Meta Paid Service: ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗೂ ಬಂತು ಪಾವತಿ ಚಂದಾದಾರಿಕೆ ಸೇವೆ! ತಿಂಗಳಿಗೆ ಎಷ್ಟು ಹಣ? Vistara News

ಗ್ಯಾಜೆಟ್ಸ್

Meta Paid Service: ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗೂ ಬಂತು ಪಾವತಿ ಚಂದಾದಾರಿಕೆ ಸೇವೆ! ತಿಂಗಳಿಗೆ ಎಷ್ಟು ಹಣ?

Meta Paid Service: ಪ್ರಮುಖ ಸೋಷಿಯಲ್ ಮೀಡಿಯಾ ತಾಣಗಳಾದ ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಮ್‌ಗಳಿಗೆ (Instagram) ಮೆಟಾ ಕಂಪನಿಯು ಪಾವತಿ ಚಂದದಾರಿಕೆ ಸೇವೆಯನ್ನು ಆರಂಭಿಸಿದೆ. ಬಳಕೆದಾರರು ತಮ್ಮ ಖಾತೆಯ ದೃಢೀಕರಣಕ್ಕಾಗಿ ತಿಂಗಳಿಗೆ ಹಣವನ್ನು ನೀಡಬೇಕಾಗುತ್ತದೆ.

VISTARANEWS.COM


on

Meta Launches Paid Blue Badge For Instagram, Facebook
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಿಗೆ ಮೆಟಾ ಪಾವತಿ ಚಂದದಾರಿಕೆ ಸೇವೆಯನ್ನು ಆರಂಭಿಸಿದೆ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸ್ಯಾನ್‌ ಫ್ರಾನ್ಸಿಸ್ಕೋ, ಅಮೆರಿಕ: ಮೈಕ್ರೋಬ್ಲಾಗಿಂಗ್ ಟ್ವಿಟರ್ ಬ್ಯಾಡ್ಜ್ ಬಳಕೆದಾರರಿಗೆ ಶುಲ್ಕ ಪರಿಷ್ಕರಣೆ ಮಾಡಿದ ಬೆನ್ನಲ್ಲೇ, ಫೇಸ್‌ಬುಕ್ ಒಡೆತನದ ಮೆಟಾ (Meta) ಕೂಡ ಇಂಥದ್ದೇ ಪೇಯ್ಡ್ ಸೇವೆಗೆ ಮುಂದಾಗಿದೆ. ಮೆಟಾ ಕಂಪನಿಯು ತನ್ನ ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಮ್(Instagram) ಸೋಷಿಯಲ್ ಮೀಡಿಯಾಗಳಿಗೆ ಪಾವತಿ ಚಂದಾದಾರಿಕೆ ಸೇವೆಗೆ (paid subscription service) ಭಾನುವಾರ ಚಾಲನೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳ ಜಾಹೀರಾತು ಆಧರಿತ ಬಿಸಿನೆಸ್ ಮಾಡೆಲ್ ಕುಸಿಯುತ್ತಿದೆ. ಈ ಕಾರಣಕ್ಕೆ ಸೋಷಿಯಲ್ ಮೀಡಿಯಾಗಳು ಆದಾಯಗಳ ಹೊಸ ಮೂಲವನ್ನು ಹುಡುಕುತ್ತಿವೆ. ಅದರ ಪರಿಣಾಮವಾಗಿ ಮೆಟಾ ಪ್ರಮುಖ ಹೆಜ್ಜೆಯನ್ನು ಇಟ್ಟಿದೆ(Meta Paid Service).

ಎಷ್ಟು ಹಣ ಪಾವತಿಸಬೇಕು?

ಫೇಸ್‌ಬುಕ್‌ನ ಮಾತೃ ಸಂಸ್ಥೆಯಾದ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಭಾನುವಾರದಂದು ಮೆಟಾ ವೆರಿಫೈಡ್ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಬಳಕೆದಾರರು ತಮ್ಮ ಖಾತೆಯನ್ನು ದೃಢೀಕರಣ ಮಾಡಿಕೊಳ್ಳಲು ಕನಿಷ್ಠ ತಿಂಗಳಿಗೆ 11.99 ಡಾಲರ್ ನೀಡಬೇಕಾಗುತ್ತದೆ. ಅಂದರೆ, ರೂಪಾಯಿ ಲೆಕ್ಕದಲ್ಲಿ ತಿಂಗಳಿಗೆ 990 ರೂಪಾಯಿ ಆಗುತ್ತದೆ.

ಮಾರ್ಕ್ ಜುಕರ್‌ಬರ್ಗ್‌ ಪೋಸ್ಟ್‌ನಲ್ಲಿ ಏನಿದೆ?

ಈ ಹೊಸ ವೈಶಿಷ್ಟ್ಯವು ನಮ್ಮ ಸೇವೆಗಳಾದ್ಯಂತ ದೃಢೀಕರಣ ಮತ್ತು ಸುರಕ್ಷತೆಯನ್ನು ಹೆಚ್ಚಿಸುವುದು ಎಂದು ಜುಕರ್‌ಬರ್ಗ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಪೇಯ್ಡ್ ಸರ್ವೀಸ್ ಮೊದಲಿಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳಲ್ಲಿ ಜಾರಿಗೆ ಬರಲಿದೆ. ಬಳಿಕ ಅಮೆರಿಕ ಹಾಗೂ ಇತರ ದೇಶಗಳಿಗೂ ವಿಸ್ತರಣೆಯಾಗಲಿದೆ ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Twitter Blue: ಭಾರತದಲ್ಲಿ ಟ್ವಿಟರ್ ಬ್ಲೂ ಸಬ್‌ಸ್ಕ್ರಿಪ್ಷನ್ ಶುರು, ತಿಂಗಳಿಗೆ 900 ರೂ.! ಏನೇನು ಲಾಭ?

ಪಾವತಿ ಚಂದಾದಾರಿಕೆ ಸೇವೆಯಿಂದ ಏನು ಲಾಭ?

ಚಂದಾದಾರರು ತಮ್ಮ ಖಾತೆಯನ್ನು ಸರ್ಕಾರಿ ಗುರುತುಪತ್ರಗಳೊಂದಿಗೆ ಪರಿಶೀಲಿಸಲಾಗಿದೆ ಎಂದು ಸೂಚಿಸುವ ಬ್ಯಾಡ್ಜ್ ಅನ್ನು ಪಡೆಯುತ್ತಾರೆ. ಮೋಸ ಮಾಡುವವ ವಿರುದ್ಧ ಹೆಚ್ಚುವರಿ ರಕ್ಷಣೆ, ಗ್ರಾಹಕರ ಬೆಂಬಲಕ್ಕೆ ನೇರ ಪ್ರವೇಶ ಮತ್ತು ಹೆಚ್ಚಿನ ಗೋಚರತೆ ಇನ್ನಿತರ ಲಾಭಗಳು ಬಳಕೆದಾರರಿಗೆ ಈ ಚಂದಾದಾರಿಕೆ ಸೇವೆಯಿಂದ ದೊರೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಗ್ಯಾಜೆಟ್ಸ್

ವಾಟ್ಸಾಪ್‌ನಿಂದ ಚಾಟ್ ಅಷ್ಟೇ ಅಲ್ಲ, ಇಷ್ಟೆಲ್ಲ ಅದ್ಭುತ ಕೆಲಸ ಮಾಡಬಹುದು ನೋಡಿ!

WhatsApp: ತ್ವರಿತ ಸಂದೇಶ ಕಳುಹಿಸಲು ನೆರವು ನೀಡುವ ವಾಟ್ಸಾಪ್‌ನಿಂದ ಸಾಕಷ್ಟು ಇನ್ನಿತರ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

VISTARANEWS.COM


on

Not only chat you can do many more incredible things by whatsApp in India
Koo

ವಾಟ್ಸಾಪ್ (WhatsApp) ಎಂದರೆ ಕೇವಲ ಚಾಟ್ (WhatsApp Chat) ಮಾಡಲು, ಅಗತ್ಯ ಸಂದೇಶಗಳನ್ನು (WhatsApp Message) ತ್ವರಿತವಾಗಿ ಕಳುಹಿಸುವ ಆ್ಯಪ್ ಎಂದು ಕೊಂಡಿದ್ದೇವೆ. ಇವು ವಾಟ್ಸಾಪ್‌ನ ಪ್ರಾಥಮಿಕ ಕೆಲಸಗಳು ಎಂಬುದು ಹೌದು. ಆದರೆ, ಇವುಗಳ ಹೊರತಾಗಿಯೂ ವಾಟ್ಸಾಪ್‌ ನಾನಾ ರೀತಿಯಲ್ಲಿ ಬಳಕೆದಾರರಿಗೆ (WhatsApp Users) ನೆರವು ನೀಡುತ್ತದೆ. ಬೆರಳ ತುದಿಯಲ್ಲಿ ಅನೇಕ ಕೆಲಸಗಳನ್ನು ವಾಟ್ಸಾಪ್‌ಗಳನ್ನು ಬಳಸಿಕೊಂಡು ಮಾಡಬಹುದು. ಉಬರ್ ಬುಕ್(Uber Booking), ಮೆಟ್ರೋ ಟಿಕೆಟ್ ಖರೀದಿ (Metro Ticket), ದಿನಸಿ ಖರೀದಿ, ಹಣ ರವಾನೆ, ದಾಖಲೆ ಪತ್ರಗಳು ಮತ್ತು ಆರೋಗ್ಯ ಸೇವೆ ಸೇರಿದಂತೆ ಇನ್ನಿತರ ಸರ್ವೀಸ್‌ ಪಡೆದುಕೊಳ್ಳಬಹುದು. ಅಷ್ಟರ ಮಟ್ಟಿಗೆ ವಾಟ್ಸಾಪ್ ನಮಗೆ ಹೆಲ್ಪ್‌ಫುಲ್ ಆಗಿದೆ. ಆದರೆ, ಬಹಳಷ್ಟು ಜನರಿಗೆ ವಾಟ್ಸಾಪ್‌ನ ಉಪಯುಕ್ತತೆಯ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ, ನೀವು ವಾಟ್ಸಾಪ್‌ನಿಂದ ಮಾಡಬಹುದು ಕೆಲವು ಕೆಲಸಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ. ಓದಿ.

ಉಬರ್ ಬುಕ್ ಮಾಡಬಹುದು

ಉಬರ್ ಬುಕ್ ಮಾಡಲು ನೀವು ಉಬರ್ ಆ್ಯಪ್‌ಗೆ ಹೋಗಬೇಕಾದ ಅಗತ್ಯವಿಲ್ಲ. ವಾಟ್ಸಾಪ್ ಮೂಲಕವೂ ಮಾಡಬಹುದು. ಇದ್ಕಕಾಗಿ ನೀವು, 7292000002 ನಂಬರ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಟ್ಟುಕೊಳ್ಳಬೇಕು. ಬಳಿಕ, ವಾಟ್ಸಾಪ್ ಚಾಟ್ ಓಪನ್ ಮಾಡಿ ಮತ್ತು ಹಾಯ್ ಎಂದು ಟೈಪ್ ಮಾಡಿ. ಬಳಿಕ ನಿಮ್ಮ ಪಿಕ್ ಅಪ್ ಲೊಕೇಷನ್ ಮತ್ತು ನೀವು ಹೋಗುವ ಸ್ಥಳವನ್ನು ನಮೂದಿಸಿ. ತಕ್ಷಣವೇ ನಿಮಗೆ ನಿಮ್ಮ ಪ್ರಯಾಣಕ್ಕೆ ತಗಲುವ ವೆಚ್ಚ ಮತ್ತು ಡ್ರೈವರ್ ಮಾಹಿತಿ ದೊರೆಯುತ್ತದೆ.

ಮೆಟ್ರೋ ಟಿಕೆಟ್ ಖರೀದಿಸಬಹುದು!

ಹೌದು, ವಾಟ್ಸಾಪ್ ಮೂಲಕ ಮೆಟ್ರೋ ಟಿಕೆಟ್ ಕೂಡ ಖರೀದಿಸಬಹುದು. ಇದಕ್ಕಾಗಿ ನೀವು ಮೊಬೈಲ್ ಕಾಂಟಾಕ್ಟ್ ಲಿಸ್ಟ್‌ನಲ್ಲಿ 9650855800 ನಂಬರ್ ಸೇವ್ ಮಾಡಿಕೊಳ್ಳಬೇಕು. ಬಳಿಕ ಚಾಟ್ ಓಪನ್ ಮಾಡಿ ಹಾಯ್ ಎಂದು ಟೈಪ್ ಮಾಡಬೇಕು. ಬಳಿಕ ನಿಮಗೆ ಬೇಕಾದ ಭಾಷೆಯನ್ನು ಆಯ್ದುಕೊಳ್ಳಿ. ಇಷ್ಟಾದ ನಿಮ್ಮ ಸ್ಟೇಷನ್ ಸ್ಟಾಪ್ಸ್ ನಮೂದಿಸಿ ಮತ್ತು ಎಷ್ಟು ಟಿಕೆಟ್ ಬೇಕು ಎಂಬುದನ್ನು ನಮೂದಿಸಿ. ಜರ್ನಿ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ ಮತ್ತು ಮುಂದುವರಿಯರಿ. ಆಗ ನಿಮಗೆ ದೊರೆಯುವ ಕ್ಯೂಆರ್ ಟಿಕೆಟ್‌ ಅನ್ನು ಸೇವ್ ಮಾಡಿಟ್ಟುಕೊಳ್ಳಿ.

ಜಿಯೋ ಮಾರ್ಟ್ ಮೂಲಕ ಏನಾದರೂ ಖರೀದಿಸಿ

ಈಗಾಗಲೇ ನಿಮಗೆ ಗೊತ್ತಿರುವ ಸಂಗತಿ ಇದು. ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ಮಾರ್ಟ್ ಮತ್ತು ವಾಟ್ಸಾಪ್ ಈ ಕುರಿತು ಸಹಯೋಗವನ್ನು ಹೊಂದಿವೆ. ವಾಟ್ಸಾಪ್ ಮೂಲಕವೇ ಜಿಯೋ ಮಾರ್ಟ್‌ನಿಂದ ದಿನಸಿ ಪದಾರ್ಥಗಳನ್ನು ಖರೀದಿಸಬಹುದು. ಜಿಯೋ ಮಾರ್ಟ್‌ನಲ್ಲಿರುವ 50 ಸಾವಿರಕ್ಕೂ ಅಧಿಕ ಇರುವ ದಿನಸಿಗಳನ್ನು ಬ್ರೌಸ್ ಕೂಡ ಮಾಡಬಹುದು. ಜಿಯೋ ಮಾರ್ಟ್ ಡಿಸ್ಕೌಂಟ್ ಕೂಡ ನೀಡುತ್ತದೆ. ಇದಕ್ಕಾಗಿ ನೀವು ಜಿಯೋ ಮಾರ್ಟ್‌ನ 79770 79770 ನಂಬರ್ ಸೇವ್ ಮಾಡಿಕೊಳ್ಳಬೇಕು. ಚಾಟ್ ಬಾಕ್ಸ್‌ನಲ್ಲಿ ಹಾಯ್ ಟೈಪ್ ಮಾಡಿ. ಆಗ ದೊರೆಯುವ ವಸ್ತುಗಳ ಪಟ್ಟಿಯಲ್ಲಿ, ನಿಮಗೆ ಬೇಕಾದ ವಸ್ತುಗಳನ್ನು ಶೋಧ ಮಾಡಬಹುದು. ನಿಮ್ಮ ಆಯ್ಕೆಯಂತೆ ಬೇಕಾಗಿರುವ ವಸ್ತುಗಳನ್ನು ಕಾರ್ಟ್‌ಗೆ ಸೇರಿಸಿ. ವಾಟ್ಸಾಪ್ ಪೇ ಯುಪಿಐ ಮೂಲಕ ಹಣ ಪಾವತಿಸಿ ಆರ್ಡರ್ ಪೂರ್ತಿ ಮಾಡಿ.

ಹಣ ರವಾನೆ ಕೂಡ ಮಾಡಬಹುದು

ವಾಟ್ಸಾಪ್ ಹಣ ರವಾನೆ ಮತ್ತು ಸ್ವೀಕಾರಕ್ಕೂ ಅವಕಾಶ ಕಲ್ಪಿಸುತ್ತದೆ. ವಾಟ್ಸಾಪ್ ಪೇ ಮೂಲಕ ವಾಟ್ಸಾಪ್ ಬಳಕೆದಾರರು ಹಣದ ವ್ಯವಹಾರ ಮಾಡಬಹುದು. ಒಮ್ಮೆ ನೀವು ನಿಮ್ಮ ವಾಟ್ಸಾಪ್ ಪಾವತಿಗಳ ವ್ಯಾಲೆಟ್‌ಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ ನಂತರ, ಯಾವುದೇ ಶುಲ್ಕವಿಲ್ಲದೆ , ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವ ಯಾರಿಗಾದರೂ ನೀವು ಸುರಕ್ಷಿತವಾಗಿ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

ಮಹತ್ವದ ದಾಖಲೆ ಪತ್ರ ಪಡೆಯಿರಿ

ವಾಟ್ಸಾಪ್ ಮೂಲಕ ನಿಮ್ಮ ಮಹತ್ವದ ದಾಖಲೆಗಳನ್ನು ಪಡೆದುಕೊಳ್ಳಬಹುದು. ಅಂದರೆ, ಬಳೆಕದಾರರು ತಮ್ಮ ಪಾನ್ ಕಾರ್ಡ್, ಚಾಲನಾ ಪರವಾನಿಗಿ ಇತ್ಯಾದಿ ದಾಖಲೆಗಳನ್ನು ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಬೇಕು. ಬಳಕೆದಾರರು ಮೊದಲಿಗೆ ಡಿಜಿಲಾಕರ್‌ನಲ್ಲಿ ಅಧಿಕೃತ ಖಾತೆ ತೆರೆಯಬೇಕು. ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಇತ್ಯಾದಿ ದಾಖಲೆಗಳನ್ನು ಡಿಜಿಟಲ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಸೇವೆಯನ್ನು ವಾಟ್ಸಾಪ್ ಮೂಲಕ ಪಡೆದುಕೊಳ್ಳಲು 9013151515 ನಂಬರ್ ಸೇವ್ ಮಾಡಿ ಮತ್ತು ಚಾಟ್ ಓಪನ್ ಮಾಡಿ ಹಾಯ್ ಎಂದು ಟೈಪ್ ಮಾಡಿ. ಡಿಜಿಲಾಕರ್ ಡಾಕ್ಯುಮೆಂಟ್‌ಗಳನ್ನು ಪ್ರವೇಶಿಸಲು ಮೆನು ಪ್ರಾಂಪ್ಟ್‌ಗಳನ್ನು ಅನುಸರಿಸಿ.

ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಿ

ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವುದು ಕಷ್ಟ. ಆದರೆ, ವಾಟ್ಸಾಪ್ ಮೂಲಕ ತುಂಬ ಸುಲಭವಾಗಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಬಳಕೆದಾರರು +917290055552 ನಂಬರ್‌ ಸೇವ್ ಮಾಡಿಕೊಳ್ಳಬೇಕು ಮತ್ತು ಹಾಯ್ ಎಂದು ಟೈಪ್ ಮಾಡಿ ಸೆಂಡ್ ಮಾಡಬಹುದು. ಬಳಿಕ ಗೋಚರಿಸುವ ಮೆನುವಿನಲ್ಲಿ ನಿಮಗೆ ಬೇಕಾದ ಸೇವೆಗಳನ್ನು ಆಯ್ಕೆ ಮಾಡಿ. ಪ್ರಾಂಪ್ಟ್ ಅನುಸರಿಸಿ ಮತ್ತು ವೈದ್ಯರಿಗೆ ನಿಮ್ಮ ಅನಾರೋಗ್ಯದ ಮಾಹಿತಿಯನ್ನು ನೀಡಬೇಕು. ನಿಮಗೆ ಸೇವೆ ದೊರೆಯುತ್ತದೆ.

ಈ ಸುದ್ದಿಯನ್ನೂ ಓದಿ: WhatsApp: ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ‘ಒಮ್ಮೆ ವೀಕ್ಷಣೆ’ ಫೀಚರ್ ವಾಪಸ್ ಬಂತು

Continue Reading

ಗ್ಯಾಜೆಟ್ಸ್

WhatsApp: ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ‘ಒಮ್ಮೆ ವೀಕ್ಷಣೆ’ ಫೀಚರ್ ವಾಪಸ್ ಬಂತು

WhatsApp: ಒಮ್ಮೆ ವೀಕ್ಷಣೆ ಫೀಚರ್ ಅನ್ನು ವಾಟ್ಸಾಪ್ ಆ್ಯಪ್ ಕಳೆದ ವರ್ಷವಷ್ಟೇ ಹಿಂತೆಗೆದುಕೊಂಡಿತ್ತು. ಈ ಫೀಚರ್ ಅನ್ನು ಈಗ ಮತ್ತೆ ಪರಿಚಿಯಿಸುತ್ತಿದೆ.

VISTARANEWS.COM


on

WhatsApp will reintroduced vies once feature to desktop users
Koo

ನವದೆಹಲಿ: ವಾಟ್ಸಾಪ್‌ ಆ್ಯಪ್(WhatsApp), ಫೋಟೋ (photo) ಮತ್ತು ವಿಡಿಯೋಗಳಿಗಾಗಿ (Video) ವ್ಯೂ ಒನ್ಸ್ (ಒಮ್ಮೆ ವೀಕ್ಷಣೆ) ಫೀಚರ್ ಅನ್ನು ಡೆಸ್ಕ್‌ಟಾಪ್ ಬಳಕೆದಾರರಿಗೆ ಪರಿಚಯಿಸುತ್ತಿದೆ(Veiw once). ಕಳೆದ ವರ್ಷ ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಅಪ್ಲಿಕೇಶನ್ ವೆಬ್ ಆವೃತ್ತಿಯಿಂದ ಫೋಟೋಗಳು ಮತ್ತು ವೀಡಿಯೊಗಳನ್ನು ಒಮ್ಮೆ ವೀಕ್ಷಣೆ ಮತ್ತು ತೆರೆಯುವ ಸಾಮರ್ಥ್ಯವನ್ನು ಕಿತ್ತು ಹಾಕಿತ್ತು. ಕಂಪನಿಯ ಈ ನಿರ್ಧಾರವು ಕೆಲವು ಬಳಕೆದಾರರಿಂದ ಟೀಕೆಗಳನ್ನು ಎದುರಿಸಿತು. ಆದಾಗ್ಯೂ, ವಾಟ್ಸಾಪ್ ಈಗ ತನ್ನ ನಿರ್ಧಾರವನ್ನು ವಾಪಸ್ ಪಡೆದುಕೊಂಡಿದ್ದು, ಮತ್ತೆ ಸೆಂಡಿಂಗ್ ವ್ಯೂ ಒನ್ಸ್ ಫೀಚರ್ ಅನ್ನು ಮರಳಿ ಪರಿಚಯಿಸುತ್ತಿದೆ. ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸಲು ಒಮ್ಮೆ ವೀಕ್ಷಣೆ ವೈಶಿಷ್ಟ್ಯದ ಪ್ರಾಮುಖ್ಯತೆಯನ್ನು ವಾಟ್ಸಾಪ್ ಗುರುತಿಸಿದೆ.

ಸ್ನ್ಯಾಪ್‌ಚಾಟ್ ಬಳಕೆದಾರರಂತೆ ವಾಟ್ಸಾಪ್‌ನ ಒಮ್ಮೆ ವೀಕ್ಷಣೆ ಫೀಚರ್ ಬಳಕೆದಾರರಿಗೆ ತಾತ್ಕಾಲಿಕ ಮಾಧ್ಯಮವನ್ನು ಸ್ವೀಕರಿಸುವವರ ಗ್ಯಾಲರಿಗೆ ಉಳಿಸದೆಯೇ ಕಳುಹಿಸಲು ಅನುಮತಿಸುತ್ತದೆ. ಈ ಫೀಚರ್ ಸೂಕ್ಷ್ಮ ಅಥವಾ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಲು ಹೆಚ್ಚು ಉಪಯುಕ್ತವಾಗಿದೆ. ಏಕೆಂದರೆ ಇದು ಮಾಧ್ಯಮವನ್ನು ಸೀಮಿತ ಸಮಯದವರೆಗೆ ಮಾತ್ರ ಪ್ರವೇಶಿಸಬಹುದು ಮತ್ತು ಸ್ವೀಕರಿಸುವವರ ಸಾಧನದಲ್ಲಿ ಶಾಶ್ವತವಾಗಿ ಸಂಗ್ರಹಿಸಲಾಗುವುದಿಲ್ಲ ಎಂದು ಖಚಿತಪಡಿಸುತ್ತದೆ.

Wabetainfo ಪ್ರಕಾರ, ವಾಟ್ಸಾಪ್ ಈಗ ಮತ್ತೆ, ಫೋಟೋ ಮತ್ತು ವಿಡಿಯೋಗಳಿಗಾಗಿ ವ್ಯೂ ಒನ್ಸ್ (ಒಮ್ಮೆ ವೀಕ್ಷಣೆ) ಫೀಚರ್ ಅನ್ನು ಡೆಸ್ಕ್‌ಟಾಪ್ ಬಳಕೆದಾರರಿಗೆ ಪರಿಚಯಿಸುತ್ತಿದೆ. ಈ ಫೀಚರ್ ವಿಂಡೋಸ್ ಮತ್ತು ಮ್ಯಾಕ್‌ಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಫೀಚರ್ ಅನ್ವಯ ಬಳಕೆದಾರರು ತಾತ್ಕಾಲಿಕವಾಗಿ ಮೀಡಿಯಾ ಕಡತವನ್ನು ಕಳುಹಿಸಬಹುದು ಮತ್ತು ಅದು ಸ್ವೀಕರಿಸಿದವರು ವೀಕ್ಷಣೆ ಮಾಡಿದ ತಕ್ಷಣವೇ ಹೊರಟು ಹೋಗಲಿದೆ. ವಿಂಡೋಸ್‌ ಸಾಧನಗಳಲ್ಲಿ ಈ ಫೀಚರ್ ಅನ್ನು ಕ್ಯಾಪ್ಷನ್ ಬಾರ್‌ನಲ್ಲಿ ಕಾಣಿಸಿಕೊಳ್ಳಲಿದೆ ಮ್ತತು ಮ್ಯಾಕ್‌ಒಎಸ್ ಮತ್ತು ಸಂಪರ್ಕಿತ ಸಾಧನಗಳಲ್ಲಿ ಈ ಫೀಚರ್ ಲಭ್ಯವಾಗಲಿದೆ.

ವ್ಯೂ ಒನ್ಸ್ ಫೀಚರ್ ಬಳಸುವಾಗ, ಕಳುಹಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಫಾರ್ವರ್ಡ್ ಮಾಡಲು, ಉಳಿಸಲು, ಸ್ಟಾರ್ ಗುರುತು ಹಾಕಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. ಸ್ವೀಕರಿಸುವವರು ಓದುವ ರಸೀದಿಗಳನ್ನು ಸಕ್ರಿಯಗೊಳಿಸಿದ್ದರೆ ಸ್ವೀಕರಿಸುವವರು “ಒಮ್ಮೆ ವೀಕ್ಷಿಸಿ” ಫೋಟೋ ಅಥವಾ ವೀಡಿಯೊವನ್ನು ತೆರೆದಿದ್ದಾರೆಯೇ ಎಂಬುದನ್ನು ನಿರ್ಧರಿಸಲು ಕಳುಹಿಸುವವರ ಏಕೈಕ ವಿಧಾನವಾಗಿದೆ. ಸ್ವೀಕರಿಸುವವರು ಫೋಟೋ ಅಥವಾ ವೀಡಿಯೊವನ್ನು ಪ್ರಸಾರ ಮಾಡಿದ 14 ದಿನಗಳಲ್ಲಿ ತೆರೆಯಲು ವಿಫಲವಾದರೆ, ಮಾಧ್ಯಮವು ಸಂಭಾಷಣೆಯಿಂದ ಸ್ವಯಂಚಾಲಿತವಾಗಿ ಕಣ್ಮರೆಯಾಗಲಿದೆ.

“ಒಮ್ಮೆ ವೀಕ್ಷಿಸಿ” ಫೀಚರ್ ಬಳಸಿ ಮೀಡಿಯಾ ಫೈಲ್‌ ಕಳುಹಿಸುವವರು ಪ್ರತಿ ಬಾರಿ ಅವರು ಅಂತಹ ಮಾಧ್ಯಮವನ್ನು ಪ್ರಸಾರ ಮಾಡುವಾಗ “ಒಮ್ಮೆ ವೀಕ್ಷಿಸಿ” ಆಯ್ಕೆಯನ್ನು ಸ್ಪಷ್ಟವಾಗಿ ಕಡ್ಡಾಯವಾಗಿ ಆಯ್ಕೆ ಮಾಡಲೇಬೇಕಾಗುತ್ತದೆ. “ಒಮ್ಮೆ ವೀಕ್ಷಿಸಿ” ವೈಶಿಷ್ಟ್ಯವನ್ನು ಬಳಸಿಕೊಂಡು ಕಳುಹಿಸಲಾದ ವಿಷಯವು ಕೇವಲ ಒಂದು ವೀಕ್ಷಣೆಗಾಗಿ ಮಾತ್ರ ಸಕ್ರಿಯವಾಗಿರುತ್ತದೆ. ಅದನ್ನು ಉಳಿಸಲು, ಫಾರ್ವರ್ಡ್ ಮಾಡಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. ಸ್ವೀಕರಿಸುವವರು “ಒಮ್ಮೆ ವೀಕ್ಷಿಸಿ” ಫೋಟೋ ಅಥವಾ ವೀಡಿಯೊವನ್ನು ಒಮ್ಮೆ ತೆರೆದರೆ, ಅದು ಚಾಟ್‌ನಿಂದ ಕಣ್ಮರೆಯಾಗುತ್ತದೆ ಮತ್ತು ಸ್ವೀಕರಿಸುವವರಿಗೆ ಮತ್ತೆ ಆ ಫೈಲ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಈ ಸುದ್ದಿಯನ್ನೂ ಓದಿ: WhatsApp: ವಾಟ್ಸಾಪ್‌ ಖಾತೆಗೆ ನಿಮ್ಮ ಇ ಮೇಲ್ ಅಡ್ರೆಸ್ ಲಿಂಕ್ ಮಾಡಬಹುದು! ಆದರೆ…?

Continue Reading

ಗ್ಯಾಜೆಟ್ಸ್

ಡೀಪ್‌ಫೇಕ್ ವಿಡಿಯೋ ತಡೆಯುವುದು ಸೋಷಿಯಲ್ ಮೀಡಿಯಾಗಳ ಜವಾಬ್ದಾರಿ

Deepfake Video: ಡೀಪ್‌ಫೇಕ್ ‌ವಿಡಿಯೋಗಳ ಪ್ರಸರಣಕ್ಕೆ ಕಡಿವಾಣ ಹಾಕುವ ಬಗ್ಗೆ ಕೇಂದ್ರ ಸರ್ಕಾರವು ಭಾರತದಲ್ಲಿ ಸಕ್ರಿಯವಾಗಿರುವ ಎಲ್ಲ ಸೋಷಿಯಲ್ ಮೀಡಿಯಾಗಳ ಜತೆಗೆ ಸಭೆ ನಡೆಸಿದೆ.

VISTARANEWS.COM


on

Social media must act against deepfake video Says Union Minister Rajeev Chandrashekhar
Koo

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ (rashmika mandanna) ಅವರು ಡೀಪ್‌ಫೇಕ್ ವಿಡಿಯೋ (Deepfake Video) ವೈರಲ್ ಆದ ಬೆನ್ನಲ್ಲೇ ದೇಶಾದ್ಯಂತ ಡೀಪ್‍ಫೇಕ್‌ ಕುರಿತು ಸಾಕಷ್ಟು ಚರ್ಚೆಗಳು ಶುರವಾಗಿವೆ. ಡೀಪ್‌ಫೇಕ್ ತಂತ್ರಜ್ಞಾನದ (Deepfake Technology) ದುರ್ಬಳಕೆಯ ಬಗ್ಗೆ ಆತಂಕಗಳ ವ್ಯಕ್ತವಾಗಿವೆ. ಈ ಡೀಪ್‍‌ಫೇಕ್ ವಿಡಿಯೋಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು (Central Government) ಭಾರತದಲ್ಲಿ ಸಕ್ರಿಯವಾಗಿರುವ ಸೋಷಿಯಲ್ ಮೀಡಿಯಾಗಳು (Social Media) ಕಂಪನಿಗಳ ಜತೆ ಸಭೆ ನಡೆಸಿದೆ. ನವೆಂಬರ್ 24ರಂದು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗಳ ಜತೆಗೆ ಕೇಂದ್ರ ಸರ್ಕಾರವು ಸಭೆ ನಡೆಸಿದೆ. ಸದ್ಯ ಚಾಲ್ತಿಯಲ್ಲಿರುವ ಕಾನೂನುಗಳನ್ನು ಬಳಸಿಕೊಂಡು ಡೀಪ್‌ಫೇಕ್ ಮತ್ತು ಮತ್ತು ಅಂಥ ನಕಲಿ ವಿಡಿಯೋಗಳ ಪ್ರಸರಣ ತಡೆಯುವುದು ಹೇಗೆ ಎಂಬುದರ ಕುರಿತು ಚರ್ಚಿಲಾಗುವುದು ಎಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ಇಂಟರ್ನೆಟ್ ಸುರಕ್ಷತೆ ಮತ್ತು ಡೀಪ್‌ಫೇಕ್‌ ವಿಡಿಯೋ ಪ್ರಸರಣವನ್ನು ತಡೆಯುವುದು ಸೋಷಿಯಲ್ ಮೀಡಿಯಾ ವೇದಿಕೆಗಳ ಜವಾಬ್ದಾರಿಯಾಗಿದೆ. ಹಾಗಾಗಿ, ಭಾರತೀಯ ಕಾನೂನಿಗೆ ಅನುಗುಣವಾಗಿ ವೇದಿಕೆಗಳು ತಮ್ಮ ಕಂಟೆಂಟ್ ಅನ್ನು ನಿಯಂತ್ರಿಸಬೇಕು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ನವೆಂಬರ್ 24ರಂದು ನಾವು ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗಳ ಜತೆ ಸಭೆ ನಡೆಸಿದ್ದೇವೆ. ಇಂಟರ್ನೆಟ್ ಸುರಕ್ಷತೆಯನ್ನು ಕೈಗೊಳ್ಳುವುದು ಮತ್ತು ಡೀಪ್‌ಫೇಕ್‌ ವಿಡಿಯೋಗಳ ಪ್ರಸರಣವನ್ನು ತಡೆಯುವುು ವೇದಿಕೆಗಳ ಜವಾಬ್ದಾರಿಯಾಗಿದೆ ಎಂಬುದನ್ನು ನಾವು ತಿಳಿಸಿದ್ದೇವೆ. ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳ ಪ್ರಕಾರ, ಈ ಹೊಣೆಗಾರಿಕೆ ಆಯಾ ವೇದಿಕೆಗಳದ್ದೇ ಆಗಿರುತ್ತದೆ. ಒಂದೊಮ್ಮೆ, ಡೀಪ್‌ಫೇಕ್‌ ವಿಡಿಯೋಗಳನ್ನು ಕಿತ್ತುಹಾಕಲು ವಿಫಲರಾದರೆ, ಅಂಥ ವೇದಿಕೆಗಳ ವಿರುದ್ಧ ವಿಚಾರಣೆ ಮತ್ತು ಡೀಪ್‌ಫೇಕ್ ವಿಡಿಯೋ ರಿಮೂವ್ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರವು ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ, ಆನ್‌ಲೈನ್‌ ವೇದಿಕೆಗಲ್ಲಿ ಡೀಪ್‌ಫೇಕ್‌ ವಿಡಿಯೋಗಳ ಕುರಿತು ತನಿಖೆ ನಡೆಸುವ ಬಗ್ಗೆ ವಿಶೇಷ ಅಧಿಕಾರಿಗೆ ಜವಾಬ್ದಾರಿಯನ್ನು ಸರ್ಕಾರ ವಹಿಸಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆನ್‌ಲೈನ್‌ನಲ್ಲಿ ಫೇಕ್‌ ಕಂಟೆಂಟ್ ಎಫ್ಐಆರ್ ದಾಖಲಿಸುವುದು ಸೇರಿದಂತೆ ಈ ಸಮಸ್ಯೆಗೆ ಸಂಬಂಧಿಸಿದಂತೆ ವಿಶೇಷ ಅಧಿಕಾರಿಯು ನಾಗರಿಕರೆ ನೆರವು ಒದಗಿಸಲಿದ್ದಾರೆ ಎಂದು ಹೇಳಲಾಗಿತ್ತು.

ಏಳು ದಿನಗಳ ಕಾಲಾವಕಾಶ

ಡೀಪ್‌ಫೇಕ್‌ (DeepFake) ಫೋಟೋ ಅಥವಾ ವಿಡಿಯೋಗಳ ಪೋಸ್ಟಿಂಗ್‌ಗೆ ಸಂಬಂಧಿಸಿ ಭಾರತೀಯ ಐಟಿ ಕಾನೂನುಗಳು (IT Rules) ಮತ್ತು ನಿಬಂಧನೆಗಳಿಗೆ ಬದ್ಧವಾಗಿ ತಮ್ಮ ತಮ್ಮ ಸೇವಾ ನಿಯಮಗಳು ಮತ್ತು ಇತರ ನೀತಿಗಳನ್ನು ಹೊಂದಿಸಿಕೊಳ್ಳಲು ಸೋಶಿಯಲ್‌ ಮೀಡಿಯಾ (Social media) ವೇದಿಕೆಗಳಿಗೆ 7 ದಿನಗಳ ಕಾಲಾವಕಾಶ ನೀಡಲಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ನವೆಂಬರ್ 24ರಂದು ಎಲ್ಲ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಈ ಬಗ್ಗೆ ಏಳು ದಿನಗಳ ಕಾಲಾವಕಾಶ ನೀಡುವುದಾಗಿ ಘೋಷಿಸಿದೆ. ಡೀಪ್‌ಫೇಕ್‌ ಕುರಿತು ಸಾಮಾಜಿಕ ವೇದಿಕೆಗಳೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ (MeitY) ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಇದನ್ನು ತಿಳಿಸಿದ್ದಾರೆ.

ಆಕ್ಷೇಪಾರ್ಹ ಡೀಪ್‌ಫೇಕ್‌ ಕಂಟೆಂಟ್‌ ಪ್ರಸ್ತುತ ಐಟಿ ನಿಯಮಗಳ ಅಡಿಯಲ್ಲಿ ನಿರ್ದಿಷ್ಟವಾಗಿ ನಿಯಮ 3(1)(ಬಿ) ಅಡಿಯಲ್ಲಿ ಕಾನೂನು ಕ್ರಮಕ್ಕೆ ಒಳಪಡಬಹುದು ಎಂದು ಚಂದ್ರಶೇಖರ್ ಹೇಳಿದ್ದಾರೆ. ಇದರ ಪ್ರಕಾರ ಇಂಥ ಕಂಟೆಂಟ್‌ಗಳ ಬಗ್ಗೆ ಬಳಕೆದಾರರ ದೂರುಗಳನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಈ ಕಂಟೆಂಟ್‌ಗಳನ್ನು ಫ್ಲಾಟ್‌ಫಾರಂಗಳು ತೆಗೆದುಹಾಕಬೇಕು. ಈ ಥರದ 12 ಬಗೆಯ ಕಂಟೆಂಟ್‌ಗಳಿವೆ. ಇದು ಕಡ್ಡಾಯ. ಈ ಕಾನೂನುಗಳನ್ನು ಅನುಸರಿಸಲು ನಾವು ಅವರನ್ನು ಕೇಳುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

ಐಟಿ ನಿಯಮಗಳ ಅಡಿಯಲ್ಲಿ ನಿಯಮ ಉಲ್ಲಂಘನೆಗಳ ಮೇಲೆ ಸರ್ಕಾರ 100 ಪ್ರತಿಶತದಷ್ಟು ಕ್ರಮ ತೆಗೆದುಕೊಳ್ಳುತ್ತದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಡೀಪ್‌ಫೇಕ್‌ಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ಗಳನ್ನು ಸಲ್ಲಿಸಲು ತೊಂದರೆಗೊಳಗಾದ ಬಳಕೆದಾರರಿಗೆ ಸಹಾಯ ಮಾಡುತ್ತದೆ. ನಿಯಮ 7ರ ಅಡಿಯಲ್ಲಿ, ಡೀಪ್‌ಫೇಕ್‌ಗಳ ಬಗ್ಗೆ ಬಳಕೆದಾರರು ತಮ್ಮ ದೂರುಗಳನ್ನು ಸಲ್ಲಿಸಲು ಯಾಂತ್ರಿಕ ವ್ಯವಸ್ಥೆಯನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಯನ್ನು ನಾಮನಿರ್ದೇಶನ ಮಾಡಲಾಗುವುದು ಎಂದು ಚಂದ್ರಶೇಖರ್ ಹೇಳಿದರು. ಅಂತಹ ಸಂದರ್ಭಗಳಲ್ಲಿ ಎಫ್‌ಐಆರ್‌ಗಳನ್ನು ಸಲ್ಲಿಸಲು MeitY ಬಳಕೆದಾರರಿಗೆ ಸಹಾಯ ಮಾಡಲಿದೆ.

ಡೀಪ್‌ಫೇಕ್‌ಗಳನ್ನು ನಿಭಾಯಿಸಲು ಮೀಸಲಾಗಿರುವ ನಿಯಂತ್ರಣ ವ್ಯವಸ್ಥೆಯ ಕೆಲಸವನ್ನು ಸರ್ಕಾರ ಪ್ರಾರಂಭಿಸಿದ ಒಂದು ದಿನದ ನಂತರ ಇದು ಬಂದಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ನವೆಂಬರ್ 23ರಂದು ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೆ ಸಭೆ ನಡೆಸಿ ಇದನ್ನು ಘೋಷಿಸಿದ್ದರು. ಇತ್ತೀಚೆಗೆ ತಪ್ಪು ಮಾಹಿತಿ ಹರಡುವಂಥ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಹಲವಾರು ಘಟನೆಗಳು ಕಂಡುಬಂದಿದ್ದವು. ನಟಿ ರಶ್ಮಿ ಮಂದಣ್ಣ ಮತ್ತಿತರರ ಡೀಪ್‌ಫೇಕ್‌ ವಿಡಿಯೋಗಳು ವೈರಲ್ ಆಗಿದ್ದವು. ಹೀಗಾಗಿ ಇದರ ಬಗ್ಗೆ ಕಳವಳ ಹೆಚ್ಚುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಕೂಡ ಇದರ ಬಗ್ಗೆ ಕಳವಳ ತೋರಿಸಿದ್ದರು.

ಈ ಸುದ್ದಿಯನ್ನೂ ಓದಿ: Deepfake: ಡೀಪ್‌ಫೇಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಾರಾ ತೆಂಡೂಲ್ಕರ್

Continue Reading

ಕರ್ನಾಟಕ

Jio Airfiber: ಕರ್ನಾಟಕದ 54 ಪಟ್ಟಣಗಳಲ್ಲಿ ರಿಲಯನ್ಸ್ ಜಿಯೋ ಏರ್ ಫೈಬರ್ ಸೇವೆ

JioAirFiber: ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿನ ಮನೆಗಳಿಗೆ ಗುಣಮಟ್ಟದ ಇಂಟರ್ನೆಟ್ ಸೇವೆಯನ್ನು ಒದಗಿಸಲು ಜಿಯೋ ಏರ್ ಫೈಬರ್ ಸಹಾಯ ಮಾಡುತ್ತದೆ.

VISTARANEWS.COM


on

Jio Air Fiber
Koo

ಮುಂಬೈ: ವಿಶ್ವದ ಅತಿದೊಡ್ಡ ಖಾಸಗಿ ಮೊಬೈಲ್ ಡೇಟಾ ನೆಟ್‌ವರ್ಕ್ ಆಗಿರುವ ರಿಲಯನ್ಸ್ ಜಿಯೋ (Reliance Jio) ಇಂದು ಕರ್ನಾಟಕದ (Karnataka State) 54 ಪಟ್ಟಣಗಳಲ್ಲಿ ಗೃಹ ಮನರಂಜನೆ, ಸ್ಮಾರ್ಟ್ ಹೋಮ್ ಸೇವೆಗಳು ಮತ್ತು ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್‌ಗಾಗಿ (High Speed brad brand) ಅದರ ಸಂಯೋಜಿತ ಎಂಡ್-ಟು-ಎಂಡ್ ಪರಿಹಾರವಾದ ಜಿಯೋ ಏರ್ ಫೈಬರ್ (Jio Airfiber) ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು.

ಕರ್ನಾಟಕದ 54 ಪಟ್ಟಣಗಳಲ್ಲಿ ಜಿಯೋ ಏರ್‌ಫೈಬರ್‌ನ ಸೇವೆ ಈಗ ಲಭ್ಯವಿದೆ. ಈ ಸೇವೆಯನ್ನು ಸೆಪ್ಟೆಂಬರ್ 19 ರಂದು ರಾಷ್ಟ್ರವ್ಯಾಪಿ ಬಿಡುಗಡೆ ಮಾಡಲಾಗಿತ್ತು. ಈ ಮೂಲಕ ದೇಶಾದ್ಯಂತ ಸಮುದಾಯಗಳಿಗೆ ಅತ್ಯಾಧುನಿಕ ಸಂಪರ್ಕ ಪರಿಹಾರಗಳನ್ನು ಒದಗಿಸುವ ಜಿಯೋದ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಜಿಯೋ ಏರ್ ಫೈಬರ್ ಯೋಜನೆಯು 599ರೂ.ಗೆ 30 ಎಮ್ ಬಿಪಿಎಸ್ ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ. ಅಲ್ಲದೆ, 899ರೂ ಮತ್ತು ರೂ 1199ರೂ. ಗೆ 100 ಎಮ್ ಬಿಪಿಎಸ್ ವೇಗದ ಯೋಜನೆಗಳು ಲಭ್ಯವಿದೆ. 599ರೂ ಮತ್ತು 899ರೂ ಯೋಜನೆಗಳೊಂದಿಗೆ 14 ಓಟಿಟಿ ಅಪ್ಲಿಕೇಶನ್‌ಗಳು ಲಭ್ಯವಿದ್ದರೆ, 1199ರೂ ಯೋಜನೆಯು ನೆಟ್ಫ್ಲಿಕ್ಸ್ , ಅಮೆಜಾನ್ ಪ್ರೈಮ್ ಮತ್ತು ಜಿಯೋ ಸಿನಿಮಾ ಪ್ರೀಮಿಯಂ ಸೇರಿದಂತೆ 17 ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನೀಡುತ್ತದೆ.

ಇಂದು, ಜಿಯೋದ ಆಪ್ಟಿಕಲ್ ಫೈಬರ್ ಮೂಲಸೌಕರ್ಯವು ಭಾರತದಾದ್ಯಂತ 1.5 ಮಿಲಿಯನ್ ಕಿಲೋಮೀಟರ್‌ಗಳಷ್ಟು ವ್ಯಾಪಿಸಿದೆ. ಜಿಯೋದ ವ್ಯಾಪಕವಾದ ಆಪ್ಟಿಕಲ್-ಫೈಬರ್ ಉಪಸ್ಥಿತಿಯು ಜಿಯೋವನ್ನು 200 ಮಿಲಿಯನ್ ಆವರಣಗಳಿಗೆ ಹತ್ತಿರದಲ್ಲಿದೆ. ಆದರೂ, ಭೌತಿಕ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವುದು ಸಾಮಾನ್ಯವಾಗಿ ನಮ್ಮ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಇದು ಲಕ್ಷಾಂತರ ಸಂಭಾವ್ಯ ಗ್ರಾಹಕರನ್ನು ಹೋಮ್ ಬ್ರಾಡ್‌ಬ್ಯಾಂಡ್ ಇಲ್ಲದೆ ಬಿಡುತ್ತದೆ. ಏಕೆಂದರೆ ಅವರ ಆವರಣಕ್ಕೆ ಆಪ್ಟಿಕಲ್-ಫೈಬರ್ ಅನ್ನು ವಿಸ್ತರಿಸುವಲ್ಲಿ ಒಳಗೊಂಡಿರುವ ಸಂಕೀರ್ಣತೆಗಳು ಮತ್ತು ವಿಳಂಬಗಳು.

ಜಿಯೋ ಏರ್ ಫೈಬರ್ ಅತ್ಯುತ್ತಮ ಗುಣಮಟ್ಟದ ಮೌಲ್ಯಾಧಾರಿತ ಸೇವೆಗಳನ್ನು ಒಳಗೊಂಡಂತೆ, ಅಲ್ಲದೇ ರಿಲಯನ್ಸ್ ತನ್ನ ಜಿಯೋ ಫೈಬರ್ ನಂತೆ ಯೋಜನೆಗಳನ್ನು ಒದಗಿಸಲು ಸಜ್ಜಾಗಿದೆ.

1.ಡಿಜಿಟಲ್ ಎಂಟರ್ಟೈನ್ಮೆಂಟ್

ಎ. ಎಲ್ಲಾ ಪ್ರಮುಖ 550+ ಡಿಜಿಟಲ್ ಟಿವಿ ಚಾನೆಲ್‌ಗಳು: ನಿಮ್ಮ ಎಲ್ಲಾ ಮೆಚ್ಚಿನ ಟಿವಿ ಚಾನೆಲ್‌ಗಳು ಹೈ-ಡೆಫಿನಿಷನ್‌ನಲ್ಲಿ ಲಭ್ಯವಿದೆ
ಬಿ. ಕ್ಯಾಚ್-ಅಪ್ ಟಿವಿ: ಬಳಕೆದಾರರು ಈಗ ಅವರು ಬಯಸಿದಷ್ಟು ಹಿಂದೆ ಹೋಗಬಹುದು ಮತ್ತು ಅವರ ಮೆಚ್ಚಿನ ಕಾರ್ಯಕ್ರಮಗಳನ್ನು ಹೊರತೆಗೆಯಬಹುದು.
ಸಿ. ಅತ್ಯಂತ ಜನಪ್ರಿಯ 16+ ಓಟಿಟಿ ಅಪ್ಲಿಕೇಶನ್‌ಗಳು: ಜಿಯೋ ಏರ್ ಫೈಬರ್ ಬಳಕೆದಾರರು ಪ್ರಮುಖ ಓಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಬಳಕೆದಾರರು ಈ ಚಂದಾದಾರಿಕೆಯನ್ನು ಬಳಸಿಕೊಳ್ಳಬಹುದು ಮತ್ತು ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಂತಹ ಅವರ ಆಯ್ಕೆಯ ಯಾವುದೇ ಸಾಧನದಾದ್ಯಂತ ಅಪ್ಲಿಕೇಶನ್‌ಗಳನ್ನು ಬಳಸಬಹುದು.

2.ಬ್ರಾಡ್‌ಬ್ಯಾಂಡ್

ಎ. ಒಳಾಂಗಣ ವೈಫೈ ಸೇವೆ: ಜಿಯೋದ ವಿಶ್ವಾಸಾರ್ಹ ವೈಫೈ ಸಂಪರ್ಕ ಮತ್ತು ನಿಮ್ಮ ಮನೆ ಅಥವಾ ವ್ಯಾಪಾರದ ಆವರಣದ ಪ್ರತಿಯೊಂದು ಮೂಲೆಯಲ್ಲಿಯೂ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಅನುಭವ.

3.ಸ್ಮಾರ್ಟ್ ಹೋಮ್ ಸೇವೆ

ಎ. ಶಿಕ್ಷಣ ಮತ್ತು ಮನೆಯಿಂದ ಕೆಲಸಕ್ಕಾಗಿ ಕ್ಲೌಡ್ ಪಿಸಿ.
ಬಿ. ಭದ್ರತೆ ಮತ್ತು ಕಣ್ಗಾವಲು ಪರಿಹಾರಗಳು.
ಸಿ. ಆರೋಗ್ಯ ರಕ್ಷಣೆ
ಡಿ. ಶಿಕ್ಷಣ
ಇ. ಸ್ಮಾರ್ಟ್ ಹೋಮ್ ಐಓಟಿ
ಎಫ್. ಗೇಮಿಂಗ್
ಜಿ. ಹೋಮ್ ನೆಟ್ವರ್ಕಿಂಗ್

4.ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಗೃಹ ಸಾಧನಗಳು

ಎ.ನಿಮ್ಮ ಮನೆ ಅಥವಾ ವ್ಯಾಪಾರದ ಆವರಣದಲ್ಲಿ ಸರ್ವತ್ರ ಕವರೇಜ್‌ಗಾಗಿ ವೈಫೈ ರೂಟರ್
ಬಿ.4k ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್
ಸಿ. ಧ್ವನಿ-ಸಕ್ರಿಯ ರಿಮೋಟ್

ಈ ಸುದ್ದಿಯನ್ನೂ ಓದಿ: ರಿಲಯನ್ಸ್ ಜಿಯೋದಿಂದ 2599 ರೂ.ಗೆ 4ಜಿ ಸ್ಮಾರ್ಟ್‌ಫೋನ್ ಜಿಯೋಫೋನ್ ಪ್ರೈಮಾ ಲಾಂಚ್

Continue Reading
Advertisement
PM Narendra Modi phone call to workers, who rescued from collapsed tunnel
ದೇಶ1 hour ago

ಸುರಂಗದಿಂದ ರಕ್ಷಿಸಲಾದ ಕಾರ್ಮಿಕರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ!

mantralaya mutt
ಕರ್ನಾಟಕ2 hours ago

ಮಂತ್ರಾಲಯ ಮಠಕ್ಕೆ ಭಕ್ತರೊಬ್ಬರಿಂದ ಹೆಲಿಕಾಪ್ಟರ್‌ ಕೊಡುಗೆ

Uttarakhand CM announces rs 1 lakh rupees to trapped labourers Who rescued after 17 days
ದೇಶ2 hours ago

ಬದುಕುಳಿದು ಬಂದ ಕಾರ್ಮಿಕರಿಗೆ 1 ಲಕ್ಷ ಪರಿಹಾರ ಎಂದ ಉತ್ತರಾಖಂಡ ಸಿಎಂ ಧಾಮಿ

Maxwell
ಕ್ರಿಕೆಟ್2 hours ago

Ind vs Aus : ಮ್ಯಾಕ್ಸ್​ವೆಲ್​ ಸ್ಫೋಟಕ ಶತಕ; 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು

Siddaramaiah
ಕರ್ನಾಟಕ3 hours ago

ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಸಿದ್ದರಾಮಯ್ಯ ಧನ್ಯವಾದ

Uttarkashi Tunnel Rescue and Makeshift hospital
ದೇಶ3 hours ago

ಸುರಂಗದಿಂದ 41 ಕಾರ್ಮಿಕರ ರಕ್ಷಣೆ; ಮುಂದೇನಾಗುತ್ತದೆ ಎಂಬುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Top 10 news
ಕರ್ನಾಟಕ3 hours ago

VISTARA TOP 10 NEWS: ಸುರಂಗದಲ್ಲಿ ಸಿಲುಕಿದ್ದ ಎಲ್ಲ ಕಾರ್ಮಿಕರ ರಕ್ಷಣೆ, ಮಕ್ಕಳ ಮಾರಾಟ ಬೃಹತ್​ ಜಾಲ ಪತ್ತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Uttarakhand Tunnel Collapse
EXPLAINER4 hours ago

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

Uttarkashi Tunnel rescue success makes us emotional says PM Narendra Modi
ದೇಶ4 hours ago

ಕಾರ್ಮಿಕರ ರಕ್ಷಣೆಯ ಯಶಸ್ಸು ನಮ್ಮನ್ನೆಲ್ಲ ಭಾವುಕರನ್ನಾಗಿಸಿದೆ ಎಂದ ಪ್ರಧಾನಿ ಮೋದಿ

Ruturaj Gaikwad
ಕ್ರಿಕೆಟ್4 hours ago

Ruturaj Gaikwad : ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ಋತುರಾಜ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ21 hours ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ1 day ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ1 day ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ2 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ2 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

BY Vijayendra and HD Kumarswamy
ಕರ್ನಾಟಕ2 days ago

BJP JDS Alliance: ಎಚ್‌ಡಿಕೆ-ವಿಜಯೇಂದ್ರ ಭೇಟಿ; 28ಕ್ಕೆ 28 ಸ್ಥಾನ ಗೆಲ್ಲುವ ಪಣ!

ಟ್ರೆಂಡಿಂಗ್‌