Most Valuable Company: ಜಗತ್ತಿನ ಮೌಲ್ಯಯುತ ಕಂಪನಿ ರೇಸ್‌ನಲ್ಲಿ ಆ್ಯಪಲ್ ಹಿಂದಿಕ್ಕಿದ ಮೈಕ್ರೋಸಾಫ್ಟ್! - Vistara News

ತಂತ್ರಜ್ಞಾನ

Most Valuable Company: ಜಗತ್ತಿನ ಮೌಲ್ಯಯುತ ಕಂಪನಿ ರೇಸ್‌ನಲ್ಲಿ ಆ್ಯಪಲ್ ಹಿಂದಿಕ್ಕಿದ ಮೈಕ್ರೋಸಾಫ್ಟ್!

Most Valuable Company: ಐಫೋನ್ ತಯಾರಿಸಿ, ಮಾರಾಟ ಮಾಡುವ ಆ್ಯಪಲ್ ಜಗತ್ತಿನ ಅತ್ಯಂತ ಮೌಲ್ಯಯುತ ಕಂಪನಿ ಎಂಬ ಹೆಗ್ಗಳಿಕೆಯನ್ನು ಮೈಕ್ರೋಸಾಫ್ಟ್‌ ಕಂಪನಿಗೆ ಬಿಟ್ಟು ಕೊಟ್ಟಿದೆ.

VISTARANEWS.COM


on

Microsoft overtakes Apple in the worlds most valuable company race
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಐಫೋನ್ (iPhone) ತಯಾರಕಾ ಕಂಪನಿ ಆ್ಯಪಲ್‌ಗೆ (Apple Inc) 2024 ಆರಂಭವು ಅಷ್ಟೊಂದು ಶುಭದಾಯಕವಾಗುತ್ತಿಲ್ಲ. ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯ (World’s Most Valuable Company) ರೇಸ್‌ನಲ್ಲಿ ಆ್ಯಪಲ್‌ ಕಂಪನಿಯನ್ನು ಮೈಕ್ರೋಸಾಫ್ಟ್ (Microsoft) ಹಿಂದಿಕ್ಕಿದೆ! ವಾಷಿಂಗ್ಟನ್ ಮೂಲದ ಮೈಕ್ರೋಸಾಫ್ಟ್ ಷೇರುಗಳು ಗುರುವಾರ ಶೇ.1.5ರಷ್ಟು ಏರಿಕೆಯನ್ನು ದಾಖಲಿಸಿದ ಪರಿಣಾಮ, ಕಂಪನಿಯ ಮೌಲ್ಯವು 2.888 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಯಿತು. ಉತ್ಪಾದಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಹಣವನ್ನು ಗಳಿಸುವ ಕಂಪನಿಗಳ ರೇಸ್‌ನಲ್ಲಿ ಮೈಕ್ರೋಸಾಫ್ಟ್ ಮುಂದಿದ್ದು, ಹೂಡಿಕೆದಾರರನ್ನು ಸೆಳೆಯುತ್ತಿದೆ.

2.887 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ ಆ್ಯಪಲ್ ಕಂಪನಿ ಷೇರುಗಳು ಶೇ.0.3 ಕುಸಿತ ದಾಖಲಿಸಿದವು. ಪರಿಣಾಮ 2021ರ ಬಳಿಕ ಇದೇ ಮೊದಲ ಬಾರಿಗೆ ಆ್ಯಪಲ್ ಕಂಪನಿಯ ಒಟ್ಟು ಮೌಲ್ಯವು ಮೈಕ್ರೋಸಾಫ್ಟ್‌ಗಿಂತ ಕಡಿಮೆಯಾಗಿದೆ. ಕ್ಯಾಲಿಫೋರ್ನಿಯ ಮೂಲದ ಆ್ಯಪಲ್ ಕಂಪನಿಯ ಷೇರುಗಳು ಕಳೆದ ಮುಕ್ತಾಯದ ಪ್ರಕಾರ ಜನವರಿಯಲ್ಲಿ ಇದುವರೆಗೆ 3.3 ಪ್ರತಿಶತದಷ್ಟು ಕುಸಿದಿದೆ. ಇದೇ ವೇಳೆ, ಮೈಕ್ರೋಸಾಫ್ಟ್‌ ಷೇರುಗಳ ಮೌಲ್ಯ ಶೇ.1.8 ಏರಿಕೆಯಾಗಿದೆ.

ಆ್ಯಪಲ್ ಹಿನ್ನಡೆಗೆ ಅದರ ರೇಟಿಂಗ್‌ನಲ್ಲಿ ಕುಸಿಯುತ್ತಿರುವುದು ಕಾರಣವಾಗಿದೆ. ವಿಶೇಷವಾಗಿ ಕಂಪನಿಗೆ ವರಲಕ್ಷ್ಮೀಯಾಗಿರುವ ಐಫೋನ್ ಮಾರಾಟವು ಚೀನಾ ಮಾರುಕಟ್ಟೆಯಲ್ಲಿ ಕುಸಿತ ಕಾಣುತ್ತಿರುವುದು ಕಂಪನಿಯ ಒಟ್ಟು ಮೌಲ್ಯ ಕೆಳಗಿಳಿಯಲು ಕಾರಣ ಎಂದು ಹೇಳಲಾಗುತ್ತಿದೆ. ಜತೆಗೆ, ಹುವಾವೇ ಬ್ರ್ಯಾಂಡ್ ಮತ್ತೆ ಪುಟದೇಳುತ್ತಿರುವುದು ಹಾಗೂ ಅಮೆರಿಕ-ಚೀನಾ ನಡುವಿನ ಸಂಘರ್ಷವು ಆ್ಯಪಲ್ ಕಂಪನಿಯ ಆತಂಕಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ತ್ರೈಮಾಸಿಕಗಳಲ್ಲಿ ಆ್ಯಪಲ್‌ನ ಸೇವೆಗಳ ವ್ಯವಹಾರವು ಹೆಚ್ಚು ಪ್ರಕಾಶಮಾನವಾಗಿತ್ತು. ಅಂದರೆ, ಹೆಚ್ಚು ಲಾಭ ತಂದುಕೊಟ್ಟಿದ್ದನ್ನು ಗಮನಿಸಬಹುದು. ಆದರೆ, ಈ ಸೇವೆಗಳ ವ್ಯವಹಾರಕ್ಕೂ ಅಮೆರಿಕದ ಐಒಎಸ್‌ ಸಾಧನಗಳಲ್ಲಿ ಗೂಗಲ್‌ ಅನ್ನು ಡಿಫಾಲ್ಟ್ ಸರ್ಚ್ ಎಂಜಿನ್ ಆಗಿ ಮಾಡುವ ಒಪ್ಪಂದವು ಬೆದರಿಕೆಯನ್ನು ಒಡ್ಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಶೇ. 48ರಷ್ಟು ಲಾಭದೊಂದಿಗೆ ಆ್ಯಪಲ್ ಕಂಪನಿಯ ಷೇರುಗಳ ಡಿಸೆಂಬರ್ 14ರಂದು ಭಾರೀ ಏರಿಕೆಯನ್ನು ದಾಖಲಿಸಿದ್ದವು. ಆಗ ಆ್ಯಪಲ್ ಕಂಪನಿ ಮಾರುಕಟ್ಟೆಯ ಮೌಲ್ಯವು 3.081 ಲಕ್ಷ ಕೋಟಿ ಡಾಲರ್‌ಗಳಿಷ್ಟಿತ್ತು.

ಈ ಸುದ್ದಿಯನ್ನೂ ಓದಿ: WordPad: ವರ್ಡ್‌ಪ್ಯಾಡ್‌ ಇನ್ನಿಲ್ಲ! 30 ವರ್ಷಗಳ ಉಚಿತ ಸೌಲಭ್ಯವನ್ನು ಕೊನೆಗೊಳಿಸಲಿರುವ ಮೈಕ್ರೋಸಾಫ್ಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tata Motors: 2 ಕಂಪನಿಗಳಾಗಿ ಟಾಟಾ ಮೋಟರ್ಸ್‌ ವಿಂಗಡಣೆ; ಏನಿದಕ್ಕೆ ಕಾರಣ?

Tata Motors: ಟಾಟಾ ಮೋಟರ್ಸ್‌ ಲಿಮಿಟೆಡ್‌ ಕಂಪನಿಯನ್ನು ಶೀಘ್ರದಲ್ಲೇ ಎರಡು ಕಂಪನಿಗಳಾಗಿ ವಿಂಗಡಿಸಲಾಗುತ್ತದೆ. ಇದಕ್ಕೆ ನಿರ್ದೇಶಕರ ಮಂಡಳಿಯು ಕೂಡ ಒಪ್ಪಿಗೆ ಸೂಚಿಸಿದೆ.

VISTARANEWS.COM


on

TATA MOTORS
Koo

ಮುಂಬೈ: ಕಾರುಗಳು ಸೇರಿ ದೇಶದಲ್ಲಿ ವಾಹನ ತಯಾರಿಕೆಗೆ ಹೆಸರು ವಾಸಿಯಾಗಿರುವ, ಟಾಟಾ ಗ್ರೂಪ್‌ನ (Tata Group) ಅಂಗಸಂಸ್ಥೆಯೂ ಆಗಿರುವ ಟಾಟಾ ಮೋಟರ್ಸ್‌ ಲಿಮಿಟೆಡ್‌ ಕಂಪನಿಯು (Tata Motors Limited) ಎರಡು ಕಂಪನಿಗಳಾಗಿ ವಿಂಗಡಣೆಯಾಗಲಿವೆ. ಟಾಟಾ ಮೋಟರ್ಸ್‌ ಕಂಪನಿಯನ್ನು ಎರಡು ಕಂಪನಿಗಳನ್ನಾಗಿ ವಿಂಗಡಿಸುವ ಪ್ರಸ್ತಾಪಕ್ಕೆ ನಿರ್ದೇಶಕರ ಮಂಡಳಿಯು (Board Of Directors) ಅನುಮೋದನೆ ನೀಡಿದೆ. ಶೀಘ್ರದಲ್ಲೇ ಕಂಪನಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಟಾಟಾ ಮೋಟರ್ಸ್‌ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯ ಸಭೆ ನಡೆದಿದೆ. ಟಾಟಾ ಮೋಟರ್ಸ್‌ಅನ್ನು ಎರಡು ವಿಭಾಗಗಳಾಗಿ ವಿಂಗಡಿಸಲು ಮಂಡಳಿ ಸಮ್ಮತಿ ಸೂಚಿಸಿದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (NCLT) ಅನ್ವಯ ಎರಡು ಕಂಪನಿಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ. ಎರಡು ಹೊಸ ಕಂಪನಿಗಳಲ್ಲಿ ಹೂಡಿಕೆ, ನೋಂದಣಿ, ವಾಹನಗಳ ಉತ್ಪಾದನೆ ಕುರಿತು ಶೀಘ್ರದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ” ಎಂದು ಕಂಪನಿಯು ಪ್ರಕಟಣೆ ಮೂಲಕ ತಿಳಿಸಿದೆ.

“ಎರಡು ಕಂಪನಿಗಳಾಗಿ ವಿಭಜಿಸಿದ ಬಳಿಕ ಒಂದು ಕಂಪನಿಯನ್ನು ವಾಣಿಜ್ಯಿಕ ವಾಹನಗಳ ತಯಾರಿಕೆ, ಮಾರಾಟಕ್ಕೆ ಮೀಸಲಿರಿಸಿದರೆ, ಮತ್ತೊಂದು ಕಂಪನಿಯನ್ನು ಪ್ಯಾಸೆಂಜರ್‌ ವಾಹನಗಳ ಉತ್ಪಾದನೆ, ಮಾರಾಟಕ್ಕೆ ನಿಗದಿಪಡಿಸಲಾಗುತ್ತದೆ. ಪ್ಯಾಸೆಂಜರ್‌ ವಾಹನಗಳ ತಯಾರಿಕಾ ಕಂಪನಿಯೇ ವಿದ್ಯುತ್‌ಚಾಲಿತ ವಾಹನಗಳು, ಜಾಗ್ವಾರ್‌, ಲ್ಯಾಂಡ್‌ ರೋವರ್‌ ಕಾರುಗಳನ್ನು ಕೂಡ ತಯಾರಿಸಲಿದೆ. ಇದಕ್ಕಾಗಿಯೇ ಪ್ರತ್ಯೇಕವಾಗಿ ಹೂಡಿಕೆ ಮಾಡಲಾಗುತ್ತದೆ” ಎಂದು ಕಂಪನಿಯ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Tata Nexon : ಮತ್ತೆ 5 ಸ್ಟಾರ್​ ಸೇಫ್ಟಿ ರೇಟಿಂಗ್ ಗಿಟ್ಟಿಸಿಕೊಂಡ ಟಾಟಾ ನೆಕ್ಸಾನ್​

“ಟಾಟಾ ಮೋಟರ್ಸ್‌ ಲಿಮಿಟೆಡ್‌ನಲ್ಲಿ ಉದ್ಯಮಿಗಳು ಹೊಂದಿರುವ ಷೇರುಗಳನ್ನು ಎರಡೂ ಕಂಪನಿಗಳಲ್ಲಿ ಮುಂದುವರಿಸಲಾಗುತ್ತದೆ. 2022ರಿಂದಲೂ ಟಾಟಾ ಮೋಟರ್ಸ್‌ ಕಂಪನಿಯ ವಿಭಜನೆಗೆ ಚಿಂತನೆ ನಡೆದಿತ್ತು. ಒಂದಷ್ಟು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಮಂಡಳಿಯು ಪ್ರಸ್ತಾಪಕ್ಕೆ ಅನುಮತಿ ನೀಡಿದೆ. ಷೇರುಗಳ ಹಂಚಿಕೆ, ಹೂಡಿಕೆ, ನಿಬಂಧನೆಗಳಿಗೆ ಒಪ್ಪಿಗೆ ಸೇರಿ ಎಲ್ಲ ಪ್ರಕ್ರಿಯೆ ಮುಗಿದು, ಎರಡು ಕಂಪನಿಗಳಾಗಿ ವಿಂಗಡಣೆಯಾಗಲು ಸುಮಾರು 12-15 ತಿಂಗಳು ಬೇಕಾಗುತ್ತದೆ” ಎಂದು ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಕ್ರೈಮ್ – ತಡೆಗಟ್ಟುವುದು ಹೇಗೆ?

ನಿಮಗೆ ಸೈಬರ್‌ ಅಪರಾಧ ಸಂಭವಿಸಿದಾಗ ಯಾರ ಸಹಾಯ ಪಡೆಯಬೇಕು? ಏನು ಮಾಡಬೇಕು? ಕಾನೂನಿನಲ್ಲಿ ಇದಕ್ಕೆ ಇರುವ ದಾರಿಗಳೇನು? ಎನ್ನುವ ಪ್ರಶ್ನೆಗಳಿಗೆ ಸೈಬರ್ ಕ್ರೈಮ್ ಪುಸ್ತಕದಲ್ಲಿ ಉತ್ತರವಿದೆ.

VISTARANEWS.COM


on

cyber safety column cyber crime book
Koo
cyber safty logo

ಸೈಬರ್‌ ಸೇಫ್ಟಿ ಅಂಕಣ: ಸೈಬರ್ (cyber world) ಜಗತ್ತಿನಲ್ಲಿ ಸರ್ವೈವ್ ಆಗಲು ಅರಿವೊಂದೇ ದಾರಿ. ಜಾಣರಾಗಿ ಮತ್ತು ಜಾಗ್ರತರಾಗಿರಿ ಎಂದು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ (RBI) ಕೂಡ ಹೇಳೋದು ಇದನ್ನೇ. ಈ ರೀತಿಯ ಎಚ್ಚರಿಕೆಯನ್ನು ಸರ್ಕಾರ, ವಿವಿಧ ವಾಣಿಜ್ಯ ವಲಯಗಳ ನಿಯಂತ್ರಕರು, ಕಾನೂನು ಪಾಲಕರೂ ಹೇಳುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಸಾವಣ್ಣ ಎಂಟರ್‌ಪ್ರೈಸರ್ಸ್ ಪ್ರಕಾಶನದಲ್ಲಿ ಇತ್ತೀಚೆಗೆ ಬಂದ ಪುಸ್ತಕ ಸತೀಶ್ ವೆಂಕಟಸುಬ್ಬು ಅವರ ʼಸೈಬರ್ ಕ್ರೈಮ್- ತಡೆಗಟ್ಟುವುದು ಹೇಗೆʼ ಎಂಬ ಉಪಶೀರ್ಷಿಕೆಯನ್ನು ಹೊಂದಿರುವ ಈ ಪುಸ್ತಕಕ್ಕೆ ಖ್ಯಾತ ಲೇಖಕ, ಅಂಕಣಕಾರ ಮತ್ತು ಆರ್ಥಿಕ ಸಲಹೆಗಾರರಾದ ರಂಗಸ್ವಾಮಿ ಮೂಕನಹಳ್ಳಿಯವರ ಬೆನ್ನುಡಿ ಇದೆ.

ಅವರು ಹೇಳ್ತಾರೆ “ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಗಳು ಕಳ್ಳತನದ ವ್ಯಾಖ್ಯಾನವನ್ನು ಬದಲಿಸಿದೆ. ಹಿಂದೆ ಕಳ್ಳರು ಮನೆಗೆ ನುಗ್ಗಿ ಅಥವಾ ದಾರಿಯಲ್ಲಿ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಈಗ ನಮ್ಮ ಅಜಾಗರೂಕತೆಯಿಂದ ಕೊಟ್ಟ ಅನುಮತಿಯಿಂದ, ಅಥವಾ ನಮ್ಮ ಅನುಮತಿಯಿಲ್ಲದೆ ಕ್ರೈಮ್ ಸಂಭವಿಸುತ್ತಿದೆ. ನಮ್ಮ ಗಳಿಕೆ, ಉಳಿಕೆಗಳು ಕ್ಷಣಾರ್ಧದಲ್ಲಿ ಮಾಯವಾಗುತ್ತಿದೆ. ಹೀಗೆ ಆದಾಗ ಯಾರ ಸಹಾಯ ಪಡೆಯಬೇಕು? ಏನು ಮಾಡಬೇಕು? ಕಾನೂನಿನಲ್ಲಿ ಇದಕ್ಕೆ ಇರುವ ದಾರಿಗಳೇನು? ಕಳೆದುಕೊಂಡಿರುವುದನ್ನು ಮರಳಿ ಪಡೆಯಬಹುದೇ? ಎನ್ನುವ ಪ್ರಶ್ನೆಗಳಿಗೆ ಸೈಬರ್ ಕ್ರೈಮ್ ಪುಸ್ತಕದಲ್ಲಿ ಉತ್ತರವಿದೆ. ಕನ್ನಡಿಗರಿಗೆ ಸೈಬರ್ ಕ್ರೈಮ್‌ಗೆ ಸಂಬಂಧಿಸಿದ ಒಂದು ಅತ್ಯವಶ್ಯಕ ಕೈಪಿಡಿಯಂತಿದೆ ಈ ಪುಸ್ತಕ.

ವಿವಿಧ ದೇಶಗಳಲ್ಲಿ ಸುಮಾರು 20 ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್‌ ವೆಂಕಟಸುಬ್ಬು ಸ್ವಯಂ ನಿವೃತ್ತಿ ಪಡೆದು ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ನ್ಯಾಷನಲ್‌ ಲಾ ಸ್ಕೂಲಿನ ಸೈಬರ್ ಲಾ ಮತ್ತು ಸೈಬರ್‌ ಫೋರೆನ್ಸಿಕ್ಸ್ ಡಿಪ್ಲೊಮಾ ಮಾಡಿದ್ದಾರೆ. ಜೊತೆಗೆ ಮೈಸೂರಿನ JSS ಕಾನೂನು ಕಾಲೇಜಿನಲ್ಲಿ LLB ಕೋರ್ಸನ್ನು ಮುಗಿಸಿದ್ದಾರೆ. ಈ ಸಂಬಂಧವಾಗಿ ಮೈಸೂರಿನ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್‌ಠಾಣೆಯಲ್ಲಿ ಇಂಟರ್ನ್‌ಶಿಪ್‌ ಮಾಡಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಜೊತೆಯಲ್ಲಿ ಇವರು ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ‘ಸೈಬರ್‌ಮಿತ್ರ’ ಎಂಬ ಅಂಕಣವನ್ನೂ ಬರೆಯುತ್ತಾರೆ. ವಿವಿಧ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಅಂಕಣಬರಹಗಳ ಗುಚ್ಛವನ್ನು ಸೈಬರ್ ಕ್ರೈಮ್ ಪುಸ್ತಕವನ್ನಾಗಿ ಕನ್ನಡಿಗರಿಗೆ ಕೊಟ್ಟಿದ್ದಾರೆ.

ಸೈಬರ್ ಅಪರಾಧಗಳ ಕಿರು ಪರಿಚಯದೊಂದೆಗೆ ಪ್ರಾರಂಭವಾಗುವ ಈ ಪುಸ್ತಕದಲ್ಲಿ ಸೋಶಿಯಲ್‌ ಇಂಜಿನಿಯರಿಂಗ್, ರಾನ್ಸಮ್‌ವೇರ್ ದಾಳಿ, ಆನ್‌ಲೈನ್‌ ಸಾಲದ ಆ್ಯಪ್‌ ವಂಚನೆ, ಸಿಮ್-ಸ್ವಾಪ್‌ ಅಪರಾಧಗಳು, ಆಧಾರ್ ಬಳಸಿಕೊಂಡು ನಡೆಯುತ್ತಿರುವ ಅಪರಾಧಗಳು, ಪ್ಯಾನ್ (PAN) ಬಳಸಿಕೊಂಡು ನಡೆಯುತ್ತಿರುವ ವಂಚನೆಗಳು, ಸೆಕ್ಸ್‌ಟಾರ್ಶನ್‌, ಆನ್‌ಲೈನ್‌ ಆಟಗಳ ಮೂಲಕ ಆಗುತ್ತಿರುವ ಮೋಸ, ಸೋಗು ಹಾಕುವಿಕೆ (impersonation), ಗುರುತಿನ ಕಳ್ಳತನ (identity theft), ಕ್ಯೂಆರ್ ಕೋಡು ಅಪರಾಧಗಳು, ಮನೆಯಿಂದಲೇ ಕೆಲಸ, ಆನ್ಲೈನ್ ಕೆಲಸದ ಆಮಿಷದ ಮೂಲಕ ನೆಡೆಯುತ್ತಿರುವ ಸೈಬರ್ ವಂಚನೆಗಳು, ಗ್ರಾಹಕ ಸಹಾಯವಾಣಿ, ಕೊರಿಯರ್ ಸಂಬಂಧಿತ ಅಪರಾಧಗಳು, ಮಹಿಳೆಯರು, ಹುಡುಗಿಯರು ಮತ್ತು ಮಕ್ಕಳನ್ನು ಗುರಿಯಾಗಿಸಿ ನೆಡೆಸುವ ಸೈಬರ್ ಕ್ರೈಮ್‌ಗಳು, ಡೀಪ್‌ಫೇಕ್, ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್ ವಂಚನೆಗಳು, ಮುಂತಾದ ವೈವಿಧ್ಯಮಯ ಅಪರಾಧಗಳ ಬಗ್ಗೆ ಸರಳವಾಗಿ ಅರಿವು ಮೂಡಿಸಿದ್ದಾರೆ. ಲೇಖಕರು ಈ ಪುಸ್ತಕದಲ್ಲಿ ಜನಸಾಮಾನ್ಯರ ಮೇಲೆ ನೆಡೆಯುವ ಸೈಬರ್ ಅಪರಾಧಗಳನ್ನು ಅರ್ಥ ಮಾಡಿಕೊಳ್ಳುವ ಮಾಹಿತಿ ನೀಡಿದ್ದಾರೆ.

ಈ ಅಪರಾಧಗಳ ಕಾರ್ಯತಂತ್ರ, ಅದರಿಂದ ಪಾರಾಗುವ ಬಗೆ ಮತ್ತು ಅಕಸ್ಮಾತ್ತಾಗಿ ಆ ಸೈಬರ್ ಕ್ರೈಮಿನ ವಿಕ್ಟಿಮ್‌ ಆಗಿದ್ದರೆ ಕೈಗೊಳ್ಳಬೇಕಾದ ಕ್ರಮಗಳು ಜೊತೆಗೆ ಭಾರತದಲ್ಲಿ ಕಾನೂನುಬದ್ಧವಾಗಿ ಲಭ್ಯವಿರುವ ಪರಿಹಾರಗಳನ್ನೂ ಕೊಟ್ಟಿದ್ದಾರೆ.

ಲೇಖಕರು ಇದನ್ನು ಸಂಪೂರ್ಣ ಕೈಪಿಡಿ ಅಲ್ಲ ಎಂದಿರುವುದು ಅವರ ನಮ್ರತೆಯನ್ನು ತೋರಿಸುತ್ತದೆ. ನಮ್ಮ ತಿಳುವಳಿಕೆ, ಅನುಭವವನ್ನು ಮೀರಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರ ಮತ್ತು ಅದಕ್ಕನುಗುಣವಾಗಿ ರೂಪುಗೊಳ್ಳುವ ಕ್ರಿಮಿನಲ್‌ಗಳ ಕುತಂತ್ರಗಳು ಹೊಸ ಬಗೆಯ ಸವಾಲುಗಳನ್ನು ಒಡ್ಡುತ್ತಿರುತ್ತದೆ. ಹಾಗಾಗಿ ಎಲ್ಲಾ ಪ್ರಕರಣಗಳಿಗೂ ಈ ಪುಸ್ತಕ ಒಂದನ್ನೇ ನೆಚ್ಚಿಕೊಳ್ಳುವುದು ಸಾಕಾಗಲಿಕ್ಕಿಲ್ಲ ಎಂದು ಡಿಸ್ಕ್‌ಕ್ಲೈಮರ್‌ ಕೂಡ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದ ಅಲೆದಾಟದಲ್ಲಿ ಜಾಗರೂಕತೆಯಿಲ್ಲದಿದ್ದರೆ ಪರದಾಟ

ಮುಖ್ಯವಾಗಿ ಈ ಪುಸ್ತಕದಲ್ಲಿ ತಿಳಿಸಿರುವುದೇನೆಂದರೆ ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ https://cybercrime.gov.in/ ನಲ್ಲಿ ದೂರು ಸಲ್ಲಿಸಿ. ಮೋಸದಿಂದ ಕಳೆದುಕೊಂಡ ಹಣವನ್ನು ಫ್ರೀಜ್‌ ಮಾಡಲು ಸಂಬಂಧಿಸಿದ ಬ್ಯಾಂಕ್‌ಗೆ ಕರೆ ಮಾಡಿ ತಿಳಿಸಿ. ನಿಮ್ಮ ಆಧಾರ್ ಕಾರ್ಡ್‌ನ್ನು ಲಾಕ್‌ಮಾಡಿ. ನಿಮ್ಮ ಖಾತೆಗಳ ಪಾಸ್‌ವರ್ಡ್/ಪಿನ್‌ಗಳನ್ನು ಬದಲಾಯಿಸಿ. ನಿಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ಗೆ ಏನಾದರೂ ಮಾಲ್‌ವೇರ್ ಅಥವಾ ವೈರಸ್‌ ದಾಳಿಯ ಅನುಮಾನವಿದ್ದರೆ ಫಾರ್ಮ್ಯಾಟ್‌ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್‌ ಮಾಡಿ.

ಸೈಬರ್ ಕಾನೂನುಗಳ ಬಗ್ಗೆಯೇ ಒಂದು ಪ್ರತ್ಯೇಕ ಅಧ್ಯಾಯವನ್ನು ಕೊಟ್ಟಿರೋದು ಎಲ್ಲರಿಗೂ ಭಾರತೀಯ ಸೈಬರ್ ಕಾನೂನುಗಳ ಬಗ್ಗೆ ಒಂದು ಅವಲೋಕನವನ್ನು ಕೊಡುವುದರ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆ 2000 – 2008, ಭಾರತೀಯ ದಂಡ ಸಂಹಿತೆ ಅಥವಾ ಇಂಡಿಯನ್ ಪೀನಲ್‌ ಕೋಡ್‌ 1860 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಬಗ್ಗೆ ಸರಳವಾಗಿ ವಿವರಿಸಿದ್ದಾರೆ.

ಅಂತರ್ಜಾಲದಲ್ಲಿ ಅಂತರ್ಗತವಾಗಿರುವ ವಿವಿಧ ಮೋಸ ವಂಚನೆಗಳ ಕಾರ್ಯತಂತ್ರ ಮತ್ತು ಅದರ ಪರಿಹಾರಗಳನ್ನು ನಿಮಗೆ ಒಂದೇ ಕಡೆ ಸಿಗುವಂತೆ ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಕ್ರಿಪ್ಟೋಗ್ರಫಿ ಮತ್ತು ಸೈಬರ್ ಭದ್ರತೆ

Continue Reading

ಪ್ರಮುಖ ಸುದ್ದಿ

FASTag KYC : ಫಾಸ್ಟ್ಯಾಗ್​ ಕೆವೈಸಿ ಅಪ್​ಡೇಟ್​ ಗಡುವು ವಿಸ್ತರಣೆ, ಮುಂದಿನ ಡೇಟ್​ ಯಾವಾಗ?

FASTag KYC : ಕೆವೈಸಿ ಅಪ್​ಡೇಟ್​ ಮಾಡಲು ಏನು ಮಾಡಬೇಕು ಎಂಬ ವಿವರ ಇಲ್ಲಿದೆ.

VISTARANEWS.COM


on

Fastag
Koo

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ಯೋಜನೆಯಡಿ ಕೆವೈಸಿ ಅಪ್​ಡೇಟ್​ ಮಾಡಲು (FASTag KYC) ನೀಡಿದ್ದ ಗಡುವನ್ನು ಮಾರ್ಚ್ 31, 2024 ರವರೆಗೆ ವಿಸ್ತರಿಸಿದೆ. ಪೇಟಿಎಂ ಫಾಸ್ಟ್ಟ್ಯಾಗ್ ಬಳಕೆದಾರರು ಎದುರಿಸುತ್ತಿರುವ ಸವಾಲುಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರಿಣಾಮವಾಗಿ, ಫಾಸ್ಟ್ಟ್ಯಾಗ್ ಬಳಕೆದಾರರು ಈಗ ನಿಮ್ಮ ಕೆವೈಸಿ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚುವರಿ ತಿಂಗಳು ಪಡೆದುಕೊಂಡಿದ್ದಾರೆ.

ಮಾರ್ಚ್ 1 ರ ಒಳಗೆ ಕೆವೈಸಿ ಮಾಡುವಂತೆ ಪ್ರಾಧಿಕಾರ ಸೂಚಿಸಿತ್ತು. ‘ಒನ್ ವೆಹಿಕಲ್, ಒನ್ ಫಾಸ್ಟ್ಯಾಗ್’ ಯೋಜನೆ ಮೂಲಕ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್​ಎಫ್​ಐಡಿ ) ತಂತ್ರಜ್ಞಾನದ ಮೂಲಕ ಟೋಲ್ ಸಂಗ್ರಹ ಮಾಡುವ ಕಾರ್ಯದ ದಕ್ಷತೆಯನ್ನು ಹೆಚ್ಚಿಸಲು ಯೋಜನೆ ರೂಪಿಸಿತ್ತ. ಇದರ ಮೂಲಕ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಂದ ಟೋಲ್ ಹಣವ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತಿತ್ತು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಟೋಲ್ ಪಾವತಿ ಅನುಭವವನ್ನು ಪಡೆಯಲು ಕೆವೈಸಿ ಅಪ್​ಡೇಟ್​ ಮಾಡಲೇಬೇಕೆಂದು ಹೆದ್ದಾರಿ ಪ್ರಾಧಿಕಾರ ಹೇಳಿದೆ. ವಾಣಿಜ್ಯ ಅಥವಾ ಖಾಸಗಿ ವಾಹನಗಳೇ ಆಗಿರಲಿ, ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಯಾವುದೇ ಅಡೆತಡೆಗಳನ್ನು ತಪ್ಪಿಸಲು ಕೆವೈಸಿ ಅಪ್​ಡೇಟ್​ ಕಡ್ಡಾಯ ಎಂದ ಹೇಳಿತ್ತು. ಇದೀಗ ಅದನ್ನು ಮಾರ್ಚ್ 31 ರ ಪರಿಷ್ಕೃತ ದಿನಾಂಕಕ್ಕೆ ವಿಸ್ತಿರಿಸಿದೆ. ಕೆವೈಸಿ ವಿವರಗಳನ್ನು ನವೀಕರಿಸಲು ವಿಫಲವಾದರೆ ಫಾಸ್ಟ್ಟ್ಯಾಗ್ ಖಾತೆ ನಿಷ್ಕ್ರಿಯಗೊಳ್ಳಲಿದೆ.

ಯಾವ ದಾಖಲೆಗಳು ಸಾಕು?

ಕೆವೈಸಿ ವಿವರಗಳನ್ನು ಅಪ್​ಡೇಟ್ ಮಾಡಲು ವಾಹನ ಮಾಲೀಕರು ವಾಹನ ನೋಂದಣಿ ಪ್ರಮಾಣಪತ್ರ, ಚಾಲನಾ ಪರವಾನಗಿ ಮತ್ತು ಪ್ಯಾನ್ ಅಥವಾ ಮತದಾರರ ಗುರುತಿನ ಚೀಟಿಯಂತಹ ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ : LPG Price: ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಶಾಕ್‌, 25.50 ರೂ.ಗಳಷ್ಟು ಏರಿಕೆ

ಹೆಚ್ಚುವರಿಯಾಗಿ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಮತ್ತು ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳಂತಹ ವಿಳಾಸ ಪುರಾವೆಗಳು ಬೇಕಾಗುತ್ತವೆ. ಬ್ಯಾಂಕ್-ಲಿಂಕ್ಡ್ ಅಥವಾ ವಿತರಣಾ ಪ್ರಾಧಿಕಾರದ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ, ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ, ‘ಮೈ ಪ್ರೊಫೈಲ್’ ವಿಭಾಗಕ್ಕೆ ನ್ಯಾವಿಗೇಟ್ ಮಾಡುವ ಮೂಲಕ, ‘ಕೆವೈಸಿ’ ಉಪ-ವಿಭಾಗವನ್ನು ಕ್ಲಿಕ್ ಮಾಡುವ ಮೂಲಕ ಮತ್ತು ಕಡ್ಡಾಯ ದಾಖಲೆಗಳನ್ನು ಸಲ್ಲಿಸಬೇಕು. ಅಗತ್ಯವಿರುವ ಎಲ್ಲಾ ವಿಭಾಗವನ್ನು ಅಪ್​ಡೇಟ್​ ಮಾಡಿ ಕೆವೈಸಿ ನವೀಕರಣವನ್ನು ಪೂರ್ಣಗೊಳಿಸಬಹುದು.

ವೆರಿಫಿಕೇಷನ್​ ಆಗಿದೆಯೇ ಎಂದು ನೋಡಲು ಫಾಸ್ಟ್ಟ್ಯಾಗ್​​ ನೀಡುವ ಪ್ರಾಧಿಕಾರದ ಮೂಲಕ ಲಾಗಿನ್ ಆಗುವ ಅಥವಾ ಅಧಿಕೃತ ಫಾಸ್ಟ್ಯಾಗ್​ ವೆಬ್​ಸೈಟ್​ಗೆ ಭೇಟಿ ನೀಡಬಹುದು.

Continue Reading

EXPLAINER

ವಿಸ್ತಾರ Explainer: Gaganyaan: ನಾಲ್ವರು ಗಗನಯಾನಿಗಳಲ್ಲಿ ಮಹಿಳೆ ಏಕಿಲ್ಲ?

ಗ್ರೂಪ್ ಕ್ಯಾಪ್ಟನ್‌ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರ ಹೆಸರುಗಳು ಪ್ರಕಟವಾಗುತ್ತಿದ್ದಂತೆ, ಗಗನಯಾನಕ್ಕೆ (Gaganyaan) ಮಹಿಳಾ ಪೈಲಟ್ ಅನ್ನು ಏಕೆ ಆಯ್ಕೆ ಮಾಡಲಿಲ್ಲ ಎಂದು ಹಲವರು ಆಶ್ಚರ್ಯಪಟ್ಟರು.

VISTARANEWS.COM


on

gaganyaan pilots
Koo

ಭಾರತದ (India) ಇಸ್ರೋದ (ISRO) ಮಹತ್ವಕಾಂಕ್ಷೆಯ ಮಾನವ ಬಾಹ್ಯಾಕಾಶ ಯೋಜನೆ ʼಗಗನಯಾನʼ (Gaganyaan Mission) ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಗಗನಯಾನದ ನಾಲ್ವರು ಪೈಲೆಟ್‌ಗಳ (Gaganyaan pilots) ಪರಿಚಯವನ್ನು ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಹಿರಂಗಪಡಿಸಿದ್ದಾರೆ. ಆದರೆ ಈ ನಾಲ್ವರಲ್ಲಿ ಒಬ್ಬಳೇ ಒಬ್ಬ ಮಹಿಳೆ (woman) ಇಲ್ಲ! ಇದ್ಯಾಕೆ?

ಗುರುತಿಸಿದ ನಾಲ್ವರು ವಾಯುಪಡೆಯ ಪೈಲಟ್‌ಗಳ ಹೆಸರು ಬಹಿರಂಗಪಡಿಸಿ ಅಭಿನಂದಿಸಿದ ಸ್ವಲ್ಪ ಸಮಯದ ನಂತರ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ, ದೇಶದ ಬಾಹ್ಯಾಕಾಶ ಯಾತ್ರೆಗಳಲ್ಲಿ ಮಹಿಳಾ ವಿಜ್ಞಾನಿಗಳ ಅಪಾರ ಕೊಡುಗೆಯನ್ನು ಒತ್ತಿಹೇಳಿದರು. ಅದರೆ ಗಗನಯಾನದಲ್ಲಿ ಮಹಿಳೆಯರಿಲ್ಲ.

ಗ್ರೂಪ್ ಕ್ಯಾಪ್ಟನ್‌ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರ ಹೆಸರುಗಳು ಪ್ರಕಟವಾಗುತ್ತಿದ್ದಂತೆ, ಬಾಹ್ಯಾಕಾಶ ಹಾರಾಟಕ್ಕೆ ಮಹಿಳಾ ಪೈಲಟ್ ಅನ್ನು ಏಕೆ ಆಯ್ಕೆ ಮಾಡಲಿಲ್ಲ ಎಂದು ಹಲವರು ಆಶ್ಚರ್ಯಪಟ್ಟರು. ಬಾಹ್ಯಾಕಾಶಕ್ಕೆ ಈಗಾಗಲೇ ತೆರಳಿರುವ ನಾಲ್ವರು ಭಾರತೀಯರು ಮತ್ತು ಭಾರತೀಯ ಮೂಲದ ವ್ಯಕ್ತಿಗಳಲ್ಲಿ ಇಬ್ಬರು ಮಹಿಳೆಯರು. ಅವರು ದಿವಂಗತ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್. ಈ ರಾಷ್ಟ್ರೀಯ ಐಕಾನ್‌ಗಳು ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಹಾಗಾದರೆ ಗಗನಯಾನಕ್ಕೆ ಮಹಿಳೆಯನ್ನು ಏಕೆ ಆಯ್ಕೆ ಮಾಡಲಿಲ್ಲ?

ಆಯ್ಕೆ ಮಾಡುವ ವಿಧಾನ

ಉತ್ತರ, ಬಾಹ್ಯಾಕಾಶ ಹಾರಾಟಕ್ಕೆ ಗಗನಯಾತ್ರಿಗಳನ್ನು ಆಯ್ಕೆ ಮಾಡುವ ವಿಧಾನದಲ್ಲಿದೆ. ಪ್ರಪಂಚದಾದ್ಯಂತ, ಮೊದಲ ಕಾರ್ಯಾಚರಣೆಗಳಿಗಾಗಿ ಗಗನಯಾತ್ರೆ ನಿಯೋಜಿತರನ್ನು ಪರೀಕ್ಷಾ ಪೈಲಟ್‌ಗಳ ಒಟ್ಟಾರೆ ಮೊತ್ತದಿಂದ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯ ಸಮಯದಲ್ಲಿ ಭಾರತವು ಮಹಿಳಾ ಪರೀಕ್ಷಾ ಪೈಲಟ್ ಅನ್ನು ಹೊಂದಿರಲಿಲ್ಲ. ಟೆಸ್ಟ್ ಪೈಲಟ್‌ಗಳು ತಮ್ಮ ವಿಶೇಷ ಕೌಶಲ್ಯಗಳಿಂದಾಗಿ ಆಯ್ಕೆಯಾದ ಹೆಚ್ಚು ನುರಿತ ಏವಿಯೇಟರ್‌ಗಳು. ಇವರು ತುರ್ತು ಪರಿಸ್ಥಿತಿಯ ಸಮಯದಲ್ಲಿಯೂ ಶಾಂತವಾಗಿರುತ್ತಾರೆ. ಇವರು ವಾಯುಯೋಧರಲ್ಲೂ ಅತ್ಯುನ್ನತ ನಿಯಂತ್ರಣ ಸಾಧಿಸಿದವರಾಗಿರುತ್ತಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ʼʼಮುಂದಿನ ದಿನಗಳಲ್ಲಿ ಮಹಿಳಾ ಗಗನಯಾತ್ರಿಗಳನ್ನು ಬಾಹ್ಯಾಕಾಶ ಹಾರಾಟಕ್ಕೆ ಕಳುಹಿಸಲು ಸಂತೋಷಪಡುವುದಾಗಿʼʼ ಹೇಳಿದ್ದಾರೆ. “ಅತಿಶೀಘ್ರದಲ್ಲೇ ಭಾರತಕ್ಕೆ ಈ ಯೋಜನೆಯ ತಜ್ಞರು ಬೇಕಾಗುತ್ತಾರೆ. ಮಹಿಳೆಯರು ಗಗನಯಾತ್ರಿಗಳಾಗಿ ಹೋಗಬಹುದು. ಆದರೆ ಗಗನಯಾನದ ಮೊದಲ ಕೆಲವು ಕಾರ್ಯಾಚರಣೆಗಳು ನಿಸ್ಸಂಶಯವಾಗಿ ಆಯ್ಕೆಯಾದ ಮತ್ತು ತರಬೇತಿ ಪಡೆದ ಸಿಬ್ಬಂದಿಯನ್ನು ಮಾತ್ರ ಸಾಗಿಸುತ್ತವೆ” ಎಂದಿದ್ದಾರೆ ಅವರು.

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಮತ್ತು ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಪ್ರಮುಖ ವಿಜ್ಞಾನಿ ಡಾ ಉನ್ನಿಕೃಷ್ಣನ್ ನಾಯರ್ ಹೇಳುತ್ತಾರೆ: “ಇಸ್ರೋದಲ್ಲಿ ಲಿಂಗಭೇದವಿಲ್ಲ. ಇಲ್ಲಿ ಪ್ರತಿಭೆ ಮಾತ್ರ ಮುಖ್ಯವಾದ ಕಾರಣ ಭವಿಷ್ಯದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಬಹುದು.”

ISRO Astronauts

ಈಗಲೂ, ಎಲ್ಲಾ ಪರೀಕ್ಷೆಗಳು ಯಶಸ್ವಿಯಾದರೆ, 2025ರಲ್ಲಿ ಶೆಡ್ಯೂಲ್‌ ಮಾಡಲಾಗಿರುವ ಗಗನಯಾನದಲ್ಲಿ ಬಾಹ್ಯಾಕಾಶಕ್ಕೆ ಹಾರಲು ಸ್ತ್ರೀಯರಿಗೆ ಇನ್ನೂ ಅವಕಾಶವಿದೆ. ಅಲ್ಲದೆ, ಈ ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೂ NASA-ISRO ಮಾನವ ಬಾಹ್ಯಾಕಾಶ ಕಾರ್ಯಾಚರಣೆ ಇದೆ. ಅದಕ್ಕೆ IAFನ ನುರಿತ ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ಒಬ್ಬರನ್ನು ನೇಮಿಸಬಹುದು. ಅವರು ಪರೀಕ್ಷಾ ಪೈಲಟ್‌ಗಳಲ್ಲದಿರಬಹುದು, ಆದರೆ ಅವರು ವಾಯು ಯೋಧರಾಗಿರುತ್ತಾರೆ. ಆದರೆ ಇಸ್ರೋ ಈ ನಾಲ್ಕು ಪುರುಷ ಗಗನಯಾನಿಗಳಲ್ಲಿ ಒಬ್ಬರನ್ನು ಕಳುಹಿಸಲು ಹೆಚ್ಚು ಒಲವು ತೋರುತ್ತಿದೆ. ಏಕೆಂದರೆ ಇವರು ಸಾಕಷ್ಟು ತರಬೇತಿ ಪಡೆದಿದ್ದಾರೆ.

ಗಗನಯಾನ ಭಾರತ ಕೈಗೊಂಡಿರುವ ಅತ್ಯಂತ ದುಬಾರಿ ವೈಜ್ಞಾನಿಕ ಕಾರ್ಯಕ್ರಮ. ಇದಕ್ಕೆ ಸುಮಾರು ₹10,000 ಕೋಟಿ ವೆಚ್ಚವಾಗಲಿದೆ. ಇದು ಹಲವಾರು ಕ್ರಾಂತಿಕಾರಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಯಶಸ್ವಿಯಾದರೆ, ಭಾರತವು ಸ್ವದೇಶಿ ನಿರ್ಮಿತ ರಾಕೆಟ್‌ನಲ್ಲಿ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯ ಹೊಂದಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಈ ಸಾಧನೆಯನ್ನು ಇಲ್ಲಿಯವರೆಗೆ ಯುಎಸ್, ಚೀನಾ ಮತ್ತು ಸೋವಿಯತ್ ರಷ್ಯಾ ಮಾತ್ರ ಸಾಧಿಸಿವೆ. ಮಾನವ ಬಾಹ್ಯಾಕಾಶ ಹಾರಾಟದಲ್ಲಿ ಚೀನಾ 2003ರಲ್ಲಿ ಕೊನೆಯದಾಗಿ ಪ್ರವೇಶಿಸಿತ್ತು.

140 ಕೋಟಿ ಭಾರತೀಯರ ಶಕ್ತಿ

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಪ್ರಧಾನಿ ಮೋದಿ, ಭಾರತವು ಜಾಗತಿಕ ಬಾಹ್ಯಾಕಾಶ ಸಾಹಸದಲ್ಲಿ ತನ್ನ ಸ್ಥಾನವನ್ನು ವಿಸ್ತರಿಸುತ್ತಿದೆ ಎಂದು ಹೇಳಿದ್ದಾರೆ. ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮಿಷನ್‌ಗೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳು ಕೇವಲ ನಾಲ್ಕು ಜನರಲ್ಲ. ಅವರು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ನಾಲ್ಕು ಶಕ್ತಿಗಳು” ಎಂದರು. “ನಲವತ್ತು ವರ್ಷಗಳ ನಂತರ ಇನ್ನೊಬ್ಬ ಭಾರತೀಯ ಬಾಹ್ಯಾಕಾಶಕ್ಕೆ ಹೋಗುತ್ತಿದ್ದಾನೆ. ಆದರೆ ಈ ಬಾರಿ ಸಮಯ, ಕೌಂಟ್‌ಡೌನ್ ಮತ್ತು ರಾಕೆಟ್ ಎಲ್ಲವೂ ನಮಗೇ ಸೇರಿದ್ದಾಗಿವೆ” ಎಂದು ಅವರು ಹೇಳಿದರು. ವಿಂಗ್ ಕಮಾಂಡರ್ ರಾಕೇಶ್ ಶರ್ಮಾ 1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶಕ್ಕೆ ಹೋಗಿದ್ದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಯಶಸ್ಸು ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಧರ್ಮದ ಬೀಜಗಳನ್ನು ಬಿತ್ತುವುದು ಮಾತ್ರವಲ್ಲದೆ, 21ನೇ ಶತಮಾನದಲ್ಲಿ ಕ್ರಿಯಾತ್ಮಕ ಜಾಗತಿಕ ಆಟಗಾರನಾಗಿ ಭಾರತ ಹೊರಹೊಮ್ಮಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಇದನ್ನೂ ಓದಿ: Gaganyaan: ಗಗನಯಾನ ಯಾತ್ರಿಗಳ ಹೆಸರು ರಿವೀಲ್‌ ಮಾಡಿದ ಮೋದಿ; ಇವರೇ ಸಾರಥಿಗಳು

Continue Reading
Advertisement
ED case Money laundering case quashed Supreme Court gives big relief to DK Shivakumar
ರಾಜಕೀಯ10 mins ago

ED Case: ಅಕ್ರಮ ಹಣ ವರ್ಗಾವಣೆ ಕೇಸ್ ರದ್ದು ಮಾಡಿದ ಸುಪ್ರೀಂ ಕೋರ್ಟ್‌; ಡಿ.ಕೆ. ಶಿವಕುಮಾರ್​​ಗೆ ಬಿಗ್ ರಿಲೀಫ್

Man deaed in train collision in Mysuru
ಮೈಸೂರು14 mins ago

Mysuru News : ಪತ್ನಿ ಜತೆಗೆ ವಿಡಿಯೊ ಕಾಲ್‌; ಮಾತಲ್ಲಿ ಮೈಮರೆತಾಗ ಬಡಿಯಿತು ರೈಲು

GN saibaba
ದೇಶ24 mins ago

Maoist Links Case: ಮಾವೋವಾದಿಗಳೊಂದಿಗೆ ನಂಟು ಪ್ರಕರಣ; ಸಾಯಿಬಾಬಾ, ಇತರ ಐವರನ್ನು ದೋಷಮುಕ್ತಗೊಳಿಸಿದ ಕೋರ್ಟ್‌

Sedition Case We have collected voice samples of accused DK Shivakumar
ರಾಜಕೀಯ50 mins ago

Sedition Case: ಆರೋಪಿಗಳ ಧ್ವನಿ ಮಾದರಿ ಸಂಗ್ರಹಿಸಿದ್ದೇವೆ; ಮಂಡ್ಯ ಘೋಷಣೆಯನ್ನೂ ತನಿಖೆ ಮಾಡ್ತೇವೆ: ಡಿಕೆಶಿ

R Ashok Bangalore blastNew Project
ರಾಜಕೀಯ1 hour ago

R AShok : ಕರ್ನಾಟಕದಲ್ಲಿ ಪಾಕಿಸ್ತಾನದ ಮಕ್ಕಳು ಹುಟ್ಟಿಕೊಳ್ತಿದ್ದಾರೆ ಎಂದ ಅಶೋಕ್‌

Murder by friends over love affair
ಕಲಬುರಗಿ1 hour ago

Murder Case : ಪ್ರೀತಿ ವಿಚಾರಕ್ಕೆ ಕಿತ್ತಾಟ; ಯುವಕನ ಕೊಲೆಯಲ್ಲಿ ಅಂತ್ಯ

modi
ದೇಶ1 hour ago

Narendra Modi: ತೆಲಂಗಾಣ, ಒಡಿಶಾಕ್ಕೆ ಮೋದಿ ಭೇಟಿ; 26,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

KSRTC to operate special buses for Mahashivratri
ಮಹಾ ಶಿವರಾತ್ರಿ2 hours ago

Maha Shivratri : ಮಹಾಶಿವರಾತ್ರಿಗೆ ಕೆಎಸ್‌ಆರ್‌ಟಿಸಿಯಿಂದ ಸ್ಪೆಷಲ್‌ ಬಸ್‌; ಶೇ.10ರಷ್ಟು ಡಿಸ್ಕೌಂಟ್‌!

Stones pelted at 3 Vande Bharat train in a single day
ರಾಜಕೀಯ2 hours ago

Vande Bharat Train: ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ​; ಒಂದೇ ದಿನ 2 ಟ್ರೈನ್‌ ಮೇಲೆ 3 ಕಡೆ ದಾಳಿ!

Sedition Case BY Vijayendra
ಬೆಳಗಾವಿ2 hours ago

BY Vijayendra :‌ ನಾಸಿರ್‌ ಹುಸೇನ್‌ ಕೂಡಾ ಅಪರಾಧಿ, FIRನಲ್ಲಿ ಸೇರಿಸಿ; ವಿಜಯೇಂದ್ರ ಆಗ್ರಹ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ20 hours ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ24 hours ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌