Reliance Jio: 7 ವಸಂತ ಪೂರೈಸಿದ ರಿಲಯನ್ಸ್‌ ಜಿಯೋ; ಇಲ್ಲಿವೆ 7 ಕ್ರಾಂತಿಕಾರಿ ಬದಲಾವಣೆ! - Vistara News

ಗ್ಯಾಜೆಟ್ಸ್

Reliance Jio: 7 ವಸಂತ ಪೂರೈಸಿದ ರಿಲಯನ್ಸ್‌ ಜಿಯೋ; ಇಲ್ಲಿವೆ 7 ಕ್ರಾಂತಿಕಾರಿ ಬದಲಾವಣೆ!

Reliance Jio: ಪ್ರಮುಖ ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿ ರಿಲಯನ್ಸ್ ಜಿಯೋ 7 ವಸಂತಗಳನ್ನು ಪೂರ್ತಿ ಮಾಡಿದ್ದು, ಮೂರು ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿದೆ.

VISTARANEWS.COM


on

Reliance jio at 7
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಇಂದಿಗೆ (ಸೆಪ್ಟೆಂಬರ್ 5, 2023) ಏಳು ವರ್ಷಗಳನ್ನು ಪೂರ್ಣಗೊಳಿಸಿದೆ. ಇದು ಭಾರತೀಯರೆಲ್ಲರೂ ಸಂಭ್ರಮಿಸಬಹುದಾದ ದಿನ. ಏಕೆಂದರೆ ಏಳು ವರ್ಷಗಳ ಹಿಂದೆ, ರಿಲಯನ್ಸ್ ಮಾಲೀಕ ಮುಕೇಶ್ ಅಂಬಾನಿ (Mukesh Ambani) ಜಿಯೋವನ್ನು ಪ್ರಾರಂಭಿಸುವುದಾಗಿ ಘೋಷಿಸಿದಾಗ, ಮುಂದೊಂದು ದಿನ ರಿಲಯನ್ಸ್ ಜಿಯೋ ದೇಶದ ಡಿಜಿಟಲ್ ಮೂಲಸೌಕರ್ಯದ ಬೆನ್ನೆಲುಬಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಕಳೆದ 7 ವರ್ಷಗಳಲ್ಲಿ ಜಿಯೋದಿಂದಾಗಿ ದೇಶದಲ್ಲಿ ಸಾಕಷ್ಟು ಬದಲಾಗಿದೆ (Revolutionary changes). ಇದು ಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ಏಳು ವರ್ಷಗಳಲ್ಲಿ ಜಿಯೋ ಬೀರಿದ 7 ಪರಿಣಾಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದು ಬಳಕೆದಾರರಿಗೂ ಗೊತ್ತಿದೆ ಹಾಗೂ ಅನುಭವಕ್ಕೂ ಬಂದಿದೆ. ಆದರೂ ಒಮ್ಮೆ ನೆನಪಿಸಿಕೊಳ್ಳೋಣ.

1.ಉಚಿತ ಹೊರಹೋಗುವ ಕರೆಗಳು

ಸೆಪ್ಟೆಂಬರ್ 5, 2016ರಂದು ಬಿಡುಗಡೆಯಾದ ಮೊದಲ ದಿನ ರಿಲಯನ್ಸ್ ಜಿಯೋ ದೇಶದಲ್ಲಿ ದುಬಾರಿ ಆಗಿದ್ದ ಹೊರಹೋಗುವ ಕರೆಗಳ (ಔಟ್ ಗೋಯಿಂಗ್ ಕಾಲ್) ಯುಗವನ್ನು ಕೊನೆಗೊಳಿಸಿತು. ಹೊರಹೋಗುವ ಕರೆಗಳನ್ನು ಉಚಿತ ಮಾಡಿದ ಭಾರತದ ಮೊದಲ ಕಂಪನಿ ರಿಲಯನ್ಸ್ ಜಿಯೋ. ಇದು ಇಂದಿಗೂ ಮುಂದುವರಿದಿದೆ.

2.ಕಡಿಮೆಯಾದ ಡೇಟಾ ಮತ್ತು ಮೊಬೈಲ್ ಬಿಲ್‌ಗಳು

ಮೊಬೈಲ್ ಡೇಟಾದ ಬೆಲೆಗಳು ಮುಂಚೆ ಎಷ್ಟಿದ್ದವು ಅನ್ನೋದು ನೆನಪಿದೆಯಾ? ಏಳು ವರ್ಷ ಆಗಿಹೋಗಿದೆಯಲ್ಲಾ ಅದಕ್ಕೆ ಈ ಪ್ರಶ್ನೆ ಅಷ್ಟೇ. ಆಗ ಬಳಕೆದಾರರು ಪಾವತಿ ಮಾಡುತ್ತಿದ್ದದ್ದು ಪ್ರತಿ ಜಿಬಿಗೆ ಸುಮಾರು ರೂ 255. ಜಿಯೋ ಡೇಟಾ ಬೆಲೆಗಳನ್ನು ಬಹಳ ಆಕ್ರಮಣಕಾರಿಯಾಗಿ ಕಡಿಮೆ ಮಾಡಿದೆ ಮತ್ತು ಡೇಟಾವು ಪ್ರತಿ ಜಿಬಿಗೆ ರೂ 10 ಕ್ಕಿಂತ ಕಡಿಮೆ ಲಭ್ಯವಾಯಿತು. ಉಚಿತ ಕರೆ ಮತ್ತು ಕಡಿಮೆ ಡೇಟಾ ಬೆಲೆಗಳಿಂದಾಗಿ, ಮೊಬೈಲ್ ಬಿಲ್‌ಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಡೇಟಾ ಬಳಕೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ – ಡೇಟಾ ಬೆಲೆಗಳಲ್ಲಿನ ಕಡಿತವು ಡೇಟಾ ಬಳಕೆಯ ಮೇಲೆ ನೇರ ಪರಿಣಾಮ ಬೀರಿತು. ಜಿಯೋ ಬರುವ ಮೊದಲು, ಡೇಟಾ ಬಳಕೆ ವಿಷಯದಲ್ಲಿ ಭಾರತವು ವಿಶ್ವದಲ್ಲಿ 155ನೇ ಸ್ಥಾನದಲ್ಲಿತ್ತು. ಮತ್ತು ಇಂದು ಭಾರತವು ಮೊದಲ ಎರಡರಲ್ಲಿದೆ. ಈಗ ಜಿಯೋ ನೆಟ್‌ವರ್ಕ್‌ನಲ್ಲಿ ಪ್ರತಿ ತಿಂಗಳು 1,100 ಕೋಟಿ ಜಿಬಿ ಡೇಟಾವನ್ನು ಬಳಸಲಾಗುತ್ತಿದೆ. ಜಿಯೋ ಗ್ರಾಹಕರು ತಿಂಗಳಿಗೆ ಸರಾಸರಿ 25 ಜಿಬಿ ಡೇಟಾವನ್ನು ಬಳಸುತ್ತಾರೆ. ಇದು ಟೆಲಿಕಾಂ ಉದ್ಯಮದಲ್ಲಿ ಅತಿ ಹೆಚ್ಚು ಎನಿಸಿಕೊಂಡಿದೆ.

3.ಮೊಬೈಲ್‌ನ ಸಣ್ಣ ಪರದೆಯಲ್ಲಿ ಸಂಪೂರ್ಣ ಅಂಗಡಿ

ಜಿಯೋ ಕಾರಣದಿಂದಾಗಿ ಡೇಟಾ ಅಗ್ಗವಾಯಿತು ಮತ್ತು ಜಗತ್ತು ಕೇವಲ ಮೊಬೈಲ್ ನಲ್ಲೇ ಸಿಕ್ಕಿಹೋಯಿತು. ಈಗ ಮನರಂಜನೆಯ ವ್ಯಾಖ್ಯಾನವೇ ಬದಲಾಗಿದೆ. ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮನರಂಜನೆಯು ಕೇವಲ ಒಂದು ಕ್ಲಿಕ್ ಅಷ್ಟೇ ದೂರ. ರೈಲು, ವಿಮಾನ, ಸಿನಿಮಾ ಹೀಗೆ ಎಲ್ಲದರ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಆಗತೊಡಗಿದವು. ಹೋಟೆಲ್ ಬುಕಿಂಗ್ ಮತ್ತು ಆಹಾರ ಸೈಟ್‌ಗಳು ಮತ್ತು ಅಪ್ಲಿಕೇಷನ್‌ಗಳು ಹೊಸ ಎತ್ತರ ಕಾಣಲು ಆರಂಭವಾದವು. ಪ್ರವಾಸೋದ್ಯಮ ಅಭಿವೃದ್ಧಿ ಕಂಡಿದೆ. ಇ-ಕಾಮರ್ಸ್ ಕಂಪನಿಗಳು ಇಡೀ ಅಂಗಡಿಯನ್ನು ಮೊಬೈಲ್‌ಗೆ ತಂದಿವೆ. ಆನ್‌ಲೈನ್ ತರಗತಿ ಮತ್ತು ಕಚೇರಿ- ಕೋವಿಡ್‌ನ ಕೆಟ್ಟ ದಿನಗಳನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುತ್ತಾರೆ. ಶಿಕ್ಷಣ ಮತ್ತು ಕಚೇರಿ ಮನೆಯಿಂದಲೇ ನಡೆದವು, ಇಂದಿಗೂ ನಡೆಯುತ್ತಿವೆ. ಗಂಟೆಗಟ್ಟಲೆ ಇಂಟರ್ ನೆಟ್ ಬಳಸಲಾಗುತ್ತಿತ್ತು. ಕೈಗೆಟುಕುವ ಬೆಲೆಯಲ್ಲಿ ಡೇಟಾ ಸಿಗದಿದ್ದರೆ ಇದು ಸಾಧ್ಯವಿತ್ತಾ?! ಜಿಯೋ ಬಿಡುಗಡೆಯ ಮೊದಲಿನ ಡೇಟಾ ದರಗಳು ಅಂದರೆ ಪ್ರತಿ ಜಿಬಿಗೆ ರೂ 255 ಇದ್ದಿದ್ದರೆ ಆಗ ಏನಾಗುತ್ತಿತ್ತು ಎಂದು ಊಹಿಸಿ.

4.ಡಿಜಿಟಲ್ ಪಾವತಿ

ಎಲ್ಲ ಕಡೆಗೆ ಹಣ ಹಿಡಿದುಕೊಂಡೇ ಹೋಗಬೇಕು, ನಗದು ಇರದಿದ್ದರೆ ಆಗಲ್ಲ ಎಂಬ ಸ್ಥಿತಿ ಈಗಿಲ್ಲ. ಭಾರತ ಸರ್ಕಾರದ ಯುಪಿಐ ಓಪನ್ ಡಿಜಿಟಲ್ ಪಾವತಿ ವ್ಯವಸ್ಥೆಯು ಎಲ್ಲವನ್ನೂ ಬದಲಾಯಿಸಿದೆ. ದೊಡ್ಡ ಮತ್ತು ಸಣ್ಣ ಬ್ಯಾಂಕ್‌ಗಳು, ಪೇಟಿಎಂ (Paytm) ಮತ್ತು PhonePe (ಫೋನ್ ಪೇ) ನಂತಹ ವ್ಯಾಲೆಟ್ ಕಂಪನಿಗಳು ಸೇರಿದಂತೆ ಹಣಕಾಸು ದೈತ್ಯ ಕಂಪನಿಗಳು ಈ ಉಪಕ್ರಮದಲ್ಲಿ ಸೇರಿಕೊಂಡವು. ಪ್ರತಿ ಮೊಬೈಲ್‌ನಲ್ಲಿ ಪಾವತಿ ವ್ಯವಸ್ಥೆಯ ಮೂಲಕ ಹಣದ ವಹಿವಾಟು ನಡೆಸುವುದು ಇದರ ಉದ್ದೇಶವಾಗಿತ್ತು. ಇಂದು ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್‌ಗಳವರೆಗೆ ಇದನ್ನು ಬಳಸಲಾಗುತ್ತಿದೆ. ಜಿಯೋ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳ ಡಿಜಿಟಲ್ ಮೂಲಸೌಕರ್ಯಗಳು ಇದರ ನೆರವಿಗೆ ಬಂದವು. ಆದರೆ ಯುಪಿಐ ಯಶಸ್ಸಿನ ಶ್ರೇಯವು, ಹೆಚ್ಚಿನ ಪ್ರಮಾಣದಲ್ಲಿ ಡೇಟಾದ ದರ ಕಡಿಮೆ ಆಗಿರುವುದಕ್ಕೇ ಹೋಗುತ್ತದೆ. ಇದು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಲು ಸಾಮಾನ್ಯ ಭಾರತೀಯರನ್ನು ಉತ್ತೇಜಿಸಿತು. ಜಿಯೋ ಪ್ರಾರಂಭದೊಂದಿಗೆ ಡೇಟಾ ದರಗಳು 25 ಪಟ್ಟು ಕಡಿಮೆಯಾಗಿದೆ.

5.ಟೂಜಿ ಯಿಂದ 4ಜಿಗೆ

ಜಿಯೋ ಆರಂಭವಾದ ಮರು ವರ್ಷದಲ್ಲಿ, ಅಂದರೆ 2017ರಲ್ಲಿ, ಕಂಪನಿಯು ಮಾರುಕಟ್ಟೆಯಲ್ಲಿ ಜಿಯೋ ಫೋನ್ ಅನ್ನು ಬಿಡುಗಡೆ ಮಾಡಿತು. 2ಜಿ ಗ್ರಾಹಕರನ್ನು 4ಜಿಗೆ ಬದಲಾಯಿಸುವುದು ಇದರ ಉದ್ದೇಶವಾಗಿತ್ತು. ಇದರಿಂದ ಅವರೂ ಡಿಜಿಟಲ್ ಆರ್ಥಿಕತೆಯ ಭಾಗವಾಗಬಲ್ಲರು. 13 ಕೋಟಿಗೂ ಹೆಚ್ಚು ಜಿಯೋಫೋನ್ ಮೊಬೈಲ್‌ಗಳು ಮಾರಾಟವಾಗಿವೆ. ಇದು ಯಾವುದೇ ಒಂದೇ ದೇಶದಲ್ಲಿ ಯಾವುದೇ ಒಂದೇ ಮಾದರಿಗಿಂತ ಹೆಚ್ಚು ಮಾರಾಟವಾದ ಮೊಬೈಲ್ ಆಗಿತ್ತು. ಅದರ ಮುಂದುವರಿದ ಭಾಗವಾಗಿ, ಕಂಪನಿಯು 2ಜಿ ಗ್ರಾಹಕರನ್ನು 4ಜಿ ಗೆ ಕರೆತರಲು ಜಿಯೋಭಾರತ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ. ಜಿಯೋ ಜೊತೆಗೆ ಕಾರ್ಬನ್ ಎಂಬ ಕಂಪನಿಯು ‘ಭಾರತ್’ ಎಂಬ 4ಜಿ ಫೀಚರ್ ಫೋನ್ ಅನ್ನು ತಯಾರಿಸುತ್ತಿದೆ. ಶೀಘ್ರದಲ್ಲೇ ಇನ್ನೂ ಕೆಲವು ಕಂಪನಿಗಳು ಈ ಅಭಿಯಾನಕ್ಕೆ ಸೇರುವ ನಿರೀಕ್ಷೆಯಿದೆ.

ಈ ಸುದ್ದಿಯನ್ನೂ ಓದಿ: Reliance Jio: ರಿಲಯನ್ಸ್ ಜಿಯೋದಿಂದ ಮೊಬೈಲ್ ಪ್ರಿಪೇಯ್ಡ್ ಪ್ಲ್ಯಾನ್‌ ಜತೆಗೆ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್!

6.ಡಿಜಿಟಲ್ ವಿಭಜನೆ ಕಡಿಮೆಯಾಗಿದೆ

ಮೊದಲು ಶ್ರೀಮಂತರು ಮಾತ್ರ ಡೇಟಾವನ್ನು ಬಳಸಬಹುದಾಗಿತ್ತು, ಅದಕ್ಕೆ ಕಾರಣ ಏನೆಂದರೆ ದುಬಾರಿ ಡೇಟಾ ಬೆಲೆಗಳು. ಶ್ರೀಮಂತ ಮತ್ತು ಬಡವರ ನಡುವಿನ ಈ ಅಂತರವನ್ನು ಜಿಯೋ ಕಡಿಮೆ ಮಾಡಿದೆ. ಈಗ ಪ್ರತಿಯೊಬ್ಬರೂ ಸುಲಭವಾಗಿ ಡೇಟಾವನ್ನು ಬಳಸಬಹುದು. 4ಜಿ ತಂತ್ರಜ್ಞಾನವು ನಗರಗಳನ್ನು ಮೀರಿ ಹಳ್ಳಿಗಳನ್ನು ತಲುಪಿತು. ಅದರ ಪರಿಣಾಮ ಈಗ ನಗರವಾಸಿಗಳಂತೆ ಹಳ್ಳಿಗರಿಗೂ ಪ್ರತಿಯೊಂದು ಡಿಜಿಟಲ್ ಸೌಲಭ್ಯ ಲಭ್ಯವಾಗಿದೆ. ಜನ್-ಧನ್ ಖಾತೆಗಳನ್ನು ನಿರ್ವಹಿಸುವುದು, ಸರ್ಕಾರಿ ಯೋಜನೆಗಳಲ್ಲಿ ನೋಂದಾಯಿಸುವುದು ಅಥವಾ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಶಾಪಿಂಗ್ ಮಾಡುವುದು, ಈಗ ಪ್ರತಿಯೊಂದು ರೀತಿಯ ಡಿಜಿಟಲ್ ಕೆಲಸಗಳನ್ನು ಹಳ್ಳಿಯಲ್ಲಿ ಕುಳಿತು ಸಹ ಸುಲಭವಾಗಿ ಮಾಡಬಹುದು.

7.ಯುನಿಕಾರ್ನ್ ಮಹಾಪೂರ

$1 ಶತಕೋಟಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಸ್ಟಾರ್ಟ್ಅಪ್ ಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಜಿಯೋ ಮಾರುಕಟ್ಟೆಗೆ ಲಗ್ಗೆ ಇಡುವ ಮೊದಲು ದೇಶದಲ್ಲಿ ಕೇವಲ 4-5 ಯುನಿಕಾರ್ನ್‌ಗಳು ಇದ್ದವು ಈಗ 108 ಯುನಿಕಾರ್ನ್‌ಗಳಿಗೆ ಏರಿಕೆಯಾಗಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

Old Phone Sale: ನಿಮ್ಮ ಹಳೆಯ ಫೋನ್ ಮಾರಾಟ ಮಾಡುವ ಮೊದಲು ಈ ವಿಷಯ ತಿಳಿದಿರಲಿ!

ಬಹಳಷ್ಟು ಬಾರಿ ಜನರು ತಮ್ಮ ಫೋನ್ ಅನ್ನು ಅಪರಿಚಿತರಿಗೆ ಮಾರಾಟ ಮಾಡುವ ಮೊದಲು ಅಗತ್ಯ ಅಥವಾ ಮೂಲಭೂತ ಹಂತಗಳನ್ನು ನಿರ್ವಹಿಸುವುದಿಲ್ಲ. ಇದರಿಂದ ಮುಂದೆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಹಳೆಯ ಫೋನ್ ಮಾರಾಟ (Old Phone Sale) ಮಾಡುವ ಮೊದಲು ನಿರ್ವಹಿಸಬೇಕಾದ ಕೆಲವು ಕ್ರಮಗಳನ್ನು ತಿಳಿದುಕೊಳ್ಳಿ.

VISTARANEWS.COM


on

By

Old Phone Sale

ಹಳೆಯ ಫೋನ್ (Old Phone) ಮಾರಾಟ (Old Phone Sale) ಮಾಡುವ ಅಥವಾ ಎಕ್ಸ್ ಚೇಂಚ್ (Old Phone exchange) ಮಾಡುವ ಆಲೋಚನೆಯಲ್ಲಿ ಇದ್ದೀರಾ ? ಹಾಗಿದ್ದರೆ ಅದಕ್ಕೂ ಮೊದಲು ಗಮನಿಸಬೇಕಾದ ಹಲವು ಸಂಗತಿಗಳಿವೆ. ಇಲ್ಲವಾದರೆ ನಿಮ್ಮ ಅಮೂಲ್ಯ ದಾಖಲೆಗಳು ಇನ್ನೊಬ್ಬರ ಕೈಸೇರುವ, ದುರ್ಬಳಕೆಯಾಗುವ ಸಾಧ್ಯತೆ ಇದೆ.

ಹಳೆಯ ಮೊಬೈಲ್ ಮಾರಾಟ ಮಾಡುವ ಮೊದಲು ಡೇಟಾವನ್ನು ಬ್ಯಾಕಪ್ ಮಾಡಬೇಕು, ಅನಂತರ ಫ್ಯಾಕ್ಟರಿ ರೀಸೆಟ್ ಮಾಡಿ ಮೊಬೈಲ್ ನಲ್ಲಿರುವ ಎಲ್ಲ ಡೇಟಾಗಳನ್ನು ಅಳಿಸಿ ಹಾಕಬೇಕು. ಎಲ್ಲಾ ಖಾತೆಗಳಿಂದ ಫೋನ್ ಅನ್ನು ಲಾಗೌಟ್ ಮಾಡಿ ಫೋನ್ ಅನ್ನು ಸಂಪೂರ್ಣವಾಗಿ ರಿಸೆಟ್ ಮಾಡಿಯೇ ಕೊಡಬೇಕು. ಜೊತೆಗೆ ಕೆಲವು ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ ಪೊಲೀಸರು.

ಬಹಳಷ್ಟು ಬಾರಿ ಜನರು ತಮ್ಮ ಫೋನ್ ಅನ್ನು ಅಪರಿಚಿತರಿಗೆ ಮಾರಾಟ ಮಾಡುವ ಮೊದಲು ಅಗತ್ಯ ಅಥವಾ ಮೂಲಭೂತ ಹಂತಗಳನ್ನು ನಿರ್ವಹಿಸುವುದಿಲ್ಲ. ಇದರಿಂದ ಮುಂದೆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಏನು ಮಾಡಬೇಕು?

ಹಳೆಯ ಫೋನ್ ಮಾರಾಟ ಮಾಡುವ ಮುನ್ನ ಈ ಕೆಳಗಿನ ಅಂಶಗಳು ಗಮನದಲ್ಲಿ ಇರಿಸಿ.

Old Phone Sale


ಡೇಟಾ ಬ್ಯಾಕಪ್

ಮೊಬೈಲ್ ನಲ್ಲಿರುವ ಡೇಟಾವನ್ನು ಮುಖ್ಯವಾಗಿ ಫೋಟೋ, ವಿಡಿಯೋ, ಡಾಕ್ಯುಮೆಂಟ್‌ಗಳನ್ನು ಗೂಗಲ್ ಖಾತೆಗೆ ಅಥವಾ ಐ ಕ್ಲೌಡ್ ಗೆ ಬ್ಯಾಕಪ್ ಮಾಡಿ. ಫೋನ್‌ನಿಂದ ಎಲ್ಲಾ ಫೈಲ್‌ಗಳನ್ನು ತೆಗೆದುಹಾಕಿ. ಇದನ್ನು ಕ್ಲೌಡ್‌ನಲ್ಲಿ ಸಂಗ್ರಹಿಸುವ ಬದಲು ಕಂಪ್ಯೂಟರ್‌ ನಲ್ಲೂ ಸಂಗ್ರಹಿಸಿ ಇಡಬಹುದು. ಸೆಟ್ಟಿಂಗ್‌ ಗೆ ಹೋಗುವ ಮೂಲಕ ನಿಮ್ಮ ಎಲ್ಲಾ ಡೇಟಾವನ್ನು ಬ್ಯಾಕಪ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸೈನ್ ಔಟ್

ಜನರು ಸಾಮಾನ್ಯವಾಗಿ ನಿರ್ಲಕ್ಷಿಸುವ ಅಥವಾ ಮರೆತುಬಿಡುವ ಅತ್ಯಂತ ನಿರ್ಣಾಯಕ ಹಂತ ಇದಾಗಿದೆ. ಭವಿಷ್ಯದಲ್ಲಿ ಯಾವುದೇ ವಂಚನೆಯನ್ನು ತಪ್ಪಿಸುವ ಸಲುವಾಗಿ ಪೇಟಿಎಂ, ಗೂಗಲ್ ಪೇ, ಭೀಮ್, ಬ್ಯಾಂಕ್ ಅಪ್ಲಿಕೇಶನ್‌ಗಳು ಇತ್ಯಾದಿ ಎಲ್ಲಾ ಪಾವತಿ ಅಪ್ಲಿಕೇಶನ್‌ಗಳಿಂದ ಸೈನ್ ಔಟ್ ಮಾಡಿ. ನಿಮ್ಮ ವಿವರಗಳನ್ನು ಈ ಖಾತೆಗಳಿಗೆ ಲಾಗ್ ಇನ್ ಆಗಿರಿಸುವುದು ಕಳ್ಳತನ ಮತ್ತು ಇತರ ಗಂಭೀರ ಭದ್ರತಾ ಉಲ್ಲಂಘನೆಗಳಿಗೆ ಕಾರಣವಾಗಬಹುದು. ಅನಗತ್ಯ ಭದ್ರತಾ ಹಗರಣವನ್ನು ತಪ್ಪಿಸಲು ಗೂಗಲ್, ಫೇಸ್ ಬುಕ್, ಇನ್ ಸ್ಟಾ ಗ್ರಾಮ್ ಇತ್ಯಾದಿ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಸೈನ್ ಔಟ್ ಮಾಡಲು ಮರೆಯದಿರಿ.

ಜೋಡಣೆಯನ್ನು ತೆಗೆದು ಹಾಕಿ

ಸ್ಮಾರ್ಟ್ ವಾಚ್‌, ಬ್ಲೂಟೂತ್, ಇಯರ್‌ಫೋನ್‌, ಫಿಟ್‌ನೆಸ್ ಬ್ಯಾಂಡ್‌ ಅಥವಾ ಏರ್‌ಪಾಡ್‌ಗಳಂತಹ ಸಾಧನಗಳನ್ನು ಅನ್‌ಪೇರ್ ಮಾಡಿ. ಅಲ್ಲದೇ ಫೋನ್‌ನಲ್ಲಿ ಏನೂ ಉಳಿಯದಂತೆ ಎಲ್ಲಾ ಜೋಡಿಸಲಾದ ಸಾಧನಗಳಿಂದ ಡೇಟಾವನ್ನು ತೆಗೆದುಹಾಕಿ.

ಫ್ಯಾಕ್ಟರಿ ರೀಸೆಟ್

ಸಾಧನವನ್ನು ಅದರ ಫ್ಯಾಕ್ಟರಿ ಸ್ಥಿತಿಗೆ ಹೊಂದಿಸಲು ಪೂರ್ಣ ಫ್ಯಾಕ್ಟರಿ ಮರುಹೊಂದಿಕೆಯನ್ನು ನಿರ್ವಹಿಸಿ. ಇದು ಸಾಧನದಿಂದ ಎಲ್ಲವನ್ನೂ ಅಳಿಸುತ್ತದೆ ಮತ್ತು ನಿಮ್ಮ ಫೋನ್ ಅನ್ನು ಹೊಚ್ಚ ಹೊಸ ಸ್ಥಿತಿಯಲ್ಲಿ ಇರಿಸುತ್ತದೆ. ಫೋನ್‌ನಿಂದ ಎಲ್ಲಾ ಡೇಟಾ ಮತ್ತು ಸೆಟ್ಟಿಂಗ್‌ಗಳನ್ನು ಅಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಫ್ಯಾಕ್ಟರಿ ಮರುಹೊಂದಿಕೆಯನ್ನು ಎರಡು ಬಾರಿ ಮಾಡಬಹುದು.


ಸಿಮ್ ಕಾರ್ಡ್ ತೆಗೆದುಹಾಕಿ

ಫೋನ್‌ನಿಂದ ಸಿಮ್ ಮತ್ತು ಎಸ್ ಡಿ ಕಾರ್ಡ್ ಅನ್ನು ತೆಗೆಯಲು ಮರೆಯಬೇಡಿ. ಕೆಲವು ಸಾಧನ, ಸಂಪರ್ಕ ಮತ್ತು ಕರೆ ಲಾಗ್‌ಗಳನ್ನು ಸಿಮ್ ಕಾರ್ಡ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಆದ್ದರಿಂದ ಇವುಗಳು ಪ್ರಮುಖ ಹಾರ್ಡ್‌ವೇರ್ ತುಣುಕುಗಳಾಗಿವೆ. ಖರೀದಿದಾರರಿಗೆ ಮೊಬೈಲ್ ಹಸ್ತಾಂತರಿಸುವ ಮೊದಲು ಇದರಲ್ಲಿರುವ ಪಠ್ಯ ಸಂದೇಶ, ಕರೆ ಲಾಗ್‌ ಅನ್ನು ಬ್ಯಾಕಪ್ ನಲ್ಲಿ ಇಡಿ. ಇದಕ್ಕಾಗಿ ಗೂಗಲ್ ಡ್ರೈವ್ ಅಥವಾ ಡ್ರಾಪ್‌ಬಾಕ್ಸ್‌ ಬಳಸಿ. ಹೊಸ ಫೋನ್ ಬಂದಾಗ ಇದನ್ನು ಶೇರ್ ಇಟ್ ಅಪ್ಲಿಕೇಶನ್ ಮೂಲಕ ವರ್ಗಾಯಿಸಿಕೊಳ್ಳಬಹುದು.

ಇದನ್ನೂ ಓದಿ: TRAI New Rules: ನಿಮಗೆ ಗೊತ್ತಿರಲಿ; ಸೆ.1ರಿಂದ ಈ ಸಿಮ್ ಕಾರ್ಡ್‌ಗಳು ಕಪ್ಪು ಪಟ್ಟಿಗೆ!

ಬಿಲ್ ಪಡೆಯಿರಿ

ಫೋನ್ ಅನ್ನು ಮಾರಾಟ ಮಾಡಲು ನಿರ್ಧರಿಸಿದರೆ ಬಿಲ್ ಅನ್ನು ಪಡೆಯಲು ಮರೆಯದಿರಿ. ಇದು ಯಾವುದೇ ವಂಚನೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಯಾವುದೇ ದುಷ್ಕೃತ್ಯವನ್ನು ನಿರ್ವಹಿಸಲು ಫೋನ್ ಅನ್ನು ಬಳಸಿದರೆ ನಿಮ್ಮನ್ನು ರಕ್ಷಿಸುತ್ತದೆ.

Continue Reading

ಗ್ಯಾಜೆಟ್ಸ್

TRAI New Rules: ನಿಮಗೆ ಗೊತ್ತಿರಲಿ; ಸೆ.1ರಿಂದ ಈ ಸಿಮ್ ಕಾರ್ಡ್‌ಗಳು ಕಪ್ಪು ಪಟ್ಟಿಗೆ!

ಸೆಪ್ಟೆಂಬರ್ 1ರಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI New Rules) ದೇಶಾದ್ಯಂತ ನಕಲಿ ಮತ್ತು ಸ್ಕ್ಯಾಮ್ ಕರೆಗಳನ್ನು ತಡೆಯುವ ಗುರಿಯನ್ನು ಹೊಂದಿರುವ ಹೊಸ ನಿಯಮವನ್ನು ಜಾರಿಗೆ ತರಲಿದೆ. ಟೆಲಿಕಾಂ ವಲಯದಲ್ಲಿ ಮೋಸದ ಚಟುವಟಿಕೆಗಳನ್ನು ಎದುರಿಸಲು ಸರ್ಕಾರದ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.

VISTARANEWS.COM


on

By

TRAI New Rules

ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (Telecom Regulatory Authority of India) ಅನಗತ್ಯ ಕರೆಗಳಿಗೆ ಬಳಸುತ್ತಿರುವ ಸಂಖ್ಯೆಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಹೊಸ ನಿಯಮವನ್ನು (TRAI New Rules) ಜಾರಿಗೆ ತರಲು ಸಜ್ಜಾಗಿದೆ. ದೇಶಾದ್ಯಂತ ನಕಲಿ (fake call) ಮತ್ತು ಜಾಹೀರಾತು ಕರೆಗಳಿಂದ ಬಳಕೆದಾರರಿಗೆ ತೊಂದರೆಯಾಗುತ್ತಿರುವುದರಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಸೆಪ್ಟೆಂಬರ್ 1ರಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ದೇಶಾದ್ಯಂತ ನಕಲಿ ಮತ್ತು ಸ್ಕ್ಯಾಮ್ ಕರೆಗಳನ್ನು ತಡೆಯುವ ಗುರಿಯನ್ನು ಹೊಂದಿರುವ ಹೊಸ ನಿಯಮವನ್ನು ಜಾರಿಗೆ ತರಲಿದೆ. ಟೆಲಿಕಾಂ ವಲಯದಲ್ಲಿ ಮೋಸದ ಚಟುವಟಿಕೆಗಳನ್ನು ಎದುರಿಸಲು ಸರ್ಕಾರದ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.

ಹೊಸ ಸಿಮ್ ಕಾರ್ಡ್ ನಿಯಮಗಳು

ಹೊಸ ನಿಯಮಗಳ ಅಡಿಯಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ನೆಟ್‌ವರ್ಕ್‌ಗಳ ಮೂಲಕ ಮಾಡುವ ನಕಲಿ ಕರೆಗಳಿಗೆ ಜವಾಬ್ದಾರರಾಗಿರುತ್ತಾರೆ.

ಗ್ರಾಹಕರು ನಕಲಿ ಕರೆಯನ್ನು ವರದಿ ಮಾಡಿದರೆ ಟೆಲಿಕಾಂ ಪೂರೈಕೆದಾರರು ಸಮಸ್ಯೆಯನ್ನು ಪರಿಹರಿಸಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಹೊಂದಿರಬೇಕಾಗುತ್ತದೆ. ಈ ಬದಲಾವಣೆಯು ಬಳಕೆದಾರರನ್ನು ಕಾಡುತ್ತಿರುವ ನಕಲಿ ಕರೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.


ವಂಚನೆಯ ವಿರುದ್ಧ ಕಠಿಣ ನಿಲುವು

ಅನುಮಾನಾಸ್ಪದ ಗ್ರಾಹಕರನ್ನು ಬಳಸಿಕೊಳ್ಳಲು ವಿವಿಧ ತಂತ್ರಗಳನ್ನು ಬಳಸುತ್ತಿರುವ ವಂಚಕರಿಗೆ ಟಿಆರ್‌ಎಐ ಎಚ್ಚರಿಕೆ ನೀಡಿದೆ. ಟೆಲಿಕಾಂ ಕಂಪನಿಗಳ ಮೇಲೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಈ ದುರುದ್ದೇಶಪೂರಿತ ಚಟುವಟಿಕೆಗಳಿಂದ ಬಳಕೆದಾರರನ್ನು ರಕ್ಷಿಸಲು ಹೊಸ ನಿಯಮವನ್ನು ವಿನ್ಯಾಸಗೊಳಿಸಲಾಗಿದೆ.
ನಕಲಿ ಮತ್ತು ಪ್ರಚಾರದ ಕರೆಗಳಿಗೆ ಮೋಸಗೊಳಿಸುವ ವಿಧಾನಗಳನ್ನು ಬಳಸುವುದು ದೂರಸಂಪರ್ಕ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಪ್ರಾಧಿಕಾರವು ದೃಢವಾದ ಕ್ರಿಯಾ ಯೋಜನೆಯನ್ನು ರೂಪಿಸಿದೆ ಎಂದು ಟಿಆರ್‌ಎಐ ಹೇಳಿದೆ.

ಎರಡು ವರ್ಷಗಳ ಕಾಲ ಕಪ್ಪುಪಟ್ಟಿಗೆ

ಟಿಆರ್‌ಎಐ ಪ್ರಕಾರ ಯಾವುದೇ ವ್ಯಕ್ತಿ ತಮ್ಮ ಮೊಬೈಲ್ ಸಂಖ್ಯೆಯನ್ನು ಟೆಲಿಮಾರ್ಕೆಟಿಂಗ್ ಅಥವಾ ಪ್ರಚಾರದ ಉದ್ದೇಶಗಳಿಗಾಗಿ ಬಳಸಿದರೆ ಅವರ ಸಂಖ್ಯೆಯನ್ನು ಎರಡು ವರ್ಷಗಳವರೆಗೆ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

ಹಣಕಾಸಿನ ವಂಚನೆಯನ್ನು ತಡೆಯಲು ಸರ್ಕಾರವು ಈ ಹಿಂದೆ ನಿರ್ದಿಷ್ಟ ಸಂಖ್ಯೆಯ ಸರಣಿ 160 ಅನ್ನು ಪರಿಚಯಿಸಿತ್ತು. ಆದರೂ ಅನೇಕ ಬಳಕೆದಾರರಿಗೆ ಖಾಸಗಿ ಸಂಖ್ಯೆಗಳಿಂದ ಪ್ರಚಾರದ ಕರೆಗಳು ಬರುವುದು ಮುಂದುವರಿದಿದೆ. ಇದು ಹೆಚ್ಚು ಕಠಿಣ ಕ್ರಮಗಳ ಅಗತ್ಯವನ್ನು ಪ್ರೇರೇಪಿಸುತ್ತದೆ.

ನಿಯಮ ಉಲ್ಲಂಘನೆ ಪರಿಣಾಮ

ವಂಚನೆ ಅಥವಾ ಸ್ಕ್ಯಾಮ್ ಕರೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಟಿಆರ್‌ಎಐ ಸ್ಪಷ್ಟಪಡಿಸಿದೆ. ಹೀಗಾಗಿ ಪ್ರಚಾರದ ಕರೆಗಳಿಗಾಗಿ ತಮ್ಮ ಸಂಖ್ಯೆಗಳನ್ನು ಬಳಸುವ ವ್ಯಕ್ತಿಗಳು ಜಾಗರೂಕರಾಗಿರಬೇಕು. ಯಾಕೆಂದರೆ ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಹೊಸ ನಿಯಮಾವಳಿಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ಬಳಕೆದಾರರಿಗೆ ಸುರಕ್ಷಿತ ಟೆಲಿಕಾಂ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಟಿಆರ್ ಎಐ ಹೊಂದಿದೆ.


ದೂರು ನೀಡಬಹುದು

ದೂರಸಂಪರ್ಕ ಇಲಾಖೆಯ ಮಾಹಿತಿ ಪ್ರಕಾರ ಕಳೆದ 3 ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ವಂಚನೆಯ ಸಂದೇಶಗಳನ್ನು ಕಳುಹಿಸಲಾಗಿದೆ. ಅಂತಹ ಸಂದೇಶಗಳನ್ನು ಸ್ವೀಕರಿಸಿರುವವರು ‘ಸಂಚಾರ್ ಸಾತಿ ಪೋರ್ಟಲ್’ ನಲ್ಲಿ ದೂರು ನೀಡಬಹುದು ಅಥವಾ ಅದರ ಬಗ್ಗೆ ನೇರವಾಗಿ 1909 ಗೆ ಕರೆ ಮಾಡಿ ದೂರು ಸಲ್ಲಿಸಬಹುದು.

ಇದನ್ನೂ ಓದಿ BSNL 4G Plan: ಜಿಯೋಗೆ ಪೈಪೋಟಿ ನೀಡಲು ಸಜ್ಜಾಗಿದೆ ಬಿಎಸ್‌ಎನ್‌ಎಲ್ 4ಜಿ; ಹೊಸ ರಿಚಾರ್ಜ್ ಪ್ಲ್ಯಾನ್‌ ಪ್ರಕಟ

ದೂರು ದಾಖಲಿಸುವುದು ಹೇಗೆ?

sancharsathi.gov.in ವೆಬ್‌ಸೈಟ್‌ನಲ್ಲಿ ಸಿಟಿಜನ್ ಸೆಂಟ್ರಿಕ್ ಸೇವೆಗೆ ಸ್ಕ್ರಾಲ್ ಮಾಡಿ. ಅನಂತರ ಟ್ಯಾಬ್‌ನ ಕೆಳಗೆ ನೀಡಲಾದ ಚಕ್ಷು ಆಯ್ಕೆಯನ್ನು ಆರಿಸಿ ವರದಿ ಮಾಡುವಿಕೆ ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ಮೆನುವಿನಿಂದ ವಂಚನೆ ವರ್ಗವನ್ನು ಆಯ್ಕೆ ಮಾಡಿ ಮತ್ತು ಅದರ ಸ್ಕ್ರೀನ್‌ಶಾಟ್ ಅನ್ನು ಲಗತ್ತಿಸಿ. ವಂಚನೆ ಕರೆ ಸಂದೇಶವನ್ನು ಸ್ವೀಕರಿಸಿದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ವಂಚನೆಯ ಕರೆ ದಿನಾಂಕ ಮತ್ತು ಸಮಯವನ್ನು ನಮೂದಿಸಿ ಮತ್ತು ಅದನ್ನು ವರದಿ ಮಾಡಿ. ಅನಂತರ ನಿಮ್ಮ ವಿವರಗಳನ್ನು ನಮೂದಿಸಿ. ಒಟಿಪಿ ಹಾಕಿ ಪರಿಶೀಲಿಸಿ ಮತ್ತು ದೂರನ್ನು ಸಲ್ಲಿಸಿ.

Continue Reading

ಗ್ಯಾಜೆಟ್ಸ್

BSNL 4G Plan: ಜಿಯೋಗೆ ಪೈಪೋಟಿ ನೀಡಲು ಸಜ್ಜಾಗಿದೆ ಬಿಎಸ್‌ಎನ್‌ಎಲ್ 4ಜಿ; ಹೊಸ ರಿಚಾರ್ಜ್ ಪ್ಲ್ಯಾನ್‌ ಪ್ರಕಟ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಈಗ ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ 4ಜಿ ಸೇವೆಗಳನ್ನು (BSNL 4G Plan) ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಕೆಲವು ರಾಜ್ಯಗಳಲ್ಲಿ ಬಿಎಸ್ ಎನ್ ಎಲ್ ನ 4ಜಿ ಸೇವೆಯನ್ನು ಈಗಾಗಲೇ ಹೊರತರಲಾಗಿದೆ.ಬಿಎಸ್‌ಎನ್‌ಎಲ್‌ನಿಂದ ಗ್ರಾಹಕರಿಗೆ ಹೆಚ್ಚಿನ ಲಾಭ ಕೊಡುವ ಒಂದು ರೀಚಾರ್ಜ್ ಯೋಜನೆಯನ್ನು ಈಗ ಪ್ರಕಟಿಸಿದೆ.

VISTARANEWS.COM


on

By

BSNL 4G Plan

ಬಿಎಸ್‌ಎನ್‌ಎಲ್ (BSNL 4G Plan) ತನ್ನ ಟೆಲಿಕಾಂ (telecom) ಬಳಕೆದಾರರಿಗೆ ಹಲವಾರು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು (new prepaid recharge plans) ಪರಿಚಯಿಸಿದೆ. ಇವುಗಳು ದೀರ್ಘಾವಧಿಯ ಲಾಭದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು ಡೇಟಾದಂತಹ ಪ್ರಯೋಜನಗಳನ್ನು ನೀಡಲಿದೆ. ಜುಲೈನಲ್ಲಿ ಖಾಸಗಿ ಕಂಪನಿಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ ಕಾರಣ ಅನೇಕ ಬಳಕೆದಾರರು ಬಿಎಸ್‌ಎನ್‌ಎಲ್‌ಗೆ ತಮ್ಮ ನಂಬರ್ ಗಳನ್ನು ಪೋರ್ಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯು ಈಗ ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ 4ಜಿ ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಕೆಲವು ರಾಜ್ಯಗಳಲ್ಲಿ ಬಿಎಸ್‌ಎನ್‌ಎಲ್ 4ಜಿ ಸೇವೆಯನ್ನು ಈಗಾಗಲೇ ಹೊರತರಲಾಗಿದೆ.


ಬಿಎಸ್‌ಎನ್‌ಎಲ್‌ನಿಂದ ಗ್ರಾಹಕರಿಗೆ ಹೆಚ್ಚಿನ ಲಾಭ ಕೊಡುವ ಒಂದು ರೀಚಾರ್ಜ್ ಯೋಜನೆಯು 160 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ, ಬಳಕೆದಾರರು ಒಟ್ಟು 320 ಜಿಬಿ ಡೇಟಾವನ್ನು ಪಡೆಯುತ್ತಾರೆ. 997 ರೂ. ಬೆಲೆಯ ಈ ಪ್ಲಾನ್ ಪ್ರತಿದಿನ 100 ಉಚಿತ ಎಸ್‌ಎಂಎಸ್ ಜೊತೆಗೆ ದಿನಕ್ಕೆ 2ಜಿಬಿ ಹೈ-ಸ್ಪೀಡ್ ಡೇಟಾವನ್ನು ಒದಗಿಸುತ್ತದೆ.

ಹೆಚ್ಚುವರಿಯಾಗಿ ಬಳಕೆದಾರರು ದೇಶದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಧ್ವನಿ ಕರೆಗಳನ್ನು ಮಾಡಬಹುದಾಗಿದೆ. ಈ ಯೋಜನೆಯು ಭಾರತದಾದ್ಯಂತ ಉಚಿತ ರೋಮಿಂಗ್ ಮತ್ತು ಜಿಂಗ್ ಮ್ಯೂಸಿಕ್ ಮತ್ತು ಬಿಎಸ್‌ಎನ್‌ಎಲ್ ಟ್ಯೂನ್‌ಗಳಂತಹ ಹಲವಾರು ಮೌಲ್ಯವರ್ಧಿತ ಸೇವೆಗಳೊಂದಿಗೆ ಬರುತ್ತದೆ.

ಇದನ್ನೂ ಓದಿ: Phone Charging Tips: ಫೋನ್‌ಗಳನ್ನು ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

BSNL 4G Plan


ಬಿಎಸ್‌ಎನ್‌ಎಲ್‌ ಕೂಡ ಶೀಘ್ರದಲ್ಲೇ 5ಜಿ ಸೇವೆಗಳನ್ನು ಪ್ರಾರಂಭಿಸಲು ಕೆಲಸ ಮಾಡುತ್ತಿದೆ. ಕಂಪನಿಯು ತನ್ನ 4ಜಿ ಸೇವೆಗಾಗಿ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಸಾವಿರಾರು ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದೆ ಮತ್ತು 5ಜಿ ನೆಟ್‌ವರ್ಕ್ ಪರೀಕ್ಷೆಯು ಈಗಾಗಲೇ ಪ್ರಾರಂಭವಾಗಿದೆ.

ಮುಂಬರುವ ತಿಂಗಳುಗಳಲ್ಲಿ ಸರ್ಕಾರಿ ಟೆಲಿಕಾಂ ಕಂಪನಿಯು 5ಜಿ ಸೇವೆಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದಲ್ಲದೆ ದೆಹಲಿ ಮತ್ತು ಮುಂಬೈನಲ್ಲಿರುವ ಎಂಟಿಎನ್ ಎಲ್ ಬಳಕೆದಾರರು ಶೀಘ್ರದಲ್ಲೇ 4ಜಿ ಸೇವೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಯಾಕೆಂದರೆ ಎಂಟಿಎನ್‌ಎಲ್ ಬಿಎಸ್‌ಎನ್‌ಎಲ್ ನ 4ಜಿ ಮೂಲಸೌಕರ್ಯವನ್ನು ಬಳಸುತ್ತಿದೆ.

Continue Reading

ತಂತ್ರಜ್ಞಾನ

Independence Day 2024: ವಾಟ್ಸ್‌ಆಪ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸ್ಟಿಕ್ಕರ್‌, ಮೆಸೆಜ್‌, ಇಮೇಜ್‌ ಪಡೆಯುವುದು ಹೇಗೆ?

ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ (Independence day 2024) ವಾಟ್ಸ್ ಆಪ್ ಮೂಲಕ ಸ್ನೇಹಿತರು, ಬಂಧುಗಳಿಗೆ ಶುಭ ಹಾರೈಸಿ. ಇದಕ್ಕಾಗಿ ಸ್ಟಿಕ್ಕರ್‌, ಸಂದೇಶ ಅಥವಾ ಚಿತ್ರಗಳನ್ನು ಎಲ್ಲಿಂದ, ಹೇಗೆ ಪಡೆಯಬಹುದು ಎನ್ನುವ ಕುರಿತ ಮಾಹಿತಿ ಇಲ್ಲಿದೆ. ಇದನ್ನು ಬಳಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಸ್ನೇಹಿತರು ಮತ್ತು ಬಂಧುಗಳೊಂದಿಗೆ ಹಂಚಿಕೊಳ್ಳಿ.

VISTARANEWS.COM


on

By

Independence day 2024

ಭಾರತದ 78ನೇ ಸ್ವಾತಂತ್ರ್ಯ ದಿನದ (Independence day 2024) ಸಂಭ್ರಮ ಈಗಾಗಲೇ ಎಲ್ಲೆಲ್ಲೂ ರಂಗು ತುಂಬಲಾರಂಭಿಸಿದೆ. ಆಗಸ್ಟ್ 15ರಂದು ಇದರ ಆಚರಣೆಗೆ ಸಜ್ಜಾಗುತ್ತಿರುವ ಅನೇಕರು ಈ ಮಹತ್ವದ ದಿನದ ಸಂತೋಷವನ್ನು (joy of this significant day) ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಲು ವಿವಿಧ ದಾರಿಗಳನ್ನು ಹುಡುಕುತ್ತಿರುತ್ತಾರೆ. ಈ ಬಾರಿ ವಿಶೇಷವಾಗಿ ವಾಟ್ಸ್ ಆಪ್ (whatsapp) ಸ್ಟಿಕ್ಕರ್‌ಗಳು, ಶುಭಾಶಯ ಸಂದೇಶಗಳ ಮೂಲಕ ಸ್ವಾತಂತ್ರ್ಯ ದಿನಕ್ಕೆ ಶುಭಾಶಯಗಳನ್ನು ಕೋರಬಹುದು. ವಾಟ್ಸ್ ಆಪ್ ಸ್ಟಿಕ್ಕರ್‌ , ಮೆಸೆಜ್‌ ಮತ್ತು ಚಿತ್ರಗಳ ಬಳಕೆ ಸೇರಿದಂತೆ ಡಿಜಿಟಲ್ ವಿಧಾನಗಳ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಹೇಗೆ ಹೆಚ್ಚಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.

ವಾಟ್ಸ್‌ಆಪ್ ಸ್ಟಿಕ್ಕರ್‌ಗಳು

ಶುಭಾಶಯಗಳನ್ನು ಹಂಚಿಕೊಳ್ಳಲು ಆಧುನಿಕ ಮಾರ್ಗವಾಗಿರುವ ವಾಟ್ಸ್ ಆಪ್ ಸ್ಟಿಕ್ಕರ್‌ಗಳು ಶೀಘ್ರವಾಗಿ ಶುಭಾಶಯಗಳನ್ನು ಕಳುಹಿಸಲು ಅನುಕೂಲಕರವಾದ ಮಾರ್ಗವಾಗಿದೆ. ವಾಟ್ಸ್ ಆಪ್‌ನಲ್ಲಿ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.

Google Play Store ಅಥವಾ Apple ಆಪ್ ಸ್ಟೋರ್‌ನಲ್ಲಿ “Sticker.ly” ಅಥವಾ “ಭಾರತೀಯ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳು” (indian independence day stickers)ನಂತಹ ಅಪ್ಲಿಕೇಶನ್‌ ಅನ್ನು ಹುಡುಕಿ. ಈ ಅಪ್ಲಿಕೇಶನ್‌ಗಳು ವಿವಿಧ ಸ್ವಾತಂತ್ರ್ಯ ದಿನದ ವಿಷಯದ ಸ್ಟಿಕ್ಕರ್ ಪ್ಯಾಕ್‌ಗಳನ್ನು ನೀಡುತ್ತವೆ.

ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿ ತೆರೆಯಿರಿ. ಬಳಿಕ ಅದರಲ್ಲಿ ನೀವು ಇಷ್ಟಪಡುವ ಸ್ಟಿಕ್ಕರ್ ಅನ್ನು ಆಯ್ಕೆ ಮಾಡಿ ಮತ್ತು ವಾಟ್ಸ್ ಆಪ್‌ಗೆ ಸೇರಿಸಲು ಟ್ಯಾಪ್ ಮಾಡಿ. ಇದು ವಾಟ್ಸ್ ಆಪ್ ಖಾತೆಗೆ ಸ್ಟಿಕ್ಕರ್‌ಗಳನ್ನು ಸಂಯೋಜಿಸುತ್ತದೆ. ಬಳಿಕ ವಾಟ್ಸ್ ಆಪ್‌ನಲ್ಲಿ ಯಾವುದೇ ಚಾಟ್ ತೆರೆಯಿರಿ. ಎಮೋಜಿ ಐಕಾನ್ ಮೇಲೆ ಟ್ಯಾಪ್ ಮಾಡಿ ಸ್ಟಿಕ್ಕರ್ ಟ್ಯಾಬ್ ಆಯ್ಕೆ ಮಾಡಿ. ಇಲ್ಲಿ ಹೊಸದಾಗಿ ಸೇರಿಸಲಾದ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳನ್ನು ಕಾಣಬಹುದು ಮತ್ತು ಅದನ್ನು ಹಂಚಿಕೊಳ್ಳಬಹುದು.


ಶುಭಾಶಯ ಸಂದೇಶ

ಸ್ಟಿಕ್ಕರ್‌ಗಳ ಹೊರತಾಗಿ ಪ್ರೀತಿಪಾತ್ರರಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಅಥವಾ ಸಂದೇಶಗಳನ್ನೂ ಕಳುಹಿಸಬಹುದು. ಪಠ್ಯ, ಚಿತ್ರ ಮತ್ತು ಜಿಫ್‌ಗಳೊಂದಿಗೆ ಸಂದೇಶಗಳನ್ನು ಕಳುಹಿಸಲು ವಾಟ್ಸ್ ಆಪ್ ಅನುಮತಿ ನೀಡುತ್ತದೆ.

ಜಿಫ್ ಹುಡುಕಲು ವಾಟ್ಸ್ ಆಪ್ ತೆರೆಯಿರಿ. ಯಾವುದೇ ಸಂಪರ್ಕದೊಂದಿಗೆ ಚಾಟ್ ಪ್ರಾರಂಭಿಸಿ. ಎಮೋಜಿ ವಿಭಾಗದ ಪರದೆಯ ಕೆಳಗಿನ ಎಡಭಾಗದಲ್ಲಿರುವ ಎಮೋಜಿ ಐಕಾನ್ ಅನ್ನು ಟ್ಯಾಪ್ ಮಾಡಿ ಜಿಫ್ ಅನ್ನು ಆಯ್ಕೆ ಮಾಡಿ. ಜಿಫ್ ವಿಭಾಗದಲ್ಲಿ “ಸ್ವಾತಂತ್ರ್ಯ ದಿನ” ಜಿಫ್‌ಗಳನ್ನು ಹುಡುಕಲು ಹುಡುಕಾಟ ಪಟ್ಟಿಯನ್ನು ಬಳಸಿ. ನಿಮಗೆ ಇಷ್ಟವಾಗುವ ಜಿಫ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಒಂದೇ ಟ್ಯಾಪ್‌ನಲ್ಲಿ ಕಳುಹಿಸಿ.

Independence day 2024


ಚಿತ್ರಗಳು

ಚಿತ್ರ ಅಥವಾ ವೆಕ್ಟರ್ ಕಲೆಯನ್ನು ಹಂಚಿಕೊಳ್ಳಲು ಆದ್ಯತೆ ನೀಡುವವರಿಗೆ ಹಲವಾರು ಆಯ್ಕೆಗಳು ಲಭ್ಯವಿದೆ. ಆನ್‌ಲೈನ್‌ನಲ್ಲಿ ತ್ವರಿತ ಹುಡುಕಾಟ ನಡೆಸುವ ಮೂಲಕ ಉತ್ತಮ ಗುಣಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಚಿತ್ರಗಳನ್ನು ಪಡೆಯಬಹುದು.

ಇದನ್ನೂ ಓದಿ: Independence day 2024: ಕೆಂಪು ಕೋಟೆ ಮೇಲೆ ಭಾಷಣ; ನೆಹರೂ, ಇಂದಿರಾ ಬಳಿಕ ಮೋದಿ ಹೊಸ ದಾಖಲೆ!

ಅನೇಕ ವೆಬ್‌ಸೈಟ್‌ಗಳು ದೇಶಭಕ್ತಿಯ ಚಿತ್ರಗಳ ಉಚಿತ ಡೌನ್‌ಲೋಡ್‌ಗಳಿಗೆ ಅನುಮತಿ ನೀಡುತ್ತವೆ. ಅಲ್ಲದೇ ‘Canva’ ಮತ್ತು ‘Pixabay’ ನಂತಹ ಅಪ್ಲಿಕೇಶನ್‌ಗಳು ವಾಟ್ಸಾಪ್ ಅಥವಾ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ನೇರವಾಗಿ ಹಂಚಿಕೊಳ್ಳಬಹುದಾದ ಸ್ವಾತಂತ್ರ್ಯ ದಿನದ ಚಿತ್ರಗಳು ಮತ್ತು ವೆಕ್ಟರ್ ಕಲೆಯನ್ನು ಒದಗಿಸುತ್ತವೆ.

Continue Reading
Advertisement
Latest15 hours ago

ಇತಿಹಾಸ ಬರೆಯಲು ಸಜ್ಜಾದ ರನ್ ಮಷೀನ್: ಐಪಿಎಲ್ ಕ್ರಿಕೆಟ್‌ನಲ್ಲಿ ಕೊಹ್ಲಿ ಹೊಸ ರೆಕಾರ್ಡ್‌

Latest15 hours ago

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ನ್ಯಾಯಾಲಯ

Latest16 hours ago

ಪಾಕಿಸ್ತಾನಕ್ಕೆ ಮತ್ತೊಂದು ಆರ್ಥಿಕ ಪೆಟ್ಟು: 3.5 ಬಿಲಿಯನ್ ಡಾಲರ್ ಸಾಲ ಮರುಪಾವತಿಗೆ ಯುಎಇ ಸೂಚನೆ

ಸಿನಿಮಾ17 hours ago

ಎಲೆಕ್ಷನ್ ಮುಗಿದರೂ ಮುಗಿಯದ ದಳಪತಿ ಆಸ್ತಿ ಸಂಘರ್ಷ: ಹೆಂಡತಿಗೆ ಕೊಟ್ಟ 12 ಕೋಟಿ ಸಾಲದ ರಹಸ್ಯವೇನು?

Latest17 hours ago

ಹರಿಹರ ಪೀಠದಲ್ಲಿ ಲೆಕ್ಕ ಸಮರ: ವಚನಾನಂದ ಶ್ರೀ, ಟ್ರಸ್ಟಿಗಳ ನಡುವೆ ಆರೋಪ-ಪ್ರತ್ಯಾರೋಪ.

Latest18 hours ago

RCB v/s GT ಪಂದ್ಯದ ವೇಳೆ ಭದ್ರತಾ ವೈಫಲ್ಯ: 240 ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿದ್ದೇಕೆ? ಹೊರಬಿತ್ತು ಶಾಕಿಂಗ್‌ ಸತ್ಯ!

Latest19 hours ago

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ: ಮೇ 1ರಿಂದ ಬದಲಾಗಲಿವೆ ಎಲ್‌ಪಿಜಿ ನಿಯಮಗಳು

Latest21 hours ago

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

ಕರ್ನಾಟಕ22 hours ago

ಡಿಕೆಶಿ ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ? ಸತೀಶ್ ಜಾರಕಿಹೊಳಿ ನೀಡಿದ ಆ ಗೊಂದಲದ ಹೇಳಿಕೆಯಲ್ಲಿದೆಯೇ ದೊಡ್ಡ ಸುಳಿವು

Latest22 hours ago

ಇರಾನ್‌ನಿಂದ ಹೊಸ ಶಾಂತಿ ಸಂಧಾನ: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಷರತ್ತುಬದ್ಧ ಪ್ರಸ್ತಾವನೆ ಸಲ್ಲಿಕೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌