Leeches: ಮಳೆಗಾಲದ ಚಾರಣದಲ್ಲಿ ಕಾಡುವ ಜಿಗಣೆಗಳಿಂದ ಮುಕ್ತಿ ಹೇಗೆ? - Vistara News

ಪ್ರವಾಸ

Leeches: ಮಳೆಗಾಲದ ಚಾರಣದಲ್ಲಿ ಕಾಡುವ ಜಿಗಣೆಗಳಿಂದ ಮುಕ್ತಿ ಹೇಗೆ?

ಮಳೆಗಾಲದ ಚಾರಣದಲ್ಲಿ (monsoon trekking) ಬಹುತೇಕರು ಹೆದರುವುದು ಈ ಜಿಗಣೆಗಳೆಂಬ (leeches) ಪುಟಾಣಿ ಜೀವಿಗೆ ಮಾತ್ರವೇ. ರಕ್ತ ಕುಡಿವ ಜೀವಿಗಳಿಂದ ನಮ್ಮ ಉಳಿಗಾಲ ಹೇಗೆ (leech protection) ಚಿಂತಿಸಿದರೆ, ಇಲ್ಲಿ ಕೆಲವು ಟಿಪ್ಸ್‌ಗಳಿವೆ. ಆ ಮೂಲಕ ಈ ಜಿಗಣೆಗಳಿಂದ ಮುಕ್ತಿ ಸಾಧ್ಯವಿದೆ.

VISTARANEWS.COM


on

monsoon trekking
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಳೆಗಾಲದ ಪ್ರವಾಸ ಅಥವಾ ಚಾರಣಗಳೆಲ್ಲ (Monsoon trekking) ಭಾವಜೀವಿಗಳ ಬದುಕಿನ ಪ್ರಮುಖ ಅಧ್ಯಾಯಗಳೇನೋ ಸರಿ. ಆದರೆ ಈ ಮಳೆಯ ಮಧುರ ಗಳಿಗೆಯಲ್ಲಿ ರಕ್ತಪಿಪಾಸುಗಳಂತೆ ನಮ್ಮನ್ನು ಕಾಡುವ ಏಕೈಕ ಜೀವಿ ಎಂದರೆ ಅದು ಬಹುಶಃ ಲೀಚ್‌ (Leeches) ಅಥವಾ ಜಿಗಣೆ ಅಥವಾ ಉಂಬಳ. ಈ ಲೀಚ್‌ ಅಥವಾ ಉಂಬಳ ಎಂಬ ಪುಟಾಣಿ ಹುಳು ʻಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದುʼ ಎಂಬ ಗಾದೆಗೆ ಸರಿಯಾದ ಹೋಲಿಕೆ. ಯಾಕೆಂದರೆ, ಮಳೆಗಾಲದ ಪ್ರಯಾಣದಲ್ಲಿ ಬಹುತೇಕರು ಹೆದರುವುದು ಈ ಪುಟಾಣಿ ಜೀವಿಗೆ ಮಾತ್ರವೇ ಎಂದರೆ ತಪ್ಪಲ್ಲ.

ಮಳೆಗಾಲದಲ್ಲಿ ಗುಡ್ಡ ಬೆಟ್ಟಗಳಲ್ಲಿ ಕಣಿವೆ ಹಾದಿಗಳಲ್ಲಿ ಸದಾ ಜಿನುಗುವ ನೀರ ಒರತೆಯ ಹಸಿರು ಹಸಿರು ತಾಣಗಳಲ್ಲಿ ನಾವು ಕಳೆದು ಹೋದಾಗ ನಮ್ಮ ಕಾಲುಗಳ ಮೂಲಕ ಮೈಮೇಲೆ ಮೆಲ್ಲನೆ ಹತ್ತಿ ನಿಧಾನವಾಗಿ ರಕ್ತ ಕುಡಿಯುತ್ತಾ ತಾನೂ ದೇಹ ಬೆಳೆಸುತ್ತಾ, ನಮ್ಮ ರಕ್ತವನ್ನು ಹೀರಿ ಕೊಬ್ಬಿ ಬೆಳೆದಾಗಲೇ ನಮ್ಮ ಗಮನಕ್ಕೆ ಬಂದು ಭಯ ಹುಟ್ಟಿಸಬಹುದಾದ ಶಾಂತ ಜೀವಿ. ಆದರೆ ಹೀಗೆ ರಕ್ತ ಕುಡಿವ ಜೀವಿಗಳಿಂದ ನಮ್ಮ ಉಳಿಗಾಲ ಹೇಗೆ (leech protection) ಚಿಂತಿಸಿದರೆ, ಇಲ್ಲಿ ಕೆಲವು ಟಿಪ್ಸ್‌ಗಳಿವೆ. ಆ ಮೂಲಕ ಈ ಜಿಗಣೆಗಳಿಂದ ಮುಕ್ತಿ ಸಾಧ್ಯವಿದೆ.

1. ಚಾರಣ ಅಥವಾ ಜಿಗಣೆಗಳಿರುವಂಥ ಪ್ರದೇಶದಲ್ಲಿ ನಡಿಗೆ ಮಾಡುವ ಸಂದರ್ಭ ಬಂದಾಗ ವಹಿಸಬಹುದಾದ ಮುಂಜಾಗ್ರತೆ ಎಂದರೆ ಜಿಗಣೆ ಸಾಕ್ಸ್‌ಗಳನ್ನು ಬಳಸುವುದು. ಮಾರುಕಟ್ಟೆಯಲ್ಲಿ ಇದೀಗ ಜಿಗಣೆ ಕಡಿಯಲು ಸಾಧ್ಯವಾಗದಂತಹ ಸಾಕ್ಸ್‌ಗಳು ಬಂದಿದ್ದು ಅವುಗಳನ್ನು ಧರಿಸಬಹುದು. ಇದು ಅತ್ಯಂತ ಸುಲಭ ಹಾಗೂ ಸರಳ ವಿಧಾನ. ಈ ಕಾಲುಚೀಲಗಳು ನಿಮ್ಮ ಮೊಣಕಾಲವರೆಗೆ ರಕ್ಷಣೆ ನೀಡಬಲ್ಲುದಾಗಿದ್ದು, ಜಿಗಣೆ ನಿಮ್ಮ ಕಾಲಿನ ಬೆರಳಿನ ಮೂಲಕ ನಿಮ್ಮ ಕಾಲೇರುವುದನ್ನು ತಪ್ಪಿಸುತ್ತದೆ. ಇದರ ಹೊರತಾಗಿ ಗಮ್‌ ಬೂಟುಗಳೂ ಕೂಡಾ ಸಹಾಯಕ್ಕೆ ಬರುತ್ತದೆ.

2. ಇನ್‌ಶರ್ಟ್‌ ಮಾಡಿ. ಬಟ್ಟೆಯನ್ನು ಧರಿಸುವಾಗ ಸುಲಭವಾಗಿ ಜಿಗಣೆ ಒಳಗೆ ಬರುವಂಥ ಓಪನ್‌ ಬಟ್ಟೆಗಳನ್ನು ಧರಿಸಬೇಡಿ. ಆದಷ್ಟು ದೇಹವನ್ನು ಮುಚ್ಚುವಂಥದ ಬಟ್ಟೆಗಳಿರಲಿ. ಶರ್ಟ್‌ ಧರಿಸಿದ್ದರೆ, ಅದನ್ನು ಪ್ಯಾಂಟ್‌ ಒಳಗೆ ಟಕ್‌ ಇನ್‌ ಮಾಡಿ. ಇದರಿಂದ, ಜಿಗಣೆ ಎಲ್ಲೆಂದರಲ್ಲಿ ನಿಮ್ಮ ದೇಹ ಪ್ರವೇಶಿಸುವುದು ತಪ್ಪುತ್ತದೆ.

3. ಒಣ ಹಾಗೂ ಬಿಸಿಯಾದ ಸೆಖೆ ಪ್ರದೇಶಗಳಲ್ಲಿ ಜಿಗಣೆ ವಾಸಿಸುವುದಿಲ್ಲ. ಜಿಗಣೆಗೆ ಸಾಕಷ್ಟು ನೀರಿರುವ, ಮಳೆಕಾಡುಗಳಂತಹ ವಾತಾವರಣವಿರುವ, ನೀರು ಜಿನುಗುವ ಪ್ರದೇಶಗಳಲ್ಲಷ್ಟೇ ವಾಸಿಸುತ್ತವೆ. ಹಾಗಾಗಿ ನೀರಿರುವ, ಒದ್ದೆ ಪ್ರದೇಶಗಳಲ್ಲಿ ಹೆಚ್ಚು ಎಚ್ಚರವಹಿಸಿ. ಹಾದಿ ಮಧ್ಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕೆನಿಸಿದಲ್ಲಿ, ಒದ್ದೆ ಜಾಗದಲ್ಲಿ ವಿಶ್ರಮಿಸಬೇಡಿ. ಸೂರ್ಯನ ಶಾಖ, ಬೆಳಕು ನೇರವಾಗಿ ಬೀಳುವ ಪ್ರದೇಶದಲ್ಲಿ ಹಾಗೂ ಒಣ ಪ್ರದೇಶವನ್ನು ಹುಡುಕಿ.

4. ಯಾವಾಗಲೂ ಆಯಾ ಪ್ರದೇಶದ ಸ್ಥಳೀಯರ ಸಲಹೆ ಪಡೆಯಿರಿ. ಜಿಗಣೆಯಿಂದ ಪಾರಾಗಲು ಅವರ ಬಳಿ ಸರಳ ಉತ್ತರಗಳಿರುತ್ತವೆ. ಅವರ ಅನುಭವ ಹಾಗೂ ಸಲಹೆಯನ್ನು ಪಡೆಯುವುದು ಒಳ್ಳೆಯದು.

5. ತಂಬಾಕು ಬಹಳ ಸುಲಭವಾಗಿ ಜಿಗಣೆಯನ್ನು ಕೊಲ್ಲುತ್ತದೆ, ಅಥವಾ ದೂರ ಓಡಿಸುತ್ತದೆ. ಹಾಗಾಗಿ ತಂಬಾಕನ್ನು ಹತ್ತಿರದ ಮಾರುಕಟ್ಟೆಯಲ್ಲಿ ಖರೀದಿಸಿ ನೀವು ಪ್ರಯಾಣ ಮಾಡುವ ಮೊದಲ ದಿನವೇ ನೀರಿನಲ್ಲಿ ನೆನೆ ಹಾಕಿ. ಈ ನೀರನ್ನು ಬೆಳಗ್ಗೆ ಕೈ ಕಾಲುಗಳಿಗೆ ಹಚ್ಚಿಕೊಳ್ಳಿ. ಆಮೇಲೆ ಸಾಕ್ಸ್‌ ಹಾಕಿಕೊಳ್ಳಲೂ ಬಹುದು. ಗಮ್‌ ಬೂಟುಗಳನ್ನೂ ಧರಿಸಬಹುದು. ತಂಬಾಕು ಮೆತ್ತಿಕೊಂಡ ಚರ್ಮವನ್ನು ಕಚ್ಚಲು ಬರುವ ಜಿಗಣೆ ನಿಮ್ಮ ರಕ್ತ ಹೀರಲು ಸಾಧ್ಯವಾಗುವುದಿಲ್ಲ. ಸೀಮೆಎಣ್ಣೆಯನ್ನು ಕಾಲುಗಳಿಗೆ ಹಚ್ಚಿಕೊಳ್ಳುವ ಮೂಲಕವೂ ಜಿಗಣೆಯಿಂದ ರಕ್ಷಣೆ ಪಡೆಯಬಹುದು.

leech on hand

6. ಜಿಗಣೆ ನಿಮ್ಮ ಕಾಲಿಗೋ ಕೈಗೋ ಕಚ್ಚಿ ರಕ್ತ ಹೀರಲು ಆರಂಭಿಸಿತು ಎಂದಾದಲ್ಲಿ ಅದನ್ನು ಎಳೆದು ತೆಗೆದು ಬಿಸಾಕಲು ಪ್ರಯತ್ನಿಸಬೇಡಿ. ಆ ಸಂದರ್ಭ ಅದರ ಬಾಯಿಯ ಭಾಗ ಚರ್ಮದೊಳಗೇ ಅಂಟಿಕೊಂಡು ಉಳಿದುಬಿಡುವ ಸಂಭವ ಹೆಚ್ಚು. ಇದರಿಂದ ಅದು ಕಜ್ಜಿಯಾಗಿ ಇನ್ನೂ ಹೆಚ್ಚಿನ ಸಮಸ್ಯೆಗಳಾಗಬಹುದು. ಜಿಗಣೆ ಎಷ್ಟು ಗಟ್ಟಿಯಾಗಿ ಕಚ್ಚಿರುತ್ತದೆ ಎಂದರೆ ಅದರ ದೇಹದ ಜೊತೆಗೆ ಅದು ಬರಲಾರದು. ಹಾಗಾಗಿ, ಒಮ್ಮೆ ಕಚ್ಚಿತೆಂದರೆ ಬಹಳ ಜಾಗರೂಕತೆಯಿಂದ ತೆಗೆಯಲು ಪ್ರಯತ್ನಿಸಿ. ನಿಮ್ಮ ಬೆರಳಿನಿಂದ ಅದು ಕಚ್ಚಿರುವ ಭಾಗದ ಪಕ್ಕ ಒತ್ತಿ ಬಿಡಿಸಲು ಪ್ರಯತ್ನಿಸಿ.

ಜಿಗಣೆಗಳಿಗೆ ಹೆದರಿ ಪ್ರವಾಸ ಅಥವಾ ಚಾರಣ ಮಾಡದೆ ಇರಬೇಡಿ. ಕೊಂಚ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಜಿಗಣೆಯ ಸಮಸ್ಯೆಯಾಗದಂತೆಯೂ ಚಾರಣ ಮುಗಿಸಬಹುದು!

ಇದನ್ನೂ ಓದಿ: Monsoon trekking: ರಕ್ತ ಹೀರುವ ಜಿಗಣೆಗಳಿಗೆ ಹೆದರುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Spring Tourism: ವಸಂತ ಕಾಲದಲ್ಲಿ ವೀಕ್ಷಿಸಲೇಬೇಕಾದ ಭಾರತದ ರಮ್ಯ ತಾಣಗಳಿವು!

ತಿಳಿ ಹಸಿರಿನಿಂದ ಬೆಟ್ಟ ಗುಡ್ಡಗಳೆಲ್ಲ ನಳನಳಿಸಿ ಅದ್ಭುತವಾಗಿ ಕಾಣುವ ಇಂಥ ಸಂದರ್ಭದಲ್ಲಿ ಪ್ರವಾಸವೇ ಒಂದು ಮಧುರ ಅನುಭೂತಿ. ಅತ್ತ ಬಿಸಿಲೂ ಖಾರವಿಲ್ಲದ, ಇತ್ತ ಚಳಿಯೂ ಇಲ್ಲದ ಹಿತವಾದ ತಂಗಾಳಿ ಬೀಸುವ ಕಾಲ. ಈ ಕಾಲದಲ್ಲಿ ಎಲ್ಲಿ ಪ್ರವಾಸ (Spring Tourism) ಮಾಡಬಹುದು? ಇಲ್ಲಿದೆ ಮಾಹಿತಿ.

VISTARANEWS.COM


on

Spring Tourism
Koo

ವಸಂತ ಕಾಲಕ್ಕೆ ಅತ್ಯಂತ ಸುಂದರ ಕಾಲಗಳಲ್ಲಿ ಪ್ರಮುಖ ಸ್ಥಾನ. ಚಳಿಗಾಲದಲ್ಲಿ ಬೋಳಾಗಿದ್ದ ಮರಗಿಡಗಳೆಲ್ಲ ಚಿರುಗಿ ಮೊಗ್ಗರಳಿ ಹೂವಾಗಿ ಜಗತ್ತೆಲ್ಲ ಖುಷಿಯಿಂದ ನಳನಳಿಸುವಂತೆ ಕಾಣುವ ಕಾಲ. ಈ ಕಾಲದಲ್ಲಿ ಪ್ರವಾಸ ಅತ್ಯಂತ ಮಧುರ. ಹಕ್ಕಿಗಳೆಲ್ಲ ಸಂತಸದಿಂದ ಹಾಡಿ ಹಾರಾಡಿ ಕುಣಿವ ಕಾಲವಿದು. ತಿಳಿ ಹಸಿರಿನಿಂದ ಬೆಟ್ಟ ಗುಡ್ಡಗಳೆಲ್ಲ ನಳನಳಿಸಿ ಅದ್ಭುತವಾಗಿ ಕಾಣುವ ಇಂಥ ಸಂದರ್ಭದಲ್ಲಿ ಪ್ರವಾಸವೇ ಒಂದು ಮಧುರ ಅನುಭೂತಿ. ಅತ್ತ ಬಿಸಿಲೂ ಖಾರವಿಲ್ಲದ, ಇತ್ತ ಚಳಿಯೂ ಇಲ್ಲದ ಹಿತವಾದ ತಂಗಾಳಿ ಬೀಸುವ ಕಾಲ. ಕೆಲವು ಸ್ಥಳಗಳನ್ನು ಅಕ್ಷರಶಃ ವಸಂತ ಕಾಲದಲ್ಲೇ ನೋಡಬೇಕು. ಯಾಕೆಂದರೆ, ಎಲ್ಲ ಕಾಲದಲ್ಲೂ ಸುಂದರವಾಗಿ ಕಾಣುವ ಸ್ಥಳ ವಸಂತಕಾಲದಲ್ಲಿ ಹೇಗಿದ್ದೀತು ಎಂಬ ಕಲ್ಪನೆಯನ್ನು ಯಾವುದೇ ಪ್ರಕೃತಿ ಪ್ರಿಯನೂ ಮಾಡಬಲ್ಲ. ಹಾಗಾದರೆ ಬನ್ನಿ, ವಸಂತಕಾಲದಲ್ಲಿ ಹೋಗಲೇಬೇಕಾದ (Spring Tourism) ಭಾರತದ ಪ್ರವಾಸೀ ಸ್ಥಳಗಳ್ಯಾವುವು ಎಂಬುದನ್ನು ನೋಡೋಣ.

Dal lake at Srinagar, Kashmir, India India Tourism

ಶ್ರೀನಗರ, ಕಾಶ್ಮೀರ

ಭೂಲೋಕದ ಸ್ವರ್ಗ ಎಂದೇ ಹೆಸರು ಪಡೆದ ಕಾಶ್ಮೀರವನ್ನು ಚಳಿಗಾಲದಲ್ಲಿ ಹಿಮದಲ್ಲಿ ನೋಡಿ ಖುಷಿ ಪಡುವುದು ಬೇರೆಯೇ ಆದರೂ ವಸಂತ ಕಾಲದಲ್ಲಿ ನೋಡುವುದು ಇನ್ನೂ ಸೊಗಸು. ಕಾಶ್ಮೀರದ ಶ್ರೀನಗರದ ಟ್ಯುಲಿಪ್‌ ಉದ್ಯಾನದಲ್ಲಿ ಬಣ್ಣಬಣ್ಣದಲ್ಲಿ ಟ್ಯುಲಿಪ್‌ ಹೂವರಳಿ ನಗುವುದನ್ನು ನೋಡಲು ಎರಡು ಕಣ್ಣು ಸಾಲದು. ವಿದೇಶಗಳಲ್ಲಿ ಕಾಣುವ ಈ ಹೂವು ಭಾರತದಲ್ಲಿ ಕಾಣಸಿಗುವ ಕೆಲವೇ ನಗರಗಳ ಪೈಕಿ ಶ್ರೀನಗರಕ್ಕೆ ಪ್ರಮುಖ ಸ್ಥಾನ. ಕಾಶ್ಮೀರದ ಗುಲ್ಮಾರ್ಗ್‌, ಸೋನ್‌ಮಾರ್ಗ್‌ ಸೇರಿದಂತೆ ಎಲ್ಲ ಪ್ರೇಕ್ಷಣೀಯ ಸ್ಥಳಗಳೂ ಈ ಕಾಲದಲ್ಲಿ ಮನಮೋಹಕ.

munnar

ಮುನ್ನಾರ್‌, ಕೇರಳ

ಕೇರಳದ ಮುನ್ನಾರ್‌ ಕೂಡಾ ಅತ್ಯಂತ ಸುಂದರ ಊರುಗಳಲ್ಲಿ ಒಂದು ಈ ಬೆಟ್ಟದೂರು ಹಸಿರ ಸ್ವರ್ಗ. ಹಲವಾರು ಜಲಪಾತಗಳು, ಟೂರಿಸ್ಟ್‌ ಪಾಯಿಂಟ್‌ಗಳು ಇಲ್ಲಿದ್ದು, ವಸಂತ ಕಾಲದ ಚಿಗುರು ಹಸಿರಿನಲ್ಲಿ ಚಂದವಾಗಿ ಕಾಣುತ್ತದೆ. ಹೆಚ್ಚು ಸೆಖೆಯೂ ಇಲ್ಲದ ಈ ಕಾಲದಲ್ಲಿ ಮುನ್ನಾರ್‌ ನೋಡುವುದು ಬಲು ಸೊಗಸು.

ಶಿಲ್ಲಾಂಗ್‌, ಮೇಘಾಲಯ

ಮೇಘಾಲಯವನ್ನು ನೋಡಲು ಸಕಾಲ ಎಂದರೆ ಅದು ವಸಂತ ಕಾಲ. ಹಸಿರಿನಿಂದ ನಳನಳಿಸುವ ಈ ಕಾಲದಲ್ಲಿ ಮಳೆಯೂ ಅಷ್ಟಾಗಿ ಸುರಿಯದ ಕಾರಣ ಶಿಲ್ಲಾಂಗ್‌ ಸುತ್ತಿ ನೋಡಲು ಮಳೆ ಅಡ್ಡ ಬರದು. ಅದ್ಭುತ ಸೌಂದರ್ಯದ ದಟ್ಟ ಹಸಿರಿನ ಮೇಘಾಲಯದ ಪ್ರಕೃತಿ ಸೌಂದರ್ಯವನ್ನು ಸವಿಯಲು ಇದು ಅತ್ಯುತ್ತಮ ಕಾಲ.

Darjeeling

ಡಾರ್ಜಿಲಿಂಗ್‌, ಪಶ್ಚಿಮ ಬಂಗಾಳ

ತನ್ನ ಚಹಾ ತೋಟಗಳ ಹಾಗೂ ಹಿಮಾಲಯ ಅದ್ಭುತ ಸೌಂದರ್ಯವನ್ನು ಜೊತೆಯಾಗಿ ಕಟ್ಟಿಕೊಡಬಲ್ಲ ತಾಣಗಳಲ್ಲಿ ಡಾರ್ಜಿಲಿಂಗ್‌ಗೆ ಮಹತ್ವದ ಸ್ಥಾನವಿದೆ. ಹಾಗಾಗಿ ಇದು ಪ್ರೇಮಿಗಳಿಗೆ ಸ್ವರ್ಗ. ಚಳಿಗಾಲದ ಚಳಿಯಿಂದ ಕೊಂಚ ಹೊರಬಂದು ಹಿತವಾದ ಬಿಸಿಲು, ಹೊದ್ದು ಮಲಗುವ ಚಳಿ ಎರಡನ್ನೂ ನೀಡಬಲ್ಲ ಸಮಯವೆಂದರೆ ಅದು ವಸಂತ ಕಾಲ. ಡಾರ್ಜಿಲಿಂಗನ್ನು ಈ ಕಾಲದಲ್ಲಿ ನೋಡಬೇಕು.

Gangtok, Sikkim

ಗ್ಯಾಂಗ್ಟಕ್‌, ಸಿಕ್ಕಿಂ

ಸಿಕ್ಕಿಂ ಎಂಬ ಭಾರದ ರಾಜ್ಯದ ಸೌಂದರ್ಯವನ್ನು ಬಣ್ಣಿಸಲು ಪದಗಳ ಶ್ರೀಮಂತಿಕೆ ಬೇಕು. ಸದಾ ಸುಂದರವಾಗಿ ಕಾಣುವ, ಹಿಮಾಲಯದ ಸೌಂದರ್ಯವನ್ನು ತೋರಿಸುವ ರಾಜ್ಯ. ಇಲ್ಲಿನ ಹಿಮದೂರುಗಳನ್ನೂ ನೋಡಿಕೊಂಡು, ವಸಂತದಲ್ಲಿ ನಿಧಾನವಾಗಿ ಚಿಗುರೊಡೆವ ಮರಗಿಡಗಳನ್ನೂ ಕಣ್ತುಂಬಿಕೊಂಡು, ಹೂಗಳ ರಾಶಿಯನ್ನು ನೋಡಲು ಜೀವನದಲ್ಲೊಮ್ಮೆಯಾದರೂ ಹೋಗಲೇ ಬೇಕಲ್ಲವೇ?

City of ooty, Tamil Nadu

ಊಟಿ, ತಮಿಳುನಾಡು

ನಮ್ಮ ನೆರೆಯ ರಾಜ್ಯದ ಈ ಊರಿಗೆ ನಾವು ಮನಸು ಮಾಡಿದಾಗಲೆಲ್ಲ ಹೋಗಬಹುದು. ಮೊದಲೇ ಊಟಿ ಪ್ರೇಮಿಗಳಿಗೆ ಸ್ವರ್ಗ. ಇನ್ನು, ವಸಂತ ಕಾಲದಲ್ಲಿ ಉದ್ಯಾನಗಳಲ್ಲೆಲ್ಲ ನಳನಳಿಸುವ ಹೂಗಳರಳಿದ್ದರೆ ಕೇಳಬೇಕೇ? ಪ್ರೇಮಿಗಳಿಗೆ, ನವದಂಪತಿಗಳಿಗೆ ರಮ್ಯಗಳಿಗೆಯನ್ನು ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ, ದೂರ ಪ್ರವಾಸ ಹೋಗಲಾಗದೆ ಇರುವವರು ಬೇಸರ ಪಡಬೇಕಾಗಿಲ್ಲ. ಹತ್ತಿರದ ಊಟಿಗೇ ಹೋಗಿ ಬಣ್ಣಬಣ್ಣದ ಹೂಗಳನ್ನು ಕಣ್ತುಂಬಿಕೊಂಡು ಬರಬಹುದು.

Continue Reading

ಪ್ರವಾಸ

Valentine Day: ಪ್ರೀತಿಸುವ ಜೋಡಿಗಳಿಗೆ ಸೂಕ್ತ ರೊಮ್ಯಾಂಟಿಕ್ ಪ್ರವಾಸೀ ತಾಣಗಳಿವು!

ಪ್ರೇಮಿಗಳ ದಿನ (Valentine Day) ಸಮೀಪಿಸುತ್ತಿದೆ. ಪ್ರೇಮಿಗಳು ಹೋಗಬಹುದಾದ, ಪ್ರೇಮಿಗಳ ಸ್ವರ್ಗವೇ ಆಗಿರುವ ಭಾರತದ ಕೆಲವು ಪ್ರವಾಸಿ ತಾಣಗಳನ್ನು ನೋಡೋಣ.

VISTARANEWS.COM


on

Valentine Day destination
Koo

ಫೆಬ್ರವರಿ ತಿಂಗಳು ಬಂದ ತಕ್ಷಣ ಪ್ರವಾಸ ಎಂದರೆ ನೆನಪಾಗುವುದು ರೊಮ್ಯಾಂಟಿಕ್‌ ಜಾಗಗಳು! ಕಾರಣ ವ್ಯಾಲೆಂಟೈನ್ಸ್‌ ಡೇ (Valentine Day) ಅರ್ಥಾತ್‌ ಪ್ರೇಮಿಗಳ ದಿನ. ಪ್ರೇಮಿಗಳ ದಿನ ಪ್ರೇಮಿಗಳ ಪಾಲಿನ ಹಬ್ಬ. ಪ್ರೀತಿಸುವವರಿಗೆ, ಪ್ರೀತಿಸಿ ಮದುವೆಯಾದ ಹೊಸ ಜೋಡಿಗಳಿಗೆ ಈ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ನೆನಪಿನಲ್ಲಿಡುವಂತೆ ಆಚರಿಸಬೇಕು ಎಂದು ಮನಸ್ಸಾಗುವುದು ಸಹಜವೇ. ಪ್ರೇಮಿಯ ಜೊತೆಗೆ ಊಟಕ್ಕೋ, ಪಾರ್ಕಿಗೋ ಅಥವಾ ಸಿನಿಮಾಕ್ಕೋ ಹೋಗುವುದು ಸಾಮಾನ್ಯವೇ ಆದರೂ, ಹಲವು ಜೋಡಿಗಳು ಪ್ರವಾಸದ ಯೋಜನೆಯನ್ನೂ ರೂಪಿಸುತ್ತಾರೆ. ಬನ್ನಿ, ಪ್ರೇಮಿಗಳು ಹೋಗಬಹುದಾದ, ಪ್ರೇಮಿಗಳ ಸ್ವರ್ಗವೇ ಆಗಿರುವ ಭಾರತದ ಕೆಲವು ಪ್ರವಾಸಿ ತಾಣಗಳನ್ನು ನೋಡೋಣ.

ooty

ಊಟಿ, ತಮಿಳುನಾಡು

ಹನಿಮೂನ್‌ ಅಥವಾ ಪ್ರೀತಿ ಮಾಡುವವರ ಕಣ್ಣಿಗೆ ಸ್ವರ್ಗವಾಗಿ ಕಾಣುವ ಊರು ಎಂದರೆ ಅದು ಊಟಿ. ಹತ್ತಿರದಲ್ಲೇ ಇರುವುದರಿಂದಲೋ ಅಥವಾ, ಅದಕ್ಕಿರುವ ಈ ಪರಿಭಾಷೆಯಿಂದಲೋ, ಜೋಡಿಗಳಿಗೆ ಒಮ್ಮೆಯಾದರೂ ಊಟಿಗೆ ಹೋಗಿ ಬರಬೇಕು ಅನಿಸದೆ ಇರದು. ಊಟಿಯ ಬೊಟಾನಿಕಲ್‌ ಗಾರ್ಡನ್‌ನಿಂದ ಮೊದಲ್ಗೊಂಡು ಪುಟಾಣಿ ರೈಲಿನಲ್ಲಿ ಕೂರುವವರೆಗೆ ಜೋಡಿಗಳು ಕಾಲ ಜೊತೆಯಾಗಿ ಕಾಲ ಕಳೆಯಲು ಇಲ್ಲಿ ಬೇಕಾದಷ್ಟು ಜಾಗಗಳಿವೆ. ಜೊತೆಗೆ ಚುಮುಚುಮು ಚಳಿಯ ಊಟಿ ಎಂದರೆ ಪ್ರೇಮಿಗಳಿಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎನ್ನಲು ಅಡ್ಡಿಯಿಲ್ಲ.

Gangtok, Sikkim

ಗ್ಯಾಂಗ್‌ಟಕ್‌, ಸಿಕ್ಕಿಂ

ಹಿಮಾಲಯದ ತಪ್ಪಲ ಗ್ಯಾಂಗ್‌ಟಕ್‌ ನಗರವು ಅತ್ತ ಸುಂದರ ಅಷ್ಟೇ ರೊಮ್ಯಾಂಟಿಕ್‌ ಆದ ನಗರಗಳಲ್ಲಿ ಒಂದು. ಇಲ್ಲಿಂದ ವಿಶ್ವದ ಮೂರನೇ ಅತ್ಯಂತ ಎತ್ತರದ ಪರ್ವತವಾದ ಕಾಂಚನಜುಂಗಾವನ್ನು ಕಾಣಬಹುದು. ಬೆಳ್ಳಂಬೆಳಗ್ಗೆ ಎದ್ದು ಹಿಮಪರ್ವತಗಳಿಗೆ ಸೂರ್ಯ ರಶ್ಮಿ ಚುಂಬಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಹಿಮಪರ್ವತಗಳು, ಸರೋವರ, ಜಲಪಾತ, ಕಡಿದಾದ ರಸ್ತೆಗಳು ಹೀಗೆ ಪ್ರಕೃತಿ ಪ್ರೇಮಿಗಳಿಗೆ ಖಂಡಿತಾ ಇಷ್ಟವಾಗುವ ಜಾಗವಿದು.

Jaisalmer Rajasthan Sunset Spots in India

ಜೈಸಲ್ಮೇರ್‌, ರಾಜಸ್ಥಾನ

ರಾಜಸ್ಥಾನದಲ್ಲೇನಿದೆ, ಮರುಳುಗಾಡು, ಅದ್ಹೇಗೆ ರೊಮ್ಯಾಂಟಿಕ್‌ ಆದೀತು ಎಂದು ನೀವಂದುಕೊಂಡರೆ ಅದು ನಿಮ್ಮ ಮೂರ್ಖತನ. ಚಳಿಗಾಲದಲ್ಲಿ ಅದ್ಭುತ ಚಳಿಯನ್ನು ಹೊಂದಿರುವ ಜೈಸಲ್ಮೇರ್‌ ಪ್ರವಾಸ ಯುವ ಜೋಡಿಗಳಿಗೆ ಸಹಾಸಮಯ ಪ್ರವಾಸವಾಗಬಲ್ಲದು. ಇಲ್ಲಿನ ಮರಳುಗಾಡಿನಲ್ಲಿ ಒಂಟೆಯ ಮೇಲೆ ಕೂತು ಸಫಾರಿ ಮಾಡಬಹುದು, ಅಷ್ಟೇ ಯಾಕೆ, ಮೈನವಿರೇಳಿಸುವ ಜೀಪ್‌ ಸಫಾರಿಯೂ ಇಲ್ಲಿ ಲಭ್ಯ. ಜೊತೆಗೆ ಕೂತು ಬೇಕಾದಷ್ಟು ಫೋಟೋ ತೆಗೆದುಕೊಳ್ಳಲು ಅರಮನೆಗಳೂ, ಕೋಟೆ ಕೊತ್ತಲಗಳೂ ಇವೆ. ಪ್ರೇಮಿಗಳ ದಿನವನ್ನು ರಸಮಯವನ್ನಾಗಿಸಲು, ಈ ಗೋಲ್ಡನ್‌ ಸಿಟಿಗಿಂತ ಅದ್ಭುತ ತಾಣ ಇನ್ನೆಲ್ಲಿದೆ ಹೇಳಿ!

Andaman and Nicobar Islands Honeymoon Places In India

ಅಂಡಮಾನ್‌ ಮತ್ತು ನಿಕೋಬಾರ್

ಈ ದ್ವೀಪಸಮೂಹ ಸಮುದ್ರ ತೀರವನ್ನು ಇಷ್ಟಪಡುವ ಮಂದಿಗೆ ಹೇಳಿ ಮಾಡಿಸಿದ್ದು. ಮೈಚಾಚಿ ಚಳಿಗಾಲದ ಮೆದುವಾದ ಸೂರ್ಯನ ಕಿರಣಗಳಿಗೆ ಮೈಯೊಡ್ಡುತ್ತಾ, ಸಮುದ್ರದಲ್ಲಿ ಸಾಹಸಮಯ ಕ್ರೀಡೆಗಳನ್ನಾಡುತ್ತಾ ಸ್ವಚ್ಛಂದವಾಗಿ ವಿಹರಿಸಲು ಅಂಡಮಾನ್‌ ಅದ್ಭುತ ತಾಣ.

ಶಿಲ್ಲಾಂಗ್‌, ಮೇಘಾಲಯ

ಮಳೆಯೂರು ಮೇಘಾಲಯವನ್ನು ಸುತ್ತಿ ನೋಡಲು ಚಳಿಗಾಲಕ್ಕಿಂತ ಹೊರತಾದ ಇನ್ನೊಂದು ಕಾಲವಿಲ್ಲ. ಕಾರಣ ಮಳೆ ಬರದೇ ಇರುವ ಪ್ರಶಾಂತವಾದ ಕಾಲವಿದು. ಪ್ರೇಮಿಗಳಿಗೆ ಹೇಳಿ ಮಾಡಿಸಿದ ಚಳಿ, ಹಸಿರು ಪ್ರಕೃತಿ, ಕಾಡುಮೇಡು, ನದಿ, ಝರಿ, ಬೆಟ್ಟಗುಡ್ಡ ಎಲ್ಲವೂ ಇಲ್ಲಿದೆ.

Alleppey, Kerala

ಅಲೆಪ್ಪಿ, ಕೇರಳ

ಕೇರಳವೆಂಬ ದೇವರನಾಡು ಯಾವ ಪ್ರೇಮಿಗಳಿಗೆ ತಾನೇ ಇಷ್ಟವಾಗಲಿಕ್ಕಿಲ್ಲ! ಪ್ರೇಮ ಇದ್ದಾಗ ಜಗತ್ತೇ ಚಂದ ಕಾಣುತ್ತದಂತೆ. ಇನ್ನು ಕೇರಳವೆಂಬ ಸುಂದರ ಊರು ಪ್ರೇಮಿಗಳ ಕಣ್ಣಿಗೆ ಸ್ವರ್ಗವಾಗಿಯೇ ಕಂಡರೆ ಆಶ್ಚರ್ಯವಿಲ್ಲ. ಅದರಲ್ಲೂ, ಅಲೆಪ್ಪಿಯಂತಹ ಊರಿನಲ್ಲಿ ಹೌಸ್‌ಬೋಟ್‌ನಲ್ಲಿ ವಿಹರಿಸುತ್ತಾ, ಏಕಾಂತ ಅನುಭವಿಸಲು ಪ್ರೇಮಿಗಳಿಗೆ ಪರ್ಫೆಕ್ಟ್‌ ತಾಣ.

Goa

ಗೋವಾ

ಹೇಳಿ ಕೇಳಿ ಗೋವಾವನ್ನು ಬಿಟ್ಟರೆ ಹೇಗೆ? ಎಡವಿಬಿದ್ದರೆ ಸಾಕು, ಒಂದೊಂದು ಬೀಚು ಸಿಗುವಷ್ಟು ಬೀಚುಗಳಿರುವ ನಗರಿ. ಯುವಜನರ ಮೋಜು ಮಸ್ತಿಗಳಿಗೆ ಬೇಕಾದ ಎಲ್ಲವನ್ನೂ ಪೂರೈಸುವ ಪ್ರವಾಸೀ ತಾಣ. ಈ ಗೌಜು ಗದ್ದಲ ಬೇಡವೆಂದರೆ, ಪ್ರಶಾಂತ ಬೀಚುಗಳು ಬೇಕಾದಷ್ಟಿವೆ. ಸಾಹಸೀ ಕ್ರೀಡೆಗಳೀಗೂ ಅಚ್ಚುಮೆಚ್ಚಿನ ತಾಣ. ಪ್ರೇಮಿಗಳಿಗೆ ಜಗವ ಮರೆಯಲು ಇದಕ್ಕಿಂತ ಇನ್ನೇನು ಬೇಕು!

ಇದನ್ನೂ ಓದಿ: Winter Travel Fashion Tips: ಆಕರ್ಷಕ ವಿಂಟರ್‌ ಟ್ರಾವೆಲ್‌ ಫ್ಯಾಷನ್‌ಗೆ 5 ಸಿಂಪಲ್‌ ಟಿಪ್ಸ್

Continue Reading

ದೇಶ

Budget 2024: ಲಕ್ಷದ್ವೀಪದಲ್ಲಿ ಹೂಡಿಕೆಯ ಮದ್ದು, ತಗಾದೆ ತೆಗೆದ ಮಾಲ್ಡೀವ್ಸ್‌ಗೆ ಗುದ್ದು

Budget 2024: ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ಗೆ ಕೇಂದ್ರ ಸರ್ಕಾರ ಗುದ್ದು ನೀಡಿದೆ. ಲಕ್ಷದ್ವೀಪ ಪ್ರವಾಸೋದ್ಯಮಕ್ಕಾಗಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಆದ್ಯತೆ ನೀಡಿದೆ.

VISTARANEWS.COM


on

Vistara Editorial, Balanced budget by Central Government
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ (Lakshadweep Tourism) ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ಗೆ ಈಗ ಬಜೆಟ್‌ನಲ್ಲಿ (Budget 2024) ಭಾರತ (India Maldives Row) ತಿರುಗೇಟು ನೀಡಿದೆ. “ಲಕ್ಷದ್ವೀಪ ಸೇರಿ ದೇಶದ ಎಲ್ಲೆಡೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಲಕ್ಷದ್ವೀಪದಲ್ಲಿ ಭಾರಿ ಪ್ರಮಾಣದ ಹೂಡಿಕೆಯಾಗಲಿದೆ” ಎಂದು ಬಜೆಟ್‌ ಭಾಷಣದ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಸ್ತಾಪಿಸಿದರು.

“ದೇಶದ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಂದರು ಸಂಪರ್ಕ, ಪ್ರವಾಸೋದ್ಯಮ ಮೂಲ ಸೌಕರ್ಯಗಳ ಅಭಿವೃದ್ಧಿ, ಲಕ್ಷದ್ವೀಪ ಸೇರಿ ದೇಶದ ಎಲ್ಲ ದ್ವೀಪಗಳನ್ನು ಅಭಿವೃದ್ಧಿಗೊಳಿಸಲಾಗುವುದು” ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. ಭಾರತದ ಆಂತರಿಕ ವಿಚಾರದಲ್ಲಿ ಸುಖಾಸುಮ್ಮನೆ ಮೂಗು ತೂರಿಸಿದ್ದ ಮಾಲ್ಡೀವ್ಸ್‌ಗೆ ಇದರಿಂದ ಭಾರಿ ಹಿನ್ನಡೆಯಾಗಲಿದೆ. ಈಗಾಗಲೇ ಭಾರತದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಆರಂಭವಾದ ಬಳಿಕ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವ ಅಗ್ರ ರಾಷ್ಟ್ರಗಳಲ್ಲಿ ಭಾರತವು ಅಗ್ರ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ ಎಂದೇ ಹೇಳಲಾಗುತ್ತಿದೆ.

ಜನವರಿ 28ರವರೆಗೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದವರು

ದೇಶಭೇಟಿ ನೀಡಿದವರುಮಾರುಕಟ್ಟೆಗೆ ಕೊಡುಗೆ
ರಷ್ಯಾ 18,561 10.6%
ಇಟಲಿ 18,111 10.4%
ಚೀನಾ 16,529 9.5%
ಬ್ರಿಟನ್‌ 14,588 8.4%
ಭಾರತ 13,989 8.0%

ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು ಮಾಲ್ಡೀವ್ಸ್‌ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್‌ ವಿರುದ್ಧ ಅಭಿಯಾನವೇ ಶುರುವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಲಿಕ ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದರು. ಈಗ ಅದರ ಪರಿಣಾಮವನ್ನು ಮಾಲ್ಡೀವ್ಸ್‌ ಎದುರಿಸುತ್ತಿದೆ.

ಇದನ್ನೂ ಓದಿ: Budget 2024: ಗರ್ಭಕಂಠ ಕ್ಯಾನ್ಸರ್‌ ತಡೆಗೆ ಬಾಲಕಿಯರಿಗೆ ಉಚಿತ ಲಸಿಕೆ; ‘ಆರೋಗ್ಯ’ಕ್ಕೆ ಸಿಕ್ಕಿದ್ದೇನು?

ಮಾಲ್ಡೀವ್ಸ್‌ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರವಾಸ

Trekking Restriction: ಚಾರಣಪ್ರಿಯರಿಗೆ ಶಾಕ್‌; ಆನ್‌ಲೈನ್‌ ಬುಕಿಂಗ್‌ ಇಲ್ಲದ ಜಾಗಗಳಿಗೆ ಪ್ರವೇಶವಿಲ್ಲ

Trekking Restriction : ಚಾರಣ ಪ್ರಿಯರಿಗೆ ಸರ್ಕಾರ ಶಾಕ್‌ ನೀಡಿದೆ. ಇನ್ನು ಮುಂದೆ ಆನ್‌ಲೈನ್‌ ಬುಕಿಂಗ್‌ಗೆ ಅವಕಾಶವಿಲ್ಲದ ಪ್ರದೇಶಗಳಲ್ಲಿ ಟ್ರೆಕಿಂಗ್‌ಗೆ ಅವಕಾಶವಿಲ್ಲ. ಇದೊಂದು ತಾತ್ಕಾಲಿಕ ಕ್ರಮವೆಂದು ಹೇಳಲಾಗಿದೆ.

VISTARANEWS.COM


on

trekking restriction Kumaraparvata
ಜನವರಿ 26ರಂದು ಕುಮಾರಪರ್ವತಕ್ಕೆ ಹೋಗಲು ಜನಸಾಗರ!
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಾರಾಂತ್ಯಗಳಲ್ಲಿ ಚಾರಣ ಪ್ರದೇಶಗಳು (Trekking Paths) ತುಂಬಿ ತುಳುಕುತ್ತಿರುತ್ತವೆ. ಈ ರೀತಿ ವಿಪರೀತ ದಟ್ಟಣೆಯನ್ನು ನಿವಾರಿಸುವುದಕ್ಕೆ ರಾಜ್ಯ ಸರ್ಕಾರ (Karnataka Government) ಶಾಕಿಂಗ್‌ ಕ್ರಮವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ಆನ್‌ ಲೈನ್‌ ಬುಕ್ಕಿಂಗ್‌ (Online booking) ಅವಕಾಶವಿಲ್ಲದೆ, ನೇರವಾಗಿ ಯಾರು ಬೇಕಾದರೂ ಹೋಗಬಹುದಾದ ಪ್ರದೇಶಗಳಲ್ಲಿ ಚಾರಣಕ್ಕೆ ನಿರ್ಬಂಧ (Trekking Restriction) ವಿಧಿಸಿ ಆದೇಶ ಹೊರಡಿಸಲಾಗಿದೆ. ಅಂದರೆ, ಇನ್ನು ಮುಂದೆ ಎಲ್ಲಿಗೆ ಹೋಗಬೇಕಾದರೂ ಆನ್‌ಲೈನ್‌ ಬುಕಿಂಗ್‌ ಇರುವ ಜಾಗಕ್ಕೆ ಮಾತ್ರ ಹೋಗಬಹುದು. ಆನ್‌ಲೈನ್‌ ಬುಕಿಂಗ್‌ ಇರುವಲ್ಲಿಗೆ ಮಾತ್ರ ಹೋಗಬಹುದು.

ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರಪರ್ವತಕ್ಕೆ ಜ.26ರಂದು ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಅಲ್ಲಿ ಭಾರಿ ಅವ್ಯವಸ್ಥೆ ಕಂಡುಬಂದಿತ್ತು. ಇದನ್ನು ಪರಿಗಣಿಸಿ ಅರಣ್ಯದೊಳಗೆ ಜನಜಂಗುಳಿ ತಪ್ಪಿಸಲು ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ಪಥಗಳಿಗೆ ಸರ್ಕಾರ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

ಈ ಸಂಬಂಧ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು, ಸಾವಿರಾರು ಸಂಖ್ಯೆಯಲ್ಲಿ ಚಾರಣಿಗರು ದಟ್ಟ ಅರಣ್ಯದ ಗಿರಿ ಪ್ರದೇಶಗಳಿಗೆ ಅದರಲ್ಲೂ ಅಮೂಲ್ಯ ಜೀವವೈವಿಧ್ಯದಿಂದ ಕೂಡಿದ ಪಶ್ಚಿಮ ಘಟ್ಟಕ್ಕೆ ಪ್ರತಿವಾರವೂ ಆಗಮಿಸಿದರೆ ಪರಿಸರಕ್ಕೂ ಹಾನಿಯಾಗುತ್ತದೆ ಮತ್ತು ಜಲ ಮೂಲಗಳೂ ಕಲುಷಿತಗೊಳ್ಳುತ್ತವೆ ಹೀಗಾಗಿ ಇಂತಹ ಚಾರಣ ಪಥಕ್ಕೆ ಕಡಿವಾಣ ಹಾಕಿ ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ : Trekking Guide: ಚಾರಣಿಗರಿಗೆ ಶುಭಸುದ್ದಿ, ನಂದಾದೇವಿ, ತ್ರಿಶೂಲ್‌ಗಳಿಗೂ ಈಗ ಉಚಿತ ಪ್ರವೇಶ!

ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ, ರಾಜ್ಯದ ಯುವಜನರಲ್ಲಿ ಇತ್ತೀಚೆಗೆ ಅರಣ್ಯವ್ಯಾಪ್ತಿಯ ಗಿರಿ ಶಿಖಿರಗಳಲ್ಲಿ ಚಾರಣ ಮಾಡುವ ಹವ್ಯಾಸ ಹೆಚ್ಚಾಗುತ್ತಿದ್ದು, ಇದು ವಾರಾಂತ್ಯದಲ್ಲಿ ಜನದಟ್ಟಣೆಗೆ ಕಾರಣವಾಗಿದೆ. ಹೀಗೆ ಬರುವವರು ಅರಣ್ಯದ ಅಂಚಿನ ಗ್ರಾಮಗಳಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮನಸೋಇಚ್ಛೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಉಳಿದ ಆಹಾರ ಪದಾರ್ಥ ಇತ್ಯಾದಿಗಳನ್ನು ಎಸೆಯುತ್ತಿದ್ದು, ಇದು ವನ್ಯಜೀವಿಗಳಿಗೆ ಅಪಾಯ ತರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏಕಾಏಕಿ ಹರಿದು ಬರುವ ಇಷ್ಟೊಂದು ಜನರನ್ನು ನಿಯಂತ್ರಿಸುವುದು ಮತ್ತು ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗುತ್ತದೆ ಹೀಗಾಗಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ತಾಣಗಳು ಅಂದರೆ ಕುಮಾರ ಪರ್ವತ, ಮೂರುಕಣ್ಣಿನಗುಡ್ಡ ಸೇರಿದಂತೆ ಎಲ್ಲ ಚಾರಣ ತಾಣಗಳಲ್ಲಿ ಪ್ರಮಾಣಿತ ಕಾರ್ಯ ವಿಧಾನ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ರೂಪಿಸುವವರೆಗೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ತರುವವರೆಗೆ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಯಾವ ಯಾವ ಪ್ರದೇಶಗಳಿಗೆ ಆನ್‌ಲೈನ್‌ ಬುಕಿಂಗ್‌ ಅವಕಾಶವಿದೆ?

Trekking Restriction places
Trekking Restriction places1

ಪ್ರಸ್ತುತ ಅರಣ್ಯ ಇಲಾಖೆಯ ಪರಿಸರ ಪ್ರವಾಸೋದ್ಯಮ ವಿಭಾಗದ ವತಿಯಿಂದ ನಿರ್ವಹಿಸುತ್ತಿರುವ ಚಾರಣ ಪಥಗಳಲ್ಲಿ 150 ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು https://www.karnatakaecotourism.com/ ನಲ್ಲಿ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.

ಈ ಜಾಗಗಳಿಗೆ ಮಾತ್ರ ಟೆಕ್ಕಿಂಗ್‌ಗೆ ಹೋಗಲು ಅವಕಾಶ ಸಿಗಲಿದೆ.. ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ

Continue Reading
Advertisement
BJP Candidates List
ದೇಶ9 seconds ago

BJP Candidates List : ಬಿಜೆಪಿಯ ಈ ನಾಲ್ವರು ವಿವಾದಾತ್ಮಕ ಸಂಸದರಿಗೆ ಈ ಬಾರಿ ಟಿಕೆಟಿಲ್ಲ!

Manisha Rani wins Jhalak Dikhhla Jaa 11
ಕಿರುತೆರೆ1 min ago

Jhalak Dikhhla Jaa 11: `ಝಲಕ್ ದಿಖ್ಲಾ ಜಾ ಸೀಸನ್ 11′ ರ ವಿಜೇತರಾಗಿ ಹೊರಹೊಮ್ಮಿದ ಮನೀಷಾ ರಾಣಿ!

Blast in Bangalore Rameshwaram Cafe Accused
ಬೆಂಗಳೂರು6 mins ago

Blast in Bengaluru : ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ಒಬ್ಬನೇ ಭಾಗಿ? ಏನಿದು ಒಂಟಿ ತೋಳ ದಾಳಿ?

Child assaulted by Mother and her boyfriend in Bengaluru
ಬೆಂಗಳೂರು25 mins ago

Inhuman Behaviour : ಬಾಯ್‌ ಫ್ರೆಂಡ್‌ ಜತೆ ಸೇರಿ ಹೆತ್ತ ಮಗುವಿನ ಮರ್ಮಾಂಗ ಕಚ್ಚಿದಳು ರಾಕ್ಷಸಿ!

Deepika Padukone, Ranveer Singh perform on Galla Goodiyan
ಬಾಲಿವುಡ್38 mins ago

Deepika Padukone: ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್‌: ಸಖತ್‌ ಸ್ಟೆಪ್ಸ್ ಹಾಕಿದ ಪ್ರೆಗ್ನೆಂಟ್‌ ನಟಿ!

bjp list
Lok Sabha Election 202447 mins ago

BJP Candidates List: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟಿಲ್ಲ!

Terrorist murder
ಪ್ರಮುಖ ಸುದ್ದಿ48 mins ago

Pakistan Terrorist : ಪಾಕಿಸ್ತಾನದಲ್ಲಿ ಭಾರತದ ವಾಂಟೆಡ್​ ಲಿಸ್ಟ್​ನಲ್ಲಿರುವ ಉಗ್ರನ ಹತ್ಯೆ; ಯಾರಿವ ಉಗ್ರಗಾಮಿ?

Chaithra Hebbar News found
ದಕ್ಷಿಣ ಕನ್ನಡ1 hour ago

Chaithra Hebbar : ಚೈತ್ರಾ ಹೆಬ್ಬಾರ್‌ ಮಿಸ್ಸಿಂಗ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌; ಪ್ರಿಯಕರ ಹಿಮಾಚಲದಲ್ಲಿ; ಅವಳೆಲ್ಲಿ?

Shah Rukh Khan chants Jai Shri Ram at Anant-Radhika pre-wedding
ಬಾಲಿವುಡ್1 hour ago

Shah Rukh Khan: ಅಂಬಾನಿ ಮಗನ ಮದುವೆ: ʻಜೈ ಶ್ರೀ ರಾಮ್’ ಎಂದ ಶಾರುಖ್‌ ಖಾನ್‌!

Modi sha
ದೇಶ1 hour ago

BJP Candidates List : ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದ ಘಟಾನುಘಟಿ ನಾಯಕರಿವರು…

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ7 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು18 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು22 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌