿಗಳು ಬಲಿ

Dina Bhavishya
ಭವಿಷ್ಯ9 hours ago

Dina Bhavishya : ಈ ರಾಶಿಯವರ ಅನುಮಾನವೇ ಸಂಬಂಧಗಳನ್ನು ಹಾಳು ಮಾಡುತ್ತೆ

Installation of Ganesha idol at home Muslim man preaches message of unity
ಗದಗ1 day ago

Ganesh Chaturthi: ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆಯ ಸಂದೇಶ ಸಾರಿದ ಮುಸ್ಲಿಂ ವ್ಯಕ್ತಿ

karnataka weather Forecast
ಮಳೆ2 days ago

Karnataka Weather : 40 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಭಾರಿ ಮಳೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌