Viral Video: ರೋಬೋಟಿಕ್ ಹಾವುಗಳೊಂದಿಗೆ ವಿಶ್ವದ ಮೊದಲ ಎಐ ಉಡುಗೆ ಸಿದ್ಧ! ಹೇಗಿದೆ ನೋಡಿ! - Vistara News

ತಂತ್ರಜ್ಞಾನ

Viral Video: ರೋಬೋಟಿಕ್ ಹಾವುಗಳೊಂದಿಗೆ ವಿಶ್ವದ ಮೊದಲ ಎಐ ಉಡುಗೆ ಸಿದ್ಧ! ಹೇಗಿದೆ ನೋಡಿ!

ಗೂಗಲ್ ಎಂಜಿನಿಯರ್ ಒಬ್ಬರು ರೋಬೋಟಿಕ್ ಹಾವುಗಳಿರುವ ವಿಶ್ವದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಉಡುಗೆಯನ್ನು ರಚಿಸಿದ್ದು ಇದು ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗಿದ್ದು (Viral Video) ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಇದಕ್ಕೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗೂಗಲ್ (google) ಉದ್ಯೋಗಿಯೊಬ್ಬರು ಇತ್ತೀಚೆಗೆ ವಿಶ್ವದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಉಡುಗೆಯನ್ನು (AI dress) ರಚಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದ್ದು, (Viral Video) ಅನೇಕರನ್ನು ಬೆರಗುಗೊಳಿಸಿದೆ.

ಟೆಕ್ ದೈತ್ಯ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು SheBuildsRobots.orgನ ಸಂಸ್ಥಾಪಕ ಕ್ರಿಸ್ಟಿನಾ ಅನ್ಸರ್ಟ್ ರೋಬೋಟ್‌ಗಳನ್ನು ನಿರ್ಮಿಸುವ ಕುರಿತು ಹುಡುಗಿಯರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದು ಮುಖಗಳನ್ನು ಪತ್ತೆಹಚ್ಚಲು ರೋಬೋಟಿಕ್ ಹಾವುಗಳನ್ನು ಜೋಡಿಸಿರುವ ತನ್ನ ಸೃಷ್ಟಿಯ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.

“ಮೆಡುಸಾ ಉಡುಗೆ” ಎಂದು ಕರೆಯಲ್ಪಡುವ ಉಡುಪು ಕಪ್ಪು ಬಣ್ಣದ್ದಾಗಿದ್ದು ಸೊಂಟದ ಸುತ್ತಲೂ ಮೂರು ಚಿನ್ನದ ಬಣ್ಣದ ಹಾವುಗಳು ಮತ್ತುಕುತ್ತಿಗೆಯಲ್ಲಿ ಒಂದು ದೊಡ್ಡ ರೋಬೋಟಿಕ್ ಹಾವು ಇದೆ. ಈ ಕುರಿತು ಮಾತನಾಡಿರುವ ಅನ್ಸರ್ಟ್, ನಾನು ಈ ರೋಬೋಟಿಕ್ ಹಾವಿನ ಉಡುಪನ್ನು ವಿನ್ಯಾಸಗೊಳಿಸಿದ್ದೇನೆ ಮತ್ತು ಅದು ಅಂತಿಮವಾಗಿ ಮುಗಿದಿದೆ. ಐಚ್ಛಿಕ ಮೋಡ್ ಅನ್ನು ಕೋಡ್ ಮಾಡಿದ್ದೇನೆ. ಅದು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಮುಖಗಳನ್ನು ಪತ್ತೆ ಹಚ್ಚುತ್ತದೆ ಮತ್ತು ಹಾವಿನ ತಲೆಯನ್ನು ನಿಮ್ಮತ್ತ ನೋಡುತ್ತಿರುವ ವ್ಯಕ್ತಿಯ ಕಡೆಗೆ ಚಲಿಸುವಂತೆ ಮಾಡುತ್ತದೆ. ಬಹುಶಃ ಇದು ಪ್ರಪಂಚದ ಮೊದಲನೆಯದು ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಅವರು ತಮ್ಮ ವಿಫಲವಾದ ಕೆಲವು ಮೂಲ ಮಾದರಿಗಳನ್ನು ಸಹ ಪ್ರದರ್ಶಿಸಿದರು ಮತ್ತು ಮುಖಗಳನ್ನು ಗುರುತಿಸಲು ಮತ್ತು ಪತ್ತೆ ಹಚ್ಚಲು ಹಾವನ್ನು ಹೇಗೆ ಪ್ರೋಗ್ರಾಮ್ ಮಾಡಿದರು ಎಂಬುದನ್ನು ಬಹಿರಂಗಪಡಿಸಿದರು. ಈ ಹಿಂದೆ ಉಡುಪಿನ ವಿವಿಧ ಘಟಕಗಳನ್ನು ರಚಿಸುವ ಪ್ರಕ್ರಿಯೆಯನ್ನು ತೋರಿಸುವ ವಿವಿಧ ರೀಲ್ ಗಳನ್ನು ಇನ್ಸ್ ಟಾಗ್ರಾಮ್ ನಲ್ಲಿ ಅವರು ಹಂಚಿಕೊಂಡಿದ್ದಾರೆ.

ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, 2.9 ಮಿಲಿಯನ್ ವೀಕ್ಷಣೆಗಳು ಮತ್ತು 1.4 ಲಕ್ಷ ಲೈಕ್ ಗಳನ್ನು ಪಡೆದಿದೆ. “ನನ್ನ ರೋಬೋಟಿಕ್ ಮೆಡುಸಾ ಉಡುಗೆ ಅಂತಿಮವಾಗಿ ಮುಗಿದಿದೆ!!!” ಎಂಬ ಶೀರ್ಷಿಕೆಯೊಂದಿಗೆ ಇದನ್ನು ಪೋಸ್ಟ್ ಮಾಡಲಾಗಿದೆ.

ಈ ಕುರಿತು ಅನೇಕ ಬಳಕೆದಾರರು ಕಾಮೆಂಟ್ ಕೂಡ ಮಾಡಿದ್ದಾರೆ. ಅದರಲ್ಲಿ ಒಬ್ಬರು, ನಾನು ಎಂಜಿನಿಯರ್ ಆಗಿದ್ದೇನೆ ಮತ್ತು ನಾನು ಫ್ಯಾಶನ್ ಅನ್ನು ಪ್ರೀತಿಸುತ್ತೇನೆ. ಹಾಗಾಗಿ ನಾನು ಈ ಯೋಜನೆಯನ್ನು ನಿಜವಾಗಿಯೂ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ, ಇನ್ನು ಕೆಲವರು ನಾವು ಇನ್ನೂ ಹೆಚ್ಚಿನ ಮತ್ತು ವಿಭಿನ್ನವಾದದ್ದನ್ನು ನಿರೀಕ್ಷಿಸುವುದಾಗಿ ತಿಳಿಸಿದ್ದಾರೆ.

ಇನ್ನು ಕೆಲವರು ಈ ರೀತಿಯ ಯೋಜನೆಗಳನ್ನು ಮಾಡಲು ತೆಗೆದುಕೊಳ್ಳುವ ಶ್ರಮ, ಸಮಯ ಮತ್ತು ಹಣದ ಮೊತ್ತವನ್ನು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ಇದು ತುಂಬಾ ಅದ್ಭುತ ಮತ್ತು ಸ್ಪೂರ್ತಿದಾಯಕವಾಗಿದೆ. ಇದು ನಿಮ್ಮ ಮೊದಲ ಪ್ರಯತ್ನ. ಈ ಮೊದಲು ಯಾರೂ ಅಂತಹದನ್ನು ಮಾಡಿಲ್ಲ, ಮುಂದೆ ಯಾರೂ ಮಾಡಲಾರರು ಎಂದು ನನಗೆ ಖಾತ್ರಿಯಿದೆ. ಆದ್ದರಿಂದ ನಿಜವಾಗಿಯೂ ಒಳ್ಳೆಯದು ಎಂದು ತಿಳಿಸಿದ್ದಾರೆ.


ಇನ್ನೊಬ್ಬರು ನೀವು ತುಂಬಾ ಅದ್ಭುತವಾಗಿದ್ದೀರಿ. ತುಂಬಾ ಸ್ಮಾರ್ಟ್ ಮತ್ತು ನವೀನ. ನೀವು ನಿಜವಾಗಿಯೂ ಚೆನ್ನಾಗಿ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ ಮತ್ತು ಭವಿಷ್ಯದಲ್ಲಿ ನೀವು ಇನ್ನೂ ಉತ್ತಮವಾಗಿ ಮಾಡುತ್ತೀರಿ ಎಂದು ನನಗೆ ಖಾತ್ರಿಯಿದೆ. ಇನ್ನು ನಾನು ಕಾಯಲು ಸಾಧ್ಯವಿಲ್ಲ. ಇದು ಅದ್ಭುತವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Virat- Anushka: ಬೆರಿಲ್ ಚಂಡಮಾರುತದ ದೃಶ್ಯವನ್ನು ವಿಡಿಯೊ ಕಾಲ್​ ಮೂಲಕ ಪತ್ನಿ ಅನುಷ್ಕಾಗೆ ತೋರಿಸಿದ ಕೊಹ್ಲಿ; ವಿಡಿಯೊ ವೈರಲ್​ 

ಮತ್ತೊಬ್ಬರು, ಇದು ನಿರಾಶಾದಾಯಕವಾಗಿದೆ. ಹಾವುಗಳು ವ್ಯತಿರಿಕ್ತವಾಗಿ ಕಾಣುತ್ತವೆ. ಸ್ವಲ್ಪ ಆಟಿಕೆಯಂತೆ ಕಾಣುತ್ತದೆ. ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ನಲ್ಲಿ ಇದು ತುಂಬಾ ರೋಮಾಂಚನಕಾರಿಯಾಗಿದೆ ಮತ್ತು ಇದಕ್ಕಾಗಿ ಹಲವು ಉಪಯೋಗಗಳಿವೆ. ನೀವು ಫ್ಯಾಷನ್ ಮತ್ತು ರೋಬೋಟಿಕ್ ಜಗತ್ತಿನಲ್ಲಿ ಭಾರಿ ಪ್ರಭಾವ ಬೀರಿದ್ದೀರಿ ಎಂದು ನಾನು ಭಾವಿಸುತ್ತೇನೆ, ನಾನು ಇದನ್ನು ಪ್ರೀತಿಸುತ್ತೇನೆ ಎಂದು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

Mahindra Marazzo: ಮುಂದಿನ ಎರಡು ತಿಂಗಳ ಅವಧಿಯಲ್ಲಿ ಎಂಪಿವಿ ಉತ್ಪಾದನೆ ಕೊನೆಗೊಳಿಸಲು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವೆರಿಟೊ ಕಂಪನಿಯು ಉತ್ಪಾದಿಸಿದ ಕೊನೆಯ ಸೆಡಾನ್ ಇದಾಗಿದೆ. ಎಂಪಿವಿ ಮಾರುಕಟ್ಟೆ ಇಂದು ಒಟ್ಟು ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಸುಮಾರು 16 ಪ್ರತಿಶತ ಪಾಲನ್ನು ಹೊಂದಿದೆ. ಟೊಯೊಟಾ ಮತ್ತು ಮಾರುತಿ ಸುಜುಕಿ ಈ ವಿಭಾಗದಲ್ಲಿ ಪಾರಮ್ಯ ಹೊಂದಿವೆ.

VISTARANEWS.COM


on

Mahindra Marazzo
Koo

ಬೆಂಗಳೂರು: ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಿದ ಆರು ವರ್ಷಗಳ ನಂತರ ಮರಾಜೊ (Mahindra Marazzo) ಎಂಪಿವಿಯ ಮಾರಾಟವನ್ನು ನಿಲ್ಲಿಸಿದೆ. ಇದು ಕಾರು ತಯಾರಕರು ನಿರೀಕ್ಷಿಸಿದ ಮಟ್ಟಕ್ಕೆ ಮಾರಾಟದಲ್ಲಿ ಯಶಸ್ಸನ್ನು ಹೊಂದಿಲ್ಲ. ಮಾರುತಿ ಎರ್ಟಿಗಾ, ಎಕ್ಸ್ ಎಲ್ 6 ಮತ್ತು ಕಿಯಾ ಕ್ಯಾರೆನ್ಸ್ ಪ್ರತಿಸ್ಪರ್ಧಿಯಾಗಿದ್ದ ಇದನ್ನು ಸೆಪ್ಟೆಂಬರ್ 2018 ರಲ್ಲಿ 9.99 ಲಕ್ಷದಿಂದ 13.90 ಲಕ್ಷ ರೂ.ಗಳ ನಡುವೆ ಬಿಡುಗಡೆ ಮಾಡಲಾಗಿತ್ತು. ಇದು ನಾಲ್ಕು ಟ್ರಿಮ್ ಗಳು ಮತ್ತು 7- ಮತ್ತು 8-ಸೀಟರ್ ಕಾನ್ಫಿಗರೇಶನ್ ಗಳಲ್ಲಿ ಬಂದಿತ್ತು. ಆದರೆ, ಗ್ರಾಹಕರ ಗಮನ ಸೆಳೆಯಲು ವಿಫಲಗೊಂಡಿತ್ತು.

ಮುಂದಿನ ಎರಡು ತಿಂಗಳ ಅವಧಿಯಲ್ಲಿ ಎಂಪಿವಿ ಉತ್ಪಾದನೆ ಕೊನೆಗೊಳಿಸಲು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವೆರಿಟೊ ಕಂಪನಿಯು ಉತ್ಪಾದಿಸಿದ ಕೊನೆಯ ಸೆಡಾನ್ ಇದಾಗಿದೆ. ಎಂಪಿವಿ ಮಾರುಕಟ್ಟೆ ಇಂದು ಒಟ್ಟು ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಸುಮಾರು 16 ಪ್ರತಿಶತ ಪಾಲನ್ನು ಹೊಂದಿದೆ. ಟೊಯೊಟಾ ಮತ್ತು ಮಾರುತಿ ಸುಜುಕಿ ಈ ವಿಭಾಗದಲ್ಲಿ ಪಾರಮ್ಯ ಹೊಂದಿವೆ.

ಮಹೀಂದ್ರಾ ಜೂನ್ 2024 ರವರೆಗೆ 44,793 ಮರಾಜೊಗಳನ್ನು ಮಾರಾಟ ಮಾಡಿದೆ. ಇದು ಮಾಸಿಕ ಸರಾಸರಿ ಸುಮಾರು 640 ಯುನಿಟ್​ಗಳು. ಕೋವಿಡ್ -19 ಲಾಕ್​ಡೌನ್​ ಸಮಯದಲ್ಲಿ ಮಾರಾಟವು ಕುಸಿಯಿತು. ಬಿಎಸ್ 6 ಹಂತ 2ರ ಮಾನದಂಡಗಳಿಂದಾಗಿ ಮರಾಜೊ ಕಾರಿನ ಡೀಸೆಲ್ ಎಂಜಿನ್ ಅನ್ನು ಅಪ್​ಡೇಟ್ ಮಾಡಲೂ ಸಾಧ್ಯವಾಗಲಿಲ್ಲ. ಮಾರಾಟದ ಅಂಕಿಅಂಶಗಳನ್ನು ದೃಷ್ಟಿಕೋನದಲ್ಲಿ ಹೇಳುವುದಾದರೆ ಮರಾಜೊ ಕಳೆದ ಐದು ತಿಂಗಳಲ್ಲಿ ಸರಾಸರಿ 34 ಯೂನಿಟ್​ ಮಾರಾಟ ಮಾಡಿದರೆ ಮಾರುತಿ ಮತ್ತು ಕಿಯಾ ಕ್ರಮವಾಗಿ ಸರಾಸರಿ 14,495 ಎರ್ಟಿಗಾಗಳು ಮತ್ತು 4,412 ಕ್ಯಾರೆನ್ಸ್ ಎಂಪಿವಿಗಳನ್ನು ಮಾರಾಟ ಮಾಡಿವೆ.

ಇದನ್ನೂ ಓದಿ: T20 World Cup : ಮಹಾರಾಷ್ಟ್ರದ ಆಟಗಾರರಿಗೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಮಹಾ ಸಿಎಂ ಶಿಂಧೆ

ಈಗ 14.59 ಲಕ್ಷ-17 ಲಕ್ಷ ರೂ.ಗಳ ನಡುವೆ ಮಾರಾಟವಾಗುವ ಮತ್ತು ಮೂರು ಟ್ರಿಮ್ ಗಳನ್ನು ಹೊಂದಿರುವ ಮರಾಜೊ ಜೂನ್ ವರೆಗೆ 93,000 ರೂ.ಗಳವರೆಗೆ ರಿಯಾಯಿತಿಯೊಂದಿಗೆ ಲಭ್ಯವಿದೆ.

ಮರಾಜೊವನ್ನು ಭಾರತದಲ್ಲಿ ಅಭಿವೃದ್ಧಿ ಮಾಡಿಲ್ಲ. ಇದು ಅಮೆರಿಕದ ಮಿಚಿಗನ್ ನಲ್ಲಿರುವ ಮಹೀಂದ್ರಾ ನಾರ್ತ್ ಅಮೇರಿಕನ್ ಟೆಕ್ನಿಕಲ್ ಸೆಂಟರ್ (ಎಂಎನ್ ಎಟಿಸಿ) ರಚಿಸಿದ ಮೊದಲ ಕಾರು. ಮಾರಾಟಕ್ಕಿದ್ದ ಸಂಪೂರ್ಣ ಅವಧಿಯಲ್ಲಿ ಯಾವುದೇ ಅಪ್​​ಡೇಟ್ ಪಡೆಯಲಿಲ್ಲ. ಇದು ಅದರ ಮಾರಾಟ ಅಂಕಿಅಂಶಗಳ ಮೇಲೆ ಪರಿಣಾಮ ಬೀರಿತು. ಆರಂಭದಲ್ಲಿ ಎಎಂಟಿ- ಪೆಟ್ರೋಲ್ ಎಂಜಿನ್​ ಮಾದರಿಯ ಬಗ್ಗೆ ಮಾತುಕತೆಗಳು ನಡೆದರೂ ಕೊನೆಗೆ ಅದು ಬರಲಿಲ್ಲ.

ಮಹೀಂದ್ರಾ ಎಂಪಿವಿ ಏಕೈಕ 123 ಬಿಹೆಚ್ ಪಿ, 300 ಎನ್ಎಂ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಸಂ 17.3 ಕಿ.ಮೀ ಇಂಧನ ದಕ್ಷತೆಯ ರೇಟಿಂಗ್ ಅನ್ನು ಪಡೆದಿದೆ. ತನ್ನ ಎಂಪಿವಿ ಸಹೋದರರಲ್ಲಿಯೂ ಸಹ ಮರಾಜೊ ಲ್ಯಾಡರ್​ ಪ್ಲಾಟ್ ಫಾರ್ಮ್ ಹೊಂದಿದ್ದರೂ ಫ್ರಂಟ್-ವ್ಹೀಲ್-ಡ್ರೈವ್ ಸೆಟಪ್ ಅನ್ನು ಹೊಂದಿತ್ತು. ಹೀಗಾಗಿ ಬಿಡುಗಡೆಯಾದ ಸಮಯಕ್ಕೆ ಅಪೇಕ್ಷಿತವಾಗಿತ್ತು. ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಟೊಯೊಟಾದ ಇನ್ನೋವಾ ಕ್ರಿಸ್ಟಾದಂಥ ರಿಯರ್ ವೀಲ್ ಡ್ರೈವ್ ಮಾದರಿಯು ಹೆಚ್ಚು ಗಮನ ಸೆಳೆದಿತ್ತು. ಮರಾಜೊ ಎಂಪಿವಿಯನ್ನು ಸಂಪೂರ್ಣವಾಗಿ ಲೋಡ್ ಮಾಡಿದಾಗ ಅದರ ನಾಲ್ಕು ಸಿಲಿಂಡರ್​ ಎಂಜಿನ್ ಕಡಿಮೆ ಪವರ್ ಹೊಂದಿತ್ತು.

ಮಹೀಂದ್ರಾ ಮುಂಬರುವ ವಾರಗಳಲ್ಲಿ ಥಾರ್ 5-ಡೋರ್ ಅನ್ನು ಮಾರುಕಟ್ಟೆಗೆ ತರಲು ಸಜ್ಜಾಗುತ್ತಿದೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ಎಕ್ಸ್ ಯುವಿ 700 ಆಧಾರಿತ ಇವಿ ಕೂಡ ಮಾರುಕಟ್ಟೆಗೆ ಬರಲಿದೆ.

Continue Reading

ಪ್ರಮುಖ ಸುದ್ದಿ

Bajaj Freedom 125 CNG : ಬಜಾಜ್​ ಕಂಪನಿಯ ಸಿಎನ್​ಜಿ ಬೈಕ್​ ಬಿಡುಗಡೆ; ಕೆ.ಜಿಗೆ 102 ಕಿಲೋ ಮೀಟರ್​​ ಮೈಲೇಜ್​

Bajaj Freedom 125 CNG: ಇದು ಸಿಲಿಂಡರ್​​ನ ರಕ್ಷಣಾ ಪಂಜರವಾಗಿ ಕಾರ್ಯನಿರ್ವಹಿಸುತ್ತದೆ. 147 ಕೆಜಿ ತೂಕವನ್ನು ಹೊಂದಿರುವ ಫ್ರೀಡಂ 125 ಬೈಕ್​​ ಸಿಟಿ 125ಎಕ್ಸ್ ಗಿಂತ 16 ಕೆಜಿ ಭಾರ. ಇದು 785 ಎಂಎಂ ಉದ್ದದ ಸಿಂಗಲ್ ಪೀಸ್ ಸೀಟ್ ಅನ್ನು ಹೊಂದಿದೆ. ಇದು ಬಜಾಜ್ ತನ್ನ ವಿಭಾಗದಲ್ಲಿ ಅತಿ ಉದ್ದದ ಸೀಟ್ ಎಂದು ಹೇಳಿಕೊಂಡಿದೆ.

VISTARANEWS.COM


on

Bajaj Freedom 125
Koo

ಬೆಂಗಳೂರು: ಬಜಾಜ್ ಕಂಪನಿಯ ಬಹುನಿರೀಕ್ಷಿತ ಫ್ರೀಡಂ 125 ಬೈಕ್ (Bajaj Freedom 125 CNG) ಶುಕ್ರವಾರ (ಜುಲೈ 5ರಂದು) ಬಿಡುಗಡೆಗೊಂಡಿದೆ. ಇದು ವಿಶ್ವದ ಮೊದಲ ಸಿಎನ್ ಜಿ ಬೈಕ್ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಮೈಲೇಜ್​ಗೆ ಬೇಡಿಕೆ ಇರುವ ಭಾರತದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಲು ಕಂಪನಿ ಮುಂದಾಗಿದೆ. ಇದರ ಬೆಲೆಗಳು ಭಾರತದಲ್ಲಿ ಎಕ್ಸ್ ಶೋರೂಂ ದರದಂತೆ 95,000 ರೂಪಾಯಿಂದ ಪ್ರಾರಂಭವಾಗುತ್ತವೆ. ರೇಂಜ್ ಹಾಗೂ ವೇರಿಯೆಂಟ್ ಹಾಗೂ ಬಣ್ಣಗಳ​ ಪ್ರಕಾರ ಗರಿಷ್ಠ ರೂ.1.10 ಲಕ್ಷಗಳವರೆಗೆ ಬೆಲೆ ನಿಗದಿ ಮಾಡಲಾಗಿದೆ.

ಫ್ರೀಡಂ ಬೈಕ್​ 125 ಸಿಸಿ ಹಾರಿಜಾಂಟಲ್​ ಮೌಂಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ 8,000 ಆರ್ ಪಿಎಂನಲ್ಲಿ 9.5 ಬಿಹೆಚ್ ಪಿ ಪವರ್ ಮತ್ತು 6,000 ಆರ್ ಪಿಎಂನಲ್ಲಿ 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೋಟರ್ ಸ್ವಿಚ್ ಬದಲಾಯಿಸುವ ಮೂಲಕ ಸಿಎನ್ ಜಿ ಅಥವಾ ಪೆಟ್ರೋಲ್ ಆಯ್ಕೆಯೊಂದಿಗೆ ಸವಾರಿ ಮಾಡಬಹುದು. ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ 2 ಲೀಟರ್ ಆಗಿದ್ದರೆ ಸಿಎನ್ ಜಿ 2 ಕೆ.ಜಿ ತುಂಬಿಸಬಹುದು. ಆದರೆ, ಸಿಎನ್​​ಜಿ ಟ್ಯಾಂಕ್ ೧8 ಕೆ.ಜಿ ತೂಕವಿರುತ್ತದೆ. ಕಂಪನಿಯು ಸಿಎನ್ ಜಿಯಲ್ಲಿ ಪ್ರತಿ ಕೆ.ಜಿ.ಗೆ 102 ಕಿ.ಮೀ ಮೈಲೇಜ್ ಮತ್ತು ಪೆಟ್ರೋಲ್​​ನಲ್ಲಿ 65 ಕಿ.ಮೀ ಮೈಲೇಜ್​ ನೀಡುತ್ತದೆ.

ಸಿಎನ್ ಜಿ ಟ್ಯಾಂಕ್ ಅನ್ನು ಟ್ರೆಲ್ಲಿಸ್ ಫ್ರೇಮ್ ನ ಸಹಾಯದಿಂದ ತಯಾರಿಸಲಅಗಿದೆ. ಇದು ಸಿಲಿಂಡರ್​​ನ ರಕ್ಷಣಾ ಪಂಜರವಾಗಿ ಕಾರ್ಯನಿರ್ವಹಿಸುತ್ತದೆ. 147 ಕೆಜಿ ತೂಕವನ್ನು ಹೊಂದಿರುವ ಫ್ರೀಡಂ 125 ಬೈಕ್​​ ಸಿಟಿ 125ಎಕ್ಸ್ ಗಿಂತ 16 ಕೆಜಿ ಭಾರ. ಇದು 785 ಎಂಎಂ ಉದ್ದದ ಸಿಂಗಲ್ ಪೀಸ್ ಸೀಟ್ ಅನ್ನು ಹೊಂದಿದೆ. ಇದು ಬಜಾಜ್ ತನ್ನ ವಿಭಾಗದಲ್ಲಿ ಅತಿ ಉದ್ದದ ಸೀಟ್ ಎಂದು ಹೇಳಿಕೊಂಡಿದೆ. ಈ ಸೀಟ್ 825 ಎಂಎಂ ಎತ್ತರವಿದ್ದು, ಸಿಟಿ 125ಎಕ್ಸ್ ಗಿಂತ 15 ಎಂಎಂ ಹೆಚ್ಚಾಗಿದೆ. ಸಸ್ಪೆಂಷನ್ ಸಿಸ್ಟಂಗಳನ್ನು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಲಿಂಕ್ಡ್ ಮೊನೊಶಾಕ್ ಇದೆ.

ಹೇಗಿದೆ ನೋಟ?

ನೋಟದ ಬಗ್ಗೆ ಹೇಳುವುದಾದರೆ, ಬಜಾಜ್ ಫ್ರೀಡಂ 125 ರಲ್ಲಿ ದೃಢವಾದ ವಿನ್ಯಾಸವನ್ನು ಅನುಸರಿಸಲಾಗಿದೆ. ಇದು ಪೂರ್ಣ ಪ್ರಮಾಣದ ಎಲ್ಇಡಿ ಹೆಡ್ ಲೈಟ್ ಮತ್ತು ಟೈಲ್-ಲೈಟ್ ಹೊಂದಿದ್ದರೆ, ಹ್ಯಾಲೋಜೆನ್ ಇಂಡಿಕೇಟರ್​ಗಳಿವೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೊನೊಕ್ರೋಮ್ ಎಲ್​​ಸಿಡಿ ಡಿಸ್​ಪ್ಲೇ ಹೊಂದಿದೆ. ಮೊಬೈಲ್​ ಬ್ಲೂಟೂತ್ ಸಂಪರ್ಕ ಸಾಧಿಸಹುದು. ಫ್ಯೂಯಲ್ ಟ್ಯಾಂಕ್ ಗಳು ಮತ್ತು ಏರ್ ಫಿಲ್ಟರ್ ಎರಡನ್ನೂ ದೊಡ್ಡ ಫ್ಲಾಪ್ ಮೂಲಕ ನೀಡಲಾಗಿದೆ.

ಬ್ರೇಕಿಂಗ್​ ವ್ಯವಸ್ಥೆ

ಫ್ರೀಡಂ 125 ಬೈಕ್, ಡಿಸ್ಕ್ ಎಲ್ಇಡಿ, ಡ್ರಮ್ ಎಲ್ಇಡಿ ಮತ್ತು ಡ್ರಮ್ ಎಂಬ ಮೂರು ವೇರಿಯೆಂಟ್​​ಗಳಲ್ಲಿ ಲಭ್ಯವಿದೆ. ಈ ಬೈಕ್ ಒಟ್ಟು ಏಳು ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ಗ್ರಾಹಕರಿಗೆ ನೀಡಿದೆ. ಅವುಗಳನ್ನು ವೇರಿಯೆಂಟ್​ಗಳ ಪ್ರಕಾರ ವಿಂಗಡಿಸಲಾಗಿದೆ. ಎಲ್ಲಾ ಡೀಲರ್ ಶಿಪ್ ಗಳಲ್ಲಿ ಹಾಗೂ ಬಜಾಜ್ ವೆಬ್ ಸೈಟ್ ನಲ್ಲಿ ಬುಕಿಂಗ್ ಆರಂಭವಾಗಿದೆ.

ಈ ಬೈಕ್ ಉದ್ಯಮದ ಮಾನದಂಡಗಳು ಮತ್ತು ಬಜಾಜ್ ಕಂಪನಿಯ ಆಂತರಿಕ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಲಾಗಿದ್ದು 11 ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ. ಕಂಪನಿಯು ಫ್ರೀಡಂ 125 ಅನ್ನು ಈಜಿಪ್ಟ್, ಟಾಂಜಾನಿಯಾ, ಕೊಲಂಬಿಯಾ, ಪೆರು, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗೆ ರಫ್ತು ಮಾಡಲು ಯೋಜಿಸಿದೆ.

Continue Reading

ಆಟೋಮೊಬೈಲ್

Bajaj Freedom 125: ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಫ್ರೀಡಂ 125 ಇಂದು ಬಿಡುಗಡೆ

Bajaj Freedom 125: ಬುದಿನಗಳ ಕಾಯುವಿಕೆ ಅಂತ್ಯವಾಗುವ ಸಮಯ ಬಂದಿದೆ. ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಎನ್ನುವ ಖ್ಯಾತಿಯ, ಭಾರತದ ಬಜಾಜ್‌ ಆಟೋ ಕಂಪನಿ ಆವಿಷ್ಕರಿಸಿರುವ ಫ್ರೀಡಂ 125 ಬೈಕ್‌ ಇಂದು (ಜುಲೈ 5) ಬಿಡುಗಡೆಯಾಗಲಿದೆ. ಈ ಹಿಂದೆ ಜೂನ್‌ 18ರಂದು ಬೈಕ್‌ ಬಿಡುಗಡೆಗೆ ಮಾಡುವುದಾಗಿ ಕಂಪನಿ ಘೋಷಿಸಿತ್ತು. ಬಳಿಕ ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು.

VISTARANEWS.COM


on

Bajaj Freedom 125
Koo

ಮುಂಬೈ: ವಿಶ್ವದ ಮೊದಲ ಸಿಎನ್‌ಜಿ ಬೈಕ್‌ (CNG Bike) ಎನ್ನುವ ಖ್ಯಾತಿಯ, ಭಾರತದ ಬಜಾಜ್‌ ಆಟೋ (Bajaj Auto) ಕಂಪನಿ ಆವಿಷ್ಕರಿಸಿರುವ ಫ್ರೀಡಂ 125 (Bajaj Freedom 125) ಬೈಕ್‌ ಇಂದು (ಜುಲೈ 5) ಬಿಡುಗಡೆಯಾಗಲಿದೆ. ಬಜಾಜ್‌ ಬ್ರೂಝರ್‌ ಎಂದೂ ಕರೆಯಲ್ಪಡುವ ಈ ಬೈಕ್‌ ಅನ್ನು ದ್ವಿಚಕ್ರ ವಾಹನ ವಲಯದಲ್ಲಿ ಒಂದು ಮೈಲಿಗಲ್ಲು ಎಂದೇ ಪರಿಗಣಿಸಲಾಗಿದೆ.

ಕಂಪನಿಯು ಮುಂಬೈಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಬೈಕ್‌ ಬಿಡುಗಡೆ ಮಾಡಲಿದ್ದು, ಬಜಾಜ್‌ ಎಂ.ಡಿ. ರಾಜೀವ್‌ ಬಜಾಜ್‌ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಜೂನ್‌ 18ರಂದು ಬೈಕ್‌ ಬಿಡುಗಡೆಗೆ ಮಾಡುವುದಾಗಿ ಕಂಪನಿ ಘೋಷಿಸಿತ್ತು. ಬಳಿಕ ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಬೈಕ್‌ ಪ್ರಿಯರ ಹಲವು ದಿನಗಳ ಕಾಯುವಿಕೆ ಅಂತ್ಯವಾಗಲಿದೆ. ಈ ಮೂಲಕ ಬಜಾಜ್‌ ಆಟೋ ಸಾಂಪ್ರದಾಯಿಕ ಪೆಟ್ರೋಲ್ ಚಾಲಿತ ಬೈಕುಗಳಿಗೆ ಪರಿಸರ ಸ್ನೇಹಿ ಪರ್ಯಾಯವನ್ನು ಪರಿಚಯಿಸುತ್ತಿದ್ದು, ಬಹುದೊಡ್ಡ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ.

ವೈಶಿಷ್ಟ್ಯ

ಮೊದಲೇ ಹೇಳಿದಂತೆ ಫ್ರೀಡಂ 125 ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಆಗಿದ್ದು, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ. ಈ ಬೈಕ್‌ನ ಉದ್ದಕ್ಕೂ ಸಿಎನ್‌ಜಿ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಹಾಗೇ ಇದನ್ನು ನಿರ್ವಹಿಸುವ ವಿಶಿಷ್ಟವಾದ ಚಾಸಿಸ್ ಸೆಟಪ್ ಅನ್ನು ಬೈಕ್ ಹೊಂದಿದೆ. ಸಿಎನ್‌ಜಿ ಬೈಕ್‌ನ ಆಯಿಲ್ ಟ್ಯಾಂಕ್ ಚಿಕ್ಕದಾಗಿದ್ದರೂ, ಬೈಕ್‌ಗೆ ಹೆಚ್ಚುವರಿ ಮೈಲೇಜ್ ನೀಡುತ್ತದೆ. ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಜೋಡಿಸಲಾದ 125 ಸಿಸಿ ಎಂಜಿನ್‌ನೊಂದಿಗೆ ಈ ಬೈಕ್‌ ಬರುವ ನಿರೀಕ್ಷೆ ಇದೆ. ಅಲ್ಲದೇ ಈ ಬೈಕ್ ಅನ್ನು ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎರಡೂ ಕಡೆ ಆರಾಮವಾಗಿ ಓಡಿಸಬಹುದು. ಈ ಬೈಕ್ ಕ್ಲಚ್ ಗಾರ್ಡ್, ಹ್ಯಾಂಡಲ್ ಬಾರ್ ಬ್ರೇಸ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿರುವುದರಿಂದ ಇದರಲ್ಲಿ ಕಳಪೆ ರಸ್ತೆಯಲ್ಲೂ ಕೂಡ ಆರಾಮವಾಗಿ ಸವಾರಿ ಮಾಡಬಹುದು.

ದರ ಎಷ್ಟು?

ಈ ಬೈಕ್ ಬೆಲೆ ಸುಮಾರು 90,000 ರೂ. ಆಗಿರುವ ನಿರೀಕ್ಷೆ ಇದೆ. ಬಜಾಜ್ ಫ್ರೀಡಂ 125 ಬೈಕ್ ಟಿವಿಎಸ್ ರೇಡಿಯನ್, ಹೋಂಡಾ ಸಿಬಿ ಶೈನ್, ಹೀರೋ ಹೆಚ್ ಎಫ್ 100, ಟಿವಿಎಸ್ ಸ್ಪೋರ್ಟ್, ಬಜಾಜ್ ಸಿಟಿ 110 ಮತ್ತು ಬಜಾಜ್ ಪ್ಲಾಟಿನಾಗಳಂತಹ ಇತರ ಮೋಟಾರ್ ಸೈಕಲ್‌ಗಳ ಎದುರು ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ.

ಈಗಾಗಲೇ ಈ ಬೈಕ್‌ ಅನ್ನು ಬಿಗುಡೆಗೆ ಮುನ್ನವೇ ಹಲವು ಬಾರಿ ಸಾರ್ವಜನಿಕ ರಸ್ತೆಯಲ್ಲಿ ಓಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೆ ಸಿಎನ್‌ಜಿ ತಂತ್ರಜ್ಞಾನಕ್ಕೆ ಬಜಾಜ್ ಆಟೋ ಪ್ರವೇಶಿಸುತ್ತಿರುವುದು ಇದು ಹೊಸತೇನಲ್ಲ. ಕಂಪನಿಯು ಈಗಾಗಲೇ ತನ್ನ ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನಗಳೊಂದಿಗೆ ಯಶಸ್ಸನ್ನು ಸಾಧಿಸಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ಶೇ. 60ರಷ್ಟು ಪಾಲನ್ನು ಹೊಂದಿದೆ. ಬಜಾಜ್ ಫ್ರೀಡಂ 125 ಮೂಲಕ ಕಂಪನಿ ತನ್ನ ಯಶಸ್ಸನ್ನು ಪುನರಾವರ್ತಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Continue Reading

ಆಟೋಮೊಬೈಲ್

Upcoming SUVs: ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಸ್ ಯು ವಿಗಳು

ಕಡಿಮೆ ಬೆಲೆಯ ಕಾರುಗಳಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈಗ ಕಾಂಪ್ಯಾಕ್ಟ್ ಎಸ್‌ಯುವಿಗಳೇ ವಿಜೃಂಭಿಸಲು ಪ್ರಾರಂಭವಾಗಿದೆ. ಕಾರು ಖರೀದಿ ಬಗ್ಗೆ ಯೋಚಿಸುತ್ತಿದ್ದರೆ ಅದರಲ್ಲೂ ಕಾಂಪ್ಯಾಕ್ಟ್ ಎಸ್ ಯು ವಿ ಖರೀದಿಸಲು ಬಯಸುತ್ತಿದ್ದರೆ ಸ್ವಲ್ಪ ಕಾಯಬೇಕು. ಯಾಕೆಂದರೆ ಶೀಘ್ರದಲ್ಲೇ ಮಾರುಕಟ್ಟೆಗೆ (Upcoming SUVs) ಬರಲಿರುವ ನಾಲ್ಕು ಕಾಂಪ್ಯಾಕ್ಟ್ ಎಸ್ ಯು ವಿ ಗಳ ಮಾಹಿತಿ ಇಲ್ಲಿವೆ.

VISTARANEWS.COM


on

By

Upcoming SUVs
Koo

ಕಾರು ಪ್ರಿಯರಿಗೆ ಒಂದು ಸಿಹಿ ಸುದ್ದಿ. ಹತ್ತು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯ ಕಾರುಗಳು (Upcoming SUVs) ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ. ಮಾರುಕಟ್ಟೆಯಲ್ಲೀಗ ಹ್ಯಾಚ್‌ಬ್ಯಾಕ್ (hatchback) ವಿಭಾಗಕ್ಕೆ ಬೇಡಿಕೆ ಕಡಿಮೆಯಾಗುತ್ತಿದ್ದು, ಈ ಜಾಗವನ್ನು ಕಾಂಪ್ಯಾಕ್ಟ್ ಎಸ್‌ಯುವಿಗಳು (compact SUVs ) ಪಡೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ 10 ಲಕ್ಷ ರೂ. ಗಳಿಗಿಂತ ಕಡಿಮೆ ಬೆಲೆಯ ಹಲವಾರು ಹೊಸ ಎಸ್ ಯು ವಿಗಳ ಆಗಮನ ಇದಕ್ಕೆ ಪುಷ್ಟಿಯನ್ನು ನೀಡಿದೆ.

ಎಸ್ ಯು ವಿ ವಿನ್ಯಾಸ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ನೇರ ಚಾಲನಾ ನಿಲುವುಗಳು ಅದರ ಜನಪ್ರಿಯತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಕಾರು ಖರೀದಿ ಬಗ್ಗೆ ಯೋಚಿಸುತ್ತಿದ್ದರೆ ಅದರಲ್ಲೂ ಕಾಂಪ್ಯಾಕ್ಟ್ ಎಸ್ ಯು ವಿ ಖರೀದಿಸಲು ಬಯಸುತ್ತಿದ್ದರೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿರುವ ನಾಲ್ಕು ಕಾಂಪ್ಯಾಕ್ಟ್ ಎಸ್ ಯು ವಿ ಗಳ ಮಾಹಿತಿ ಇಲ್ಲಿವೆ.


ನಿಸ್ಸಾನ್ ಮ್ಯಾಗ್ನೈಟ್ ಫೇಸ್ ಲಿಫ್ಟ್

ನಿಸ್ಸಾನ್ ಮ್ಯಾಗ್ನೈಟ್ ದೇಶದ ಅತ್ಯಂತ ಕೈಗೆಟುಕುವ ಎಸ್ ಯುವಿ ಗಳಲ್ಲಿ ಒಂದಾಗಿದೆ. ಆದರೆ ಕಂಪೆನಿ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಉತ್ಪಾದಿಸಲು ವಿಫಲವಾಗಿದೆ. ಈಗ ನಿಸ್ಸಾನ್ ತನ್ನ ಫೇಸ್‌ಲಿಫ್ಟ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಮತ್ತು ಇದರ ಪರೀಕ್ಷೆಯನ್ನು ಪ್ರಾರಂಭಿಸಿದೆ.

ಮ್ಯಾಗ್ನೈಟ್ ಫೇಸ್‌ಲಿಫ್ಟ್ 2024 ರ ಕೊನೆಯಲ್ಲಿ ಅಥವಾ 2025 ರ ಆರಂಭದಲ್ಲಿ ಹೊಸ ಗ್ರಿಲ್, ಪರಿಷ್ಕೃತ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ ಇಡಿ ಸಿಗ್ನೇಚರ್‌ಗಳು, ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಮತ್ತು ಹೊಸ ಮಿಶ್ರಲೋಹದ ಚಕ್ರಗಳನ್ನು ಒಳಗೊಂಡಂತೆ ಕನಿಷ್ಠ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಆದರೆ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆಗಳು ಇರುವ ಸಾಧ್ಯತೆ ಇಲ್ಲ.


ಕಿಯಾ ಕ್ಲಾವಿಸ್

ಕಿಯಾ ಇಂಡಿಯಾದಿಂದ ಹೊಸ ಸಬ್- 4 ಮೀಟರ್ ಎಸ್‌ಯುವಿ ಪರೀಕ್ಷೆಯಲ್ಲಿದೆ. 2024 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಿಯಾ ಕ್ಲಾವಿಸ್ ಅಥವಾ ಕಿಯಾ ಸಿರೋಸ್ ಎಂದು ಇದನ್ನು ಹೆಸರಿಸುವ ಸಾಧ್ಯತೆ ಇದೆ. ಬೃಹತ್ ಬಾಡಿ, ಮೇಲ್ಛಾವಣಿ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಇದು ಬರಲಿದೆ. 360-ಡಿಗ್ರಿ ಕೆಮರಾ, ಸನ್‌ರೂಫ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸುಸಜ್ಜಿತ ಆಸನಗಳೊಂದಿಗೆ ಬರುವ ನಿರೀಕ್ಷೆಯಿದೆ.


ನ್ಯೂ-ಜೆನ್ ಹ್ಯುಂಡೈ ವೆನ್ಯೂ

ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್ ಯು ವಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಪ್ರಸ್ತುತ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳನ್ನು ಉಳಿಸಿಕೊಂಡು 2025ರೊಳಗೆ ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಇದು ಮಾರುಕಟ್ಟೆ ಬರುವ ಸಿದ್ಧತೆಯಲ್ಲಿದೆ. ಕಂಪೆನಿಯು ಹಲವು ವಿಶಿಷ್ಟ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಉತ್ಪಾದಿಸಲಾಗುವ ಮೊದಲ ಹ್ಯುಂಡೈ ಮಾದರಿ ಇದಾಗಿದೆ.


ಸ್ಕೋಡಾ ಕಾಂಪ್ಯಾಕ್ಟ್ ಎಸ್ ಯು ವಿ

ಸ್ಕೋಡಾ ತನ್ನ ಮುಂಬರುವ ಕಾಂಪ್ಯಾಕ್ಟ್ ಎಸ್ ಯು ವಿಗಾಗಿ ಮೊದಲ ಟೀಸರ್ ಅನ್ನು ಅನಾವರಣಗೊಳಿಸಿದೆ. 2025ರ ಮಾರ್ಚ್ ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದನ್ನು MQB A0 IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು ಮತ್ತು ಕುಶಾಕ್‌ಗಿಂತ ಕಡಿಮೆ ವೀಲ್‌ಬೇಸ್ ಅನ್ನು ಹೊಂದಿರುತ್ತದೆ.

ಇದು ADAS ವೈಶಿಷ್ಟ್ಯಗಳನ್ನು ಮತ್ತು 360-ಡಿಗ್ರಿ ಕೆಮರಾವನ್ನು ಹೊಂದಿರಲಿದೆ. 115bhp, 1.0L ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗುತ್ತದೆ.

Continue Reading
Advertisement
Cheating Case
ಪ್ರಮುಖ ಸುದ್ದಿ2 hours ago

Cheating case : ಭಕ್ತರ 40 ಲಕ್ಷ ರೂ. ಗುಳುಂ ಮಾಡಲು ದರೋಡೆ ಕತೆ ಕಟ್ಟಿದ ಸ್ವಾಮೀಜಿ!

Snake
ವೈರಲ್ ನ್ಯೂಸ್2 hours ago

ತನಗೆ ಒಮ್ಮೆ ಕಚ್ಚಿದ ಹಾವಿಗೆ ಮೂರು ಬಾರಿ ಕಚ್ಚಿ ಸೇಡು ತೀರಿಸಿಕೊಂಡ ವ್ಯಕ್ತಿ; ಕೊನೆಗೆ ಬದುಕುಳಿದಿದ್ದು ಯಾರು?

Mohammed Siraj
ಪ್ರಮುಖ ಸುದ್ದಿ2 hours ago

Mohammed Siraj : ವೇಗದ ಬೌಲರ್​ ಮೊಹಮ್ಮದ್​ ಸಿರಾಜ್​ಗೆ ಹೈದರಾಬಾದ್​​ನಲ್ಲಿ ಭರ್ಜರಿ ಸ್ವಾಗತ, ಇಲ್ಲಿದೆ ವಿಡಿಯೊ

Akshata Murty
ವಿದೇಶ2 hours ago

Akshata Murty: ರಿಷಿ ಸುನಕ್‌ ವಿದಾಯದ ಭಾಷಣದ ವೇಳೆ ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್ ಬೆಲೆ 42 ಸಾವಿರ ರೂ.!

Hardik Pandya
ಪ್ರಮುಖ ಸುದ್ದಿ3 hours ago

Hardik Pandya : ವಿಶ್ವ ಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಮುತ್ತು ಕೊಟ್ಟು ಅಭಿನಂದಿಸಿದ ಇಶಾನ್ ಕಿಶನ್​

Weather News
ಉತ್ತರ ಕನ್ನಡ4 hours ago

Weather News: ಭಾರಿ ಮಳೆ; ಕರಾವಳಿಯಾದ್ಯಂತ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Mahindra Marazzo
ಪ್ರಮುಖ ಸುದ್ದಿ4 hours ago

Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

BSP President
ದೇಶ4 hours ago

BSP President: ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಹತ್ಯೆ; ರಾಜಕೀಯ ವೈಷಮ್ಯ ಕಾರಣ?

Dengue Fever
ಕರ್ನಾಟಕ4 hours ago

Dengue Fever: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 155 ಡೆಂಗ್ಯೂ ಕೇಸ್‌ಗಳು ಪತ್ತೆ!

Rohit Sharma
ಪ್ರಮುಖ ಸುದ್ದಿ5 hours ago

T20 World Cup : ಮಹಾರಾಷ್ಟ್ರದ ಆಟಗಾರರಿಗೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಮಹಾ ಸಿಎಂ ಶಿಂಧೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ8 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ9 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ10 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ12 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ13 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು15 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು15 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ19 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌