Year End Tour 2023: ಈ ವರ್ಷಾಂತ್ಯದೊಳಗೆ ಈ ಹತ್ತು ಅನುಭವ ನಿಮ್ಮದಾಗಲಿ! - Vistara News

ಪ್ರವಾಸ

Year End Tour 2023: ಈ ವರ್ಷಾಂತ್ಯದೊಳಗೆ ಈ ಹತ್ತು ಅನುಭವ ನಿಮ್ಮದಾಗಲಿ!

ಈ ದೇಶದ (Year End Tour 2023) ವಿಶೇಷತೆಗಳಾದ ಇವಿಷ್ಟನ್ನಾದರೂ ಜೀವನದಲ್ಲಿ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕು, ಅನುಭವಿಸಲೇಬೇಕು. ಹಾಗಾದರೆ, ಬನ್ನಿ, ಹೊಸ ವರ್ಷ ಶುರುವಾಗುವ ಮುನ್ನ, ಜೀವನದಲ್ಲಿ ಪ್ರವಾಸದ ವಿಷಯ ಬಂದಾಗ ಭಾರತದಲ್ಲಿದ್ದುಕೊಂಡು ಮಾಡಲೇಬೇಕಾದ 10 ಪ್ರವಾಸಿ ಅನುಭವಗಳು ಇಲ್ಲಿವೆ.

VISTARANEWS.COM


on

Year End Tour 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರತಿ ಬಾರಿ ಹೊಸ ವರ್ಷ (Year End Tour 2023) ಬಂದಾಗ ಈ ವರ್ಷದಲ್ಲಿ ಏನೆಲ್ಲ ಮಾಡಬೇಕು ಎಂದು ಅಂದುಕೊಳ್ಳುವವರು ಬಹಳ. ಕೆಲವು ಅಭ್ಯಾಸಗಳನ್ನು ಬಿಡಬೇಕು, ಕೆಲವು ಒಳ್ಳೆಯ ಕೆಲಸಗಳನ್ನು ಮಾಡಬೇಕು, ಕೆಲೆವೆಡೆ ಪ್ರವಾಸ ಮಾಡಬೇಕು, ಏನೋ ಒಂದಿಷ್ಟು ಸಾಧನೆ ಮಾಡಬೇಕು ಇತ್ಯಾದಿ ಇತ್ಯಾದಿ. ಒಬ್ಬೊಬ್ಬರ ಆಸಕ್ತಿ, ಗುರಿ ಒಂದೊಂದು ತರಹ. ಆದರೆ, ಬದುಕು ಬಹಳ ಚಿಕ್ಕದು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ವರ್ಷವೊಂದು ಕಳೆದುಹೋಗುತ್ತದೆ. ಅಂದುಕೊಂಡ ಕೆಲಸಗಳೆಲ್ಲ ಆಗದೆ, ಅಂದುಕೊಂಡದ್ದನ್ನು ಮಾಡಲಾಗದೆ, ಅವೆಲ್ಲ ಮುಂದಿನ ವರ್ಷಕ್ಕೆ ಹಾಗೆಯೇ ರವಾನೆಯಾಗುತ್ತವೆ. ಹೊಸ ಹುರುಪು, ಹುಮ್ಮಸ್ಸಿನಿಂದ ಮತ್ತೆ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. ಕಳೆದ ವರ್ಷಗಳಲ್ಲಿ ಮಾಡಲಾಗದಿದ್ದದ್ದನ್ನು ಈ ವರ್ಷವಾದರೂ ಮಾಡಿಯೇನು ಎಂಬ ಆಸೆ, ಭರವಸೆ, ಕನಸುಗಳೊಂದಿಗೆ ಮುಂದೆ ಹೆಜ್ಜೆ ಇಡುತ್ತೇವೆ.

ಅಂತೆಯೇ, ಪ್ರವಾಸ ಪ್ರಿಯರ ಪಟ್ಟಿಯೂ ದೊಡ್ಡೇ ಇರುತ್ತದೆ. ಇಂತಿಂಥ ಜಾಗಕ್ಕೆ ಪ್ರವಾಸ ಮಾಡಬೇಕು ಇತ್ಯಾದಿ ಆಸೆಗಳು, ಯೋಜನೆಗಳು ಮತ್ತೊಂದಿಷ್ಟು ರೆಡಿಯಾಗುತ್ತವೆ. ಅದೇನೇ ಇರಲಿ, ನಮ್ಮ ಭಾರತದಲ್ಲಿ ಇದ್ದ ಮೇಲೆ, ಈ ದೇಶದ ವಿಶೇಷತೆಗಳಾದ ಇವಿಷ್ಟನ್ನಾದರೂ ಜೀವನದಲ್ಲಿ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕು, ಅನುಭವಿಸಲೇಬೇಕು. ಹಾಗಾದರೆ, ಬನ್ನಿ, ಹೊಸ ವರ್ಷ ಶುರುವಾಗುವ ಮುನ್ನ, ಜೀವನದಲ್ಲಿ ಪ್ರವಾಸದ ವಿಷಯ ಬಂದಾಗ ಭಾರತದಲ್ಲಿದ್ದುಕೊಂಡು ಮಾಡಲೇಬೇಕಾದ 10 ಪ್ರವಾಸಿ ಅನುಭವಗಳು ಇಲ್ಲಿವೆ.

Camping in Manali

ಮನಾಲಿಯಲ್ಲಿ ಕ್ಯಾಂಪಿಂಗ್‌

ಇದು ಪ್ರತಿ ಪ್ರವಾಸಪ್ರಿಯರ ಕನಸು. ಮನಾಲಿಗೊಮ್ಮೆ ನಡುಗುವ ಚಳಿಯಲ್ಲೊಮ್ಮೆ ಭೇಟಿ ನೀಡಬೇಕು. ಹಿಮದಲ್ಲಿ ಆಡಬೇಕು. ಅಲ್ಲೇ ಕ್ಯಾಂಪಿಂಗ್‌ ಮಾಡಬೇಕು ಇತ್ಯಾದಿ. ಚಳಿಗಾಲದಲ್ಲಿ ಹಿಮಪರ್ವತಗಳನ್ನು ಕಣ್ತುಂಬಿಕೊಳ್ಳುತ್ತಾ ಇವನ್ನೆಲ್ಲ ಮಾಡಿ ಮನಾಲಿಯಲ್ಲಿ ಕ್ಯಾಂಪಿಂಗ್‌ ಮಾಡುವುದು ಜೀವನದ ಅವಿಸ್ಮರಣೀಯ ಕ್ಷಣಗಳಲ್ಲೊಂದು ಆಗಬಲ್ಲುದು.

Chirampunji Falls

ಚಿರಾಂಪುಂಜಿಯ ಜಲಪಾತಗಳು

ಭಾರತದಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಮೇಘಾಲಯ ರಾಜ್ಯದಲ್ಲಿ ಸುತ್ತು ಹಾಕಿ, ಚಿರಾಪುಂಜಿಯ ಜಲಪಾತಗಳ ಸೌಂದರ್ಯ ಜೀವಮಾನದಲ್ಲಿ ಪ್ರತಿಯೊಬ್ಬರೂ ನೋಡಲೇಬೇಕಾದ್ದು.

ಹಂಪಿಯಲ್ಲಿ ತೆಪ್ಪದಲ್ಲೊಂದು ಸುತ್ತು

ಹಂಪಿಗೆ ಹೋಗಿ ಅಲ್ಲಿ ವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸವನ್ನು ಕಣ್ತುಂಬಿಕೊಂಡು ತುಂಗಭದ್ರಾ ನದಿಯಲ್ಲೊಂದು ತೆಪ್ಪದಲ್ಲಿ ಪಯಣ ಮಾಡದಿದ್ದರೆ ಕನ್ನಡಿಗನಾಗಿದ್ದುಕೊಂಡು ಜೀವನ ಸಾರ್ಥಕವಾಗದು.

ಮುಂಬೈಯಲ್ಲಿ ಗಣೇಶೋತ್ಸವ

ಮುಂಬೈ ಸುತ್ತಮುತ್ತಲ ಗಣೇಶೋತ್ಸವ ಎಂದರೆ ಅದು ದೊಡ್ಡ ಹಬ್ಬ. ಗೌಜು. ಗದ್ದಲ. ಅಲ್ಲಿನ ಆಡಂಬರ, ಉತ್ಸವವನ್ನು ನೋಡಿ ಕಣ್ತುಂಬಿಕೊಳ್ಳುವುದೇ ಸಂಭ್ರಮ.

Varanasi

ವಾರಣಾಸಿಯಲ್ಲೊಂದು ಗಂಗಾರತಿ

ಗಂಗಾರತಿ ಎಂಬ ಅದ್ಭುತ ಆಧ್ಯಾತ್ಮದ ಅನುಭೂತಿಯನ್ನು ಪಡೆಯಬೇಕೆಂದರೆ ಅದಕ್ಕೆ ವಾರಣಾಸಿಗೇ ಹೋಗಬೇಕು. ಗಂಗೆಯ ತೀರದಲ್ಲೊಮ್ಮೆ ನಡೆದಾಡಬೇಕು. ಸಂಜೆ ದೋಣಿಯಲ್ಲಿ ಕೂತು ಭಕ್ತಿಯಿಂದ ಗಂಗಾರತಿಯನ್ನು ಕಣ್ತುಂಬಿಕೊಳ್ಳಬೇಕು.

ಕೋಲ್ಕತ್ತಾದಲ್ಲಿ ದುರ್ಗಾಪೂಜೆ

ನವರಾತ್ರಿಯ ಅಷ್ಟೂ ದಿನಗಳ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕೆಂದರೆ ಒಮ್ಮೆಯಾದರೂ ಕೋಲ್ಕತ್ತಾದ ಬೀದಿಗಳಲ್ಲಿ ನವರಾತ್ರಿಯ ದಿನಗಳಲ್ಲಿ ಅಡ್ಡಾಡಬೇಕು. ಅಲ್ಲಿನ ಸಂಭ್ರಮಾಚರಣೆಗಳನ್ನು ನೋಡಬೇಕು.

Jaisalmer

ಜೈಸಲ್ಮೇರ್‌ನ ಮರುಭೂಮಿ ಸಫಾರಿ

ಭಾರತದಲ್ಲೇ ಮರುಭೂಮಿಯನ್ನು ನೋಡಲು ಸಾಧ್ಯವಿರುವಾಗ ಬೇರೆ ದೇಶಗಳಿಗೆ ಯಾಕೆ ಹೋಗಬೇಕು. ಒಮ್ಮೆ ಜೈಸಲ್ಮೇರ್‌ನ ಮರಳಿನಲ್ಲಿ ಅಡ್ಡಾಡಿ, ಡೆಸರ್ಟ್‌ ಸಫಾರಿ ಮಾಡಿ ಬನ್ನಿ.

ಕೇದಾರನಾಥಕ್ಕೊಂದು ಚಾರಣ

ಭಾರತದಲ್ಲಿ ಪರ್ವತಗಳಿಗೂ ಭಗವಂತನಿಗೂ ಬಹುದೊಡ್ಡ ನಂಟು. ಪರ್ವತವೇರಿ, ಭಗವಂತನ ದರ್ಶನ ಮಾಡಿದರೆ ಹತ್ತಿದ್ದೂ ಸಾರ್ಥಕ ಎಂಬ ನಂಬಿಕೆ. ಕೇದಾರನಾಥನ ದರ್ಶನಕ್ಕೆ ಚಾರಣ ಮಾಡುವುದೆಂದರೆ ಅದು ಸಣ್ಣ ವಿಚಾರವಲ್ಲ. ಬದುಕಿನಲ್ಲೊಮ್ಮೆ ಕೇದಾರನ ಚಾರಣ ಮಾಡುವುದು ಬಹುತೇಕರ ಕನಸು.

Rishikesh

ಋಷಿಕೇಶದಲ್ಲೊಂದು ರಿವರ್‌ ರ್ಯಾಫ್ಟಿಂಗ್‌

ಗಂಗೆಯಲ್ಲೊಮ್ಮೆ ರ್ಯಾಫ್ಟಿಂಗ್‌ ಮಾಡುವುದು ಬಹುತೇಕ ಸಾಹಸಪ್ರಿಯ ಪ್ರವಾಸಿಗರ ಕನಸು. ಅದು ರೋಮಾಂಚನ ನೀಡುವ ಅನುಭವ ಕೂಡಾ.

Ladakh

ಲಡಾಕ್‌ಗೊಂದು ಬೈಕ್‌ ಟ್ರಿಪ್‌

ಸಾಹಸಪ್ರಿಯ ಪ್ರವಾಸಿಗರು ಇಷ್ಟಪಡುವ, ಬದುಕಿನಲ್ಲೊಮ್ಮೆಯಾದರೂ ಮಾಡಲೇಬೇಕೆಂದು ಆಸೆಪಡುವ ಪಯಣವೆಂದರೆ ಅದು ಲಡಾಕ್‌ಗೆ ಬೈಕ್‌ ಟ್ರಿಪ್‌. ಭಾರತದ ಯುವ ಮಂದಿಯ ಸೆಳೆತ ಇದು.

ಕೇವಲ ಇಷ್ಟೇ ಅಲ್ಲ. ಜಿಮ್‌ ಕಾರ್ಬೆಟ್‌ನಲ್ಲೊಂದು ಜಂಗಲ್‌ ಸಫಾರಿ, ಕೇರಳದ ಹಿನ್ನೀರಿನಲ್ಲಿ ಹೌಸ್‌ಬೋಟ್‌ ಮೂಲಕ ಸವಾರಿ, ಬಿರ್‌ನಲ್ಲೊಂದು ಪಾರಾಗ್ಲೈಡಿಂಗ್‌, ಅಂಡಮಾನ್‌ ನಿಕೋಬಾರ್‌ನಲ್ಲೊಂದು ಸ್ಕೂಬಾ ಡೈವಿಂಗ್‌, ಸೌತ್‌ ಬಾಂಬೆಯಲ್ಲೊಂದು ಓಪನ್‌ ಬಸ್‌ ಟೂರ್‌, ಗುಲ್ಮಾರ್ಗ್‌ನಲ್ಲೊಂದು ಸ್ಕೀಯಿಂಗ್‌, ವೃಂದಾವನದಲ್ಲೊಂದು ಹೋಲಿ, ಕಚ್‌ನ ವೈಟ್‌ ಡೆಸರ್ಟ್‌ಗೆ ಭೇಟಿ, ಚಾಂದನಿ ಚೌಕ್‌ನ ರಸ್ತೆಬದಿಯ ಊಟ, ಮೈಸೂರಿನಲ್ಲಿ ದಸರಾ ವೀಕ್ಷಣೆ ಹೀಗೆ ಪಟ್ಟಿ ಮಾಡಿದರೆ, ಪ್ರಪಂಚವೇ ನಮ್ಮ ಭಾರತದೊಳಗಿದೆ. ನಮ್ಮ ದೇಶ ಸುತ್ತಿ ನಮ್ಮದೇ ದೇಶದ ಅದ್ಭುತಗಳನ್ನು ನಾವೇ ನಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ನೋಡದಿದ್ದರೆ ಹೇಗೆ ಹೇಳಿ! ಹೊಸ ವರ್ಷದ ಪಟ್ಟಿಯಲ್ಲಿ ಈ ಪಟ್ಟಿಯನ್ನೂ ಸೇರಿಸೋಣ.

ಇದನ್ನೂ ಓದಿ: Winter Travel Destinations: ಚಳಿಗಾಲದಲ್ಲಿ ಪ್ರವಾಸ ಮಾಡಬಹುದಾದ ದೇಶದ ಟಾಪ್ 11 ತಾಣಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Jammu Tour: ಸೆಕೆಯ ತಾಪದಿಂದ ಒಂದೊಂದು ದಿನಕಳೆಯುವುದು ಕಷ್ಟ ಎನ್ನುವವರು ಜುಮ್ಮುವಿನ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ. ಇಲ್ಲಿನ ವಿಸ್ತಾರವಾದ ಕಾಡುಗಳು, ಪುರಾತನ ದೇವಾಲಯಗಳು ಹಿಮದಿಂದ ಆವೃತವಾದ ಪರ್ವತ ಶಿಖರಗಳು ನಿಮ್ಮ ಕಣ್ಮನ ಸೆಳೆಯುವುದಂತೂ ಗ್ಯಾರಂಟಿ. ಈ ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Jammu Tour
Koo

ಬೆಂಗಳೂರು: ಎತ್ತರದ ಹಿಮಾಲಯದ ತಪ್ಪಲಿನಲ್ಲಿರುವ ಜಮ್ಮು ತುಂಬಾ ಚಳಿಯಿಂದ ಕೂಡಿದ ಪ್ರದೇಶವಾಗಿದೆ. ಹಾಗಾಗಿ ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಬೆಂದು ಹೋದವರು ಎಸಿಯಲ್ಲಿ ಕುಳಿತು ಕಾಲ ಕಳೆಯುವ ಬದಲು ಈ ಸ್ಥಳಕ್ಕೆ ಪ್ರಯಾಣ ಬೆಳೆಸಬಹುದು. ಇಲ್ಲಿನ ವಿಸ್ತಾರವಾದ ಕಾಡುಗಳು, ಪುರಾತನ ದೇವಾಲಯಗಳು ಹಿಮದಿಂದ ಆವೃತವಾದ ಪರ್ವತ ಶಿಖರಗಳು ನಿಮ್ಮನ್ನು ಮೋಡಿ ಮಾಡುವುದಂತು ಸತ್ಯ. ಹಾಗಾಗಿ ಜಮ್ಮುವಿಗೆ ಪ್ರಯಾಣ (Jammu Tour) ಬೆಳೆಸುವವರು ಈ ಸ್ಥಳಗಳಿಗೆ ಭೇಟಿ ನೀಡಿ ಮತ್ತು ಈ ವಿಚಾರಗಳನ್ನು ತಿಳಿದುಕೊಂಡಿರಿ.

ಆಧ್ಯಾತ್ಮಿಕ ಸಾರ

ಅನೇಕ ಧರ್ಮಗುರುಗಳ ತವರೂರಾದ ಜಮ್ಮು ತನ್ನ ಸಂಸ್ಕೃತಿಯನ್ನು ಪ್ರದರ್ಶಿಸುವಂತಹ ಇಸ್ಲಾಮಿಕ್ ದರ್ಗಾಗಳು ಮತ್ತು ಸಿಖ್ ಗುರುದ್ವಾರಗಳ ಜೊತೆಗೆ ಪ್ರಸಿದ್ಧ ಹಿಂದೂ ದೇವಾಲಯಗಳನ್ನು ಹೊಂದಿದೆ. ಇಲ್ಲಿನ ರಘುನಾಥ ದೇವಾಲಯದ ಸಂಕೀರ್ಣವು ಉತ್ತರ ಭಾರತದ ಅತಿದೊಡ್ಡ ದೇವಾಲಯದ ಸಂಕೀರ್ಣಗಳಲ್ಲಿ ಒಂದಾಗಿದೆ. ಇದು ಎತ್ತರದ ಗೋಪುರಗಳನ್ನು ಹೊಂದಿದೆ. ಅಲ್ಲದೇ ಇಲ್ಲಿನ ಬಾವೆ ವಾಲಿ ಮಾತಾ ದೇವಸ್ಥಾನ ಮತ್ತು ಪೀರ್ ಬಾಬಾ ದೇವಾಲಯ ಭಕ್ತರನ್ನು ಆಕರ್ಷಿಸುತ್ತದೆ.

Vaishno Devi Yatra Jammu

ದೈವಿಕ ವೈಷ್ಣೋದೇವಿ ಯಾತ್ರೆ

ತ್ರಿಕೂಟ ಬೆಟ್ಟ ಗಳಲ್ಲಿರುವ ಮಾತಾ ವೈಷ್ಣೋದೇವಿಯ ಪವಿತ್ರ ಗುಹೆಯ ದೇಗುಲಕ್ಕೆ ಚಾರಣ ಮಾಡುವುದು ಭಾರತದ ಅತ್ಯಂತ ಪೂಜ್ಯ ತೀರ್ಥಯಾತ್ರೆಗಳಲ್ಲಿ ಒಂದು ಎನ್ನಬಹುದು. ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಜನರು ಬಂದು ತಮ್ಮ ದೀರ್ಘ ಪ್ರಯಾಣದ ಮೂಲಕ ಭಕ್ತಿಯನ್ನ ಸಾರುತ್ತಾರೆ. ತೀರ್ಥಯಾತ್ರೆಯ ಸಮಯದಲ್ಲಿ ಈ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗುವುದನ್ನು ತಡೆಯಲು ಅಧಿಕಾರಿಗಳನ್ನು ನೀಮಿಸಲಾಗುತ್ತದೆ. ಅವರು ಭದ್ರತಾ ಕ್ರಮಗಳನ್ನು ನೋಡಿಕೊಳ್ಳುತ್ತಾರೆ.

Jammu navaratri

ಸಂಸ್ಕೃತಿ ಮತ್ತು ಹಬ್ಬಗಳು

9 ದಿನಗಳ ನವರಾತ್ರಿ ಉತ್ಸವವನ್ನು ಜಮ್ಮುವಿನಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮೇಳಗಳನ್ನು ನಡೆಸಲಾಗುತ್ತದೆ. ಸ್ಥಳೀಯ ನೃತ್ಯಗಳು, ಸಂಗೀತ ಮತ್ತು ಕರಕುಶಲ ವಸ್ತುಗಳ ಪ್ರದರ್ಶನೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನವೆಂಬರ್ ನಲ್ಲಿ ಕಲಾಕೇಂದ್ರವು ವಾರ್ಷಿಕ ಜಮ್ಮು ಉತ್ಸವವನ್ನು ಆಯೋಜಿಸುತ್ತದೆ.

Kesar Fenni

ಫ್ಯೂಷನ್ ಆಹಾರ

ಜಮ್ಮುವಿನ ಪಾಕಪದ್ಧತಿಯು ಪಂಜಾಬ್, ಕಾಶ್ಮೀರ ಮತ್ತು ದಕ್ಷಿಣ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳ ರುಚಿಗಳನ್ನು ಹೊಂದಿರುತ್ತದೆ. ನೀವು ಇಲ್ಲಿಗೆ ಭೇಟಿ ನೀಡಿದರೆ ರಾಜ್ಮಾ-ಅಕ್ಕಿ, ಚೋಲೆ-ಪುರಿಮತ್ತು ಕುಲ್ಚಾದಂತಹ ವಿಶೇಷ ತಿಂಡಿಗಳ ರುಚಿ ಸವಿಯುವುದನ್ನು ಮರೆಯಬೇಡಿ. ಇದಲ್ಲದೇ ಫಿರ್ನಿ(ಅಕ್ಕಿ ಕಡುಬು), ಗುಡ್ ಪಾಪ್ಡಿ ಮತ್ತು ಕಳಾರಿಯಂತಹ ಭಕ್ಷ್ಯಗಳನ್ನು ಕೇಸರ್ ಗುಲ್ಶನ್‌ನ ಪ್ರಸಿದ್ಧ ಕೇಸರಿ ಚಹಾ ಅಥವಾ ಕಾಶ್ಮೀರಿ ಕಹ್ವಾದೊಂದಿಗೆ ಸವಿಯಿರಿ.

ಪ್ರಕೃತಿಯ ಅದ್ಭುತ

ಜಮ್ಮುವಿನ ಸಮೀಪದಲ್ಲಿರುವ ಪಟ್ನಿಟಾಪ್ ಗಿರಿಧಾಮವು ಬೇಸಿಗೆಯಲ್ಲಿ ಅಥವಾ ಚಳಿಗಾಲದಲ್ಲಿ ಪ್ರವಾಸಿಗರಿಗೆ ಕಾಲ ಕಳೆಯಲು ಉತ್ತಮ ಸ್ಥಳವಾಗಿದೆ. ಇಲ್ಲಿ ಪ್ಯಾರಾಗ್ಲೈಡಿಂಗ್ ಮತ್ತು ಸ್ಕೀಯಿಂಗ್ ನಂತಹ ಚಟುವಟಿಕೆಗಳನ್ನು ನೀಡಲಾಗುತ್ತದೆ. ಇಲ್ಲಿನ ಸನ್ಸಾರ್ ಮತ್ತು ಮನ್ಸಾರ್ ಸರೋವರದಲ್ಲಿ ನೀವು ಕ್ಯಾಂಪಿಂಗ್ ಮತ್ತು ಬೋಟಿಂಗ್ ಮಾಡಬಹುದು.

Badamwari Garden in Srinagar, Jammu and Kashmir

ಐತಿಹಾಸಿಕ ತಾಣಗಳು

ತಾವಿ ನದಿಯ ಮೇಲಿರುವ ಬಹು ಕೋಟೆಯು ಜಮ್ಮುವಿನ ವಿಶೇಷವಾದ ಐತಿಹಾಸಿಕ ತಾಣವಾಗಿದೆ. ಇಲ್ಲಿ ಹಲವಾರು ಹಿಂದೂ ದೇವಾಲಯಗಳಿವೆ. ಜೊತೆಗೆ ಸ್ಮಾರಕ, ಆಹಾರ ಪದಾರ್ಥಗಳವರೆಗೆ ಎಲ್ಲವನ್ನೂ ಮಾರಾಟ ಮಾಡುವಂತಹ ಅಂಗಡಿಗಳನ್ನ ಹೊಂದಿದೆ. ಇಲ್ಲಿ ಪಾಳು ಬಿದ್ದಿರುವ ಸಿಮ್ಥಾನ್ ಶಿಖರವನ್ನು ಏರಿದರೆ ಜಲಚರಗಳು ಮತ್ತು ಕಲ್ಲಿನ ಕಟ್ಟಡಗಳನ್ನು ನೋಡಬಹುದು.

Jammu

ಟ್ರಾವೆಲ್ ಪಾಯಿಂಟರ್ಸ್

ಜಮ್ಮುವಿಗೆ ಪ್ರಯಾಣಿಸಲು ಬಯಸುವವರು ದೆಹಲಿ , ಶ್ರೀನಗರ, ಮುಂಬೈ ಮತ್ತು ಅಮೃತಸರದಂತಹ ಪ್ರಮುಖ ನಗರಗಳಿಂದ ನೇರ ವಿಮಾನಗಳ ವ್ಯವಸ್ಥೆಯಿದೆ. ಹಾಗೇ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಪ್ರವಾಣಿಸುವವರಿಗೆ ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್ಸುಗಳ ವ್ಯವಸ್ಥೆ ಇದ್ದು, ಇವು ಹಿಮಾಚಲ ಪ್ರದೇಶದ ಹತ್ತಿರದ ಪ್ರವಾಸಿ ತಾಣಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: Travel Time: ಸಮುದ್ರದಲ್ಲೇ ಜೀವನ; ಹೊಸ ಬಗೆಯ ಅಲೆಮಾರಿ ಪ್ರವಾಸಿ ದಂಪತಿ ಇವರು!

ಜಮ್ಮುವಿಗೆ ಪ್ರಯಾಣಿಸುವವರು ನೆನಪಿಡಬೇಕಾದ ವಿಷಯಗಳು

ನೀವು ಜಮ್ಮುವಿಗೆ ಪ್ರಯಾಣ ಬೆಳೆಸುವಾಗ ನಿಮ್ಮ ಐಡಿ ಕಾರ್ಡ್ ಗಳನ್ನು ತೆಗೆದುಕೊಂಡು ಹೋಗಿ. ಹಾಗೇ ರಾತ್ರಿಯ ಸಮಯದಲ್ಲಿ ಪ್ರಯಾಣಿಸುವವರು ನಿರ್ಜನ ಪ್ರದೇಶದಲ್ಲಿ ಮತ್ತು ಮಂದ ಬೆಳಕಿರುವ ಕಾಲುದಾರಿಗಳಲ್ಲಿ ಸಾಗುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ. ಸಾಧಾರಣ ಉಡುಪುಗಳನ್ನು ಧರಿಸಿ. ಇಲ್ಲಿನ ಪವಿತ್ರ ಸ್ಥಳಗಳಿಗೆ ಪ್ರವೇಶಿಸುವಾಗ ನಿಮ್ಮ ಪಾದರಕ್ಷೆಗಳನ್ನು ಹೊರಗೆ ಬಿಚ್ಚಿಡಿ. ಹಾಗೇ ಯಾವುದೇ ಸ್ಥಳೀಯ ಅಥವಾ ಅಧಿಕೃತ /ಮಿಲಿಟರಿ ಸಂಸ್ಥೆಗಳ ಫೋಟೊಗಳನ್ನು ಕ್ಲಿಕ್ಕಿಸುವ ಮುನ್ನ ಅನುಮತಿ ಪಡೆಯಿರಿ.

Continue Reading

ಪ್ರವಾಸ

E-Pass Mandatory: ಊಟಿ, ಕೊಡೈಕೆನಾಲ್‌ ಪ್ರವಾಸ ಹೊರಟಿದ್ದೀರಾ? ಹಾಗಿದ್ದರೆ ಗಮನಿಸಿ

E-Pass Mandatory: ಬೇಸಿಗೆಯಲ್ಲಿ ಬೆಟ್ಟ ಗುಡ್ಡಗಳಿರುವ ತಂಪಾದ ಪ್ರದೇಶದಲ್ಲಿ ಸುತ್ತಾಡಬೇಕು ಎನ್ನುವ ಆಸೆಯಿಂದ ಊಟಿ, ಕೊಡೈಕೆನಾಲ್‌ ಗೆ ಪ್ರವಾಸ ಹೊರಡುವ ಯೋಜನೆ ಇದ್ದರೆ ಕೂಡಲೇ ಇ ಪಾಸ್ ಪಡೆಯಿರಿ.

VISTARANEWS.COM


on

By

E-Pass Mandatory
Koo

ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟು ಎಲ್ಲಾದರೂ ತಂಪಾದ ಪ್ರದೇಶಗಳಲ್ಲಿ ಸುತ್ತಾಡಬೇಕು ಎನ್ನುವ ಆಸೆಯಿಂದ ಊಟಿ ಮತ್ತು ಕೊಡೈಕೆನಾಲ್‌ ಗೆ ಪ್ರವಾಸ ಹೊರಡಲು ಯೋಜನೆ ಹಾಕಿಕೊಂಡಿದ್ದೀರಾ. ಹಾಗಿದ್ದರೆ ಒಂದು ಮಹತ್ವದ ಸುದ್ದಿ ಇದೆ. ಈ ಬಾರಿ ಊಟಿ (Ooty) ಮತ್ತು ಕೊಡೈಕೆನಾಲ್‌ ಗೆ ( Kodaikanal) ಪ್ರವಾಸ (tour) ಹೋಗುವವರಿಗೆ ಇ-ಪಾಸ್ (E-Pass Mandatory) ಕಡ್ಡಾಯವಾಗಿದೆ.

ಬೇಸಗೆ ರಜೆ (summer vacation) ಹಿನ್ನೆಲೆಯಲ್ಲಿ ಊಟಿ ಮತ್ತು ಕೊಡೈಕೆನಾಲ್ ಪ್ರವಾಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬರುತ್ತಿರುವುದರಿಂದ ಪ್ರಸ್ತುತ ಇರುವ ವಿವಿಧ ವಾಹನಗಳು ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಈ ಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೆ ಸಂಬಂಧಿಸಿದಂತೆ ಡೇಟಾವನ್ನು ಸಂಗ್ರಹಿಸಲು ಜಿಲ್ಲಾಡಳಿತಗಳಿಗೆ ಅನುಕೂಲವಾಗುವಂತೆ ಇ-ಪಾಸ್ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

ಇ-ಪಾಸ್ ಕಡ್ಡಾಯ

ಮೇ 7ರಿಂದ ಜೂನ್ 30ರವರೆಗೆ ಊಟಿ ಮತ್ತು ಕೊಡೈಕೆನಾಲ್‌ಗೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಇ-ಪಾಸ್ ಪಡೆಯಬೇಕು ಎಂದು ನ್ಯಾಯಮೂರ್ತಿಗಳಾದ ಎನ್. ಸತೀಶ್ ಕುಮಾರ್ ಮತ್ತು ಡಿ. ಭರತ್ ಚಕ್ರವರ್ತಿ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ಆದೇಶ ನೀಡಿದೆ.


ವಿಶೇಷ ವಿಭಾಗೀಯ ಪೀಠವು ನೀಲಗಿರಿ ಮತ್ತು ದಿಂಡುಗಲ್ ಕಲೆಕ್ಟರೇಟ್‌ಗಳಿಂದ ಇ-ಪಾಸ್‌ಗಳ ವಿತರಣೆಗೆ ಯಾವುದೇ ಮಿತಿಯಿಲ್ಲ ಎಂದು ಹೇಳಿದೆ. ಈ ಪಾಸ್‌ಗಳನ್ನು ಪಡೆದುಕೊಳ್ಳುವುದರಿಂದ ಸ್ಥಳೀಯ ನಿವಾಸಿಗಳಿಗೆ ವಿನಾಯಿತಿ ನೀಡಲಾಗಿದೆ.

ಹಲವು ವ್ಯವಸ್ಥೆ

ಇ- ಪಾಸ್ ವ್ಯವಸ್ಥೆಯನ್ನು ವ್ಯಾಪಕವಾಗಿ ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಇಬ್ಬರು ಕಲೆಕ್ಟರ್‌ಗಳು, ಮಾಹಿತಿ ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ, ಇ-ಪಾಸ್ ವ್ಯವಸ್ಥೆಯಲ್ಲಿ ಪಾವತಿ ಗೇಟ್‌ವೇ ಅನ್ನು ಸಂಯೋಜಿಸುವ ಬಗ್ಗೆ ಅನ್ವೇಷಿಸಲು ಪ್ರಸ್ತಾಪಿಸಲಾಗಿದೆ. ಇದು ಅರ್ಜಿದಾರರಿಗೆ ಆನ್‌ಲೈನ್‌ನಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು, ಚೆಕ್‌ಪೋಸ್ಟ್‌ಗಳ ಬಳಿ ದಟ್ಟಣೆಯನ್ನು ಕಡಿಮೆ ಮಾಡಲು, ಇಂಧನವನ್ನು ಉಳಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಅನುವು ಮಾಡಿಕೊಡುತ್ತದೆ.


ಯಾಕೆ ಈ ಕ್ರಮ?

ಪ್ರವಾಸಿಗರ ಸಂಖ್ಯೆಗೆ ಕಡಿವಾಣ ಹಾಕುವ ಹೈಕೋರ್ಟ್‌ನ ಚಿಂತನೆಗೆ ಪ್ರತಿಕ್ರಿಯೆಯಾಗಿ ನೀಲಗಿರಿ ಮತ್ತು ದಿಂಡುಗಲ್ ಜಿಲ್ಲಾಧಿಕಾರಿಗಳು ವಾಹನ ಸಂಚಾರವನ್ನು ನಿರ್ಬಂಧಿಸಲು ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ರಜೆ ಸೀಸನ್‌ಗಳಲ್ಲಿ ಊಟಿ ಮತ್ತು ಕೊಡೈಕೆನಾಲ್‌ ಗೆ ಬರುವ ವಾಹನಗಳ ಸಂಖ್ಯೆ ದಿನಕ್ಕೆ 2,000 ರಿಂದ 20,000ಕ್ಕೆ ಏರುತ್ತದೆ. ಇದು ವಾಹನ ದಟ್ಟಣೆ ಮತ್ತು ಪರಿಸರ ಹಾನಿಗೆ ಕಾರಣವಾಗುತ್ತದೆ.


ಈ ವಿಷಯವನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳ ವಿಶೇಷ ವಿಭಾಗೀಯ ಪೀಠವು ಈ ವಿಷಯದ ಬಗ್ಗೆ ಚರ್ಚೆ ನಡೆಸಿದೆ. ಘಾಟ್ ರಸ್ತೆಗಳ ಮೇಲಿನ ಒತ್ತಡ ಮತ್ತು ಬೇಸಿಗೆಯಲ್ಲಿ ಅತಿಯಾದ ಪ್ರವಾಸಿ ಚಟುವಟಿಕೆಯಿಂದ ಉಂಟಾಗುವ ಪರಿಸರ ನಾಶವನ್ನು ವಕೀಲರು ಎತ್ತಿ ತೋರಿಸಿದರು.

ಈ ಕುರಿತು ಮಾತನಾಡಿರುವ ನೀಲಗಿರಿ ಜಿಲ್ಲಾಧಿಕಾರಿ ಎಂ. ಅರುಣಾ, ಕೇರಳ ಮತ್ತು ಕರ್ನಾಟಕ ಗಡಿಯಲ್ಲಿರುವ ಊಟಿ ಮತ್ತು ಕೊಡೈಕೆನಾಲ್‌ ಗೆ ಒಂಬತ್ತು ಗಡಿ ಚೆಕ್ ಪೋಸ್ಟ್‌ ಗಳಿವೆ. ರಜೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ವಾಹನ ದಟ್ಟಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ ವಾಹನಗಳ ಎಣಿಕೆಯು ಅಗತ್ಯ. ಕೇವಲ ಪ್ರವಾಸಿ ವಾಹನಗಳಲ್ಲದೇ ಸರಕುಗಳ ಸಾಗಣೆಯ ವಾಹನಗಳನ್ನೂ ಇದು ಒಳಗೊಂಡಿರುತ್ತದೆ ಎಂದು ಹೇಳಿದರು.

Continue Reading

ಪ್ರವಾಸ

IRCTC Jyotirlinga Yatra: ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ವೀಕ್ಷಣೆ ಪ್ರವಾಸ; ದರ ವಿವರ ಇಲ್ಲಿದೆ

IRCTC Jyotirlinga Yatra: ಏಳು ಜ್ಯೋತಿರ್ಲಿಂಗಗಳ ದರ್ಶನ ದರ್ಶನ ಮಾಡಲು ಇಚ್ಛಿಸುವವರಿಗೆ ಶುಭ ಸುದ್ದಿ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ಭಾರತ್ ಗೌರವ್ ಎಸಿ ಪ್ರವಾಸಿ ರೈಲಿನ ಮೂಲಕ ಮೇ 22ರಿಂದ ಏಳು ಜ್ಯೋತಿರ್ಲಿಂಗ ಯಾತ್ರೆಯ ಪ್ರವಾಸೋದ್ಯಮ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

IRCTC Jyotirlinga Yatra
Koo

ನವದೆಹಲಿ: ಏಕಕಾಲಕ್ಕೆ ಏಳು ಜ್ಯೋತಿರ್ಲಿಂಗಗಳ (seven Jyotirlinga ) ದರ್ಶನ ಮಾಡಬೇಕು ಎಂದು ಬಯಸುವವರಿಗೆ ಶುಭ ಸುದ್ದಿ. ಭಾರತೀಯ ರೈಲ್ವೆ ಊಟೋಪಚಾರ ಮತ್ತು ಪ್ರವಾಸೋದ್ಯಮ ನಿಗಮ (IRCTC) ಭಾರತ್ ಗೌರವ್ ಎಸಿ ಟೂರಿಸ್ಟ್ ಟ್ರೈನ್ (Bharat Gaurav AC Tourist Train) ಮೂಲಕ 7 ಜ್ಯೋತಿರ್ಲಿಂಗ ಯಾತ್ರೆಯ (IRCTC Jyotirlinga Yatra) ಹೊಸ ಪ್ರವಾಸೋದ್ಯಮ ಪ್ಯಾಕೇಜ್ ಅನ್ನು ಪ್ರಕಟಿಸಿದೆ.

ಜ್ಯೋತಿರ್ಲಿಂಗ ಯಾತ್ರೆಯು 2024ರ ಮೇ 22ರಿಂದ ಪ್ರಾರಂಭವಾಗಲಿದ್ದು, 11 ರಾತ್ರಿ, 12 ಹಗಲಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಐಆರ್‌ಸಿಟಿಸಿ ನಿಗಮ ಹೇಳಿದೆ. ಈ ನಿಗಮ ಪ್ರವಾಸೋದ್ಯಮ ಪ್ಯಾಕೇಜ್ ಕೋಡ್- NZBG35. ಬೆಳಗ್ಗೆ ಚಹಾ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒಳಗೊಂಡಿರುತ್ತದೆ. ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡಲಾಗುವುದು.

ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!


ಎಲ್ಲಿಗೆ ಭೇಟಿ?

ಈ ಸಂದರ್ಭದಲ್ಲಿ ಏಳು ಜ್ಯೋತಿರ್ಲಿಂಗ ಕ್ಷೇತ್ರಗಳಾದ ಓಂಕಾರೇಶ್ವರ ಜ್ಯೋತಿರ್ಲಿಂಗ, ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾಧೀಶ ದೇವಸ್ಥಾನ ಮತ್ತು ನಾಗೇಶ್ವರ ಜ್ಯೋತಿರ್ಲಿಂಗ, ಭೇಟ್ ದ್ವಾರಕಾ ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಗೃಷ್ಣೇಶ್ವರ ಜ್ಯೋತಿರ್ಲಿಂಗ ಔರಂಗಾಬಾದ್, ಭೀಮಾಶಂಕರ ಜ್ಯೋತಿರ್ಲಿಂಗ, ಪುಣೆ ಸೇರಿದೆ.

ಯಾತ್ರಾರ್ಥಿಗಳೇ ಗಮನಿಸಿ

ಆಸಕ್ತ ಯಾತ್ರಾರ್ಥಿಗಳು ಐಆರ್‌ಸಿಟಿಸಿಯಿಂದ ಜ್ಯೋತಿರ್ಲಿಂಗ ಯಾತ್ರೆಗಾಗಿ ಉದ್ದೇಶಿಸಿರುವ ಭಾರತ್ ಗೌರವ್ ಎಸಿ ಟೂರಿಸ್ಟ್ ರೈಲಿನಲ್ಲಿ ಸ್ಲೀಪರ್ ಕ್ಲಾಸ್, ಥರ್ಡ್ ಎಸಿ ಮತ್ತು ಸೆಕೆಂಡ್ ಎಸಿ ಆಯ್ಕೆ ಮಾಡಬಹುದು.

ದರ ಇಂತಿದೆ

ಟ್ರೈನ್ ಜರ್ನಿ ಸಿಂಗಲ್, ಡಬಲ್, 5-11 ವರ್ಷದ ಮೂವರು ಮಕ್ಕಳಿಗೆ ಇಂತಿದೆ. 2A 48600- 46700 ರೂ. , 3A ರೂ 36700- 35150ರೂ., ಎಸ್ಎಲ್ ರೂ 22150 ನಿಂದ 20800ರೂ.

ನಿಲುಗಡೆ ತಾಣಗಳು

ಐಆರ್‌ಸಿಟಿಸಿ ನಿಗಮದ ಬೋರ್ಡಿಂಗ್/ ಡಿ-ಬೋರ್ಡಿಂಗ್ ಪಾಯಿಂಟ್‌ಗಳನ್ನು ಗುರುತಿಸಿದೆ. ಯೋಗ ನಗರಿ ರಿಷಿಕೇಶ್, ಹರಿದ್ವಾರ, ಮೊರಾದಾಬಾದ್, ಬರೇಲಿ, ಶಹಜಹಾನ್‌ಪುರ, ಹರ್ದೋಯ್, ಲಕ್ನೋ, ಕಾನ್ಪುರ್, ಒಆರ್‌ಐ, ವಿರಂಗನ ಲಕ್ಷ್ಮೀಬಾಯಿ ಮತ್ತು ಲಲಿತ್‌ಪುರ ಜಂಕ್ಷನ್.

ಯಾತ್ರಾ ಪ್ಯಾಕೇಜ್ ಸೇರ್ಪಡೆ

ಒಬ್ಬ ಪ್ರಯಾಣಿಕ ಪ್ಯಾಕೇಜ್ ಅನ್ನು ಬುಕ್ ಮಾಡಬಹುದು. ಆದರೆ ಆ ವ್ಯಕ್ತಿಯು ಡಬಲ್/ ಟ್ರಿಪಲ್ ಆಕ್ಯುಪೆನ್ಸಿಯಲ್ಲಿ ಬುಕ್‌ ಮಾಡಬೇಕಾಗುತ್ತದೆ ಎಂದು ಐಆರ್‌ಸಿಟಿಸಿ ತಿಳಿಸಿದೆ. ಎಲ್ಲಾ ಸಂಚಾರ ಮತ್ತು ದೃಶ್ಯ ವೀಕ್ಷಣೆಯ ಪ್ಯಾಕೇಜ್ ವರ್ಗದ ಪ್ರಕಾರ ಇರುತ್ತದೆ. ನಿಗಮವು ಪ್ರಯಾಣಿಕರಿಗೆ ಪ್ರಯಾಣ ವಿಮೆಯನ್ನು ನೀಡುತ್ತದೆ. ವೃತ್ತಿಪರ ಮತ್ತು ಸ್ನೇಹಪರ ಪ್ರವಾಸದ ಅನುಭವಕ್ಕಾಗಿ ವಿವಿಧ ಸೇವೆಗಳನ್ನು ನೀಡುತ್ತದೆ. ನಿಗಮದ ಟೂರ್ ಮ್ಯಾನೇಜರ್‌ಗಳು ಪ್ರವಾಸದ ಉದ್ದಕ್ಕೂ ಪ್ರವಾಸಿಗರ ಜೊತೆ ಪ್ರಯಾಣಿಸುತ್ತಾರೆ.


ಉತ್ತಮ ಸೌಲಭ್ಯ

ಟ್ರೈನ್ ಜರ್ನಿ ಸ್ಲೀಪರ್ ಕ್ಲಾಸ್ 3AC 2AC ಪ್ರಯಾಣದ ಪ್ರಕಾರ ಬಜೆಟ್ ಗೆ ಹೊಂದಿಕೆಯಾಗುವ ಹೊಟೇಲ್ ಗಳಲ್ಲಿ ರಾತ್ರಿ ತಂಗುವ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಹೊತ್ತು ಊಟ ಮತ್ತು ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಭಾರತ್ ಗೌರವ್ ರೈಲುಗಳು

ಭಾರತೀಯ ರೈಲ್ವೆಯು ಭಾರತ್ ಗೌರವ್ ಪ್ರವಾಸಿ ರೈಲುಗಳ ಬ್ಯಾನರ್ ಅಡಿಯಲ್ಲಿ ಥೀಮ್ ಆಧಾರಿತ ಸ್ಥಳಗಳಿಗೆ ಪ್ರವಾಸಿ ರೈಲುಗಳನ್ನು ನಿರ್ವಹಿಸುತ್ತದೆ. ರೈಲು ಪ್ರಯಾಣಗಳನ್ನು ವೈವಿಧ್ಯಮಯ ಸ್ಥಳಗಳಿಗೆ ಪರಿಚಯಿಸಲಾಗಿದೆ. ರೈಲ್ವೆ ಸಚಿವಾಲಯವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಪ್ರದರ್ಶಿಸುವ ಉದ್ದೇಶದಿಂದ ‘ಭಾರತ್ ಗೌರವ್ ರೈಲುಗಳು’ ಪರಿಕಲ್ಪನೆಯನ್ನು ಪರಿಚಯಿಸಿದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ರೈಲು ನಿಲ್ದಾಣ ಅಥವಾ ರೈಲ್ವೆ ಇಲಾಖೆಯ ವೆಬ್‌ ಸೈಟ್‌ ಸಂಪರ್ಕಿಸಬಹುದು.

Continue Reading

Lok Sabha Election 2024

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

ಏಪ್ರಿಲ್‌ 26ರಂದು‌ ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯ ಮತದಾನ (Lok Sabha Election 2024) ನಡೆಯಲಿದೆ. ಈ ನಿಟ್ಟಿನಲ್ಲಿ ಸಾರ್ವತ್ರಿಕ ರಜೆ ಇರಲಿದ್ದು, ಮತದಾನವನ್ನು ಮತದಾರರು ತಪ್ಪಿಸಬಾರೆಂದು ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿಷೇದ ಹೇರಲಾಗಿದೆ. ಗುರುವಾರ ಸಂಜೆಯಿಂದಲೇ ನಂದಿ ಬೆಟ್ಟ ಕ್ಲೋಸ್‌ ಆಗಲಿದ್ದು, ಬನ್ನೇರುಘಟ್ಟ ಉದ್ಯಾನವನಕ್ಕೂ (Bannerghatta National Park) ನಿಷೇಧಿಸಲಾಗಿದೆ.

VISTARANEWS.COM


on

By

Lok sabha election 2024
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಲೋಕಸಭೆ ಚುನಾವಣೆ (Lok sabha Election 2024) ಹಿನ್ನೆಲೆಯಲ್ಲಿ ಶೇ 100ಕ್ಕೆ 100ರಷ್ಟು ಮತದಾನ (Voting) ಆಗಬೇಕೆಂದು, ಚುನಾವಣಾ ಆಯೋಗ ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಸದ್ಯ ಚುನಾವಣಾ ಆಯೋಗಕ್ಕೆ ಸಾಥ್‌ ನೀಡಿರುವ ನಂದಿ ಹಿಲ್ಸ್‌ (Nandi hills) ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta National Park) ಆಡಳಿತ ಮಂಡಳಿ ಮತದಾನದ ದಿನದಂದು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿದೆ.

ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ರಾಜಕೀಯ ಪಕ್ಷಗಳಂತೆ ಚುನಾವಣಾ ಆಯೋಗವೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತದಾನ ನಡೆಯುವ (Voting Day) ಆ ಎರಡು ದಿನವೂ ಸಾರ್ವತ್ರಿಕ ರಜೆಯನ್ನು (Government Holiday) ಘೋಷಿಸಲಾಗಿದೆ. ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆಯನ್ನು (Paid leave) ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಏಪ್ರಿಲ್ 26 ರಂದು ಅಂದರೆ ನಾಳೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. 2ನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ. ಈ ದಿನಗಳಂದು ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಎಲ್ಲ ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕಾಯಂ ಆಗಿ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.

ರಜೆ ಸಿಕ್ಕ ಖುಷಿಯಲ್ಲಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಹೀಗಾಗಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಝೂ, ಸಫಾರಿ ಮತ್ತು ಚಿಟ್ಟೆ ಪಾರ್ಕ್ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರುವುದಿಲ್ಲ. ಏಪ್ರಿಲ್‌ 26ರಂದು ಮತದಾನ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ರಜೆ ಘೋಷಿಸಲಾಗಿದೆ. ಲೋಕಸಭಾ ಚುನಾವಣೆಯ ಮತದಾನದಲ್ಲಿ ಜನರು ಸಕ್ರಿಯವಾಗಿ ಭಾಗಿಯಾಗಲೆಂದು ರಜೆ ಘೋಷಣೆ ಮಾಡಲಾಗಿದೆ.

ಮತದಾನದ ಪ್ರಮಾಣ ಹೆಚ್ಚಳ ಮಾಡುವ ದೃಷ್ಟಿಯಿಂದ ಏಪ್ರಿಲ್‌ 26ರಂದು ಬನ್ನೇರುಘಟ್ಟ ಪಾರ್ಕ್‌ ರಜೆ ಇರಲಿದೆ. 26 ಬದಲಾಗಿ ಏಪ್ರಿಲ್‌ 30ರಂದು ಪಾರ್ಕ್‌ ತೆರೆಯಲಿದೆ. ಬನ್ನೇರುಘಟ್ಟ ಪಾರ್ಕ್‌ ಪ್ರತಿ ಮಂಗಳವಾರ ರಜೆ ಇರುತ್ತಿತ್ತು. ಆದರೆ 26ರ ರಜೆಯನ್ನು ಸರಿದೂಗಿಸುವ ಸಲುವಾಗಿ ಏಪ್ರಿಲ್‌ 30ರಂದು ಪ್ರವಾಸಿಗರ ವೀಕ್ಷಣೆಗೆ ಲಭ್ಯ ಇರಲಿದೆ.

ಇದನ್ನೂ ಓದಿ: Voter ID: ವೋಟರ್‌ ಐಡಿ ಕಾರ್ಡ್‌ ಸಿಕ್ಕಿಲ್ಲವೆ? ಡೋಂಟ್‌ ವರಿ. ಈ 12 ದಾಖಲೆಗಳಲ್ಲಿ ಒಂದಿದ್ದರೆ ಸಾಕು!

ಏ.25ರ ಸಂಜೆಯಿಂದಲೇ ನಂದಿ ಬೆಟ್ಟ ಕ್ಲೋಸ್‌

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು (ಏ.25) ಸಂಜೆ ಐದು ಗಂಟೆಯಿಂದ‌ ನಂದಿ ಬೆಟ್ಟಕ್ಕೆ ನಿಷೇಧ ಹೇರಲಾಗಿದೆ. ನಂದಿಗಿರಿಧಾಮ ನಿಷೇಧ ಏರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.

ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಸಂಜೆ 7 ಗಂಟೆವರೆಗೂ ನಂದಿ ಹಿಲ್ಸ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧವಿದೆ. ಮತದಾನಕ್ಕೆಂದು ರಜೆ ಜತೆಗೆ ವೀಕೆಂಡ್ ಇರುವುದರಿಂದ ಮತದಾನ ಬಿಟ್ಟು ನಂದಿ ಹಿಲ್ಸ್‌ಗೆ ಮೋಜು ಮಸ್ತಿ ಮಾಡಲು ಪ್ರವಾಸಿಗರ ದಂಡು ಬರುತ್ತದೆ. ಇದನ್ನೂ ತಪ್ಪಿಸಲು ವಿಶ್ವವಿಖ್ಯಾತ ನಂದಿಗಿರಿಧಾಮದ ಪ್ರವೇಶ ಬಂದ್‌ ಮಾಡಲಾಗುತ್ತಿದೆ.

ಏಪ್ರಿಲ್‌ 26ರಂದು ಮತದಾನ ನಡೆಯುವ ಕ್ಷೇತ್ರಗಳು: ದಕ್ಷಿಣ ಕರ್ನಾಟಕ

1.ಉಡುಪಿ-ಚಿಕ್ಕಮಗಳೂರು (ಸಾಮಾನ್ಯ)
2.ಹಾಸನ (ಸಾಮಾನ್ಯ)
3.ದಕ್ಷಿಣ ಕನ್ನಡ (ಸಾಮಾನ್ಯ)
4.ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
5. ತುಮಕೂರು (ಸಾಮಾನ್ಯ)
6.ಮಂಡ್ಯ (ಸಾಮಾನ್ಯ)
7.ಮೈಸೂರು-ಕೊಡಗು (ಸಾಮಾನ್ಯ)
8.ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)
9. ಬೆಂಗಳೂರು ಗ್ರಾಮಾಂತರ (ಸಾಮಾನ್ಯ)
10 ಬೆಂಗಳೂರು ಉತ್ತರ (ಸಾಮಾನ್ಯ)
11. ಬೆಂಗಳೂರು ಕೇಂದ್ರ (ಸಾಮಾನ್ಯ)
12. ಬೆಂಗಳೂರು ದಕ್ಷಿಣ (ಸಾಮಾನ್ಯ)
13.ಚಿಕ್ಕಬಳ್ಳಾಪುರ (ಸಾಮಾನ್ಯ)
14.ಕೋಲಾರ (ಪರಿಶಿಷ್ಟ ಜಾತಿ ಮೀಸಲು)

Lok Sabha Election 2024 Karnataka declares 2 day general holiday
Lok Sabha Election 2024 Karnataka declares 2 day general holiday

ಮೇ 7ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳು: ಉತ್ತರ ಕರ್ನಾಟಕ

1.ಚಿಕ್ಕೋಡಿ (ಸಾಮಾನ್ಯ)
2.ಬೆಳಗಾವಿ (ಸಾಮಾನ್ಯ)
3.ಬಾಗಲಕೋಟೆ (ಸಾಮಾನ್ಯ)
4.ಬಿಜಾಪುರ (ಪರಿಶಿಷ್ಟ ಜಾತಿ ಮೀಸಲು)
5.ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)
6.ರಾಯಚೂರು(ಪರಿಶಿಷ್ಟ ಪಂಗಡ ಮೀಸಲು)
7.ಬೀದರ್ (ಸಾಮಾನ್ಯ)
8.ಕೊಪ್ಪಳ (ಸಾಮಾನ್ಯ)
9.ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು)
10. ಹಾವೇರಿ (ಸಾಮಾನ್ಯ)
11. ಧಾರವಾಡ (ಸಾಮಾನ್ಯ)
12.ಉತ್ತರ ಕನ್ನಡ (ಸಾಮಾನ್ಯ)
13.ದಾವಣಗೆರೆ (ಸಾಮಾನ್ಯ)
14.ಶಿವಮೊಗ್ಗ (ಸಾಮಾನ್ಯ)

Lok Sabha Election 2024 Karnataka declares 2 day general holiday

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Prajwal Revanna Case If Prajwal and Revanna fails to appear infront of SIT they will be arrested says Dr Parameshwara
ಕ್ರೈಂ12 seconds ago

Prajwal Revanna Case: ಪ್ರಜ್ವಲ್‌, ರೇವಣ್ಣಗೆ ಮತ್ತೊಂದು ನೋಟಿಸ್‌; ವಿಚಾರಣೆಗೆ ಬಾರದಿದ್ದರೆ ಅರೆಸ್ಟ್‌: ಡಾ. ಜಿ. ಪರಮೇಶ್ವರ್

gold rate today
ಚಿನ್ನದ ದರ15 mins ago

Gold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ; 10 ಗ್ರಾಂ 22 ಕ್ಯಾರಟ್‌ ಬಂಗಾರದ ಬೆಲೆಯಲ್ಲಿ ₹500 ಕಡಿತ

Gurucharan Singh Taarak Mehta Ka Ooltah Chashmah actor planned disappearance
ಕಿರುತೆರೆ15 mins ago

Gurucharan Singh: ಎರಡು ವಾರ ಕಳೆದರೂ ಪತ್ತೆಯಾಗದ  ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ!

Ram Mandir
ದೇಶ35 mins ago

Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

MS Dhoni
ಕ್ರೀಡೆ35 mins ago

MS Dhoni: ಈಡೇರಿದ ಶತಾಯುಷಿ ಅಭಿಮಾನಿಯ ಆಸೆ; ಧೋನಿ ಭೇಟಿಯಾಗಿ ವಿಶೇಷ ಉಡುಗೊರೆ ಪಡೆದ ರಾಮದಾಸ್

Drowned in water
ಕೋಲಾರ46 mins ago

Drowned In water : ಈಜಲು ಕೃಷಿ ಹೊಂಡಕ್ಕೆ ಜಿಗಿದ; ಸಾವಿನ ಕೊನೆ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ತಂಗಿ!

Triple Talaq
ದೇಶ1 hour ago

Triple Talaq: ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಪರಾರಿಯಾದ ಭೂಪ

Covishield vaccine Puneeth Rakumar
ಸ್ಯಾಂಡಲ್ ವುಡ್1 hour ago

Covishield vaccine: ಕೋವಿಶೀಲ್ಡ್‌ ‌ ತಗೋಬೇಡಿ, ಒಳ್ಳೆಯದಲ್ಲ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್‌ ವೈರಲ್‌!

Kavya Maran
ಕ್ರೀಡೆ1 hour ago

Kavya Maran: ರೋಚಕ ಗೆಲುವು ಕಂಡು ಆಕಾಶಕ್ಕೆ ಜಿಗಿದಂತೆ ಕುಣಿದು ಸಂಭ್ರಮಿಸಿದ ಕಾವ್ಯಾ ಮಾರನ್; ವಿಡಿಯೊ ವೈರಲ್​

murder case stabbing bengaluru
ಕ್ರೈಂ1 hour ago

Murder Case: ಎಣ್ಣೆ ಪಾರ್ಟಿ ನಂತರ ರಿಕ್ಷಾ ಚಾಲಕನ ಇರಿದು ಕೊಂದ ರೌಡಿ ಶೀಟರ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ17 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌