Clubhouse: ಮಾತಿನ ಮನೆ ಮೌನವಾಯಿತೇಕೆ? - Vistara News

ತಂತ್ರಜ್ಞಾನ

Clubhouse: ಮಾತಿನ ಮನೆ ಮೌನವಾಯಿತೇಕೆ?

ಮಾತಿನ ಮನೆ ಎಂದೇ ಜನಪ್ರಿಯಗೊಂಡ Clubhouse ಆ್ಯಪ್‌ ಜನಪ್ರಿಯತೆ ಇದ್ದಕ್ಕಿದ್ದಂತೆ ಏರಿತು. ಅಷ್ಟೇ ಬೇಗನೆ ಕುಸಿಯಿತು. ಏರಿದ್ದೇಕೆ? ಇಳಿದದ್ದೇಕೆ?

VISTARANEWS.COM


on

clubhouse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒಂದು ವರ್ಷದ ಹಿಂದೆ ಎಲ್ಲಿ ನೋಡಿದರೂ ಕ್ಲಬ್‌ಹೌಸ್‌ ಆ್ಯಪ್‌ನದೇ ಮಾತು. ಎಲ್ಲರೂ ಅದರಲ್ಲಿ ಮಾತನಾಡುವವರೇ. ಇದ್ದಕ್ಕಿದ್ದಂತೆ ಎಲ್ಲಿ ಹೋಯಿತು ಕ್ಲಬ್‌ಹೌಸ್?‌

ಭರ್ತಿ ಒಂದು ವರ್ಷದ ಹಿಂದೆ ಕ್ಲಬ್‌ಹೌಸ್‌ ಎಂಬ ಆ್ಯಪ್‌ ಎಲ್ಲರ ಸ್ಮಾರ್ಟ್‌ಫೋನ್‌ಗಳಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯಿತು. ಎಲ್ಲರೂ ಅದರಲ್ಲಿ ಮಾತನಾಡಲು, ಅವರಿವರ ಮಾತುಗಳನ್ನು ಕೇಳಿಸಿಕೊಳ್ಳಲು ಹಾತೊರೆಯತೊಡಗಿದರು. ಮುಖದ ಮೇಲಿನ ಭಾವ ತೋರಿಸುವ ಅನಿವಾರ್ಯ ಇಲ್ಲದೆ, ಬೆಡ್‌ರೂಮ್-‌ ಅಡುಗೆಮನೆಯಲ್ಲೂ ಇದ್ದುಕೊಂಡು ನೂರಾರು ಮಂದಿಗಾಗಿ ಲೈವ್ ಮಾತನಾಡಬಹುದಾದ ಈ ಆ್ಯಪ್‌ ಎಲ್ಲರ ಗಮನ ಸೆಳೆದಿದ್ದರಲ್ಲಿ ಆಶ್ಚರ್ಯವಿಲ್ಲ.

ಆದರೆ ಇದು ಕೆಲವೇ ತಿಂಗಳು. ಅಂದು ಜನಪ್ರಿಯ ಮಾತುಗಾರರಾಗಿ ಇದ್ದವರಲ್ಲಿ ಇಂದು ನೀವು ʼʼನೀವು ಈಗ ಕ್ಲಬ್‌ಹೌಸ್‌ನಲ್ಲಿ ಇದ್ದೀರಾ?ʼʼ ಎಂದು ಕೇಳಿ ನೋಡಿ. ʼʼನಾನೀಗ ಇಲ್ಲʼʼ ಎಂಬುದೇ ಹೆಚ್ಚಿನವರ ಉತ್ತರ. ಯಾಕೆ ಹೀಗಾಯಿತು? ಎಲ್ಲರೂ ಎಲ್ಲಿಗೆ ಹೋದರು?

ಯಾರೂ ಎಲ್ಲಿಗೂ ಹೋಗಿಲ್ಲ. ಕ್ಲಬ್‌ಹೌಸ್‌ ಮೇಲಿನ ಆಕರ್ಷಣೆ ಕಡಿಮೆಯಾಗಿದೆ ಎಂಬುದು ಒಂದು ಕಾರಣ; ತನ್ನ ಜನಪ್ರಿಯತೆಯನ್ನು ಮುಂದಿನ ಹಂತಕ್ಕೆ ಏರಿಸಲು ಅಗತ್ಯವಾದ ಕ್ರಮಗಳನ್ನು ಕ್ಲಬ್‌ಹೌಸ್‌ ಕೈಗೊಳ್ಳಲಿಲ್ಲ ಎಂಬುದು ಇನ್ನೊಂದು ಕಾರಣ. 2021ರ ಫೆಬ್ರವರಿ ಕ್ಲಬ್‌ಹೌಸ್‌ನ ಉತ್ಕರ್ಷದ ಕಾಲ. ಆ ತಿಂಗಳಲ್ಲಿ ಆ್ಯಪ್‌ 96 ಲಕ್ಷ ಡೌನ್‌ಲೋಡ್‌ ಕಂಡಿತ್ತು. ಆದರೆ ಏಪ್ರಿಲ್‌ ತಿಂಗಳಿಗೆ ಅದು 9.22 ಲಕ್ಷಗಳಿಗೆ ಇಳಿಯಿತು. ಇದು Sensor Tower ಎಂಬ ಆ್ಯಪ್‌ ವಿಶ್ಲೇಷಣೆ ತಾಣ ನೀಡಿದ ಮಾಹಿತಿ.

ಇದನ್ನೂ ಓದಿ: ಫೇಸ್‌ಬುಕ್‌, ಟ್ವಿಟರ್‌ ಇತ್ಯಾದಿ ಜಾಲ ತಾಣಗಳ ನಿಯಂತ್ರಣಕ್ಕೆ ಹೆಚ್ಚಿನ ಅಧಿಕಾರ ಬಯಸಿದ ಕೇಂದ್ರ

ಹಾಗಿದ್ದರೆ ಕ್ಲಬ್‌ಹೌಸ್‌ ಜನಪ್ರಿಯತೆ ಇಳಿದದ್ದೇಕೆ?

ಕ್ಲಬ್‌ಹೌಸ್‌ ಜನಿಸಿ ಮೇಲಕ್ಕೇರಿದ ಸಂದರ್ಭ ವಿಶಿಷ್ಟವಾದದ್ದು. ಆಗ ಎಲ್ಲೆಡೆ ಕೋರೊನಾ ವೈರಸ್‌ ವ್ಯಾಪಿಸಿ, ಹೆಚ್ಚಿನ ಕಡೆ ನಾನಾ ಬಗೆಯ ಲಾಕ್‌ಡೌನ್‌ಗಳು ಆವರಿಸಿದ್ದವು. ಈ ಸಂದರ್ಭದಲ್ಲಿ ಕಾಣಿಸಿಕೊಂಡ ಕ್ಲಬ್‌ಹೌಸ್-‌ ಎಲ್ಲರ ಜತೆ ಮಾತನಾಡಬಲ್ಲ ರಿಯಲ್‌ ಟೈಮ್‌ ಆ್ಯಪ್‌ ಆಗಿ ಜನಪ್ರಿಯವಾಯಿತು. ಇಂಥದೇ ಇತರ ಆಡಿಯೋ ಆ್ಯಪ್‌ಗಳು ಇದರ ಜೊತೆಗೇ ಹುಟ್ಟಿಕೊಂಡು, ತಾವೂ ಜನಪ್ರಿಯವಾಗುವತ್ತ ಹೆಜ್ಜೆ ಇಟ್ಟವು. ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ ಕೂಡ ಇಂಥದೇ ಆ್ಯಪ್‌ ಸೃಷ್ಟಿಸಿದವು. ಕ್ಷಿಪ್ರ ಕಾಲದಲ್ಲಿ ಇದು 110  ದಶಲಕ್ಷ ಡಾಲರ್‌ ಒಟ್ಟುಹಾಕಿತು.

ಕಾಲಕ್ರಮೇಣ ಲಾಕ್‌ಡೌನ್‌ಗಳು ಇಳಿದು, ಜನ ಪರಸ್ಪರ ಒಡನಾಡುತ್ತಿರುವಂತೆ, ಝೂಮ್‌ನಂಥ ವಿಡಿಯೋ ಮೀಟಿಂಗ್‌ ಆ್ಯಪ್‌ಗಳ ಅಗತ್ಯ ಕುಸಿದಂತೆ, ಕ್ಲಬ್‌ಹೌಸ್‌ನ ಅಗತ್ಯವೂ ಕುಸಿದಿದೆ. ಹಾಗೇ ಫೇಸ್‌ಬುಕ್‌- ಟ್ವಿಟ್ಟರ್‌ ಮುಂತಾದ ತಾಣಗಳ ಆಡಿಯೋ ಆ್ಯಪ್‌ಗಳೂ ಸಾಕಷ್ಟು ಪೈಪೋಟಿ ನೀಡಿದವು. ಇಲ್ಲಿದ್ದವರು ಇತರ ಕಡೆಗಳಿಗೂ ಹಂಚಿಹೋದರು.

ಕ್ಲಬ್‌ಹೌಸ್‌ ಸ್ವತಃ ಆ್ಯಪ್‌ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಲಿಲ್ಲ. ಬ್ಯಾಕ್‌ಚಾನೆಲ್‌ನಂಥ ಕೆಲವು ಹೊಸ ಫೀಚರ್‌ಗಳನ್ನು ಅದು ಪರಿಚಯಿಸಿತು. ಆದರೆ ಅನಿರೀಕ್ಷಿತವಾದ, ಅಚ್ಚರಿದಾಯಕ ಬೆಳವಣಿಗೆಗಳೇನೂ ಆಗಲಿಲ್ಲ.

ಮೂರನೆಯದಾಗಿ, ಜನರಿಗೂ ಬಹುಶಃ ಈ ಆ್ಯಪ್‌ಗಳಲ್ಲಿ ಆಗುವ ಸಮಯದ ಪೋಲು ಅರ್ಥವಾದಂತಿದೆ. ಅಂದರೆ, ಒಂದು ಚಾಟ್‌ರೂಮ್‌ ಆರಂಭಿಸಿದರೆ, ಕನಿಷ್ಠ ಒಂದು ಗಂಟೆಯಾದರೂ ಅಲ್ಲಿರಬೇಕು. ಅಗತ್ಯ ಮಾತುಗಳ ಜತೆ ಅನಗತ್ಯವಾದುದನ್ನೂ, ಆಕರ್ಷಕ ಮಾತುಗಳ ಜೊತೆ ಬೋರಿಂಗ್‌ ಆಗಿ ಮಾತನಾಡುವವರನ್ನೂ ಸಹಿಸಿಕೊಳ್ಳಬೇಕು. ಇದು ಕೂಡ ಜನರನ್ನು ಆ್ಯಪ್‌ನಿಂದ ದೂರ ಸರಿಸಿತು. ಕ್ಲಬ್‌ಹೌಸ್‌ ಮರಳಿ ಪುಟಿದೆದ್ದು ಬರಬಾರದು ಎಂದೇನಿಲ್ಲ. ಹೊಸ ಹೊಸ ಫೀಚರ್‌ಗಳೊಂದಿಗೆ ಅದು ಮರಳುವ, ಮತ್ತಷ್ಟು ಜನಪ್ರಿಯವಾಗುವ ಸಾಧ್ಯತೆಗಳು ಇದ್ದೇ ಇವೆ. ಆದರೆ ಇನ್ನಷ್ಟು ವೃತ್ತಿಪರವಾದ, ಆಕರ್ಷಕ ಸಂಗತಿಗಳು ಖಂಡಿತ ಅಗತ್ಯ.

ಇದನ್ನೂ ಓದಿ: ಸರ್ಕಾರಿ ಸೇವಾ ನಿವೃತ್ತಿ ನಂತರ ಅನಗತ್ಯ ಅಲೆದಾಟಕ್ಕೆ ಬ್ರೇಕ್;‌ ತ್ವರಿತ ಸೌಲಭ್ಯಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

WhatsApp Update: ವಾಟ್ಸ್ ಆಪ್ ಬಳಕೆದಾರರಿಗೆ ಸಂತಸದ ಸುದ್ದಿ; ಮೆಸೆಜ್‌ಗೆ ಸಂಬಂಧಿಸಿ ಮಹತ್ವದ ಅಪ್‌ಡೇಟ್‌!

ತಾವು ಇತರರಿಗೆ ಕಳುಹಿಸುವ ಸಂದೇಶ ಗೌಪ್ಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ಇದೀಗ ವಾಟ್ಸ್ ಆಪ್ ನಲ್ಲಿ ಹೊಸ ಆಯ್ಕೆ (WhatsApp Update) ಸಿಗಲಿದೆ. ಮೆಟಾ ಕಂಪೆನಿಯು ವಾಟ್ಸ್ ಆಪ್ ಚಾಟ್‌ಗಳ ಮೇಲೆ ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡಲು ವಿನ್ಯಾಸಗೊಳಿಸಲಾದ ಹೊಸ ಭದ್ರತಾ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದ್ದು, ಇದು ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ. ಇದರ ವಿಶೇಷತೆಗಳ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

WhatsApp Update
Koo

ಎಲ್ಲರೂ ತಾವು ಇನ್ನೊಬ್ಬರಿಗೆ ಕಳುಹಿಸುವ ಸಂದೇಶಗಳು ಗೌಪ್ಯವಾಗಿರಬೇಕು ಎಂದು ಬಯಸುತ್ತಾರೆ. ಈ ನಿಟ್ಟಿನಲ್ಲಿ ಈಗ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಒಂದು ಸಂತಸದ ಸುದ್ದಿಯನ್ನು ನೀಡಿದೆ. ಇದೀಗ ವಾಟ್ಸ್ ಆಪ್‌ನಲ್ಲಿ (WhatsApp Update) ಮೆಟಾ (meta) ಕಂಪನಿಯು ಬಳಕೆದಾರರ ಚಾಟ್‌ಗಳ (chat) ಮೇಲೆ ಅವರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡಲು ಹೊಸ ಭದ್ರತಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಅಂದರೆ ಒಂದು ವೇಳೆ ನಿಮ್ಮ ಮೊಬೈಲ್‌ ಫೋನ್‌ ಬೇರೆಯವರ ಕೈ ಸೇರಿದರೂ ನೀವು ವಾಟ್ಸ್‌ ಆಪ್‌ನಲ್ಲಿ ಮಾಡಿರುವ ಕೆಲವು ಮುಖ್ಯ, ಸೂಕ್ಷ್ಮ ಮತ್ತು ರಹಸ್ಯ ಮೆಸೆಜ್‌ಗಳನ್ನು ಬೇರೆಯವರು ನೋಡದಂತೆ ಲಾಕ್‌ ಮಾಡಿ ಇಡಬಹುದು!

ವಾಟ್ಸ್ ಆಪ್‌ನಲ್ಲಿ “ಚಾಟ್ ಲಾಕ್” ವೈಶಿಷ್ಟ್ಯವನ್ನು ಪ್ರಸ್ತುತ ಆಂಡ್ರಾಯ್ಡ್ ಬೀಟಾ ಬಳಕೆದಾರರು ಪರೀಕ್ಷಿಸುತ್ತಿದ್ದು, ಇದು ಸೂಕ್ಷ್ಮ ಸಂವಾದಗಳಿಗೆ ಹೆಚ್ಚು ಭದ್ರತೆಯನ್ನು ನೀಡುತ್ತದೆ. ವಾಬೀಟಾಇನ್ಫೋ ಈ ವೈಶಿಷ್ಟ್ಯವನ್ನು ಪರಿಶೀಲನೆ ನಡೆಸಿದ್ದು, ಆಂಡ್ರಾಯ್ಡ್ 2.24.8.4 ಅಪ್‌ಡೇಟ್‌ಗಾಗಿ ವಾಟ್ಸ್ ಆಪ್ ಬೀಟಾ ಕುರಿತು ಲಿಂಕ್ ಮಾಡಲಾದ ಸಾಧನಗಳಿಗಾಗಿ ವಾಟ್ಸ್ ಆಪ್ ಲಾಕ್ ಚಾಟ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಘೋಷಿಸಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಹೆಚ್ಚುವರಿ ಭದ್ರತೆ ನೀಡಲು ವಿನ್ಯಾಸಗೊಳಿಸಲಾಗಿದೆ. ಅವರ ಸಂವಾದಗಳಿಗೆ ಗೌಪ್ಯತೆಯ, ಅವರ ಸಂವೇದನಾಶೀಲ ಚಾಟ್‌ಗಳನ್ನು ಅವರ ಲಿಂಕ್ ಮಾಡಲಾದ ಸಾಧನಗಳಲ್ಲಿ ರಕ್ಷಿಸಲಾಗಿದೆ ಎಂಬುದನ್ನು ಖಚಿತಪಡಿಸುತ್ತದೆ.

ಆಯ್ದ ಬಳಕೆದಾರರೊಂದಿಗೆ ವಾಟ್ಸ್ ಆಪ್ ನ ಈ ವೈಶಿಷ್ಟ್ಯದ ಅಂತಿಮ ಹಂತದ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಮುಂಬರುವ ವಾರಗಳಲ್ಲಿ ಇದು ಬಿಡುಗಡೆಯಾಗುವ ಸಾಧ್ಯತೆ ಇದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ 2.24.11.9 ನವೀಕರಣಕ್ಕಾಗಿ ಲಭ್ಯವಾಗಲಿದೆ. ವಾಟ್ಸ್ ಆಪ್‌ಗೆ ಈಗ ಲಿಂಕ್ ಮಾಡಲಾದ ಸಾಧನಗಳಿಂದ ಚಾಟ್‌ಗಳನ್ನು ಲಾಕ್ ಮಾಡುವ ಸಾಮರ್ಥ್ಯವನ್ನು ಹೊರತರುತ್ತಿದೆ ಎಂದು ವಾಬೀಟಾಇನ್ಫೋ ಹೇಳಿದೆ.


ಇದರ ವೈಶಿಷ್ಟ್ಯವೇನು?

ಹಿಂದೆ ವಾಟ್ಸ್ ಆಪ್ ಸಂಪೂರ್ಣ ಅಪ್ಲಿಕೇಶನ್‌ಗೆ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಲಾಕ್ ಮಾಡಬಹುದಿತ್ತು. ಇದರಿಂದ ಯಾರಾದರೂ ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಿದರೂ ಸಹ ಹೆಚ್ಚುವರಿ ಭದ್ರತೆ ಹಂತವಿಲ್ಲದೆ ಅವರು ನೇರವಾಗಿ ವಾಟ್ಸ್ ಆಪ್ ಸಂದೇಶಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಚಾಟ್ ಲಾಕ್ ವೈಶಿಷ್ಟ್ಯವು ಇದರ ಒಂದು ಹೆಜ್ಜೆ ಮುಂದಿನದ್ದಾಗಿದೆ.

ಹೊಸ ವೈಶಿಷ್ಟ್ಯ ವಿರುವ ಅಪ್ಲಿಕೇಶನ್‌ನಲ್ಲಿ ನಿರ್ದಿಷ್ಟ ಚಾಟ್‌ಗಳನ್ನು ಮಾತ್ರ ಲಾಕ್ ಮಾಡಬಹುದು. ಇದಕ್ಕೆ ವಿಶಿಷ್ಟವಾದ ಪಿನ್ ರಚಿಸುವ ಅಗತ್ಯವಿದೆ ಅಥವಾ ಆ ನಿರ್ದಿಷ್ಟ ಸಂಭಾಷಣೆಗಳನ್ನು ಪ್ರವೇಶಿಸಲು ಫಿಂಗರ್‌ಪ್ರಿಂಟ್/ ಫೇಸ್ ಅನ್‌ಲಾಕ್ ಬಳಸುವ ಅಗತ್ಯವಿದೆ. ನಿಮ್ಮ ಫೋನ್ ಅನ್‌ಲಾಕ್ ಆಗಿದ್ದರೂ ಮತ್ತು ಯಾರಾದರೂ ವಾಟ್ಸ್ ಆಪ್ ಗೆ ಪ್ರವೇಶವನ್ನು ಹೊಂದಿದ್ದರೂ ಅವರು ನಿಮ್ಮ ಲಾಕ್ ಮಾಡಿದ ಚಾಟ್‌ಗಳ ವಿಷಯವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.
ಪ್ರಯೋಜನಗಳೇನು?

ಹೆಚ್ಚಿನ ಗೌಪ್ಯತೆ

ಫೋನ್ ಅನ್ನು ಯಾರಿಗಾದರೂ ಹಸ್ತಾಂತರಿಸುವ ಸಂದರ್ಭದಲ್ಲಿ ಖಾಸಗಿ ಚಾಟ್‌ಗಳನ್ನು ಮೊದಲೇ ಮರೆಮಾಡಿ ಇಡಬಹುದು.

ಆಕಸ್ಮಿಕ ಸಂದೇಶ

ಆಕಸ್ಮಿಕವಾಗಿ ಬೇರೆಯವರಿಗೆ ಸಂದೇಶವನ್ನು ಕಳುಹಿಸದಂತೆ ಚಾಟ್‌ಗಳನ್ನು ಲಾಕ್ ಮಾಡಬಹುದು. ಇದರಿಂದ ಸಂದೇಶಗಳನ್ನು ಕಳುಹಿಸುವ ಮೊದಲು ಪಿನ್ ಅನ್‌ಲಾಕ್ ಮಾಡಬೇಕಾಗುತ್ತದೆ.

ಮನಸ್ಸು ನಿರಾಳ!

ಲಾಕ್ ಮಾಡಿದ ಚಾಟ್ ವೈಶಿಷ್ಟ್ಯವು ಹೆಚ್ಚಿನ ಭದ್ರತೆ ಸಿಗುವುದರಿಂದ ನಿಮ್ಮ ಅತ್ಯಂತ ಸೂಕ್ಷ್ಮ ಸಂಭಾಷಣೆಗಳನ್ನು ರಕ್ಷಿಸಲಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ಇರುವುದು.

ಅಪಾಯ ಕಡಿಮೆ

ವಾಟ್ಸ್ ಆಪ್ ಲಿಂಕ್ ಇರುವ ಸಾಧನಗಳಲ್ಲಿ ಈ ವೈಶಿಷ್ಟ್ಯವನ್ನು ಅಳವಡಿಸುವುದರಿಂದ ಗೌಪ್ಯತೆ ಮತ್ತು ಬಳಕೆದಾರರ ಅನುಕೂಲತೆ ಎರಡನ್ನೂ ಇನ್ನಷ್ಟು ಹೆಚ್ಚಿಸುತ್ತದೆ. ಬಳಕೆದಾರರು ತಮ್ಮ ಸಂರಕ್ಷಿತ ಸಂಭಾಷಣೆಗಳನ್ನು ಚಾಟ್‌ಗಳ ಪಟ್ಟಿಯಿಂದ ಪ್ರತ್ಯೇಕಿಸಲು ಅನುಮತಿಸುವ ಮೂಲಕ, ವಾಟ್ಸ್ ಆಪ್ ಹೆಚ್ಚಿನ ಮಟ್ಟದ ಗೌಪ್ಯತೆಯನ್ನು ಖಾತ್ರಿಗೊಳಿಸುತ್ತದೆ ಮತ್ತು ಆಕಸ್ಮಿಕವಾಗಿ ಬೇರೆಯವರಿಗೆ ಸಂದೇಶ ತಪ್ಪಿ ಕಳುಹಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.

ರಹಸ್ಯ ಕೋಡ್ ಅನ್ನು ಹೊಂದಿಸುವ ಮೂಲಕ ಲಾಕ್ ಮಾಡಿದ ಚಾಟ್‌ಗಳನ್ನು ಒಂದೆಡೆ ಸ್ಥಿರವಾಗಿ ಇಡಬಹುದು. ಲಾಕ್ ಚಾಟ್‌ಗಳ ಬೆಂಬಲದಿಂದ ಬಳಕೆದಾರರು ತಮ್ಮ ಮೊಬೈಲ್ ಸಾಧನಗಳಲ್ಲಿ ಗೂಢಾಚಾರಿಕೆಯ ಕಣ್ಣುಗಳಿಂದ ಯಾವಾಗಲೂ ತಮ್ಮ ಸೂಕ್ಷ್ಮ ಸಂಭಾಷಣೆಗಳನ್ನು ಮರೆಮಾಚಬಹುದು.

ಇದನ್ನೂ ಓದಿ: Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

ಯಾವಾಗ ಲಭ್ಯವಾಗುವುದು?

ಪ್ರಸ್ತುತ ಲಾಕ್ಡ್ ಚಾಟ್ಸ್ ವೈಶಿಷ್ಟ್ಯವು ವಾಟ್ಸ್ ಆಪ್ ಆವೃತ್ತಿ 2.24.11.9 ಅನ್ನು ಬಳಸುವ ಸೀಮಿತ ಸಂಖ್ಯೆಯ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ವರದಿಗಳ ಆಧಾರದ ಮೇಲೆ, ಮುಂಬರುವ ಕೆಲವು ವಾರಗಳಲ್ಲಿ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತು ಐಫೋನ್ ಬಳಕೆದಾರರಿಗೆ ಇದು ಲಭ್ಯವಾಗುವ ನಿರೀಕ್ಷೆ ಇದೆ.

ಲಾಕ್ಡ್ ಚಾಟ್ಸ್ ವೈಶಿಷ್ಟ್ಯವು ಬಳಕೆದಾರರ ಗೌಪ್ಯತೆಗೆ ವಾಟ್ಸ್ ಆಪ್ ನ ಬದ್ಧತೆಯನ್ನು ತೋರಿಸುತ್ತದೆ. ಚಾಟ್ ಭದ್ರತೆಯಿಂದ ಬಳಕೆದಾರರು ಹೆಚ್ಚು ಸುರಕ್ಷಿತ ಅನುಭವವನ್ನು ಪಡೆಯಬಹುದು.

Continue Reading

ಕರ್ನಾಟಕ

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

Meta: ಮೆಟಾ ಸಂಸ್ಥೆಯಿಂದ ಮಂಗಳವಾರ ಬೆಂಗಳೂರು ನಗರದಲ್ಲಿ 1ಎಂ1ಬಿ ಸಹಯೋಗದಲ್ಲಿ ‘ಟಾಕಿಂಗ್ ಡಿಜಿಟಲ್ ಸುರಕ್ಷಾ ಫಾರ್ ಟೀನ್ಸ್’(ಹದಿಹರೆಯದವರಿಗೆ ಡಿಜಿಟಲ್ ಸುರಕ್ಷಾ) ಕಾರ್ಯಕ್ರಮ ಜರುಗಿತು. ಆನ್‌ಲೈನ್ ಸುರಕ್ಷತೆಗಾಗಿ ಮೆಟಾದ ವಿಧಾನಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಲು ಮತ್ತು ಆನ್‌ಲೈನ್ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹದಿಹರೆಯದವರ ಯೋಗಕ್ಷೇಮವನ್ನು ಕಾಪಾಡುವಂತಹ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಈ ಪೋಷಕ- ಶಿಕ್ಷಕರ ಜಾಗೃತಿ ಕಾರ್ಯಕ್ರಮ ಜರುಗಿತು.

VISTARANEWS.COM


on

Talking Digital Safety for Teens programme by Meta in Bengaluru
Koo

ಬೆಂಗಳೂರು: ಯುವಜನರ ಯೋಗಕ್ಷೇಮದ ಕುರಿತು ಮೆಟಾ (Meta) ಸಂಸ್ಥೆಯಿಂದ ಮಂಗಳವಾರ ನಗರದಲ್ಲಿ 1ಎಂ1ಬಿ ಸಹಯೋಗದಲ್ಲಿ ‘ಟಾಕಿಂಗ್ ಡಿಜಿಟಲ್ ಸುರಕ್ಷಾ ಫಾರ್ ಟೀನ್ಸ್’ (ಹದಿಹರೆಯದವರಿಗೆ ಡಿಜಿಟಲ್ ಸುರಕ್ಷಾ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆನ್‌ಲೈನ್ ಸುರಕ್ಷತೆಗಾಗಿ ಮೆಟಾದ ವಿಧಾನಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಲು ಮತ್ತು ಆನ್‌ಲೈನ್ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹದಿಹರೆಯದವರ ಯೋಗಕ್ಷೇಮವನ್ನು ಕಾಪಾಡುವಂತಹ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಈ ಪೋಷಕ- ಶಿಕ್ಷಕರ ಜಾಗೃತಿ ಕಾರ್ಯಕ್ರಮ ಜರುಗಿತು. ಮೆಟಾದ ಪ್ಲಾಟ್ ಫಾರ್ಮ್‌ಗಳನ್ನು ಒಳಗೊಂಡಂತೆ ಹದಿಹರೆಯದ ಮಕ್ಕಳ ಸ್ಮಾರ್ಟ್‌ಫೋನ್‌ ಮತ್ತು ಸಾಧನಗಳ ಬಳಕೆಯನ್ನು ಆತ್ಮವಿಶ್ವಾಸದಿಂದ ನಿರ್ವಹಣೆ ಮಾಡಲು ಸಾಧ್ಯವಾಗುವಂತೆ ಪೋಷಕರನ್ನು ಸಜ್ಜುಗೊಳಿಸುವ ಅನೇಕ ವಿಧಾನಗಳನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ: Cauvery Dispute: ತಮಿಳುನಾಡಿಗೆ 2.5 ಟಿಎಂಸಿ ಕಾವೇರಿ ನೀರು ಹರಿಸಲು CWMA ಸೂಚನೆ

ಕಾರ್ಯಕ್ರಮದಲ್ಲಿ ಹದಿಹರೆಯದ ಮಕ್ಕಳ ಸಾಮಾಜಿಕ ಮಾಧ್ಯಮಗಳ ಬಳಕೆ ಮತ್ತು ಇತರ ಆನ್‌ಲೈನ್ ಟ್ರೆಂಡ್‌ಗಳ ಬಳಕೆ ಕುರಿತು ಪೋಷಕರು ಮತ್ತು ಶಿಕ್ಷಕರ ಒಳನೋಟಗಳನ್ನು ಈ ವೇಳೆ ಸಂಗ್ರಹಿಸಲಾಯಿತು. ಡಿಜಿಟಲ್ ಸುರಕ್ಷತಾ ಉಪಕ್ರಮಗಳ ಕುರಿತು ಹೆಚ್ಚು ತಿಳಿದುಕೊಳ್ಳಲು ಮತ್ತು ಅವರ ಹದಿಹರೆಯದ ಮಕ್ಕಳ ಸಾಮಾಜಿಕ ಜಾಲತಾಣಗಳ ಪ್ರಯಾಣದ ಅನುಭವಗಳ ಕುರಿತು ಚರ್ಚಿಸಲು ನಗರದ ಆಯ್ದ 10-15 ಶಾಲೆಗಳ ಆಯ್ದ ಶಿಕ್ಷಕರು ಮತ್ತು ಪೋಷಕರು ಪಾಲ್ಗೊಂಡಿದ್ದರು.

ಈ ವೇಳೆ ಇನ್‌ಸ್ಟಾಗ್ರಾಮ್‌ನ ಭಾರತದ ಸಾರ್ವಜನಿಕ ನೀತಿಯ ನಿರ್ದೇಶಕಿ ನತಾಶಾ ಜೋಗ್ ಮಾತನಾಡಿ, ನಮ್ಮ ಯುವ ಬಳಕೆದಾರರು ಆನ್‌ಲೈನ್‌ನಲ್ಲಿ ಅರ್ಥಪೂರ್ಣವಾಗಿ ಸಮಯವನ್ನು ಕಳೆಯುವುದರ ಜತೆಗೆ ವಿಶೇಷವಾಗಿ ಅವರು ಇಷ್ಟಪಡುವ ಎಲ್ಲಾ ಕೆಲಸಗಳನ್ನು ಮಾಡುತ್ತಲೇ ಸುರಕ್ಷಿತವಾಗಿರುವ ಅಗತ್ಯವನ್ನು ನಾವು ಗಮನಿಸಿದ್ದೇವೆ.

ಭಾರತದಾದ್ಯಂತ ಈ ಚರ್ಚಾ ಸರಣಿಯ ಮೂಲಕ ನಾವು ಶಿಕ್ಷಕರೊಂದಿಗೆ ಸಂವಹನ ನಡೆಸುತ್ತಲೇ, ಕುಟುಂಬದ ಆನ್‌ಲೈನ್ ಅಭ್ಯಾಸಗಳನ್ನು ನಿರ್ವಹಿಸಲು ಪೋಷಕರನ್ನು ಸಜ್ಜುಗೊಳಿಸುವ ದಾರಿಗಳನ್ನು ಹುಡುಕುತ್ತಿದ್ದೇವೆ. ಆ ಮೂಲಕ ಅವರ ಪಾಲಿಗೆ ಉತ್ತಮ ಎನಿಸುವ ರಕ್ಷಣಾ ವಿಧಾನ ಒದಗಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಬಳಕೆದಾರರ ಸುರಕ್ಷತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಮೆಟಾ ಕಳೆದ ವರ್ಷ ‘ಡಿಜಿಟಲ್ ಸುರಕ್ಷಾ ಶೃಂಗಸಭೆ’ ಅನ್ನು ನಡೆಸಿತ್ತು. ಆ ಮೂಲಕ ಯುವಜನತೆ ಮತ್ತು ಮಹಿಳೆಯರಿಗೆ ಸುರಕ್ಷಿತ ಮತ್ತು ಸಮತೋಲಿತ ಆನ್‌ಲೈನ್ ಅನುಭವವನ್ನು ಒದಗಿಸುವ ಪ್ರಯತ್ನ ಮಾಡಲಾಗಿತ್ತು. ಇದರ ಜತೆಗೆ ಮೆಟಾ, ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಪೌರತ್ವ ಕುರಿತು ಮಾಹಿತಿ, ಜ್ಞಾನ ಮತ್ತು ಶಿಕ್ಷಣದ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸಬಲೀಕರಣಗೊಳಿಸಲು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ (ಐಟಿಬಿಟಿ) ಇಲಾಖೆಯೊಂದಿಗೆ ಎರಡು ವರ್ಷಗಳ ಪಾಲುದಾರಿಕೆಯನ್ನು ಪ್ರಕಟಿಸಿದೆ.

ಕಳೆದ ಮೂರು ವರ್ಷಗಳಲ್ಲಿ, ಆನ್‌ಲೈನ್ ಸುರಕ್ಷತೆಯನ್ನು ಉತ್ತೇಜಿಸಲು ಮೆಟಾ 50ಕ್ಕೂ ಹೆಚ್ಚು ಸುರಕ್ಷತಾ ಪರಿಕರಗಳು ಮತ್ತು ಫೀಚರ್‌ಗಳನ್ನು ಬಿಡುಗಡೆ ಮಾಡಿದೆ. ಹದಿಹರೆಯದವರ ಸುರಕ್ಷತೆಗಾಗಿ ‘ನೈಟ್ ನಡ್ಜಸ್’ ಎಂಬ ಫೀಚರನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಇದು ತಡರಾತ್ರಿಯಲ್ಲಿ ಇನ್ ಸ್ಟಾಗ್ರಾಮ್ ಆಪ್ ಬಳಸುವಾಗ ಆ ಆಪ್ ಅನ್ನು ಷಟ್‌ಡೌನ್ ಮಾಡಲು ಬಳಕೆದಾರರಿಗೆ ಸೂಚಿಸುತ್ತದೆ. ಜತೆಗೆ ‘ಕ್ವೈಟ್ ಮೋಡ್’ ಫೀಚರ್ ಕೂಡ ಇದ್ದು, ಇದು ಹದಿಹರೆಯದ ಬಳಕೆದಾರರಿಗೆ ತಾವು ಆಪ್‌ನಲ್ಲಿ ಕಳೆಯುವ ಸಮಯದ ಮೇಲೆ ಮತ್ತು ಅವರು ಏನು ನೋಡುತ್ತಾರೆ ಎಂಬುದರ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

ಇದಲ್ಲದೆ, ಇನ್ಸ್ಟಾಗ್ರಾಮ್‌ನ ಪೇರೆಂಟಲ್ ಸೂಪರ್ ವಿಷನ್ ಫೀಚರ್ (ಪೋಷಕರ ಮೇಲ್ವಿಚಾರಣಾ ವೈಶಿಷ್ಟ್ಯ) ಮೂಲಕ ಪೋಷಕರು ತಮ್ಮ ಮಕ್ಕಳು ಫಾಲೋ ಮಾಡುವ ಖಾತೆಗಳು, ಅವರ ಮಕ್ಕಳನ್ನು ಫಾಲೋ ಮಾಡುವ ಖಾತೆಗಳನ್ನು ವೀಕ್ಷಿಸಬಹುದು ಮತ್ತು ಅವರ ಆನ್‌ಲೈನ್ ಬಳಕೆಯಲ್ಲಿ ತಮ್ಮನ್ನೂ ಹೆಚ್ಚು ತೊಡಗಿಸಿಕೊಳ್ಳಬಹುದು. ಮೆಟಾದ ‘ಫ್ಯಾಮಿಲಿ ಸೆಂಟರ್’ ಫೀಚರ್ ಪ್ಲಾಟ್‌ಫಾರ್ಮ್‌ಗಳನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬ ಮಾಹಿತಿಯನ್ನು ಹುಡುಕಲು ಪೋಷಕರು ಮತ್ತು ಹದಿಹರೆಯದವರಿಗೆ ಸಹ ಮಾಹಿತಿ ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

2024 Bajaj Pulsar F250 : ಬೆಲೆ ಏರಿಕೆ ಮಾಡದೇ ಹೊಸ ಪಲ್ಸರ್​ 250 ರಸ್ತೆಗಿಳಿಸಲಿದೆ ಬಜಾಜ್​​

2024 Bajaj Pulsar F250: ಹಲವಾರು ಅಪ್​ಡೇಟ್​ಗಳೊಂದಿಗೆ ಎಫ್​250 ಪಲ್ಸರ್​ ರಸ್ತೆಗೆ ಇಳಿದಿದೆ. ಸ್ಟ್ರೀಟ್ ನೇಕೆಡ್ ಎನ್​ 250ಯಷ್ಟು ಅಪ್​ಡೇಟ್ ಪಡೆದಿಲ್ಲವಾದರೂ ಪಲ್ಸರ್ ಎಫ್ 250 ಬೈಕಿನಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ. ಎಲ್ಲಾ ಪಲ್ಸರ್ ಗಳಲ್ಲಿ ಕಂಡುಬರುವ ಹೊಸ ಸಂಪೂರ್ಣ ಡಿಜಿಟಲ್ ಇನ್​ಸ್ಟ್ರುಮೆಂಟ್​ ಕ್ಲಸ್ಟರ್ ದೊಡ್ಡ ಬದಲಾವಣೆಯಾಗಿದೆ.

VISTARANEWS.COM


on

2024 Bajaj Pulsar F250
Koo

ಬೆಂಗಳೂರು: ಭಾರತದ ಜನಪ್ರಿಯ ಹಾಗೂ ಜನಸ್ನೇಹಿ ಕಂಪನಿಯಾಗಿರುವ ಬಜಾಜ್ ಆಟೋ ತನ್ನ ಸಂಪೂರ್ಣ ಪಲ್ಸರ್ ವೇರಿಯೆಂಟ್​ಗಳನ್ನು ಅಪ್​ಗ್ರೇಡ್​ ಮಾಡುವ ಪ್ರಕ್ರಿಯೆಯಲ್ಲಿದೆ. ಈ ತಿಂಗಳ ಆರಂಭದಲ್ಲಿ ಕಂಪನಿಯು ತನ್ನ ಅತಿದೊಡ್ಡ ಪಲ್ಸರ್ ಬೈಕ್​​ ಎನ್ ಎಸ್ 400 ಝಡ್ ಅನ್ನು ಬಿಡುಗಡೆ ಮಾಡಿತ್ತು. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.85 ಲಕ್ಷಗಳಾಗಿತ್ತು. ಅದಕ್ಕಿಂತ ಹಿಂದಿನ ತಿಂಗಳು ಅಪ್​ಡೇಟೆಡ್​​ ಪಲ್ಸರ್ ಎನ್ 250 ಬೈಕ್ ಅನಾವರಣ ಮಾಡಿತ್ತು. ಇದೀಗ ಅದರ ಜತೆಗಾರ ಎಫ್​ 250 ಬೈಕ್​ (2024 Bajaj Pulsar F250) ಅನ್ನು ಬಜಾಜ್ ಕಂಪನಿಗೆ ಮಾರುಕಟ್ಟೆಗೆ ಇಳಿಸಿದೆ.

ಈ ಮೂಲಕ ಬಜಾಜ್​​ ಕಂಪನಿಯು ಪಲ್ಸರ್​ ಬೈಕ್​ಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಎಂಬ ವ್ಯಾಖ್ಯಾನ ಸುಳ್ಳು ಎಂದು ಹೇಳಿದೆ. ಪಲ್ಸರ್​ನ ನಾನಾ ವೇರಿಯೆಂಟ್​ಗಳ ಉತ್ಪಾದನೆಯು ಸೀಮಿತ ರೂಪದಲ್ಲಿ ಮುಂದುವರಿಯುತ್ತದೆ ಎಂದು ಬಜಾಜ್ ಹೇಳಿಕೊಂಡಿದೆ. ಅಂತೆಯೇ ಹಲವಾರು ಅಪ್​ಡೇಟ್​ಗಳೊಂದಿಗೆ ಎಫ್​250 ಪಲ್ಸರ್​ ರಸ್ತೆಗೆ ಇಳಿದಿದೆ. ಸ್ಟ್ರೀಟ್ ನೇಕೆಡ್ ಎನ್​ 250ಯಷ್ಟು ಅಪ್​ಡೇಟ್ ಪಡೆದಿಲ್ಲವಾದರೂ ಪಲ್ಸರ್ ಎಫ್ 250 ಬೈಕಿನಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ. ಎಲ್ಲಾ ಪಲ್ಸರ್ ಗಳಲ್ಲಿ ಕಂಡುಬರುವ ಹೊಸ ಸಂಪೂರ್ಣ ಡಿಜಿಟಲ್ ಇನ್​ಸ್ಟ್ರುಮೆಂಟ್​ ಕ್ಲಸ್ಟರ್ ದೊಡ್ಡ ಬದಲಾವಣೆಯಾಗಿದೆ.

ಈ ಯೂನಿಟ್​​ ಫೋನ್​ ಕಾಲ್​​ ಮತ್ತು ಟೆಕ್ಟ್​​ ಅಲರ್ಟ್​ಗಳಿಗಾಗಿ ಬ್ಲೂಟೂತ್ ಸಂಪರ್ಕ ಮತ್ತು ಬಜಾಜ್ ರೈಡ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ನೊಂದಿಗೆ ಬರುತ್ತದೆ. ಕನ್ಸೋಲ್ ಮೆನುವಿನ ಮೂಲಕ ಟಾಗಲ್ ಮಾಡಲು ಇದು ಪರಿಷ್ಕೃತ ಸ್ವಿಚ್ ಗೇರ್ ಅನ್ನೂ ನೀಡಲಾಗಿದೆ. ಇದು ರೇನ್, ರೋಡ್ ಮತ್ತು ಸ್ಪೋರ್ಟ್ ಎಂಬ ಮೂರು ಎಬಿಎಸ್ ಮೋಡ್ ಗಳನ್ನು ಪಡೆದುಕೊಂಡಿದೆ.

ಹಾರ್ಡ್​ವೇರ್ ಬದಲಾವಣೆ ಏನು?

ಪಲ್ಸರ್ ಎಫ್ 250 ಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಪೆಟಲ್ ಡಿಸ್ಕ್ ಬ್ರೇಕ್ ಗಳ ರೂಪದಲ್ಲಿ ಕೆಲವು ಹಾರ್ಡ್ ವೇರ್ ಬದಲಾವಣೆಗಳನ್ನು ಮಾಡಲಾಗಿದೆ. ಆದರೂ ಡಿಸ್ಕ್ ಗಳ ಗಾತ್ರಗಳು ಕ್ರಮವಾಗಿ 300 ಎಂಎಂ ಮತ್ತು 230 ಎಂಎಂ ನಷ್ಟೇ ಇದೆ. ಎನ್ 250 ನಂತೆಯೇ, ನವೀಕರಿಸಿದ ಪಲ್ಸರ್ ಎಫ್ 250 110-ಸೆಕ್ಷನ್ ಮುಂಭಾಗ ಮತ್ತು 140-ಸೆಕ್ಷನ್ ಹಿಂಭಾಗದ ಟೈರ್ ಸೆಟಪ್ ಅನ್ನು ಪಡೆದಿದೆ. ಹಿಂದಿನ ಮಾದರಿಯ 110-ಸೆಕ್ಷನ್ ಮುಂಭಾಗ ಮತ್ತು 130-ಸೆಕ್ಷನ್ ಹಿಂಭಾಗದ ಸೆಟಪ್ ಹೊಂದಿತ್ತು. ಇಲ್ಲಿ ಸಣ್ಣ ಬದಲಾವಣೆಯಾಗಿದೆ.

2024ರ ಬಜಾಜ್ ಪಲ್ಸರ್ ಎಫ್250 ಬೈಕ್​ನಲ್ಲಿ ಏನಿಲ್ಲ?

ಮೂಲ ವಿನ್ಯಾಸವು ಅದರ ಹಿಂದಿನ ಬೈಕ್​ನಂತೆಯೇ ಉಳಿದಿದೆ, ಅರೆ-ಫೇರ್ಡ್ ಸ್ಟೈಲಿಂಗ್, ಆಕ್ರಮಣಕಾರಿ ವಿ-ಆಕಾರದ ಎಲ್ಇಡಿ ಹೆಡ್ ಲ್ಯಾಂಪ್ ಕ್ಲಸ್ಟರ್, ಸ್ಪ್ಲಿಟ್-ಸೀಟ್ ಗಳು, ಸ್ಟೂಬಿ ಟ್ವಿನ್-ಬ್ಯಾರೆಲ್ ಎಕ್ಸಾಸ್ಟ್ ಮಫ್ಲರ್ ಮತ್ತು ಕ್ಲಿಪ್-ಆನ್ ಹ್ಯಾಂಡಲ್ ಬಾರ್ ನೀಡಲಾಘಿದೆ ಬಜಾಜ್ ಪಲ್ಸರ್ ಎಫ್ 250 ಬೈಕಿನೊಂದಿಗೆ ಕೆಂಪು ಮತ್ತು ಕಪ್ಪು ಎಂಬ ಎರಡು ಬಣ್ಣಗಳ ಆಯ್ಕೆಗಳನ್ನು ನೀಡುವ ನಿರಿಕ್ಷೆಯಿದೆ.

ಪಲ್ಸರ್ ಎನ್ 250 ರೀತಿ , ಎಫ್ 250 ಚಿನ್ನದ ಬಣ್ಣದ ತಲೆಕೆಳಗಾಗಿರುವ ಮುಂಭಾಗದ ಫೋರ್ಕ್ ಗಳನ್ನು ಪಡೆದಿಲ್ಲ. ಹಿಂಭಾಗದ ಸಸ್ಪೆಂಷನ್ ಮೊನೊ-ಶಾಕ್ ಆಗಿದೆ ಎರಡೂ ತುದಿಗಳಲ್ಲಿ 17-ಇಂಚಿನ ವ್ಹೀಲ್ ಸೆಟಪ್ ಮತ್ತು ಅದರ ವಿನ್ಯಾಸವು ಒಂದೇ ಆಗಿದೆ. ನವೀಕರಿಸಿದ ಪಲ್ಸರ್ ಎನ್ 250 ನಲ್ಲಿ ಕಂಡುಬರುವಂತೆ ಇದು ‘250’ ಬಾಡಿ ಗ್ರಾಫಿಕ್ಸ್ ಹೊಂದಿಲ್ಲ.

ಇದನ್ನೂ ಓದಿ: Used Car Sale : ನಿಮ್ಮ ಕಾರನ್ನು ಜಾಸ್ತಿ ಬೆಲೆಗೆ ಮಾರಬೇಕೇ? ಈ ಕೆಲವು ತಂತ್ರಗಳನ್ನು ಅನುಸರಿಸಿ

ಎಂಜಿನ್ ಪವರ್​ ಏನು?

ಪಲ್ಸರ್ ಎಫ್250 ಬೈಕ್ 249.07 ಸಿಸಿ ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 8,750 ಆರ್ ಪಿಎಂನಲ್ಲಿ 24.1 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 21.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

2024 ಬಜಾಜ್ ಪಲ್ಸರ್ ಎಫ್250 ಬೆಲೆ ಎಷ್ಟು?

ನವೀಕರಿಸಿದ ಪಲ್ಸರ್ ಎಫ್ 250 ಬಿಡುಗಡೆಯನ್ನು ಬಜಾಜ್ ಅಧಿಕೃತವಾಗಿ ಘೋಷಿಸಿಲ್ಲ. ಹೀಗಾಗಿ ಬೆಲೆ ಬಗ್ಗೆ ಮಾಹಿತಿ ಇಲ್ಲ. ಬಜಾಜ್ ವೆಬ್ಸೈಟ್ನಲ್ಲಿ ಅಧಿಕೃತ ಬೆಲೆಯನ್ನು ಇನ್ನೂ ಉಲ್ಲೇಖಿಸಲಾಗಿಲ್ಲ. ಆದರೆ, ಬಜಾಜ್​ ಕಂಪನಿಯ ಮೂಲಗಳ ಪ್ರಕಾರ ರೂ.1.51 ಲಕ್ಷ (ಎಕ್ಸ್ ಶೋರೂಂ) ರೂಪಾಯಿಗೆ ಸಿಗುತ್ತದೆ. ಹೀಗಾಗಿ ಬೆಲೆಯಲ್ಲಿ ಹಿಂದಿನ ಆವೃತ್ತಿಗಿಂತ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ.

Continue Reading

ಪ್ರಮುಖ ಸುದ್ದಿ

Used Car Sale : ನಿಮ್ಮ ಕಾರನ್ನು ಜಾಸ್ತಿ ಬೆಲೆಗೆ ಮಾರಬೇಕೇ? ಈ ಕೆಲವು ತಂತ್ರಗಳನ್ನು ಅನುಸರಿಸಿ

Used Car Sale : ಕಾರು ಡೀಲರ್​ಗಳು ಅಥವಾ ಬ್ರೋಕರ್​ಗಳು ಬೇಡ ಎಂದು ಅಂದು ತಕ್ಷಣ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕಾರಿಗೆ ಹೆಚ್ಚು ಬೆಲೆ ಸಿಗುತ್ತದೆ ಹಾಗೂ ಹೆಚ್ಚು ಲಾಭ ನಿಮ್ಮದಾಗುತ್ತದೆ. ಹೀಗಾಗಿ ಮಾರುವ ಮೊದಲು ಕೆಲವೊಂದು ಯೋಜನೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

VISTARANEWS.COM


on

Used Car Sale
Koo

ಬೆಂಗಳೂರು: ಕಷ್ಟಕಾಲಕ್ಕೊ ಅಥವಾ ಹೊಸ ಕಾರನ್ನು ತೆಗೆದುಕೊಳ್ಳುವುದಕ್ಕೊ ಹಳೆ ಕಾರನ್ನು (Used Car Sale) ಮಾರಬೇಕಾಗುತ್ತದೆ. ಮೊದಲ ನೋಟಕ್ಕೆ ಅದು ಸುಲಭ ಎನಿಸಬಹುದು. ‘ಮಾರಿದ್ರೆ ಆಯ್ತು’ ಎಂದು ಹೇಳಬಹುದು. ಆದರೆ ಅದು ಅಷ್ಟೊಂದು ಸುಲಭವಲ್ಲ. ನೀವು ಮಾರಲು ನಿರ್ಧರಿಸಿದ ತಕ್ಷಣ ಅಂದುಕೊಳ್ಳುವಷ್ಟು ಬೆಲೆಯು ಸಿಗುವುದೇ ಇಲ್ಲ. ಕಾರು ಕೊಡಲು ಮುಂದಾದಾಗ ಕಡಿಮೆ ಬೆಲೆಗೆ ಕೇಳುವವರೇ ಹೆಚ್ಚು. ಹೀಗಾಗಿ ಸಾಕಷ್ಟು ಲಾಸ್ ಆಗಬಹುದು. ಅದೂ ಅಲ್ಲದಿದ್ದರೆ ಸೆಕೆಂಡ್ ಹ್ಯಾಂಡ್ ಕಾರು ಡೀಲರ್​ಗಳ ಬಳಿಗೆ ಹೋಗಬೇಕು. ಅವರು ಕೂಡ ತಮ್ಮ ಲಾಭಾಂಶವನನ್ನು ಇಟ್ಟುಕೊಂಡೇ ಖರೀದಿ ಮಾಡುತ್ತದೆ. ಆ ರೀತಿ ಆಗಬಾರದು ಎಂದಾರೆ ಸ್ವಲ್ಪ ಯೋಚನೆ ಮಾಡಿಕೊಂಡು ಕಾರನ್ನು ಮಾರಲು ಮುಂದಾಗಬೇಕು. ಅದಕ್ಕೆ ಬೇಕಾಗಿರುವ ಕೆಲವೊಂದು ತಂತ್ರಗಳನ್ನು ಇಲ್ಲಿ ನೀಡಲಾಗಿದೆ.

ಏನು ಮಾಡಬೇಕು

ಕಾರು ಡೀಲರ್​ಗಳು ಅಥವಾ ಬ್ರೋಕರ್​ಗಳು ಬೇಡ ಎಂದು ಅಂದು ತಕ್ಷಣ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕಾರಿಗೆ ಹೆಚ್ಚು ಬೆಲೆ ಸಿಗುತ್ತದೆ ಹಾಗೂ ಹೆಚ್ಚು ಲಾಭ ನಿಮ್ಮದಾಗುತ್ತದೆ. ಹೀಗಾಗಿ ಮಾರುವ ಮೊದಲು ಕೆಲವೊಂದು ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಮೊದಲಾಗಿ ಮಾನಸಿಕವಾಗಿ ಸಂಪೂರ್ಣವಾಗಿ ಸಿದ್ಧಗೊಳ್ಳಬೇಕು. ಇಂತಿಷ್ಟು ಬೆಲೆ ಸಿಕ್ಕರೆ ಮಾರುವುದು ಖಚಿತ. ಇಲ್ಲವಾದರೆ ಇಲ್ಲ. ಇಂಥವರಿಗಷ್ಟೇ ಮಾರುವೆ. ಒಂದು ಬಾರಿಗೆ ಹಣ ಕೊಟ್ಟರಷ್ಟೇ ಮಾರುವೆ ಎಂಬೆಲ್ಲ ಯೋಜನೆಗಳನ್ನು ಹಾಕಿಕೊಂಡಿಬೇಕು.

ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ಅರಿತುಕೊಳ್ಳಬೇಕು.

ಇಂಟರ್ನೆಟ್ ನಿಮಗೆ ಲಭ್ಯವಿದ್ದರೆ ನಿಮ್ಮಲ್ಲಿರುವ ಕಾರಿನ ಪ್ರಸ್ತುತ ಅನ್​​ರೋಡ್​ ಪ್ರೈಸ್​ ತಿಳಿದುಕೊಳ್ಳಬೇಕು. ಹೀಗಾಗಿ ಕೆಲವೊಂದು ವರ್ಷಗಳು ಹಳೆಯದಾಗಿರುವ ನಿಮ್ಮ ಕಾರಿಗೆ ಎಷ್ಟು ಬೆಲೆ ಪಡೆಯಬಹುದು ಎಂದು ಅಂದಾಜಿಸಿ. ಕಾರಿನ ಬೆಲೆಯ ಅಂದಾಜು ಮಾಡಲು ಯೂಸ್ಡ್​ ಕಾರು ಮಾರಾಟ ವೆಬ್​ಸೈಟ್​ ಹೋಗಿ ಎಲ್ಲ ಮಾಹಿತಿ ನಮೂದಿಸಿ. ಖರೀದಿ ಮಾಡಿದ ವರ್ಷ, ಓಡಿರುವ ಕಿಲೋಮೀಟರ್​ಗಳು, ಯಾವ ವೇರಿಯೆಂಟ್​ ಎಂಬುದನ್ನೆಲ್ಲ ಹಾಕಿ. ಅಲ್ಲಿ ಕಾಣುವ ಬೆಲೆಗಿಂತ ಸ್ವಲ್ಪ ಜಾಸ್ತಿ ಹೇಳಿ. ಕನಿಷ್ಠ ಬೆಲೆಯ ಮೇಲೆ ಬಫರ್ ದರ ಇಟ್ಟುಕೊಳ್ಳಿ. ಆದರೆ ನೆನಪಿಡಿ, ಜಾಸ್ತಿ ಹೇಳಬೇಡಿ. ಖರೀದಿದಾರನ ಬಳಿಯೂ ಇಂಟರ್ನೆಟ್​ ಇರುತ್ತದೆ. ಚೌಕಾಸಿಯಲ್ಲೇ ಟೈಮ್​ ವೇಸ್ಟ್​ ಮಾಡಬೇಕಾಗುತ್ತದೆ. ಬಳಿಕ ಕಾರಿನ ಮಾಹಿತಿಯೊಂದಿಗೆ ಸೆಕೆಂಡ್​ ಹ್ಯಾಂಡ್​ ಕಾರು ಮಾರಾಟದ ವೆಬ್​ಸೈಟ್​, ಸೋಶಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಮಾಡಿ. ಕಾರಿನ ಎಲ್ಲ ಮಾಹಿತಿ ಕೊಟ್ಟು ಹ್ಯಾಕರ್​ಗಳ ಮೋಸಗಾರರ ಕೈಗೆ ಸಿಕ್ಕಿ ಹಾಕಿಕೊಳ್ಳಬೇಡಿ. ಅಗತ್ಯ ಮಾಹಿತಿ ಮಾತ್ರ ಕೊಡಿ. ಹೆಚ್ಚು ಪ್ರತಿಕ್ರಿಯೆಗಳನ್ನು ಬಯಸದಿದ್ದರೆ ಅಥವಾ ಸಿಂಗಲ್​ ಡಿಲ್​ ಎಂದಾದರೆ “ಅತ್ಯುತ್ತಮ ಕೊಡುಗೆ”, “ಅಂತಿಮ ಬೆಲೆ”, “ಮಾತುಕತೆ ಇಲ್ಲ ” ಎಂಬುದನ್ನು ಸ್ಪಷ್ಟಪಡಿಸಿ.

ಎಲ್ಲ ದಾಖಲೆಗಳೂ ಜತೆಗಿರಲಿ

ನಿಮ್ಮ ಕಾರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒಟ್ಟಿಗೆ ಇಟ್ಟುಕೊಳ್ಳಿ. “ಎಲ್ಲವೂ” ಎಂದರೆ ಎಲ್ಲವೂ ಇರಬೇಕು. ಮೆಂಟೇನೆನ್ಸ್ ಬಿಲ್, ಸರ್ವಿಸ್​ ದಾಖಲೆಗಳು, ಟೈರ್ ಗಳು, ಬ್ಯಾಟರಿಗಳಿಗೆ ವಾರಂಟಿ ರಸೀದಿಗಳನ್ನು ಜತೆಗೆ ಇಟ್ಟುಕೊಳ್ಳಿ. ಈ ರೀತಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ದಾಖಲೆಗಳಿಂದಾಗಿ ಹೆಚ್ಚು ಬೆಲೆ ಸಿಗುತ್ತದೆ. ಅಂದರೆ ನಿಮ್ಮ ಕಾರಿನ ಬಗ್ಗೆ ನೀವು ಕಾಳಜಿ ವಹಿಸುತ್ತೀರಿ ಎಂದು ಅರ್ಥ.

ಆನ್​ಲೈನ್​ ಜಾಹೀರಾತು

ನಿಮಗೆ ಅತ್ಯುತ್ತಮ ಡೀಲ್ ಬೇಕಾದರೆ ಆನ್ ಲೈನ್ ಜಾಹೀರಾತು ನೀಡಿ. ಎಷ್ಟು ವೆಬ್​ಸೈಟ್​ಗಳನ್ನು ಎಷ್ಟು ಜನ ನೀಡುತ್ತಾರೆ ಎಂಬ ಮಾಹಿತಿ ಪಡೆಯಿತು. ಅವರಲ್ಲಿ ಕಾರಿನ ಬಗ್ಗೆ ಆಸಕ್ತಿ ಹೊಂದಿರುವವರು ಎಷ್ಟೆಂದು ತಿಳಿದುಕೊಳ್ಳಿ. ಅದರ ಪ್ರಕಾರ ಜಾಹೀರಾತು ನೀಡಿ. ನಿಮ್ಮ ಕಾರು ಮಾರಾಟವಾಗುವವರೆಗೂ ವೆಬ್​ಸೈಟ್​ನಲ್ಲಿ ಅಗತ್ಯ ಮಾಹಿತಿ ಇರಲಿ,

ಕೆಲವು ಸಲಹೆಗಳು ಇಲ್ಲಿವೆ

ಉತ್ತಮ ಫೋಟೋಗಳನ್ನು ಅಪ್ ಲೋಡ್ ಮಾಡಿ. ಚಿತ್ರಗಳನ್ನು ಕ್ಲಿಕ್ ಮಾಡಲು ನಿಮ್ಮ ಮೊಬೈಲ್ ಕ್ಯಾಮೆರಾವನ್ನು ನೀವು ಬಳಸಬಹುದು. ನಿಮ್ಮ ಕಾರಿನ ಫೋಟೊವನ್ನು ಹಗಲು ಹೊತ್ತಿನಲ್ಲಿಯೇ ತೆಗೆಯಿರಿ. ಆದ್ಯತೆಯ ಮೇರೆಗೆ ಮುಂಜಾನೆ ಅಥವಾ ಸಂಜೆ ಫೋಟೋ ತೆಗೆಯುವುದು ಒಳ್ಳೆಯದು.

ಇದನ್ನೂ ಓದಿ: Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

ನಿಮ್ಮ ಕಾರಿನ ಬಗ್ಗೆ ಸಾಧ್ಯವಾದಷ್ಟು ವಿವರಗಳನ್ನು ನೀಡಿ. ಇದು ಸೂಕ್ತ ಖರೀದಿದಾರರನ್ನು ಆಕರ್ಷಿಸುತ್ತದೆ ಮತ್ತು ವೇಗವಾಗಿ ಮಾರಾಟ ಮಾಡಲು ಸಹಾಯ ಮಾಡುತ್ತದೆ.

ಅಲಾಯ್ ಚಕ್ರಗಳು, ಲೆದರ್ ಅಪ್ಹೋಲ್ಸ್ಟರಿ, ಸಿಡಿ-ಚೇಂಜರ್, ಮ್ಯೂಸಿಕ್ ಸಿಸ್ಟಮ್, ಹೊಸ ಟೈರ್​ಗಳು, ಲಭ್ಯವಿರುವ ಸರ್ವಿಸ್​ಗಳು, ವಾರಂಟಿಗಳು ಮುಂತಾದ ಹೆಚ್ಚುವರಿ ಮಾಹಿತಿಯನ್ನು ನಿರ್ದಿಷ್ಟಪಡಿಸಿ.

ವಿಚಾರಣೆಗಳನ್ನು ಸೂಕ್ತ ಕಾಲಕ್ಕೆ ಸ್ವೀಕರಿಸಿ

ಒಮ್ಮೆ ನೀವು ನಿಮ್ಮ ಜಾಹೀರಾತು ಹಾಕಿದ ನಂತರ ನೀವು ಅದರಲ್ಲಿ ನಮೂದಿಸಿದ ಎಲ್ಲ ದಾಖಲೆಯೊಂದಿಗೆ ಸಿದ್ಧರಾಗಿರಿ. ನೀವು ಉಲ್ಲೇಖಿಸಿದ ಎಲ್ಲಾ ಅಂಕಿಅಂಶಗಳು ನೆನಪಿಲ್ಲದಿದ್ದರೆ ಅವುಗಳನ್ನು ಒಂದು ಕಾಗದದ ತುಣುಕಿನ ಮೇಲೆ ಬರೆದಿದೆ. ಖರೀದಿದಾರರು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ, ಆದ್ದರಿಂದ ಪ್ರತಿ ಪ್ರಶ್ನೆಗೆ ಪ್ರಾಮಾಣಿಕವಾಗಿ ಮತ್ತು ಬಹಿರಂಗವಾಗಿ ಉತ್ತರಿಸಲು ಪ್ರಯತ್ನಿಸಿ.

ಅನಗತ್ಯ ಅಪಾಯಿಂಟ್​ಮೆಂಟ್ ಕೊಡಬೇಡಿ. ನಿಮ್ಮ ಸಮಯವನ್ನು ಉಳಿಸಬೇಕಾದರೆ ಫೋನ್ ಮೂಲಕ ಖರೀದಿದಾರರಿಗೆ ಆರಂಭಿಕ ಸ್ಕ್ರೀನಿಂಗ್ ಮಾಡಿ. ನಂತರ ಅಪಾಯಿಂಟ್​ಮೆಂಟ್​ ನಿಗದಿ ಮಾಡಿ. ಖರೀದಿದಾರರನ್ನು ನಿರ್ದಿಷ್ಟ ಸಮಯಕ್ಕೆ ಭೇಟಿಯನ್ನು ಮಾಡಿ. ಇದು ನಿಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ನಿಮ್ಮ ಮನೆಗೆ ಬರುವುದು ಬೇಡ ಎಂದಾರೆ ಹೊರಗಡೆ ಅಪಾಯಿಂಟ್​ಮೆಂಟ್ ಫಿಕ್ಸ್​ ಮಾಡಿ.

ಟೆಸ್ಟ್ ಡ್ರೈವ್​ಗೆ ನೇರ ಕೊಡಬೇಡಿ

ಆಸಕ್ತ ಖರೀದಿದಾರರಿಗೆ ನಿಮ್ಮ ಕಾರನ್ನು ತೋರಿಸಿ. ನೀವು ಜತೆಗೆ ಇಲ್ಲದೆ ನಿಮ್ಮ ಕಾರನ್ನು ಟೆಸ್ಟ್ ಡ್ರೈವ್ ಗೆ ತೆಗೆದುಕೊಳ್ಳಲು ಬಿಡಬೇಡಿ. ಖರೀದಿದಾರರ ಚಾಲನಾ ಪರವಾನಗಿ ಪರಿಶೀಲಿಸಿ. ಆತನಿಗೆ ಚಾಲನೆ ಮಾಡಲು ಬಿಡಿ, ಆದರೆ ನೀವು ನ್ಯಾವಿಗೇಟ್ ಮಾಡುತ್ತಿರಬೇಕು. ಖರೀದಿದಾರನು ನೀವು ಕಾರನ್ನು ಕಾಯ್ದಿರಿಸಲು ಬಯಸಿದರೆ ಅಡ್ವಾನ್ಸ್​ ಡೆಪಾಸಿಟ್​ ಕೇಳಿ. ಆತನ ಅಡ್ವಾನ್ಸ್​ ಮುಕ್ತಾಯಗೊಳ್ಳುವ ಸಮಯ ನಿರ್ದಿಷ್ಟಪಡಿಸಿ. ಬೆಲೆಯ ಬಗ್ಗೆ ಮಾತುಕತೆ ನಡೆಸಿ. ಹೆಚ್ಚು ಚೌಕಾಸಿಗೆ ಅವಕಾಶ ನೀಡಬೇಡಿ.

ಮಾರಾಟ ಪ್ರಕ್ರಿಯೆಗಳು

ನೀವು ನಿಮ್ಮ ವಾಹನವನ್ನು ಮಾರಾಟ ಮಾಡಬೇಕಾದರೆ ಕೆಲವು ಕಾಗದಪತ್ರಗಳನ್ನು ಮಾಡಬೇಕಾಗುತ್ತದೆ. ಪಾವತಿಯನ್ನು ನಗದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಸ್ವೀಕರಿಸಿ. ಚೆಕ್ ಪಾವತಿಯ ಸಂದರ್ಭದಲ್ಲಿ, ಚೆಕ್ ಕ್ಲಿಯರ್ ಆಗುವ ತನಕ ದಾಖಲೆಗಳನ್ನು ವರ್ಗಾಯಿಸಬಾರದು. ಖರೀದಿದಾರ ಸಾಲವನ್ನು ವ್ಯವಸ್ಥೆ ಮಾಡುತ್ತಿದ್ದರೆ, ಫೈನಾನ್ಸ್ ಕಂಪನಿಯ ಡಿಎಸ್ಎ ಸಹಾಯ ಪಡೆಯಿರು. ಅವರು ಎಲ್ಲಾ ಕಾಗದಪತ್ರಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅದರಿಂದ ಕಾಗದ ಪತ್ರಗಳ ವರ್ಗಾವಣೆಗೆ ಅನುಕೂಲವಾಗುತ್ತದೆ.

Continue Reading
Advertisement
LPL 2024
ಪ್ರಮುಖ ಸುದ್ದಿ2 mins ago

LPL 2024 : ಫ್ರಾಂಚೈಸಿ ಮಾಲೀಕನಿಂದಲೇ ಮ್ಯಾಚ್​ ಫಿಕ್ಸಿಂಗ್; ಬಂಧನ

CM's Bengaluru City Rounds
ಪ್ರಮುಖ ಸುದ್ದಿ22 mins ago

CM’s Bengaluru City Rounds: ರಸ್ತೆಗಳ ದುರಸ್ತಿಗೆ ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಸಿಎಂ ಸೂಚನೆ

Back button saree blouse
ಫ್ಯಾಷನ್23 mins ago

Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

Calcutta High Court
ಪ್ರಮುಖ ಸುದ್ದಿ36 mins ago

Other Backward Classes: 2011ರ ನಂತರ ನೀಡಿದ್ದ ಒಬಿಸಿ ಪ್ರಮಾಣಪತ್ರಗಳನ್ನು ರದ್ದು ಮಾಡಿದ ಕೋಲ್ಕೊತಾ ಹೈಕೋರ್ಟ್​​

Bomb Threat
ಪ್ರಮುಖ ಸುದ್ದಿ54 mins ago

Bomb Threat : ಗೃಹ ಸಚಿವಾಲಯಕ್ಕೆ ಬಾಂಬ್ ಬೆದರಿಕೆ; ದೆಹಲಿಯಲ್ಲಿ ಆತಂಕ

ಕರ್ನಾಟಕ1 hour ago

CM’s Bengaluru City Rounds: ರಾಜಕಾಲುವೆ ಒತ್ತುವರಿ ಯಾರೇ ಮಾಡಿದ್ರೂ ಮುಲಾಜಿಲ್ಲದೆ ತೆರವು: ಸಿಎಂ ಎಚ್ಚರಿಕೆ

IPL 2024
ಕ್ರಿಕೆಟ್1 hour ago

IPL 2024 : ಅಮ್ಮನನ್ನು ಆಸ್ಪತ್ರೆಯಲ್ಲಿ ಮಲಗಿಸಿ ಕೆಕೆಆರ್​ ಪರ ಕ್ವಾಲಿಫೈಯರ್ ಆಡಿದ ಆಫ್ಘನ್​ ಕ್ರಿಕೆಟಿಗ

Star Cricket Theam Fashion
ಫ್ಯಾಷನ್1 hour ago

Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

Harish Poonja Govt responsible for disaster if MLA Harish Poonja is arrested says BY Vijayendra
ರಾಜಕೀಯ1 hour ago

Harish Poonja: ಶಾಸಕ ಹರೀಶ್‌ ಪೂಂಜಾರನ್ನು ಬಂಧಿಸಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ: ಗುಡುಗಿದ ವಿಜಯೇಂದ್ರ

Virat kohli
ಕ್ರೀಡೆ2 hours ago

IPL 2024 : ಕೊಹ್ಲಿಯನ್ನು ಹೊಗಳಿ ಆರ್​​ಸಿಬಿಗೆ ವಿದಾಯ ಹೇಳಿದ ವಿಜಯ್​ ಮಲ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ12 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌